WFTW Body: 

1) ಈ ಲೋಕವು ಮಹತ್ವವಾದದ್ದೆಂದು ತಿಳುಕೊಳ್ಳುವ ಪ್ರತಿಯೊಂದು ವಿಷಯದ ಬಗ್ಗೆ ದೇವರು ಅಸಹ್ಯ ಪಡುತ್ತಾನೆ.

"ಮನುಷ್ಯರಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದ್ರುಷ್ಟಿಯಲ್ಲಿ ಅಸಹ್ಯವಾಗಿದೆ."(ಲೂಕ 16:15)

ಲೋಕದಲ್ಲಿ ಶ್ರೇಷ್ಟತೆ(ಪ್ರಾಮುಖ್ಯತೆ) ಹೊಂದಿದ ಸಂಗತಿಗಳು ದೇವರ ದ್ರುಷ್ಟಿಯಲ್ಲಿ ಯಾವುದೇ ಬೆಲೆಯನ್ನು ಹೊಂದಿಲ್ಲ ಮತ್ತು ಇವುಗಳು ಆತನಿಗೆ ಅಸಹ್ಯಕರವಾಗಿಯೂ ಅವೆ.ಆದ್ದರಿಂದ ದೇವರಿಗೆ ಅಸಹ್ಯಕರವೆನಿಸುವ ಸಂಗತಿಗಳು ನಮಗೂ ಅಸಹ್ಯಕರವಾಗಿರಬೇಕು. ಹಣವನ್ನು ಈ ಲೋಕದಲ್ಲಿ ಎಲ್ಲರೂ ಅಮೂಲ್ಯವೆಂದು ತಿಳಿದುಕೊಂಡಿದ್ದಾರೆ,ಆದರೆ ಹಣದ ಆಶೆಗೆ ಬಿದ್ದು,ಶೀಮಂತರಾಗಬೇಕನ್ನುವವರು ಈ ಕೆಳಗಿನ 8 ಪರಿಣಾಮಗಳನ್ನು ಈಗಲಾಗಲಿ ಅಥವಾ ಬರುವ ಮುಂದಿನ ದಿನಗಳಲ್ಲಾಗಲಿ ಅನುಭವಿಸಬೇಕಾಗುತ್ತದೆ (1 ತಿಮೊಥಿ 6:9,10).

  • 1) ದುಷ್ಟವಾದ ಪ್ರೇರೆಪಣೆಗೆ (ಆಶೆಗೆ) ಓಳಗಾಗುತ್ತಾರೆ.
  • 2) ಮೋಸದ ಬಲೆಗೆ ಬೀಳುತ್ತಾರೆ.
  • 3) ಬುದ್ಧಿ ವಿರುದ್ಧವಾದ(ಮುರ್ಖತನದ) ಆಶೆಗೆ ಬೀಳುತ್ತಾರೆ.
  • 4) ಹಾನಿಕರ ಆಶೆಗಳಿಗೆ ತುತ್ತಾಗುತ್ತಾರೆ.
  • 5) ನಾಶನಗಳಲ್ಲಿ ಮುಳಗುತ್ತಾರೆ.
  • 6) ಹಾಳಾಗಿ ಹೋಗುತ್ತಾರೆ.
  • 7) ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡುತ್ತಾರೆ.
  • 8) ಅನೇಕ ವೇದನೆ(ತೊಂದರೆಗಳಿಂದ) ತಮ್ಮನ್ನು ತಿವಿಸಿಕೊಳ್ಳುತ್ತಾರೆ.
  • ಈ ಮೇಲಿನವುಗಳನ್ನು ಎಲ್ಲಾಕಡೆಯ ಕ್ರಿಸ್ತವಿಶ್ವಾಸಿಗಳು ಅನುಭವಿಸುವದನ್ನು ಮತ್ತೆ ಮತ್ತೆ ನೋಡಿದ್ದೆನೆ.

    ಈಗಿನ ದಿನಗಳಲ್ಲಿ ನಮ್ಮ ನಾಡಿನಲ್ಲಿ ದೇವರಿಂದ ಪ್ರವಾದನೆ ವಾಕ್ಯಗಳನ್ನು ಕೇಳುವದು ತುಂಬಾ ಅಪರೂಪವಾಗಿರಲು ಕಾರಣವೇನೆಂದರೆ, ಈಗಿನ ಅನೇಕ ಭೋದಕರು ಹಣದ ಆಶೆಗೆ ಬಿದ್ದಿರುತ್ತಾರೆ. ಯೇಸುವು (ಲೂಕ 16:11) ರಲ್ಲಿ ಹೇಳಿದ ಪ್ರಕಾರ - ನಿಜವಾದ ಸಂಪತ್ತನ್ನು (ಪ್ರವಾದನಾ ವಾಕ್ಯವು ಅದರಲ್ಲಿ ಒಂದಾಗಿದೆ) ಹಣದ ವಿಶಯದಲ್ಲಿ ಪ್ರಾಮಾಣಿಕವಿಲ್ಲದಿರುವವರಿಗೆ(ನಂಬಿಗಸ್ತತೆವಿಲ್ಲದಿರುವವರಿಗೆ) ದೇವರು ಎಂದಿಗೂ ದಯಪಾಲಿಸುವದಿಲ್ಲ.ಇದರಿಂದಲೇ ಅನೇಕ ಸಭೆಗಳಲ್ಲಿ ನಡೆಯುವ ಪ್ರಸಂಗಗಳು ಮತ್ತು ಸಾಕ್ಷಿಗಳು ಬೇಜಾರುತರುವ ಹಾಗೆ ಇರುತ್ತವೆ.

    2) ನಮಗೆ ಹಾನಿ ಮಾಡಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ, ಆದರೆ ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳುತ್ತೇವೆ.

    "ನೀವು ಓಳ್ಳೇದನ್ನೆ ಮಾಡುವದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?"(1ಪೇತ್ರ3:13).

    ದೇವರು ಎಷ್ಟು ಶಕ್ತಿಶಾಲಿಯಾಗಿದ್ದಾನೆಂದರೇ ಆತನ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು,ಆತನನ್ನು ಪ್ರೀತಿಸುವವರ ಹಿತಕ್ಕಾಗಿ "ಎಲ್ಲಾ" ಕಾರ್ಯಗಳು ಅನುಕೂಲವಾಗುತ್ತವೆ (ರೋಮ 8:28).

    ಇದರ ಅರ್ಥವೆನೆಂದರೆ -ಆತನ ಚಿತ್ತವನ್ನು ಹೊರಪಡಿಸಿ ಭೂಮಿಯ ಮೇಲೆ ಯಾವುದೇ ಗುರಿಯನ್ನು ಇಟ್ಟುಕೊಳ್ಳದಿರುವವರಿಗೆ ಈ ಮೇಲಿನ ಮಾತು ನೆರವೆರಲ್ಪಡುತ್ತದೆ.

    ಒಬ್ಬನು ತನ್ನ ಸ್ವಾರ್ಥದ ಆಶೆಗಳಿಂದ ದೇವರು ಕೊಟ್ಟಿರುವ ಈ ವಾಗ್ದಾನವನ್ನು ತನ್ನದಾಗಿಸಿಕೊಳ್ಳಲಾರನು.ಆದರೆ ದೇವರ ಚಿತ್ತವನ್ನು ಸಂಪೂರ್ಣವಾಗಿ ಸ್ವೀಕರಿಸಿಕೊಳ್ಳುವದರಿಂದ, ಈ ವಾಗ್ದಾನವನ್ನು ಪ್ರತಿ ನಿಮಿಷವು ನಮ್ಮ ಜೀವನದಲ್ಲಿ ನೆರವೇರಲಿಕ್ಕೆ ಪ್ರಾರ್ಥಿಸಬಹುದು, ಮತ್ತು ಏನೂ ನಮಗೆ ಹಾನಿ ಮಾಡಲಿಕ್ಕಾಗುವದಿಲ್ಲ.

    ಇನ್ನೊಬ್ಬರು ನಮಗೆ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ, ಅಥವಾ ಆಕಸ್ಮಿಕವಾಗಲಿ, ಗೊತ್ತಿದ್ದುಕೊಂಡು ಮಾಡುವ ಪ್ರತಿಯೊಂದು ಘಟನೆಗಳು ನಮ್ಮ ಹಿತಕ್ಕಾಗಿಯೆ ರೊಮ 8:28 ರ ವಚನಕ್ಕನುಸಾರವಾಗಿ ಕ್ರಿಸ್ತೆಸುವಿನ ಹೋಲಿಕೆಗೆ ರೂಪಾಂತರಗೊಳಿಸುತ್ತವೆ (ರೊಮ8:29).ಇದು ನಮ್ಮ ಜೀವಿತಕ್ಕೆ ದೇವರು ಮಾಡಿದ ಉತ್ತಮವಾದ ಯೋಜನೆಯಾಗಿದೆ. ಪ್ರತಿಯೊಂದು ಘಟನೆಗಳು ನಮ್ಮ ಹಿತಕ್ಕಾಗಿ ಮಾರ್ಪಡಬೇಕೆಂದರೆ ಈ ಮೇಲಿನ ವಚನದಲ್ಲಿಯ ರೊಮ 8:28ನಿಯಮವನ್ನು ಪಾಲಿಸಿದರೆ ಮಾತ್ರ ಸಾಧ್ಯವಾಗುತ್ತದೆ.

    ಇನ್ನೂ ಮುಂದಕ್ಕೆ 1 ಪೇತ್ರ 3:13 ರಲ್ಲಿ ನೋಡುವಾಗ - ನಾವು ಒಳ್ಳೇದನ್ನೆ ಮಾಡುವದರಲ್ಲಿ ಆಸಕ್ತರಾಗಿದ್ದರೆ ಕೇಡು ಮಾಡುವವರು ಯಾರಿದ್ದಾರೆ?" ದೌರ್ಭಾಗ್ಯದ ಮಾತೆನೆಂದರೆ ರೊಮ 8:28ರಲ್ಲಿರುವ ಸತ್ಯದ ಹಾಗೆ ಈ ವಾಕ್ಯದ ಸತ್ಯವು ಕೂಡ ಹೆಚ್ಚು ಜನರಿಗೆ ಪರಿಚಿತವಾಗಿಲ್ಲ. ಆದರೆ ಈಗ ನಾವಿದನ್ನು ಪ್ರಸಿದ್ಧಿ ಪಡಿಸೋಣ. ಹಾಗಿದ್ದರೂ ಈ ವಾಕ್ಯವೂ ಕೂಡ ಅನ್ವಯ(ಹೊಂದಾಣಿಕೆ) ವಾಗಬೇಕೆಂದರೆ ಯಾರು ತಮ್ಮ ಹೃದಯವನ್ನು ಇನ್ನೊಬ್ಬರ ಕುರಿತು ಸ್ವಚ್ಚವಾಗಿಟ್ಟಿರುವರೋ ಅವರಿಗೆ ಹೊಂದಿಕೆಯಾಗುತ್ತದೆ. ಹಾಗಿದ್ದಾಗ ಯಾವುದೇ ಮನುಷ್ಯನಾಗಲಿ ಅಥವಾ ಸೈತಾನನ ಶಕ್ತಿಯಾಗಲಿ ಈ ವಿಶ್ವಾಸಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.

    ಆದ್ದರಿಂದ ಎಂದಾದರು ಯವುದೇ ಕ್ರಿಸ್ತವಿಶ್ವಾಸಿಯು ಇನ್ನೊಬ್ಬರಿಂದ ಹಾನಿಗೊಳಗಾಗಿರುವ ದೂರನ್ನು ಹೇಳುವದಾದರೆ ಆತನು ದೇವರನ್ನು ಪ್ರೀತಿಸುತ್ತಿಲ್ಲವೆಂಬುದಾಗಿ ಇನ್ನೊಂದು ರೀತಿಯಲ್ಲಿ ಹೇಳಿದಹಾಗಿದೆ.ಮತ್ತು ದೇವರ ಯೋಜನೆಗೆ ತಕ್ಕಂತೆ ಆತನನ್ನು ಕರೆದಿರುವ ಬಗ್ಗೆ ನಂಬಿಕೆಯಿಲ್ಲ ಎಂಬುದಾಗಿದೆ. ಏಕೆಂದರೆ ಇನ್ನೊಬ್ಬರು ಎನೇ ಮಾಡಿದರೂ ಅವೆಲ್ಲವುಗಳು ಅವನ ಒಳ್ಳೆದಕ್ಕೆ ಮಾರ್ಪಡುತ್ತದೆ ಇದರಿಂದ ಹೃದಯದಲ್ಲಿ ಯಾವುದೇ ರೀತಿಯಾದ ಗುಣಗುಟ್ಟುವದು ಇರಲಿಕ್ಕೆ ಸಾಧ್ಯವೇಯಿಲ್ಲ.ನಿಜವಾಗಿ ಹೇಳುವುದಾದರೆ, ನ್ನಿಮಗೆ ಹಾನಿ ಮಾಡಲಿಕ್ಕೆ ನಿಮ್ಮಿಂದ ಮಾತ್ರ ಸಾಧ್ಯ,ನಿಮ್ಮ ಅಪನಂಬಿಕೆ ಮತ್ತು ತಪ್ಪು ಅಭಿಪ್ರಾಯದಿಂದ ನಿಮ್ಮಷ್ಟಕ್ಕೆ ನೀವೆ ಹಾನಿಮಾಡಿಕೊಳುತ್ತಿರಿ. ನಾನು 76 ವರ್ಷದವನಾಗಿದ್ದೆನೆ ನನ್ನ ಜೀವಮಾನದಲ್ಲಿ ನನಗೆ ಹಾನಿಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅನೇಕರು ಪ್ರಯತ್ನಿಸಿದರು ಆದರೆ ಅವೆಲ್ಲವುಗಳು ನನ್ನ ಹಾಗು ನನ್ನ ಸೇವೆಯ ಒಳಿತಿಗೆ ಆಗಿದೆ. ಆದ್ದರಿಂದ ಅಂಥವರಿಗೋಸ್ಕರ ನಾನು ದೇವರಿಗೆ ಸ್ತೋತ್ರಸಲ್ಲಿಸುತ್ತೆನೆ.

    ಹೆಸರಿಗೆ ಕ್ರಿಸ್ತವಿಶ್ವಾಸಿಗಳಂತಿರುವವರು ನನ್ನ ವಿರೋಧವಾಗಿ ನಿಂತಿದ್ದರು, ಅವರಿಗೆ ದೇವರ ಮಾರ್ಗದ ಅರಿವೇಯಿದ್ದಿಲ್ಲ.ನನ್ನ ಜೀವನದ ಸಾಕ್ಷಿ ಹಂಚಿಕೊಳ್ಳುವದರ ಉದ್ದೇಶವೆನೆಂದರೆ ನಿಮಗೆ ಪ್ರೋತ್ಸಾಹ ಕೊಡುವದರಿಂದ ಈ ಸಾಕ್ಷಿಯ ಜೀವತವು ನಿಮ್ಮದೂ ಆಗಿರಲಿ.