ದೈವಿಕ ಸಂದೇಶಗಳು


ಲೌಕಿಕತೆಯಿಂದ ತಿರುಗಿಕೊಳ್ಳಿರಿ - ಮತ್ತು..
ದೇವರ ಆಜ್ಞೆಗಳಿಗೆ ವಿಧೆಯರಾಗುವುದು ಮತ್ತು ದೇವರ ವಾಗ್ದಾನಗಳನ್ನು ಅನುಭವಿಸುವುದು.!
ಪ್ರಾರ್ಥಿಸಿರಿ ಮತ್ತು ಮನಗುಂದಬೇಡಿರಿ
ನಾನು ಪ್ರಾರ್ಥನೆ ಮಾಡುವುದಾದಲ್ಲಿ ಮತ್ತು ಪ್ರಾರ್ಥನೆಯನ್ನು ನಿಲ್ಲಿಸದಿದ್ದಲ್ಲಿ, ಕರ್ತನು ನಿಶ್ಚಿತವಾಗಿ ಉತ್ತರ..
ದೇವರ ಪರಿಪೂರ್ಣ ಚಿತ್ತವನ್ನು ದೃಡಪಡಿಸಿಕೊಳ್ಳುವದು
ನಾನುನಿಜವಾಗಿಯೂ, ಯೇಸು ಇಚ್ಛಿಸುವಂತದ್ದನ್ನು ಮಾಡುತ್ತಿದ್ದೇನಾ? ಇದನ್ನುಕಂಡುಹಿಡಿಯಲು ಸಮಯವಿನ್ನು ಮೀರಿಲ್ಲ

ಪುಸ್ತಕಗಳು


ಸೋಲಿನ ಉದ್ದೇಶ
ನೀವು ನಿಮ್ಮನ್ನು ”ನಿರೀಕ್ಷೆಯಿಲ್ಲದ ಸೋತವರು” ಎಂಬುದಾಗಿ ಕಾಣುತ್ತೀರೋ?ಒಂದು ವೇಳೆ ನೀವು ಸಾವಿರ..
ಒಳ್ಳೆಯ ಅಸ್ತಿವಾರ
ನಿಮ್ಮ ಜೀವಿತದ ಪ್ರಯಾಣವನ್ನು ಆರಂಭಿಸುವ ಮೊದಲು ಒಳ್ಳೆಯ ಮತ್ತು ಬಲವಾದ ಹಾಗೂ ಮಳೆಯಲ್ಲಾಗಲಿ..
ಕರ್ತನು ಮತ್ತು ಆತನ ಸಭೆಯು
ಪ್ರಕಟನೆಯ ಪುಸ್ತಕದಲ್ಲಿ ಏಳು ಸಭೆಗಳು
ಅಧಿಕ (19)

ನಾವು ನಂಬುವುದು

Body: 
Christian Fellowship Church, Bangalore - 2015
Christian Fellowship Church, Bangalore - 2015

ನಾವು ನಂಬುವುದು:-

ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.

ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.

ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.

ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.

ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.

ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.

ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.

ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.

ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.

ಅಧಿಕ