ಸೋಲಿನ ಉದ್ದೇಶ

ಬರೆದಿರುವವರು :   ಝ್ಯಾಕ್ ಪೂನನ್
    Download Formats:

ಅಧ್ಯಾಯ
ಈ ಪುಸ್ತಕವು ಮತ್ತು ನೀವು

ನೀವು ನಿಮ್ಮನ್ನು ”ನಿರೀಕ್ಷೆಯಿಲ್ಲದ ಸೋತವರು” ಎಂಬುದಾಗಿ ಕಾಣುತ್ತೀರೋ? ನೀವು ದೇವರನ್ನು ಮೆಚ್ಚಿಸುವ ನಿಮ್ಮ ಪ್ರಯತ್ನಗಳಲ್ಲಿ ಪುನ: ಪುನ: ಸೋತವರಾಗಿದ್ದೀರೋ? ನೀವು ನಿಮ್ಮ ಜೀವಿತವನ್ನೇ ಹಾಳು ಮಾಡಿಕೊಂಡಿರುವಿರೋ?

ಹಾಗಾದರೆ, ಈ ಪುಸ್ತಕವು ನಿಮಗಾಗಿರುತ್ತದೆ.

ದೇವರು ತನ್ನ ಮಕ್ಕಳ ಸೋಲಿನ ಮುಖಾಂತರವೂ ತನ್ನ ಮಹಿಮೆಯುಳ್ಳ ಉದ್ದೇಶವನ್ನು ನೆರವೇರಿಸಬಲ್ಲನು ಎಂಬುದು ಅತಿಶಯವಾದ ಸತ್ಯ. ನೀವು ಗತಕಾಲದಲ್ಲಿ ಎಂಥಾ ಮಹಾ ತಪ್ಪನ್ನು ಮಾಡಿದ್ದರೂ ಇಂದು ನೀವು ಹೊಸ ಪ್ರಾರಂಭವನ್ನು ಮಾಡಲು ಸಾಧ್ಯ. ನೀವು ಸಾವಿರ ಹೊಸ ಪ್ರಾರಂಭಗಳನ್ನು ಗತಕಾಲದಲ್ಲಿ ಮಾಡಿ ಮಾಡಿ ಸೋತಿದ್ದರೂ ನೀವು 1001ನೇ ಹೊಸ ಪ್ರಾರಂಭವನ್ನು ಇಂದು ಮಾಡಲು ಸಾಧ್ಯ. ದೇವರು ತನ್ನ ಪರಿಪೂರ್ಣ ಯೋಜನೆಯನ್ನು ನಿಮ್ಮ ಜೀವಿತದಲ್ಲಿ ನೇರವೇರಿಸಲು ಶಕ್ತನಾಗಿದ್ದಾನೆ.

ಒಂದು ವೇಳೆ ದೇವರು ತನ್ನ ಮಕ್ಕಳಿಗಾಗಿ ಅದ್ಭುತವನ್ನು ಮಾಡದೇ ಇರುವುದಕ್ಕೆ ಕಾರಣ, ಅವರು ಗತಕಾಲದಲ್ಲಿ ಸೋತಿದ್ದರಿಂದ ಅಲ್ಲ, ಆದರೆ ಅವರು ಈಗ ಆತನ ಮೇಲೆ ಭರವಸೆ ಇಡದೇ ಹೋಗಿರುವುದೇ ಆಗಿದೆ.

ನೀವು ನಿಮ್ಮ ಜೀವಿತದ ಅಂತ್ಯಕ್ಕೆ ಬಂದು ”ಬಿಟ್ಟು ಬಿಡಬೇಕು” ಎಂದು ಯೋಚಿಸುತ್ತಿದ್ದರೆ, ಈ ಪುಸ್ತಕವು ನಿಮಗಾಗಿ ಉತ್ತೇಜನದ ಮಾತನ್ನು ಹೊಂದಿರುತ್ತದೆ. ಮುಂದೆ ಓದಿರಿ . . . .

ಅಧ್ಯಾಯ 1
ಮನುಷ್ಯನ ಸೋಲಿನಲ್ಲಿ ದೇವರ ಉದ್ದೇಶ

[ಮುರಿಯಲ್ಪಟ್ಟ ಮನುಷ್ಯನ ಎರಡು ಮುಖ್ಯ ಗುಣಗಳಿವು:

  • 1. ವಿಶ್ವಾಸಿ ಅಥವಾ ಅವಿಶ್ವಾಸಿ ಯಾರನ್ನೂ ಅವನು ಕೀಳಾಗಿ ನೋಡುವುದಿಲ್ಲ.
  • 2. ಅವನು ತನ್ನ ಸೇವೆಯಲ್ಲಿ ಅಥವಾ ಆತ್ಮೀಕ ಬೆಳವಣಿಗೆಯಲ್ಲಿ ಹೆಮ್ಮೆ ಪಡುವುದಿಲ್ಲ.
  • ದೇವರು ಒಬ್ಬ ಮನುಷ್ಯನನ್ನು ಮುರಿದಿದ್ದಕ್ಕೆ ಯಾಕೋಬನು ಒಂದು ಒಳ್ಳೆಯ ಉದಾರಹಣೆಯಾಗಿದ್ದಾನೆ. ಅವನು ದೇವರನ್ನು ಎರಡು ಬಾರಿ ಸಂಧಿಸಿದನು. ಒಂದು ಬೇತೇಲಿನಲ್ಲಿ (ಆದಿಕಾಂಡ 28) ಇನ್ನೊಂದು ಪೆನಿಯೇಲಿನಲ್ಲಿ (ಆದಿಕಾಂಡ 32). ಬೇತೇಲ್ ಎಂದರೆ ದೇವರ ಮನೆ (ಸಭೆಯು) ಮತ್ತು ಪೆನೆಯೇಲ್ ಎಂದರೆ ದೇವರ ಮುಖ ಎಂದರ್ಥ. ನಾವೆಲ್ಲರೂ ಸಭೆಗಿಂಥ ಮುಂದೆ ಸಾಗಿ ದೇವರ ಮುಖವನ್ನು ನೋಡುವ ಅವಶ್ಯಕತೆ ಇದೆ.

    ಬೇತೇಲಿನಲ್ಲಿ ಸೂರ್ಯಾಸ್ತಮಾನವಾಯಿತು (ಆದಿಕಾಂಡ 28:11) ಎಂದು ಹೇಳುತ್ತದೆ. ಇದು ಭೌಗೋಳಿಕ ಸಂಗತಿಯಾದರೂ ಯಾಕೋಬನ ಜೀವನದಲ್ಲಿ ನಡೆಯುವುದನ್ನು ಅದು ಸೂಚಿಸುವಂಥದ್ದಾಗಿದೆ. ಏಕೆಂದರೆ ಮುಂದಿನ 2೦ ವರ್ಷಗಳು ಅವನಿಗೆ ಕಾರ್ಗತ್ತಲೆಯ ಅವಧಿಯಾಗಿತ್ತು. ನಂತರ ಪೆನೀಯೇಲಿನಲ್ಲಿ ಸೂರ್ಯೊದಯವಾಯಿತು (ಆದಿಕಾಂಡ 32:31) ಎಂದು ಹೇಳುತ್ತದೆ. ಇದೂ ಭೌಗೋಳಿಕ ಸಂಗತಿಯಾದರೂ ಯಾಕೋಬನು ಕಡೆಗೂ ದೇವರ ಬೆಳಕಿಗೆ ಬಂದದ್ದನ್ನು ತೋರಿಸುತ್ತದೆ.

    ಪೇತ್ರನ ಎರಡು ಪರಿವರ್ತನೆಯಿಂದ ಬಹಳಷ್ಟು ವಿಶ್ವಾಸಿಗಳು ಯಾರು ಕಾಲಾಂತರದಲ್ಲಿ ದೇವರೊಂದಿಗೆ ನಡೆದಿರುತ್ತಾರೋ ಅವರೆಲ್ಲರೂ ಸಹ ದೇವರೊಂದಿಗೆ ಎರಡು ಬಾರಿ ಭೇಟಿಯನ್ನು ಅನುಭವಿಸಿರುತ್ತಾರೆ. ಮೊದಲನೆಯದು ಅವರ ಹೊಸ ಹುಟ್ಟಿನ ಮೂಲಕ ದೇವರ ಮನೆಯನ್ನು (ಸಭೆ) ಪ್ರವೇಶಿಸುವುದು ಹಾಗೂ ಎರಡನೆಯದು ಅವರ ಮುಖಾಮುಖಿಯಾಗಿ ದೇವರನ್ನು ಭೇಟಿಯಾಗಿ ಪವಿತ್ರಾತ್ಮಭರಿತರಾಗಿ ತಮ್ಮ ಜೀವನವನ್ನೇ ಮಾರ್ಪಡಿಸಿದ ಸಂದರ್ಭ. ಬೇತೇಲಿನಲ್ಲಿ ಯಾಕೋಬನು ಒಂದು ಏಣಿಯು ಭೂಮಿಯಿಂದ ಸ್ವರ್ಗದವರೆಗೆ ಚಾಚಿಕೊಂಡಿರುವುದನ್ನು ಕನಸಿನಲ್ಲಿ ಕಂಡನು. ಯೇಸುವು ಯೋಹಾನ 1:51 ರಲ್ಲಿ ಏಣಿಯು ಭೂಮಿಯಿಂದ ಸ್ವರ್ಗಕ್ಕೇರಿ ಹೋಗುವ ಮಾರ್ಗವೆಂದು ಹಾಗೂ ಇದು ತನ್ನನ್ನೇ ನಿದರ್ಶಿಸುವುದೆಂದೂ ಅನುವಾದಿಸುತ್ತಾನೆ. ಆದ್ದರಿಂದ ಇಲ್ಲಿ ಯಾಕೋಬನು ಯೇಸುವು ಸ್ವರ್ಗದ ಹಾದಿಯನ್ನು ತೆರೆಯುವಂತೆ ಪ್ರವಾದನೆಯ ದರ್ಶನವನ್ನು ಕಂಡಿದ್ದನು. ನಂತರ ಕನಸಿನಲ್ಲಿ ಕರ್ತನು ಯಾಕೋಬನಿಗೆ ಹಲವು ವಾಗ್ದಾನಗಳನ್ನು ಮಾಡಿದ್ದನು. ಆದರೆ ಯಾಕೋಬನು ಬಹಳ ಪ್ರಾಪಂಚಿಕ ಮನಸ್ಸುಳ್ಳವನಾಗಿದ್ದರಿಂದ ಅವನು ಕೇವಲ ಪ್ರಾಪಂಚಿಕ ಭದ್ರತೆ, ಶಾರೀರಿಕ ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ದಿ ಇವುಗಳ ಬಗ್ಗೆ ಅಲೋಚಿಸಿದನು. ಆದ್ದರಿಂದ ಅವನು ದೇವರಿಗೆ "ಕರ್ತನೇ ಈ ಪ್ರಯಾಣದಲ್ಲಿ ನನ್ನ ಆಹಾರ ಬಟ್ಟೆಯ ಸೌಲಭ್ಯವನ್ನು ನೋಡಿಕೊಂಡು ಕ್ಷೇಮವಾಗಿ ಮನೆಗೆ ಹಿಂದಿರಿಗಿಸಿದರೆ ನನ್ನ ಆದಾಯದಲ್ಲಿ ಶೇಕಡ 1೦ ಭಾಗವನ್ನು ನಿನಗೆ ಕೊಡುವೆನು ಎಂದನು. ಯಾಕೋಬನು ದೇವರನ್ನು ತನ್ನನ್ನು ನೋಡಿಕೊಳ್ಳುವ ಕಾವಲುಗಾರನಂತೆ ನೋಡಿದನು ಹಾಗೂ ತಾನು ಹೇಳಿದ್ದಂತೆ ಮಾಡಿದರೆ ತನ್ನ ಆದಾಯದಲ್ಲಿ ಶೇಕಡ 1೦ ಭಾಗ ಸಂಬಳವನ್ನು ಕೊಡುವುದಾಗಿ ತಿಳಿಸಿದನು.

    ಇಂದು ಬಹಳಷ್ಟು ವಿಶ್ವಾಸಿಗಳು ಕೂಡಾ ದೇವರನ್ನು ಹೀಗೆಯೇ ಉಪಚರಿಸುತ್ತಾರೆ. ಅವರು ಆತನಿಂದ ಕೇವಲ ಲೌಕಿಕ ಅನುಕೂಲಗಳನ್ನು ಅಪೇಕ್ಷಿಸುತ್ತಾರೆ. ಹಾಗೇ ದೇವರು ಅವರ ಬೇಡಿಕೆಗಳನ್ನು ಪೂರೈಸಿದರೆ ತಪ್ಪದೇ ಸಭಾಕೂಟಗಳಿಗೆ ಹಾಜರಾಗುತ್ತಾರೆ ಮತ್ತು ಕರ್ತನ ಕೆಲಸಕ್ಕೆ ಅವರ ಆದಾಯದ ಸ್ವಲ್ಪ ಹಣವನ್ನು ಕೊಡುತ್ತಾರೆ. ಇಂಥವರು ದೇವರೊಂದಿಗೆ ವ್ಯಾಪಾರ ಮಾಡುತ್ತಿರುತ್ತಾರೆ. ಈ ಲೋಕದ ವ್ಯಾಪಾರಿಯಂತೆ ಯಾವಾಗಲೂ ತಮ್ಮ ಅದಾಯದ ಅನುಕೂಲಗಳನ್ನು ನೋಡಿಕೊಳ್ಳುತ್ತಾರೆ.

    ಯಾಕೋಬನು ತನ್ನ 2೦ ವರ್ಷಗಳನ್ನು ಈ ಲೋಕದ ವಸ್ತುಗಳನ್ನು ದೋಚಿಕೊಳ್ಳುವುದರಲ್ಲಿಯೂ ಕಳೆದನು. ಅವನು ಲಾಬಾನನ ಕುಟುಂಬದಿಂದ ತನ್ನ ಹೆಂಡತಿಯನ್ನು ದೋಚಿಕೊಳ್ಳಲು ಪ್ರಯತ್ನಿಸಿದನು ಹಾಗೂ ಇಬ್ಬರನ್ನೂ ಹೊಂದಿಕೊಂಡನು. ಆದರೆ ಅವನಿಗೆ ಇಬ್ಬರೂ ಬೇಕಿರಲಿಲ್ಲ. ಆದರೆ ಇಬ್ಬರೂ ಸಿಕ್ಕಿದರು. ನಂತರ ಲಾಬನನ್ನು ಮೋಸಗೊಳಿಸಿ ಅವನ ಕುರಿಗಳನ್ನು ಹೊಂದಿ ಶ್ರೀಮಂತನಾದನು. ಲಾಬಾನನ ಮನೆಗೆ ಹೋದಾಗ ಬಿಡಿಗಾಸಿಲ್ಲದ ಬಡವನಂತೆ ಹೋದರೂ ಅಲ್ಲಿ ಅವನು ಶ್ರೀಮಂತನಾದನು. ಸಂಶಯವಿಲ್ಲದೇ ಇಂದು ಬಹಳಷ್ಟು ವಿಶ್ವಾಸಿಗಳೂ ಹೇಳಿಕೊಳ್ಳುವಂತೆ ತನ್ನ ಅಭಿವೃದ್ದಿಗೆ ದೇವರ ಅಶೀರ್ವಾದವೇ ಕಾರಣ ಎಂದು ಹೇಳಿಕೊಂಡಿರಬಹುದು. ಆದರೆ ದೇವರ ಆಶೀರ್ವಾದದ ನಿಜ ಗುರುತೇನು ಅಭಿವೃದ್ದಿಯೋ? ಇಲ್ಲ. ಬದಲಿಗೆ ಕ್ರಿಸ್ತನಂತೆ ನಮ್ಮ ಗುಣ ಮಾರ್ಪಾಡುವುದು ಆಗಿರುತ್ತದೆ. ನಿಮ್ಮ ಜೀವಿತವು ದೇವರಿಗೆ ಮತ್ತು ಜನರಿಗೆ ಪ್ರಯೋಜನವಿಲ್ಲದ್ದಾಗಿದ್ದರೆ ನಿಮಗೆ ಒಳ್ಳೆಯ ಕೆಲಸ, ಒಳ್ಳೆಯ ಮನೆ ಮತ್ತು ಅನುಕೂಲಗಳಿದ್ದೇನು ಪ್ರಯೋಜನ? ಆದರೆ ಯಕೋಬನೊಂದಿಗಿನ ವ್ಯವಹಾರವನ್ನು ದೇವರಿನ್ನೂ ಮುಗಿಸಿರಲಿಲ್ಲ. ಪೆನೀಯೇಲನಲ್ಲಿ ಮತ್ತೆ ದೇವರು ಅವನನ್ನು ಭೇಟಿಯಾದರು.

    ನನ್ನ ಪ್ರಿಯ ಸಹೋದರ ಸಹೋದರಿಯರೇ, ಇಲ್ಲಿ ನಾನು ಹೇಳ ಬಯಸುವುದು ನಿಮಗೆ ದೇವರೊಂದಿಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಆ ಭೇಟಿಯು ನೀವು ಜೀವನದ ತಳಭಾಗವನ್ನು ಮುಟ್ಟಿದಾಗ ದೇವರು ನಿಮ್ಮನ್ನು ನ್ಯಾಯತೀರ್ಮಾನಿಸಿ ನರಕಕ್ಕೆ ಕಳುಹಿಸದೇ ಪವಿತ್ರಾತ್ಮಭರಿತರಾಗಿರಿಸುವುದು.

    ಆದಿಕಾಂಡ 32ರಲ್ಲಿ ಓದುತ್ತೇವೆ. ಯಾಕೋಬನ ಸಹೋದರ ಏಸಾವನು ತನ್ನನ್ನು ಸಂಧಿಸಲು ಬರುವುದನ್ನು ಕೇಳಿದಾಗ ಬಹಳ ಭಯಪಟ್ಟನು. (2೦ ವರ್ಷಗಳ ಹಿಂದೆ ಮೋಸಮಾಡಿ ಈತನಿಂದ ಜೇಷ್ಠ ಪುತ್ರನ ಹಕ್ಕನ್ನು ಪಡೆದಿದ್ದನು). ಏಸಾವನು ಬಂದು ತನ್ನನ್ನು ಕೊಂದುಹಾಕಿ ಬಿಡುವನೆಂದುಕೊಂಡಿದ್ದನು. ದೇವರು ನಮ್ಮನ್ನು ಹೆದರುವಂತಹ ಪರಿಸ್ಥಿತಿಯನ್ನು ಅನುಮತಿಸುವುದು ಒಳ್ಳೆಯದಾಗಿರುತ್ತದೆ. ಏಕೆಂದರೆ ಜನರು ಏನು ಮಾಡುತ್ತಾರೋ ಎಂಬ ಭಯ ಬಂದಾಗ ನಾವು ದೇವರಲ್ಲಿಗೆ ಓಡುತ್ತೇವೆ. ಪೆನೀಯೇಲಿನಲ್ಲಿ ಯಾಕೋಬನು ಒಬ್ಬನೇ ಇದ್ದನು. (ಆದಿಕಾಂಡ 32:24). ದೇವರು ನಮ್ಮನ್ನು ಸಂಧಿಸುವ ಮೊದಲು ಒಬ್ಬಂಟಿಗರನ್ನಾಗಿ ಮಾಡಬೇಕು. ಆದ್ದರಿಂದ ಇಂದಿನ ದಿನಗಳಲ್ಲಿ ಪ್ರಪಂಚದ ಜೀವಿತವು ಬಹಳ ಅವಸರದಲ್ಲಿ ಸಾಗುವಂತೆ (ವಿಶೇಷವಾಗಿ ನಗರಗಳಲ್ಲಿ) ಸೈತಾನನು ನಿಯಮಿಸಿದ್ದಾನೆ. ಇದರಿಂದ ಹಲವಾರು ವಿಶ್ವಾಸಿಗಳಿಗೆ ದೇವರೊಂದಿಗೆ ಒಬ್ಬರೇ ಸಮಯ ಕಳೆಯಲು ಸಮಯವೇ ಸಿಕ್ಕದಂತಾಗಿದೆ ಹಾಗೂ ಇಂದಿನ ಕ್ರೈಸ್ತ ರಾಜ್ಯದ ದುರಂತವೆಂದರೆ ಜನರ ಜೀವಿತವು ಎಷ್ಟು ಅವಿಶ್ರಾತಿವುಳ್ಳದ್ದಾಗಿದೆ ಎಂದರೆ ದೇವರೆಂಬ ಪದವು ಅವರ ದಿನಚರಿಯಲ್ಲಿ ಇಲ್ಲವೇ ಇಲ್ಲದ್ದಾಗಿದೆ.

    ದೇವರು ಯಾಕೋಬನೊಂದಿಗೆ ಆ ರಾತ್ರಿ ಹಲವು ಗಂಟೆಗಳ ಕಾಲ ಹೋರಾಟ ನಡೆಸಿದನು. ಆದರೆ ಯಾಕೋಬನು ಶರಣಾಗಲಿಲ್ಲ. ಯಾಕೋಬನ ಕಳೆದ 2೦ ವರ್ಷಗಳಲ್ಲಿ ನಡೆದದಕ್ಕೆ ಈ ಹೋರಾಟವು ಒಂದು ಚಿಹ್ನೆಯಾಗಿತ್ತು. ದೇವರು ಯಾಕೋಬನ ಮೊಂಡುತನವನ್ನು ನೋಡಿ ಕೊನೆಗೆ ಅವನ ತೊಡೆಯ ಕೀಲನ್ನು ಸ್ಥಳಾಂತರಿಸಿದನು. ಆಗ ಯಾಕೋಬನು ಕೇವಲ 4೦ ವರ್ಷ ವಯಸ್ಸಿನವನಾಗಿದ್ದು ಬಹಳ ಬಲಶಾಲಿಯಾಗಿದ್ದನು. ಅವನ ಅಜ್ಜ ಅಬ್ರಹಾಮನು ಸುಮಾರು 175 ವರ್ಷಗಳ ಕಾಲ ಬದುಕಿದ್ದನು. ಅದ್ದರಿಂದ ಯಾಕೋಬನು ಇನ್ನೂ ಶೇಕಡ 75 ಭಾಗದಷ್ಟು ಜೀವಿತವು ಉಳಿದಿದ್ದು ಅವನ ತನ್ನ ಹರೆಯದ ಮುಂಚೂಣಿಯಲ್ಲಿದ್ದನೆಂದು ಹೇಳಬಹುದು. ಈ ತೊಡೆಯ ಕೀಲಿನ ಸ್ಥಳಾಂತರಗೊಂಡಿದ್ದು ಈ ಯೌವನ ಪ್ರಾಯದಲ್ಲಿ ಅವನಿಗೆ ಇಷ್ಟವಿಲ್ಲದ್ದಾಗಿತ್ತು ಹಾಗೂ ಇದು ಅವನ ಭವಿಷ್ಯದ ಎಲ್ಲಾ ಯೋಜನೆಗಳನ್ನು ಮುರಿದು ಬೀಳಿಸಿತ್ತು. ಇಂದಿನ ಸರಾಸರಿ ಆಯಸ್ಸನ್ನು ಹೋಲಿಸುವುದಾದರೆ ಸುಮಾರು 2೦ ವರ್ಷ ಪ್ರಾಯದಲ್ಲಿದ್ದವನು ತನ್ನ ಸೊಂಟ ಮುರಿದುಕೊಂಡು ಊರುಗೋಲಿನ ಆಶ್ರಯದಿಂದ ಮುಂದಿನ ಜೀವನವೆಲ್ಲಾ ಕಳೆದಂತೆ ಇದೊಂದು ಬೇಸರದ ಸಂಗತಿಯಾಗಿತ್ತು. ಇದರ ನಂತರ ಯಾಕೋಬನು ತನ್ನ ಉಳಿದೆಲ್ಲಾ ಜೀವಿತದಲ್ಲಿ ಈ ಊರುಗೋಲಿನ ಸಹಾಯವಿಲ್ಲದೇ ನಡೆಯದಂತಾದನು.

    ದೇವರು ಯಾಕೋಬನನ್ನು ಹಲವಾರು ವಿಧಗಳಲ್ಲಿ ಮುರಿಯಲು ಪ್ರಯತ್ನಿಸಿದನು. ಆದರೆ ಯಶಸ್ವಿಯಾಗಲಿಲ್ಲ. ಕಡೆಗೆ ಈ ಶಾಶ್ವತವಾದ ಶಾರೀರಿಕ ಊನವನ್ನು ಮಾಡಿಬಿಟ್ಟನು. ಇದೇ ಯಾಕೋಬನ ಮುರಿಯುವಿಕೆಯಲ್ಲಿ ಯಶಸ್ವಿಯಾಯಿತು. ಇದೇ ಉಚಿತವಾದರೆ ನಮಗೂ ದೇವರು ಇದನ್ನೇ ಮಾಡುತ್ತಾನೆ. ಆತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಹೆಚ್ಚಿನ ಅಪಾಯಗಳಿಂದ ರಕ್ಷಿಸಲು ಶಿಕ್ಷಿಸುತ್ತಾನೆ ಹಾಗೂ ತಿದ್ದುತ್ತಾನೆ. ದೇವರು ನಿಮ್ಮನ್ನು ತಿದ್ದುವುದನ್ನು ನಿಲ್ಲಿಸಿಬಿಟ್ಟರೆ ನಿಮಗೆ ಆರೋಗ್ಯ ಹಣ ಹಾಗೂ ಐಶ್ವರ್ಯಗಳನ್ನು ಕೊಟ್ಟು ನೀವು ಒಂದು ಹಿಂಜಾರಿದ ಜೀವನವನ್ನು ನಡೆಸಲು ಅನುಮತಿಸಿ ನಿಮ್ಮ ಜೀವಿತವು ಇತರರಿಗೆ ಹಾಗೂ ದೇವರಿಗೆ ಪ್ರಯೋಜನವಿಲ್ಲದಂತಾಗಿಸುತ್ತಾರೆ. ಆದರೆ ಇದು ಯಾರಿಗೆ ಬೇಕು? ನಾನಚಿತೂ ಆತನ ಯೋಜನೆ ಹಾಗೂ ಉದ್ದೇಶಗಳಿಗೆ ತಕ್ಕಂತೆ ಆತನೊಂದಿಗೆ ಈ ಭೂಮಿಯಲ್ಲಿ ನಡೆಯಲು ನನ್ನನ್ನು ಮುರಿಯಲು ಹಾಗೂ ತೀವ್ರವಾಗಿ ಶಿಕ್ಷಿಸಲು (ಅವಶ್ಯವಿದ್ದರೆ ಶಾರೀರಿಕವಾಗಿ ಕೂಡಾ) ದೇವರನ್ನು ಅನುಮತಿಸುತ್ತೇನೆ.

    ಅಪೋಸ್ತಲ ಪೌಲನಿಗೆ ಕೂಡ ಮುರಿದಿರುವ ಸ್ಥಿತಿಯಲ್ಲಿ ಇರಿಸಲು ಶಾರೀರಿಕ ಮುಳ್ಳಿನ ಅವಶ್ಯಕವಿತ್ತು.(2ಕೋರಿಂಥ12:7) ಪೌಲನ ಈ ಮುಳ್ಳು ಅವನನ್ನು ಯಾವಾಗಲೂ ನೋಯಿಸಿದಂತಹ ಯಾವುದೋ ಶಾರೀರಿಕ ಊನವಾಗಿರಬಹುದು. ಈ ಸೈತಾನನ ದೂತನು ತೊಲಗಲೆಂದು ದೇವರಲ್ಲಿ ಅವನು ಮತ್ತೆ ಮತ್ತೆ ಪ್ರಾರ್ಥಿಸಿದನು. ಆದರೆ ದೇವರು ಇದು ಸೈತಾನನ ದೂತನಾದರೂ ಇದನ್ನು ನಿನ್ನಿಂದ ತೆಗೆಯುವುದಿಲ್ಲ. ನಿನ್ನನ್ನು ದೀನನಾಗಿಸಲು ಇದರ ಅವಶ್ಯಕತೆ ಇದೆ ಹಾಗೂ ಇದರಿಂದ ನೀನು ನನಗೂ ಇತರರಿಗೂ ಉಪಯುಕ್ತವಾಗಿರುತ್ತಿ ಎಂದು ಹೇಳಿದನು.

    ದೇವರು ಯಾಕೋಬನ ಸೊಂಟ ಮುರಿದ ನಂತರ ಸರಿ ನನ್ನ ಕೇಲಸವನ್ನು ಮಾಡಿದ್ದೇನೆ ನನ್ನನ್ನು ಹೋಗಲು ಬಿಡು ನಿನಗೆ ನಾನೆಂದೂ ಬೇಕಾಗಿರಲಿಲ್ಲ. ನಿನಗೆ ಬೇಕಾಗಿದ್ದದ್ದು ಹಣ ಮತ್ತು ಹೆಣ್ಣು ಎಂದು ಹೇಳಿದನು. ಆದರೆ ಯಾಕೋಬನು ಈಗ ದೇವರನ್ನು ಹೋಗಲು ಬಿಡಲಿಲ್ಲ. ಕೊನೆಗೂ ಅವನು ಬದಲಾದನು. ಹೆಣ್ಣು ಮತ್ತು ಅಭಿವೃದ್ದಿಯನ್ನು ಮಾತ್ರ ಹಿಡಿಯಲು ತನ್ನ ಜೀವನವನ್ನು ಕಳೆದ ಈ ಮನುಷ್ಯ ಈಗ ದೇವರನ್ನು ಹಿಡಿದು ನೀನು ನನ್ನನ್ನು ಆಶೀರ್ವದಿಸುವ ಹೊರತು ನಿನ್ನನ್ನು ಹೋಗಲು ಬಿಡುವುದಿಲ್ಲ ಎಂದು ಹೇಳಿದನು. ಯಾಕೋಬನ ಸೊಂಟ ಮುರಿದಾಗ ಎಚಿಥಹ ಅಮೋಘವಾದ ಕಾರ್ಯವು ಅವನ ಹೃದಯದಲ್ಲಿ ಕೈಗೊಂಡಿತ್ತೆಂದರೆ ಈಗ ದೇವರನ್ನು ಬಿಟ್ಟು ಬೇರೆ ಏನನ್ನೂ ಅಪೇಕ್ಷಿಸಲಿಲ್ಲ.

    ಒಂದು ಹಳೆಯ ಹೇಳಿಕೆಯಂತೆ ನಿನ್ನಲ್ಲಿ ದೇವರನ್ನು ಬಿಟ್ಟು ಬೇರೇನೂ ಉಳಿಯದಿದ್ದಾಗ ನಿನಗೆ ದೇವರೇ ಸಾಕೆನಿಸುವುದು. ಇದು ಸತ್ಯ. ಆಗ ದೇವರು ವಿಚಾರಿಸಿದನು. ನಿನ್ನ ಹೆಸರೇನು? ಯಕೋಬನು ನನ್ನ ಹೆಸರು ಯಾಕೋಬ ಎಂದು ಉತ್ತರಿಸುತ್ತಾನೆ. ಯಾಕೋಬ ಎಂದರೆ ಮೋಸಗಾರ ಎಚಿದರ್ಥ.

    ಕೊನೆಯ ಯಾಕೋಬನು ತಾನು ಮೊಸಗಾರನೆಂದು ಒಪ್ಪಿಕೊಳ್ಳುತ್ತಾನೆ. ನೀನು ಮೋಸಗಾರನೋ ನೀನು ಒಬ್ಬ ಆತ್ಮಿಕ ಮನುಷ್ಯನೆಂದು ಹೇಳಿಕೊಳ್ಳುತ್ತಾ ಮೋಸ ಮಾಡುತ್ತಿರುವಿಯಾ? ಹಾಗಿದ್ದರೆ ಇಂದು ದೇವರ ಮುಂದೆ ಪ್ರಾಮಾಣಿಕವಾಗಿ ನಾನೊಬ್ಬ ಕಪಟಿಯೆಂದು ಹೇಳಿಕೊಳ್ಮ್ಳತ್ತಿಯಾ? ಹಲವು ವರ್ಷಗಳ ಹಿಂದೆ ತನ್ನ ಕುರುಡ ತಂದೆ ಇಸಾಕನು ಅವನ ಹೆಸರನ್ನು ಕೇಳಿದಾಗ ಯಾಕೋಬನು ಏಸಾವ ಎಂಬುದಾಗಿ ನಾಟಕ ಮಾಡಿದ್ದನು. ಆದರೆ ಈಗ ಪ್ರಾಮಾಣಿಕನಾಗಿದ್ದನು. ತಕ್ಷಣ ದೇವರು ನೀನೆಂದಿಗೂ ಮೋಸಗಾರ(ಯಾಕೋಬ)ನಾಗಿರುವುದಿಲ್ಲ.(ವಾಕ್ಯ28) ಎಂದು ಅವನಿಗೆ ಹೇಳಿದನು. ಇದೊಂದು ಪ್ರೋತ್ಸಾಹಕ ವಾಕ್ಯವಲ್ಲವೇ?.

    ನೀವು ಕೇಳಿಸಿಕೊಂಡಿರಾ? ನೀವೆಂದೂ ಮೋಸಗಾರರಾಗಿರಬೇಕಾಗಿಲ್ಲ. ಹಲ್ಲೆಲ್ಲೂಯಾ! ಅಂದರೆ ನೀವು ಪಾಪದಲ್ಲಿ ಬೀಳುವುದಿಲ್ಲವೆಂದಲ್ಲ. ಆದರೆ ನಿಮ್ಮ ಜೀವನದಲ್ಲಿ ಎಂದಿಗೂ ಮೋಸವಿರುವುದಿಲ್ಲ. ನಿಮ್ಮ ಜೀವನದಲ್ಲಿ ಎಂದಿಗೂ ಕಪಟತನ ಕೂಡ ಇರುವುದಿಲ್ಲ. ನಂತರ ದೇವರು ಯಾಕೋಬನಿಗೆ "ಇಂದಿನಿಂದ ನಿನ್ನ ಹೆಸರು ಇಸ್ರಾಯೇಲ್(ದೇವರ ಯುವರಾಜ) ಏಕೆಂದರೆ ನೀನು ಜನರ ಮತ್ತು ದೇವರೊಂದಿಗೆ ಹೋರಾಡಿ ಜಯಗಳಿಸಿದ್ದಿ" ಎಂದು ಹೇಳಿದನು. ಮೋಸಗಾರನಿಂದ ದೇವರ ಯುವರಾಜನಾಗಿ ಎಂಥಹ ಪರಿವರ್ತನೆಯಲ್ಲವೇ? ಇದೇಲ್ಲಾ ಸಾಧ್ಯವಾದದ್ದು ಯಾಕೋಬನು ಮುರಿಯಲ್ಪಟ್ಟಾಗಲೇ. ಇದೇ ನಮ್ಮ ಕರೆಯುವಿಕೆಯಾಗಿದೆ. ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಯುವರಾಜನಂತೆ ಕುಳಿತು ಸೈತಾನನ ಮೇಲೆ ಆತ್ಮಿಕ ಅಧಿಕಾರವನ್ನು ಉಪಯೋಗಿಸುತ್ತಾ ಸೈತಾನನ ಹಿಡಿತದಲ್ಲಿರುವ ಜನರನ್ನು ಬಿಡಿಸುವುದೇ ಆಗಿದೆ. ಕ್ರಿಸ್ತನ ದೇಹದ ಸದಸ್ಯರಾದ ನಾವು ದೇವರ ಜನರೊಂದಿಗೆ ಶಕ್ತಿಯನ್ನು ಹೊಂದಿ ಜಯಗಳಿಸಬೇಕಾಗಿದೆ. ಆದರೆ ಇದು ನಾವು ಮುರಿದಾಗಲೇ ಸಾಧ್ಯವಾಗುತ್ತದೆ ಮತ್ತು ನಾವು ದೇವರೊಂದಿಗೆ ನಮ್ಮ ಕಪಟತನ ಹಾಗೂ ಮೋಸದ ಬಗ್ಗೆ ಪ್ರಾಮಾಣಿಕರಾದಾಗ ಮಾತ್ರ ಮುರಿಯಲ್ಪಡುತ್ತೇವೆ.

    ಬಹಳ ವರ್ಷಗಳ ನಂತರ ಯಾಕೋಬನ ವಂಶಸ್ಥನಾದ ನತಾನೀಯೇಲನನ್ನು ಯೇಸುವು ಭೇಟಿಯಾದಾಗ ಹೇಳಿದನು. ಇವನು ನಿಜವಾದ ಇಸ್ರಾಯೇಲನು ಇವನಲ್ಲಿ ಯಾಕೋಬನಿಲ್ಲ.(ಕಪಟವಿಲ್ಲ) ಎಂದು (ಯೋಹಾನ1:47). ನಂತರ ನತಾನೀಯೇಲನಿಗೆ ಯಾಕೋಬನಿಗೆ ಬೇತೇಲಿನಲ್ಲಿ ಕಾಣಿಸಿದ ಏಣಿಯ ಬಗ್ಗೆ ನೆನಪಿಸುತ್ತಾ ಅವನೂ ಒಬ್ಬ ಇಸ್ರಾಯೇಲನು ಎಂದು ಹೇಳಿದನು. ಇದು ನತಾನೀಯೇಲನು ಪರಿಪೂರ್ಣನಾಗಿದ್ದರಿಂದಲ್ಲ. ಬದಲಿಗೆ ಅವನಲ್ಲಿ ಯಾವುದೇ ಕಪಟತನ ಹಾಗೂ ಮೋಸವಿಲ್ಲದ್ದರಿಂದ. ಇಲ್ಲಿ ಹೇಳುತ್ತದೆ- ಕಡೆಗೆ ಯಕೋಬನು ದೇವರ ಮುಖವನ್ನು ನೋಡಿದ್ದರಿಂದ ಆ ಸ್ಥಳವನ್ನು ಅವನು ಪೇನೀಯೇಲ್ ಎಂದು ಕರೆದನು. ಬೇತೇಲಿನಲ್ಲಿ ದೇವರ ಮನೆಯೇ ಹೆಚ್ಚೆಂದುಕೊಂಡಿದ್ದನು. ನೀವು ಕೂಡಾ ದೇವರ ಮನೆಯಲ್ಲಿರಬಹುದು. ಆದರೆ ದೇವರ ಮುಖ ನೋಡದೇ ಇರಬಹುದು. ನಂತರ ನಿಮಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಅಲ್ಲಿ ಆತನ ಮುಖವನ್ನು ಕಾಣುವಿರಿ. ಇಲ್ಲಿ ಯಾಕೋಬನು ಆಶ್ಚರ್ಯದೊಂದಿಗೆ ಹೇಳುತ್ತಾನೆ. ನಾನೀಗ ನಿನ್ನ ಮುಖ ನೋಡಿದೆ. ದೇವರೆ ನನ್ನ ಜೀವವು ರಕ್ಷಿಸಲ್ಪಟ್ಟಿತು. ನಾನು ಸಂಸ್ಥೆಯಿಂದ ತೆಗೆಯಲ್ಪಡಬೇಕಿತ್ತು. ಆದರೆ ನನ್ನ ಸಂಬಳವು ಮೂರರಷ್ಟು ಹೆಚ್ಚಿಸಲ್ಪಟ್ಟಿತು.

    ನಾನು ನರಕಕ್ಕೆ ಕಳುಹಿಸಲ್ಪಡಬೇಕಿತ್ತು. ಆದರೆ ಆತನು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದನು. ಹಲ್ಲೆಲೂಯ!!

    ಏಕೆ ಬಹಳಷ್ಟು ವಿಶ್ವಾಸಿಗಳು ಪವಿತ್ರಾತ್ಮಭರಿತರಾಗಿಲ್ಲವೆಂಬುದರ ಕಾರಣ ಈಗ ನನಗೆ ತಿಳಿದೆದೆಯೆಂದು ಯೋಚಿಸುತ್ತೇನೆ. ಅವರು ಅದನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಹಲವಾರು ಧರ್ಮಗಳಲ್ಲಿ ಬಹಳಷ್ಟು ಯಥಾರ್ಥ ಜನರು ತಮ್ಮ ಪಾಪಕ್ಷಮೆಗಾಗಿ ಹುಡುಕುತ್ತಿದ್ದಾರೆ. ಅವರೇಕೆ ಪಾಪಕ್ಷಮೆ ಹೊಂದುವುದಿಲ್ಲ? ಏಕೆಂದರೆ ಅವರು ಅದನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ.

    ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಹೇಗೆ ಪಡೆದಿರಿ. ನೀವು ಅದನ್ನು ಸಂಪಾದಿಸಿಕೊಂಡಿರಾ ಅಥವಾ ಅದಕ್ಕೆ ಅರ್ಹರಾಗಿದ್ದೀರಾ? ನಿಮ್ಮ ಜೀವನದಲ್ಲಿ ಒಂದು ದಿನ ದೇವರ ಕ್ಷಮೆಗೆ ನೀವು ಯೋಗ್ಯರೆ ಅಲ್ಲವೆಂದು ನೀವು ತಿಳಿದುಕೊಂಡಿರಿ. ಆಗ ನೀವು ಒಬ್ಬ ಕ್ರೈಸ್ತನಂತಲ್ಲ ಒಬ್ಬ ಪಾಪಿಯಂತೆ ಬಂದಿರಿ ಹಾಗೂ ತಕ್ಷಣವೇ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟವು. ಇದೇ ರೀತಿಯಲ್ಲಿ ನಾವು ಪವಿತ್ರಾತ್ಮಭರಿತರಾಗಲು ಬರಬೇಕಿದೆ.

    ಇಂದು ಬಹಳಷ್ಟು ವಿಶ್ವಾಸಿಗಳು ಪವಿತ್ರಾತ್ಮಭರಿತರಾಗಲು ಉಪವಾಸ ಪ್ರಾರ್ಥನೆ ಮಾಡಿ ಕಾಯುತ್ತಿದ್ದಾರೆ. ಇದೆಲ್ಲಾ ಮಾಡುವುದರಿಂದ ಯಾವುದೇ ತಪ್ಪಿಲ್ಲ. ಅವೆಲ್ಲಾ ಒಳ್ಳೆಯದೇ. ಆದರೆ ಇದರಲ್ಲಿ ಯಾವುದನ್ನು ನೀವು ಪವಿತ್ರಾತ್ಮಭರಿತರಾಗಲು ಯೋಗ್ಯರಾಗುವುದಕ್ಕಾಗಿ ಮಾಡಿದರೆ ನೀವು ತಪ್ಪು ದಾರಿಯಲ್ಲಿದ್ದೀರಿ. ಅಂತಹ ಸಂದರ್ಭದಲ್ಲಿ ಪವಿತ್ರಾತ್ಮಭರಿತರಾಗದಿದ್ದರೆ ನೀವು ದೇವರನ್ನು ಪ್ರಶ್ನಿಸಬಹುದು: ಕರ್ತನೇ ನಾನು ಪ್ರಾರ್ಥಿಸಿದೆ, ಉಪವಾಸ ಮಾಡಿದೆ, ಕಾದೆ, ಆದರೆ ಏಕೆ ಇನ್ನೂ ನನ್ನನ್ನು ತುಂಬಿಸಿಲ್ಲ? ಎಂದು. ಆದರೆ ನೀವೆಂದೂ ಪವಿತ್ರಾತ್ಮನನ್ನು ಸಂಪಾದಿಸಲು ಹಾಗೂ ಅದಕ್ಕಾಗಿ ಯೋಗ್ಯರಾಗಲು ಸಾಧ್ಯವಿಲ್ಲವೋ ನೀವು ಪಾಪಕ್ಷಮೆಯನ್ನು ಸಂಪಾದಿಸಲು ಹಾಗೂ ಯೋಗ್ಯರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಇವೆರಡೂ ದೇವರ ಉಡುಗೊರೆಯಾಗಿದೆ. ಅದಕ್ಕಾಗಿ ನೀವು ಏನನ್ನೂ ಕೊಡಲು ಸಾಧ್ಯವಿಲ್ಲ. ನೀವದನ್ನು ಉಚಿತವಾಗಿ ತೆಗೆದುಕೊಳ್ಳಬೇಕು. ಇಲ್ಲವೇ ನಿಮಗದು ಸಿಗುವುದೇ ಇಲ್ಲ.

    ದೇವರ ಉಡುಗೊರೆಗಳೆಲ್ಲವೂ ಉಚಿತವಾಗಿವೆ. ಆದರೆ ಮನುಷ್ಯನು ಅವುಗಳನ್ನು ಪಡೆಯಲು ಏನಾದರೂ ಕೊಡಲು ಪ್ರಯತ್ನಿಸುವುದರೊಂದಿಗೆ ಅವುಗಳನ್ನು ಪಡೆಯುವುದಿಲ್ಲ. ದೇವರ ಉಡುಗೊರೆಗಳನ್ನು ಹೊಂದಲು ನೀವು ಯೋಗ್ಯರಾಗಲು ಪ್ರಯತ್ನಿಸಿದರೆ ನೀವೆಂದಿಗೂ ಅವುಗಳನ್ನು ಹೊಂದುವುದಿಲ್ಲ. ನೀವಿನ್ನೂ ಪವಿತ್ರಾತ್ಮಭರಿತರಾಗದ್ದಕ್ಕೆ ಇದೇ ಮುಖ್ಯ ಕಾರಣವಿರಬಹುದು.

    ಯೇಸುವು ಈ ಭೂಮಿಯಲ್ಲಿದ್ದಾಗ ಫರಿಸಾಯರು ತಾವೇ ಪಾಪಕ್ಷಮೆಯನ್ನು ಪಡೆಯಲು ಎಲ್ಲರಿಗಿಂತ ಯೋಗ್ಯರಾದವರೆಂದು ಯೋಚಿಸಿದರು. ಆದರೆ ಅವರು ಅದನ್ನು ಪಡೆಯದೇ ನರಕಕ್ಕೆ ಹೋದರು. ಹಾಗೆ ಬಹು ಪಾಪಿಯಾಗಿದ್ದ ಮಗ್ದಲದ ಮರಿಯಳು ಪಾಪ ಪರಿಹಾರವನ್ನು ತಕ್ಷಣವೇ ಪಡೆದಳು ಅಪರಾಧ ಜೀವಿತವನ್ನೆ ನಡೆಸಿದ ಆ ಕಳ್ಳನು ಶಿಲುಬೆಗೇರಿಸಿದ ದಿನವೇ ಕ್ಷಣಮಾತ್ರದಲ್ಲೇ ಪಾಪಕ್ಷಮೆಯನ್ನು ಪಡೆದು ಪರದೈಸಿಗೆ ಹೋದನು.

    ದೇವರು ತನ್ನ ಒಳ್ಳೇ ಉಡುಗೊರೆಗಳನ್ನು ಅದಕ್ಕೆ ಯೋಗ್ಯರಲ್ಲದವರಿಗೆ ಕೊಡುತ್ತಾರೆ. ದ್ರಾಕ್ಷೆ ತೋಟದಲ್ಲಿ ಕೆಲಸ ಮಾಡಲು ಕಡೆಯ ಗಳಿಗೆಯಲ್ಲಿ ಬಂದವರಿಗೆ ಅವರು ಯಾವುದನ್ನೂ ಸ್ವೀಕರಿಸಲು ಅರ್ಹರಲ್ಲವೆಂದು ತಿಳಿದಿತ್ತು. ಆದರೆ ಮೊದಲು ಬಂದವರ ಸಂಬಳಕ್ಕೆ ಅರ್ಹರೆಂದು ಯೋಚಿಸಿದರು ಮತ್ತು ಅವರೇ ಕಡೆಯವರಾದರು. ದುಂದುಗಾರ ಮಗನ ದೃಷ್ಟಾಂತದಲ್ಲಿ ಆ ತಂದೆಯ ಕೈಯಲ್ಲಿ ಒಂದು ಉಂಗುರವಿತ್ತೆಂದು ನಾವು ಓದುತ್ತೇವೆ. ಒಂದು ದಿನ ಎಲ್ಲಾ ಹಣವನ್ನು ಹಾಳು ಮಾಡಿದ ಕಿರಿಯ ಮಗನಿಗೆ ಆ ಉಂಗುರವನ್ನು ಕೊಟ್ಟು ಬಿಟ್ಟನು. ಏಕೆ ಆ ಹಿರಿಯ ಮಗನಿಗೆ ಕೊಡಲಿಲ್ಲ. ಏಕೆಂದರೆ ಅವನು ಸ್ವನೀತಿ ಉಳ್ಳವನಾಗಿದ್ದನು. ಮಾನವ ದೃಷ್ಟಿಯಿಂದ ನೋಡುವುದಾದರೆ ಹಿರಿಯ ಮಗನೇ ಆ ಉಂಗುರಕ್ಕೆ ಯೋಗ್ಯನು ಆದರೆ ಆ ತಂದೆಯು ತನ್ನ ಕಿರಿಯ ಮಗನಿಗೆ ಕೊಟ್ಟು ಬಿಟ್ಟನು.

    ಅದು ದೇವರ ಮಾರ್ಗ ತನ್ನ ಸನ್ನಿಧಿಯಲ್ಲಿ ಯಾರು ಹೆಮ್ಮೆ ಪಡಬಾರದೆಂಬ ಕಾರಣಕ್ಕೆ ಮತ್ತು ಮನುಷ್ಯನ ಅಹಂಕಾರವನ್ನು ಅಡಗಿಸಲು ದೇವರು ಹೀಗೆ ಮಾಡುತ್ತಾರೆ. ಆತನ ಹಾದಿಯು ನಮ್ಮ ಹಾದಿಯಲ್ಲ ಮತ್ತು ಆತನ ಯೋಚನೆಯು ನಮ್ಮ ಯೋಚನೆಯಲ್ಲ.

    ನಾನಿಲ್ಲಿ ಒತ್ತಿ ಹೇಳಲು ಪ್ರಯತ್ನಿಸುತ್ತಿರುವ ಸತ್ಯವನ್ನು ನೀವು ಅರ್ಥಮಾಡಿಕೊಂಡರೆ, ದೇವರು ಮನುಷ್ಯನಲ್ಲಿ ಹೀಗೆ ವ್ಯವಹರಿಸುತ್ತಾರೆಂಬ ಮೂಲತತ್ವವನ್ನು ಅರ್ಥ ಮಾಡಿಕೊಂಡಂತಾಗುತ್ತದೆ. ಮೊದಲು ದೇವರ ದಯೆಯೇ ನನ್ನನ್ನು ಪಶ್ಚಾತ್ತಾಪಕ್ಕೆ ನಡೆಸಿತು. ನಂತರ ಆಗಾಗ್ಗೆ ಅನುಭವಿಸಿದ ಪ್ರತಿಯೊಂದು ದೇವರ ದಯೆಯು ನನ್ನನ್ನು ಇನ್ನೂ ಹೆಚ್ಚಿನ ಪಶ್ಚಾತ್ತಾಪಕ್ಕೆ ನಡೆಸಿತು.

    ದೇವರ ದಯೆಯೇ ನಿಮ್ಮನ್ನೂ ಸಹ ಪಶ್ಚಾತ್ತಾಪಕ್ಕೆ ನಡೆಸಲಿ. ಆತನು ಒಳ್ಳೆತನದ ದುರ್ಲಾಭ ಮಾಡಿಕೊಳ್ಳಬಾರದು. ದೇವರು ಹಲವರು ವಿಧಗಳಲ್ಲಿ ದಯಾವಂತರಾಗಿದ್ದಾರೆ. ಆದರೆ ಅವರು ದಯೆ ತೋರಿದಾಕ್ಷಣಕ್ಕೆ ನಮ್ಮ ವಿಷಯಗಳಲ್ಲಿ ಸಂತೋಷವಾಗಿದ್ದಾರೆಂದು ನಾವು ಪರಿಗಣಿಸಬಾರದು. ಇಲ್ಲ. ಅವರು ಎಲ್ಲಾ ಮನುಷ್ಯರಿಗೂ ದಯಾವಂತನು. ಅವರ ದಯೆಯು ಕೇವಲ ನಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸುವುದಕ್ಕೋಸ್ಕರವಾಗಿದೆ ಹಾಗೂ ನಾವು ಯಾವುದೇ ಕಪಟವಿಲ್ಲದೆ ಅವರ ಕಡೆಗೆ ತಿರುಗಿಕೊಂಡರೆ ನಮ್ಮ ಕೈಯಲ್ಲೂ ಕೂಡಾ ಅವರ ಉಂಗುರವನ್ನು ತೊಡಿಸುತ್ತಾರೆ. ಅವರು ಆ ಉಂಗುರವನ್ನು ನಮ್ಮಂಥ ಪಾಪಿಗೋಸ್ಕರವೆಂತಲೇ ಇಟ್ಟಿದ್ದಾರೆ.

    ಒಮ್ಮೆ ಯೇಸು ಪರಿಸಾಯರನ್ನು ಕುರಿತು ಕ್ಷೇಮದಿಂದಿರುವವರಿಗೆ ವೈದ್ಯನ ಅಗತ್ಯವಿಲ್ಲ ಆದರೆ ಕ್ಷೇಮವಿಲ್ಲದವರಿಗೆ ವೈದ್ಯನ ಅಗತ್ಯವಿದೆ (ಮತ್ತಾಯ 9:12) ಎಂದು ಈ ಅಣಕು ಮಾತನ್ನು ಪ್ರೀತಿಯಿಂದ ಅವರನ್ನು ಎಚ್ಚರಿಸಲು ಹೇಳಿದನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.

    ಯೇಸುವು ಯಾರು ತಮ್ಮನ್ನು ತಾವೇ ನೀತಿವಂತರೆಂದುಕೊಳ್ಳುತ್ತಾರೋ ಅಂತವರನ್ನು ಕರೆಯಲು ಬರಲಿಲ್ಲ. ಆದರೆ ಯಾರು ತಾವು ಪಾಪಿಗಳೆಂದು ಒಪ್ಪಿಕೊಳ್ಳುತ್ತಾರೋ ಅಂತವರಿಗಾಗಿ ಇಂದು ಹಲವರು ಆ ಫರಿಸಾಯರ ಹಾಗೆ ಕಪಟತನ, ಅಹಂಕಾರ ಹಾಗೂ ಸ್ವನೀತಿಯೆಂಬ ರೋಗಿಗಳಾಗಿದ್ದು ಅದನ್ನು ಅರಿಯದೇ ಇರುವುದೂ ಸಾಧ್ಯ. ಈ ರೋಗಗಳು ಏಡ್ಸ್ ಮತ್ತು ಕ್ಯಾನ್ಸರ್ ಗಳಿಗಿಂತ ಗಂಭೀರವಾದವುಗಳು ಹಾಗೂ ಕೊಲೆ ಮತ್ತು ವ್ಯಭಿಚಾರಗಳು ಇದರ ಮುಂದೆ ಶೀತ ಮತ್ತು ಜ್ವರವಿದ್ದಂತೆ. ಈ ರೋಗಗಳು ನಿಮ್ಮನ್ನು ಸಂಪೂರ್ಣವಾಗಿ ಹಾಳು ಮಾಡಿ ಬಿಡುತ್ತವೆ. ಕೊಲೆಗಾರರು ಮತ್ತು ವ್ಯಭಿಚಾರಿಗಳು ಅತೀ ರೋಗಿಗಳೆಂದು ನೀವು ಯೋಚಿಸಬಹುದು. ಆದರೆ ನಿಜವಾಗಿ ನೀವು ಅವರಿಗಿಂತ ಗಂಭೀರವಾದ ರೋಗಿಯಾಗಿರಬಹುದು.

    ದೇವರು ತನ್ನ ಜೀವ ಶಕ್ತಿ ಅಧಿಕಾರಗಳನ್ನು ನಮಗೆ ಕೊಡಬಯಸುತ್ತಾನೆ. ಅದ್ದರಿಂದ ನಾವು ಪೂರ್ಣವಾಗಿ ಮುರಿಯುವವರೆಗೆ ಪದೇ ಪದೇ ಸೋಲುವಂತೆ ಅನುಮತಿಸುತ್ತಾನೆ. ಯೋಬನ ಕಥೆಯಲ್ಲಿ ನಾವು ನೋಡುವುದಾದರೆ ದೇವರು ಅವನ ಆಸ್ತಿ, ಮಕ್ಕಳು ಹಾಗೂ ಆರೋಗ್ಯವನ್ನು ಕಳೆದುಕೊಳ್ಳುವಂತೆ ಅನುಮತಿಸುವುದರೊಂದಿಗೆ, ಅವನನ್ನು ಪೂರ್ಣ ತಳ ಭಾಗಕ್ಕೆ ತಂದನು. ಒಂದು ವಿಧದಲ್ಲಿ ಅವನು ತನ್ನ ಹೆಂಡತಿಯನ್ನೂ (ಆಕೆ ಅವನನ್ನು ಯಾವಾಗಲೂ ದೂಷಿಸುತ್ತಿದ್ದಳು) ಹಾಗೂ ಅವನ ಮೂರು ಜನ ಸ್ನೇಹಿತರನ್ನೂ (ಅವನನ್ನು ಅಪಾರ್ಥ ಮಾಡಿಕೊಂಡು ಖಂಡಿಸಿದರು) ಕಳೆದುಕೊಂಡನು.

    ಅವನ ಸ್ನೇಹಿತರು ಸ್ವನೀತಿಯುಳ್ಳ ಬೋಧಕರಾದರು ಹಾಗೂ ಅವನು ಬಿದ್ದಾಗ ಒದೆಯುವುದರಲ್ಲಿ ಸಂತೋಷಪಟ್ಟರು. ದೇವರು ತನ್ನ ದಯೆಯಿಂದ ಇದಕ್ಕೆ ಒಂದು ಕೊನೆ ತರುವವರೆಗೆ ಅವನನ್ನು ಒದೆಯುತ್ತಲೇ ಇದ್ದರು. ಈ ಎಲ್ಲಾ ಪರೀಕ್ಷೆಗಳ ಮಧ್ಯೆ ಯೋಬನು ತಾನು ಮತ್ತೆ ಮತ್ತೆ ನೀತಿಕರಿಸಿಕೊಳ್ಳುತ್ತಿದ್ದನು. ಕಡೆಗೆ ದೇವರು ಅವನೊಂದಿಗೆ ಮಾತನಾಡಿದಾಗಲೇ ಯೋಬನು ತನ್ನಲ್ಲಿನ ಸ್ವನೀತಿಯ ಮೋಸವನ್ನು ಕಂಡುಕೊಂಡು ಪಶ್ಚಾತ್ತಾಪಪಟ್ಟನು. ಅವನು ನೀತಿವಂತ ಮನುಷ್ಯನಾಗಿದ್ದನು. ಅದು ಒಳ್ಳೆಯದು. ಆದರೆ ದೇವರು ವ್ಯವಹರಿಸಿದ ನಂತರ ಅವನೊಬ್ಬ ಮುರಿದಂತಹ ಮನುಷ್ಯನಾದನು. ಅಂದಿನಿಂದ ಅವನು ದೇವರಲ್ಲಿ ಮಾತ್ರ ಸಂತೋಷಪಟ್ಟನು. ಹೀಗೆ ಯೋಬನಲ್ಲಿ ದೇವರು ಉದ್ದೇಶವು ಪೂರ್ಣವಾಯಿತು.

    ಯೋಬನು ಮುರಿಯಲ್ಪಟ್ಟಾಗ ದೇವರಿಗೆ ಏನು ಹೇಳುತ್ತಾನೆಂದು ಇಲ್ಲಿ ನೋಡಿ ಇಲ್ಲಿಯವರೆಗೆ ಈ ಬೋಧಕರಿಂದ ನನ್ನ ಕಿವಿಯಿಂದ ನಿನ್ನನ್ನು ಕುರಿತು ಕೇಳಿದ್ದೇನೆ. ಆದರೆ ಈಗ ನನ್ನ ಕಣ್ಣಿನಿಂದ ನಿನ್ನನ್ನು ಮುಖಾಮುಖಿ ನೋಡಿದೆನು (ಯೋಬ 42:5) ಅದೇ ಯೋಬನ ಪೇನೀಯೇಲ್ ಆಗಿತ್ತು ಹಾಗೂ ಅವನು ದೇವರು ಮುಖವನ್ನು ನೋಡಿದನು ಮತ್ತು ಅವನ ಜೀವವು ರಕ್ಷಿಸಲ್ಪಟ್ಟಿತು. ಇದರ ಫಲಿತಾಂಶವೇನಾಯಿತು? ಅವನು ಧೂಳಿನಲ್ಲಿಯೂ ಹಾಗೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಟ್ಟನು (ವಾಕ್ಯ 6). ಅ ಬೋಧಕರು ಹಲವಾರು ದಿನಗಳಲ್ಲಿ ಬೋಧನೆಯಿಂದ ಯೋಬನಲ್ಲಿ ಪೂರೈಸಲಾಗದ್ದನ್ನು ದೇವರು ಒಂದೇ ಕ್ಷಣದಲ್ಲಿ ತನ್ನ ದಯೆಯನ್ನು ಪ್ರಕಟಿಸುವುದರ ಮೂಲಕ ಪೂರೈಸಿದನು. ಇಲ್ಲಿ ಕೂಡಾ ದೇವರ ದಯೆಯೇ ಯೋಬನನ್ನು ಪಶ್ಚಾತ್ತಾಪಕ್ಕೆ ನಡೆಸಿತು.

    ನಮ್ಮಲ್ಲಿ ಹೆಚ್ಚಿನಾಂಶ ಜನರು ಸಭಾಕೂಟಗಳಲ್ಲಿ ಬೋಧಕರಿಂದ ದೇವರ ಬಗ್ಗೆ ಕೇಳುತ್ತಾರೆ. ಆದರೆ ನಮಗೆ ಬೇಕಿರುವುದು ದೇವರೊಂದಿಗಿನ ಮುಖಾಮುಖಿ ಭೇಟಿ ಹಾಗೂ ಅಲ್ಲಿ ಆತನ ದಯೆಯನ್ನು ನೋಡಿ ಅದರಿಂದ ಮುರಿಯಲ್ಪಡುವುದು.

    ಪೇತ್ರನಿಗಾದದ್ದು ಅದೇ. ಪ್ರಭುವನ್ನು ಮೂರು ಬಾರಿ ನಿರಾಕರಿಸಿದ ನಂತರ ಪ್ರಭುವಿನ ಮುಖವನ್ನು ನೋಡಿದನು. ಹಾಗೆ ಪೇತ್ರನೂ ಕೂಡಾ ತನ್ನ ಪೇನೀಯೇಲನ್ನು ಅನುಭವಿಸಿದನು. ಅಲ್ಲಿ ನಾವು ಓದುತ್ತೇವೆ. ಆಗ ಕರ್ತನು ಹಿಂದಿರುಗಿ ಪೇತ್ರನ ಕಡೆಗೆ ನೋಡಿದನು (ಲೂಕ 22:61) ಎಂದು. ಆ ನೋಟವು ಹೀಗಾಗುವುದೆಂದು ನಾನು ಹೇಳಿದ್ದೆನು ಎಂದು ಹೇಳುತ್ತಿರಲಿಲ್ಲ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳಬೇಡ. ನಾನು ನಿನ್ನನ್ನು ಇದರಿಂದ ಹೊರಗೆ ನಡೆಸುತ್ತೇನೆ ಇಂದು ಹೇಳುವುದಾಗಿತ್ತು.

    ಇದರ ಫಲಿತಾಂಶವೇನಾಯಿತು? ಪೇತ್ರನು ಹೊರಗೆ ಹೋಗಿ ಬಹು ವ್ಯಥೆ ಪಟ್ಟು ಅತ್ತನು (ಲೂಕ 22:62). ಯೇಸುವಿನ ಅ ದಯಾಪೂರ್ಣ ಮತ್ತು ಕ್ಷಮಾಭರಿತ ನೋಟವು ಅ ಗಡಸು ಮೀನುಗಾರನ ಹೃದಯವನ್ನು ಮುರಿದುಬಿಟ್ಟಿತು.

    ಹಳೆಯ ಒಡಂಬಡಿಕೆಯಲ್ಲಿ ದೇವರು ಇಸಾಯೇಲಿಗೆ ಆರೋಗ್ಯ, ಐಶ್ವರ್ಯ ಮತ್ತು ಬಹಳಷ್ಟು ಲೌಕೀಕ ಆಶೀರ್ವಾದಗಳನ್ನು ವಾಗ್ದಾನಮಾಡಿದನು. ಅದೆಲ್ಲಕ್ಕೂ ಹೆಚ್ಚಿನದೆಂದರೆ - ಅದನ್ನು ಅರಣ್ಯಕಾಂಡದಲ್ಲಿ 6:22-26ರಲ್ಲಿ ತಿಳಿಸಲಾಗಿದೆ. ಇಲ್ಲಿ ಆರೋನನು ಜನರನ್ನು ಅಶೀರ್ವದಿಸಲು ಅಪ್ಪಣೆ ಪಡೆದು ಹೀಗೆ ಹೇಳುತ್ತಾನೆ. ಯೆಹೋವನು ತನ್ನ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿಮಗೆ ಕೃಪೆ ತೋರಿಸಲಿ. ಯೆಹೋವನು ತನ್ನ ಮುಖವನ್ನು ನಿಮ್ಮ ಕಡೆಗೆ ಎತ್ತಿ ನಿಮಗೆ ಸಮಾಧಾನ ಅನುಗ್ರಹಿಸಲಿ.

    ತಮ್ಮ ಜೀವಿತವನ್ನು ಬದಲು ಮಾಡುವ ದೇವರೊಂದಿಗಿನ ಮುಖಾಮುಖಿ ದರ್ಶನವನ್ನು ಹುಡುಕುವ ಬದಲು ಇಂದಿನ ಬಹಳಷ್ಟು ವಿಶ್ವಾಸಿಗಳು ಸ್ವಾರ್ಥಕ್ಕಾಗಿ ಆರೋಗ್ಯ ಹಾಗೂ ಐಶ್ವರ್ಯಗಳನ್ನು ಬೇಡುತ್ತಾರೆ ಹಾಗೂ ಹುಡುಕುತ್ತಾರೆ.(ಇದನ್ನು ಅವಿಶ್ವಾಸಿಗಳು ಯಾವ ಪ್ರಾರ್ಥನೆ ಮಾಡದೇ ಗಳಿಸುತ್ತಾರೆ) ಮತ್ತು ಭಾವನಾ ಅನುಭವಗಳನ್ನು ಬಯಸುತ್ತಾರೆ (ಇದರಲ್ಲಿ ಹೆಚ್ಚಿನಾಂಶ ಕೋಟಾ) ನಾವು ಶ್ರೀಮಂತರಾಗದಿದ್ದರೂ ಪರವಾಗಿಲ್ಲ ಮತ್ತು ಗುಣ ಹೊಂದದಿದ್ದರೂ ಪರವಾಗಿಲ್ಲ. ಆದರೆ ದೇವರ ಮುಖವನ್ನು ನೋಡಿದರೆ ನಮ್ಮೆಲ್ಲಾ ಅವಶ್ಯಕತೆಗಳು ಪೂರೈಸಲ್ಪಡುವುವು.

    ಯೋಬನು ದೇವರನ್ನು ಸಂಧಿಸಿದಾಗ ಅವನ ದೇಹವೆಲ್ಲಾ ಹುಣ್ಣಾಗಿತ್ತು. ಆದರೆ ಅವನು ತನ್ನನ್ನು ಗುಣಪಡಿಸುವುದಾಗಿ ದೇವರನ್ನು ಕೇಳಲಿಲ್ಲ. ಬದಲಿಗೆ ನಾನು ದೇವರ ಮುಖವನ್ನು ನೋಡಿದ್ದೇನೆ. ಅಷ್ಟೇ ಸಾಕು ಎಂದು ಅವನು ಹೇಳಿದನು. ಬಹಳ ವಿವೇಚನೆಯುಳ್ಳ ಮತ್ತು ದೇವರಿಂದ ವಾಕ್ಯ ಹೊಂದಿದ್ದೇವೆಂದು ಹೇಳಿಕೊಂಡ ಆ ಮೂರು ಬೋಧಕರು ಯೋಬನು ಕೆಲವು ಗುಪ್ತ ಪಾಪಗಳಿಂದ ತನ್ನ ಜೀವನದಲ್ಲಿ ಶಿಕ್ಷೆಗೊಳಗಾಗಿದ್ದಾನೆಂದು ತಿಳಿಸಿದರು. ಇಂದೂ ಸಹ ಇಂಥಹ ತಾವೇ ನೇಮಿಸಿಕೊಂಡಂಥ ಬಹಳಷ್ಟು ಪ್ರವಾದಿಗಳು ದೇವರು ಹೀಗೆ ಹೇಳುತ್ತಾನೆ ಎಂದು ಸುಳ್ಳು ಹೇಳಿಕೊಂಡು ದೇವರ ಮಕ್ಕಳನ್ನು ಖಂಡನೆಗೆ ತರುತ್ತಾರೆ. ಆದರೆ ದೇವರು ಆ ಮೂವರು ಬೋಧಕರು ಯೋಬನನ್ನು ನ್ಯಾಯ ತೀರ್ಮಾನಕ್ಕೆ ಒಳಪಡಿಸಿ ಹೆದರಿಸಿದಂತೆ ಹೆದರಿಸಲಿಲ್ಲ.

    ದೇವರು ಯೋಬನಿಗೆ ಅವನ ಸೋಲುಗಳ ವಿಷಯವಾಗಿ ಹೇಳಲಿಲ್ಲ ಹಾಗೂ ಒತ್ತಡಗಳ ಸಮಯದಲ್ಲಿ ತನ್ನ ವಿರುದ್ಧವೇ ದೂರುಗಳನ್ನು ಹೇಳಿದ್ದರ ಬಗ್ಗೆ ನೆನಪಿಸಲಿಲ್ಲ. ದೇವರು ಕೇವಲ ತನ್ನ ಕರುಣೆಯನ್ನು ಯೋಬನಿಗೆ ಪ್ರಕಟಿಸಿದನು - ದೇವರ ಕರುಣೆಯನ್ನು ಮನುಷ್ಯನ ಸಂತೋಷಕ್ಕಾಗಿ ಸೃಷ್ಟಿಗೊಂಡ ಈ ಸುಂದರವಾದ ವಿಶ್ವದಲ್ಲಿ ಹಾಗೂ ಅವನ ಅಧೀನವಾಗಿರುವಂತೆ ಸೃಷ್ಟಿಗೊಂಡ ಪ್ರಾಣಿಗಳಲ್ಲಿ ನೋಡಬಹುದಾಗಿದೆ. ಈ ತರಹದ ದೇವರ ಕರುಣೆಯ ಪ್ರಕಟಣೆಯೇ ಯೋಬನನ್ನು ಮಾನಸಾಂತರಕ್ಕೆ ನಡೆಸಿತು. ಬಹಳಷ್ಟು ಜನರು ದೇವರ ಕರುಣೆಯ ಲಾಭ ಪಡೆದು ಅದನ್ನು ಕಡೆಗಣಿಸುತ್ತಾರೆ. ಆದರೆ ಇದು ಯೋಬನನ್ನು ಮಾನಸಾಂತರಕ್ಕೆ ನಡೆಸಿತು. ನಂತರ ದೇವರು ಅವನಿಗೆ ಮೊದಲಿದ್ದದಕ್ಕಿಂತ ಎರಡರಷ್ಟು ಆಶೀರ್ವದಿಸಿದನು.

    ದೇವರು ನಮ್ಮನ್ನು ಮುರಿಯುವುದರಲ್ಲಿನ ಅಂತಿಮ ಉದ್ದೇಶವೆಂದರೆ; ನಾವು ಯಕೋಬ 5:11 ರಲ್ಲಿ ಓದುವಂತೆ ನಮ್ಮನ್ನು ಅಪಾರವಾಗಿ ಆಶೀರ್ವದಿಸುವುದೇ ಆಗಿರುತ್ತದೆ. ಯೋಬನಲ್ಲಿರುವ ಸ್ವನೀತಿ ಹಾಗೂ ಗರ್ವವನ್ನು ನಾಶಮಾಡಿ ಅವನನ್ನು ಮುರಿದಂತಹ ಮನುಷ್ಯನಾಗಿ ಮಾಡಿ ಕರ್ತನು ತನ್ನ ಮುಖವನ್ನು ತೋರಿಸಿ ನಂತರ ಅವನನ್ನು ಅಪಾರವಾಗಿ ಆಶೀರ್ವದಿಸಬೇಕೆಂಬುದೇ ಕರ್ತನ ಮನಸ್ಸಿನಲ್ಲಿದ್ದ ಮೂಲ ಗುರಿಯಾಗಿತ್ತು. ನಾವು ದೇವರಿಂದ ಪಡೆಯುವ ಪ್ರಾಪಂಚಿಕ ಹಾಗೂ ಶಾರೀರಿಕ ಅಶೀರ್ವಾದಗಳು ಅವುಗಳ ಹಿಂದಿರುವ ದೇವರ ಮುಖವನ್ನು ನೋಡದಿದ್ದರೆ ನಮ್ಮನ್ನು ದೇವರಿಂದ ದೂರ ನಡೆಸಿ ನಾಶ ಮಾಡುವ ಸಾಧ್ಯತೆ ಇದೆ.

    ಕರ್ತನ ಒಂದು ನೋಟವು ನಮಗೆ ಪ್ರಪಂಚ ಕೊಡುವ ಎಲ್ಲಾ ರೀತಿಯ ಹಂಬಲದಿಂದ ಬಿಡಿಸಿ ಬಿಡುತ್ತದೆ.

    ನಿಮ್ಮ ಮುಖಾರವಿಂದದ ದೈವೀಕ ಪ್ರೀತಿಯ

    ಒಂದು ಕ್ಷಣಿಕ ಪ್ರಭೆಯನ್ನು ತೋರಿಸಿ

    ಮತ್ತು ನಾನೆಂದಿಗೂ ನಿಮ್ಮನ್ನು ಬಿಟ್ಟು

    ಬೇರೇನನ್ನೂ ಯೋಚಿಸುವುದಿಲ್ಲ ಅಥವಾ ಸ್ವಪ್ನಿಸುವುದಿಲ್ಲ.

    ಎಲ್ಲಾ ಕೆಳಗಿನ ಪ್ರಭೆಗಳು ಅದೃಷ್ಟವಾಗಲಿ

    ಎಲ್ಲಾ ಕೆಳಗಿನ ಮಹಿಮೆಗಳು ಕುಂದಲಿ

    ಈ ಲೋಕದಲ್ಲಿ ಸುಂದರವಾದವುಗಳೆಲ್ಲವೂ

    ಎಂದೆಂದಿಗೂ ಸುಂದರವಾಗಿ ಕಾಣದಿರಲಿ".

    ಪೇತ್ರನು ಕರ್ತನ ಮುಖವನ್ನು ನೋಡಿದಾಗ ಬಹಳವಾಗಿ ಅತ್ತನು. ಈಗ ನಾವು ಕಲ್ಪಿಸಬಹುದು. ಪೇತ್ರನು, ಕಡೆಗೂ ಮುರಿಯಲ್ಪಟ್ಟನೆಂದು. ಆದರೆ ಇಲ್ಲ. ಆತನು ತನ್ನ ಪಿನಿಯೇಲ್ಗೆ ಸಿದ್ದವಾಗಲು ಕರ್ತನು ಮತ್ತೊಂದು ಸೋಲಿನ ಅನುಭವ ಮೂಲಕ ನಡೆಸಬೇಕಾಗಿತ್ತು. ಯೋಹಾನ 21:3 ರಲ್ಲಿ ಪೇತ್ರನು ತನ್ನ ಸಹ ಅಪೋಸ್ತಲರಿಗೆ ನಾನು ಮೀನು ಹಿಡಿಯಲು ಹೋಗುತ್ತೇನೆ ಎಂದು ಹೇಳುವುದನ್ನು ಓದುತ್ತೇವೆ. ಅವನು ಆ ಸಂಜೆಗೆ ಮಾತ್ರ ಮೀನು ಹಿಡಿಯಲು ಹೋಗುತ್ತೇನೆಂದು ಹೇಳಲಿಲ್ಲ. ಅವನು ಹೇಳಿದ್ದರ ಅರ್ಥ ನಾನು ಸೋತವನಾಗಿರುವುದರಿಂದ ಈ ಅಪೋಸ್ತಲನಾಗಿರುವುದನ್ನು ಬಿಟ್ಟು ಶಾಶ್ವತವಾಗಿ ಮೀನು ಹಿಡಿಯಲು ಹೋಗುತ್ತೇನೆಂದು.

    ಹಲವು ವರ್ಷಗಳ ಹಿಂದೆ ಕರ್ತನು ಪೇತ್ರನನ್ನು ಕರೆದಾಗ ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಬಿಟ್ಟಿದ್ದನು ಹಾಗೂ ಅವನಿಗೆ ತಿಳಿದಂತೆ ಪ್ರಾಮಾಣಿಕವಾಗಿ ತನ್ನೆಲ್ಲವನ್ನು ಬಿಟ್ಟು ಪ್ರಭುವನ್ನು ಹಿಂಬಾಲಿಸಿದ್ದನು. ಆದರೆ ಈಗ ಅವನು ಸೋತವನಾಗಿದ್ದನು. ಅವನು ಅಪೋಸ್ತಲನಾಗಿರುವುದು ತನಗೆ ತಕ್ಕ ಕೆಲಸವಲ್ಲವೆಂದು ಅಂದುಕೊಂಡಿದ್ದನು. ಮೂರುವರೆ ವರ್ಷಗಳು ಎಲ್ಲಾ ಕಾಲದಲ್ಲಿಯೂ ಉತ್ತಮವಾಗಿ ಜೀವಿಸಿದ ಮಹಾಬೋಧಕನಿಂದ ಅತೀ ಶಕ್ತಿಯುತವಾದ ಸಂದೇಶಗಳನ್ನು ಕೇಳಿದ ನಂತರವೂ ಒಂದು ಬಾರಿಯಲ್ಲ ಮೂರು ಬಾರಿ ಪ್ರಭುವನ್ನು ನೇರವಾಗಿ ನಿರಾಕರಿಸಿದ್ದನು. ಅವನು ಅಪೋಸ್ತಲನಾಗಿ ಸಾಕಷ್ಟು ಅನುಭವಿಸಿದ್ದನು. ಆದರೆ ಅವನು ಒಂದನ್ನು ಉತ್ತಮವಾಗಿ ಮಾಡಲು ಶಕ್ತನಾಗಿದ್ದನು. ಅದು ಮೀನು ಹಿಡಿಯುವುದು. ಅವನ ಬಾಲ್ಯದಿಂದ ಇದನ್ನೆ ಮಾಡಿದವನಾಗಿದ್ದನು ಹಾಗೂ ಇದರಲ್ಲಿ ಪ್ರವೀಣನಾಗಿದ್ದನು. ಆದ್ದರಿಂದ ಮತ್ತೊಮ್ಮೆ ಮೀನುಗಾರನಾಗಲು ನಿರ್ಧರಿಸಿದನು. ಇತರ ಅಪೋಸ್ತಲರು ಕೂಡಾ ಹಾಗೆಯೇ ಯೋಚಿಸಿದರು. ಅವರೆಲ್ಲರೂ ಪ್ರಭುವನ್ನು ಆತನ ಅವಶ್ಯಕತೆಯಲ್ಲಿ ಆತನನ್ನಗಲಿ ಓಡಿ ಹೋಗಿದ್ದರು ಹಾಗೂ ಅವರೂ ಮೀನು ಹಿಡಿಯುವುದಕ್ಕೆ ಹೋಗುವುದರಲ್ಲಿದ್ದರು. ಏಕೆಂದರೆ "ಅಪೋಸ್ತಲ"ರಾಗಿ ಅವರೆಲ್ಲರೂ ಸೋತಿದ್ದರು..!!

    ಅವರೆಲ್ಲರೂ ಯಥಾರ್ಥ ಜನರಾಗಿದ್ದರು ಹಾಗೂ ಯೇಸುವಿನ ಸಂದೇಶಗಳನ್ನು ಮೆಚ್ಚಿ ಆತನನ್ನು ಕೇಳುವಾಗ ಅವರ ಹೃದಯಗಳು ಹತ್ತಿ ಉರಿದಿದ್ದವು ಅವರು ಆತನನ್ನು ಪೂರ್ಣ ಹೃದಯದಿಂದ ಅನುಸರಿಸಲು ಬಯಸಿದ್ದರು. ಆದರೆ ಸೋತರು.

    ನಿಮ್ಮ ಅನುಭವವು ಹೀಗೆಯೇ ಆಗಿರಬಹುದು. ನೀವು ಕೂಡಾ ಶಕ್ತಿಯುತವಾದ ಸಂದೇಶಗಳನ್ನು ಕೇಳಿ ಅದರಿಂದ ಉತ್ತೇಜಿತರಾಗಿರಬಹುದು. ದೇವರ ವಾಕ್ಯಗಳನ್ನು ಕೇಳಿದಾಗ ನಿಮ್ಮ ಹೃದಯವೂ ಹತ್ತಿ ಉರಿದಿರಬಹುದು. ನೀವೂ ಕೂಡಾ ಎಲ್ಲವನ್ನು ಬಿಟ್ಟು ನಿಷ್ಕಪಟತೆಯಿಂದ ಪ್ರಭುವನ್ನು ಹಿಂಬಾಲಿಸಲು ಬಯಸಿರಬಹುದು. ಒಂದು ಪಕ್ಷ ಶಕ್ತಿಯುತವಾದ ಸಂದೇಶಗಳನ್ನು ಕೇಳಿದಾಗ ಆಗಾಗ್ಗೆ ನಿರ್ಧಾರಗಳನ್ನು ಮಾಡಿರಬಹುದು. ಸೋಲುಗಳು ಮರುಕಳಿಸಿದಾಗ ಈಗ ನಿಜವಾಗಿ ಅನುಸರಿಸುತ್ತೇನೆ ಎಂದು ಹೇಳಿಕೊಂಡಿರಬಹುದು. ಆದರೆ ಮತ್ತೆ ಮುಂದೆ ಹೋಗಿ ಸೋತಿರಬಹುದು ಹಾಗೂ ಇಂದು ಹಿಂದಿರುಗಿ ನೋಡಿದರೆ ಬಹುಶ: ಸೋಲುಗಳ ರಾಶಿಯೇ ಬಿದ್ದಿರುವುದನ್ನು ಕಾಣಬಹುದು. ಇಂದು ನಿಮ್ಮಲ್ಲಿ ಹಲವರು ಧೈರ್ಯಗೆಟ್ಟು ಹೀಗ ಯೋಚಿಸುತ್ತಿರಬಹುದು. ಇದು ಪ್ರಯೋಜನವಿಲ್ಲದ್ದು. ನಾನು ಅಶಕ್ತನು. ಇದನ್ನು ಬಿಟ್ಟು ಬಿಡುವುದೇ ಉತ್ತಮ. ಈ ಶುಭ ಸಂದೇಶವು ಬೇರೆಯವರಿಗೇ ಸರಿ ಆದರೆ ನನ್ನಲ್ಲಿ ಇದು ಕಾರ್ಯ ನಡೆಸುವಂತೆ ಕಾಣುವುದಿಲ್ಲ. ನಾನು ಬಹಳ ತಪ್ಪಿದ್ದೇನೆ ಹಾಗೂ ಇದನ್ನು ನನ್ನಿಂದ ಸರಿ ಪಡಿಸಲು ಸಾಧ್ಯವಿಲ್ಲ.

    ಇಂದು ನಿಮಗೂ ಹೀಗನ್ನಿಸುತ್ತಿದೆಯೇ? ನೀವು ಮತ್ತೆ ಪ್ರಯತ್ನಿಸುವುದು ಪ್ರಯೋಜನವಿಲ್ಲವೆಂದು ಪ್ರಯತ್ನಿಸುವುದೇ ಬೇಡವೆಂದು ನಿರ್ಧರಿಸಿದ್ದೀರಾ? ಭವಿಷ್ಯದ ಕೆಲವು ಶೂನ್ಯ ತೃಪ್ತಿಯನ್ನು ಹುಡುಕುವುದಕ್ಕೋಸ್ಕರ ಮತ್ತೆ ಲೋಕಕ್ಕೆ ಹಿಂದಿರುಗಲು ನಿರ್ಧರಿಸಿದ್ದೀರಾ. ಕ್ರೈಸ್ತನೆಂದು ನಟಿಸುತ್ತಾ ಪ್ರಭು ಯೇಸುವಿನ ಶಿಷ್ಯನೆಂದು ಹೇಳಿಕೊಳ್ಳುವುದಕ್ಕಿಂತ ಸಂಪೂರ್ಣವಾಗಿ ಲೌಕಿಕ ಮನುಷ್ಯನಾಗಿರುವುದೇ ಉತ್ತಮವಾಗಿತ್ತೆಂದು ನಿಮಗೆ ಅನಿಸುತ್ತಿದೆಯೇ?

    ಸರಿ ಆ ಅಪೋಸ್ತಲರಿಗೆ ಕೂಡಾ ತಾವು ಮೀನು ಹಿಡಿಯಲು ಹೋಗುವಾಗ ಹೀಗೆಯೇ ಅನಿಸಿತು ಹಾಗೂ ಪ್ರಭುವೂ ಕೂಡಾ ಅವರಿಗೆ ಹೋಗಿ ಇದರಲ್ಲಾದರೂ ಫಲಪ್ರದರಾಗುತ್ತೀರಾ, ನೋಡೋಣ ಎಂದು ಹೇಳುವ ಹಾಗೆ ಅನುಮತಿಸಿದರು ಹಾಗೆ ಪೇತ್ರ ಮತ್ತು ಅವನ ಗೆಳೆಯರು ಪೂರ್ಣ ರಾತ್ರಿ ಮೀನು ಹಿಡಿಯಲು ಪ್ರಯತ್ನಿಸಿ ಶೋಚನೀಯ ರೀತಿಯಲ್ಲಿ ಸೋತರು. ಅವರ ಇಡೀ ಜೀವಿತದಲ್ಲಿ ಅಂತಹ ರಾತ್ರಿಯ ಪರಿಸ್ಥಿತಿಯನ್ನು ಅನುಭವಿಸಿರಲಿಲ್ಲ.

    ಒಂದು ಬಾರಿ ದೇವರು ತನಗಾಗಿ ನಿಮ್ಮನ್ನು ಕರೆದಿದ್ದರೆ ನಿಮ್ಮನ್ನೆಂದಿಗೂ ಬಿಡುವುದಿಲ್ಲ. ನೀವು ಮೀನು ಹಿಡಿಯುವುದರಲ್ಲಿಯೂ ಹಾಗೂ ಎಲ್ಲವನ್ನು ಪ್ರಯತ್ನಿಸಿ, ಎಷ್ಟಾದರೂ ಪ್ರಯತ್ನಿಸಿ ನೀವು ಖಂಡಿತವಾಗಿ ಸೋಲುತ್ತೀರಿ ಹಾಗೂ ನೀವು ಸೋಲುವಂತೆ ದೇವರು ನೋಡಿಕೊಳ್ಳುತ್ತಾನೆ. ದೇವರ ಪ್ರೀತಿಯು ಇಂಥ ಕ್ಷಣಿಕ ಲೌಕಿಕ ವಿಷಯಗಳಲ್ಲಿ ನಮ್ಮ ಸಮಯ ಹಾಳು ಮಾಡಲು ಬಿಡುವುದಿಲ್ಲ. ಆದ್ದರಿಂದ ನೀವು ಅವರಿಂದ ಎಷ್ಟಾದರೂ ಓಡಿ ಹೋಗಲು ಪ್ರಯತ್ನಿಸಿದರೂ ನೀವು ಹಿಂದಿರುಗಿ ಬರುವವರೆಗೆ ಎಲ್ಲಿ ಹೋದರೂ ಏನು ಮಾಡಿದರೂ ಸೋಲುಗಾರರಾಗಿರುವಿರಿ. ಆದರೆ ಇದು ದೇವರು ಕರೆಯದಿರುವವರಿಗೆ ಅನ್ವಯಿಸುವುದಿಲ್ಲ.

    ಹಾಗೆ ಹಲವು ಕುಟಿಲ ಬುದ್ಧಿಯ ವ್ಯಾಪಾರಸ್ಥರು ಹಾಗೂ ರಾಜಕಾರಣಿಗಳು ಎಷ್ಟು ಮೋಸದ ಹಣವನ್ನಿಟ್ಟಿದ್ದರೂ ದೇವರಿಲ್ಲದೇ ಆರೋಗ್ಯವಂತರಾಗಿ ಜೀವಿಸುತ್ತಾರೆ. ಏಕೆ ದೇವರು ಇದನ್ನು ಅನುಮತಿಸುತ್ತಾರೆ? ಏಕೆಂದರೆ ಅವರು ದೇವರ ಮಕ್ಕಳಲ್ಲ. ಆದರೆ ಈಗ ಅಂಥವರ ಬಗ್ಗೆ ಮಾತನಾಡುತ್ತಿಲ್ಲ. ಪ್ರಪಂಚದ ಅಸ್ತಿವಾರಕ್ಕೆ ಮೊದಲೇ ತನ್ನ ಸ್ವಂತದವರನ್ನಾಗಿ ಕರೆದಂಥವರ ಬಗ್ಗೆ ನಾನು ನಿಮ್ಮಲ್ಲಿ ಮಾತನಾಡುತ್ತಿದ್ದೇನೆ. ಖಂಡಿತವಾಗಿ ಅಂದು ಗಲೀಲಾಯ ಸರೋವರದಲ್ಲಿ ಬಹಳಷ್ಟು ಮೀನುಗಳಿದ್ದವು. ಆ ರಾತ್ರಿ ಇತರ ಮೀನುಗಾರರು ಸಾಕಷ್ಟು ಮೀನುಗಳನ್ನು ಹಿಡಿದಿರುತ್ತಾರೆಂದು ನಾನು ದೃಢವಾಗಿ ನಂಬುತ್ತೇನೆ. ಆ ಮೀನುಗಳೆಲ್ಲವೂ ಬೇರೆ ದೋಣಿಗಳ ಬಳಿ ಹೋಗಿದ್ದವು. ಆದರೆ ದೇವರು ಅವುಗಳನ್ನು ಪೇತ್ರನ ದೋಣಿಯಿಂದ ಅವನಿಗೆ ಒಂದೂ ಸಿಕ್ಕದಂತೆ ದೂರವಿಟ್ಟಿದ್ದನು. ಅ ನಂತರ ಮೀನುಗಾರರು ಪೇತ್ರನಲ್ಲಿ ಬಂದು ಅವರೆಷ್ಟು ಮೀನುಗಳನ್ನು ಹಿಡಿದರೆಂದು ಹೇಳಿಕೊಂಡಿರಬಹುದು. ಅದು ಪೇತ್ರ ಮತ್ತು ಅವನ ಸಂಗಡಿಗರಿಗೆ ತಮಗೇಕೆ ಸಿಗಲಿಲ್ಲವೆಂದು ಆಶ್ಚರ್ಯಗೊಳಿಸಿರಬಹುದು.

    ಯಾವಾಗಲಾದರೂ ಹಣದ ಮಾರುಕಟ್ಟೆಯಲ್ಲಿ ನಿಮ್ಮ ಸುತ್ತಲಿನ ಜನರಂತೆ ನೀವೇಕೆ ಹಣಗಳಿಸಲು ಸಾಧ್ಯವಿಲ್ಲವೆಂದು ಆಶ್ಚರ್ಯಚಕಿತರಾಗಿದ್ದೀರಾ? ನಿಮ್ಮ ಸುತ್ತಲಿನ ಜನರೆಲ್ಲರೂ ಐಶ್ವರ್ಯವಂತರಾಗಿರುತ್ತಿದ್ದಾರೆ. ಆದರೆ ಸಮೃದ್ಧಿಯು ನಿಮ್ಮ ಬಳಿಗೆ ಸುಳಿಯುವುದೇ ಇಲ್ಲವೆಂದು ಚಿಂತಿಸುತ್ತಿದ್ದಿರಾ? ಇದು ಏಕೆಂದರೆ ದೇವರ ಕರೆಯು ನಿಮ್ಮ ಮೇಲಿದೆ. ಆತನು ನಿಮಗೆ ಆ ಲೌಕಿಕ ಜನರಿಗಿರುವುದಕ್ಕಿಂತ ಹೆಚ್ಚಿನದನ್ನು ಹಾಗೂ ಉತ್ತಮವಾದದ್ದನ್ನು ಕೊಡಲಿಚ್ಚಿಸುತ್ತಾನೆ.

    ಪೇತ್ರನು ಅವನ ಜೀವನದ ಮೇಲಿದ್ದ ದೇವರ ಕರೆಯನ್ನು ತಪ್ಪಿಸಿ ದೂರ ಹೋಗುತ್ತಿದ್ದನು. ಆದಕಾರಣ ಅವನಿಗೆ ಮತ್ತೆ ಸೋಲನ್ನು ಅನುಮತಿಸಿ ಮತ್ತೊಮ್ಮೆ ಮುರಿಯಲು ಪ್ರಯತ್ನಿಸಿದನು. ಆ ಅಪೋಸ್ತಲರು ಸಂಜೆ ಸುಮಾರು 6 ಗಂಟೆಗೆ ಮೀನು ಹಿಡಿಯಲು ಪ್ರಾರಂಭಿಸಿದರು. ಆದರೆ ಮರುದಿವಸ ಬೆಳಿಗ್ಗೆ 5 ಗಂಟೆಯವರೆಗೆ ಯೇಸುವು ಅವರ ಬಳಿಗೆ ಬರಲಿಲ್ಲ. ಪೇತ್ರನಿಗೆ ಆ ರಾತ್ರಿ ಯಾವ ಮೀನು ಸಿಕ್ಕುವುದಿಲ್ಲವೆಂದು ಕರ್ತನಿಗೆ ತಿಳಿದಿತ್ತು. ಆದರೂ ಏಕೆ ಆ ತಕ್ಷಣ ಅವರ ಬಳಿಗೆ ಬರಲಿಲ್ಲ ಹಾಗೂ ಅವರು ಅಷ್ಟೊಂದು ಸಮಯ ಹಾಳು ಮಾಡುವುದನ್ನು ತಡೆಯಲಿಲ್ಲ. ಕಡೆಯ ಪಕ್ಷ ರಾತ್ರಿ 9 ಗಂಟೆಗಾದರೂ ಬರಲಿಲ್ಲ ಹಾಗೂ ಮರುದಿವಸ ಬೆಳಿಗ್ಗೆ 5 ಗಂಟೆಯವರೆಗೆ ಏಕೆ ಕಾದರು? ಅವರು ಇಡೀ ರಾತ್ರಿ ಸುಸ್ತಾಗಿ ಸುಮಾರು 11 ಗಂಟೆಗಳ ಕಾಲ ಕಷ್ಟಪಟ್ಟು ಸೋಲುವವರೆಗೆ ಏಕೆ ಯೇಸು ಕಾದನು? ಈ ಪ್ರಶ್ನೆಗಳ ಉತ್ತರಗಳಲ್ಲಿ ನಮಗೆ ಸೋಲನ್ನು ಅನುಮತಿಸುವು ದೇವರ ವಿನ್ಯಾಸವನ್ನು ಕಂಡುಕೊಳ್ಳುತ್ತೇವೆ. ಮನುಷ್ಯನ ಸೋಲಿನಲ್ಲಿ ದೇವರ ನಿಜ ಉದ್ದೇಶವನ್ನು ಇಲ್ಲಿ ಕಂಡುಕೊಳ್ಳುತ್ತೇವೆ. ನಾವು ಕಷ್ಟಪಡುವಾಗ ಆಗಾಗ್ಗೆ ದೇವರಲ್ಲಿ ಸಹಾಯಕ್ಕಾಗಿ ಕೂಗಿಕೊಂಡಾಗ ಹಾಗೂ ಏಕೆ ನಮ್ಮ ಕೆಲ ಪ್ರಾರ್ಥನೆಗಳು ಉತ್ತರವಿಲ್ಲದೆ ಇನ್ನೂ ಹಾಗೆ ಇದೆ ಎಂಬುದು ಮತ್ತು ದೇವರು ಸಹಾಯಕ್ಕೆ ಬರಲಿಲ್ಲವೆಂಬುದು ಹೇಗೆ ನಿಮಗೆ ಅರ್ಥವಾಗುತ್ತದೆ.

    ಪೇತ್ರ ಮತ್ತು ಅವನ ಸಂಗಡಿಗರು ಅಂದು ಸಂಜೆ 6 ಗಂಟೆಗೆ ಮೀನು ಹಿಡಿಯಲು ಹೋದಾಗ ಅವರು ಸೋತವರಾಗಿರಲಿಲ್ಲ. ಅವರೆಲ್ಲರೂ ನಿರೀಕ್ಷೆಯಿಂದ ತುಂಬಿದ್ದರು. ರಾತ್ರಿ 9 ಗಂಟೆಗೆ ಅವರಿಗೆ ಮೀನು ಸಿಕ್ಕಿದಾಗ ಸ್ವಲ್ಪ ಮಟ್ಟಿಗೆ ಅಸಮಧಾನವಾಗಿರಬಹುದು. ಆದರೆ ಆಗ ಅವರು ಸಂಪೂರ್ಣ ಸೋತವರೆಂದು ಹೇಳಲಾಗದು. ಮಧ್ಯ ರಾತ್ರಿಯ ಹೊತ್ತಿಗೆ ಬಹಳಷ್ಟು ನಿರಾಶರಾಗಿದ್ದರು. ಬೆಳಗಿನ ಜಾವ 4 ಗಂಟೆಯ ಹೊತ್ತಿಗೆ ತಮ್ಮೆಲ್ಲಾ ನಿರೀಕ್ಷೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರು ಆದರೆ ಅವರು ಸಂಪೂರ್ಣ ಸೋತವರಾಗಬೇಕಿತ್ತು. ಹಾಗಾಗಬೇಕಿದ್ದರೆ ಇನ್ನೂ ಸೋಲನ್ನನುಭವಿಸಬೇಕಿತ್ತು. ಅವರ ಸ್ವ-ಭರವಸೆಯ ರೇಖಾನಕ್ಷೆ ಇನ್ನೂ ಕೆಳಕ್ಕೆ ಹೋಗುತ್ತಿತ್ತು. ಆದರೆ ಅದು ಸಂಪೂರ್ಣ ತಳಕ್ಕೆ ಅಂದರೆ ಶೂನ್ಯ ಸ್ಥಾನಕ್ಕೆ ಹೋಗಬೇಕಿತ್ತು. ಅದು ಸಾಧ್ಯವಾದದ್ದು 5 ಗಂಟೆಗೆ ಮಾತ್ರವೇ. ನಂತರ ಅವರು ಬಿಟ್ಟು ಹೋಗಲು ಸಿದ್ಧರಿದ್ದರು. ಆಗ ಇನ್ನು ಪ್ರಯತ್ನಿಸಿ ಪ್ರಯೋಜನವಿಲ್ಲ ಮನೆಗೆ ಹೋಗೋಣ ಎಂದು ಹೇಳಿಕೊಂಡಿರಬಹುದು.

    ಆಗ ಪ್ರಭುವು ಕಾಣಿಸಿಕೊಂಡನು. ಇದೇ ದೇವರ ಮಾರ್ಗವಾಗಿದೆ ಹಾಗೂ ಪ್ರಭುವು ಅವರ ಬಲೆಗಳನ್ನು ತುಳುಕುವಷ್ಟು ತುಂಬಿಸಿದನು. ಅಷ್ಟೊಂದು ಮೀನುಗಳನ್ನು ಅವರು ಹಿಂದೆಂದೂ ಅವರ ಜೀವಮಾನ ಕಾಲದಲ್ಲಿ ಹಿಡಿದಿರಲಿಲ್ಲ. ಈ ಹಿಂದೆ ಹೆಚ್ಚೆಂದರೆ 2೦ ಅಥವಾ 3೦ ಮೀನುಗಳನ್ನು ಹಿಡಿದಿದ್ದಿರಬಹುದು. ಆದರೆ ಅ ದಿವಸ ಸುಮಾರು 153 ದೊಡ್ಡ ಮೀನುಗಳನ್ನು ಹಿಡಿದರು. ಇದೊಂದು ಅದ್ಭುತವಾಗಿತ್ತು. ಆ ಸರೋವರದಲ್ಲಿ ಈ ಹಿಂದೆ ಒಂದೇ ಬಾರಿಗೆ ಅಷ್ಟೊಂದು ಮೀನು ಹಿಡಿದಿರಲಿಲ್ಲ. ಈ ವಿಷಯವು ಗಲಿಲಾಯದ ಚರಿತ್ರೆಯಲ್ಲಿ ದಾಖಲೆಯ ಪುಸ್ತಕದಲ್ಲಿ ಹೋಗುವಂತಾಗಿತ್ತು. ಈ ಘಟನೆಯು ಅವರು ತಮ್ಮೆಲ್ಲಾ ನಿರೀಕ್ಷೆಯನ್ನು ಬಿಟ್ಟಾಗ ಪ್ರಭುವು ಮಾಡಿದ ಅದ್ಭುತವೆಂದು ಎಂದೆಂದಿಗೂ ನೆನಪಿಸುವಂತದ್ದಾಗಿತ್ತು.

    ಇಂದು ನೀವು ಎಲ್ಲಿ ಹೋಗುವರೆಂದು ತಿಳಿಯದೆ, ಏನು ಮಾಡುವುದೆಂದು ತಿಳಿಯದೆ ಎಲ್ಲಿ ಹೋದರೂ ಅಸಮಧಾನ ಮತ್ತು ಸೋಲಿನ ಅನುಭವದಿಂದ ಕಂಗೆಟ್ಟವರಾಗಿ ನಿಮ್ಮ ಕೊನೆಯ ಸ್ಥಿತಿಯುಲ್ಲಿದ್ದೀರಾ? ಹಾಗಿದ್ದರೆ ಬಹುಶ: ಪ್ರಭುವು ನಿಮ್ಮ ಸ್ವ-ಭರವಸೆಯನ್ನು ಶೂನ್ಯ ಸ್ಥಿತಿಗೆ ತಲುಪಲೆಂದು ಕಾಯುತ್ತಿದ್ದಾರೆ. ಇನ್ನೂ ಅವರು ನಿಮ್ಮ ಬಳಿಗೆ ಬಂದಿಲ್ಲವೆಂದರೆ ನಿಮ್ಮ ಸ್ವ-ಭರವಸೆಯ ನಕ್ಷೆಯು ಶೂನ್ಯ ಮಟ್ಟಕ್ಕೆ ತಲುಪಿಲ್ಲವೆಂದು ಅರ್ಥ. ಸ್ವಲ್ಪ ಸ್ವಾರ್ಥ ಶಕ್ತಿಯು ಇನ್ನೂ ಉಳಿದಿರುವುದರಿಂದ ಅದು ಹೋಗಲು ಕಾಯುತ್ತಿದ್ದಾರೆ. ಪ್ರಭುವು ಬರಬೇಕಾದರೆ ಲಾಜರನು ಸತ್ತು ಹೂಣಲ್ಪಡಬೇಕಾಗಿತ್ತು !

    ಅಂದು ಬೆಳಿಗ್ಗೆ ಆ ಸರೋವರದ ದಂಡೆಗೆ ಯೇಸು ಬಂದಾಗ ಅವರಲ್ಲಿ ಏನು ಕೇಳಿದನು? ಅವರಲ್ಲಿ ಮೀನುಗಳಿರಲಿಲ್ಲವೆಂದು ಆತನಿಗೆ ತಿಳಿದಿತ್ತು. ಆದರೂ ಆತನು "ಮಕ್ಕಳೇ, ನಿಮ್ಮಲ್ಲಿ ಮೀನುಗಳಿದೆಯೇ? ಎಂದು ಕೇಳಿದನು. ತಕ್ಷಣ ಅವರಲ್ಲಿ ಯಾರು ಉತ್ತರ ಹೇಳಿರಲಿಕ್ಕಿಲ್ಲ. ಅದ್ದರಿಂದ ಪ್ರಶ್ನೆಯನ್ನು ಎರಡನೇ ಬಾರಿ ಕೇಳಿರಲೂ ಬಹುದು. ನಂತರ ಅವರು "ಇಲ್ಲ"ವೆಂದು ಉತ್ತರಿಸಿದರು. ಅವರು ಸೋತರೆಂದು ಒಪ್ಪಿಕೊಂಡರು. ಅವರು ಯಾಕೋಬ ಮತ್ತು ಯೋಬನಂತೆ ಪ್ರಾಮಾಣಿಕರಾಗಿದ್ದರು. ಇದೇ ಪ್ರಭುವಿಗೆ ಬೇಕಾಗಿತ್ತು. ತಾವು ಸೋತವರೆಂದು ಒಪ್ಪಿಕೊಳ್ಳುವುದೇ ಆತನಿಗೆ ಬೇಕಾಗಿತ್ತು.

    ನನ್ನ ಜೀವನದಲ್ಲಿ ಈ ಅದ್ಭುತ ಸತ್ಯವನ್ನು ಕಂಡುಕೊಂಡಿದ್ದು ಒಂದು ಅಮೋಘ ಉತ್ಸಾಹವಾಗಿತ್ತು. ನಿಮ್ಮ ಜೀವನದ ಯಾವುದೇ ಸ್ಥಳದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ದೇವರು ಬಯಸುವುದು ಪ್ರಾಮಾಣಿಕತೆಯನ್ನು ನಂತರ ಆತನು ನಮಗಾಗಿ ಅದ್ಭುತಗಳನ್ನು ಮಾಡಬಲ್ಲನು. "ನಿನಗೇನಾದರು ಮೀನು ಸಿಕ್ಕಿದೆಯೇ" ಇಲ್ಲಾ, ನಿನ್ನ ಬಲಭಾಗದಲ್ಲಿ ಬಲೆಯನ್ನು ಬೀಸು ನಂತರ ಅದ್ಭುತವನ್ನು ಕಾಣುವಿ.

    ಯಾಕೋಬನು ಬೇತೇಲಿನಲ್ಲಿ ದೇವರ ಮನೆಯೇ ಹೆಚ್ಚೆಂದುಕೊಂಡಿದ್ದನು. ನೀವು ಕೂಡಾ ದೇವರ ಮನೆಯಲ್ಲಿರಬಹುದು. ಆದರೆ ದೇವರ ಮುಖ ನೋಡದೇ ಇರಬಹುದು. ನಂತರ ನಿಮಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಅಲ್ಲಿ ಆತನ ಮುಖವನ್ನು ಕಾಣುವಿರಿ. "ನಿನ್ನ ಹೆಸರೇನು" ಮೊಸಗಾರ. "ನಿನ್ನ ಹೆಸರು ಇನ್ನು ಮುಂದೆ ಮೋಸಗಾರನಲ್ಲ ಬದಲಿಗೆ ದೇವರ ಯುವರಾಜ!". ನೋಡಿ ಇನ್ನೊಂದು ಅದ್ಭುತ ಇದೇ ದೇವರ ಮಾರ್ಗವಾಗಿದೆ ನನ್ನ ಸಹೋದರ ಸಹೋದರಿಯರೇ, ದೇವರು ನಮ್ಮಿಂದ ಮುಖ್ಯವಾಗಿ ಬಯಸುವುದೇನೆಂದರೆ ಪ್ರಾಮಾಣಿಕತೆ.

    ಇಂದು ದೇವರೊಂದಿಗೆ ಪ್ರಾಮಾಣಿಕರಾಗಿರುವುದಿಲ್ಲವೇ? ನಮ್ಮ ಸಭೆಯು ಒಂದು ಆಸ್ಪತ್ರೆಯಂತೆ. ನಾವೆಲ್ಲರೂ ರೋಗಿಗಳು ನಾವೆಲ್ಲರೂ ಪ್ರವೀಣರಲ್ಲ ಅಥವಾ ವಿಶೇಷ ತಜ್ಞರಲ್ಲ. ಈ ಆಸ್ಪತ್ರೆಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚಿನ ಕಾಲ ಇದ್ದವರಿದ್ದಾರೆ. ಆದರೆ ನಾವೆಲ್ಲರೂ ರೋಗಿಗಳೇ. ಇಲ್ಲಿ ಒಬ್ಬರೇ ವೈದ್ಯರು ಇರುವುದು. ಅದು ಯೇಸು ಮಾತ್ರ. ಇಲ್ಲಿ ಮಧ್ಯ ಯಾರೂ ವಿಚಾರಿಸುವಂತಿಲ್ಲ. ಸ್ವನೀತಿಯುಳ್ಳ ಜನರು ಸುಳ್ಳು ಸಭೆಗಳಲ್ಲಿ ಪ್ರವೀಣರಂತೆ ಹಾಗೂ ವಿಶೇಷ ತಜ್ಞರಂತೆ ಕಾಣಿಸುತ್ತಾರೆ. ಆದರೆ ಜೀವವುಳ್ಳ ಸಭೆಗಳಲ್ಲಿ ಹಾಗಿರುವುದಿಲ್ಲ. ನಮ್ಮ ಆಸ್ಪತ್ರೆಗೆ ಎಲ್ಲರಿಗೂ ಸ್ವಾಗತವಿದೆ. ನೀವು ಎಷ್ಟು ಹೆಚ್ಚು ರೋಗ ಪೀಡಿತರೋ ಗುಣ ಹೊಂದಲು ನೀವು ಅಷ್ಟರ ಮಟ್ಟಿಗೆ ನಮ್ಮ ಮಧ್ಯ ಇರುವುದು ಅವಶ್ಯಕ. ನಮ್ಮ ಸಂದೇಶವಿಷ್ಟೆ. ಯೇಸುಕ್ರಿಸ್ತನು ಈ ಲೋಕಕ್ಕೆ ಪಾಪಿಗಳನ್ನು ರಕ್ಷಿಸುವುದಕ್ಕಾಗಿ ಬಂದನು. ಅವರಲ್ಲಿ ನಾವು ಅಗ್ರರು (ಮಹಪಾಪಿಗಳು).

    ಏನನ್ನು ಹೊಂದಲು ಅಯೋಗ್ಯರಾದವರನ್ನೆ ದೇವರು ಸಂಧಿಸುತ್ತಾನೆ. ಆ ಸುಂಕದವನು-"ಸ್ವಾಮಿ ನಾನು ಪಾಪಿ ನನ್ನನ್ನು ಕರುಣಿಸು" (ಲೂಕ 18:13) ಎಂದನು. ಅವನು "ನಾನೇ ಪಾಪಿ" ಎಂದು ತನ್ನನ್ನೆ ಕರೆದುಕೊಂಡನು. ತನಗೆ ಹೋಲಿಸಿದರೆ ಇತರರೆಲ್ಲರೂ ಸಂತರೆಂದು ಭಾವಿಸಿದ ಹಾಗೆ ಅದರ ಅರ್ಥವಾಗಿತ್ತು. ಅವನ ದೃಷ್ಟಿಯಲ್ಲಿ ಇಡೀ ಭೂಮಿಯ ಮೇಲೆ ಅವನೊಬ್ಬನೇ ಪಾಪಿಯಾಗಿದ್ದನು. ನಂತರ ಅವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನೆಂದು ಯೇಸು ಹೇಳಿದನು.

    ಇಂಥಹ ಜನರನ್ನು ಮಾತ್ರ ದೇವರು ನೀತಿಕರಿಸುತ್ತಾನೆ. ಈ ನೀತಿಕರಿಸುವುದು ಎಂಬ ಪದದ ನಿಜ ಅರ್ಥದ ಬಗ್ಗೆ ನಿವ್ರ್ಮೆಂದಿಗೆ ಸ್ವಲ್ಪ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದು ಸುಂದರವಾದ ಹಾಗೂ ಸ್ವಾತಂತ್ರ್ಯ ತರುವ ಪದವಾಗಿರುತ್ತದೆ (ಲೂಕ 18:14).

    ಈ ಪುಸ್ತಕದ ಹಾಳೆಯನ್ನು ನೋಡಿರಿ. ಬಲಭಾಗದ ಅಂಚನ್ನು ನೋಡಿ ಅದು ಹೇಗೆ ಎಡಭಾಗದ ಅಂಚಿನಲ್ಲಿ ನೇರವಾಗಿ ಒಂದೇ ಸಮವಿದೆ. ಇದನ್ನು ಕಂಪ್ಯೂಟರ್ ಭಾಷೆಯಲ್ಲಿ ನೀತಿಕರಿಸುವುದೆಂದು (justification) ಹೇಳುತ್ತಾರೆ. ಪ್ರತಿ ಸಾಲಿನಲ್ಲಿ ಅಕ್ಷರಗಳ ಸಂಖ್ಯೆಯು ವ್ಯತ್ಯಾಸವಿದ್ದರೂ ಕಂಪ್ಯೂಟರ್ ಸಾಲುಗಳ ಬಲ ಅಂಚನ್ನು ಎಡ ಅಂಚಿನಲ್ಲಿ ನೇರಗೊಳಿಸುತ್ತದೆ. ನೀವು ಕಂಪ್ಯೂಟರ್‌ನಲ್ಲಿ ನೀತಿಕರಿಸದೆ ಏನಾದರೂ ಬರೆಯಲು ಪ್ರಾರಂಭಿಸಿದರೆ ಬಲ ಬದಿಯು ನೇರವಿಲ್ಲದ ಹಿಂದು ಮುಂದಾಗಿ ಕೊನೆಗೊಳ್ಳುವುದನ್ನು ಕಾಣುವಿರಿ. ಮೊದಲು ಟೈಪ್ ರೈಟರ್ (ಬೆರಳಚ್ಚು ಯಂತ್ರಗಳಲ್ಲಿ) ಏನಾದರೂ ಬರೆದರೆ ಹೀಗೆಯೇ ಬಲ ಅಂಚಿನಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತಿದ್ದೇವೆ. ಪ್ರತಿ ಸಾಲು ಒಂದೇ ಇರುವಂತೆ ಕೇವಲ ಒಂದು ಪುಟವನ್ನು ಬರೆಯುವುದೂ ಸಹ ಬಹಳ ಕಷ್ಟ. ಈಗ ನಾವು ನೀತಿಕರಿಸುವುದರ ಆಶ್ಚರ್ಯವನ್ನು ನೋಡಬಹುದು. ಅದನ್ನು ಯಾವ ಶಬ್ದ ಸಂಯೋಜನೆಯ ಗೆರೆಯನ್ನು ಬಳಸಿಲ್ಲ. ಈ ಪುಸ್ತಕದಲ್ಲಿ ನೋಡುವುದಾದರೆ, ಯಾವ ಪುಟದಲ್ಲಿಯೂ ಶಬ್ದ ಸಂಯೋಜನೆಯ ಗೆರೆಯನ್ನು ಬಳಸಿಲ್ಲ. ಅದನ್ನು ಉಪಯೋಗಿಸಿದರೆ ಕೂಡಾ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ. ಕಂಪ್ಯೂಟರ್ ನೀತಿಕರಿಸುವಾಗ ಪ್ರತಿ ಸಾಲಿನ ಪದಗಳ ನಡುವಿನ ಅಂತರವನ್ನೂ ಸಹ ಸರಿಪಡಿಸುತ್ತದೆ.

    ನೀವು ಸುಮಾರು 3೦ ಸಾಲುಗಳನ್ನು ಹಿಂದು ಮುಂದಾಗಿ ಬರೆದಿರುವಿರೆಂದು ಎಣಿಸಿ ನಂತರ ಅದನ್ನು ನೀತಿಕರಿಸುವುದಾಗಿ ಕಂಪ್ಯೂಟರ್ ಆದೇಶ ಕೊಡುತ್ತೀರಿ. ನೀವು ಒಂದು ಗುಂಡಿಯನ್ನು ಒತ್ತಿ ನೋಡುವುದರೊಳಗೆ ಎಲ್ಲಾ ಸಾಲುಗಳು ನೀತಿಕರಿಸಲ್ಪಟ್ಟಿರುತ್ತವೆ. ನಮ್ಮನ್ನು ನೀತಿಕರಿಸುವಾಗಲೂ ಸಹ ದೇವರು ನಮ್ಮೊಂದಿಗೆ ಹೀಗೆಯೇ ಮಾಡುತ್ತಾನೆ.

    ಬಹುಶ: ನಿಮ್ಮ ಹಿಂದಿನ ಜೀವಿತದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿರಬಹುದು. ಪ್ರತಿ ದಿನದ ಜೀವಿತವನ್ನು ಹಿಂದು ಮುಂದಾದ ರೀತಿಯಲ್ಲಿ ಮುಗಿಸಿರಬಹುದು. ಆದರೆ ನೀವು ಕ್ರಿಸ್ತನ ಬಳಿ ಬಂದರೆ ನಿಮ್ಮನ್ನು ಕ್ಷಣಮಾತ್ರದಲ್ಲಿ ನೀತಿಕರಿಸಿಬಿಡುತ್ತಾನೆ. ನಿಮ್ಮ ಜೀವಿತದ ಪ್ರತಿಯೊಂದು ಸಾಲನ್ನು ಸರಿಪಡಿಸಿಬಿಡುತ್ತಾನೆ. ನಿಮ್ಮ ಜೀವನದಲ್ಲಿ ಹಿಂದೆಂದೂ ಪಾಪವೇ ಮಾಡಿರದ ರೀತಿಯಲ್ಲಿ ಮಾಡುತ್ತಾನೆ. ಅಂಕು ಡೊಂಕು ಕೊನೆಗಳಿಲ್ಲ. ಎಲ್ಲವೂ ನೇರವಾಗಿರುತ್ತದೆ.

    ಇದು ಬಹಳ ಅದ್ಭುತವಲ್ಲವೇ? ಕಂಪ್ಯೂಟರ್ ಹಾಳೆಗಳ ಮೇಲೆ ಬರೆದ ವಿಷಯಗಳಿಗೆ ಏನು ಮಾಡುತ್ತದೋ ಅದನ್ನು ದೇವರು ನಮ್ಮ ಜೀವನದಲ್ಲಿ ಮಾಡುತ್ತಾನೆ. ಇಲ್ಲಿ ನೀತಿಕರಣಕ್ಕೆ 2೦ನೇ ಶತಮಾನದ ದೃಷ್ಟಾಂತವನ್ನು ನೋಡುತ್ತೇವೆ.

    ಇನ್ನೂ ಸ್ವಲ್ಪ ಹೇಳಲು ಬಯಸುತ್ತೇನೆ. ಅದೇನೆಂದರೆ ಒಂದು ಬಾರಿ ನೀವು ಕಂಪ್ಯೂಟರ್ ನಲ್ಲಿ ನೀತಿಕರಣದ ಅಪ್ಪಣೆಯನ್ನು ಕೊಟ್ಟು ಬಿಟ್ಟರೆ ನೀವು ಮುಂದೆ ಬರೆಯುವ ಪ್ರತಿಯೊಂದು ಸಾಲುಗಳು ಸಹ ಹಿಂದಿನ ಸಾಲುಗಳಂತೆ ನೇರವಾಗುತ್ತದೆ. ನೀತಿಕರಣವು ನಮ್ಮ ಹಿಂದಿನ ಜೀವಿತಕ್ಕೆ ಅನ್ವಯಿಸಿದಂತೆ ಮುಂದಿನ ಜೀವಿತಕ್ಕೂ ಅನ್ವಯಿಸುತ್ತದೆ. ಇದೊಂದು ಆಶ್ಚರ್ಯಕರ ಶುಭಸಂದೇಶವೇ ಸರಿ. ದೇವರು ನಮ್ಮನ್ನೀಗ ಕ್ರಿಸ್ತನಲ್ಲಿ ನೋಡುತ್ತಾನೆ. ಇನ್ನು ನಮ್ಮಲ್ಲಿ ನಮ್ಮದೇ ಆದ ಯೂವುದೇ ನೀತಿ ಇಲ್ಲ. ಕ್ರಿಸ್ತನೇ ನಮ್ಮ ನೀತಿಯಾಗಿದ್ದಾನೆ.

    ದೇವರು ನಮ್ಮನ್ನು ನೀತಿಕರಿಸಿದಾಗ ನಮ್ಮ ಇಡೀ ಜೀವನದಲ್ಲಿ ನಾವು ಯಾವುದೇ ತಪ್ಪು ಅಥವಾ ಯಾವುದೇ ಪಾಪವನ್ನು ಮಾಡಿರದಂತೆ ಮಾಡುತ್ತಾನೆ. ಹಾಗೂ ಮುಂದೆ ಸಹ ಯಾವಾಗಲೂ ಕ್ರಿಸ್ತನ ರಕ್ತದಿಂದ ನೀತಿಕರಿಸುತ್ತಾ ಮುಂದುವರೆಯುತ್ತೇವೆ. ಏಕೆಂದರೆ ವಾಕ್ಯವು ಹೇಳುತ್ತದೆ. ನಾವು ಬೆಳಕಿನಲ್ಲಿ ನಡೆದಂತೆ ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಎಲ್ಲಾ ಪಾಪಗಳನ್ನು ಕ್ರಿಸ್ತನ ರಕ್ತವು ಶುದ್ಧಪಡಿಸುತ್ತಾ ಮುನ್ನಡೆಸುತ್ತದೆ.

    ದೇವರ ವಾಕ್ಯವನ್ನು ಓದಬೇಕಾದರೆ ನಾವು ಮಾಡುವ ಒಂದು ದೊಡ್ಡ ತಪ್ಪೆಂದರೆ ಗಣಿತದ ಲೆಕ್ಕದಲ್ಲಿ ಉಪಯೋಗಿಸುವ ತರ್ಕ ಬುದ್ಧಿಯನ್ನೆ ಇಲ್ಲಿಯೂ ಉಪಯೋಗಿಸುವುದು ಈ ರೀತಿಯಲ್ಲಿ ನಾವು ದೇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ದೇವರು ಗಣಿತದ ತರ್ಕ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನಮ್ಮ ಹಿಂದಿನ ಜೀವಿತದಲ್ಲಿ ಅಷ್ಟೊಂದು ಪಾಪ ಮಾಡಿದ ನಂತರವೂ ನಾವು ದೇವರು ನಮಗಾಗಿ ರಚಿಸಿರುವ ಪೂರ್ಣ ಯೋಜನೆಯನ್ನು ಪೂರೈಸುತ್ತೇವೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ನಮ್ಮ ಲೌಕಿಕ ಬುದ್ಧಿಶಕ್ತಿಯನ್ನು ಉಪಯೋಗಿಸಲು ಸಾಧ್ಯವಿಲ್ಲ. ಅಂಕಗಣಿತ ಲೆಕ್ಕದಂತೆ ನೋಡಿದರೆ ಇದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೆಕ್ಕ ಮಾಡುವಾಗ ಒಂದು ಹಚಿತದಲ್ಲಿ ತಪ್ಪಾದರೆ ನಾವು ಪಡೆಯುವ ಉತ್ತರವೂ ಸಹ ತಪ್ಪಾಗಿರುತ್ತದೆ.

    ಇದೇ ತರ್ಕವನ್ನು ಉಪಯೋಗಿಸುವುದಾದರೆ ಹಿಂದೆ ಎಚಿದಾದರೂ (ನಿಮ್ಮ 2 ವರ್ಷದಲ್ಲಿ ಇಲ್ಲವೆ 52 ವರ್ಷದಲ್ಲಿ) ದೇವರ ಉದ್ದೇಶವನ್ನು ತಪ್ಪಿದವರಾಗಿದ್ದರೆ, ಈಗ ದೇವರ ಸಂಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಿಲ್ಲ. ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ ಎಷ್ಟು ಪ್ರಾರ್ಥಿಸಿದ್ದರೂ ಸಾಧ್ಯವಿಲ್ಲ. ಏಕೆಂದರೆ ನೀವು ಅಂಕಗಣಿತ ಲೆಕ್ಕದಲ್ಲಿ (ಯಾವುದೇ ಹಚಿತದಲ್ಲಿ) ತಪ್ಪು ಮಾಡಿದರೂ (2 ಅಥವಾ 52ನೆ ಹಚಿತದಲ್ಲಿ) ನಿಮ್ಮ ಅಂತಿಮ ಉತ್ತರವು ತಪ್ಪೇ ಆಗಿರುತ್ತದೆ.

    ಆದರೆ ದೇವರು ಹೇಳುತ್ತಾನೆ. ನನ್ನ ಹಾದಿಯು ನಿಮ್ಮ ಹಾದಿಯಲ್ಲ (ಯೆಶಾಯ 55:8,9). ದೇವರು ಈ ಗಣಿತ ಲೆಕ್ಕದಂತೆ ಕಾರ್ಯ ನಡೆಸುವವರಲ್ಲವಾದ್ದರಿಂದ ಆತನಿಗೆ ಸ್ತೋತ್ರ ಸಲ್ಲಿಸೋಣ. ಹಾಗಿದ್ದರೆ ಒಬ್ಬನೇ ಒಬ್ಬ ಮನುಷ್ಯನು (ಅಪೋಸ್ತಲ ಪೌಲನೂ ಕೂಡಾ) ದೇವರ ಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಿರುತ್ತಿರಲಿಲ್ಲ. ಎಲ್ಲರೂ ಯಾವುದಾದರೊಂದು ಸ್ಥಳದಲ್ಲಿ ಸೋತು ಬಿಡುತ್ತಿದ್ದರು. ನಾವು ವಿಶ್ವಾಸಿಗಳಾದ ನಂತರ ಕೂಡಾ ಅನೇಕ ಬಾರಿ ಸೋತಿದ್ದೇವೆ. ವಿಶ್ವಾಸಿಗಳಾದ ನಂತರ ಕೂಡಾ ಕೆಲವು ಬಾರಿ ಬೇಕೆಂತಲೇ ಪಾಪಮಾರ್ಗವನ್ನು ಅನುಸರಿಸಿದ್ದೇವೆ. ಎಲ್ಲಾ ಪ್ರಾಮಾಣಿಕರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆಶ್ಚರ್ಯಕರ ಸತ್ಯವೆಂದರೆ ನಮಗೆಲ್ಲರಿಗೂ ಇನ್ನೂ ನಿರೀಕ್ಷೆ ಇದೆ.

    ಒಂದು ಚಿಕ್ಕ ತಪ್ಪು ಮಾಡಿದವರನ್ನು ಬಿಡದೆ ಗಣಿತವು ಎಲ್ಲರನ್ನೂ ಖಚಿಡಿಸುತ್ತದೆ. ಒಂದು ಸಣ್ಣ ತಪ್ಪನ್ನು ಕೂಡಾ ಬಿಡುವುದಿಲ್ಲ. 2+2 ಯಾವತ್ತಿಗೂ 3.9999999999ಕ್ಕೆ ಸಮನಾಗುವುದಿಲ್ಲ. ಅದು ಸರಿಯಾಗಿ 4 ಅಗಿರಬೇಕು. ಸ್ವಲ್ಪ ಕೂಡಾ ಹೆಚ್ಚು ಅಥವಾ ಕಡಿಮೆ ಆಗಿರಬಾರದು.

    ಆದರೆ ದೇವರ ಯೋಜನೆಯು ಗಣಿತದಂತೆ ಕೆಲಸ ಮಾಡುವುದಿಲ್ಲ. ದೇವರ ಯೋಜನೆಯಲ್ಲಿ ಸೋಲು ಅವಶ್ಯಕ. ಸೋಲನ್ನು ಬಿಟ್ಟು ನಮ್ಮನ್ನು ಮುರಿಯಲು ಬೇರೆ ದಾರಿಯೇ ಇಲ್ಲ ಹಾಗೂ ನಮ್ಮ ಆತ್ಮೀಕ ಶಿಕ್ಷಣದಲ್ಲಿನ ಪಾಠ ವಿಷಯ ಪಟ್ಟಿಯಲ್ಲಿ ಸೋಲು ಒಂದು ಮುಖ್ಯ ಭಾಗವಾಗಿರುತ್ತದೆ.

    ಯೇಸು ಮಾತ್ರ ಎಂದೂ ಸೋಲದೇ ಜೀವಿಸಿದನು. ಆದರೆ ನಾವೆಲ್ಲರೂ (ಅತೀ ಉತ್ತಮರೂ ಕೂಡಾ) ಈ ಸೋಲುಗಳ ಮುಖಾಂತರ ದೇವರಿಂದ ಮುರಿಯಲ್ಪಡುವುದು ಬಹಳ ಅವಶ್ಯಕ. ಪೇತ್ರ ಪೌಲರು ಕೂಡಾ ತಮ್ಮ ಸೋಲುಗಳ ಮುಖಾಂತರ ಮುರಿಯಲ್ಪಟ್ಟರು.

    ದೇವರ ದಯೆ ಮಾತ್ರವೇ ನಮ್ಮನ್ನು ಮಾನಸಾಂತರಕ್ಕೆ ನಡಸುವ ಈ ಶುಭ ಸಂದೇಶದಲ್ಲಿ ಆನಂದಪಡಿರಿ. ಇದು ನಿಮ್ಮನ್ನು ಪೂರ್ಣ ಉಲ್ಲಾಸಕ್ಕೂ ಹಾಗೂ ದೇವರಲ್ಲಿ ಪೂರ್ಣ ಶಾಂತಿಗೂ ನಡೆಸಲು - ಈ ಶಾಂತಿಯು ದೇವರು ನಮ್ಮನ್ನು ತನ್ನ ಪ್ರಿಯ ಮಗನಲ್ಲಿ (ಶಾಶ್ವತವಾಗಿ) ಸ್ವೀಕರಿಸಿದ್ದಾನೆಂದು ತಿಳಿಯುವದರಿಂದ ಬರುತ್ತದೆ. (ಎಫೆಸ 1:6)

    ಪ್ರತಿದಿನ ಬಹಳಷ್ಟು ತಪ್ಪುಗಳನ್ನು ಮಾಡುತ್ತೇವೆ. ಕೆಲವು ಬಾರಿ ನಮಗೆ ಅರಿಯದೇ ಆಕಸ್ಮತ್ತಾಗಿ ಜಾರಿ ಪಾಪದಲ್ಲಿ ಬೀಳುತ್ತೇವೆ. ಇಂತಹ ಸಂದರ್ಭಗಳಲ್ಲಿ ನಮ್ಮ ಮೇಲಿನ ಒತ್ತಡವು ಹೆಚ್ಚಿ ಧೈರ್ಯಗೆಟ್ಟು, ನಿರಾಶರಾಗಿ ಇನ್ನೂ ಹೆಚ್ಚು ಪಾಪ ಮಾಡುವಂತೆ ಶೋಧಿಸಲ್ಪಡುತ್ತೇವೆ. ದೇವರು ನಮ್ಮ ಒ

    ಅಧ್ಯಾಯ 2
    ಬಿದ್ದು ಹೋದವರಿಗಾಗಿ ದೇವರ ಪರಿಪೂರ್ಣಚಿತ್ತ

    ಅನೇಕ ಸಹೋದರ ಸಹೋದರಿಯರು ತಮ್ಮ ಹಿಂದಿನ ಜೀವಿತದಲ್ಲಿ ಯಾವುದೋ ಒಂದು ಸಮಯ ತಾವು ಪಾಪ ಮಾಡಿ ಸೋತು ದೇವರನ್ನು ನಿರಾಶೆಗೊಳಿಸಿರುವ ಕಾರಣದಿಂದ ದೇವರ ಪರಿಪೂರ್ಣ ಯೋಜನೆಯನ್ನು ತಮ್ಮ ಜೀವತಕ್ಕೆ ನೆರವೇರಿಸಲು ಆಗುವುದಿಲ್ಲ ಎಂದು ಭಾವಿಸುತ್ತಾರೆ.

    ಈ ವಿಷಯವಾಗಿ ಸತ್ಯವೇದ ನಮಗೆ ಹೇಳಬೇಕಾದದ್ದೇನು ಎಂಬುದನ್ನು ನೋಡೋಣ ಮತ್ತು ನಮ್ಮ ಸ್ವಬುದ್ಧಿಯನ್ನು ಅಥವಾ ನಮ್ಮ ತರ್ಕಶಾಸ್ತ್ರ (ವಾದ ಸಾಮಾರ್ಥ್ಯ) ದ ಬುದ್ಧಿಯನ್ನು ಆಧಾರ ಮಾಡಿಕೊಳ್ಳದಿರೋಣ.

    ಮೊಟ್ಟ ಮೊದಲನೆಯದಾಗಿ ಸತ್ಯವೇದ ಹೇಗೆ ಪ್ರಾರಂಭವಾಗುತ್ತದೆ ಎಂದು ಗಮನಿಸಿರಿ.

    "ಆದಿಯಲ್ಲಿ ದೇವರು ಆಕಾಶವನ್ನು ಭೂಮಿಯನ್ನು ಉಂಟು ಮಾಡಿದನು." (ಆದಿಕಾಂಡ 1:1) ಮತ್ತು ದೇವರು ಆಕಾಶವನ್ನು ಭೂಮಿಯನ್ನು ಉಂಟು ಮಾಡಿದಾಗ ಅವು ಪರಿಪೂರ್ಣವಾಗಿರಬೇಕಿತ್ತು. ಯಾಕಂದರೆ ಅಪರಿಪೂರ್ಣವಾದದ್ದು ಅಥವಾ ಸಂಪೂರ್ಣಗೊಳಿಸದೇ ಇರುವುದು ಯಾವುದೂ ಆತನ ಕೈಯಿಂದ ಬರಲು ಆಗುವುದಿಲ್ಲ. ಆದರೆ ಆತನು ಉಂಟು ಮಾಡಿದ ದೇವದೂತರು ಬಿದ್ದು ಹೋದರು ಮತ್ತು ಇದು ನಮಗಾಗಿ ಯೆಶಾಯ 14:11-15 ಮತ್ತು ಯೆಹೆಜ್ಕೇಲ 28:13-18 ರಲ್ಲಿ ವರ್ಣಿಸಲಾಗಿದೆ. ಆಗ ಭೂಮಿಯು ಆಕಾರವಿಲ್ಲದೇ (ಕ್ರಮವಿಲ್ಲದೆಯೂ) ಬರಿದಾಗಿಯೂ ಮತ್ತು ಕತ್ತಲಿನ ಸ್ಥಿತಿಯಲ್ಲಿ ಇತ್ತು ಎಂಬುದಾಗಿ ಆದಿಕಾಂಡ 1:2 ರಲ್ಲಿ ವರ್ಣಿಸಲಾಗಿದೆ.

    ದೇವರು ಆಕಾರವಿಲ್ಲದ ಬರಿದಾಗಿದ್ದ ಕತ್ತಲಿನ ಸಮೂಹದ ಮೇಲೆ ಕೆಲಸ ಮಾಡಿ ಅದರಿಂದ ಬಹಳ ಸುಂದರವಾದದ್ದನ್ನು ಹೇಗೆ ಉಂಟು ಮಾಡಿದನೆಂದೂ ಆತನು ತಾನೇ ಅದನ್ನು ಬಹು ಒಳ್ಳೇದು ಎಂದು ಘೋಷಿಸುವುದನೂ ಆದಿಕಾಂಡದ ಉಳಿದ ಒಂದನೇ ಅಧ್ಯಾಯವು ವರ್ಣಿಸುತ್ತದೆ. (ಆದಿಕಾಂಡ1:31) ದೇವರಾತ್ಮನು ಜಲ ಸಮೂಹದ ಮೇಲೆ ಚಲಿಸಿದನು ಮತ್ತು ದೇವರು ತನ್ನ ಮಾತನ್ನು (ನುಡಿಯನ್ನು) ಹೇಳಿದನು ಮತ್ತು ವತ್ಯಾಸವನ್ನುಂಟು ಮಾಡಿದ್ದು ಇದೇ ಎಂದು ಆದಿಕಾಂಡ 1:2,3 ರಲ್ಲಿ ನಾವು ಓದುತ್ತೇವೆ.

    ಈ ದಿನ ನಮಗೆ ಅದರಲ್ಲಿರುವ ಸಂದೇಶವೇನು? ನಾವು ಎಷ್ಟೋ ಸೋತಿರಬಹುದು ಅಥವಾ ಜೀವನದ ವಿಷಯಗಳನ್ನು ಅವ್ಯವಸ್ಥೆ(ಕೊಳಕು) ಮಾಡಿಕೊಂಡಿರಬಹುದು ಪರವಾಗಿಲ್ಲ. ಆದರೂ ದೇವರು ನಮ್ಮ ಜೀವಿತವನ್ನು ಮಹಿಮೆಯುಳ್ಳದ್ದಾಗಿ ಮಾಡಬಲ್ಲನು ಎಂಬುದೇ ಸರಿಯಾದ ಸಂದೇಶ. ದೇವರು ಆಕಾಶ ಭೂಮಿಯನ್ನು ಉಂಟು ಮಾಡಿದಾಗ ಅವುಗಳಿಗಾಗಿ ಪರಿಪೂರ್ಣ ಉದ್ದೇಶ (ಯೋಜನೆಗಳನ್ನು) ಇಟ್ಟುಕೊಂಡಿದ್ದನು. ಆದರೆ ಈ ಯೋಜನೆಯು ಲೂಸಿಫರನ ಸೋಲುವಿಕೆಯಿಂದ ಬೇರೆಯಾಗಿ ಇಡಲ್ಪಡಬೇಕಾಯಿತು. ಆದರೆ ದೇವರು ಆಕಾಶ ಮತ್ತು ಭೂಮಿಯನ್ನು ಪುನ: ರಚಿಸಿ ಅದರಿಂದ ಇನ್ನೂ ಬಹಳ ಒಳ್ಳೇಯದನ್ನು ಉತ್ಪತ್ತಿಮಾಡಿದನು.

    ನಂತರ ಏನಾಯಿತು. ಯೋಚಿಸಿರಿ.

    ದೇವರು ಆದಾಮ ಮತ್ತು ಹವ್ವರನ್ನು ಉಂಟು ಮಾಡಿ ಎಲ್ಲವನ್ನು ಮತ್ತೆ ಆರಂಭಿಸಿದನು. ದೇವರು ಅವರಿಗಾಗಿ ಸಹ ಪರಿಪೂರ್ಣ ಯೋಜನೆಯನ್ನು ಇಟ್ಟುಕೊಂಡಿರಬಹುದು. ಅವರು ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದಿಂದ ತಿನ್ನುವುದನ್ನು ಅದು ಒಳಗೊಂಡಿರಲಿಲ್ಲವೆನ್ನುವುದು ಸ್ಪಟ್ಟವಾಗಿದೆ. ಆದರೆ ನಿಷೇಧಿಸಲ್ಪಟ್ಟ ಮರದಿಂದ ತಿಂದು ದೇವರು ಅವರಿಗಾಗಿ ಮೊದಲಿನಿಂದಲೂ ಇಟ್ಟಿದ್ದ ಯೋಜನೆಯನ್ನು ನಿಷ್ಪಲಗೊಳಿಸಿದರು. ಆ ಯೋಜನೆ ಏನಾದರೂ ಆಗಿರಬಹುದು.

    ಎಂದಿಗೂ ಅವರು ದೇವರ ಪರಿಪೂರ್ಣ ಯೋಜನೆಯನ್ನು ನೆರವೇರಿಸಲು ಆಗಲಿಲ್ಲವೆಂದು ತರ್ಕಶಾಸ್ತ್ರವು ನಮಗೆ ಈಗ ಹೇಳುತ್ತದೆ. ಆದಾಗ್ಯೂ ದೇವರು ತೋಟದಲ್ಲಿ ಅವರನ್ನು ಸಂಧಿಸಲು ಬಂದಾಗ ತಮ್ಮ ಉಳಿದ ಜೀವಿತಕ್ಕಾಗಿ ಆತನ ಎರಡನೇ ಉತ್ತಮವಾದದ್ದರ ಮೇಲೆ ಅವರು ಈಗ ಜೀವಿಸಬೇಕು ಎಂದು ಆತನು ಅವರಿಗೆ ಹೇಳುವುದಿಲ್ಲ ಎಂಬುದಾಗಿ ನಾವು ನೋಡುತ್ತೇವೆ. ಇಲ್ಲಿ ಆದಿಕಾಂಡ 3:15 ರಲ್ಲಿ ಸ್ತ್ರೀಯ ಸಂತಾನವು ಸರ್ಪದ ತಲೆಯನ್ನು ಜಜ್ಜುವುದು ಎಂದು ಆತನು ಅವರಿಗೆ ವಾಗ್ದಾನ ಮಾಡುತ್ತಾನೆ. ಕ್ರಿಸ್ತನು ಲೋಕದ (ಜನರ) ಪಾಪಕ್ಕಾಗಿ ಸಾಯುವುದು ಮತ್ತು ಕಲ್ವಾರಿಯ ಮೇಲೆ ಸೈತಾನನ್ನು ಜಯಿಸುವುದು ಆತನ ವಾಗ್ದಾನವಾಗಿತ್ತು.

    ಈಗ ಈ ವಿಷಯವನ್ನು ಯೋಚಿಸಿರಿ. ಇದನ್ನು ನೀವು ತರ್ಕಿಸ ಬಲ್ಲಿರಾ ನೋಡಿರಿ.

    ಎಲ್ಲಾ ನಿತ್ಯತ್ವದಿಂದ ಕ್ರಿಸ್ತನ ಮರಣವು ದೇವರ ಪರಿಪೂರ್ಣ ಯೋಜನೆಯ ಭಾಗವಾಗಿತ್ತು ಎಂದು ನಾವು ತಿಳಿದಿದ್ದೇವೆ. ”ಜಗದುತ್ಪತ್ತಿಗೆ ಮೊದಲೇ ಕುರಿಮರಿಯು ಕೊಯ್ಯಲ್ಪಟ್ಟಿತ್ತು.” (ಪ್ರಕಟಣೆ 13:8) ಆದಾಗ್ಯೂ ಆದಾಮ ಮತ್ತು ಹವ್ವರು ಪಾಪ ಮಾಡಿ ದೇವರನ್ನು ನಿರಾಶೆಗೊಳಿಸಿದ್ದರಿಂದ ಮಾತ್ರ ಕ್ರಿಸ್ತನು ಸತ್ತನು ಎಂಬುದು ಸಹ ನಮಗೆ ಗೊತ್ತು. ಆದ್ದರಿಂದ ತರ್ಕಶಾಸ್ತ್ರವಾಗಿ ಲೋಕದ ಪಾಪಕ್ಕಾಗಿ ಕ್ರಿಸ್ತನು ಕಳುಹಿಸಿದ ದೇವರ ಪರಿಪೂರ್ಣ ಚಿತ್ತವು ನೆರವೇರಿತು. ಆದಾಮನ ಸೋಲುವಿಕೆಯ ಕಾರಣದಿಂದ ಅದು ಪರಿಪೂರ್ಣ ಚಿತ್ತವಾಗಿತ್ತು ಎಂದು ನಾವು ಹೇಳಬಹುದು. ಆದಾಮನ ಪಾಪಕ್ಕಾಗಿಲ್ಲದಿದ್ದರೆ ಕಲ್ವಾರಿ ಶಿಲುಬೆಯ ಮೇಲೆ ದೇವರ ಪ್ರೀತಿ ತೋರಿಸಲ್ಪಟ್ಟದ್ದನ್ನು ನಾವು ತಿಳುಕೊಳ್ಳುತ್ತಿರಲಿಲ್ಲ.

    ಅದು ತರ್ಕಶಾಸ್ತ್ರವನ್ನು ವ್ಯರ್ಥಗೊಳಿಸಿತು. ಇದಕ್ಕಾಗಿಯೇ ”ನಾವು ನಮ್ಮ ಸ್ವಬುದ್ದಿಯನ್ನು ಆಧಾರ ಮಾಡಿಕೊಳ್ಳಬಾರದು”. ಎಂದು ಸತ್ಯವೇದವು ಹೇಳುತ್ತದೆ. (ಜ್ಞಾನೋಕ್ತಿ 3:5)

    ದೇವರು ಗಣಿತ ಶಾಸ್ತ್ರದ ಪ್ರಕಾರ ಕಾರ್ಯನಿರ್ವಹಿಸಿದ್ದರೆ ಕ್ರಿಸ್ತನು ಭೂಲೋಕಕ್ಕೆ ಬರುವುದು ದೇವರ ಎರಡನೆಯ ಉತ್ತಮವಾದದ್ದು ಎಂದು ನಾವು ಹೇಳಬೇಕಾಗುತ್ತಿತ್ತು. ಆದರೆ ಹಾಗೆ ಹೇಳುವುದು ದೇವದೂಷಣೆಯಾಗಿರುತ್ತಿತ್ತು. ಇದು ಮನುಷ್ಯನಿಗಾಗಿ ದೇವರ ಪರಿಪೂರ್ಣ ಯೊಜನೆಯ ಭಾಗವಾಗಿತ್ತು. ದೇವರು ತಪ್ಪುಗಳನ್ನು ಮಾಡುವುದಿಲ್ಲ. ಆದರೆ ದೇವರು ಸರ್ವಶಕ್ತನೂ ಜೊತೆಗೆ ಸಾರ್ವಭೌಮನು ಆಗಿರುವುದರಿಂದ ಮತ್ತು ಆದಿಯಿಂದ ಅಂತ್ಯವನ್ನು ಸಹ ಆತನು ತಿಳಿದಿರುವ ಕಾರಣ ಮತ್ತು ಆತನು ಯಾವಾಗಲೂ ಪ್ರೀತಿಯಲ್ಲಿ ನಮಗೋಸ್ಕರ ಮೌನವಾಗಿ ಯೋಜನೆ ಮಾಡುತ್ತಿರುವುದರಿಂದ ನಮ್ಮೊಂದಿಗೆ ಆತನು ವ್ಯವಹರಿಸುವುದನ್ನು ನಾವು ವಿವರಿಸಲು ಪ್ರಯತ್ನಿಸಿದಾಗ ಮಾನವ ಬುದ್ದಿ (ತರ್ಕ) ಸೋತುಹೋಗುತ್ತದೆ.

    ದೇವರ ಮಾರ್ಗಗಳು ನಮ್ಮ ಮಾರ್ಗಗಳಲ್ಲ ಮತ್ತು ಆತನ ಯೋಚನೆಗಳು ನಮ್ಮ ಯೋಚನೆಗಳಲ್ಲ. ಅವೆರಡರ ನಡುವೆ ಇರುವ ವ್ಯತ್ಯಾಸವು ಭೂಮಿಗೂ ಅಕಾಶಕ್ಕೂ ಇರುವ ಅಂತರದಷ್ಟು ಉನ್ನತವಾಗಿದೆ (ಯೆಶಾಯ 55:8,9). ಆದ್ದರಿಂದ ದೇವರ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ನಮ್ಮ ಜಾಣ ಬುದ್ಧಿಯನ್ನು ಮತ್ತು ತರ್ಕಶಾಸ್ತ್ರವನ್ನು ಬದಿಗಿಡುವುದು ಒಳ್ಳೇಯದು.

    ಹಾಗಾದರೆ ಸತ್ಯವೇದದ ಪ್ರಾರಂಭದ ಪುಟಗಳಿಂದ ನೇರವಾಗಿ ದೇವರು ನಮಗೆ ಕೊಡಲು ಪ್ರಯತ್ನಿಸುವ ಸಂದೇಶ ಯಾವುದು? ಆತನು ಸೋತುಹೋದ ಮನುಷ್ಯನನ್ನು ತೆಗೆದುಕೊಂಡು ಅವನಿಂದ ಮಹಿಮೆಯುಳ್ಳದ್ದನ್ನು ಮಾಡಿ ಮತ್ತು ಇನ್ನೂ ಅವನ ಜೀವಿತಕ್ಕೆ ದೇವರ ಪರಿಪೂರ್ಣ ಚಿತ್ತವನ್ನು ಅವನು ನೆರವೇರಿಸುವಂತೆ ಮಾಡುವುದು ಮಾತ್ರವೇ ಆಗಿದೆ.

    ಸತ್ಯವೇದದಲ್ಲಿ ಅದು ಮನುಷ್ಯನಿಗೆ ದೇವರ ಮೊದಲ ಸಂದೇಶವಾಗಿದೆ ಮತ್ತು ನಾವು ಅದನ್ನು ಎಂದಿಗೂ ಮರೆಯಬಾರದು.

    ದೇವರು ಪುನ: ಪುನ: ಸೋತ ಮನುಷ್ಯನನ್ನು ತೆಗೆದುಕೊಂಡು ಅವನು ತನ್ನ ಪರಿಪೂರ್ಣ ಚಿತ್ತವನ್ನು ನೆರವೇರುವಂತೆ - ದೇವರ ಎರಡನೇ ಉತ್ತಮವಾದದ್ದನ್ನು ನೆರವೇರಿಸುವಂತೆಯಲ್ಲ ಆದರೆ ದೇವರ ಅತ್ಯುತ್ತಮ ಯೋಜನೆಯನ್ನು ನೆರವೇರಿಸುವಂತೆ ಮಾಡುವನು.

    ಇದು ಯಾಕಂದರೆ ಅವನಿಗೆ ಮರೆಯಲಾಗದ ಕೆಲವು ಪಾಠಗಳನ್ನು ಕಲಿಸಲು. ಸೋಲುವಿಕೆಯು ಸಹ ದೇವರ ಪರಿಪೂರ್ಣ ಯೋಜನೆಯ ಭಾಗವಾಗಿದೆ. ಇದು ಮಾನವ ತರ್ಕ ಶಾಸ್ತ್ರ (ವಾದ ಸಾಮರ್ಥ್ಯ) ಕ್ಕೆ ಗ್ರಹಿಸಲು ಅಸಾಧ್ಯವಾಗಿದೆ. ಯಾಕಂದರೆ ನಾವು ದೇವರನ್ನು ಬಹಳ ಸ್ವಲ್ಪವಾಗಿ ತಿಳಿದಿದ್ದೇವೆ.

    ಮುರಿಯಲ್ಪಟ್ಟ ಸ್ತ್ರೀ ಪುರುಷರನ್ನು ಮಾತ್ರ ದೇವರು ಉಪಯೋಗಿಸಬಲ್ಲನು ಮತ್ತು ಪುನ: ಪುನ: ಸೋಲುವಿಕೆಯ ಮೂಲಕವಾಗಿ ಆತನು ನಮ್ಮನ್ನು ಮುರಿಯುವುದು ಒಂದು ವಿಧಾನವಾಗಿದೆ.

    ಸೋಲುವಿಕೆಯು ಅಪೋಸ್ತಲನಾದ ಪೇತ್ರನ ನಾಯಕತ್ವಕ್ಕಾಗಿ ತರಬೇತಿಯ ಭಾಗವಾಗಿತ್ತು. ಕರ್ತನು ಪೇತ್ರನನ್ನು ಮುರಿಯಲು ಅವನ ಸೋಲುವಿಕೆಯನ್ನು ಉಪಯೋಗಿಸಿದನು.

    ಆಶೀರ್ವಾದವು ನಮ್ಮನ್ನು ಗರ್ವದಲ್ಲಿ ಉಬ್ಬಿಸದಂತ ರೀತಿಯಲ್ಲಿ ದೇವರು ನಮ್ಮನ್ನು ಆಶೀರ್ವದಿಸಬೇಕೆಂಬುದೇ ದೇವರಿಗೆ ನಮ್ಮೊಂದಿಗೆ ಇರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಕೋಪದ ಮೇಲೆ ಜಯ ಹೊಂದಿ ನಂತರ ಅದರ ಬಗ್ಗೆ ಗರ್ವದಿಂದಿರುವುದು ನಾವು ಮೊದಲು ಇದ್ದದ್ದಕ್ಕಿಂತ ಬಹಳ ಆಳವಾದ ಹಳ್ಳದಲ್ಲಿ ಬೀಳುವುದಕ್ಕೆ ಹೊಲಿಕೆಯಾಗಿದೆ. ಆದ್ದರಿಂದ ದೇವರು ಜಯದಲ್ಲಿ ನಮ್ಮನ್ನು ದೀನರನ್ನಾಗಿ ಇಡಬೇಕಾಗಿದೆ.

    ಪಾಪದ ಮೇಲೆ ನಿಜವಾದ ಜಯವು ಯಾವಾಗಲೂ ಆಳವಾದ ದೀನತೆಯ ಮೇಲೆ ಅವಲಂಬಿಸಿರುತ್ತದೆ. ಇಲ್ಲಿಯೇ ಮತ್ತೇ ಮತ್ತೇ ಸೋಲುವಿಕೆಯು ನಮ್ಮ ಸ್ವಂತ ಭರವಸೆಯನ್ನು ನಾಶ ಮಾಡುವುದು. ಇದರಿಂದ ಪಾಪದ ಮೇಲೆ ಜಯವು ದೇವರ ಬಲಪಡಿಸುವ ಕೃಪೆಯಿಂದ ಹೊರತು ಸಾಧ್ಯವಿಲ್ಲ ಎಂದು ನಮಗೆ ಅರಿವಾಗುವುದು. ಆ ಮೇಲೆ ನಾವು ಜಯಹೊಂದಿದಾಗ ಎಂದಿಗೂ ಅದರ ಬಗ್ಗೆ ಹೊಗಳಿಕೊಳ್ಳಲಾಗುವುದಿಲ್ಲ.

    ಮುಂದೆ, ನಾವು ಮತ್ತೆ ಮತ್ತೆ ಸೋತಾಗ ಎಂದಿಗೂ ಸೋಲುವ ಇತರರನ್ನು ನಾವು ಕಡೆಗಣಿಸಲಾಗುವುದಿಲ್ಲ. ಬೀಳುವವರೊಂದಿಗೆ ನಾವು ಅನುತಾಪವುಳ್ಳವರಾಗಿರಬಹುದು. ಯಾಕಂದರೆ ನಮ್ಮ ಸ್ವಂತ ಅಸಂಖ್ಯಾತ ಬೀಳುವಿಕೆಯ ಮೂಲಕ ನಮ್ಮ ಮಾಂಸದ ಬಲಹೀನತೆಯನ್ನು ನಾವು ತಿಳುಕೊಳ್ಳುತ್ತೇವೆ. ”ನಾವು ಬಲಹೀನರಾಗಿರುವುದರಿಂದ ಜ್ಞಾನವಿಲ್ಲದವರನ್ನು ಮಾರ್ಗತಪ್ಪಿ ನಡೆಯುವವರನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವೆವು. (ಇಬ್ರಿಯ 5:3) ಇಂಥ ಸಂದೇಶಗಳನ್ನು ತರ್ಕವಾದ ಸಾಮರ್ಥ್ಯವುಳ್ಳ ವ್ಯಕ್ತಿ ಕೇಳಿ, ಹಾಗಾದರೆ ಯಾವಾಗಲೂ ಹೆಚ್ಚು ಪಾಪ ಮಾಡುವುದೇ ಒಳ್ಳೇಯದು ಎಂದು ಹೇಳಬಹುದು.

    ರೋಮಾ 3:7,8 (ಸಜೀವ ವಾಕ್ಯ) ಅಂಥ ಮನುಷ್ಯರಿಗೆ ಉತ್ತರವನ್ನು ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ದಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿ ಎಂದು ತೀರ್ಪಾಗುವುದು ಯಾಕೆ? ಮೇಲು ಬರುವಂತೆ ಕೇಡು ಮಾಡೋಣ ಎಂದು ಭಾವಿಸುತ್ತಾರೆ ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯ.

    ಇಲ್ಲ, ನಾವು ಒಳ್ಳೇದು ಬರಲಿ ಎಂದು ನಾವು ಪಾಪ ಮಾಡಬೇಕು ಎಂಬುದಾಗಿ ನಾವು ಬೋಧಿಸುವುದಿಲ್ಲ. ದೇವರ ಕೃಪೆಯನ್ನು ದುರುಪಯೋಗಪಡಿಸಬೇಕೆಂದು ಉದ್ದೇಶ ಪೂರ್ವಕವಾಗಿ ದೇವರಿಗೆ ಅವಿಧೇಯರಾಗಬಹುದು ಮತ್ತು ನಾವು ಬಿತ್ತಿದ್ದನ್ನು ಕೊಯ್ಯದೇ ಇರೋಣ ಎಂದಾಗಲಿ ನಾವು ಹೇಳುತ್ತೇವೋ? ಇಲ್ಲ. ಆದರೆ ಮಾನವ ತರ್ಕ ಶಾಸ್ತ್ರವು ಬಿದ್ದ ಮನುಷ್ಯನಿಗೆ ದೇವರ ಕೃಪೆಯನ್ನು ಗ್ರಹಿಸುವಂತೆ ಮಾಡಲು ಆಗುವುದಿಲ್ಲ ಎಂದು ನಾವು ಹೇಳುತ್ತೇವೆ. ನಾವು ತುಚ್ಚವಾಗಿ ಪುನ: ಪುನ: ಸೋತ ಮೇಲೆ ನಮ್ಮನ್ನು ದೇವರ ಪರಿಪೂರ್ಣ ಚಿತ್ತಕ್ಕೆ ತರುವುದು ಸಹ ಆತನಿಗೆ ಆಸಾಧ್ಯವಿಲ್ಲ. ನಮ್ಮ ಅಪನಂಬಿಕೆ ಮಾತ್ರ ಆತನನ್ನು ತಡೆಯುತ್ತದೆ.

    ”ಆದರೆ ನಾನು ಅನೇಕ ಸಾರಿ ನನ್ನ ಜೀವಿತವನ್ನು ಅವ್ಯವಸ್ಥೆಗೊಳಿಸಿದ್ದೇನೆ. ನನ್ನನ್ನು ಈಗ ದೇವರ ಪರಿಪೂರ್ಣ ಯೋಜನೆಯಲ್ಲಿ ತರುವುದು ಆತನಿಗೆ ಅಸಾಧ್ಯ” ಎಂದು ನೀನು ಹೇಲಿದರೆ ಆಗ ದೇವರಿಗೆ ಆಸಾಧ್ಯವಾಗಿಯೇ ಇರುತ್ತದೆ. ಯಾಕಂದರೆ ಆತನು ನಿನಗೋಸ್ಕರ ಮಾಡುವುದನ್ನು ನೀನು ನಂಬುವುದಿಲ್ಲ. ಆದರೆ ನಾವು ನಂಬಿದರೆ ಮಾತ್ರ ದೇವರಿಗೆ ನಮಗೋಸ್ಕರ ಮಾಡಲು ಯಾವುದೂ ಅಸಾಧ್ಯವಲ್ಲ ಎಂದು ಯೇಸು ಹೇಳಿದನು.

    ”ನೀವು ನಂಬಿದಂತೆ ನಿಮಗೆ ಆಗಲಿ” ಎಂಬುದು ಎಲ್ಲಾ ವಿಷಯಗಳಲ್ಲಿ ದೇವರ ನಿಯಮಾಗಿದೆ (ಮತ್ತಾಯ 9:29). ನಾವು ಯಾವುದಕ್ಕಾಗಿ ನಂಬಿಕೆ ಇಟ್ಟಿದ್ದೇವೋ ಅದನ್ನು ನಾವು ಪಡೆಯುತ್ತೇವೆ. ನಮಗಾಗಿ ದೇವರು ಯಾವುದನ್ನೂ ಮಾಡುವುದಕ್ಕೆ ದೇವರಿಗೆ ಆಸಾಧ್ಯ ಎಂದು ನಾವು ನಂಬಿದರೆ ಆಗ ನಮ್ಮ ಜೀವಿತದಲ್ಲಿ ಅದು ಎಂದಿಗೂ ನೆರವೇರದೆ ಇರುತ್ತದೆ.

    ಬೇರೊಬ್ಬ ವಿಶ್ವಾಸಿಯು ನಿನಗಿಂತ ತನ್ನ ಜೀವಿತವನ್ನು ಬಹಳ ಅವ್ಯವಸ್ಥೆಗೊಳಿಸಿದನು ಆದಾಗ್ಯೂ ದೇವರು ಒಡೆದು ಹೋದ ಅವನ ಜೀವನದ ತುಂಡುಗಳನ್ನು ಆರಿಸಿ, ಅದರಿಂದ ಯಾವುದೋ ”ಬಹಳ ಒಳ್ಳೇಯದನ್ನು” ಮಾಡಬಲ್ಲನು ಎಂದು ಅವನು ನಂಬಿದ್ದರಿಂದ ಮಾತ್ರ ತನ್ನ ಜೀವಿತಕ್ಕೆ ಅವನು ದೇವರ ಪರಿಪೂರ್ಣ ಯೋಜನೆಯನ್ನು ನೆರವೇರಿಸಿದನು ಎಂಬುದನ್ನು ನೀನು ಕ್ರಿಸ್ತನ ನ್ಯಾಯಾಸನದ ಮುಂದೆ ಕಂಡುಕೊಳ್ಳಲು ಸಾಧ್ಯ.

    ನಿಮ್ಮ ಜೀವಿತಕ್ಕೆ ದೇವರ ಪರಿಪೂರ್ಣ ಯೋಜನೆಯನ್ನು ನಿಮ್ಮ ಸೋಲುವಿಕೆಯು (ಅವು ಎಷ್ಟೇ ಆಗಿರಬಹುದು) ಅಡ್ಡಿಪಡಿಸಲಿಲ್ಲ. ಆದರೆ ನಿಮ್ಮ ಅಪನಂಬಿಕೆಯು ಅಡ್ಡಿ ಪಡಿಸಿತು ಎಂಬುದನ್ನು ಅಲ್ಲಿ ನೀನು ಕಂಡುಕೊಳ್ಳುವಾಗ ಆ ದಿನದಲ್ಲಿ ನಿಮ್ಮ ಜೀವಿತದಲ್ಲಿ ಎಷ್ಟು ದು:ಖವಾಗುತ್ತದೆ.

    ಬಹಳ ವರ್ಷ ತನ್ನ ಜೀವನವನ್ನು ವ್ಯರ್ಥ ಮಾಡಿದ ತಪ್ಪಿ ಹೋದ ಮಗನ ಕಥೆಯು ಬಿದ್ದುಹೋದವರಿಗೂ ಸಹ ದೇವರು ತನ್ನ ಅತೀ ಉತ್ತಮವಾದದ್ದನ್ನು ಕೊಡತ್ತಾನೆಂದು ತೋರಿಸುತ್ತದೆ. ತಂದೆಯು ತನ್ನನ್ನು ಬಹಳ ನಿರಾಶೆಪಡಿಸಿದ ಮಗನಿಗಾಗಿ ”ತಟ್ಟನೆ ಉತ್ತಮವಾದ ನಿಲುವಂಗಿ ತನ್ನಿರಿ” ಎಂದು ಹೇಳಿದನು. ಪಾಪ ವಿಮೋಚನೆ ಮತ್ತು ಹೊಸ ಆರಂಭ ಒಂದು ಸಾರಿ ಮಾತ್ರವೇ ಅಲ್ಲ - ಆದರೆ ಮತ್ತೆ ಮತ್ತೆ ಇರುವಂಥದ್ಧಾಗಿದೆ. ಕಾರಣ ದೇವರು ಯಾರನ್ನೂ ಎಂದಿಗೂ ಬಿಟ್ಟು ಕೊಡುವುದಿಲ್ಲ. ಇದೇ ಸುವಾರ್ತೆಯ ಸಂದೇಶವಾಗಿದೆ.

    -29-

    ಕೂಲಿಯಾಳುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೋದ ಮನೆ ಯಜಮಾನನ ಸಾಮ್ಯವು (ಮತ್ತಾಯ 20:1-16) ಸಹ ಅದೇ ವಿಷಯವನ್ನು ಕಲಿಸುತ್ತದೆ. ಹನ್ನೊಂದನೆ ತಾಸಿಗೆ ಕೂಲಿ ಮಾಡಿದ ಜನರು ಮೊದಲು ಪ್ರತಿಫಲ ಹೊಂದಬೇಕಾದವರಾಗಿದ್ದಾರೆ. ಇನ್ನೊಂದು ಮಾತಿನಲ್ಲಿ ನಿತ್ಯತ್ವಕ್ಕೆ ಕ್ರಯವಿರುವ ಯಾವುದನ್ನೂ ಮಾಡದ ತಮ್ಮ ಜೀವತದ ಶೇಕಡಾ 90 ರಷ್ಟು (11/12) ವ್ಯರ್ಥ ಮಾಡಿದವರು ತಮ್ಮ ಉಳಿದ ಜೀವತದ ಶೇಕಡಾ 10 ರಷ್ಟು ದೇವರಿಗಾಗಿ ಮಹಿಮೆಯುಳ್ಳ ಯಾವುದನ್ನಾದರೂ ಇನ್ನೂ ಮಾಡಬಲ್ಲರು. ಸೋತವರೆಲ್ಲರಿಗೆ ಇದು ಅತಿಶಯವಾದ ಉತ್ತೇಜನವಾಗಿದೆ. ”ಸೈತಾನನು ಮಾಡಿದ ಕೆಲಸಗಳನ್ನು ಇಲ್ಲದಂತೆ ಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು”. (1 ಯೋಹಾನ 3:8)

    ನಮ್ಮ ಜೀವನದಲ್ಲಿರುವಂಥ ಎಲ್ಲಾ ಗಂಟುಗಳನ್ನು ಬಿಚ್ಚಲು ಯೇಸು ಸ್ವಾಮಿ ಬಂದನು ಎಂದು ಇದರ ಅರ್ಥ. ನಾವೆಲ್ಲರೂ ಬಾಲ್ಯವನ್ನು ಒಳ್ಳೇ ದಾರದ ಉಂಡೆಯಿಂದ ಪ್ರಾರಂಭಿಸಿದನೆಂದು ಚಿತ್ರಿಸಿಕೊಳ್ಳಿರಿ. ಆದರೆ ಈಗ ಆ ದಾರದ ಉಂಡೆ ಹತ್ತು ಸಾವಿರ ಗಂಟುಗಳಿಂದ ತುಂಬಿದೆ ಮತ್ತು ಆ ಗಂಟುಗಳನ್ನು ಎಂದಾದರೂ ಬಿಚ್ಚಬಲ್ಲವೆಂಬುದಕ್ಕೆ ನಮಗೆ ಯಾವ ನಿರೀಕ್ಷೆಯಿಲ್ಲ. ನಾವು ನಮ್ಮ ಜೀವಿತವನ್ನು ನೋಡಿದಂತೆಲ್ಲ ನಾವು ಧೈರ್ಯಗೆಟ್ಟವರೂ ಮತ್ತು ಕಳೆಗುಂದಿದವರೂ ಆಗಿದ್ದೇವೆ. ಸುವಾರ್ತೆಯ ಒಳ್ಳೇ ಸುದ್ದಿಯೇನದಂರೆ ಯೇಸು ಆ ಪ್ರತಿಯೊಂದು ಗಂಟನ್ನು ಬಿಚ್ಚಲು ಬಂದನು.

    ”ಅದು ಅಸಾಧ್ಯ” ಎಂದು ನೀನು ಹೇಳಿದರೆ, ಸರಿ ನೀನು ನಂಬಿದಂತೆ ನಿನಗಾಗುವುದು. ನಿನ್ನ ವಿಷಯದಲ್ಲಿ ಅದು ಅಸಾಧ್ಯವಾಗಿರುತ್ತದೆ.

    ಆದರೆ ನಿನಗಿಂತ ಕೀಳಾದ ಜೀವಿತವಿರುವ ಬೇರೊಬ್ಬನು, ”ಹೌದು ದೇವರು ಅದನ್ನು ನನ್ನಲ್ಲಿ ಮಾಡುತ್ತಾನೆಂದು ನಾನು ನಂಬುತ್ತೇನೆ” ಎಂದು ಹೇಳುತ್ತಾನೆ. ಅವನಿಗೆ ಸಹ ತಾನು ನಂಬಿದಂತೆ ಆಗುವುದು. ಅವನ ಜೀವಿತದಲ್ಲಿ ದೇವರು ಪರಿಪೂರ್ಣ ಯೋಜನೆಯು ನೆರವೇರುತ್ತದೆ.

    ಯೆರೆಮೀಯ (18:1-6) ರಲ್ಲಿ ದೇವರು ಯೆರೆಮೀಯನಿಗೆ ಪ್ರಾಯೋಗಿಕ ಉದಾಹರಣೆಯ ಮೂಲಕ ತನ್ನ ವಾಕ್ಯವನ್ನು ಮಾತಾಡಿದನು. ಯೆರೆಮೀಯನು ಕುಂಬಾರನ ಮನೆಗೆ ಹೋಗಬೇಕೆಂದು ಕೇಳಲ್ಪಟ್ಟನು. ಅಲ್ಲಿ ಕುಂಬಾರನು ಪಾತ್ರೆಯನ್ನು ಮಾಡುತ್ತಿರುವುದನ್ನು ಅವನು ನೋಡಿದನು. ಆದರೆ ”ಪಾತ್ರೆಯು ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು”. ಆಗ ಕುಂಬಾರನು ಏನು ಮಾಡಿದನು? ಅವನು ತನಗೆ ಸರಿತೋಚಿದ ಹಾಗೆ ಇನ್ನೊಂದು ಪಾತ್ರೆಯನ್ನಾಗಿ ಮಾಡಿದನು.

    ನಂತರ ಅನ್ವಯ ಬಂದು. . ....... ” ಈ ಕುಂಬಾರನು ಮಾಡಿದಂತೆ ನಾನು ನಿನ್ನನ್ನು ಮಾಡಕೊಡದೋ?” ಎಂಬುದು ಕರ್ತನ ಪ್ರಶ್ನೆಯಾಗಿತ್ತು (6ನೇ ವಚನವು ಆ ಚುಕ್ಕೆಗಳಿರುವ ಸ್ಥಳದಲ್ಲಿ ನಿನ್ನ ಹೆಸರನ್ನು ತುಂಬು ಮತ್ತು ಅದು ನಿನಗೆ ದೇವರ ಪ್ರಶ್ನೆಯಾಗಿರುತ್ತದೆ). ನಿನ್ನ ಎಲ್ಲಾ ಸೋಲುವಿಕೆಗಾಗಿ ನಿನ್ನ ಜೀವಿತದಲ್ಲಿ ದೇವರ ಚಿತ್ತಾನುಸಾರವಾಗಿರುವ ದು:ಖವಿರುವುದಾದರೆ, ಆಗ ಹಳೇ ಒಡಂಬಡಿಕೆಯ ಕೆಳಗೆ ವಾಗ್ದಾನ ಮಾಡಲ್ಪಟ್ಟಂತೆ ನಿನ್ನ ಪಾಪಗಳು ಕಡುಕೆಂಪಾಗಿದ್ದರೂ ಸಹ ಅವು ಹಿಮದಂತೆ ಬಿಳುಪಾಗುವುದು (ಯೆಶಾಯ 1:18). ಮಾತ್ರವಲ್ಲ ”ನಿನ್ನ ಪಾಪಗಳು ಇನ್ನು ಎಂದಿಗೂ ನೆನಪಿಗೆ ತರುವುದಿಲ್ಲ” ಎಂದು ದೇವರು ಹೊಸ ಒಡಂಬಡಿಕೆಯ ಕೆಳಗೆ ವಾಗ್ದಾನ ಮಾಡುತ್ತಾನೆ (ಇಬ್ರಿಯ 8:12).

    ನಿಮ್ಮ ಅಲಕ್ಷದಿಂದ ಮಾಡಿದ ತಪ್ಪು (ತಿಳಿಗೇಡಿತನ) ಅಥವಾ ಸೋಲುವಿಕೆ ಏನಾದರೂ ಆಗಿರಲಿ ದೇವರೊಂದಿಗೆ ನೀವು ಹೊಸ ಪ್ರಾರಂಭವನ್ನು ಮಾಡಬಹುದು. ಹಿಂದೆ ನೀವು ಸಾವಿರ ಹೊಸ ಪ್ರಾರಂಭವನ್ನು ಮಾಡಿ ಸೋತು ಹೋಗಿದ್ದರೂ ಸಹ ಈ ದಿನ 1001ನೇ ಹೊಸ ಪ್ರಾರಂಭವನ್ನು ಇನ್ನೂ ಮಾಡಬಹುದು. ನಿಮ್ಮ ಜೀವಿತದಲ್ಲಿ ದೇವರು ಮಹಿಮೆಯುಳ್ಳ ಕಾರ್ಯವನ್ನು ಇನ್ನೂ ಮಾಡಶಕ್ತನು. ಜೀವವಿರುವವರೆಗೆ ನಿರೀಕ್ಷೆಯಿದೆ.

    ಆದ್ದರಿಂದ ದೇವರಲ್ಲಿ ಭರವಸೆಯಿಡಲು ಮರೆಯಬೇಡಿರಿ. ಹಿಂದೆ ಗತಿಸಿದ ಕಾಲದಲ್ಲಿ ಆತನನ್ನು ನಿರಾಶೆಪಡಿಸಿದ್ದರಿಂದಲ್ಲ. ಈಗ ಆತನಲ್ಲಿ ಭರವಸೆಯಿಸುವುದಿಲ್ಲವಾದ್ದರಿಂದ ಆತನು ತನ್ನ ಅನೇಕ ಮಹತ್ತಾದ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಹಾಗಾದರೆ ಇಲ್ಲಿಯವರೆಗೂ ನಾವು ಆಸಾಧ್ಯವೆಂದು ಎಣಿಸಿದ ವಿಷಯಗಳಿಗಾಗಿ ಮುಂದಿನ ದಿನಗಳಲ್ಲಿ ಆತನನ್ನು ನಂಬುತ್ತಾ ”ನಂಬಿಕೆಯಲ್ಲಿ ಧೃಡವಾಗಿದ್ದು ದೇವರನ್ನು ಘನಪಡಿಸೋಣ”(ರೋಮ4:20).

    ಎಲ್ಲಾ ಜನರು - ಯೌವನಸ್ಥರು ಮತ್ತು ವಯಸ್ಸಾದವರು ಗತಿಸಿದ ಕಾಲದಲ್ಲಿ ತಾವು ಎಷ್ಟೇ ಸೋತಿದ್ದರೂ ಪರವಾಗಿಲ್ಲ ಅವರು ತಮ್ಮ ಸೋಲುವಿಕೆಯನ್ನು ಒಪ್ಪಿಕೊಂಡು ದೀನರಾಗಿ ದೇವರನ್ನು ನಂಬಿದರೆ ಮಾತ್ರ ಅವರು ನಿರೀಕ್ಷೆಯನ್ನು ಪಡೆಯಬಲ್ಲರು.

    ಹೀಗೆ ನಾವೆಲ್ಲರೂ ನಮ್ಮ ಸೋಲುವಿಕೆಯಿಂದ ಕಲಿತುಕೊಂಡು ನಮ್ಮ ಜೀವತಕ್ಕೋಸ್ಕರ ದೇವರ ಪರಿಪೂರ್ಣ ಚಿತ್ತವನ್ನು ನೆರವೇರಿಸುತ್ತಾ ಮುಂದಕ್ಕೆ ಸಾಗುವೆವು.

    ಬರುವ ವರ್ಷಗಳಲ್ಲಿ ಸಂಪೂರ್ಣ ಸೋತವರ ಜೀವಿತಗಳಲ್ಲಿ ಆತನು ಮಾಡಬಲ್ಲದ್ದನ್ನು ಇತರರಿಗೆ ಮಾದರಿಯಾಗಿ ನಮ್ಮನ್ನು ತೋರಿಸಬಲ್ಲನು.

    ಆ ದಿನಗಳಲ್ಲಿ ಆತನು ನಮ್ಮಲ್ಲಿ ಮಾಡುವಂಥದ್ದನ್ನು ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಕ್ಕೆ ತೋರಿಸುವನು (ಎಫೆಸ 2:7).

    ಕೇಳವುದಕ್ಕೆ ಕಿವಿಯುಳ್ಳವನು ಕೇಳಲಿ.

    ಆಮೆನ್, ಆಮೆನ್..