೧ ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.
೨ ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.
೩ ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.
೪ ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.
೫ ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.
೬ ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.
೭ ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.
೮ ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.
೯ ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.