ವಿಸ್ಮಯಕರವಾದ ಸತ್ಯಾಂಶಗಳು

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ
    Download Formats:

ಅಧ್ಯಾಯ
Do you know that

Do you know that:

  • The nearest star is 40,000,000,000,000 kilometres away from the earth?
  • Your eye has 130,000,000 rods and 7,000,000 cones in it?
  • You have 100,000 kilometres of blood vessels in your body?
  • You can get in touch with the God who created these wonders?

ಅಧ್ಯಾಯ 1
ವಿಶ್ವದ ಕುರಿತಾದ ಸತ್ಯಾಂಶಗಳು

ಮಾನವನು ಚಂದ್ರಲೋಕವನ್ನು ಮುಟ್ಟಿದ್ದರಿಂದ ಬಾಹ್ಯಾಕಾಶವನ್ನು ಜಯಿಸಿದ್ದೇನೆ ಎಂದು ನೆನೆಸುತ್ತಾನೆ. ಆದರೆ ಚಂದ್ರಲೋಕವು ಬಾಹ್ಯಾಕಾಶದ ಅಂಚಿನಲ್ಲಿ ಇದೆ. ಬಾಹ್ಯಾಕಾಶವು ಬಹು ವಿಶಾಲವಾಗಿರುವುದರಿಂದ ಅದು ನಮ್ಮ ಕಲ್ಪನೆಯನ್ನೇ ಮೀರುವಂಥದಾಗಿದೆ.

ಕೆಲವು ನಕ್ಷತ್ರಗಳ ಅಂತರವನ್ನು ಗಮನಿಸಿ. ನಮ್ಮ ಕಣ್ಣಿಗೆ ಕಾಣುವ ಅತೀ ಸಮೀಪದ ನಕ್ಷತ್ರವು ’ಫ ಸೆಂಟರಿ’ 40,000 ಲಕ್ಷ ಕೋಟಿ ಕಿಲೋಮೀಟರ್ ದೂರದಲ್ಲಿದೆ. ನೀವು ಬೆಳಕು ಚಲಿಸುವ ವೇಗದಲ್ಲಿ ಪ್ರಯಾಣ ಮಾಡಿದರೆ, ಚಂದ್ರನನ್ನು ತಲುಪಲು 1 1/2 ಕ್ಷಣಗಳಲ್ಲಿ ಮತ್ತು ಸೂರ್ಯನನ್ನು 8 1/2 ನಿಮಿಷಗಳಲ್ಲಿ ತಲುಪಬಹುದು. ಆದರೆ ’ಅಲ್ಫ ಸೆಂಟರಿ ಎಂಬ ನಕ್ಷತ್ರವನ್ನು ತಲುಪಲು ಇದೇ ವೇಗದಲ್ಲಿ ಪ್ರಯಾಣ ಮಾಡಿದರೆ 4 1/2 ವರ್ಷಗಳು ಬೇಕಾಗುವುವು!! ನಕ್ಷತ್ರಗಳು (ಆಕಾಶಗಂಗೆ) ಕಣ್ಣಿಗೆ ದೂರದರ್ಶಕಗಳ ಮೂಲಕ ಕಾಣಿಸಿದರೂ, ಅವು 6500 ದಶಲಕ್ಷ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಇವೆ.

ಕೆಲವು ನಕ್ಷತ್ರಗಳ ಗಾತ್ರವನ್ನು ನಾವು ನೋಡೋಣ. ಮೃಗಶಿರಾ ನಕ್ಷತ್ರ ಪುಂಜದಲ್ಲಿರುವ ’ಬೆಟೆಲ್ಗಿಯಸ’ ಎಂಬ ನಕ್ಷತ್ರದ ವ್ಯಾಸವು 500 ದಶಲಕ್ಷ ಕಿಲೋಮೀಟರ್ ಗಳು. ಈ ನಕ್ಷತ್ರವೇನಾದಾರೂ ಟೊಳ್ಳಾಗಿದ್ದರೆ, ಭೂಮಿಯು ಸೂರ್ಯನನ್ನು ನಕ್ಷತ್ರದ ಒಳಗಡೆಯೇ ಸುತ್ತುತ್ತಿತ್ತು.ಅದು ತನ್ನ ಕಕ್ಷೆಯಲ್ಲಿಯೇ ಸೂರ್ಯನನ್ನು ಸುತ್ತುವ ಭೂಮಿಯ ಕಕ್ಷೆಯ ವ್ಯಾಸವು ಬರೇ 300 ದಶಲಕ್ಷ ಕಿ.ಮೀ!!

ನಾವು ಈ ನಕ್ಷತ್ರಗಳ ಸಂಖೆಯನ್ನು ಗಮನಿಸೋಣ. ನಮ್ಮ ಸೌರಮಂಡಲವು ’ಮಂದಾಕಿನಿಯ ಒಂದು ಭಾಗವಾಗಿದೆ. 1 ಲಕ್ಷ ದಶಲಕ್ಷ ನಕ್ಷತ್ರಗಳು ಈ ’ಮಂದಾಕಿನಿ’ಯಲ್ಲಿ ಇವೆ. ಆದರೆ ಸೂರ್ಯನು ಈ ನಕ್ಷತ್ರಗಳಲ್ಲಿ ಒಂದು ನಕ್ಷತ್ರ. ಈ ’ಮಂದಾಕಿನಿಯು ಅನೇಕ ಆಕಾಶಗಂಗೆಗಳಲ್ಲಿ ಕೇವಲ ಒಂದು. ದೂರದರ‍್ಶಕದ ಮೂಲಕ ಕಾಣುವಂಥ 100 ದಶಲಕ್ಷ ಆಕಾಶಗಂಗೆಗಳು ಬಾಹ್ಯಾಕಾಶದ ಒಂದು ಭಾಗವಾಗಿದೆ. ಆಚೆ ಕಡೆಯಲ್ಲಿ ಅವುಗಳಿಗಿಂತ ಹೆಚ್ಚಾಗಿ ಆಕಾಶಗಂಗೆಗಳು ಇವೆ.

ಇವುಗಳು ತಮ್ಮ ಕಕ್ಷೆಯಲ್ಲಿ ಪರಿಪೂರ್ಣ ಸೂಕ್ಷ್ಮವಾಗಿ ಚಲಿಸುವುದನ್ನು ಗಮನಿಸಿ. ಮನುಷ್ಯನು ಮಾಡಿದ ಕೈ ಗಡಿಯಾರವು ಸಹ ಇಷ್ಟು ಪರಿಪೂರ್ಣವಾಗಿ ಇಲ್ಲ. ಹಾಗಾದರೆ ನಿಶ್ಚಯವಾಗಿ ಪ್ರತಿಯೊಂದು ನಕ್ಷತ್ರವನ್ನು ಹಾಗು ಗ್ರಹಗಳನ್ನು ಉಂಟು ಮಾಡಿದ ಒಂದು ಪರಮ ಶ್ರ‍ೇಷ್ಟವಾದ ಜ್ನಾನವು ಈ ವಿಶ್ವದ ಹಿಂದೆ ಇರಲೇ ಬೇಕು.

ಬಾಹ್ಯಾಕಾಶವು ಎಷ್ಟು ವಿಶಾಲವಾಗಿದೆ! ಮನುಷ್ಯನು ಎಷ್ಟು ಸಣ್ಣವನು!

ಸತ್ಯವೇದದ ಒಬ್ಬ ಬರಹಗಾರನು, "ನಿನ್ನ ಕೈ ಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟು ಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ, ಓ ದೇವರೇ! ಮನುಷ್ಯನು ಎಷ್ಟು ಮಾತ್ರದವನು! ಅವನನ್ನು ನೀನು ಯಾಕೆ ನೆನೆಸಬೇಕು?" ಎಂದು ಬರೆದಿದ್ದಾನೆ. ಆದರೂ ವಿಶ್ವದ ಸೃಷ್ಟಿಕರ್ತನಾದ ದೇವರು ಪ್ರತಿಯೊಬ್ಬರನ್ನೂ ಪರಾಮರಿಸುತ್ತಾನೆ. ಇದು ಸತ್ಯವೇದದಲ್ಲಿ ನಾವು ಕಲಿಯುವ ಆಶ್ಚರ್ಯಕರವಾದ ಸತ್ಯವಾಗಿದೆ.

ಯಾವುದೇ ಒಂದು ವಸ್ತುವಿನ ಬೆಲೆಯನ್ನು ಅದರ ಗಾತ್ರದಿಂದ ನಿರ್ಣಯಿಸುವುದಕ್ಕೆ ಆಗುವುದಿಲ್ಲ. ಒಬ್ಬ ಕೋಟ್ಯಾಧಿಪತಿಗೆ ಅನೇಕ ಎಕರೆ ಜಮೀನು ಇರಬಹುದು. ಆದರೂ ಅವನಿಗೆ ವಿಸ್ತಾರವಾದ ಆ ಜಮೀನಿಗಿಂತಲೂ ಅವನ ಚಿಕ್ಕ ಮಗುವು ಬಹು ಅಮೂಲ್ಯವಾದುದು. ದೇವರಿಗೂ ಸಹ ಹಾಗೆಯೆ. ಬಾಹ್ಯಾಕಾಶವು ವಿಶಾಲವಾಗಿರಬಹುದು, ನಕ್ಷತ್ರಗಳು ಬಹುದೊಡ್ಡವಾಗಿರಬಹುದು. ಆದರೆ ದೇವರು ಮನುಷ್ಯನನ್ನು ತನ್ನ ಎಲ್ಲಾ ಸೃಷ್ಟಿಗಿಂತಲೂ ಹೆಚ್ಚಾಗಿ ಪ್ರೀತಿಸಿ ಸಾಕುತ್ತನೆ. ಮನುಷ್ಯನು ದೇವರ ಮಗನಾಗಿರುವುದಕ್ಕೂ, ದೇವರೊಂದಿಗೆ ಅನ್ಯೋನ್ಯವಾಗಿರುವುದಕ್ಕೂ ಸೃಸ್ಟಿಸಲ್ಪಟ್ಟನು. ದೇವರೊಂದಿಗಿರುವ ಅನ್ಯೋನ್ಯತೆಯ ಮಾತ್ರವೇ ಮನುಷ್ಯನ ಇರುವಿಕೆಗೆ ಅರ್ಥವನ್ನು ಮತ್ತು ಉದ್ದೇಶವನ್ನು ನೀಡುವಂಥದಾಗಿದೆ.

ನಾವು ಸೃಷ್ಟಿಯಲ್ಲಿ ದೇವರ ಮಹತ್ವವನ್ನು ಕಾಣುತ್ತೇವೆ. ಆದರೆ ದೇವರು ತಾನೇ ನಮ್ಮನ್ನು ಪ್ರೀತಿಸಿ ಮತ್ತು ಪೋಷಿಸುವವನಾಗಿದ್ದಾನೆಂದು ಸತ್ಯವೇದವು ತಿಳಿಸುತ್ತದೆ.

ಅಧ್ಯಾಯ 2
ಮನುಷ್ಯನ ಕುರಿತಾದ ಸತ್ಯಾಂಶಗಳು

ಮನುಷ್ಯನು ದೇವರ ಸೃಷ್ಟಿಯ ಕಿರೀಟವಾಗಿದ್ದಾನೆ. ವಿಶ್ವದ ನಕ್ಷತ್ರಗಳಿಗಿಂತಲೂ ಮಹತ್ತಾದದ್ದು ಮತ್ತು ಅತಿ ಅದ್ಭುತವದದ್ದು ಮನುಷ್ಯನೇ ಆಗಿದ್ದಾನೆ. ಮೊಟ್ಟ ಮೊದಲನೇದಾಗಿ ನಮ್ಮ ಶರೀರವನ್ನು ನೋಡುವಾಗ ದೇವರು ಎಷ್ಟು ಅದ್ಭುತವಾಗಿ ಸೃಷ್ಟಿಸಿದ್ದಾನೆಂಬುದನ್ನು ಕಾಣುತ್ತೇವೆ. ನಮ್ಮ ಪ್ರತಿಯೊಂದು ಕಣ್ಣಿನಲ್ಲಿ 130 ದಶಲಕ್ಷ ಚಿಕ್ಕ ಕೊನಗಳು ಕಪ್ಪು ಬಿಳುಪಿನ ನೋಟಕ್ಕಗಿಯೂ, ಹಾಗು 7 ದಶಲಕ್ಷ ಕೊನಗಳು ಬಣ್ಣದ ನೋಟಕ್ಕಾಗಿ. ಇವು 15 ಲಕ್ಷ ಸಂದೇಶಗಳನ್ನು ಏಕ ಕಾಲದಲ್ಲಿ ಸ್ವೀಕರಿಸಲು ಸಾಧ್ಯ. ಒಂದು ಕಣ್ಣಿನ ಕಾರ್ಯವನ್ನು, ಯಾಂತ್ರಿಕವಾಗಿ ನಕಲು ಮಾಡಲು, 2,50,000 ಸಂದೇಶ, ಸಂಕೇತಗಳನ್ನು ಕಳುಹಿಸುವ ಹಾಗು ಸ್ವೀಕರಿಸುವ ಉಪಕರಣಗಳು ಅವಶ್ಯವು!

ಕಿವಿಯನ್ನು ಪರಿಗಣಿಸಿರಿ ! ಶ್ರವಣೇಂದ್ರಿಯದ ನರವು ಕೇವಲ ಮುಕ್ಕಾಲು ಅಂಗುಲ ಉದ್ದ ಮತ್ತು ಒಂದು ಸೀಸದ ಕಡ್ಡಿಯ ವ್ಯಾಸದಷ್ಟೆ. ಆದರೆ ಇದರೊಳಗೆ 30,000 ವಿದ್ಯ್ತ್ ಮಂಡಲವು ಅಡಕವಾಗಿದೆ. ಪಿಯನೋದಲ್ಲಿ 88 ರಾಗ ಮಾಲಿಕೆಗಳಿವೆ; ಆದರೆ ನಮ್ಮ ಕಿವಿಯೊಳಗೆ 1100 ರಾಗ ಮಾಲಿಕೆಗಳು ಒಂದೇ ತರಂಗದಲ್ಲಿ ಉಂಟು. ಇದರ ಸೂಕ್ಷ್ಮತೆ ಎಷ್ಟರ ಮಟ್ಟಿಗೆ ಇದೆಯೆಂದರೆ ಪಿಯಾನೋದ ಎರಡು ರಾಗ ಮಾಲಿಕೆಗಳ ನಡುವೆ 12 ಸ್ವರಗಳನ್ನು ಆಯ್ದುಕೊಳ್ಳುವಷ್ಟು.

ನಿಮ್ಮ ಹೃದಯವನ್ನು ನೋಡಿರಿ. ಇದು ಒಂದು ವರ್ಷಕ್ಕೆ 400 ಲಕ್ಷ ಬಾರಿ ನಿಮ್ಮ ದೇಹದೊಳಗೆ ವಿಶ್ರಾಂತಿಯಿಲ್ಲದೇ ಬಡಿದುಕೊಳ್ಳುತ್ತದೆ. ಇದು 1,00,000 ಕಿ.ಮೀ. ಗಳ ರಕ್ತನಾಳಗಳ ಮುಖಾಂತರ ನಿಮ್ಮ ತಲೆಯಿಂದ, ನಿಮ್ಮ ಪಾದದವರೆಗೆ ರಕ್ತವನ್ನು ಸಾಗಿಸುತ್ತದೆ. ಪ್ರತಿ ದಿನವೂ ಪ್ರತಿನಿತ್ಯವೂ ನಾಶವಾಗಿ ಹೋಗುವ ಜೀವಕಣಗಳಿಗೆ ಬದಲಾಗಿ ನಿಮ್ಮ ದೇಹವು 172 ಬಿಲಿಯನ್ ಹೊಸ ಜೀವಕಣಗಳನ್ನು ಉಂಟು ಮಾಡುತ್ತದೆ. ನೀವು ಇಂದು ಜೀವಿಸುತ್ತಿರುವುದು ಅಶ್ಚರ್ಯಕರವಲ್ಲವೇ?

ರಸಗ್ರಂಥಿಗಳನ್ನು ಸ್ವಲ್ಪ ನೋಡಿರಿ. ನಿಮ್ಮ ದೇಹದಲ್ಲಿರುವ ಥೈರಾಯಿಡ್ ಗ್ರಂಥಿಗೆ ಪ್ರತಿನಿತ್ಯವು 1/5000 ಗ್ರಾಂನಷ್ಟು ಅಯೋಡಿನ್ (ಒಂದು ರೀತಿಯ ಲವಣ) ಅಗತ್ಯವಿರುತ್ತದೆ. ಒಂದು ವೇಳೆ ನೀವು ಶಿಶುವಾಗಿದ್ದಾಗ ಆ ಅಲ್ಪ ಅಂಶವು ಕಡಿಮೆಯಾಗಿದ್ದರೆ, ನೀವು ಖಂಡಿತವಾಗಿ ಬುದ್ದಿಮಾಂದ್ಯರಾಗುತ್ತಿದ್ದಿರಿ. ನಿರ್ಣಾಳ ಗ್ರಂಥಿಯು ಇನ್ನೂ ಅದ್ಭುತವಾದದ್ದು. ಇದು ಪ್ರತಿದಿನವೂ ಕೇವಲ ಒಂದು ಗ್ರಾಂನಲ್ಲಿ ದಶಲಕ್ಷದಲ್ಲಿನ ಒಂದು ಭಾಗದಷ್ಟು ಜೀವಕಣ ತಯಾರಿಸುತ್ತದೆ. ಈ ಉತ್ಪಾದನೆಯು ಒಂದು ವೇಳೆ ಹೆಚ್ಚು ಅಥವಾ ಕಡಿಮೆಯಾದರೆ, ನಿಮ್ಮಲ್ಲಿ ಶಾರೀರಿಕವಾಗಿ ಅಥವಾ ಮನಸಿಕವಾದ ಅಸಾಧಾರಣ ಬೆಳವಣಿಗೆ ಕಂಡು ಬರುತ್ತಿತ್ತು! ನಿಮ್ಮ ದೇಹದ ಅತಿ ಕ್ಲಿಷ್ಟವಾದ ಯಂತ್ರಕ್ರಿಯೆಯು ಬಹು ಪರಿಪೂರ್ಣವಾಗಿ ಕೆಲಸ ಮಾಡುತ್ತಿರುವುದರಿಂದ ನೀವು ಈಗ ಆರೋಗ್ಯವಾಗಿದ್ದೀರಿ.

ಸತ್ಯವೇದದ ಒಬ್ಬ ಬರಹಗಾರನು, "ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ ಓ ದೇವರೇ, ನಿನ್ನನ್ನು ನಾನು ಕೊಂಡಾಡುತ್ತೇನೆ!"ಎಂದು ಹೇಳುತ್ತಾನೆ. ಸೌಂದರ್ಯದಿಂದ ಹಾಗು ಸಮತೋಲನದಿಂದ ದೇವರು ಸೃಷ್ಟಿಸಿದ ಈ ಮಾನವನ ದೇಹವು ಅತಿ ಅತಿಶಯವಾದದ್ದು. ಆದರೆ ಮನುಷ್ಯನ ದೆಃಅದಲ್ಲಿ ಪ್ರಾಣವಿದೆ. ಅದು ಅವನನ್ನು ವಿವೆಚಿಸುವಂತೆ ಹಾಗು ಯೋಚಿಸುವಂತೆ ಮಾಡುತ್ತದೆ. ಮನುಷ್ಯನು ಯೋಚನೆ ಮಾಡಿ, ಅವುಗಳನ್ನು ದಾಖಲಿಸಿ, ಮುಂದಿನ ಸಂತತಿಗೆ ತನ್ನ ಜ್ಞಾನವನ್ನು ಸಾಗಿಸಬಹುದು. ಇದನ್ನು ಪ್ರಾಣಿಗಳಿಗೆ ಮಾಡಲು ಸಾಧ್ಯವಿಲ್ಲ. ಮನುಷ್ಯನ ಬುದ್ಧಿಶಕ್ತಿಯು ದೇವರಲ್ಲಿ ಕಂಡು ಬರುವ ಪರಮಶ್ರ‍ೇಷ್ಟ ಬುದ್ದಿಯ ಒಂದು ಅಂಶವಾಗಿದೆ.

ಆದರೆ ಮನುಷ್ಯನಿಗೆ ಪ್ರಾಣಕ್ಕಿಂತಲೂ ಮಹತ್ತರವಾದದ್ದು ಹಾಗು ಅದ್ಭುತವಾದದ್ದೊಂದಿದೆ. ಅದು ಆತ್ಮ. ಇದು ನಮ್ಮನ್ನು ಭೂಮಿಯ ಎಲ್ಲಾ ಸೃಷ್ಟಿಗಳಿಗಿಂತ ಉನ್ನತಕ್ಕೇರಿಸುತ್ತದೆ. ಈ ಆತ್ಮವು ನಮ್ಮ ಅಂತರಾಳದಲ್ಲಿರುತ್ತದೆ ಮತ್ತು ಈ ಆತ್ಮವು ನಮಗೆ ದೇವರೊಬ್ಬನು ಇದ್ದಾನೆ ಎಂದು. ಆ ಪರಮಾತ್ಮನಿಗೆ ನಾವು ಲೆಕ್ಕ ಒಪ್ಪಿಸಬೇಕೆಂದು ನಮಗದು ತಿಳಿಸುತ್ತದೆ.

ನಾಗರೀಕತೆಯಾಗಲಿ ಅಥವಾ ವಿದ್ಯಾಭ್ಯಾಸವಾಗಲಿ ದೇವರಿದ್ದಾನೆ ಎಂಬುದಾಗಿ ಬೋಧಿಸುವುದಿಲ್ಲ ಹಾಗೂ ಮತವೂ ಸಹ. ಒಂದು ವೇಳೆ ಕಾಡಿನಲ್ಲಿ ವಾಸಿಸುವ ಅನಾಗರೀಕರನ್ನು ನೀವು ಭೇಟಿಯಾದರೆ, ಅವರಲ್ಲಿಯೂ ದೇವರ ಕುರಿತು ಅರಿವಿರುವುದನ್ನು ನಾವು ಕಾಣುತ್ತೇವೆ. ಅವರು ಯಾವುದಾದರೊಂದು ವಸ್ತುವನ್ನು ಆರಾಧಿಸುತ್ತಾರೆ. ಏಕೆಂದರೆ ಪರಮಾತ್ಮನೊಬ್ಬನಿದ್ದಾನೆ ಮತ್ತು ಅವನಿಗೆ ತಾವು ಲೆಕ್ಕ ಕೊಡಬೇಕೆಂದು ಅವರ ಆತ್ಮವು ತಿಳಿಸುತ್ತದೆ. ಯಾವ ಪ್ರಾಣಿಗೂ ಸಹ ಈ ರೀತಿಯ ಆತ್ಮಿಕ ಲೆಕ್ಕ ಕೊಡುವ ಭಾವನೆಗಳಿರುವುದಿಲ್ಲ. ಮನುಷ್ಯನಿಗೆ ಮನಸ್ಸಾಕ್ಷಿಯು ಉಂಟು. ಆದರೆ ನೀವು ಒಂದು ಧಾರ್ಮಿಕ ಕೋತಿಯನ್ನಾಗಲಿ ಅಥವಾ ನಾಯಿಯನ್ನು ನೋಡಲು ಸಾಧ್ಯವಿಲ್ಲ.

ಮನುಷ್ಯನು ತನ್ನ ಆಯುಷ್ಯಕ್ಕೂ ಮೀರಿ ಇರುವ ಯಾವುದೋ ಉದ್ದೇಶಕ್ಕಾಗಿ ಸೃಷ್ಟಿಸಲ್ಪಟ್ಟನು. ಮನುಷ್ಯನು ನಿತ್ಯತ್ವದ ಸೃಷ್ಟಿ. ವಿಕಾಸವಾದಿಗಳು ಮನುಷ್ಯನಿಗೂ ಹಾಗು ಪ್ರಾಣಿಗಳಿಗೂ ವ್ಯತ್ಯಾಸವಿಲ್ಲವೆಂದು ಹೇಳಬಹುದು. ಆದರೆ ಪ್ರತಿಯೊಂದು ರಾಷ್ಟ್ರದಲ್ಲಿಯೂ, ಒಂದು ಆನೆಯನ್ನು ಕೊಲ್ಲುವುದಕ್ಕಿಂತ ಒಂದು ಮಗುವನ್ನು ಕೊಲ್ಲುವುದು ಒಂದು ದೊಡ್ಡ ಅಪರಾಧವೆಂದು ಕಾನೂನು ಪರಿಗಣಿಸುತ್ತದೆ. ಆನೆಯು ದೊಡ್ಡದಾಗಿರಬಹುದು. ಆದರೆ ಚಿಕ್ಕ ಮಗುವು ಅದಕ್ಕಿಂತಲೂ ಬಹು ಅಮೂಲ್ಯವು. ಏಕೆಂದರೆ ಮಗು ದೇವರ ಸ್ವರೂಪದಲ್ಲಿ ಸೃಸ್ಟಿಸಲ್ಪಟ್ಟಿದೆ. ಮನುಷ್ಯನು ದೇವರ ಸೃಷ್ಟಿಯ ಕಿರ‍ೀಟ. ದೇವರೊಂದಿಗೆ ಅನ್ಯೋನ್ಯತೆ ಉಳ್ಳವನಾಗಿರಬೇಕೆಂದು ಮನುಷ್ಯನು ಸೃಷ್ಟಿಸಲ್ಪಟ್ಟನು.

ಅಧ್ಯಾಯ 3
ನಿಜ ಕ್ರಾಂತಿಯ ಕುರಿತಾದ ಸತ್ಯಾಂಶಗಳು

ಕ್ರಾಂತಿಯೂ ಈ ದಿನದ ಒಂದು ಸಾಮಾನ್ಯ ಪದ. ಕ್ರಾಂತಿಯ ಅವಶ್ಯಕತೆಯಿರುವ ಯಾವುದಾದರೂ ಒಂದು ಕ್ಷೇತ್ರವನ್ನು ಗಮನಿಸಿ. ನಾವೆಲ್ಲರೂ ನಮ್ಮ ಧರ್ಮವನ್ನು ನಮ್ಮ ತಂದೆ ತಾಯಿಯವರಿಂದ ಭಾದ್ಯತೆಯಾಗಿ ಪಡೆದೆದ್ದೇವೆ ಮತ್ತು ಇದರೊಂದಿಗೆ ನಾವು ಕೆಲವು ಅಭಿಪ್ರಾಯಗಳನ್ನು ಅಬಿವೃದ್ಧಿಸಿ ಹಾಗು ಅನೇಕ ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದೇವೆ. (ಈ ಪೂರ್ವ ಕಲ್ಪಿತ ಅಭಿಪ್ರಾಯಗಳು ಅನೇಕರನ್ನು ತಾವು ಬಾಲ್ಯದಲ್ಲಿ ಕಲಿತ ಪಾಠಗಳನ್ನು ಪ್ರಶ್ನಿಸುವಂತೆ ಅಡ್ಡಿ ಉಂಟು ಮಾಡುತ್ತವೆ.

ವೈಜ್ಞಾನಿಕ ಕ್ಷೇತ್ರದಲ್ಲಿ, ಮನುಷ್ಯನು ತನ್ನ ಪೂರ್ವಿಕರು ನಂಬಿದ್ದನ್ನೇ ಸ್ವೀಕರಿಸಿದ್ದರೆ, ವಿಜ್ಞಾನದ ಪ್ರಗತಿಯೇ ಅಗುತ್ತಿರಲಿಲ್ಲ.

ಒಂದು ಉದಾಹರಣೆಯನ್ನು ಕುರಿತು ಆಲೋಚಿಸಿ. ಸಾವಿರಾರು ವರ್ಷಗಳಿಂದ ಭೂಮಿಯು ವಿಶ್ವದ ಕೇಂದ್ರವೆಂದೂ, ಸೂರ್ಯ ಹಾಗು ನಕ್ಷತ್ರಗಳು ಅದರ ಸುತ್ತಲು ಚಲಿಸುತ್ತಿರುವುದಾಗಿಯೂ ಮನುಷ್ಯರು ನಂಬಿದ್ದರು. ಆದರೆ 450 ವರ್ಷಗಳ ಹಿಂದೆ ಕೋಪರ್ನಿಕಸ್ ಎಂಬ ಮನುಷ್ಯನು ತನ್ನ ಪೂರ್ವಿಕರು ನಂಬಿದ್ದನ್ನು ಪ್ರಶ್ನಿಸಿ ಅದು ತಪ್ಪೆಂದು ರುಜುವಾತುಪಡಿಸಿದನು.

ಧರ್ಮದ ಕ್ಷೇತ್ರದಲ್ಲಿ ಮಾತ್ರ ಮನುಷ್ಯರು ತಮ್ಮ ತಂದೆ ತಾಯಿಯರಿಂದ ಅಥವಾ ಗುರುಗಳಿಂದ ಬೋಧಿಸಲ್ಪಡುವುದನ್ನು ಕುರುಡಾಗಿ ಸ್ವೀಕರಿಸುತ್ತಿದ್ದಾರೆ. ನಿಮ್ಮ ಬಗ್ಗೆ ಏನು? ನಿಮ್ಮ ಧಾರ್ಮಿಕ ವಿಷಯದಲ್ಲಿ ದೃಡ ನಿಲುವೇನು? ನಿಮ್ಮದು ಪೂರ್ವಿಕರಿಂದ ಕುರುಡಾಗಿ ಪಡೆದುಕೊಂಡು ಬಂದ ಸ್ವಾಸ್ಥ್ಯವೋ? ಅಥವಾ ದೇವರ ಕುರಿತಾಗಿ ಮತ್ತು ನಿತ್ಯತ್ವದ ಕುರಿತಾಗಿ ನಿಮ್ಮದೆ ಆದ ದೃಡ ನಿಲುವುಂಟೋ? ಇದರ ಕುರಿತು ನಿಮ್ಮ ಮನಸಿನಲ್ಲಿ ನೀವು ಆಲೋಚಿಸಿದ್ದೀರೊ, ಮತ್ತು ನೀವು ನಿಶ್ಚಯವುಳ್ಳವರಾಗಿದ್ದೀರೋ?

ಜಗತ್ತು ಕಂಡ ಒಬ್ಬ ಶ್ರ‍ೇಷ್ಟನಾದ ಕ್ರಾಂತಿಕಾರನು ಯೇಸುಕ್ರಿಸ್ತನಾಗಿದ್ದಾನೆ. ಏಕೆಂದರೆ ಆತನು ಮನುಷ್ಯರನ್ನು ಆಂತರಿಕವಾಗಿ ಮಾರ್ಪಡಿಸುವುದಕ್ಕೆ ಬಂದನು. ಮನುಷ್ಯನು ಯಾವಾಗ ಈ ಒಳಗಿನ ಕ್ರಾಂತಿಯನ್ನು ಅನುಭವಿಸುತ್ತಾನೋ ಆಗ ಹೊರಗಿನದು ತನ್ನಷ್ಟಕ್ಕೆ ತಾನೇ ನೋಡಿಕೊಳ್ಳುವುದು. ನಾವು ಮೊದಲು ಸಮಸ್ಯೆಗೆ ಕಾರಣವಾದ ಈ ಬೇರಿನೊಂದಿಗೆ ವ್ಯವಹರಿಸಬೇಕು.

ಒಬ್ಬ ವೈದ್ಯನು ರೋಗಿಗೆ ಚಿಕಿತ್ಸೆ ನೀಡುವಾಗ ಹೊರಗಿನ ರೋಗ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡುವುದಿಲ್ಲ. ರೋಗವನ್ನೇ ಉಪಚರಿಸುತ್ತಾನೆ. ಉದಾಹರಣೆಗೆ, ಕ್ಯಾನ್ಸರ್ ಹೊಂದಿದ ಒಬ್ಬ ವ್ಯಕ್ತಿ ತನಗೆ ಹಸಿವು ಆಗುವುದಿಲ್ಲವೆಂದು ಹೇಳಬಹುದು. ವೈದ್ಯನು ಬರೀ ಹಸಿವೆಯಾಗುವುದಿಲ್ಲವೆಂಬುದಕ್ಕಾಗಿ ಮಾತ್ರ ಉಪಚರಿಸಿ ಕ್ಯಾನ್ಸರ‍್ ಗೆ ಚಿಕಿತ್ಸೆ ನೀಡದೆ ಹೋದರೆ, ಅದು ವೈದ್ಯನ ಬುದ್ಧಿಹೀನತೆಯಾಗುವುದು. ನಮ್ಮ ಸಮಸ್ಯೆಗಳಿಗೆ ಬಾಹ್ಯ ಕ್ರಾಂತಿಯೇ ಪರಿಹಾರವೆಂದು ಅಲೋಚಿಸುವವರು ಅದೇ ತಪ್ಪನ್ನು ಮಾಡುತ್ತಾರೆ. ಆದರೆ ರೋಗವು ಹಾಗೇ ಉಳಿದಿರುತ್ತದೆ.

ಮನುಷ್ಯನು ತಾನೇ ಬದಲಾಗುವ ತನಕ, ನಮ್ಮ ಸಮಾಜವು ಹಾಗು ಲೋಕವು ಎದುರಿಸುವ ಸಮಸ್ಯೆಗಳಿಗೆ ಪರಿಹಾರವಿರುವುದಿಲ್ಲ.

ಅಧ್ಯಾಯ 4
ನಮ್ಮ ಅಗತ್ಯತೆಗಳ ಕುರಿತಾದ ಸತ್ಯಾಂಶಗಳು.

ಮನುಷ್ಯನ ಅತ್ಯವಶ್ಯಕ ಅಗತ್ಯವೇನು? ಅದು ಅಹಾರವೂ ಇಲ್ಲವೆ ಆಶ್ರಯವೋ ಅಥವಾ ಉದ್ಯೋಗವೋ?

ಒಬ್ಬ ಮನುಷ್ಯನು ಸತ್ತ ನಂತರ ಆತನಿಗೆ ಏನಾಗುತ್ತದೆ? ಒಂದು ವೇಳೆ ಅವನಿಗೆ ಸಾಕಷ್ಟು ಅಹಾರವಿದ್ದ್, ಆಶ್ರಯವಿದ್ದು ಹಾಗು ಉದ್ಯೋಗವಿದ್ದರೂ ಈ ಜೀವನದಲ್ಲಿ ಮರಣವು ಮನುಷ್ಯನ ಇರುವಿಕೆಯ ಅಂತ್ಯವೋ? ಇಲ್ಲ. ಈ ಲೋಕದ ಜೀವನವು ನಿತ್ಯತ್ವಕ್ಕೆ ಒಂದು ಪೀಠಿಕೆಯಷ್ಟೆ. ನಮ್ಮ ಈ ಲೋಕದ ಜೀವಿತವು ಒಂದು ಪರೀಕ್ಷೆಯು, ಮತ್ತು ದೇವರು ನಮ್ಮನ್ನು ಗಮನಿಸುತ್ತಿದ್ದಾನೆ. ನಮ್ಮ ನಿತ್ಯತ್ವವು ಏನಾಗಿರಬಹುದೆಂದು ಈ ಲೋಕದ ಜೀವಿತವು ತಿಳಿಸುವಂತಹದು ಆಗಿದೆ. ನಮ್ಮೆ ಪ್ರತಿಯೊಬ್ಬರ ಜೀವಿತದ ಕುರಿತು ದೇವರಿಗೆ ನಿಜವಾದ ಸತ್ಯವು ಗೊತ್ತು. ನಾವು ಒಂದು ವೇಳೆ ನಮ್ಮ ಸ್ನೇಹಿತರನ್ನು ನಮ್ಮ ಒಳ್ಳೆಯತನದಿಂದ ಮೋಸಪಡಿಸಬಹುದು. ಆದರೆ ದೇವರನ್ನು ಮೋಸಪಡಿಸಲು ಸಾಧ್ಯವಿಲ್ಲ. ನಾವೆಲ್ಲರು ದೇವರ ದೃಷ್ಟಿಯಲ್ಲಿ ಅಪರ‍ಾಧಿಗಳಾಗಿದ್ದೇವೆ. ಏಕೆಂದರೆ ನಾವೆಲ್ಲರೂ ದೇವರ ಉನ್ನತವಾದ ಹಾಗು ಪವಿತ್ರವಾದ ಮಟ್ಟವನ್ನು ತಲುಪಲಾರದವರಾಗಿದ್ದೇವೆ. ದೇವರೊಡನೆ ಅನ್ನ್ಯೋನ್ಯತೆಯಿಂದಿರಲು ಮಾನವನು ಸೃಷ್ಟಿಸಲ್ಪಟ್ಟನು. ಅವನಲ್ಲಿ ಇದು ಇಲ್ಲದೆ ಹೋದರೆ , ಅವನು ಈ ಲೋಕದಲ್ಲಿ ಜೀವಿಸುವ ಪ್ರಥಮ ಉದ್ದೇಶವನ್ನು ಪೂರೈಸದೆ ಸೋತು ಹೋಗಿರುವನು. ಅವನಲ್ಲಿರುವ ಪಾಪಾಪರಾಧವು ತೆಗೆಯಲ್ಪಡುವ ತನಕ, ಅವನು ಈ ಅನ್ಯೋನ್ಯತೆಯನ್ನು ಹೊಂದಲಾರನು. ಇದೇ ಮನುಷ್ಯನ ಅತ್ಯವಶ್ಶಕ ಅಗತ್ಯ.

ಹೇಗೆ ನಮ್ಮ ಪಾಪಾಪರಾಧವು ತೆಗೆಯಲ್ಪಡುವುದು? ನಮ್ಮ ಪಾಪಕ್ಕಾಗಿ ನಾವು ಕೇವಲ ವ್ಯಥೆಪಡುವುದು ಸಾಕಾಗದು. ಒಂದು ವೇಳೆ ನಾನು ಬ್ಯಾಂಕಿನಲ್ಲಿ ಕಳ್ಳತನ ಮಾಡಿದ್ದೇನೆಂದು ನ್ಯಾಯಲಯದಲ್ಲಿ ರುಜುವಾತಾಗಿ ಮತ್ತು ನನ್ನ ತಂದೆ ನ್ಯಾಯಧಿಪತಿಯಾಗಿದ್ದರೆ ನಾನು ಮಾಡಿದ ಕೃತ್ಯಕ್ಕೆ ವ್ಯಥೆ ಪಡುತ್ತೇನೆಂದು ಅವರು ನನ್ನನ್ನು ಹಾಗೆ ಹೋಗಲು ಬಿಡಲಾಗುವುದಿಲ್ಲ. ಅವರು ನನ್ನ ತಂದೆಯಾಗಿರುವುದರಿಂದ ನನ್ನನ್ನು ಪ್ರೀತಿಸಬಹುದು ಆದರೆ ಅವರು ನ್ಯಾಯಾಲಯದಲ್ಲಿ ನ್ಯಾಯಾಧಿಪತಿಯಾಗಿರುವುದರಿಂದ ಅವರು ನನ್ನನ್ನು ತಮ್ಮ ಮಗನೆಂದು ಪ್ರೀತಿಸಿದರೂ ಮತ್ತು ನಾನು ಬಹುವಾಗಿ ವ್ಯಥೆಪಟ್ಟರೂ, ನಾನು ಮಾಡಿದ ತಪ್ಪಿಗಾಗಿ ಅವರು ನನ್ನನ್ನು ಶಿಕ್ಷಿಸಲೇ ಬೇಕು.

ನಾವು ನಂಬಿದ ದೇವರು ನೀತಿವಂತನಾದರೆ, ಆತನು ಮಾನವರಿಗಿಂತ ಹೆಚ್ಚಾಗಿ ನೀತಿವಂತನಾಗಿರಬೇಕು. ಆತನು ನಮ್ಮನ್ನು ನಾವು ವ್ಯಥೆ ಪಟ್ಟಿದ್ದಕ್ಕೆ ಅಥವಾ ನಮ್ಮನ್ನು ಪ್ರೀತಿಸುವವನಾಗಿರುವ ಮಾತ್ರಕ್ಕೆ ಹಾಗೆ ಹೋಗಗೊಡಿಸಲಿಕ್ಕೆ ಹೇಗೆ ಸಾಧ್ಯ? ನ್ಯಾಯವು ಶಿಕ್ಷೆಯನ್ನು ಆದೇಶಿಸುತ್ತದೆ.

ನನ್ನ ತಂದೆಯು ನ್ಯಾಯಾಲಯದಲ್ಲಿ ಒಂದು ವೇಳೆ ನನಗೆ ಸಹಾಯ ಮಾಡಬಹುದು. ಕಾನೂನಿನ ಪ್ರಕಾರ ನನಗೆ ವಿಧಿಸಿದ ದಂಡನೆಯು 1,00,000 ರೂಪಾಯಿಗಳಾಗಿದ್ದರೆ, ದಂಡನೆ ವಿಧಿಸಿದ ನಂತರಾವರು ತಮ್ಮ ಶ್ರಮದಿಂದ ಸಂಪಾದಿಸಿದ ರ‍್. 1,00,000 ತೆಗೆದು ಕೊಟ್ಟು ಈ ರೀತಿಯಾಗಿ ಹೇಳಬಹುದು: "ಮಗನೇ ಹಣವು ಇಲ್ಲಿದೆ. ಹೋಗು, ಈಹಣವನ್ನು ದಂಡವಾಗಿ ಕಟ್ಟಿ ಬಿಡುಗಡೆಯಾಗು". ನ್ಯಾಯಾಧಿಪತಿಯಾಗಿ ಅವರು ನನ್ನನ್ನು ಶಿಕ್ಷಿಸಿ, ನನ್ನ ತಂದೆಯಾಗಿ ನನ್ನ ದಂಡವನ್ನು ತಾವೇ ಸ್ವತಃ ತೀರಿಸಿದರು.

ಇದನ್ನೇ ದೇವರೂ ಮಾಡಿರುವರು. ಆತನು ನ್ಯಾಯಾಧಿಪತಿಯಾಗಿ ನಮ್ಮ ಪಾಪದ ನಿಮಿತ್ತ ನಮ್ಮೆಲ್ಲರನ್ನೂ ನಿರಂತರ ಮರಣಕ್ಕೆ ಗುರಿಪಡಿಸುವವನಾಗಿದ್ದಾನೆ. ಆದರೆ ಆತನು ನಮ್ಮನ್ನು ಪ್ರೀತಿಸಿದ್ದರ ನಿಮಿತ್ತ, ಆತನು ಈ ಲೋಕಕ್ಕೆ ಯೇಸು ಕ್ರಿಸ್ತನಾಗಿ ಇಳಿದು ಬಂದಿದ್ದಾನೆ ಮತ್ತು ಆ ದಂಡನೆಯನ್ನು ತಾನೇ ಸ್ವತಃ ತೀರಿಸಿದ್ದಾನೆ.

ಆದರೆ ಈಗ ನಾವು ಮಾಡಬೇಕಾದದ್ದು ಏನೋ ಇದೆ. ನನ್ನ ತಂದೆಯು ಕೊಡುವ ಹಣವನ್ನು, ನಾನು ಅವರಿಂದ ಸ್ವೀಕರಿಸದೆ ಹೋದರೆ, ನಾನು ಬಿಡುಗಡೆಯನ್ನು ಹೊಂದಲಾರೆ. ಇದೇ ರೀತಿಯಾದ ಕ್ಷಮಾಪಣೆಯನ್ನು ಯೇಸು ಕ್ರಿಸ್ತನಲ್ಲಿ ದೇವರು ನಮಗೆ ದಯಪಾಲಿಸುವವರಾಗಿದ್ದಾರೆ. ಇದನ್ನು ನಾವು ಸ್ವೀಕರಿಸಲೇಬೇಕು. ಸ್ವೀಕರಿಸದೇ ಹೋದರೆ, ಇದರಿಂದ ಯಾವ ಪ್ರಯೋಜನವನ್ನು ಹೊಂದಲಾರೆವು.

.

ಅಧ್ಯಾಯ 5
ಚಟದ ಕುರಿತಾದ ಸತ್ಯಾಂಶಗಳು

ಲೋಕದ ಎಲ್ಲ ಕಡೆಗಳಲ್ಲಿಯೂ, ಜನರು ಐಹಿಕ ಭೋಗ, ಕೀರ್ತಿ, ಐಶ್ವರ್ಯ ಅಥವಾ ಅಧಿಕಾರಗಳನ್ನು ಬೆನ್ನಟ್ಟುತ್ತಿದ್ದಾರೆ.

ಆದರೆ ಇವುಗಳೊಂದಿಗೆ ಒಂದು ನಿಯಮವಿರುವುದು. ಅದನ್ನು ನಾವು ಕುಂದಿಹೋಗುವ ಪ್ರತಿಪಲ ಕರೆಯಬಹುದು.

ಈ ನಿಯಮವು ಯಾವ ರೀತಿಯಲ್ಲಿ ಕಾರ್ಯ ಮಾಡುತ್ತದೆಂದು ಅರಿತುಕೊಳ್ಳಲು ಐಹಿಕ ಭೋಗದ ಬೆನ್ನಟ್ಟುವಿಕೆಯ ಕುರಿತು ಒಂದು ಉದಹರಣೆಯನ್ನು ತೆಗೆದುಕೊಳ್ಳೋಣ. ಸ್ವಲ್ಪ ಪ್ರಮಾಣದಲ್ಲಿ ತಂಬಾಕು, ಮದ್ಯಪಾನ, ಸಂಗೀತ, ಮಾದಕವಸ್ತು, ಅಶ್ಲೀಲ ಚಿತ್ರಗಳು ಅಥವಾ ಅನೈತಿಕ ಲೈಂಗಿಕತೆ ಇತ್ಯಾದಿಗಳನ್ನು ಅನುಭವಿಸುವ ಪ್ರಾರಂಭದಲ್ಲಿ, ಐಹಿಕ ಭೋಗವು ಸ್ವಲ್ಪ ಮಟ್ಟಿಗೆ ಸಂತೃಪ್ತಿಯನ್ನು ಕೊಡುತ್ತದೆ. ಯಾವಾಗ ಇವುಗಳಿಂದಲೇ ತೃಪ್ತಿ ಹೊಂದಲು ಪ್ರಾರಂಭಿಸುತ್ತೇವೋ, ಈ ಸಂಗತಿಗಳು ಆ ವ್ಯಕ್ತಿಯ ಮೇಲೆ ಬಿಗಿಯಾದ ಹಿಡಿತವನ್ನು ಸಾಧಿಸುತ್ತವೆ. ಎಲ್ಲಿಯವರೆಗೆ ಅವನು ಈ ಸಂಗತಿಗಳಿಗೆ ಅಧೀನನಾಗುತ್ತನೋ ಅಲ್ಲಿಯವರೆಗೆ ಆ ವ್ಯಕ್ತಿಯು ಆ ಭೋಗದ ಪ್ರಚೋದನೆಯಿಲ್ಲದೆ ಜೀವಿಸಲು ಅಶಕ್ತನಾಗುತ್ತಾನೆ.

ಹಾಗಾದರೂ, ಚಟಗಾರನು ಅದೇ ಪ್ರಮಾಣದ ಸಂತೃಪ್ತಿಯನ್ನು ಪಡೆಯುವುದಕ್ಕಾಗಿ, ಮಾದಕ ವಸ್ತುವಿನ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕಾಗಿರುವುದನ್ನು ಕಂಡುಕೊಳ್ಳುತ್ತಾನೆ.

ಇದೇ ಕುಂದಿಹೋಗುವ ಪ್ರತಿಫಲವೆಂಬ ನಿಯಮ.

ಚಟಗಾರನು ಬಡಗಿಯ ತಿರುಡಿಯಲ್ಲಿ ಸಿಕ್ಕಿಹಾಕಿಕೊಂಡು ತನ್ನನ್ನು ಬಿಡಿಸಿಕೊಳ್ಳಲು ಅಸಾಧ್ಯವಾಗಿರುವುದನ್ನು ಕಂಡುಕೊಳ್ಳುತ್ತಾನೆ.

ಕೀರ್ತಿಯನ್ನು ಬೆನ್ನಟ್ಟುವ ಬಗ್ಗೆ ಪರಿಗಣಿಸಿರಿ. ಇದನ್ನು ಬೆನ್ನಟ್ಟುವುದು ಕ್ರೀಡೆಯಲ್ಲಾಗಲಿ, ಸಿನಿಮಾಗಳಲ್ಲಾಗಲಿ, ಅಥವಾ ಬೇರಾವುದರಲ್ಲೇ ಆಗಲಿ, ಅದು ಅಂತ್ಯವಿಲ್ಲದ್ದು. ನಗರ ಮಟ್ಟದಲ್ಲಿ ಕೀರ್ತಿಯನ್ನು ಸಾಧಿಸಿದವನು, ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆಯಲು ಪ್ರಯತ್ನಿಸುತ್ತಾನೆ. ತರುವಾಯ ಪ್ರಪಂಚದಲ್ಲೇ ಕೀರ್ತಿವಂತನಾಗಲು ಪ್ರಯತ್ನಿಸುತ್ತಾನೆ. ಇದನ್ನು ಬೆನ್ನಟ್ಟುವುದರಲ್ಲಿ ಜನರು ತಮ್ಮ ಹಾಗು ಇತರರ ಮನಸ್ಸಕ್ಷಿಯನ್ನು ನಾಶಪಡಿಸಿಕೊಳ್ಳಬಹುದು. ಕೊನೆಯದಾಗಿ ಅವರು ಏನನ್ನು ಪಡೆಯುತ್ತಾರೆ? ಇನ್ನೇನೂ ಸಾಧಿಸಿಕೊಳ್ಳಲು ಇರದೆ, ಅವರು ನಿರಾಶರಾಗುತ್ತಾರೆ. ಅನೇಕ ಸಿನಿಮಾ ತಾರೆಯರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರೂ ಅದರಿಂದ ತೃಪ್ತಿಪಟ್ಟುಕೊಳ್ಳದೆ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ನಿಯಮವು ಐಶ್ವರ್ಯವನ್ನು ಬೆನ್ನಟ್ಟುವುದರಲ್ಲಿ ಕಾರ್ಯಮಾಡುವ ರೀತಿಯನ್ನು ಗಮನಿಸಿ. ಮನುಷ್ಯನು ಪ್ರಾರಂಭದಲ್ಲಿ ತನ್ನ ಅಗತ್ಯಕ್ಕಿಂತ ಹೆಚ್ಚಿನ ಐಶ್ವರ್ಯವನ್ನು ಕೂಡಿಸಿಕೊಳ್ಳುವಾಗ, ಅವನು ಅಂತ್ಯವಿಲ್ಲದಿರುವ ಓಟದಲ್ಲಿ ಓಡುವವನಾಗಿದ್ದಾನೆ. ಪ್ರಪಂಚದಲ್ಲಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸುವಷ್ಟು ದವ್ಯವು ಇದ್ದರೂ ಸಹ, ಇಷ್ಟು ದ್ರವ್ಯವು ಒಬ್ಬ ದುರಾಶೆಯ ವ್ಯಕ್ತಿಯನ್ನು ತೃಪ್ತಿಪಡಿಸುವುದಕ್ಕೆ ಸಾಕಾಗುವುದಿಲ್ಲ. ಇಲ್ಲಿಯೂ ಸಹ ಕುಂದಿಹೋಗುವ ಪ್ರತಿಫಲವೆಂಬ ನಿಯಮದ ಕಾರ್ಯವನ್ನು ನೋಡುತ್ತೇವೆ. ವಿದ್ಯುತ್ ಉಪಕರಣಗಳು, ದುಂದುವೆಚ್ಚದ ಆಹಾರ, ಅನೇಕ ಸಂಚಾರ ಮಾಡಿ ನೋಡುವ ಸಾಹಸ, ಉನ್ನತವಾದ ಸಮಾಜ ಮುಂತಾದವುಗಳನ್ನು ಮನುಷ್ಯನು ತನ್ನ ಐಶ್ವರ್ಯದಿಂದ ಸಂಪಾದಿಸಿಕೊಂಡರೂ ಈಗ ಅದು ಅವನನ್ನು ಅಲ್ಪವಾಗಿ ಮತ್ತು ಶೂನ್ಯವಾಗಿರುವುದನ್ನು ಕಾಣುತ್ತಾನೆ. ಅವನು ತನ್ನಲ್ಲಿ ಕಡಿಮೆ ಐಶ್ವರ್ಯವಿದ್ದಾಗ ತಾನು ಸಂತೋಷದಿಂದ ಹಾಗು ನಿಶ್ಚಿಂತೆಯಿಂದ ಇದ್ದದ್ದನ್ನು ಅರಿತುಕೊಳ್ಳೂತ್ತಾನೆ. ಅವನ ಕೌಟುಂಬಿಕ ಜೀವಿತವು ಕೂಡ ನಾಶವಾಗಿರುತ್ತದೆ.

ಯೇಸು ಕ್ರಿಸ್ತನು ಈ ರೀತಿಯಾಗಿ ಹೇಳಿದ ಮಾತುಗಳು ಸತ್ಯವೆಂದು ರುಜುವಾಗಿಸಲ್ಪಡುತ್ತವೆ. "ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವನಾಧಾರವಾಗುವುದಿಲ್ಲ"

ಅಧಿಕಾರವನ್ನು ಬೆನ್ನಟ್ಟುವವರಿಗೆ ಅಥವಾ ರಾಜಕೀಯ ಕ್ಷೇತ್ರದಲ್ಲಿ ಈ ನಿಯಮವು ಯಾವ ರೀತಿಯಲ್ಲಿ ಅನ್ವಯಿಸುತ್ತದೆ ಎಂಬುದನ್ನು ಗಮನಿಸೋಣ. ಒಬ್ಬ ವ್ಯಕ್ತಿಯು ಒಂದು ವೇಳೆ ಲೋಕಸಭೆಯ ಸದಸ್ಯನಾಗೆ ತೃಪ್ತಿಯಿಂದಿದ್ದವನು ಮಂತ್ರಿಸ್ಥಾನವನ್ನು ಆಶಿಸಬಹುದು. ಒಂದು ವೇಳೆ ತಾನು ದೇಶದಲ್ಲೇ ಅತ್ಯುನ್ನತ ಪದವಿಯನ್ನು ಪಡೆದರೂ ತನ್ನಲ್ಲಿ ಆಶಾಭಂಗವಿರುವುದನ್ನು ಮತ್ತು ಅಸಂತೋಷದಿಂದ ತಾನು ತುಂಬಿರುವುದನ್ನು ಅವನು ಕಂಡುಕೊಳ್ಳುತ್ತಾನೆ. ಒಂದು ಹಳೇ ಗಾದೆ ಮಾತಿನಂತೆ, ’ಕಿರೀಟವನ್ನು ಧರಿಸಿದ ತಲೆಗೆ ಅವಿಶ್ರಾಂತಿಯಿರುವುದು’. ಅ ವ್ಯಕ್ತಿಯು ಅಪರಿಚಿತ ವ್ಯಕ್ತಿಯಾಗಿದ್ದಾಗ ತನ್ನ ಪ್ರಾಣಹತ್ಯೆಯ ಭಯದಲಿರಲಿಲ್ಲ!

ಈ ಎಲ್ಲಾ ಕ್ಷೇತ್ರಗಳಲ್ಲಿ ಶೂನ್ಯತೆ ಹಾಗೂ ಆಶಾಭಂಗವಿರುವುದೇಕೆ? ಕುಂದಿ ಹೋಗುವ ಪ್ರತಿಫಲವೆಂಬ ನಿಯಮವನ್ನು ದೇವರು ತಾನೇ ಎಲ್ಲ ಆಕರ್ಷಕ ಹಾಗು ಮಹತ್ತಾದುಗಳ ಮೇಲೆ ಇಟ್ಟಿದ್ದಾನೆ. ಇದರಿಂದ ಮನುಷ್ಯನು ತಾನು ನಿತ್ಯತ್ವದ ಸೃಷ್ಟಿಯಾಗಿದ್ದೇನೆಂಬುದನ್ನು ಅರಿತುಕೊಳ್ಳಲು ಸಾಧ್ಯ. ಮನುಷ್ಯನು ಆತ್ಮಿಕ ಶೂನ್ಯತೆಯಿಂದ ಸೃಷ್ಟಿಸಲ್ಪಟ್ಟವನಾಗಿದ್ದಾನೆ. ಈ ಶೂನ್ಯತೆಯನ್ನು ದೇವರಿಂದಲೇ ಹೊರತು ಮತ್ತಾರಿಂದಲೂ ತುಂಬಿಸಲಿಕ್ಕೆ ಆಗದು. ಮನುಷ್ಯನು ಸತತವಾಗಿ ಈ ಶೂನ್ಯತೆಯನ್ನು ಐಹಿಕ ಭೋಗದಿಂದಲೂ, ಕೀರ್ತಿ, ಐಶ್ವರ್ಯ ಅಥವಾ ಅಧಿಕಾರದಿಂದಲೂ ತುಂಬಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಇದು ನಿಷ್ಪಲವಾದ ಕಾರ್ಯ. ಏಕೆಂದರೆ, ಸತ್ಯವೇದವು ದೇವರು ಮನುಷ್ಯನ ಹೃದಯದಲ್ಲಿ ನಿತ್ಯತ್ವವನ್ನು ಇಟ್ಟಿದ್ದಾನೆ ಎಂದು ಹೇಳುತ್ತದೆ. ನಮ್ಮ ಹೃದಯಗಳು ದೇವರಲ್ಲಿ ವಿಶ್ರಾಂತಿ ಪಡೆಯುವವರೆಗೆ ಅದು ಅವಿಶ್ರಾಂತಿಯಲ್ಲಿರುವುದು.

ಆದರೆ ಯಾವ ರೀತಿಯಲ್ಲಿ ಯೋಗ್ಯವಾದ ಪಾನವನ್ನು ಒಂದು ಬಟ್ಟಲಿನಿಂದ ಕುಡಿಯುವುದಕ್ಕೆ ಮೊದಲು ಅದನ್ನು ಶುಚಿಮಾಡುತ್ತೇವೋ, ಅದೇ ರೀತಿಯಲ್ಲಿ ನಮ್ಮ ಹೃದಯವು ಮೊದಲು ಪಾಪದಿಂದ ಶುಚಿ ಹೊಂದಬೇಕು. ನಂತರವೇ ಸೃಷ್ಟಿಕರ್ತನು ನಮ್ಮ ಹೃದಯದಲ್ಲಿ ವಾಸಿಸಲು ಅದು ಯೋಗ್ಯವಾಗುತ್ತದೆ. ನಮ್ಮ ಹೃದಯವನ್ನು ಪಾಪದಿಂದ ಶುಚಿಯಾಗೆ ಮತ್ತು ಶುದ್ಧವಾಗಿರುವುದಕ್ಕಾಗಿ ಮತ್ತು ದೇವರು ಅಲ್ಲಿ ವಾಸಮಾಡುವುದಕ್ಕಾಗಿ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.

.

ಅಧ್ಯಾಯ 6
ನ್ಯಾಯತೀರ್ಪಿನ ದಿನದ ಕುರಿತಾದ ಸತ್ಯಾಂಶಗಳು

ನಮ್ಮ ಈ ಲೋಕದ ಜೀವಿತವು ಮರಣದ ಕಡೆ ಧಾವಿಸಲ್ಪಡುತ್ತದೆ. ದಿನದಿಂದ ದಿನಕ್ಕೆ ಎಣಿಕೆಯು ಒಂದು ದಿನದ ಕಡೆಗೆ ಧಾವಿಸುವುದು ಆ ಕಡೆಯ ದಿನದಲ್ಲಿ ಅಂತಿಮವಾಗಿ ನಾವೆ ನಮ್ಮ ದೇಹವನ್ನು ಬಿಡಬೇಕು. ಅದರ ನಂತರ ಮುಂದೇನು?

ಸತ್ಯವೇದವು ನಾವೆಲ್ಲರೂ ಮರಣದ ನಂತರ ನಮ್ಮ ಜೀವಿತದ ಕುರಿತಾಗಿ ದೇವರಿಗೆ ಲೆಕ್ಕ ಕೊಡಬೇಕೆಂಬುದಾಗಿ ಹೇಳುತ್ತದೆ. ಕೋಟಿ ಕೋಟಿ ಜನರು ಈ ಭೂಮಿಯಲ್ಲಿ ಜೀವಿಸಿ ಮರಣವನ್ನು ಹೊಂದಿದರು ದ್ಂದು ನಾವು ಗಮನಿಸುವಾಗ, ದೇವರು ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಮಾದಿದ ಕೆಲಸ, ಆಡಿದ ಮಾತು, ಆಲೋಚಿಸಿದ್ದು ಎಲ್ಲವನ್ನೂ ಹೇಗೆ ದಾಖಲಿಸಲು ಸಾಧ್ಯ? ನಾವು ಒಂದು ವೇಳೆ ಆಶ್ಚರ್ಯ ಪಡಬುಹುದು ಈ ದಾಖಲೆಗಳು ಪ್ರತಿ ಮನುಷ್ಯನ ಜ್ಞಾಪಕದಲ್ಲಿ ಎಡಲ್ಪಟ್ಟಿದೆ. ಜ್ಞಾಪಕವೆಂಬುದು ನಾವು ಮಾಡಿದ ಕೃತ್ಯ, ಆಡಿದ ಮಾತು, ಆಲೋಚನೆ, ವರ್ತನೆಗಳನ್ನು ಮತ್ತು ಉದ್ದೇಶಗಳನ್ನೂ ಪ್ರಾಮಾಣಿಕವಾಗಿ ವೀಡಿಯೊ ಟೇಪ್ ನಲ್ಲಿ ದಾಖಲಿಸಿದ ಹಾಗಿರುತ್ತದೆ. ವ್ಯಕ್ತಿಯು ಸತ್ತಾಗ, ಅವನು ಈ ದೇಹವನ್ನು ಬಿಟ್ಟು ಹೋದರೂ, ಅವನ ಜ್ಞಾಪಕವು ಅವನ ಆತ್ಮದೊಂದಿಗೆ ಸತ್ತವರ ಆತ್ಮಗಳಿರುವ ಸ್ಥಳಕ್ಕೆ ಹೋಗುತ್ತದೆ. ಅಂತಿಮವಾಗಿ ನ್ಯಾಯ ತೀರ್ಪಿನ ದಿನವು ಬಂದಾಗ ಅವನು ದೇವರ ಮುಂದೆ ನಿಂತು ತಾನು ಈ ಲೋಕದಲ್ಲಿ ಜೀವಿಸಿದ್ದರ ಬಗ್ಗೆ ಲೆಕ್ಕವನ್ನು ಒಪ್ಪಿಸಬೇಕು.

ಆ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತೀರ್ಪು ಕೊಡುವ ಸರದಿ ಬಂದಾಗ, ಎಲ್ಲರೂ ದೇವರು ದಾಖಲಿಸಿದ ಜೀವಿತವನ್ನು ನೋಡಲು ಆತನು ಆ ವ್ಯಕ್ತಿಯ ಜ್ಞಾಪಕದ ವೀಡಿಯೊ ಟೇಪನ್ನು ಆಡಬೇಕಾಗಿರುವುದು ಅದು ಪ್ರತಿಯೊಬ್ಬ ಮನುಷ್ಯನ ಸ್ವಂತ ಜ್ಞಾಪಕ ಜೀವಿತವು ದಾಖಲಾಗಿ ಪುನಃ ತೋರಿಸಲ್ಪಡುವುದರಿಂದ ಯಾರೂ ಅದರ ಸ್ಪಷ್ಟತೆಯ ಕುರಿತು ಪ್ರಶ್ನಿಸುವುದಕ್ಕಾಗುವುದಿಲ್ಲ.

ಇಂದು ಜನರು ಧರಿಸಿಕೊಂಡಿರುವ ಧಾರ್ಮಿಕತ್ವ ಹಾಗು ಗೌರವವೆಂಬ ವೇಷವು ಕಳಚಲ್ಪಟ್ಟು, ನಿಜವಾದ ಅಂತರಂಗದ ಮನುಷ್ಯನು ಆ ದಿನದಲ್ಲಿ ತೋರ್ಪಡಿಸಲ್ಪಡುವನು. ಆ ದಿನದಲ್ಲಿ ಧರ್ಮವು ಯಾರನ್ನೂ ರಕ್ಷಿಸಲಾರದು. ಆ ದಿನದಲ್ಲಿ ಅವರು ಯಾವ ಧರ್ಮವನ್ನು ಪಾಲಿಸಿದ್ದರೂ ಎಲ್ಲರೂ ಪಾಪಮಾಡಿದ್ದಾರೆಂಬುದಾಗಿ ಪರಿಗಣಿಸಲ್ಪಡುವರು. ಒಳ್ಳೆಯ ಕೆಲಸವನ್ನು ಮಾಡಿದ್ದರಿಂದಾಗಲಿ, ಮಠ ಮಂದಿರಗಳಿಗೆ ಅಥವಾ ಬಡವರಿಗೆ ದಾನವನ್ನು ಮಾಡಿದ್ದರಿಂದಾಗಲಿ ಯಾರೂ ರಕ್ಷಣೆಯನ್ನು ಹೊಂದುವುದಿಲ್ಲ. ಏಕೆಂದರೆ, ಇವು ಯಾವೂ ನಮ್ಮ ಪಾಪಗಳನ್ನು ಅಳಿಸುವುದಿಲ್ಲ.

ನಾವು ಮಾಡಿದ ಪಾಪಕ್ಕೆ ನ್ಯಾಯವಾದ ನೀತಿಯಿಂದ ಕೂಡಿದ ಶಿಕ್ಷೆಯು ಕೊಡಲ್ಪಡಬೇಕು ಪಾಪಕ್ಕೆ ಕೊಡುವಂತ ಶಿಕ್ಷೆಯು ದೈವಿಕ ನಿರ್ಣಯದ ಪ್ರಕಾರ

’ನಿತ್ಯ ಮರಣ’

ಎಂದು ಸತ್ಯವೇದವು ಹೇಳುತ್ತದೆ.

ನಮ್ಮನ್ನು ಈ ಶಿಕ್ಷೆಯಿಂದ ಬಿಡಿಸುವುದಗೋಸ್ಕರ ದೇವರ ಮಗನಾದ ಯೇಸುಕ್ರಿಸ್ತನು ಪರಲೋಕದಿಂದ ಭೂಮಿಗೆ ಮನುಷ್ಯನಾಗಿ ಸುಮಾರು 2000 ಸಾವಿರ ವರ್ಷಗಳ ಹಿಂದೆ ಇಳಿದು ಬಂದು ಶಿಲುಬೆಯಲ್ಲಿ ಸತ್ತನು. ಅಲ್ಲಿ ಆತನು ಎಲ್ಲ ಧರ್ಮದವರಿಗಾಗಿ ಎಲ್ಲ ಜನರ ಪಾಪದ ನಿಮಿತ್ತ ದೈವಿಕ ಶಿಕ್ಷೆಯನ್ನು ಅನುಭವಿಸಿದನು. ಆತನು ಸಮೀಪದಲ್ಲಿರುವ ಸಮಾಧಿಯಲ್ಲಿ ಹೂಳಲ್ಪಟ್ಟನು. ಆದರೆ ಮೂರು ದಿನಗಳ ನಂತರ ಮರಣದಿಂದ ಎದ್ದು ಬರುವುದರ ಮುಖಾಂತರ ಆತನು ತಾನೇ ದೇವರ ಮಗನೆಂದು ತೋರಿಸಿಕೊಟ್ಟನು. ನಲ್ವತ್ತು ದಿನಗಳ ನಂತರ, ಅನೇಕರು ಆತನನ್ನು ದೃಷ್ಟಿಸುತ್ತಿರುವಾಗಲೇ ಪರಲೋಕಕ್ಕೆ ಆತನು ಏರಿಸಲ್ಪಟ್ಟನು ಮತ್ತು ಭೂಮಿಗೆ ಮತ್ತೊಂದು ಬಾರಿ ನ್ಯಾಯತೀರಿಸುವುದಕ್ಕೋಸ್ಕರ ಬರುವೆನೆಂದು ವಾಗ್ದಾನು ಮಾಡಿದ್ದಾನೆ.

ಆತನು ವಾಗ್ದಾನ ಕೊಟ್ಟ ನಂತರ ಇಪ್ಪತ್ತು ಶತಮಾನಗಳು ಗತಿಸಿ ಹೋಗಿದ್ದರೂ ಆತನು ಬರುವ ಸಮಯವು ಹತ್ತಿರವಾಗಿದೆ. ಈ ದಿನಗಳಲ್ಲಿ ಯಾವುದಾದರೂ ಒಂದು ದಿನ ಆತನು ಪರಲೋಕದಿಂದ ಹಿಂದಿರುಗಿ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ.

ಮಾನವ ಕುಲದ ಪಾಪಕ್ಕಾಗಿ ಪ್ರಾಣ ಕೊಟ್ಟಾತನು ಚರಿತ್ರೆಯಲ್ಲಿ ಯೇಸುಕ್ರಿಸ್ತನೊಬ್ಬನೇ. ಮರಣದಿಂದ ಎದ್ದು ಬಂದಾತನೂ ಆತನೊಬ್ಬನೇ ಆಗಿದ್ದಾನೆ. ಈ ಎರಡರಲ್ಲಿ ಆತನು ಅದ್ವಿತೀಯನು.

ಈ ದಿನವೇ ನಮ್ಮ ಪಾಪಗಳು ನಮ್ಮ ಜ್ಞಾಪಕದ ವೀಡಿಯೋ ಟೇಪ್ ನಿಂದ ತೆಗೆಯಲ್ಪಡಬಹುದು ಮತ್ತು ಕ್ಷಮಿಸಲ್ಪಡಬಹುದು. ನಾವು ನಮ್ಮ ಪಾಪಗಳನ್ನು ಯಥಾರ್ಥವಾಗಿ ಒಪ್ಪಿಕೊಂಡು, ಅವುಗಳಿಂದ ತಿರುಗಿಕೊಂಡು ಮತ್ತು ದೇವರಲ್ಲಿ ಕ್ಷಮಾಪಣೆಯನ್ನು ಬೇಡಿಕೊಂಡಾಗ ಮಾತ್ರ ಇದು ಸಾಧ್ಯ. ಏಕೆಂದರೆ ಯೇಸು ಕ್ರಿಸ್ತನು ನಮಗಾಗಿ ಸತ್ತಿದ್ದಾನೆ ಮತ್ತು ಮರಣದಿಂದ ಎದ್ದು ಬಂದಿರುವುದರಿಂದ ಆತನ ಹೆಸರಿನ ನಿಮಿತ್ತ ಇದು ಸಾಧ್ಯವಿದೆ.

ದೇವರು ಮಾನವ ಕುಲಕ್ಕಾಗಿ ನೇಮಿಸಿರುವ ರಕ್ಷಣಾಮಾರ್ಗವೂ ಇದೊಂದೇ ಆಗಿದೆ. ಇದನ್ನು ಬಿಟ್ಟು ಮತ್ತೊಂದು ಮಾರ್ಗವು ಇರುವುದಾದರೆ ಅದು ಆ ನ್ಯಾಯ ತೀರ್ಪಿನ ದಿನದಲ್ಲಿ ನಮ್ಮ ಪಾಪಗಳನ್ನು ದಾಖಲಿಸಿಕೊಂಡಿರುವ ಜ್ಞಾಪಕಕದ ವೀಡಿಯೋ ಟೇಪನ್ನು ಪುನಃ ತೋರಿಸುವುದನ್ನು ಎದುರಿಸುವುದೇ ಆಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿರಿ.

.

ಅಧ್ಯಾಯ 7
ಚರಿತ್ರೆಯ ಅತೀ ಮಹತ್ತಾದ ಘಟನೆಗಳ ಕುರಿತಾದ ಸತ್ಯಾಂಶಗಳು

ಕರ್ತನಾದ ಯೇಸು ಕ್ರಿಸ್ತನ ಮರಣ ಹಾಗು ಪುನರುತ್ಥಾನ ಇವೆರಡೂ ಪ್ರಪಂಚದ ಚರಿತ್ರೆಯಲ್ಲಿಯೇ ಅತೀ ಮಹತ್ತರವಾದ ಹಾಗೂ ಅತಿ ಮಹತ್ವವಾದ ಘಟನೆಗಳಾಗಿವೆ.

ಇವು ಕ್ರೈಸ್ತರ ನಂಬಿಕೆಯ ತಳಹದಿಯ ಎರಡು ಮೂಲ ಅಂಶಗಳಾಗಿವೆ. ಕ್ರಿಸ್ತನು ಕಲ್ವಾರಿಯ ಶಿಲುಬೆಯಲ್ಲಿ ಮರಣ ಹೊಂದಿದ್ದರ ಮುಖಾಂತರ ನಮಗೆ ನಾಲ್ಕು ಸತ್ಯಾಂಶಗಳು ಸ್ಪಷ್ಟವಾಗುತ್ತವೆ.

a) ಮರಣದ ನಂತರ ಜೀವಿತವಿದೆ.

ಈ ಜೀವಮಾನವೇ ಎಲ್ಲವೂ ಆಗಿದ್ದರೆ, ಯೇಸು ಕ್ರಿಸ್ತನು ಎಂದೂ ಸಾಯುತ್ತಿರಲಿಲ್ಲ. ಆತನಿಗೆ ದಿವ್ಯ ಶಕ್ತಿಯಿತ್ತು ಮತ್ತು ಆತನು ಸುಲಭವಾಗಿ ತನ್ನನ್ನು ಕೊಲ್ಲಬಯಸುವ ಶತ್ರುಗಳ ಕೈಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ ಯೇಸು ಕ್ರಿಸ್ತನು ತಾನು ಕೊಲ್ಲಲ್ಪಟ್ಟು, ಹೂಳಲ್ಪಟ್ಟು ಮೂರು ದಿನಗಳ ನಂತರ ಎದ್ದು ಪುನಃ ಜೀವಿತನಾಗಿ ಬಂದನು. ಇದು ಆತನು ಜೀವಿತದ ಬಗ್ಗೆ ಅಂದರೆ ಮರಣದ ನಂತರದ ಬಗ್ಗೆ ಆಡಿದ ಮಾತುಗಳು ಸತ್ಯವಾದುವೆಂಬುದಕ್ಕೆ ಸ್ಪಷ್ಟವಾದ ನಿದರ್ಶನವಾಗಿದೆ.

b) ದೇವರು ಪರಿಶುದ್ಧನಾಗಿದ್ದಾನೆ.

ಕ್ರಿಸ್ತನ ಮರಣದ ಮೂಲಕ ನಾವು ದೇವರು ಪರಿಶುದ್ಧನೆಂಬುದಾಗಿ ಮತ್ತು ಆತನು ಪಾಪವನ್ನು ಎಂದೂ ಸಹಿಸಲಾರನು ಎಂಬುದಾಗಿ ಕಲಿತುಕೊಳ್ಳುತ್ತೇವೆ. ಶಿಲುಬೆಯ ಮೇಲೆ, ಪಾಪರಹಿತನಾದ, ದೇವರ ಮಗನಾದ ಯೇಸುಕ್ರಿಸ್ತನ ಮೇಲೆ ಲೋಕದ ಪಾಪವೆಲ್ಲ ಹೊರಿಸಲ್ಪಟ್ಟಾಗ, ದೇವರು ತನ್ನ ಮುಖವನ್ನು ಆತನ ಕಡೆಯಿಂದ ತಿರುಗಿಸಿಕೊಂಡರು. ಏಕೆಂದರೆ ದೇವರು ಎಂದಿಗೂ ಪಾಪವನ್ನು ನೋಡುವುದಿಲ್ಲವೆಂವುದನ್ನು ನಾವು ನೋಡುತ್ತೇವೆ. ಸತ್ಯವೇದವು, ’ದೇವರ ಕಣ್ಣುಗಳು ಪಾಪವನ್ನು ನೋಡಲಾರದಷ್ಟು ಪವಿತ್ರವಾಗಿವೆಯೆಂದು’ ಹೇಳುತ್ತದೆ. ದೇವರ ಪ್ರೀತಿಯು ಆತನು ನಮ್ಮ ಪಾಪವನ್ನು ಗಣನೆಗೆ ತರದಂತೆ ಮಾಡುವುದಿಲ್ಲ. ಆತನು ನಿನ್ನನ್ನು ಬಹಳವಾಗಿ ಪ್ರೀತಿಸಬಹುದು, ಆದರೆ ನಿನ್ನ ಜೀವಿತದಲ್ಲಿ ಪಾಪವಿದ್ದರೆ, ಆತನು ಕಲ್ವಾರಿಯ ಶಿಲುಬೆಯಲ್ಲಿ ತನ್ನ ಮಗನಾದ ಯೇಸುಕ್ರಿಸ್ತನನ್ನು ಬಿಟ್ಟ ಹಾಗೆ ನಿನ್ನನ್ನು ಖಂಡಿತವಾಗಿ ಕೈ ಬಿಡಬಹುದು.

c) ದೇವರು ಪ್ರ‍ೀತಿಸ್ವರೂಪನು.

ದೇವರ ಅಪರಿಮಿತವಾದ ಪ್ರೀತಿ ನಿಮಿತ್ತವೇ ಕ್ರಿಸ್ತನು ನಮಗಾಗಿಯೂ, ನಮ್ಮ ಪಾಪ ಮತ್ತು ದುರ‍ಾವಸ್ಥೆಯಿಂದ ರಕ್ಷಿಸುವುದಕ್ಕಾಗಿಯೂ ಸತ್ತದ್ದು ಎಂದು ಇನ್ನೊಂದು ಸತ್ಯವನ್ನು ತಿಳಿಸಿಕೊಡುತ್ತದೆ. ದೇವರಿಗೆ ಮನುಷ್ಯನ ಮೇಲೆ ಇರುವ ಪ್ರೀತಿಯನ್ನು ಸತ್ಯವೇದವು ತಾಯಿಗೆ ತನ್ನ ಮಗುವಿನ ಮೇಲಿರುವ ಪ್ರೀತಿಗೆ ಹೋಲಿಸುತ್ತದೆ. ಒಬ್ಬ ತಾಯಿ ಯಾವ ರೀತಿಯಲ್ಲಿ ತನ್ನ ಮಗುವಿನ ಒಳಿತಿಗಾಗಿ ಯಾವುದೇ ರೋಗವನ್ನು ಲಕ್ಷಿಸದೆ ರೋಗಿಯಾಗುವುದಕ್ಕೆ ಸಿದ್ಧಳಾಗುವಳೋ, ಅದೇ ರೀತಿಯಲ್ಲಿ ದೇವರು ಸಹ ಮನುಷ್ಯನು ಪಾಪದಿಂದ ಬಿಡುಗಡೆಯಾಗುವಂತೆ, ಮನುಷ್ಯನ ಪಾಪದ ದಂಡನೆಯನ್ನು ತಾನೇ ಹೊತ್ತುಕೊಂಡನು.

d) ರಕ್ಷಣೆಗೆ ಬೇರೆ ಯಾವ ಮಾರ್ಗವು ಇಲ್ಲ.

ಕ್ರಿಸ್ತನ ಮರಣದ ಹೊರತಾಗಿ ರಕ್ಷಣೆಗೆ ಬೇರೆ ಯಾವುದೇ ಮಾರ್ಗವಿಲ್ಲವೆಂದು ಬಹು ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ವೇಳೆ ರಕ್ಷಣೆಗೆ ಬೇರೆ ಯಾವುದಾದರೂ ಮಾರ್ಗವಿದ್ದಿದ್ದಲ್ಲಿ, ದೇವರು ಕ್ರಿಸ್ತನಿಗೆ ಬಾಧೆಯನ್ನುಂಟುಮಾಡುವ ಈ ಮಾರ್ಗವನ್ನು ಈ ಮಾರ್ಗವನ್ನು ತೆಗೆದುಕೂಳ್ಳುತ್ತಿರಲಿಲ್ಲ. ಒಂದು ವೇಳೆ ನಾವು ನಮ್ಮ ಒಳ್ಳೆಯ ಜೀವಿತದ ಮುಖಾಂತರ ಪರಲೋಕಕ್ಕೆ ಹೋಗಬಹುದಾಗಿದ್ದರೆ, ದೇವರು ಕ್ರಿಸ್ತನು ಅನಗತ್ಯವಾಗಿ ಶಿಲುಬೆಯ ಸಂಕಟವನ್ನು ಅನುಮತಿಸಿದ್ದರಿಂದ ಮೂರ್ಖನಾಗುತ್ತಿದ್ದನು. ರಕ್ಷಣೆಗೆ ಬೇರೆ ಮಾರ್ಗ ಇದೆ ಎಂದು ಊಹಿಸುವುದು ನಾವು ದೇವರಿಗಿಂತ ಬುದ್ಧಿವಂತರು ಎಂಬುದಾಗಿ ಪರಿಗಣಿಸುವ ಹಾಗೆ ಮತ್ತು ಇದು ನಮ್ಮ ಮೂರ್ಖತನವನ್ನು ಸೂಚಿಸುವಂತಹದು ಆಗಿದೆ.

ಕ್ರಿಸ್ತನ ಮರಣವು ನಮಗೆ ಏನನ್ನು ತಿಳಿಸುತ್ತದೆ ಎಂಬುದಾಗಿ ನಾವು ಅರ್ಥ ಮಾಡಿಕೊಂಡಿದ್ದೇವೋ? ಹಾಗಾದರೆ, ನಮ್ಮಿಂದ ಒಂದೇ ಒಂದು ಪ್ರತಿಕ್ರಿಯೆ ಉಳಿದಿರುವುದು - ಅದು ನಾವು ಸಂಪೂರ್ಣವಾಗಿ ಕ್ರಿಸ್ತನಿಗೆ ನಮ್ಮ ಜೀವಿತವನ್ನು ಈ ಸಮಯಕ್ಕೂ ಹಾಗು ನಿತ್ಯತ್ವಕ್ಕೂ ಒಪ್ಪಿಸಿ ಕೊಡುವುದು. ಕೇವಲ ನಮ್ಮ ಬುದ್ಧಿ ಶಕ್ತಿಯಿಂದ ಒಪ್ಪಿಕೊಳ್ಳುವುದರಿಂದ ಅದಕ್ಕೆ ಅರ್ಥವಿಲ್ಲ. ನಮ್ಮ ಚಿತ್ತದ ಪ್ರತಿಕ್ರಿಯೆಯನ್ನು ದೇವರು ಹುಡುಕುತ್ತಾನೆ.

.

ಅಧ್ಯಾಯ 8
ಅತ್ಯಂತ ಅತಿಶಯವಾದ ಸತ್ಯಾಂಶ

ನಾವು ಬಾಯಾರಿಕೆಯಿಂದ ಮರುಭೂಮಿಯ ಪ್ರಯಾಣದಲ್ಲಿ ಸಾಯುವವರಾಗಿದ್ದೇವೆ ಎಂದು ಭಾವಿಸೋಣ. ಯಾರಾದರೂ ಎಲ್ಲಿಯಾದರೂ ನೀರನ್ನು ಕಂಡರೆ, ಅದರ ಕುರಿತುಮ್ ಇತರರಿಗೆ ತಿಳಿಸಬಯಸುವರು. ಇತರರನ್ನು ನೀರು ಕುಡಿಯುವುದಕ್ಕೆ ಬಲವಂತ ಮಾಡಲಿಕ್ಕಾಗುವುದಿಲ್ಲ. ಆದರೆ ಮರುಭೂಮಿಯಲ್ಲಿರುವ ನೀರನ್ನು ಮಾತ್ರ ತೋರಿಸಬಹುದು. ಅದನ್ನೇ ನಾವು ಸಹ ಮಾಡುವವರಾಗಿದ್ದೇವೆ. ನಿತ್ಯ ಜೀವವನ್ನು ಅಪೇಕ್ಷಿಸುವವರಿಗೆಲ್ಲಾ ಅದು ಎಲ್ಲಿ ದೊರಕುತ್ತದೆ ಎಂಬುದಾಗಿ ತೋರಿಸಿಕೊಡುವವರಾಗಿದ್ದೇವೆ.

ಅತ್ಯಂತ ಅತಿಶಯವಾದ ಸತ್ಯವೇನೆಂದರೆ, ದೇವರನ್ನು ಯಥಾರ್ಥವಾಗಿ ಹುಡುಕುವ ಮಹಾ ಪಾಪಿಯು ಒಂದೇ ಕ್ಷಣದಲ್ಲಿ ದೇವರ ಮಗುವಾಗಬಹುದು.

ದೇವರಿಗೆ ಯಾಂತ್ರಿಕ ಬೊಂಬೆಗಳು ಬೇಕಾಗಿಲ್ಲ. ಆತನಿಗೆ ಮಕ್ಕಳು ಬೇಕು. ಈ ಕಾರಣದಿಂದಲೇ ಆತನು ನಮಗೆ ಸ್ವತನ್ತ್ರವಾದ ಚಿತ್ತವನ್ನು ಕೊಟ್ಟಿದ್ದಾನೆ. ನಾವು ಆತನಿಗೆ ವಿಧೇಯರಾಗಲು ಅಥವಾ ಅವಿಧೇಯರಾಗಲು ಆರಿಸಿಕೊಳ್ಳುವ ಸ್ವಾತಂತ್ರ್ಯ. ಈ ಸ್ವತಂತ್ರ ಚಿತ್ತದ ದುರುಪಯೊಗದಿಂದ ನಾವು ದೇವರಿಗೆ ಅವಿಧೇಯರಾಗಿ, ಆತನಿಂದ ದೂರ ಹೋಗಿದ್ದೇವೆ. ಪಾಪವು ನಮ್ಮನ್ನು ಮಾತ್ರವಲ್ಲದೆ ನಮ್ಮ ಕುಟುಂಬಗಳನ್ನು ಸಹ ನಾಶಮಡಿದೆ. ಇದು ನಮ್ಮನ್ನು ಭೂಮಿಯಲ್ಲಿ ಅಸಮಾಧಾನವುಳ್ಳವರನ್ನಾಗಿ ಮಾಡಿ, ಅಂತ್ಯದಲ್ಲಿ ನಿತ್ಯ ನರಕಕ್ಕೆ ಕಳುಹಿಸುವುದು.

ಆದರೆ ನಾವು ಮಾನಸಾಂತರ ಹೊಂದಲು (ಅಂದರೆ, ನಮ್ಮ ಪಾಪಮಯವಾದ ಜೀವಿತದಿಂದ ದೇವರ ಕಡೆಗೆ ತಿರುಗುವುದು) ಇದರಿಂದ ನಮ್ಮ ಹಿಂದಿನ ಎಲ್ಲಾ ಪಾಪಕ್ಕಾಗಿ ನಾವು ಪೂರ್ಣವಾದ ಮತ್ತು ಉಚಿತವಾದ ಕ್ಷಮಾಪಣೆಯನ್ನು ಯೇಸು ಕ್ರಿಸ್ತನ ಮುಖಾಂತರ ಹೊಂದಲು ಅಹ್ವಾನಿಸುತ್ತಾನೆ.

ದೇವರು ಈ ಕಾರ್ಯವನ್ನು ನಾವು ಮಾಡುವಂತೆ ನಮ್ಮನ್ನು ಒತ್ತಾಯಿಸಬಹುದಿತ್ತು. ನಾವು ಪ್ರತಿಯೊಂದು ಬಾರಿ ಪಾಪ ಮಾಡುವಾಗ ನಮ್ಮನ್ನು ಯಾವುದಾದರೊಂದು ಕಾಯಿಲೆಯಿಂದ ಶಿಕ್ಷಿಸಿ, ನಾವು ಆತನಿಗೆ ವಿಧೇಯರಾಗುವ ಹಾಗೆ ಮಾಡವಹುದಾಗಿತ್ತು. ಆದರೆ ಆಗ ನಾವು ಆತನ ಮಕ್ಕಳಾಗದೇ, ಯಾಂತ್ರಿಕ ಗೊಂಬೆಗಳು ಅಥವಾ ಗುಲಾಮರಾಗುತ್ತಿದ್ದೆವು. ಆದರೆ ಆತನು ಹಾಗೆ ಮಾಡುವುದಿಲ್ಲ. ನಾವು ನಮ್ಮ ಸ್ವಂತ ಆರಿಸಿಕೊಳ್ಳುವಿಕೆಯಿಂದ, ಪಾಪವನ್ನು ಬಿಟ್ಟು ಆತನ ಕಡೆಗೆ ತಿರುಗಿಕೊಳ್ಳುವುದಕ್ಕಾಗಿ ಆತನು ಕಾಯುವವನಾಗಿದ್ದಾನೆ.

ಈಗಲೇ ಈ ತೀರ್ಮಾನವನ್ನು ಮಾಡಿರಿ. ಮತ್ತು ನೀವು ಸಹ ಈ ಕ್ಷಣದಲ್ಲೇ ದೇವರ ಮಗುವಾಗಬಹುದು. ಇದನ್ನು ನೀವು ಗ್ರಹಿಸದಿರಬಹುದು. ಆದರೆ ಇದು ಜೀವ ಮತ್ತು ಮರಣದ ವಿಷಯವಾಗಿದೆ. ನೀವು ಈಗಲೇ ಈ ಪ್ರಾರ್ಥನೆಯನ್ನು ದೇವರಿಗೆ ಏಕೆ ಮಾಡಬಾರದು?

"ಕರ್ತನಾದ ಯೇಸುಕ್ರಿಸ್ತನೇ, ನಾನು ಶಿಕ್ಷೆಗೆ ಪಾತ್ರನಾದ ಪಾಪಿಯೆಂದು ಒಪ್ಪಿಕೊಳ್ಳುತ್ತೇನೆ. ನೀನು ನನ್ನ ಪಾಪಕ್ಕಾಗಿ ಪ್ರಾಣ ಕೊಟ್ಟಿದುದಕ್ಕಾಗಿ ಮತ್ತು ನನ್ನ ದಂಡನೆಯನ್ನು ತೆಗೆದುಕೊಡಿದ್ದಕ್ಕಾಗಿ ಮತ್ತು ಸಮಾಧಿಯಿಂದ ಮೂರನೇ ದಿನದಲ್ಲಿ ಜೀವಿತನಾಗಿ ಎದ್ದು ಬಂದಿದ್ದಕ್ಕಾಗಿ ನಿನಗೆ ಧನ್ಯವಾದಗಳು. ನಾನು ನಿಜವಾಗಿ ಪಾಪಮಯವಾದ ಜೀವಿತವನ್ನು ಬಿಡಲು ಇಚ್ಚಿಸುತ್ತೇನೆ. ಕರ್ತನಾದ ಯೇಸುವೇ ನನ್ನ ಹೃದಯಕ್ಕೆ ಬಾ. ನನ್ನನ್ನು ದೇವರ ಮಗುವನ್ನಾಗಿ ಮಾಡು. ನನ್ನ ಹಿಂದಿನ ಜೀವಿತದ ಅಪರಾಧವನ್ನು ಹೋಗಲಾಡಿಸು ಮತ್ತು ಹೊಸ ಜೀವಿತವನ್ನು ಇಂದಿನಿಂದ ಪ್ರಾರಂಭಿಸಲು ನೆರವಾಗು. ನಿನ್ನ ಶಕ್ತಿಯನ್ನು ನನಗೆ ದಯಪಾಲಿಸು. ಇದರಿಂದ ನಾನು ನನ್ನ ಜೀವಮಾನವೆಲ್ಲಾ ನಿನ್ನ ಮಹಿಮೆಗಾಗಿ ಜೀವಿಸುವಂತೆ ನನಗೆ ನೆರವಾಗು. ನನ್ನ ಪ್ರಾರ್ಥನೆಯನ್ನು ಅಲಿಸುದುದಕ್ಕಾಗಿ ಧನ್ಯವಾದಗಳು."

ಈ ತೀರ್ಮಾನವು ನಿಮ್ಮ ಜೀವಿತದಲ್ಲಿ ನೀವು ಮಾಡಿದ ಅತಿ ಪ್ರಾಮುಖ್ಯವಾದ ತೀರ್ಮಾನವಾಗಿರುತ್ತದೆ.