ಜಯದ ರಹಸ್ಯಗಳು

ಬರೆದಿರುವವರು :   ಝ್ಯಾಕ್ ಪೂನನ್
  Download Formats:

ಅಧ್ಯಾಯ
ಈ ಪುಸ್ತಕವೂ ನೀವೂ

ಯೇಸುವಿನ ಜೀವಿತದಲ್ಲಿ ಭಾಗಿಗಳಾಗಬೇಕೆಂಬ ದೃಢ ಮನಸ್ಸು ನಿಮ್ಮಲ್ಲಿದ್ದರೆ, ದೇವರು ನಿಮ್ಮ ಜೀವಿತದಲ್ಲಿ ಅಸಂಖ್ಯಾತ ಸಂಗತಿಗಳು ಸಂಭವಿಸುವಂತೆ ಅನುಮತಿಸುತ್ತಾನೆ. ಭೌತಿಕ ವಸ್ತುಗಳ ಮೇಲಿರುವ ಪ್ರೀತಿ, ಜನರ ಮಾನ ಅಪೇಕ್ಷೆ, ಸ್ವಕರುಣೆ ಮುಂತಾದ ಅನೇಕ ಅಕೈಸ್ತ ಮನೋಭಾವನೆಗಳಿಂದ ಬಿಡಿಸುವುದು ಆತನ ಉದ್ದೇಶವಾಗಿದೆ.

ನಿಮಗೆ ಆ ಮಾಗ೯ದಲ್ಲಿ ಹೋಗಲು ಮನಸ್ಸಿಲ್ಲದಿದ್ದರೆ ಆತನು ನಿಮ್ಮನ್ನು ಒತ್ತಾಯಿಸುವುದಿಲ್ಲ. ನಿಮ್ಮ ಸುತ್ತುಮುತ್ತಲಿರುವ ಸೋತ, ಕೆಳಮಟ್ಟದ ಜೀವಿತವನ್ನು ಜೀವಿಸುವ ಇತರರಂತೆ ನೀವು ಇರಲು ಬಯಸಿದರೆ ಆತನು ನಿಮ್ಮನ್ನು ತೊಂದರೆ ಪಡಿಸುವುದಿಲ್ಲ.

ಆದರೆ ನೀವು ಆತನ ಅತ್ಯುತ್ತಮವಾದದ್ದನ್ನೇ ಬಯಸುವುದಾದರೆ ಆತನು ನಿಮ್ಮೊಂದಿಗೆ ಕಠಿಣವಾಗಿ ವ್ಯವಹರಿಸುತ್ತಾನೆ. ನಿಮ್ಮನ್ನು ನಾಶಮಾಡುವ ಕ್ಯಾನ್ಸರಗಳನ್ನು ಕತ್ತರಿಸಿ ನಿಮ್ಮನ್ನು ಭ್ರಷ್ಟರನ್ನಾಗಿ ಮಾಡುವ ವಿಗ್ರಹಗಳನ್ನು ನಾಶಮಾಡುತ್ತಾನೆ. ನೀವು ನೋವು, ನಿರಾಶೆ, ನಷ್ಟ, ಅವಮಾನ ಅನ್ಯಾಯವಾದ ಟೀಕೆ ಮುಂತಾದವುಗಳನ್ನು ಎದುರಿಸಲು ಅನುಮತಿಸುವುದರಿಂದ ನೀವು ಸ್ಥಿರತೆಯುಳ್ಳವರಾಗಿ ಇನ್ನೆಂದಿಗೂ ಕದಲದಂತೆ ಇರುವಂತವರಾಗಿರಲು ಬಯಸುತ್ತಾನೆ.

ಆಗ ನೀವು ಶೀಮಂತರಾಗಿದ್ದರೂ, ಬಡವರಾಗಿದ್ದರೂ, ಟೀಕಿಸಲ್ಪಟ್ಟರೂ, ಹೊಗಳಲ್ಪಟ್ಟರೂ, ಸನ್ಮಾನಿಸಲ್ಪಟ್ಟರೂ, ಅವಮಾನಹೊಂದಿದರೂ ನಿಮಗೇನೂ ವ್ಯತ್ಯಾಸಮಾಡದು. ಈ ಲೋಕದ ಎಲ್ಲವುಗಳಿಗೆ ನೀವು ಕ್ರಿಸ್ತನ ಹಾಗೆ ಸತ್ತಿದ್ದರೆ ಈ ಲೋಕದಲ್ಲಿ ಅರಸರ ಹಾಗೆ ನೀವು ಜೀವಿಸುವಂತೆ ಮಾಡುತ್ತದೆ. ಇಂತಹ ಜೀವಿತ ನಿಮಗೆ ಬೇಕೆ?, ಮುಂದೆ ಓದಿರಿ.................

ಅಧ್ಯಾಯ 1
ನಿರಂತರ ಜಯದ ಜೀವಿತ

ಸತತವಾದ ಜಯವೇ ನಮ್ಮ ಜೀವಿತಕ್ಕಾಗಿರುವ ದೇವರ ಚಿತ್ತವು. ಯಾವಾಗಲೂ ಜಯದಲ್ಲಿ ಜೀವಿಸಬೇಕೆಂಬುದು ಅನೇಕ ವಾಕ್ಯಗಳಲ್ಲಿ ಸ್ಪಷ್ಟವಾಗಿ ಉಪದೇಶಿಸಲ್ಪಟ್ಟಿದೆ.

ಆ ವಾಕ್ಯಗಳಲ್ಲಿ ಕೆಲವೊಂದನ್ನು ನೋಡಿಕೊಳ್ಳೋಣ.

ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ (2 ಕೊರಿ 2:14).

ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂಣ೯ ಜಯಶಾಲಿಗಳಾಗಿರುತ್ತೇವೆ (ರೋಮಾ 8:37).

ನೀವು ಪಾಪ ಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ (1ಯೋಹಾ 2:1).

ಈ ರೀತಿಯಾಗಿ ವಾಕ್ಯಗಳಿದ್ದರೂ ಅನೇಕ ವಿಶ್ವಾಸಿಗಳಿಗೆ-ದೇವರು ಜಯದ ಜೀವಿತವನ್ನು ಅವರಿಂದ ಬಯಸುತ್ತಾನೆ ಎಂಬ ಈ ಸತ್ಯ ಸಂಗತಿಯನ್ನು ಅವರಿಗೆ ಒಡಂಬಡಿಸುವುದು ಅಥವಾ ತಿಳಿಸುವುದು ಬಹಳ ಕಷ್ಟಕರವಾಗಿದೆ.

ದೇವರ ವಾಕ್ಯದಲ್ಲಿ ಇದ್ದ ಹಾಗೆಯೇ ತೆಗೆದುಕೊಂಡು ಚಿಕ್ಕ ಮಗುವಿನಂತೆ ಆ ವಾಕ್ಯಗಳನ್ನು ನಂಬಿದರೆ ಆಗ ಈ ಸಂದೇಶ ನಮಗೆ ಬಹು ಸ್ಪಷ್ಟವಾಗಿ ಬರುವಂಥದ್ದಾಗಿದೆ. ಆದರೆ ನಾವು ನಮ್ಮ ಸ್ವಬುದ್ದಿಯ ಮೇಲೆ ಆತುಕೊಳ್ಳುವದಾದರೆ ಈ ಒಂದು ಲೋಕದಲ್ಲಿ ಪಾಪವು ತುಂಬಿರುವಾಗ ಇಂತಹ ಜೀವಿತವನ್ನು ಜೀವಿಸಲಿಕ್ಕೆ ಯಾಕೆ ಸಾಧ್ಯವಿಲ್ಲ ಎಂಬ ವಾಗ್ವಾದವು ಹುಟ್ಟುತ್ತದೆ. ಆಗ ಅನೇಕ ಅಪನಂಬಿಕೆಯುಳ್ಳ ವಿಶ್ವಾಸಿಗಳು ಸ್ವ ಬುಧ್ದಿಯ ಮೇಲೆ ಆತುಕೊಂಡವರಾಗಿ ತಮ್ಮ ಸಾಕ್ಷಿಯನ್ನು ಸ್ವಬುದ್ದಿಗೆ ಕೂಡಿಸು- ವಂಥವರಾಗಿದ್ದಾರೆ. ಆಗ ಈ ಲೋಕದಲ್ಲಿ ಪಾಪದ ಮೇಲೆ ಜಯದ ಜೀವಿತ ಅಸಾಧ್ಯವೆಂದು ನಮ್ಮನ್ನು ನಾವೇ ಒಡಂಬಡಿಸಿಕೊಳ್ಳುತ್ತೇವೆ.

ಯಾವಾಗಲೂ ನಾವು ಜಯದಲ್ಲಿ ಜೀವಿಸಬೇಕೆಂದು ದೇವರು ಬಯಸುತ್ತಾರೆ ಎಂಬಂತ ಈ ಒಂದು ಸತ್ಯಕ್ಕೆ ನಾವು ಒಡಂಬಟ್ಟರೆ “ಪಾಪದ ಮೇಲೆ ಜಯದ ಜೀವಿತ ಅಸಾಧ್ಯ" ಎಂಬಂಥ ಈ ಸಂಗತಿಯ ಮೇಲೆ ನಮಗೆ ನಂಬಿಕೆ ಬರಲಾರದು. ನಂಬಿಕೆಯಿಲ್ಲದೆ ಜಯದ ಜೀವಿತವನ್ನು ಪ್ರವೇಶಿಸುವುದು ಅಸಾಧ್ಯ. ಕ್ರಿಸ್ತೀಯ ಜೀವಿತದಲ್ಲಿ ಪ್ರತಿಯೊಂದು ಸಂಪೂಣ೯ವಾಗಿ ನಂಬಿಕೆಯ ಮೇಲೆ ಆಧಾರಗೊಂಡಿದೆ. ದೇವರು ಕೊಟ್ಟ ತನ್ನ ವಾಕ್ಯದ ಮೂಲಕವಾಗಿ ಬರುವ ಪ್ರಕಟನೆಯ ಮೇಲೆ ನಂಬಿಕೆಯು ಅಸ್ತಿವಾರದೊಪಾದಿಯಲ್ಲಿ ನಿಂತಿದೆ. ನೀವು ನಿಮ್ಮ ಜೀವಿತದಲ್ಲಿ ಪಾಪದಿಂದ ಅನೇಕ ವಷ೯ ಸೋತುಹೋಗಿ ಜೀವಿಸುತ್ತಾ ಇದ್ದಾಗ್ಯೂ, ಅದು ಯಾವ ವ್ಯತ್ಯಾಸವನ್ನು ಮಾಡಲಾರದು. ಯಾವಾಗಲೂ ಜಯದಲ್ಲಿ ಜೀವಿಸುತ್ತೇವೆ ಎಂಬ ಈ ಸತ್ಯವನ್ನು ಸ್ಪಷ್ಟವಾಗಿ ನೀವು ದೇವರ ವಾಕ್ಯದಲ್ಲಿ ಗಮನಿಸುವದಾದರೆ ಅದು ಪಾಪದ ಮೇಲೆ ಜಯದ ಜೀವಿತಕ್ಕೆ ನಡೆಸುವ ಪ್ರಥಮ ಹೆಜ್ಜೆಯಾಗಿರುತ್ತದೆ.

ಅಧ್ಯಾಯ 2
ನಂಬಿಕೆಯ ಪೂಣ೯ ಅವಶ್ಯಕತೆ

1ಯೋಹಾನ 2:6 ಹೇಳುತ್ತದೆ, “ಆತನಲ್ಲಿ ನೆಲೆಗೊಂಡಿದ್ದವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನು ನಡೆಯುವದಕ್ಕೆ ಬದ್ದನಾಗಿದ್ದಾನೆ."

ಯೇಸುವು ಹೇಗೆ ನಡೆದನು? ಸ್ವಲ್ಪ ಕಾಲ ಮಾತ್ರ ಜಯದಲ್ಲಿ ಆತನು ನಡೆದನೊ ಅಥವಾ ಹೆಚ್ಚಿನಾಂಶ ಕಾಲವೊ ಅಥವಾ ಯಾವಾಗಲೊ? ಉತ್ತರ ನಮಗೆ ಗೊತ್ತು ಆತನು ಸವ೯ ವಿಷಯಗಳಲ್ಲಿ ನಮ್ಮ ಹಾಗೆಯೇ ಶೋದನೆಗೆ ಗುರಿಯಾದನು. ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿಬ೯ಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ. ಆತನು ಸವ೯ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು. ಪಾಪ ಮಾತ್ರ ಮಾಡಲಿಲ್ಲ (ಇಬ್ರಿಯ 4:15).

ಕ್ರಿಸ್ತನು ನಡೆದಂತೆಯೇ ನಾವು ನಡೆಯಲು ಕರೆಯಲ್ಪಟ್ಟಿದ್ದೇವೆ ಹಾಗೂ ಬದ್ದರಾಗಿದ್ದೇವೆ. ಕ್ರಿಸ್ತನು ನಡೆದಂತೆಯೇ ನಾವು ನಡೆಯುವುದು ಈ ಲೋಕದಲ್ಲಿ ಸಾಧ್ಯವೋ? ನಮಗೆ ಮಾಡಲು ಅಸಾಧ್ಯವಾಗಿದೆ ಎಂದು ದೇವರು ತಿಳಿದರೂ ಅದನ್ನು ಮಾಡಲು ಹೇಳುತ್ತಾನೋ? ಎಂದಿಗೂ ಇಲ್ಲ.ಈ ರೀತಿ ಆಲೋಚಿಸುವದು ಗ್ರಹಿಕೆ ಮೀರಿದಂತಹದು. ಇಹಲೋಕದ ತಂದೆಗಳೂ ಸಹ ತಮ್ಮ ಮಕ್ಕಳ ಮೇಲೆ ಅಸಾಧ್ಯವಾದಂಥಹ ಹೊರೆಗಳನ್ನು ಹೊರೆಸುವುದಿಲ್ಲ. ಪರಲೋಕದ ತಂದೆಯು ಎಷ್ಟೋ ಒಳ್ಳೇಯವನಾಗಿದ್ದಾನೆ.

ಹೊಸ ಒಡಂಬಡಿಕೆಯಲ್ಲಿ ಅತೀ ದು:ಖಕರವಾದ ವಾಕ್ಯಗಳು ಮತ್ತಾಯ 13:58 ರಲ್ಲಿ ಬರೆಯಲ್ಪಟ್ಟಿದೆ.- “ಅವರು (ನಜರೇತಿನವರು) ಆತನನ್ನು ನಂಬದೇ ಹೋದದ್ದರಿಂದ ಅನೇಕ ಅದ್ಬುತ ಕಾಯ೯ಗಳನ್ನು ಆತನು ಅಲ್ಲಿ ಮಾಡಲಿಲ್ಲ." ಇದೇ ವಾಕ್ಯ ಮಾಕ೯ 6:5 ರಲ್ಲಿ -“ಆತನು ಒಂದು ಮಹತ್ಕಾಯ೯ಗಳನ್ನು ಮಾಡಲಿಲ್ಲ." ಎಂಬುದಾಗಿದೆ.

ಯೇಸುವು ತಾನು ಬೆಳೆದ ನಜರೇತಿನಲ್ಲಿ ಅನೇಕ ಮಹತ್ಕಾಯ೯ಗಳನ್ನು ಮಾಡಬೇಕೆಂದಿದ್ದನು. ಆದರೆ ಅವರ ಅಪನಂಬಿಕೆಯ ಕಾರಣದಿಂದ ಆತನು ಮಿತಿಯುಳ್ಳವನಾಗಿರಬೇಕಾಗಿ ಬಂತು. ಅಪ- ನಂಬಿಕೆಯು ಎಲ್ಲಕ್ಕೂ ಶಕ್ತನಾದಂತ ದೇವರ ಕೈಯನ್ನು ಕಟ್ಟಿಹಾಕುವಂಥದ್ದಾಗಿದೆ. ಈ ಕಾರಣದಿಂದ ದೇವರು ಮಾಡಬೇಕೆಂದಿರುವ ಸಂಗತಿಗಳನ್ನು ನಮಗೆ ಮಾಡಲಾರನು.

ದೇವರು ಅನೇಕ ಮಹತ್ಕಾಯ೯ಗಳನ್ನು ನಿಮ್ಮಲ್ಲಿ ಮಾಡಬೇಕೆಂದಿರುವಾಗ ನಿಮ್ಮ ಅಪನಂಬಿಕೆ- ಯಿಂದ ಆತನು ಒಂದನ್ನೂ ನಿಮ್ಮಲ್ಲಿ ಮಾಡಲಾರನು. ಈ ಸಂಗತಿಯ ಕುರಿತಾಗಿ ನಾನು ಆಶ್ಚಯ೯- ಪಡುತ್ತೇನೆ. ಕ್ರಿಸ್ತನ ನ್ಯಾಯಾಸನದ ಮುಂದೆ ನಮ್ಮಲ್ಲಿ ಕೆಲವರು ಈ ಮಾತುಗಳನ್ನು ಕೇಳಬೇಕಾಗಿರುವದು. ‘ನಿನ್ನ ಅಪನಂಬಿಕೆಯ ದೆಸೆಯಿಂದ ನಾನು ಬಯಸಿದ್ದಂಥದ್ದೆಲ್ಲವನ್ನು ನಿನ್ನಲ್ಲಿ ನಿನ್ನ ಮುಖಾಂತರ ಮಾಡಲಾಗಲಿಲ್ಲ". ನಮ್ಮ ಈ ಇಹಲೋಕದ ಜೀವಿತದ ಅಂತ್ಯದಲ್ಲಿ ಇದನ್ನು ಕಂಡು ಹಿಡಿದರೆ ನಮ್ಮ ಹೃದಯದಲ್ಲಿ ಎಷ್ಟು ದು:ಖವಿರುವದು!!! ಈಗಲೇ ಇದರ ಕುರಿತಾಗಿ ಆಲೋಚಿಸುವುದು ಒಳ್ಳೇಯದು.

ಹೊಸದಾಗಿ ಹುಟ್ಟಿದ ತರುವಾಯ ನಾನು ಅನೇಕ ವಷ೯ ಸತ್ಯವೇದವನ್ನು ಅಭ್ಯಾಸಿಸುವವರ ಗುಂಪುಗಳಲ್ಲಿಯೇ ನನ್ನ ವಷ೯ಗಳು ಗತಿಸಿಹೋದವು. ನಾನು ಇದಕ್ಕಾಗಿ ದೇವರಿಗೆ ಕೃತಜ್ಞತೆಯುಳ್ಳವ- ನಾಗಿದ್ದೇನೆ. ಯಾಕಂದರೆ ಇದು ಸತ್ಯವೇದದ ವಾಕ್ಯಗಳ ಮೇಲೆ ಒಂದು ಒಳ್ಳೇ ಅಸ್ತಿವಾರವನ್ನು ಹಾಕಲು ನನಗೆ ಅನುಕೂಲಮಾಡಿ ಕೊಟ್ಟಿತು. ಆದರೆ ಅವರ ಸತ್ಯವೇದ ಅಭ್ಯಾಸವೆಲ್ಲವೂ ಮನುಷ್ಯ ಜ್ಞಾನದಿಂದಲೂ, ಸ್ವಬುಧ್ದಿಯ ಮೇಲೆ ಆತುಕೊಳ್ಳುವಿಕೆಯಿಂದಲೂ ಕೂಡಿತ್ತೇ ಹೊರತು ಪವಿತ್ರಾತ್ಮನ ಪ್ರಕಟಣೆಯಿಂದ ಕೂಡಿದ್ದಂತದ್ದಾಗಿರಲಿಲ್ಲ. ನಾವು ಸತ್ಯವೇದವನ್ನು ಶಾಲೆಯಲ್ಲಿ ವಿಧ್ಯಾಥಿ೯ಗಳು ರಾಸಾಯನ ಶಾಸ್ತ್ರವನ್ನು ಹೇಗೆ ಅಭ್ಯಾಸಿಸುತ್ತಾರೋ ಹಾಗೆಯೇ ಅಭ್ಯಾಸಿಸಿದ್ದೇವೆ. ಹಳೇಒಡಂಬಡಿಕೆ- ಯಲ್ಲಿ ಎಲ್ಲವನ್ನು ಅಥ೯ಮಾಡಿಕೊಂಡಿದ್ದೇವೆ. ಆದರೆ ಇನ್ನೂ ನಮ್ಮ ವ್ಯಯಕ್ತಿಕ ಜೀವಿತದಲ್ಲಿ ಪಾಪದಿಂದ ಸೋತುಹೋದವರಾದ್ದೇವೆ. ದೇವರು ನನ್ನ ಪಾಪಗಳನ್ನು ಕ್ಷಮಿಸಿದ್ದಾನೆಂದು ಗೊತ್ತಿತ್ತೆ ಹೊರತು ಇದಕ್ಕಿಂತ ಹೆಚ್ಚಾದವುಗಳ ಮೇಲೆ ನನಗೆ ನಂಬಿಕೆ ಇರಲಿಲ್ಲ.

ಎಂದಿನಂತೆ ವಾಕ್ಯದಲ್ಲಿ ಪವಿತ್ರಾತ್ಮನ ಅಭಿಷೇಕದ ಸತ್ಯವನ್ನು ಕಂಡುಕೊಂಡೆನೋ ಅದಕ್ಕಾಗಿ ದೇವರಲ್ಲಿ ಹುಡಿಕಿದಾಗ್ಯೂ ನನಗೆ ನಂಬಿಕೆಯಿಲ್ಲದೆ ಇರುವುದನ್ನು ಕಂಡುಕೊಂಡು ನಾನು ಉಪವಾಸವಿದ್ದು ಪ್ರಾಥಿ೯ಸಿದೆ. ಮತ್ತು ಅದಕ್ಕೆ ಯಾವುದೇ ಕ್ರಯವಾದರೂ ಕೊಡಲು ಸಿದ್ದನಿದ್ದೆ ಆದರೆ ದೇವರು ನನ್ನ ವಿಜ್ಞಾಪನೆಯನ್ನು ಕೇಳಿ ಅದನ್ನು ನನಗೆ ಅನುಗ್ರಹಿಸಿದ್ದಾನೆಂದು ನಂಬುವುದಕ್ಕೆ ಬಹಳ ಕಷ್ಟರಕವಾಗಿತ್ತು. ಯೇಸುವು ಒಂದು ಸಾರಿ ಹೇಳಿಕೊಟ್ಟದ್ದು “ನೀವು ಪ್ರಾಥ೯ನೆಯಲ್ಲಿ ಏನೇನು ಬೇಡಿದ್ದಿರೋ ಅದನ್ನು ಹೊಂದಿದ್ದೇವೆಂದು ನಂಬಿರಿ" ಆದಕಾರಣ ನೀವು ಪ್ರಾಥ೯ನೆ ಮಾಡಿ ಏನೇನು ಬೇಡಿಕೊಳ್ಳುತ್ತಿರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ (ಮಾಕ೯ 11:24).

ಈ ಒಂದು ಹೇಳಿಕೆಗೆ - ಚಿಕ್ಕ ಮಗುವಿನಂತೆ ನಂಬಿ ಬರುವುದಕ್ಕೆ ಅನೇಕ ವರುಷಗಳು ನನ್ನ ಜೀವಿತದಲ್ಲಿ ತೆಗೆದುಕೊಂಡವು. ಕಡೆಗೆ ದೇವರ ಕೃಪೆಯಿಂದ ಅಪನಂಬಿಕೆಯನ್ನು ತೆಗೆದುಹಾಕಿ, ದೇವರು ನನ್ನ ಪ್ರಾಥ೯ನೆಯನ್ನು ಕೇಳಿದ್ದಾನೆ ಮತ್ತು ಅನುಗ್ರಹಿಸಿದ್ದಾನೆ. ಎಂದು ನಂಬಿದೆ. ನಾನು ನಂಬಿಕೆಯಿಂದ ಪವಿತ್ರಾತ್ಮನ ಅಭಿಷೇಕವನ್ನು ಪಡೆದೆ. ಅನ್ಯ ಬಾಷೆಯು ನಾನು ನಂಬಿಕೆಯಿಂದ ಪಡೆದುಕೊಂಡಿದ್ದರ ಒಂದು ಗುರುತಾಗಿತ್ತು. ನನ್ನ ಹಿಂದಿನ ಗತಿಸಿಹೋದ ವಷ೯ಗಳನ್ನು ಈಗ ದೃಷ್ಟಿಸುವಾಗ ನನ್ನನ್ನು ಅಡ್ಡಿಪಡಿಸಿದ್ದಂತದ್ದು ನನ್ನ ಅಪನಂಬಿಕೆಯೇ ಎಂದು ಸ್ಪಷ್ಟವಾಗಿ ಗ್ರಹಿಸಿಕೊಂಡಿದ್ದೇನೆ.

ಪಾಪದ ಮೇಲೆ ಜಯದ ಜೀವಿತವನ್ನು ಪ್ರವೇಶಿಸಲು ಇದೇ ನಿಯಮ ಅನ್ವಯಿಸುವಂಥದ್ದಾಗಿದೆ. ಉಪವಾಸಪ್ರಾಥ೯ನೆ ಮಾಡಿದರೂ ಮತ್ತು ಬಯಕೆ ಇದ್ದರೂ ದೇವರು ತಾನೇ ಈ ಒಂದು ಜೀವಿತಕ್ಕೆ ನಡೆಸುವನು ಎಂದು ನಂಬದೇ ಹೋದರೆ ನಾವು ಎನನ್ನೂ ಹೊಂದಲಾರೆವು.

ನಂಬಿಕೆಯಿಂದಲೇ ಹೊರತು ಮತ್ತಾವುದರಿಂದಲೂ ದೇವರಿಂದ ಎನನ್ನೂ ಹೊಂದಲಾರೆವೆಂದು ಸೈತಾನನು ತಿಳಿದಿದ್ದಾನೆ. ಅಪನಂಬಿಕೆಯ ಮೂಲಕ ಸೈತಾನನು ನಿಮ್ಮ ಹೃದಯವನ್ನು ತುಂಬುವದಕ್ಕೆ ಪ್ರಯತ್ನಿಸುತ್ತಾನೆ ಎಂಬುದರ ಬಗ್ಗೆ ಯೋಚಿಸಿರಿ. ಅಪನಂಬಿಕೆಯು ಸುಳ್ಳುಹೇಳುವುದಕ್ಕಿಂತಲೂ ವ್ಯಬಿಚಾರ ಮಾಡುವುದಕ್ಕಿಂತಲೂ ಬಹು ಅಪಾಯಕರವಾಗಿದೆ. ಸುಳ್ಳು, ವ್ಯಬಿಚಾರ ಇವು ಕೂಡಲೇ ಪಾಪವೆಂದು ಗ್ರಹಿಸುತ್ತೇವೆ ಆದರೆ ಅಪನಂಬಿಕೆಯನ್ನು ಮಾತ್ರ ಪಾಪವೆಂದು ನಾವು ಗ್ರಹಿಸುವುದಿಲ್ಲ.

ಇಬ್ರಿಯ 3:12 ರಲ್ಲಿ ಸಹೋದರರೇ ನೋಡಿಕೋಳ್ಳಿರಿ, ದೇವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ಅಪನಂಬಿಕೆಯೆಂಬ ಕೆಟ್ಟ ಹೃದಯವು ಇರುವಾಗ, ಅದು ನಮ್ಮನ್ನು ದೇವರನ್ನು ಬಿಟ್ಟುಹೋಗುವಂತೆ ಮಾಡುತ್ತದೆ. ಅಪನಂಬಿಕೆಯೇ ಎಲ್ಲಾ ಪಾಪದ ಬೇರು (ಖ್ಟ್ಟಡಿ) ಆಗಿರುತ್ತದೆ. ರೋಮ 6:14 ರಲ್ಲಿ ಓದುತ್ತೇವೆ. - “ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು : ನೀವು ಧಮ೯ಶಾಸ್ತ್ರಕ್ಕೆ ಅಧಿನರಲ್ಲ ಕೃಪೆಗೆ ಅಧಿನರಾಗಿದ್ದಿರಷ್ಟೆ." ಎಂದು, ಪವಿತ್ರಾತ್ಮನು ಈ ವಾಕ್ಯದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾನೆ. (ನಾವು ಕೃಪೆಗೆ ಅಧೀನರಾದರೆ ಮಾತ್ರ ಪಾಪವು ನಮ್ಮ ಮೇಲೆ ಅಧಿಕಾರ ನಡಿಸದೆಂದು ಈ ವಾಕ್ಯವನ್ನು ಒಂದು ಚಿಕ್ಕ ಮಗುವು ಸಹ ಸರಳವಾಗಿ ಅಥ೯ ಮಾಡಿಕೊಳ್ಳುತ್ತದೆ. ಆದರೆ ಅನೇಕ ವಿಶ್ವಾಸಿಗಳು ಪಾಪದ ಮೇಲೆ ಜಯದ ಜೀವಿತ ಸಾಧ್ಯ ಎಂಬುದನ್ನು ನಂಬದವರಾಗಿದ್ದಾರೆ.

ನೀವು ಜಯದಲ್ಲಿ ಜೀವಿಸಬೇಕೆಂಬುದಾಗಿ ದೇವರು ಬಯಸುತ್ತಾನೆ. ನಿಮ್ಮ ಆಲೋಚನೆಗಳು ಎಷ್ಟ್ಟು ಹೊಲಸಾಗಿದ್ದರೂ, ಸಿಟ್ಟಿನಿಂದ ಬಹಳ ಕಾಲ ಸೋತುಹೋದವರಾಗಿದ್ದರೂ ಇವು ಯಾವ ವ್ಯತ್ಯಾಸವನ್ನು ಮಾಡಲಾರವು. ಕತ೯ನು ನಿಮ್ಮನ್ನು ಸಂಪೂಣ೯ವಾಗಿ ಬಿಡಿಸಿ ಶುಧ್ದಹೃದಯವನ್ನು ನಿಮಗೆ ಕೊಡುತ್ತಾನೆ. ನೀವು ಇದನ್ನು ನಂಬುವವರೆಗೂ ಆತನು ಇದನ್ನು ನಿಮಗೆ ಮಾಡಲಾರನು. ಸತ್ಯವೇದ ಹೇಳುತ್ತದೆ. ಹೃದಯದಲ್ಲಿ ನಂಬಿದ್ದಂಥದ್ದನ್ನು ಬಾಯಿಂದ ಅರಿಕೆಮಾಡಬೇಕೆಂದು. ರೋಮ 10:10 ರಲ್ಲಿ “ಹೃದಯ- ದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆ ಮಾಡುವುದರ ಮೂಲಕ ರಕ್ಷಣೆಯಾಗುತ್ತದೆ". ಎಂದು ಓದುತ್ತೇವೆ.

ನಾವು ನಮ್ಮ ಹೃದಯದಿಂದ ನಂಬಿದ್ದೇವೆಂದರೆ, ನಂಬಿದ್ದನ್ನು ಬಾಯಿಂದ ಅರಿಕೆಮಾಡುವದು ಒಂದು ಪ್ರಮುಖ ನಿಯಮವಾಗಿದೆ. ಬಾಯಿಂದ ಮಾಡುವ ನಂಬಿಕೆಯ ಅರಿಕೆಯು ನಮ್ಮನ್ನು ಪಾಪದ ಶಕ್ತಿಯಿಂದ ಬಿಡಿಸುವಂಥದ್ದಾಗಿದೆ. ಆದುದರಿಂದ ಈ ನಮ್ಮ ಸಾಕ್ಷಿಯನ್ನು ಹೀಗೆ ಸೈತಾನನಿಗೆ ಅರಿಕೆ ಮಾಡಬೇಕು, “ಪಾಪದ ಮೇಲೆ ಜಯದ ಜೀವಿತಕ್ಕೆ ದೇವರು ನನ್ನನ್ನು ನಡೆಸುತ್ತಾನೆಂದು ನಾನು ನಂಬುತ್ತೇನೆ" ಎಂಬುದು. ಹೀಗೆ ನಾವು ಸೈತಾನನನ್ನು ಜಯಿಸುತ್ತೇವೆ.

“ಅವರು ಪ್ರಾಣದ ಮೇಲಿನ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿ- ಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು (ಸೈತಾನನನ್ನು) ಜಯಿಸಿದರು". (ಪ್ರಕ 12:11)

ಈ ಅರಿಕೆಯನ್ನು ಪ್ರತಿಸಾರಿ ನೀವು ಬೀಳುವಾಗ ಜಯವು ನಿಮ್ಮ ಜೀವಿತದಲ್ಲಿ ನಿಜವಾಗಿ ಬರುವವರೆಗೂ ಅರಿಕೆಮಾಡಿ. ಇದು ಒಂದೇ ದಿನದಲ್ಲಿ ನಿಮ್ಮ ಜೀವಿತದಲ್ಲಿ ಬರಲಾರದ ಕಾರಣ ನಿರಾಶೆಯಾಗಬೇಡಿರಿ ದೇವರು ನಿಜವಾಗಿಯೂ ನಿಮ್ಮ ಬಾಯಿಂದ ಅರಿಕೆಮಾಡಿದ ಆ ನಂಬಿಕೆಯ ಅರಿಕೆಯನ್ನು ಗೌರವಿಸುತ್ತಾನೆ..

ಅಧ್ಯಾಯ 3
ದೇವರ ವಾಕ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವದು

ದೇವರ ವಾಕ್ಯವನ್ನು ಬಹು ಹಗುರವಾಗಿ ತೆಗೆದುಕೊಳ್ಳುವ ಒಂದು ಕೆಟ್ಟ ಅಭ್ಯಾಸ ಅನೇಕ ವಿಶ್ವಾಸಿಗಳಲ್ಲಿದೆ. ಉದಾಹರಣೆಗಾಗಿ ಮತ್ತಾಯ 12:36-37 ರಲ್ಲಿ ಯೇಸು ತಾನೇ ಹೇಳಿದ ಮಾತುಗಳನ್ನು ತೆಗೆದುಕೊಳ್ಳೋಣ.

“ಮನುಷ್ಯನು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀಪು೯ ಹೊಂದುವಿ. ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀಪು೯ಹೊಂದುವಿ". ಅನೇಕ ವಿಶ್ವಾಸಿಗಳು ತಾವು ಮಾತನಾಡಿದ ಪ್ರತಿಯೊಂದು ಮಾತಿನ ವಿಷಯವಾಗಿ ಲೆಕ್ಕ ಕೊಡಬೇಕು ಎಂಬ ಸತ್ಯವನ್ನು ನಂಬದವರಾಗಿದ್ದಾರೆ. ಎಂದಿನಿಂದ ಈ ಸತ್ಯವನ್ನು ನಂಬುತ್ತೇವೋ ಅಂದಿನಿಂದ ಹಿಂದೆ ಮಾತನಾಡುವದು, ಹರಟೆ ಮಾತು, ಕೆಟ್ಟದ್ದನ್ನು ನುಡಿಯುವದು, ಮತ್ತು ಸಿಟ್ಟು ನಮ್ಮ ಜೀವಿತದಿಂದ ತೊಲಗಿ ಹೋಗುತ್ತದೆ. ಯಾರು ಯೇಸುವಿನ ಈ ಮಾತುಗಳನ್ನು ತಮ್ಮ ಜೀವಿತದಲ್ಲಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ಅವರ ಪ್ರತಿಯೊಂದು ಸಂಭಾಷಣೆಯಲ್ಲಿ ಸುಮ್ಮನೆ ಆಡುವ ವ್ಯಥ೯ವಾದ ಮಾತುಗಳನ್ನು ತೀವ್ರವಾದಿಗಳಾಗಿ ಕತ್ತರಿಸುತ್ತಾರೆ.

ನಮ್ಮ ಮಾತುಗಳಿಂದಲೇ ನೀತಿವಂತರೆಂದು ತೀಪು೯ಹೊಂದುತ್ತೇವೆಂದು ಯೇಸುವು ಇಲ್ಲಿ ಹೇಳಿ ದ್ದಾನೆ.

ನಂಬಿಕೆಯಿಂದಲೇ ನೀತಿವಂತರೆಂದು ಎಣಿಸಲ್ಪಟ್ಟಿದ್ದೇವೆಂದು ನಮ್ಮೆಲ್ಲರಿಗೆ ಗೊತ್ತಿದೆ. ಆದರೆ ಕ್ರಿಯೆ- ಯಿಲ್ಲದ ನಂಬಿಕೆ ಸತ್ತದ್ದು ಮತ್ತು ನಂಬಿಕೆಯು ನಮ್ಮ ಮಾತನ್ನು ಶುಧ್ದಗೊಳಿಸದಿದ್ದರೆ ಅಂಥ ನಂಬಿಕೆಯು ಸತ್ತ ನಂಬಿಕೆಯಾಗಿದೆ.

ಕಳೆದ ದಿನಗಳಲ್ಲಿ ನೀವು ಮಾತನಾಡಿದ ಹಾಗೂ ಬರೆದ ಮಾತುಗಳ ಕುರಿತು ಆಲೋಚಿಸಿರಿ. (ಆಫೀಸಿನಲ್ಲಿ, ಮನೆಯಲ್ಲಿ, ಗಂಡನ ಜೊತೆ, ಹೆಂಡತಿಯ ಜೊತೆ,ಮನೆಯಲ್ಲಿ ಮಕ್ಕಳ ಸಂಗಡ, ಸೇವೆಮಾಡುವವರ ಸಂಗಡ) ನೀವು ಮಾತನಾಡಿದ ದಾಖಲೆಯ ಸುರುಳಿಯು (ಖಿboe-ಖeಜ್ಝಟ್ಜಿ) ನೀವು ನೀತಿಕರಿಸಲ್ಪಟ್ಟ ದೇವರ ಮಗು ಎಂದು ರುಜು ಪಡಿಸುತ್ತದೋ ಅಥವಾ ನಿಮ್ಮ ಮಾತು ಲೋಕದವರ ಮಾತುಗಳಿಗೆ ಯಾವ ವ್ಯತ್ಯಾಸವುಳ್ಳ ಮಾತಾಗಿರದೆ ಅವಿಶ್ವಾಸಿಗಳ ಮಾತಿನಂತೆಯೇ ನಿಮ್ಮ ಮಾತು ಸಹ ಇದೆಯೇ?

ಅನೇಕ ವಿಶ್ವಾಸಿಗಳ ಮಾತುಗಳು ಶುಧ್ದೀಕರಿಸಲ್ಪಟ್ಟಿಲ್ಲ. ಯಾಕಂದರೆ ಯೇಸು ಆಡಿದ ಮಾತುಗಳನ್ನು ವಿಶ್ವಾಸಿಗಳು ಗಂಭಿರವಾಗಿ ತೆಗೆದುಕೊಂಡಿಲ್ಲ. ಇದು ಅವರು ದೇವರಿಗೆ ಭಯಪಡಲಾರದವರು ಎಂದು ತೋರಿಸುತ್ತದೆ. ವಿಶ್ವಾಸಿಗಳು ದೇವರಿಗೆ ಭಯಪಡುವದಕ್ಕಿಂತಲೂ ಹೆಚ್ಚಾಗಿ ಮನುಷ್ಯರಿಗೆ ಭಯ- ಪಡುತ್ತಾರೆ. ದೇವರ ವಾಕ್ಯವನ್ನು ಗಂಭಿರವಾಗಿ ತೆಗೆದುಕೊಳ್ಳುವ ಅಭ್ಯಾಸವನ್ನು ನಾವು ಮಾಡದಿದ್ದರೆ ಆತ್ಮೀಕ ಪ್ರಗತಿಯನ್ನು ನಮ್ಮ ಜೀವಿತದಲ್ಲಿ ಕಾಣಲು ನಿರೀಕ್ಷೆಯೇ ಇಲ್ಲ.

ಯಾಕೋಬ 1:26 ರಲ್ಲಿ ಸದ್ಬಕ್ತನೆನಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ ಎಂದು ಹೇಳುತ್ತದೆ. ಒಬ್ಬ ವಿಶ್ವಾಸಿ ತನ್ನ ನಾಲಿಗೆಯನ್ನು ನಿಯಂತ್ರಿಸದೇ ಹೋದರೆ ಅವನ ಕ್ರೈಸ್ತತ್ವ ನಿಷ್ಪ್ರ ಪ್ರಯೋಜಕವಾಗಿದೆ. ಯೇಸು ಹೇಳಿದ್ದು ನಮ್ಮ ಮಾತುಗಳಿಂದಲೇ ನಮ್ಮ ಹೃದಯ ಹೇಗಿದೆ ಎಂದು, ತಿಳಿಯುತ್ತದೆ.

ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. (ಮತ್ತಾಯ 12:34) ನಮ್ಮ ನಾಲಿಗೆ- ಯನ್ನು ಹೇಗೆ ಉಪಯೋಗಿಸುತ್ತೇವೆಂಬುದು ನಮ್ಮ ಆತ್ಮೀಕ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

ಇನ್ನೊಂದು ಉದಾಹರಣೆ ಗಂಡನು ತನ್ನ ಹೆಂಡತಿಯ ಮೇಲೆ ಕಹಿತನ ಇಟ್ಟುಕೊಳ್ಳಬಾರದೆಂದು ದೇವರ ವಾಕ್ಯವು ಹೇಳುತ್ತದೆ. ಗಂಡಂದಿರೆ ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ ಅವರಿಗೆ ನಿಷ್ಠುರಾಗಿರ- ಬೇಡಿರಿ. ಕೊಲೊಸ್ಸೆ ೩:೧೯ ಇದರ ಅಥ೯ ಎನಾಗಿದೆ? ಈ ವಾಕ್ಯ ಒಂದು ಸಾರಿಯಾದರೂ ಹೆಂಡತಿಯ ಮೇಲೆ ಕಹಿತನ ಇಟ್ಟುಕೊಳ್ಳಲು ಅನುಮತಿಸುತ್ತದೋ ದೇವರ ವಾಕ್ಯ ಹೇಳುವಂತ ವ್ಯಬಿಚಾರ ಕೊಲೆ ಮುಂತಾದ ಪಾಪಗಳನ್ನು ಒಂದು ಸಾರಿಯಾದರೂ ನಾವು ಮಾಡಲಾರೆವು. ಹೀಗಾದರೂ ಗಂಡನು ಒಂದೂ ಸಾರಿಯಾದರೂ ತನ್ನ ಹೆಂಡತಿಯ ಮೇಲೆ ಕಹಿತನ ಇಟ್ಟುಕೊಳ್ಳ- ಬಾರದೆಂದು ಓದುವಾಗ ಇದು ಅವುಗಳಂತೆ ಸಮವಾದ ಬಲದಿಂದ ನಮ್ಮನ್ನು ಹೊಡೆಯುವದಿಲ್ಲ. ಯಾಕೆ ಆ ರೀತಿಯಾಗಿದೆ? ಯಾಕಂದರೆ ದೇವರ ವಾಕ್ಯದಲ್ಲಿ ಕೆಲವು ಗಂಭೀರವಾದದ್ದು ಮತ್ತು ಕೆಲವು ಅಲ್ಲವೆಂದು. ನಾವು ಆರಿಸಿತೆಗೆಯುವವರಾಗಿದ್ದೇವೆ. ಎಲ್ಲಾ ದೇವರ ವಾಕ್ಯವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕೆಂದು ನಾವು ಗ್ರಹಿಸುವದಿಲ್ಲ. ಯಾರು ದೇವರ ಎಲ್ಲಾ ವಾಕ್ಯವನ್ನು ಗಂಭಿರವಾಗಿ ತೆಗೆದುಕೊಳ್ಳುತ್ತಾರೋ ಅವರು ಪಾಪದಲ್ಲಿ ಪ್ರತಿ ಸಾರಿ ಬೀಳುವಾಗ ಮನೋವ್ಯಥೆ ಪಟ್ಟು ದು:ಖಿಸುವವರಾಗಿದ್ದಾರೆ. ಆದಕಾರಣ ಅಂಥವರು ಆದರಣೆ ಮತ್ತು ಸಮಾಧಾನವನ್ನು, ಬಲವನ್ನು ವಿತ್ರಾತ್ಮನಿಂದ ಹೊಂದಿ ಜಯದ ಜೀವಿತಕ್ಕೆ ಪ್ರವೇಶಿಸುವಂತವರಾಗಿದ್ದಾರೆ.

ದು:ಖಪಡುವವರು ಧನ್ಯರು ಅವರು ಸಮಾಧಾನ ಹೊಂದುವರು (ಮತ್ತಾಯ 5:4). ಜಯದ ಜೀವಿತಕ್ಕೆ ಸಾಗಲು ಇಲ್ಲಿ ಇನ್ನೊಂದು ರಹಸ್ಯ ಇದೆ. ದೇವರ ಎಲ್ಲಾ ವಾಕ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಿರಿ ಹಾಗೂ ಯಾವಾಗಲೂ ದೇವರು ತನ್ನ ವಾಕ್ಯದಲ್ಲಿ ಬಯಸುವ ಮಟ್ಟಕ್ಕಿಂತ ಕೆಳಗೆ ಬಂದು ಪಾಪಮಾಡುವಾಗೆಲ್ಲಾ ಮನೋವ್ಯಥೆ ಪಟ್ಟು ದು:ಖಿಸಿರಿ. ಗೋಳಾಡಿರಿ.ಹೀಗೆ ನೀವು ದೇವರಿಗೆ ಭಯಪಡುತ್ತೀರೆಂದು ರುಜುಪಡಿಸುತ್ತದೆ. ಹಾಗೂ ದೇವರ ಭಯವೇ ಜ್ಞಾನಕ್ಕೆ ಮೂಲ- ವಾಗಿರುವದರಿಂದ ಅದು ನಿಮ್ಮನ್ನು ಜಯದ ಜೀವಿತಕ್ಕೆ ನಡೆಸುತ್ತದೆ.

ಯಾರು ಮುರಿಯಲ್ಪಟ್ಟು ಜಜ್ಜಿ ಹೋಗಿದ್ದಾರೋ ಮತ್ತು ಆತ್ಮದಲ್ಲಿ ನೊಂದವರಾಗಿದ್ದಾರೋ ಮತ್ತು ಯಾರು ದೇವರ ವಾಕ್ಯಕ್ಕೆ ನಡುಗುತ್ತಾರೋ ಅವರನ್ನು ದೇವರು, ಕೃಪೆಯಿಂದಲೂ ಪ್ರಸನ್ನ ಮುಖ- ದಿಂದಲೂ ನೋಡುತ್ತಾನೆ. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನು ಮನಮುರಿದವನು ನನ್ನ ಮಾತಿಗೆ ನಡುಗುವವನೂ ಆಗಿರುವವನೇ (ಯೆಶಾಯ 66:2)..

ಅಧ್ಯಾಯ 4
ದೇವರ ಎಲ್ಲಾ ವ್ಯವಹಾರಗಳು ಪ್ರೀತಿಯಿಂದಲೇ

ಮನುಷ್ಯರಿಂದ ದೇವರು ಯಾವಾಗಲೂ ತನ್ನ ಆಜ್ಞೆಗಳಿಗೆ ವಿಧೇಯತೆಯನ್ನು ಬಯಸುತ್ತಾನೆ. ಹಳೇಒಡಂಬಡಿಕೆಯಲ್ಲಿ ಇಸ್ರಾಯೇಲರು ವಿಧೇಯರಾಗಬೇಕೆಂದೇ ಅವರಿಗೆ ಆಜ್ಞೆಗಳನ್ನು ಕೊಡಲಾಗಿತ್ತು. ಆದರೆ ದೇವರ ವಾಕ್ಯವನ್ನು ಅವರು ಸಂಪೂಣ೯ವಾಗಿ ಕೈಕೊಳ್ಳದೆ ವಿಧೇಯರಾಗದೇ ಹೋದರು. ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ ಆಜ್ಞೆಗಳನ್ನು ನಮ್ಮ ಹೃದಯಗಳಲ್ಲಿ ಬರೆಯುತ್ತಾನೆ. ಯಾಕಂದರೆ ಆತನಿಗೆ ವಿಧೇಯರಾಗಬೇಕೆಂದು. ಅಷ್ಟುಮಾತ್ರವಲ್ಲ ಪ್ರೀತಿಯಿಂದ ಆತನಿಗೆ ವಿಧೇಯರಾಗಬೇಕೆಂದು.

“ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ." (ಯೆಹೆ 36:27) ಆತನ ಆಜ್ಞೆಗಳಿಗೆ ವಿಧೇಯರಾಗುವದರಿಂದ ಮಾತ್ರವೇ ನಾವು ಆತನೊಂದಿಗೆ ಅನ್ಯೋನ್ಯತೆ ಹೊಂದಲು ಸಾಧ್ಯ. ದೇವರ ವಾಕ್ಯಕ್ಕೆ ವಿಧೇಯತೆಯನ್ನು ಅನೇಕ ವಿಶ್ವಾಸಿಗಳು ಅಥ೯ಮಾಡಿಕೊಳ್ಳದೇ ಹೋಗಿದ್ದಾರೆ. ಅನೇಕ ವಿಶ್ವಾಸಿಗಳು “ಕೃಪೆ"’ಯನ್ನು ಅಪಾಥ೯ಮಾಡಿಕೊಂಡಿದ್ದರಿಂದ ಹಳೇಒಡಂಬಡಿಕೆಯ ಮಟ್ಟದಂತೆ ವಿಧೇಯತೆಯನ್ನು ಬಯಸುತ್ತಾರೆ. ದೇವರ ಆಜ್ಞೆಗಳು ಭಾರವಾದವುಗಳೆಂದು ತಿಳಿದುಕೊಂಡಿದ್ದಾರೆ. ಇದು ಸೈತಾನನ ಒಂದು ವಂಚನೆಯಾಗಿದೆ. ದೇವರ ಪ್ರೀತಿಯನ್ನು ತಿಳಿಯಲಾರದೆ ಅಜ್ಞಾನಿಗಳಂತಿರುವುದು ಇದಕ್ಕೆ ಕಾರಣ.

ದೇವರ ಎಲ್ಲಾ ಆಜ್ಞೆಗಳು ನಮ್ಮ ಒಳ್ಳೆಯದಕ್ಕಾಗಿಯೂ ಮತ್ತು ನಮ್ಮ ಬಂದನದಿಂದ ಬಿಡಿ- ಸುವದಕ್ಕಾಗಿಯೂ ಅವೆ. ಆ ಎಲ್ಲಾ ಆಜ್ಞೆಗಳು ನಮ್ಮನ್ನು ಸಂಪೂಣ೯ವಾಗಿ ಪ್ರೀತಿಸಿದಾತನ ಹೃದಯ- ದಿಂದ ಬಂದಂಥವುಗಳಾಗಿವೆ.

ಸೀನಾಯ ಬೆಟ್ಟದ ಮೇಲೆ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳ ಕುರಿತು ಮೋಶೆ ಹೇಳಿದಂತದ್ದು - “ಆತನ ಬಲಪಾಶ್ವ೯ದಲ್ಲಿ ಅಗ್ನಿಸದೃಶ್ಯವಾದ ಧಮ೯ಶಾಸ್ತ್ರವಿತ್ತು ಆತನು ತನ್ನ ಜನರನ್ನು ಪ್ರೀತಿಸುತ್ತಾನೆಂಬುದಕ್ಕೆ ಇದು ಗುರುತಾಗಿದೆ" (ಧಮೋ೯ 33: 2-3). ದೇವರು ತನ್ನ ಆಜ್ಞೆಗಳನ್ನು ಕೊಟ್ಟದ್ದರಲ್ಲಿ ತನ್ನ ಪ್ರೀತಿಯನ್ನು ರುಜು ಪಡಿಸಿದ್ದಾನೆ. ದೇವರ ಆಜ್ಞೆಗಳಲ್ಲಿ ಕೆಲವೊಂದು ನಮ್ಮನ್ನು ನಿರಾಕರಿಸುವದು (ಸ್ವಾಥ೯ಕ್ಕೆ ಸಾಯುವುದು) ನಮ್ಮ ಭಾಗವಾಗಿದೆ. ಆದರೆ ಕಡೆಯವರೆಗೂ ಈ ಒಂದು ಓಟದಲ್ಲಿ ಇರುವಾಗ ಆಜ್ಞೆಗಳು ನಮಗೆ ಅತೀ ಶ್ರೇಷ್ಠವಾದದ್ದಾಗಿವೆ. ಅಥವಾ ನಮ್ಮ ಒಳ್ಳೇಯದಕ್ಕಾಗಿಯೇ ಅವೆ ಎಂದು ಕಂಡು ಹಿಡಿಯುವೆವು. ಒಬ್ಬ ತಂದೆ ತನ್ನ ಮಕ್ಕಳಿಗೆ ಆಜ್ಞೆಯನ್ನು ಕೊಡುವ ಉದ್ದೇಶ ಅವರ ಮೇಲೆ ಬಾರಹಾಕಬೇಕು, ಅವರಿಗೆ ಕೆಟ್ಟದ್ದನ್ನು ಮಾಡಬೇಕೆಂಬ ಉದ್ದೇಶದಿಂದಲ್ಲ. ಅವರಿಗೆ ಕೇವಲ ಸಹಾಯ ಮಾಡುವದಕ್ಕಾಗಿಯೇ ಕೊಡುತ್ತಾನೆ.ದೇವರು ನಮಗೆ ಕೊಟ್ಟ ಆಜ್ಞೆಗಳನ್ನು ಸಹ ನಾವೂ ಇದೇ ರೀತಿಯಾಗಿ ನೋಡುವುದು ಅವಶ್ಯವಾಗಿದೆ. ಪ್ರೀತಿಯಲ್ಲಿ ಸಂಪೂಣ೯ತೆಯುಳ್ಳಾತನಾಗಿರುವ ದೇವರನ್ನು ನಂಬುವುದೇ ದೇವರಲ್ಲಿ ನಂಬಿಕೆಯಿಡುವದಾಗಿದೆ. ಈ ರೀತಿಯಾದ ನಂಬಿಕೆ ನಮ್ಮಲ್ಲಿರುವದಾದರೆ ಎಷ್ಟೇ ಕ್ರಯವಾದರೂ ಸರಿ ದೇವರ ಆಜ್ಞೆಗೆ ಸಂತೋಷದಿಂದಲೂ ಆನಂದದಿಂದಲೂ ವಿಧೆಯರಾಗುತ್ತೇವೆ. ಸೈತಾನನು ನಮ್ಮಲ್ಲಿ ಅನೇಕರಿಗೆ ದೇವರ ಆಜ್ಞೆ ಅವಶ್ಯವಾದದ್ದಲ್ಲ ಹಾಗೂ ಭಾರವುಳ್ಳವುಗಳಾಗಿವೆ ಎಂದು ಒಡಂಬಡಿಸಿದ್ದಾನೆ. ಯಾವುದೋ ಒಂದನ್ನು ಮಾಡುವುದಕ್ಕೆ ದೇವರು ನನ್ನನ್ನು ಯಾಕೆ ಕರೆದಿದ್ದಾನೆಂಬಂಥದ್ದನ್ನು ಅಥ೯ಮಾಡಿಕೊಳ್ಳದೇ ಹೋದರೆ ಅದು ನಾವು ಇನ್ನೂ ಆತ್ಮಿಕತೆಯಲ್ಲಿ ಪರಿಪಕ್ವೇತೆಯನ್ನು ಹೊಂದದೇ ಇರುವುದನ್ನು ತೋರಿಸುತ್ತದೆ. ಒಂದು ದಿನ ಆತ್ಮೀಕತೆಯಲ್ಲಿ ಸ್ವಲ್ಪ ಪರಿಪಕ್ವತೆಗೆ ಬಂದಾಗ ನಾವು ಅದನ್ನು ಅಥ೯ಮಾಡಿಕೊಳ್ಳುತ್ತೇವೆ.

ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಒತ್ತಾಯ ಪಡಿಸಬೇಕಾಗುತ್ತದೆ. ಆ ಮಗು ಯಾಕೆ ನನ್ನ ತಂದೆ ತಾಯಿ ಮಾತ್ರ ಮನೆಯಲ್ಲಿಯೇ ಇದ್ದು ಆಟಮಾಡುವುದಕ್ಕೆ ಯಾಕೆ ನನ್ನನ್ನು ಬಿಡುವುದಿಲ್ಲವೆಂಬದನ್ನು ಅಥ೯ಮಾಡಿಕೊಳ್ಳುವುದಿಲ್ಲ. ತಂದೆ ತಾಯಿ ತಮ್ಮ ಮೇಲೆ ಬಹಳ ಕ್ರೂರರಾಗಿದ್ದಾರೆಂದು ಮಕ್ಕಳು ತಿಳಿದುಕೊಳ್ಳುತ್ತಾರೆ. ಪ್ರೀತಿಯಿಂದಲೇ ತಂದೆ ತಾಯಿಗಳು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಲು ಶಾಲೆಗೆ ಕಳುಹಿಸಲು ಒತ್ತಾಯ ಮಾಡುತ್ತಾರೆ.

ಆ ಚಿಕ್ಕ ಮಕ್ಕಳಂತೆಯೇ ನಾವೂ ಸಹ ದೇವರ ಮಾಗ೯ಗಳನ್ನು ಅಥ೯ಮಾಡಿಕೊಳ್ಳಲಾರೆವು ಆದರೆ ತಂದೆಯ ಪ್ರೀತಿಯಲ್ಲಿ ನಂಬಿಕೆಯಿಟ್ಟರೆ ನಾವು ಸಹ ಒಂದೂ ಪ್ರಶ್ನೆಯಿಲ್ಲದೆ ದೇವರ ಎಲ್ಲಾ ವ್ಯವಹರಿಸುವಿಕೆಗೂ ಆತನ ವಾಕ್ಯಗಳಿಗೂ ಅಧೀನತೆ ತೋರಿಸುವವರಾಗಿ ವಿಧೇಯರಾಗುವೆವು.

ಸಂಕಟಗಳ ಕುರಿತಾಗಿ ಆಲೋಚಿಸಿರಿ. ಪ್ರೀತಿಯುಳ್ಳ ದೇವರು ಯಾಕೆ ನಮ್ಮನ್ನು ಸಂಕಟಗಳಲ್ಲಿ ಹಾದು ಹೋಗುವಂತೆ ಅನುಮತಿಸುತ್ತಾನೆ? ಯಾಕಂದರೆ ಸಂಕಟಗಳನ್ನು ತಾಳಿಕೊಳ್ಳುವದು ಸಹ ಆತ್ಮೀಕ ವಿಧ್ಯಭ್ಯಾಸದಲ್ಲಿ ಒಂದು ಪಾಠವಾಗಿದೆ. ಅಥವಾ ಒಂದು ಭಾಗವಾಗಿದೆ. ಸಂಕಟಗಳ ಮೂಲಕವಾಗಿಯೇ ದೇವರು ನಮ್ಮನ್ನು ಪರಿಪಕ್ವತೆಗೆ ಸಾಗಿಸುತ್ತಾನೆ. ನಿಮ್ಮ ಜೀವಿತದಲ್ಲಿ ಸಂಕಟಗಳನ್ನು ತಾಳಿಕೊಳ್ಳುವ ಅವಕಾಶಗಳಿರದಿದ್ದರೆ ಆತ್ಮೀಕತೆಯಲ್ಲಿರುವ ಬೆಲೆಯನ್ನು ಅರಿಯದವರಾಗಿ ಕಲಿಯದೇ- ಯಿದ್ದಿರಿ. ಕಲಿಯುವದರ ಬದಲಾಗಿ ಕಳೆದ ಸಾರಿ ನಿಮಗೆ ಸ್ವಲ್ಪ ಸಂಕಟಗಳು ಬಂದಾಗ ಅವುಗಳಿಗಾಗಿ ಗುಣಗುಟ್ಟಿ ದೂರು ಹೇಳಿದರೆ ದೇವರು ನಿಮ್ಮದೇ ಆದ ಹಾದಿಯಲ್ಲಿ ನೀವು ಸಾಗುವಂತೆ ಅನು- ಮತಿಸುತ್ತಾನೆ. ಆ ರೀತಿಯಾಗಿ ದೇವರು ನಿಮ್ಮನ್ನು ಗೋಡೆಯಲ್ಲಿರುವ ಶೆಲ್ಫ (qheಟಜಿ) ನಲ್ಲಿ ಕೂರಲು ಬಿಡುವುದು ದುಃಖಕರವಾಗಿದೆ. ದೇವರು ನನ್ನನ್ನು ಪ್ರತ್ಯೇಕವಾಗಿ ಶೆಲ್ಫ ಮೇಲೆ ಇಡುವುದಕ್ಕಿಂತಲೂ ಕುಳಿತು- ಕೊಳ್ಳುವುದಕ್ಕಿಂತಲೂ ಪ್ರತಿ ದಿನ ನನ್ನ ಜೀವಿತದಲ್ಲಿ ಸಂಕಟಗಳಲ್ಲಿ ಹಾದುಹೋಗುವುದು ನನಗೆ ಉತ್ತಮ.

ದೇವರು ನಮ್ಮನ್ನು ಸಂಕಟಗಳ ಹಾದಿಯಲ್ಲಿ ಹಾದುಹೋಗಮಾಡುವಾಗ ನಾವು ನಮ್ಮನ್ನು ಇತರರಿಗೆ ಹೋಲಿಸಿ ನೋಡಿಕೊಳ್ಳುವದು ಬುದ್ದಿಹೀನತೆ. ಇದು ಹೇಗಿದೆ ಎಂದರೆ, ಕೊಳಚೆ ಪ್ರದೇಶದ ಮಕ್ಕಳು ಇಡೀ ದಿನ ಮಣ್ಣಲ್ಲಿ ಆಟವಾಡುತ್ತಿರುವಾಗ ನಿಮ್ಮ ಮಕ್ಕಳು ತಾವು ಮಾತ್ರ ಏಕೆ ಶಾಲೆಗೆ ಹೋಗಬೇಕು ಎಂದು ಯೋಚಿಸುವಂತೆ ಇದೆ. ದೇವರ ಎಲ್ಲಾ ವ್ಯವಹರಿಸುವಿಕೆಯು ನಮಗೆ ಪರಿಪೂಣ೯ ಪ್ರೀತಿಯಿಂದ ಕೂಡಿದಂತದ್ದಾಗಿದೆ. ಲೋಕದಲ್ಲಿರುವ ಸಂತೋಷದಂಥಲ್ಲ.

ನಿಜವಾದ ಸಂತೋಷಭರಿತ ವ್ಯಕ್ತಿಗಳಾಗಬೇಕೆಂದು ದೇವರು ಬಯಸುತ್ತಾನೆ. ಇದರ ಆಳದಲ್ಲಿ ಪರಿಶುಧ್ದತೆಯಿಂದ ಬರುವ ನಿತ್ಯತ್ವದ ಸಂತೋಷವುಳ್ಳವರಾಗಿರಬೇಕೆಂದು ಆತನು ಆಶಿಸುತ್ತಾನೆ. ಸಂಕಟಗಳನ್ನು ಹಾದುಹೋಗುವದರಿಂದಲೇ ಹೊರತು ಪವಿತ್ರತೆಗೆ ಮತ್ತಾವ ಹಾದಿ ಅಥವಾ ಮಾಗ೯ ಇರದು. ಆತನ ಪರಿಶುಧ್ಧತೆಯಲ್ಲಿ ಪಾಲುಗಾರರಾಗುವದಕ್ಕಾಗಿಯೇ ಆತನು ನಮ್ಮನ್ನು ಶಿಕ್ಷಿಸುತ್ತಾನೆ. (ಇಬ್ರಿಯ 12:10) ಯೇಸುವು ಈ ಲೋಕದಲ್ಲಿಯೇ ಅತೀ ಸಂತೋಷವುಳ್ಳ ವ್ಯಕ್ತಿಯಾಗಿ ನಡೆದನು. ಆದರೂ ಆತನೇ ಭಾದೆ ಸಂಕಟಗಳನ್ನು ತಾಳಿದವರಲ್ಲಿ ಮೊದಲನೆಯವನು. ಜೀವನದ ಸರಳವಾದ ಮಾಗ೯ದಲ್ಲಿ ಹಾದು ಹೋಗದೇ ತಂದೆಯ ಚಿತ್ತವನ್ನು ಮಾಡುವುದರ ಮೂಲಕ ಆತನಿಗೆ ಸಂತೋಷವು ಸಿಕ್ಕಿತು. ತನ್ನ ತಂದೆಯು ಪರಿಪೂಣ೯ ಪ್ರೀತಿಯುಳ್ಳವನಾಗಿದ್ದಾನೆಂದು ಯೇಸುವು ತಿಳಿದ ಕಾರಣ ಆತನ ಹಾದಿಯಲ್ಲಿ ತಂದೆ ಬರಮಾಡಿದ ಪ್ರತಿಯೊಂದಕ್ಕೂ ಯೇಸುವು ಅಧೀನನಾದನು. ಇದೇ ಯೇಸುವಿನ ಜೀವಿತದ ರಹಸ್ಯ..

ಅಧ್ಯಾಯ 5
ಯೇಸುವನ್ನು ಪ್ರೀತಿಸಿದಂತೆಯೇ ದೇವರು ನಮ್ಮನ್ನು ಪ್ರೀತಿಸುತ್ತಾನೆ

ಎಲ್ಲಾ ನಮ್ಮ ಆತ್ಮೀಕ ಸಮಸ್ಯೆಗಳ ಬೇರು ದೇವರು ಪ್ರೀತಿಸುವ ತಂದೆ ಮತ್ತು ಎಲ್ಲಕ್ಕೂ ಶಕ್ತನಾದ ದೇವರು ಆಗಿದ್ದಾನೆ, ಎಂದು ತಿಳಿಯದೆ ಇರುವುದು. ಈ ಕ್ರಿಸ್ತೀಯ ಜೀವಿತದಲ್ಲಿ ಯೇಸುವು ಕೊಟ್ಟ ಒಂದು ಅತಿಶಯವಾದ ಸತ್ಯಯಾವುದೆಂದರೆ-ಪರಲೋಕದ ತಂದೆ ಯೇಸುವನ್ನು ಹೇಗೆ ಪ್ರೀತಿಸಿದನೋ ಹಾಗೆಯೇ ನಮ್ಮನ್ನು ಪ್ರೀತಿಸಿದ್ದಾನೆ ಎಂಬುದೇ.

ಯೇಸುವು ತಂದೆಯನ್ನು “ನೀನು ನನ್ನನ್ನು ಪ್ರೀತಿಸಿದಂತೆಯೇ ಅವರನ್ನು ಪ್ರೀತಿಸಿದ್ದೀ-ಎಂದು ಲೋಕಕ್ಕೆ ತಿಳಿದು ಬರುವುದು"ಎಂದು ಪ್ರಾಥಿ೯ಸಿದನು. (ಯೋಹಾನ 17:23) ನಮ್ಮ ಸುತ್ತಲೂ ಇರುವ ಈ ಲೋಕವು ಈ ಅತಿಶಯವಾದ ಸತ್ಯವನ್ನು ತಿಳಿಯಬೇಕೆಂದು ಯೇಸುವು ಪ್ರಾಥಿ೯ಸಿದನು. ಆದರೆ ಈ ಸತ್ಯವು ಲೋಕಕ್ಕೆ ತಿಳಿದುಬರುವುದಕ್ಕಿಂತ ಮೊದಲು ನಮ್ಮ ಹೃದಯವನ್ನು ಇದು ಹಿಡಿದುಕೊಳ್ಳಬೇಕು. ಎಲ್ಲಾ ಕ್ರೈಸ್ತರು ಪರಲೋಕದಲ್ಲಿರುವ ಪ್ರೀತಿಯುಳ್ಳ ತಂದೆ ಎಂದು ಸಿಧ್ಧಾಂತ ಪೂರಕವಾಗಿ (ಖಿheeಡ್ಝ್ಛಿbಟಟಣ) ನಂಬುತ್ತಾರೆ. ಆದರೆ ಯಾವಾಗಲೂ ಅವರು ಚಿಂತೆಯಲ್ಲಿಯೂ, ದು:ಖದಲ್ಲಿಯೂ ಅಭದ್ರತೆಯಲ್ಲಿಯೂ ಭಯದಲ್ಲಿಯೂ ಜೀವಿಸುವಂಥವರಾಗಿದ್ದಾರೆ. ಈ ರೀತಿಯಾಗಿರುವದು ಅವರು ತಮ್ಮ ಹೃದಯಾಳದಲ್ಲಿ ಇದನ್ನು ನಂಬಲಿಲ್ಲ ಎಂದು ರುಜು ಪಡಿಸುತ್ತದೆ. ಆದರೆ ಕೆಲವರು ದೇವರು ಯೇಸುವನ್ನು ಪ್ರೀತಿಸಿದಂತೆಯೇ ನನ್ನನ್ನು ಪ್ರೀತಿಸುತ್ತಾನೆ ಎಂದು ಧೈಯ೯ದಿಂದ ನಂಬುವವರಾಗಿದ್ದಾರೆ.

ಈ ಒಂದು ಅತಿಶಯವಾದ ಸತ್ಯಕ್ಕೆ ನಿಮ್ಮ ಕಣ್ಣುಗಳು ತೆರೆಯಲ್ಪಟ್ಟಾಗಲೇ ನಿಮ್ಮ ಇಡೀ ಜೀವಿತವೇ ಬದಲಾಗುತ್ತದೆ. ಎಲ್ಲಾ ಗುಣಗುಟ್ಟುವಿಕೆ, ಕಳೆಗುಂದುವಿಕೆ, ನಿರಾಶೆ ನಿಮ್ಮ ಜೀವಿತದಿಂದ ಅದೃಶ್ಯವಾಗುತ್ತವೆ. ನನ್ನ ಜೀವಿತದಲ್ಲಿ ಈ ರೀತಿಯಾಗಿರುವುದನ್ನು ನಾನು ಕಂಡಿದ್ದೇನೆ. ನನ್ನ ಜೀವಿತದಲ್ಲಿಯೂ ಅನೇಕ ವರುಷ ನಿರಾಶೆಯ ಬಂಧನದಲ್ಲಿ ಸೋತುಹೋದವನಾಗಿದ್ದೆ. ಈರೀತಿಯಾಗಿರುವದು ದೇವರ ಚಿತ್ತವಲ್ಲದಿದ್ದರೂ ಅದನ್ನು ನಾನು ಮುರಿಯಲಾಗಲಿಲ್ಲ. ದೇವರು ಯೇಸುವನ್ನು ಪ್ರೀತಿಸಿದಂತೆಯೇ ನನ್ನನ್ನು ಪ್ರೀತಿಸುತ್ತಾನೆ ಎಂಬ ಈ ಸತ್ಯಕ್ಕೆ ನನ್ನ ಕಣ್ಣುಗಳು ತೆರೆಯಲ್ಪಟ್ಟಾಗ ನನ್ನ ಈಗಿನ ವರುಷಗಳು ವ್ಯತ್ಯಾಸವಾಗಿವೆ. ಈಗ ನನ್ನ ಹಾದಿಯಲ್ಲಿ ಬರುವಂತ ಪ್ರತಿಯೊಂದೂ ಪ್ರೀತಿಯುಳ್ಳ ತಂದೆಯ ಹಸ್ತದಿಂದ ಬರುತ್ತವೆ ಎಂದು ಕಂಡಿದ್ದೇನೆ. ಆತನು ನನ್ನನ್ನು ತನ್ನ ಕಣ್ಣುಗುಡ್ಡೆಯಂತೆ ನನಗಾಗಿ ಶ್ರಧ್ಧೆವಹಿಸುತ್ತಾನೆ. ಈಗ ನನ್ನ ಜೀವಿತದಲ್ಲಿ ಬರುವಂತ ಯಾವುದೇ ಸನ್ನಿವೇಶ ನನ್ನನ್ನು ಕಳೆಗುಂದಿಸಿ ನಿರಾಶೆ ಮಾಡಲಾರವು.ಇದ್ದ ಸ್ಥಿತಿಯಲ್ಲಿಯೇ ಸತೃಪ್ತನಾಗಿರುವದನ್ನು ಎಲ್ಲಾ ಸನ್ನಿವೇಶದಲ್ಲಿ ದೇವರಿಗೆ ಸ್ತೋತ್ರಮಾಡುವುದನ್ನು ಪೌಲನು ಹೇಳಿದಂತೆಯೇ ನಾನು ಸಹ ಇದನ್ನು ಕಲಿತುಕೊಂಡಿದ್ದೇನೆ.

“ಯಾವಾಗಲೂ ಕತ೯ನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ತಿರುಗಿ ಹೇಳುತ್ತೇನೆ!. ಕೊರತೆಯಲ್ಲಿದ್ದೇನೆಂದು ಸೂಚಿಸುವದಕ್ಕೆ ನಾನು ಇದನ್ನು ಹೇಳುವುದಿಲ್ಲ. ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಠನಾಗಿರುವುದನ್ನು ಕಲಿತುಕೊಂಡಿದ್ದೇನೆ" (ಫಿಲಿಪ್ಪಿ 4:4,11).

“ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ. ಇದೇ ನಿಮ್ಮ ವಿಷಯವಾಗಿ ಕ್ರಿಸ್ತಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ" (1ಥೆಸ 5:18).

ದೇವರು ಯೇಸುವನ್ನು ಪ್ರೀತಿಸಿದಂತೆಯೇ ನನ್ನನ್ನು ಪ್ರೀತಿಸುತ್ತಾನೆ ಎಂಬುದು ಈಗ ನನ್ನ ಜೀವಿತದ ಕದಲಿಸಲಾರದ ಅಸ್ತಿವಾರವಾಗಿದೆ.

ನೀವು ಹೆಚ್ಚಾಗಿ ಉಪವಾಸ ಹಾಗು ಪ್ರಾಥ೯ನೆ ಮಾಡದೆಯಿರುವದರಿಂದ ಈ ಜಯದ ಜೀವಿತದಲ್ಲಿ ಪ್ರವೇಶಿಸಲಿಲ್ಲ ಎಂದಥ೯ವಲ್ಲ. ಜಯವು ಸ್ವಭಲದಿಂದ ಬರುವಂಥದ್ದಲ್ಲ.ನಂಬಿಕೆಯಿಂದಲೇ ಬರು- ವಂಥದ್ದು. ನಂಬಿಕೆ ಎಂದರೇನು? ಎಂದು ನೀವು ಕೇಳಲು ಸಾಧ್ಯ. ನಿಮ್ಮ ಮೇಲೆ ಇರುವ ದೇವರ ಪರಿಪೂಣ೯ತೆಯುಳ್ಳ ಪ್ರೀತಿಯೇ ನಂಬಿಕೆ.

ಅನೇಕ ವಿಶ್ವಾಸಿಗಳು ಸೈತಾನನ ಖಂಡನೆಯಲ್ಲಿ ಜೀವಿಸುತ್ತಾ ನೀನು ಸಾಕಷ್ಟು ಉಪವಾಸ ಮಾಡುತ್ತಾಯಿಲ್ಲ, ನೀನು ಸಾಕಷ್ಟು ಪ್ರಾಥ೯ನೆ ಮಾಡುತ್ತಾಯಿಲ್ಲ,ನೀನು ಸಾಕಷ್ಟು ಸಾಕ್ಷಿ ಕೊಡುತ್ತಾ ಇಲ್ಲ, ನೀನು ಸಾಕಷ್ಟು ಸತ್ಯವೇದವನ್ನು ಅಭ್ಯಾಸಿಸುತ್ತಾ ಇಲ್ಲ. ಈ ಮುಂತಾದುವುಗಳ ಕುರಿತು ಸೈತಾನನು ಹೇಳುವುದನ್ನು ಕೇಳಿಸಿಕೊಂಡು ಖಂಡನೆಯಲ್ಲಿಯೇ ಜೀವಿಸುತ್ತಿದ್ದಾರೆ. ಈ ರೀತಿಯಾದ ಆಲೋಚನೆ- ಯಲ್ಲಿ ಜೀವಿಸುತ್ತಾ ತಮ್ಮನ್ನು ತಿವಿಸಿಕೊಂಡು ನಿಜೀ೯ವ ಕಮ೯ಗಳಲ್ಲಿ ಮುಂದುವರೆದಿದ್ದಾರೆ.

ಸ್ವ ಶಿಕ್ಷಣ, ಉಪವಾಸ ಪ್ರಾಥ೯ನೆ, ಕಾಣಿಕೆ ಮತ್ತು ಸಾಕ್ಷಿಯಾಗಿರುವದು ಇವೆಲ್ಲವೂ ದೇವರ ಪ್ರೀತಿಯಿಂದ ಹೊರ ಬರದಿದ್ದರೆ ಎಲ್ಲವೂ ನಿಜೀ೯ವ ಕಮ೯ವೆಂದು ನೀವು ಸ್ಪಷ್ಟವಾಗಿ ಗ್ರಹಿಸಿ- ಕೊಂಡಿದ್ದೀರೋ? ದೇವರ ಪ್ರೀತಿಯ ಭದ್ರತೆಯಲ್ಲಿ ಇಲ್ಲದೆ ಇರುವಾಗ ಈ ಎಲ್ಲವೂ ಪ್ರೀತಿಯಿಂದ ಹೊರಬರಲಾರವು. ಎಫೆಸದಲ್ಲಿರುವ ಕ್ರೈಸ್ತರಿಗಾಗಿ ಪೌಲನ ಪ್ರಾಥ೯ನೆ-“ಅವರು ದೇವರ ಪ್ರೀತಿಯಲ್ಲಿ ಬೇರೂರಿ ನೆಲೆ- ಗೊಂಡವರಾಗಿರಬೇಕು ಎಂಬುದಾಗಿತ್ತು". (ಎಫೆಸ 3:16-18) ಎಫೆಸದ ಕ್ರೈಸ್ತರು ಈಗಾಗಲೇ ಅವರು ಮಾನಸಾಂತರ ಪಟ್ಟು ಪವಿತ್ರಾತ್ಮನಲ್ಲಿ ಅಭಿಷೇಕವನ್ನು ಪಡೆದವರಾಗಿದ್ದರು. ಆದರೂ ಅವರಿಗೆ ಪವಿತ್ರಾತ್ಮನಿಂದ ಬಲಪಡಿಸುವಿಕೆಯು ಆಂತಯ೯ದ ಮನುಷ್ಯನಿಗೆ ಅವಶ್ಯವಾಗಿತ್ತು. ಯಾಕಂದರೆ ಅವರು ದೇವರ ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು,ಪ್ರೀತಿಯ ಉದ್ದ ಅಗಲ ಆಳ ಎತ್ತರ ಎಷ್ಟೆಂಬುದನ್ನು ಗ್ರಹಿಸಬೇಕಾಗಿತ್ತು. ಹೀಗೆ ಹೇಳಿದ ನಂತರವೇ ಪೌಲನು ಕ್ರಿಸ್ತನ ದೇಹವನ್ನು ಕಟ್ಟಲು ಅವಶ್ಯವಾದ ವರಗಳ ಬಗ್ಗೆ ಮಾತನಾಡುತ್ತಾ ಮುಂದೆ ಸಾಗಿದನು.

ಆದರೆ ಕ್ರಿಸ್ತನು “ನಮ್ಮಲ್ಲಿ ಒಬ್ಬೊಬ್ಬನಿಗೆ ಅನುಗ್ರಹಿಸಿದ ಪ್ರಕಾರವೇ ಅವನವನಿಗೆ ಕೃಪಾವರವೂ ದೊರಕಿದೆ. ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾತಿ೯ಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ, ಉಪದೇಶಕರನ್ನಾಗಿಯೂ ಅನುಗ್ರಹಿಸಿ- ದನು. ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ದಿ- ಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು" (ಎಫೆಸ 4:7,11,13).

ದೇವರ ಪ್ರೀತಿಯ ಭದ್ರತೆಯಲ್ಲಿರುವಾಗಲೂ ಪರಿಪೂಣ೯ರಾಗಿದ್ದು ಅದರ ಕೆಳಗಡೆಯಲ್ಲಿರುವ ನಮಗೆ ದೇವರು ಕೊಟ್ಟ ಸೇವೆಯು ಪರಿಣಾಮಕಾರಿಯಾಗಬೇಕಾದರೆ ಆ ಪ್ರೀತಿಯಲ್ಲಿ ಬೇರೂರಿ ನೇಲೆಗೊಂಡವರಾಗಿರತಕ್ಕದ್ದು.

ಅದನ್ನು ಹೊಸ ಒಡಂಬಡಿಕೆಯು “ವಿಶ್ರಾಂತಿಯನ್ನು ಸೇರುವದು". ಎಂಬುದರ ಕುರಿತು ಹೇಳುತ್ತದೆ. ಯಾರಿಗೆ ನಂಬಿಕೆ (ದೇವರ ಪರಿಪೂಣ೯ವಾದ ಪ್ರೀತಿ ನಮ್ಮ ಕುರಿತು) ಇದೆಯೋ ಅವರು ಆತನ ವಿಶ್ರಾಂತಿಯಲ್ಲಿ ಸೇರಬಹುದು (ಇಬ್ರಿಯ 4:2).

ದೇವರ ಪ್ರೀತಿಯಲ್ಲಿ ಪರಿಪೂಣ೯ವಾಗಿ “ವಿಶ್ರಾಂತಿ" ಯನ್ನು ಹೊಂದದೆ ಹೋದರೆ ನಾವು ಬೇಗನೆ ಎಡವಿ ಬಿಳಲು ಸಾಧ್ಯ. ಈ ಲೋಕದಲ್ಲಿ ಎಲ್ಲಾ ಮನುಷ್ಯರು ತಮ್ಮನ್ನು ಯಾರಾದರೂ ಪ್ರೀತಿಸುವವರಿರಬೇಕು ಎಂದು ಹುಡುಕುವವರಾಗಿದ್ದಾರೆ. ಅನೇಕ ಕ್ರೈಸ್ತರು ಪ್ರೀತಿಯನ್ನು ಪಡೆಯಬೇಕೆಂದು ಸಭೆಯಿಂದ ಸಭೆಗೆ ಹೋಗುತ್ತಾರೆ. ಕೆಲವರು ಸ್ನೇಹತ್ವದಲ್ಲಿ ಪ್ರೀತಿಯನ್ನು ಪಡೆಯಲು, ಕೆಲವರು ಮದುವೆಯಲ್ಲಿ ಆದರೆ ಈ ಎಲ್ಲಾ ಹುಡುಕುವಿಕೆಯು ಆಶಾಭಂಗದಿಂದಲೂ, ನಿರಾಶೆಯಿಂದಲೂ ಮುಕ್ತಾಯಗೊಳ್ಳುತ್ತದೆ.

ಅನೇಕರು ಪರಿವತ೯ನೆ ಹೊಂದಿದ ಮೇಲೆಯೂ ದು:ಖಕರವಾದ ಸಂಗತಿ ಯಾವುದೆಂದರೆ ಅವರು ಇನ್ನೂ ಅಭದ್ರತೆಯಲ್ಲಿ ಜೀವಿಸುವವರಾಗಿದ್ದಾರೆ. ನಾವು ಈ ರೀತಿಯ ಅಭದ್ರತೆಯಲ್ಲಿ ಜೀವಿಸುವ ಅವಶ್ಯಕತೆಯಿಲ್ಲ.

ಈ ಒಂದು ಸಮಸ್ಯೆಗೆ ಸುವಾತೆ೯ಯ ಉತ್ತರ ಯಾವುದು? ದೇವರ ಪ್ರೀತಿಯಲ್ಲಿ ಭದ್ರತೆ- ಯುಳ್ಳವರಾಗಿ ನೆಲೆಗೊಳ್ಳುವುದೇ ಇದಕ್ಕೆ ಉತ್ತರವಾಗಿದೆ. ಯೇಸುವು ಆಗಾಗ ತನ್ನ ಶಿಷ್ಯರಿಗೆ ಹೇಳಿದ್ದಂತಹದು--ನಿಮ್ಮ ತಲೆ ಕೂದಲುಗಳು ಎಣಿಕೆಯಾಗಿವೆ. ಮತ್ತು ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ದೇವರು ಸಾಕಿಸಲಹುತ್ತಾನೆ. ಮತ್ತು ಅಡವಿಯ ಹೂಗಳಿಗೆ ದೇವರು ಉಡಿಸಿ ತೊಡಿಸಿದ್ದಾನೆ. ಹೀಗೆ ದೇವರು ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವವನಲ್ಲವೇ.

ಇವೆಲ್ಲವುಗಳಿಗಿಂತ ಹೆಚ್ಚಾಗಿ “ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ. ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನು ನಮಗೆ ದಯಪಾಲಿಸದೇ ಇರುವನೇ" (ರೋಮಾ 8:32). ದೇವರು ಯೇಸುವನ್ನು ಶ್ರಧ್ದೆಯಿಂದ ಆರೈಕೆ ಮಾಡಿದಂತೆ ಆತನು ನಿಮಗೂ ಶ್ರದ್ದೆಯಿಂದ ಆರೈಕೆ ಮಾಡುವನು.

ಯಾಕೆ ದೇವರು ನಮ್ಮ ಹಾದಿಯಲ್ಲಿ ಆಶಾಭಂಗ ಹಾಗೂ ನಿರಾಸೆಯನ್ನು ಅನುಮತಿಸುತ್ತಾನೆಂದರೆ ನಾವು ಮನುಷ್ಯರ ಮೇಲೆ ಆತುಕೊಳ್ಳುವುದನ್ನು ಬಿಟ್ಟು ಆತನ ಮೇಲೆ ಭರವಸದಿಂದ ಆತುಕೊಳ್ಳ- ಬೇಕೆಂದು. ಆತನು ನಮ್ಮನ್ನು ಮನುಷ್ಯರ ಮೇಲೆ ಆತುಕೊಳ್ಳುವ ವಿಗ್ರಹಾರಾದನೆ ಎಂಬುವುದರಿಂದ ಬಿಡುಗಡೆ ಮಾಡಬೇಕೆಂದೇ. ಆತನ ಮೇಲೆ ಸಂಪೂಣ೯ವಾಗಿ ಆತುಕೊಳ್ಳುವುದನ್ನು ನಾವು ಕಲಿಯ- ಬೇಕು. ಆಶಾಭಂಗವುಳ್ಳವರಾಗಿ ನಿರಾಶೆಯಿಂದ ಕೂಡಿದ ಸನ್ನಿವೇಶವನ್ನು ಎಲ್ಲೆಲ್ಲಿಯೂ ದೇವರು ನಿಮಗೆ ಅನುಮತಿಸುವಾಗ ಅದರ ಅಥ೯ ದೇವರು ನಿಮ್ಮನ್ನು ಕಳೆಗುಂದಿಸಬೇಕಂತಲ್ಲ.ನೀವು ಮನುಷ್ಯ ಮಾತ್ರ ದವರನ್ನು ನಿಮ್ಮ ಭುಜಭಲವೆಂದು ತಿಳಿದುಕೊಂಡು ಅವರ ಮೇಲೆ ಆತುಕೊಳ್ಳುವ ಅಬ್ಯಾಸದಿಂದ ನಿಮ್ಮನ್ನು ಬಿಡಿಸಿ ಆತನಲ್ಲಿ ನಂಬಿಕೆಯಿಂದ ಕೂಡಿದವರಾಗಿ ಜೀವಿಸಬೇಕೆಂದು. ದೇವರು ಯೇಸುವನ್ನು ಪ್ರೀತಿಸಿದಂತೆಯೇ ನಿಮ್ಮನ್ನು ಪ್ರೀತಿಸಿದ್ದಾನೆ ಎಂಬ ಸತ್ಯದಲ್ಲಿ ನಿಮ್ಮ ಭದ್ರತೆಯನ್ನು ಕಂಡುಕೊಳ್ಳುವುದಕ್ಕೆ ಕಲಿಯಿರಿ. ಈ ಒಂದು ಅಭದ್ರತೆಯುಳ್ಳವರಾಗಿರುವದರಿಂದಲೇ ಕ್ರೈಸ್ತರ ಮಧ್ಯದಲ್ಲಿ ಎಲ್ಲಾ ತರಹದ ಹೋರಾಟ ಮತ್ತು ಹೊಟ್ಟೆಕಿಚ್ಚು ಎದ್ದೇಳುವಂತದ್ದಾಗಿದೆ. ಒಬ್ಬ ವ್ಯಕ್ತಿ ದೇವರ ಪ್ರೀತಿಯ ಭದ್ರತೆಯಲ್ಲಿ ನೆಲೆಗೊಳ್ಳುವಾಗ ದೇವರು ಆತನ ಹಾದಿಯಲ್ಲಿ ಬರಮಾಡುವ ಪ್ರತಿಯೊಂದು ಸನ್ನಿವೇಶಗಳನ್ನು ದೇವರು ಕೊಟ್ಟ ವರಗಳನ್ನು ದೇವರ ಜ್ಞಾನವನ್ನು ದೇವರು ಕೊಡುವುದರಲ್ಲಿ ಯಾವುದೇ ತಪ್ಪು ಉದ್ದೇಶವನ್ನು ಆತನು ಮಾಡಲಿಲ್ಲವೆಂದು ನಂಬಿ ಇತರ ವ್ಯಕ್ತಿಗಳಿಗೆ ಅವುಗಳನ್ನು ಹೊಲಿಸದೇ, ಹೊರಾಟವಿಲ್ಲದೇ ಹೊಟ್ಟೆಕಿಚ್ಚು ಇಲ್ಲದೇ ಜೀವಿಸುವವನಾಗಿದ್ದಾನೆ.ದೇವರ ಪ್ರೀತಿಯಲ್ಲಿ ಅಭದ್ರತೆಯುಳ್ಳವ- ರಾಗಿರುವದರಿಂದಲೇ ಅನೇಕ ವಿಶ್ವಾಸಿಗಳ ಮದ್ಯ ಅನ್ಯೋನ್ಯತೆಯಲ್ಲಿ ಸಮಸ್ಯೆಗಳು ಎದ್ದೇಳುವುದಕ್ಕೆ ಇದು ತಳಹದಿಯಾಗಿದೆ.

ದೇವರು ಯೇಸುವನ್ನು ಪ್ರೀತಿಸಿದ ಮಟ್ಟದಲ್ಲಿ ನಿಮ್ಮನ್ನು ಸಹ ಸರಿಯಾಗಿ ಅದೇ ಮಟ್ಟದಲ್ಲಿ ಪ್ರೀತಿಸಿದ್ದಾನೆ ಎಂಬ ಈ ಒಂದು ಅತಿಶಯವಾದ ಸತ್ಯಕ್ಕೆ ನಿಮ್ಮ ಕಣ್ಣುಗಳು ತೆರೆಯಲ್ಪಟ್ಟಾಗ ನಿಮ್ಮ ಜೀವಿತದಲ್ಲಿರುವ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆಂಬದನ್ನು ಸ್ವಲ್ಪ ಆಲೋಚಿಸಿರಿ.

ಅಧ್ಯಾಯ 6
ಪರೀಕ್ಷೆಯಲ್ಲಿ ದೇವರ ಉದ್ದೇಶ

ದೇವರು ನಮ್ಮ ಜೀವಿತದಲ್ಲಿ ಬರಮಾಡುವ ಪ್ರತಿಯೊಂದರಲ್ಲಿ ಆತನು ಒಂದು-ಅತಿಶಯವಾದ ಯೋಜನೆಯನ್ನು ಇಟ್ಟಿದ್ದಾನೆಂದು ದೃಷ್ಟಿಸುವಾಗ ನಮ್ಮ ಜೀವಿತವು ಅತಿಶಯವಾಗಿ ಆನಂದದಿಂದಿರುತ್ತದೆ. ನಮ್ಮ ಪ್ರಾಥ೯ನೆಗೆ “ಇಲ್ಲ" ಎಂಬುದಾಗಿ ಉತ್ತರ ಬಂದರೂ ಅದು ಪರಿಪೂಣ೯ ಪ್ರೀತಿಯುಳ್ಳ ಹೃದಯದಿಂದ ಒಂದು ಉತ್ತರವಾಗಿಯೇ ಬರುತ್ತದೆ.

ಮರಳು ಗಾಡಿನಲ್ಲಿ ಇಸ್ರಾಯೇಲ್ಯರನ್ನು ಕಚ್ಚಲು ವಿಷಭರಿತ ಹಾವುಗಳನ್ನು ದೇವರು ಬರಮಾಡಿದಾಗ ಅದು ಆತನ ಪ್ರೀತಿಯಿಂದ ಹೊರಬಂದದ್ದು. ಅದಕ್ಕೆ “ಕತ೯ನು ಉರಿಮಂಡಲಗಳನ್ನು ಜನರೊಳಗೆ ಬರಮಾಡಿದನು. ಅವು ಜನರನ್ನು ಕಚ್ಚಿದ್ದರಿಂದ ಬಹು ಜನ ಸತ್ತುಹೋದರು". ಅರಣ್ಯ 21:6 ಇದು ನಿಶ್ಚಯವಾಗಿಯೂ ಪ್ರೀತಿಯ ಗುರುತಾಗಿತ್ತು. ಇದರಿಂದ ಇಸ್ರಾಯೇಲ್ಯರು ಆತನ ಕಡೆಗೆ ತಿರುಗಿ- ಕೊಂಡಾಗ ಇಸ್ರಾಯೇಲ್ಯರನ್ನು ಆತನು ಆಶೀವ೯ದಿಸಿದನು. ಆದರೆ ಅವರು ಮಾನಸಾಂತರ ಪಡುವ- ವರೆಗೆ ದೇವರು ಅದನ್ನು ಮಾಡಲಾಗುತ್ತಿರಲಿಲ್ಲ. “ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು. ಅವು ಅಹಿತದ ಆಲೋಚನೆಗಳಲ್ಲ. ಹಿತದ ಯೋಚನೆಗಳೇ" (ಯೆರೆ 29:11)

ರೋಗಗಳಿಂದಲೂ ಕಾಯಿಲೆಗಳಿಂದಲೂ ಈ ಒಂದು ಲೋಕದಲ್ಲಿ ದೇವರು ನಾವು ಜೀವಿಸುವಂತೆ ಅನುಮತಿಸಿದ ಒಂದು ಕಾರಣ ಜನರು ತಮ್ಮ ದುಃಖದ ದೆಸೆಯಿಂದ ಆತನ ಕಡೆಗೆ ತಿರುಗಿ ಆತನಿಂದ ಆಶೀವಾ೯ದವನ್ನು ಪಡೆಯಲು. ದೇವರು ತನ್ನ ಯೋಜನೆಯನ್ನು ಪರಿಪೂಣ೯ ಮಾಡಲು ಸೈತಾನನನ್ನು ಸಹ ಉಪಯೋಗಿಸುವವನಾಗಿದ್ದಾನೆ.

ನಿತ್ಯತ್ವದಲ್ಲಿ ನಾವು ದೇವಜನರನ್ನು ಸಂಧಿಸಿ ಅವರ ಅನುಭವವನ್ನು ಕೇಳುವಾಗ ಹಾವು ಕಚ್ಚುವಿಕೆ ಹಣದ ಕೊರತೆ ಕ್ಯಾನ್ಸರ್ ಇವುಗಳನ್ನು ದೇವರು ಅನುಮತಿಸುವುದರ ಮೂಲಕ ತನ್ನ ಮಕ್ಕಳನ್ನು ಪ್ರತಿಷ್ಟಿಪಡಿಸಿ ತನ್ನ ಸ್ವಭಾವದಲ್ಲಿ (ದೈವಸ್ವಭಾವ, ದೈವಸ್ವರೂಪ) ಪಾಲುಗಾರರನ್ನಾಗಿ ಮಾಡಿದ್ದನ್ನು ನಿತ್ಯತ್ವದಲ್ಲಿ ಕೇಳುವೆವು.

ಈ ಭೂಲೋಕದಲ್ಲಿ ಅನೇಕ ವಿಷಯಗಳು ನಮಗೆ ಅಥ೯ವಾಗದಿದ್ದರೂ ಆದಿನದಲ್ಲಿ ದೇವರಿಗೆ ಆ ವಿಷಯಗಳಿಗಾಗಿ ಕೃತಜ್ಞತೆಯನ್ನು ಸಲ್ಲಿಸುವೆವು. ಆದರೆ ನಂಬಿಕೆಯಿಂದ ತುಂಬಿರುವ ವ್ಯಕ್ತಿ ಆ ದಿನಕ್ಕಾಗಿಯೇ ಕಾಯುವವನಾಗಿರುವುದಿಲ್ಲ. ಆತನು ಈಗಲೇ ದೇವರ ಜ್ಞಾನದಲ್ಲಿಯೂ ಪ್ರೀತಿ- ಯಲ್ಲಿಯೂ ನಂಬಿಕೆಯುಳ್ಳವನಾಗಿರುವನು. ಆದುದರಿಂದ ಎಲ್ಲಾ ವಿಷಯಗಳಿಗಾಗಿ ಕೃತಜ್ಞತೆಯನ್ನು ಹೇಳಲು ಈಗಲೇ ಪ್ರಾರಂಭಿಸುವನು. ದೇವರ ಎಲ್ಲಾ ವ್ಯವಹರಿಸುವಿಕೆಯಲ್ಲಿ ಪ್ರಾಮುಖ್ಯವಾಗಿ, ಆತನ ಯೋಜನೆ-ನಾವು ಆತನ ಸ್ವಭಾವದಲ್ಲಿ ಪಾಲುಗಾರರಾಗಬೇಕೆಂಬುದೇ ಆಗಿರುತ್ತದೆ.ದೇವರು ಎಲ್ಲಾ ಕಾಯ೯ಗಳನ್ನು ನಮ್ಮ ಒಳ್ಳೇಯದಕ್ಕಾಗಿಯೇ ನಡೆಸುತ್ತಾನೆ. ಆ ಎಲ್ಲವುಗಳಲ್ಲಿ ನಾವು ಆತನ ಮಗನ ಸಾರೂಪ್ಯವುಳ್ಳವರಾಗ ಬೇಕೆಂಬುದೇ ಎಲ್ಲಾ ಕಾಯ೯ಗಳನ್ನು ನಮ್ಮ ಒಳ್ಳೇಯದಕ್ಕಾಗಿಯೇ ನಡೆಸುತ್ತಾನೆ.

ಇದಲ್ಲದೇ “ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾಯ೯ಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ. ಯಾಕಂದರೆ ದೇವರು ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು ಅವರಲ್ಲಿ ಆತನೇ ಹಿರಿಯವನಾಗಿರಬೇಕೆಂದು ಉದ್ದೇಶಿಸಿ ತಾನು ಯಾರನ್ನು ತನ್ನವರೆಂದು ಮೊದಲು ತಿಳಿದುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವ- ರಾಗುವದಕ್ಕೆ ಮೊದಲು ನೇಮಿಸಿದನು". (ರೋಮ 8:28,29) ಯಾಕೆ ದೇವರು ಆಕಸ್ಮಿಕವಾಗಿ ಹಣ ಕಳೆದುಕೊಳ್ಳುವಂತೆ ಮತ್ತು ಜನರು ಹಣ ಮೋಸಮಾಡುವಂತೆ ಅನುಮತಿಸುತ್ತಾನೆ? ಬಸ್ಸುಗಳಲ್ಲಿ ಮತ್ತು ರೈಲುಗಳಲ್ಲಿ ಕಿಸೆಗಳ್ಳತನ ಆದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರಬಹುದು. ಅಂಥಹ ಸಂದಭ೯ಗಳಲ್ಲಿ ಯಾವಾಗಲೂ ಕಳ್ಳತನ ಮತ್ತು ಮೋಸಮಾಡಿದ ವ್ಯಕ್ತಿಗಾಗಿ ಪ್ರಾಥ೯ನೆ ಮಾಡುವುದಕ್ಕಾಗಿ ನನ್ನ ಸಮಯ- ವನ್ನು ಉಪಯೋಗಿಸಿದ್ದೇನೆ. ಆದರೆ ಅದಕ್ಕಿಂತಲೂ ಹೊರತಾಗಿ ದೇವರು ಹಣದಿಂದ ಮತ್ತು ಇಹ ಲೋಕದ ವಸ್ತುಗಳಿಂದ ನಮ್ಮ ಅಂಟಿಕೊಳ್ಳುವಿಕೆಯನ್ನು ಮುರಿಯಲು ಅಥವಾ ಬಿಡಿಸಲು ಬಯಸುತ್ತಾನೆ.

ನಾವು ಕಳೆದುಕೊಳ್ಳುವ ಪ್ರತಿಯೊಂದು ರೂಪಾಯಿಯ ಮೇಲೆ ಲೆಕ್ಕ ಮಾಡಿ ಎಣಿಸುತ್ತಾ ಅದರಲ್ಲಿ ದುಃಖಿಸದೇ ಮತ್ತು ನಾವು ಸಂಪಾದಿಸುವ ಪ್ರತಿಯೊಂದು ರೂಪಾಯಿ ಮೇಲೆ ಸಂತೋಷಪಡದೇ ಆತ- ನಲ್ಲಿ ಸಂತೋಷವನ್ನು ಕಂಡುಹಿಡಿಯುವಂತೆ ದೇವರು ಬಯಸುತ್ತಾನೆ. ಆತನಲ್ಲಿರುವ ಆನಂದ ಎಂಥಹದ್ದೆಂದರೆ ವಸ್ತುಗಳ ಲಾಭವಾದರೂ ಆನಂದ ಹೆಚ್ಚಲಾರದು,ವಸ್ತುಗಳ ನಷ್ಟವಾದರೂ ಆನಂದ ಕಡಿಮೆಯಾಗಲಾರದು. ಯೇಸುವು ಇಹಲೋಕದಲ್ಲಿ ಇದೇ ರೀತಿಯಾಗಿ ನಡೆದನು. ಮತ್ತು ನಾವು ಸಹ ಆತನು ನಡೆದಂತೆಯೇ ನಡೆಯಲು ಕರೆಯಲ್ಪಟ್ಟಿದ್ದೇವೆ. ಸತ್ಯವೇದ ಹೇಳುತ್ತದೆ “ಕ್ರಿಸ್ತಯೇಸುವಿನಲ್ಲಿರುವ ಮನಸ್ಸು ನಿಮ್ಮಲ್ಲಿಯೂ ಇರಲಿ" (ಫಿಲಿಪ್ಪಿ 2:5).

ಯಾರಾದರೂ ಯೇಸುವಿನ ಸೇವೆಯನ್ನು ಮೆಚ್ಚಿ 10,000 ದಿನಾರ (ಉeಟಿb) ಹಣವನ್ನು ಆತನ ಸೇವೆಗೆ ಕೊಟ್ಟರೂ ಅದು ಯೇಸುವಿನ ಸಂತೋಷವನ್ನು ಸ್ವಲ್ಪವಾದರೂ ಹೆಚ್ಚಾಗಿ ಮಾಡುತ್ತಿರಲಿಲ್ಲ. ಈಗಾಗಲೇ ಯೇಸುವಿನ ಸಂತೋಷ ಹಾಗೂ ಆನಂದ ತಂದೆಯಲ್ಲಿ ತುಂಬಿ ಹೊರಸೂಸುತ್ತಿತ್ತು. ಅದೇ ಸಮಯದಲ್ಲಿ ಯಾವುದೇ ವಸ್ತುಗಳ ನಷ್ಟದಿಂದ ಆತನ ಆನಂದ ಕಡಿಮೆಯಾಗುತ್ತಲೂ ಇಲ್ಲ. ಯೇಸುವಿಗೆ ಕಾಣಿಕೆಯೋಪಾದಿಯಲ್ಲಿ ಬರುತ್ತಿದ್ದ ಹಣವನ್ನು ಇಸ್ಕಾರಿಯೋತ ಯೂದನು ಆಗಾಗ ಕದಿಯುತ್ತಿದ್ದ. ಯೇಸುವು ಅದರ ಕುರಿತಾಗಿ ತಿಳಿದವನಾಗಿದ್ದ ಮತ್ತು ಯೂದನ ಬಗ್ಗೆ ಯೇಸುವಿಗೆ ದುಃಖವಿತ್ತು ಆದರೆ ಹಣದ ನಷ್ಟದ ಕುರಿತು ಯೇಸುವಿಗೆ ಗಲಿಬಿಲಿಯಾಗಲಿಲ್ಲ.

ಈ ದಿನಗಳಲ್ಲಿ ಕಥೆಯೇ ವ್ಯತ್ಯಾಸವಾಗಿದೆ. ಅನೇಕ ಪ್ರಸಂಗಿಗಳು ಮತ್ತು ಸ್ವಸ್ಥಮಾಡುವವರು ದೇವಜನರು ಕೊಟ್ಟ ಕಾಣಿಕೆಗಳ ಕುರಿತಾಗಿ ಅವರ ಮನೋಭಾವನೆ ಹೇಗಿದೆ?. ಆದರೆ ಅಂಥಹ ಪ್ರಸಂಗಿಗಳನ್ನು ಸ್ವಸ್ಥಮಾಡುವವರನ್ನು ಬಿಟ್ಟುಬಿಡೋಣ. ನಮ್ಮ ಬಗ್ಗೆ ಹೇಗೆ? ಇಹಲೋಕ ವಸ್ತುಗಳಿಂದ ನಮ್ಮ ಆನಂದ ಹೆಚ್ಚು ಅಥವಾ ಕಡಿಮೆಯಾಗಿದೆಯೋ? ಹೀಗಾದಲ್ಲಿ ಇಂಥಹ ಮನೋಭಾವನೆಯಿಂದ ನಮ್ಮ ರಕ್ಷಣೆಯನ್ನು ಮನೋಭೀತಿಯಿಂದ ನಡುಗುವವರಾಗಿ ಸಾದಿಸಿಕೊಳ್ಳುವದು ನಮಗೆ ಅವಶ್ಯವಾಗಿದೆ.

ನೀವು ನಿಜವಾಗಿಯೂ ಯೇಸುವಿನ ಜೀವಿತದಲ್ಲಿ ಪಾಲುಗಾರರಾಗಬೇಕೆಂಬ ಆಸೆಯುಳ್ಳರಾಗಿರುವ ಪಕ್ಷದಲ್ಲಿ ದೇವರು ಇಹಲೋಕ ವಸ್ತುಗಳ ಮೇಲಿರುವ ಪ್ರೀತಿಯಿಂದ ಬಿಡಿಸುವದಕ್ಕಾಗಿ, ಮನುಷ್ಯರ ಮಾನ ಹುಡುಕುವಿಕೆಯಿಂದ ಬಿಡಿಸುವದಕ್ಕಾಗಿ ಸಾವಿರದ ಒಂದು ಸಂಗತಿಗಳನ್ನು ನಿಮ್ಮ ಜೀವಿತದಲ್ಲಿ ಅನು- ಮತಿಸುತ್ತಾನೆ. ಈ ಮಾಗ೯ದಲ್ಲಿ ಹೋಗುವದಕ್ಕೆ ನಿಮಗೆ ಮನಸ್ಸಿಲ್ಲದಿದ್ದರೆ ಆತನು ನಿಮ್ಮನ್ನು ಹೋಗಲು ಒತ್ತಾಯ ಮಾಡಲಾರನು. ಕೆಳಗಿನ ದಜೆ೯ಯ ಹಾಗೂ ಸೋತು ಹೋದ ಕ್ರಿಸ್ತೀಯ ಜೀವಿತವನ್ನು ಜೀವಿಸುತ್ತಾ ಇರುವ ಅನೇಕ ವಿಶ್ವಾಸಿಗಳ ಮಧ್ಯದಲ್ಲಿ ನೀವು ಜೀವಿಸುತ್ತಾ ಇರುವಾಗ ಈ ಒಂದು ಜೀವಿತದಲ್ಲಿಯೇ ನೀವೂ ಸುಖವಾಗಿ ಸಂತುಷ್ಟರಾಗಿ ಜೀವಿಸಬೇಕಿಂದಿದ್ದರೆ, ದೇವರು ನಿಮ್ಮನ್ನು ಒಬ್ಬಂಟಿಗರನ್ನಾಗಿ ಬಿಟ್ಟುಬಿಡುತ್ತಾನೆ.

ಆದರೆ ದೇವರ ಉತ್ತಮಕ್ಕಾಗಿ ನೀವು ಹಾರೈಸಿ ನೀರಡಿಕೆಯುಳ್ಳವರಾಗಿ ಬಾಯಾರಿದ್ದರೆ ಆತನು ನಿಮ್ಮೊಂದಿಗೆ ವ್ಯವಹರಿಸಿ ಕನಿಕರವಿಲ್ಲದೆ ನಿಮ್ಮ ಜೀವಿತದಲ್ಲಿ ನಿಮ್ಮನ್ನು ನಾಶಮಾಡುವ ವಿಗ್ರಹಗಳನ್ನು ನಾಶಪಡಿಸುತ್ತಾನೆ. ಆತನು ನಿಮ್ಮನ್ನು ಸಂಕಟಗಳನ್ನು ತಾಳಿಕೊಳ್ಳುವಂತೆ ಆಶಾಭಂಗ, ನಿರಾಶೆ, ನಷ್ಟ, ಹೊಡೆತಗಳಲ್ಲಿ, ಏಟುಗಳು ಪೆಟ್ಟುಗಳು ತಗ್ಗಿಸಿಕೊಳ್ಳುವಿಕೆ ಅನ್ಯಾಯವಾಗಿ ದೂರುಹೇಳುವಿಕೆ ನಿಂಧಿಸುವಿಕೆ ಈ ಮುಂತಾದವುಗಳನ್ನು ನಿಮ್ಮ ಜೀವಿತದಲ್ಲಿ ಅನುಮತಿಸುವದರ ಮೂಲಕ ನಡತೆಗೆ ತಂದು ಇನ್ನೆಂದೂ ನೀವು ಕದಲಲಾರದ ಸ್ಥಳಕ್ಕೆ ಬರಮಾಡುತ್ತಾನೆ.

ಆಗ ನಿಮ್ಮ ಜೀವಿತದಲ್ಲಿ ನಾವೇನಾಗಿದ್ದರೂ ಬಡವರಾದರೂ ಐಶ್ವಯ೯ವಂತವರಾದರೂ ನಿಂದಿಸಿದರೂ ಹೊಗಳಿದರೂ ಮಾನಕೊಟ್ಟರೂ ಕೊಡದೆಯಿದ್ದರೂ ಇವು ಯಾವುದೂ ನಿಮಗೆ ವ್ಯತ್ಯಾಸ ಮಾಡಲಾರವು. ಲೋಕದ ಎಲ್ಲವುಗಳಿಗಾಗಿ ಕ್ರಿಸ್ತನ ಮರಣದಲ್ಲಿ ಪಾಲುಗಾರರಾಗಿ ಹಾದುಹೋಗುವಾಗ ಯೇಸುವಿನ ಜೀವವು ನಿಮ್ಮ ದೇಹದಲ್ಲಿ ಹೊರ ಬಂದು ಅದರಲ್ಲಿ ಪಾಲುಗಾರರಾಗಿ ಇಹಲೋಕದಲ್ಲಿ ಅರಸರಂತೆ ನಡೆಯುತ್ತೀರಿ. ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ. (2ಕೊರಿಂಥ 4:10) “ಸ್ವಾಥ೯ಕ್ಕೆ ಸಂಪೂಣ೯ವಾಗಿ ಸಾಯುವದು". ಎಂಬ ಕ್ರಯವನ್ನು ಕೆಲವೇ ಜನರು ಕಟ್ಟುವದರಿಂದ ಕೆಲವರೇ ಕ್ರಿಸ್ತನಲ್ಲಿರುವ ಸಮೃದ್ದಿಕರವಾದ ಜೀವಿತವನ್ನು ಕಂಡುಕೊಳ್ಳುವರು. ಸ್ವಾಥ೯ಕ್ಕೆ ನಾವು ಸಾಯದಿದ್ದರೆ ನಂಬಿಕೆಯಿಂದ ಜೀವಿಸಲು ಅಸಾಧ್ಯ. ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಳ್ಳುವದಕ್ಕೆ ನಮಗೆ ಮನಸ್ಸಿಲ್ಲದಿದ್ದರೆ ದೇವರ ಪ್ರೀತಿಯ ಮೇಲಿರುವ ನಮ್ಮ ತಿಳುವಳಿಕೆಯು ಕೇವಲ ಕಾಲ್ಪನಿಕವಾದದ್ದು ಅಥವಾ ಊಹಿಸಿಕೊಳ್ಳುವಂತದ್ದು. ಈ ಲೋಕದಲ್ಲಿ ಎಲ್ಲವನ್ನು ಬಿಟ್ಟುಬಿಡದೆ ಹೋದರೆ ನಾವು ಯೇಸುವಿನ ಶಿಷ್ಯರಾಗಲಾರೆವು.

ಯೇಸು ಹೇಳಿದ್ದು - “ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೇ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು" (ಲೂಕ 14:33)

ನಾವು ಕಳೆದ ಅಧ್ಯಾಯದಲ್ಲಿ ನೋಡಿಕೊಂಡಂತೆ ಯೋಹಾನ 17:23 ರಲ್ಲಿ “ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವು ಪೂಣ೯ಸಿಧ್ದಿಗೆ ಬರುವದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದಿ ಎಂದೂ, ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನು ಪ್ರೀತಿಸಿದ್ದಿ ಎಂದು ಲೋಕಕ್ಕೆ ತಿಳಿದು ಬರುವದು". ಯೇಸು ಲೋಕದವರಿಗಾಗಿಯಾಗಲಿ ಶರೀರಾದೀನ ಸ್ವಭಾವದ ಕ್ರೈಸ್ತರಿಗಾಗಿಯಾಗಲಿ ಪ್ರಾಥಿ೯ಸಲಿಲ್ಲ. ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದ ತನ್ನ ಹನ್ನೊಂದು ಮಂದಿ ಶಿಷ್ಯರಿಗಾಗಿ ಆತನು ಪ್ರಾಥಿ೯ಸಿದನು. ಈ ಶಿಷ್ಯರು ತಂದೆಯ ಪ್ರೀತಿಯಲ್ಲಿ ಭದ್ರತೆಯನ್ನು ಕಂಡುಕೊಂಡರು. ಆದರೆ ಶರೀರಾದೀನಸ್ವಭಾವವುಳ್ಳ ಹಾಗೂ ಲೋಕದ ಜನರು ಅದನ್ನು ಅರಿಯದವರಾಗಿದ್ದರು.

ಅನೇಕ ಕ್ರೈಸ್ತರು ಶರೀರಾಧೀನಸ್ವಭಾವವುಳ್ಳ ಕ್ರೈಸ್ತರಾಗಿದ್ದಾರೆ ಇದು ಯಾಕೆ? ಸಂಪೂಣ೯ವಾಗಿ ತನ್ನನ್ನು ದೇವರಿಗೆ ಅಧೀನ ಮಾಡದೇ ತಾನು ಸಂತೋಷವುಳ್ಳವನಾಗಿರುತ್ತೇನೆಂದು ಯೋಚಿಸುವಂತೆ ಸೈತಾನನು ಅವನನ್ನು ವಂಚಿಸಿದ್ದಾನೆ.

ದೇವರ ಸಂಪೂಣ೯ ಪ್ರೀತಿಯಲ್ಲಿ ನಾವು ನಂಬಿಕೆಯಿಟ್ಟರೆ ನಾವು ಒಂದನ್ನೂ ಇಟ್ಟುಕೊಳ್ಳದೆ ಎಲ್ಲ- ವನ್ನು ಆತನಿಗಾಗಿ ಸಂತೋಷದಿಂದ ಬಿಟ್ಟುಕೊಡುವೆವು. ಆಗ ನಾವು ಚಿಂತೆಯಿಂದ ಸಂಪೂಣ೯ವಾಗಿ ಬಿಡುಗಡೆ ಹೊಂದುವೆವು. ಪಿಲಿಪ್ಪಿ ೪:೬ ನಮ್ಮನ್ನು ಹೀಗೆ ಆಜ್ಞಾಪಿಸುತ್ತದೆ. ಯಾವ ಸಂಭಂಧವಾಗಿಯೂ ಚಿಂತೆಮಾಡದೇ ಸವ೯ ವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನು ಪ್ರಾಥ೯ನೆ ವಿಜ್ಞಾಪನೆ- ಗಳನ್ನು ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನು ಯೋಚನೆಗಳನ್ನು ಕ್ರಿಸ್ತಯೇಸುವಿನಲ್ಲಿ ಕಾಯುವದು. ಶರೀರಾದೀನ ಸ್ವಭಾವದ ಕ್ರೈಸ್ತರು ಯಾವಾಗಲೂ ತಮ್ಮ ದೋಣಿ ಬಿರುಗಾಳಿಯಲ್ಲಿ ಮುಳುಗುತ್ತದೋ ಎಂಬುದಾಗಿ ಯಾವಾಗಲೂ ಭಯದಿಂದಿರುತ್ತಾರೆ. ಯೇಸುವು ಅಂಥಹ ಬಿರುಗಾಳಿಯಲ್ಲಿ ನಿದ್ರೆ ಮಾಡುತ್ತಿದ್ದನು. ಯಾಕಂದರೆ ಆತನು ತನ್ನ ತಂದೆಯ ಪ್ರೀತಿಯಲ್ಲಿ ಭದ್ರತೆಯುಳ್ಳವನಾಗಿದ್ದನು. ಸೈತಾನನು ನನ್ನನ್ನು ಎಷ್ಟು ಮಾತ್ರವು ಕೆಳಕ್ಕೆ ಎಳೆಯಲಾರನು ಎಂದು ಯೇಸುವಿಗೆ ಗೊತ್ತಿತ್ತು. ತಂದೆ ಆತನನ್ನು ಯಾವಾಗಲೂ ದೃಷ್ಟಿಸುತ್ತಿದ್ದನು. ಯೇಸುವನ್ನು ಪ್ರೀತಿಸಿದಂತೆ ಶ್ರದ್ದಿಸಿದಂತೆ ಪರಲೋಕದ ತಂದೆ ನನ್ನನ್ನು ನಮ್ಮನ್ನು ಪ್ರೀತಿಸಿದ್ದಾನೆ.ಮತ್ತು ಶ್ರಧ್ದೆ ವಹಿಸಿದ್ದಾನೆ ಎಂಬುವ ಈ ವಿಷಯವನ್ನು ನಾವು ಗ್ರಹಿಸಿ ಅರಿತುಕೊಳ್ಳುವಾಗ ನಮ್ಮ ಜೀವಿತ ಎಷ್ಟೊಂದು ಅತಿಶಯವಾಗಿರುತ್ತದೆ. ಹೀಗಾಗಿ ಕಡೆಗೆ ದೇವರನ್ನು ನೋಡುವಾಗ ನಮ್ಮನ್ನು ಎಷ್ಟಾಗಿ ಪ್ರೀತಿಸಿದನು ಎಂಬುದನ್ನು ಕೇಳಿದಾಗ ನಮಗೆ ಆಶ್ಚಯ೯ವಾಗುತ್ತದೆ. ಆ ದಿನಗಳಲ್ಲಿ ನಮ್ಮ ಚಿಂತೆಗಳೆಲ್ಲವೂ ಎಷ್ಟು ಬುದ್ದಿ ಹೀನವುಗಳಾಗಿದ್ದವು ಎಂದು ತಿಳಿದುಕೊಳ್ಳುತ್ತೇವೆ.

ಆದರೆ ಆ ದಿನಗಳಲ್ಲಿ ಈ ಅರಿವು ನಮಗೆ ಬಂದರೆ ಏನು ಪ್ರಯೋಜನ? ದೇವರ ಪ್ರೀತಿಯ ಕುರಿತಾಗಿ ಸತ್ಯವನ್ನು ಈಗಲೇ ತಿಳಿಯುವದಕ್ಕೆ ನಮ್ಮ ಕಣ್ಣುಗಳು ತೆರೆಯಲ್ಪಟ್ಟು ನಂಬಿಕೆಯಿಂದ ಜೀವಿಸುವಾ.

ಅಧ್ಯಾಯ 7
ನಿನ್ನ ಯೋಗ್ಯತೆಗ ಮೀರಿ ನೀನು ಪರೀಕ್ಷಿಸಲ್ಪಡುವದಿಲ್ಲ

1 ಕೊರಿಂಥ 10:13 ರಲ್ಲಿ ಅತಿಶಯವಾದ ವಾಕ್ಯವಿದೆ. ಈ ವಾಕ್ಯದಲ್ಲಿ ನಮ್ಮೆಲ್ಲರಿಗೂ ಎಷ್ಟೋ ಅತಿಶಯವಾದ ಆದರಣೆ ಸಿಕ್ಕುತ್ತದೆ. ಅದು ಹೇಳುತ್ತದೆ - “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸುವುದಿಲ್ಲ. ದೇವರು ನಂಭಿಗಸ್ತನು. ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೇ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾಗ೯ವನ್ನು ಸಿದ್ದಮಾಡುವನು."

ಜನರು ಆಗಾಗ ಹೇಳುವದೇನಂದರೆ ಅವರು ತಾಳಿಕೊಳ್ಳಲಾರದ ದುಃಖದಲ್ಲಿಯೂ ಸಂಕಟಗಳಲ್ಲಿ ಹಾದುಹೋಗುತ್ತಿದ್ದಾರೆಂದು. ಆದರೆ ಅದು ಆದಾಮನ ಮಕ್ಕಳಿಗೆ ನಿಜವಾಗಿರಬಹುದು. ಆದರೆ ದೇವರ ಮಕ್ಕಳಿಗೆ ಅದು ನಿಜವಾಗಿಯೂ ಸತ್ಯವಾಗಿಲ್ಲ. ಯಾಕಂದರೆ ಮಕ್ಕಳು ಹಾದುಹೋಗುತ್ತಿರುವ ಪ್ರತಿ- ಯೊಂದು ಶೋದನೆಗಳಲ್ಲಿಯೂ ಕಷ್ಟಗಳಲ್ಲಿಯೂ ದೇವರು ಅವರಿಗಾಗಿ ಶ್ರಧ್ದೆವಹಿಸಿದ್ದಾನೆ.

ಸೈತಾನನೂ ಮತ್ತು ನಮ್ಮನ್ನು ಹಗೆಮಾಡುವವರೂ ಅನೇಕ ವಿಧದಲ್ಲಿ ತೊಂದರೆ ಕೊಡಲು ಬಯಸುತ್ತಾರೆ ಆದರೆ ದೇವರ ಅನುಮತಿಯಿಲ್ಲದೇ ಅವರಿಗೆ ನಮ್ಮ ಮೇಲೆ ಯಾವ ಹಿಡಿತವಿರಲಾರದು. ಹಳೇಒಡಂಬಡಿಕೆಯಲ್ಲಿಯೂ ಸಹ ದೇವರು ಯೋಬನ ಸುತ್ತಮುತ್ತಲೂ ಬೇಲಿಹಾಕಿದ್ದನು.ಯಾವ ದುರಾತ್ಮವೂ ಸಹ ಅವನನ್ನು ಮುಟ್ಟಲಾರದೆಂದು ಸೈತಾನನು ತಿಳಿದವನಾಗಿದ್ದನು.

ಅದಕ್ಕೆ ಸೈತಾನನು “ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತಮುತ್ತಲೂ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲ- ಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ದಿಯಾಗುತ್ತಾ ಬಂದಿದೆ" (ಯೋಬ1:10)

ಆದರೆ ಯೋಬನ ಶುದ್ದೀಕರಣಕ್ಕಾಗಿ ದೇವರು ಆ ಬೇಲಿಯನ್ನು ಸ್ವಲ್ಪ ತೆರೆದು ಸೈತಾನನನ್ನು ಯೋಬನ ಮೇಲೆ ದಾಳಿಮಾಡಲು ಅನುಮತಿಸಿದನು. ಆ ಬೇಲಿಯ ತೆರೆಯಲ್ಪಡುವಿಕೆಯು ಹೇಗೂ ದೇವರಿಂದ ನಿದಾ೯ರಿತ ಗೊಂಡಿತ್ತು ಅಥವಾ ದೃಡಪಟ್ಟಿತ್ತು.

ಪ್ರಾರಂಭದಲ್ಲಿ ಬೇಲಿಯ ತೆರೆಯುವಿಕೆಯು ಬಹಳ ಚಿಕ್ಕದಾಗಿತ್ತು. (ಯೋಬ 1 ರಲ್ಲಿ) ಮತ್ತು ಅನಂತರದಲ್ಲಿ ಬೇಲಿಯ ತೆರೆಯುವಿಕೆಯು ಸ್ವಲ್ಪ ಹೆಚ್ಚಿಸಲ್ಪಟ್ಟಿತು. (ಯೋಬ 2 ರಲ್ಲಿ) ಶೆಬದವರು ಮತ್ತು ಕಸ್ದಿಯರು ಯೋಬನ ಆಸ್ತಿಯನ್ನು ಅಪಹರಿಸಿದರು. ಇವೆಲ್ಲವೂ ದೇವರು ಬೇಲಿಯನ್ನು ತೆರೆಯ- ಮಾಡಿದುದರ ಮೂಲಕವೇ ಬಂದಂಥದ್ದು. “ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಅದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು......ಅದಲ್ಲದೆ ಆಳುಗಳನ್ನು ಕತ್ತಿಯಿಂದ ಹತಮಾಡಿದರು" (ಯೋಬ1:15,17)

ಬಿರುಗಾಳಿಯು ಬಂದು ಯೋಬನ ಮಕ್ಕಳು ಇರುವ ಮನೆಗೆ ಬಡೆದದ್ದು ಬೇಲಿಯನ್ನು ತೆರೆಯ- ಮಾಡಿದ್ದಂದಿನಿಂದಲೇ ಬಂದದ್ದು. ಯೋಬನ ದೇಹದ ಮೇಲೆ ದಾಳಿ ಮಾಡಿ ಬರಲಿಕ್ಕಿದ್ದಂತ ರೋಗಗಳಿಗೆ ಬೇಲಿಯ ತೆರೆಯ ಮಾಡುವಿಕೆಯು ಇನ್ನೂ ಅಗಲವಾಗಿರಲಿಲ್ಲ. ಆದರೆ ಸ್ವಲ್ಪ ಕಾಲದ ನಂತರ ದೇವರು ಬೇಲಿಯ ತೆರೆಯಲ್ಪಡುವಿಕೆಯನ್ನು ಇನ್ನೂ ಸ್ವಲ್ಪ ಹೆಚ್ಚಿಸಿದನು. ಈ ಕಾರಣದಿಂದ ರೋಗಗಳುಯೋಬನ ದೇಹದ ಮೇಲೆ ಬಂದು ಆತನನ್ನು ಭಾದಿಸಿದವು.

ಈಗ ನಡೆಯುತ್ತಾಯಿರುವಂಥ ಎಲ್ಲವುಗಳ ಮೇಲೆ ದೇವರ ನಿಯಂತ್ರಣವಿದೆ ಎಂದು ಯೋಬನು ಪ್ರಾರಂಭದಲ್ಲಿ ಗ್ರಹಿಸಿಕೊಳ್ಳಲಿಲ್ಲ. ಇದನ್ನು ಯೋಬನು ಅರಿತುಕೊಂಡಿದ್ದು ಚರಿತ್ರೆಯ ಕೊನೆಯಲ್ಲಿ.ಆದರೆ ನಾವು ಆತನ ಮೇಲೆ ತಪ್ಪುಹೊರಿಸಲಾಗುವದಿಲ್ಲ. ಯಾಕಂದರೆ ನಮಗೆ ಇರುವಂತೆ ಯೋಬನಿಗೆ ಬರೆಯಲ್ಪಟ್ಟಂತ ದೇವರ ವಾಕ್ಯಗಳಿರಲಿಲ್ಲ. ಆದರೆ ಈಗ ನಮಗೆ ದೇವರ ಬರೆಯಲ್ಪಟ್ಟ ವಾಕ್ಯಗಳಿರುವದ- ರಿಂದ ಬೇಲಿಯ ತೆರೆಯಲ್ಪಡುವಿಕೆಯನ್ನು ಯಾರು ನಿಯಂತ್ರಿಸುತ್ತಿದ್ದಾರೆಂದು ಸ್ಪಷ್ಟವಾಗಿ ವಾಕ್ಯವು ಪ್ರಕಟಿಸುತ್ತದೆ. ಈ ಬೇಲಿಯು ದೇವರು ತಾನೇ ಆಗಿದ್ದು ನಮ್ಮ ಸುತ್ತಲೂ ಬೆಂಕಿಯ ಗೋಡೆಯೋಪಾದಿ- ಯಲ್ಲಿದ್ದಾನೆ. “ನಾನೇ ಅದರ ಸುತ್ತಮುತ್ತಲೂ ಅಗ್ನಿಪ್ರಾಕಾರವೂ ಅದರೊಳಗೆ ವೈಭವವೂ ಆಗಿರುವೆನು" ಎಂಬುದು ಕತ೯ನ ನುಡಿ (ಜೆಕಯ೯ 2:5).

ಆದರೆ ಹಳೇಒಡಂಬಡಿಕೆಯಲ್ಲಿ ಎಲೀಷನ ಸೇವಕನ ಕುರಿತಾಗಿ ಓದುತ್ತೇವೆ. ಅನೇಕ ಸಾರಿ ನಮ್ಮ ಸುತ್ತಲೂ ಇರುವ ಬೆಂಕಿಯ ಗೋಡೆಯನ್ನು ದೃಷ್ಟಿಸದೇ ಕುರುಡರಾಗಿರುತ್ತೇವೆ. ಆದರೆ ಎಲೀಷನು ಇದನ್ನು ದೃಷ್ಟಿಸಿದ್ದರಿಂದ ಆತನಿಗೆ ಯಾವ ಭಯವಿರಲಿಲ್ಲ.

“ದೇವರ ಮನುಷ್ಯ (ಎಲೀಷ) ನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಹೋದಾಗ ರಥರಥಾಶ್ವ ಸಹಿತವಾದ ಮಹಾ ಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವದನ್ನು ಕಂಡು ತನ್ನ ಯಜಮಾನನಿಗೆ -‘ಅಯ್ಯೋ ಸ್ವಾಮಿ ಏನು ಮಾಡೋಣ’ ಎಂದನು. ಆಗ ಎಲೀಷನು ಅವನಿಗೆ “ಹೆದರಬೇಡ ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ". ಎಂದು ಹೇಳಿ - ಕತ೯ನೇ ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾಥಿ೯ಸಲು ಕತ೯ನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು" (2ಅರಸು 6:15 -17).

ಎಲೀಷನು ಏನನ್ನು ನೋಡಿದ್ದನೋ ಅವನ ಸೇವಕ ಅದನ್ನು ಎಂದೂ ನೋಡಿರಲಿಲ್ಲವಾದ್ದರಿಂದ ಭಯಪಟ್ಟನು.

ಎಲೀಷನು ಪ್ರಾಥಿ೯ಸಿದಾಗ ಅವನ ಸೇವಕನ ಕಣ್ಣುಗಳು ತೆರೆಯಲ್ಪಟ್ಟವು. ಆಗ ಆ ಸೇವಕ ವಿಶ್ರಾಂತಿಗೆ ಬಂದನು. ನಮ್ಮ ಕಣ್ಣುಗಳು ತೆರೆಯಲ್ಪಡುವ ಅವಶ್ಯಕತೆ ನಮಗೂ ಇದೆ. ಬೇಲಿ ತೆರೆಯಲ್ಪಡುವಿಕೆಯನ್ನು ಯಾವ ಸಮಯದಲ್ಲಿ ಮುಚ್ಚಬೇಕೆಂದು ದೇವರು ಬಲ್ಲವನಾಗಿದ್ದಾನೆ. ನಮ್ಮ ಆತ್ಮೀಕ ಯೋಗ್ಯತೆಯ ಮೇಲೆ ಮತ್ತು ಆತನು ಬಯಸುವ ಉನ್ನತಮಟ್ಟಕ್ಕೆ ಸಾಗುವದಕ್ಕೆ ನಮ್ಮ ಆತುರತೆ ಹಾಗೂ ತವಕದ ಮೇಲೆ ದೇವರು ನಮ್ಮ ಸನ್ನಿವೇಶಗಳನ್ನು ಜಾಗರೂಕತೆಯಿಂದಲೂ ಸರಿಯಾಗಿಯೂ ನಿಯಂತ್ರಿಸುವವನಾಗಿದ್ದಾನೆ.

ನಾವು ಇನ್ನೂ ಆತ್ಮಿಕತೆಯಲ್ಲಿ ಬಲವಿಲ್ಲದವರೂ ಪರಿಪಕ್ವತೆಗೆ ಬಾರದವರಾಗಿದ್ದೇವೆ. ದೇವರು ನಮ್ಮನ್ನು ಭಾರವಾದ ಶೋದನೆಗಳಿಂದ ಶೋದಿಸಲ್ಪಡುವಂತೆ ಅನುಮತಿಸುವದಿಲ್ಲ. ಅಥವಾ ಸೈತಾನನು ನಮ್ಮ ವಿರುದ್ದವಾಗಿ ಬಲತ್ಕಾರದಿಂದ ಎದುರುಬಿಳುವಂತೆಯೂ ಅನುಮತಿಸಲಾರನು. ಅದೇ ಸಮಯ- ದಲ್ಲಿ ನಮ್ಮ ಜೀವಿತಕ್ಕಾಗಿ ದೇವರು ಇಟ್ಟಿರುವ ಯೋಜನೆ ಹಾಗೂ ಸಂಕಲ್ಪದ ಕುರಿತಾಗಿ ನಮಗೆ ಆಸಕ್ತಿ, ಅಬಿರುಚಿ ಇಲ್ಲದೇ ಇರುವದನ್ನು ಆತನು ನೋಡುವಾಗ ನಮ್ಮನ್ನು ಈ ಒಂದು ಜೀವಿತದಲ್ಲಿ ಸರಳವಾದ ಜೀವಿತವನ್ನು ಜೀವಿಸುವಂತೆ ಅನುಮತಿಸುತ್ತಾನೆ. ಆದರೆ ನಿತ್ಯತ್ವದಲ್ಲಿ ನಷ್ಟ ಹಾನಿಯೂ ನಮ್ಮದೇ. ಯೋಬನು ದೇವರಿಂದ ಆದುಕೊಂಡಂತ ಸೇವಕನಾದುದರಿಂದಲೇ ಆತನಿಗೆ ಅತೀಕಷ್ಟಕರವಾದ ಅಥವಾ ತೀವ್ರವಾದ ಸಂಕಟಗಳನ್ನು ಎದುರಿಸುವಂತೆ ದೇವರು ಅನುಮತಿಸಿದನು. ದೇವರು ಇದನ್ನು ಎಲ್ಲರ ಜೀವಿತದಲ್ಲಿ ಅನುಮತಿಸುವದಿಲ್ಲ.ಕೆಲವರು ಮಾತ್ರವೇ ಇದನ್ನು ತಾಳಿಕೊಳ್ಳುವದರಲ್ಲಿ ಪರಿಪಕ್ವತೆ- ಯನ್ನು ಹೊಂದಿರುತ್ತಾರೆ. ಯಾವುದೇ ಸಂಧಭ೯ದಲ್ಲೂ ಕೆಲವರು ಮಾತ್ರ ಇಂತಹ ಆತ್ಮೀಕ ಪರಿಪಕ್ವತೆ- ಯಲ್ಲಿ ಅಬಿರುಚಿಯುಳ್ಳವರಾಗಿರುತ್ತಾರೆ.

ನಾವು ಗುರಿಯಾಗದ ಪ್ರತಿಯೊಂದು ಶೋಧನೆಯನ್ನು ದೇವರು ಯೇಸುವಿನ ಜೀವಿತದಲ್ಲಿ ಹಾದು- ಹೋಗುವಂತೆ ಮಾಡಿದನು. ಆದುದರಿಂದ ಯೇಸುವು ಸಿದ್ದಿಗೆ ಬಂದನು. ಇಬ್ರಿಯ ೪:೧೫ ನೇ ವಚನವನ್ನು ಗಮನಿಸಿರಿ “ನಮಗಿರುವ ಮಹಾಯಾಜಕನು ನಮ್ಮ ನಿಬ೯ಲಾವಸ್ಥೆಯನ್ನು ಕುರಿತು ಅನುತಾಪ- ವಿಲ್ಲದವನಲ್ಲ. ಆತನು ಸವ೯ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು. ಪಾಪ ಮಾತ್ರ ಮಾಡಲಿಲ್ಲ".

ಇಬ್ರಿಯ 5:11ರ ವರೆಗೆ ಗಮನಿಸಿರಿ “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಪ್ರಾಥ೯ನೆ ವಿಜ್ಞಾಪನೆಗಳನ್ನು ಸಮಪಿ೯ಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು. ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಭಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು ಸಿದ್ದಿಗೆ ಬಂದು ದೇವರಿಂದ ಮೇಲ್ಕಿಜೆದೆಕನ ತರಹದ ಮಹಾಯಾಜಕನೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು".

ಹೀಗೆಯೇ ಯೇಸುವು ತನ್ನ ಆತ್ಮೀಕ ವಿಧ್ಯಾಭ್ಯಾಸವನ್ನು ಮನುಷ್ಯನಾಗಿ ಮುಗಿಸಿ ಸಿದ್ದಿಗೆ ಬಂದನು. ಪರಿಪೂಣ೯ತೆಗೆ ಸಾಗಬೇಕೆಂದಿರುವ ನಮಗೆ ಈ ದಾರಿಯನ್ನು ಬಿಟ್ಟು ಬೇರೆ ಯಾವ ದಾರಿಯೂ ಇಲ್ಲ.

ನಾವು ಯಾವಾಗಲೂ ಎಲ್ಲಾ ಕಾಲದಲ್ಲಿಯೂ ಜಯದಲ್ಲಿ ಜೀವಿಸಬೇಕೆಂಬ ಒಂದೇ ಒಂದು ಕಾರಣದಿಂದಲೇ ದೇವರು ನಮ್ಮ ಶಕ್ತಿಯನ್ನು ಮೀರಿ ನಮಗೆ ಶೋದನೆಯನ್ನು ಬರಮಾಡುವದಿಲ್ಲ ಎಂಬುದು ನಿಶ್ಚಯ.

1 ಕೊರಿ 10:13 ಈ ವಾಕ್ಯದಲ್ಲಿ ದೇವರು ಈ ರೀತಿಯಾದ ಖಚಿಥತ್ವ ಅಥವಾ ನಿಶ್ಚಯವನ್ನು ಕೊಡದೇ ಹೋಗಿದ್ದರೆ ಈ ರೀತಿಯಾದ ಧೈಯ೯ ನಮಗೆ ಇರುತ್ತಿದ್ದಿಲ್ಲ.

“ನಮ್ಮ ದಾರಿಯಲ್ಲಿ ಬರುವಂತ ಪ್ರತಿಯೊಂದು ಪರೀಕ್ಷೆಗಳು, ಶೋಧನೆಗಳು ಜಯಿಸ- ಬಲ್ಲವುಗಳಾಗಿವೆ". ಎಂಬುದೇ 1 ಕೊರಿಂಥ 10:13 ರಲ್ಲಿ ದೇವರ ನಿಶ್ಚಯವಾಗಿದೆ. ಹಾಗಾದರೆ ಯಾಕೆ ನಾವು ಶೋದನೆಗಳಲ್ಲಿ ಎಡವಿ ಬೀಳುತ್ತೇವೆ? ಯಾಕಂದರೆ ಪ್ರತಿಯೊಂದು ಪರೀಕ್ಷೆಗಳಲ್ಲಿ, ಶೋಧನೆಗಳಲ್ಲಿ ಏಪ೯ಡಿಸುವ ಅಥವಾ ತಪ್ಪಿಸಿಕೊಳ್ಳುವ ಮಾಗ೯ವನ್ನು ನಾವು ತೆಗೆದುಕೊಳ್ಳುವದಿಲ್ಲ.

ತಪ್ಪಿಸಿಕೊಳ್ಳುವ ಮಾಗ೯ ಯಾವುದು?

ಯೇಸುವು ತನ್ನನ್ನು ಶಿಲುಬೆಯ ಮರಣದವರೆಗೂ ತಗ್ಗಿಸಿಕೊಂಡಂತೆಯೇ ನಮ್ಮನ್ನು ತಗ್ಗಿಸಿ- ಕೊಳ್ಳುವದೇ ಆ ಮಾಗ೯ವಾಗಿದೆ. “ಹೀಗೆ ಆತನು ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿ- ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು" (ಪಿಲಿಪ್ಪಿ 2:8)

ಇಕ್ಕಟ್ಟಾದ ಮಾಗ೯ ನಮ್ಮನ್ನು ಈ ಸಮೃದ್ದಿಕರವಾದ ಜೀವಿತಕ್ಕೆ ನಡೆಸುತ್ತದೆ. ಇದನ್ನು ಕಂಡು ಹಿಡಿಯುವವರು ಸ್ವಲ್ಪ ಜನ. ಗವ೯ವು ಈ ಒಂದು ಮಾಂಸದಲ್ಲಿ (ಶರೀರದಲ್ಲಿ) ಆಳವಾಗಿ ಬೇರೂರಿರುವದರಿಂದ ಈ ಒಂದು ಅತಿಶಯವಾದ ತಗ್ಗಿಸಿಕೊಳ್ಳುವಿಕೆಯ ಮಾಗ೯ವನ್ನು ಹಾಗೂ ತಗ್ಗಿಸಿ- ಕೊಳ್ಳುವದು ಎಂಬುದರ ಅಥ೯ವನ್ನು ಸಹ ಕಂಡುಹಿಡಿಯುವವರು ಸ್ವಲ್ಪ ಜನ ಮಾತ್ರವೇ. ಇದು ವಾಸ್ತವಿಕವಾಗಿ ಅಥವಾ ನಿಜವಾಗಿಯೂ ರಹಸ್ಯವಾಗಿದೆ. ಆದರೆ ಯಾರಾರು ಪೂಣ೯ಹೃದಯವುಳ್ಳವ- ರಾಗಿರುತ್ತಾರೋ ಅಂಥವರಿಗೆ ದೇವರು ಇದನ್ನು ಪ್ರಕಟಿಸುತ್ತಾನೆ.

ನಮ್ಮ“ಜೀವಿತದ ಒತ್ತಡ" ನಮ್ಮ ಜೀವಿತವನ್ನು ತಾಳಿಕೊಳ್ಳಲಾರದಂತೆ ಮಾಡುತ್ತದೆ ಎಂಬುದಾಗಿ ನಾವು ಆಲೋಚಿಸಬಹುದು. ನಿಜವಾಗಿಯೂ ನಮ್ಮ ಗವ೯ ಮತ್ತು ನಮಗೆ ನಮ್ಮ ಬಗ್ಗೆ ಇರುವ ಉನ್ನತ ಯೋಚನೆಗಳೇ ನಮ್ಮ ಜೀವಿತವನ್ನು ಕಷ್ಟಕರವಾಗಿ ಮಾಡುತ್ತವೆ.

ಕೆಲವು ಸಮಯಗಳಲ್ಲಿ ಈ ರೀತಿಯಾಗಿ ನಾನು ಆಲೋಚಿಸಿದ್ದೇನೆ. ನನಗೆ ಒಂದು ಸಾರಿ ಜನರು ತುಂಬಿದ ಹಾಗೂ ಸ್ಥಳ ಕಾಯ್ದಿರಿಸದೆ ಇರುವ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿ ಬಂದಿತು. ಕುಳಿತುಕೊಳ್ಳಲಿಕ್ಕೆ ಸ್ಥಳ ಕೂಡಾ ಇಲ್ಲ. ಎಲ್ಲೊ ಒಂದು ಕಡೆ ಮೂಲೆಯಲ್ಲಿ ಕೆಳಗಡೆ ಕುಳಿತುಕೊಳ್ಳಬೇಕು ಅಥವಾ ನಿಂತುಕೊಂಡೆ ಪ್ರಯಾಣ ಮಾಡಬೇಕು. ರೈಲಿನ ಬೋಗಿ ಪ್ರಾರಂಭದ ಸ್ಟೇಷನನಿಂದ ಜನರೂ , ಸಾಮಾನುಗಳೂ ಒಳಗೆ ಹೆಚ್ಚೆಚ್ಚಾಗಿ ಆ ಸನ್ನಿವೇಶ ಬಹಳ ಒತ್ತಡದಿಂದ ತುಂಬಿತ್ತು. ಒತ್ತಡ ಮತ್ತಷ್ಟು ಎಡಬಿಡದೇ ಹೆಚ್ಚುತ್ತಾ ಬಂತು. ಆಗ ನಾನು ಆಲೋಚಿಸಿದೆ. ಇಲ್ಲಿ ನಾನು ಕೇವಲ ಒಂದು ಇರುವೆ ಗಾತ್ರದೋಪಾದಿಯಲ್ಲಿ ಇದ್ದರೆ ಯಾವ ಒತ್ತಡವೂ ನನ್ನ ಮೇಲೆ ಬರಲಾರದೆಂದು. ನಾನು ಮನುಷ್ಯಗಾತ್ರ- ನಾಗಿರುವದರಿಂದಲೇ ಈ ಹೆಚ್ಚು ಒತ್ತಡವನ್ನು ನಾನು ಕಾಣುತ್ತೇನೆ. ಒಬ್ಬ ಮನುಷ್ಯ ದೇಹದ ಗಾತ್ರದಲ್ಲಿ ಹೆಚ್ಚಿದ್ದರೆ ಅದು ಇನ್ನೂ ಕಷ್ಟಕರ ಈ ಎಲ್ಲವೂ ನಮ್ಮ ಗಾತ್ರದ ಮೇಲೆ ಆತುಕೊಂಡಿದೆ. ಆದರೆ ಇರುವೆ ಜನರು ತುಂಬಿದ ರೈಲಿನ ಬೋಗಿಯಲ್ಲಿ ಸಂತುಷ್ಟಕರವಾಗಿದೆ. ಮತ್ತು ಇರುವೆ ಅಲ್ಲಿರುವ ಒತ್ತಡವನ್ನು ನೋಡಿ ಅದರ ಬಗ್ಗೆ ಅದು ಯಾವ ದೂರು ಹೇಳಲಾರದು.

ಇದು ಚಿಕ್ಕ ಉದಾಹರಣೆಯಾಗಿದ್ದರೂ ಆತ್ಮೀಕತೆಗೆ ಇದರಲ್ಲಿ ಉತ್ತರವಿದೆ. ಹೊರಗಿನಿಂದ ಒತ್ತಡವು ಹೆಚ್ಚಿದಾಗ ನನ್ನ ಸ್ವಂತ ದೃಷ್ಟಿಯಲ್ಲಿ ನಾನು ಚಿಕ್ಕವನಾಗುತ್ತಾ ಚಿಕ್ಕವನಾಗುತ್ತಾ ಬಂದರೆ ಒತ್ತಡವು ಕಡಿಮೆ- ಯಾಗಿ ಕೊನೆಗೆ ಆ ಒತ್ತಡವು ಇಲ್ಲದಂತಾಗುತ್ತದೆ. ದೇವರು ನಮ್ಮನ್ನು ಕಡಿಮೆಮಾಡುವದರಲ್ಲಿ ಆಸಕ್ತಿ- ಯುಳ್ಳವನಾಗಿದ್ದಾನೆ. ಆತನು ತನ್ನ ಸಂಕಲ್ಪವನ್ನು ಅಥವಾ ಯೋಜನೆಯನ್ನು ನಮ್ಮ ಮೂಲಕ ಪರೀ- ಪೂಣ೯ವಾಗಿ ನೇರವೇರಿಸುವ ಮೊದಲು ನಮ್ಮ ಸ್ವಂತ ಗಣನೆಯಲ್ಲಿ ನಾವು “ಏನೂ ಅಲ್ಲ" ಎಂಬ ಮಟ್ಟದ ವರೆಗೆ ದೇವರು ನಮ್ಮನ್ನು ಕಡಿಮೆ ಮಾಡಿ ತಗ್ಗಿಸುತ್ತಾನೆ. ಉದಾಹರಣೆಗಾಗಿ ಬೇರೆಯವರ ಅಥವಾ ಇತರರ ಮೇಲೆ ಯಾಕೆ ನಾವು ಬೇಸರಪಟ್ಟುಕೊಳ್ಳುತ್ತೇವೆ. ನಮ್ಮ ಗಣನೆಯಲ್ಲಿ ನಮ್ಮ ಬಗ್ಗೆ ಇರುವ ಉನ್ನತವಾದ ಆಲೋಚನೆಗಳು ಮತ್ತು ನಮ್ಮ ಹಕ್ಕುಗಳನ್ನು ಜನರು ಕಸಿದುಕೊಳ್ಳುವಾಗ ಇವು ಬೇಸರಿಕೆಯುಳ್ಳವರಾಗುವಂತೆ ಮಾಡಿದೆಯೋ? ನಾವು ಬಯಸಿದಂತೆ ಮಾನ ಸನ್ಮಾನವನ್ನು ಜನರು ಕೊಡುತ್ತಾಯಿಲ್ಲ ಎಂದು ಭಾವಿಸುತ್ತೇವೆ ಹಾಗೂ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆಂದು ಸಹ ಭಾವಿಸುತ್ತೇವೆ.

ಜನರು ನಮ್ಮ ಹಿಂದುಗಡೆ ಕೆಟ್ಟದ್ದಾಗಿ ನಮ್ಮ ಕುರಿತು ಮಾತನಾಡುವಾಗ ನಮಗೆ ನೋವಿನ ಭಾವನೆ ಬರುತ್ತದೆ. ನಮ್ಮಲ್ಲಿ ಹರಡಿದ ಗವ೯ವೇ ಇಂಥ ಭಾದೆಗಳಿಗೆ ಕಾರಣವಾಗಿದೆ. ಗವ೯ವೆಂಬ ಬಲೂನನ್ನು ಒಡೆದು ಅದರಲ್ಲಿರುವ ಗಾಳಿಯನ್ನು ನಿಜವಾಗಿಯೂ ಹೊರಗೆ ಬಿಡುವಾಗ ಯಾವುದೇ ಒತ್ತಡ- ವಿಲ್ಲದಿರುವದನ್ನು ನೋಡುತ್ತೇವೆ. ಇದೇ ರಹಸ್ಯವಾಗಿದೆ. ಇದನ್ನು ನೋಡುವಂತೆ ದೇವರು ನಿಮ್ಮ ಕಣ್ಣು- ಗಳನ್ನು ತೆರೆಯಲಿ.

ಸಾವಿರದ ಒಂದು ವಿಷಯಗಳಿಗಾಗಿ ನಮ್ಮ ಸುತ್ತಲೂ ಇರುವ ಜನರು ಗುಣಗುಟ್ಟುವಿಕೆ ದೂರು ಹೇಳುವಿಕೆಯುಳ್ಳವರಾಗಿರುವಾಗ ನಮಗೆ ಏನೇ ಆದರೂ ಯಾವ ಗುಣಗುಟ್ಟುವಿಕೆ ದೂರುಹೇಳುವಿಕೆ ಇರಲಾರದು. ಯಾಕಂದರೆ ನಮ್ಮನ್ನು ತಗ್ಗಿಸಿಕೊಳ್ಳಬೇಕೆಂದು ತಪ್ಪಿಸಿಕೊಳ್ಳುವ ಮಾಗ೯ವನ್ನು ಆರಿಸಿ- ಕೊಂಡಿದ್ದೇವೆ.

ಅಧ್ಯಾಯ 8
ದೀನರಿಗೆ ಮಾತ್ರ ದೇವರು ಕೃಪೆ ನೀಡುತ್ತಾನೆ

ನಾವು ನಮ್ಮನ್ನು ತಗ್ಗಿಸಿಕೊಳ್ಳಬೇಕೆಂದು ದೇವರು ಬಯಸುವದರಲ್ಲಿ ಇನ್ನೊಂದು ಕಾರಣವಿದೆ. ಅದು -ಆತನು ತನ್ನ ಕೃಪೆಯನ್ನು ಕೊಡಬೇಕೆಂದಿರುವದೇ ಆಗಿದೆ. ದೇವರು ತನ್ನ ನಿಯಮಗಳನ್ನು ಅತಿ- ಕ್ರಮಿಸುವವನಲ್ಲ. ದೇವರು ತಾನು ಹೇಳಿದಂತೆಯೇ ನಡಕೊಳ್ಳುತ್ತಾನೆ ಹೊರತು ತನ್ನ ಮಾತುಗಳನ್ನು ಉಲ್ಲಂಘಿಸಲಾರನು. ಆತನ ನಿಯಮಗಳಲ್ಲಿ ಒಂದಾನೊಂದು ನಿಯಮವನ್ನು ಆತನು ತನಗೆ ಕಟ್ಟಿಕೊಂಡಿದ್ದಾನೆ. ಆ ನಿಯಮ “ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗೆ ಕೃಪೆಯನ್ನು ನೀಡುತ್ತಾನೆ" (1ಪೇತ್ರ 5:5). ಆತನು ನಮ್ಮನ್ನು ಬಹಳವಾಗಿ ಪ್ರೀತಿಸಿದರೂ ನಾವು ಗವಿ೯ಗಳಾಗಿದ್ದರೆ ಆತನು ಕೃಪೆಯನ್ನು ಕೊಡಲಾರನು. ದೇವರಿಂದ ನಾವು ಕೃಪೆಯನ್ನು ಹೊಂದದೆ ಜಯದಲ್ಲಿ ಜೀವಿಸಲು ಅಸಾಧ್ಯ. ಶೋದನೆಯ ಬಲವನ್ನು ಕೇವಲ ದೇವರ ಕೃಪೆಯ ಬಲದಿಂದ ಮಾತ್ರ ಜಯಿಸಲು ಸಾಧ್ಯ.

“ಧಮ೯ಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಕೃಪೆಯು ಸತ್ಯವು ಯೇಸುವಿನ ಮುಖಾಂತರ ಬಂದವು" (ಯೋಹಾನ 1:17). ಧಮ೯ಶಾಸ್ತ್ರದ ಕೆಳಗಡೆ ಅಂದರೆ ಜನರು ಹೃದಯದಲ್ಲಿ ಶೋದನೆಯ ಮೇಲೆ ಹೋರಾಡುತ್ತಿದ್ದರು, ಆದರೆ ಯಾವಾಗಲೂ ಸೋತುಹೋಗುವಂತವರಾಗಿದ್ದರು. ತಾಸ೯ದ ಸೌಲನು ದೇವರ ಧಮ೯ಶಾಸ್ತ್ರದಲ್ಲಿ ಹೇಳಿರುವ ಬಹಿರಂಗ ನೀತಿಯನ್ನು ನೋಡಿದರೆ ನಿದೋ೯ಶಿಯಾಗಿ ಜೀವಿಸಿದ್ದನು.

ಪಿಲಿಪ್ಪಿ 3:6 ರಲ್ಲಿ ಆತನು ತನ್ನ ಸ್ವಂತ ಜೀವಿತದ ಕುರಿತಾಗಿ ಸಾಕ್ಷಿಕೊಡುತ್ತಾನೆ. “ಧಮ೯ಶಾಸ್ರ್ತದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿದೋ೯ಷಿ". ಆದರೂ ಪೌಲನು ತನ್ನ ಹೃದಯದಲ್ಲಿ ದುರಾಶೆಯ ವಿರುದ್ದ ಬಲವಿಲ್ಲದವನಾಗಿದ್ದನು. ರೋಮ 7:8 ರಲ್ಲಿ ಪೌಲನು ಹೇಳುವಂಥದ್ದು - “ಆದರೆ ಪಾಪವು ಈ ಆಜ್ಞೆಯಿಂದ ಅನೂಕೂಲ ಹೊಂದಿ ಸಕಲವಿದವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು".

ಜನರ ಹೃದಯವನ್ನು ಆಶೆಯಿಂದ ಶುಧ್ದವಾಗಿಟ್ಟುಕೊಳ್ಳುವಲ್ಲಿ ಧಮ೯ಶಾಸ್ತ್ರಕ್ಕೆ ಬಲ ಸಾಲಲಿಲ್ಲ. ಇದಕ್ಕಾಗಿ ಧಮ೯ಶಾಸ್ತ್ರವು ಇರಲಿಲ್ಲ. ಧಮ೯ಶಾಸ್ತ್ರವು ಕೇವಲ ಒಬ್ಬ ವ್ಯಕ್ತಿಯ ಪಾಪಮಯವಾದ ಜೀವಿತವನ್ನು ಮತ್ತು ಆ ವ್ಯಕ್ತಿಯ ಮಾಂಸದಲ್ಲಿರುವ ಆಶೆಯ ವಿರುದ್ದ ಬಲವಿಲ್ಲದಿರುವಿಕೆಯನ್ನು ತೋಪ೯ಡಿಸುವದಕ್ಕಾಗಿ ಮತ್ತು ಆ ವ್ಯಕ್ತಿಯ ಹೊರಗಿನ ಪಾಪದಿಂದ ಆ ವ್ಯಕ್ತಿಯನ್ನು ಕಾಪಾಡು- ವದಕ್ಕಾಗಿಯೂ ಇದ್ದಿತು. ಧಮ೯ಶಾಸ್ತ್ರದ ಮೂಲಕವಾಗಿ ಒಬ್ಬ ಮನುಷ್ಯನು ಜನರ ದೃಷ್ಠಿಯಲ್ಲಿ ಹೊರಗಿನ ಜೀವಿತವನ್ನು ಸರಿಯಾಗಿ ದೋಷವಿಲ್ಲದೇ ಇಟ್ಟುಕೊಂಡಿರಲು ಸಾದ್ಯ. ಆದರೂ ಆ ಮನುಷ್ಯನ ಹೃದಯ ಪಾಪದಿಂದ ಹೊಲಸಾಗಿ ತುಂಬಿರಲು ಸಾಧ್ಯವಿತ್ತು. ಇಷ್ಟೇ ಉತ್ತಮವಾದದ್ದನ್ನು ಧಮ೯ಶಾಸ್ತ್ರವು ಸಾಧಿ- ಸಿತು ಅಥವಾ ಮಾಡಿತು.

ಆದರೆ ಯೇಸುಸ್ವಾಮಿಯವರ ಮುಖಾಂತರ ಹೊಸ ಒಡಂಬಡಿಕೆಯ ಶುಭವಾತೆ೯-ಏನೆಂದರೆ ಧಮ೯ಶಾಸ್ತ್ರವು ಯಾವುದನ್ನು ಮಾಡಲಾರದೆ ಇತ್ತೋ ಅದನ್ನು ಕೃಪೆಯು ಮಾಡಿತು. ದೇವರ ಕೃಪೆ ನಮ್ಮ ಪಾಪಗಳನ್ನು ಕ್ಷಮಿಸುವದರಲ್ಲಿ ತೋರಿಸಿದ ದಯೆ ಅಷ್ಟೇ ಅಲ್ಲ ಅದಕ್ಕಿಂತಲೂ ಕೃಪೆ ಹೆಚ್ಚಿನದಾಗಿದೆ. ಕೃಪೆ ದೇವರ ಬಲವಾಗಿದೆ.

2 ಕೊರಿಂಥ 12:9 ರಲ್ಲಿ ಕೃಪೆಯು ಬಲ ಎಂದು ಪರಿಗಣಿಸಲ್ಪಟ್ಟಿದೆ. “ನನ್ನ ಕೃಪೆಯೇ ನಿನಗೆ ಸಾಕು ಬಲಹೀನತೆಯಲ್ಲಿಯೇ ನನ್ನ ಬಲವು ನಿನಗೆ ಪೂಣ೯ಸಾಧಕವಾಗುತ್ತದೆ".

ಈ ಕೃಪೆ (ಬಲ) ನಾವು ಶೋಧಿಸಲ್ಪಡುವಾಗ ಸಹಾಯಕ್ಕಾಗಿ ಬರುತ್ತದೆ. ಇಬ್ರಿಯ 4:16 ರಲ್ಲಿ “ಆದುದ್ದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಈತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈಯ೯ದಿಂದ ಕೃಪಾಸನದ ಬಳಿಗೆ ಬರೋಣ" ದೇವರ ಕೃಪೆಯನ್ನು ಆತುಕೊಂಡು ಹೃದಯವನ್ನು ಧೃಡಮಾಡಿಕೊಳ್ಳುವದು ಉತ್ತಮ. (ಇಬ್ರಿಯ 13:9) ಈಗ ನಾವು ದುರಾಶೆಯಿಂದಲೂ ವಿಷಯಾಭಿಲಾಷೆಯಿಂದಲೂ ನಮ್ಮ ಹೃದಯವನ್ನು ಮೈಲಿಗೆಯಿಂದ ಅಥವಾ ಮಲೀನತೆಯಿಂದ ಕಾಪಾಡಿಕೊಳ್ಳುವೆವು. ಇದು ಹೊಸ ಒಡಂಬಡಿಕೆಯ ಶುಭ- ವಾತೆ೯ಯಾಗಿದೆ.

ಇಬ್ರಿಯ 8:10 ರಲ್ಲಿ ದೇವರು ಹೀಗೆನ್ನುತ್ತಾನೆ - “ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ಅವರ ಹೃದಯದ ಮೇಲೆ ಅವುಗಳನ್ನು ಬರೆಯುವೆನು. ದೇವರು ಕೃಪೆಯ ಆತ್ಮನ ಮೂಲಕವಾಗಿ ಈ ಕಾಯ೯ವನ್ನು ನಮ್ಮ ಮನಸ್ಸಿನಲ್ಲಿಯೂ ಹೃದಯದಲ್ಲಿಯೂ ಮಾಡುತ್ತಾನೆ".

“ದೇವರು ತನ್ನ ಕೃಪೆಯಿಂದ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಮ್ಮಲ್ಲಿ ಉದ್ದೇಶವನ್ನು ಪ್ರಯತ್ನವನ್ನು ಉಂಟು ಮಾಡುವವನಾಗಿದ್ದಾನೆ" (ಫೀಲಿಪ್ಪಿ 2:13). ಹೀಗೆ ಶಾಸ್ತ್ರದ ನೀತಿಯುಳ್ಳ ಅಗತ್ಯತೆಯು (ನಿಯಮವು) ನಮ್ಮೊಳಗೆ ನೇರವೇರುವದು (ರೋಮ 8:4).

ಈ ಒಂದೇ ಒಂದು ಸಂಕಲ್ಪದ ಕುರಿತಾಗಿ ದೇವರು ಪಂಚಾಶತ್ತಮ ದಿನದಂದು ತನ್ನ ಆತ್ಮನನ್ನು ಸುರಿಸಿದನು. “ಆ ದಿನದಲ್ಲಿ ಯೆರುಸಲೇಮಿನವರ ಮೇಲೆ ನನ್ನ ಕೃಪೆಯ ಆತ್ಮನನ್ನು ಸುರಿಸುವೆನು". (ಜೆಕಯ೯12:10)

ಆ ಹೊಳೆಯು ಇನ್ನೂ ಜಲಪಾತದಂತೆ ದೇವರ ಸಿಂಹಸನದಿಂದ ಭೂಮಿಗೆ ಹರಿಯುತ್ತಲಿದೆ. ದೇವರ ಪರಲೋಕದ ಯೆರೂಸಲೇಮ (ಸಭೆ) ಈಗಲೂ ಸಹ ದೇವರ ಕೃಪೆಯಿಂದ ಈ ಜಲಪಾತದ ಕೆಳಗಡೆ ಬಂದು ತನ್ನನ್ನು ತೊಯಿಸಿಕೊಳ್ಳಬಹುದು.

ಆಗ ರೋಮ (6:14) ರಲ್ಲಿರುವ - “ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು. ನೀವು ಧಮ೯ಶಾಸ್ತ್ರಕ್ಕೆ ಅಧೀನರಲ್ಲ. ಕೃಪೆಗೆ ಅಧೀನರಾಗಿದ್ದೀರಷ್ಟೆ" ಎಂಬ ವಾಗ್ದಾನವು ನೆರವೇರುವದು.

ಈ ಜಲಪಾತದ ಕೆಳಗಡೆ ಬರಲು ಕೇವಲ ಒಂದೇ ಒಂದು ನಿಬಂಧನೆಯಿದೆ. ಅದು ಯಾವದೆಂದರೆ “ನಮ್ಮನ್ನು ತಗ್ಗಿಸಿಕೊಳ್ಳುವದು". ಕೃಪೆಯು ನಮ್ಮನ್ನು ಪಾಪದಿಂದ ನಮ್ಮ ಸನ್ನಿವೇಶಗಳಿಂದ, ನಮ್ಮ ನಿರಾಶೆ ಕಳೆಗುಂದುವಿಕೆಯಿಂದ, ದುಃಖದ ಮನೋಭಾವದಿಂದ ಸೈತಾನನಮೇಲೆ, ಕಹಿಭಾವನೆಯಿಂದ ಹಗೆತನದಿಂದ, ಹೊಟ್ಟೆಕಿಚ್ಚಿನಿಂದ, ದುರಾಶೆಯಿಂದ ಮತ್ತು ಎಲ್ಲಾ ಕೆಟ್ಟತನದಿಂದ ನಮ್ಮನ್ನು ಮೇಲಕ್ಕೆತ್ತುವದು. ಹೀಗಿರುವದರಿಂದ ದೇವರ ತ್ರಾಣವುಳ್ಳ (ಸವ೯ಶಕ್ತವುಳ್ಳ) ಹಸ್ತದ ಕೆಳಗಡೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು (1 ಪೇತ್ರ 5:೬6).

ನಮ್ಮನ್ನು ತಗ್ಗಿಸಿಕೊಳ್ಳಬೇಕಾದ ತ್ರಾಣವುಳ್ಳ (ಸವ೯ಶಕ್ತ) ಹಸ್ತ ಯಾವುದು? ಪ್ರತಿದಿನ ನಮ್ಮ ಹಾದಿಯಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗಳನ್ನು ಪ್ರತಿಯೊಂದು ಸನ್ನಿವೇಶಗಳನ್ನು ಆಜ್ಞಾಪಿಸುವ ಹಸ್ತ. ನಮ್ಮನ್ನು ತಗ್ಗಿಸಿಕೊಳ್ಳುವದು ಅಂದರೆ ದೇವರ ಪ್ರತಿಯೊಂದು ವ್ಯವಹರಿಸುವಿಕೆಯಲ್ಲಿ ಆನಂದದಿಂದ ಅವುಗಳಿಗೆ ವಿಧೇಯರಾಗುವದು. ಅಥವಾ ಒಳಪಡುವದು. (ನಮ್ಮ ಎಲ್ಲಾ ಸನ್ನಿವೇಶಗಳಲ್ಲಿ ಜನರು ನಮ್ಮ ತಲೆಯ ಮೇಲೆ ಸವಾರಿ ಮಾಡುವಂತೆ ದೇವರು ಅನುಮತಿಸುವಾಗಲೂ)ಅದನ್ನು ತಾಳಿಕೊಳ್ಳುವದು ತುಂಬಾ ಕಷ್ಟಕರವಾಗಿದೆ ಎಂದು, ಎಂದಿಗೂ ಭಯಪಡಬೇಕಾದ ಅವಶ್ಯವಿಲ್ಲ ಯಾಕಂದರೆ ದೇವರು ಬೇಲಿಯ ಸಂದನ್ನು ಗಮನಿಸುತ್ತಿದ್ದಾನೆ ಮತ್ತು ಆಯಾ ಸಮಯಗಳಲ್ಲಿ ಆ ಸಂದನ್ನು ಎಷ್ಟು ತೆರೆಯಬೇಕೆಂದು ಬಲ್ಲವನಾಗಿರುತ್ತಾನೆ. ಆತನು ಆ ಸಂದನ್ನು ಯಾವಾಗ ಮುಚ್ಚ- ಬೇಕೆಂದು ಸಹ ಬಲ್ಲವನಾಗಿರುತ್ತಾನೆ.

ಯಾವುದೋ ಒಂದು ಪಾಪ ನಮ್ಮನ್ನು ಜಯಿಸುತ್ತಿದೆಯೆಂದರೆ ಈ ಸೋಲುವಿಕೆಗೆ ಒಂದೇ ಒಂದು ಕಾರಣವಿದೆ. ಅದು ಯಾವದೆಂದರೆ ನಮ್ಮ ಗವ೯. ದೇವರು ತನ್ನ ಕೃಪೆಯನ್ನು ನಮಗೆ ಕೊಡದೇ ಹೋದರೆ ನಾವು ಪಾಪವನ್ನು ಜಯಿಸಲಾರೆವು. ನಾವು ಗವಿ೯ಗಳಾಗಿದ್ದರೆ ದೇವರು ತನ್ನ ಕೃಪೆಯನ್ನು ನಮಗೆ ಕೊಡಲಾರನು. ಪ್ರತಿ ಸಾರೆ ನಾವು ಪಾಪದಿಂದ ಸೋತುಹೋಗುವದನ್ನು ಗಮನಿಸುವಾಗ ದೇವರ ಬಳಿಗೆ ಹೋಗಿ ಈ ರೀತಿಯಾಗಿ ಹೇಳಬೇಕಾದ ಅವಶ್ಯವಿದೆ. “ಕತ೯ನೇ ಜಯ ಸಂಪಾದಿಸಲು ಕೃಪೆಯನ್ನು ಕೊಡುವ ನಿನಗೆ ಅಡ್ಡಿಯಾಗಿರುವ ಈ ಗವ೯ ನನ್ನಲ್ಲಿ ಎಲ್ಲಿ ನೆಲೆಯಾಗಿದೆ ಎಂಬುದನ್ನು ತೋರಿಸು". ಈ ರೀತಿಯಾಗಿ ಪ್ರತಿಯೊಂದು ಸೋಲುವಿಕೆಯಲ್ಲಿ ನಮ್ಮನ್ನು ನಾವೇ ತೀಪು೯ ಮಾಡಿಕೊಳ್ಳುವಲ್ಲಿ ತೀವ್ರವಾದಿಗಳಾಗಿದ್ದರೆ ಸ್ವಲ್ಪ ಅವದಿಯಲ್ಲಿಯೇ ಜಯ ನಮ್ಮದೇ.

ಹೊಸ ಒಡಂಬಡಿಕೆಯಲ್ಲಿ ಪಾಪದ ಮೇಲೆ ಜಯದ ಜೀವಿತ ನಮ್ಮ ಜನ್ಮ ಸಿದ್ಧ ಹಕ್ಕಾಗಿದೆ. ಏನೂ ಅರಿಯದಿರುವಿಕೆಯಿಂದಲೂ ಅಥವಾ ಅಜ್ಞಾನದಿಂದಲೂ ಹಾಗೂ ಗವ೯ದಿಂದಲೂ ಇದನ್ನು ನಿಮ್ಮಿಂದ ಅಪಹರಿಸುವಂತೆ ಸೈತಾನನಿಗೆ ಅವಕಾಶಕೊಡಬೇಡಿರಿ. ಜಯ ಸಂಪಾದಿಸಲು ಸ್ವಲ್ಪ ಸಮಯವು ತೆಗೆದುಕೊಳ್ಳುವದೇಯಾದರೆ ಇದಕ್ಕೆ ಒಂದೇ ಕಾರಣ ಯಾವದೆಂದರೆ, ನಮ್ಮನ್ನು ದೀನರನ್ನಾಗಿ ಮಾಡಲು ದೇವರಿಗೆ ಸ್ವಲ್ಪ ಸಮಯವು ಹಿಡಿಯುತ್ತದೆ. ಆದಾಮನ ಮಕ್ಕಳಾಗಿರುವದರಿಂದ ನಾವು ಹೊಂದಿದಂಥಹ ಹಾಗೂ ನಮ್ಮಲ್ಲಿ ತುಂಬಿದಂಥಹ ಸ್ವಂತ ಭರವಸೆಯನ್ನು ದೇವರು ನಿಮೂ೯ಲಮಾಡಬೇಕಾದರೆ ದೇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ.

ಗವ೯ದ ಇನ್ನೊಂದು ವೇಶ ಯಾವುದೆಂದರೆ ‘ಪಾಪವನ್ನು ಜಯಿಸುವದಕ್ಕೆ ನಮ್ಮಲ್ಲಿ ಬಲವಿದೆ’ ಎಂದು ಆಲೋಚಿಸುವದೇ ಆಗಿರುತ್ತದೆ. ಸ್ವಲ್ಪ ದೃಢ ಸಂಕಲ್ಪ, ಇನ್ನೂ ಸ್ವಲ್ಪ ಸ್ವ-ತಿದ್ದುಪಾಟು, ಇನ್ನೂ ಸ್ವಲ್ಪ ಉಪವಾಸ ಮತ್ತು ಪ್ರಾಥ೯ನೆ, ಇನ್ನೂ ಸ್ವಲ್ಪ ಸತ್ಯವೇದ ಜ್ಞಾನ ಇವುಗಳು ಮಾತ್ರ ನಮಗೆ ಅವಶ್ಯವೆಂದು ನಾವು ಆಲೋಚಿಸುತ್ತೇವೆ. ಈ ರೀತಿಯಾದ ಪುಸ್ತಕಗಳಲ್ಲಿ ಜಯದ ಕುರಿತು ನಾವು ಓದುವಾಗ ಈಗ ನಾವು ಜಯದ ಕುರಿತಾಗಿ ಬೋಧನೆಯನ್ನು ಸ್ಪಷ್ಟವಾಗಿ ಅಥ೯ಮಾಡಿಕೊಂಡಿದ್ದೇವೆ ಮತ್ತು ಜಯವನ್ನು ಸರಳವಾಗಿ ಸಂಪಾದಿಸಬಹುದೆಂದು ನಾವು ಯೋಚಿಸುತ್ತೇವೆ.

ಈ ರೀತಿಯಾಗಿ ದೈಯ೯ದಿಂದಲೂ ಬಹು ಭರವಸೆಯಿಂದಲೂ ಮುಂದೆ ಸಾಗುತ್ತೇವೆ. ಆದರೆ ಹೀಗಾದರೂ ನಾವು ನಮ್ಮ ಮೇಲೆಯೇ ಭರವಸೆಯಿಟ್ಟುಕೊಂಡು ದೇವರ ಕೃಪೆಯ ಮೇಲೆ ಭರವಸೆ- ಯುಳ್ಳವರಾಗಿಲ್ಲವೆಂದು ಇನ್ನೂ ಅರಿಯದವರಾಗಿದ್ದೇವೆ ಮತ್ತು ನಿಗ೯ತಿಕರಾಗಿ ಎಡವಿಬೀಳುವದನ್ನು ನೋಡುತ್ತೇವೆ.

ಆದರೆ ಒಂದೇ ಒಂದು ಸೋಲುವಿಕೆಯಿಂದ ಅಥವಾ ಬೀಳುವಿಕೆಯಿಂದ ನಾವು ಪಾಠವನ್ನು ಕಲಿಯುತ್ತೇವೆಂದು ನೀವು ಭಾವಿಸುತ್ತಿರೋ? ಎಂದಿಗೂ ಇಲ್ಲ. ನಮಗೆ ಕಲಿಯುವದು ಬೇಡವಾಗಿದೆ. ಆದುದರಿಂದ ದೇವರು ನಮ್ಮನ್ನು ತಿರುಗಿ ತಿರುಗಿ ಆಗಾಗ ಬೀಳುವಂತೆ ಅನುಮತಿಸುತ್ತಾನೆ. ಕಡೆಗೆ ಒಂದು ದಿನ ಜಯವನ್ನು ಸಂಪಾದಿಸುವದರ ಮೇಲೆ ನಮ್ಮ ಎಲ್ಲಾ ನಿರೀಕ್ಷೆಯನ್ನು ಬಿಟ್ಟುಬಿಡುತ್ತೇವೆ ಯಾಕಂದರೆ ನಮ್ಮ ದೃಢ ಸಂಕಲ್ಪವನ್ನು ಅಲಕ್ಷಿಸಿ ಅನೇಕ ಬಾರಿ ಬಿದ್ದಿದ್ದೇವೆ.ಅದು ನಮ್ಮ ಜೀವಿತದ ಶೂನ್ಯ ಸನ್ನಿವೇಶ , ಈ ಸನ್ನಿವೇಶದಲ್ಲಿಯೇ ದೇವರು ವಾಗ್ದಾನ ಮಾಡಿದ ಜಯದ ಸೀಮೆಗೆ ನಮ್ಮನ್ನು ನಡೆಸುವಾತನಾಗಿದ್ದಾನೆ.

ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ವಾಗ್ದಾನದ ಸೀಮೆಗೆ ಕರೆತಂದನು. ಇಸ್ರಾಯೇಲ್ಯರು ಐಗುಪ್ತ ದೇಶವನ್ನು ಬಿಟ್ಟು ಎರಡು ವಷ೯ಗಳ ತರುವಾಯ ಈ ವಾಗ್ದಾನ ದೇಶದ ಸೀಮೆಗೆ ಬಂದರು. ಆದರೆ ಇಸ್ರಾಯೇಲ್ಯರು ಈ ವಾಗ್ದಾನ ದೇಶವನ್ನು ಅಪನಂಬಿಕೆಯ ಕಾರಣದಿಂದ ಪ್ರವೇಶಿಸಲಿಲ್ಲ. (ಅರಣ್ಯ 13 ಮತ್ತು 14 ಅಧ್ಯಾಯವನ್ನು ನೋಡಿರಿ) ಆದುದರಿಂದ ದೇವರು ಇನ್ನೂ ಮೂವತ್ತೆಂಟು ವರುಷ ಆ ಎಲ್ಲ ತಲೆಯ ಸೈನಿಕರು (ಸ್ವಂತ ಬಲದವರನ್ನು ಸೂಚಿಸುತ್ತದೆ). ಸತ್ತು ಹೋಗುವವರೆಗೆ ಆ ಗವ೯ವುಳ್ಳ ಸ್ವ-ಭರವಸೆಯುಳ್ಳ ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ಸಂಚರಿಸುವಂತೆ ದೇವರು ಮಾಡಿದನು. (ಧಮೋ೯ 2:14). ಆಗ ಅವರು ಶೂನ್ಯ ಸನ್ನಿವೇಶಕ್ಕೆ ಬಂದರು. ಆಗ ಅವರು ಅದನ್ನು ಪ್ರವೇಶಿಸಲು ಅವರು ಯಾವ ಬಲವನ್ನು ಪ್ರಯೋಗ ಮಾಡದೇ ಯೆರಿಕೋವಿನ ಗೋಡೆಗಳು ಬಿದ್ದವು.

ದೇವರು ನಮ್ಮಲ್ಲಿ ಮತ್ತು ನಮ್ಮ ಮುಖಾಂತರ ಮಾಡಬೇಕೆಂದಿರುವ ಕಾಯ೯ದ ಮೊದಲು ಆತನು ನಮ್ಮನ್ನು ಶೂನ್ಯರನ್ನಾಗಿ ಮಾಡಬೇಕು. ಈ ಕಾಯ೯ ನಮ್ಮಲ್ಲಿ ೪೦ ವರುಷ ಹಿಡಿಯುವದಿಲ್ಲ. ನೀವು ತೀವ೯ವಾದಿಗಳಾಗಿದ್ದರೆ ಅಥವಾ ಬಲತ್ಕಾರಿಗಳಾಗಿದ್ದರೆ ಮತ್ತು ನಿಮ್ಮನ್ನು ಯಾವುದೇ ಕ್ರಯವಾದರೂ ನಿಮ್ಮನ್ನು ನೀವು ತಗ್ಗಿಸಿಕೊಳ್ಳುವದಕ್ಕೆ ತೀಮಾ೯ನಿಸಿ ನಿಧ೯ರಿಸಿದರೆ ಒಂದೆರಡು ವರುಷಗಳಲ್ಲಿಯೇ ನೀವು ಅದರಲ್ಲಿ ಪ್ರವೇಶಿಸಬಹುದು.

ನಾವು ಎಲ್ಲಿಯವರೆಗೆ ಜನರನ್ನು ಮತ್ತು ಸನ್ನಿವೇಶಗಳನ್ನು ಕುರಿತು ಗುಣಗುಟ್ಟುತ್ತೇವೋ ಅಲ್ಲಿಯ- ವರೆಗೆ ಜಯವನ್ನು ನಿರೀಕ್ಷಿಸಲು ಅಸಾಧ್ಯ. ಆದರೆ ನಮ್ಮನ್ನು ತಗ್ಗಿಸಿಕೊಂಡು, ದೇವರು ಎಲ್ಲಾ ಸನ್ನಿವೇಶಗಳನ್ನು ನಿಯಂತ್ರಿಸುತ್ತಾನೆಂದು ಮತ್ತು ಯಾವ ಶೋಧನೆಯು ಸಹ ಜಯ ಸಂಪಾದಿಸಲು ಬಲೂ ಕಷ್ಟಕರವಾಗಿರದು ಎಂದು ನಂಬುವಾಗ ಪಾಪದ ಮೇಲೆ ಜಯವು ಖಂಡಿತ.

ಅಧ್ಯಾಯ 9
ನಮ್ಮ ಸನ್ನಿವೇಶಗಳನ್ನು ದೇವರು ನಿಯಂತ್ರಿಸುತ್ತಾನೆ

ನಮ್ಮ ನಂಬಿಕೆಯು ಕದಲಿಸಲಾರದ ಅಥವಾ ಅಲುಗಾಡಲಾರದ ನಂಬಿಕೆಯಾಗಬೇಕಾದರೆ, ದೇವರ ಕುರಿತಾಗಿರುವ ಈ ಮೂರು ಸತ್ಯ ಸಂಗತಿಗಳಲ್ಲಿ ನಾವು ವಿಶ್ರಾಂತಿಯುಳ್ಳವರಾಗಿ ಭದ್ರತೆಯನ್ನು ಹೊಂದಿದವರಾಗಿರಬೇಕು. ಮೊದಲನೆಯದು ಆತನ ಸವ೯ ಸಂಪೂಣ೯ತೆಯುಳ್ಳ ಪ್ರೀತಿಯಲ್ಲಿ, ಎರಡನೆಯದು - ಆತನ ಪೂಣ೯ಶಕ್ತಿಯಲ್ಲಿ, ಮೂರನೆಯದಾಗಿ ಆತನ ಸವ೯ಸಂಪೂಣ೯ತೆಯುಳ್ಳ ಜ್ಞಾನದಲ್ಲಿ.

ನಾವು ಆತನ ಪ್ರೀತಿಯನ್ನು ಕುರಿತು ಮನದಟ್ಟು ಮಾಡಿಕೊಂಡಿದ್ದರೆ, ಹಾಗೆಯೇ ಸರಿಯಾಗಿ ಆತನ ಸವ೯ಶಕ್ತಿಯ ಕುರಿತು ಸಹ ಮನದಟ್ಟು ಮಾಡಿಕೊಂಡಿರಬೇಕು. ಆದುದರಿಂದ ಯೇಸುವು ಪ್ರಾಥ೯ನೆಯ ಪ್ರಾರಂಭವನ್ನು “ಪರಲೋಕದಲ್ಲಿರುವ ನಮ್ಮ ತಂದೆಯೇ" ಎಂಬುದಾಗಿ ಮಾಡುವದಕ್ಕೆ ಹೇಳಿಕೊಟ್ಟನು. ನಮ್ಮತಂದೆಯೇ" ಎಂಬುದು ಆತನ ಸವ೯ಸಂಪೂಣ೯ತೆಯುಳ್ಳ ಪ್ರೀತಿಯ ಕುರಿತು ನಮಗೆ ನೆನಪು ಕೊಡುತ್ತದೆ. “ಪರಲೋಕದಲ್ಲಿರುವ" ಎಂಬುದು ಆತನು ದೇವರಾಗಿದ್ದು ಭೂಲೋಕದಲ್ಲಿ ನಡೆಯುವ ಪ್ರತಿಯೊಂದನ್ನು ತನ್ನ ಸವ೯ ಶಕ್ತಿಯಿಂದ ಆಳುತ್ತಿದ್ದಾನೆ ಎಂಬುದನ್ನು ನಮಗೆ ನೆನಪು ಮಾಡಿಕೊಡುತ್ತದೆ. ಆತನು ದೇವರಾಗಿದ್ದು ಪರಿಪೂಣ೯ವಾಗಿ ಜ್ಞಾನಿಯಾಗಿದ್ದಾನೆ. ಹೀಗಾಗಿ ಆತನು ತನ್ನ ಜ್ಞಾನದ ಪ್ರಕಾರ ನಮ್ಮ ಮಾಗ೯ಗಳನ್ನು ಸರಿಯಾಗಿ ಆಜ್ಞಾಪಿಸಿ ಕ್ರಮಪಡಿಸುತ್ತಾನೆ.

“ದೇವರ ಮಾಗ೯ವು ಯಾವದೋಷವಿಲ್ಲದ್ದು (ಆತನ ಜ್ಞಾನ ಸವ೯ಸಂಪೂಣ೯ತೆಯುಳ್ಳದ್ದಾಗಿದೆ) .......ಮತ್ತು ನನ್ನ ಮಾಗ೯ವನ್ನು ಸರಾಗ ಮಾಡುವವನೂ ಅಥವಾ ದೋಷವಿಲ್ಲದಂತೆ ಮಾಡುವವನೂ ಆತನೇ (ಆತನು ನನ್ನ ಸನ್ನಿವೇಶಗಳನ್ನು ಸರಿಯಾಗಿ ಆಜ್ಞಾಪಿಸಿ ಕ್ರಮಪಡಿಸುತ್ತಾನೆ)". (ಕೀತ೯ನೆ 18:30,32) ದೇವರು ಪ್ರೀತಿಯಲ್ಲಿಯೂ, ಬಲದಲ್ಲಿಯೂ, ಜ್ಞಾನದಲ್ಲಿಯೂ ಸವ೯ಸಂಪೂಣ೯ತೆಯುಳ್ಳವ- ನಾಗಿರದೆ ಹೋದರೆ, ನಮ್ಮ ನಂಬಿಕೆಯು ಬಲವಾಗಿರಲಾರದು.

ಆತನು ಈ ಮೂರರಲ್ಲಿಯೂ ಸವ೯ಸಂಪೂಣ೯ತೆಯುಳ್ಳವನಾಗಿರುವದರಿಂದ ನಮಗೆ ಕದಲುವ ಅವಶ್ಯಕತೆಯಿಲ್ಲ.ಒಬ್ಬ ಮನುಷ್ಯ ದೇವರ ಸವ೯ಸಂಪೂಣ೯ತೆಯುಳ್ಳ ಪ್ರೀತಿಯ ಮೇಲೆ, ಆತನ ಸವ೯- ಶಕ್ತಿಯ ಮೇಲೆ, ಆತನ ಸವ೯ಸಂಪೂಣ೯ತೆಯುಳ್ಳ ಜ್ಞಾನದ ಮೇಲೆ ಪೂಣ೯ವಾಗಿ ಭರವಸೆಯಿಂದ ಆತುಕೊಳ್ಳುವದೇ ನಂಬಿಕೆಯಾಗಿದೆ.

ನಾವು ಈಗಾಗಲೇ ದೇವರ ಜ್ಞಾನ ಸವ೯ಸಂಪೂಣ೯ತೆಯುಳ್ಳದ್ದಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಮಾಗ೯ವು ನಮ್ಮ ಮಾಗ೯ಕ್ಕಿಂತ ಅಷ್ಟು ಉನ್ನತವಾಗಿವೆ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ. ನಿಮ್ಮ ಮಾಗ೯ಗಳು ನನ್ನ ಮಾಗ೯- ಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾಗ೯ಗಳಿಗಿಂತ ನನ್ನ ಮಾಗ೯ಗಳು ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಅಷ್ಟು ಉನ್ನತವಾಗಿವೆ" (ಯೆಶಾಯ 55: 8-9)

<

ಆದುದರಿಂದ ದೇವರು ಅನೇಕ ಸಾರಿ ಕಾಯ೯ ಸಾಧಿಸುವದನ್ನು ಹಾಗೂ ಆತನು ನಮ್ಮ ಕಾಯ೯ಗಳನ್ನು ಆಜ್ಞಾಪಿಸಿ ಕ್ರಮಪಡಿಸುವದನ್ನು ನಾವು ಅಥ೯ಮಾಡಿಕೊಳ್ಳಲಾರೆವು. ಒಂದು ಚಿಕ್ಕ ಮಗು ತನ್ನ ತಂದೆಯ ಎಲ್ಲಾ ಮಾಗ೯ಗಳನ್ನು ಹೇಗೆ ಅಥ೯ಮಾಡಿಕೊಳ್ಳವದಿಲ್ಲವೋ, ಅದೇ ರೀತಿಯಾಗಿ ನಾವು ಸಹ ದೇವರ ಎಲ್ಲಾ ಮಾಗ೯ಗಳನ್ನು ಅಥ೯ಮಾಡಿಕೊಳ್ಳದೆಯಿರುವದು ಆಶ್ಚಯ೯ಕರವಲ್ಲ. ಆದರೆ ಆತ್ಮೀಕವಾಗಿ ಬೆಳೆಯುತ್ತಾ ಮತ್ತು ದೈವಸ್ವಭಾವದಲ್ಲಿ ಹೆಚ್ಚೆಚ್ಚಾಗಿ ಪಾಲುಗಾರರಾಗುತ್ತಾ ಮುಂದೆ ಸಾಗು- ವಾಗ ದೇವರ ಮಾಗ೯ಗಳನ್ನು ಹೆಚ್ಚೆಚ್ಚಾಗಿ ಅಥ೯ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ.

ದೇವರು ಪ್ರತಿ ಮನುಷ್ಯರ ಮೇಲೆಯೂ ಮತ್ತು ಸನ್ನಿವೇಶಗಳ ಮೇಲೆಯೂ ಸಂಪೂಣ೯ವಾಗಿ ಸವ೯ಶಕ್ತಿಯುಳ್ಳವನಾಗಿದ್ದಾನೆ ಎಂಬ ಈ ವಿಷಯದಲ್ಲಿ ಅನೇಕ ವಿಶ್ವಾಸಿಗಳು ಸಂದೇಹದಲ್ಲಿದ್ದಾರೆ. ಅವರು ತುಟಿಗಳಿಂದ ಇದನ್ನು ಅರಿಕೆ ಮಾಡುತ್ತಾರೆ, ಆದರೆ ತಮ್ಮ ಅನುದಿನದ ಜೀವಿತದ ಸನ್ನಿವೇಶಗಳಲ್ಲಿ ಇದು “ಕಾಯ೯ ಸಾಧಿಸುತ್ತದೆ" ,ಎಂದು ನಂಬುವದಿಲ್ಲ.

ದೇವರು ತನ್ನ ಜನರ ಪರವಾಗಿ ಸವ೯ಶಕ್ತಿಯುಳ್ಳವನಾಗಿ ಹೇಗೆ ಕಾಯ೯ ಸಾಧಿಸಿದನು ಎಂಬ ಅನೇಕ ಮಾದರಿಗಳನ್ನು ವಾಕ್ಯಗಳಲ್ಲಿ ಓದುತ್ತೇವೆ. ಮತ್ತು ಈ ಕಾಯ೯ ಸವ೯ಸಾಮಾನ್ಯವಾಗಿರದಂತಹ ಮಾಗ೯ವಾಗಿತ್ತು.

ನಮ್ಮಲ್ಲಿ ಅನೇಕರಿಗೆ ದೇವರು ತನ್ನ ಪರವಾಗಿ ಮಾಡಿದ ಅತಿಶಯವಾದ ಮಹತ್ಕಾಯ೯ಗಳ ವಿಷಯವಾಗಿ ಪರಿಚಯವುಳ್ಳವರಾಗಿದ್ದೇವೆ. ಅದರಲ್ಲಿ ಒಂದು ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಕರತಂದಿದ್ದು. ಆದರೆ ಅನೇಕ ಸಾರಿ ಅತೀ ಶ್ರೇಷ್ಠವಾದ ಮಹತ್ಕಾಯ೯ಗಳನ್ನು ದೃಷ್ಟಿಸುವದರಲ್ಲಿ ನಾವು ತಪ್ಪಿದ್ದೇವೆ. ಅದರಲ್ಲಿ ಒಂದು ಸೈತಾನನು ದೇವ ಜನರ ವಿರುಧ್ದವಾಗಿ ಆಕ್ರಮಿಸುವಾಗ, ದೇವರು ಸೈತಾನನ ಮೇಜನ್ನು ತಿರುಗಿಸಿದ್ದಾನೆ.

ಯೋಸೇಫನ ಕುರಿತಾದ ಸಂಗತಿಯು ಶ್ರೇಷ್ಟವಾದದ್ದು. ಯೋಸೆಫನು 30 ವಷ೯ದವನಾಗುವಾಗ ಅವನು ಐಗುಪ್ತದೇಶದ ಮಂತ್ರಿಯಾಗಬೇಕೆಂದು ದೇವರು ಅವನಿಗಾಗಿ ಯೋಜನೆಯನ್ನು ಇಟ್ಟುಕೊಂಡಿದ್ದನು.

ಯೋಸೇಫನು ದೇವರಿಗೆ ಭಯಪಡುವ ಯೌವನಸ್ಥನಾದುದ್ದರಿಂದ ಸೈತಾನನು ಆತನನ್ನು ದ್ವೇಷಿಸಿ- ದನು. ಆದುದ್ದರಿಂದ ಸೈತಾನನು ಯೋಸೇಫನ ಅಣ್ಣಂದಿರಲ್ಲಿ ಆತನನ್ನು ಬೇಪ೯ಡಿಸಿ ತೊಲಗಿಸುವಂತೆ ಪ್ರೇರಣೆಯನ್ನುಂಟು ಮಾಡಿದನು. ಆದರೆ ಯೋಸೇಫನ ಪ್ರಾಣವನ್ನು ಅವರು ತೆಗೆಯದಂತೆ ದೇವರು ಕಾಯ್ದನು. ಅವರು ಹೇಗೂ ಯೋಸೇಫನನ್ನು ಇಷ್ಮಾಯೇಲ್ಯರಿಗೆ ಮಾರಿಬಿಟ್ಟರು. ಆದರೆ ಆ ಇಷ್ಮಾಯೇಲ್ಯರು ಯೋಸೇಫನನ್ನು ಎಲ್ಲಿಗೆ ತೆಗೆದುಕೊಂಡು ಹೋದರೆಂದು ಯೋಚಿಸುತ್ತಿರಿ? ಐಗುಪ್ತಕ್ಕೆ ತೆಗೆದುಕೊಂಡು ಬಂದರಲ್ಲವೇ? ಅದು ದೇವರ ಯೋಜನೆ ನೇರವೇರುವದರಲ್ಲಿ ಪ್ರಥಮ ಹೆಜ್ಜೆಯಾಗಿತ್ತು.

ಐಗುಪ್ತ ದೇಶದಲ್ಲಿ ಯೋಸೇಫನನ್ನು ಪೋಟಿಪರನು ಕ್ರಯಕೊಟ್ಟು ಕೊಂಡುಕೊಂಡನು. ಇದನ್ನು ಸಹ ದೇವರೇ ಏಪ೯ಡಿಸಿದನು. ಪೋಟಿಪರನ ಹೆಂಡತಿಯು ಕೆಟ್ಟ ಸ್ತ್ರೀ ಯಾಗಿದ್ದಳು. ಈ ಸ್ತ್ರೀ ಯೋಸೇಫ- ನನ್ನು ಮೆಚ್ಚಿ ಪ್ರೀತಿಗೊಂಡು ಆತನನ್ನು ಪದೇ ಪದೇ ಮರುಳು ಮಾಡಿ ಸೆಳೆಯುವದಕ್ಕೆ ಪ್ರಯತ್ನಿಸಿದಳು. ಕಡೆಗೆ ಈ ಕಾಯ೯ದ ಮೇಲೆ ವಿಫಲಗೊಂಡಾಗ ಯೋಸೇಫನ ಮೇಲೆ ದೂರು ಹೇಳಿ ಆತನನ್ನು ಸೆರೆಮನೆಯಲ್ಲಿ ಹಾಕಿಸಿದಳು. ಆದರೆ ಸೆರೆಮನೆಯಲ್ಲಿ ಯೋಸೇಫನು ಯಾರನ್ನು ಸಂಧಿಸಿದನೆಂದು ಯೋಚಿಸುತ್ತೀರಿ? ಫರೋಹನ ಪಾನದಾಯಕನಲ್ಲವೇ!!!!! ಯೋಸೇಫನು ಫರೋಹನನ ಪಾನದಾಯಕ- ನನ್ನು ಸಂಧಿಸಬೇಕೆಂದು ಅದೇ ಸಮಯದಲ್ಲಿ ಆತನು ಸೆರೆಮನೆಯಲ್ಲಿರಬೇಕೆಂದು ದೇವರು ಏಪ೯ಡಿಸಿ- ದನು. ಅದು ದೇವರ ಯೋಜನೆಯಲ್ಲಿ ಎರಡನೆಯ ಹೆಜ್ಜೆಯಾಗಿತ್ತು.

ಯೋಸೇಫನು ಫರೋಹನ ಪಾನದಾಯಕನಿಗೆ ಸಹಾಯ ಮಾಡಿದ್ದನ್ನು ಆತನು ಎರಡು ವರುಷ ಮರೆತುಬಿಡುವಂತೆ ದೇವರು ಅನುಮತಿಸಿದ್ದು ದೇವರ ಯೋಜನೆಯಲ್ಲಿ ಮೂರನೆಯ ಹೆಜ್ಜೆಯಾಗಿತ್ತು. “ಆದಾಗ್ಯೂ ಮುಖ್ಯ ಪಾನದಾಯಕನು ಯೋಸೇಫನನ್ನು ನೆನಪುಮಾಡದೇ ಮರೆತುಬಿಟ್ಟನು. ಎರಡು ವಷ೯ಗಳಾದ ಮೇಲೆ ಫರೋಹನಿಗೆ ಕನಸು ಬಿತ್ತು. .....ಹೀಗಿರುವಾಗ ಪಾನದಾಯಕರಲ್ಲಿ ಮುಖ್ಯಸ್ಥನು ಫರೋಹನಿಗೆ ......"(ಆದಿ 40:23. :41:1,9).

ದೇವರ ವೇಳಾ ಪಟ್ಟಿಯ ಪ್ರಕಾರ, ಆ ಸಮಯದಲ್ಲಿ ಯೋಸೇಫನು ಸೆರೆಮನೆಯಿಂದ ಬಿಡುಗಡೆ- ಹೊಂದಬೇಕಾಗಿತ್ತು. ಯೆಹೋವನ ವಾಕ್ಯವು ನೆರವೇರುವವರೆಗೆ ಅವನು ಮಾತಿನಿಂದ ಪರೀಕ್ಷಿಸಲ್ಪಟ್ಟನು. ಅರಸನು ಕಳುಹಿಸಿ ಅವನನ್ನು ಬಿಡಿಸಿದನು. ಜನಗಳ ಅಧಿಪತಿಯು ಅವನನ್ನು ಬಿಡುಗಡೆ ಮಾಡಿದನು. ((ಕೀತ೯ನೆ 105:19,20) ಈಗ ಯೋಸೇಫನು 30 ವಷ೯ದವನಾದನು. ದೇವರ ಸಮಯವು ಬಂದಿತು. ಹೀಗಾಗಿ ದೇವರು ಫರೋಹನಿಗೆ ಒಂದು ಕನಸು ಬಿಳುವಂತೆ ಮಾಡಿದನು. ಮತ್ತು ದೇವರು ಫರೋಹನ ಪಾನದಾಯಕನಿಗೆ ಯೋಸೇಫನು ಕನಸಿನ ಅಥ೯ವನ್ನು ಹೇಳಬಲ್ಲನು ಎಂಬುದನ್ನು ಸಹ ನೆನಪಿಸಿ- ಕೊಟ್ಟನು. ಹೀಗಾಗಿ ಯೋಸೇಫನು ಫರೋಹನನ ಸನ್ನಿಧಿಗೆ ಬಂದನು. ಮತ್ತು ಐಗುಪ್ತ ದೇಶದ ಮಂತ್ರಿಯಾಗಿ ನೇಮಿಸಲ್ಪಟ್ಟನು. ದೇವರು ಯೋಸೇಫನ ಜೀವಿತದಲ್ಲಿ ನಡೆಸಿದಂತ ಸಮಯವು ಸರಿಯಾಗಿರಲಿಲ್ಲವೇ!!!!

ದೇವರು ಈ ಮಾಗ೯ವಾಗಿ ಏಪ೯ಡಿಸಿದ ಸಂಗತಿಗಳು ನಾವು ಎಂದೂ ಯೋಚಿಸಿರಲಿಲ್ಲ. ನಮಗೆ ಯೋಸೇಫನ ಜೀವಿತದ ಕುರಿತಾಗಿ ಯೋಜನೆ ಮಾಡುವದಕ್ಕೆ ಶಕ್ತಿಯಿದ್ದರೆ, ಯೋಸೇಫನಿಗೆ ಜನರು ಯಾವ ಕೇಡನ್ನು ಹಾಗೂ ಹಾನಿಯನ್ನು ಮಾಡದಂತೆ ಬಹುಶಃ ನಾವು ತಪ್ಪಿಸುತ್ತಿದ್ದೆವು. ಆದರೆ ದೇವರು ಮಾಡಿದಂಥ ಮಾಗ೯ ಅದು ಉತ್ತಮವಾಗಿತ್ತು.

ಜನರು ಕೆಟ್ಟದ್ದನ್ನು ನಮಗೆ ಮಾಡುವಾಗ ಅವೆಲ್ಲವುಗಳು ದೇವರ ಯೋಜನೆಯನ್ನು ಪೂತಿ೯- ಗೊಳಿಸುವದಕ್ಕಾಗಿಯೇ ತಿರುಗುತ್ತವೆ. ಇದು ಅತೀ ಶ್ರೇಷ್ಟವಾದ ಮಹತ್ಕಾಯ೯ವಾಗಿದೆ. ದೇವರು ಸೈತಾನನ ಮೇಜುಗಳನ್ನು ತಿರುಗಿಸುವದರಲ್ಲಿ ಬಹೂ ಸಂತೋಷವುಳ್ಳವನಾಗಿದ್ದಾನೆ. ಹೀಗಾಗಿ ದೇವರಿಂದ ಆದುಕೊಳ್ಳಲ್ಪಟ್ಟವರಿಗೆ ಎಲ್ಲಾ ಕಾಯ೯ಗಳು ಒಳ್ಳೆಯದಕ್ಕಾಗಿಯೇ ಆಗುತ್ತದೆ.

ಆದುದ್ದರಿಂದ ಈ ಎಲ್ಲಾ ಸಂಗತಿಗಳನ್ನು ನಮ್ಮ ಅನುದಿನದ ಸನ್ನಿವೇಶಗಳಿಗೆ ಅನ್ವಯಿಸಿಕೊಳ್ಳೋಣ ಅಥವಾ ಹೋಲಿಸಿಕೊಳ್ಳೋಣ.

ಕೆಟ್ಟ ಜನರ ಕುರಿತಾಗಿ, ಅಸೂಯೇ ಅಥವಾ ಹೊಟ್ಟೆಕಿಚ್ಚು ಪಡುವ ಸಹೋದರರ ಕುರಿತಾಗಿ, ಸುಳ್ಳಾಗಿ ದೂರು ಹೇಳುವ ಸ್ತ್ರೀಯರ ಕುರಿತಾಗಿ, ಸಹಾಯ ಮಾಡುತ್ತೇನೆಂದು ಪ್ರಮಾಣ ಮಾಡಿ ಮರೆತು ಹೋದ ಸ್ನೇಹಿತರ ಕುರಿತಾಗಿ, ಹಾಗೂ ಅನ್ಯಾಯವಾಗಿ ಸೆರೆಮನೆಯಲ್ಲಿ ಹಾಕಿದಾಗ ಈ ಎಲ್ಲವುಗಳ ಕುರಿ- ತಾಗಿ ನಮ್ಮ ಮನೋಭಾವನೆ ಏನಾಗಿರಬೇಕು? ಈ ಎಲ್ಲಾ ಜನರನ್ನು ಅಥವಾ ಅವರು ಮಾಡುವ ಪ್ರತಿ- ಯೊಂದನ್ನು ಆಕಸ್ಮಿಕವಾಗಿಯೂ ಅಥವಾ ಉದ್ದೇಶ ಪೂವ೯ಕವಾಗಿಯೂ ದೇವರು ಸವ೯ಶಕ್ತಿಯುಳ್ಳವ- ನಾಗಿ, ಆತನ ಯೋಜನೆಯನ್ನು ನಮ್ಮ ಜೀವಿತದಲ್ಲಿ ನೇರವೇರಿಸುವದಕ್ಕಾಗಿಯೇ ಉಪ- ಯೋಗಿಸುತ್ತಾನೆಂದು ನಾವು ನಂಬುತ್ತೇವೋ? ಇದನ್ನು ಯೋಸೇಫನ ಜೀವಿತದಲ್ಲಿ ಮಾಡಿದರೆ ನಮ್ಮ ಜೀವಿತದಲ್ಲಿಯೂ ಸಹ ಇದನ್ನು ಮಾಡಲಾರನೇ? ಆತನು ನಿಜವಾಗಿಯೂ ಇದನ್ನು ಮಾಡಲು ಶಕ್ತ- ನಾಗಿದ್ದಾನೆ.

ಆದರೆ ಯೋಸೇಫನ ಜೀವಿತದ ಕುರಿತಾಗಿರುವ ದೇವರ ಯೋಜನೆಯನ್ನು ಯಾರು ತಪ್ಪಿಸ- ಬಹುದಾಗಿತ್ತು ಗೊತ್ತೇ? ಒಬ್ಬನೇ ಒಬ್ಬ ವ್ಯಕ್ತಿ-ಯಾರೆಂದರೆ ಯೋಸೇಫನು ತಾನೇ ಆಗಿದ್ದನು. ಒಂದು ವೇಳೆ ಯೋಸೇಫನು ಫರೋಹನನ ಹೆಂಡತಿಯ ಪ್ರೇರಣೆಯ ಸೆಳೆತಕ್ಕೆ ಒಳಗಾಗಿದ್ದರೆ : ಯೋಸೇಫನು ನಿಜವಾಗಿಯೂ ದೇವರಿಂದ ದೂರವಾಗಿ ಇಡಲ್ಪಟ್ಟವನಾಗಿರುತ್ತಿದ್ದನು.

ಈ ಇಡೀ ಲೋಕದಲ್ಲಿಯೇ ಒಬ್ಬ ವ್ಯಕ್ತಿ, ದೇವರು ನಿಮ್ಮ ಜೀವಿತಕ್ಕಾಗಿ ಇಟ್ಟಿರುವ ದೇವರ ಯೋಜನೆಯನ್ನು ಹಾಳುಮಾಡಿ ಕೇಡಿಸುವವನಾಗಿದ್ದಾನೆ. ಅದು ಯಾರಂದರೆ ನೀವೇ ಸ್ವತ: ಆಗಿರುತ್ತೀರಿ. ಇತರರು ಯಾರೂ ಇದನ್ನು ಮಾಡಲಾರರು. ನಿಮ್ಮ ಸ್ನೇಹಿತರು ಹಾಗೂ ನಿಮ್ಮ ವೈರಿಗಳು ಸಹ ಇದನ್ನು ಮಾಡಲಾರರು. ದೇವದೂತನಾಗಲಿ ಸೈತಾನನಾಗಲಿ ಇದನ್ನು ಮಾಡಲಾರರು. ಕೇವಲ ನೀವೇ ಇದನ್ನು ಮಾಡುವವರಾಗಿರುವಿರಿ. ಒಂದೇ ಸಾರಿ ನಾವು ಇದನ್ನು ದೃಷ್ಟಿಸುವವರಾಗಿದ್ದರೆ - ನಮಗಿರುವ ಅನೇಕ ಸಂಗತಿಗಳ ಭಯದಿಂದ ಮತ್ತು ನಮಗೆ ದ್ರೋಹ ಮಾಡಿದವರ ಮೇಲೆ ನಮ್ಮ ಮನೋಭಾವನೆಯಿಂದ ಇದು ನಮ್ಮನ್ನು ಬಿಡುಗಡೆ ಮಾಡಿ ಸ್ವತಂತ್ರಿಸುತ್ತದೆ.

ಹಳೇ ಒಡಂಬಡಿಕೆಯಲ್ಲಿ ಇನ್ನೊಂದು ಉದಾಹರಣೆಯನ್ನು ನಾವು ನೋಡುವವರಾದರೆ, ನಮ್ಮ ಮನಸ್ಸು ಈ ಸತ್ಯಕ್ಕೆ ಬಿಗಿಯಾಗಿಯೂ ಭದ್ರವಾಗಿಯೂ ನೆಲೆಗೊಳ್ಳುತ್ತದೆ.

ಎಸ್ತೇರಳ ಪುಸ್ತಕದಲ್ಲಿ - ದೇವರು ಯೆಹೂದ್ಯರನ್ನು ಕೊಲೆಗೆಯಲ್ಪಡುವದರಲ್ಲಿ ಹೇಗೆ ಅತಿಶಯವಾಗಿ ಬಿಡಿಸಿದನೆಂದು ಓದುತ್ತೇವೆ. ರಾಜನು ಒಂದು ರಾತ್ರಿ ಮಲಗದೇ ಇರುವ ಒಂದೇ ಚಿಕ್ಕ ಘಟನೆಯಿಂದ ದೇವರು ಹೇಗೆ ಇದನ್ನು ಮಾಡಿದನೆಂದು ನೋಡುವದು ಅತಿಶಯವಾದದ್ದು.

ಹಾಮಾನನು ಮತ್ತು ಅವನ ಹೆಂಡತಿಯು ಒಂದು ರಾತ್ರಿ ಯೆಹೂದ್ಯರೆಲ್ಲರನ್ನು ನಾಶಮಾಡ- ಬೇಕೆಂದು ಯೋಚಿಸಿ ಅರಸನ ಅನುಮತಿಯನ್ನು ಪಡೆದು ಮರುದಿನ ಬೆಳಿಗ್ಗೆ ಮೊದೆ೯ಕೈಯನ್ನು ಗಲ್ಲಿ- ಗೇರಿಸಬೇಕೆಂದು ಆಲೋಚಿಸಿದ್ದರು. ಹಾಮಾನನು ಮತ್ತು ಅವನ ಹೆಂಡತಿ ತಮ್ಮ ದುಷ್ಟ ಆಲೋಚನೆಯನ್ನು ಮಾಡುತ್ತಿರುವಾಗ, ದೇವರು ಮೊದೆ೯ಕೈ ಪರವಾಗಿಯೂ ಸಹ ಇದ್ದುಕೊಂಡು ತನ್ನ ಕಾಯ೯ವನ್ನು ನಡೆಸುತ್ತಿದ್ದನು. “ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ. ನಿದ್ರಿಸುವದೂ ಇಲ್ಲ" (ಕೀತ೯ನೆ 121:4)

ಆ ರಾತ್ರಿ ಅರಸನು ನಿದ್ರೆ ಮಾಡದಂತೆ ದೇವರು ತಡೆದನು.

“ಆ ರಾತ್ರಿ ಅರಸನಿಗೆ ನಿದ್ರೆ ಬರಲಿಲ್ಲ. ಆದುದ್ದರಿಂದ ಸ್ಮರಿಸತಕ್ಕ ಪೂವ೯ ವೃತ್ತಾಂತಗಳ ಗ್ರಂಥವನ್ನು ಅವನು ತರಿಸಿ ಪಾರಾಯಣಮಾಡಿಸುತ್ತಿರುವಾಗ" (ಎಸ್ತೇರ 6:1)

ರಾಜನು ಅನೇಕ ತಾಸುಗಳವರೆಗೆ ತನ್ನ ರಾಜ್ಯದ ಇತಿಹಾಸವನ್ನು ದಿನಕಳೆಯುವವರೆಗೆ ಕೇಳಿಸಿ ಕೊಂಡನು. ಆಗ ಒಂದು ಸಾರಿ ಮೊದೆ೯ಕೈ ರಾಜನನ್ನು ಮರಣದಿಂದ ತಪ್ಪಿಸಿದ್ದನೆಂದು ಪೂವ೯- ವೃತ್ತಾಂತಗಳಲ್ಲಿ ದಾಖಲಾದ ಸ್ಥಳವನ್ನು ಕಂಡು ಓದಿದಾಗ : ಅರಸನು - “ಇದಕ್ಕಾಗಿ ಮೊದೆ೯ಕೈಗೆ ಯಾವ ಸ್ಥಾನಮಾನಗಳು ದೊರಕಿದವು" ಎಂದು ತನ್ನ ಸೇವಕರಿಗೆ ಕೇಳಿದನು. ಅದಕ್ಕೆ ಸೇವಕರು “ಏನೂ ದೊರಕಲಿಲ್ಲ" ಎಂದು ಹೇಳಿದರು. ಮತ್ತು ತಿರುಗಿ ದೇವರು ನಡೆಸಿದ ಸಮಯ ಸರಿಯಾಗಿಯೇ ಇತ್ತು.

ಅದೇ ಸಮಯದಲ್ಲಿ ಹಾಮಾನನು ಮೊದೆ೯ಕೈಯನ್ನು ನೇತುಹಾಕಿಸುವದಕ್ಕೆ ಅರಸನ ಅಪ್ಪಣೆ ಪಡೆದುಕೊಳ್ಳಬೇಕೆಂದು ಅರಮನೆಯ ಹೊರಗಣ ಪ್ರಕಾರದಲ್ಲಿ ಬಂದಿದ್ದನು. ಹಾಮಾನನು ತನ್ನ ಬಾಯಿ ತೆರೆಯುವದಕ್ಕೆ ಮುಂಚೆಯೇ ಅರಸನು ಹಾಮಾನನನ್ನು ನೋಡಿ - “ಅರಸನು ಯಾವನನ್ನು ಸನ್ಮಾನಿಸ- ಬೇಕೆಂದು ಇಷ್ಟವುಳ್ಳವನಾಗಿರುತ್ತಾನೋ ಅಂಥವನಿಗೆ ಮಾಡತಕ್ಕದ್ದೇನು ಎಂದು ಹಾಮಾನನ ಅಭಿಪ್ರಾಯ ವನ್ನು ಕೇಳಿದನು.

ಹಾಮಾನನು ಸ್ವಹೊಗಳಿಕೆಯುಳ್ಳಂಥ ವ್ಯಕ್ತಿಯಾಗಿದ್ದು, ಅರಸನು ನನ್ನನ್ನಲ್ಲದೆ ಇನ್ನಾರನ್ನು ಸನ್ಮಾನಿಸುವದಕ್ಕೆ ಇಷ್ಟವುಳ್ಳವನಾಗಿರುವನು ಅಂದುಕೊಂಡು ಅತೀ ಶ್ರೇಷ್ಟ ಸವಾರಿಯ ಅಥವಾ ಮೆರವಣಿಗೆಯ ಸನ್ಮಾನವನ್ನು ಅಂಥ ಮನುಷ್ಯನಿಗೆ ಮಾಡಬೇಕೆಂದು ಸಲಹೆ ಕೊಟ್ಟನು. “ಹೋಗು ಅದನ್ನು ಬೇಗನೆ ಮೊದೆ೯ಕೈಗೆ ಮಾಡು" ಎಂದು ಅರಸನು ಅಪ್ಪಣೆ ಕೊಟ್ಟನು.

ಸೈತಾನನ ಮೇಜುಗಳನ್ನು ತಿರುಗಿಸುವದರಲ್ಲಿ ನಮ್ಮ ದೇವರು ಎಷ್ಟು ಅತಿಶಯವಾಗಿ ಅಭಿರುಚಿ- ಯುಳ್ಳವನಾಗಿದ್ದಾನೆ. ಕಡೆಗೆ ಹಾಮಾನನು ಮೊದೆ೯ಕೈಗಾಗಿ ತಾನೇ ತಯಾರಿಸಿದ ಗಲ್ಲು ಕಂಬಕ್ಕೆ ಗಲ್ಲಿಗೆ ಹಾಕಲ್ಪಟ್ಟನು. ಸತ್ಯವೇದವು ಹೇಳುತ್ತದೆ. “ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ. ಹೊರಳಿಸುವವನ ಮೇಲೆಯೇ ಕಲ್ಲು ಹೊರಳುವದು" (ಜ್ಞಾನೋ 26:27).

ಯಾವಾಗಲೂ ನಮ್ಮ ಮೇಲೆ ಕೇಡನ್ನು ಕಲ್ಪಿಸುವ ಯೋಚನೆ ಮಾಡುತ್ತಿರುವ ಸೈತಾನನಿಗೆ ಹಾಮಾನನು ಹೋಲಿಕೆಯಾಗಿದ್ದಾನೆ. ದೇವರು ಆತನನ್ನು ತಡೆಯಲಾರನು. ಯಾಕಂದರೆ ಎಷ್ಟೋ ಹೆಚ್ಚಾಗಿ ಅತಿಶಯವಾದ ಯೋಜನೆಯನ್ನು ಇಟ್ಟುಕೊಂಡಿದ್ದಾನೆ. ಸೈತಾನನ ಮೇಜುಗಳನ್ನು ಆತನ ಮೇಲೆ ತಿರುಗಿಸಲು ದೇವರು ಬಯಸುತ್ತಾನೆ. ಸೈತಾನನು ನಮಗೋಸ್ಕರ ತೋಡಿರುವ ಗುಂಡಿಯಲ್ಲಿ ಕೊನೆಗೆ ತಾನೇ ಅದರಲ್ಲಿ ಬೀಳುತ್ತಾನೆ.

ಚೆಫನ್ಯ 3:17 (ಒಂದು ಭಾಷಾಂತರದಲ್ಲಿ) “ದೇವರು ನಮಗೋಸ್ಕರ ಎಲ್ಲಾ ಸಮಯಗಳಲ್ಲಿಯೂ ಮೌನವಾಗಿ ಪ್ರೀತಿಯಿಂದ ಯೋಜನೆಮಾಡುವವನಾಗಿದ್ದಾನೆ".

ಆ ರಾತ್ರಿ ಮೊದೆ೯ಕೈ ವಿಶ್ರಾಂತಿಯುಳ್ಳವನಾಗಿ ಮಲಗಿರುವಾಗ ಹಾಮಾನನು ಮತ್ತು ಆತನ ಹೆಂಡತಿ ದುಷ್ಟಯೋಜನೆಯನ್ನು ಮೊದೆ೯ಕೈ ವಿರುಧ್ದವಾಗಿ ಮಾಡುತ್ತಿರುವಾಗ ದೇವರು ಸಹ ಮೊದೆ೯ಕೈಯನ್ನು ರಕ್ಷಿಸಲು ಯೋಜನೆಯನ್ನು ಮಾಡುತ್ತಿದ್ದನು. ಆದುದರಿಂದ ಹಾಮಾನನ ದುಷ್ಟ ಯೋಜನೆಗಳು ಮೊದೆ೯ಕೈಗೆ ತಿಳಿಯಬಂದರೂ ಮೊದೆ೯ಕೈ ವಿಶ್ರಾಂತಿಯುಳ್ಳವನಾಗಿ ನಿದ್ರಿಸುತ್ತಿದ್ದನು. ದೇವರು ಆತನ ಸಂಗಡ ಇದ್ದಿದ್ದೇಯಾದರೆ ಆತನನ್ನು ಯಾರು ಎದುರಿಸುತ್ತಾರೆ?

“ದೇವರು ನಮ್ಮ ಸಂಗಡ ಇದ್ದರೆ ನಮ್ಮನ್ನು ಎದುರಿಸುವವರು ಯಾರು"? ರೋಮಾ 8:31. ಪೇತ್ರನು ಸಹ ಮರುದಿನ ಬೆಳಿಗ್ಗೆ ಹೆರೋದನ ಮುಂದೆ ಆತನ ವಿಚಾರಣೆ ಇದ್ದರೂ ದೇವರು ತನ್ನ ವಿಷಯವಾಗಿ ಮೌನವಾಗಿ ಪ್ರೀತಿಯಿಂದ ಯೋಜನೆಯನ್ನು ಮಾಡುತ್ತಿದ್ದಾನೆಂದು ಪೇತ್ರನು ತಿಳಿದವ- ನಾಗಿದುದ್ದರಿಂದ ಸೆರೆಮನೆಯಲ್ಲಿ ವಿಶ್ರಾಂತಿಯುಳ್ಳವನಾಗಿ ನಿದ್ರಿಸುತ್ತಿದ್ದನು. ಅದೇ ಗಳಿಗೆಯಲ್ಲಿ ದೇವ- ದೂತನು ಬಂದು ಪೇತ್ರನನ್ನು ನಿದ್ರೆಯಿಂದೆಬ್ಬಿಸಿ ಆತನನ್ನು ಬಿಡಿಸಿದನು (ಅ.ಕೃ.12ನೇ ಅಧ್ಯಾಯ).

ದೇವರು ಪ್ರತಿ ಮನುಷ್ಯರ ಮೇಲೆಯೂ ಹಾಗೂ ಪ್ರತಿಯೊಂದು ಸಂಗತಿಯ ಮೇಲೆಯೂ ಪೂಣ೯ ಸವ೯ಶಕ್ತಿಯುಳ್ಳವನಾಗಿದ್ದಾನೆಂದು ನಂಬಿದರೆ, ಯಾವ ಮನುಷ್ಯನಾಗಲಿ ಅಥವಾ ದುರಾತ್ಮಗಳಾಗಲಿ ನಮ್ಮ ವಿರುಧ್ದವಾಗಿ ಯಾವ ಕೇಡನ್ನು ಬಯಸಿದರೂ ಪ್ರತಿ ರಾತ್ರಿ ನಾವು ಸುಖಕರವಾಗಿಯೂ ವಿಶ್ರಾಂತಿಯುಳ್ಳವರಾಗಿಯೂ ನಿದ್ರೆಮಾಡುತ್ತೇವೆ.

ಒಂದು ಸಾರಿ ದೇವರ ಪರಿಪೂಣ೯ತೆಯುಳ್ಳ ಸವ೯ಶಕ್ತಿಯನ್ನು ನಾವು ದೃಷ್ಟಿಸುವವರಾದರೆ, ಜನರ ಬಗ್ಗೆಯೂ ಯಾವುದೇ ಸಂಗತಿಯ ಬಗ್ಗೆಯೂ ಗುಣಗುಟ್ಟುವದನ್ನು ಹಾಗೂ ತಪ್ಪುಹೊರಿಸುವದನ್ನು ನಿಲ್ಲಿಸುತ್ತೇವೆ. ನಾವು ಇನ್ನೆಂದಿಗೂ ಸೈತಾನನಿಗಾಗಲಿ, ಅವನು ಯಾವುದೇ ಒಂದು ರೀತಿಯಿಂದ ನಮಗೆ ಹಾನಿಯನ್ನು ಮಾಡುತ್ತಾನೆ ಎಂಬುದಾಗಿ ಭಯಪಡಲಾರೆವು. ಇಹಲೋಕದಲ್ಲಿರುವವರೆಗೆ ಯಾವುದೇ ತರಹದ ರೋಗಕ್ಕಾಗಲಿ ಯಾವುದೇ ತರಹದ ಅನಾರೋಗ್ಯಕ್ಕಾಗಲಿ ಇನ್ನಾವುದಕ್ಕಾಗಲಿ ನಾವು ಭಯ- ಪಡುವ ಅವಶ್ಯಕತೆಯಿಲ್ಲ.

ಎಲ್ಲಾ ಕಾಯ೯ಗಳಿಗಾಗಿಯೂ, ಎಲ್ಲಾ ಸನ್ನಿವೇಶಗಳಿಗಾಗಿಯೂ ಹಾಗೂ ಎಲ್ಲಾ ಮನುಷ್ಯರಿಗಾಗಿಯೂ ನಾವು ಕೃತಜ್ಞತಾಸ್ತುತಿಯನ್ನು ಸಲ್ಲಿಸಬೇಕೆಂದು ಸತ್ಯವೇದವು ಹೇಳುತ್ತದೆ.

“ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸುಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರ ಮಾಡಿರಿ"(ಎಫೆಸ 5:20).

“ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸುಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ" (1ಥೆಸ 5:18).

“ಮೊಟ್ಟಮೊದಲನೆಯದಾಗಿ ನಾನು ನಿಮಗೆ ಹೇಳುವದೇನಂದರೆ, ಎಲ್ಲಾ ಮನುಷ್ಯರಿಗಾಗಿ ದೇವ- ರಲ್ಲಿ ಪ್ರಾಥಿ೯ಸಿರಿ....ಕೃತಜ್ಞತಾಸ್ತುತಿ ಮಾಡಿರಿ (1ತಿಮೊಥಿ 2:1).

ದೇವರ ಸಂಪೂಣ೯ತೆಯುಳ್ಳ ಸವ೯ಶಕ್ತಿಯನ್ನು ಕಂಡು ದೃಷ್ಟಿಸಿದರೆ ಮಾತ್ರ ಇದನ್ನು ಅಥ೯- ಗಭಿ೯ತವಾಗಿ ನಾವು ಮಾಡುವವರಾಗುತ್ತೇವೆ. ಯೇಸುವನ್ನು ಯೂದ ಹಿಡಿದುಕೊಟ್ಟ. ಪೇತ್ರ ಆತನನ್ನು ಅಲ್ಲಗಳೆದ. ಆತನ ಶಿಷ್ಯರು ಆತನನ್ನು ಬಿಟ್ಟು ಓಡಿಹೋದರು. ಬಹು ಜನರ ಗುಂಪು ಆತನಿಗೆ ವಿರುಧ್ದವಾಗಿ ನಿಂತಿತು. ಅನ್ಯಾಯವಾಗಿ ಹಿಡುಕೊಟ್ಟರು. ದೂಷಿಸಿದರು. ಶಿಲುಬೆಗೇರಿಸಲು ಒಪ್ಪಿಸಿದರು. ಆದರೂ ಕಲ್ವಾರಿಯ ಹಾದಿಯಲ್ಲಿ ಯೇಸು ಅವರ ಕಡೆ ತಿರುಗಿಕೊಂಡು ಹೇಳಿದ್ದೇನಂದರೆ - “ನನಗೋಸ್ಕರ ಅಳಬೇಡಿರಿ ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ" (ಲೂಕ 23:28).

ಆತನಲ್ಲಿ ಯಾವ ರೀತಿಯ ಸ್ವ ಅನುಕಂಪವೆಂಬ ಸುಳಿವು ಇರಲಿಲ್ಲ.

ಆತನು ಕುಡಿಯುವ ಪಾತ್ರೆ ತಂದೆಯಿಂದ ಕಳುಹಿಸಲ್ಪಟ್ಟಿದೆ ಎಂದು ತಿಳಿದಿದ್ದನು. ಯೂದನು ಕೇವಲ ಆ ಪಾತ್ರೆಯನ್ನು ತೆಗೆದುಕೊಂಡು ಬಂದ ದೂತನಾಗಿದ್ದನು. ಆದುದ್ದರಿಂದಲೇ ಆತನು ಯೂದ- ನನ್ನು ಪ್ರೀತಿಯಿಂದ ದೃಷ್ಟಿಸಿ “ಸ್ನೇಹಿತನೇ" ಎಂದು ಕರೆದ. ದೇವರ ಸವ೯ಸಂಪೂಣ೯ತೆಯುಳ್ಳ ಆತನ ಸವ೯ಶಕ್ತಿಯಲ್ಲಿ ನಿಮಗೆ ಪೂಣ೯ ನಂಬಿಕೆಯಿರದೇ ಇದ್ದರೆ ನೀವು ಇದನ್ನು ಮಾಡಲು ಸಮಥ೯ವುಳ್ಳವರಾಗಿರುವದಿಲ್ಲ.

ಅದಕ್ಕೆ ಯೇಸು ಪಿಲಾತನಿಗೆ-“ಮೇಲಣದಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ".

ಈ ಒಂದು ಭರವಸೆಯು ಯೇಸುವನ್ನು ಈ ಲೋಕದಲ್ಲಿ ರಾಜನಂತೆಯೂ ಘನತೆಯಲ್ಲಿಯೂ ನಡೆಯುವಂತೆ ಮಾಡಿತು. ಆತನು ಇದೇ ಆತ್ಮೀಕ ಘನತೆಯಲ್ಲಿ ಜೀವಿಸಿದನು. ಇದೇ ಆತ್ಮೀಕ ಘನತೆ- ಯಲ್ಲಿಯೇ ಸತ್ತನು. ಯೇಸು ನಡೆದಂತೆಯೇ ನಾವು ನಡೆಯಲು ಈಗ ಕರೆಯಲ್ಪಟ್ಟಿದ್ದೇವೆ. ಪೊಂತಿಪಿಲಾತನ ಮುಂದೆ ಶ್ರೇಷ್ಟ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಅರಿಕೆಮಾಡಿದಂತೆಯೇ ನಾವು ಸಹ ಅಪನಂಬಿಕೆಯುಳ್ಳ ಈ ಕೆಟ್ಟಸಂತತಿಯ ಮುಂದೆ ನಮ್ಮ ಅರಿಕೆಯನ್ನು ಮಾಡುವವರಾಗಿರಬೇಕು.

ಪೌಲನು 1 ತಿಮೊಥಿ 6:13-14 ರಲ್ಲಿ ಬರೆಯುವಾಗ “ಸವ೯ ಸೃಷ್ಟಿಗೆ ಜೀವಾದಾರಕನಾದ ದೇವರ ಮುಂದೆಯೂ ಪೊಂತಿ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ - ನಮ್ಮ ಕತ೯ನಾದ ಯೇಸುಕ್ರಿಸ್ತನು ಪ್ರತ್ಯಕ್ಷನಾಗುವ ತನಕ ನೀನು ಆತನು ಆಜ್ಞಾಪಿಸಿದ್ದನ್ನೆಲ್ಲವನ್ನು ಸುವಾತೆ೯ಯ ವಿಧಿಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತನಾಗಿಯೂ ಕಾಪಾಡಬೇಕು".

ನಾವು ಈಗಾಗಲೇ ನೋಡಿಕೊಂಡಂತದ್ದೇನಂದರೆ ದೇವರು ಒಳ್ಳೇಯದಕ್ಕಾಗಿಯೇ ಆತನ ಕಾಯ೯- ವನ್ನು ಸಾಧಿಸಿ, ಆತನ ಸ್ವಭಾವದಲ್ಲಿಯೂ ಆತನ ಪವಿತ್ರತೆಯಲ್ಲಿಯೂ ನಾವು ಪಾಲುಗಾರರಾಗ- ಬೇಕೆಂಬುದೇ ಆತನ ಮುಖ್ಯ ಉದ್ದೇಶವಾಗಿದೆ. ಆತನ ಆಶ್ಚಯ೯ಕರವಾದ ಸವ೯ಶಕ್ತಿಯಿಂದ ನಮ್ಮ ಹಾದಿಯಲ್ಲಿ ಬರುವ ಪ್ರತಿಯೊಬ್ಬರನ್ನು ಆತನ ಉದ್ದೇಶವನ್ನು ಪೂತಿ೯ಗೊಳಿಸುವದಕ್ಕಾಗಿ ಉಪ- ಯೋಗಿಸುತ್ತಾನೆ. ಅದಕ್ಕಾಗಿಯೇ ನಾವು ಎಲ್ಲಾ ಮನುಷ್ಯರಿಗಾಗಿ ಕೃತಜ್ಞತೆಯನ್ನು ಸಲ್ಲಿಸಬೇಕು.

ತೊಂದರೆಕೊಡುವ ನೆರೆಹೊರೆಯವರನ್ನು, ಪದೇ ಪದೇ ತಪ್ಪುಕಂಡು ಹಿಡಿಯುವ ಸಂಭಂದಿಕರನ್ನು, ಬಲತ್ಕಾರವಾಗಿ ಬಳಲಿಸುವ ಅಧಿಕಾರಿಯನ್ನು ನಿಮಗೆ ದೇವರು ಯಾಕೆ ಅನುಮತಿಸುತ್ತಾನೆ? ದೇವರು ಅವರನ್ನು ಸುಲಭವಾಗಿ ತೆಗೆಯುತ್ತಾನೆ. ಅಥವಾ ಅವರ ಜೀವಿತವನ್ನೇ ತೆಗೆದು ನಿಮ್ಮ ಜೀವಿತವನ್ನು ಸುಖಕರವಾಗಿ ಮಾಡುತ್ತಾನೆ. ಆದರೆ ದೇವರು ಈ ರೀತಿಯಾದ ಯಾವುದೇ ಸಂಗತಿಯನ್ನಾಗಲಿ, ಕಾಯ೯ವನ್ನಾಗಲಿ ಮಾಡಬಲ್ಲನು. ಯಾಕೆ? ಯಾಕಂದರೆ, ದೇವರು ನಿಮ್ಮನ್ನು ಶುಧ್ದಮಾಡುವ- ದಕ್ಕಾಗಿಯೇ ಅವರನ್ನು ಉಪಯೋಗಿಸುತ್ತಾನೆ. ಅಷ್ಟೆ ಅಲ್ಲದೇ ಅವರನ್ನು ಸಹ ನಿಮ್ಮಿಂದ ರಕ್ಷಿಸ- ಬೇಕೆಂದಿದ್ದಾನೆ. ನಮ್ಮ ಜೀವಿತವು ಯಾವುದೇ ತರಹದ ಜನರ ಮೇಲೆ ಆತುಕೊಂಡಿರದೆ (ಮನೆಯಲ್ಲಾಗಲಿ, ಆಫೀಸಿನಲ್ಲಿಯಾಗಲಿ, ಬೇರೆ ಎಲ್ಲಿಯಾದರೂ) ದೇವರ ಮೇಲೆ ಮಾತ್ರ ಆತುಕೊಂಡಿರುವದಕ್ಕಾಗಿ ದೇವರಿಗೆ ಸ್ತೋತ್ರ. ನಮ್ಮ ಜಯವು ಸಂಪೂಣ೯ವಾಗಿ ದೇವರ ಕೃಪೆಯ ಮೇಲೆ ಆತುಕೊಂಡಿದೆ. ನಮ್ಮನ್ನು ನಾವು ತಗ್ಗಿಸಿಕೊಳ್ಳುವದಾದರೆ, ಆ ಕೃಪೆ ಎಲ್ಲಾ ಸನ್ನಿವೇಶಗಳಲ್ಲಿ ನಮ್ಮದಾಗುತ್ತದೆ. ಹಲ್ಲೆಲ್ಲೂಯಾ!

ಅಧ್ಯಾಯ 10
ನಂಬಿಕೆ ದೇವರಲ್ಲಿಯೋ ಅಥವಾ ಹಣದಲ್ಲಿಯೋ?

ಹಣವು ಇಹಲೋಕದಲ್ಲಿ ಬಹು ಶಕ್ತಿಯುಳ್ಳದ್ದಾಗಿದೆ. ಆದುದರಿಂದ ಕೇವಲ ಇಬ್ಬರು ಯಜ- ಮಾನರು ಮಾತ್ರ ನಮ್ಮ ಸೇವೆಯನ್ನು ಬಯಸುವವರಾಗಿದ್ದಾರೆಂದು ಯೇಸು ಹೇಳಿದನು.

ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೇ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರ ಮಾಡು- ವನು. ನೀವು ದೇವರನ್ನೂ ಧನವನ್ನೂ ಕೂಡಾ ಸೇವಿಸಲಾರಿರಿ (ಲೂಕ: 16:13).

ಲೋಕವು ಹಣದಲ್ಲಿರುವ ಶಕ್ತಿಯನ್ನು ನಂಬಿ ಹೇಳುತ್ತದೆ, “ಹಣವು ಎಲ್ಲವನ್ನು ಅಥವಾ ಯಾವು- ದನ್ನಾದರೂ ಮಾಡಬಹುದು" ಎಂದು, ಆದರೆ ನಾವು ವಿಶ್ವಾಸಿಗಳಾಗಿ ಹೇಳುತ್ತೇವೆ “ದೇವರು ಎಲ್ಲವನ್ನು ಅಥವಾ ಯಾವುದನ್ನಾದರೂ ಮಾಡಲು ಶಕ್ತನಾಗಿದ್ದಾನೆ" ಎಂದು. ಆದರೆ ಅನೇಕ ಸಂದಭ೯ಗಳಲ್ಲಿ ಸತ್ಯ- ದೇವರಲ್ಲಿ ಹಾಗೂ ಜೀವಿಸುವ ದೇವರಲ್ಲಿ ನಮಗಿರುವ ನಂಬಿಕೆಗಿಂತಲೂ ಆ ಅಪನಂಬಿಕೆಯುಳ್ಳ ಅವಿಶ್ವಾಸಿಗಳು ತಮ್ಮ ದೇವರಲ್ಲಿ (ಹಣದಲ್ಲಿ) ಹೆಚ್ಚಾದ ನಂಬಿಕೆಯನ್ನು ಇಟ್ಟಿದ್ದಾರೆ. ಇಹಲೋಕದಲ್ಲಿ ನಾವು ಪ್ರತಿದಿನ ಹಣದ ವಿಷಯದಲ್ಲಿ ವ್ಯವಹರಿಸುವದರಿಂದ ಈ ಒಂದು ಕ್ಷೇತ್ರದಲ್ಲಿ ಜಯವನ್ನು ಸಂಪಾದಿಸುವದು ಅವಶ್ಯವಾಗಿದೆ.

ಹಣವು ಮಹತ್ತಾದದ್ದನ್ನು ಮಾಡುತ್ತದೆ. ಎಂದು ಲೋಕವು ನಂಬುತ್ತದೆ. ನಮ್ಮ ಬಗ್ಗೆ ಏನು? ಹಣವು ಮಹತ್ತಾದದ್ದನ್ನು ಮಾಡುವದಕ್ಕಿಂತಲೂ ನಮ್ಮ ದೇವರು ಎಷ್ಟೋ ಹೆಚ್ಚಾಗಿ ಮಹತ್ತಾದದ್ದನ್ನು ಮಾಡ- ಲಾರನೋ? ಆದರೆ ನಮ್ಮ ದೇವರು ನಮಗೆ ನಂಬಿಕೆ ಇರದೇ ಹೋದರೆ ಆತನು ನಮ್ಮ ಪರವಾಗಿ ಒಂದನ್ನೂ ಮಾಡಲಾರನು. ಇಡೀ ಜಗತ್ತಿನಲ್ಲಿಯೇ ಇಬ್ಬರು ವ್ಯಕ್ತಿಗಳಿಂದ ಅಸಾಧ್ಯವಾದಂಥ ಕಾಯ೯ ಯಾವುದೂ ಇಲ್ಲವೆಂದು ಯೇಸು ಹೇಳಿದ್ದಾನೆ. ಒಬ್ಬನು ದೇವರು ಆಗಿದ್ದಾನೆ. ಇನ್ನೊಬ್ಬನು ನಂಬಿಕೆಯುಳ್ಳ ವಿಶ್ವಾಸಿ.

“ದೇವರಿಗೆ ಎಲ್ಲವೂ ಸಾಧ್ಯ.......ನಂಬುವವನಿಗೆ ಎಲ್ಲಾ ಆಗುವದು" (ಮಾಕ೯ 10:27, 9:23).

ದೇವರಿಗೆ ಅಸಾಧ್ಯವಾದದ್ದು ಒಂದೂ ಇಲ್ಲ. ಹಾಗೂ ನಂಬಿಕೆಯಿರುವ ವ್ಯಕ್ತಿಗೂ ಸಹ ಅಸಾಧ್ಯ ವಾದದ್ದು ಒಂದೂ ಇಲ್ಲ. ಈ ರೀತಿಯಾಗಿರುವದು ಅತಿಶಯವಾದದ್ದು. ನಂಬಿಕೆ- ಯಲ್ಲಿರುವ ಬಲವು, ಸವ೯ಶಕ್ತನಾದ ದೇವರ ಬಲಕ್ಕೆ ನಮ್ಮನ್ನು ಹೋಲಿಸುತ್ತದೆ. ಇಂಥಹ ನಂಬಿಕೆ- ಯಿಂದ ನಮ್ಮ ಸುತ್ತಲೂ ಇರುವ ಲೋಕಕ್ಕೆ ದೇವರು ಹಣಕ್ಕಿಂತಲೂ ದೊಡ್ಡವನಾಗಿದ್ದಾನೆ ಹಾಗೂ ಶ್ರೇಷ್ಟನಾಗಿದ್ದಾನೆ ಎಂದು ತೋರಿಸಿಕೊಡಬೇಕು.

ಬೆಂಗಳೂರಿನಲ್ಲಿ ಅನ್ಯೋನ್ಯತೆಗಾಗಿ ಕಟ್ಟಡವನ್ನು ಕಟ್ಟುವದಕ್ಕಾಗಿ ಸಿಮೆಂಟಗೋಸ್ಕರ ಸರಕಾರದವರ ಅನುಮತಿಯನ್ನು ಪಡೆಯಲು ಹೋದ ಘಟನೆಯನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಸರಕಾರದ ಕಛೇರಿಯಲ್ಲಿ ಸಂಭಂದಪಟ್ಟ ಅಧಿಕಾರಿಯನ್ನು ಬೇಟಿಯಾದಾಗ, ಆ ಅಧಿಕಾರಿ “ಮುಂದಿನ ವಾರ ಬನ್ನಿರಿ". ಎಂದು ಹೇಳಿ ನನ್ನನ್ನು ಕಳುಹಿಸಿದರು. ಮುಂದಿನ ವಾರ ನಾನು ಹೋದಾಗ ಆ ಅಧಿಕಾರಿ “ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಬನ್ನಿರಿ" ಎಂದು ಹೇಳಿದರು. ಇದೇ ರೀತಿ ಅನೇಕ ಸಾರಿ ನಡೆಯುತ್ತಾ ಇತ್ತು. ಸರಕಾರದ ಕಛೇರಿಯ ವ್ಯವಹಾರದಲ್ಲಿ ಸ್ವಲ್ಪ ಅನುಭವವುಳ್ಳ ವ್ಯಕ್ತಿ ನನ್ನನ್ನು ಬೇಟಿಯಾಗಿ - ಆ ಅಧಿಕಾರಿ ನಿಮ್ಮಿಂದ ಪರೋಕ್ಷವಾಗಿ ಲಂಚವನ್ನು ಕೇಳುತ್ತಿದ್ದಾರೆಂದು ಹೇಳಿದ. ಲಂಚವನ್ನು ಕೊಡುವ ಪ್ರಶ್ನೆಯೇ ಅಲ್ಲಿ ಇರಲಿಲ್ಲ. ಅದಕ್ಕಾಗಿಯೇ ಪ್ರಾಥಿ೯ಸಿದೆವು. ಆ ಅಧಿಕಾರಿಯ ಹತ್ತಿರ ಪದೇ ಪದೇ ಹೋಗುವದರ ಮೂಲಕವಾಗಿ ನಾನು ಬಹಳಷ್ಟು ತಾಳ್ಮೆಯನ್ನು ಕಲಿತೆ. ಕಡೆಗೆ ಕೆಲವು ತಿಂಗಳ ತರುವಾಯ ನಮಗೆ ಅನುಮತಿ ಸಿಕ್ಕಿತು. ನಾನು ಕೇವಲ ಸಿಮೆಂಟಗಾಗಿ ಮಾತ್ರ ಅರಿಕೆ ಮಾಡಿದ್ದೆ ಅಥವಾ ಅಜಿ೯ ಸಲ್ಲಿಸಿದ್ದೆ. ಆದರೆ ಅದರೊಟ್ಟಿಗೆ ನನಗೆ ತಾಳ್ಮೆಯು ಸಹ ಸಿಕ್ಕಿತು. ದೇವರು ಯಾವಾಗಲೂ ನಾವು ಕೇಳುವುದಕ್ಕಿಂತ ಹೆಚ್ಚಾಗಿಯೇ ಕೊಡುತ್ತಾನೆ. ಹಲ್ಲೆಲೂಯಾ!!

ದೇವರು ನನ್ನನ್ನು ತನ್ನ ಸ್ವಭಾವದಲ್ಲಿ (ತಾಳ್ಮೆ) ಪಾಲುಗಾರರನ್ನಾಗಿ ಮಾಡುವದಕ್ಕಾಗಿ ಕೊಟ್ಟ ಆ ಅಧಿಕಾರಿಯನ್ನು ಉಪಯೋಗಿಸಿದ್ದು ಎಷ್ಟು ಅತಿಶಯವಲ್ಲವೇ! ಆ ವ್ಯಕ್ತಿಗೆ ನಾನು ಲಂಚವನ್ನು ಕೊಟ್ಟಿದ್ದರೆ ಎಷ್ಟೋ ಬೇಗನೆ ನನಗೆ ಸಿಮೆಂಟ ಸಿಕ್ಕಿರುತಿತ್ತು. ಆದರೆ ನನಗೆ ತಾಳ್ಮೆಯು ಸಿಕ್ಕುತ್ತಿರಲಿಲ್ಲ. ಆ ರೀತಿ- ಯಾಗಿರುವದೇ ದೇವರ ಮಾಗ೯. ನಾವು ಆತನನ್ನು ಸನ್ಮಾನಿಸುವುದಾದರೆ, ಆತನು ನಮ್ಮನ್ನು ಸನ್ಮಾನಿಸುತ್ತಾನೆ.

“ಕತ೯ನು ಇಂತೆನ್ನುತ್ತಾನೆ - ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುತ್ತೇನೆ" (1 ಸಮು 2;30)

ದೇವರ ಚಿತ್ತದ ಹೊರತಾಗಿ ಬೇರೆ ಯಾವ ಗುರಿಯು ನಮ್ಮ ಜೀವಿತದಲ್ಲಿರದಿದ್ದರೆ, ನಮಗೆ ಯಾವ ಸಮಸ್ಯೆಯಿರದು.

ಆ ಸಮಯದಲ್ಲಿ ನಾವು ಸಭೆಯಲ್ಲಿ ಬಯಸಿದ್ದಂಥದ್ದು “ಸಿಮೆಂಟ" ಮಾತ್ರ. ನಾವು ಅನ್ಯೋನ್ಯತೆ- ಯಾಗಿ ಕೂಡಲು ಒಂದು ಕಟ್ಟಡವನ್ನು ದೇವರು ಕೊಡಲು ಬಯಸದಿದ್ದರೆ, ನಮಗೆ ಕಟ್ಟಡವು ಬೇಕಾಗಿರಲಿಲ್ಲ. ದೇವರ ಸಮಯಕ್ಕಿಂತ ಮೊದಲು ನಮಗೆ ಕಟ್ಟಡವು ಸಹ ಬೇಕಾಗಿರಲಿಲ್ಲ. ಹೀಗಾಗಿ ಸಿಮೆಂಟನ ಅನುಮತಿ ಪಡೆಯಲು ನಾಲ್ಕು ವಷ೯ಗಳು ಹಿಡಿದರೂ, ನಾವು ಅದಕ್ಕಾಗಿ ಕಾದೆವು. ದೇವರ ವೇಳಾಪಟ್ಟಿ ಯಾವಾಗಲೂ ಸರಿಯಾದದ್ದು, ದೇವರು ಯಾವಾಗಲೂ ಸಮಯಕ್ಕೆ ಸರಿಯಾಗಿದ್ದಾನೆ, ಆತನು ಎಂದೂ ತಡಮಾಡುವವನಲ್ಲ.

ದೇವರು ಯಾವ ದಿನದಂದು ನಮಗೆ ಸಿಮೆಂಟ ಬೇಕೆಂದು ನಿಧ೯ರಿಸಿದ್ದನೋ ಅದೇ ದಿನದಂದು ನಮಗೆ ಸಿಮೆಂಟ ದೊರಕಿತು. ದೇವರ ವೇಳಾಪಟ್ಟಿಯ ಪ್ರಕಾರ ಲೋಕದ ಯಾವ ಶಕ್ತಿಯು ಸಹ ಅದು ದೊರಕದಂತೆ ನಿಲ್ಲಿಸಲಾಗಲಿಲ್ಲ. ಆದುದ್ದರಿಂದ ದೇವರ ಸಮಯಕ್ಕಾಗಿ ನಾವು ಕಾದಿರಲು ಸಿದ್ದರಾಗಿದ್ದರೆ ಆತನು ನಮ್ಮ ಎಲ್ಲಾ ಅಧಿಕಾರಿಗಳನ್ನು ತನ್ನ ಸಮಯದಲ್ಲಿ ತನ್ನ ಮಾಗ೯ದಲ್ಲಿ ವ್ಯವಹರಿಸುವದನ್ನು ನಾವು ನೋಡುತ್ತೇವೆ.

ತಾಳ್ಮೆಯಿಲ್ಲದೆಯಿರುವದರ ಮೂಲಕವಾಗಿ ಸೌಲನು ದೇವರ ರಾಜ್ಯವನ್ನು ಕಳೆದುಕೊಂಡನು. “ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿವಸ ಇದ್ದರೂ ಸಮುವೇಲನು ಬರಲಿಲ್ಲ. ಅಷ್ಟರಲ್ಲಿ ಜನರು ಚದುರಿ ಹೋದರು. ಆಗ ಸೌಲನು ಜನರಿಂದ ಸವಾ೯ಗ ಹೋಮಕ್ಕೂ ಸಮಾಧಾನ ಯಜ್ಞಕ್ಕೂ ಬೇಕಾದದ್ದನ್ನು ತರಿಸಿ ಸವಾ೯ಗ ಹೋಮವನ್ನು ಅಪಿ೯ಸಿದನು. ಅದು ತೀರುವಷ್ಟರಲ್ಲೆ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವದಕ್ಕೋಸ್ಕರ ಎದುರಿಗೆ ಹೋಗಲು ಸಮುವೇಲನು ಅವನನ್ನು - “ಇದೇನು ನೀನು ಮಾಡಿದ್ದು", ಎಂದು ಕೇಳಲು “ಜನರು ಚದುರಿ- ಹೋಗುವದನ್ನು, ನೀನು ನಿಯಮಿತ ಕಾಲದಲ್ಲಿ ಬಾರದೇ ಇರುವದನ್ನು, ಫಿಲಿಷ್ಟಿಯರು ಮಿಷ್ಮಾಶಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವದನ್ನು ನೋಡಿ ನಾನು ಕತ೯ನಿಗೆ ಶಾಂತ್ಯಪ೯ಣೆಯನ್ನು ಸಲ್ಲಿಸುವುದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟು, ಸವಾ೯ಗ ಹೋಮವನ್ನು ಸಮಪಿ೯ಸುವದಕ್ಕೆ ಮುಂಗೊಂಡೆನು" ಅಂದನು. ಆಗ ಸಮುವೇಲನು, - ನೀನು ಬುಧ್ದಿಹೀನ ಕಾಯ೯ವನ್ನು ಮಾಡಿದೆ. ನೀನು ನಿನ್ನ ದೇವರಾದ ಕತ೯ನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. ಈಗ- ಲಾದರೂ ನಿನ್ನ ಅರಸುತನವು ನಿಲ್ಲುವದಿಲ್ಲ. ನೀನು ಕತ೯ನ ಆಜ್ಞೆಯನ್ನು ಕೈಕೊಳ್ಳದೇ ಹೋದದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ, ಎಂದು ಹೇಳಿದನು" (1ಸಮು 13:8-14).

ಅನೇಕರು ತಾಳ್ಮೆಗೆಡುವದರ ಮೂಲಕವಾಗಿ ದೇವರ ಉತ್ತಮವಾದದ್ದನ್ನು ಕಳಕೊಂಡಿದ್ದಾರೆ. ನೀವು ಸತ್ಯಕ್ಕಾಗಿಯೂ ಆತನ ನೀತಿಗಾಗಿಯೂ ಮತ್ತು ಆತನ ಸಮಯಕ್ಕಾಗಿ ನೀವು ಕಾದಿರುವದಕ್ಕೆ ಮನಸ್ಸು ಮಾಡುವದಾದರೆ, ಯಾವ ಕೆಟ್ಟ ಅಧಿಕಾರಿಯೂ ಸಹ ದೇವರು ನಿಮ್ಮ ಜೀವಿತಕ್ಕಾಗಿ ಇಟ್ಟ ಯೋಜನೆಗೆ ಅಡ್ಡಿ ಯಾಗಲಾರನು.

“ನಂಬಿಕೆ ಮತ್ತು ತಾಳ್ಮೆಯಿಂದ ವಾಗ್ದಾನಗಳಿಗೆ ಬಾಧ್ಯರಾಗುತ್ತೇವೆ" (ಇಬ್ರಿಯ 6:12).

ನಮ್ಮ ಮನೆಯ ಅವಶ್ಯಕತೆಗಳಲ್ಲಿ ಹಣದ ವಿಷಯ ಬಂದಾಗ ಇದೇ ನಿಯಮ ಅನ್ವಯಿಸುವಂಥದ್ದಾಗಿದೆ. ನಮ್ಮ ನಂಬಿಕೆಯು ದೇವರಲ್ಲಿದೆಯೇ ಹೊರತು ಹಣದಲ್ಲಿಲ್ಲ. ದೇವರ ರಾಜ್ಯದ ನಿಯಮಗಳ ಪ್ರಕಾರ ನಿಮ್ಮ ಮನೆಯನ್ನು ನೀವು ನಡೆಸುವದಾದರೆ, ನಿಮ್ಮ ಅವಶ್ಯಕತೆಗಳಿಗೆ ಯಾವಾಗಲೂ ನಿಮಗೆ ಸಾಕಷ್ಟು ಹಣವಿರುವದು. ನೀವು ಐಶ್ವಯ೯ವಂತರಾಗದಿದ್ದರೂ, ಇತರರಲ್ಲಿ ಭಿಕ್ಷೆ ಬೇಡುವದಿಲ್ಲ.

ದಾವೀದನು ಹೇಳಿದ್ದು, “ನಾನು ಬಾಲಕನಾಗಿದ್ದೆನು ಈಗ ಮುದುಕನಾಗಿದ್ದೆನೆ. ಈ ವರೆಗೂ ನೀತಿವಂತನು ದಿಕ್ಕಿಲ್ಲದೇ ಬಿದ್ದಿರುವದನ್ನಾಗಲಿ ಅವರ ಸಂತತಿಯವರು ಭಿಕ್ಷೆ ಬೇಡಿ ತಿನ್ನುವದನ್ನಾಗಲಿ ನಾನು ನೋಡಲಿಲ್ಲ". ಕೀತ೯ನೆ 37:25.

ಯೇಸು ಅಂದದ್ದು - “ಮೊದಲು ದೇವರ ರಾಜ್ಯಕ್ಕಾಗಿಯೂ ಆತನ ನೀತಿಗಾಗಿಯೂ ತವಕ ಪಡಿರಿ. ಅವುಗಳ ಕೂಡಾ ಅವೆಲ್ಲವೂ (ಭೌತಿಕ ವಸ್ತುಗಳು) ನಿಮಗೆ ದೊರಕುವವು" (ಮತ್ತಾಯ 6:33).

ಪರಿಪೂಣ೯ಕಾಲ ಕ್ರಿಸ್ತೀಯ ಸೇವೆಯನ್ನು ಅನೇಕ ಕ್ರೈಸ್ತರು ನಂಬಿಕೆಯಿಂದ ಪ್ರಾರಂಭ ಮಾಡಿದರು. ಆದರೆ ಈಗ ಅವರು ಜಾಣತನದಿಂದ ಅವರ ಹಣದ ಅವಶ್ಯಕತೆಗಳನ್ನು ತೋರಿಸುವ ಮಾಸಿಕ “ಪ್ರಾಥ೯ನಾ ಪತ್ರ" (ಇದಕ್ಕೆ ಇನ್ನೊಂದು ಹೆಸರು ‘ಭಿಕ್ಷಾ ಪತ್ರ’) ಗಳನ್ನು ಕಳುಹಿಸುವದರ ಮುಖಾಂತರ ಗೌರವವುಳ್ಳ ಭಿಕ್ಷುಗಾರರಾಗಿ ಕೊನೆಗೊಂಡಿದ್ದಾರೆ.

ನಿಮಗೆ ನಿಜವಾಗಿಯೂ ಪ್ರೀತಿಯ ಹಾಗೂ ಸವ೯ಶಕ್ತ ತಂದೆ ಪರಲೋಕದಲ್ಲಿರುವಾಗ ಯಾಕೆ ನಿಮ್ಮ ಅವಶ್ಯಕತೆಗಳನ್ನು ಜನರಿಗೆ ತೋರಿಸುತ್ತೀರಿ? ನಮ್ಮ ಅತೀ ಚಿಕ್ಕ ವಿಷಯವಾಗಿರುವ ತಿಂಗಳಿಗೆ ಬೇಕಾದ ಅವಶ್ಯಕತೆಯ ಮೇಲೆ ದೇವರನ್ನು ಆತುಕೊಳ್ಳಲಾರದೇ ಹೋದರೆ, ನಾವು ಆತನನ್ನು ಸೇವಿಸುವದನ್ನು ಸಂಪೂಣ೯ವಾಗಿ ನಿಲ್ಲಿಸೋಣ. ಇಂಥಹ ಸನ್ನಿವೇಶಗಳಲ್ಲಿಯೇ ದೇವರು ಮತ್ತು ಹಣ ಈ ಎರಡು ನಮಗೆ ಯಜಮಾನತೆಯನ್ನು ಹೊಂದಿರುತ್ತವೆ. ಯಾರನ್ನು ನಾವು ಆತುಕೊಳ್ಳುತ್ತೇವೆ?

ದೇವರ ಅಭಿರುಚಿಯೇ ನಮ್ಮ ಅಭಿರುಚಿಯಾಗಿದ್ದರೆ,ಏನೇ ಆದರೂ ಯಾವ ಸಮಸ್ಯೆಯೂ ನಮಗೆ ಇರದು. ದೇವರು ಬಯಸದಂಥವುಗಳನ್ನು ನಾವು ಕಂಡುಕೊಳ್ಳದೆ, ಸಂಪಾದಿಸದೇ ಇರುವಾಗ ನಾವು ಯಾವಾಗಲೂ ವಿಶ್ರಾಂತಿಯಲ್ಲಿ ಇರುತ್ತೇವೆ. ದೇವರು ಅವಶ್ಯಕತೆಯಿದ್ದಲ್ಲಿ, ನಮ್ಮ ಎಲ್ಲ ಅವಶ್ಯಕತೆಗಳನ್ನು ಆಶ್ಚಯ೯ವಾಗಿ ಒದಗಿಸುತ್ತಾನೆ. ಆದರೆ ಭೌತೀಕ ವಸ್ತುಗಳ ಮೇಲಿರುವ ನಮ್ಮ ಆಶೆಯನ್ನು ಪೂರೈಸುವದಕ್ಕೆ ಒಳಗಾಗಿ ಅನೇಕ ಅವಶ್ಯವಿಲ್ಲದ ವಸ್ತುಗಳನ್ನು ಕೊಂಡುಕೊಂಡು ಸಂಪಾದಿಸುವಾಗ ಎಲ್ಲ ಸಮಯದಲ್ಲಿಯೂ ನಾವು ಸಮಸ್ಯೆಗೆ ಒಳಗಾಗುತ್ತೇವೆ.

ಇದೇ ನಂಬಿಕೆಯ ನಿಯಮವು ಜೀವಿತದ ಸಹಭಾಗಿಯನ್ನು ಕಂಡುಕೊಳ್ಳುವದರಲ್ಲಿಯೂ ಅನ್ವಯಿಸುತ್ತದೆ. “ತಂದೆ ತನ್ನ ಮಕ್ಕಳಿಗೆ ಮನೆಯನ್ನು ಐಶ್ವಯ೯ವನ್ನು ಕೊಡಬಲ್ಲನು. ಆದರೆ ದೇವರು ಮಾತ್ರ ಅವರಿಗೆ ಜ್ಞಾನವುಳ್ಳ ಹೆಂಡತಿಯನ್ನು ಅನುಗ್ರಹಿಸುವನು" (ಜ್ಞಾನೋಕ್ತಿ 19:14 - ಸಜೀವ ವಾಕ್ಯ).

ದೇವರು ಒಬ್ಬ ವ್ಯಕ್ತಿಯನ್ನು ನಿಮ್ಮ ಜೀವಿತದಲ್ಲಿ ಸಹಭಾಗಿಯನ್ನಾಗಿ ಕೊಡಲು ಯೋಜನೆ- ಯಿಟ್ಟಿರುವಾಗ ಬೇರೆ ವ್ಯಕ್ತಿ ಆತನನ್ನು/ಆಕೆಯನ್ನು ಮದುವೆಮಾಡಿಕೊಳ್ಳುವ ಅಪಾಯವಿದೆಯೋ? ದೇವರ ಸವ೯ಶಕ್ತಿಯಲ್ಲಿ ನಿಮಗೆ ನಂಬಿಕೆ ಇಲ್ಲವೋ? ಹಾಗಾದರೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಾರದು. ಹಾಗೂ ಬೇರೆಯವರನ್ನು ಸಂಪಾದಿಸಿ- ಕೊಳ್ಳಬಾರದು. ಸರಿಯಾದ ವ್ಯಕ್ತಿಯನ್ನು ದೇವರು ನಿಮಗೋಸ್ಕರ ಸಿಧ್ದಮಾಡಿ ಇಟ್ಟಿರುತ್ತಾನೆ. ನೀವು ವಿಶ್ರಾಂತಿಯಲ್ಲಿರತಕ್ಕದ್ದು.

ಆದಾಮನು ಏದೆನ ತೋಟದಲ್ಲಿ ಅಲೆದಾಡಿ ಯಾರನ್ನಾದರೂ ಮದುವೆಮಾಡಿಕೊಳ್ಳಬೇಕಾಗಿರಲಿಲ್ಲ. ಆದಾಮನು ಈ ರೀತಿಯಾಗಿ ಮಾಡಿದ್ದರೂ ಒಬ್ಬ ವ್ಯಕ್ತಿಯನ್ನು ಸಹ ಆತನು ಕಂಡುಕೊಳ್ಳುತ್ತಿರಲಿಲ್ಲ. ದೇವರು ಏನನ್ನು ಮಾಡಬೇಕಾಗಿತ್ತು. ಆತನು ಆದಾಮನಿಗೆ ಗಾಢ ನಿದ್ರೆಯನ್ನು ಬರಮಾಡಿದನು. ಯಾವಾಗ ಆದಾಮನು ವಿಶ್ರಾಂತಿಯಲ್ಲಿದ್ದನೋ ಆಗ ದೇವರು ಆತನಿಗಾಗಿ ಹೆಂಡತಿಯನ್ನು ಸಿದ್ದಮಾಡಿ- ದನು. ಆಗ ದೇವರು ಆತನನ್ನು ನಿದ್ರೆಯಿಂದೆಬ್ಬಿಸಿ ಹವ್ವಳನ್ನು ಕೊಟ್ಟನು.

ದೇವರು ನಿಮಗಾಗಿ ಮದುವೆಯ ಯೋಜನೆಯನ್ನು ಮಾಡಿದ್ದರೆ, ದೇವರು ಆದಾಮನನ್ನು ಪ್ರೀತಿಸಿ ಹವ್ವಳನ್ನು ಕೊಟ್ಟಂತೆಯೇ ನಿಮ್ಮನ್ನು ಸಹ ಆತನು ನಿಜವಾಗಿಯೂ ಸರಿಯಾದ ವ್ಯಕ್ತಿಯ ಕಡೆಗೆ ನಡಿ- ಸುವನು. ಆದರೆ ನೀವು ಆತನಲ್ಲಿ ಭರವಸೆಯನ್ನಿಡತಕ್ಕದ್ದು.

ದೇವರ ಚಿತ್ತದ ಹೊರತಾಗಿ ನಿಮ್ಮ ಜೀವಿತದಲ್ಲಿ ಯಾವ ಗುರಿ ಇಲ್ಲದಿದ್ದರೆ, ದೇವರ ಚಿತ್ತ ನೀವು ಒಬ್ಬರೇ ಇರಬೇಕೆಂದಿದ್ದರೆ, ಆಗ ನೀವು ಯಾವ ವಿಷಯದಲ್ಲಿಯೂ ಭಯಪಡಬೇಕಾದ ಅವಶ್ಯವಿಲ್ಲ. “ಕತ೯ನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾಥ೯ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋಪ೯ಡಿಸುತ್ತಾನೆ" (2 ಪೂವ೯16:9). ಎಂಥ ಅದ್ಬುತವುಳ್ಳ ದೇವರು ನಮಗಿದ್ದಾನೆ.

“ಲೋಕವನ್ನು ಜಯಿಸಿದಂತದ್ದು ನಮ್ಮ ನಂಬಿಕೆಯೇ" (1ಯೋಹಾನ 5:4).

ದೇವರ ಸವ೯ಸಂಪೂಣ೯ತೆಯುಳ್ಳ ಜ್ಞಾನದಲ್ಲಿಯೂ, ಪ್ರೀತಿಯಲ್ಲಿಯೂ, ಶಕ್ತಿಯಲ್ಲಿಯೂ ನಿಮಗೆ ನಂಬಿಕೆ ಇರುವದಾದರೆ, ನೀವು ಯಾವಾಗಲೂ ಈ ಲೋಕವನ್ನು, ಅದರ ಅಧಿಪತಿಯನ್ನು (ಇಹ- ಲೋಕಾದಿಪತಿ ಸೈತಾನನ್ನು) ಅದರ ಶಕ್ತಿ (ಹಣ, ಆಶೆ, ಮಾನ) ಗಳನ್ನು ಜಯಿಸುತ್ತೀರಿ. ದೇವರ ಸವ೯ಸಂಪೂಣ೯ತೆಯುಳ್ಳ ಶಕ್ತಿಯಲ್ಲಿಯೂ ಮತ್ತು ಆತನ ಪ್ರೀತಿಯಲ್ಲಿಯೂ ನಿಮಗೆ ನಂಬಿಕೆಯಿಲ್ಲದಿರುವದಾದರೆ ಆದಾಮನ ಮಕ್ಕಳ ಸಂಗಡ ನೀವೂ ಅವರೊಡನೆ ತೊಡಕಿನಲ್ಲಿಯೂ, ಭಕ್ತಿಹೀನತೆಯಲ್ಲಿಯೂ ಇಜ್ಜೋಡಾಗುವಿಕೆಯ ಜೀವಿತಕ್ಕೆ ಎಳೆಯಲ್ಪಡುವಿರಿ.

ಅಧ್ಯಾಯ 11
ಬಲಹೀನರಿಗೆ ದೇವರು ಸಹಾಯಿಸುತ್ತಾನೆ

“ಯಾರು ತಮಗೆ ಸಹಾಯಿಸಿಕೊಳ್ಳುತ್ತಾರೋ ಅಂಥವರಿಗೆ ದೇವರು ಸಹಾಯಿಸುತ್ತಾನೆ" ಎಂದು ಲೋಕದಲ್ಲಿ ಒಂದು ಹೇಳಿಕೆಯುಂಟು. ಆದರೆ ಸತ್ಯವೇದವು ಹೇಳುತ್ತದೆ,-‘ಯಾರು ತಮಗೆ ತಾವೇ ಸಹಾಯಿಸಿಕೊಳ್ಳಲು ಅಶಕ್ತರೋ ಅಂಥವರಿಗೆ ದೇವರು ಸಹಾಯಿಸುತ್ತಾನೆ.’ ಆತನು ಬಲಹೀನರ ಮತ್ತು ನಿಸ್ಸಾಹಾಯಕರ ದೇವರಾಗಿದ್ದಾನೆ. ದೇವರು ತನ್ನನ್ನು ತಾನೇ- “ವಿಧವೆಯರ ದೇವರು, ಅನಾಥರ ದೇವರು, ಪರದೇಶಿಗಳ ದೇವರು" ಎಂದು ಕರೆದುಕೊಂಡಿದ್ದಾರೆ.

“ನಿಮ್ಮ ದೇವರಾದ ಕತ೯ನು ದೇವಾಧಿದೇವನಾಗಿಯೂ ಕತ೯ರ ಕತ೯ನಾಗಿಯೂ ಇದ್ದಾನೆ. ಆತನು ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ. ಆತನು ತಾಯಿತಂದೆಯಿಲ್ಲದವರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದಲ್ಲಿ ಪ್ರೀತಿಯಿಂದ ಅವರಿಗೆ ಅನ್ನ ವಸ್ತ್ರಗಳನ್ನು ಕೊಡುತ್ತಾನೆ" (ಧಮೊ೯ 10:17-18).

ದೇವರು ತನ್ನನ್ನು ಐಶ್ವಯ೯ವಂಥರ ದೇವರು ಮತ್ತು ಬಲಶಾಲಿಗಳ ದೇವರು ಎಂದು ಕರೆದು- ಕೊಂಡಿಲ್ಲ. ಯಾಕಂದರೆ ಅವರು ಮಾನವಬಲವನ್ನು ಹಾಗೂ ಹಣದ ಸಹಾಯವನ್ನು ಹೊಂದಿರುವವರು.

ದೇವರು ಬಲಹೀನರ ಪಕ್ಷದಲ್ಲಿದ್ದಾನೆ. ಅಥವಾ ಬಲಹೀನರ ಪರವಾಗಿದ್ದಾನೆ. ಆದುದ್ದರಿಂದಲೇ ಆತನು ನಮಗೆ ಸಹಾಯಮಾಡುವದಕ್ಕೆ ಮುಂಚಿತವಾಗಿ ನಮ್ಮನ್ನು ಬಲಹೀನರನ್ನಾಗಿ ಮಾಡುತ್ತಾನೆ. ದೇವರು ಪೌಲನನ್ನು ಬಲಹೀನನನ್ನಾಗಿ ಮಾಡಲು ಆತನ ಮಾಂಸದಲ್ಲಿ ಒಂದು ಶೂಲವನ್ನು ಕೊಟ್ಟನು. ಹೀಗಾಗಿ ಪೌಲನು ದೇವರ ಬಲವನ್ನು ತಿಳಿದುಕೊಂಡವನಾಗಿ ಇಡೀ ಜೀವಮಾನಕಾಲವೆಲ್ಲಾ ಆತನ ಮೇಲೆ ಆತುಕೊಳ್ಳುವದಕ್ಕಾಯಿತು.

2 ಕೊರಿಂಥ 12:7-10 ಪೌಲನು ಹೇಳಿದ್ದು, “ಈ ಕಾರಣದಿಂದಲೂ ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿ- ಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು. ನಾನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂತಲೇ ಇದಾಯಿತು. ಈ ಪೀಡೆಯ ವಿಷಯದಲ್ಲಿ, ಅದು ನನ್ನನ್ನು ಬಿಟ್ಟು ಹೋಗ- ಬೇಕೆಂದು ಮೂರು ಸಾರಿ ಕತ೯ನನ್ನು ಬೇಡಿಕೊಂಡೆನು. ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ಬಲವು ಪೂಣ೯ಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾದ ನಿಭ೯ಲಾವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳ ಪಡುವೆನು.ಆದುದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ನಿಭ೯ಲಾವಸ್ಥೆಯೂ, ತಿರಸ್ಕಾರವೂ, ಕೊರತೆಯೂ, ಹಿಂಸೆಯೂ, ಇಕ್ಕಟ್ಟೂ, ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿಬ೯ಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ".

ನೀವು ಎಲ್ಲಿಯವರೆಗೆ ನಿಮ್ಮ ಆಸ್ತಿಯ ಮೇಲೆ ಮತ್ತು ಪ್ರಭಾವ ಬೀರುವ ಸ್ನೇಹಿತರ ಮೇಲೆ ಆತು- ಕೊಂಡು ನಿಮ್ಮ ಜೀವಿತವನ್ನು ಸುಖಕರವಾಗಿ ಸಾಗಿಸುತ್ತಿರುತ್ತೀರೋ ಅಲ್ಲಿಯವರೆಗೆ ದೇವರು ನಿಮ್ಮನ್ನು ನಿಮ್ಮದೇ ಆದಂತ ಮಾಗ೯ದಲ್ಲಿ ನಿದ್ರೆ ಸಾಗುವಂತೆ ನಿಮ್ಮನ್ನು ಬಿಟ್ಟು ಬಿಡುತ್ತಾನೆ. ನೀವು ಆತನ ಸಹಾಯಕ್ಕಾಗಿ ಪ್ರಾಥಿ೯ಸಿದರೂ ಆತನು ನಿಮಗೆ ಉತ್ತರವನ್ನು ದಯಪಾಲಿಸಲಾರನು. ಯಾಕಂದರೆ ಆತನು ನಿಮ್ಮನ್ನು ದೃಷ್ಟಿಸುವಾಗ ನೀವು ಕೇವಲ ಮನುಷ್ಯ ಮಾತ್ರದವರನ್ನು ಭುಜಬಲವೆಂದು ತಿಳಿದು ಅವರ ಮೇಲೆ (ಬ್ಯಾಂಕಿನಲ್ಲಿರುವ ಹಣದಲ್ಲಿ, ಪ್ರಭಾವಬೀರುವ ಮನುಷ್ಯರಲ್ಲಿ) ಆತುಕೊಂಡಿದ್ದನ್ನು ನೋಡಿದ್ದಾನೆ.

ಆದರೆ ಬಲಹೀನತೆಯ ಸ್ಥಳವನ್ನು ಆರಿಸಿಕೊಳ್ಳುವದಾದರೆ, ಅಲ್ಲಿ ನೀವು ಯಾವ ಮನುಷ್ಯರ ಸಹಾಯದ ಮೇಲೆಯೂ ಜನರ ಮೇಲೆಯೂ ನಿಮ್ಮ ಆತುಕೊಳ್ಳುವಿಕೆ ಇರಲಾರದು. ಆಗ ಇಡೀ ಲೋಕದಲ್ಲಿಯೇ ನೀವು ಆಶೀವಾ೯ದ ಹೊಂದಿದ ವ್ಯಕ್ತಿಯಾಗಿರುವಿರಿ. ಅಂದಿನಿಂದ ದೇವರು ಒಬ್ಬನೇ ನಿಮ್ಮ ಸಹಾಯಕನಾಗಿರುವನು. ಬಲಹೀನತೆಯುಳ್ಳವರಾಗಿರುವದೂ ಮತ್ತು ನಿಸ್ಸಾಹಾಯಕರಾಗಿರುವದೂ ಬಹು ಅತಿಶಯವಾದದ್ದು. ಆಗ ನಾವು ಪ್ರತಿಯೊಂದಕ್ಕೂ ದೇವರಲ್ಲಿ ಭರವಸೆ ಇಡುತ್ತೇವೆ.

ಯೆಹೂದದ ಅರಸನಾದ ಆಸನಿಗೆ ದೇವರು ಅನೇಕ ಸಾರಿ ಸಹಾಯ ಮಾಡಿದ್ದನು. ಆದಾಗ್ಯೂ ಒಂದು ಸಾರಿ ಅವನ ಕಾಲಿನಲ್ಲಿ ಬಹು ಕಠಿಣವಾದ ರೋಗವುಂಟಾದಾಗ ಅವನು ಗುಣಹೊಂದುವದಕ್ಕಾಗಿ ವೈದ್ಯರ ಮೇಲೆ ಆತುಕೊಂಡನೇ ಹೊರತು ದೇವರ ಮೇಲೆ ಆತುಕೊಳ್ಳಲಿಲ್ಲ. ಈತನ ಕುರಿತಾಗಿ ಈ ದುಃಖಕರ ಸಂಗತಿಯನ್ನು ನಾವು ಹೀಗೆ ನೋಡಬಹುದು.

“ಅವನ ಆಳ್ವಿಕೆಯ ಮೂವತ್ತೊಂಬತ್ತನೆಯ ವರುಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗವುಂಟಾಯಿತು.ಈ ರೋಗದಲ್ಲಿಯೂ ಅವನು ಕತ೯ನ ಸಹಾಯವನ್ನು ಕೋರದೇ ವೈದ್ಯರ ಸಹಾಯವನ್ನೇ ಕೋರಿದನು. ಅವನು ತನ್ನ ಆಳ್ವಿಕೆಯ ನಾಲ್ವತ್ತೊಂದನೆಯ ವರುಷದಲ್ಲಿ ತೀರಿಕೊಂಡು ಪಿತೃಗಳ ಬಳಿಗೆ ಸೇರಿದನು" (2 ಪೂವ೯ 16:12-13).

ಆಸನು ರಾಜನಾಗಿದ್ದುದರಿಂದ ಆ ಕಾಲದಲ್ಲಿ ಉತ್ತಮ ವೈದ್ಯರಿಗೆ ಕೊಡಲು ಅವನಲ್ಲಿ ಬೇಕಾದಷ್ಟು ಹಣವಿತ್ತು. ಆದರೆ ಅವನ ಆಸ್ತಿ ಮತ್ತು ಅವನ ಪ್ರಭಾವ ಬೀರುವಿಕೆಯು ಅವನನ್ನು ರೋಗದಿಂದ ಗುಣಮಾಡಲಾಗಲಿಲ್ಲ. ಅವನು ಕತ೯ನ ಮೇಲೆ ಆತುಕೊಂಡಿದ್ದೇಯಾಗಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು. ಅವನು ವೈದ್ಯರಿಂದ ಉಪಚರಿಸಿಕೊಂಡದ್ದರಲ್ಲಿ ಯಾವ ದೋಷವು ಇರಲಿಲ್ಲ. ಅವನು ವೈದ್ಯರ ಮೇಲೆ ಆತುಕೊಂಡದ್ದೇ ಎಲ್ಲಾ ದೋಷಕ್ಕೆ ಕಾರಣವಾಯಿತು.

ದೇವರು ಮಾತ್ರವೇ ನಿಮ್ಮ ಸಹಾಯಕನಾಗಿರುವ ಸ್ಥಳದಲ್ಲಿ ನೀವು ಇರುವದು ಅತೀ ಶ್ರೇಷ್ಟವಾದದ್ದು. ದೇವರ ಉತ್ತಮವಾದದ್ದನ್ನು ಹೊಂದಬೇಕೆಂದು ಬಯಸುವವರಲ್ಲಿ ನೀವು ಸಹ ಒಬ್ಬರಾಗಿದ್ದರೆ, ದೇವರು ನಿಮ್ಮನ್ನು ಆಗಾಗ ಮನುಷ್ಯರ ಭುಜಭಲದ ಮೇಲೆ ಆತುಕೊಳ್ಳುವ ಅಭ್ಯಾಸದಿಂದ ದೂರವಿಡುವದನ್ನು ನೀವು ಕಂಡುಕೊಳ್ಳುತ್ತೀರಿ. ಆತನೊಬ್ಬನನ್ನೇ ನೀವು ಆತುಕೊಳ್ಳಬೇಕೆಂಬುವದಕ್ಕೋಸ್ಕರವಾಗಿ ಆತನು ನಿಮ್ಮನ್ನು ಬಲಹೀನರನ್ನಾಗಿ ಮಾಡುತ್ತಾನೆ.

ದೇವರು ಯಾವ ರೀತಿಯಾಗಿ ಎಲೀಯನ ಸಂಗಡ ವ್ಯವಹರಿಸಿದನೆಂದು ಆಲೋಚಿಸಿರಿ. “ಇಸ್ರಾಯೇಲಿನಲ್ಲಿ ಬರಗಾಲವಿದ್ದಾಗ ದೇವರು ಕಾಗೆಯ ಮುಖಾಂತರ ಹಾಗೂ ಹಳ್ಳದ ನೀರಿನಿಂದಲೂ ಎಲೀಯನನ್ನು ಸಾಕಿ ಸಲುಹಿದನು. ‘ಆ ಹಳ್ಳದ ನೀರು ನಿನಗೆ ಪಾನವಾಗಿರುವದು. ನಿನಗೆ ಆಹಾರ ತಂದು ಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ’ ಎಂದು ಹೇಳಿದನು. ಅವನು ಕತ೯ನ ಅಪ್ಪಣೆ- ಯಂತೆ ಯೋದ೯ನಿನ ಪೂವ೯ಕ್ಕಿರುವ ಕೆರಿತ ಹಳ್ಳದಲ್ಲಿ ವಾಸಿಸಿದನು. ಕಾಗೆಗಳು ಅವನಿಗೆ ಪ್ರಾತಃಕಾಲ- ದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ ಮಾಂಸ ಇವುಗಳನ್ನು ತಂದು ಕೊಡುತ್ತಿದ್ದವು. ಅವನು ಇವುಗಳನ್ನು ತಿನ್ನುತ್ತಿದ್ದನು. ಹಳ್ಳದ ನೀರು ಅವನಿಗೆ ಪಾನವಾಗಿತ್ತು" (1 ಅರಸು 17:6-6).

ದಿನಕ್ಕೆ ಎರಡಾವತಿ೯ ಕಾಗೆಯು ಬಂದು ರೊಟ್ಟಿಯನ್ನು ಹಾಗೂ ಮಾಂಸವನ್ನು ಎಲೀಯನಿಗೆ ಕೊಡುತ್ತಿತ್ತು. ಮತ್ತು ಹಳ್ಳದಲ್ಲಿ ಕುಡಿಯಲು ಸಾಕಷ್ಟು ನೀರು ಸಹ ಇತ್ತು. ಇದು ದಿನಾಲೂ ಕ್ರಮೇಣವಾಗಿ ನಡೆಯುತ್ತಾ ಇದ್ದುದ್ದರಿಂದ ಎಲೀಯನು ದೇವರ ಮೇಲೆ ಆತುಕೊಳ್ಳುವದನ್ನು ಬಿಟ್ಟು ಬಿಟ್ಟು ಕಾಗೆಯ ಮೇಲೆ ಹಾಗೂ ಹಳ್ಳದಲ್ಲಿರುವ ನೀರಿನ ಮೇಲೆಯೂ ಆತುಕೊಳ್ಳುವ ಅಪಾಯದಲ್ಲಿದ್ದನು. ಆದುದ್ದರಿಂದ ಎಲೀಯನಿಗೆ ಸಹಾಯಿಸುವ ಮಾಗ೯ವನ್ನು ದೇವರು ಬದಲಾಯಿಸಲು ತೀಮಾ೯ನಿಸಿದನು.

“ದೇಶದಲ್ಲಿ ಮಳೆಯಿಲ್ಲದ್ದರಿಂದ ಕೆಲವು ದಿನಗಳಾದ ನಂತರ ಹಳ್ಳವು ಬತ್ತಿಹೋಯಿತು". (1 ಅರಸು17:7)

ಒಂದು ದಿನ ಬೆಳಿಗ್ಗೆ ಎಲೀಯನು ಹಳ್ಳವನ್ನು ನೋಡಲಾಗಿ ಅದು ಬತ್ತಿ ಹೋಗಿತ್ತು. ದೇವರು ತನ್ನ ಸೇವಕನಿಗೆ ಕಾಗೆಗಳ ಮೇಲೆಯೂ ಮತ್ತು ಹಳ್ಳದಲ್ಲಿರುವ ನೀರಿನ ಮೇಲೆಯೂ ಆತುಕೊಳ್ಳುವದನ್ನು ನಿಲ್ಲಿಸಲು ಕಲಿಸುತ್ತಿದ್ದನು. ಮಾಂಸವನ್ನು ತಿನ್ನುವ ಕಾಗೆಗೆ ಅದರ ಸ್ವಭಾವದ ವಿರುಧ್ದವಾಗಿ ಮಾಡಿ ತನ್ನ ಸೇವಕನಿಗೆ ಮಾಂಸವನ್ನು ಒದಗಿಸಲು ಸಿದ್ದ ಮಾಡಿದನು. ದೇವರು ಈಗ ಇದಕ್ಕಿಂತಲೂ ಬೇರೆ ರೀತಿಯಾದ ಮಾಗ೯ವನ್ನು ಏಪ೯ಡಿಸಿ ಒದಗಿಸಬಲ್ಲನು ಎಂದು ಆತನನ್ನು ನಂಬಬಹುದು ಹೀಗಾಗಿ ದೇವರು ಎಲೀಯನಿಗೆ ಜಾರಿಪ್ತಾಗೆ ಹೋಗಲು ಹೇಳಿದನು. ಅಲ್ಲಿ ದೇವರು ತನ್ನ ಸೇವಕನನ್ನು ಐಶ್ವಯ೯ವಂಥ ವ್ಯಕ್ತಿಯಿಂದಲ್ಲ, ಮುಪ್ಪಿನ ನಿಸ್ಸಾಹಾಯಕವುಳ್ಳ ವಿಧವೆಯ ಮೂಲಕವಾಗಿ ಸಲುಹಿದನು.

ಆದರೆ ದೇವರ ಮಾಗ೯ಗಳು ನಮಗಿಂತಲೂ ವ್ಯತ್ಯಾಸವುಳ್ಳವುಗಳಾಗಿವೆ. ಆತನು ಸಹಾಯವನ್ನು ನೀಗಿಸುವ ಅತಿಕಡೆಯದಾದ ಮಾದ್ಯಮ ಮಾಗ೯ ಉಪಯೋಗಿಸುವದರಲ್ಲಿ ಸಂತೋಷವುಳ್ಳವ- ನಾಗಿದ್ದಾನೆ. ಹೀಗಾಗಿ ನಮ್ಮ ನಂಬಿಕೆಯು ಮಾಗ೯ದ ಮೇಲಲ್ಲ. ದೇವರ ಮೇಲೆ ನೆಲೆಯಾಗಿರುತ್ತದೆ.

“ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ದಿಹೀನರನ್ನು ಆರಿಸಿಕೊಂಡಿದ್ದಾನೆ. ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ. ಈ ಲೋಕದ ಕುಲಹೀನರನ್ನು, ಅಸಡ್ಡೆಯಾದವರನ್ನು ಆರಿಸಿಕೊಂಡದ್ದಲ್ಲದೇ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಾಗಿ ದೇವರ ಮುಂದೆ ಹೊಗಳಿ- ಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ" ( 1 ಕೊರಿಂಥ 1:27-29).

ಅನೇಕ ದಿನದವರೆಗೆ ನಮ್ಮನ್ನು ಸಲುಹಿದ ಕಾಗೆಗಳು ಈಗ ಬರುವದನ್ನು ನಿಲ್ಲಿಸಿದ ದಿನ ನಮ್ಮ ಜೀವಿತದಲ್ಲಿ ಬಹು ಅತಿಶಯವಾದ ದಿನವಾಗಿದೆ. ಆಗ ನಾವು ದೇವರನ್ನು ಮಾತ್ರ ಆತುಕೊಳ್ಳುವದನ್ನು ಪ್ರಾರಂಭಿಸುತ್ತೇವೆ.

ಒಬ್ಬ ವ್ಯಕ್ತಿ ಸಹಾಯಮಾಡುತ್ತೇನೆಂದು ನಿಮಗೆ ಹೇಳಿ ನಿಮ್ಮನ್ನು ಮರೆತುಬಿಡುವಾಗ ಆ ವ್ಯಕ್ತಿಯ ವಿರುಧ್ದವಾಗಿ ಗುಣಗುಟ್ಟಿ ದೂರು ಹೇಳಬೇಡಿರಿ. ಆ ವ್ಯಕ್ತಿ ಸಹಾಯಿಸದೇ ಇರುವದನ್ನು ದೇವರೇ ನಿಲ್ಲಿಸಿರಬಹುದು. ಯಾಕಂದರೆ ನೀವು ಜೀವವುಳ್ಳ ದೇವರ ಮೇಲೆ ಆತುಕೊಳ್ಳುವದನ್ನು ಕಲಿಯಬೇಕೆಂದು. ದೇವರು ಈಚ್ಚೆಯುಳ್ಳ ದೇವರಾಗಿದ್ದಾನೆ. ಮತ್ತು ತನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ ದೇವರಾಗಿದ್ದಾನೆ.

“ನಾನೇ ಕತ೯ನು ಇದೇ ನನ್ನ ನಾಮವು ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು" (ಯೆಶಾಯ 42:8)

ಮನುಷ್ಯರ ಮೇಲೆಯೂ ಮತ್ತು ಹಣದ ಮೇಲೆಯೂ ಆತುಕೊಳ್ಳುವ ವ್ಯಬಿಚಾರಕ್ಕೆ ಈ ಮಾಂಸ- ದಲ್ಲಿ ಬಹು ಎಳೆತವಿದೆ. ಹೀಗಾಗಿ ನನ್ನ ಹೊರತು ಬೇರೆ ದೇವರುಗಳಿಲ್ಲ. ಎಂಬ ಪದವನ್ನು ನಾವು ಆಗಾಗ ಕೇಳುವ ಅವಶ್ಯಕತೆಯಿದೆ. ನಮ್ಮ ಎಲ್ಲಾ ಅವಶ್ಯಕತೆಗಳಲ್ಲಿ ದೇವರ ಮೇಲೆ ಮಾತ್ರ ಆತುಕೊಳ್ಳಬೇಕೆಂದು ಆತನು ಬಯಸುತ್ತಾನೆ. ಆಗ ನಾವು ಎಲ್ಲಾ ಕಾಲದಲ್ಲಿಯೂ ಯಾವಾಗಲೂ ಜಯದಲ್ಲಿ ಜೀವಿಸುತ್ತೇವೆ.

ಅಧ್ಯಾಯ 12
ಸಂತುಷ್ಠಿಯಾದ ಕೃಪೆ

“ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರವೇ" (ಎಫೆಸ 2:8)

ನಂಬಿಕೆಯ ಮೂಲಕ ಕೃಪೆಯಿಂದಲೇ ಪಾಪಕ್ಷಮಾಪಣೆಯನ್ನು ಹಾಗೂ ಪವಿತ್ರಾತ್ಮನ ಅಭಿಷೇಕ- ವನ್ನು ಹೊಂದುವವರಾಗಿ ನಮ್ಮ ಕ್ರಿಸ್ತೀಯ ಜೀವಿತವನ್ನು ಪ್ರಾರಂಭಿಸುತ್ತೇವೆ. ಒಂದು ದಿನ ನಮ್ಮ ಕತ೯- ನಾದ ಯೇಸುಕ್ರಿಸ್ತನು ತನ್ನ ಪ್ರಭಾವದಿಂದ ಬರುವಾಗ ನಾವು ಆತನನ್ನು ಸಂಧಿಸಲು ಮೇಲೆ ಎತ್ತಲ್ಪಡು- ವದು ಸಹ ನಂಬಿಕೆಯ ಮೂಲಕ ಕೃಪೆಯಿಂದಲೇ.

ಹೀಗಾಗಿ ಇಹಲೋಕದಲ್ಲಿ ನಮ್ಮ ಕ್ರಿಸ್ತೀಯ ಜೀವಿತವು ಪ್ರಾರಂಭದಿಂದ ಅಂತ್ಯದವರೆಗೆ ನಂಬಿಕೆಯ ಮೂಲಕ ಕೃಪೆಯಿಂದಲೇ ಇರುವಂಥದ್ದಾಗಿದೆ. ಈ ಎರಡರ ಮದ್ಯದಲ್ಲಿ ನಾವು ಕಲಿಯಬೇಕಾದ ಅವಶ್ಯ- ಕತೆ ಯಾವುದೆಂದರೆ, ಈ ನಿಯಮದ ಪ್ರಕಾರವೇ ನಾವು ಎಲ್ಲವನ್ನು ಹೊಂದಿಕೊಳ್ಳುತ್ತೇವೆ. ನಂಬಿಕೆಯ ಮೂಲಕ ಕೃಪೆಯಿಂದ ಎಲ್ಲ ಕೆಟ್ಟತನವನ್ನು ನಾವು ಜಯಿಸುತ್ತೇವೆ. ಹಾಗೂ ದೇವರು ಮಾಡಬೇಕೆಂದು ಕೊಟ್ಟ ಕೆಲಸವನ್ನು ನಾವು ಪೂಣ೯ಗೊಳಿಸುತ್ತೇವೆ.

ದೇವರು ಎಲ್ಲಾ ಭವಿಷ್ಯತ್ತನ್ನು ತಿಳಿದವನಾಗಿದ್ದಾನೆ. ದೇವರಿಗೆ ಆಶ್ಚಯ೯ಕರವಾಗಿ ತೋರುವಂಥ ಯಾವುದೇ ಸಂಗತಿಯೂ (ಈ ಹೊತ್ತು, ಈದಿನ, ಬರುವವಾರ ಹಾಗೂ ಮುಂದಿನ ವರುಷ) ನಮ್ಮ ಜೀವಿತದಲ್ಲಿ ಸಂಭವಿಸಲಾರದು. ಆತನು ಆದಿಯಿಂದಲೂ ಅಂತ್ಯದವರೆಗೆ ಎಲ್ಲವನ್ನು ಬಲ್ಲವನಾಗಿದ್ದಾನೆ. ಇದು ನಮಗೆ ಅತಿಶಯವಾದ ಆದರಣೆ ಕೊಡುತ್ತದೆ. ಮುಂಬರುವ ದಿನಗಳಲ್ಲಿ ಅಥವಾ ವಾರಗಳಲ್ಲಿ ನಿಮಗೆ ಬಹಳಷ್ಟು ಶೋಧನೆಗಳು ಹಾಗೂ ಪ್ರಯಾಸವು ಬರುತ್ತದೆ ಎಂದು ದೇವರು ತಿಳಿದುಕೊಂಡಿದ್ದಾನೆ. ಅಷ್ಟು ಮಾತ್ರವಲ್ಲ ಅವುಗಳನ್ನು ಜಯಿಸಲು ಹಾಗೂ ತಾಳಿಕೊಳ್ಳಲು ಆತನು ಕೃಪೆಯನ್ನು ಅನು- ಗ್ರಹಿಸುವವನಾಗಿದ್ದಾನೆ.

ಕತ೯ನು ಪೌಲನಿಗೆ ಹೇಳಿದ್ದು. - “ನನ್ನ ಕೃಪೆಯೇ ನಿನಗೆ ಸಾಕು ನಿನ್ನ ಬಲಹೀನತೆಯಲ್ಲಿಯೇ ನನ್ನ ಬಲವು ಪೂಣ೯ಸಾಧಕವಾಗುತ್ತದೆ". (2 ಕೊರಿಂಥ 12:9)

“ದೇವರು ಸಕಲವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂಣ೯ತೆಯುಳ್ಳವರಾಗಿ ಸಕಲ ಸತ್ಕಾಯ೯ಗಳನ್ನು ಹೇರಳವಾಗಿ ಮಾಡುವವರಾಗಿರಬೇಕು" (2 ಕೊರಿಂಥ 9:8). ನಮ್ಮ ಅವಶ್ಯಕತೆಯ ಸಮಯದಲ್ಲಿ ಕೃಪೆಯು ಸಹಾಯ ಮಾಡುವದಕ್ಕಾಗಿ ಸಮೃದ್ದಿಯಾಗಿ ಇದೆ.

“ಆದುದ್ದರಿಂದ ನಾವು ಕರುಣೆಯನ್ನು ಕೃಪೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈಯ೯ದಿಂದ ಕೃಪಾಸನದ ಮುಂದೆ ಬರೋಣ" (ಇಬ್ರಿಯ 4:16).

ನಿಮಗೆ ಯಾವುದೇ ಅವಶ್ಯಕತೆಯಿದ್ದಲ್ಲಿ ದೇವರ ಕೃಪೆಯು ಆ ಅವಶ್ಯಕತೆಯನ್ನು ಪೂರೈಸುವದಕ್ಕೆ ಸಹಾಯಿಸಲು ಸದಾಕಾಲ ಸಿದ್ದವಾಗಿದೆ. ಇದಕ್ಕಾಗಿಯೇ ನಾವು ಧೈಯ೯ದಿಂದ ಈ ಕೃಪೆಯನ್ನು ಹೊಂದಲು ಕೃಪಾಸನದ ಬಳಿಗೆ ಬರಲು ಆಹ್ವಾನಿಸಲ್ಪಟ್ಟಿದ್ದೇವೆ.

ನಾವು ನಮ್ಮ ಗತಕಾಲದಲ್ಲಿ ಸೋತುಹೋಗಿರಬಹುದು. ಯಾಕಂದರೆ ಈ ಕೃಪೆಯನ್ನು ನಾವು ಹೊಂದದ ಕಾರಣ. ಆದರೆ ಭವಿಷ್ಯದಲ್ಲಿ (ಮುಂಬರುವ ದಿನಗಳಲ್ಲಿ) ಸಂಗತಿ ವ್ಯತ್ಯಾಸವುಳ್ಳದ್ದಾಗಿದೆ. ನಾವು ನಮ್ಮನ್ನು ತಗ್ಗಿಸಿಕೊಂಡು ಅವಶ್ಯಕತೆಯ ಸಮಯದಲ್ಲಿ ಕೃಪೆಗಾಗಿ ಕೂಗುವದಾದರೆ, ದೇವರು ನಮ್ಮನ್ನು ಎಂದಿಗೂ ಆಶಾಭಂಗಪಡಿಸಲಾರನು.

ಸತ್ಯವೇದವು ಹೇಳುತ್ತದೆ - ಯಾರು ಸಮೃದ್ದಿಯಾಗಿ ಕೃಪೆಯನ್ನು ಹೊಂದುತ್ತಾರೋ ಅಂಥವರು ಯೇಸುಕ್ರಿಸ್ತನ ಮುಖಾಂತರ ತಮ್ಮ ಜೀವಿತದಲ್ಲಿ ಆಳುವರು.

“ಒಬ್ಬನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಮರಣವು ಆಳುವದಾದರೆ ದೇವರು ಧಾರಾಳವಾಗಿ ಅನುಗ್ರಹಿಸುವ ಕೃಪಾದಾನವನ್ನೂ ನೀತಿಯೆಂಬ ವರವನ್ನೂ ಹೊಂದಿದವರು ಯೇಸುಕ್ರಿಸ್ತನೆಂಬ ಈ ಒಬ್ಬ ಪುರುಷನ ಮೂಲಕ ಜೀವಭರಿತರಾಗಿ ಆಳುವದು ಮತ್ತೂ ನಿಶ್ಚಯವಲ್ಲವೇ" (ರೋಮ 5:17).

ಆದಾಮನು ಪ್ರತಿಯೊಂದರ ಮೇಲೆ ಅದಿಕಾರ ಹಾಗೂ ಆಳ್ವಿಕೆ ಮಾಡಬೇಕೆಂದು ದೇವರ ಚಿತ್ತವಾಗಿತ್ತು. “ಆ ಮೇಲೆ ದೇವರು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ, ಅವರು .....ಎಲ್ಲಾ ಭೂಮಿಯ ಮೇಲೆಯೂ ದೊರೆತನ ಮಾಡಲಿ" ಅಂದನು. (ಆದಿ 1:26).

ಆದಾಮನ ಜೀವಿತದಲ್ಲಿ ಇದು ಪೂತಿ೯ಗೊಳ್ಳಲು ಅಡ್ಡಿಯಾದದ್ದು ಅವನ ಅವಿಧೇಯತೆಯೇ. ಆದರೆ ದೇವರು ಈಗ ಹೊಸ ಓಟವನ್ನು ಈ ಲೋಕದಲ್ಲಿ ಪ್ರಾರಂಭಿಸಿದ್ದಾನೆ. ದೇವರ ಮಕ್ಕಳು ಕ್ರಿಸ್ತ- ಯೇಸುವಿನಲ್ಲಿರುವ ನಂಬಿಕೆಯಿಂದ ಜೀವಿಸಿ ರಾಜರಂತೆಯೂ ಹಾಗೂ ದೊರೆತನ ನಡೆಸುವವರಂತೆಯೂ ಜೀವಿಸುತ್ತಾರೆ. ನೀವು ನಿಮ್ಮನ್ನು ತಗ್ಗಿಸಿಕೊಂಡು ಆತನ ಕೃಪೆಯನ್ನು ಹೊಂದುವದಾದರೆ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು. ಯಾವ ಭಯ ಹಾಗೂ ಚಿಂತೆ ನಿಮ್ಮ ಹೃದಯವನ್ನು ಪ್ರವೇಶಿಸಲಾರದು.

ನಿಮ್ಮ ಅಧಿಕಾರಿಯಾಗಲಿ, ನಿಮ್ಮ ನೆರೆಯವರಾಗಲಿ, ನಿಮ್ಮ ಸಂಭಂಧಿಕರಾಗಲಿ, ನಿಮ್ಮ ವೈರಿ- ಗಳಾಗಲಿ, ಸೈತಾನನೇ ಆಗಲಿ ಇಂಥವರಲ್ಲಿ ಯಾರೇ ಆಗಲಿ ನಿಮ್ಮ ಜೀವಿತವನ್ನು ದುರವಸ್ಥೆಯನ್ನಾಗಿ ಮಾಡಲಾರರು. ಯಾಕಂದರೆ ಜಯದ ರಹಸ್ಯಗಳನ್ನು ನೀವು ಕಲಿತಿದ್ದೀರಿ.

ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಆತನ ಜಯದಲ್ಲಿ ನಡೆಸುವ ದೇವರಿಗೆ ಸ್ತೋತ್ರ.

ದೇವರ ಹೊಸ ಒಡಂಬಡಿಕೆಯ ಕೃಪೆಯ ಕೆಳಗೆ ಜೀವಿಸುವದು ಎಷ್ಟು ಅತಿಶಯವಾದದ್ದು!

ವಾಗ್ದಾನ ಮಾಡಿದ ದೇಶ ನಿಮ್ಮ ಮುಂದೆ ತೆರೆಯಲ್ಪಟ್ಟಿದೆ!

ಹೋಗಿ ಸ್ವಾಧೀನಪಡಿಸಿಕೊಳ್ಳಿರಿ!

ಅಧ್ಯಾಯ 13
ಪೀಠಿಕೆ-1 ಜಯದ ರಹಸ್ಯಗಳು (ಸಾರಾಂಶ)

 1. 1 ಎಲ್ಲಾ ಸಮಯದಲ್ಲಿ ನೀವು ಜಯದಲ್ಲಿ ಜೀವಿಸಬೇಕೆಂದು ದೇವರು ನಮಗೆ ಸಹಾಯಿಸಲು ಬಯಸುತ್ತಾನೆ. ಇದನ್ನು ನಿಮ್ಮ ಹೃದಯ ಪೂವ೯ಕವಾಗಿ ನಂಬಿರಿ.
 2. 2 ದೇವರು ನಿಮಗೆ ಆಜ್ಞೆಗಳನ್ನು ಕೊಡುತ್ತಾನೆ. ಯಾಕಂದರೆ ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಆದುದರಿಂದ ಅವುಗಳಲ್ಲಿ ಪ್ರತಿಯೊಂದನ್ನು ಗಂಭೀರವಾಗಿ ತೆಗೆದುಕೊಳ್ಳೋಣ.
 3. 3 ದೇವರು ಯೇಸುಸ್ವಾಮಿಯನ್ನು ಪ್ರೀತಿಸಿದಂತೆಯೇ ಆತನ ಶಿಷ್ಯರನ್ನು ಸಹ ಹಾಗೆಯೇ ಪ್ರೀತಿ- ಸುತ್ತಾನೆ. ಈ ಪ್ರೀತಿಯಲ್ಲಿ ನಿಮ್ಮ ಭದ್ರತೆಯನ್ನು ಕಂಡುಕೊಳ್ಳಿರಿ.
 4. 4 ಪ್ರತಿಯೊಂದು ಸಂಕಟಗಳು ದೈವಿಕ ಉದ್ದೇಶಕ್ಕಾಗಿ. ದೇವರು ನಿಮ್ಮನ್ನು ನಿಮ್ಮ ಶಕ್ತಿಯನ್ನು ಮೀರಿ ಪರೀಶೋಧಿಸುವದಕ್ಕೂ ಹಾಗೂ ಪರೀಕ್ಷಿಸುವದಕ್ಕೂ ಅನುಮತಿಸುವದಿಲ್ಲ. ಇದನ್ನು ನಿಮ್ಮ ಹೃದಯ- ಪೂವ೯ಕವಾಗಿ ನಂಬಿರಿ.
 5. 5 ಯೇಸುವು ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆಯೇ ಶೋಧಿಸಲ್ಪಟ್ಟನು. ಪಾಪ ಮಾತ್ರ ಮಾಡ- ಲಿಲ್ಲ. ನೀವು ಶೋಧಿಸಲ್ಪಡುವಾಗ ಆತನನ್ನು ನಿಮ್ಮ ಮಾದರಿಯನ್ನಾಗಿ ದೃಷ್ಠಿಸಿರಿ.
 6. 6 ದೇವರು ದೀನರಿಗೆ ಮಾತ್ರ ಕೃಪೆಯನ್ನು ಕೊಡುತ್ತಾನೆ. ಇದರಿಂದ ಎಲ್ಲಾ ಸಮಯದಲ್ಲಿ ಶಿಲುಬೆಯನ್ನು ಹೊತ್ತುಕೊಂಡು ನಿಮ್ಮನ್ನು ತಗ್ಗಿಸಿಕೊಳ್ಳಿರಿ.
 7. 7 ದೇವರು ನಿಮ್ಮ ಎಲ್ಲಾ ಸನ್ನಿವೇಶಗಳನ್ನು ನಿಯಂತ್ರಿಸುತ್ತಾನೆ. ಆದುದ್ದರಿಂದ ಆತನು ನಿಮ್ಮ ಜೊತೆಯಾಗಿ ನಿಮ್ಮ ಒಳ್ಳೇಯದಕ್ಕಾಗಿಯೇ ಕಾಯ೯ ನಡೆಸುತ್ತಾನೆ. ಇದನ್ನು ನಿಮ್ಮ ಹೃದಯಪೂವ೯ಕ -ವಾಗಿ ನಂಬಿರಿ.
 8. 8 ನಿಮ್ಮ ಎಲ್ಲಾ ಸನ್ನಿವೇಶಗಳಲ್ಲಿ ನಿಮಗೆ ಸಹಾಯಿಸುವಲ್ಲಿ ತಪ್ಪದೇ ಇರುವ ದೇವರ ಮೇಲೆ ಮಾತ್ರ ಆತುಕೊಳ್ಳಿರಿ. ವಸ್ತುವಿನ ಮೇಲೆಯೂ ವ್ಯಕ್ತಿಯ ಮೇಲೆಯೂ ಆತುಕೊಳ್ಳುವಿಕೆಯನ್ನು ಬಿಡಿಸುವಂತೆ ಆತನನ್ನು ಕೇಳಿಕೊಳ್ಳಿರಿ.
 9. 9 ದೇವರು ತನ್ನ ಬಲವನ್ನು ಕೇವಲ ಬಲಹೀನರಿಗೆ ಮಾತ್ರ ಕೊಡುತ್ತಾನೆ. ಆದುದ್ದರಿಂದ ನಿಮ್ಮನ್ನು ಆತನು ಮುರಿಯುವಂತೆಯೂ ಹಾಗೂ ‘ಶೂನ್ಯವಾದವನು’ ಎಂಬ ಸ್ಥಳದವರೆಗೆ ನಿಮ್ಮನ್ನು ತಗ್ಗಿಸು- ವಂತೆಯೂ ಆತನನ್ನು ನಿಮ್ಮ ಜೀವಿತದಲ್ಲಿ ಅನುಮತಿಸಿರಿ.

ಅಧ್ಯಾಯ 14
ಪೀಠಿಕೆ-2 ದೇವರು ಯೇಸುವಿಗೆ ಮಾಡಿದ್ದನ್ನೇ ನಿನಗೂ ಮಾಡುವನು

1. ಭಾರದಿಂದಲೂ ಚಿಂತೆಯಿಂದಲೂ ಬಗ್ಗಿರುವಾಗ,

ನಿನ್ನ ಆತ್ಮ ಬೇಸರಗೊಳ್ಳದಿರಲಿ;

ನೀನು ಭಯಪಡಬೇಕಾಗಿಲ್ಲ,

ದೇವರು ಬಹು ಸಮೀಪವಾಗಿದ್ದಾನೆ.

ಆತನು ತನ್ನ ಪುತ್ರನನ್ನು ಪ್ರೀತಿಸಿದಂತೆ ನಿನ್ನನ್ನು ಪ್ರೀತಿಸುತ್ತಾನೆ.

ನಿನಗೂ ಆತನು ಸಹಾಯಮಾಡುವನು;

ಆತನ ವಾಗ್ದಾನ ವಾಕ್ಯದಲ್ಲಿ ಕೇವಲ ಭರವಸವಿಡು.

ಆತನೇ ನಿನ್ನನ್ನು ನೋಡಿಕೊಳ್ಳುವನು.

ದೇವರು ಏನು ಮಾಡುವನೋ ಅದು ರಹಸ್ಯವಲ್ಲ;

ಆತನು ಯೇಸುವಿಗೆ ಮಾಡಿದ್ದನ್ನೇ ನಿನಗೂ ಮಾಡುವನು;

ಪರಾಕ್ರಮ ಶಕ್ತಿಯಿಂದ ಆತನು ನಿನ್ನನ್ನು ಬಲಪಡಿಸುವನು;

ದೇವರು ಏನು ಮಾಡುವನೋ ಅದು ರಹಸ್ಯವಲ್ಲ.

2. ಪಾಪವು ಕೆಟ್ಟದ್ದು ಈ ಲೋಕದಲ್ಲಿ ತುಂಬಿದ್ದರೂ

ನೀನು ಒತ್ತಡಕ್ಕೆ ಒಳಗಾಗಿದ್ದರೂ ದೇವ ವಾಕ್ಯವೋ ಸತ್ಯವಾಗಿದೆ.-

“ಪಾಪವು ನಿನ್ನ ಮೇಲೆ ಅಧಿಕಾರ ನಡಿಸದು."

ಶೋಧನೆಯ ಎಳೆತ ಬಲವಾಗಿರುವಾಗ

ದೇವರ ಕೃಪೆಯೇ ನಿನಗಾಧಾರ;

ನೀನು ಯೇಸುವಿನ ಹಾಗೆ ನಡೆಯಲು ಸಾಧ್ಯ

ಪ್ರತಿ ದಿನವೂ ಜಯದಲ್ಲಿ.

3. ನೋವೂ ರೋಗವೂ ನಿನಗೆ ಬರುವಾಗ

ನಿನ್ನ ಪ್ರಿಯರನ್ನು ಅವು ತಾಕುವಾಗ,

ನೀನು ಭಾವಿಸುವುದು ಹೇಗೆಂದು ದೇವರು ಬಲ್ಲನು-

ಸ್ವಸ್ಥಮಾಡಲು ಆತನಿಗೆ ಶಕ್ತಿಯುಂಟು.

ನಿನ್ನ ತಂದೆ ನಿನ್ನವಶ್ಯವನ್ನು ಒದಗಿಸುವನು-

ಆತನು ನಂಬಿಗಸ್ತನೂ ಸತ್ಯವಂತನೂ ಆಗಿರುವನು:

ಆತನು ಯೇಸುವನ್ನು ಪರಾಮರಿಸಿದಂತೆಯೇ

ನಿನ್ನನ್ನೂ ಪರಾಮರಿಸುವನು.

4. ಓ ಎಂಥಾ ಮಹಿಮೆಯ ಸಂತೈಸುವಿಕೆ ಇದು

ಯೇಸು ನಿನ್ನ ಕತ೯ನೆಂದು

ನಿನ್ನ ಹಿರಿಯ ಅಣ್ಣನೆಂದೂ ತಿಳಿದಿದ್ದರೆ

ದೇವರಿಗಿರುವುದೆಲ್ಲಾ ಈಗ ನಿನ್ನದು

ನಿನ್ನನ್ನು ಎಂದಿಗೂ ತೊರೆಯುವುದಿಲ್ಲ.

ಈಗ ದೇವರು ನಿನ್ನ ಪರವಾಗಿರುವುದರಿಂದ

ನಿನ್ನ ವೈರಿ ಈಗ ಯಾರು? - ಝ್ಯಾಕ್ ಪೂನನ್

ಅಧ್ಯಾಯ 15
ಪೀಠಿಕೆ-3 ಜ್ಞಾನದ ಮಾತುಗಳು

 1. 1 ಧಮ೯ಶಾಸ್ತ್ರದ ಪತ್ರಿಕೆಯನ್ನು ಇಟ್ಟುಕೊಂಡು ಅದರ ಆತ್ಮವನ್ನು ಅಲ್ಲಗಳೆದರೆ ಬಲವಿಲ್ಲದ ಭಕ್ತಿಯ ವೇಷ ನಮ್ಮಲ್ಲಿದೆ.
 2. 2 ದೀನತೆಯುಳ್ಳ ವ್ಯಕ್ತಿ ಒಂದು ಚಿಕ್ಕಸಂಗತಿಗೂ ದೇವರಿಗೆ ಮತ್ತು ಮನುಷ್ಯರಿಗೆ ಕೃತಜ್ಞತೆಯುಳ್ಳವ- ನಾಗಿರುತ್ತಾನೆ.
 3. 3 ಪಾಪವು ನಮ್ಮನ್ನು ಜಯಿಸುತ್ತಿರುವದಾದರೆ ಅದಕ್ಕೆ ಬೇರೂರಿದ ಕಾರಣ - ಯಾವುದೋ ಒಂದು ಕ್ಷೇತ್ರದಲ್ಲಿ ಗವ೯ವು ನೆಲೆಗೊಂಡಿದೆ.
 4. 4 ನೀವು ನಿಜವಾಗಿಯೂ ದೀನರಾಗಿದ್ದಲ್ಲಿ ದೇವರಿಂದ ಕೃಪೆಯನ್ನು ಹೊಂದದೇ ಇರುವದು ಅಸಾಧ್ಯ.
 5. 5 ದೀನತೆಯುಳ್ಳ ವ್ಯಕ್ತಿಯನ್ನು ಜನರಾಗಲಿ, ಸೈತಾನನಾಗಲಿ, ಅವನ ಮಾಂಸವಾಗಲಿ ಎಂದಿಗೂ ಜಯಿಸಲಾಗುವದಿಲ್ಲ.
 6. 6 ನಿಮ್ಮನ್ನು ನೀವು ತಗ್ಗಿಸಿಕೊಂಡರೆ ದೇವರ ಸವ೯ಶಕ್ತಿಯುಳ್ಳ ಹಸ್ತದಿಂದ ಕಾಪಾಡಲ್ಪಡುವಿರಿ.
 7. 7 ಇಬ್ಬರು ವ್ಯಕ್ತಿಗಳು ಆತ್ಮದಲ್ಲಿ ಬಡವರಾಗುವವರೆಗೂ ಅವರು ಒಂದಾಗುವದು ಅಸಾಧ್ಯ.
 8. 8 ಸ್ವಂತ ಅವಶ್ಯಕತೆ ಹಾಗೂ ಕೊರತೆಯ ಮೇಲೆ ಗ್ರಹಿಕೆಯುಳ್ಳವರೇ ತಮ್ಮನ್ನು ಯಾವಾಗಲೂ ತೀಪು೯ ಮಾಡಿಕೊಳ್ಳುವವರು ಆತ್ಮದಲ್ಲಿ ಬಡವರಾಗಿರುವವರು.
 9. 9 ಪ್ರಕಟನೆ ಹೊಂದಿರುವದು ಅಂದರೆ ಎಲ್ಲಾ ಸಂಗತಿಗಳನ್ನು, ಜನರನ್ನು, ಸನ್ನಿವೇಶಗಳನ್ನು ದೇವರು ದೃಷ್ಟಿಸುವಂಥ ಕೋನದಿಂದ ದೃಷ್ಟಿಸುವದು.
 10. 10 ಸ್ವಂತ ಕಣ್ಣಲ್ಲಿರುವ ಮರದ ದಿಮ್ಮಿಯು ಯಾವುದೆಂದರೆ ಸಹೋದರನ ಕಣ್ಣಲ್ಲಿರುವ ಮರದ ದೂಳಿನ ಕುರಿತಾಗಿ ತೀಪು೯ ಮಾಡುವ ’ಪ್ರೀತಿಯಿಲ್ಲದ ಮನೋಭಾವನೆ’ ಆಗಿರುತ್ತದೆ.
 11. 11 ಧಮ೯ಶಾಸ್ತ್ರವು ನಮಗೆ ಆಜ್ಞೆಗಳನ್ನು ಕೊಡುತ್ತದೆ. ಆದರೆ ಅವುಗಳನ್ನು ಕಾಪಾಡಿಕೊಳ್ಳುವದಕ್ಕೆ ಯಾವ ಬಲವನ್ನು ಕೊಡಲಾರದು.ಕೃಪೆ ನಮ್ಮನ್ನು ಉನ್ನತ ಮಟ್ಟಕ್ಕೆ ಕರೆಯುತ್ತದೆ. ಆದರೆ ಅದನ್ನು ಮುಟ್ಟಲು ಬಲವನ್ನು ಸಹ ಕೊಡುತ್ತದೆ.
 12. 12 ಪ್ರತಿ ದಿನ ದೇವರ ಚಿತ್ತವನ್ನು ಮಾಡಲು ನಿಮಗೆ ಸಂಧಭ೯ವಿದೆ. ಅಥವಾ ದಿನವನ್ನು ವ್ಯಥ೯- ಮಾಡಬಹುದು.
 13. 13 ನಮ್ಮ ಮಾಗ೯ಗಳಲ್ಲಿ ಬರುವ ಪ್ರತಿಯೊಂದು ಅಡ್ಡಿಗಳು ಸಾಮಾನ್ಯವಾಗಿ ಹಿಂಜಾರುವಿಕೆಯ ಗುರುತುಗಳಲ್ಲ. ಆದರೆ ನಮ್ಮ ನಂಬಿಕೆಗೆ ಸವಾಲುಕರವಾಗಿವೆ.
 14. 14 ಯಾರು ಮಾಂಸಕ್ಕನುಸಾರವಾಗಿ ನಡೆಯುತ್ತಾರೋ ಅಂಥವರು ಇತರರ ಮೇಲೆ ಹಕ್ಕು ಸಾಧಿ- ಸುತ್ತಾರೆ. ಆದರೆ ಯಾರು ಆತ್ಮಾನುಸಾರವಾಗಿ ನಡೆಯುತ್ತಾರೋ ಅಂಥವರು ಇತರರ ಬಲಹೀನತೆ- ಗಳನ್ನು ತಾಳಿಕೊಳ್ಳುವದರ ಮೂಲಕ ಅವರ ಸೇವೆಯನ್ನು ಮಾಡಲು ಬಯಸುತ್ತಾರೆ.
 15. 15 ದೇವರ ಪ್ರೀತಿಯಲ್ಲಿ ಯಾರು ಭದ್ರತೆಯನ್ನು ಹೊಂದಿರುತ್ತಾರೋ ಅಂಥವರು ಇತರರನ್ನು ತೀಪು೯ ಮಾಡಲಾರರು ಹಾಗೂ ವೈರತ್ವವನ್ನು ಇಟ್ಟುಕೊಳ್ಳಲಾರರು. ಮತ್ತು ಅವರೊಂದಿಗೆ ಸ್ಪದಿ೯ಸ- ಲಾರರು.
 16. 16 ಎಲ್ಲಾ ಮಹಿಮೆಯೂ ದೇವರಿಗೆ ಮಹಿಮೆ ತರದಿದ್ದರೆ, ಆ ಮಹಿಮೆ ಬರಿದಾದ ಮಹಿಮೆ.
 17. 17 ಸ್ವಾಥಿ೯ಗಳಾಗಿ ನೀವು ಈಗ ಜೀವಿಸಿದರೆ, ಆ ಜೀವಿತದ ಜ್ಞಾಪಕವು ನಿರಂತರಕ್ಕೂ ನಿತ್ಯತ್ವದಲ್ಲಿ ದುಃಖಿಸುವದಕ್ಕೆ ಕಾರಣವಾಗುತ್ತದೆ.
 18. 18 ನಾವು ಅವಶ್ಯಕತೆಯಲ್ಲಿಯೂ ಹಾಗೂ ಇತರರಿಂದ ಸಹಾಯವನ್ನು ಪಡೆದುಕೊಳ್ಳುವದರಲ್ಲಿಯೂ ದೇವರು ನಮ್ಮನ್ನು ಅನುಮತಿಸುತ್ತಾನೆ. ಯಾಕಂದರೆ ಕ್ರಿಸ್ತನ ದೇಹದಲ್ಲಿ ಪರಸ್ಪರ ಆತು- ಕೊಳ್ಳುವಿಕೆಯನ್ನು ಕಲಿಸುವದಕ್ಕಾಗಿ.
 19. 19 ನೀವು ಇತರರಿಗೆ ಕಾಣಿಕೆಯನ್ನು ಕೊಡುವಾಗ ಅವರು ಮಾನವ ಜೀವಿಗಳಾಗಿರುವದರಿಂದ ಅವರ ಗೌರವವನ್ನು ಅಪಹರಿಸದೇ ಕೊಡಿರಿ.
 20. 20 ನಿಮ್ಮ ಜೀವಿತದ ನಿಜವಾದ ಬೆಲೆಯು - ನೀವು ಏನನ್ನು ಪಡೆದಿದ್ದೀರಿ ಎಂಬುದರ ಮೆಲೆ ಆತುಕೊಳ್ಳದೆ ನೀವು ಏನನ್ನು ಕೊಟ್ಟಿದ್ದೀರಿ ಎಂಬುದರ ಮೇಲೆ ಆತುಕೊಂಡಿದೆ.
 21. 21 ದೈವಿಕ ಪ್ರಕಟನೆಯಿಂದ ಏನೇನು ಪಡೆದಿದ್ದರೂ ಅದೇ ನಿಜವಾದ ಸಂಪತ್ತು. ಉಳಿದ ಎಲ್ಲವೂ ತಿಳುವಳಿಕೆ ಮತ್ತು ಉಪಯೋಗಕ್ಕೆ ಬಾರದ ನಕಲಿ ಹಣವಿದ್ದಂತೆ.
 22. 22 ದೇವರಿಂದ ಕೇಳಿಸಿಕೊಂಡ ಮಾತುಗಳಲ್ಲಿ ಮಾತ್ರ ನಮ್ಮ ನಂಬಿಕೆಯು ತಳಹದಿಯಾಗಿದೆ. ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಮನುಷ್ಯನು ಬದುಕುವನು.
 23. 23 ದೇವರು ನಮ್ಮನ್ನು ಮೇಲಕ್ಕೆತ್ತುವ ಮೊದಲು ಹಾಗೂ ನಮ್ಮಿಂದ ಆತನ ಉದ್ದೇಶವನ್ನು ನೇರ- ವೇರಿಸುವ ಮೊದಲು ಆತನು ನಮ್ಮನ್ನು ಶೂನ್ಯವಾದ ಸ್ಥಳಕ್ಕೆ ತರುವನು.
 24. 24 ನಾವು ಕ್ರಿಸ್ತನನ್ನು ಅನುಸರಿಸುವದಕ್ಕೆ ಕರೆಯಲ್ಪಡದೇ, ಆತನನ್ನು ಹಿಂಬಾಲಿಸುವದಕ್ಕೂ ಮತ್ತು ಆತನ ಸ್ವಭಾವದಲ್ಲಿ ಪಾಲುಗಾರರಾಗುವದಕ್ಕೂ ಕರೆಯಲ್ಪಟ್ಟಿದ್ದೇವೆ.
 25. 25 ದೇವರಿಗೆ ಭಯಪಡುವದು ಅಂದರೆ ನಮ್ಮ ರಹಸ್ಯ (ಮರೆಯಾದ) ಜೀವಿತದಲ್ಲಿ ನಂಬಿಗಸ್ತ- ರಾಗಿರುವದು.
 26. 26 ದೇವರು ನಿಮ್ಮ ಜೀವಿತಕ್ಕಾಗಿ ಇಟ್ಟ ಯೋಜನೆಯನ್ನು ನೀವೇ ಹೊರತು ಬೇರೆ ಯಾರೂ ಹಾಳುಮಾಡಲಾರರು.
 27. 27 ಹಣದ ವಿಷಯದಲ್ಲಿ ನೀತಿವಂತರಾಗಿರುವದಕ್ಕಿಂತಲೂ ಹಣವನ್ನು ಉಪಯೋಗಿಸುವದರಲ್ಲಿ ನಂಬಿಗಸ್ತರಾಗಿರುವದು ಬಹಳ ಉನ್ನತವಾದ ಸಂಗತಿ.
 28. 28 ನಿಜವಾದ ಆತ್ಮೀಕತೆಯು ನಮ್ಮ ಸ್ವಂತ ಚಿತ್ತವನ್ನು ನಿರಾಕರಿಸಿ ದೇವರ ಚಿತ್ತವನ್ನು ಮಾಡುವದೇ ಆಗಿದೆ.
 29. 29 ಉಸುಬಿನ ಮೇಲೆ ಕಟ್ಟುವದು ಅಂದರೆ - ಬೋಧನೆಯನ್ನು ಅಥ೯ಮಾಡಿಕೊಳ್ಳುವದು ಹಾಗೂ ಅದರ ಕುರಿತಾಗಿ ಉದ್ವೇಗಭರಿತರಾಗಿರುವದು. ಬಂಡೆಯ ಮೇಲೆ ಕಟ್ಟುವದು ಅಂದರೆ - ದೇವರ ವಾಕ್ಯಕ್ಕೆ ವಿಧೇಯರಾಗಿರುವದು.
 30. 30 ಆತ್ಮೀಕರಾಗುವದು ಅಂದರೆ - ಒಬ್ಬನು ತಪ್ಪಾದದ್ದನ್ನು ಬಿಟ್ಟುಕೊಡುವದು ಮಾತ್ರವಲ್ಲ ಲಾಭದಾಯಕವಲ್ಲದ್ದನ್ನು ಸಹ ಬಿಟ್ಟುಕೊಡುವದು.
 31. 31 ದೈವಿಕ ಪ್ರೀತಿಯಿಲ್ಲದ ಆತ್ಮೀಕ ವರಗಳು ಬೆಳಕನ್ನು ಹಾಗೂ ಜೀವವನ್ನು ತರುವ ಬದಲು ಮರಣವನ್ನು ತರುವ ಹೊದಿಕೆ ಇಲ್ಲದ ವಿದ್ಯುತ್ತಿನ ತಂತಿ ಇದ್ದಂತೆ.
 32. 32 ಯೇಸುವು ಪವಿತ್ರ ಜೀವಿತವನ್ನು ಜೀವಿಸಿದ್ದಕ್ಕೆ ಆತನನ್ನು ಶಿಲುಬೆಗೇರಿಸಲಿಲ್ಲ. ಆದರೆ ಆತನು ಧಾಮಿ೯ಕ ಕಪಟತನವನ್ನು ಬಯಲು ಪಡಿಸಿದ್ದಕ್ಕಾಗಿಯೇ ಆತನನ್ನು ಶಿಲುಬೆಗೇರಿಸಿದರು. ಆತನ ಮಾದರಿಯನ್ನು ಹಿಂಬಾಲಿಸಿರಿ.
 33. 33 ಸತ್ಯವೇದದಲ್ಲಿ ಯಾವ ನಿಜ ಪ್ರವಾದಿಯು ಸತ್ಯವೇದ ಶಾಲೆಯಿಂದ ಬರಲಿಲ್ಲ. ಕೇವಲ ಸುಳ್ಳುಪ್ರವಾದಿಗಳು ಮಾತ್ರ.
 34. 34 ದೇವರ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ಮಾನವಿಯ ಅಹ೯ತೆಗಳಿಗೂ ಹಾಗೂ ಇಹಲೋಕದ ವಿಧ್ಯಾಭ್ಯಾಸಕ್ಕೆ ಯಾವ ಬೆಲೆಯೂ ಇಲ್ಲ.
 35. 35 ಪ್ರದಾನ ದೇವದೂತನು ತನ್ನ ಸುಂದರತೆಯಲ್ಲಿ, ತನ್ನ ಜ್ಞಾನದಲ್ಲಿ, ತನ್ನ ಸ್ಥಾನದಲ್ಲಿ ಗವ೯ ಪಟ್ಟದ್ದರಿಂದ ಸೈತಾನನಾದನು. ಅಂಥಹ ಗವ೯ದಿಂದ ಎಚ್ಚರಿಕೆಯಾಗಿರಿ.
 36. 36 ಧಮ೯ಶಾಸ್ತ್ರವು ಮುಲಾಮಿನೋಪಾದಿಯಲ್ಲಿದ್ದು ನಮ್ಮ ಹುಣ್ಣು ಕುರುವನ್ನು ನಿಯಂತ್ರಣ- ದಲ್ಲಿಡುತ್ತದೆ. ಕೃಪೆಯು ಜೀವನಾಶಕದೋಪಾದಿಯಲ್ಲಿದ್ದು ಕುರುಹು ಬರದಂತೆ ಅದರ ರೋಗಾಣುಗಳನ್ನು ನಾಶಪಡಿಸುತ್ತದೆ.
 37. 37 ನಂಬಿಕೆಯ ದೋಷರಹಿತವಾದ ಒಂದು ಗುರುತು - ದೇವರಿಗೆ ಸ್ತೋತ್ರ ಯಜ್ಞಗಳನ್ನು ಹಾಗೂ ಕೃತಜ್ಞತಾಸ್ತುತಿಯನ್ನು ಸಲ್ಲಿಸುವದು.
 38. 38 ದೇವರು ನಮಗೆ ಭೌತಿಕ ವಸ್ತುಗಳನ್ನು ಉಪಯೋಗಿಸುವದಕ್ಕೆ ಕೊಡುತ್ತಾನೆಯೇ ಹೊರತು ಅವುಗಳನ್ನು ಪ್ರೀತಿಸಿ ಸ್ವಾಧೀನಪಡಿಸಿಕೊಳ್ಳುವದಕ್ಕಲ್ಲ.
 39. 39 ನಿಜ ಕ್ರೈಸ್ತತ್ವವು ಸನ್ಯಾಸತ್ವಕ್ಕೂ ಭೌತಿಕತ್ವಕ್ಕೂ ನಡುವೆ ಇರುವಂಥದ್ದಾಗಿದೆ.
 40. 40 ಯೇಸುವು ಪ್ರಭಾವದಿಂದ ಕೂಡಿದವನಾಗಿ ಬರುವಾಗ ಮಾತ್ರ ನಾವು ಆತನಂತೆ ಆಗುತ್ತೇವೆ. ಆದರೆ ಈಗಲೂ ಸಹ ಆತನು ನಡೆದಂತೆಯೇ ನಾವೂ ನಡೆಯಲು ಸಾಧ್ಯ.
 41. 41 ಯೇಸುವು ಆತನ ಮನೆಯಲ್ಲಿ ಹಾಗೂ ಕೆಲಸದ ಕ್ಷೇತ್ರದಲ್ಲಿ (ಬಡತನದ ಅಂಗಡಿಯಲ್ಲಿ) ಜ್ಞಾನದಲ್ಲಿ ವೃದ್ದಿಯಾದನು. ನಾವು ಸಹ ಅದೇ ರೀತಿಯಲ್ಲಿ ಜ್ಞಾನದಲ್ಲಿ ವೃದ್ದಿಯಾಗಬೇಕು.
 42. 42 ಸಹೋದರರನ್ನು ದೂಷಿಸುವಾಗ ನಾವೂ ಸೈತಾನನ ಜೊತೆ ಕೆಲಸದವರಾಗುತ್ತೇವೆ.ಆದರೆ ಅವರಿಗೋಸ್ಕರ ನಾವು ಮದ್ಯಸ್ಥಿಕೆಯನ್ನು ವಹಿಸುವಾಗ ಯೇಸುವಿನ ಜೊತೆಕೆಲಸದವರಾಗುತ್ತೇವೆ.
 43. 43 ಒಬ್ಬ ವ್ಯಕ್ತಿಗೆ ನಾವು ಅವಶ್ಯವುಳ್ಳವರಾಗಿದ್ದೇವೆಂದು ಮಾಡಿಕೊಂಡರೆ, ನಾವು ನಮ್ಮ ಸೇವೆಯಲ್ಲಿ ಸೋತವರಾಗಿದ್ದೇವೆ.
 44. 44 ಪ್ರತಿಯೊಂದು ಸಹ ಪ್ರೀತಿಯಿಂದ ಕೂಡಿದಂಥಾಗಿರದಿದ್ದಲ್ಲಿ ಒಂದು ದಿನ ಅವೆಲ್ಲವೂ ನಾಶ- ವಾಗುತ್ತವೆ.
 45. 45 ನಮ್ಮ ಬೋಧನೆಯನ್ನು ಸಂಪೂಣ೯ವಾಗಿ ಒಪ್ಪಿಕೊಳ್ಳದಿರುವವರ ಕಡೆಗಿರುವ ನಮ್ಮ ಮನೋಭಾವನೆಯು ನಮ್ಮ ಆತ್ಮೀಕ ಪರಿಪಕ್ವತೆಯನ್ನು ತೋರಿಸುತ್ತದೆ.
 46. 46 ಶುದ್ದ ಹೃದಯವನ್ನು ಇಟ್ಟುಕೊಳ್ಳುವದು ಅಂದರೆ - ದೇವರ ಹೊರತು ಯಾವುದನ್ನೂ ಯಾರನ್ನೂ ಬಯಸದೇ ಇರುವದು.
 47. 47 ಯೇಸು ಅಭಿಷೇಕವಿಲ್ಲದೆ ತನ್ನ ತಂದೆಗೆ ಹೇಗೆ ಸೇವೆಯನ್ನು ಸಲ್ಲಿಸಲಾಗುತ್ತಿರಲಿಲ್ಲವೋ ಹಾಗೇ ನಾವು ಸಹ ಅಭಿಷೇಕವಿಲ್ಲದೆ ಸೇವೆ ಮಾಡಲಾರೆವು.
 48. 48 ಪವಿತ್ರಾತ್ಮನ ವರಗಳಿಲ್ಲದ ಸಭೆಯು ಪಾಶ್ವ೯ವಾಯು ರೋಗಿಯಂತೆ. ಆತನಿಗೆ ನಂಬಿಕೆಯಿರ- ಬಹುದು ಆದರೆ ಇತರರ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲಾಗದು.
 49. 49 ಇಬ್ಬರು ವ್ಯಕ್ತಿಗಳಿಗೆ ಅಸಾಧ್ಯವಾದದ್ದು ಒಂದೂ ಇರದು - ದೇವರಿಗೆ ಹಾಗೂ ನಂಬಿಕೆಯುಳ್ಳ ವ್ಯಕ್ತಿಗೆ.
 50. 50 ಸ್ವಾಥ೯ಕ್ಕೆ ನೀವು ಸಾಯುವದಾದರೆ ಎಲ್ಲಾ ಸಮಯದಲ್ಲಿ ಹಾಗೂ ಎಲ್ಲಾ ಸನ್ನಿವೇಶಗಳಲ್ಲಿ ವಿಶ್ರಾಂತಿಯುಳ್ಳ ಸಮಾಧಾನದಲ್ಲಿರುವಿರಿ.