ಒಂದು ಚಿಕ್ಕ ಚರಿತ್ರೆ:- ಈ ದಿನಗಳಲ್ಲಿ ಕೂಡಿ ಬರುವ ಕ್ರೈಸ್ತ ಅನ್ಯೂನ್ಯತೆ ಸಭೆಯು ಆಗಸ್ಟ್ ೧೯೭೫ ರಲ್ಲಿ, ಬೆಂಗಳೂರಿನಲ್ಲಿ ಮೊದಲು ಕೆಲವೇ ಕುಟುಂಬಗಳು ಕೂಡಿ ಬರುವುದರೊಂದಿಗೆ ಪ್ರಾರಂಭವಾಯಿತು. ಮತ್ತಾಯ -೨೮ :೧೮-೨೦ ರಲ್ಲಿನ ಆಜ್ಞೆಗೆ ವಿಧೇಯರಾಗಿ ಅವರು ಮೊದಲು ತಾವು ಕರ್ತನಾದ ಯೇಸುಕ್ರಿಸ್ತನ ಶಿಷ್ಯರಾಗಿ ನಂತರ ಇತರರನ್ನು ಶಿಷ್ಯರನ್ನಾಗಿ ಮಾಡಲು ನಿರ್ಧರಿಸಿದರು. ಹೊಸಹುಟ್ಟನ್ನು, ಆಂತರಿಕ (ಒಳಗಿನ) ಜೀವಿತದಲ್ಲಿ ಪರಿಶುದ್ಧರಾಗಿರುವುದು, ಒಬ್ಬರನ್ನೊಬ್ಬರು ಪ್ರೀತಿಸುವುದು , ನೈತಿಕ ಶುದ್ಧತೆ, ಹಣದ ವ್ಯವಹಾರದಲ್ಲಿ ಪ್ರಾಮಾಣಿಕತೆ, ಮತ್ತು ದೇವರ ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು -ಈ ವಿಷಯಗಳಿಗೆ ಒತ್ತು ಕೊಟ್ಟು ಅವರ (ಕ್ರಿಸ್ತನ ಶಿಷ್ಯರಾಗಿ ಮಾಡಲ್ಪಟ್ಟವರ) ಜೀವಿತದ ಎಲ್ಲಾ ಸಂಗತಿಗಳಲ್ಲಿಯೂ ದೇವರ ವಾಕ್ಯವನ್ನು ಮಾತ್ರ ಆಧಾರವಾಗಿರಿಸಿ ನಿಲ್ಲಿಸುವುದನ್ನೇ ಧ್ಯೇಯವಾಗಿಟ್ಟುಕೊಂಡಿದ್ದೇವೆ.
ಹಣದ ವಿಷಯದಲ್ಲಿ ನಮ್ಮ ನಿಲುವು:
ನಾವು ಮಾಡುವ ಕೆಲಸದ ವಿವರಗಳನ್ನಾಗಲಿ ಹಾಗೂ ಹಣದ ಸಹಾಯಕ್ಕಾಗಿ ವಿನಂತಿಯನ್ನಾಗಲಿ ಇದುವರೆಗೂ ಎಲ್ಲಿಗೂ ಕಳುಹಿಸಿಲ್ಲ. ಸ್ವ ಇಚ್ಛೆಯಿಂದ ಕೊಟ್ಟ ಕಾಣಿಕೆಯನ್ನು ಮತ್ತು ದಾನಗಳನ್ನು - ಕ್ಯಾಸೆಟ್ಗಳು, ಸಿ. ಡಿ, ಪುಸ್ತಕಗಳು ಮತ್ತು ಕೂಟಗಳ ಮುಖಾಂತರ ಸುವಾರ್ತೆಯನ್ನು ಹರಡುವ ಕೆಲಸಕ್ಕೆ ಮಾತ್ರ ಉಪಯೋಗಿಸಲಾಗುತ್ತದೆ. (‘ಹಣದ ಸಹಾಯ’ ಅಂಕಣವನ್ನು ನೋಡಿ.)
ಸಭಾ ಹಿರಿಯರು;-
ಕ್ರೈಸ್ತ ಅನ್ಯೋನ್ಯತೆಯ ಸಭೆಯು ಸಭಾಹಿರಿಯರ ನಾಯಕತ್ವದಲ್ಲಿ ನಡೆಯುತ್ತಿದೆ. ಯಾವ ಹಿರಿಯರೂ ತಮ್ಮ ಕೆಲಸಕ್ಕೆ ಸಂಬಳ ಪಡೆಯುವುದಿಲ್ಲ. ಇದಕ್ಕೆ ಕಾರಣ ಹಣಸಹಾಯ ಪಡೆಯುವುದು ದೇವರ ವಾಕ್ಯಕ್ಕೆ ವಿರುದ್ಧವೆಂದಲ್ಲ. ಬದಲಿಗೆ , ಹಣ ಪಡೆಯುವಂಥಹ ಬಹಳಷ್ಟು ಕ್ರೈಸ್ತ ಸೇವಕರು ಹಣದ ವಿಷಯದಲ್ಲಿ ಹೊಂದಿರುವಂಥಹ ಕೆಟ್ಟ ಸಾಕ್ಷಿಯಿಂದ ಪ್ರತ್ಯೇಕವಾಗಿ ನಿಲ್ಲುವಂಥದ್ದು ನಮ್ಮ ನಿಲುವಾಗಿದೆ.