ನಮ್ಮ ಧ್ಯೇಯ


CFC Pulpit

ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್ (CFC) ನ ಧ್ಯೇಯ (ದೂರದೃಷ್ಟಿ)

ಕರ್ತನು 1975 ರಲ್ಲಿ ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್(CFC)ನ್ನು ಬೆಂಗಳೂರಿನಲ್ಲಿ ನೆಟ್ಟನು. ಆಗ ನಾವು ಕೇವಲ ಕೆಲವೇ ವಿಶ್ವಾಸಿಗಳಾಗಿ ಪ್ರಾರಂಭಿಸಿದೆವು. ನಾವು ಮೊದಲು ಸೇರಿಬರಲು ಪ್ರಾರಂಭಿಸಿದಾಗ ನಮ್ಮನ್ನು ದೇವರು ಏಕೆ ಒಟ್ಟಾಗಿ ಸೇರಿಸಿದ್ದಾನೆಂಬುದು ನಮಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಕ್ರಮೇಣವಾಗಿ ದೇವರು ತನ್ನ ಯೋಜನೆಗಳನ್ನು ನಮಗೆ ಪ್ರಕಟಿಸಿದನು.

ಅದು ಏನೆಂದರೆ: ಹೊಸ ದ್ರಾಕ್ಷಾರಸ (ಯೇಸುವಿನ ಜೀವಿತ ಮತ್ತು ಆತನ ಸಾರೂಪ್ಯ)ವನ್ನು ಒಂದು ಹೊಸ ಬುದ್ದಲಿ (ಹೊಸ ಒಡಂಬಡಿಕೆಯ ರೀತಿಯಲ್ಲಿ ಕ್ರಿಸ್ತನ ದೇಹವಾಗಿ ತೋರಿಸಲ್ಪಡುವ ಸ್ಥಳೀಯ ಸಭೆಯನ್ನು ಕಟ್ಟುವುದಾಗಿದೆ) ಯಲ್ಲಿ ಪ್ರಚುರಪಡಿಸಿ ತೋರಿಸುವುದಾಗಿದೆ.

ಅಂದು ಇದೇ ನಮ್ಮ ಧ್ಯೇಯ (ದೂರದೃಷ್ಟಿ)ವಾಯಿತು.

ನಮ್ಮ ನಿರ್ದಿಷ್ಟ ಕರೆ

ಹಳೆ ಒಡಂಬಡಿಕೆಯಲ್ಲಿ ಪ್ರತಿ ಪ್ರವಾದಿಗೆ ತಾನು ಇಸ್ರಾಯೇಲ್ ಜನರಿಗೆ ಏನನ್ನು ಪ್ರಚುರಪಡಿಸಬೇಕೆಂಬ ಸ್ಪಷ್ಟವಾದ ಧ್ಯೇಯ(ದೂರದೃಷ್ಟಿ)ವನ್ನು ದೇವರು ಕೊಟ್ಟಿದ್ದರು ಮತ್ತು ಈ ಸಂದೇಶವನ್ನು ಮಾತ್ರ ಅವರು ಬೋಧಿಸಿದರು, ಇದನ್ನು ಅವರು ``ಕರ್ತನ ಭಾರ''ವೆಂದು ಕರೆದರು. ಅವರು ತಮಗೆ ದೇವರು ಕೊಟ್ಟ ಎಲ್ಲಾ ಆಜ್ಞೆಗಳನ್ನು ಅರಿತು ತಮ್ಮ ಹೃದಯದಲ್ಲಿ ದೇವರು ಇಟ್ಟಿದ್ದ ಭಾರಕ್ಕೆ ಏಕನಿಷ್ಠರಾಗಿ ನಡೆದರು ಮತ್ತು ಅವರ ಪ್ರಮುಖ ಬಾರ(ಗುರಿ)ದಿಂದ ಎಂದಿಗೂ ಬೇರೆಡೆಗೆ ತಿರುಗಲಿಲ್ಲ.

CFCಯಲ್ಲಿ ಕೂಡ, ಬಾರತದಲ್ಲಿನ ಒಂದು ಸಭೆಯಾಗಿ ದೇವರು ನಮ್ಮ ಪ್ರವಾದನೆಯ ಕರೆಯ ಬಗ್ಗೆ ಸ್ಪಷ್ಟವಾದ ಧ್ಯೇಯ(ದೂರದೃಷ್ಟಿ)ವನ್ನು ಕೊಟ್ಟು ನಮ್ಮನ್ನು ಕರೆದರು ಮತ್ತು ಕಳೆದ ದಶಕಗಳಲ್ಲಿ ನಾವು ಸಾದ್ಯವಾದಷ್ಟು ಮಟ್ಟಿಗೆ ಈ ಕರೆಯಿಂದ ಅಲುಗದಂತೆ ಪ್ರಯತ್ನ ಪಟ್ಟಿದ್ದೇವೆ.

ಕರ್ತನು ಕಳೆದ ಎರಡು ಶತಕಗಳಲ್ಲಿ ಭಾರತ ದೇಶಕ್ಕೆ ಸತ್ಯವೇದದ ಸತ್ಯಗಳನ್ನು ಪ್ರಚುರಪಡಿಸಿ ಅವಿಶ್ವಾಸಿಗಳನ್ನು ಕ್ರಿಸ್ತನ ಕಡೆಗೆ ತರಲು ಹಲವಾರು ಸುವಾರ್ತಾ ಪ್ರಚಾರಕರನ್ನು ಕÀಳುಹಿಸಿ, ಹಲವು ಸುವಾರ್ತಾ ಕೇಂದ್ರ್ರಗಳನ್ನು ನಮ್ಮ ನಾಡಿನಲ್ಲಿ ಎಬ್ಬಿಸಿದ್ದಾರೆ. ನಾವು ಅವರಿಗಾಗಿ ಕರ್ತನಿಗೆ ಸ್ತೋತ್ರ್ರವನ್ನು ಸಲ್ಲಿಸುತ್ತೇವೆ. ಆದರೆ ಭಾರತದಲ್ಲಿ ಇನ್ನೂ ಹಲವು ಹೊಸ ಒಡಂಬಡಿಕೆಯ ಸತ್ಯಗಳನ್ನು ಸಾಕಷ್ಟು ಮಟ್ಟಿಗೆ ಒತ್ತಿ ಹೇಳಲಿಲ್ಲವೆಂದು ನಮಗೆ ಅನ್ನಿಸಿತು.

ಈ ಒತ್ತಿಹೇಳದ ಸತ್ಯಗಳು ಹೊಸ ಒಡಂಬಡಿಕೆಗೆ ಸಂಬಂಧಿಸಿದವುಗಳು: ಅವು ಶಿಷ್ಯತ್ವದ ಷರತ್ತುಗಳು, ದೇವರನ್ನು ತಂದೆಯೆಂದು ತಿಳಿಯುವುದರಿಂದ ಬರುವ ಸುರಕ್ಷಿತ ಮನೋಭಾವ, ಯೇಸು ನಡೆದಂತೆ ಆತನ ಹೆಜ್ಜೆಯ ಜಾಡಿನಲ್ಲಿ ನಡೆಯುವುದು, ಪವಿತ್ರಾತ್ಮನ ಬಲವು ನಮ್ಮೊಳಗಿಂದ ಹರಿಯುವುದು, ದೇವರ ಸಾರೂಪ್ಯವನ್ನು ಹೊಂದುವುದು, ಶಿಲುಬೆಯ ಹಾದಿ, ಅರಿತ ಪಾಪಗಳ ಮೇಲೆ ಜಯ, ಹಣದ ಮೇಲಿನ ಪ್ರೀತಿಯಿಂದ ಮತ್ತು ನಮ್ಮ ಲೌಕಿಕ ಮನೋಭಾವದಿಂದ ಬಿಡುಗಡೆ, ಭಯ ಮತ್ತು ಚಿಂತೆಗಳಿಂದ ಬಿಡುಗಡೆ, ಪರ್ವತ ಪ್ರಸಂಗಕ್ಕೆ (ಮತ್ತಾಯ-5, 6 ಮತ್ತು 7) ಪೂರ್ಣವಿಧೇಯತೆ. ಯೇಸುವಿಗೆ ಮಾಡಿದ್ದೆಲವನ್ನು ನಮಗೂ ದೇವರು ಮಾಡುತ್ತಾನೆಂಬ ನಂಬಿಕೆ, ಸ್ಥಳೀಯ ಸಭೆsಯನ್ನು ದೇಹವಾಗಿ ಕಟ್ಟುವುದು ಇತ್ಯಾದಿ.

-2-

CFC ಯ ಭಾರವು ಈ ಸತ್ಯಗಳನ್ನು ಭಾರತದಲ್ಲಿನ ಕ್ರೈಸ್ತ ಸಭೆಯ ಪ್ರ್ರತಿಯೊಂದು ಸಭೆ ಸಮೂಹಕ್ಕೆ ಸಾರುವುದೇ ಆಗಿದೆ. ಹಲವಾರು ಸಾರ್ವಜನಿಕ ಕೂಟಗಳಿಂದ, ರೇಡಿಯೋ ಪುಸ್ತಕಗಳು ಮತ್ತು ಸಾವಿರಾರು ಕ್ಯಾಸೆಟ್, ಸಿ.ಡಿ./ಡಿ.ವಿ.ಡಿ ಗಳನ್ನು ವಿತರಿಸುವುದರ ಮೂಲಕ ಇದನ್ನು ಮಾಡಲು ದೇವರು ಅವಕಾಶವನ್ನು ಒದಗಿಸಿದರು.

ಆದರೆ ಹಲವು ಸಭೆಗಳ ನಾಯಕರು ನಮ್ಮನ್ನು ಮತ್ತು ನಮ್ಮ ಸಂದೇಶಗಳನ್ನು ವಿರೋಧಿಸಿದರು ಮತ್ತು ನಮಗೆ ತಮ್ಮ ಸಭೆಗಳ ಬಾಗಿಲುಗಳನ್ನು ಮುಚ್ಚಿದರು.

ನಂತರ ದೇವರು ಒಂದು ಅದ್ಭುತವನ್ನು ಮಾಡಿದನು. ಆತನು ನಮಗಾಗಿ ಅಂತರ್ಜಾಲ(ಇಂಟರ್ನೆಟ್)ದ ಬಾಗಿಲನ್ನು ತೆರೆದನು ಮತ್ತು ಆತನು ಒದಗಿಸಿದ ಪೂರ್ಣ ಹ್ಲದಯದ ಹಲವು ಸಹೋದರರ ಮುಖಾಂತರ ನಮ್ಮ ನೂರಾರು ಸಂದೇಶಗಳನ್ನು ಇದರಲ್ಲ್ಲಿ ಹಾಕಿದೆವು. ಇದು ಹಲವಾರು ಸಭೆಗಳಲ್ಲಿನ ವಿಶ್ವಾಸಿಗಳು ಪ್ರ್ರತಿಕ್ರಿಯೆಗಳು ನಮಗೆ ಹರಿದು ಬರುವಂತೆ ಮಾಡಿತು - ಭಾರತ ದೇಶದಿಂದ ಮಾತ್ರವಲ್ಲ, ವಿದೇಶಗಳಿಂದಲೂ ಕೂಡ – ಈ ಸಂದೇಶಗಳನ್ನು ಕೇಳಿದವರ ವೈಯುಕ್ತಿಕ ಜೀವಿತ ಮತ್ತು ಕುಟುಂಬ ಜೀವಿತಗಳು ಬದಲಾದವು ಮತ್ತು ಇದರಿಂದ ಹೊಸ ಸಭೆಗಳು ಹುಟ್ಟಿದÀವು – ಅವರಲ್ಲಿ ಕೆಲವರು CFC ಯ ಜೊತೆ ಹತ್ತಿರದ ಸಂಬಂಧವನ್ನು ಇಟ್ಟುಕೊಳ್ಳಲು ಬಯಸಿದರು.

ಹೀಗೆ ದೇವರ ಸತ್ಯವು, ನಮಗೆ ಬಾಗಿಲನ್ನು ಮುಚ್ಚಿದ ಸಭಾಪಾಲಕರನ್ನು ಮೀರಿ ಅವರ ಸಭೆಯಲ್ಲಿದ್ದ ಹಸಿದ ಸದಸ್ಯರನ್ನು ಮುಟ್ಟಿತು. ಇಂದು ಲೋಕಾದ್ಯಾಂತ ಅನೇಕ ಸಭೆಗಳಲ್ಲಿ ಈ ಅದ್ಭುತ ಸತ್ಯಗಳಲ್ಲಿ ನೆಲೆಗೊಂಡು ಅವುಗಳನ್ನು ಇತರರಿಗೆ ಭೋದಿಸುತ್ತಿರುವ ಅನೇಕ ವಿಶ್ವಾಸಿಗಳಿದ್ದಾರೆ. ನಾವು ಇದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ಯಾಕಂದರೆ ನಾವು ಬಯಸಿದ್ದೂ ಮತ್ತು ಪ್ರಾರ್ಥಿಸಿದ್ದೂ ಇದಕ್ಕಾಗಿಯೇ. ಹೀಗೆ CFC ಯನ್ನು ದೇವರು ಎಬ್ಬಿಸಿದ ಉದ್ದೇಶವನ್ನು ಸ್ವಲ್ಪಮಟ್ಟಿಗೆ ನಾವು ನೋಡುವಂತಾಯಿತು. ದೇವರ ಮಾರ್ಗಗಳು ನಿಜವಾಗಿ ಅದ್ಭುತವಾದವುಗಳು ನಾವು ನಮ್ಮ ಸ್ವಾರ್ಥವನ್ನು ಹುಡುಕದೆ ದೇವರ ಮಹಿಮೆಯನ್ನು ಮಾತ್ರ ಹುಡುಕುವುದಾದರೆ, ಆತನು ಅದ್ಭುತ ಕಾರ್ಯಗಳನ್ನು ನಡೆಸುವನಾಗಿದ್ದಾನೆ.

ಪ್ರತಿಯೊಬ್ಬನು ದೊಷರಹಿತನನ್ನಾಗಿ ಕ್ರಿಸ್ತನಿಗೆ ಒಪ್ಪಿಸುವುದೇ ತನ್ನ ಗುರಿಯು ಎಂದು ಪೌಲನು ಹೇಳಿದನು – ಇದರ ಸಲುವಾಗಿ ಆತನು ಪ್ರಯಾಸಪಟ್ಟನು (ಕೊಲೊ. 1:28, 29). ಅದೇ ನಮ್ಮ ಗುರಿಯು ಆಗಿದೆ. CFC ಯಲ್ಲಿ ಪ್ರತಿಯೊಬ್ಬರನ್ನೂ ಮೊದಲು ಶಿಷ್ಯರನ್ನಾಗಿ ಮಾಡಲು ಪ್ರಯಾಸಪಡುತ್ತೇವೆ – ಯಾರು ತನ್ನ ಬಂಧುಗಳಿಗಿಂತ, ತನಗಿಂತ ಮತು ್ತ ತನ್ನ ಸ್ವತ್ತಿಗಿಂತಲೂ ಹೆಚ್ಚಾಗಿ ಯೇಸುವನ್ನು ಪ್ರೀತಿಸುತ್ತಾನೋ ಆತನೇ ನಿಜವಾದ ಶಿಷ್ಯನು (ಲೂಕ 14:26, 27 ಮತ್ತು 33). ನಚಿತರ ಅವರೆಲ್ಲರಿಗೆ ಯೇಸುವು ಆಜ್ಞಾಪಿಸಿದ್ದೆಲ್ಲದಕ್ಕೆ ವಿಧೇಯರಾಗಲು ಕಲಿಸುತ್ತೇವೆ (ಮತ್ತಾಯ 28:20).

ಇದೇ ಇಕ್ಕಟ್ಟಾದ ಮಾರ್ಗವಾಗಿದೆ, ಮತ್ತು ಇದನ್ನು ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿದೆ. ಯೇಸುವಿನ ಸಭೆಯಲ್ಲಿ ಕೂಡ ಹನ್ನೆರಡರಲ್ಲಿ ಒಬ್ಬನು ಕಪಟಿಯಾಗಿ ಅವರ ಮಧ್ಯೆ ಕುಳಿತಿದ್ದನೆಂಬುದು ಕೂಡ ನಮಗೆ ತಿಳಿದಿದೆ. ಆದ್ದರಿಂದ CFC ಯಲ್ಲಿ ಕೂಡ ಕ್ರಿಸ್ತನು ಬರುವವರೆಗೆ ಕಪಟಿಗಳಿರುತ್ತಾರೆಂದು ನಾವು ನಂಬುತ್ತೇವೆ. ಆದರೆ ಸಾದ್ಯವಾದಷ್ಟು ಮಟ್ಟಿಗೆ ನಮ್ಮ ಬೋಧನೆಯ ವಾಕ್ಯದ ಮೂಲಕ ಯಾವಾಗಲೂ ಅಂಥಹ ಕಪಟಿಗಳ ಮನಸ್ಸಾಕ್ಷಿಯು ಚುಚ್ಚಿ ಮತ್ತು ಇರುವುದಕ್ಕೆ ಕಷ್ಟವಾಗುವಂತೆ ನೋಡಿಕೊಳ್ಳುತ್ತೇವೆ – ಮತ್ತು ಅಂತಹವರು ಮಾನಸಾಂತರ ಹೊಂದುತ್ತಾರೆಂದು ನಿರೀಕ್ಷಿಸುತ್ತೇವೆ.

-3-

ಸುವಾರ್ತಾ ಪ್ರಚಾರ ಮತ್ತು ಶಿಷ್ಯರನ್ನು ಮಾಡುವದು.

CFCಯಲ್ಲಿ ಎಲ್ಲಾ ವಿಶ್ವಾಸಿಗಳು ವೈಯಕ್ತಿಕವಾಗಿ ಇತರರೊಡನೆ ಸುವಾರ್ತೆಯನ್ನು ಸಾರಲು ಪ್ರೋತ್ಸಾಯಿಸುತ್ತೇವೆ. ಹೀಗೆ ಹಲವರು ಕ್ರಿಸ್ತನ ಬಳಿಗೆ ಬಂದು ಕಳೆದ ವರ್ಷಗಳಲ್ಲಿ ನಮ್ಮ ಸಭೆಯನ್ನು ಸೇರಿರುತ್ತಾರೆ. ಹಾಗೆ ದೇವರು ಭಾರತದ ಹಲವು ಪಟ್ಟಣ ಮತ್ತು ಹಳ್ಳ್ಳಿಗಳಲ್ಲಿ ಹಾಗೂ ಪ್ರಪಂಚದ ಹಲವು ಭಾಗಗಳಲ್ಲಿ ಸಹ ಸಭೆಗಳನ್ನು ನೆಟ್ಟಿದ್ದಾರೆ.

CFC ಯಲ್ಲಿ ನಮಗೆ ದೇವರಿಂದ ನಿರ್ದಿಷ್ಟ ಕರೆ ಇರುವುದರಿಂದ ನಮ್ಮ ಮುಖ್ಯ ಕರೆಯಿಂದ ವಿಚಲಿತರಾಗಿ ಬೇರೆ ಯಾವುದೇ ಸೇವೆಗಳಲ್ಲಿ (ಅಂದರೆ ಸಮಾಜ ಸೇವೆ ಇತ್ಯಾದಿ) ತೊಡಗಿಸಿಕೊಂಡು ನಮ್ಮ ಶಕ್ತಿಯನ್ನು ವ್ಯಯ ಮಾಡಲು ಬಯಸುವುದಿಲ್ಲ. ಕಡೆಯ ದಿನದಲ್ಲಿ ನಮ್ಮ ಬಗ್ಗೆ "ನೀವು ಕರ್ತನು ನಿಮಗೆ ಅನುಗ್ರಹಿಸಿದ ತೊಟವನ್ನು ಬಿಟು ್ಟ ಬೇರೆ ಜನರ ತೊಟದಲ್ಲಿ ಕಾಳಜಿವಹಿಸಿದಿರಿ" (ಪರಮ ಗೀತೆ 1:6 ನ್ನು ನೋಡಿ) ಎಂದು ಹೇಳಲ್ಪಡಬಾರದು. ಕರ್ತನು ತನ್ನ ಪ್ರತಿ ಮಕ್ಕಳಿಗೆ ಪ್ರತ್ಯಕವಾದ ಕರೆಯನ್ನು ಇಟ್ಟಿರುವುದನ್ನು ಅರಿತು, ಇತರೆ ಸೇವೆಗಳನ್ನು ದೇವರು ಕರೆದ ಪ್ರಕಾರ ಇತರರು ಮಾಡಲೆಂದು ಬಿಟ್ಟುಬಿಡುತ್ತೇವೆ. ಹಲವಾರು ಸೇವೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇತರ ವಿಶ್ವಾಸಿಗಳ ದೃಷ್ಠಿಯಲ್ಲಿ `ಸಮತೋಲನ' ಹೊಂದಿದವರು ಎಂದು ಕಾಣಿಸಿಕೊಳ್ಳಬೇಕೆಂಬ ಆಶೆಯು ನಮ್ಮಲ್ಲಿಲ್ಲ. ನಮಗೆ ದೇವರ ಕರೆ ಮತ್ತು ಮೆಚ್ಚಿಗೆ ಮಾತ್ರ ಮುಖ್ಯವಾಗಿದೆ.

ನಾವು ಬೆಳೆಯುತ್ತಿರುವ ಸಭೆಯಾಗಿರುವುದರಿಂದ, ನಮ್ಮನ್ನು ಸೇರಿರುವ ಹೊಸ ವಿಶ್ವಾಸಿಗಳ ಮತ್ತು ನಮ್ಮ ಮಧ್ಯೆ ಬೆಳೆದ ಮಕ್ಕಳ ಮೇಲೆ ನಮಗೆ ಬಹಳ ಮಹತ್ವದ ಜವಾಬ್ದಾರಿಯಿದೆ. ಅವರೆಲ್ಲರನ್ನೂ ಶಿಷ್ಯರನ್ನಾಗಿ ಮಾಡಬೇಕಿದೆ. ಹೊಸದಾಗಿ ಪರಿವರ್ತನೆ ಹೊಂದಿದವರು ಮತ್ತು ಬೆಳೆಯುತ್ತಿರುವ ಮಕ್ಕಳು ಆರೋಗ್ಯಕರ ಮತ್ತು ಬೆಳೆಯುತ್ತಿರುವ ಸಭೆಯ ಎರಡು ಚಿನ್ಹೆಗಳಾಗಿವೆ. ದೇವರು ನಮ್ಮ ಮಧ್ಯೆ ತಂದ ಹೊಸ ವಿಶ್ವಾಸಿಗಳು ಮತ್ತು ನಮ್ಮ ಮಧ್ಯೆ ಬೆಳೆದ ಮಕ್ಕಳೇ ಇಂದು ನಮ್ಮ ಹೊಸ ಕಾರ್ಯಕ್ಷೇತ್ರಗಳಾಗಿದ್ದಾರೆ.

ದೇವರು ಮತ್ತು ಹಣ

ಹಣ ಮತ್ತು ದೇವರು ಇಬ್ಬರನ್ನೂ ಒಟ್ಟಿಗೆ ಸೇವೆ ಮಾಡುವುದು ಅಸಾಧ್ಯಾವೆಂದು ಯೇಸು ಹೇಳಿದ್ದರಿಂದ (ಲೂಕ 16:3), ನಾವು CFC ಯಲ್ಲಿ ಹಣದ ವಿಯಷಯದಲ್ಲಿ ಗಂಭೀರವಾದ ಮನೋಭಾವವನ್ನು ಅನುಸರಿಸಿದೆವು ಮತ್ತು ನಾವು ದೇವರನ್ನು ಮಾತ್ರ ಸೇವೆ ಮಾಡುವುದಾಗಿ ನಿರ್ದೇರಿಸಿದೆವು. ಈ ವಿಷಯದಲ್ಲಿ ನಾವು ಸಂಪೂರ್ಣವಾಗಿ ದೋಷ(ಅವಮಾನ) ಮುಕ್ತರಾಗಿರಬೇಕೆಂದು ಹಣಕ್ಕೆ ಸಂಬಂಧಿಸಿದಂತೆ ನಮ್ಮ ಸೇವೆಯಲ್ಲಿ ಈ ಕೆಲವು ಪ್ರಾಯೋಗಿಕ ನಿರ್ಧಾರಗಳನ್ನು ಮಾಡಿದೆವು: ನಮ್ಮ ಕೂಟಗಳಲ್ಲಿ ಯಾವುದೇ ಕಾಣಿಕೆಯನ್ನು ಸ್ವೀಕರಿಸುವುದಾಗಲೀ, ಪ್ರಸಂಗಿಗಳಿಗೆ ಹÀಣವನ್ನು ಕೊಡುವ ಪದ್ಧತಿಯನ್ನು ಅನುಸರಿಸದಿರಲು ನಿರ್ಧರಿಸಿದೆವು. ಹಳೆ ಒಡಂಬಡಿಕೆಯ ನಿಯವiವಾದ ದಶಾಂಶ ಪದ್ದತಿಯ ವಿರೋಧವಾಗಿ ಬೋಧಿಸಿದೆವು. ಕರ್ತನ ಸೇವೆಗಾಗಿ ಕೊಡುವಂತ ಹಣವನ್ನು ಸ್ವ-ಇಚ್ಚೆಯಿಂದ ಸಂತೋಷದಿಂದ ಮಾಡಬೇಕೆಂದು ಕಲಿಸಲು ಪ್ರಾರಂಭಿಸಿದೆವು. ಹಣವನ್ನು ಕೊಡಲು ಯಾವುದೇ ರೀತಿಯ ಒತ್ತಾಯವನ್ನು ಯಾರ ಮೇಲೂ ಹಾಕಲಿಲ್ಲ. ಯಾರಿಗೂ ನಮ್ಮ ಸೇವೆಯ ವಿಷಯವಾಗಿ ಯಾವುದೇ ರೀತಿಯ ವರದಿಯಾಗಲಿ ಮತ್ತು ನಮ್ಮ ಸಭೆಯ ಯಾವುದೇ ಹಣದ ಅವಶ್ಯಕತೆಯನ್ನು ಇತರರಿಗೆ ತಿಳಿಸಲಿಲ್ಲ. ಯಾರಿಗೂ ವರದಕ್ಷಿಣೆಯನ್ನು ಕೊಡುವುದರ ಮತ್ತು ಸ್ವೀಕರಿಸುವುದರ ವಿರುದ್ಧವಾಗಿ ನಿಂತೆವು ಮತ್ತು ಪ್ರತಿಯೊಬ್ಬರೂ ಸಾಲದಿಂದ ಬಿಡುಗಡೆ ಹೊಂದಿ ಜೀವಿಸುವಂತೆ ಪ್ರೋತ್ತಾಯಿಸಿದೆವು (ರೋಮ. 13:8).

-4-

ದೇವರ ಕೃಪೆಯಿಂದ ಪ್ರಾರಂಭದಿಂದಲೂ ಈ ಹೊಸ ಒಡಂಬಡಿಕೆಯ ಮಟ್ಟವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ. ಈ ವಿಷಯಗಳ ಬಗ್ಗೆ ನಾವು ಬಲವಾಗಿ ನಿಂತಿದ್ದರಿಂದ ಹಲವಾರು ಕ್ರೈಸ್ತ ಗುಂಪುಗಳು ಮತ್ತು ಸಭೆಗಳಿಂದ ವಿರೋಧ ಮತ್ತು ಖಂಡನೆಗಳನ್ನು ಎದುರಿಸಿದೆವು ಆದರೆ ನಾವು ಯಾವುದಕ್ಕಾಗಿ ನಿಂತಿದ್ದೇವೆಂದು ನಮಗೆ ತಿಳಿದಿದೆ - ಮತ್ತು ಇನ್ನು ಮುಂದೆ ಕೂಡ ಕರ್ತನ ಬರೋಣದವರೆಗೆ ಈ ಸಿದ್ದಾಂತಗಳಿಗೆ ದೃಡವಾಗಿ ಅಲುಗದೆ ನಿಲ್ಲುತ್ತೇವೆ.

ಅಪೋಸ್ತಲನಾದ ಪೌಲನಂತೆ ನಮ್ಮ ಎಲ್ಲಾ ಸಭೆಗಳ ಹಿರಿಯರು ಆರ್ಥಿಕವಾಗಿ ಸ್ವತಃ ತಮಗೆ ತಾವೇ ಆದಾರ ಮಾಡಿಕೊಂಡಿದ್ದಾರೆ. ಪೌಲನು ವಿರಳವಾಗಿ ಕೆಲವು ವಿಶ್ವಾಸಿಗಳಿಂದ ಕಾಣಿಕೆಯನ್ನು ಸ್ವೀಕರಿಸಿದನು. ಆದರೆ ತನ್ನ ವೈಯುಕ್ತಿಕ ಅವಶ್ಯಕತೆಗಳಿಗಾಗಿ ಅಥವಾ ತನ್ನ ಸೇವೆಗಾಗಿ ಯಾರ ಕಾಣಿಕೆಯ ಮೇಲೆ ಆತುಕೊಂಡಿರಲಿಲ್ಲ. ಅದೆಲ್ಲ್ಲದಕ್ಕಾಗಿ ಪರಲೋಕ ತಂದೆಯನ್ನು ಮಾತ್ರ ನಂಬಿದ್ದನು. ಇದೇ ನಿಲುವನ್ನು ನಾವು ಕೂಡ ತೆಗೆದುಕೊಂಡಿರುವುದು – ಮತ್ತು ಇದು ನಮ್ಮ ತೊರೆಯಲಾರದ ಧ್ಯೇಯ(ದೂರದೃಷ್ಟಿ)ವಾಗಿದೆ.

ಕರ್ತನು ತಾನೇ ನೇಮಿಸಿದಂತೆ, ಸುವಾರ್ತೆಯನ್ನು ಸಾರುವವನು ಸುವಾರ್ತೆಯಿಂದಲೇ ಜೀವನ ಮಾಡಬೇಕು (1 ಕೊರಿಂಥ. 9:14), ಆದ್ದರಿಂದ ಕರ್ತನ ಸೇವೆಯಲ್ಲಿ ತೊಡಗಿರುವವರು ತಮ್ಮ ಖರ್ಚು ವೆಚ್ಚಗಳಿಗೆ ಇತರರನ್ನು ಅವಲಂಬಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಪೌಲನು, ತನ್ನ ಸಮಯದಲ್ಲಿ ಅನೇಕ ಪ್ರಸಂಗಿಗಳು ತಮ್ಮ ಆತ್ಮೀಕ ವರಗಳನ್ನು ತಾವು ಶ್ರೀಮಂತರಾಗಲು ಬಳಸಿ ಕರ್ತನ ಹೆಸರಿಗೆ ಅವಮಾನವನ್ನು ಉಂಟು ಮಾಡುತಿದ್ದುದ್ದನ್ನು ನೋಡಿ ತಾನು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದನು, ಹೀಗೆ ಇಂಥಹ ಭ್ರಷ್ಟತೆಯ ಮದ್ಯದಲ್ಲಿ ತಾನು ಕರ್ತನಿಗಾಗಿ ಶುದ್ದ ಸಾಕ್ಷಿಯಾಗಿರಲು ಬಯಸಿದನು.

ಭಾರತದಲ್ಲಿ ಕೂಡ ನಾವು ಇಂಥಹದೇ ಪರಿಸ್ಥಿತಿಯನ್ನು ನೋಡಿದೆವು. ಆದ್ದರಿಂದ ಕರ್ತನಿಗಾಗಿ ನಮ್ಮ ನಾಡಿನಲ್ಲಿ ಕರ್ತನಿಗಾಗಿ ಉತ್ತಮ ಸಾಕ್ಷಿಗಳಾಗಿದ್ದು ಹಣದ ವಿಷಯದಲ್ಲಿ ನಮ್ಮ ಸುತ್ತಲಿದ್ದ ಭ್ರಷ್ಟ ಪ್ರಸಂಗಿಗಳಿಂದ ವ್ಯತ್ಯಾಸಸವಾಗಿರಬೇಕೆಂದು ಬಯಸಿ, CFC ಯಲ್ಲಿ ಕೂಡ ಪೌಲನಂತೆ ಇರಬೇಕೆಂಬ ಅವಶ್ಯಕತೆಯನ್ನು ಕಂಡುಕೊಂಡೆವು. ಈ ನಮ್ಮ ನಿಲುವಿನಿಂದ ನಮ್ಮನ್ನು ಸೇರಿಕೊಂಡು ಕರ್ತನ ಸಾಕ್ಷಿಯನ್ನು ಕೆಡಿಸಬಹುದಾಗಿದ್ದ ಹಲವಾರು ಬೀಳಾಮರು, ಗೆಹೆಜೀಯರು ಮತ್ತು ದೇಮರಿಂದ ರಕ್ಷಿಸಲ್ಪಟ್ಟೆವು.

ನಾವು CFC ವಿಶ್ವಾಸಿಗಳಿಗೆ ತಮ್ಮ ವೈಯುಕ್ತಿಕ ಹಣವನ್ನು ಹೇಗೆ ಉಪಯೋಗಿಸಬೇಕೆಂದು ಹೇಳುವುದಿಲ್ಲ. ಅವರು ಸ್ವತಂತ್ರವಾಗಿ ಅದೆಲ್ಲವನ್ನೂ ಅನಾಥಾಲಯಕ್ಕೆ ಅಥವಾ ಬೀದಿಯಲ್ಲಿರುವ ಭಿಕ್ಷುಕರಿಗೆ ಕೊಡುವುದರಲ್ಲಿಯೂ ಉಪಯೋಗಿಸಬಹುದು. ಆದರೆ CFC ಯಲ್ಲಿ ಸ್ವೀಕರಿಸಿದ ಕಾಣಿಕೆಗಳನ್ನು, ಕರ್ತನು ನಮಗೆ ಕೊಟ್ಟಿರುವ ಧ್ಯೇಯದ ಮೇರೆಗೆ ಶಿಷ್ಯರನ್ನು ಮಾಡುವುದರಲ್ಲಿಯೂ ಮತ್ತು ಬಡ ವಿಶ್ವಾಸಿಗಳಿಗೆ ಸಹಾಯ ಮಾಡುವುದಲ್ಲಿಯೂ (ಗಲಾತ್ಯ. 6:10) ಉಪಯೋಗಿಸುತ್ತೇವೆ.

-5-

ಸೇವೆಗಳು, ಬಿರುದುಗಳು ಮತ್ತು ಅಧಿಕಾರ

p>ಸೇವೆಗಳು:-: ಎಫೆಸ 4:11 ಹೇಳುವುದೇನೆಂದರೆ, ಕ್ರಿಸ್ತನು ತನ್ನ ಸಭೆಗೆ- ಆತ್ಮಿಕ ವರಗಳಿಂದ ಸಂಪನ್ನರಾದ ಅಪೋಸ್ತಲರು, ಪ್ರವಾದಿಗಳು, ಸೌವಾರ್ತಿಕರು, ಶಿಕ್ಷಕರು ಮತ್ತು ಸಭಾಪಾಲಕರನ್ನು ಕೊಟ್ಟಿದ್ದಾನೆ. ಕರ್ತನು ತನ್ನ ಒಳ್ಳೆತನದಲ್ಲಿ ಈ ಎಲ್ಲಾ ಐದು ಸೇವೆಗಳನ್ನು CFC ಸಭೆಗೆ ಕೊಟ್ಟಿದ್ದಾನೆ.

ಆದರೆ ನಾವು ಯಾವುದೇ ಸಹೋದರನನ್ನು ಈ ಬಿರುದಿನಿಂದಾಗಲಿ, ಶಿರೋನಾಮೆಯಿಂದಾಗಲಿ ಗುರುತಿಸುವುದಿಲ್ಲ ಅಥವಾ ಕರೆಯುವುದಿಲ್ಲ. (ಪೌಲನು ತನ್ನನ್ನು `ಅಪೊಸ್ತಲನು' ಎಂದು ಕರೆದುಕೊಂಡುದು ಏಕೆಂದರೆ ತಾನು ಬರೆದ ದೇವರ ವಾಕ್ಯವನ್ನು ಜನರು ಅಂಗೀಕರಿಸಲಿ, ಎಂದು. ಆದರೆ ಅಂಥಹ ಅವಶ್ಯಕತೆ(ಪರಿಸ್ಥಿತಿ) ಇಂದು ಯಾರಿಗೂ ಇಲ್ಲ)

ಈ ಐದು ಸೇವೆಗಳ ಉಪಯೋಗ(ಬಳಕೆ)ವನ್ನು ನಾವು ಮನಗಂಡಿದ್ದೇವೆ. ಮತ್ತು ನಮ್ಮ ಮಧ್ಯದಲ್ಲಿ ಈ ಸೇವೆಗಳ ಬಳಕೆಯ ಮೂಲಕ ಮಹಿಮೆಯುಳ್ಳ ಫಲಿತಾಂಶವನ್ನು ಸಹ ಕಂಡಿದ್ದೇವೆ. ಇದು ನಮ್ಮ ದೃಷ್ಠಿಯಲ್ಲಿ ಬಹಳ ಮುಖ್ಯವಾದ ವಿಷಯ; ಈ ಪ್ರತಿ ಸೇವೆಯನ್ನು ಯಾರು ನೆರವೇರಿಸುತ್ತ್ತಾರೆಂಬುದಲ್ಲ. ಯಾಕಂದರೆ ನಾವೆಲ್ಲರೂ ಒಂದೇ ದೇಹವಾಗಿದ್ದು ಒಬ್ಬರಿಗೊಬ್ಬರು ಸೇವೆ ಮಾಡುವವರಾಗಿದ್ದೇವೆ.

ಶಿರೋನಾಮೆಗಳು (ಬಿರುದುಗಳು):- ಮತ್ತಾಯ. 23:8,11) ರಲ್ಲಿ ನಾವು ಬಳಸಲು ಕರ್ತನು ಅನುಮತಿಸಿರುವ ಬಿರುದುಗಳೆಂದರೆ - `ಸಹೋದರ' ಮತ್ತು `ಸೇವಕ' ಮಾತ್ರ, ಆದ್ದರಿಂದ ನಾವೆಲ್ಲರೂ `ಸಹೋದರರು' ಮತ್ತು `ಸೇವಕರು' ಆಗಿರಬೇಕಾಗಿದೆ.

ಯೇಸು ಹೇಳಿದ್ದೇನೆಂದರೆ. ``ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ- `ನಾವು ಆಳುಗಳು, ಪ್ರಯೋಜನವಿಲ್ಲದವರುಮಾಡಬೇಕಾದದ್ದನ್ನೇ ಮಾಡಿದ್ದೇವೆ' ಅನ್ನಿರಿ'' (ಲೂಕ. 17:10 ನೋಡಿರಿ)). ನಾವೆಲ್ಲರೂ ಬಯಸಬೇಕಾದ ಬಿರುದು ಇದೇ ಆಗಿರಬೇಕು.

ಅಧಿಕಾರಕ್ಕೆ ಒಳಗಾಗುವುದು:- - ಇಬ್ರಿಯ. 13:17 ರಲ್ಲಿ ಸತ್ಯವೇದವು, ``ನಿಮ್ಮ ನಾಯಕರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ'' ಎಂದು ಭೋದಿಸುತ್ತದೆ. ಆದಕಾರಣ, ಯಾರೆಲ್ಲಾ CFC ಸಭೆಯ ಭಾಗವಾಗಿರಲು ಬಯಸುತ್ತಾರೋ ಅವರಿಗೆಲ್ಲಾ ಸಭೆಗೆ ಸಂಬಂದಿಸಿದ ವಿಷಯಗಳಲ್ಲಿ, ಸ್ಥಳೀಯ ಸಭಾನಾಯಕರಿಗೆ ಅಧೀನರಾಗಿರಲು ಅಂದರೆ, ಈ ರೀತಿ ದೇವರ ಆಜ್ಷೆಗೆ ವಿಧೇಯರಾಗಲು ಬೋಧಿಸುತ್ತೇವೆ. ಈ ರೀತಿ ಮಾಡಲು ನಾವು ಯಾರಿಗೂ ಒತ್ತಾಯಿಸುವುದಿಲ್ಲ, ಯಾಕಂದರೆ, ಸ್ವತಃ ತಾವೇ ಅಧಿಕಾರಕ್ಕೆ ಒಳಪಡುವುದರಲ್ಲಿ ಬೆಲೆಯಿದೆ.

ಬೇರೆ ಸಭೆಗಳಲ್ಲಿ ಜನರು - ಪೋಪ್ ಅಥವಾ ಪಾದರಿ ಅಥವಾ ಸಭಾಹಿರಿಯರಿಗೆ ಅಧೀನರಾಗುವಂತೆ ಒತ್ತಾಯಿಸಲ್ಪಡುತ್ತಾರೆ. ಆದರೆ ಅಈಅ ಸಭೆಯಲ್ಲಿ ಈ ಅಧಿಕಾರವನ್ನು ಯಾರ ಮೇಲೂ ಹೇರುವುದಿಲ್ಲ. ನಾವು ವಿಶ್ವಾಸಿಗಳಿಗೆ, ಅವರು ಯಾರಿಗೆ ಅಧೀನರಾಗಲು ಬಯಸುತ್ತಾರೋ, ಅವರಿಗೇ ಅಧೀನರಾಗುವಂತೆ ಆರಿಸಿಕೊಳ್ಳಲು ಸ್ವಾತಂತ್ರ್ಯ ಕೊಡುತ್ತೇವೆ. ಅವರು ವೈಯುಕ್ತಿಕವಾಗಿ, ತಮಗೆ ಯಾರ ಮೇಲೆ ಭರವಸೆ ಇದೆಯೋ ಅವರಿಗೆ ಅಧೀನರಾಗಲು ಆರಿಸಿಕೊಳ್ಳಬಹುದಾಗಿದೆ. ಯಾಕೆಂದರೆ, ತಮ್ಮ ಆ ಅಧೀನತೆಯ ಮೂಲಕ ಬರುವ ಜ್ಞಾನ ಮತ್ತು ಸಂರಕ್ಷಣೆಯು ಅವರಿಗೆ ಬೇಕಾಗಿದೆ. ವಿಶ್ವಾಸಿಗಳಿಗೆ ಒಬ್ಬ ನಾಯಕನಲ್ಲಿ ಭರವಸೆಯು ಹೇಗೆ ಬೆಳೆಯುತ್ತದೆಂದರೆ ಅವರು ಆತನು ಹೇಗೆ ಜೀವಿಸುತ್ತಾನೆ, ಹೇಗೆ ತನ್ನ ಕುಟುಂಬವನ್ನು ಕರ್ತನಲ್ಲಿ ಬೆಳೆಸುತ್ತಿದ್ದಾನೆ ಮತ್ತು ಹೇಗೆ ದೇವರು ಆತನ ಸೇವೆಗೆ ಸಾಕ್ಷಿಯಾಗಿದ್ದಾರೆ ಎಂಬುವುಗಳನ್ನು ಗಮನಿಸಿದಾಗ.

ಅಪೊಸ್ತಲರ ಕೃತ್ಯಗಳಲ್ಲಿ ನೋಡುವಂತೆ, ಎಲ್ಲಾ ಹೊಸ ವಿಶ್ವಾಸಿಗಳು ಸ್ಥಳೀಯ ಸಭೆಗಳಿಗೆ ಸೇರಿಸಲ್ಪಟ್ಟರು. ಆಗ ಅಪೋಸ್ತಲರು ಪ್ರತಿಸಭೆಯ ಮೇಲೆ ಸಭಾಹಿರಿಯರನ್ನು(ಬಹುವಚನ) ನೇಮಿಸಿದರು (ತೀತ. 1:5). ಪ್ರತೀ ಸಭೆಯು ಕಡಿಮೆಯೆಂದರೆ ಇಬ್ಬರು ಹಿರಿಯರನ್ನಾದರೂ ಹೊಂದಿತ್ತು. ಯಾಕಂದರೆ, ಅವರು ಸಭೆಯ ಸೇವೆಗೆ ಸಮತೋಲನ ಒದಗಿಸಲೆಚಿದು; ಈ ನಾಯಕರು ಆತ್ಮೀಕ ತಂದೆಗಳಾಗಿದ್ದು, ವಿಶ್ವಾಸಿಗಳನ್ನು ಪಾಲಿಸುವಂಥ ಕುರುಬರಾಗಿದ್ದರು ಮತ್ತು ಅವರು ಪ್ರೌಢತ್ವಕ್ಕೆ ಬೆಳೆಯುವಂತೆ ಸಹಾಯ ಮಾಡುವವರಾಗಿದ್ದರು. ಈ ನಾಯಕರು ಸ್ವತಃ ತಾವು ಸಹ ಮತ್ತೊಬ್ಬ ಅಪೋಸ್ತಲರಿಂದ ಮಾರ್ಗದರ್ಶನ ಹೊಂದುವವರಾಗಿದ್ದು, ಅಪೊಸ್ತಲರಿಲ್ಲದೆ ಇರುವಾಗ ಬೇರೆ ಹಲವು ಪ್ರೌಢ ನಾಯಕರಿಂದ ನಡೆಸಲ್ಪಡುವವರಾಗಿದ್ದರು (ಮಾರ್ಗದರ್ಶನ ಹೊಂದುವವರಾಗಿದ್ದರು). ಈ ಹೊಸ ಒಡಂಬಡಿಕೆಯ ಸಭೆಯ ಮಾದರಿಯನ್ನೇ ನಮ್ಮ CFC ಗೆ ಸೇರಿದ ಇತರ ಎಲ್ಲಾ ಸಭೆಗಳಲ್ಲೂ ನಾವು ಅಭ್ಯಾಸಿಸುವರಾಗಿದ್ದೇವೆ.

ವಿಶ್ವಾಸಿಗಳ ಮತ್ತು ಸಭಾ ಹಿರಿಯರ ತಿದ್ದುವಿಕೆ:- ಎಲ್ಲಾ ಒಳ್ಳೆಯ ಕುಟುಂಬಗಳಲ್ಲೂ ತಂದೆಯರು ಅಗತ್ಯವಿದ್ದಾಗ ತಮ್ಮ ಮಕ್ಕಳನ್ನು ಶಿಸ್ತಿಗೆ ಒಳಪಡಿಸುತ್ತಾರೆ. ಅಈಅ ಗೆ ಸಂಬಂಧಪಟ್ಟ ಸಭೆಗಳಲ್ಲೂ ಸಹ, ಪಾಪದಲ್ಲಿ ನಡೆಯುತ್ತಿರುವ ಯಾರನ್ನಾದರೂ ಶಿಸ್ತಿಗೆ ಒಳಪಡಿಸುವುದರಲ್ಲಿ ನಾವು ನಂಬುತ್ತೇವೆ (ಮತ್ತಾಯ 18:15-17 ರಲ್ಲಿ ಹೇಳಲ್ಪಟ್ಟಿರುವಂತೆ). ಇದರಿಂದ `ಸ್ವಲ್ಪ ಹುಳಿಯು ಪೂರ್ತಿ ಹಿಟ್ಟನ್ನು ಹುಳಿ ಮಾಡದಂತೆ (1 ಕೋರಿಂಥದವರಿಗೆ-5:6,7).

ಒಂದು ವೇಳೆ ಇಬ್ಬರು ಅಥವಾ ಮೂವರು ವಿಶ್ವಾಸಿಗಳು ಒಬ್ಬ ಸಭೆಯ ಹಿರಿಯನ ಬಗ್ಗೆ ಒಂದು ದೂರನ್ನು ತಂದಲ್ಲಿ, ಹಿರಿಯ ನಾಯಕನು (ಆ ಸಭೆಯ ಅಪೋಸ್ತಲ ಜವಾಬಾರಿಯನ್ನು ಅಥವಾ ಸೇವೆಯನ್ನು ಹೊಂದಿದವನು) ಆ ವಿಷಯದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು. ಒಂದು ವೇಳೆ ಆ ದೂರು ಸತ್ಯವೆಂದು ಕಂಡುಬಂದಲ್ಲಿ ಆಗ ಅವರು (1 ತಿಮೋ. 5:19-21) ರಲ್ಲಿ ಕೊಟ್ಟಂಥ ಸಲಹೆ ಅಥವಾ ಸೂಚನೆಗಳನ್ನು ಪಾಲಿಸುವರು.

``ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ. ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕಾದವರಿಗೂ ಭಯವುಂಟಾಗುವುದು….. ಪಕ್ಷಪಾತದ ಆತ್ಮದಿಂದ ಏನನ್ನೂ ಮಾಡಬೇಡ.

ಈ ರೀತಿಯ ಶಿಸ್ತನ್ನು ಯಾರಿಗೂ ಪಕ್ಷಪಾತ ತೋರಿಸದೇ ಪಾಲಿಸಲಾಗುತ್ತದೆ. ಸಭೆಯ ಹಿರಿಯನಿಗೆ ಆತನ ಅಪರಾಧಕ್ಕೆ ತಕ್ಕಂತೆ ಶಿಸ್ತಿಗೆ ಒಳಪಡಿಸಲಾಗುತ್ತದೆ; ಮತ್ತು ಇಡೀ ಸಭೆಗೆ ಇದರ ಬಗ್ಗೆ ತಿಳಿಸಲಾಗುತ್ತದೆ (ಮೇಲೆ ಹೇಳಲ್ಪಟ್ಟ ವಾಕ್ಯಕ್ಕೆ ಅನುಸಾರವಾಗಿ). (ಇದಕ್ಕೆ ಉದಾಹರಣೆಯೆಂದರೆ, ಪ್ರಕಟಣೆ-2 ಮತ್ತು 3 ರಲ್ಲಿರುವಂತೆ ಕರ್ತನು ಹಿಂಜಾರಲ್ಪಟ್ಟ ಐದು ಸಭೆಯ ಹಿರಿಯರಿಗೆ ಗದರಿಸುವುದರ ಬಗ್ಗೆ ಎಲ್ಲಾ ಸಭೆಗಳಿಗೂ ತಿಳಿಸಬೇಕೆಂದು ಅಪೋಸ್ತಲನಾದ ಯೋಹಾನನಿಗೆ ಹೇಳುತ್ತಾನೆ.)

/

ಈ ರೀತಿಯ ಶಿಸ್ತಿನ ವಿಷಯದಲ್ಲಿ ಒಂದು ವೇಳೆ ಒಬ್ಬ ಸಹೋದರನಿಗೆ ಸಭೆಯ ಹಿರಿಯನನ್ನು ನೇಮಿಸುವಂತೆ ದೇವರಿಂದ ಅಧಿಕಾರವನ್ನು ಕೊಡಲ್ಪಟ್ಟಲ್ಲಿ, ಆಗ ಆತನು ಅವಶ್ಯವಿದ್ದಲ್ಲಿ ಆ ಹಿಂದಿನ ಸಭೆಯ ಹಿರಿಯನನ್ನು ಶಿಸ್ತಿಗೆ ಒಳಪಡಿಸುವುದಕ್ಕಾಗಲೀ ಅಥವಾ ತೆಗೆದುಹಾಕಲಿಕ್ಕಾಗಲಿ ಆ ಅದಿಕಾರವನ್ನು ಉಪಯೋಗಿಸಬಹುದು. ಅಂಥಹ ಅಪೊಸ್ತಲ ಅಧಿಕಾರವು ಸಭೆಯಲ್ಲಿ ಇಲ್ಲದೆ ಇರುವಾಗ ಸಭೆಯ ಇತರ ಹಿರಿಯರು ಕೂಡ ಈ ಶಿಸ್ತನ್ನು ಪ್ರಯೋಗಿಸಬಹುದು.

ಎಲ್ಲಾ ಶಿಸ್ತು ಆ ವಿಶ್ವಾಸಿಯನ್ನು (ಅಥವಾ ಸಭಾ ಹಿರಿಯನನ್ನು) ಕೊನೆಯಲ್ಲಿ ಕರ್ತನೆಡೆಗೆ ಮತ್ತು ಸಭೆಗೆ ವಾಪಾಸ್ಸು ಸೇರ್ಪಡಿಸುವ ನಿರೀಕ್ಷೆಯೊಡನೆ, ಆತ್ಮೀಕ ಪ್ರೀತಿಯ ಮೂಲಕ (ಒಬ್ಬ ತಂದೆಯು ಮಾಡುವಂತೆ) ಪ್ರಯೋಗಿಸಲ್ಪಡಬೇಕು (2 ಕೊರಿಂಥ. 2:6-11).

ಸ್ಥಳೀಯ ಸಭೆಗಳ ನಡುವಿನ ಅನ್ಯೋನ್ಯತೆಯ ಜೊತೆಗೆ ಸಂಬಂಧವಿರಿಸಿರುವ ಸಭೆಗಳೆಲ್ಲಾ ಒಂದು ಪಂಗಡಕ್ಕೆ ಸೇರಿದ ಸಭೆಗಳಲ್ಲ. ಆದರೆ ನಾವೆಲ್ಲಾ ಒಂದೇ ದೃಷ್ಟಿ (ಗುರಿ) ಉಳ್ಳವರಾಗಿದ್ದು ಜೊತೆಯಾಗಿ ದುಡಿಯುವ ಅನ್ಯೋನ್ಯತೆಯುಳ್ಳ ಸಭೆಗಳಾಗಿದ್ದೇವೆ. ನಮಗೆ ಕೇಂದ್ರೀಯ ಮುಖ್ಯ ಸಭೆಯಿಲ್ಲ. ನಮ್ಮಲ್ಲಿ ನಾಯಕತ್ವಕ್ಕಾಗಿ ಚುನಾವಣೆಗಳಿಲ್ಲ. ನಮಗೆ ಮಹಾನಾಯಕರಾಗಲಿ, ಅಧ್ಯಕ್ಷರಾಗಲಿ ಇಲ್ಲ. ನಮ್ಮಲ್ಲಿ ಸಭೆಯ ಆಸ್ತಿಯನ್ನು ಆಳುವ (ಹತೋಟಿಯಲ್ಲಿಟ್ಟುಕೊಳ್ಳುವ) ಕೇಂದ್ರ ಸ್ಥಾನವಿಲ್ಲ. ಪ್ರತೀ ಸಭೆಯು ಕರ್ತನ ಅಧೀನದಲ್ಲಿದ್ದು ಸ್ವತಂತ್ರವುಳ್ಳದ್ದಾಗಿದೆ. ಆದಕಾರಣ, ಎಲ್ಲಾ ನೇಮಿಸಲ್ಪಟ್ಟ ನಾಯಕರು ನೇರವಾಗಿ ಕರ್ತನಿಗೇ ಮೊಟ್ಟ ಮೊದಲು ಉತ್ತರಕೊಡುವವರಾಗಿದ್ದಾರೆ. (ಇದು ಪ್ರಕ. 1:20 ರಲ್ಲಿ ನಾವು ನೋಡುವಂತೆ, ಪ್ರತಿ ನಕ್ಷತ್ರವು ಕರ್ತನ ಕೈಯಲ್ಲಿದೆ. ಎಂಬಂತೆ ಹೊಸ ಒಡಂಬಡಿಕೆಯ ರೀತಿಯದ್ದಾಗಿದೆ) ಕೆಲವು ಸಭೆಗಳ ಗುಂಪು ಒಬ್ಬ `ಬಿಷಪ್'ನ ಅಧಿಕಾರದಡಿಯಲ್ಲಿರುವಂತೆ ಅಥವಾ ಒಂದು ಗುಂಪಿಗೆ ಸೇರಿದ್ದಾಗಿರುವಂತೆ ನಮ್ಮ ಸಭೆಗಳಿಲ್ಲ. ಯಾವುದೇ ಸ್ಥಳೀಯ ಸಭೆಯ ನಾಯಕನು ಕೇವಲ ತನ್ನ ಸಭೆಯ ಜವಾಬ್ದಾರಿಕೆಯ ಹೊರತು ಯಾವುದೇ ಇತರ ಸಭೆಯ ಜವಾಬ್ದಾರಿಯನ್ನು ಹೊಂದಿಲ್ಲ ಮತ್ತು ಯಾವುದೇ ಸಭೆಯ ನಾಯಕನು ಇತರ ಸಭೆಯ ನಾಯಕನಿಗೆ ಅಧೀನನಾಗುವಂತೆ ಕೇಳಲ್ಪಟ್ಟಿಲ್ಲ.

ಪೌಲನು ತಾನು ಸ್ಥಾಪಿಸಿದ ಯಾವುದೇ ಸಭೆಯನ್ನು ಪಂಗಡವಾಗಿ (ಯಾವುದೋ ಗುಂಪಿಗೆ ಸೇರಿದ ಸಭೆಯಾಗಿ) ಮಾಡಲಿಲ್ಲ. CFC ಮತ್ತು ಅದರ ಜೊತೆ ಸೇರಿದ ಇತರ ಸಭೆಗಳೂ ಕೂಡ ಯಾವುದೇ ಒಂದು ಗುಂಪಿಗೆ (ಪಂಗಡಕ್ಕೆ) ಸೇರಿಲ್ಲ. ಕರ್ತನು ಸ್ಥಾಪಿಸಿದ ಮತ್ತು ಅಈಅ ಗೆ ಸೇರಿಸಿದ ಪ್ರತಿಯೊಂದು ಸಭೆಯೂ ಸ್ವತಂತ್ರವಾಗಿದ್ದು, ಅವು ತಮ್ಮದೇ ಆದ ಸ್ಥಳೀಯ ನಾಯಕರಿಂದಲೇ ನಡೆಸಲ್ಪಡುತ್ತದೆ. ಯಾರೂ ಆ ನಾಯಕರನ್ನು ಹತೋಟಿಯಲ್ಲಿಡುವುದಾಗಲೀ ಅಥವಾ ಹೀಗೇ ಮಾಡು ಎಂದು ಹೇಳುವವರಾಗಲೀ ಇಲ್ಲ. ಕರ್ತನು ತಾನೇ ಅವರ ಶಿರಸ್ಸಾಗಿದ್ದಾನೆ (ನಾಯಕನಾಗಿದ್ದಾನೆ).

ಕೊರಿಂಥ ಸಭೆಯ ವಿಶ್ವಾಸಿಗಳ ಮಧ್ಯೆ ಸಮಸ್ಯೆಗಳು ಬಂದಾಗ ಆ ಸಭೆಯ ನಾಯಕರು ತಮ್ಮ ಮಧ್ಯೆಯ ಸಮಸ್ಯೆಯ ಪರಿಹಾರಕ್ಕಾಗಿ ಪೌಲನನ್ನು ಭೇಟಿ ಮಾಡಿ ಆತನ ಸಹಾಯ ಪಡೆದು, ಆತನು ಕೊಟ್ಟ ಸಲಹೆಯಿಂದ ಸಹಾಯ ಪಡೆದು ತಮ್ಮ ಸಮಸ್ಯೆಯನ್ನು ಆ ಸಮಯದಲ್ಲಿ ಬಗೆಹರಿಸಿಕೊಂಡಂತೆ, ಸಭೆಯ ನಾಯಕರುಗಳು ಇತರ ಪ್ರೌಢ ನಾಯಕರುಗಳ (ಅಪೋಸ್ತಲ ಸೇವೆಯನ್ನು ಮಾಡುವವರ) ಸಲಹೆಯನ್ನು ಬಯಸಬಹುದು (ಪಡೆಯಬಹುದು).

ನಾವು ಸದಾ ಇತರ CFC ಗೆ ಸೇರಿದ (ಸಂಪರ್ಕ ಹೊಂದಿರುವ) ಸಭೆಗಳೊಂದಿಗೆ ಅನ್ಯೋನ್ಯತೆ ಕಟ್ಟಲು ಬಯಸುತ್ತೇವೆ. ಯಾಕೆಂದರೆ, ಅದರಿಂದ ನಮ್ಮ ಐಕ್ಯತೆಯು ಇನ್ನೂ ಬಲವುಳ್ಳದ್ದಾಗಿ ಕರ್ತನಲ್ಲಿ ಒಂದು ಕುಟುಂಬವಾಗಿರಲಿ ಎಂದು. ಈ ಒಂದು ಕಾರಣದಿಂದಲೇ ನಾವು ಈ ಎಲ್ಲಾ ಸಭೆಗಳಿಗಾಗಿ ಆಗಾಗ ಕಾನ್ಫರೆನ್ಸ್ ಕೂಟಗಳನ್ನು ನಡೆಸುತ್ತೇವೆ

.

ಕುಟುಂಬ ಜೀವಿತದ ಪ್ರಾಮುಖ್ಯತೆ

ಸಭೆಯಲ್ಲಿ, ಕುಟುಂಬದಲ್ಲಿನ ದೈವಿಕತೆ(ದೇವಭಕ್ತಿ)ಯು ಬಹಳ ಮುಖ್ಯವಾದ ಅವಶ್ಯಕತೆಯಾಗಿದೆ. ಆದ್ದರಿಂದ ಗಂಡ-ಹೆಂಡತಿಯರ ಸಂಬಂಧವು ಪರಸ್ವರ ಪ್ರೀತಿ, ಗೌರವದಿಂದ ತುಂಬಿ ಒಳ್ಳೆಯದಾಗಿರಲೆಂದು ಮತ್ತು ಅವರು ತಮ್ಮ ಮಕ್ಕಳನ್ನು ದೇವರ ಮಾರ್ಗದಲ್ಲಿ ಬೆಳೆಸಲು ಅವರನ್ನು ಉತ್ತೇಜಿಸುವುದಕ್ಕಾಗಿ ನಾವು ಆಗಾಗ ಕುಟುಂಬಕ್ಕಾಗಿ ಕೂಟಗಳನ್ನು ನಡೆಸುತ್ತೇವೆ.

ದೇವರು ಹೆಂಡತಿಯರನ್ನು ತಮ್ಮ ಗಂಡಂದರಿಗೆ ಸಹಾಯಕರನ್ನಾಗಿ ನೇಮಿಸಿದ್ದಾನೆ. ನಾವು ಅಈಅ ಯಲ್ಲಿ, ಗಂಡಂದಿರು ತಮ್ಮ ತಮ್ಮ ಕುಟುಂಬಗಳ ಅಭಿವೃದ್ಧಿಗಾಗಿ ಮತ್ತು ಸಭೆಯ ಸೇವೆಗಾಗಿ ಶ್ರಮಿಸುವಾಗ ಹೆಂಡಂದಿರು ಒದಗಿಸುವ ಸಹಾಯ ಅತ್ಯಂತ ಬೆಲೆಯುಳ್ಳದ್ದೆಂದು ಅವರನ್ನು ಸನ್ಮಾನಿಸುತ್ತೇವೆ ಮತ್ತು ಗಂಡಂದಿರು ತಮ್ಮ ಹೆಂಡಂದಿರಿಗೆ ಒಳ್ಳೆಯ ಕುರುಬರಾಗಿ ಇರುವಚಿತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲ್ಲೂ ಅವರಿಗೆ ಒಳ್ಳೆಯ ಮಾದರಿಯಾಗಿ ಇರುವಂತೆ ನಾವು ಬೋಧಿಸುತ್ತೇವೆ.

ದೇವರ, ಹೆಣ್ಣು ಮಕ್ಕಳೂ ಸಹ ಈಗ ಪ್ರವಾದಿಸಬಹ್ಮದಾದ್ದರಿಂದÀ, ನಾವು CFC ಯಲ್ಲಿನ ಎಲ್ಲಾ ಸಹೋದರಿಯರನ್ನು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿರುವಂತೆಯೂ ಮತ್ತು ಪ್ರವಾದನೆಯ ವರಕ್ಕಾಗಿ ದೇವರನ್ನು ಕೇಳಿಕೊಳ್ಳುವಂತೆಯೂ ಪ್ರೋತ್ಸಾಹಿಸುತ್ತೇವೆ (ಅ.ಕೃ. 2:17, ಎಫೆಸ. 5:18, 1ಕೊರಿ. 14:1). ಅಂದರೆ, ಮೊದಲು ತಮ್ಮ ಕುಟುಂಬಗಳಲ್ಲಿ(ಮನೆಯಲ್ಲಿ) ತಮ್ಮ ಗಂಡಂದಿರಿಗೂ, ಮಕ್ಕಳಿಗೂ ನಂತರ ಇತರ ಸಹೋದರಿಯರಿಗೂ ಸಹ ಉತ್ತೇಜಿಸುವ, ಸಂತೈಸುವ ಮತ್ತು ಆಶೀರ್ವದಿಸುವಂಥ ದೇವರ ವಾಕ್ಯವನ್ನು ಹಂಚಿಕೊಳ್ಳ್ಳುವಂತೆ(1ಕೊರಿ. 14:3 ಯಲ್ಲಿ ನಾವು ಓದುವಂತೆ) ಪ್ರೋತ್ಸಾಯಿಸುತ್ತೇವೆ.

CFC ಸಭೆಯ ನಾಯಕತ್ವ

CFC ಯಲ್ಲಿ, ನಾವು ಎಲ್ಲ ಯೌವನಸ್ಥ ಸಹೋದರರನ್ನು ಪೂರ್ಣಹೃದಯವುಳ್ಳವರಾಗಿರುವಂತೆ, ಇದರಿಂದ ಅವರಲ್ಲಿ ಕೆಲವರಿಗೆ ದೇವರು ಸಭೆಗಳ ನಾಯಕರಾಗುವಂತೆ ಕೃಪೆ ಕೊಡಲಿ ಎಂದು ನಾವು ಅವರನ್ನು ಪ್ರೋತ್ಸಾಯಿಸುತ್ತೇವೆ.

ಇಡೀ ಮಾನವ ಇತಿಹಾಸದಲ್ಲಿ ಹೊಟ್ಟೆಕಿಚ್ಚು (ಮತ್ಸರ) ಎಂಬುದು ಒಚಿದು ದೊಡ್ಡ ಸಮಸ್ಯೆಯಾಗಿದೆ. ಕಾಯಿನನು ತನ್ನ ತಮ್ಮನಾದ ಹೇಬೆಲನ ವಿಷಯದಲ್ಲಿ ಹೊಟ್ಟೆಕಿಚ್ಚುಪಟ್ಟನು. ಸೌಲನು ಯೌವನಸ್ಥನಾದ ದಾವೀದನ ಮೇಲೆ ಮತ್ಸರವುಳ್ಳವನಾಗಿದ್ದನು ಮತ್ತು ಕ್ರೈಸ್ಥ ಇತಿಹಾಸವು ಕೂಡ ಇದೇ ರೀತಿ ಅನೇಕ ವರಗಳುಳ್ಳ ಕಿರಿಯ ಸಹೋದರರ ಮೇಲೆ ಮತ್ಸರವುಳ್ಳ ಮತ್ತು ಅವರು ಮೇಲೆ(ಏಳಿಗೆಗೆ) ಬರುವಂತೆ ಬಯಸದ ಮತ್ತು ಅವರನ್ನು ತುಳಿಯುವ (ಹಿಂದೆ ತಳ್ಳುವ) ಹಿರಿಯ ಸಹೋದರರ ಅನೇಕ ಉದಾಹರಣೆಗಳನ್ನು ನಾವು (ಕ್ರೈಸ್ತ ಇತಿಹಾಸದಲ್ಲಿ) ನೋಡುತ್ತೇವೆ. ಹೇಗೂ, ನಾವು CFC ಯಲ್ಲಿ - ಎಲ್ಲಾ ಹಿರಿಯ ಸಹೋದರರಿಗೆ, ಅಂಥಹ ಆತ್ಮೀಕ, ದೇವಭಕ್ತಿಯುಳ್ಳ ನಾಯಕತ್ವದ ವರ(ಗುರುತುಳ್ಳ) ಹೊಂದಿದ ಕಿರಿಯ ಯೌವನ ಸಹೋದರರನ್ನು ಹುಡಕಿ ಅವರನ್ನು ಪ್ರೋತ್ಸಾಯಿಸಲು ಮತ್ತು ತರಬೇತು ಮಾಡಲು(ಹಿರಿಯ ಸಹೋದರರನ್ನು) ಪ್ರೋತ್ಸಾಹಿಸುತ್ತೇವೆ.

ದೇವರ ಕೆಲಸದಲ್ಲಿ ನಿವೃತ್ತಿ ಎಂಬುದು ಇಲ್ಲ್ಲದಿರುವುದರಿಂದ CFC ಯಲ್ಲಿ ಹಿರಿಯ ಸಹೋದರನು ಎಂದಿಗೂ ನಿವೃತ್ತಿ ಹೊಂದಲಾರನು. ಆದರೆ ಹೇಗೆ ತಂದೆಯು ತಮ್ಮ `ಗಂಡು ಮಕ್ಕಳನ್ನು' ಪ್ರೌಢವಸ್ಥೆಯವರೆಗೂ ಬೆಳಸಿ ನಂತರ ತಮ್ಮ ಮಕ್ಕಳೇ ತಮ್ಮ ಜೀವಿತವನ್ನು ಆಳಲಿ ಎಂದು ಹೇಗೆ ತಾವು ಹಿಂದೆ ಸರಿಯುತ್ತಾರೋ ಅದೇ ರೀತಿ, cfc ಯಲ್ಲಿನ ವೃದ್ಧ ಹಿರಿಯ ಸಹೋದರರು ಸಹ ಮಾಡುತ್ತಾರೆ. ಅಂಥಹ ದೀನ, ದೇವಭಯವುಳ್ಳ, ತಂದೆಯ ಹೃದಯವುಳ್ಳ ಹಿರಿಯರು ಎಂದಿಗೂ ತಮ್ಮ `ಆತ್ಮೀಕ ಮಕ್ಕಳಿಂದ' ತಮ್ಮ ಜೀವನದುದ್ದಕ್ಕೂ ಗೌರವಿಸಲ್ಪಡುವರು, ಎತ್ತಲ್ಪಡುವರು ಮತ್ತು ಸಂಧಿಸಲ್ಪಡುವರು.

``ಆಹಾ, ಸಹೋದರರು ಒಂದಾಗಿರುವುದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು... ಅ ಮಾತ್ರ ಕರ್ತನು ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಆಜ್ಞಾಪಿಸಿದ್ದಾನೆ.'' (ಕೀರ್ತನೆ. 133:1,3).

``ನೀನು ಕರ್ತನಿಂದ ಹೊಂದಿರುವ ನಿರ್ಧಿಷ್ಟ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರು. (ಕೊಲೊಸ್ಸೆ. 4:17).