ನನ್ನ ಹಿರಿಯ ಪುತ್ರನ ಮದುವೆಯಲ್ಲಿ ಮಾತನಾಡಲು ನನಗೆ ಬಹಳ ಸಂತೋಷ. ಈ ದಿನಕ್ಕಾಗಿ ನಾವು ತುಂಬಾ ದಿನಗಳಿಂದ ಎದುರು ನೋಡುತ್ತಿದ್ದೆವು.
ನನಗೆ ಧರ್ಮೋಪದೇಶಕಾಂಡದ 11:18-21ರಲ್ಲಿ (KJV) ಇರುವ ಒಂದು ವಾಕ್ಯಭಾಗವನ್ನು ಸಂಜಯ್ ಮತ್ತು ಕ್ಯಾಥಿಯ ಜೊತೆ ಹಂಚಿಕೊಳ್ಳಬೇಕೆಂಬ ಅಪೇಕ್ಷೆ. ಅಲ್ಲಿ ದೇವರು, ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ ... ಇಟ್ಟುಕೊಳ್ಳಬೇಕು. ... ಆಗ ನಿಮ್ಮ ದಿನಗಳು ಭೂಮಿಯ ಮೇಲೆ ಪರಲೋಕದ ದಿನಗಳಂತೆ ಇರುವವು ಎಂಬುದಾಗಿ ಹೇಳುತ್ತಾರೆ.
ನಿಮ್ಮ ದಿನಗಳು ಭೂಮಿಯ ಮೇಲೆ ಪರಲೋಕದ ದಿನಗಳಂತೆ ಇರುವವು ಎಂಬುದು ಎಂಥಹ ಒಂದು ಮಾತು!
ಪರಲೋಕದ ದಿನಗಳು ಹೇಗೆ ಇರುವವು ಎಂದು ಯೋಚಿಸಿ ನೋಡಿ. ಅಲ್ಲಿ ಜಗಳ ಅಥವಾ ಬಡಿದಾಟ ಇರುವುದಿಲ್ಲ. ಆದರೆ ಸಮಾಧಾನ ಮತ್ತು ಸಂತೋಷ ಮಾತ್ರ ಇರುತ್ತದೆ. ಎಲ್ಲಕ್ಕೂ ಹೆಚ್ಚಾಗಿ, ಎಲ್ಲಾ ಕಡೆಯಲ್ಲೂ ಪ್ರೀತಿ ಇರುತ್ತದೆ. ಪ್ರತಿದಿನವೂ ಸ್ವರ್ಗದ ಅನುಭವ ನೀಡುವಂಥಹ ಮನೆಯನ್ನು ನೀವೂ ಹೊಂದಬಹುದು. ಪ್ರತೀ ಮನೆಯೂ ಹೀಗಿರಬೇಕೆಂಬುದೇ ದೇವರ ಉದ್ದೇಶವಾಗಿತ್ತು.
ಸತ್ಯವೇದವು ಆದಾಮ ಮತ್ತು ಹವ್ವಳ ಮದುವೆಯಿಂದ ಪ್ರಾರಂಭವಾಗಿ, ಸಭೆಯಾದ ತನ್ನ ಜನರೊಂದಿಗೆ ಕ್ರಿಸ್ತನ ಮದುವೆಯಲ್ಲಿ ಅಂತ್ಯವಾಗುತ್ತದೆ.
ದೇವರು ಮೊದಲ ಮದುವೆಯನ್ನು (ಆದಾಮ ಮತ್ತು ಹವ್ವರದು) ನಡೆಸಿಕೊಡುವಾಗ ಅವರ ದಿನಗಳು ಪರಲೋಕದ ದಿನಗಳ ಹಾಗೆ ಇರಬೇಕೆಂದು ಅಪೇಕ್ಷಿಸಿದನು. ಅವರ ಮೊದಲ ಮನೆ ಒಂದು ನಂದನ ವನವಾದ ಏದೆನ್ - ಆಗಿತ್ತು. ಆದರೆ ಸ್ಯೆತಾನನು ಬಂದು ಅವರ ಮನೆಯನ್ನು ಒಂದು ನರಕವನ್ನಾಗಿ ಮಾಡಿದನು. ಇಂದು ಪ್ರಪಂಚದ ಎಲ್ಲಾ ಕಡೆಯಲ್ಲೂ ನರಕದಂತಹ ಮನೆಗಳು ಇವೆ.
ಆದರೆ ಇದು ಕಥೆಯ ಅಂತ್ಯವಲ್ಲವಾದ್ದರಿಂದ ದೇವರನ್ನು ಸ್ತುತಿಸಿರಿ. ಆದಾಮನು ಏದೆನ್ ತೋಟದಲ್ಲಿ ಪಾಪ ಮಾಡಿದ ತಕ್ಷಣ, ಸ್ಯೆತಾನನು ಸೃಷ್ಟಿಸಿದ್ದ ಸಮಸ್ಯೆಯನ್ನು ಅಲ್ಲೇ ಪರಿಹರಿಸಲು, ದೇವರು ತನ್ನ ಮಗನನ್ನು ಕಳುಹಿಸುವ ವಾಗ್ದಾನ ಮಾಡಿದನು, ಎಂಬುದಾಗಿ ಸತ್ಯವೇದವು ನಮಗೆ ತಿಳಿಸುತ್ತದೆ. ಸ್ಯೆತಾನನ ವಿರುದ್ಧವಾಗಿ ಯಾವಾಗಲೂ ದೇವರು ನಮ್ಮ ಪರವಾಗಿರುತ್ತಾನೆ ಎಂಬ ಈ ಮಹಾ ಸತ್ಯವನ್ನು ನಾವು ಅಲ್ಲಿ ಕಾಣುತ್ತೇವೆ. ಆದಾಮನ ಪಾಪಕ್ಕಾಗಿ ದೇವರು ಭೂಮಿಯನ್ನು ಶಪಿಸುವುದಕ್ಕೆ ಮುಂಚೆ ಆತನು ಆದಾಮ ಮತ್ತು ಹವ್ವಳಿಗೆ, ಸ್ತ್ರೀಯಲ್ಲಿ ಹುಟ್ಟಿ ಬರಲಿರುವ ಒಂದು ಸಂತತಿಯು ಸ್ಯೆತಾನನ ತಲೆಯನ್ನು ಜಜ್ಜುವುದು ಎಂದು ಹೇಳಿದನು. ಇದಾದ ನಂತರ ಮಾತ್ರವೇ ದೇವರು ಅವರ ಶಿಕ್ಷೆಯ ಕುರಿತಾಗಿ ನುಡಿದನು.
ಸ್ಯೆತಾನನು ಬಂದು ಸಂಗತಿಗಳನ್ನು ಅವ್ಯವಸ್ಥೆಗೊಳಿಸಿದಾಗ್ಯೂ ಸಹ, ಸ್ಯೆತಾನನ ವಿರುದ್ಧವಾಗಿ ಹಾಗೂ ಅವರ ಪರವಾಗಿ ತಾನಿರುತ್ತೇನೆ ಎಂಬುದನ್ನು ಆದಾಮ ಹವ್ವಳು ತಿಳಿಯಬೇಕೆಂದು, ದೇವರು ಬಯಸಿದನು. ಸ್ಯೆತಾನನು ಯಾವುದೇ ಮನೆಯಲ್ಲಿ ಏನನ್ನೇ ಮಾಡಿದರೂ ಪರವಾಗಿಲ್ಲ, ದೇವರು ಮಾತ್ರ ಮನೆಗಳನ್ನು ವಿಮೋಚಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಪರಲೋಕದ ದಿನಗಳು ಭೂಮಿಯ ಮೇಲೆ ಇರುವಂತೆ ನಮ್ಮ ದಿನಗಳು ಇರಬೇಕೆಂಬ ತನ್ನ ಮೊದಲಿನ ಯೋಜನೆಯ ಕಡೆಗೆ ನಮ್ಮ ಮನೆಗಳನ್ನು ಪುನಃ ತರಬೇಕೆಂಬುದೇ ಆತನ ಆಶೆಯಾಗಿದೆ. ಅದರಂತೆಯೇ ಈಗ ಕ್ರಿಸ್ತನು ಬಂದಿದ್ದು, ವಿಮೋಚನೆಯ ಕಾರ್ಯವು ನೆರವೇರಿರುವುದರಿಂದ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದು ನಿಜವಾಗುವ ಸಾಧ್ಯತೆ ಇದೆ.
ಸ್ವಲ್ಪ ಸಮಯದ ಹಿಂದೆ ನಾನು ಒಂದು ಡಿಜಿಟಲ್ ಕ್ಯಾಮೆರಾವನ್ನು ಕೊಂಡುಕೊಂಡೆ. ಅದಕ್ಕೆ ಮೊದಲು ನಾನು ಒಂದು ರೋಲ್ ಫಿಲಂ ಬಳಸಿ ಪಾಯಿಂಟ್ ಅಂಡ್ ಕ್ಲಿಕ್ ಮಾಡುವ ಸಾಧಾರಣ ಕ್ಯಾಮೆರಾವನ್ನು ಉಪಯೋಗಿಸುತ್ತಿದ್ದೆ. ಆದರೆ ಬೆಲೆಬಾಳುವಂತಹ ಈ ಡಿಜಿಟಲ್ ಕ್ಯಾಮೆರಾದಲ್ಲಿ ಭಾವ ಚಿತ್ರಗಳು ಉತ್ತಮವಾಗಿರುವ ಬದಲು ಕೆಟ್ಟದಾಗಿರುವುದನ್ನು ನಾನು ಕಂಡುಕೊಂಡೆನು. ಅವು ಅಸ್ಪಷ್ಟವಾಗಿದ್ದು ಫೋಕಸ್ ಇಲ್ಲದವುಗಳಾಗಿದ್ದವು. ಅಧಿಕ ಹಣವನ್ನು ಖರ್ಚು ಮಾಡಿದ ನಂತರ ಕೂಡ ನನಗೆ ಸಿಕ್ಕಿದ ಭಾವಚಿತ್ರಗಳು - ನಾವು ನೋಡುವ ಅನೇಕ ಮದುವೆ ಜೀವಿತಗಳಂತೆ - ಕೇವಲ ಕಸಕ್ಕೆ ಬಿಸಾಡಲು ಯೋಗ್ಯವಾಗಿದ್ದವು.
ಇದು ಹೀಗೇಕಾಯಿತು? ನಾನು ತಯಾರಕರ ಸೂಚನೆಗಳನ್ನು ಓದದೇ ಇದ್ದುದೇ ಇದಕ್ಕೆ ಕಾರಣ. ನಮಗೆ ಗೊತ್ತಿರುವ ಪ್ರಕಾರ ಯಾವಾಗಲೂ ಪ್ರತಿಯೊಂದು ಬೆಲೆಬಾಳುವ ವಸ್ತುವೂ ಸಹ ತಯಾರಕರು ಒದಗಿಸುವ ತಯಾರಕರ ಸೂಚನಾ ಪುಸ್ತಕ(ಕ್ಯೆಪಿಡಿ)ದೊಂದಿಗೆ ಬರುತ್ತದೆ. ಮದುವೆಯನ್ನು ನೇಮಿಸಿದ ದೇವರು, ಯಾವುದೇ ಸೂಚನೆಗಳನ್ನು ನೀಡದೇ ನಮ್ಮನ್ನು ಬಿಟ್ಟಿರಲು ಸಾಧ್ಯವಿದೆಯೇ? ಎಂದಿಗೂ ಇಲ್ಲ. ಆತನು ನಮಗೆ ಅಗತ್ಯವಿರುವ ಸೂಚನೆಗಳನ್ನು ಕೊಟ್ಟಿದ್ದಾನೆ. ನಾವು ಆ ಸೂಚನೆಗಳನ್ನು ಪಾಲಿಸದೆ ಹೋಗುವ ಕಾರಣ (ನಾನು ಡಿಜಿಟಲ್ ಕ್ಯಾಮೆರಾದಲ್ಲಿ ಮಾಡಿದ ಹಾಗೆ) ನಮ್ಮ ಮದುವೆಗಳು ಅಸ್ಪಷ್ಟತೆಯಿಂದ ಮಸುಕುಮಸುಕಾಗಿ ಕಸದ ಬುಟ್ಟಿಗೆ ಯೋಗ್ಯವಾದವುಗಳಾಗಿರುತ್ತವೆ.
ಆದಕಾರಣ ನಾನು ತಯಾರಕರ ಕಿರು ಪುಸ್ತಕವನ್ನು ಓದಿ ನನ್ನ ಡಿಜಿಟಲ್ ಕ್ಯಾಮರವನ್ನು ಹೇಗೆ ಉಪಯೋಗಿಸುವುದೆಂಬುದರ ತಕ್ಕ ಮಾಹಿತಿಯನ್ನು ಅನುಸರಿಸುತ್ತಾ ಹೋದೆನು. ನಾನು ಆ ಕ್ಯಾಮರವನ್ನು ತಯಾರಿಸಿದವಗಿಂತ ಮೇಲಾಗಿ ತಿಳಿದಿದ್ದೇನೆ! ಎಂದು ನೆನಸಲು ಧೆ ರ್ಯ ಮಾಡಲಿಲ್ಲ. ಆ ತರಹವಾದ ಆಲೋಚನೆಯು ಮೂರ್ಖತನವಾಗುತ್ತಿತ್ತು. ಆದರೆ ಮದುವೆಯ ಸಂದರ್ಭ ಬರುವಾಗ ಅನೇಕರು ಈ ತರಹದ ಮೂರ್ಖತನದಿಂದ ನಿರೂಪಿಸಿದವನ ಮಾಹಿತಿಯನ್ನು ಅಲಕ್ಷ್ಯಮಾಡುವದು ಕಂಡು ಬರುತ್ತದೆ ಮತ್ತು ದೇವರಿಗಿಂತ ಮನಃಶಾಸ್ತ್ರಜ್ಞರಲ್ಲಿ ಮತ್ತು ಮಾನವೀಯ ಸಂಪ್ರದಾಯಗಳಿಗೆ ಕಿವಿಗೊಡುವುದರ ಮೂಲಕ ಉತ್ತಮವಾದ ಮದುವೆ ಜೀವಿತವನ್ನು ನಿರ್ಮಾಣ ಮಾಡಬಹುದೆಂದು ಊಹಿಸುತ್ತಾರೆ.
ದೇವರು ನಮಗೆ ಮದುವೆಯ ಬಗ್ಗೆ ಬಹಳ ಸ್ಪಷ್ಟವಾಗಿ ಬೋಧಿಸಿದ್ದಾರೆ. ನಾನು ನನ್ನ ಡಿಜಿಟಲ್ ಕ್ಯಾಮರಾದ ತಯಾರಕರ ಮಾಹಿತಿಗಳನ್ನು ಅನುಸರಿಸಲು ಪ್ರಾರಂಭಿಸಿದಾಗ ಒಳ್ಳೆಯ ಛಾಯಾಚಿತ್ರಗಳು ಬಂದವು. ಯಾವಾಗ ಗಂಡ ಮತ್ತು ಹೆಂಡತಿ ತಯಾರಕರ ಮಾಹಿತಿಯನ್ನು ಅನುಸರಿಸಲು ಪ್ರಾರಂಭಿಸುತ್ತಾರೋ ಆಗ ಮಾತ್ರ ಆ ಮದುವೆ ಜೀವಿತದಲ್ಲ್ಲಿ ಇದೇ ರೀತಿಯೇ ಆಗುವುದು.
ಇಡೀ ಪ್ರಪಂಚದಲ್ಲೇ ಮದುವೆಯ ಬಗ್ಗೆ ನಿರೂಪಕನ ಬೋಧನೆಯನ್ನು ಹೊಂದಿರುವುದು ಒಂದೇ ಒಂದು ಪುಸ್ತಕ - ಅದು ಸತ್ಯವೇದವಾಗಿದೆ. ನಾನು ಮದುವೆ ಆಗುವುದಕ್ಕಿಂತ ಅನೇಕ ವರ್ಷಗಳ ಹಿಂದೆಯೇ ಅದನ್ನು ಓದಲು ಪ್ರಾರಂಭಿಸಿದೆ. ಆಮೇಲೆ ಮದುವೆಯ ನಂತರ ನಾನು ಮತ್ತು ನನ್ನ ಹೆಂಡತಿ ಜೊತೆಯಾಗಿ ಕೂಡಿ ಅಭ್ಯಾಸ ಮಾಡಿದೆವು. ನಮ್ಮ 37 ವರ್ಷಗಳ ಮದುವೆಯ ಜೀವನದಲ್ಲಿ ಭೂಮಿಯ ಮೇಲೆ ಪರಲೋಕದ ದಿನಗಳು ಎಂಬುದರ ಅರ್ಥವನ್ನು ಸ್ವಲ್ಪ ಮಟ್ಟಿಗೆ ರುಚಿ ನೋಡಿರುವೆವು.
ಸುವಾರ್ತೆಯ ಸಂದೇಶ ಇದೇ ಆಗಿದೆ. ಅದೇನೆಂದರೆ, ನಾವು ಎರಡು ಪರಲೋಕಗಳನ್ನು ಹೊಂದಬಹುದು. ಒಂದು ಇಲ್ಲೇ, ಈಗಲೇ- ನಮ್ಮ ದಿನಗಳು ಈ ಭೂಮಿಯ ಮೇಲೆ ಪರಲೋಕದ ದಿನಗಳಂತೆ ಆಗುವುವು; ಮತ್ತು ಅಂತ್ಯದಲ್ಲಿ, ಕ್ರಿಸ್ತನು ಹಿಂದಿರುಗುವಾಗ -ನ್ಯೆಜ ಪರಲೋಕ.
ಇನ್ನೂ ಬೇರೆ ವಿಕಲ್ಪವೆಂದರೆ 2 ನರಕಗಳು - ಒಂದು ಇಲ್ಲೇ, ಈಗಲೇ ಮತ್ತು ಇನ್ನೊಂದು ನಿತ್ಯತ್ವದಲ್ಲಿ. ಕರ್ತನಾದ ಯೇಸುಕ್ರಿಸ್ತನು ನಮ್ಮನ್ನು ಅದರಿಂದ ರಕ್ಷಿಸಲು ಬಂದನು.
ಸಂಜಯ್ ಮತ್ತು ಕ್ಯಾಥಿ ಎರಡು ಅಂತಸ್ತಿನ ಮನೆಯಲ್ಲಿ ಜೀವಿಸಲಿದ್ದಾರೆ. ನಾವು ಅದನ್ನು ಮದುವೆಯ ಒಂದು ಚಿತ್ರವಾಗಿ ನೋಡಬಹುದು. ಆ ಮನೆಗೆ ಮೊಟ್ಟ ಮೊದಲಾಗಿ ಒಂದು ಅಸ್ತಿವಾರವಿದೆ. ಅದರ ಮೇಲೆ ಮೊದಲ ಮತ್ತು ಎರಡನೆಯ ಅಂತಸ್ತು ಕಟ್ಟಲ್ಪಟ್ಟಿದೆ.
ಯಾವುದೇ ಮನೆಯ ಬಹಳ ಮುಖ್ಯವಾದ ಭಾಗವು, ಅದರ ತಳಹದಿ ಅಥವಾ ಅಸ್ತಿವಾರವಾಗಿರುತ್ತದೆ. ಪ್ರತಿಯೊಂದು ಮದುವೆಯಲ್ಲೂ ಸಹ ಮೊದಲನೆಯದಾಗಿ ಅವಶ್ಯವಾದದ್ದು ಅದರ ಅಸ್ತಿವಾರವೇ ಆಗಿದೆ. ಮತ್ತು ಒಂದು ಒಳ್ಳೆಯ ಮದುವೆಯ ಅಸ್ತಿವಾರವು-ನಮಗಾಗಿ ಇರುವ ದೇವರ ಪರಿಪೂರ್ಣ ಮತ್ತು ಯಾವ ಶರತ್ತೂ ಇಲ್ಲದ ಪ್ರೀತಿಯಾಗಿದೆ. ದೇವರ ಶರತ್ತಿಲ್ಲದ ಪ್ರೀತಿಯ ಸತ್ಯವೇ ಇಡೀ ಸತ್ಯವೇದದಲ್ಲಿ ಕಂಡು ಬರುವ ಮಹಾ ಶ್ರೇಷ್ಠ ಸತ್ಯವಾಗಿದೆ. ನಮ್ಮ ಜೀವಿತದಲ್ಲಿ ನಾವು ಎಡವಿದಾಗ್ಯೂ, ತಪ್ಪಿದಾಗ್ಯೂ, ಸೋತುಹೋದಾಗ್ಯೂ, ನಮ್ಮ ಜೀವಿತವನ್ನು ಅವ್ಯವಸ್ಥೆಗೊಳಿಸಿದಾಗ್ಯೂ ನಮಗಾಗಿ ಇರುವ ದೇವರ ಪ್ರೀತಿ ಎಂದಿಗೂ ಬದಲಾಗುವುದಿಲ್ಲ.
ದೇವರು ತನ್ನ ಪ್ರೀತಿಯನ್ನು ನಮಗೆ ವಿವರಿಸಬೇಕಾದಾಗ ಆತನು ತಾಯಿಯಲ್ಲಿ ತನ್ನ ಹಸುಗೂಸಿಗಿರುವ ಪ್ರೀತಿಯನ್ನು ಉದಾಹರಣೆಯಾಗಿ ಉಪಯೋಗಿಸಿದನು. ನಮಗೆ ಗೊತ್ತಿರುವ ಹಾಗೆ ತಾಯಿಯು ತನ್ನ ಕಂದನಿಂದ ಪ್ರತಿಯಾಗಿ ಏನನ್ನೂ ಅಪೇಕ್ಷಿಸುವುದಿಲ್ಲ.
ಇನ್ನೊಂದು ಕಡೆ, ದೂರದರ್ಶನದಲ್ಲಿ ಮತ್ತು ಚಲನ ಚಿತ್ರಗಳಲ್ಲಿ ವರ್ಣಿಸುವ ಪ್ರೀತಿಯು ಸ್ವಾರ್ಥಮಯವಾದ ಪ್ರೀತಿಯಾಗಿದೆ. ಒಬ್ಬ ಯೌವನಸ್ಥ ಹುಡುಗ ಒಬ್ಬ ಹುಡುಗಿಯನ್ನು ಪ್ರೀತಿಸುತ್ತೇನೆ ಎಂದು ಹೇಳಬಹುದು. ಆದರೆ ಅವನಿಗೆ ಆ ಹುಡುಗಿಯಿಂದ ತನ್ನ ಸ್ವಂತ ತೃಪ್ತಿಗೋಸ್ಕರ ಏನೋ ಬೇಕಾಗಿರುತ್ತದೆ, ಮತ್ತು ಆಕೆಗೂ ಸಹ ಆತನಿಂದ ತನಗಾಗಿ ಏನೋ ಬೇಕಾಗಿರುತ್ತದೆ.
ದೇವರ ಪ್ರೀತಿ ಹೀಗಿರದೆ, ವ್ಯತ್ಯಾಸವಾಗಿದೆ. ಅದು ಹೊಸದಾಗಿ ಹುಟ್ಟಿದ ಮಗುವಿನ ಮೇಲೆ ತಾಯಿಗಿರುವ ಪ್ರೀತಿಯ ಹಾಗೆ. ಆ ತಾಯಿ ತನ್ನ ಕಂದನಿಂದ ಒಂದನ್ನೂ ಅಪೇಕ್ಷಿಸುವುದಿಲ್ಲ. ನಿಜವಾಗಿಯೂ ಆಕೆಯ ಸಣ್ಣ ಮಗು ಆಕೆಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ಈ ಭೂಮಿಯ ಮೇಲೆ ತಾಯಿಯ ಪ್ರೀತಿಯು ಅತಿ ನಿಸ್ವಾರ್ಥವಾದ ಪ್ರೀತಿ. ಯೆಶಾಯ 49:15ರಲ್ಲಿ ದೇವರು ತನ್ನ ಪ್ರೀತಿಯನ್ನು ವಿವರಿಸಲು ಇದನ್ನೇ ಉದಾಹರಣೆಯಾಗಿ ಉಪಯೋಗಿಸಿದ್ದಾನೆ. ಇದು ಸಂಪೂರ್ಣವಾಗಿ ನಿಸ್ವಾರ್ಥವಾದ ಮತ್ತು ಪ್ರತಿಯಾಗಿ ಏನನ್ನೂ ಅಪೇಕ್ಷಿಸದಿರುವ ಪ್ರೀತಿ. ತಾಯಿಯ ಹಾಗೆ ದೇವರು ತನ್ನ ಮಕ್ಕಳ ಸೇವೆಯಲ್ಲಿ ಕಷ್ಟ-ನಷ್ಟಗಳನ್ನೂ ಗಮನಿಸುವುದಿಲ್ಲ. ಕಾಯಿಲೆಯಲ್ಲಿರುವ ಮಗುವನ್ನು ಒಬ್ಬ ತಾಯಿ ಹೇಗೆ ನೋಡಿಕೊಳ್ಳುತ್ತಾಳೆ ಎಂಬುದನ್ನು ನೋಡಿದ್ದೀರಾ? ಅದೇ ರೀತಿ ದೇವರು ನಮ್ಮನ್ನು ಪ್ರೀತಿಸುತ್ತಾನೆ.
ನಿಮ್ಮಿಬ್ಬರಿಗಾಗಿರುವ ದೇವರ ಪರಿಪೂರ್ಣವಾದ ಪ್ರೀತಿಯನ್ನು ಅರಿಯುವುದೇ ನಿಮ್ಮ ಹೊಸ ಮನೆಗೆ ಬೇಕಾಗಿರುವ ಅಸ್ತಿವಾರವಾಗಿದೆ. ಆ ಅಸ್ತಿವಾರದ ಮೇಲೆ ನಿಮ್ಮ ಎರಡು ಅಂತಸ್ತಿನ ಮನೆಯನ್ನು ಕಟ್ಟಬಹುದು. ವ್ಯೆಯಕ್ತಿಕವಾಗಿ ನೀವಿಬ್ಬರೂ ದೇವರ ಪ್ರೀತಿಯಲ್ಲಿ ಸುಭದ್ರವಾಗಿರದಿದ್ದಲ್ಲಿ, ನಿಮ್ಮಿಬ್ಬರ ನಡುವೆ ಅನೇಕ ಸಮಸ್ಯೆಗಳು ಬರುವವು.
ನಮ್ಮಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಲು ಕಾರಣ ನಮ್ಮಲ್ಲಿ ಸುಭದ್ರತೆ ಇಲ್ಲದಿರುವುದೇ ಆಗಿದೆ, ಎಂಬುದು ನನಗೆ ಮನದಟ್ಟಾಗಿದೆ. ಪರಲೋಕದ ತಂದೆಯ ಶರತ್ತಿಲ್ಲದ ಪ್ರೀತಿಯಲ್ಲಿ ನಾವು ಸುರಕ್ಷತೆಯನ್ನು ಕಂಡಿಲ್ಲ. ಮತ್ತು ನಾವು ನಮ್ಮ ಪರಲೋಕದ ತಂದೆಯ ಪ್ರೀತಿಯಲ್ಲಿ ಸುರಕ್ಷತೆಯನ್ನು ಕಾಣದಿದ್ದಾಗ ಇತರರನ್ನು ಪ್ರೀತಿಸಬೇಕಾದ ರೀತಿಯಲ್ಲಿ ನಾವು ಪ್ರೀತಿಸಲು ಸಾಧ್ಯವಾಗುವುದಿಲ್ಲ. ನಮ್ಮ ಸಂಬಂಧಗಳಲ್ಲಿ ಹೊಟ್ಟೆ ಕಿಚ್ಚು, ಪ್ಯೆಪೋಟಿಯ ಆತ್ಮ ಮತ್ತು ಇನ್ನೂ ಅನೇಕ ಸಮಸ್ಯೆಗಳು ನಮಗೆ ಬರುವವು. ಆದರೆ ದೇವರ ಪ್ರೀತಿಯ ಸುರಕ್ಷತೆಗೆ ಬಂದಾಗ ನಾವು ಬಿಡುಗಡೆ ಹೊಂದುವೆವು - ಆಗ ನಾವು ಕಟ್ಟಲು ಪ್ರಾರಂಭಿಸಬಹುದು.
ಪ್ರಮುಖ ಆಜ್ಞೆ ಯಾವುದೆಂದು ಯಾರೋ ಒಬ್ಬರು ಯೇಸುವನ್ನು ಕೇಳಿದಾಗ ಆತನು, ಕೇವಲ ಒಂದು ಮಾತ್ರವಲ್ಲ, ಎರಡು ಪ್ರಮುಖ ಆಜ್ಞೆಗಳಿವೆ, ಎಂದು ಉತ್ತರಿಸಿದನು. ಮೊದಲ ಆಜ್ಞೆ, ದೇವರನ್ನು ನಿನ್ನ ಪರಿಪೂರ್ಣ ಹೃದಯದಿಂದ, ಪ್ರಾಣದಿಂದ ಮತ್ತು ಶಕ್ತಿಯಿಂದ ಪ್ರೀತಿಸಬೇಕು, ಮತ್ತು ಎರಡನೆಯದು, ದೇವರು ನಮ್ಮನ್ನು ಪ್ರೀತಿಸಿದ ಹಾಗೆ ಇತರರನ್ನು ಪ್ರೀತಿಸಬೇಕೆಂಬುದೇ ಆಗಿದೆ.
ಇವೇ ದೇವರ ಎರಡು ಅಂತಸ್ತುಗಳು. ನೀವು ಮೊದಲನೆಯದನ್ನು ಕಟ್ಟುವ ಮೊದಲು ಎರಡನೆಯ ಅಂತಸ್ತನ್ನು ಕಟ್ಟಲು ಸಾಧ್ಯವಿಲ್ಲ. ಅನೇಕ ಜನರು ಮಾಡುವ ತಪ್ಪು ಇದೇ. ಅವರು ದೇವರನ್ನು ತಮ್ಮ ಹೃದಯಪೂರ್ವಕವಾಗಿ ಪ್ರೀತಿಸುವುದಕ್ಕಿಂತ ಮುಂಚೆ ಇತರರನ್ನು ಪ್ರೀತಿಸಲು ಪ್ರಯತ್ನಿಸುತ್ತಾರೆ. ಅವರು ತಯಾರಕರ ಮಾಹಿತಿಯನ್ನು ಓದಿರಲಿಕ್ಕಿಲ್ಲ - ಆದುದರಿಂದಲೇ ಅವರ ಪ್ರೀತಿ ಸ್ವಲ್ಪ ಸಮಯದ ನಂತರ ಬಾಡಿ ಹೋಗುತ್ತದೆ. ಇತರರನ್ನು ಸರಿಯಾದ ರೀತಿಯಲ್ಲಿ ನಾವು ಪ್ರೀತಿಸಬೇಕಾದರೆ, ಮೊದಲು ನಾವು ದೇವರನ್ನು ಪ್ರೀತಿಸಬೇಕು.
ದೇವರು ಆದಾಮ ಮತ್ತು ಹವ್ವಳನ್ನು ರೂಪಿಸಿದಾಗ ಆತನು ಅವರನ್ನು ಒಂದೇ ಸಮಯದಲ್ಲಿ ರೂಪಿಸಲಿಲ್ಲ. ಹಾಗೆ ಮಾಡಬೇಕಾಗಿದ್ದಲ್ಲಿ, ಅದನ್ನು ಆತನು ಸುಲಭವಾಗಿ ಮಾಡಬಹುದಿತ್ತು. ಒಂದು ಮಣ್ಣಿನ ಉಂಡೆಯನ್ನು ತೆಗೆದುಕೊಳ್ಳುವ ಬದಲು ಎರಡು ಮಣ್ಣಿನ ಉಂಡೆಗಳನ್ನು ತೆಗೆದುಕೊಂಡು ಗಂಡು ಮತ್ತು ಹೆಣ್ಣಾಗಿ ಒಂದೇ ಸಮಯದಲ್ಲಿ ಮಾಡಿ ತನ್ನ ಶ್ವಾಸವನ್ನು ಅವರಿಬ್ಬರಲ್ಲೂ ಊದಬಹುದಾಗಿತ್ತು. ಆದರೆ ಯಾಕೆ ಆತನು ಆದಾಮನನ್ನು ಮಾತ್ರವೇ ಮಾಡಿದನು? ಯಾಕೆಂದರೆ ಆದಾಮನು ಕಣ್ಣನ್ನು ತೆರೆದಾಗ ನೋಡುವ ಮೊದಲ ವ್ಯಕ್ತಿ ದೇವರಾಗಿರಬೇಕು, ಹವ್ವಳಲ್ಲ, ಎಂಬುದಕ್ಕಾಗಿ. ಅನಂತರ ದೇವರು ಆದಾಮನನ್ನು ನಿದ್ರಿಸುವಂತೆ ಏಕೆ ಮಾಡಿದನು? ಕೇವಲ ಅವನ ಪಕ್ಕೆಲುಬನ್ನು ತೆಗೆದುಕೊಳ್ಳಲು ಅಲ್ಲ. ಹವ್ವಳನ್ನು ತೋಟದ ಇನ್ನೊಂದು ಮೂಲೆಯಲ್ಲಿ ಪ್ರತ್ಯೇಕವಾಗಿ ಸೃಷ್ಟಿಸಿ, ಆಕೆ ತನ್ನ ಕಣ್ಣುಗಳನ್ನು ತೆರೆದಾಗ ಮೊದಲ ಬಾರಿಗೆ ಕಾಣುವಂತ ವ್ಯಕ್ತಿ ದೇವರೇ ಆಗಿರಬೇಕು - ಆದಾಮನಲ್ಲ, ಎಂಬುದಕ್ಕಾಗಿ. ಆಕೆಗೆ ಆದಾಮನು ಅಸ್ತಿತ್ವದಲ್ಲಿರುವುದೇ ಗೊತ್ತಿರಲಿಲ್ಲ. ಆಕೆ ಮೊದಲು ದೇವರನ್ನು ಮಾತ್ರ ಕಂಡಳು.
ಆದಾಮನು ಮತ್ತು ಹವ್ವಳಿಗೆ ಇದು ದೇವರು ಮೊದಲು ಕಲಿಸಲು ಬಯಸಿದ ಪಾಠವಾಗಿತ್ತು: ನಿಮ್ಮ ದೇವರಾದ ನಾನು ಯಾವಾಗಲೂ ನಿಮ್ಮ ಜೀವಿತಗಳಲ್ಲಿ ಪ್ರಥಮವಾಗಿರಬೇಕು, ಎಂಬುದು. ಇದೇ ಪಾಠವನ್ನು ನಾವೆಲ್ಲರು ಸಹ ಕಲಿಯಬೇಕು.
ಕ್ಯೆಗಾರಿಕಾ ಅಂಟು (ಫೆವಿಕಾಲ್) ಎರಡು ಹಲಗೆಗಳನ್ನು ಅಂಟಿಸಲು ಉಪಯೋಗಿಸುವುದನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಒಂದು ಸಾರಿ ಈ ಅಂಟಿನ ಬಗ್ಗೆ ಜಾಹೀರಾತನ್ನು ನೋಡಿದೆ, ಅದರಲ್ಲಿ ಎರಡು ಹಲಗೆಯ ತುಂಡುಗಳು ಫೆವಿಕಾಲಿನಲ್ಲಿ ಅಂಟಿಸಿದ್ದು, ಅವನ್ನು ಎರಡು ಆನೆಗಳು ಬೇರೆ ಬೇರೆ ಮಾಡಲು ಪ್ರಯತ್ನಿಸುತ್ತಿದ್ದವು. ಆ ಎರಡು ಆನೆಗಳು ಆ ಎರಡು ಹಲಗೆಯ ತುಂಡುಗಳನ್ನು ಬೇರೆ ಮಾಡಲು ಅಸಾಧ್ಯವಾಗಿತ್ತು. ಇದೇ ರೀತಿ ನಿಜವಾದ ಕ್ರ್ಯೆಸ್ತೀಯ ಮದುವೆ ಆಗಿರುತ್ತದೆ. ಎಲ್ಲಿ ಗಂಡ ಮತ್ತು ಹೆಂಡತಿಯ ಮಧ್ಯೆ ಕ್ರಿಸ್ತನು ಅವರಿಬ್ಬರನ್ನು ಹಿಡಿದಿರುತ್ತಾನೋ ಅಲ್ಲಿ ಈ ಲೋಕದ ಅಥವಾ ಪರಲೋಕದ ಯಾವುದೇ ಶಕ್ತಿಯು ಅಂಥಹ ಗಂಡ ಹೆಂಡತಿಯನ್ನು ಬೇರೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕ್ರಿಸ್ತನು ಮೊದಲಾಗಿರದಿದ್ದರೆ, ಆಗ ಅಂತಹ ಮದುವೆಯು ಎರಡು ಹಲಗೆಯ ತುಂಡುಗಳು ಅಂಟಿಲ್ಲದೆ ಕೇವಲ ಒಟ್ಟಿಗೆ ಜೋಡಿಸಿರುವ ಹಲಗೆಗಳ ಹಾಗೆ. ಅವರನ್ನು ಯಾರೂ ಎಳೆಯದಿದ್ದರೂ ಸಹ ತಾವಾಗಿಯೇ ಬೇರೆಯಾಗಿ ಬೀಳುತ್ತಾರೆ. ಆಶ್ಚರ್ಯವೇನಿಲ್ಲ, ಈ ದಿನಗಳಲ್ಲಿ ಅನೇಕ ವಿವಾಹ ವಿಚ್ಛೇದನಗಳನ್ನು ಪ್ರಪಂಚದಲ್ಲಿ ಕಾಣುತ್ತಿದ್ದೇವೆ. ಆ ಜೋಡಿಗಳು ಮದುವೆಯಾದ ದಿನ ಅವರು ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸಿದ್ದೇವೆಂದು ನಿಜವಾಗಿ ಊಹಿಸಿದ್ದರು. ಆದರೆ ಅವರ ಈ ಪ್ರೀತಿ ಸ್ವಾರ್ಥವಾದದ್ದು ಎಂದು ಅವರಿಗೆ ಅರಿವಾಗಲಿಲ್ಲ. ಯಾಕೆಂದರೆ ಕ್ರಿಸ್ತನು ಅವರ ಜೀವಿತದ ಒಡೆಯನಾಗಿರಲಿಲ್ಲ. ಆದ್ದರಿಂದ ಕೆಲವು ತಿಂಗಳುಗಳ ನಂತರ ಅವರು ಪರಸ್ಪರ ಸಿಟ್ಟಿನಿಂದ ವರ್ತಿಸುತ್ತಾರೆ.
ಒಬ್ಬರನ್ನೊಬ್ಬರು ಪ್ರೀತಿಸಿರಿ, ಎಂಬುದು ಒಂದು ಒಳ್ಳೆಯ ಮತ್ತು ಹೆಚ್ಚಾಗಿ ಉಪಯೋಗಿಸುವ ಮಾತು. ಆದರೆ ದೇವರನ್ನು ಮೊದಲು ಪ್ರೀತಿಸದೆ ಅದನ್ನು ಮಾಡಲು ನಿಜವಾಗಿಯೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಕ್ರಿಸ್ತನು ನಿಮ್ಮ ಜೀವಿತದ ಒಡೆಯನು ಮತ್ತು ಕರ್ತನು ಆಗಿರದಿದ್ದರೆ ನಿಮ್ಮ ಸಹಭಾಗಿಯನ್ನು ಕಡೆಯವರೆಗೂ ಪ್ರೀತಿಸಲು ಸಾಧ್ಯವಾಗುವುದಿಲ್ಲ.
ಆದರೆ ಒಂದು ಸಾರಿ ನೀವು ದೇವರನ್ನು ಪ್ರೀತಿಸುವುದರ ಮೂಲಕ ಮೊದಲನೆಯ ಅಂತಸ್ತನ್ನು ಕಟ್ಟಿದರೆ, ಆಗ ಒಬ್ಬರೊನ್ನೊಬ್ಬರು ಪ್ರೀತಿಸುವ ಎರಡನೆಯ ಅಂತಸ್ತನ್ನು ಕಟ್ಟಲು ಸಾಧ್ಯವಾಗುವುದು.
ಒಬ್ಬರೊನ್ನೊಬ್ಬರು ಪ್ರೀತಿಸುವುದರ ಬಗ್ಗೆ ನಾನು ಮೂರು ಸಂಗತಿಗಳನ್ನು ಹೇಳಲು ಬಯಸುತ್ತೇನೆ.
ಮೊದಲನೆಯದಾಗಿ, ಪ್ರೀತಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ. ಮದುವೆ ಜೀವಿತದ ಪ್ರೀತಿಯ ಬಗ್ಗೆ ಸತ್ಯವೇದದಲ್ಲಿ ದೇವರು ಸೇರಿಸಿರುವ ಒಂದು ಇಡೀ ಪುಸ್ತಕವೇ ಇದೆ! ಅದೇ ಪರಮ ಗೀತ. ಮದುವೆಯಾಗಿರುವ ಎಲ್ಲಾ ಜೋಡಿಗಳು ಆ ಪುಸ್ತಕವನ್ನು ಒಬ್ಬರಿಗೊಬ್ಬರು ಓದಬೇಕು! ಹೇಗೆ ಒಬ್ಬ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಬೇಕೆಂದು ಸರ್ವಶಕ್ತನಾದ ದೇವರು ಬಯಸುತ್ತಾನೆ ಎಂದು ನೋಡುವಾಗ ಬಹಳ ಅಚ್ಚರಿಯಾಗುತ್ತದೆ! ಹಾಗೂ ಆ ಪುಸ್ತಕವು ಸತ್ಯವೇದದಲ್ಲಿ ಬೇರೆ ಪುಸ್ತಕಗಳಷ್ಟೇ ನಮ್ಮಲ್ಲಿ ಒಬ್ಬೊಬ್ಬ ಗಂಡ ಮತ್ತು ಹೆಂಡತಿಯರೂ ಒಬ್ಬರಿಗೊಬ್ಬರು ಮೆಚ್ಚುಗೆಯನ್ನು ಸೂಚಿಸಲು ಕಲಿತುಕೊಳ್ಳುವಂತೆ ಈ ಪುಸ್ತಕದಿಂದ ಕೆಲವು ಆರಿಸಿದ ಭಾಗಗಳನ್ನು ನಾನು ನಿಮಗಾಗಿ ಓದುತ್ತೇನೆ. ಇತರರಿಗೆ ಮೆಚ್ಚುಗೆಯನ್ನು ಸೂಚಿಸುವುದಕ್ಕೆ ಬರುವಾಗ ನಾವೆಲ್ಲರೂ ಜಿಪುಣರಾಗಿದ್ದೇವೆ. ಟೀಕೆ ಮಾಡುವುದರಲ್ಲಿ ತೀವ್ರವಾಗಿದ್ದು ಮೆಚ್ಚುಗೆಯನ್ನು ಸೂಚಿಸುವುದರಲ್ಲಿ ತುಂಬಾ ನಿಧಾನವಾಗಿದ್ದೇವೆ. ನಾವು ಮನುಷ್ಯರನ್ನು ನೋಡುವಾಗ ಅವರಲ್ಲಿ ಅನೇಕ ತಪ್ಪುಗಳನ್ನು ಕಂಡುಹಿಡಿಯುತ್ತೇವೆ. ಅದು ಮನುಷ್ಯನ ಸ್ವಭಾವ. ಮತ್ತು ಇದರಿಂದಾಗಿ ದೂರುಗಾರನಾದ ಆ ಸೆ ತಾನನು ನಮ್ಮಲ್ಲಿ ತನ್ನ ನೆಲೆಯನ್ನು ಪಡೆದುಕೊಳ್ಳುತ್ತಾನೆ. ಇನ್ನೊಂದು ಕಡೆ ನಾವು ಇತರರಲ್ಲಿ ಮೆಚ್ಚುವಂತಹ ಸಂಗತಿಗಳನ್ನು ಕಂಡು ಅದನ್ನು ವ್ಯಕ್ತಪಡಿಸುವಾಗ ದೇವರು ನಮ್ಮೊಳಗೆ ತನ್ನ ನೆಲೆಯನ್ನು ಪಡೆದುಕೊಳ್ಳುತ್ತಾನೆ. ಈ ವಿಷಯದಲ್ಲಿ ನಾವು ಪ್ರತಿಯೊಬ್ಬರೂ ನಮ್ಮ ಸ್ವಂತ ನಡತೆಯನ್ನು ಪರೀಕ್ಷಿಸಿಕೊಳ್ಳಬಹುದು.
ಗಂಡನು ತನ್ನ ಪತ್ನಿಗೆ ಪರಮ ಗೀತದಲ್ಲಿ (ಇಂಗ್ಲಿಷಿನ ಒessಚಿge ಃibಟe ಭಾಷಾಂತರದಲ್ಲಿ) ಹೇಳುತ್ತಿರುವುದು ಹೀಗಿದೆ:
ನನ್ನ ಪ್ರಿಯಳೇ, ನೀನು ಸರ್ವಾಂಗ ಸುಂದರಿ, ನಿನ್ನದು ವರ್ಣಿಸಲಾರದ ಸೌಂದರ್ಯ, ನಿನ್ನಲ್ಲಿ ಯಾವ ದೋಷವೂ ಇಲ್ಲ. ನನ್ನನ್ನು ಭಾವೋದ್ರೇಕಗೊಳಿಸುವಷ್ಟು ಸುಂದರವಾಗಿದ್ದಿ. ನಿನ್ನ ಧ್ವನಿಯು ಎಷ್ಟೋ ಇಂಪು, ನಿನ್ನ ರೂಪು ಎಷ್ಟೋ ಅಂದ, ಎಷ್ಟೋ ಮನೋಹರ, ಎಷ್ಟೋ ರಮ್ಯ! ನನ್ನ ಪ್ರಿಯ ಗೆಳತಿ, ನೀನು ಸ್ವರ್ಗವೇ!
(ಈ ವಾಕ್ಯಗಳನ್ನು ನಾನು ಸೃಷ್ಟಿಸಿದ್ದಲ್ಲ. ಇವೆಲ್ಲವು ಸತ್ಯವೇದದಲ್ಲಿ ಇವೆ)ನೀನು ನನ್ನ ಹೃದಯವನ್ನು ಗೆದ್ದೆ. ನನ್ನನ್ನು ನೀನು ನೋಡಿದಾಗ ನಾನು ಪ್ರೀತಿಯಲ್ಲಿ ಮರುಳಾಗಿಹೋದೆ. ನಿನ್ನ ಒಂದು ದೃಷ್ಟಿ - ನನ್ನ ಮನಸ್ಸು ಸೂರೆಗೊಂಡಿತು! ನನ್ನ ಹೃದಯ ಪರವಶವಾಗಿದೆ. ಓ ಗೆಳತಿ, ನಿನ್ನನ್ನು ಕಂಡು ನನ್ನ ಆಶೆಗಳು ಉದ್ರೇಕಗೊಳ್ಳುತ್ತವೆ. ನಾನು ನಿನ್ನ ತೆಕ್ಕೆಗಳಲ್ಲಿ ಕಟ್ಟುಬಿದ್ದಿದ್ದೇನೆ.
(ಪ್ರತಿಯೊಬ್ಬ ಗಂಡನಲ್ಲೂ ಇದು ನಿಜವಾದಲ್ಲಿ ಎಷ್ಟು ಚೆನ್ನ!)ನಿನ್ನಂತೆ ಇನ್ಯಾರೂ ಜಗದಲ್ಲೇ ಇಲ್ಲ. ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಾರರು. ಬೇರೆಯವರಿಗೆ ಹೋಲಿಸಲಾರದಂಥ ಸ್ತ್ರೀ ನೀನು.
(ಕವಿತಾ ಸ್ವಾತಂತ್ರ್ಯವನ್ನು ಇಲ್ಲಿ ದೇವರು ಅನುಮತಿಸುತ್ತಾನೆ. ಇದು ವಿಜ್ಞಾನದ ಸೂಕ್ತತೆಗೆ ಹೋಲಿಸುವುದಲ್ಲ್ಲ, ಇದೆಲ್ಲಾ ಒಬ್ಬ ಗಂಡನ ಅನಿಸಿಕೆಯಾಗಿದೆ.)ಮತ್ತು ಈಗ ಹೆಂಡತಿಯ ಉತ್ತರ ಹೇಗಿದೆ ಎಂಬುದನ್ನು ಕೇಳಿಸಿಕೊಳ್ಳಿ. ಇದು ಅವಳ ಪ್ರತ್ಯುತ್ತರ:
ಆಹಾ, ಎನ್ನಿನಿಯನೇ, ನೀನು ಎಷ್ಟು ಸುಂದರ, ಎಷ್ಟು ರಮ್ಯ! ನೀನು ಹತ್ತು ಸಾವಿರ ಜನರಲ್ಲೊಬ್ಬನು. ನಿನ್ನ ಹಾಗೆ ಯಾರೂ ಇಲ್ಲ. ನೀನು ಹೊಂಬಣ್ಣದವ, ನೀನು ಜಗ್ಗದ ಮನುಷ್ಯ. ನಿನ್ನ ನುಡಿ ಬಹು ಇಂಪು ಮತ್ತು ಧೆ ರ್ಯ ತುಂಬುವಂಥಹದು. ನಿನ್ನ ಪದಗಳು ಮುತ್ತುಗಳಂತೆ ಮತ್ತು ನಿನ್ನ ಮುತ್ತುಗಳೆಲ್ಲವೂ ಪದಗಳಂತೆ. ನೀನು ಸರ್ವಾಂಗದಲ್ಲಿಯೂ ಮನೋಹರನು. ನೀನು ನನ್ನನ್ನು ಮೇಲಿಂದ ಮೇಲೆ ರೋಮಾಂಚಗೊಳಿಸುತ್ತೀ! ನಾನು ನಿನಗಾಗಿ ಹಾತೊರೆಯುತ್ತೇನೆ, ನೀನೇ ನನ್ನ ಪ್ರಾಣಪ್ರಿಯನು. ನೀನಿಲ್ಲದಿದ್ದರೆ ಆ ನೋವನ್ನು ತಾಳಲಾರೆನು. ನಿನ್ನನ್ನು ಕಂಡುಕೊಂಡಾಗ ನಿನ್ನನ್ನು ಕೆ ಗಳಿಂದ ಬಳಸಿ ಬಿಡದೇ ಬಿಗಿಯಾಗಿ ಹಿಡಿದುಕೊಳ್ಳುತ್ತೇನೆ. ನಾನು ನನ್ನ ನಲ್ಲನವಳೇ; ಅವನ ಆಶೆಯು ನನ್ನ ಮೇಲೇ ಇದೆ ಮತ್ತು ಇವನೇ ನನ್ನ ಪ್ರಿಯನು.
ದೇವರು ಇಂಥಹ ಮಾತುಗಳನ್ನು ಬೆ ಬಲಿನಲ್ಲಿ ಹಾಕಲು ಹೇಗೆ ಸಾಧ್ಯ? ಯಾಕೆಂದರೆ ದೇವರು ಸ್ವತಃ ಒಬ್ಬ ಪ್ರಿಯಕರನಾಗಿದ್ದಾನೆ.
ಸಂಜಯ್ ಮತ್ತು ಕ್ಯಾಥಿ, ನೀವು ಆ ರೀತಿಯ ಪ್ರೇಮಿಗಳಾಗಿರಿ. ನೀವು ಒಬ್ಬರನ್ನೊಬ್ಬರು ಆ ರೀತಿಯಾಗಿ ಪ್ರೀತಿಸಬೇಕೆಂಬುದಾಗಿ ಆಶಿಸುತ್ತಾರೆ. ಆ ರೀತಿಯಾಗಿ ನೀವು ಒಬ್ಬರಿಗೊಬ್ಬರು ನಿಮ್ಮ ಮೆಚ್ಚುಗೆಯನ್ನು ಸೂಚಿಸಲು ಕಲಿತುಕೊಂಡರೆ ನಿಮ್ಮ ದಿನಗಳು ಭೂಮಿಯ ಮೇಲೆ ಪರಲೋಕದ ದಿನಗಳಂತೆ ಇರಲು ಸಾಧ್ಯವಿದೆ.
ಈ ಕ್ಷೇತ್ರದಲ್ಲಿ ಯೇಸುವು ನಮ್ಮೆಲ್ಲರಿಗೆ ಉತ್ತಮ ಉದಾಹರಣೆಯಾಗಿದ್ದಾನೆ. ಆತನು ಜನರ ಬಗ್ಗೆ ತನ್ನ ಮೆಚ್ಚುಗೆಯನ್ನು ಧಾರಾಳವಾಗಿ ಸೂಚಿಸುತ್ತಿದ್ದನು.
ನಿಜವಾದ ಪ್ರೀತಿಯ ಬಗ್ಗೆ ಎರಡನೆಯ ಸಂಗತಿಯು: ಪ್ರೀತಿಯು ಶೀಘ್ರವಾಗಿ ಕ್ಷಮಿಸುತ್ತದೆ.
ಪ್ರೀತಿಯು ಕ್ಷಮಿಸಲು ಅತಿ ಶೀಘ್ರವಾಗಿದ್ದು, ತಪ್ಪು ಹೊರಿಸುವುದರಲ್ಲಿ ನಿಧಾನವಾಗಿರುತ್ತದೆ. ಪ್ರತೀ ವಿವಾಹದಲ್ಲೂ ಗಂಡ ಹೆಂಡರ ಮಧ್ಯೆ ಸಮಸ್ಯೆಗಳಿರುತ್ತವೆ. ಆದರೆ ಆ ಸಮಸ್ಯೆಗಳನ್ನು ಪರಿಹರಿಸಲು ನಾವು ಅಸಡ್ಡೆ ಮಾಡಿದರೆ ಅವು ಸ್ಫೋಟಗೊಳ್ಳುವುದು ಖಂಡಿತ. ಆದುದರಿಂದ ಶೀಘ್ರವಾಗಿ ಕ್ಷಮಿಸಿರಿ ಮತ್ತು ತಡಮಾಡದೆ ಕ್ಷಮಾಪಣೆಯನ್ನು ಕೇಳಿರಿ. ಅದನ್ನು ಮಾಡಲು ಸಂಜೆಯವರೆಗೂ ಕಾಯಬೇಡಿರಿ. ಒಂದು ವೇಳೆ ಬೆಳಿಗ್ಗೆ ನಿಮ್ಮ ಕಾಲಿಗೆ ಮುಳ್ಳು ಚುಚ್ಚಿದರೆ ಅದನ್ನು ತಕ್ಷಣ ತೆಗೆಯುತ್ತೀರಿ. ಅದಕ್ಕಾಗಿ ಸಂಜೆಯವರೆಗೂ ಕಾಯುವುದಿಲ್ಲ. ಒಂದು ವೇಳೆ ನಿಮ್ಮ ಸಂಗಾತಿಯನ್ನು ನೋಯಿಸಿದರೆ, ಆಕೆ ಅಥವಾ ಆತನನ್ನು ನೀವು ಮುಳ್ಳಿನಿಂದ ಚುಚ್ಚಿರುವಿರಿ. ತಕ್ಷಣ ಅದನ್ನು ತೆಗೆದುಹಾಕಿರಿ. ತಡವಿಲ್ಲದೆ ಕ್ಷಮಾಪಣೆಯನ್ನು ಕೇಳಿರಿ ಮತ್ತು ತಕ್ಷಣ ಕ್ಷಮಿಸಿರಿ.
ಇನ್ನು ಅಂತಿಮವಾಗಿ, ಪ್ರೀತಿಯು ತನ್ನ ಸಂಗಾತಿಯ ಜೊತೆಗೂಡಿ ಚಟುವಟಿಕೆಗಳನ್ನು ಕೆ ಗೊಳ್ಳಲು ಹಾತೊರೆಯುತ್ತದೆ - ಒಂಟಿಯಾಗಿ ಅಲ್ಲ. ಒಂದು ವೇಳೆ ಸೆ ತಾನನು ಹವ್ವಳನ್ನು ಶೋಧಿಸಲು ಬಂದಾಗ ಆಕೆ, ನಾನು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂಚೆ ನನ್ನ ಗಂಡನ ಸಲಹೆಯನ್ನು ಕೇಳುತ್ತೇನೆ, ಎಂಬುದಾಗಿ ಹೇಳಿದ್ದರೆ ಮಾನವನ ಇತಿಹಾಸದಲ್ಲಿ ಎಂಥಹ ಬದಲಾವಣೆಯಾಗಿರುತ್ತಿತ್ತು ನೋಡಿ! ಓ, ಆಗ ಕಥೆಯೇ ಬೇರೆ ಆಗಿರುತ್ತಿತ್ತು.
ನೆನಪಿಡಿ, ಲೋಕದ ಎಲ್ಲಾ ಸಮಸ್ಯೆಗಳು ಉದ್ಭವಿಸಲು ಕಾರಣ, ಒಬ್ಬ ಸ್ತ್ರೀಯು ತನ್ನ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ತನಗೆ ದೇವರು ಕೊಟ್ಟಿದ್ದ ಸಂಗಾತಿಯೊಡನೆ ಚರ್ಚಿಸಬಹುದಾಗಿದ್ದರೂ, ಆಕೆಯು ತನ್ನದೇ ಆದ ಒಂದು ನಿರ್ಧಾರವನ್ನು ತೆಗೆದುಕೊಂಡುದರಿಂದ.
ನಿಜವಾದ ಪ್ರೀತಿ ಚಟುವಟಿಕೆಗಳನ್ನು ಒಟ್ಟಾಗಿ ಮಾಡುತ್ತದೆ. ಯಾವಾಗಲೂ ಒಬ್ಬರಿಗಿಂತ ಇಬ್ಬರು ಉತ್ತಮ.
ಕೊನೆಯದಾಗಿ, ನಾನು ಇನ್ನೊಮ್ಮೆ ದೇವರ ವಾಕ್ಯದ ಪರಮ ಗೀತೆಯ 8ನೇ ಅಧ್ಯಾಯ, 6 ಮತ್ತು 7ನೇ ವಾಕ್ಯಗಳನ್ನು ಓದ ಬಯಸುತ್ತೇನೆ (ಒessಚಿge ಬೆ ಬಲ್‌ನಿಂದ): ಪ್ರೀತಿಯ ಬೆಂಕಿಯು ತನ್ನ ಮುಂದೆ ಎಲ್ಲವನ್ನೂ ನಿರ್ಮೂಲ ಮಾಡುತ್ತದೆ. ನೀರಿನ ಪ್ರಳಯ ಅದನ್ನು ಮುಳುಗಿಸಲಾರದು. ನಿಜ ಪ್ರೀತಿಯನ್ನು ಕೊಳ್ಳಲು ಸಾಧ್ಯವಿಲ್ಲ. ಅದು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ದೇವರ ಪ್ರೀತಿಯು ಮಾತ್ರ ಹೀಗಿರುತ್ತದೆ. ಆದ್ದರಿಂದಲೇ ೬ನೇ ವಾಕ್ಯದಲ್ಲಿ ಈ ಪ್ರೀತಿಯು ದೇವರ ಜ್ವಾಲೆ ಎಂಬುದಾಗಿ ಕರೆಯಲ್ಪಟ್ಟಿದೆ.
ದೇವರು ಮಾತ್ರ ಇಂಥಹ ಪ್ರೀತಿಯನ್ನು ಕೊಡಲು ಸಾಧ್ಯ.
ಸಂಜಯ್ ಮತ್ತು ಕ್ಯಾಥಿ, ನಿಮ್ಮಿಬ್ಬರ ನಡುವೆ ಇಂತಹ ಪ್ರೀತಿಯನ್ನು ನೀಡಲು ದೇವರನ್ನು ಕೇಳಿಕೊಳ್ಳಿರಿ.
ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ - ಆಮೆನ್.
ದೇವರು ನಮಗೆ ಕೊಟ್ಟಿರುವುದು ಒಂದೇ ಒಂದು ಪುಸ್ತಕ. ನಾವು ಅದನ್ನು ನಿಜವಾಗಿಯೂ ನಂಬುವವರಾಗಿದ್ದರೆ, ಜೀವಿತದ ಪ್ರತಿಯೊಂದು ಸಂಗತಿಗೂ ನಾವು ಆ ಪುಸ್ತಕದ ಬೋಧನೆಯನ್ನು ಗಮನಿಸುತ್ತೇವೆ. ಮನುಷ್ಯನಿಗೆ ಮದುವೆಯನ್ನು ನೇಮಿಸಿದ್ದು ದೇವರು ಎಂಬುದಾಗಿ ನಾವು ಸತ್ಯವೇದದಲ್ಲಿ ಓದುತ್ತೇವೆ. ಆತನೇ ಮೊದಲು ಅದರ ಬಗ್ಗೆ ಯೋಚಿಸಿದ್ದು ಮತ್ತು ಆತನೇ ಗಂಡು ಮತ್ತು ಹೆಣ್ಣನ್ನು ಒಂದಾಗಿ ಸೇರಿಸಬೇಕೆಂಬ ಹಂಬಲದೊಡನೆ ಅವರನ್ನು ಸೃಷ್ಟಿಸಿದ್ದು. ಇದಲ್ಲದೆ ಆತನು ತನ್ನ ಪುಸ್ತಕದಲ್ಲಿ ಮದುವೆಯಾದ ಮೇಲೆ ದಂಪತಿಗಳು ಹೇಗೆ ಜೀವಿಸಬೇಕೆಂಬ ಎಚ್ಚರಿಕೆಗಳನ್ನೂ ಮತ್ತು ಸಲಹೆಗಳನ್ನೂ ಕೊಟ್ಟಿದ್ದಾನೆ.
ಆದಿಕಾಂಡ 3ನೇ ಅಧ್ಯಾಯದಲ್ಲಿ ಆದಾಮ ಮತ್ತು ಹವ್ವಳ ಮದುವೆಯ ಬಗ್ಗೆ ನಾವು ಓದುತ್ತೇವೆ. ದೇವರು ಅವರನ್ನು ಮದುವೆಯಲ್ಲಿ ಒಂದು ಮಾಡಿದ ಕೂಡಲೇ ಅವರನ್ನು ಒಂದು ಸುಂದರವಾದ ತೋಟದೊಳಕ್ಕೆ ಕಳುಹಿಸಿದನು. ದೇವರು ಮಾನವನಿಗಾಗಿ ಯೋಜಿಸಿದ ಆ ನೆಮ್ಮದಿಯ ದಾಂಪತ್ಯ ನಿಮಗೆ ಸಿಗಬೇಕಿದ್ದರೆ, ಆ ತೋಟದಲ್ಲಿ ನಡೆದ ಮೂರು ಸಂಗತಿಗಳಲ್ಲಿ ನಮಗೆ ಕಾಣಿಸುವ ಮೂರು ಆಯ್ಕೆಗಳನ್ನು, ಸಂತೋಷ್ ಮತ್ತು ಮೇಘನ್, ನೀವೂ ಹಾಗೂ, ಎಲ್ಲಾ ಮದುವೆಯಾದ ದಂಪತಿಗಳು ಸಹ, ಮಾಡಬೇಕು.
ಅನೇಕ ದಂಪತಿಗಳು ದೇವರ ವಾಕ್ಯವನ್ನು ಓದದ ಕಾರಣ ಇಂಥಹ ಮದುವೆಗಳು ಭೂಮಿಯ ಮೇಲೆ ಅತೀ ವಿರಳ. ಕೆಲವರು ಓದಿದರೂ ಅದನ್ನು ಧ್ಯಾನಿಸದೇ ಇರುವದರಿಂದ ದೇವರು ಹೇಗೆ ತಾವು ಜೀವಿಸಬೇಕೆಂದು ಬಯಸುತ್ತಾನೆಂಬದನ್ನು ಅರಿಯದವರಾಗಿದ್ದಾರೆ.
ದೇವರು, ಆದಾಮ ಮತ್ತು ಹವ್ವಳನ್ನು ತೋಟದೊಳಗೆ ಕಳುಹಿಸಿ ಅವರಿಗೆ ಧಾರಾಳವಾದ ಸ್ವಾತಂತ್ರ್ಯವನ್ನು ಕೊಟ್ಟರೂ ಸಹ ಅವರನ್ನು ಒಂದು ಮಿತಿಗೆ ಒಳಪಡಿಸಿದನು. ಆತನು ಅವರನ್ನು ಒಂದು ಮರದ ಹಣ್ಣನ್ನು ತಿನ್ನಬಾರದೆಂಬುದಾಗಿ ನಿಷೇಧಿಸಿದನು. ಅದಕ್ಕೆ ಒಂದು ಕಾರಣವಿತ್ತು. ಆಯ್ಕೆ ಇಲ್ಲದೆ ಯಾರೂ ಸಹ ದೇವರ ಮಗನಾಗಲು ಸಾಧ್ಯವಿಲ್ಲ.ವ್ಯೆಯಕ್ತಿಕ ಆಯ್ಕೆ ಇಲ್ಲದೆ ಯಾರೂ ಪರಿಶುದ್ಧರಾಗಲು ಸಾದ್ಯವಿಲ್ಲ. ಹೀಗಾಗಿ ದೇವರು ಆದಾಮನನ್ನು ತೋಟದೊಳಗೆ ಕಳುಹಿಸಿದಾಗ ಅವನಿಗೆ ಆಯ್ಕೆಮಾಡುವ ಸಂದರ್ಭವನ್ನು ಕೊಟ್ಟಿರದಿದ್ದರೆ, ಆದಾಮನು ದೇವರಿಗೆ ಬೇಕಾಗುವಂತಹ ಮಗನಾಗಲು ಸಾಧ್ಯವಾಗುತ್ತಿರಲಿಲ್ಲ. ನಾವು ಮಾಡುವ ಆಯ್ಕೆಗಳು ಈ ಭೂಮಿಯ ಮೇಲಿನ ನಮ್ಮ ಜೀವಿತಕ್ಕಾಗಿ, ಮತ್ತು ಇನ್ನೂ ಹೆಚ್ಚಾಗಿ, ಮುಂದಿನ ನಿತ್ಯತ್ವಕ್ಕೆ - ಎಷ್ಟು ಪ್ರಾಮುಖ್ಯವಾದವುಗಳು ಎಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ.
ಆಯ್ಕೆ ಮಾಡುವ ಶಕ್ತಿ ದೇವರು ನಮಗೆ ಕೊಟ್ಟಿರುವ ಶ್ರೇಷ್ಠ ವರಗಳಲ್ಲೊಂದು. ತಾನು ನೀಡಿರುವ ಆ ಶಕ್ತಿಯನ್ನು ಆತನು ಯಾರಿಂದಲೂ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ನೀನು ದೇವರ ಮಗನಾಗಿರಲು ನಿರ್ಧರಿಸಬಹುದು ಅಥವಾ ನೀನು ನೀನಾಗಿಯೇ ಜೀವಿಸುವ ಆಯ್ಕೆಯನ್ನು ಮಾಡಬಹುದು. ಆದರೆ ಯಾವುದನ್ನೇ ನೀನು ಆರಿಸಿಕೊಂಡರೂ ನಿನ್ನ ಜೀವಿತದ ಅಂತ್ಯದಲ್ಲಿ ನಿನ್ನ ಆಯ್ಕೆಯ ಪ್ರತಿಫಲವನ್ನು ಪಡೆಯಬೇಕಾಗುತ್ತದೆ.
ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು, ಎಂಬುದಾಗಿ ಸತ್ಯವೇದವು ಹೇಳುತ್ತದೆ. ಮನುಷ್ಯನು ಒಂದು ಸಾರಿ ಸಾಯಬೇಕು, ಅನಂತರ ನ್ಯಾಯತೀರ್ಪು, ಎಂದೂ ಸಹ ಸತ್ಯವೇದವು ಹೇಳುತ್ತದೆ. ಆದರೆ ದೇವರು ಅಂತ್ಯದಿನದಲ್ಲಿ ಮನುಷ್ಯನನ್ನು ಮನಸ್ಸು ಬಂದಂತೆ ತೀರ್ಪುಮಾಡುವುದಿಲ್ಲ. ಆತನ ನ್ಯಾಯತೀರ್ಪು - ಪ್ರತಿಯೊಬ್ಬ ಮನುಷ್ಯನು ಮಾಡಿಕೊಂಡ ಆಯ್ಕೆಯ ಮೇಲೆ ಆಧಾರಗೊಂಡಿರುತ್ತದೆ.
ಈ ನಿಯಮ ವಿವಾಹದಲ್ಲೂ ಸಹ ಅನ್ವಯಿಸಲ್ಪಡುತ್ತದೆ. ನಿಮಗೆ ಸಂತೋಷಕರವಾದ ಮದುವೆ ಬೇಕೋ ಅಥವಾ ದುಃಖಾವಸ್ಥೆಯ ಮದುವೆ ಬೇಕೋ ಎಂಬುದಾಗಿ ನೀವೇ ಆಯ್ಕೆ ಮಾಡಿಕೊಳ್ಳಬೇಕು. ಆ ಆಯ್ಕೆಯು ನಿಮ್ಮದು, ದೇವರದಲ್ಲ. ಆದಾಮನು ತನ್ನ ಜೀವಿತವನ್ನು ಒಳಪಡಿಸುವುದು ಸೆ ತಾನನಿಗೋ ಅಥವಾ ದೇವರಿಗೋ ಎಂಬ ಆಯ್ಕೆಯನ್ನು ಮಾಡಬಹುದಾಗಿತ್ತು.
ಆದುದರಿಂದ, ಸಂತೋಷ್ ಮತ್ತು ಮೇಘನ್, ನಾನು ನಿಮಗೆ ನಿಮ್ಮ ವಿವಾಹದಲ್ಲಿ ನೀವು ಮಾಡಬೇಕಾಗಿರುವ ಮೂರು ಆಯ್ಕೆಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ.
ನಿಮ್ಮಲ್ಲಿಯಲ್ಲ - ದೇವರಲ್ಲಿ ಕೇಂದ್ರೀಕರಿಸಲ್ಪಟ್ಟಿರ್ರಿ
ಮೊದಲನೆಯದಾಗಿ, ನಿಮ್ಮ ಜೀವಿತದ ಎಲ್ಲಾ ಕ್ಷೇತ್ರಗಳೂ ದೇವರಲ್ಲಿ ಕೇಂದ್ರೀಕರಿಸಲ್ಪಟ್ಟಿರಲು ನಿರ್ಧರಿಸಿಕೊಳ್ಳಿ.
ಏದೆನ್ ತೋಟದಲ್ಲಿ ಎರಡು ಮರಗಳಿದ್ದವು - ಅವು ಜೀವಿತದ ಎರಡು ವಿಧವಾದ ಮಾರ್ಗಗಳನ್ನು ತೋರಿಸುತ್ತಿದ್ದವು. ಜೀವದಾಯಕ ವೃಕ್ಷವು ದೇವರನ್ನು ಕೇಂದ್ರೀಕರಿಸಲ್ಪಟ್ಟ ಜೀವಿತದ ಸಂಕೇತವಾಗಿತ್ತು - ಅಲ್ಲಿ ಮಾಡುವ ಪ್ರತಿಯೊಂದು ನಿರ್ಧಾರದಲ್ಲೂ ಮನುಷ್ಯನು ದೇವರಲ್ಲಿ ಕೇಂದ್ರೀಕರಿಸಲ್ಪಟ್ಟಿರುತ್ತಾನೆ. ಇದಕ್ಕೆ ಪ್ರತಿಯಾಗಿ, ಒಳ್ಳೆಯದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರವಿತ್ತು, ಇಲ್ಲಿ ಸ್ವಾರ್ಥವು ಕೇಂದ್ರವಾಗಿದ್ದು, ಮನುಷ್ಯನು ದೇವರ ಆಲೋಚನೆಯನ್ನು ಕೇಳದೆ ಜೀವಿಸುತ್ತಾ, ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುದನ್ನು ತಾನೇ ನಿರ್ಧರಿಸುವುದನ್ನು ಸೂಚಿಸುತ್ತಿತ್ತು. ದೇವರು ಆದಾಮ ಮತ್ತು ಹವ್ವಳನ್ನು ತೋಟದೊಳಗೆ ಕಳುಹಿಸಿ ಅವರಿಗೆ, ಈಗ ನೀವು ಈ ಎರಡು ಮಾರ್ಗಗಳಲ್ಲಿ ಯಾವುದನ್ನು ಆರಿಸಿಕೊಂಡು ಜೀವಿಸಲು ಇಷ್ಟವೋ ಅದನ್ನು ಆಯ್ಕೆ ಮಾಡಬಹುದು, ಎಂದು ಹೇಳಿದಂತಿದೆ. ಅಲ್ಲಿ ಆದಾಮನು ಯಾವ ಮಾರ್ಗವನ್ನು ಆರಿಸಿದನೆಂಬುದಾಗಿ ನಮ್ಮೆಲ್ಲರಿಗೂ ಗೊತ್ತೇ ಇದೆ. ತನ್ನನ್ನೇ ಕೇಂದ್ರೀಕರಿಸಿಕೊಂಡ ಜೀವಿತವನ್ನು ಆತನು ಆರಿಸಿಕೊಂಡನು.ನಾವು ಪ್ರಪಂಚದಲ್ಲಿ ನೋಡುವ ಎಲ್ಲಾ ವಿಪತ್ತಿಗೂ, ದುಃಖಕ್ಕೂ, ಕೊಲೆಗಳಿಗೂ ಮತ್ತು ಎಲ್ಲಾ ತರದ ಬೇರೆ ದುಷ್ಟ ಸಂಗತಿಗಳಿಗೂ ಕಾರಣ, ಮನುಷ್ಯನು ತಾನೇ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಿರುವುದರಿಂದಾಗಿದೆ. ಮನುಷ್ಯನಿಗೆ ದೇವರು ಸಲಹೆ ಕೊಡುವದು ಬೇಡವಾಗಿದೆ. ಇದೇ ಪ್ರತಿಯೊಂದು ಅಸಂತೋಷಕರ ಮದುವೆಗೆ ಕಾರಣವಾಗಿದೆ - ಕ್ರ್ಯೆಸ್ತರಲ್ಲೂ ಸಹ. ಸ್ವಾರ್ಥವನ್ನೇ ಕೇಂದ್ರವಾಗಿ ಇರಿಸಿಕೊಂಡು ಜೀವಿಸುವ ಕ್ರ್ಯೆಸ್ತರ ದೊಡ್ಡ ಗುಂಪೇ ಇದೆ - ಮತ್ತು ಅವರು ತಾವು ಬಿತ್ತಿದ್ದನ್ನೇ ಕೊಯ್ಯುತ್ತಾರೆ.
ದೇವರು ಆದಾಮನನ್ನು ಉಂಟುಮಾಡಿದಾಗ, ಅವನು ಭೂಮಿಯ ಮೇಲೆ ಆಳ್ವಿಕೆ ಮಾಡಬೇಕೆಂಬುದಾಗಿ ಆಶಿಸಿದನು. ಆದಾಮನನ್ನು ರಾಜನಾಗಿ ಸೃಷ್ಟಿಸಿದನೇ ಹೊರತು ಗುಲಾಮನಾಗಿ ಅಲ್ಲ. ಹಾಗೆಯೇ ಹವ್ವಳು, ಆದಾಮನ ಪಕ್ಕದಲ್ಲಿ ರಾಣಿಯಾಗಿ ಇರಬೇಕೆಂಬುದೇ ದೇವರ ಅಪೇಕ್ಷೆಯಾಗಿತ್ತು. ಆದರೆ ಈ ದಿನಗಳಲ್ಲಿ ನಾವು ಏನನ್ನು ಕಾಣುತ್ತೇವೆ? ಎಲ್ಲೆಡೆಯಲ್ಲೂ ಸ್ತ್ರೀ-ಪುರುಷರು ಗುಲಾಮರಾಗಿದ್ದಾರೆ - ತಮ್ಮ ಭಾವೋದ್ರೇಕಗಳಿಗೆ ಮತ್ತು ಭ್ರಷ್ಟಗೊಳಿಸುವ ಈ ಲೋಕದ ಸಂಗತಿಗಳಿಗೆ ಗುಲಾಮರಾದ್ದಾರೆ.
ದೇವರು ಈ ಲೋಕವನ್ನು ಉಂಟುಮಾಡಿದಾಗ ಎಲ್ಲವನ್ನೂ ಸುಂದರವಾಗಿ ಸೃಷ್ಟಿಸಿದರು. ನಿಷೇಧಿಸಿದ ಮರವು ಸಹ ಸುಂದರವಾಗಿತ್ತು. ಆದಾಮ ಮತ್ತು ಹವ್ವಳು ಆ ಮರದ ಎದುರಿಗೆ ನಿಂತಾಗ ಅವರು ಒಂದು ಆಯ್ಕೆಯನ್ನು ಮಾಡಬೇಕಾಗಿತ್ತು: ದೇವರು ಸೃಷ್ಟಿಸಿದ ಸುಂದರವಾದ ಸಂಗತಿಗಳನ್ನು ಆರಿಸಿಕೊಳ್ಳುವುದೋ, ಅಥವಾ ಸ್ವತಃ ದೇವರನ್ನೇ ಆರಿಸಿಕೊಳ್ಳುವುದೋ, ಎಂಬುದಾಗಿ.
ಇದೇ ಆಯ್ಕೆಯನ್ನು ನಾವೆಲ್ಲರೂ ಪ್ರತಿಯೊಂದು ದಿನದಲ್ಲೂ ಮಾಡಬೇಕಾಗಿದೆ. ನಮ್ಮ ಜೀವಿತವು ನಮ್ಮಲ್ಲೇ ಕೇಂದ್ರೀಕರಿಸಲ್ಪಟ್ಟಿದ್ದರೆ, ನಾವು ದೇವರನ್ನಲ್ಲ, ದೇವರ ಬಹುಮಾನವನ್ನು(ಆತನು ಉಂಟುಮಾಡಿದ ವಸ್ತುಗಳನ್ನು) ಬೆನ್ನಟ್ಟುವವರಾಗಿರುತ್ತೇವೆ. ಅನೇಕ ಕುಟುಂಬಗಳಲ್ಲಿ ಆಗುವ ಜಗಳಗಳು ಕೇವಲ ಇಹಲೋಕದ ಸಂಗತಿಗಳಿಗಾಗಿರುತ್ತವೆ. ಇಂತಹ ಜಗಳಗಳು ಉಂಟಾಗುವದಕ್ಕೆ ಕಾರಣ ಪತಿ ಮತ್ತು ಪತ್ನಿ ದೇವರನ್ನೇ ಆದುಕೊಳ್ಳುವ ಬದಲು, ಆತನು ಸೃಷ್ಟಿಸಿರುವ ವಸ್ತುಗಳನ್ನು ಆರಿಸಿಕೊಳ್ಳುವುದಾಗಿದೆ - ಇದರಿಂದ ತಮ್ಮ ಆಯ್ಕೆಯ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ. ಅವರು ತಮ್ಮ ಶರೀರಕ್ಕಾಗಿ ಬಿತ್ತುವ ಕಾರಣ ಭ್ರಷ್ಟಾಚಾರವನ್ನು ಕೊಯ್ಯುತ್ತಾರೆ. ತನ್ನ ಸೃಷ್ಟಿಕರ್ತನನ್ನು ಬಿಟ್ಟು, ಸೃಷ್ಟಿಸಿದ ವಸ್ತುಗಳನ್ನು ಆಯ್ಕೆಮಾಡುವ ಮನುಷ್ಯನು ಒಬ್ಬ ಗುಲಾಮನಾಗಿರುತ್ತಾನೆ.
ಯೇಸುವು ನಮ್ಮನ್ನು ಈ ಗುಲಾಮತನದಿಂದ ಬಿಡುಗಡೆಮಾಡಲು ಬಂದರು. ಮನುಷ್ಯನು ಇಂದು ಹಣದ ಶಕ್ತಿಗೆ, ನ್ಯಾಯಬದ್ಧವಲ್ಲದ ಲ್ಯೆಂಗಿಕ ಸಂತೋಷಕ್ಕೆ, ಇತರರ ಅಭಿಪ್ರಾಯಕ್ಕೆ ಮತ್ತು ಇನ್ನೂ ಅನೇಕ ವಿಷಯಗಳಿಗೆ ಗುಲಾಮನಾಗಿದ್ದಾನೆ. ಅವನು ಸ್ವತಂತ್ರನಾಗಿಲ್ಲ. ದೇವರು ಅವನನ್ನು ಆಕಾಶದ ಎತ್ತರದಲ್ಲಿ ಹಾರಾಡುವ ಹದ್ದಿನಂತೆ ಇರಲು ಸೃಷ್ಟಿಸಿದನು. ಆದರೆ ಮನುಷ್ಯನು ಸರಪಳಿಗಳಿಂದ ಬಂಧಿಸಲ್ಪಟ್ಟು, ತನ್ನ ಕೋಪವನ್ನು ಜಯಿಸಲಾರದೆ, ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರದೆ, ತನ್ನ ಕಾಮಾಸಕ್ತಿಯ ಕಣ್ಣುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಲಾರದೆ ಇರುವುದನ್ನು ಎಲ್ಲಾ ಕಡೆಯಲ್ಲೂ ನಾವು ಕಾಣುತ್ತೇವೆ. ಯೇಸುವು ನಮ್ಮ ಪಾಪಗಳಿಗಾಗಿ ಸಾಯಲು ಮಾತ್ರ ಬರಲಿಲ್ಲ, ನಮ್ಮನ್ನು ಈ ಗುಲಾಮತನದಿಂದ ಬಿಡಿಸಲು ಸಹ ಬಂದನು.
ಸಂತೋಷ್ ಮತ್ತು ಮೇಘನ್, ನಾನು ನಿಮಗೆ ಹೇಳಬಯಸುವುದು ಏನೆಂದರೆ, ನೀವು ಆದಾಮನು ಮಾಡಿದ ಆಯ್ಕೆಯನ್ನು ತಿರಸ್ಕರಿಸುವುದಾದರೆ, ಹಾಗೂ ದೇವರಿಗೆ, ಕರ್ತನೇ, ಸ್ವಾರ್ಥವು ಎಂದಿಗೂ ನಮ್ಮ ಜೀವಿತದ ಕೇಂದ್ರವಾಗಿರುವುದಿಲ್ಲ; ನೀನೇ ನಮ್ಮ ಕೇಂದ್ರವಾಗಿರುವಿ. ನಮ್ಮ ಜೀವಿತದ ಪ್ರತಿಯೊಂದು ಸಂಗತಿಯೂ ನಿನ್ನಲ್ಲಿ ಕೇಂದ್ರೀಕರಿಸಲ್ಪಟ್ಟಿರುತ್ತದೆ, ಎಂದು ನೀವು ಹೇಳುವುದಾದರೆ, ಅತ್ಯಂತ ಶ್ರೇಷ್ಠ ಸಂತೋಷಭರಿತ ವೆ ವಾಹಿಕ ಜೀವನವನ್ನು ನೀವು ಹೊಂದಬಹುದು.
ದೇವರು ಬೆಳಕಾಗಿದ್ದಾನೆ ಮತ್ತು ದೇವರು ಪ್ರೀತಿಯಾಗಿದ್ದಾನೆ ಎಂದು ಸತ್ಯವೇದವು ಹೇಳುತ್ತದೆ. ದೇವರ ಪ್ರೀತಿಯೇ ಆತನ ಬೆಳಕಾಗಿದೆ. ಕತ್ತಲೆಯ ಕೋಣೆಯಲ್ಲಿ ಬೆಳಕಿನ ಶಕ್ತಿಯು ಕತ್ತಲೆಯನ್ನು ಹೊಡೆದೋಡಿಸುತ್ತದೆ. ದೇವರ ಶಕ್ತಿಯು ಹಾಗೆಯೇ. ದೇವರ ಶಕ್ತಿಗೆ ಹೊರತಾದ ಜೀವಿತವು, ಆತನ ಪ್ರೀತಿಯನ್ನು ಕಾಣದೆ ಕೇವಲ ಕತ್ತಲೆಯಾಗಿರುತ್ತದೆ.
ಈ ಭೂಮಿಯ ಮೇಲಿನ ನಮ್ಮ ಇಡೀ ಜೀವಿತವು, ಪ್ರೀತಿಯ ನಿಯಮದ ಮೂಲಕ ಆಳಲ್ಪಡುವ ನಿತ್ಯತ್ವದ ರಾಜ್ಯಕ್ಕೆ ನಮ್ಮನ್ನು ಸಿದ್ಧಗೊಳಿಸುವ, ಒಂದು ಪರೀಕ್ಷೆ ಮತ್ತು ಅರ್ಹತಾ ಮಾಪನದ ಅವಧಿಯಂತಿದೆ. ಹೀಗಾಗಿ ಇಂದು ದೇವರು ನಮ್ಮನ್ನು ಕರೆದೊಯ್ಯುವ ಪ್ರತಿಯೊಂದು ಸಂದರ್ಭ ಮತ್ತು ಸನ್ನಿವೇಶವೂ, ನಾವು ಪ್ರೀತಿಯ ನಿಯಮಕ್ಕೆ ಅನುಸಾರವಾಗಿ ಜೀವಿಸುತ್ತೇವೋ ಇಲ್ಲವೋ ಎಂದು - ನಮ್ಮನ್ನು ಪರೀಕ್ಷಿಸಲು ಆತನಿಂದ ಸಂಕಲ್ಪಿಸಲ್ಪಟ್ಟಿದೆ. ಈ ಕಾರಣದಿಂದಲೇ ದೇವರು ನಮ್ಮ ಬದುಕಿನಲ್ಲಿ ಅನೇಕ ಕಷ್ಟಗಳನ್ನು ಮತ್ತು ಸಂಕಟಗಳನ್ನು ಅನುಮತಿಸುತ್ತಾನೆ. ಸರ್ವಶಕ್ತನಾಗಿರುವ ದೇವರು ನಮ್ಮ ಈ ಭೂಲೋಕದ ಜೀವಿತದಲ್ಲಿ ನಮಗೆ ಯಾವ ಕಷ್ಟ ಸಂಕಟಗಳೂ ಇಲ್ಲದಂತೆ ಮಾಡಬಹುದಾಗಿತ್ತು. ಆದರೆ ದೇವರು ತನ್ನ ಉನ್ನತ ಜ್ಞಾನದಿಂದ ಕಷ್ಟಗಳ ಮೂಲಕವೇ ನಾವು ಪ್ರೀತಿಸುವುದನ್ನು ಕಲಿಯುವಂತೆ ಯೋಜಿಸಿದ್ದಾನೆ. ಒಂದು ವೇಳೆ ನಾವು ನಮ್ಮ ಸ್ವಾರ್ಥವನ್ನು ಜಯಿಸಿ, ಪ್ರೀತಿ ಮಾತ್ರವೇ ನಮ್ಮ ಜೀವಿತದ ಮಾರ್ಗದರ್ಶಿಯಾಗಿರುವುದು ಎಂದು ನಿಶ್ಚಯಿಸಿಕೊಳ್ಳುವುದಾದರೆ, ಬರಲಿರುವ ತನ್ನ ರಾಜ್ಯದಲ್ಲಿ ಆಳುವವರಾಗಲು ದೇವರು ನಮ್ಮನ್ನು ಸಿದ್ಧಪಡಿಸಲು ಸಾಧ್ಯವಾಗುವದು. ಇದರ ಬಗ್ಗೆ ನಾವು ಈಗ ಯೋಚಿಸಬೇಕು - ಇಲ್ಲವಾದರೆ ದೇವರು ನಮಗೆ ಈ ಲೋಕದಲ್ಲಿ ಒದಗಿಸಿದ ಸಂದರ್ಭಗಳಲ್ಲಿ ಕಲಿತುಕೊಳ್ಳಬೇಕಾದದ್ದನ್ನು ನಾವು ಕಲಿಯಲಿಲ್ಲವಲ್ಲ? ಎಂದು ನಿತ್ಯತ್ವದಲ್ಲಿ ನೆನಸಿ ವ್ಯಥೆಪಡುವೆವು.
ಆದ್ದರಿಂದ ನೀವು ನಿಮ್ಮ ಮದುವೆಯಲ್ಲಿ ಮಾಡಬೇಕಾದ ಆಯ್ಕೆಯು ಇದು: ನೀವು ಪ್ರೀತಿಯ ನಿಯಮದಂತೆ ಜೀವಿಸುತ್ತೀರೋ ಅಥವಾ ಸ್ವಾರ್ಥದ ನಿಯಮದಂತೆ ಜೀವಿಸುತ್ತೀರೋ? ದೇವರು ನಿಮ್ಮ ಬಾಳಿನ ಕೇಂದ್ರವಾಗಿದ್ದರೆ, ದೇವರ ಪ್ರೀತಿಯು ನೀವು ಹೇಳುವ ಮತ್ತು ಮಾಡುವ ಪ್ರತಿಯೊಂದಕ್ಕೂ ಮಾರ್ಗದರ್ಶಿಯಾಗುವುದು.
ಒಬ್ಬರನ್ನೊಬ್ಬರು ಸ್ವೀಕರಿಸಿರಿ - ಮತ್ತು ಮುಖವಾಡವನ್ನು ಧರಿಸಬೇಡಿರಿ ಎರಡನೆಯದಾಗಿ ನಾನು ಹೇಳುವಂಥದು, ಒಬ್ಬರನ್ನೊಬ್ಬರು ಸ್ವೀಕರಿಸಿರಿ ಮತ್ತು ಯಾವುದೇ ಮುಖವಾಡವನ್ನು ಧರಿಸಬೇಡಿರಿ, ಎಂಬುದು.
ಪಾಪವು ಬರುವ ಮುನ್ನ, ಆದಾಮ ಮತ್ತು ಹವ್ವಳು ಬೆತ್ತಲೆಯಾಗಿದ್ದರು ಮತ್ತು ಅವರು ನಾಚಿಕೊಳ್ಳಲಿಲ್ಲ. ಅವರು ನಿಷ್ಕಪಟಿಗಳಾಗಿದ್ದು, ಒಬ್ಬರಿಗೊಬ್ಬರು ಯಥಾರ್ಥವಾಗಿದ್ದರು ಮತ್ತು ಮುಚ್ಚಿಡುವಂಥದು ಯಾವುದೂ ಅವರಲ್ಲಿ ಇರಲಿಲ್ಲ. ಆದರೆ ಪಾಪ ಮಾಡಿದ ತಕ್ಷಣ ಸಂಗತಿಗಳು ಬದಲಾದವು. ತಕ್ಷಣವೇ ಅವರು ತಮ್ಮನ್ನು ಅಂಜೂರದ ಎಲೆಗಳಿಂದ ಮುಚ್ಚಿಕೊಂಡರು. ಹೀಗೇಕೆ ಮಾಡಿದರು? ಆ ತೋಟದಲ್ಲಿ ಇಣಿಕಿ ನೋಡುವವರು ಯಾರೂ ಇರಲಿಲ್ಲ. ಖಂಡಿತವಾಗಿ ಅವರು ಪ್ರಾಣಿಗಳಿಂದ ತಮ್ಮನ್ನು ಮರೆಮಾಡಿಕೊಳ್ಳಲಿಲ್ಲ. ಹಾಗಾದರೆ ತಮ್ಮನ್ನು ಅಂಜೂರದ ಎಲೆಗಳಿಂದ ಮುಚ್ಚಿಕೊಳ್ಳುವುದು ಏಕೆ ಅವಶ್ಯವಾಗಿತ್ತು? ಅವರು ತಮ್ಮನ್ನೇ ಒಬ್ಬರಿಂದೊಬ್ಬರು ಮರೆಮಾಡಿಕೊಂಡಿದ್ದರು.
ಪಾಪದ ಪರಿಣಾಮಗಳಲ್ಲೊಂದು ನಾವು ಒಬ್ಬರಿಂದೊಬ್ಬರು ಮರೆಮಾಡಿಕೊಳ್ಳುವುದೇ ಆಗಿದೆ. ಎಲ್ಲಾ ಜನರು ತಮ್ಮ ಜೀವಿತದಲ್ಲಿ ತಮಗೆ ಅವಲಕ್ಷಣವೆನಿಸುವ ವ್ಯಕ್ತಿತ್ವವನ್ನು ಮುಚ್ಚಿಡುತ್ತಾರೆ. ಒಂದು ವೇಳೆ ತಮ್ಮ ಬಗ್ಗೆ ಅಂತಹ ವಿವರಗಳನ್ನು ಇತರರು ತಿಳಿದುಕೊಂಡರೆ ಅವರಿಗೆ ಮುಜುಗರವಾಗುತ್ತದೆ. ಆದ್ದರಿಂದ ಅವರು ಮುಖವಾಡಗಳನ್ನು ಧರಿಸುತ್ತಾರೆ. ಅವರು ತಮ್ಮೊಳಗೆ ಅಪಜಯ ಮತ್ತು ದುಃಖಗಳಿಂದ ಕೂಡಿದ್ದಾಗ್ಯೂ, ಹೊರಗೆ ಮಾತ್ರ ತಾವು ಸಮಾಧಾನ, ಸಂತೋಷಗಳನ್ನು ಹೊಂದಿ ಶಾಂತವಾಗಿರುವವರಂತೆ ತೋರಿಸಿಕೊಳ್ಳುತ್ತಾರೆ.
ಮದುವೆಯಾದ ಮೇಲೆ ನೀವು ಒಬ್ಬರೊಂದಿಗೊಬ್ಬರು ನೀವಿದ್ದಂತೆಯೇ ಇರಲು ಮತ್ತು ಎಂದಿಗೂ ಮುಖವಾಡವನ್ನು ಧರಿಸದಿರಲು ನಿಶ್ಚಯಿಸಿಕೊಳ್ಳಬೇಕು. ಅಲ್ಲಿ ನಟನೆ ಮತ್ತು ಅಂಜೂರದ ಎಲೆಗಳು ಇಲ್ಲದಿರಲಿ.
ತನ್ನನ್ನು ಸಂಪೂರ್ಣವಾಗಿ ತಿಳಕೊಂಡು, ಪ್ರೀತಿಸುವ ಮತ್ತೊಬ್ಬ ವ್ಯಕ್ತಿಯನ್ನು ಹುಡುಕುವ ಒಂದು ಆಸೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದೆ. ಇತರರೊಂದಿಗೆ ನಮಗೆ ಆಗಿರುವ ಕೆಟ್ಟ ಅನುಭವಗಳಿಂದಾಗಿ ನಾವು ಮುಖವಾಡಗಳನ್ನು ಧರಿಸಿಕೊಳ್ಳುತ್ತೇವೆ. ಇತರರು ನಮ್ಮ ಬಗ್ಗೆ ಎಲ್ಲವನ್ನೂ ಅರಿತುಕೊಂಡರೆ ಅವರು ನಮ್ಮನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ನಮಗೆ ಗೊತ್ತಿದೆ. ಆದ್ದರಿಂದ ಮನುಷ್ಯರು ನಮ್ಮನ್ನು ಸ್ವೀಕರಿಸುವಂತೆ, ಅವರ ಮುಂದೆ ಮುಖವಾಡವನ್ನು ಧರಿಸಿಕೊಳ್ಳುತ್ತೇವೆ. ಕ್ರ್ಯೆಸ್ತರ ಮಧ್ಯದಲ್ಲಿಯೂ ಇದು ಸತ್ಯವಾಗಿದೆ. ಯೇಸುವು ಈ ಲೋಕದಲ್ಲಿದ್ದಾಗ ಅನೇಕ ಧಾರ್ಮಿಕ ವ್ಯಕ್ತಿಗಳು ಮುಖವಾಡಗಳನ್ನು ಧರಿಸಿಕೊಂಡಿರುವುದನ್ನು ಆತನು ಕಂಡನು - ಆ ಕಾರಣಕ್ಕಾಗಿಯೇ ಅವರಿಗೆ ಸಹಾಯಮಾಡಲು ಯೇಸುವಿಗೆ ಸಾಧ್ಯವಾಗಲಿಲ್ಲ.
ನಾನು ಈ ದಿನ ನಿಮ್ಮಿಬ್ಬರನ್ನೂ ಒಂದು ನಿರ್ಧಾರ ಕೆ ಗೊಳ್ಳಲು ಪ್ರೇರೇಪಿಸುತ್ತೇನೆ - ಮುಖವಾಡ ಧರಿಸದೇ ಯಾವಾಗಲೂ ಒಬ್ಬರನ್ನೊಬ್ಬರು ನೀವಿದ್ದಂತೆಯೇ ಸ್ವೀಕರಿಸಿಕೊಳ್ಳಿರಿ. ಸಂತೋಷ್, ನೀನು ಮೇಘನಳಲ್ಲಿ ತಪ್ಪುಗಳನ್ನು ಕಂಡರೂ ಆಕೆಯನ್ನು ಸ್ವೀಕರಿಸುತ್ತೀಯೋ? ಮೇಘನ್, ನೀನು ಸಂತೋಷ್‌ನಲ್ಲಿ ತಪ್ಪುಗಳನ್ನು ಕಂಡರೂ ಅವನನ್ನು ಸ್ವೀಕರಿಸುತ್ತೀಯೋ?
ದೇವರಲ್ಲಿರುವ ಅದ್ಭುತವಾದ ಸಂಗತಿಯೆಂದರೆ ಅವರು ನಮ್ಮೆಲ್ಲರನ್ನೂ ನಾವಿದ್ದ ಹಾಗೆಯೇ ಸ್ವೀಕರಿಸುತ್ತಾರೆ. ದೇವರು ನಿಮ್ಮನ್ನು ಸ್ವೀಕರಿಸುವ ಮೊದಲು ನೀವು ನಿಮ್ಮನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಬೋಧಿಸುವ ಮತವು ಅಸತ್ಯವಾದ ಮತವಾಗಿದೆ. ಯೇಸುವು ಅಂಥಹ ಧರ್ಮವನ್ನು ತರಲಿಲ್ಲ. ದೇವರು ನಾವಿದ್ದಂತೆಯೇ ನಮ್ಮನ್ನು ಪ್ರೀತಿಸುತ್ತಾನೆ ಎಂಬ ಸಂದೇಶವನ್ನು ಆತನು ತಂದನು. ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲವೆಂದು ದೇವರಿಗೆ ತಿಳಿದಿದೆ. ಹೀಗಾಗಿ ಅವರು ನಮ್ಮನ್ನು ನಾವಿದ್ದಂತೆಯೇ ಸ್ವೀಕರಿಸುತ್ತಾನೆ - ಮತ್ತು ತಾನೇ ನಮ್ಮನ್ನು ಮಾರ್ಪಡಿಸುತ್ತಾನೆ. ಸಂತೋಷ್ ಮತ್ತು ಮೇಘನ್, ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಸ್ವೀಕರಿಸಬೇಕು, ಎಂದು ಸತ್ಯವೇದವು ನಿಮ್ಮಿಬ್ಬರನ್ನೂ ಪ್ರೇರೇಪಿಸುತ್ತದೆ.
ಕೆಲ ಸಮಯದ ಹಿಂದೆ ಒಂದು ಸಾಹಿತ್ಯ ಲೇಖನವನ್ನು ನಾನು ಓದಿದೆ. ಆ ಲೇಖಕರ ಹೆಸರು ನನಗೆ ನೆನಪಿಲ್ಲ. ಅದರಲ್ಲಿ ಪ್ರಕಟವಾಗಿದ್ದ ಸಂಗತಿ ಇದು:
ನಾವೆಲ್ಲರೂ ಅವಿತುಕೊಳ್ಳುವ ಆಟವನ್ನು ಆಡುತ್ತಾ ಜೀವನವನ್ನು ಸಾಗಿಸುತ್ತೇವೆ. ನಾವೇನಾಗಿದ್ದೇವೋ ಅದರ ಬಗ್ಗೆ ನಾವು ನಾಚಿಕೆಪಡುವುದರಿಂದ, ನಾವು ಒಬ್ಬರಿಂದೊಬ್ಬರು ಮರೆಮಾಡಿಕೊಳ್ಳುತ್ತೇವೆ. ನಮ್ಮೊಳಗೆ ನೆಲೆಸಿರುವ ನಿಜವಾದ ಮನುಷ್ಯನನ್ನು ಇತರರು ಕಾಣದಂತೆ ನಾವು ಮುಖವಾಡವನ್ನು ಧರಿಸಿಕೊಳ್ಳುತ್ತೇವೆ. ನಾವು ನಮ್ಮ ಮುಖವಾಡದೊಳಗಿನಿಂದ ಒಬ್ಬರನ್ನೊಬ್ಬರು ನೋಡುತ್ತಾ ಅದನ್ನು ಅನ್ಯೋನ್ಯತೆ ಎಂಬುದಾಗಿ ಕರೆಯುತ್ತೇವೆ. ನಾವು ನಿಶ್ಚಿಂತರಾಗಿ, ಶಾಂತರಾಗಿದ್ದೇವೆ ಎಂಬ ಭಾವನೆಯನ್ನು ಇತರರಿಗೆ ಕೊಡುತ್ತೇವೆ, ಆದರೆ ಅದು ಮುಖವಾಡ ಮಾತ್ರವೆ. ಆ ಮುಖವಾಡದ ಒಳಗೆ ನಾವು ಗಲಿಬಿಲಿಗೆ ಒಳಗಾಗಿದ್ದೇವೆ, ಭಯಭ್ರಾಂತರಾಗಿದ್ದೇವೆ ಮತ್ತು ಒಬ್ಬಂಟಿಗರಾಗಿದ್ದೇವೆ. ಇತರರು ನಮ್ಮ ನಿಜಸ್ಥಿತಿಯನ್ನು ನೋಡದಿರಲೆಂದು ಹಿಂಜರಿಯುತ್ತೇವೆ. ಒಂದು ವೇಳೆ ಇತರರು ನಮ್ಮೊಳಗಿನ ನಿಜ ವ್ಯಕ್ತಿಯನ್ನು ಕಂಡರೆ, ಅವರು ನಮ್ಮನ್ನು ತಿರಸ್ಕರಿಸಬಹುದು ಮತ್ತು ಬಹುಶಃ ನಮ್ಮ ಕುರಿತಾಗಿ ನಗಬಹುದು - ಮತ್ತು ಅವರ ನಗುವು ನಮ್ಮನ್ನು ಕೊಲ್ಲಬಹುದು. ಆದ್ದರಿಂದ ನಾವು ನಾಟಕದ ಆಟವನ್ನು ಆಡುತ್ತೇವೆ - ತೋರಿಕೆಗೆ, ವಿಸ್ವಾಸವುಳ್ಳವರು ಮತ್ತು ಭರವಸೆಯುಳ್ಳವರಂತೆ ಇದ್ದರೂ ಒಳಗೊಳಗೆ ಸಣ್ಣ ಮಗುವಿನಂತೆ ಸದಾಕಾಲ ನಡುಗುತ್ತಿರುತ್ತೇವೆ. ನಮ್ಮ ಇಡೀ ಜೀವಿತವೇ ಒಂದು ನಾಟಕವಾಗಿಬಿಡುತ್ತದೆ. ನಾವು ಇತರರೊಂದಿಗೆ ಮಾತನಾಡುತ್ತೇವೆ, ತಮಾಷೆ ಮಾಡುತ್ತೇವೆ, ನಮ್ಮ ಕುರಿತಾಗಿ ಪ್ರಾಮುಖ್ಯವಲ್ಲದ ಸಂಗತಿಗಳನ್ನು ಹೇಳುತ್ತೇವೆ, ಆದರೆ ನಮ್ಮೊಳಗಿನ ನಿಜವಾದ ಆ ಚೀರಾಟದ ಕುರಿತಾಗಿ ಏನೂ ಹೇಳುವುದಿಲ್ಲ.
ಇತರರು ನಮ್ಮನ್ನು ಅರ್ಥಮಾಡಿಕೊಂಡು, ಪ್ರೀತಿಸಿ, ಸ್ವೀಕರಿಸುವುದಕ್ಕಾಗಿ ನಾವೆಲ್ಲರೂ ಹಂಬಲಿಸುತ್ತೇವೆ. ಆದರೆ ನಮ್ಮ ಅನುಭವದಂತೆ, ನಾವು ನಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗ ಪಡಿಸುವಾಗ ಅವರು ನಮ್ಮನ್ನು ತ್ಯಜಿಸುತ್ತಾರೆ. ನಮ್ಮ ಬಗ್ಗೆ ಎಲ್ಲವೂ ತಿಳಿದಿದ್ದೂ ನಮ್ಮನ್ನು ಪ್ರೀತಿಸುವವರಿಗಾಗಿ ನಾವು ಹುಡುಕುತ್ತೇವೆ. ಆದರೆ ಅಂಥಹ ವ್ಯಕ್ತಿಯನ್ನು ನಾವು ಎಂದೂ ಕಾಣೆವು. ಹೊಸದಾಗಿ ಹುಟ್ಟಿರುವ ಕ್ರೆ ಸ್ತ ವಿಶ್ವಾಸಿಗಳು ಪ್ರೀತಿಯ ಕುರಿತಾಗಿ ಮಾತನಾಡುವುದನ್ನು ಕೇಳಿದಾಗ ಇವರಾದರೂ ನಮ್ಮನ್ನು ಸ್ವೀಕರಿಸಬಹುದು, ಎಂಬುದಾಗಿ, ನಿರೀಕ್ಷೆಯು ನಮ್ಮ ಹೃದಯಗಳಲ್ಲಿ ಹುಟ್ಟುತ್ತದೆ. ಆದರೆ ಅವರೊಂದಿಗೆ ಬೆರೆತಾಗ ಅವರೂ ಸಹ ಮುಖವಾಡಗಳನ್ನು ಧರಿಸಿದ್ದಾರೆಂಬುದು ಕಂಡುಬರುತ್ತದೆ. ಮತ್ತು ಅವರು ಕೇವಲ ನಮ್ಮ ತಪ್ಪುಗಳನ್ನು ಹುಡುಕುವವರಾಗಿರುತ್ತಾರೆ.
ಇದಕ್ಕೆ ಪರಿಹಾರವಾದರೂ ಏನು? ಇರುವ ಸ್ಥಿತಿಯಲ್ಲೇ ದೇವರಿಂದ ಅಂಗೀಕರಿಸಲ್ಪಟ್ಟು ಪ್ರೀತಿಸಲ್ಪಟ್ಟಿರುವವರು ನಾವು ಎಂಬುದನ್ನು ನಾವು ಅರಿಯುವುದು ಅವಶ್ಯ. ದೇವರು ಪ್ರೀತಿಯಾಗಿದ್ದಾನೆ. ದೇವರ ಪ್ರೀತಿಯನ್ನು ರುಚಿಸಿ ನೋಡುವ ಅನುಭವ ನಮ್ಮನ್ನು ಧೆ ರ್ಯಶಾಲಿಗಳನ್ನಾಗಿ ಮಾಡುತ್ತದೆ. ಆಗ ನಾವು ನಟಿಸಬೇಕಾಗಿಲ್ಲ ಮತ್ತು - ದೇವರೊಂದಿಗೂ ಮನುಷ್ಯರೊಂದಿಗೂ - ನಾವು ನಾವಾಗಿಯೇ ಇರುತ್ತೇವೆ. ಎಂದಿಗೂ ದೇವರ ಪ್ರೀತಿಯು ನಮಗೆ ಯಾವುದನ್ನೂ ಮಾಡಲು ಒತ್ತಾಯಿಸುವುದಿಲ್ಲ. ನಮ್ಮ ಎಲ್ಲಾ ಅಸಂಪೂರ್ಣತೆಗಳನ್ನು ಕಂಡುಕೊಂಡವನಾಗಿದ್ದಾಗ್ಯೂ, ದೇವರು ನಮ್ಮನ್ನು ದೂಷಿಸದೆ ಸ್ವೀಕರಿಸುತ್ತಾನೆ. ಅದಲ್ಲದೆ ಆತನು ನಮ್ಮನ್ನು ಸಂಪೂರ್ಣಗೊಳಿಸಲು ಆಶಿಸುತ್ತಾನೆ. ನಮ್ಮನ್ನು ಅರಿತಿದ್ದರೂ, ನಮ್ಮ ಬಗ್ಗೆ ಎಲ್ಲವನ್ನು ತಿಳಿದಿದ್ದರೂ ಸಹ ದೇವರು ನಮ್ಮನ್ನು ಅಂಗೀಕರಿಸಿದ್ದಾನೆ, ಎಂದು ತಿಳಿದುಕೊಳ್ಳುವುದೇ ಸಂತೃಪ್ತ ಕ್ರಿಸ್ತೀಯ ಜೀವಿತದ ಆಧಾರವಾಗಿದೆ. ಇದೇ, ಯೇಸುವು ಕೊಡಲು ಬಂದಿರುವ ಸಮೃದ್ಧವಾದ ಜೀವಿತವಾಗಿದೆ.
ದೇವರ ಪ್ರೀತಿಯನ್ನು ತಿಳಿದಾಗ ಮನುಷ್ಯರ ಅಂಗೀಕಾರವನ್ನು ಹುಡುಕುವುದರಿಂದ ಶಾಶ್ವತವಾದ ಮುಕ್ತಾಯ ಸಿಗುತ್ತದೆ. ನಾವು ಭರವಸೆಯಿಂದ ತುಂಬಿದವರಾಗುವೆವು. ಅಪರಾಧ ಮನೋಭಾವವು ನಮ್ಮನ್ನು ಬಿಟ್ಟು ದೂರವಾಗುತ್ತದೆ ಮತ್ತು ಭಯವು ನಮ್ಮಿಂದ ಹೊರದೂಡಲ್ಪಡುತ್ತದೆ. ಕೆಲವೊಮ್ಮೆ ನಾವು ಒಬ್ಬಂಟಿಗರು ಆಗಿರಬಹುದು, ಆದರೆ ಎಂದಿಗೂ ಏಕಾಂಗಿಯಲ್ಲ, ಏಕೆಂದರೆ ದೇವರು, ಎಂದಿಗೂ ನಮ್ಮ ಕೆ ಬಿಡುವುದಿಲ್ಲ ಹಾಗೂ ನಮ್ಮನ್ನು ತೊರೆಯುವುದಿಲ್ಲವೆಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ.
ನನ್ನನ್ನು ಅಂಗೀಕರಿಸು ಎಂಬ ಬಯಕೆ ನಿಮ್ಮ ಮದುವೆಯ ಸಂಗಾತಿಯೊಳಗೆ ಇರುವ ಒಂದು ಅಳಲು ಆಗಿದೆ. ಆದ್ದರಿಂದ ಕೇಳುವಂತ ಕಿವಿಗಳನ್ನು ನಿಮ್ಮ ಸಂಗಾತಿಯ ಮಾತುಗಳಿಗೆ ಮಾತ್ರವೇ ಅಲ್ಲ, ನುಡಿಯದೇ ಇರುವ ಹೃದಯದ ಮೌನ ಪದಗಳಿಗೂ ಸಹ ನೀಡುವುದು ಪ್ರಾಮುಖ್ಯವಾಗಿದೆ.
ದೇವರಾದರೂ ನಮ್ಮನ್ನು ನಾವಿದ್ದಂತೆಯೇ ಸ್ವೀಕರಿಸುವನು ಎಂಬುದನ್ನು ನಾವು ನಂಬದಿರುವುದು ತುಂಬಾ ದುಃಖಕರವಾದ ಸಂಗತಿಯಾಗಿದೆ. ಹೀಗಾಗಿ ಆತನಿಂದಲೂ ಸಹ ನಾವು ನಮ್ಮನ್ನು ಮರೆಮಾಡಿಕೊಳ್ಳುತ್ತೇವೆ. ಅದನ್ನೇ ಆದಾಮ ಮತ್ತು ಹವ್ವಳು ಮಾಡಿದರು. ಅವರು ಮರದ ಹಿಂದೆ ತಮ್ಮನ್ನು ದೇವರಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿದರು.
ದೇವರಿಂದ ಅಂಗೀಕರಿಸಲ್ಪಟ್ಟಿರುವ ಸಂತೋಷವನ್ನು ಅನೇಕ ಗಂಡಂದಿರು ಮತ್ತು ಹೆಂಡತಿಯರು ಕಂಡುಕೊಳ್ಳದೆ ಇರುವುದರಿಂದ ಅವರು ಒಬ್ಬರನ್ನೊಬ್ಬರು ಪ್ರೀತಿಸಲು ಆಗುತ್ತಿಲ್ಲ. ಅವರು ಧಾರ್ಮಿಕತೆಯನ್ನು ಹೊಂದಿದ್ದಾರೆ, ಆದರೆ ಕ್ರಿಸ್ತನನ್ನಲ್ಲ. ಜನರಿಗೆ ಕ್ರಿಸ್ತನಿಲ್ಲದ, ಬರೀ ಶೂನ್ಯವಾದ ಕವಚ(ಕರಟ)ದಂತಹ ಕ್ರೆ ಸ್ತ ಧಾರ್ಮಿಕತೆಯನ್ನು ಕೊಡುವುದು ಸೆ ತಾನನ ಒಂದು ಅತ್ಯುತ್ತಮ ಸಾಮರ್ಥ್ಯವಾಗಿದೆ - ಅದು ಜನರನ್ನು ದುರ್ಗತಿಕರನ್ನಾಗಿ ಮಾಡುತ್ತದೆ. ಇಂತಹ ತೋರಿಕೆಯ, ನಿಜ ಕ್ರೆ ಸ್ತತ್ವಕ್ಕೆ ದೂರವಾದ ಧಾರ್ಮಿಕತೆಯಿಂದ ಜನಸಮೂಹವು ಮುಖ ತಿರುಗಿಸಿಕೊಂಡು ದೂರವಾಗುತ್ತಿದೆ. ನಿಜವಾದ ಕ್ರೆ ಸ್ತತ್ವವೆಂದರೆ ಸ್ವತಃ ಕ್ರಿಸ್ತನೇ.
ಯೇಸು ಕ್ರಿಸ್ತನು ಕೇಂದ್ರವಾಗಿರುವ ಪ್ರತಿಯೊಂದು ಮನೆಯೂ ಶಾಂತಿಯ ನಿವಾಸವಾಗಿರುತ್ತದೆ. ಆ ಮನೆಯಲ್ಲಿ ಗಂಡ ಮತ್ತು ಹೆಂಡತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಒಬ್ಬರನ್ನೊಬ್ಬರು ಸ್ವೀಕರಿಸುತ್ತಾರೆ, ಏಕೆಂದರೆ ಅವರು ದೇವರು ತಮ್ಮಿಬ್ಬರನ್ನು ಅಂಗೀಕರಿಸಿದ್ದಾನೆಂಬ ಸತ್ಯದಲ್ಲಿ ಭರವಸೆ ಮತ್ತು ಸುರಕ್ಷತೆಯನ್ನು ಹೊಂದಿರುತ್ತಾರೆ. ಈ ತರಹದ ಮನೆಯನ್ನು ನೀವು ಕಟ್ಟಬೇಕು.
ಯೇಸುವು ನಿಮ್ಮನ್ನು ಪ್ರೀತಿಸಿದ್ದು ನೀವು ಆತನನ್ನು ಮೆಚ್ಚಿಸಿದಾಗ ಅಲ್ಲ - ಆದರೆ, ನೀವು ನೋಡಲು ಅಸಹ್ಯವಾಗಿದ್ದು, ನೀವು ಹಾಳುಬಿದ್ದಿದ್ದಾಗ; ಆತನಿಗೆ ಇಷ್ಟವಾಗಿದ್ದಾಗ ಅಲ್ಲ, ನಿಮ್ಮ ಕೆಟ್ಟತನವು ಆvನಿಗೆ ನೋವನ್ನು ಉಂಟುಮಾಡಿದಾಗ. ಈಗ ಇದೇ ಪ್ರೀತಿಯಿಂದ ನಿಮ್ಮ ಸಂಗಾತಿಯನ್ನು ಪ್ರೀತಿಸುವಂತೆ - ಉದಾರವಾಗಿ, ನಿಮ್ಮ ಪ್ರೀತಿಗೆ ಪ್ರತಿಯಾಗಿ ಯಾವುದನ್ನೂ ನಿಮ್ಮ ಸಂಗಾತಿಯಿಂದ ಅಪೇಕ್ಷಿಸದೆ ಪ್ರೀತಿಸಲು ನಿಮ್ಮನ್ನು ದೇವರು ಕರೆಯುತ್ತಿದ್ದಾನೆ.
ನೀವು ಒಟ್ಟಾಗಿ ಜೀವಿಸುವಾಗ ನಿಮಗೆ ಈಗ ಕಾಣದಿರುವ ತಪ್ಪುಗಳನ್ನು ಒಬ್ಬರಲ್ಲೊಬ್ಬರು ಬಹು ಬೇಗ ಕಂಡುಕೊಳ್ಳುವಿರಿ. ಆಗ ನೀವು ಒಬ್ಬರನ್ನೊಬ್ಬರು ಪ್ರೀತಿಸಲು ಸಹಾಯ ಮಾಡುವಂತಹ ಸಂಗತಿ ಯಾವುದೆಂದರೆ, ದೇವರು ನಿಮ್ಮಲ್ಲಿರುವ ಎಲ್ಲ ಪಾಪವನ್ನು ನೋಡಿದರೂ ನಿಮ್ಮನ್ನು ಪ್ರೀತಿಸಿದನು ಎಂಬ ಭರವಸೆಯೇ ಆಗಿದೆ. ನಿನ್ನಲ್ಲಿ ನೀನೆ ಕಾಣದಂಥಹ ಎಷ್ಟೋ ಸಂಗತಿಗಳನ್ನು ದೇವರು ಈ ದಿನ ನೋಡುವಂಥವನಾಗಿದ್ದಾನೆ - ಆದರೂ ಸಹ ಆತನು ನಿನ್ನನ್ನು ಅಂಗೀಕರಿಸುತ್ತಾನೆ.
ಒಂದು ವೇಳೆ ನೀವು ಇಂತಹ ಪ್ರೀತಿಯಿಂದ ಒಬ್ಬರನ್ನೊಬ್ಬರು ಪ್ರೀತಿಸುವುದಾದರೆ, ನೀವಿಬ್ಬರೂ ಅಡಗಿರುವ ಸೆರೆಮನೆಯ ಎಲ್ಲಾ ಗೋಡೆಗಳನ್ನು ಒಡೆದುಹಾಕುವಿರಿ. ನಿಮ್ಮಲ್ಲಿರುವ ದೇವರ ಪ್ರೀತಿಯು ಆ ಗೋಡೆಗಳಿಗಿಂತ ಪ್ರಬಲವಾದುದು ಮತ್ತು ಅದು ಸಾವಕಾಶವಾಗಿ ಅವೆಲ್ಲವನ್ನೂ ಬೀಳಿಸುತ್ತದೆ. ಆಗ ನೀವಿಬ್ಬರೂ ನಿಜವಾಗಿಯೂ ಒಂದಾಗುತ್ತೀರಿ.
ಈಗ ನಾನು ಆ ಲೇಖನದ ಅಂತಿಮ ಭಾಗವನ್ನು ಓದಲು ಬಯಸುತ್ತೇನೆ:
ನಿಮ್ಮ ದಯೆ ಮತ್ತು ಶಾಂತ ಸ್ವಭಾವಗಳ ಜೊತೆಗೆ ನಿಮ್ಮ ಸಂಗಾತಿಯ ಮನೋಭಾವನೆಯನ್ನು ಅರ್ಥಮಾಡಿಕೊಳ್ಳಲು ನಿಮಗಿರುವ ಕಾತುರ, ಇವು ನಿಮ್ಮ ಸಂಗಾತಿಗೆ ರೆಕ್ಕೆ ಬೆಳೆಸಲು ಸಹಾಯವಾಗುತ್ತವೆ - ಪ್ರಾರಂಭದಲ್ಲಿ ಸಣ್ಣ, ಬಲಹೀನ ರೆಕ್ಕೆಗಳು, ಆದರೆ ರೆಕ್ಕೆಗಳು. ನೀವು ಎಡೆಬಿಡದೆ ಉತ್ತೇಜನ ನೀಡಿದರೆ ಆ ರೆಕ್ಕೆಗಳು ಬೆಳೆಯುವವು, ಹಾಗೂ ಮುಂದೊಂದು ದಿನ ದೇವರ ಯೋಜನೆಗೆ ಅನ್ವಯವಾಗಿ ನೀವಿಬ್ಬರೂ ಆಕಾಶದಲ್ಲಿ ಹದ್ದುಗಳಂತೆ ಹಾರಾಡುತ್ತೀರಿ.
ಕಾರ್ಯಗಳನ್ನು ಒಟ್ಟಾಗಿ ಮಾಡಿರಿ - ಆಗ ನೀವು ಸ್ಯೆತಾನನನ್ನು ಸೋಲಿಸುವಿರಿ ನೀವು ಮಾಡಲೇ ಬೇಕಾದ ಮೂರನೆಯ ಆಯ್ಕೆ, ಎಲ್ಲವನ್ನೂ ಒಟ್ಟಾಗಿ ಮಾಡುವುದು.
ಆದಾಮ ಮತ್ತು ಹವ್ವಳನ್ನು ತೋಟದೊಳಕ್ಕೆ ದೇವರು ಒಟ್ಟಾಗಿ ಕಳುಹಿಸಿದನು. ಆದರೆ ಸೆ ತಾನನು ನಡುವೆ ಪ್ರವೇಶಿಸಿ, ಹವ್ವಳನ್ನು ಪ್ರತ್ಯೇಕಿಸಿ ಅವಳೊಡನೆ ಏಕಾಂಗಿಯಾಗಿ ಮಾತನಾಡಿದನು. ಆದಾಮನು ಸುಮ್ಮನೆ ನಿಂತಿದ್ದು, ತನ್ನ ಹೆಂಡತಿಯೊಬ್ಬಳೇ ಆ ಮಾರಕವಾದ ಆಯ್ಕೆಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಟ್ಟನು. ಆತನು, ನಿಲ್ಲು ಪ್ರಿಯೇ, ದೇವರು ನಮಗೆ ಹೇಳಿರುವುದನ್ನು ನೆನಪಿಸಿಕೋ. ನಾವು ಆ ಮರದ ಹಣ್ಣನ್ನು ತಿನ್ನಬಾರದು, ಎಂದು ಎಚ್ಚರಿಸಬೇಕಿತ್ತು. ಆತನು ಅಷ್ಟು ಮಾತ್ರ ಮಾಡಿದ್ದರೆ, ಆಗ ಕಥೆಯೇ ಬೇರೆಯಾಗಿರುತ್ತಿತ್ತು.
ಗಂಡ ಮತ್ತು ಹೆಂಡತಿ ತಮ್ಮಷ್ಟಕ್ಕೆ ತಾವೇ ಸ್ವತಂತ್ರವಾಗಿ ವರ್ತಿಸಲು ಪ್ರಾರಂಭಿಸುವಾಗಲೇ ಅನೇಕ ಸಮಸ್ಯೆಗಳು ಹುಟ್ಟುತ್ತವೆ. ನೀವು ಒಂಟಿಯಾಗಿ ಸ್ಯೆತಾನನನ್ನು ಎದುರಿಸಲು ಸಾಧ್ಯವಿಲ್ಲ. ಸೆ ತಾನನು ನಿಮ್ಮನ್ನೂ ಮತ್ತು ನಿಮ್ಮ ಕುಟುಂಬವನ್ನೂ ಗಲಿಬಿಲಿಗೊಳಿಸಲು ಸಂದರ್ಭಗಳಿಗಾಗಿ ಕಾಯುತ್ತಿದ್ದಾನೆ. ಅವನು ಮೊದಲು ಆಕ್ರಮಣ ಮಾಡಿದ ಸ್ಥಳ ಮನೆಯಾಗಿದೆ - ಈಗಲೂ ಸಹ ಆತನು ಅಲ್ಲೇ ಹಲ್ಲೆಮಾಡುತ್ತಾನೆ. ಯೇಸುವು ಹೇಳಿದಂತೆ, ಸ್ಯೆತಾನನು ಕದಿಯುವುದಕ್ಕೂ, ಕೊಲ್ಲುವುದಕ್ಕೂ ಮತ್ತು ಹಾಳು ಮಾಡುವುದಕ್ಕೂ ಬರುತ್ತಾನೆ. ಆದರೆ ನೀವಿಬ್ಬರೂ ಒಟ್ಟಾಗಿ ನಿಂತರೆ, ಸ್ಯೆತಾನನನ್ನು ನೀವು ಜಯಿಸಬಹುದು.
ಪ್ರಸಂಗಿ 4:9-12 ಹೀಗೆ ಹೇಳುತ್ತದೆ: ಒಬ್ಬನಿಗಿಂತ ಇಬ್ಬರು ಲೇಸು, ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ. ಒಬ್ಬಂಟಿಗನನ್ನು ಜಯಿಸ ಬಲ್ಲವನಿಗೆ ಎದುರಾಗಿ ಇಬ್ಬರು ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತು ಹೋಗುವದಿಲ್ಲವಷ್ಟೇ.
ಈ ವಚನಗಳು ಮತ್ತಾಯ 18:18-20ದಲ್ಲಿಇರುವ ಒಂದು ಅದ್ಭುತ ವಾಗ್ದಾನಕ್ಕೆ ನಿಕಟ ಸಂಬಂಧವನ್ನು ಹೊಂದಿವೆ. ಅಧಿಕಾಂಶ ಗಂಡ-ಹೆಂಡಂದಿರು ಈ ವಾಗ್ದಾನವನ್ನು ತಮ್ಮ ಹಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ಆಗಿಲ್ಲ, ಏಕೆಂದರೆ ಅದನ್ನು ಪಡೆಯಲು ಅವರಿಬ್ಬರೂ ಒಂದಾಗಿರಬೇಕು. ಈ ವಾಗ್ದಾನವನ್ನು ನಾನು ನಿಮ್ಮಿಬ್ಬರಿಗೆ ಕೊಡಲು ಆಶಿಸುತ್ತೇನೆ - ಏಕೆಂದರೆ ಇದು ಆನಿ ಮತ್ತು ನನ್ನ ಈ 38 ವರ್ಷಗಳ ವ್ಯೆವಾಹಿಕ ಜೀವನದಲ್ಲಿ ಪ್ರಾರ್ಥನೆಗೆ ಅದ್ಭುತವಾದ ಉತ್ತರಗಳನ್ನು ದೊರಕಿಸಿದೆ.
ಇದರಲ್ಲಿ ತಿಳಿಸುವಂತೆ ನೀವಿಬ್ಬರು ಒಗ್ಗಟ್ಟು ಹಾಗೂ ಆತ್ಮಿಕ ಸಮ್ಮತಿಯುಳ್ಳವರಾಗಿದ್ದಲ್ಲಿ, ಯಾವುದೇ ವಿಷಯಕ್ಕಾಗಿ ನೀವು ಬೇಡಿಕೊಳ್ಳಿರಿ, ಅದನ್ನು ಪರಲೋಕದಲ್ಲಿರುವ ನಿಮ್ಮ ತಂದೆಯು ದಯಪಾಲಿಸುವನು (ವಚನ 19), ಏಕೆಂದರೆ ಯೇಸುವು ಸ್ವತಃ ನಿಮ್ಮ ಮಧ್ಯದಲ್ಲಿದ್ದಾನೆ (ವಚನ 20). ನೀವಿಬ್ಬರೂ (ಮೂರನೆಯ ವ್ಯಕ್ತಿಯಾಗಿ ನಿಮ್ಮ ಮಧ್ಯದಲ್ಲಿರುವ ಯೇಸುವಿನ ಜೊತೆಗೂಡಿ) ಸ್ಯೆತಾನನ ಕ್ರಿಯೆಗಳನ್ನು ಸಹ ಬಂಧಿಸಿದಾಗ ಅವು ಬಂಧಿಸಲ್ಪಡುವವು (ವಚನ 18). ಆಗ ನೀವು ಮೂವರು ಬೇಗ ಕಿತ್ತು ಹೋಗದ ಮೂರು ಹುರಿಯ ಹಗ್ಗದಂತೆ ಆಗಿರುವಿರಿ.
ದೇವರು ನಿಮ್ಮ ಜೀವಿತದಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಬಲ್ಲನು. ಮನುಷ್ಯನಿಂದ ಪರಿಹರಿಸಲಾಗದ ಅನೇಕ ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಆದರೆ ದೇವರು ಪರಿಹರಿಸಲಾಗದ ಯಾವ ಸಮಸ್ಯೆಯೂ ಇರುವುದಿಲ್ಲ. ಹೀಗಿದ್ದರೂ ನಿಮ್ಮ ಸಮಸ್ಯೆಗಳನ್ನು ದೇವರು ಪರಿಹರಿಸಬೇಕಾದರೆ ನೀವಿಬ್ಬರೂ ಒಮ್ಮನಸಿನಿಂದ ಕೂಡಿದವರಾಗಿರಬೇಕು. ಆದ್ದರಿಂದ ಎಲ್ಲವನ್ನೂ ಒಡಗೂಡಿ ಮಾಡಿರಿ.
ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರೆಂದು ತಿಳಿದ ತಕ್ಷಣವೇ ಒಬ್ಬರನ್ನೊಬ್ಬರು ಕ್ಷಮಿಸಿರಿ. ಕಾಯಬೇಡಿರಿ. ಒಡನೆಯೇ ಕ್ಷಮಾಪಣೆಯನ್ನು ಕೇಳಿರಿ. ಯಾವ ಬೆಲೆಯನ್ನಾದರೂ ತೆತ್ತು ಏಕ ಮನಸ್ಸನ್ನು ಸಂರಕ್ಷಿಸಿಕೊಳ್ಳಿರಿ - ಅದಕ್ಕಾಗಿ ಈ ಭೂಮಿಯ ಮೇಲೆ ಬೇರೇನನ್ನು ಕಳೆದುಕೊಳ್ಳಬೇಕಾದರೂ ಪರವಾಗಿಲ್ಲ. ನಿಮ್ಮ ಐಕ್ಯತೆಯನ್ನು ಕಾಪಾಡಿಕೊಳ್ಳಿರಿ, ಆಗ ನಿಮ್ಮ ಪ್ರಾರ್ಥನೆಗೆ ಉತ್ತರವನ್ನು ತಡವಿಲ್ಲದೇ ಪಡೆಯುವಿರಿ. ಮತ್ತು ಸ್ಯೆತಾನನು ನಿಮ್ಮ ಮನೆಯನ್ನು ಎಂದಿಗೂ ಪ್ರವೇಶಿಸಲಾರನು. ಅದು ದೇವರ ವಾಗ್ದಾನವು.
ಕೊನೆಯದಾಗಿ ನಾನು ಮತ್ತೊಂದು ವಿಷಯವನ್ನು ಹೇಳಲು ಆಶಿಸುತ್ತೇನೆ: ನಿಮ್ಮ ದಾಂಪತ್ಯದಲ್ಲಿ ಪ್ರೀತಿಯಿಂದ ಮಾಡಲ್ಪಟ್ಟಿರದ ಪ್ರತಿಯೊಂದು ಆಲೋಚನೆ, ಮಾತು ಮತ್ತು ಕ್ರಿಯೆಯು ಒಂದು ದಿನ ನಾಶ ಹೊಂದುವುದು.
ನಿಮ್ಮಲ್ಲಿರುವ ದೇವರ ಪ್ರೀತಿಯು ಪ್ರತಿಯೊಂದು ಕಷ್ಟವನ್ನು ಜಯಿಸಲು ನಿಮ್ಮನ್ನು ಸಮರ್ಥಗೊಳಿಸುತ್ತದೆ. ಅದು ಮುಚ್ಚಲ್ಪಟ್ಟಿರುವ ಬಾಗಿಲುಗಳನ್ನು ತೆರೆಯುತ್ತದೆ ಮತ್ತು ಗೋಡೆಗಳನ್ನು ಕೆಡವುತ್ತದೆ. ಇಂತಹ ಪ್ರೀತಿಯನ್ನು ನೀವು ಅನ್ವೇಷಿಸಿದರೆ, ನಿಮ್ಮ ವಿವಾಹವು ಪ್ರಪಂಚದಲ್ಲೇ ಅತಿ ಸಂತುಷ್ಟವಾದದ್ದಾಗುತ್ತದೆ.
ಯೋಗ್ಯ ವ್ಯಕ್ತಿಯನ್ನು ಆರಿಸಿಕೊಳ್ಳುವುದು ಮಾತ್ರವೇ ಸಾಲದು - ಈಗಾಗಲೇ ನೀವು ಅದನ್ನು ಮಾಡಿರುವಿರಿ. ಈಗ ನಿಮ್ಮ ವೆ ವಾಹಿಕ ಜೀವನದುದ್ದಕ್ಕೂ ನೀವು ಸರಿಯಾದ ಆಯ್ಕೆಗಳನ್ನು ಮಾಡಬೇಕಾಗಿದೆ.
ಈ ದಿನ ನೀವು ಪ್ರೀತಿಯನ್ನು ಮೂಲತತ್ವವನ್ನಾಗಿ ಅಳವಡಿಸುವುದಾದರೆ, ಅದು ನಿಮ್ಮ ವಿವಾಹಕ್ಕೆ ನೀವು ನೀಡಬಹುದಾದ ಅತ್ಯುತ್ತಮ ಆರಂಭವಾಗುವುದು. ಅದೇ ಹಾದಿಯಲ್ಲಿ ನೀವು ಪ್ರತಿದಿನ ಮುಂದುವರಿದರೆ, ದೇವಭಯವಿಲ್ಲದ ಜನಾಂಗವೊಂದಕ್ಕೆ ದೇವರ ಪ್ರೀತಿ ಎಲ್ಲವನ್ನೂ ಜಯಿಸಬಲ್ಲದೆಂದು ಮತ್ತು ಅದು ಎಂದಿಗೂ ವಿಫಲವಾಗುವುದಿಲ್ಲ ಎಂಬುದನ್ನು ನೀವು ತೋರಿಸಿಕೊಡಬಹುದು. ಅದರೊಂದಿಗೆ ದೇವರು ನಿಮ್ಮ ಜೀವಿತದಲ್ಲಿ ಮಹಿಮೆ ಹೊಂದುವನು.
ನಿಮ್ಮ ಮನೆಯು ಕರ್ತನಿಗೆ ಒಂದು ವಿಶೇಷವಾದ ಸಾಕ್ಷಿಯಾಗಿರಲೆಂದು ನಾನು ಪ್ರಾರ್ಥಿಸುತ್ತೇನೆ. ಈ ಮಾತುಗಳು ಕೇವಲ ನೀವು ಕೇಳಿದ ಮಾತುಗಳಾಗಿರದೆ ಅವು ನಿಮ್ಮ ಜೀವಿತದಲ್ಲಿ ಜೀವಂತವಾಗಿ, ಇತರರಿಗೆ ನಿಮ್ಮ ಮನೆಯು ಒಂದು ಬೆಳಕಾಗುವಂತೆ ಆಗಲೆಂದು ನಾನು ಪ್ರಾರ್ಥಿಸುತ್ತೇನೆ.
ಈ ಪ್ರಪಂಚವು ಕೊರತೆಗಳನ್ನು ಹೊಂದಿರುವ ಜನರಿಂದ ತುಂಬಿದೆ. ದೇವರು ನಿಮ್ಮನ್ನು ಮುನ್ನಡೆಸಿ ತನ್ನ ಪ್ರೀತಿಯನ್ನು ನಿಮ್ಮ ಬಾಳಲ್ಲಿ ಋಜುವಾತು ಪಡಿಸಲು ಸಾಧ್ಯವಾದಲ್ಲಿ, ಆತನು ನಿಮ್ಮನ್ನು ಉಪಯೋಗಿಸುವನು, ನಿಮ್ಮ ಸುತ್ತಲಿನ ಪ್ರಪಂಚದಲ್ಲಿ ಕೊರತೆಯಲ್ಲಿರುವ ಅನೇಕ ಕುಟುಂಬಗಳಿಗೆ ನಿಮ್ಮಿಂದ ಸಹಾಯವಾಗುವಂತೆ ಆತನು ನಿಮ್ಮನ್ನು ಉಪಯೋಗಿಸುವನು - ನನ್ನ ಈ ಮಾತುಗಳನ್ನು ಗಮನಿಸಿರಿ.
ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ. ಆಮೆನ್.
ಮೊದಲ ಮದುವೆಯು ಒಂದು ತೋಟದಲ್ಲಿ ದೇವರಿಂದ ನಿರ್ವಹಿಸಲ್ಪಟ್ಟಿತು, ಆದ್ದರಿಂದ ಈ ಮದುವೆಯಲ್ಲೂ ನಾವು ಈಗ ಇಲ್ಲಿರುವ ಅಂತಹದೇ ಒಂದು ಸುಂದರವಾದ ಪರಿಸರದಲ್ಲಿರುವದು ನಮಗೆ ಒಳ್ಳೆಯದಾಗಿದೆ. ಏದೆನ್ ಸಹ ನಾವು ಇಲ್ಲಿ ನೋಡುತ್ತಿರುವ ತೋಟದಂತೆ ಇತ್ತು; ಆದರೆ ಇನ್ನೂ ಬಹಳ ಸುಂದರವಾಗಿತ್ತು. ಆದಕಾರಣ ನಾವು ಈ ಮದುವೆಯಲ್ಲಿ ಇಲ್ಲಿ ಸೇರಿ ಬಂದಿರುವುದಕ್ಕಾಗಿ ದೇವರಿಗೆ ತುಂಬಾ ಕೃತಜ್ಞತೆಯುಳ್ಳವರಾಗಿದ್ದೇವೆ.
ಸಂದೀಪ್ ಮತ್ತು ಲೌರಾ ನಾನು ನಿಮಗೆ ಯೇಶಾಯ 58:11 ರಿಂದ ಒಂದು ವಾಗ್ದಾನವನ್ನು ಕೊಡಲು ಆಶಿಸುತ್ತೇನೆ. ನೀವು ತಂಪಾದ ತೋಟದಂತೆ ಇರುವಿರಿ ಮತ್ತು ನಾನು ಇಲ್ಲಿ ನಿಮಗೆ ಇದೇ ವಾಕ್ಯದಲ್ಲಿರುವುದನ್ನೇ ಹೇಳುತ್ತೇನೆ, ನಿಮ್ಮ ಮದುವೆ ಜೀವಿತವೂ ತಂಪಾದ ತೋಟದಂತೆ ಇರುತ್ತದೆ.
ಆದಿಕಾಂಡ 2 ರಲ್ಲಿ ಕರ್ತನಾದ ದೇವರು ಒಂದು ತೋಟವನ್ನು ಸೃಷ್ಟಿಸಿ ಅದರಲ್ಲಿ ಪುರುಷ ಮತ್ತು ಸ್ತ್ರೀಯನ್ನು ಅದನ್ನು ಉಳಿಮೆ ಮಾಡಲು ಬಿಟ್ಟನು. ಆದರೆ ದೇವರು ಆದಾಮ ಮತ್ತು ಹವ್ವಳಿಗೆ ಉಳಿಮೆ ಮಾಡಲು ಮತ್ತೊಂದು ತೋಟವನ್ನು ಸಹ ಕೊಟ್ಟನು. ಅದು ಅವರ ಪರಸ್ಪರ ಅನ್ಯೋನ್ಯತೆಯ ತೋಟ. ಆ ತೋಟವನ್ನು ಅವರು ವ್ಯವಸಾಯ ಮಾಡಲಿಲ್ಲ. ಅಲ್ಲಿ ಅವರು ಸೆ ತಾನನನ್ನು ತಮ್ಮ ಮಧ್ಯೆ ಬರಲು ಅನುಮತಿಸಿದರು.
ಕರ್ತನು ನಿಮಗೆ ಎರಡು ತೋಟಗಳನ್ನು ವ್ಯವಸಾಯ ಮಾಡಲು ಕೊಟ್ಟಿದ್ದಾನೆ. ಒಂದು ವೇಳೆ ಆ ತೋಟವನ್ನು ನೀವು ಉದಾಸೀನ ಮಾಡಿದರೆ, ಬಹು ಸುಲಭವಾಗಿ ಅದು ಕಾಡಾಗಲು ಸಾಧ್ಯ. ಜ್ಞಾನೋಕ್ತಿ 24:30-34ರಲ್ಲಿ, ಸೋಮಾರಿ ಮನುಷ್ಯನ ತೋಟವು ಕಾಡಾಗಿ ಹೋದದ್ದನ್ನು ನಾವು ಓದುತ್ತೇವೆ. ಇದೇ ಅನೇಕ ಮದುವೆ ಜೀವಿತಗಳಲ್ಲಿ ಆಗಿರುವಂಥದ್ದು. ಆದರೆ ನಿಮ್ಮ ಜೀವಿತದಲ್ಲಿ ಹೀಗಾಗಬೇಕಾಗಿಲ್ಲ. ನಿಮ್ಮ ಮದುವೆ ಜೀವಿತವು ತಂಪಾದ ತೋಟದಂತಿರಲಿ ಎಂಬುದು ನಿಮ್ಮಿಬ್ಬರಿಗೆ ದೇವರ ವಾಗ್ದಾನವಾಗಿದೆ.
ದೇವರ ವಾಕ್ಯದಲ್ಲಿ ಕಂಡುಬರುವ ಮೂರು ವಿಧವಾದ ತೋಟಗಳ ಬಗ್ಗೆ ನಾನು ಈ ದಿನ ಮಾತಾಡಲು ಆಶಿಸುತ್ತೇನೆ.
ಪಾಪವು - ತೋಟದಲ್ಲಿ ಬಂತು; ರಕ್ಷಣೆಯು ಸಹ ತೋಟದಲ್ಲೇ ಬಂದಿತು. ಮತ್ತು ನಿಮ್ಮ ಮದುವೆ ಜೀವಿತವು ಸಹ ದೇವರನ್ನು ಮಹಿಮೆಪಡಿಸುವಂತಹ ತೋಟದಂತೆ ಇರಲು ಸಾಧ್ಯ. ಏದೆನ್ ತೋಟ
ಪಾಪವು ಹೇಗೆ ತೋಟದಲ್ಲಿ ಬಂದಿತು? ಅದಕ್ಕೆ ಮೂಲ ಕಾರಣ ಆದಾಮ ಮತ್ತು ಹವ್ವಳಲ್ಲಿ ಇದ್ದ ಎರಡು ತಪ್ಪಾದ ಮನೋಭಾವನೆಗಳು.
ಮೊದಲನೆಯದಾಗಿ ಅಹಂಕಾರ. ದೇವರಿಗಿಂತ ಹೆಚ್ಚಾಗಿ ತಮಗೆ ತಿಳಿದದೆ ಎಂದು ಅವರು ಅಂದುಕೊಂಡಿದ್ದರು. ದೇವರಿಗೆ ಅವಿಧೇಯರಾಗಿ ಅದರಿಂದ ತಪ್ಪಿಸಿಕೊಳ್ಳಬಹುದೆಂದು ಅವರು ಅಂದುಕೊಂಡಿದ್ದರು. ಅನೇಕ ಜನರು ಪ್ರಪಂಚದಲ್ಲಿ ಈ ದಿನವೂ ಸಹ ಹಾಗೆಯೇ ಅಂದುಕೊಂಡಿದ್ದಾರೆ.
ಎರಡನೆಯದು ಸ್ವಾರ್ಥ. ಒಂದು ವೇಳೆ ಆ ಹಣ್ಣನ್ನು ತಿನ್ನುವುದಾದರೆ ತಮಗಾಗಿ ಏನನ್ನೋ ಪಡೆದುಕೊಳ್ಳಲು ಸಾಧ್ಯ ಎಂದು ಅಂದುಕೊಂಡರು. ಆ ಸ್ತ್ರೀಯು ಹಣ್ಣನ್ನು ನೋಡಿ, ಅದು ನೋಡಲು ರಮ್ಯವಾಗಿಯೂ ತಿನ್ನುವುದಕ್ಕೆ ಉತ್ತಮವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ, ತನ್ನ ಆಶೆಯನ್ನು ತೃಪ್ತಿಗೊಳಿಸುತ್ತದೆ ಎಂದು ಅಂದುಕೊಂಡಳು.
ಆದಿಯಲ್ಲಿ ಅಹಂಕಾರವು ಮತ್ತು ಸ್ವಾರ್ಥವು ಪಾಪಕ್ಕೆ ಕಾರಣವಾಗಿತ್ತು. ಈ ದಿನವೂ ಸಹ ಮಾನವ ಕುಲದಲ್ಲಿ ಇವೇ ಎಲ್ಲಾ ಪಾಪಗಳಿಗೆ ಮೂಲಕಾರಣವಾಗಿವೆ - ಮತ್ತು ಇವುಗಳು ಅನೇಕ ರೀತಿಗಳಲ್ಲಿ ವ್ಯಕ್ತವಾಗುತ್ತವೆ.
ಮೂಲವಾಗಿ ಮನುಷ್ಯನು ತನ್ನಲ್ಲಿಯೇ ಕೇಂದ್ರೀಕರಿಸಲ್ಪಟ್ಟಿದ್ದಾನೆ. ಮತ್ತು ದೇವರ ಹೊರತಾಗಿ, ಸ್ವತಂತ್ರನಾಗಿ ಜೀವಿಸಲು ಆಶಿಸುತ್ತಾನೆ. ಹೀಗೆಯೇ ಪಾಪವು ಬರುವುದು.
ಪಾಪವು ಒಂದು ತೋಟದಲ್ಲಿ ಬಂದಿತು. ಯೇಸುವು ನಮಗೆ ರಕ್ಷಣೆಯನ್ನು ಸಹ ತೋಟದಲ್ಲಿಯೇ ತಂದನು.
ಅನೇಕರಿಗೆ ಗೆತ್ಸೆಮನೆಯ ತೋಟದ ಬಗ್ಗೆ ತಿಳಿದಿದೆ. ಆದರೆ ಅವರಿಗೆ, ಯೇಸುವು ತೋಟದಲ್ಲಿಯೇ ಕ್ರೂಜಿಸಲ್ಪಟ್ಟನು ಮತ್ತು ಆತನು ಹೂಣಲ್ಪಟ್ಟದ್ದು ಸಹ ತೋಟದಲ್ಲಿಯೇ ಎಂಬುದು ಗೊತ್ತಿಲ್ಲ. ಯೋಹಾನ 19:41 ರಲ್ಲಿ ಆತನು ಕ್ರೂಜಿಸಲ್ಪಟ್ಟ ಸ್ಥಳದಲ್ಲಿ ಒಂದು ತೋಟವಿತ್ತು. ಮತ್ತು ಆ ತೋಟದಲ್ಲಿ ಒಂದು ಹೊಸದಾದ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಇನ್ನೂ ಯಾರನ್ನೂ ಇಟ್ಟಿರಲಿಲ್ಲ ಎಂಬುದಾಗಿ ಹೇಳುತ್ತದೆ.
ಯೇಸುವು ಒಂದು ತೋಟದಲ್ಲಿ ಹಿಡಿದುಕೊಡಲ್ಪಟ್ಟನು, ಆತನು ಒಂದು ತೋಟದಲ್ಲಿ ಕ್ರೂಜಿಸಲ್ಪಟ್ಟನು, ಮತ್ತು ಒಂದು ತೋಟದಲ್ಲಿ ಹೂಣಲ್ಪಟ್ಟನು. ಹಾಗೂ ಆತನು ತೋಟದಲ್ಲಿಯೇ ಮರಣದಿಂದ ಎಬ್ಬಿಸಲ್ಪಟ್ಟನು. ನಿಮ್ಮಿಬ್ಬರಿಗೂ ಈಗ ರಕ್ಷಣೆಯು ಆ ತೋಟದಲ್ಲಿಯೇ ಬಂದಿತು. ಯೇಸುವು ಆ ತೋಟದಲ್ಲಿ ಏನೆಲ್ಲಾ ಮಾಡಿದನೋ ಅದರ ಲಾಭವು ಈ ದಿನ ನಿಮ್ಮದಾಗಿದೆ.
ಆದಾಮನ ಸಂತತಿಯಲ್ಲಿ ನಾವು ನೋಡುವಂತಹ - ಗರ್ವ, ಸ್ವಾರ್ಥ, ಇವೆರಡಕ್ಕೂ ಪೂರ್ಣ ವ್ಯತಿರಿಕ್ತ(ವಿರುದ್ದ)ವಾದದ್ದನ್ನು ಯೇಸುವಿನ ಇಹಲೋಕದ ಜೀವಿತದಲ್ಲಿ ನೋಡುತ್ತೇವೆ.
ಕ್ರಿಸ್ತನ ಜೀವಿತದಲ್ಲಿ, ಆತನ ತಂದೆಯು ತನಗೆ ಏನನ್ನು ಮಾಡಬೇಕೆಂದು ಆಶಿಸುತ್ತಾನೋ ಅದನ್ನೇ ಖಂಡಿತವಾಗಿ ಮಾಡುವ ದೀನತ್ವ ಆತನಲ್ಲಿ ಇರುವದನ್ನು ನಾವು ನೋಡುತ್ತೇವೆ - ಅದು ಶಿಲುಬೆಯ ಮೇಲೆ ಮರಣಹೊಂದುವುದಾದರೂ ಸರಿಯೇ. ಅದು ಏನೇ ಆಗಿದ್ದರೂ ಸಹ ಪರಿಮಿತಿ ಇಲ್ಲದೇ ಮನಃ ಪೂರ್ವಕವಾಗಿ ಆ ಮಾರ್ಗವನ್ನು ಆತನು ಆರಿಸಿಕೊಂಡನು.
ಕ್ರಿಸ್ತನು ನಿಸ್ಸ್ವಾರ್ಥನಾಗಿ ಇತರರ ಅವಶ್ಯಕತೆಯ ಕುರಿತಾಗಿ ಯೋಚಿಸಿದನೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ ಮತ್ತು ಅವರಿಗೆ ಸಹಾಯ ಮಾಡುವುದಕ್ಕಾಗಿ ತನ್ನನ್ನೇ ಯಜ್ಞವಾಗಿ ಅರ್ಪಿಸಲು ಸಿದ್ದನಿದ್ದನು. ಇದೇ ಮನೋಭಾವ ನಿಮ್ಮಿಬ್ಬರಲ್ಲಿಯೂ ಇರಬೇಕೆಂದು ಆತನು ಬಯಸುತ್ತಾನೆ.
ನಾನು ಹೇಳಲಿರುವ ಮೂರನೆಯ ತೋಟವು ಅನೇಕ ಕ್ರೆ ಸ್ತರಿಗೆ ಹೆಚ್ಚಾಗಿ ತಿಳಿಯದಿರುವಂಥದ್ದು. ಈ ತೋಟದ ಬಗ್ಗೆ ಪರಮಗೀತೆಯಲ್ಲಿ ಸೂಚಿಸಲಾಗಿದೆ. (ಇದು ಒಂದು ಹಾಡಾಗಿದ್ದು; ಮದಲಿಂಗನ ಮತ್ತು ಮದಲಗಿತ್ತಿಯ ಅಥವಾ ಗಂಡ- ಹೆಂಡತಿಯರ ಸಂಭಂದದ ಕುರಿತಾದ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.)
ಪರಮಗೀತೆ 4:12 ರಲ್ಲಿ ಮದಲಿಂಗನು, ನನ್ನ ಮದಲಗಿತ್ತಿಯು ಒಂದು ಪ್ರತ್ಯೇಕವಾದ ತೋಟದಂತಿದ್ದಾಳೆ. ಎಂದು ಹೇಳುತ್ತಾನೆ. ಇಲ್ಲಿ ಮದಲಿಂಗನು ಕ್ರಿಸ್ತನೇ. ಮತ್ತು ನಾವು ಆತನ ಮದಲಗಿತ್ತಿಯಾಗಿದ್ದು, ಮುಖ್ಯವಾಗಿ ಆತನಿಗಾಗಿ ಮಾತ್ರವೇ ಪ್ರತ್ಯೇಕಿಸಲ್ಪಟ್ಟವರಾಗಿರಬೇಕು. ಮೊಟ್ಟಮೊದಲನೆಯದಾಗಿ ನೀವು ಗ್ರಹಿಸಿಕೊಳ್ಳಬೇಕಾಗಿರುವದು ಇದನ್ನೇ. ನಿಮ್ಮ ಮದುವೆಯಲ್ಲಿ ನೀವಿಬ್ಬರೂ ಒಂದು ತೋಟವನ್ನು ನೆಡಬೇಕು. ಆದರೆ ಆ ತೋಟವು ಮುಖ್ಯವಾಗಿ ನಿಮ್ಮ ಲಾಭಕ್ಕಾಗಿ ಅಲ್ಲ; ಅಥವಾ ಇತರರ ಲಾಭಕ್ಕಾಗಿ ಸಹ ಅಲ್ಲ, ಆದರೆ ಕರ್ತನಿಗಾಗಿ. ನಿಮ್ಮ ಮದುವೆಯು ಕರ್ತನಿಗಾಗಿ ಒಂದು ಪ್ರತ್ಯೇಕವಾದ ತೋಟವಾಗಿರಬೇಕು ಎಂಬುದನ್ನು ಯಾವಾಗಲೂ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ. ಆಗ ಉಪಪದಾರ್ಥದಂತೆ ಅದರಿಂದ ಇತರರಿಗೂ ಆಶೀರ್ವಾದವಾಗುತ್ತದೆ.
ಇದನ್ನೇ ಯೇಸುವು ಸಹ ಕಲಿಸಿಕೊಟ್ಟನು. ಯಾರೋ ಒಬ್ಬರು ಆತನನ್ನು ಕುರಿತು, ಧರ್ಮಶಾಸ್ತ್ರದಲ್ಲಿ, ಪ್ರಮುಖ ಆಜ್ಞೆ ಯಾವುದು? ಎಂದು ಕೇಳಿದರು. ಅದಕ್ಕೆ ಆತನು ಪ್ರಮುಖವಾದ ಆಜ್ಞೆ, ನಿನ್ನ ದೇವರನ್ನು ಪೂರ್ಣಹೃದಯದಿಂದ ಪ್ರೀತಿಸಬೇಕು, ಆಗ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಲು ಸಾಧ್ಯವಾಗುವದು ಎಂದನು. (ವಿವರಣೆ- ಮತ್ತಾಯ- 22: 37-40).
ನಮ್ಮ ಜೀವಿತವು ಯಾವಾಗಲೂ ದೇವರಿಂದ ಮೊದಲು ಪ್ರಾರಂಭವಾಗಬೇಕು. ಆದುದರಿಂದಲೇ ದೇವರು ಆದಾಮನನ್ನು ಮತ್ತು ಹವ್ವಳನ್ನು ಪ್ರತ್ಯೇಕವಾಗಿ ರೂಪಿಸಿದನು; ಒಟ್ಟಾಗಿಯಲ್ಲ! ಯಾಕೆಂದರೆ ಆದಾಮನು ಮೊದಲು ಕಣ್ಣು ತೆರೆಯುವಾಗ ಅವನು ಮೊದಲು ನೋಡಿದ್ದು ದೇವರನ್ನು; ಹವ್ವಳನ್ನಲ್ಲ. ಮತ್ತು ಹವ್ವಳು ಆನಂತರ ರೂಪಿಸಲ್ಪಟ್ಟಳು, ಮತ್ತು ಆಕೆಯೂ ಕಣ್ಣು ತೆರೆದಾಗ ಮೊದಲು ನೋಡಿದಂತ ವ್ಯಕ್ತಿ ದೇವರೇ ಆಗಿದ್ದನು; ಆದಾಮನಲ್ಲ! ನಿಮ್ಮ ಮದುವೆಯು ನೀರೆರೆದ ತಂಪಾದ ತೋಟದಂತೆ ಇರಬೇಕಾದರೆ ಹೀಗೆಯೇ ನಿಮ್ಮ ಜೀವಿತವು ಯಾವಾಗಲೂ ಇರತಕ್ಕದ್ದು.
ಪ್ರತಿಯೊಂದು ತೋಟಕ್ಕೆ ಮಳೆ ಅವಶ್ಯಕ. ಹೊಸ ಒಡಂಬಡಿಕೆಯಲ್ಲಿ ಪರಲೋಕದ ಮಳೆಯಾಗಿರುವ ಪವಿತ್ರಾತ್ಮನಿಂದ ತುಂಬಿಸಲ್ಪಡುವ ಭಾಗ್ಯ ನಮಗಿದೆ. ಇದಕ್ಕಾಗಿ ನೀವು ಮನಃಪೂರ್ವಕವಾಗಿ ಹುಡುಕಬೇಕು ಎಂಬುದಾಗಿ ನಾನು ನಿಮ್ಮನ್ನು ಉತ್ತೇಜನಪಡಿಸುತ್ತೇನೆ. ಆತ್ಮನಿಂದ ತುಂಬಿಸಲ್ಪಡುವುದು ಎಂದರೆ ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರವು ಪವಿತ್ರಾತ್ಮನ ಹತೋಟಿಯಲ್ಲಿರುವುದು. ಹಾಗಾದರೆ ನೀವು ನಿಮ್ಮ ಜೀವಿತವನ್ನು ಪ್ರತಿದಿನವೂ ಪರಲೋಕದ ಮಳೆಗೆ ತೆರೆಯಿರಿ.
ಪಶ್ಚಿಮದ ಸಂಸ್ಕೃತಿಗೂ ಪೂರ್ವದ ಸಂಸ್ಕೃತಿಗೂ ಬಹಳ ವ್ಯತ್ಯಾಸವನ್ನು ನಾನು ಕಾಣುತ್ತೇನೆ. ಆದರೆ ಎರಡು ಸಂಸ್ಕೃತಿಗಳಲ್ಲೂ ಗರ್ವ ಒಂದೇ ಆಗಿದೆ! ಪೂರ್ವ ಸಂಸ್ಕೃತಿಯಲ್ಲಿ - ಭಾರತದ ಮದುವೆಗಳಲ್ಲಿ -ಇಲ್ಲಿ ಮದುಮಗಳು ಬಂದಳು ಎಂದು ಅವರು ಹಾಡುವುದಿಲ್ಲ, ಅವರು ಇಲ್ಲಿ ಮದುಮಗನು ಬಂದನು ಎಂದು ಹಾಡುತ್ತಾರೆ. ಕೆಲವು ಭಾರತೀಯ ಮದುವೆಗಳಲ್ಲಿ ಮದುಮಗನು ಕುದುರೆಯ ಮೇಲೆ ಸವಾರಿ ಮಾಡುತ್ತಾ ಒಳಗೆ ಬರುತ್ತಾನೆ. ಯಾಕೆಂದರೆ ಪೂರ್ವದ ಮದುವೆಗಳಲ್ಲಿ ಆತನೇ ಮುಖ್ಯ ವ್ಯಕ್ತಿಯಾಗಿರುತ್ತಾನೆ. ಮತ್ತು ಮದುಮಗಳು ಆ ಕುದುರೆಯ ಹಿಂದೆ ನಡೆದು ಹೋಗುತ್ತಾಳೆ. ಯಾಕೆಂದರೆ, ಆಕೆಯು ಕನಿಷ್ಠಳಾಗಿ ಪರಿಗಣಿಸಲ್ಪಡುತ್ತಾಳೆ. ಅದೇ ಪೂರ್ವದ ಸಂಸ್ಕೃತಿ.
ಪಶ್ಚಿಮದ ಸಂಸ್ಕೃತಿಯಲ್ಲಿ ಸಂಗತಿಗಳು ಇದಕ್ಕೆ ತದ್ವಿರುದ್ದವಾಗಿರುತ್ತವೆ. ಇಲ್ಲಿ ಪ್ರತಿಯೊಬ್ಬರು ವಿವಾಹದ(ಕೂಟದ) ಸಮಯದಲ್ಲಿ ಮದುಮಗಳಿಗಾಗಿ ಎದ್ದು ನಿಲ್ಲುತ್ತಾರೆ. ಆದರೆ ಮದುಮಗನಿಗಾಗಿ ಯಾರೂ ನಿಲ್ಲುವುದಿಲ್ಲ! ಯಾಕೆಂದರೆ, ಇಲ್ಲಿ ಪ್ರಾಮುಖ್ಯತೆ ಮದುಮಗಳಿಗೆ; ಮದುಮಗಳು ಬರುತ್ತಿದ್ದಾಳೆ!
ಆದರೆ ಕ್ರಿಸ್ತೀಯ ಸಂಸ್ಕೃತಿಯಲ್ಲಿ ಇಲ್ಲಿ ಕರ್ತನು ಬರುತ್ತಿದ್ದಾನೆ ಎಂಬುದಾಗಿರಬೇಕು. ಪಶ್ಚಿಮದ ಸಂಸ್ಕೃತಿ ಮತ್ತು ಪೂರ್ವದ ಸಂಸ್ರೃತಿ ಎರಡೂ ಸಹ ಪಾಪದಿಂದ ಅಪವಿತ್ರವಾಗಿದೆ. ಒಂದರಲ್ಲಿ ಗಂಡಸು ಪ್ರಾಮುಖ್ಯ ಮತ್ತೊಂದರಲ್ಲಿ ಹೆಂಗಸು ಪ್ರಾಮುಖ್ಯ, ಆದರೆ ಕರ್ತನಿಗೆ ಪ್ರಥಮ ಸ್ಥಾನ ಕೊಡುವಾಗ ಇಲ್ಲಿ ಕರ್ತನು ಬರುತ್ತಿದ್ದಾನೆ ಎಂಬುದಾಗಿ ನೀವು ಹೇಳಬಹುದು.
ಮುಂದೆ: ಪೂರ್ವ ಸಂಸ್ಕೃತಿಯಲ್ಲಿ ಹುಡುಗ ನಾನು ಹೋಗಿ ಅವಳಿಗಾಗಿ(ಹೆಣ್ಣನ್ನು) ಕೇಳಲಿಲ್ಲ, ಅವಳ ತಂದೆಯೇ ಬಂದು ನನಗಾಗಿ(ಗಂಡನ್ನು) ಕೇಳಿದರು ಎಂಬುದಾಗಿ ತನ್ನಲ್ಲೇ ಹೆಮ್ಮೆ ಪಡುತ್ತಾನೆ. ಅಲ್ಲಿ ಗರ್ವವನ್ನು ಕಾಣುತ್ತೀರಾ? ಪಶ್ಚಿಮದ ಸಂಸ್ಕೃತಿಯಲ್ಲಿ, ಹುಡುಗಿಯು ನಾನು ಅವನನ್ನು ಹುಡುಕಿಕೊಂಡು ಹೋಗಲಿಲ್ಲ. ಅವನು ಬಂದು ನನ್ನನ್ನು ಓಲೆ ಸಿ, ನನ್ನನ್ನು ಗೆದ್ದನು ಎಂದು ಹೇಳುತ್ತಾಳೆ. ಗರ್ವ ಅಲ್ಲಿಯೂ ಸಹ ಇದೆ.
ಕ್ರ್ಯೆಸ್ತ ಸಂಸ್ಕೃತಿಯಲ್ಲಿ ಹೇಗೂ ನಾವು ದೀನತೆಯಿಂದ ಕರ್ತನು ನಮ್ಮನ್ನು ಒಂದಾಗಿ ಕೂಡಿಸಿದನು. ನಾವು ಕರ್ತನನ್ನು ಪ್ರೀತಿಸುತ್ತೇವೆ ಮತ್ತು ನಾವಿಬ್ಬರೂ ಆತನ ದೃಷ್ಠಿಯಲ್ಲಿ ಸಮಾನರು ಎಂದು ಹೇಳುತ್ತೇವೆ.
ನೀವಿಬ್ಬರೂ ನಿಮ್ಮ ಸಂಸ್ಕೃತಿಯ ಗರ್ವವನ್ನು ಬಿಟ್ಟು ಮೇಲೆದ್ದು ಕ್ರ್ಯೆಸ್ತರಾಗಬೇಕೆಂದು ನಿಮ್ಮನ್ನು ಉತ್ತೇಜನ ಪಡಿಸುತ್ತೇನೆ. ಪ್ರತಿ ಮುಂಜಾನೆಯೂ ನಿಮ್ಮಿಬ್ಬರ ಹಾಡು ಇಲ್ಲಿ ಕರ್ತನು ಬರುತ್ತಾನೆ ಎಂಬುದಾಗಿರಲಿ ಮತ್ತು ನೀವಿಬ್ಬರೂ ಆತನ ದೀನ ಸೇವಕರಾಗಿರಿ. ಆಗ ನಿಮ್ಮ ಮದುವೆಯು ಒಂದು ನೀರಾವರಿಯ ತೋಟದಂತಿರುತ್ತದೆ.
ಗರ್ವದ ಜೊತೆ ಸ್ವಾರ್ಥವು ಸಹ ಎಲ್ಲಾ ಸಂಸ್ಕೃತಿಯಲ್ಲೂ ಸಾಮಾನ್ಯವಾದದ್ದು. ಒಬ್ಬ ಹುಡುಗನು ಮದುವೆಗಾಗಿ ಹುಡುಗಿಯನ್ನು ಹುಡುಕುವಾಗ ಸ್ವಾರ್ಥದಿಂದ ಒಂದು ಸುಂದರ ಹುಡುಗಿಯಲ್ಲಿ ಸೌಂದರ್ಯವನ್ನು ಹುಡುಕುತ್ತಾನೆ. ಒಬ್ಬ ಹುಡುಗಿ ಮದುವೆಗಾಗಿ ಹುಡುಗನನ್ನು ಹುಡುಕುವಾಗ ಸ್ವಾರ್ಥದಿಂದ ಶ್ರೀಮಂತ ಹುಡುಗನ ಹಣವನ್ನು ಹುಡುಕುತ್ತಾಳೆ. ಇದು ಪ್ರಪಂಚದ ಎಲ್ಲಾ ಕಡೆಯಲ್ಲೂ ನಿಜವಾದದ್ದು.
ಆದರೆ ಕ್ರ್ಯೆಸ್ತ ಸಂಸ್ಕೃತಿಯಲ್ಲಿ ನೀವು ಒಬ್ಬ ವ್ಯಕ್ತಿಯನ್ನು ಆರಿಸಿಕೊಳ್ಳುವದಾದರೆ ಮೊಟ್ಟ ಮೊದಲನೆಯದಾಗಿ ಆ ವ್ಯಕ್ತಿಯು ಕರ್ತನನ್ನು ಪೀತಿಸಿ ಆತನನ್ನು ಗೌರವಿಸುವುದಕ್ಕಾಗಿಯೇ ಜೀವಿಸುವವನಾದ್ದರಿಂದಲೇ. ಆದ್ದರಿಂದ ನಾನು ನಿಮ್ಮಿಬ್ಬರನ್ನು ಮಾನವ ಕುಲದ ಸ್ವಾರ್ಥಕ್ಕೆ ವಿರುದ್ದವಾಗಿ ಮೇಲೇಳಬೇಕೆಂಬುದಾಗಿ ಪ್ರೇರೇಪಿಸುತ್ತೇನೆ.
ನೀವಿಬ್ಬರೂ ಮೂಲತಃ ಹುಟ್ಟಿನಿಂದ ವ್ಯತ್ಯಾಸವುಳ್ಳ ಸಂಸ್ಕೃತಿಯುಳ್ಳವರಾಗಿರುವದರಿಂದ, ಯಾವ ಸಂಸ್ಕೃತಿಯೂ ಒಂದಕ್ಕೊಂದು ಶೇಷ್ಠವಾದದ್ದಲ್ಲವೆಂಬುದನ್ನು ನಿಮಗೆ ಸ್ಪಷ್ಟಪಡಿಸಬೇಕೆಂದು ನಾನು ಯೋಚಿಸಿದೆ. ಪೂರ್ವದವರು ಪಶ್ಚಿಮದವರಿಗಿಂತ ತಾವು ಶೇಷ್ಠರೆಂದು ಭಾವಿಸಿಕೊಳ್ಳುತ್ತಾರೆ. ಪಶ್ಚಿಮದವರು, ಪೂರ್ವದವರಿಗಿಂತ ತಾವು ಶ್ರೇಷ್ಠರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ತಪ್ಪು. ಕ್ರೆ ಸ್ತ ಸಂಸ್ಕೃತಿಯೇ ಉನ್ನತವಾದದ್ದು ಮತ್ತು ಅದನ್ನೇ ನೀವು ಹಿಂಬಾಲಿಸಬೇಕೆಂಬುದು ದೇವರ ಆಸೆಯಾಗಿದೆ.
ನಾನು ಗೂಗಲ್(ಕಂಪ್ಯೂಟರ್ ಅಂತರ್ ಜಾಲ) ನಲ್ಲಿ ಹೇಗೆ ಒಂದು ಒಳ್ಳೆಯ ತೋಟವನ್ನು ಬೆಳೆಸುವುದು ಎಂಬುದರ ಬಗ್ಗೆ ಹುಡುಕಿ ನೋಡಿದೆ. ಅದರಲ್ಲಿ ನಾನು ಕಂಡ ಐದು ನಿಯಮಗಳು ಇಲ್ಲಿವೆ:
ರೋಗವನ್ನು ಹತೋಟಿಯಲ್ಲಿಡಲು ಒಳ್ಳೆಯ ಬೀಗದ ಕೆ ಯೆಂದರೆ - ರೋಗವನ್ನು ತಡೆಗಟ್ಟುವುದು. ನಾವು ನಮ್ಮ ನಾಲಿಗೆಯಿಂದ ಬೀಜಗಳನ್ನು ಬಿತ್ತುತ್ತೇವೆ. ಒಬ್ಬರಿಗೊಬ್ಬರು ಮಾತಾಡಿಕೊಳ್ಳುವಾಗ, ನಮ್ಮ ಮಾತುಗಳಿಂದ ನಾವು ರೋಗಗಳನ್ನು ಹರಡದಂತೆ ಜಾಗ್ರತೆ ವಹಿಸಬೇಕು. ನೀವು ಮಾತನಾಡುವಾಗ ಪ್ರತಿರೋಧಕ ಶಕ್ತಿ ಹೊಂದಿರುವ ಮಾತುಗಳನ್ನು ಉಪಯೋಗಿಸಿರಿ. ಸತತವಾಗಿ ರಾಸಾಯನಿಕ ಸಿಂಪಡಣೆ ಮಾಡುವುದರ ಮೂಲಕ (ಕೆಲವು ರೋಗಗಳಿಂದ) ಗಿಡಗಳನ್ನು ಸಂರಕ್ಷಿಸಬಹುದು. (ನಿಮ್ಮ ತೋಟದಲ್ಲಿ ಕಳೆಗಳನ್ನು ತಡೆಗಟ್ಟಬೇಕಾದರೆ, ನಿಮ್ಮ ಸ್ವಂತ ನಾಲಿಗೆಯೊಂದಿಗೆ ವ್ಯವಹರಿಸುವಾಗ ನೀವು Pನಿಕರವಿಲ್ಲದವರಾಗಿರಬೇಕು!) ನಿಮ್ಮ ಮದುವೆಯ ಜೀವಿತದಲ್ಲಿ ಕಳೆಗಳು ಬೆಳೆಯಲು ಎಂದಿಗೂ ನೀವು ಅನುಮತಿಸುವುದಿಲ್ಲವೆಂದು ನಾನು ನಿರೀಕ್ಷಿಸುತ್ತೇನೆ.
ನಿಮ್ಮ ಮದುವೆಯು ಸಂತೋಷಕರವಾಗಿರಬೇಕೆಂದರೆ, ನೀವು ಒಬ್ಬರನ್ನೊಬ್ಬರು ಪ್ರೋತ್ಸಾಹಪಡಿಸಬೇಕು ಮತ್ತು ಒಬ್ಬರನ್ನೊಬ್ಬರು ಗೌರವಿಸಬೇಕು. ಈ ತರಹದ ರಸಗೊಬ್ಬರವನ್ನು ಭೂಮಿಯಲ್ಲಿ ಹಾಕುವಾಗ ನಿಜವಾಗಲೂ ಒಳ್ಳೇ ಬೆಳೆಯನ್ನು ನೀವು ಪಡೆಯುತ್ತೀರಿ.
ಇದು ಹತೋಟಿಗೆ ಬಾರದ ಮತ್ತು ಚಟವಾಗಿರುವ (ಅತಿಯಾಗಿ ದೂರದರ್ಶನ ಕಾರ್ಯಕ್ರಮ ನೋಡುವಂತಹ) ಅಭ್ಯಾಸಗಳಿಗೆ ಹೋಲಿಕೆಯಾಗಿದೆ. ಅದನ್ನು ನಾಶಮಾಡಬೇಕು. ದೂರದರ್ಶನವನ್ನು ನಾಶಮಾಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಅದರ ಮುಂದೆ ಸಮಯ ಹಾಳು ಮಾಡುವ ಅಭ್ಯಾಸವನ್ನು (ಚಟವನ್ನು) ನಾಶಮಾಡಬೇಕು. ಅಂಥಹ ಚಟುವಟಿಕೆಗಳಲ್ಲಿ ಹತೋಟಿಯಿರಲಿ. ಇದು ಹತೋಟಿಗೆ ಬಾರದ ಕಾಯಿಲೆಗಳಿಗೂ ಸಹ ಅನ್ವಯಿಸುತ್ತದೆ. ಒಂದು ವೇಳೆ ನೀವು ಅದನ್ನು ಹತೋಟಿಗೆ ತರಬಹುದಾಗಿದ್ದರೆ ಒಳ್ಳೆಯದು. ಆದರೆ ಅಂಥಹ ಚಟುವಟಿಕೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ.
ಇದರ ಅರ್ಥ, ಇನ್ನೊಬ್ಬ ವ್ಯಕ್ತಿಯನ್ನು ನೋಯಿಸಿದ್ದನ್ನು ನೀವು ಗ್ರಹಿಸುವಾಗ ಅದು ರೋಗವುಳ್ಳ ಎಲೆ. ತಕ್ಷಣವೇ ಅದನ್ನು ಕತ್ತರಿಸಿ ಹಾಕಿ. ತಕ್ಷಣವೇ ಕ್ಷಮೆ ಕೇಳಿರಿ. ಮತ್ತು ತಕ್ಷಣವೇ ಕ್ಷಮಿಸಿ. ಆಗ ಆ ಎಲೆಯು ಕತ್ತರಿಸಲ್ಪಡುತ್ತದೆ. ಇಲ್ಲವಾದರೆ ಅಂಥಹ ಸಮಸ್ಯೆಗಳು ಬಹಳ ಗಂಭೀರವಾಗಬಹುದು. ಮತ್ತೊಂದು ಸಂಗತಿ: ಆ ರೋಗವುಳ್ಳ ಎಲೆಯನ್ನು ಬಿಸಾಟು ಬಿಡಿರಿ; ಮತ್ತೆ ಹಿಂದಿನದನ್ನು ಜ್ಞಾಪಿಸಿಕೊಳ್ಳಬೇಡಿರಿ.
ಅಧಿಕವಾಗಿ ಗಿಡಗಳನ್ನು ಬೆಳೆಸಬೇಡಿರಿ. ಅಧಿಕವಾಗಿ ಬೆಳೆಸುವಾಗ ಅದು ಒಳ್ಳೆಯ ಗಾಳಿಯ ಸಂಚಾರ ಮತ್ತು ಬೇಕಾದಷ್ಟು ಸೂರ್ಯನ ಬೆಳಕನ್ನು ತಡೆಹಿಡಿಯುತ್ತದೆ. ಅದರ ಅರ್ಥ, ನೀವು ದಿನದ ೨೪ ಗಂಟೆಗಳಲ್ಲಿ ಅನೇಕ ಸಂಗತಿಗಳನ್ನು ಮಾಡಲು ಪ್ರಯತ್ನಿಸಬೇಡಿರಿ. ಹಾಗೆ ಮಾಡುವುದರಿಂದ ನಿಮ್ಮ ವಿವಾಹದ ತೋಟವು ಅಲಕ್ಷಿಸಲ್ಪಟ್ಟು, ನಿಮ್ಮ ಕುಟುಂಬವು ನಿಮ್ಮ ಕಡೆಯ ಸ್ಥಾನವಾಗುತ್ತದೆ. ನಿಮ್ಮ ಕುಟುಂಬದ ತೋಟವು ಯಾವಾಗಲೂ ನಿಮ್ಮ ಮೊಟ್ಟ ಮೊದಲನೆಯ ಸ್ಥಾನದಲ್ಲಿರಬೇಕು. ಅಧಿಕತೆಯು ಸಾಕಷ್ಟು ಸೂರ್ಯನ ಬೆಳಕನ್ನು (ದೇವರ ಬೆಳಕನ್ನು) ತಡೆಹಿಡಿಯುತ್ತದೆ. ಮತ್ತು ಒಳ್ಳೆಯ ಗಾಳಿಯ ಚಲನೆಯನ್ನು ಸಹ (ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆಯನ್ನು ) ಅಡ್ಡಿಪಡಿಸುತ್ತದೆ.
ಇವು ಇಡೀ ಪ್ರಪಂಚದ ತೋಟಗಳಿಗಾಗಿ ದೇವರು ಮಾಡಿರುವಂಥಹ ನಿಯಮಗಳಾಗಿವೆ. ಆದ್ದರಿಂದ ನೀವು ನಿಮ್ಮ ಕುಟುಂಬವನ್ನು ನಿಮ್ಮ ಮೊದಲ ಸ್ಥಾನವಾಗಿ ಮಾಡಬೇಕು.
ನಾನು ಈಗ ಪರಮಗೀತೆ 4:16 ರ ಕಡೆಗೆ ಸತ್ಯವೇದವನ್ನು ತಿರುಗಿಸುತ್ತೇನೆ - ಬಡಗಣ ಗಾಳಿಯೇ ಬೀಸು, ತೆಂಕಣ ಗಾಳಿಯೇ ಬಾ! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ಭುಜಿಸಲಿ.
ಪ್ರತಿಯೊಂದು ಮದುವೆಯಲ್ಲೂ ನಾವು ಉತ್ತರ ದಿಕ್ಕಿನ ವಿಪತ್ತಿನ ಶೀತ ಗಾಳಿಯನ್ನು ಮತ್ತು ಬೆಚ್ಚನೆಯ ದಕ್ಷಿಣದ ಸಮೃದ್ಧಿಯ ಗಾಳಿಯನ್ನು ಎದುರಿಸುತ್ತೇವೆ. ಆದರೆ ಯಾವಾಗ ಯೇಸುವು ನಮ್ಮ ಶಿರಸ್ಸಾಗಿದ್ದು ನಾವು ನಮ್ಮ ಜೀವಿತಗಳನ್ನು ಆತನ ಹತೋಟಿಯಲ್ಲಿರಲು ಅನುಮತಿಸುತ್ತೇವೋ ಆಗ, ನಾವು ಎದುರಿಸುವದು ಅನಿಷ್ಟವೋ ಅಥವಾ ಅಭಿವೃದ್ಧಿಯೋ, ಸಂಕಟವೋ ಅಥವಾ ಆದರಣೆಯೋ, ಏನೇ ಆದರೂ ಈ ಎರಡೂ ಗಾಳಿಗಳು ಕ್ರಿಸ್ತನ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಕಡೆಗೂ ಹರಡಿಸುತ್ತವೆ.
ಲೋಕದಲ್ಲಿನ ಜನರು ಇದನ್ನು ಮಾಡಲು ಸಾಧ್ಯವಿಲ್ಲ. ಲೋಕದಲ್ಲಿ ಅವರು ಪ್ರತಿಯೊಂದನ್ನು ಕುರಿತು ದೂರು ಹೇಳುತ್ತಾರೆ. ವಿಪತ್ತಿನ ಸಮಯದಲ್ಲಿ ದೇವರ ವಿರುದ್ಧವಾಗಿ ಸಹ ದೂರು ಹೇಳುತ್ತಾರೆ. ಲೋಕದಲ್ಲಿ ಪ್ರತಿಯೊಬ್ಬರೂ ದಕ್ಷಿಣದ ಗಾಳಿಯಾದ ಸಮೃದ್ಧಿಯನ್ನು ಎದುರಿಸಬಹುದು, ಆದರೆ ಉತ್ತರದ ಶೀತ ಗಾಳಿಯಾದ ವಿಪತ್ತನ್ನು ಎದುರಿಸಲು ಸಾಧ್ಯವಿಲ್ಲ.
ಆದರೆ ಕ್ರಿಸ್ತನ ಮದಲಗಿತ್ತಿಯು, ವಿಪತ್ತನ್ನು ಮತ್ತು ಅಭಿವೃದ್ಧಿಯನ್ನು ಒಟ್ಟಿಗೆ ಜಯಕರವಾಗಿ ಎದುರಿಸಲು ಸಾಧ್ಯ. ಅದು ನಿಮ್ಮಿಬ್ಬರಿಗೂ ಸಹ ಅದೇ ರೀತಿ ಇರಲು ಸಾಧ್ಯ, ಮತ್ತು ಮದುವೆಯಾದ ನಮ್ಮೆಲ್ಲರಿಗೂ ಸಹ ಸಾದ್ಯ.
ಮತ್ತು ಕಡೆಯದಾಗಿ: ನಾವು ಇಲ್ಲಿ ಹೀಗೆ ಓದುತ್ತೇವೆ ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ಇಷ್ಟದ ಹಣ್ಣನ್ನು ತಿನ್ನಲಿ! ವಿಪತ್ತಿನ ಸಮಯದಲ್ಲಿ ನೀವು ಹೊಂದುವ ಜಯವು ಕರ್ತನು ನೋಡಲು ಮಾತ್ರ - ಇತರರ ಮುಂದೆ ನೀವು ಪ್ರದರ್ಶನ ಮಾಡುವದಕ್ಕಲ್ಲ. ಇತರರು ನೋಡದೆ ಇರುವ ಸಮಯದಲ್ಲಿ ಕರ್ತನು ನಿಮ್ಮ ರಹಸ್ಯ ಜೀವಿತವನ್ನು ನೋಡುವವನಾಗಿದ್ದಾನೆ, ಮತ್ತು ಆತನು ತನ್ನ ತೋಟದೊಳಗೆ ಬರುವಾಗ ಆತನನ್ನು ಸಂತೋಷ ಪಡಿಸುವ ಸಂಗತಿಗಳು ಯಾವಾಗಲೂ ಅಲ್ಲಿ ಸಿಗಬೇಕು.
ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ. ಆಮೆನ್.
ದೇವರ ವಾಕ್ಯ ನಮ್ಮ ಜೀವಿತಕ್ಕೆ, ನಮ್ಮ ಕುಟುಂಬಕ್ಕೆ ಮತ್ತು ಈ ಪ್ರಪಂಚದ ಪ್ರತಿಯೊಂದಕ್ಕೂ ಅಸ್ಥಿವಾರವಾಗಿದೆ. ಯಾಕೆಂದರೆ ದೇವರು ಈ ಪ್ರಪಂಚವನ್ನು ತನ್ನ ಮಾತಿನಿಂದ ಸೃಷ್ಟಿಸಿದನು. ಆದ್ದರಿಂದ ದೇವರ ವಾಕ್ಯವನ್ನು ಮಾತ್ರವೇ ನಮ್ಮ ಅಸ್ತಿವಾರವಾಗಿ ಇಟ್ಟುಕೊಳ್ಳುವಾಗ ಯಾವುದೂ ಸಹ ತಪ್ಪಾಗಿ ಹೋಗಲು ಸಾಧ್ಯವಿಲ್ಲ.
ವಿಮೋಚನಕಾಂಡ 25ರಲ್ಲಿ ದೇವರು ತಾನೇ ಮನುಷ್ಯರೊಂದಿಗೆ ವಾಸಮಾಡಲು ಇಚ್ಛಿಸುವ ತನ್ನ ಚಿತ್ತವನ್ನು ಮೊದಲ ಬಾರಿಗೆ ಪ್ರಕಟಿಸುತ್ತಾನೆ. ನಾನು ಅವರ ಮಧ್ಯದಲ್ಲಿ ವಾಸಿಸುವುದಕ್ಕೆ ನನಗೆ ಒಂದು ಆಲಯವನ್ನು ಕಟ್ಟಿಸಬೇಕು ಎಂಬುದಾಗಿ ವಿಮೋಚನಕಾಂಡ 25: 8 ರಲ್ಲಿ ದೇವರು ಹೇಳುತ್ತಾನೆ. ಅದು ದೇವರ ಅಗ್ನಿ ನೆಲಸಿರುವ ಮಂಜೂಷವನ್ನು ಕುರಿತು ಹೇಳುವಂಥದ್ದಾಗಿದೆ. ಮತ್ತು ದೇವರ ಮಹಿಮೆ ಆ ಇಸ್ರಾಯೇಲ್ಯರನ್ನು ಪ್ರಪಂಚದ ಬೇರೆ ಜನರಿಗಿಂತ ವ್ಯತ್ಯಾಸವುಳ್ಳವರೆಂದು ಪ್ರತ್ಯೇಕಿಸಿದೆ.
ನಾವು ವಿಮೋಚನಕಾಂಡದಲ್ಲಿ ಓದುವ ಮಂಜೂಷವನ್ನು ನಿಖರವಾಗಿ ರಚಿಸಲು ತುಂಬಾ ಸುಲಭ. ಯಾಕೆಂದರೆ ಅದರ ಅಳತೆಗಳು ಅದರಲ್ಲಿ ಕೊಟ್ಟಿದೆ. ನಾವು ಆ ಮಂಜೂಷದ ಮೂಲ ಪ್ರತಿಯನ್ನೇ ರಚಿಸಬಹುದು. ಆದರೆ ಅದರಲ್ಲಿ ಒಂದು ಸಂಗತಿಯನ್ನು ನಾವು ನಕಲು ಮಾಡಲು ಸಾಧ್ಯವಿಲ್ಲ. ಅದು ಅದರ ಮೇಲೆ ನೆಲೆಸಿರುವ ದೇವರ ಮಹಿಮೆ. ಆ ಸ್ಥಳದ ಬಹು ಮುಖ್ಯವಾದ ಸಂಗತಿಯೆಂದರೆ ಅದರ ಮೇಲೆ ನೆಲೆಸಿರುವ ದೇವರ ಮಹಿಮೆ ಮತ್ತು ಇದು ತನ್ನ ಜನರ ಮಧ್ಯೆ ದೇವರ ಸಾನಿಧ್ಯವನ್ನು ಸೂಚಿಸುತ್ತದೆ.
ಸುನೀಲ್ ಮತ್ತು ಅನುಗ್ರಹ ಈಗ ನೀವು ಮದುವೆಯಾಗುತ್ತಿದ್ದೀರಿ. ನೀವು ಮಾಡಬೇಕಾದ ಬಹು ಪ್ರಾಮುಖ್ಯವಾದ ಕೆಲಸವೆಂದರೆ ನೀವು ನಿಮ್ಮ ಕುಟುಂಬವನ್ನು (ಮನೆಯನ್ನು) ದೇವರಿಗಾಗಿ ಒಂದು ಪವಿತ್ರ ಸ್ಥಳವನ್ನಾಗಿ ಸಿದ್ಧಮಾಡಬೇಕು-ನಿಮ್ಮಿಬ್ಬರ ಸ್ವಾರ್ಥವನ್ನು ಬಯಸುವಂಥ ಸ್ಥಳವನ್ನಾಗಿ ಅಲ್ಲ್ಲ. ನೀವು ಒಬ್ಬರನ್ನೊಬ್ಬರು ಮೆಚ್ಚಿಸಬೇಕೆಂದು ಹಾತೊರೆದಾಗ್ಯೂ, ನಿಮ್ಮ ಮನೆ ಬೇರೆಯವರನ್ನು ಆಶೀರ್ವದಿಸುವಂಥ ಸ್ಥಳವಾಗಿರಬೇಕಾಗಿದ್ದಾಗ್ಯೂ, ಅದು ಪ್ರಾಥಮಿಕವಾಗಿ ದೇವರ ಸಾನಿದ್ಯವನ್ನು ವ್ಯಕ್ತಪಡಿಸುವಂಥ ಮತ್ತು ಯೇಸುವು ಸ್ವಗೃಹದ ಅನುಭವವನ್ನು ಹೊಂದುವಂಥ ಸ್ಥಳವಾಗಿರಬೇಕು. ನಾನು ವಾಸಿಸಲು ಅವರು ಒಂದು ಸ್ಥಳವನ್ನು ಸಿದ್ಧಮಾಡಲಿ ಎಂದು ದೇವರು ಹೇಳುತ್ತಾನೆ.
ದೇವರು, ತಾನು ವಾಸಿಸಲು ಒಂದು ಮನೆಯನ್ನು ನೀವು ಕಟ್ಟಬೇಕೆಂಬುದಾಗಿ ಆತನು ನಿಮಗೆ ಆಜ್ಞಾಪಿಸುತ್ತಿದ್ದಾನೆ ಎಂಬುದನ್ನು ನಾನು ನಿಮ್ಮಿಬ್ಬರಿಗೆ ಹೇಳಲು ಇಷ್ಟಪಡುತ್ತೇನೆ.
ನಮ್ಮೆಲ್ಲರಿಗೂ ಗೊತ್ತಿರುವಂತೆ ನಾವು ಕೆಲವು ಮನೆಗಳಿಗೆ ಹೋಗುವಾಗ ಸರಳವಾಗಿ ಸ್ವಗೃಹದ ಅನುಭವ ನಮಗಾಗುವುದಿಲ್ಲ. ಆದರೆ ಕೆಲವು ಮನೆಗಳಿಗೆ ನಾವು ಹೋಗುವಾಗ ಹೋದ ಕ್ಷಣದಿಂದಲೇ ನಮಗೆ ಸ್ವಗೃಹದ ಅನುಭವ ಆಗುವಂತೆ ಅವರು ಮಾಡುತ್ತಾರೆ. ಈ ಅನುಭವವನ್ನು ವಿವರಿಸಲು ಕಷ್ಟ. ಆದರೆ ನಮ್ಮೆಲ್ಲರಿಗೂ ಅದು ಗೊತ್ತು. ಒಂದು ಕ್ರೆ ಸ್ತ ಕುಟುಂಬವು (ಮನೆಯು), ಯೇಸು ಸ್ವಾಮಿಯು ಸಂಪೂರ್ಣವಾಗಿ ಸ್ವಂತ ಮನೆಯ ಅನುಭವವನ್ನು ಪಡೆಯುವಂಥ ಒಂದು ಸ್ಥಳವಾಗಿರಬೇಕು. ಹಾಗೆಂದರೆ, ಆತನು ತಾನು ಆ ಮನೆಯಲ್ಲಿ ನೋಡುವ ಪ್ರತಿಯೊಂದು ಸಂಗತಿಯ ಬಗ್ಗೆ ಸಂತೋಷವುಳ್ಳವನಾಗಿರಬೇಕು. ನೀವು ಓದುವಂಥ ಪುಸ್ತಕಗಳ ಬಗ್ಗೆ, ನೀವು ಪಡೆಯುವ ಪತ್ರಿಕೆಗಳು, ಗಂಡ-ಹೆಂಡತಿಯ ನಡುವೆ ನಡೆಯುವ ಸಂಭಾಷಣೆ, ನೀವು ಮಾತಾಡುವ ಸಂಗತಿಗಳು, ನೀವು ಟಿ. ವಿ. ಯಲ್ಲಿ ನೋಡುವಂಥ ಕಾರ್ಯಕ್ರಮಗಳು ಮತ್ತು ಪ್ರತಿಯೊಂದು ಸಂಗತಿಗಳಲ್ಲಿ ಆತನಿಗೆ ಸಂತೋಷವಿರಬೇಕು. ಅನೇಕ ಕ್ರೆ ಸ್ತ ಮನೆಗಳಲ್ಲಿ ಬೆ ಬಲಿನ ವಾಕ್ಯಗಳು ಗೋಡೆಯ ಮೇಲೆ ನೇತಾಡುತ್ತಿರುತ್ತವೆ. ಆದರೆ ಯೇಸುವಿಗೆ ಆ ಮನೆಯಲ್ಲಿ ಇರಬೇಕೆಂದು ಅನಿಸುವುದಿಲ್ಲ.
ದೇವರು ಆದಾಮ ಮತ್ತು ಹವ್ವರನ್ನು ಎಂಥಹ ಮಹತ್ತರವಾದ ಪೂರ್ವ ನಿರೀಕ್ಷಣೆಯಿಂದ ಒಟ್ಟಿಗೆ ತಂದನು ಎಂಬುದಾಗಿ ನೀವು ಊಹಿಸಲು ಸಾಧ್ಯವೇ? ತಂದೆಯಾಗಿ, ಅವರ ಬಗ್ಗೆ ಆತನಿಗೆ ಎಂಥಹ ಅದ್ಭುತ ಯೋಜನೆಗಳಿದ್ದವು! ನಾನೂ ಒಬ್ಬ ತಂದೆ. ಮತ್ತು ಈ ದಿನ ನನ್ನ ಮಗನು ಮದುವೆಯಾಗುವುದನ್ನು ಯಾವ ಪೂರ್ವ ನಿರೀಕ್ಷಣೆಯಿಂದ ನಾನು ನೋಡುತ್ತಿದ್ದೇನೆ ಎಂಬುದು ನನಗೆ ಗೊತ್ತುಂಟು. ಆದರೆ ಆದಾಮ ಹವ್ವರನ್ನು ದೇವರು ಒಟ್ಟಿಗೆ ತಂದಾಗ, ಆತನು ನಿರೀಕ್ಷಿಸಿದ್ದರ ಒಂದು ಭಾಗ ಮಾತ್ರ ನಾನು ನಿರೀಕ್ಷಿಸುತ್ತಾ ಇದ್ದೇನೆ. ಅವರಿಗೆ ಒಂದು ಅದ್ಭುತವಾದ ಮನೆಯಿದ್ದು ಅದರಲ್ಲಿ ಆತನಿಗೇ ಯಾವಾಗಲೂ ಪ್ರಥಮ ಸ್ಥಾನವಿರುತ್ತದೆ ಎಂದು ಆತನು ನಿರೀಕ್ಷಿಸಿದನು. ಆದರೆ ಬಹಳ ಬೇಗ ದೇವರು ನಿರಾಶೆಗೊಳಗಾದನು. ಆತನು ಅವರೊಟ್ಟಿಗೆ ಕೋಪಗೊಳ್ಳಲಿಲ್ಲ. ಆದರೆ ಆತನು ದುಃಖಪಟ್ಟನು. ಈ ದಿನ ಅನೇಕ ಕ್ರ್ಯೆಸ್ತ ಕುಟುಂಬಗಳಲ್ಲಿ ಸಮಾಧಾನವಿಲ್ಲದೆ, ಬರೀ ಜಗಳ ಮತ್ತು ಕಲಹಗಳಿಂದ ತುಂಬಿರುವ ಪರಿಸ್ಥಿತಿಗಳನ್ನು ದೇವರು ನೋಡುವಾಗ ಆತನ ಹೃದಯದಲ್ಲಿ ಬಹಳ ನೋವಿರುತ್ತದೆ ಎಂದು ನಾನು ನಂಬುತ್ತೇನೆ. ಜನರು ಅವರಿಗೆ ತೊಂದರೆಗಳಿರುವಾಗ ಮಾತ್ರ ದೇವರ ಕಡೆಗೆ ಬರುತ್ತಾರೆ. ಈ ಲೋಕದ ಜನರು ತಾವು ಸಮಸ್ಯೆಗಳನ್ನು ಎದುರಿಸುವಾಗ ಮಾತ್ರ ದೇವರ ಕಡೆಗೆ ತಿರುಗುತ್ತಾರೆ. ಆದರೆ ಕ್ರ್ಯೆಸ್ತರಾದ ನಾವು ಅವರಿಗಿಂತ ಭಿನ್ನವಾಗಿರಬೇಕು. ದೇವರು ನಾವು ಯಾವುದೋ ತೊಂದರೆಯಲ್ಲಿರುವಾಗ ಕರೆಮಾಡುವಂಥ, ತುರ್ತು ಪರಿಸ್ಥಿತಿಯಲ್ಲಿ ಕರೆಯಲ್ಪಡುವ ಒಂದು (ಫೊನ್) ಸಂಖ್ಯೆಯಲ್ಲ. ದೇವರು, ಎಲಾ ಸಮಯದಲ್ಲೂ ನಮ್ಮ ಜೀವಿತಗಳ ಕೇಂದ್ರವಾಗಿರಬೇಕು.
ನಾವು ಯಾವುದಾದರೂ ಉಪಕರಣವನ್ನು ಕೊಂಡುಕೊಂಡಾಗ ಅದರ ಜೊತೆ ಸಿಗುವ ನಿರೂಪಕನ ಸೂಚನೆಯಂತೆಯೇ, ‘ದೇವರ ವಾಕ್ಯವು ನಮಗೆ ಕೊಡಲ್ಪಟ್ಟಿದೆ. ಒಂದು ವಿಧ್ಯುತ್ತಿನ ಉಪಕರಣವನ್ನು ಕೊಂಡಾಗ ನಾವೆಲ್ಲರೂ ಬಹಳ ಜಾಗ್ರತೆ ವಹಿಸಿ ಅದರಲ್ಲಿ ಕೊಟ್ಟಿರುವ ಆದೇಶಗಳನ್ನು ಸರಿಯಾಗಿ ಅನುಸರಿಸುತ್ತೇವೆ. ಒಂದುವೇಳೆ ನೀವು ಕೊಂಡುಕೊಂಡಿರುವ ಆ ಸಣ್ಣ ಉಪಕರಣದಲ್ಲಿ ಯಾವುದೋ ಸಮಸ್ಯೆ ಇದ್ದು, ನೀವು ಅದನ್ನು ರಚನಕಾರನ ಬಳಿಗೆ ತೆಗೆದುಕೊಂಡು ಹೋದಾಗ, ಮೊಟ್ಟ ಮೊದಲನೆಯದಾಗಿ ಆ ರಚನಕಾರನು ನಿಮ್ಮನ್ನು ಕೇಳುವ ಪ್ರಶ್ನೆಯು, ನೀವು ನಿರೂಪಕನ ಸೂಚನೆಯ ಪುಸ್ತಕವನ್ನು ಸರಿಯಾಗಿ ಅನುಸರಿಸಿದ್ದೀರೋ? ಎಂದೇ ಆಗಿರುತ್ತದೆ. ಸತ್ಯಾಂಶವೆಂದರೆ, ಬಹುತೇಕ ಖಾತರಿಯ(ಗ್ಯಾರಂಟಿ) ಕಾರ್ಡ್‌ನಲ್ಲಿಯೂ ಸಹ, ಒಂದು ವೇಳೆ ನಾವು ಕೊಟ್ಟಿರುವಂಥಹ ಆದೇಶವನ್ನು ನೀವು ಸರಿಯಾದ ರೀತಿಯಲ್ಲಿ ಪಾಲಿಸದೆ ಹೋದರೆ ಖಾತರಿ ನಿರರ್ಥಕವಾಗುತ್ತದೆ ಎಂದು ಸ್ಪಷ್ಟವಾಗಿ ಬರೆದಿರುತ್ತದೆ.
ಅದು ಹೇಗೇ ಇದ್ದರೂ, ದೇವರ ಬಗ್ಗೆ ಅದ್ಭುತವಾದ ಸಂಗತಿಯೆಂದರೆ ನಾವು ನಮ್ಮ ಹೊಲಸಾದ ಜೀವಿತವನ್ನು ಆತನ ಬಳಿಗೆ ಯಾವುದೇ ಸಮಯದಲ್ಲಿ ತೆಗೆದುಕೊಂಡು ಹೋದರೂ ಸಹ ಆತನು ಅದನ್ನು ಸರಿಪಡಿಸಲು ಇನ್ನೂ ಸಿದ್ದನಿದ್ದಾನೆ. ಆತನದು ಒಂದು ವರುಷದ ಖಾತರಿಯಲ್ಲ! ಅದು ಜೀವನ ಪರಿಯಂತರ! ಒಂದು ವೇಳೆ ನೀವು ನಿಮ್ಮ ಮುರಿದ ಜೀವಿತವನ್ನು ಆತನ ಬಳಿಗೆ ತಂದರೆ ಆತನು ಅದನ್ನು ನೆಟ್ಟಗೆ ಮಾಡುತ್ತಾನೆ. ಅದೇ ದೇವರ ಕುರಿತಾದ ಅದ್ಭುತ; ಯಾಕೆಂದರೆ ಆತನು ಪ್ರೀತಿಯ ತಂದೆಯಾಗಿದ್ದಾನೆ. ಮತ್ತು ನಿಮ್ಮ ಕುಟುಂಬದಲ್ಲಿ ಆತನಿಗಾಗಿ ಒಂದು ಸ್ಥಳವನ್ನು ಸಿದ್ಧ ಮಾಡುವಂತೆ ಕೇಳುತ್ತಿರುವುದು- ಒಂದು ಪ್ರೀತಿಯ ತಂದೆ ಎಂಬುದನ್ನು ನೀವು ತಿಳಿದವರಾಗಿರಬೇಕೆಂಬುದು ಬಹಳ ಪ್ರಾಮುಖ್ಯವಾದುದು. ಆತನಿಗೆ ನಿಮ್ಮ ಜೀವಿತಗಳ ಬಗ್ಗೆ ಅತಿ ಬಹಳ ಆಸಕ್ತಿ ಇದೆ. ಪ್ರಾರಂಭದ ಈ ಮೊದಲ ದಿನದಿಂದಿಡಿದು ಯೇಸುವು ಮತ್ತೆ ಬರುವವರೆಗೂ ನೀವು ಸಂತೋಷದಿಂದಿರಬೇಕೆಂದು ಆತನಿಗೆ ಆಶೆ ಇದೆ.
ಅಂಥಹ ಸಂತೋಷವನ್ನು ಸ್ವಲ್ಪ ಮಟ್ಟಿಗೆ ನಾನು ನನ್ನ ಹೆಂಡತಿಯೊಂದಿಗೆ ನಮ್ಮ ವ್ಯೆವಾಹಿಕ ಜೀವನದಲ್ಲಿ ಅನೇಕ ದಶಕಗಳಿಂದ ರುಚಿಸಿದ್ದೇನೆ. ಯೇಸು ಕ್ರಿಸ್ತನನ್ನು ನಿಮ್ಮ ಜೀವಿತದ ಕೇಂದ್ರವಾಗಿಟ್ಟುಕೊಂಡು ಜೀವಿಸುವ ಜೀವಿತ ಅತ್ಯದ್ಭುತವಾದ ಜೀವಿತವೆಂದು ನಾನು ನಿಮಗೆ ಹೇಳಬಲ್ಲೆ. ನೀವು ಸಮಯ ಕಳೆಯುವ ವಿಧಾನ, ನೀವು ಹಣವನ್ನು ಉಪಯೋಗಿಸುವ ವಿಧಾನ, ಮತ್ತು ಪ್ರತಿಯೊಂದನ್ನು ಮಾಡುವ ವಿಧಾನ ಇವೆಲ್ಲವೂ ಅಂದರೆ ನೀವು ನಿಮ್ಮ ಕುಟುಂಬದಲ್ಲಿ ಮಾಡುವಂಥ ಪ್ರತಿಯೊಂದೂ ಯೇಸುವನ್ನು ಸಂತೋಷಪಡಿಸುತ್ತದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸುತ್ತದೆ. ನೀವು ಆ ರೀತಿ ಜೀವಿಸುವುದಾದರೆ, ನಿಮ್ಮ ಜೀವಿತದ ಅಂತ್ಯಕ್ಕೆ ಬರುವಾಗ ಅಥವಾ ಒಂದು ವೇಳೆ ಅದಕ್ಕೆ ಮುಂಚೆಯೇ ಕ್ರಿಸ್ತನು ಹಿಂತಿರುಗಿ ಬಂದರೆ ಮತ್ತು ನೀವು ಆತನ ಎದುರಿಗೆ ನಿಲ್ಲುವಾಗ, ಆತನು ಚೆನ್ನಾಗಿ ಜೀವಿಸಿದೆ (ಚೆನ್ನಾಗಿ ಆಯಿತು) ಎಂದು ಹೇಳುವನು. ಆಗ ಇತರರು ನಿಮ್ಮ ಬಗ್ಗೆ ಏನೇ ಯೋಚಿಸಿದ್ದರೂ ಅದು ಲೆಕ್ಕಕ್ಕೆ ಬರುವಂತಹದ್ದಲ್ಲ.
ಮಾನವನ ಒಂದು ಗುಣವೆಂದರೆ ಅವನು ಹೊರಗಿನ ತೋರಿಕೆಯನ್ನು ನೋಡಿ ತೀರ್ಪು ಮಾಡುತ್ತಾನೆ. ನಿಯಮಕ್ಕೆ ಅತೀ ಪ್ರಾಶಸ್ತ್ಯ ಕೊಡುವವನಾಗಿರುವಾಗ ಅನೇಕ ವರ್ಷಗಳವರೆಗೂ ನಾನೂ ಇದನ್ನು ಮಾಡಿದೆ. ಆದರೆ ಈಗ ದೇವರು ಹೃದಯವನ್ನು ನೋಡುತ್ತಾನೆ ಎಂಬುದು ನನಗೆ ಬಹಳ ಸ್ಪಷ್ಟವಾಗಿದೆ. ನಿಮ್ಮ ಹೃದಯಗಳು ಯಾವಾಗಲೂ ಶುದ್ಧವಾಗಿರಬೇಕೆಂಬುದನ್ನು ನೀವಿಬ್ಬರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕೆಂಬುದು ನನ್ನ ಆಶೆ. ನಿಮ್ಮ ಮನೆ ಅರಮನೆಯೋ ಅಥವಾ ಗುಡಿಸಲೋ ಅದು ಎರಡನೆಯ ವಿಷಯ; ಹೊರಗಿನ ತೋರಿಕೆಯು ಎರಡನೆಯ ವಿಷಯ. ದೇವರು ನೋಡುವಂಥದ್ದು ನಮ್ಮ ಹೃದಯವನ್ನು. ಆದ್ದರಿಂದ ನಿಮ್ಮ ಹೃದಯಗಳು ಒಟ್ಟಿಗೆ ದೇವರು ನೆಲೆಸಲು ಒಂದು ಪವಿತ್ರ, ವಾಸ ಸ್ಥಳವಾಗಿರಬೇಕೆಂಬುದನ್ನು ಖಚಿತ ಪಡಿಸಿಕೊಳ್ಳಿರಿ.
ಎಲ್ಲಿ ದೇವರು ನೆಲಸುತ್ತಾನೆ? ಮೊಟ್ಟ ಮೊದಲನೆಯದಾಗಿ ಸಮಾಧಾನವು ಎಲ್ಲಿದೆಯೋ ಅಲ್ಲಿ. ದೇವರು ತನ್ನ ಶಿಷ್ಯರನ್ನು ಬೇರೆ ಬೇರೆ ಸ್ಥಳಗಳಿಗೆ ಭೋಧನೆ ಮಾಡಲು ಕಳುಹಿಸಿದಾಗ, ಸಮಾಧಾನವಿರುವ ಮನೆಗಾಗಿ ಹುಡುಕಿರಿ ಎಂದು ಆತನು ಲೂಕ 10:5-7 ರಲ್ಲಿ ಅವರಿಗೆ ಹೇಳುತ್ತಾನೆ. ಮತ್ತು ಅವರಿಗೆ ಅಂಥಹ ಮನೆ ಸಿಗುವುದಾದರೆ ಅವರು ಆ ಮನೆಯಲ್ಲಿ ಮಾತ್ರ ನೆಲಸಬೇಕು ಮತ್ತು ಬೇರೆ ಮನೆಗಾಗಿ ಹುಡುಕಬಾರದು. ಯಾಕೆ ಆತನು ಹಾಗೆ ಹೇಳಿದನು? ಯಾಕೆಂದರೆ ಅವರಿಗೆ ಆ ರೀತಿ ಸಮಾಧಾನದಿಂದಿರುವ ಅನೇಕ ಮನೆಗಳು ಸಿಗುವುದಿಲ್ಲವೆಂಬುದು ಆತನಿಗೆ ಗೊತ್ತಿತ್ತು.
ಯಾವ ಮನೆಯಲ್ಲಿ ಜಗಳವಿರುವುದಿಲ್ಲವೋ ಅಲ್ಲಿ ದೇವರು ನೆಲಸುತ್ತಾನೆ. ಗಂಡಂದಿರು ಮತ್ತು ಹೆಂಡತಿಯರು ಯಾವ ವಿಷಯಕ್ಕಾಗಿ ಜಗಳವಾಡುತ್ತಾರೆ? ಬಹಳ ಮಟ್ಟಿಗೆ ಭೌತಿಕ ಸಂಗತಿಗಳಿಗಾಗಿ, ಯಾವುದೋ ಪ್ರಾಪಂಚಿಕ ಸಂಗತಿ ತಪ್ಪಾಗಿದ್ದಕ್ಕಾಗಿ; ಈ ಪ್ರಪಂಚದಲ್ಲಿ ಸಂಗತಿಗಳು ತಪ್ಪುವ ಸಾದ್ಯತೆಗಳಿವೆ, ಆದರೆ ಸಂಗತಿಗಳು ತಪ್ಪಾದಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಗಂಭೀರವಾದ ಸಂಗತಿಯೆಂದರೆ ಪಾಪ. ಬೇರೆ ಎಲ್ಲಾ ಸಂಗತಿಗಳು ಪ್ರಾಮುಖ್ಯವಲ್ಲದ್ದು. ನೀವಿಬ್ಬರೂ ಇದನ್ನು ಸ್ಪಷ್ಟವಾಗಿ ಕಾಣುತ್ತೀರೆಂದು ನಿರೀಕ್ಷಿಸುತ್ತೇನೆ. ಒಂದೇ ಒಂದು ಸಂಗತಿ ಗಂಭೀರವಾದದ್ದು- ಅದು ಪಾಪ. ಲೌಕಿಕ ಸಮಸ್ಯೆಗಳಿಂದ ನಿಮ್ಮಿಬ್ಬರಲ್ಲಿ ಕಹಿಭಾವನೆ ಬಂದು ನೀವು ಒಬ್ಬರಿಗೊಬ್ಬರು ಮಾತನಾಡದಿದ್ದರೆ ಅದು ದೇವರ ಹೃದಯವನ್ನು ನೋಯಿಸುತ್ತದೆ.
ಈ ಸಣ್ಣ ಪ್ರಮಾಣದ ಜ್ಞಾನವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಪಾಪವನ್ನು ಹಗೆಮಾಡಿರಿ- ಯಾಕೆಂದರೆ ಇದು ಮಾತ್ರವೇ ನಿಮ್ಮ ಮದುವೆಯನ್ನು ಹಾಳುಮಾಡಲು ಸಾಧ್ಯ.
ನಿಮ್ಮ ಮನೆಯು ದೇವರಿಗೆ ಒಂದು ಪವಿತ್ರ ಸ್ಥಳವಾಗಿರಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಮತ್ತು ಯಾವುದೇ ಸಂಗತಿ ಬಂದು ನಿಮ್ಮ ಮನೆಯ ಸಮಾಧಾನವನ್ನು ಕೆಡಿಸುವುದಾದರೆ, ಅದು ಇನ್ನೆಂದಿಗೂ ಪವಿತ್ರ ವಾಸಸ್ಥಳವಾಗುವುದಿಲ್ಲ. ದೇವರು ನಿಮ್ಮೊಂದಿಗೆ ಕೋಪಗೊಂಡಿದ್ದಾನೆ ಅಥವಾ ನಿಮ್ಮನ್ನು ಶಪಿಸುತ್ತಾನೆಂದು ನಾನು ಹೇಳುತ್ತಿಲ್ಲ. ಇಲ್ಲ. ಆತನು ಯಾವುದೇ ಸಮಯದಲ್ಲೂ ನಿಮ್ಮೊಂದಿಗೆ ಕೋಪಗೊಳ್ಳುವುದಿಲ್ಲ. ಅಥವಾ ನಿಮ್ಮನ್ನು ಎಂದಿಗೂ ಶಪಿಸುವುದಿಲ್ಲ. ಆದರೆ ಆತನು ಅಸಂತೋಷಗೊಳ್ಳುತ್ತಾನೆ. ಯೇಸುವು ನಿಮ್ಮ ಮನೆಯಲ್ಲಿ ಮೊದಲ ದಿನದಿಂದಲೇ ಸಂತೋಷವಾಗಿ ಇರಬೇಕೆಂಬುದು ನಿಮ್ಮ ಇಷ್ಟ ಎಂಬುದು ನನಗೆ ಖಚಿತ.
ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಈ ರೀತಿ ಹೇಳುವವರಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ; ಕರ್ತನೇ, ಮನುಷ್ಯರು ನಮ್ಮೊಂದಿಗೆ ಸಂತೋಷವಾಗಿದ್ದಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಮಗೆ ಆಸಕ್ತಿ ಇಲ್ಲ. ನೀನು ಸಂತೋಷವಾಗಿದ್ದೀಯೋ? ನಮ್ಮ ಜೀವಿತದ ಯಾವುದೇ ಸಂಗತಿಯಾಗಲಿ, ನಮ್ಮ ಆಲೋಚನೆಯಾಗಲಿ, ಅಥವಾ ಒಬ್ಬರೊಟ್ಟಿಗೊಬ್ಬರ ನಡುವೆ ಇರುವ ಮನೋಭಾವವಾಗಲೀ ನಿನ್ನನ್ನು ದುಃಖ ಪಡಿಸಿದೆಯೋ? ನೀನು ನಮ್ಮ ಮನೆಯಲ್ಲಿ ಸಂತೋಷದಿಂದಿರಬೇಕು. ಇದು ಕರ್ತನನ್ನು ದುಃಖಪಡಿಸುತ್ತದೋ? ಎಂಬುದಾಗಿ ಪ್ರಶ್ನೆಮಾಡಿಕೊಳ್ಳುವುದರ ಮೂಲಕ ನಮ್ಮ ಜೀವಿತದ ಪ್ರತಿಯೊಂದು ಸಂಗತಿಯನ್ನು ನಾವು ನಿರ್ಧರಿಸುತ್ತೇವೆ.
ಆಗ ನಿಮ್ಮ ಮನೆಯು ಯಾವ ರೀತಿ ಇರುತ್ತದೆ ಎಂಬುದಾಗಿ ನೀವು ಊಹಿಸಲು ಸಾಧ್ಯವೇ? ಮಂಜೂಷದ ಮೇಲೆ ಹೇಗೆ ದೇವರ ಮಹಿಮೆಯು ತೋರಿಸಲ್ಪಟ್ಟಿತೋ, ಅದೇ ಮಹಿಮೆ ಇರುತ್ತದೆ. ನಿಮ್ಮ ಕುಟುಂಬದ ಮೂಲಕ ಜನರು ಜೀವಿಸುವ ದೇವರ ಕಡೆಗೆ ಸೆಳೆಯಲ್ಪಡುತ್ತಾರೆ.
ಸಮಾಧಾನಕ್ಕಾಗಿ ತಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಮನಸ್ಸಿರುವ ಗಂಡ ಮತ್ತು ಹೆಂಡತಿ ಇಬ್ಬರ ಮಧ್ಯದಲ್ಲಿ ದೇವರು ನೆಲೆಸುತ್ತಾನೆ. ಒಂದು ಸಾರಿ ತಮ್ಮ ಪ್ರಯಾಣಕ್ಕಾಗಿ ರೆ ಲನ್ನು ಹಿಡಿಯಲು ಹೋಗುತ್ತಿದ್ದ ಒಂದು ಯೌವನ ಜೋಡಿಯು ನನ್ನ ಬಳಿಗೆ ಬಂದು ಸಹೋದರ ಝ್ಯಾಕ್‌ರವರೇ ಎರಡು ನಿಮಿಷದಲ್ಲಿ ನಮಗೆ ಎಚ್ಚರಿಕೆಯ ಮಾತನ್ನು ಕೊಡಲು ಸಾಧ್ಯವೇ? ಎಂದು ಕೇಳಿದರು. ಆಗ ನಾನು ಖಂಡಿತವಾಗಿ ಅದು ಇಲ್ಲಿದೆ: ಯಾವಾಗಲೂ ಒಬ್ಬರನ್ನೊಬ್ಬರು ಕ್ಷಮಾಪಣೆ ಕೇಳಲು ಸಿದ್ಧರಿರಿ. ಮತ್ತು ಯಾವಾಗಲೂ ಒಬ್ಬರನ್ನೊಬ್ಬರು ಕ್ಷಮಿಸಲು ಸಿದ್ಧರಿರಿ ಎಂದು ಹೇಳಿದೆ.
ಒಂದು ವೇಳೆ ನೀವು ಯಾವುದೋ ತಪ್ಪನ್ನು ಮಾಡಿದ ತಕ್ಷಣ ಕ್ಷಮಾಪಣೆ ಕೇಳಲು ಸಿದ್ಧರಿದ್ದರೆ ಮತ್ತು ಇನ್ನೊಬ್ಬ ವ್ಯಕ್ತಿಯೂ ಕ್ಷಮಾಪಣೆ ಕೇಳಿದ ತಕ್ಷಣ ನೀವು ಕ್ಷಮಿಸಲು ಸಿದ್ಧರಿದ್ದರೆ, ಪ್ರತಿದಿನವು ನಿಮ್ಮ ಮನೆಯು ಸಮಾಧಾನದ ಮನೆಯಾಗಿರಲು ಸಾಧ್ಯವೆಂಬುದನ್ನು ನಾನು ನಿಮಗೆ ಬರವಣಿಗೆಯಲ್ಲಿ ಖಾತರಿಪಡಿಸುತ್ತೇನೆ.
ನಿಮ್ಮ ಮನೆಯೂ ಆ ರೀತಿ ಇರಲು ಸಾಧ್ಯ. ಆದರೆ ಈ ಸಂಗತಿಯಲ್ಲಿ ನೀವು ಬಹಳ ಸೂಕ್ಷ್ಮವಾಗಿರಬೇಕು. ನಿಮ್ಮ ಪಾದದಲ್ಲಿ ಮುಳ್ಳು ಚುಚ್ಚಿದರೆ ಅದನ್ನು ತೆಗೆಯಲು ಒಂದು ಕ್ಷಣವು ಸಹ ತಡಮಾಡುವುದಿಲ್ಲ. ಅದರಂತೆಯೇ ನಿಮ್ಮ ಹೃದಯದಲ್ಲಿ ಗಲಿಬಿಲಿಯನ್ನು ಅನುಭವಿಸುವಾಗ ಆ ಕ್ಷಣವೇ ಅದನ್ನು ತೆಗೆದುಬಿಡಬೇಕು. ಅದು ಮುಳ್ಳು; ಮತ್ತು ಅದು ನಿಮ್ಮನ್ನು ನಾಶಮಾಡುತ್ತದೆ. ನಿಮ್ಮ ಪಾದವನ್ನು ಸೋಂಕುಗೊಳಿಸುವ ಮುಳ್ಳಿಗಿಂತ ಹೆಚ್ಚಾಗಿ ಅದು ನಿಮ್ಮ ಹೃದಯವನ್ನು ಸೋಂಕುಗೊಳಿಸುತ್ತದೆ. ಏನೇ ಆದರೂ ಸಮಾಧಾನಕ್ಕಾಗಿ ಹಾತೊರೆಯಿರಿ. ಅದಕ್ಕಾಗಿ ಹಣ ಮತ್ತು ಬೇರೆಲ್ಲವನ್ನು ನೀವು ಕಳಕೊಳ್ಳಬೇಕಾದರೂ ಸಹ ಯೋಚಿಸಬೇಡಿರಿ. ಅವೆಲ್ಲವುಗಳು ಸಮಾಧಾನದಷ್ಟು ಪ್ರಾಮುಖ್ಯವಲ್ಲ. ಒಂದು ವೇಳೆ ನೀವು ಹಣ ಮತ್ತು ಸಮಾಧಾನವನ್ನು ತಕ್ಕಡಿಯಲ್ಲಿ ತೂಕಹಾಕುವುದಾದರೆ ಹಣಕ್ಕಿಂತ ಸಮಾಧಾನ ಬಹಳ ಭಾರವಾಗಿರುತ್ತದೆ ಎಂಬುದನ್ನು ನೀವಿಬ್ಬರೂ ಗ್ರಹಿಸುತ್ತೀರೆಂದು ನಾನು ನಿರೀಕ್ಷಿಸುತ್ತೇನೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳಿರಿ!
ಒಂದು ದಿನ ಮನೆಯಲ್ಲಿ ಯಾವುದೋ ಹಾಳಾಯಿತೇ? ಊಟ ಸೀದು(ಸುಟ್ಟು) ಹೋಯಿತೇ? ಪರವಾಗಿಲ್ಲ. ಊಟಸುಟ್ಟು ಹೋದದ್ದರಿಂದ ಒಂದು ಹೊತ್ತು ಊಟ ಮಾಡಲಿಲ್ಲವೆಂದರೆ ಏನಾಗುತ್ತದೆ? ಬಹುಶಃ ಅದು ನಿಮ್ಮನ್ನು ಯುಕ್ತತೆಯಿಂದಲೂ ಮತ್ತು ಆರೋಗ್ಯದಿಂದಲೂ ಇಡುತ್ತದೆ. ಬಹುಶಃ ಅದು ನಿಮ್ಮನ್ನು ಬಹಳ ಆತ್ಮಿಕರನ್ನಾಗಿ ಮಾಡುತ್ತದೆ.
ಆದರೆ ನೀವು ಅದಕ್ಕಾಗಿ ಕೋಪಗೊಂಡರೆ ಸ್ಯೆತಾನನು ಜಯಗಳಿಸುತ್ತಾನೆ. ದೇವರು ಸ್ಥಾಪಿಸಿದ ಮೊದಲ ಮನೆಗೆ ಏನಾಯಿತೆಂದು ಜ್ಞಾಪಿಸಿಕೊಳ್ಳಿರಿ.ಸ್ಯೆತಾನನು ಆದಾಮ ಹವ್ವಳ ಮಧ್ಯೆ ಪ್ರವೇಶಿಸಲು ಪಕ್ಕದ ಬದಿಗಳಲ್ಲಿ ಕಾದು ನಿಂತಿದ್ದನು. ಮತ್ತು ಅವನು ಜಯಗಳಿಸಿದನು. ಯೋಬನು ಮತ್ತು ಅವನ ಹೆಂಡತಿಯ ಮಧ್ಯೆ ಬರಲು ಸಹ ಯಶಸ್ವಿಯಾದನು. ಅವನು ಇಸಾಕ ಮತ್ತು ರೆಬೆಕ್ಕಳ ಮಧ್ಯೆ ಪ್ರವೇಶಿಸಲು ಸಹ ಯಶಸ್ವಿಯಾದನು.
ಸ್ಯೆತಾನನು ಗಂಡ ಮತ್ತು ಹೆಂಡತಿಯ ನಡುವೆ ಬರುವುದು ದೇವರ ಚಿತ್ತವಲ್ಲ. ಆದ್ದರಿಂದ ಆ ರೀತಿ ಎಂದಿಗೂ ನಿಮಗೆ ಆಗಬಾರದು. ದೇವರು ಯಾವಾಗಲೂ ನಿಮ್ಮ ಮನೆಯ ಕುರಿತಾಗಿ ಸಂತೋಷಪಡಲಿ ಮತ್ತು ಆತನು ಸಮಾಧಾನವನ್ನು ಎಲ್ಲಾ ಸಮಯದಲ್ಲೂ ಸಹ ಅನುಗ್ರಹಿಸಲಿ. ಎಲ್ಲಿ ಗಂಡ ಮತ್ತು ಹೆಂಡತಿ ಪಶ್ಚಾತ್ತಾಪ ಮತ್ತು ಮುರಿದ ಮನಸ್ಸುಳ್ಳವರಾಗಿರುತ್ತಾರೆ
ಎರಡನೆಯ ಸಂಗತಿ ನಾನು ನಿಮಗೆ ಹೇಳಬೇಕಾದದು ಯೇಶಾಯ 57:15 ರಲ್ಲಿ ಕಂಡು ಬರುತ್ತದೆ. ದೇವರು ಉನ್ನತ ಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವವನಾಗಿ ಜಜ್ಜಿಹೋದ ದೀನಮನಸುಳ್ಳವನೊಂದಿಗೆ ಇರುತ್ತಾನೆ. ದೇವರು ಮನ ಮುರಿದ ದೀನರ ಆತ್ಮದೊಂದಿಗೆ ನೆಲಸುತ್ತಾನೆ. ಒಬ್ಬ ಮನಮುರಿದ ವ್ಯಕ್ತಿಯು ಇತರರ ಸೋಲಿಗಿಂತಲೂ ತನ್ನ ಅವಶ್ಯಕತೆಯ ಬಗ್ಗೆ ಹೆಚ್ಚು ಅರಿವುಳ್ಳವನಾಗಿರುತ್ತಾನೆ. ಇಡೀ ಪ್ರಪಂಚವು ಇತರರ ಸೋಲಿನ ಬಗ್ಗೆ ಅರಿವುಳ್ಳ ಜನರಿಂದಲೇ ತುಂಬಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಮನೆಗಳಲ್ಲಿ ಹೆಚ್ಚಾಗಿ ಸಂಭಾಷಣೆಯೂ ಸಹ ಬೇರೆ ವ್ಯಕ್ತಿಗಳ ಸೋಲಿನ ಬಗ್ಗೆ ಅಥವಾ ಬೇರೆ ಕುಟುಂಬಗಳ ಸೋಲಿನ ಬಗ್ಗೆಯೇ ಇರುತ್ತದೆ. ಬೇರೆಯವರಲ್ಲಿ ಸೋಲನ್ನು ನಾವು ಬಹಳ ಬೇಗ ಗಮನಿಸುತ್ತೇವೆ. ಆದರೆ ಅಂಥಹ ಜನರಲ್ಲಿ ಆಗಾಗ್ಗೆ ಒಳ್ಳೆಯ ಅಂಶಗಳನ್ನು ನಾವು ಕಾಣುವುದಿಲ್ಲ. ನಾವೆಲ್ಲರೂ ಇದರ ಬಗ್ಗೆ ತಪ್ಪು ಮಾಡುವವರಾಗಿದ್ದೇವೆ. ನಾನೂ ಹಿಂದೆ ಈ ವಿಷಯದಲ್ಲಿ ತಪ್ಪು ಮಾಡಿದವನಾಗಿರುತ್ತೇನೆ. ಆದರೆ ದೇವರು ಈ ದುಷ್ಟ ಸಂಗತಿಯ ಬಗ್ಗೆ ಬೆಳಕನ್ನು ಕೊಟ್ಟನು; ಮತ್ತು ನಾನು ಪಶ್ಚಾತ್ತಾಪಪಟ್ಟಿದ್ದೇನೆ.
ನಮಗೆ ಯಾರ ಮೇಲೂ ಕಲ್ಲನ್ನು ಎಸೆಯುವ ಹಕ್ಕು ಇಲ್ಲ. ಯಾಕೆಂದರೆ ನಾವೇ ದೇವರ ಕೃಪೆಯಿಂದ ರಕ್ಷಿಸಲ್ಪಟ್ಟ ಪಾಪಿಗಳಾಗಿದ್ದೇವೆ. ಆದರೆ ನಾವು ಮತ್ತೆ ಮತ್ತೆ ಪಾಪ ಮಾಡಲು ಇಷ್ಟವಿಲ್ಲದ ಜನರು, ಮುಖ್ಯವಾಗಿ ಇತರರ ತಪ್ಪಿನ ಬಗ್ಗೆ ಮಾತನಾಡುವವರಲ್ಲ. ನಮ್ಮೆಲ್ಲರಿಗೂ ಸ್ನಾನದ ಕೋಣೆಯಲ್ಲಿರುವ ಕನ್ನಡಿಗೂ ಮತ್ತು ವಾಹನದ ಕನ್ನಡಿಗೂ ಇರುವ ವ್ಯತ್ಯಾಸ ಗೊತ್ತಿದೆ. ಸ್ನಾನದ ಕೋಣೆಯಲ್ಲಿರುವ ಕನ್ನಡಿಯಲ್ಲಿ ನಮ್ಮ ಸ್ವಂತ ಮುಖ ಕಾಣುತ್ತದೆ. ಆದರೆ ವಾಹನದ ಕನ್ನಡಿಯಲ್ಲಿ ಬೇರೆ ಯಾರದೋ ಮುಖವನ್ನು ಕಾಣುತ್ತೇವೆ. ಯಾಕೋಬ 1: 23-25 ರಲ್ಲಿ ದೇವರ ವಾಕ್ಯವು ಒಂದು ಕನ್ನಡಿಯಂತೆ ಇದೆ ಎಂದು ಹೇಳುತ್ತದೆ. ಆದರೆ ಅದು ಸ್ನಾನದ ಕೋಣೆಯ ಕನ್ನಡಿಯೋ ಅಥವಾ ವಾಹನದ ಕನ್ನಡಿಯೋ? ಯಾರ ಮುಖವನ್ನು ಅದರಲ್ಲಿ ಕಾಣುತ್ತೀರಿ? ಅದರಲ್ಲಿ ಬೇರೆಯವರಿಗಾಗಿ ಭೋಧಿಸಲು ವಾಕ್ಯವನ್ನು ಪಡೆಯುತ್ತೀರೋ? ಅಥವಾ ಅದರಲ್ಲಿ ನೀವು ವಿಧೇಯರಾಗದೆ ಇರುವಂಥದನ್ನು ಕಾಣುತ್ತೀರೋ? ಇಬ್ರಿಯ 10:7ರಲ್ಲಿ ಪುಸ್ತಕದಲ್ಲಿ ನನ್ನ ಕುರಿತಾಗಿ ಬರೆದದೆ ಎಂದು ಹೇಳಲ್ಪಟ್ಟಿದೆ.
ನಾನು ನನ್ನ ಜೀವಿತದ ಅನೇಕ ವರ್ಷಗಳನ್ನು ಮೂರ್ಖತನದಲ್ಲಿ ಕಳೆದೆ. ದೇವರ ವಾಕ್ಯವನ್ನು ವಾಹನಯ ಕನ್ನಡಿಯಂತೆ ಇತರರಿಗಾಗಿ ಬೋಧಿಸಲು ವಾಕ್ಯಗಳನ್ನು ಹುಡುಕುತ್ತಿದ್ದೆ. ಮತ್ತು ಆ ವರ್ಷಗಳಲ್ಲಿ ನಾನು ದುಃಖಾವಸ್ತೆಯಲ್ಲಿ ಇದ್ದೆ. ಅನೇಕರನ್ನು ನಾನು ಬಂಧನದಲ್ಲಿ ತಂದೆ. ಆದರೆ ಈಗ ನಾನು ಅವೆಲ್ಲವುಗಳಿಂದ ಬಿಡಿಸಲ್ಪಟ್ಟವನಾಗಿದ್ದೇನೆ. ನನಗೆ ನನ್ನ ನಿಶ್ಚಿತಾಭಿಪ್ರಾಯ ಇನ್ನೂ ಇದೆ, ಆದರೆ ನಾನು ಎಂದೂ ಅವುಗಳನ್ನು ಇತರರ ಮೇಲೆ ಹೊರಿಸುವುದಿಲ್ಲ. ಯಾಕೆಂದರೆ ಅದು ನನ್ನ ಕೆಲಸವಲ್ಲ. ನಾನು ದೇವರ ಮುಂದೆ ಮಾತ್ರ ಜೀವಿಸಬೇಕು.
ನಾನು ಈಗ ಈ ಅದ್ಭುತ ಸತ್ಯವನ್ನು ಕಂಡುಕೊಂಡಿದ್ದೇನೆ. ಆದರೆ ಬೇರೆ ವ್ಯಕ್ತಿಗೆ ನನಗೆ ಸಿಕ್ಕ ಬೆಳಕಿನಷ್ಟು ಬೆಳಕು ಸಿಗದೆ ಇರಬಹುದು. ಈ ಸತ್ಯವು ಕಳೆದ 20 ವರ್ಷಗಳಿಗಿಂತ ಹೆಚ್ಚಾಗಿ ನನಗೆ ಸಹಾಯ ಮಾಡಿದೆ. ಅದಕ್ಕಿಂತ ಮುಂಚೆ ನಾನು ನನ್ನ ಸುತ್ತಲಿರುವಂತ ಪ್ರತಿಯೊಬ್ಬರು ಅದೇ ಬೆಳಕನ್ನು ಪಡೆಯಬೇಕೆಂಬುದಾಗಿ ಮತ್ತು ಪಾಪದ ಕುರಿತಾಗಿ ನನಗಿದ್ದಂತ ತಿಳುವಳಿಕೆಯೇ ಇರಬೇಕೆಂದು ಅಪೇಕ್ಷಿಸುತ್ತಿದ್ದೆ ಮತ್ತು ಸರ್ವಶಕ್ತನಾದ ದೇವರು ಸಹ, ಪ್ರತಿವ್ಯಕ್ತಿಯು ತನಗೆ ಸಿಕ್ಕಿದ ಬೆಳಕಿನ ಅನುಸಾರವಾಗಿ ಜೀವಿಸಬೇಕು; ಬೇರೆಯವರಿಗೆ ಸಿಕ್ಕಿದ ಬೆಳಕಿನಂತೆಯಲ್ಲ- ಎಂದು ಅಪೇಕ್ಷಿಸುತ್ತಾನೆ. ದೇವರು ನಮಗೆ ಎಷ್ಟರ ಮಟ್ಟಿಗೆ ಬೆಳಕನ್ನು ಕೊಟ್ಟಿದ್ದಾನೆ ಎಂಬುದಾಗಿ ನಮಗೆ ಗೊತ್ತಿರುತ್ತದೆ. ಆದರೆ ಬೇರೆಯವರಿಗೆ ಎಷ್ಟು ಬೆಳಕನ್ನು ದೇವರು ಕೊಟ್ಟಿರುತ್ತಾನೆಂದು ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ನಾವು ಕರುಣೆಯುಳ್ಳವರಾಗಿರಬೇಕು.
ಈ ಒಂದು ಹಂತದಲ್ಲಿ ವಿಡಿಯೋ ಬೆಳಕು ಸಡಿಲ ಸಂಪರ್ಕದ ಕಾರಣದಿಂದ ಆರಿಹೋಗುತ್ತದೆ)ಈಗ ತಾನೇ ಬೆಳಕು ಆರಿ ಹೋದ ರೀತಿಯನ್ನು ನೀವು ನೋಡುತ್ತಿದ್ದೀರಲ್ಲಾ? ಅದು ಒಂದು ದೃಷ್ಟಾಂತ. ಕೆಲವು ಜನರಿಗೆ ಪ್ರಕಾಶಮಾನವಾದ ಬೆಳಕಿನಲ್ಲಿ ಮಾತ್ರ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯ; ಇನ್ನೂ ಕೆಲವು ಜನರಿಗೆ ವಸ್ತುಗಳನ್ನು ಮಂದ ಬೆಳಕಿನಲ್ಲೂ ನೋಡಲು ಸಾಧ್ಯ ಎಂಬುದನ್ನು ನಾವು ಗ್ರಹಿಸಿಕೊಳ್ಳಬೇಕು. ಈ ಬೆಳಕು ಹೋಗುವುದರ ಮೂಲಕ ದೇವರ ಒಳ್ಳೆಯತನ ನಮಗೆ ಈ ಸತ್ಯವನ್ನು ನಮ್ಮ ಕಣ್ಣಮುಂದೆಯೇ ಈಗಲೇ ಸಿದ್ಧಾಂತ ಪಡಿಸಿದನು!
ಆದ್ದರಿಂದ ಸುನೀಲ್, ಅನುಗ್ರಹಳಿಗೆ ನಿನಗಿರುವಷ್ಟು ಬೆಳಕು ಕೆಲವು ಕ್ಷೇತ್ರಗಳಲ್ಲಿ ಇರುವುದಿಲ್ಲವೆಂಬುದನ್ನು ನೀನು ಗ್ರಹಿಸಬೇಕು. ಮತ್ತು ಅನುಗ್ರಹ, ಸುನಿಲ್‌ಗೆ ಕೆಲವು ಕ್ಷೇತ್ರಗಳಲ್ಲಿ ನಿನಗಿರುವಷ್ಟು ಬೆಳಕು ಇರುವುದಿಲ್ಲವೆಂಬುದನ್ನು ನೀನು ಗ್ರಹಿಸಿಕೊಳ್ಳಬೇಕು. ಪ್ರತಿಯೊಬ್ಬರು ನಿಮಗಿರುವ ಬೆಳಕಿನ ಅನುಸಾರ ಜೀವಿಸಬೇಕು ಮತ್ತು ಇತರರನ್ನು ಅವರಿಗಿರುವ ಬೆಳಕಿನ ಅನುಸಾರ ಜೀವಿಸಲು (ಅವನಿಗೆ/ಅವಳಿಗೆ) ಬಿಡಬೇಕು.
ಒಬ್ಬ 6ನೇ ತರಗತಿಯ ವಿಧ್ಯಾರ್ಥಿಯೂ ಎರಡನೇ ತರಗತಿಯ ವಿಧ್ಯಾರ್ಥಿಗಿಂತ ಹೆಚ್ಚಾಗಿ ತಿಳಿದುಕೊಂಡಿರುತ್ತಾನೆ. ಆದ್ದರಿಂದ ಒಬ್ಬ ಆರನೆಯ ತರಗತಿಯ ವಿಧ್ಯಾರ್ಥಿಯೂ ಎರಡನೆಯ ತರಗತಿಯ ವಿಧ್ಯಾರ್ಥಿಯಿಂದ ತಾನು ತಿಳಿದುಕೊಂಡಿರುವಷ್ಟೇ ಅಪೇಕ್ಷಿಸಿದರೆ, ಆಗ ಅವನು ಮೂರ್ಖನು. ಮತ್ತು ನಾನು ನನ್ನ 65ನೇ ವಯಸ್ಸಿನಲ್ಲಿ 26 ವಯಸ್ಸಿನವರಿಗೆ, ನನಗೆ ಸಿಕ್ಕ ಬೆಳಕು ಸಿಕ್ಕಬೇಕು ಮತ್ತು ನಾನು ತಿಳಿದುಕೊಂಡಂತೆಯೇ ದೇವರ ಮಾರ್ಗಗಳನ್ನು ತಿಳಿಯಬೇಕೆಂದು ನಿರೀಕ್ಷಿಸಿದರೆ ಆಗ ನಾನು ಮೂರ್ಖನು. ಆದರೆ ನಾನು ಮೂರ್ಖನಾಗುವುದಿಲ್ಲ.
ಅನೇಕ ಕ್ರ್ಯೆಸ್ತರು ಮೂರ್ಖರಾಗಿದ್ದಾರೆ. ಅವರು ಮೂವತ್ತು ವರ್ಷಗಳಲ್ಲಿ ಪಡೆದ ಜ್ಞಾನವನ್ನು ಇತರರು ಒಂದು ವರ್ಷದಲ್ಲಿ ಸಂಪಾದಿಸಬೇಕೆಂದು ಅವರು ಎದುರು ನೋಡುವವರಾಗಿದ್ದಾರೆ..
ಹಾಗಾದರೆ ಈ ಯೌವನ ಜೋಡಿಯಿಂದ ಎಷ್ಟು ಜ್ಞಾನವನ್ನು ನಾನು ಎದುರು ನೋಡುತ್ತೇನೆ? ಇಪ್ಪತ್ತರ ಹರೆಯದ ಜನರಲ್ಲಿ ಇರಬೇಕಾದ ಜ್ಞಾನವನ್ನು ಮಾತ್ರ.
ಸುನೀಲ್ ಮತ್ತು ಅನುಗ್ರಹ: ನಾನು ನಿಮ್ಮನ್ನು ಉತ್ತೇಜನಪಡಿಸಲು ಕೆಲವು ಸಂಗತಿಗಳನ್ನು ಹೇಳುತ್ತೇನೆ; ನಾನು ನಿಮ್ಮ ವಯಸ್ಸಿನಲ್ಲಿದ್ದಾಗ ಮಾಡಿದಂತ ಮೂರ್ಖತನಕ್ಕಿಂತ ಬಹುಶಃ ಹತ್ತು ಪಟ್ಟು ಕಡಿಮೆ ಮೂರ್ಖಸಂಗತಿಗಳನ್ನು ನೀವು ಮಾಡಬಹುದು. ಇದರಿಂದ ನೀವು ಉತ್ತೇಜನಗೊಂಡಿರುವಿರೆಂದು ನಾನು ನಿರೀಕ್ಷಿಸುತ್ತೇನೆ. ಆದರೆ ದೇವರು ನನ್ನೊಂದಿಗೆ ಕರುಣೆಯುಳ್ಳವನಾಗಿದ್ದನು. ಮತ್ತು ನನ್ನ ತಪ್ಪುಗಳ ಮಧ್ಯೆಯೂ ಸಹ ನನ್ನನ್ನು ಉತ್ತೇಜನಪಡಿಸಿದನು.
ತಂದೆಯಾಗಿ ನಾನು ನಿಮ್ಮಿಬ್ಬರಿಗೂ ಕೆಲವು ಸಂಗತಿಗಳನ್ನು ಹೇಳುತ್ತೇನೆ. ಅನುಗ್ರಹ ನಾನು ನಿನ್ನ ಮಾವನಲ್ಲ, ನಾನೆಂದಿಗೂ ಸೊಸೆಯರನ್ನು ಪಡೆಯ ಬಯಸುವುದಿಲ್ಲ, ಆದರೆ ಪುತ್ರಿಯರನ್ನು ಮಾತ್ರ ಪಡೆಯುತ್ತೇನೆಂದು ತೀರ್ಮಾನಿಸಿಕೊಂಡೆನು. ನೀನು ನನ್ನನ್ನು ಈ ವಿಷಯದಲ್ಲಿ ಮುಂದೆ ಬರುವ ಕೆಲವು ವರ್ಷಗಳಲ್ಲಿ ಪರೀಕ್ಷಿಸಿ ನಾನು ನಿನ್ನನ್ನು ಸೊಸೆಯನ್ನಾಗಿಯೋ ಅಥವಾ ಮಗಳನ್ನಾಗಿ ನೋಡಿಕೊಳ್ಳುತ್ತೇನೋ ನೋಡಬಹುದು. ಒಂದು ವೇಳೆ ನಾನು ಯಾವುದೇ ಸಮಯದಲ್ಲಿ ತಪ್ಪಿಹೋದರೆ ನಾನು ನಿನ್ನನ್ನು ಮಗಳಂತೆ ನೋಡಿಕೊಳ್ಳುತ್ತೇನೆಂದು ಈ ದಿನ ಹೇಳಿದ ಮಾತನ್ನು ದಯವಿಟ್ಟು ನೆನಪಿಸು. ಆಗ ನಾನು ಹಾಗೆಯೇ ನೋಡಿಕೊಳ್ಳುತ್ತೇನೆ.
ನಾನು ತಂದೆಯಾಗಿ ನಿಮ್ಮಿಬ್ಬರಿಗೆ ಹೇಳಬಯಸುವುದೇನೆಂದರೆ, ನಾನು ನಿಮ್ಮಿಂದ ನನಗಿರುವ ಬೆಳಕನ್ನು ಅಥವಾ ನನಗಿರುವ ಜ್ಞಾನವನ್ನು ಎಂದಿಗೂ ಎದುರುನೋಡುವುದಿಲ್ಲ. ನನಗಿರುವ ಜ್ಞಾನ ನೀವು 65ನೇ ವಯಸ್ಸು ತಲಪುವಾಗ ನಿಮಗಿರುತ್ತದೆ. ಬಹುಶಃ 45ರಲ್ಲೇ ಸಿಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಮತ್ತು ನೀವು 65ನೇ ವಯಸ್ಸು ತಲಪುವಾಗ ಈಗ ನನಗಿರುವದಕ್ಕಿಂತ ನಿಮಗೆ ಹೆಚ್ಚಾದ ಜ್ಞಾನವಿರುತ್ತದೆ.
ಆದ್ದರಿಂದ 40 ವರ್ಷಗಳಲ್ಲಿ ಅವರು ಸಂಪಾದಿಸಿದ ಜ್ಞಾನವನ್ನು ನಿಮ್ಮಿಂದ ಅಪೇಕ್ಷಿಸುವ ಜನರನ್ನು ಸಂಧಿಸುವಾಗ ನೀವು ಅವರನ್ನು ಅಲಕ್ಷ್ಯ ಮಾಡಿರಿ. ಯೆಶಾಯ 42:19 ರಲ್ಲಿ ಒಬ್ಬ ನಿಜ ದೇವರ ಸೇವಕನು ಕುರುಡ ಮತ್ತು ಕಿವುಡ ಎರಡೂ ಆಗಿರುತ್ತಾನೆ ಎಂಬ ಸುಂದರ ವಾಕ್ಯ ಇದೆ. ನಿಮ್ಮ ಸುತ್ತಲೂ ಇರುವ ಜನರ ಅಭಿಪ್ರಾಯಕ್ಕೆ ನೀವು ಕುರುಡು ಮತ್ತು ಕಿವುಡರಾಗಿರಿ. ಆ ವಾಕ್ಯವು ನನಗೆ ಬಹಳವಾಗಿ ಸಹಾಯಕವಾಗಿದೆ. ನಿಮ್ಮ ಸುತ್ತಲೂ ಇರುವ ಜನರ ಅಭಿಪ್ರಾಯಕ್ಕೆ ನೀವು ಕುರುಡರು ಮತ್ತು ಕಿವುಡರಾಗಿದ್ದರೆ ಮಾತ್ರ ದೇವರ ಮುಖದ ಮುಂದೆ ಆತನ ನಿಜ ಸೇವಕರಾಗಿ ಜೀವಿಸಲು ಸಾಧ್ಯ.
ಆದ್ದರಿಂದ ಬೇರೆಯವರು ನಿಮ್ಮನ್ನು ಟೀಕಿಸುವಾಗ, ಟೀಕೀಸುವವರಲ್ಲಿ ಏನು ತಪ್ಪಿದೆಯೆನ್ನುವುದಕ್ಕಿಂತ ನಿಮ್ಮೊಳಗೆ ಏನು ತಪ್ಪಾಗಿದೆ ಎಂಬುದನ್ನು ಹುಡುಕಿರಿ. ಒಂದು ವೇಳೆ ಬೇರೆಯವರು ನಿಮ್ಮನ್ನು ಟೀಕಿಸುವುದರ ಮೂಲಕ ತಮ್ಮನ್ನು ನಾಶಪಡಿಸಿಕೊಳ್ಳಬೇಕೆಂದಿದ್ದರೆ, ಅವರನ್ನು ನಾಶಪಡಿಸಿಕೊಳ್ಳಲಿ. ಆದರೆ ನಾನು ಅನೇಕ ವರ್ಷಗಳ ಹಿಂದೆಯೇ ನನ್ನನ್ನು ನಾನು ಆ ರೀತಿ ನಾಶಪಡಿಸಿಕೊಳ್ಳುವುದಿಲ್ಲವೆಂದು ತೀರ್ಮಾನಿಸಿಕೊಂಡೆ. ನನ್ನ ಯೌವ್ವನದ ಕಾಲದಲ್ಲಿ ನಾನು ಅನೇಕ ಮೂರ್ಖ ಸಂಗತಿಗಳನ್ನು ಮಾಡಿದೆ. ಆದರೆ ಈಗ ನನಗೆ ಸ್ವಲ್ಪ ಹೆಚ್ಚು ಜ್ಞಾನವಿದೆ. 1 ಕೊರಿ 13:11 ರಲ್ಲಿ ಪೌಲನು, ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖ-ದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು. ಎಂದು ಹೇಳುತ್ತಾನೆ.
ನೀವಿಬ್ಬರೂ ಬೇಗನೇ ಬೆಳೆಯಬೇಕೆಂದು ನಾನು ನಿಮ್ಮಿಬ್ಬರನ್ನು ಉತ್ತೇಜನಪಡಿಸುತ್ತೇನೆ.
ಎಲ್ಲಿ ಗಂಡ ಮತ್ತು ಹೆಂಡತಿ ಶುದ್ಧವಾಗಿರುತ್ತಾರೆ ಎಲ್ಲಿ ಗಂಡ ಮತ್ತು ಹೆಂಡತಿ ಅನುದಿನವೂ ಪರಿಶುದ್ಧತೆಯಲ್ಲಿ ಜೀವಿಸುತ್ತಾರೋ ಆ ಮನೆಯಲ್ಲಿ ದೇವರು ನೆಲೆಸುತ್ತಾನೆ.
ಯೆಹೆಜ್ಕೇಲ 43:12 ರಲ್ಲಿ, ಇದೇ ದೇವಸ್ಥಾನದ ನಿಯಮ; ಪರ್ವತಾಗ್ರದಲ್ಲಿನ ಅವರ ಪ್ರದೇಶವೆಲ್ಲಾ ಸುತ್ತು ಮುತ್ತಲೂ ಅತೀ ಪರಿಶುದ್ಧವಾಗಿರಬೇಕು. ಎಂದು ಬರೆದದೆ.
ಮಂಜೂಷದಲ್ಲಿ ಮೂರು ಭಾಗಗಳಿದ್ದವು- ಹೊರಗಿನ ಪ್ರಾಕಾರ, ಪರಿಶುದ್ಧ ಸ್ಥಳ ಮತ್ತು ಅತೀ ಪರಿಶುದ್ಧ ಸ್ಥಳ. ಈ ಮೂರರಲ್ಲಿ ಅತೀ ಪರಿಶುದ್ಧ ಸ್ಥಳ ಬಹಳ ಸಣ್ಣ ಸ್ಥಳವಾಗಿತ್ತು.
ಆದರೆ ಹೊಸ ಒಡಂಬಡಿಕೆಯಲ್ಲಿ ಹೊರಗಿನ ಪ್ರಾಕಾರವಾಗಲೀ ಅಥವಾ ಪರಿಶುದ್ಧ ಸ್ಥಳವಾಗಲೀ ಇಲ್ಲ. ಆದರೆ ಇಡೀ ಸ್ಥಳವೇ ಅತೀ ಪರಿಶುದ್ಧ ಸ್ಥಳ ಎಂಬುದಾಗಿ ಓದುತ್ತೇವೆ. ಅದರ ಅರ್ಥವೇನೆಂದರೆ, ನೀವು ಎಲ್ಲಾ ಸಮಯದಲ್ಲೂ ಪರಿಶುದ್ಧರಾಗಿರುತ್ತೀರಿ. ಕೇವಲ ಭಾನುವಾರದಂದು ಮಾತ್ರವಲ್ಲ. ಆದರೆ ಪ್ರತಿದಿನ ನೀವು ದೇವರ ವಾಕ್ಯವನ್ನು ಓದುವಾಗ ಮಾತ್ರ ಪರಿಶುದ್ಧರಾಗಿರದೇ ಏನೇ ಮಾಡುವಾಗಲೂ ಸಹ ಪರಿಶುದ್ಧರಾಗಿರಬೇಕು. ನಿಮ್ಮ ಜೀವಿತದಲ್ಲೂ ಮನೆಯ ಪ್ರತಿಯೊಂದು ಮೂಲೆಯಲ್ಲೂ ಮತ್ತು ಸಂಧಿಯಲ್ಲೂ ಪರಿಶುದ್ಧತೆ ಇರುತ್ತದೆ.(ಇರಬೇಕು). ಪರಿಶುದ್ಧತೆಯು ಒಂದು ಜಾತಿಯ ಆಚಾರಗಳನ್ನು ಅನುಸರಿಸುವಂಥಹುದಲ್ಲ. ಆದರೆ ನಮಗೆ ಸಿಕ್ಕಿರುವ ಬೆಳಕಿನ ಪ್ರಕಾರ ದೇವರ ಮನ ನೋಯಿಸುವ ಕಾರ್ಯಗಳನ್ನು ತಡೆಯುವುದೇ ಆಗಿದೆ.
ನಿಮ್ಮಿಬ್ಬರ ಜೀವಿತಕ್ಕೆ ದೇವರು ಅದ್ಭುತವಾದ ಯೋಜನೆಯನ್ನು ಇಟ್ಟುಕೊಂಡಿದ್ದಾರೆ. ದೇವರು ಮೊದಲು ಆದಾಮನನ್ನು ಮಾಡಿದಾಗ ಅಲ್ಲಿ ಹವ್ವಳು ಇರಲಿಲ್ಲ. ದೇವರು ಆದಾಮನಲ್ಲಿ ತನ್ನ ಶ್ವಾಸವನ್ನು ಊದಿದನು ಮತ್ತು ಆದಾಮನು ಕಣ್ಣು ತೆರೆದಾಗ ಮೊದಲು ದೇವರನ್ನು ಕಂಡನು. ಸುನೀಲ್, ನೀನು ಪ್ರತಿದಿನ ನಿನ್ನ ಜೀವಿತದಲ್ಲಿ ಕಾಣುವ ಮೊದಲ ವ್ಯಕ್ತಿ - ದೇವರಾಗಿರುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಆನಂತರ ದೇವರು ಆದಾಮನನ್ನು ನಿದ್ರೆ ಮಾಡಲು ಬಿಟ್ಟನು. ಮತ್ತು ಅವನ ಪಕ್ಕೆ ಎಲುಬಿನಿಂದ ಹವ್ವಳನ್ನು ಮಾಡಿದನು. ಹವ್ವಳು ಮೊದಲು ಕಣ್ಣು ತೆರೆದಾಗ ಆಕೆಯು ಕಂಡ ಮೊದಲ ವ್ಯಕ್ತಿಯೂ ಸಹ ದೇವರು. ಅನುಗ್ರಹ, ನೀನು ಪ್ರತಿದಿನ ನಿನ್ನ ಜೀವಿತದಲ್ಲಿ ಮೊದಲು ನೋಡುವ ವ್ಯಕ್ತಿಯೂ ದೇವರು ತಾನೇ ಆಗಿದ್ದಾನೆ. ಹವ್ವಳು ದೇವರನ್ನು ಕಂಡಾಗ ಆದಾಮನು ಸೃಷ್ಟಿಸಲ್ಪಟ್ಟಿದ್ದಾನೆ ಎಂಬುದು ಹವ್ವಳಿಗೆ ಗೊತ್ತೇ ಇರಲಿಲ್ಲ. ಇದಾದ ನಂತರವೇ ದೇವರು ಆದಾಮ ಮತ್ತು ಹವ್ವಳನ್ನು ತಂದು, ಆಗಲಿ, ಈಗ ನೀವಿಬ್ಬರು ಮದುವೆಯಾಗಿರಿ ಎಂದು ಹೇಳಿದನು.
ಅವರಿಬ್ಬರು ಒಬ್ಬರನ್ನೊಬ್ಬರು ಬಹಳವಾಗಿ ಪ್ರೀತಿಸಿದರು. ಯಾಕೆಂದರೆ, ಅವರು ಮೊದಲು ದೇವರನ್ನು ಕಂಡಿದ್ದರು. ಇಬ್ಬರೂ ದೇವರನ್ನು ಮೊದಲು ಕಾಣುವುದೇ ಮದುವೆಯ ಪ್ರೀತಿಯಲ್ಲಿ ಮುಂದುವರೆಯುವ ಗುಟ್ಟು. ಮತ್ತು ದೇವರು ಆದಾಮನಿಗೆ ಮಾಡಿದ್ದನ್ನೇ ನಿಮಗೂ ಆತನು ಮಾಡಿದನು.
ಸುನೀಲ್, 26 ವರ್ಷಗಳ ಹಿಂದೆ ನೀನು ಹುಟ್ಟಿದಾಗ ನಿನ್ನ ಪೋಷಕರಾಗಿ ನಾವು ಸಂತೋಷಪಟ್ಟೆವು. ಅದ್ಭುತ ಸತ್ಯವೆಂದರೆ ನಿನ್ನ ತಾಯಿ ಮತ್ತು ನಾನು ಮದುವೆಯಾಗುವ ಮುನ್ನವೇ ನಿನ್ನ ಹೆಸರು ಜೀವಭಾಧ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿತು. ನೀನು ಹುಟ್ಟುವ ಮೊದಲೇ ದೇವರು ನಿನ್ನ ಮದುವೆಯ ಬಗ್ಗೆ ಸಹ ಯೋಜನೆ ಮಾಡಿದ್ದನು. ಆದ್ದರಿಂದ ಕೆಲವು ವರ್ಷಗಳ ನಂತರ ನೀನು ಹುಟ್ಟಿದೆ. ಭಾರತದ ಇನ್ನೊಂದು ಭಾಗದಲ್ಲಿ ಈ ಪುಟ್ಟ ಹುಡುಗಿಯ ಜನನವನ್ನು ಒಂದು ಯೋಜನೆಯಿಂದ ದೇವರು ತಂದನು. ಅದನ್ನು ನೀನು ತಿಳಿದಿರಲಿಲ್ಲ. ಮತ್ತು ಅನುಗ್ರಹ ಸಹ ತಿಳಿದಿರಲಿಲ್ಲ. ದೇವರು ಮಹಾ ಜೋಡಿಮಾಡುವವನು ಮತ್ತು ನೀವಿಬ್ಬರೂ ಇದರ ಬಗ್ಗೆ ಏನೂ ತಿಳಿಯದೆ ಇದ್ದಾಗ ನಿಮ್ಮಿಬ್ಬರ ಬಗ್ಗೆ ಈ ಅದ್ಭುತ ಯೋಜನೆಯು ಆತನಲ್ಲಿತ್ತು. ಮತ್ತು ಈ ಸಣ್ಣ ಹುಡುಗಿ ಬೆಳೆಯುವಾಗಲೆಲ್ಲಾ ಎಲ್ಲಾ ಸಮಯದಲ್ಲೂ ಈಕೆಗಾಗಿ ದೇವರ ಮನಸ್ಸಿನಲ್ಲಿ ನೀನು ಇದ್ದೆ. ಮತ್ತು ಒಂದು ದಿನ ಆದಾಮ ಮತ್ತು ಹವ್ವಳನ್ನು ತಂದಂತೆಯೇ ನಿಮ್ಮಿಬ್ಬರನ್ನೂ ಒಟ್ಟಿಗೆ ತಂದನು. ದೇವರು ನಿಮಗೆ ಎಷ್ಟು ಒಳ್ಳೆಯವನಾಗಿದ್ದಾನೆ.
ಆದ್ದರಿಂದ ನಿಮ್ಮಿಬ್ಬರಿಗೆ ನನ್ನ ಪ್ರಾರ್ಥನೆಯು ದೇವರು ನಿಜವಾಗಲೂ ನಿಮ್ಮಿಬ್ಬರ ಜೀವಿತದಿಂದ ಸಂತೋಷಪಡಲಿ. ಮತ್ತು ನೀವು ಆತನಿಗಾಗಿ ಒಂದು ಪವಿತ್ರ ಸ್ಥಳವನ್ನು ನಿಮ್ಮ ಕುಟುಂಬದಲ್ಲಿ ಕಟ್ಟಿರಿ.
ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ. ಆಮೆನ್.