ನಿಜ ಸತ್ಯ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ
  Download Formats:

ಅಧ್ಯಾಯ
ನಿಮಗೆ ತಿಳಿದಿದೆಯೋ:

 • 1. ಒಳ್ಳೆ ದೇವರಿಂದ ಸೃಷ್ಟಿಸಲ್ಪಟ್ಟ ಲೋಕದಲ್ಲಿ ಕೆಟ್ಟತನವು ಹೆಗೆ ಪ್ರಾರಂಭವಾಯಿತು?
 • 2. ನಿಮ್ಮ ಮನಸ್ಸಾಕ್ಷಿಯು ನಿಮ್ಮ ಕಣ್ಣಿನಂತಿದೆ.
 • 3. ಮಾಟ ಮಂತ್ರಗಳ ಅಧಿಕಾರವನ್ನು ನೀವು ಮುರಿಯಲು ಸಾಧ್ಯವಿದೆ.
 • 4. ಪ್ರೀತಿಯ ತಂದೆಯೊಂದಿಗೆ ಮಾತನಾಡುವಂತೆ ನೀವು ದೇವರೊಂದಿಗೆ ಮಾತನಾಡಲು ಸಾಧ್ಯವಿದೆ.
 • 5. ಪ್ರತಿಯೊಂದು ಸಮಸ್ಯೆಯನ್ನು ನೀವು ದೇವರ ಸಹಾಯದಿಂದ ಜಯಿಸಲು ಸಾಧ್ಯವಿದೆ.
 • ಇವುಗಳಿಗೆಲ್ಲಾ ಈ ಪುಸ್ತಕದಲ್ಲಿ ಉತ್ತರವಿದೆ!

  ಅಧ್ಯಾಯ 1
  ಕೆಟ್ಟತನದ ಬಗ್ಗೆ ನಿಜ ಸತ್ಯ

  ಜಗತ್ತಿನಲ್ಲಿ ಇರುವ ಎಲ್ಲಾ ರಹಸ್ಯಗಳಲ್ಲಿ, ಅತಿ ವಿಸ್ತಾರವಾದ ಕೆಟ್ಟತನದ ರಹಸ್ಯವನ್ನು ಅರಿತುಕೊಳ್ಳಲು ಜನರು ಸತತವಾಗಿ ಪ್ರಯತ್ನಿಸಿದ್ದಾರೆ.

  ಸರ್ವಜ್ಞಾನಿಯು ಮತ್ತು ಒಳ್ಳೆಯವನಾದ ದೇವರು ಸೃಷ್ಟಿ ಮಾಡಿದ ಈ ಲೋಕದಲ್ಲಿ ಕೆಟ್ಟತನವು ಹೇಗೆ ಉಂಟಾಯಿತು?

  ಕೆಟ್ಟತನವು ಏಕೆ ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಮೇಲುಗೈಯನ್ನು ಸಾಧಿಸಿದೆ? ಮತ್ತು ಏಕೆ ಎಲ್ಲಾ ಕಡೆಯಲ್ಲೂ ಹೆಚ್ಚಾದಂತಹ ಖಾಯಿಲೆ, ಬಡತನ, ವೇದನೆ ಮತ್ತು ಬಾಧೆಗಳು ಉಂಟು? ಮತ್ತು ದೇವರು ನಮ್ಮನ್ನು ಸಹಾಯಿಸಲು ಆಸಕ್ತಿ ಉಳ್ಳವನಾಗಿದ್ದಾನೊ? ಈ ಕೆಲವು ಪ್ರಶ್ನೆಗಳಿಗೆ ಉತ್ತರವು ಬೇಕು.

  ಇದಕ್ಕೆ ಸತ್ಯವೇದವು ಉತ್ತರವನ್ನು ನೀಡುತ್ತದೆ.

  ಆದರೆ ನಾವು ಮುಂದೆ ಸಾಗುವುದಕ್ಕಿಂತ ಮುಂಚಿತವಾಗಿ, ದೇವರ ಕುರಿತಾಗಿ ಕೆಲವು ಸತ್ಯಾಂಶಗಳನ್ನು ಸ್ಪಷ್ಟ ಮಾಡಿಕೊಳ್ಳೋಣ.

  ದೇವರು ನಿತ್ಯತ್ವದಿಂದಲೂ ಇರುವಂತವನಾಗಿದ್ದಾನೆ. ಅತನಿಗೆ ಪ್ರಾರಂಭವಿಲ್ಲ. ಏಕೆಂದರೆ ನಾವು ತಿಳಿದಿರುವ ಕಾಲದ ಹೊರಗೆ ಆತನು ಜೀವಿಸುವಂತವನು ಆಗಿದ್ದಾನೆ. ನಾವು ಅರ್ಥ ಮಾಡಿಕೊಳ್ಳಲು ಅದು ಕಷ್ಟವಾಗಿರಬಹುದು. ಅದು ಏಕೆಂದರೆ ಯಾವ ರೀತಿಯಲ್ಲಿ ಒಂದು ಪಾತ್ರೆಯು ಸಮುದ್ರದ ನೀರನ್ನು ಹಿಡಿದು ಇಟ್ಟುಕೊಳ್ಳಲು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ನಮ್ಮ ಬುದ್ದಿಯು ದೇವರ ಜ್ಞಾನವನ್ನು ಹಿಡಿದು ಇಟ್ಟುಕೊಳ್ಳಲು ಸಾಧ್ಯವಿಲ್ಲ!

  ಸತ್ಯವೇದದ ಪ್ರಥಮ ವಚನವು ಈ ರೀತಿಯಾಗಿ ಪ್ರಾರಂಭವಾಗುತ್ತದೆ: ’ಆದಿಯಲ್ಲಿ ದೇವರು....’(ಆದಿಕಾಂಡ ಅಧ್ಯಾಯ 1, ವಚನ 1. ಆದಿಕಾಂಡವು ದೇವರ ವಾಕ್ಯವಾದ ಸತ್ಯವೇದದ 66 ಪುಸ್ತಕಗಳಲ್ಲಿ ಮೊದಲನೆಯ ಪುಸ್ತಕವಾಗಿದೆ. ಈ ಪುಸ್ತಕದ ಅಂಕಣದಲ್ಲಿ ಕೊಟ್ಟಿರುವ ಎಲ್ಲಾ ಆಧಾರ ವಚನಗಳು ಸತ್ಯವೇದ ಪುಸ್ತಕದ ಆಧಾರವಾಗಿರುತ್ತವೆ).

  ಸತ್ಯವೇದವು ದೇವರು ನಿತ್ಯತ್ವದಿಂದಲೂ ಇದ್ದನು ಎಂಬುದನ್ನು ವಿವರಿಸುವದಕ್ಕೂ ಹೋಗದೆ, ಅದು ಸತ್ಯಾಂಶ ಎಂಬುದಾಗಿ ತಿಳಿಸುತ್ತದೆ.

  ದೇವರು ಮನುಷ್ಯರಾದ ನಮ್ಮೊಂದಿಗೆ ಒಂದು ವೈಯುಕ್ತಿಕ ಸಂಬಂಧ ಇಟ್ಟುಕೊಳ್ಳ ಬಯಸುತ್ತಾನೆ ಎಂಬುದಾಗಿ ಸತ್ಯವೇದದಲ್ಲಿ ಪ್ರಕಟಿಸಲ್ಪಟ್ಟಿದ್ದಾನೆ. ನಾವು ಯಾವ ರೀತಿಯಾಗಿ ವ್ಯಕ್ತಿಗಳನ್ನು ಅರಿತುಕೊಳ್ಳುತ್ತೇವೋ ಹಾಗೆ ಆತನು ಮಾನವನಲ್ಲ.

  ದೇವರು ಆತ್ಮಸ್ವರೂಪಿಯು, ಎಲ್ಲಾ ವಿಧದಲ್ಲಿಯೂ ಅಪರಿಮಿತನೂ ಮತ್ತು ತನ್ನ ಗುಣವನ್ನು ಎಂದಿಗೂ ಬದಲಾಯಿಸದವನೂ, ಸರ್ವಶಕ್ತನೂ, ಸರ್ವಜ್ಞಾನಿಯೂ, ಅಪರಿಮಿತವಾದ ಬುದ್ದಿವಂತನೂ, ಅಪರಿಮಿತವಾದ ಪ್ರೀತಿಉಳ್ಳವನೂ, ಪರಿಶುದ್ದನೂ ಆಗಿದ್ದಾನೆ.

  ದೇವರ ಅಪರಿಮಿತವಾದ ಪ್ರೀತಿಯು ಸಂಪೂರ್ಣವಾಗಿ ನಿಸ್ವಾರ್ಥತೆಯುಳ್ಳದ್ದು. ಆದಿಯಿಂದಲೂ ಆತನು ತನ್ನ ಆನಂದವನ್ನೂ ಮತ್ತು ತನ್ನ ಸಂತೋಷವನ್ನೂ ಇತರರ ಕೂಡ ಹಂಚಿಕೊಳ್ಳಲು ಇಷ್ಟಪಟ್ಟನು. ಆತನು ಜೀವಿಗಳನ್ನು ಸೃಷ್ಟಿಸಿದನು. ಪ್ರಥಮವಾಗಿ, ಆತನು ಮನುಷ್ಯನನ್ನು ಸೃಷ್ಟಿಸುವುದಕ್ಕಿಂತ ಬಹಳ ಮುಂಚಿತವಾಗಿ, ಲಕ್ಷಾಂತರ ದೇವದೂತರನ್ನು ಸೃಷ್ಟಿಸಿದನು. ಇದರ ಮೂಲಕ ದೇವರು ತನ್ನ ಮಹಿಮೆಯನ್ನೂ ಸಂತೋಷವನ್ನೂ ಹಂಚಿಕೊಳ್ಳಬಯಸಿದನು.

  ದೇವದೂತರಲ್ಲಿ ಅವರ ನಾಯಕನನ್ನಾಗಿ ದೇವರು ಒಬ್ಬನನ್ನು ಸೃಷ್ಟಿಸಿದನು. ಅವನ ಹೆಸರು ಉದಯನಕ್ಷತ್ರನು (ಸೈತಾನನು). ಆ ಹೆಸರು, ಈ ದಿನದಲ್ಲಿ ಒಂದು ಕೆಟ್ಟ ಹೆಸರೆಂದು ಪರಿಗಣಿಸಲ್ಪಟ್ಟಿದೆ. ಆದರೆ ಹಿಂದೆ ಅದು ಒಬ್ಬ ಬಹು ಪರಾಕ್ರಮಿಯಾದ, ಬುದ್ದಿವಂತನಾದ ಮತ್ತು ದೇವದೂತರಲ್ಲೆಲ್ಲಾ ಅತೀ ಸುಂದರನಾದವನ ಹೆಸರಾಗಿತ್ತು. ಆತನು ದೇವದೂತರಿಗೆಲ್ಲಾ ನಾಯಕನಾಗಿದ್ದನು.

  ದೇವರು ಅವನನ್ನು ಕುರಿತು ಹೀಗೆ ಹೇಳಿದನು: ’ನೀನು ಜ್ಞಾನದ ಮತ್ತು ಸೌಂದರ್ಯದ ಪರಿಪೂರ್ಣನು... ನಾನು ನಿನ್ನನ್ನು ಅಭಿಷೇಕಿಸಲ್ಪಟ್ಟ ಕಾಯುವ ದೇವದೂತನನ್ನಾಗಿ ನೇಮಿಸಿದೆನು... ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು’ (ಯೆಹೆಜ್ಕೇಲ ಅಧ್ಯಾಯ 28 ವಚನ 12 15).

  ದೇವರು ಸೃಷ್ಟಿಸಿದ ಮರಗಳ ಮತ್ತು ನಕ್ಷತ್ರಗಳ ಹಾಗೆ ಸೈತಾನನು ಮತ್ತು ದೇವದೂತರು ಇರದೆ, ಸ್ವ ಇಚ್ಚೆ ಹೊಂದಿದವರಾಗಿದ್ದರು. ಅದು ಅವರು ದೇವರಿಗೆ ವಿಧೇಯರಾಗಿರಬಹುದು ಅಥವಾ ಆತನಿಗೆ ಅವಿಧೇಯರಾಗಿರಬಹುದಾದಂತಹ ಸ್ವ ಇಚ್ಚೆ. ಸ್ವ ಇಚ್ಚೆಯು ಒಬ್ಬ ನೈತಿಕಜೀವಿಗೆ ಇರಬೇಕಾದಂತಹ ಪ್ರಥಮ ಅವಶ್ಯಕತೆಯು. ನಕ್ಷತ್ರಗಳು ಮತ್ತು ಮರಗಳು ಒಳ್ಳೆಯದನ್ನಾಗಲಿ ಕೆಟ್ಟದನ್ನಾಗಲಿ ಮಾಡಲು ಅಸಾಧ್ಯಾ! ಏಕೆಂದರೆ ಅವು ತಮ್ಮಷ್ಟಕ್ಕೆ ಆರಿಸಿಕೊಳ್ಳಲು ಅಶಕ್ತಿರಾಗಿರುವದರಿಂದ ಮತ್ತು ಅವು ಆರಿಸಿಕೊಳ್ಳವ ಅವಕಾಶವಿಲ್ಲದೆ ಸೃಷ್ಟಿಸಲ್ಪಟ್ಟಿರುವದರಿಂದ ದೇವರ ಆಜ್ಞೆಗೆ ತೊಡಕಿಲ್ಲದೆ ವಿಧೇಯರಾಗುತ್ತವೆ. ಇದರಿಂದಾಗಿ ಅವು ದೇವರ ಮಕ್ಕಳಾಗಲು ಅಸಾಧ್ಯ. ಒಬ್ಬ ವಿಜ್ಞಾನಿಯು ಸೃಷ್ಟಿಸಿದ ಯಂತ್ರಮಾನವನು ಅವನು ರೂಷಿಸಿರುವ ಕಾರ್ಯಕ್ರಮದ ಪ್ರಕಾರ ಅವನ ಆಜ್ಞೆಗಳನ್ನೆಲ್ಲ ಪಾಲಿಸಬಹುದು. ಅದು ಅವನ ಸ್ವಂತ ಮಗನ ಹಾಗೆ ದೂರನ್ನು ನೀಡದಿರಬಹುದು! ಆದರೂ ಸಹ ಯಂತ್ರಮಾನವನೆಂದಿಗೂ ಅವನ ಸ್ವಂತ ಮಗನಾಗಲಾರನು!

  ಮನುಷ್ಯನಿಗೆ ನೈತಿಕಜೀವಿಯಾಗಿರಲು ಇರಬೇಕಾದ ಎರಡನೆಯ ಅವಶ್ಯಕತೆಯು ಮನಸ್ಸಾಕ್ಷಿ. ಪಕ್ಷಿಗಳು ಮತ್ತು ಪ್ರಾಣಿಗಳು ಸ್ವೇಚ್ಚೆಯಾಗಿ ಕಾರ್ಯವನ್ನು ಮಾಡಲು ಆರಿಸಿಕೊಳ್ಳಬಹುದು. ಆದರೂ ಸಹ ಅವು ನೈತಿಕಜೀವಿಯಾಗುವುದಿಲ್ಲ, ಏಕೆಂದರೆ ಅವುಗಳಿಗೆ ಮನಸ್ಸಾಕ್ಷಿಯಿಲ್ಲ. ಇದರಿಂದಾಗ ಅವು ಶುದ್ದರಾಗುವುದಿಲ್ಲ. ಅಥವಾ ಪಾಪಿಗಳಾಗುವುದಿಲ್ಲ. ಈ ಕಾರಣದಿಂದ ಅವು ದೇವರ ಮಕ್ಕಳಾಗುವುದಿಲ್ಲ. ಏಕೆಂದರೆ ದೇವರು ನೈತಿಕಜೀವಿಯು. ಮೇಲಾಗಿ ಅವು ನಿಮ್ಮ ಮಕ್ಕಳು ಸಹ ಆಗುವುದಿಲ್ಲ. ನೀವು ಕೊಡುವ ಅಪ್ಪಣೆಯನ್ನೆಲ್ಲ ಪಾಲಿಸಲು ಒಂದು ನಾಯಿಯನ್ನು ತರಬೇತಿ ನೀಡಿದರೂ ಅದು ನಿಮ್ಮ ಮಗನಾಗುವುದಿಲ್ಲ. ಏಕೆಂದರೆ ನಿಮ್ಮ ಮಗನಿಗೆ ನಿಮ್ಮ ಗುಣವಿರಬೇಕು. ಅದನ್ನು ನಿಮ್ಮ ನಾಯಿಯು ಹೊಂದಿರುವುದಿಲ್ಲ.

  ಆದರೆ ದೇವರು ಮನುಷ್ಯನನ್ನು ತನ್ನ ಸಾರೂಪ್ಯದಲ್ಲಿ ಉಂಟು ಮಾಡಿದನು. ಇದು ನಾವು ದೇವರ ಮಕ್ಕಳಾಗುವ ಸಾಧ್ಯತೆಯನ್ನು ಕೊಡುತ್ತದೆ. ಮನಸ್ಸಾಕ್ಷಿಯು ನಾವು ನೈತಿಕಜೀವಿಗಳು ಎಂಬುದಾಗಿ ನೆನಪಿಸುವ ಒಂದು ಧ್ವನಿಯು. ಅದು ನಾವು ದೇವರ ಆಜ್ಞೆಯನ್ನು ಮೀರಿದಾಗ ಅಪರಾಧಿಗಳೆಂದು ಅರುಹನ್ನು ಉಂಟು ಮಾಡುವಂತಹದು.

  ದೇವದೂತರು ಸೃಷ್ಟಿಸಲ್ಪಟ್ಟಾಗ ಸ್ವ ಇಚ್ಚೆಯನ್ನು ಮತ್ತು ಮನಸ್ಸಾಕ್ಷಿಯನ್ನು ಹೊಂದಿದವರಾಗಿದ್ದರು. ಅವರು ನೈತಿಕಜೀವಿಗಳಾಗಿದ್ದರು. ಈ ಕಾರಣದಿಂದ ಅವರು ದೇವರ ಸೃಷ್ಟಿಯಲ್ಲಿ ಅದ್ವಿತೀಯರಾಗಿದ್ದರು.

  ಹೀಗಿದ್ದರೂ, ಅವರ ನಾಯಕನಾದ ಸೈತಾನನು, ಕೆಲವು ಆಲೋಚನೆಗಳನ್ನು ಮತ್ತು ಹಿರಿಯಾಸೆಯನ್ನು ಹೊಂದಿದ್ದನು. ಅವು ಒಳ್ಳೆಯದಾಗಿರಲಿಲ್ಲ. ಇಲ್ಲಿಯೇ ವಿಶ್ವದಲ್ಲಿ ಪ್ರಥಮವಾಗಿ ಕೆಟ್ಟತನವು ಪ್ರಾರಂಭವಾಯಿತು.

  ಸೈತಾನನ ಆಲೋಚನೆಗಳು ಕೆಟ್ಟದ್ದು ಮಾತ್ರವಲ್ಲದೆ, ಅವು ಗರ್ವವುಳ್ಳದ್ದು, ದಂಗೆಯುಳ್ಳದ್ದು ಮತ್ತು ಅಸಂತೃಪ್ತಿಯಿಂದ ಕೂಡಿದವು ಆಗಿದ್ದವು. ವಿಶ್ವವು ಅಲ್ಲಿಯವರಗೆ ಸಂಪೂರ್ಣವಾಗಿ ಶುದ್ದವಾಗಿತ್ತು. ಆದರೆ ಈಗೆ ಕೆಟ್ಟತನವು ತನ್ನ ಅಸಹ್ಯವಾದ ತಲೆಯನ್ನು, ಸ್ವ ಇಚ್ಚೆಯನ್ನು ಹೊಂದಿದಂತಹ ಸೃಷ್ಟಿಸಲ್ಪಟ್ಟವನ ಹೃದಯದಲ್ಲಿ ಎತ್ತಿತ್ತು.

  ನೆನಪಿಡಿರಿ, ಪ್ರಥಮವಾಗಿ ಕೆಟ್ಟತನವು ಹೃದಯದಲ್ಲಿ ಪ್ರಾರಂಭವಾಯಿತು. ಹೊರಗಿನಿಂದ ಯಾವ ಒತ್ತಡವೂ ಇರಲಿಲ್ಲ. ಕೆಟ್ಟತನವು ಈಗಲೂ ಸಹ ಹೃದಯದಲ್ಲಿಯೇ ಪ್ರಾರಂಭವಾಗುತ್ತದೆ. ಇದನ್ನೂ ಸಹ ನೆನಪಿಡಿರಿ. ಲೋಕದೊಳಗೆ ಪ್ರಥಮ ಪಾಪವನ್ನು ತಂದಂತಹ ಕೆಟ್ಟತನವೇ ಗರ್ವ.

  ದೇವರು ನಂತರ ಸೈತಾನನನ್ನು ತನ್ನ ಸನ್ನಿಧಿಯಿಂದ ಕೂಡಲೆ ಹೊರಕ್ಕೆ ದೊಬ್ಬಿದನು. ಮತ್ತು ಅಲ್ಲಿಯವರೆಗೆ ಉದಯನಕ್ಷತ್ರನಾಗಿದ್ದವನು ಆ ಕ್ಷಣದಿಂದ ಸೈತಾನನು ಎಂಬುದಾಗಿ ಕರೆಯಲ್ಪಟ್ಟನು.

  ಸತ್ಯವೇದವು ಸೈತಾನನ ಬೀಳುವಿಕೆಯನ್ನು ಈ ರೀತಿಯಾಗಿ ವರ್ಣಿಸುತ್ತದೆ: ’ಉದಯನಕ್ಷತ್ರವೇ, ಬೆಳ್ಳಿಯೆ, ಆಕಾಶದಿಂದ ಹೇಗೆ ಬಿದ್ದೆ! ಜನಾಂಗಗಳನ್ನು ಕೆಡವಿದ ನೀನು ಕಡಿಯಲ್ಪಟ್ಟು ನೆಲಕ್ಕೆ ಉರುಳಿದೆಯಲ್ಲಾ... ನೀನು ನಿನ್ನ ಮನಸ್ಸಿನಲ್ಲಿ: ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು, ಉನ್ನತ ಮೇಘಮಂಡಲದ ಮೇಲೆ ಏರಿ ಉನ್ನತೋನ್ನತನಿಗೆ ಸರಿಸಮಾನನಾಗುವೆನು ಅಂದು ಕೊಂಡಿದ್ದಿಯಲ್ಲಾ! ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧಸ್ಥಳಗಳಿಗೆ, ತಳ್ಳಲ್ಪಡುತ್ತಿದ್ದೀ’. (ಯಶಾಯ ಅಧ್ಯಾಯ 14 ವಚನ 12 15).

  ಆದರೆ ಸೈತಾನನು ದೊಬ್ಬಲ್ಪಡುವದಕ್ಕಿಂತ ಮುಂಚಿತವಾಗಿಯೆ, ಅವನು ಅನೇಕರನ್ನು ತನ್ನ ಈ ದಂಗೆಯಲ್ಲಿ ತನ್ನೊಂದಿಗೆ ಸೇರಿಸಿಕೊಂಡಿದ್ದನು. ಅವನೊಂದಿಗೆ ಲಕ್ಷಾಂತರ ದೇವದೂತರು ಸೇರಿಕೊಂಡರು. 1/3 ಭಾಗದಷ್ಟು ಪರಲೋಕದಲ್ಲಿರುವ ದೇವದೂತರು ಸ್ಯತಾನನ್ನು ಹಿಂಬಾಲಿಸಿದರು (ಪ್ರಕಟನೆ ಅಧ್ಯಾಯ 12, ವಚನ 4 ರಲ್ಲಿ ನಾವು ಓದುತ್ತೇವೆ. ದೇವರು ಅವರನ್ನು ಮತ್ತು ಸೈತಾನನನ್ನು ಹೊರಕ್ಕೆ ದೊಬ್ಬಿದನು. ಈ ಕೆಳಕ್ಕೆ ಬಿದ್ದು ಹೋದಂತಹ ದೇವದೂತರ ಅಶುದ್ದ ಆತ್ಮಗಳು(ದೆವ್ವವು) ತೊಂದರೆಯನ್ನು ಮತ್ತು ಕಷ್ಟವನ್ನು ಜನರಿಗೆ ಈ ದಿನದಲ್ಲಿ ಉಂಟುಮಾಡುವಂತಹವು ಆಗಿವೆ.

  ಬಹುಶಃ ನೀವೇ ಅಶುದ್ದ ಆತ್ಮದಿಂದ ಕಷ್ಟವನ್ನು ಅನುಭವಿಸಿರಬಹುದು ಅಥವಾ ನಿಮ್ಮ ಮೇಲೆ ಯಾರಾದರೂ ಮಾಟಮಂತ್ರಗಳನ್ನು ಮಾಡಿಸಿರಬಹುದು. ಹಾಗಿದ್ದರೆ, ಸತ್ಯವೇದದಲ್ಲಿ ನಿಮಗಾಗಿಯೆ ಶುಭಸಮಾಚಾರವು ಉಂಟು. ನೀವು ಈ ರೀತಿಯಾದ ಬಾಧೆಯಿಂದ ಶಾಶ್ವತವಾಗಿ ಬಿಡುಗಡೆಯನ್ನು ಹೊಂದಬಹುದು. ಈ ಪುಸ್ತಕವನ್ನು ಬಹು ಜಾಗ್ರತೆಯಿಂದ ಓದಿರಿ ಮತ್ತು ಈ ಪುಸ್ತಕದ ಅಂತ್ಯವನ್ನು ಮುಟ್ಟುವ ಹೊತ್ತಿಗೆ, ನೀವು ದೇವರು ನಿಮಗಾಗಿ ಯಾವ ಅದ್ಭುತವನ್ನು ಮಾಡಬಲ್ಲನು ಎಂಬುದಾಗಿ ನೋಡುವಿರಿ.

  ಕೆಲವರು ಈ ಪ್ರಶ್ನೆಯನ್ನು ಈಗ ಕೇಳಬಹುದು, ’ಸೈತಾನನು ಜಗತ್ತಿನಲ್ಲಿರುವ ಎಲ್ಲ ಕೆಟ್ಟತನಗಳಿಗೂ ಕಾರಣವಾದರೆ, ದೇವರು ಏಕೆ ಸೈತಾನನ್ನು ಮತ್ತು ಆಶುದ್ದ ಆತ್ಮಗಳನ್ನು ನಾಶಮಾಡಬಾರದು?’.

  ಆತನಿಗೆ ಮಾಡಬೇಕೆನಿಸಿದರೆ, ದೇವರು ಕ್ಷಣ ಮಾತ್ರದಲ್ಲಿ ಮಾಡಬಹುದು ಆದರೆ ಆತನು ಮಾಡುವುದಿಲ್ಲ.

  ಇದು ದೇವರು ತನ್ನ ಅಪರಿಮಿತವಾದ ಜ್ಞಾನದಿಂದ, ಸೈತಾನನು ಮತ್ತು ಅಶುದ್ದ ಆತ್ಮಗಳು ಇನ್ನೂ ಇರುವುದಕ್ಕೆ ಅವಕಾಶ ಮಾಡಿಕೊಟ್ಟಿರುವದರಲ್ಲಿ, ಒಂದು ಯೋಜನೆ ಇರುವದನ್ನು ಸೂಚಿಸುತ್ತದೆ. ಯೋಜನೆಯ ಒಂದು ಭಾಗ, ಈ ಲೋಕದ ಜೀವಿತವನ್ನು ಸೈತಾನನ ಮುಖಾಂತರ ಮನುಷ್ಯನಿಗೆ ಕಷ್ಟಕರವಾಗಿ ಭರವಸೆಯಿಲ್ಲದೆ ಮತ್ತು ಅಪಾಯದಿಂದಿರಲೂ ಇದರಿಂದಾಗಿ ಜನರು ದೇವರ ಕಡೆಗೆ ತಿರುಗಿಕೊಂಡು ಈ ಲೋಕದ ಭೋಗಗಳನ್ನು ಹುಡುಕುವುದರ ಬದಲಾಗಿ ನಿತ್ಯತ್ವವನ್ನು ಕುರಿತು ಆಲೋಚಿಸಲಿಕ್ಕಾಗುವಂತೆಯೇ ಆಗಿರುತ್ತದೆ. ಈ ಲೋಕದ ಜೀವಿತವು ಒಂದು ವೇಳೆ ಖಾಯಿಲೆಯು, ಬಾಧೆಗಳು, ಬಡತನವು, ಅಥವಾ ವಪತ್ತುಗಳು ಇಲ್ಲದೆ, ಬರೀ ಸುಖವೇ ಇದ್ದಿದ್ದರೆ ಯಾರೂ ದೇವರನ್ನು ಸ್ಮರಿಸುವುದಿಲ್ಲ. ಹೀಗೆ ದೇವರು ಈ ಲೋಕದ ಜೀವಿತದ ಎಲ್ಲಾ ರೀತಿಯ ವಿಪತ್ತುಗಳನ್ನು ಮತ್ತು ಭರವಸೆಯಿಲ್ಲದಿರುವದನ್ನು ಉಪಯೋಗಿಸಿಕೊಂಡು ನಾವು ಆತನನ್ನು ಕುರಿತು ಆಲೋಚಿಸುವಂತೆಯೂ, ನಮ್ಮ ಅವಶ್ಯಕತೆಯಲ್ಲಿ ಆತನ ಕಡೆಗೆ ತಿರುಗಿಕೊಳ್ಳಲಿಕ್ಕಾಗುವಂತೆಯೂ ಮಾಡುತ್ತಾನೆ.

  ತನ್ನ ಕಡೆಗೆ ನಾವು ತಿರುಗಿಕೊಳ್ಳಲು ತೊಂದರೆಗಳು, ಖಾಯಿಲೆಗಳು ಮತ್ತು ಕಷ್ಟಗಳು ಎಲ್ಲವನ್ನು ಸಹ ಸೈತಾನನು ನಮ್ಮ ಜೀವಿತದಲ್ಲಿ ತರುವುದಕ್ಕೆ ಪ್ರೀತಿಯುಳ್ಳ ದೇವರು ಅನುಮತಿ ಕೊಟ್ಟಿರುತ್ತಾನೆ. ಇವುಗಳ ಮೂಲಕ ದೇವರು ನಿಮ್ಮ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತಾನೆ. ಇದೇ ಸತ್ಯವೇದದ ಸಂದೇಶ.

  ನಾನು ಒಬ್ಬ ವ್ಯಾಪಾರಸ್ಥನ ಕಥೆ ಕೇಳಿದ್ದೆ. ಆ ವ್ಯಾಪಾರಸ್ಥನು ದೇವರ ಅನ್ಯೋನ್ಯತೆಯಲ್ಲಿ ಇದ್ದನು. ಅವನ ವ್ಯಾಪಾರವು ಅಭಿವೃದ್ದಿ ಹೊಂದಿದ ಹಾಗೆ ಅವನು ದೇವರಿಂದ ದೂರ ಹೋದನು. ಸಭೆಯ ಹಿರಿಯರು ಅವನ ಕೂಡ ಅನೇಕ ಬಾರಿ ಮಾತನಾಡಿ ಅವನನ್ನು ದೇವರ ಕಡೆಗೆ ತಿರುಗಿಸಲು ನೋಡಿದರು. ಆದರೆ ಅವನು ತನ್ನ ವ್ಯಾಪಾರದಲ್ಲೇ ಮಗ್ನನಾಗಿದ್ದನು. ಒಂದು ದಿನ ಅವನ ಮೂರು ಮಕ್ಕಳಲ್ಲಿ ಕೊನೆಯವನನ್ನು ವಿಷದ ಹಾವು ಕಚ್ಚಿಬಿಟ್ಟಿತು, ಮತ್ತು ಆ ಮಗುವು ಬಹು ಚಿಂತಾಜನಕ ಸ್ಥಿತಿಗೆ ಒಳಗಾಯಿತು. ವೈದ್ಯರು ಸಹ ನಿರೀಕ್ಷೆಯನ್ನು ಬಿಟ್ಟುಬಿಟ್ಟರು. ಆಗ ತಂದೆಯು ನಿಜವಾಗಿಯು ಚಿಂತೆಗೆ ಗುರಿಯಾದನು, ಸಭೆಯ ಹಿರಿಯರಾದ ಒಬ್ಬರಿಗೆ ತನ್ನ ಮಗುವಿಗಾಗಿ ಪ್ರಾರ್ಥಿಸಲು ಕರೆ ಕಳುಹಿಸಿದನು. ಸಭೆಯ ಹಿರಿಯನು ಬುದ್ದಿವಂತನಾಗಿದ್ದನು. ಅವನು ಬಂದು ಹೀಗೆ ಪ್ರಾರ್ಧಿಸಿದನು, ’ದೇವರೇ, ಈ ಮಗುವನ್ನು ಕಚ್ಚಲು ಹಾವನ್ನು ಕಳುಹಿಸಿದಕ್ಕಾಗಿ ನಿನಗೆ ವಂದನೆಗಳು! ಏಕೆಂದರೆ ನಾನು ಈ ಕುಟುಂಬವು ನಿನ್ನನ್ನು ಕುರಿತು ಆಲೋಚಿಸುವಂತೆ ಮಾಡಲಾಗಲಿಲ್ಲ. ಆದರೆ ನಾನು ಯಾವುದನ್ನು ಆರು ವರ್ಷದಿಂದ ಮಾಡಲು ಸಾಧ್ಯವಾಗಲಿಲ್ಲವೋ, ಈ ಹಾವು ಅದನ್ನು ಕ್ಷಣ ಮಾತ್ರದಲ್ಲಿ ಮಾಡಿತು! ಈಗ ಅವರು ತಮ್ಮ ಪಾಠವನ್ನು ಕಲಿತಿದ್ದಾರೆ, ದೇವರೇ, ಮಗುವನ್ನು ಗುಣಪಡಿಸು, ಮತ್ತು ಅವರಿಗೆ ಇನ್ನೆಂದಿಗೂ ನಿನ್ನನ್ನು ನೆನಪಿಸಿಕೊಳ್ಳಲು ಹಾವಿನ ಅವಶ್ಯಕತೆ ಇರದ ಹಾಗೆ ಕರುಣಿಸು’! .

  ಕೆಲವರಿದ್ದಾರೆ! ಅವರನ್ನು ಆಸ್ಪತ್ರೆಗೆ ಕ್ಯಾನ್ಸರ್ ಖಾಯಿಲೆಗೂ ಅಥವಾ ಇನ್ನಾವುದೋ ಚಿಂತಾಜನಕಸ್ಧಿತಿ ಮುಟ್ಟುವ ತನಕ ದೇವರ ಕುರಿತು ಎಂದಿಗೂ ಚಿಂತಿಸುವುದೇ ಇಲ್ಲ. ಆಗ, ಆ ಕೂಡಲೆ ದೇವರ ಬಗ್ಗೆ ಯೋಚಿಸಿ ರಕ್ಷಣೆಗಾಗಿ ಆತನ ಕಡೆಗೆ ತಿರುಗಿಕೊಳ್ಳುತ್ತಾರೆ.

  ಗುಣವಾಗದ ರೋಗಗಳು, ಖಾಯಿಲೆಗಳು, ಬಡತನವು ಮತ್ತು ಇನ್ನು ಲೋಕದಲ್ಲಿರುವ ಕೆಟ್ಟತನವನ್ನೆಲ್ಲಾ ದೇವರು ಮನುಷ್ಯರನ್ನು ಅವರ ಪಾಪದಿಂದ ಅವರನ್ನು ತಿರುಗಿಸಲು ಉಪಯೋಗಿಸುತ್ತಾನೆ. ಹೀಗೆ ದೇವರು ಅವರನ್ನು ಸ್ವರ್ಗದಲ್ಲಿರುವ ನಿತ್ಯವಾದ ಮನೆಗೆ ನಡೆಸುತ್ತಾನೆ. ಇದೇ ರೀತಿಯಾಗಿ ದೇವರು ಸೈತಾನನ ಕೆಟ್ಟಕಾರ್ಯಗಳನ್ನು ಉಪಯೋಗಿಸಿ ಅವನ ಬಂಧನದಲ್ಲಿರುವವರನ್ನು ಬಿಡಿಸಿ ನಿತ್ಯವಾದ ರಕ್ಷಣಿಗೆ ಬರಮಾಡುತ್ತಾನೆ. ಹೀಗೆ ದೇವರು ಸೈತಾನನ್ನು ಮೂರ್ಖನನ್ನಾಗಿಸುತ್ತಾನೆ. ಸೈತಾನನು ಯಾರಿಗಾಗಿ ತಾನು ಕುಣಿ ತೋಡುವನೋ ಅದರಲ್ಲಿ ತಾನೇ ಬೀಳುವನು.

  ಸೈತಾನನು ಜೀವಿಸಲು ಮತ್ತೊಂದು ಕಾರಣ, ದೇವರ ಮಕ್ಕಳನ್ನು ಪರಿಶುದ್ದರಾಗಿಸುವುದಕ್ಕಾಗಿಯೇ ಆಗಿರುತ್ತದೆ.

  ಬೆಂಕಿಯ ಉದಾಹರಣೆಯನ್ನು ತೆಗೆದುಕೊಳ್ಳಿರಿ. ನಮಗೆ ಪ್ರಪಂಚದ ಚರಿತ್ರೆಯಲ್ಲಿ ಅನೇಕ ಲಕ್ಷಾಂತರ ಜನರು ಬೆಂಕಿಯಿಂದಾಗಿ ಸತ್ತು ಹೊಗಿದ್ದಾರೆ ಎಂದು ಗೋತ್ತಿದೆ. ಆದರೆ ಯಾರೂ ಬೆಂಕಿ ಉಪಯೋಗಿಸುವದನ್ನು ನಿಲ್ಲಿಸುವುದಿಲ್ಲ. ಏಕೆ? ಬೆಂಕಿಯಿಂದಾಗಿಯೆ ನಾವು ಆಹಾರವನ್ನು ಮಾಡಿಕೊಳ್ಳುತ್ತೇವೆ ಮತ್ತು ವಾಹನಗಳು ಮತ್ತು ವಿಮಾನಗಳು ಮತ್ತು ಯಂತ್ರಗಳು ಚಲಿಸುತ್ತವೆ. ಚಿನ್ನವು ಸಹ ಬೆಂಕಿಯಿಂದಲೆ ಶುದ್ಧವಾಗುವುದು. ಹೀಗೆ ಬೆಂಕಿಯು, ವಿನಾಶಕರವಾಗಿದ್ದರೂ, ಭಯಂಕರವಾಗಿದ್ದರೂ, ಅನೇಕ ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಬಹುದು.

  ಇದೇ ರೀತಿಯಾಗಿ ಸೈತಾನನು ಕೆಟ್ಟವನಾಗಿದ್ದರೂ ಜನರನ್ನು ದಿಕ್ಕುತಪ್ಪಿಸಬೇಕೆಂದಿದ್ದರೂ, ದೇವರು ಅವನನ್ನು ಉಪಯೋಗಿಸಿಕೊಳ್ಳುತ್ತಾನೆ. ಚಿನ್ನವನ್ನು ಬೆಂಕಿಗೆ ಹಾಕಿ ಶುದ್ಧ ಮಾಡಿದಂತೆ ಸೈತಾನನು ದೇವರ ಮಕ್ಕಳನ್ನು ಶುದ್ಧ ಮತ್ತು ಪವಿತ್ರರಾಗುವಂತೆ ಹಲವಾರು ಕಷ್ಟ ಮತ್ತು ಶೋಧನೆಗಳ ಮೂಲಕ ಬಾಧಿಸಲು ಅನುಮತಿಸಲ್ಪಟ್ಟಿದ್ದಾನೆ.

  ದೇವರು ಕ್ಷಣ ಮಾತ್ರದಲ್ಲಿಯೆ ಲೋಕದ ಎಲ್ಲ ಕೆಟ್ಟತನವನ್ನು ಹೋಗಲಾಡಿಸಬಹುದಾದರೂ, ಆತನು ಹಾಗೆ ಮಾಡುವುದಿಲ್ಲ, ಏಕೆಂದರೆ ಆತನು ತನ್ನ ಪ್ರಭಾವವುಳ್ಳ ಯೋಜನೆಯನ್ನು ಇವುಗಳ ಮುಖಾಂತರ ನೆರವೇರಿಸುತ್ತಿದ್ದಾನೆ ಎಂದು ನಾವು ತಿಳಿಯಬೇಕು.

  ಅಧ್ಯಾಯ 2
  ಪಾಪದ ಕುರಿತಾಗಿ ನಿಜ ಸತ್ಯ

  ಅನೇಕ ಜನರು ಏಕೆ ಪ್ರಾಣಿಗಳಹಾಗೆ ವರ್ತಿಸುತ್ತಾರೆ?

  ಉತ್ತರವೇನೆಂದರೆ: ಅವರು ಬರೀ ದೈಹಿಕ ಅವಶ್ಯಕತೆಗಳನ್ನೂ ಈ ಲೋಕ ಜೀವಿತದ ಕುರಿತಾಗಿ ಆಸಕ್ತಿಯನ್ನೂ ಹೊಂದಿರುವದರಿಂದ.

  ಪ್ರಾಣಿಗಳು ಯಾವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತವೆ? ಆಹಾರ, ನಿದ್ರೆ ಮತ್ತು ಲೈಂಗಿಕ ತೃಪ್ತಿಯಲ್ಲಿ ಆಸಕ್ತಿ. ಇಷ್ಟು ಮಾತ್ರವೆ. ಆದರೆ ಮನುಷ್ಯನು ಬರೀ ಇವುಗಳಲ್ಲಿ ಆಸಕ್ತನಾಗಿದ್ದರೆ, ಅವನು ಪ್ರಾಣಿಗಳ ಮಟ್ಟಕ್ಕೆ ಇಳಿದಿದ್ದಾನೆ ಎಂದು ನಾವು ಹೇಳಬಹುದು. ಆದರೆ ದೇವರು ನಮ್ಮನ್ನು ಪ್ರಾಣಿಗಳ ಹಾಗೆ ಇರಲಿಕ್ಕೆ ಉಂಟು ಮಾಡಲಿಲ್ಲ. ನಾವು ಆತನ ಹಾಗೆ ನೀತಿಯುಳ್ಳವರು ಹಾಗು ಯಥಾರ್ಥರು, ಮತ್ತು ಶಮೆದಮೆ ಹೊಂದಿ ಪ್ರಾಣಿಗಳ ಹಾಗೆ ಕಾಮಕ್ಕೆ ದಾಸರಾಗದಂತೆ ನಮ್ಮನ್ನು ಆತನು ಸೃಷ್ಟಿಸಿದನು.

  ನಾವು ಓದಿದ ಮಾತ್ರಕ್ಕೆ ಅಥವಾ ಪ್ರಾಣಿಗಳಿಗಿಂತ ಬುದ್ದಿವಂತರಾದ್ದರಿಂದ, ನಾವು ಅವುಗಳಿಗಿಂತ ಉತ್ತಮರೇನೂ ಅಲ್ಲ. ಬುದ್ದಿವಂತರು, ಓದಿದವರು ಸಹ ಅತ್ಯಾಶೆಗೆ, ಸ್ವಾರ್ಥತೆಗೆ ಕಾಮದಾಹಕ್ಕೆ, ಕೋಪಕ್ಕೆ ... ದಾಸರಾಗಿ ಹೋಗಿರುತ್ತಾರೆ. ನಮ್ಮಲ್ಲಿ ಒಂದು ಭಾಗವುಂಟು ಅದು ನಮ್ಮ ಮನಸ್ಸಿಗಿಂತ ಆಳವಾದ್ದದ್ದು, ಅದು ನಮ್ಮ ಆತ್ಮವೇ ಆಗಿರುತ್ತದೆ. ನಮ್ಮ ಆತ್ಮವು ದೇವರ ಕುರಿತು ತಿಳಿಸುತ್ತದೆ. ಪ್ರಾಣಿಯಲ್ಲಿ ಇಲ್ಲರದಿರುವುದು ಇದೇ ಆಗಿದೆ.

  ಕಳೆದ ಅಧ್ಯಾಯದಲ್ಲಿ ನಾವು ನೋಡಿದ ಹಾಗೆ, ದೇವರು ನಮ್ಮನ್ನು ಸ್ವಚಿತ್ತದಿಂದ ಆರಿಸಿಕ್ಕೊಳ್ಳುವ ಶಕ್ತಿ ಹೊಂದಿದ ಜೀವಿಗಳಾಗಿ ಸೃಷ್ಟಿಸಿದ್ದಾನೆ. ಆದರೆ ಈ ಸ್ವಾತಂತ್ರದಿಂದಾಗುವ ಅಪಾಯವೇನೆಂದರೆ, ನಾವು ಈ ಸ್ವಾತಂತ್ರವನ್ನು ನಮ್ಮ ತೃಪ್ತಿಗಾಗಿ ಉಪಯೋಗಿಸಿ ದೇವರ ಆಜ್ಞೆಯನ್ನು ಮೀರಬಹುದು. ಆದರೆ ದೇವರು ಈ ಅಪಾಯಕರವಾದದ್ದನ್ನು ತೆಗೆದುಕೊಳ್ಳಲು ಸಿದ್ಥನಿದ್ದನು ಏಕೆಂದರೆ ಆತನಿಗೆ ತನ್ನನ್ನು ಸ್ವತಂತ್ರರಾಗಿ ಆರಿಸಿಕೊಳ್ಳುವ ಮಕ್ಕಳು ಬೇಕಿದ್ದರು.

  ಲೋಕದಲ್ಲಿರುವ ಎಲ್ಲ ರೀತಿಯ ಗಲಿಬಿಲಿ, ಗೊಂದಲಗಳು, ರೋಗಗಳು ಮತ್ತು ಕೆಟ್ಟತನಗಳು ಮಾನವನು ದೇವರಿಗೆ ಅವಿಧೇಯನಾಗಿರುವದರಿಂದಲೂ ಸೈತಾನನ ಮಾತನ್ನು ಕೇಳುತ್ತಿರುವದರಿಂದಲೂ ಬಂದಂತಹ ಪ್ರತಿಫಲ. ದೇವರು ಸೃಷ್ಟಿಸಿದ ಪ್ರಥಮ ಪುರುಷ ಮತ್ತು ಸ್ತೀ, ಆದಾಮನು ಮತ್ತು ಹವ್ವಳು ಎಂಬವರಾಗಿದ್ದರು.

  ಅವರು ಸೃಷ್ಟಿಸಲ್ಪಟ್ಟಾಗ ಮುಗ್ದರಾಗಿದ್ದರು. ಅವರು ಶದ್ಧರಾಗಿರಬೇಕು ಎಂದು ತಾವೇ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು. ಅವರು ತೀರ್ಮಾನ ತೆಗೆದುಕೊಳ್ಳಲು ಅವರನ್ನು ಶೋಧಿಸಬೇಕಾಗಿತ್ತು, ಆ ಮೂಲಕ ಅವರು ಕೆಟ್ಟದನ್ನು ತಿರಸ್ಕರಿಸಿ, ಅದಕ್ಕೆ ಬದಲಾಗಿ ದೇವರನ್ನು ಆರಿಸಿಕೊಳ್ಳಬೇಕಾಗಿತ್ತು. ಸೈತಾನನು ಬಂದು ಅವರನ್ನು ಶೋಧಿಸಲು ದೇವರು ಅನುಮತಿಸಿದನು. ಇದರ ಕುರಿತಾಗಿ ನಾವು ಸತ್ಯವೇದದ ಪ್ರಥಮ ಪುಸ್ತಕದ 2ನೇ ಮತ್ತು 3ನೇ ಅಧ್ಯಾಯದಲ್ಲಿ ಓದುತ್ತೇವೆ.

  ಮುಗ್ದತೆಯಲ್ಲಿ ಮತ್ತು ಶುದ್ಧತೆಯಲ್ಲಿ ಬಹು ವ್ಯತ್ಯಾಸವುಂಟು. ಮುಗ್ದತೆಯನ್ನು ನೀವು ಮಗುವಿನಲ್ಲಿ ನೋಡುವಿರಿ. ಆದಾಮನು ಸೃಷ್ಟಿಸಲ್ಪಟ್ಟಾಗ ಯಾವ ರೀತಿಯಲ್ಲಿ ಇದ್ದನು ಎಂದು ತಿಳಿದುಕೊಳ್ಳಲು, ನೀವು ಒಂದು ಮಗುವನ್ನು ನೋಡಿರಿ. ಕೆಟ್ಟದ್ದು ಮತ್ತು ಒಳ್ಳೆಯದರ ಬಗ್ಗೆ ಜ್ಞಾನವೇ ಇರುವುದಿಲ್ಲ ಹಾಗು ಮುಗ್ಥವಾಗಿರುತ್ತದೆ. ಆದರೆ ಆ ಬೆಕ್ಕಮಗುವು ಪರಿಶುದ್ಧ ಮತ್ತು ಪೂರ್ಣವಾಗಿರುವುದಿಲ್ಲ. ಆ ಮಗುವು ಪೂರ್ಣವಾಗುವುದಕ್ಕೆ ಬೆಳೆಯಬೇಕು ಮತ್ತು ಕೆಲವನ್ನು ಆರಿಸಿಕೊಳ್ಳಬೇಕು. ಕೆಟ್ಟದ್ದನ್ನು ತಿರಸ್ಕರಿಸಿ ಮತ್ತು ದೇವರನ್ನು ಆರಿಸಿಕೊಳ್ಳುವ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

  ನಾವು ನಮ್ಮ ಮನಸ್ಸಿನಲ್ಲಿ ಶೋಧನೆಗೆ ಒಳಗಾಗದೆ ಇರುವಾಗಲೇ, ನಾವು ನಡತೆಯನ್ನು ಬೆಳೆಸಿಕೊಳ್ಳುತ್ತೇವೆ. ನೀವು ಈ ದಿನದಲ್ಲಿ ಏನಾಗಿದ್ದಿರೋ ಅದು ನಿಮ್ಮ ಜೀವಿತದಲ್ಲಿ ಇಲ್ಲಿಯವರೆಗೆ ನೀವು ತೆಗೆದುಕೊಂಡ ತೀರ್ಮಾನಗಳಿಂದಾಗಿಯೇ ಆಗಿರುತ್ತದೆ.

  ನಿಮ್ಮ ಅಕ್ಕಪಕ್ಕದಲ್ಲಿ ಯಾರಾದರೂ ನಿಮಗಿಂತ ಉತ್ತಮರಾಗಿದ್ದರೆ, ಅದು ಅವರು ತಮ್ಮ ಜೀವಿತದಲ್ಲಿ ತೆಗೆದುಕೊಂಡ ಉತ್ತಮ ತೀರ್ಮಾನಗಳಿಂದಾಗಿಯೇ. ನಾವೆಲ್ಲರು ಪ್ರತಿದಿನವು ಆರಿಸಿಕೊಳ್ಳುತ್ತೇವೆ ಮತ್ತು ಇವು ನಾವು ಕೊನೆಯಲ್ಲಿ ಏನಾಗುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ.

  ಯಾವಾಗ ದೇವರು ಮನುಷ್ಯರನ್ನು ಉಂಟು ಮಾಡಿದನೋ, ಸೈತಾನನ ಶೋಧನೆಗೆ ಒಳಗಾಗುವುದರ ಮುಖಾಂತರ ಅವರಿಗೆ ಪರಿಶುದ್ದರಾಗುವುದಕ್ಕೆ ಒಂದು ಅವಕಾಶವನ್ನು ಕೊಟ್ಟನು. ಆತನು ಅವರನ್ನು ತೋಟದಲ್ಲಿ ಇರಿಸಿ ಹೀಗೆ ಹೇಳಿದನು: ತೋಟದಲ್ಲಿರುವ ಎಲ್ಲಾ ಮರದ ಹಣ್ಣುಗಳನ್ನು ತಿನ್ನಬಹುದು ಆದರೆ ಒಂದು ಹಣ್ಣಿನ ಹೊರತು. ಇದು ಒಂದು ಪರೀಕ್ಷೆಯಾಗಿತ್ತು. ಮೇಲಾಗಿ ಇದು ಸುಲಭವಾದ ಪರೀಕ್ಷೆಯಾಗಿತ್ತು, ಏಕೆಂದರೆ ಅವರು ಯಾವ ತೋಟಕ್ಕೆ ಕಳುಹಿಸಲ್ಪಟ್ಟರು ಎಂದರೆ ರುಚಿಕರವಾದ ಮತ್ತು ಆಕರ್ಷಣಿಯವಾದ ಸಾವಿರಾರು ಮರಗಳ ಹಣ್ಣನು ತಿನ್ನಬಹುದಾದ ತೋಟ! ಆದರೆ ಒಂದು ಹಣ್ಣಿನ ಹೊರತಾಗಿ ಎಂಬುದಾಗಿ ಅವರಿಗೆ ಹೇಳಲ್ಪಟ್ಟಿತ್ತು. ಆದರೂ ಅವರು ಈ ವಿಧೇಯತೆಯ ಸಣ್ಣ ಪರೀಕ್ಷೆಯಲ್ಲಿ ಸೋತು ಹೋದರು.

  ಸೈತಾನನು ಅವರ ಬಳಿಗೆ ಬಂದು ಅವರನ್ನು ಈ ರೀತಿಯಾಗಿ ಶೋಧಿಸಿದನು: "ನೀವು ನಿಷೇಧಿಸಲ್ಪಟ್ಟ ಆ ಮರದ ಹಣ್ಣನ್ನು ತಿಂದರೆ, ನೀವೂ ದೇವರಾಗುತ್ತೀರಿ" ಎಂದು. ಆ ಸಮಯದಲ್ಲಿ ಅವರು ಎದುರಿಸಿದ ಶೋಧನೆಯು ಬರೇ ಹಣ್ಣನ್ನು ತಿನ್ನುವುದಾಗಿರಲಿಲ್ಲ. ಆದರೆ ಅವರು ಬೇಕಾಗಿದ್ದರೆ ದೇವರಾಗಬಹುದು.

  ಇದೇ ಸೈತಾನನು ಒಂದು ಸಮಯದಲ್ಲಿ ತಾನಾಗಬೇಕೆಂದು ಬಯಸಿದ್ದು. ಈಗ ಅದನ್ನೆ ಅವನು ಅವರಿಗೆ ಆಗಬಹುದೆಂದು ತಿಳಿಸಿದನು. ಆದರೆ, ಸೈತಾನನು ಹೇಳಿದ ಮಾತು ಸುಳ್ಳಾಗಿತ್ತು. ಯಾವ ರೀತಿಯಾಗಿ ಈ ದಿನದಲ್ಲಿ ಅವನ ಸುಳ್ಳಿಗೆ ಜನರು ಬೀಳುತ್ತಾರೊ ಅದೇ ರೀತಿಯಾಗಿ ಅವರು ಸಹ ಆ ದಿನದಲ್ಲಿ ಬಿದ್ದರು. ಅವರು ದೇವರಿಗೆ ಅವಿಧೇಯರಾಗಿ ಸೈತಾನನಿಗೆ ಆಮೇಲೆ ಸಂಭವಿಸಿದನ್ನೇ ಅನುಭವಿಸಿದರು. ಅವರು ದೇವರ ಸನ್ನಿಧಿಯಿಂದ ದೊಬ್ಬಲ್ಪಟ್ಟರು.

  ಆ ಘಟನೆಯ ಎಲ್ಲಾ ವಿವರಗಳನ್ನೂ ಸತ್ಯವೇದದ ಮೊದಲನೆಯ ಪುಸ್ತಕದ ೩ನೆಯ ಅಧ್ಯಾಯದಲ್ಲಿ ಓದಬಹುದು.

  ಅವರು ದೇವರ ಆಜ್ಞೆಗೆ ಅವಿಧೇಯರಾಗುವುದರಿಂದ ದೇವರ ಹಾಗೆಯೆ ಸರ್ವಶಕ್ತಿಯುಳ್ಳವರು ಹಾಗು ಸ್ವತಂತ್ರರಾಗುತ್ತೇವೆಂದು ಭಾವಿಸಿದರು. ಆದರೆ ಅವರು ಸ್ವತಂತ್ರರಾದರೋ? ಇಲ್ಲ! ಅವರು ಸೈತಾನನಿಗೆ ದಾಸರಾಗಿ ಹೋದರು. ನಾವು ಕೇವಲ ದೇವರ ಆಜ್ಞೆಗೆ ವಿಧೇಯರಾಗುವುದರಿಂದಲೇ ನಿಜವಾಗಿಯು ಸ್ವತಂತ್ರರಾಗುತ್ತೇವೆ. ಇಲ್ಲೆ ಸೈತಾನನು ಅನೇಕರನ್ನು ಮೋಸಗೊಳಿಸುತ್ತಾನೆ. ಅವನು ಹೀಗೆ ಹೇಳುತ್ತಾನೆ: "ನೀವು ನಿಜವಾಗಿಯು ಜೀವನದಲ್ಲಿ ಸಂತೋಷವಾಗಿರಬೇಕೆಂದರೆ, ದೇವರ ಅಜ್ಞೆಗಳನ್ನು ತಿರಸ್ಕರಿಸಿರಿ".

  ನಾವು ಈಗ ಹೇಗೆ ಮಾನವ ಕುಲದಲ್ಲಿ ಪಾಪವು ಬಂದಿತು ಎಂದು ನೋಡಿದ್ದೇವೆ.

  ಅವರು ಏದೆನ್ ತೋಟದಲ್ಲಿ ಆ ದಿನ ಒಂದು ಮುಖ್ಯವಾದ ತೀರ್ಮಾನವನ್ನು ತೆಗೆದುಕೊಂಡರು. ಇದು ಅವರ ಜೀವಮಾನದವರೆಗೂ ಅವರ ಮಕ್ಕಳ ಮೇಲೆಯೂ ಪರಿಣಾಮವನ್ನು ಭೀರಿತು. ನಾವು ಜೀವಿತದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು, ಪ್ರತಿಫಲವನ್ನು ನೀಡುತ್ತದೆ. ನಾವೆಲ್ಲರೂ ಏನನ್ನು ಬಿತ್ತುತ್ತೇವೂ ಅದನ್ನೇ ನಾವು ಕೊಯ್ಯಬೇಕು. ಅನೇಕ ಸಮಯದಲ್ಲಿ ನಾವು ಬಿತ್ತಿದ ಕಹಿಯಾದ ಪ್ರತಿಫಲವನ್ನು ನಮ್ಮ ಮಕ್ಕಳು ಕೊಯ್ಯಬೇಕು. ಆದಾಮನ ವಿಷಯದಲ್ಲಿ, ಅವನು ಮತ್ತು ಅವನ ಹೆಂಡತಿಯು ದೇವರ ಸನ್ನಿಧಿಯಿಂದ ತಮ್ಮ ಮುಂದಿನ ಜೀವಮಾನವೆಲ್ಲಾ ದೊಬ್ಬಲ್ಪಟ್ಟರು.

  ನಾವು ಈ ದಿನದಲ್ಲಿ ಮಾಡುವಂತಹ ಚಿಕ್ಕ ಆರಿಸಿಕೊಳ್ಳುವಿಕೆಯನ್ನು ಪ್ರಾಮುಖ್ಯವಿಲ್ಲವೆಂದು ಇಲ್ಲವೆ ನಾವು ಅದರ ಫಲವನ್ನು ಎಂದಿಗೂ ಕೊಯ್ಯವುದಿಲ್ಲವೆಂದು ನೆನೆಸಬಾರದು. ಅನೇಕ ಸಾರೆ ದೇವರು ನಮ್ಮನ್ನು ಅನೇಕ ಜನರಿಂದ ಹಾಗು ಪರಿಸ್ಥಿತಿಯಿಂದ ಪರೀಕ್ಷೆಗೆ ಇಲ್ಲವೆ ಶೋಧನೆಗೆ ಗುರಿಪಡಿಸುತ್ತಾನೆ. ಇದರಿಂದ ದೇವರ ಹೊರತು ನಮಗೆ ಇನ್ನೇನು ಬೇಕಾಗಿಲ್ಲವೆಂದು ನಾವು ಆತನಿಗೆ ನಿರೂಪಿಸುತ್ತೇವೆ. ನಾವು ಪ್ರತಿಯೊಂದು ಶೋಧನೆಯನ್ನು ಎದುರಿಸುವ ಉದ್ದೇಶವೇನೆಂದರೆ, ನಾವು ಸೃಷ್ಟಿಕರ್ತನಿಗೆ ಬೆಲೆಯನ್ನು ಕೊಡುತ್ತೇವೆಯೋ ಅಥವಾ ಸೃಷ್ಟಿಸಲ್ಪಟ್ಟವುಗಳಿಗೆ ಬೆಲೆ ಕೊಡುತ್ತೇವೋ ಎಂಬುದನ್ನು ಪರೀಕ್ಷಿಸಲು.

  ದೇವರಿಗಿಂತ, ಸೃಷ್ಟಿಸಲ್ಪಟ್ಟವುಗಳಿಗೆ ಹಾಗೂ ನಮ್ಮ ಸ್ವಾರ್ಥಕ್ಕೆ ಹೆಚ್ಚು ಬೆಲೆಯನ್ನು ಕೊಡುವುದು, ಪಾಪದ ಒಂದು ಸಾರವಾಗಿದೆ. ಇದು ನಮ್ಮ ದಾರಿಯನ್ನು ದೇವರ ದಾರಿಗೆ ಬದಲಾಗಿ ಆರಿಸಿಕೊಳ್ಳುವುದಾಗಿದೆ. ದೇವರನ್ನು ಮೆಚ್ಚಿಸುವದಕ್ಕಿಂತ ನಮ್ಮನ್ನು ನಾವೇ ಮೆಚ್ಚಿಸಿಕೊಳ್ಳುವುದೂ ಆಗಿದೆ.

  ಪಾಪವು ಬರೀ ವ್ಯಭಿಚಾರ ಅಥವಾ ಕೊಲೆ ಅಥವಾ ಕಳ್ಳತನವಷ್ಟೆ ಅಲ್ಲ. ನಾವು ಅಪೇಕ್ಷಿಸುವ ಹಾಗೆಯೆ ಆಗಬೇಕೆನ್ನುವುದು ಆಗಿರುತ್ತದೆ! ನಾವು ಪಾಪದ ಆರಂಭವನ್ನು ಒಂದು ಚಿಕ್ಕ ಮಗುವಿನ ಹಠಮಾರಿತನದಲ್ಲೇ ನೋಡಬಹುದು.

  ಪಾಪವು ಒಂದು ಚಿಕ್ಕ ಮಗುವಿನ ಹೃದಯದಲ್ಲಿಯೇ ಅದರ ಜನ್ಮದಿಂದಲೇ ವಾಸಿಸುತ್ತದೆ. ಅವನು ಬೆಳೆದುಬಂದ ಹಾಗೆಲ್ಲ ತನ್ನ ದಾರಿಯಲ್ಲೇ ಹೋಗಲು ಇಷ್ಟಪಡುತ್ತಾನೆ. ತನಗೆ ಬೇಕಾಗಿರುವದನ್ನು ಅವನು ಇತರರಿಂದ ಕಿತ್ತುಕೊಳ್ಳುತ್ತಾನೆ ಮತ್ತು ಜಗಳಮಾಡುತ್ತಾನೆ.

  ನಾವು ಬೆಳೆಯುತ್ತಾ ಬಂದ ಹಾಗೆ, ಮಕ್ಕಳಾಗಿದ್ದಾಗ ಏನಾಗಿದ್ದೆವೋ ಅದೇ ಆಗಿರುತ್ತೇವೆ. ಏನೂ ಬದಲಾವಣೆಯಿರುವುದಿಲ್ಲ. ನಾವು ಜಾಣರಾಗುತ್ತೇವೆ ಮತ್ತು ನಮ್ಮ ರೀತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಷ್ಟೇ. ಬೆಳೆದವರು ತಮ್ಮ ಸ್ವಾರ್ಥತೆಯನ್ನು, ತಮ್ಮ ದುರಾಸೆಯನ್ನು ಮತ್ತು ವ್ಯಾಮೋಹವನ್ನು ಹೊರಗಿನ ತೋರಿಕೆಯಿಂದ ಅಥವಾ ಧಾರ್ಮಿಕತೆಯಿಂದ ಮುಚ್ಚುವವರಾಗಿರುತ್ತಾರೆ.

  ಪಾಪವು ನಮ್ಮ ನರನಾಡಿಗಳಲೆಲ್ಲಾ ಹೊಕ್ಕಿದೆ. ಅದನ್ನು ನಾವು ಬರ‍ೇ ಧಾರ್ಮಿಕ ಕಾರ್ಯಗಳಾದ ಪ್ರಾರ್ಥನೆ ಮತ್ತು ಉಪವಾಸ ಅಥವಾ ತೀರ್ಥಯಾತ್ರೆಗಳಿಂದಾಗಲಿ ಇಲ್ಲವೆ ಶಮೆದಮೆಯಿಂದಾಗಲಿ ಹೋಗಲಾಡಿಸಲಾರೆವು. ದೇವರೊಬ್ಬನೆ ನಮ್ಮನ್ನು ರಕ್ಷಿಸಲು ಸಾಧ್ಯವು.

  ಎಲ್ಲಿಯವರೆಗೆ ನಾವು ಪಾಪವು ಕೆಟ್ಟದ್ದು ಎಂದು ಅರಿತುಕೊಳ್ಳುತ್ತೇವೋ, ಅಲ್ಲಿವರೆಗೆ ದೇವರು ಕಾಯುವನು. ಯೇಸು ಒಂದು ಸಾರೆ, ತಾನು ’ನೀತಿವಂತರನ್ನು’) ಕರೆಯುವದಕ್ಕೆ ಬಾರದೇ ಪಾಪಿಗಳನ್ನು ಕರೆಯುವುದಕ್ಕೆ ಬಂದಿರುವುದಾಗಿ ಹೇಳಿದನು. ಇದರ ಅರ್ಥ ಲೋಕದಲ್ಲಿರುವ ಕೆಲವರು ನೀತಿವಂತರು ಮತ್ತು ಇನ್ನು ಕೆಲವರು ಪಾಪಿಗಳು ಎಂಬುದಾಗಿ ಅಲ್ಲ. ಆತನು ಸ್ವನೀತಿವಂತರು, ಧಾರ್ಮಿಕ ಜನರಾದ ತಾವು ಶುದ್ಧರು ಎಂದು ನೆನೆಸುವವರಿಗೆ ಚುಚ್ಚು ಮಾತನಾಡಿದನು. ಯೇಸುವಿನ ಮಾತಿನ ಅರ್ಥ, ಯಾರು ತಮ್ಮನ್ನು ’ನೀತಿವಂತರೆಂದು’ ಭಾವಿಸಿದರೋ ಅವರನ್ನು ರಕ್ಷಿಸಲು ಸಾಧ್ಯವಿಲ್ಲವೆಂದೂ ಯಾರು ತಾವು ಖಾಯಿಲೆಯನ್ನು ಹೊಂದಿದ್ದೇವೆ ಎಂದು ಎಣಿಸುತ್ತಾರೊ ಅವರೇ ವೈದ್ಯನ ಬಳಿ ಹೋಗುತ್ತಾರೆ ಎಂಬುದೇ. ಹಾಗೆಯೆ ನಾವು ಮೊದಲು ಪಾಪಿಗಳು ಎಂದು ಎಣಿಸಿಕೊಳ್ಳವುದೇ ನಮ್ಮ ಪ್ರಥಮ ಅಗತ್ಯತೆ.

  ನಮ್ಮ ಮತವು ಏನೇ ಆಗಿರಲಿ, ನಾವೆಲ್ಲರೂ ಪಾಪಿಗಳೇ. ನಾವು ದೇವರ ಆಜ್ಞೆಗೆ ವಿರುದ್ಧವಾಗಿ ನಮ್ಮ ಆಲೋಚನೆಯಲ್ಲಿ, ಮಾತಿನಲ್ಲಿ, ಕೃತ್ಯದಲ್ಲಿ, ವರ್ತನೆಯಲ್ಲಿ ಮತ್ತು ಉದ್ದೇಶದಲ್ಲಿ ಪಾಪ ಮಾಡಿದ್ದೇವೆ. ನಾವು ದೇವರ ಪರಿಶುದ್ದವಾದ ಮಟ್ಟಕ್ಕಿಂತ ಕೆಳಗೆ ಇಳಿದಿದ್ದೇವೆ.

  ಈ ದಿನದಲ್ಲಿ ವ್ಯಾಪಕವಾಗಿ ಜಗತ್ತಿನಲ್ಲೆಲ್ಲಾ ಹರಡುತ್ತಿರುವ, ಲೈಂಗಿಕತೆಯಿಂತ ಹಬ್ಬುವ ಭಯಂಕರ ರೋಗವಾದ ಏಡ್ಸ್ ಕುರಿತಾಗಿ ನಿಮ್ಮ ಪ್ರತಿಕ್ರಿಯೆ ಏನು? ಈ ಏಡ್ಸ್ ರೋಗವು ಎಷ್ಟು ಸೋಂಕಿನ ರೋಗವೆಂದರೆ, ಜನರು ಈ ಖಾಯಿಲೆಯನ್ನು ಯಾರು ಹೊಂದಿರುತ್ತಾರೊ ಅವರ ಹತ್ತಿರ ಹೋಗುವುದಕ್ಕೂ ಹೆದರುತ್ತಾರೆ. ಪಾಪವು ಇದಕ್ಕಿಂತಲು ಭಯಂಕರವಾದದ್ದು. ಆದರೆ ವ್ಯತ್ಯಾಸವೇನೆಂದರೆ ಪಾಪವು ಮಾಡುವಂತ ನಷ್ಟವು ನಮ್ಮ ಆತ್ಮಕ್ಕೆ ಆಗಿರುತ್ತದೆ ಮತ್ತು ಅದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಪಾಪದ ಫಲವು ಎಡ್ಸ್ ರೋಗಕ್ಕಿಂತಲೂ ಭಯಂಕರವಾದದ್ದು. ಇದು ನಮ್ಮ ಜೀವನವನ್ನು ಹಾಳುಮಾಡಿ ನಮ್ಮನ್ನು ಈ ಲೋಕದಲ್ಲಿ ದುಃಖಿತರನ್ನಾಗಿಸುತ್ತದೆ. ನಾವು ಅದರಿಂದ ರಕ್ಷಣೆಯನ್ನು ಹೊಂದದಿದ್ದರೆ. ಕೊನೆಯಲ್ಲಿ ಅದು ನಮ್ಮನ್ನು ನಿತ್ಯತ್ವದಲ್ಲಿ ನಾಶಮಾಡುತ್ತದೆ.

  ಅಧ್ಯಾಯ 3
  ನಮ್ಮ ಮನಸ್ಸಾಕ್ಷಿಯ ಬಗ್ಗೆ ನಿಜ ಸತ್ಯ

  ನಾವೆಲ್ಲರೂ ಮನಸ್ಸಾಕ್ಷಿಯಿಂದ ಕೂಡಿದವರಾಗಿ ಸೃಷ್ಟಿಸಲ್ಪಟ್ಟಿದ್ದೇವೆ, ಅದು ನಮ್ಮನ್ನು ನೈತಿಕಜೀವಿಗಳು ಎಂಬುದಾಗಿ ಯಾವಾಗಲೂ ನೆನಪಿಸುತ್ತದೆ. ಆ ಮನಸ್ಸಾಕ್ಷಿಯು ನಮ್ಮ ಕೃತ್ಯಗಳಿಗೆ ನಾವೇ ಜವಾಬ್ದಾರರು ಎಂದು ನಮ್ಮ ಜೊತೆ ಮಾತನಾಡುವಂತಹ ದೇವರ ಧ್ವನಿಯಾಗಿದೆ. ಒಂದು ದಿನ ನಮ್ಮ ಜೀವಿತವನ್ನು ಯಾವ ರೀತಿಯಾಗಿ ಜೀವಿಸಿದೆವು ಎಂದು ನಾವು ದೇವರಿಗೆ ಲೆಕ್ಕ ಕೊಡಬೇಕಾಗುತ್ತದೆ.

  ನಾವು ಮನಸ್ಸಾಕ್ಷಿಯನ್ನು ಹೊಂದದಿರುವ ಪ್ರಾಣಿಗಳಹಾಗಿಲ್ಲ. ಅವುಗಳು ನೈತಿಕಜೀವಿಗಳು ಆಗಿಲ್ಲದಿರುವದರಿಂದ ಅವು ದೇವರಿಗೆ ಯಾವ ಲೆಕ್ಕವನ್ನೂಕೊಡಬೇಕಾಗಿಲ್ಲ. ಈ ಜೀವಿತವೇ ಅವುಗಳಿಗೆ ಎಲ್ಲವು. ಅವು ಸತ್ತಾಗ, ಅದೇ ಅದರ ಅಂತ್ಯ. ಆದರೆ ನಮಗೆ ಹಾಗಲ್ಲ. ಮನುಷ್ಯನು ದೇವರ ಸಾರೂಪ್ಯದಲ್ಲೆ ಸೃಷ್ಟಿಸಲ್ಪಟ್ಟಿರುವದರಿಂದ ಅವನು ನಿತ್ಯಜೀವಿಯಾಗಿದ್ದಾನೆ.

  ಆದರೆ ನಮಗೆ ನ್ಯಾಯತೀರ್ಪಿನ ಕಡೆಯ ದಿನವು ಒಂದು ಉಂಟು. ಆಗ ನಾವು ಏನೆಲ್ಲಾ ನಮ್ಮ ಜೀವಿತ ಕಾಲದಲ್ಲಿ ಮಾತನಾಡಿದೆವೊ, ಮಾಡಿದೆವೊ, ಮತ್ತು ಆಲೋಚಿಸಿದೆವೊ ಅವೆಲ್ಲವೂ ನಮ್ಮ ಮನಸ್ಸಿಗೆ ಪುನಃ ತರಲ್ಪಡುವುದು.

  ನಮ್ಮ ಪೂರ್ಣಜೀವಿತವನ್ನು ದೇವರು ಬರಮಾಡುವನು. ಮತ್ತು ಆತನು ಸತ್ಯವೇದದಲ್ಲಿ ಕೊಟ್ಟಿರುವ ತನ್ನ ಪರಿಶುದ್ದ ಆಜ್ಞೆಗನುಸಾರವಾಗಿ ತೀರ್ಪುನೀಡುವನು. ಆಗ ನಾವು ದೇವರಿಗೆ ನಮ್ಮ ಪ್ರತಿಯೊಂದು ಮಾತಿಗೂ, ಕೃತ್ಯಕ್ಕೂ ಮತ್ತು ಆಲೋಚನೆಗೂ ಉತ್ತರಕೊಡಬೇಕಾಗಿರುವುದು.

  ಸತ್ಯವೇದವು ಹೇಳುತ್ತದೆ, ’ಮನುಷ್ಯನು ಸಾಯುವುದು ಒಂದೇ ಸಾರೆ, ಅನಂತರ ನ್ಯಾಯತೀರ್ಪಾಗುವುದು’ (ಇಬ್ರಿಯರು ಅಧ್ಯಾಯ 9, ವಚನ 27).

  ಅನೇಕ ಜನರು ಈ ಲೋಕದಲ್ಲಿ ತಮ್ಮ ಅಪರಾಧದಿಂದ ಬರುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಅವರಿಗೆ ದೇವರ ನ್ಯಾಯತೀರ್ಪಿನ ಆಸನದ ಮುಂದೆ ನಿಂತಾಗ ತಮ್ಮ ಶಿಕ್ಷೆಯು ದೊರಕುತ್ತದೆ. ಅದೇ ರೀತಿಯಾಗಿ, ಅನೇಕ ಜನರು ಇತರರಿಗೆ ಮಾಡಿದ ಉಪಕಾರಕ್ಕೆ ಬದಲಾಗಿ ಯಾವ ಪ್ರತಿಫಲವನ್ನು ಮತ್ತು ಯಾವ ಹೊಗಳಿಕೆಯನ್ನು ಹೊಂದದೆ ಇರಬಹುದು, ಕ್ರಿಸ್ತನು ಈ ಲೋಕಕ್ಕೆ ತಿರುಗಿ ಬರುವಾಗ ಅವರು ಪ್ರತಿಫಲವನ್ನು ಹೊಂದುತ್ತಾರೆ.

  ಒಂದು ದಿನ ದೇವರಿಗೆ ನಾವು ಏನು ಮಾಡಿದರೂ ಸಹ ಉತ್ತರವನ್ನು ಕೊಡಬೇಕಾಗಿರುವದರಿಂದ ನಾವು ಮನಸ್ಸಾಕ್ಷಿಯ ಮಾತನ್ನು ಕೇಳುವುದು ಬಹುಮುಖ್ಯ.

  ಮನಸ್ಸಾಕ್ಷಿಯು ದೇವರು ಕೊಟ್ಟಿದ್ದರಲ್ಲಿಯೆ ಅತಿ ಮಹತ್ತರವಾದದ್ದು. ಅದು ನಮ್ಮ ದೇಹಕ್ಕೆ ಕೊಡಲ್ಪಟ್ಟಿರುವ ನೋವು ಎಂಬ ಉಡುಗೊರೆಯ ಹಾಗೆ. ಅನೇಕರು ಈ ನೋವನ್ನು ಪೀಡೆ ಎಂಬುದಾಗಿ ನೆನೆಸುತ್ತಾರೆ. ಆದರೆ ನಾವು ಈ ನೋವು ನಮ್ಮ ಜೀವಿತಕ್ಕೆ ಪ್ರಚಂಡಕರವಾದ ಆಶೀರ್ವಾದವೆಂದು ನೆನೆಸುವುದಿಲ್ಲ. ನೋವಿನ ಮೂಲಕವಾಗಿಯೆ ನಮ್ಮ ದೇಹದಲ್ಲಿ ಎಲ್ಲಿಯೋ ತೊಂದರೆ ಇದೆಯೆಂದು ಎಚ್ಚರಿಕೆಯಾಗು. ಇದು ದೇಹದ ಪ್ರಥಮ ಸನ್ನೆ, ಯಾವುದೋ ಖಾಯಿಲೆಯ ಬಗ್ಗೆ ಮುನ್ನೆಚ್ಚರ. ನೋವು ಇಲ್ಲದಿರುವುದಾಗಿದ್ದರೆ ಖಾಯಿಲೆಯು ನಮಗೆ ಇದೆ ಎಂದು ಗೊತ್ತಾಗುತ್ತಿರಲಿಲ್ಲ. ಆ ಖಾಯಿಲೆಯಿಂದಲೇ ನಾವು ಸಾಯಬಹುದು. ಈ ನೋವೇ ನಮ್ಮನ್ನು ಅಕಾಲಿಕ ಮರಣದಿಂದ ರಕ್ಷಿಸುತ್ತದೆ.

  ಕುಷ್ಟರೋಗಿಗಳಿಗೆ ಇರುವಂತಹ ಒಂದು ತೊಂದರೆಯು ನೋವಿಲ್ಲದಿರುವಿಕೆ. ಕುಷ್ಟರೋಗವು ಮೊದಲು ನರಗಳನ್ನು ಸಾಯಿಸಿ ನಂತರ ನೋವಿನ ಇಲ್ಲದಿರುವಿಕೆಯನ್ನು ಉಂಟು ಮಾಡುತ್ತದೆ. ಒಬ್ಬ ಕುಷ್ಟರೋಗಿಗ ತನ್ನ ಕಾಲಿನಲ್ಲಿ ಒಂದು ಮೊಳೆಯು ಹಾದು ಹೋದರೂ ಅವನಿಗೆ ದಿನಗಳವರೆಗೆ ಗೊತ್ತಾಗುವುದಿಲ್ಲ. ಆದರೆ ಅವನ ಪಾದಕ್ಕೆ ರೋಗವು ಅಂಟಕೊಳ್ಳುತ್ತದೆ, ಆದರೂ ಸಹ ಅವನಿಗೆ ಗೊತ್ತಾಗುವುದಿಲ್ಲ. ಕಡೆಯಲ್ಲಿ ಅವನ ಪಾದವು ಯಾವ ಸ್ಥಿತಿಗೆ ಬರುವುದೆಂದರೆ ಅದನ್ನು ಕತ್ತರಿಸಿ ಬಿಸಾಡಬೇಕಾಗುವುದು, ಇವೆಲ್ಲವೂ ಅವನಿಗೆ ’ನೋವಿನ ಆಶೀರ್ವಾದ’ ಇಲ್ಲದಿರುವ ಕಾರಣ.

  ಆಜ್ಞೆಯನ್ನು ಮೀರಿದಾಗ, ಮತ್ತು ನಾವು ಪಾಪಮಾಡಲಿಕ್ಕೆ ಹೋಗಲಿರುವಾಗ ಅಥವಾ ಪಾಪವನ್ನು ಮಾಡಿದಾಗ ನಮ್ಮನ್ನು ಎಚ್ಚರಿಸುತ್ತದೆ. ನಾವು ಅದರ ಎಚ್ಚರಿಕೆಯನ್ನು ತಿರಸ್ಕರಿಸಿ ಮತ್ತು ಅದಕ್ಕೆ ವಿರುದ್ದವಾಗಿ ಹೋಗುವಾಗ, ನಾವು ಹಂತಹಂತವಾಗಿ ನಮ್ಮಲ್ಲಿ ಇರುವಂತಹ ಆ ಪಾಪದ ಪ್ರಜ್ಞೆಯನ್ನು ಕೊಲ್ಲುವವರಾಗಿರುತ್ತೆವೆ. ಒಂದು ದಿನ ಬರುವುದು ಆ ದಿನದಲ್ಲಿ ನಮಗೆ ಪಾಪದ ಬಗ್ಗೆ ಸ್ವಲ್ಪವೂ ಪ್ರಜ್ಞೆ ಇರುವುದಿಲ್ಲ. ಆಗ ನಾವು ಆತ್ಮಿಕ ಕುಷ್ಟರೋಗಿಗಳಾಗಿ ಹೋಗುತ್ತೇವೆ, ಸತ್ತ ಮನಸಾಕ್ಷಿಯನ್ನು ಹೊಂದಿದವರಾಗಿ ನಾವು ಪ್ರಾಣಿಗಳ ಮಟ್ಟಕ್ಕೆ ಇಳಿದು ಹೋಗಿ, ಮನಸ್ಸಾಕ್ಷಿ ಇಲ್ಲದವರಾಗಿರುತ್ತೇವೆ. ಇದೇ ಅನೇಕ ಜನರು ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸಲು ಕಾರಣ. ಆ ರೀತಿಯ ಜೀವಿತದ ಕೊನೆಯ ಫಲಿತಾಂಶವು ದೇವರಿಂದ ನಿತ್ಯಕಾಲಕ್ಕೂ ತೀರ್ಪಾಗುವುದೇ.

  ನಾವೆಲ್ಲರೂ ಪಾಪಿಗಳು ಎಂಬುದಾಗಿ ನಮ್ಮೆಲ್ಲರಿಗೂ ಗೊತ್ತು. ಏಕೆಂದರೆ ನಮ್ಮ ಮನಸ್ಸಾಕ್ಷಿಯು ನಮಗೆ ಹೀಗೆ ಹೇಳುತ್ತದೆ. ನಾವು ಎಂದಿಗೂ ಈ ಪ್ರಜ್ಞೆಯನ್ನು ನಮ್ಮಿಂದ ತೆಗೆದುಹಾಕಲು ಪ್ರಯತ್ನಿಸಬಾರದು, ಏಕೆಂದರೆ ಈ ಪಾಪಪ್ರಜ್ಞೆಯು ’ನೋವಿನ ಆಶಿರ್ವಾದದ’ ಹಾಗಿರುವುದು. ಅದು ನಾವು ಆತ್ಮಿಕವಾಗಿ ಖಾಯಿಲೆಯನ್ನು ಹೊಂದಿದ್ದೇವೆ ಮತ್ತು ನಮಗೆ ಚಿಕಿತ್ಸೆಯಾಗಬೇಕೆಂದು ತಿಳಿಸುತ್ತದೆ. ಮನಸ್ಸಾಕ್ಷಿಯು ದೇವರು ನಮಗೆ ಕೊಟ್ಟಿರುವ ಅತ್ಯಂತ ಮಹತ್ತರವಾದ ವರವಾಗಿದೆ.

  ಯೇಸು ಮನಸ್ಸಾಕ್ಷಿಯನ್ನು ಕಣ್ಣಿಗೆ ಹೋಲಿಸಿದ್ದಾನೆ (ಲೂಕ ಅಧ್ಯಾಯ 11 ವಚನ 34 36). ನಮ್ಮ ಕಣ್ಣುಗಳು ನಮ್ಮ ದೇಹದ ಶುಚಿಯಾದ ಅಂಗಗಳು. ಪ್ರತಿಯೊಂದು ಬಾರಿ ನಮ್ಮ ಕಣ್ಣಿನ ರೆಪ್ಪೆಗಳು ಮಿಟುಕಿಸುವಾಗಿ ನಮ್ಮ ಕಣ್ಣುಗಳು (ದಿನಕ್ಕೆ ಸಾವಿರಾರು ಬಾರಿ ನಡೆಯುತ್ತದೆ, ನಮಗೆ ತಿಳಿಯದಂತೆ) ಎಲ್ಲಾ ರೀತಿಯ ಧೂಳಿನಿಂದ ಶುಚಿಯಾಗುತ್ತದೆ. ನಮ್ಮ ಕಣ್ಣಿನಲ್ಲಿ ಕಣದಷ್ಟು ಧೂಳಿದ್ದರೂ ಸಹ ಅದು ನಮ್ಮ ಕಣ್ಣಿಗೆ ತೊಂದರೆಯನ್ನು ಉಂಟು ಮಾಡಬಹುದು ಮತ್ತು ನಮ್ಮ ಕಣ್ಣನ್ನು ನಾವು ಶುಚಿಮಾಡಿಕೊಳ್ಳುವವರೆಗೂ, ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವಂತೆ ಮಾಡಬಹುದು. ಇದೇ ರೀತಿಯಾಗಿ ನಾವು ನಮ್ಮ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಬೇಕು, ಸದಾ ಶುಚಿಯಾಗಿ ಇಟ್ಟುಕೊಳ್ಳಬೇಕು.

  ದೇವರಿಂದ ಮಾತ್ರವೇ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ಶುದ್ಧವಾಗಬಹುದು. ನಮ್ಮ ಮನಸ್ಸಾಕ್ಷಿಯು ಪಾಪಪ್ರಜ್ಞೆಯಿಂದ ಶುದ್ದವಾಗಲು ಇರುವುದು ಇದೊಂದೇ ಮಾರ್ಗ.

  ಆದರೆ ಪಾಪ ಕ್ಷಮಾಪಣೆಯ ಬೆಲೆ ಕಡಿಮೆಯೇನಲ್ಲಾ.

  ಅಧ್ಯಾಯ 4
  ಕ್ಷಮಾಪಣೆಯ ಕುರಿತಾಗಿ ನಿಜ ಸತ್ಯ

  ದೇವರು ನಮ್ಮ ಪಾಪಗಳನ್ನು ಹೇಗೆ ಕ್ಷಮಿಸಬಹುದು?

  ದೇವರು ನೀತಿವಂತನೂ ನ್ಯಾಯವಂತನೂ ಆಗಿರುವುದರಿಂದ, ಒಬ್ಬ ವ್ಯಕ್ತಿಯ ಪಾಪಗಳನ್ನು ಅಲಕ್ಪ್ಯಮಾಡಿ ಅವನನ್ನು ಕ್ಷಮಿಸಲು ಸಾಧ್ಯವಿಲ್ಲ. ಅದು ಅನ್ಯಾಯವಾಗಿರುತ್ತದೆ. ದೇವರು ಪರಿಶುದ್ಧನು ಮತ್ತು ನೀತಿವಂತನು. ಆದ್ದರಿಂದ ಆತನು ಪಾಪವನ್ನು ಶಿಕ್ಷಿಸಬೇಕು. ಆದರೆ ಆತನು ಪ್ರೀತಿಸ್ವರೂಪನಾಗಿರುವದರಿಂದ ನಮ್ಮ ಪಾಪಗಳು ಕ್ಷಮಿಸಲ್ಪಡುವುದ್ದಕ್ಕಾಗಿ ನಮಗಾಗಿ ಒಂದು ದಾರಿಯನ್ನು ಉಂಟು ಮಾಡಿದ್ದಾನೆ.

  ಎಲ್ಲಾ ಧರ್ಮಗಳು ನಾವು ಒಳ್ಳೆಯವರು, ಕರುಣಿಯುಳ್ಳವರು ಮತ್ತು ಸತ್ಯವಂತರು ಆಗಿರಬೇಕೆಂದು ತಿಳಿಸುತ್ತವೆ. ಆದರೆ ಇವೆಲ್ಲವೂ ನಾವು ಪಾಪದ ಕ್ಷಮಾಪಣಿಯನ್ನು ಹೊಂದಿದ ನಂತರ ಹೇಗೆ ಜೀವಿಸಬೇಕೆಂದೇ ತಿಳಿಸುತ್ತದೆ. ಒಳ್ಳೆಯತನವು, ದಯೆಯು ಮತ್ತು ಸತ್ಯತೆಯು ಕಟ್ಟಡದ ಹೊರರಚನೆಯಾಗಿದೆ. ಆದರೆ ಒಂದು ಕಟ್ಟಡದಲ್ಲಿ ಬಹು ಪ್ರಾಮುಖ್ಯವಾದ ಭಾಗವೆಂದರೆ ಅದರ ಪಾಯವು.

  ದೇವರು ಈ ಲೋಕವನ್ನು ಸೃಷ್ಟಿಸಿದಾಗ ಮಾಡಿದಕ್ಕಿಂತ ಹೆಚ್ಚಿನ ಕಷ್ಟ ಹಾಗೂ ನೋವಿನ ಕಾರ್ಯವನ್ನು ಪಾಪಕ್ಷಮಾಪಣೆಗಾಗಿ ಮಾಡಬೇಕಾಯಿತು.

  ಈ ಲೋಕವನ್ನು ಸೃಷ್ಠಿಸುವಾಗ ದೇವರು ಕೇವಲ ಒಂದು ಮಾತನ್ನು ಹೇಳಿದರು ಕೂಡಲೆ ಲೋಕವು ಸೃಷ್ಟಿಯಾಯಿತು.

  ಆದರೆ, ಒಂದು ವಾಕ್ಯವನ್ನು ಹೇಳುವುದರ ಮೂಲಕ ಪಾಪಕ್ಷಮಾಪಣೆ ಮಾಡಲು ಸಾಧ್ಯವಿರಲಿಲ್ಲ. ಮಾನವನ ಪಾಪ ಕ್ಷಮಾಪಣೆಗೆ ಒಂದೇ ಒಂದು ಮಾರ್ಗವಿತ್ತು.

  ಅಂದರೆ, ದೇವರು ನಮ್ಮಂತೆ ಮಾನವನಾಗ ಬೇಕಾಯಿತು. ಆತನು ನಾವು ಮಾನವಾರಾಗಿ ಎದುರಿಸುವ ಕಷ್ಟಗಳಿಗೆ ಮತ್ತು ಶೋಧನೆಗಳಿಗೆ ಒಳಗಾಗಬೇಕಾಯಿತು. ಆತನು ತನ್ನ ಮೇಲೆಯೇ ನಮ್ಮೆಲ್ಲರ ಪಾಪದ ಶಿಕ್ಷೆಯನ್ನು ತೆಗೆದು ಕೊಂಡಿದ್ದರಿಂದ, ಆತನು ನಮ್ಮ ಬದಲು ಯಜ್ಞವಾಗಿ ಪ್ರಾಣ ಕೊಡಬೇಕಾಯಿತು.

  ಪಾಪದ ದಂಡನೆಯು ಬಾಧೆಯಲ್ಲ ಅಥವಾ ಖಾಯಿಲೆಯಲ್ಲ ಅಥವಾ ಬಡತನವಲ್ಲ ಅಥವಾ ಈ ಲೋಕದಲ್ಲಿ ಮತ್ತೊಂದು ಬಾರಿ ಕೆಳಗಿನ ಮಟ್ಟದಲ್ಲಿ ಹುಟ್ಟಿ ಬರುವದಲ್ಲ, ಆ ರೀತಿಯಾದ ಯಾವುದೂ ಅಲ್ಲ. ಅದು ನಿತ್ಯವಾದ ಮರಣ. ದೇವರಿಂದ ನಿತ್ಯತ್ವಕ್ಕೆ ಪ್ರತ್ಯೇಕಿಸಲ್ಪಡುವುದು. ಶಾರೀರಿಕ ಮರಣದಲ್ಲಿ ಯಾವ ರೀತಿಯಲ್ಲಿ ಜೀವವು ಶರೀರದಿಂದ ಬೇರೆಯಾಗುತ್ತದೋ, ಅದೇ ರೀತಿಯಾಗಿ ಆತ್ಮಿಕ ಮರಣದಲ್ಲೂ ಸಹ ಜೀವವು ಸಕಲ ಜೀವಕ್ಕೂ ಮೂಲನಾದ ದೇವರಿಂದ ಬೇರೆಯಾಗುವುದು.

  ಭವಿಷ್ಯದಲ್ಲಿ ಮಾಡುವ ಒಳ್ಳೆಯ ಕಾರ್ಯಗಳು ಹಿಂದೆ ಮಾಡಿದ ಕೆಟ್ಟ ಕಾರ್ಯಗಳನ್ನು ನಿವಾರಣೆ ಮಾಡುವುದಿಲ್ಲ. ಪಾಪವು ನಾವು ದೇವರ ಆಜ್ಞೆಗೆ ಹೊಂದಿರುವ ಸಾಲವಾಗಿದೆ. ನಾವು ಈ ದೇಶದ ಕಾನೂನಿನ ಪ್ರಕಾರ, ಕೊಡಬೇಕಾದ ತೆರಿಗೆಯನ್ನು ಕೊಡದೆ ಮೋಸ ಮಾಡಿರುವುದಾದರೆ, ಮುಂದೆ ನಾವು ನಮ್ಮ ತೆರಿಗೆಯನ್ನು ಕೊಡುತ್ತೆವೆಂದು ಪ್ರಮಾಣ ಮಾಡಿದ ಮಾತ್ರಕ್ಕೆ ನಮ್ಮನ್ನು ಹಾಗೆಯೆ ಕ್ಷಮಿಸಲಕ್ಕೆ ಆಗುವುದಿಲ್ಲ. ಇಲ್ಲ. ನಾವು ಒಂದು ವೇಳೆ ನಮ್ಮ ತೆರಿಗೆಯನ್ನು ಮುಂದೆ ಕಟ್ಟುವುದಾದರೂ, ನಾವು ನಮ್ಮ ಹಳೆಯ ಬಾಕಿಗಳನ್ನೆಲ್ಲಾ ಕಟ್ಟಬೇಕಾಗಿರುವುದು. ಪಾಪದ ವಿಷಯದಲ್ಲೂ ಇದು ಹೀಗೆಯೆ. ನಾವು ಹೇಗಾದರೂ ಎಷ್ಟೇ ಒಳ್ಳೆಯ ಕಾರ್ಯವನ್ನು ಮುಂದೆ ಮಾಡಿದರೂ, ನಾವು ಹಿಂದೆ ಮಾಡಿದ ಪಾಪಕ್ಕೆ ದಂಡವನ್ನು ಕಟ್ಟಲೇಬೇಕು.

  ಅಲ್ಲದೆ, ಸತ್ಯವೇದವು ಹೀಗೆ ಹೇಳುತ್ತದೆ; ’ನಮ್ಮ ಒಳ್ಳೆಯ ಕಾರ್ಯಗಳು ದೇವರ ದೃಷ್ಟಿಯಲ್ಲಿ ಹರಿದ ಚಿಂದಿ ಬಟ್ಟೆಯಂತಿದೆ’ (ಯೆಶಾಯ ಅಧ್ಯಾಯ 64, ವಚನ 6). ದೇವರು ಒಳ್ಳೆಯ ಕಾರ್ಯವನ್ನು ಮೆಚ್ಚುತ್ತಾನೆ. ಆದರೂ ನಮ್ಮ ಒಳ್ಳೆಯ ಕಾರ್ಯಗಳು ಆತನ ಪರಿಶುದ್ದವಾದ ಮಟ್ಟವನ್ನು ಮುಟ್ಟುವುದಿಲ್ಲ. ಏಕೆಂದರೆ ಆತನು ಅನಂತವಾಗಿ ಪರಿಶುದ್ಧನು. ಆದಕಾರಣ ನಾವು ನಿರೀಕ್ಷೆಯಿಲ್ಲದ ಸ್ಥಿತಿಯಲ್ಲಿ ಇದ್ದೇವೆ, ಮತ್ತು ನಮ್ಮ ಒಳ್ಳೆಯ ಕಾರ್ಯಗಳು ಸಾಕಷ್ಟು ಒಳ್ಳೆಯವಲ್ಲ. ನಾವು ದೇವರ ಸನ್ನಿಧಿಯನ್ನು ಸೇರಲು ಸಾಕಷ್ಟು ಯಾವ ಮಾರ್ಗವೂ ಇಲ್ಲ. ನಾವು ನಿರೀಕ್ಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆವೆ.

  ಆದರೆ ದೇವರು ತನ್ನ ಮಹಾಪ್ರೀತಿಯ ಮುಖಾಂತರ ನಮ್ಮ ಪಾಪಗಳು ಕ್ಷಮಿಸಲ್ಪಡುವ ಹಾಗೆ ಒಂದು ಮಾರ್ಗವನ್ನು ಮಾಡಿದ್ದಾನೆ.

  ದೇವರು ಒಬ್ಬ ಸಂಕೀರ್ಣನು. ಆತನನ್ನು ನಮ್ಮ ಮಾನವ ಬುದ್ಧಿ ಶಕ್ತಿಯಿಂದ ಸಂಪೂರ್ಣವಾಗಿ ಅರಿತುಕೊಳ್ಳಲು ಅಸಾಧ್ಯ. ಸತ್ಯವೇದವು ದೇವರು ಒಬ್ಬನೇ ಎಂದು ತಿಳಿಸುತ್ತದೆ, ಆದರೂ ಸಹ ಮೂರು ವ್ಯಕ್ತಿಗಳು ಆ ಏಕತ್ವದಲ್ಲಿ ಇರಲಾಗಿ ನಾವು ಇವರನ್ನು ತಂದೆ, ಮಗ (ಅರ್ಥ ತಂದೆಯ ಗುಣಗಳನ್ನೆ ಉಳ್ಳವನು ಆತನಿಂದ ಹುಟ್ಟಿದವನಲ್ಲವೆಂದು) ಮತ್ತು ಪವಿತ್ರ ಆತ್ಮನೆಂದು ಕರೆಯುತ್ತೇವೆ. ಪ್ರತಿಯೊಬ್ಬರು ಮತ್ತಿತರರಿಗೆ ಸಮಾನರಾಗಿದ್ದರೆ.

  ಮೂರು ಭಿನ್ನ ವ್ಯಕ್ತಿಗಳಾಗಿದ್ದರೂ ಒಬ್ಬನೇ ದೇವರು, ಇದು ನಮ್ಮ ಬುದ್ದಿಶಕ್ತಿಗೆ ಗ್ರಹಿಸಿಕೊಳ್ಳಲು ಅಸಾಧ್ಯವಾದದ್ದು. ನಾವು ಮನುಷ್ಯರು ತಮ್ಮದೇ ದೇಹವಿರುವುದನ್ನು ಕುರಿತು ಯೋಚಿಸಲು ಸಾಧ್ಯ. ಆದರೆ ದೇವರು ಆತ್ಮಸ್ವರೂಪಿ. ನಮ್ಮ ಬುದ್ದಿಶಕ್ತಿಯು ಮಿತಿಯುಳ್ಳದ್ದು. ಅವು ಸಂಕೀರ್ಣವಾದ ಗುಣಗಳನ್ನು ಹೊಂದಿದ ದೇವರನ್ನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲದ್ದು.

  ಯಾವ ರೀತಿಯಲ್ಲಿ ಒಂದು ನಾಯಿಯು ಮನುಷ್ಯನು ಅರ್ಥಮಾಡಿಕೊಂಡ ಹಾಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೊ, ದೇವರ ಕುರಿತಾಗಿ ಕೆಲವು ವಿಷಯಗಳನ್ನು ನಾವು ಸಹ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಸತ್ಯವೇದದಲ್ಲಿ ದೇವರು ಏನಾಗಿ ಪ್ರಕಟಪಡಿಸಿಕೊಂಡಿದ್ದಾನೊ ಅದನ್ನೇ ನಾವು ತಿಳಿದುಕೊಳ್ಳಬಹುದು. ಹೆಚ್ಚೆನನ್ನು ಅಲ್ಲ. ಉದಾ:- ನೀವು ಒಂದು ವೇಳೆ ಒಂದು ಬುದ್ದಿವಂತ ನಾಯಿಗೆ ಕೂಡಿಸುವದನ್ನು ವಿವರಿಸಬಹುದು ಅಂದರೆ 1+1+1+=3 ಆದರ ಮುಂದೆ ಮೂರು ಮೂಳೆಯನ್ನಿಟ್ಟು, ಒಂದೊಂದಾಗಿ ಎಣಿಸುತ್ತಾ ಕಲಿಸಬಹುದು.

  ಆದರೆ ನಾಯಿಗೆ ಗುಣಿಸುವುದನ್ನು ನೀವು ವಿವರಿಸಿ ಅಂದರೆ, 1x1x1=1 ಆಗ ನೀವು ನೋಡುವಿರಿ ಅತಿ ಬುದ್ದಿವಂತವಾದ ನಾಯಿಯು ಅದನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ! ಆದರೆ ಮನುಷ್ಯರಾದ ನಮಗೆ ಮೂರು ’ಒಂದು’ ಗುಣಿಸಿದಾಗ ಒಂದೇ ಆಗಿರುತ್ತದೆ ಎಂದು ಚೆನ್ನಾಗಿ ಬಲ್ಲೆವು.

  ನಾವು ನಾಯಿಗಿಂತ ಯಾವ ರೀತಿಯಲ್ಲಿ ಮೇಲೆ ಇದ್ದೇವೊ, ಅದಕ್ಕಿಂತಲೂ ಹೆಚ್ಚಾಗಿ ದೇವರು ನಮಗಿಂತ ಮೇಲೆ ಇದ್ದಾನೆ. ನಾವು ದೇವರು ಮೂರು ವ್ಯಕ್ತಿಗಳಾಗಿದ್ದರೂ ಒಬ್ಬನೆ ದೇವರಾಗಿದ್ದಾನೆ ಇದನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾದರೆ, ನಾವು ಆಶ್ಚರ್ಯ ಪಡಬೇಕಾಗಿಲ್ಲ. ಒಂದು ನಾಯಿಯು ಮನುಷ್ಯನಾದಾಗಲೇ ಗುಣಿಸುವುದನ್ನು ಅರ್ಥಮಾಡಿಕೊಳ್ಳಬಹುದು. ನಾವು ದೇವರಾದಾಗಲೇ ದೇವರನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ನಾವು ಅರ್ಥಮಾಡಿಕೊಳ್ಳದೆ ಹೋದರೂ, ತನ್ನ ವಾಕ್ಯದಲ್ಲಿ ಹೇಳಿರುವದರಿಂದ ನಮಗೆ ಗೊತ್ತು.

  ಇದೇ ರೀತಿಯಾಗಿ, ಅನೇಕರು ತರ್ಕವನ್ನು ಉಪಯೋಗಿಸಿ ದೇವರು ಎಲ್ಲಾ ಸ್ಥಳದಲ್ಲಿಯೂ ಇರುವುದಾದರೆ ದೇವರು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಮತ್ತು ಗಿಡಗಳಲ್ಲಿ ಮತ್ತು ಎಲ್ಲಾ ಆರಾಧನಾ ಧಾರ್ಮಿಕ ಸ್ಥಳಗಳಲ್ಲಿ ಇರುವುದಾಗಿ ತಿಳಿಸುತ್ತಾರೆ. ಇದು ದೈವೀಕ ಸತ್ಯಗಳನ್ನು ಅರಿಯದೆ ಇರುವ ಚಿಕ್ಕಬುದ್ದಿಯುಳ್ಳವರಿಗೆ ತರ್ಕವಾಗಿ ಕಾಣಬಹುದು. ಆದರೆ ಇದು ಸಂಪೂರ್ಣವಾಗಿ ಸುಳ್ಳು. ದೇವರು ಸರ್ವವ್ಯಾಪಿ ಎಂದು ಹೇಳುವಾಗ ಆತನಿಗೆ ಎಲ್ಲ ಸ್ಥಳದಲ್ಲಿ ನಡೆಯುವಂತಹ ಎಲ್ಲಾ ಘಟನೆಗಳು ತಿಳಿದಿರುತ್ತವೆ. ಆದರೆ ಖಂಡಿತವಾಗಿಯೂ ಆತನು ನರಕದಲ್ಲಿ ಇಲ್ಲ. ಆತನಿಗೆ ನರಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದೆ ನರಕದ ಅರ್ಥ (ಪಾಪಿಗಳ ನಿತ್ಯತ್ವದ ದಂಡನೆಯ ಸ್ಥಳ) ಇದು ’ದೇವರಿಲ್ಲದಿರುವ ಸ್ಥಳ’. ಅದಕ್ಕಾಗಿಯೆ ನರಕದಲ್ಲಿರುವ ಪಾಪಿಗಳು ಬಾಧೆಯನ್ನು ಸಹಿಸಲು ಅಸಾಧ್ಯವಾಗಿರುತ್ತದೆ. ಖಂಡಿತವಾಗಿಯೂ ದೇವರು ಎಲ್ಲರಲ್ಲಿಯೂ ವಾಸಮಾಡುವವನಲ್ಲ.

  ಪಾಪದ ಶಿಕ್ಷೆಯಾದ ನಿತ್ಯತ್ವದ ದಂಡನೆಯಿಂದ ಮಾನವ ಕುಲದ ರಕ್ಷಣೆಗಾಗಿ, ತಂದೆಯಾದ ದೇವರು ತನ್ನ ಒಬ್ಬನೇ ಕುಮಾರನನ್ನು ಈ ಲೋಕದಲ್ಲಿ ಹುಟ್ಟುವುದಕ್ಕೆ ಕಳುಹಿಸಿದನು. ಆತನು ಪವಿತ್ರಾತ್ಮನ ಅಸಾಧಾರಣ ಕಾರ್ಯದಿಂದಾಗಿ, ಕನ್ಯೆಯ ಮೂಲಕ, ಶಿಶುವಾಗಿ 2000 ವರ್ಷಗಳ ಮುಂಚೆ ಜನಿಸಿದನು. ಆತನನ್ನು ಯೇಸು ಕ್ರಿಸ್ತನೆಂದು ಕರೆದರು. ಆತನು ಬಾಲ್ಯದಿಂದ ಯೌವನಸ್ಥನಾಗುವಾಗ, ನಮ್ಮ ಹಾಗೆಯೆ ಎಲ್ಲಾ ಶೋಧನೆಯನ್ನು ಎದುರಿಸಿದನು. ಆತನು ಎಲ್ಲಾ ಶೋಧನೆಯನ್ನು ಜಯಿಸಿದನು. ಆತನೆಂದಿಗೂ ಪಾಪಮಾಡಲಿಲ್ಲ.

  ತಂದೆಯಾದ ದೇವರು, ತನ್ನ ಮಗನಾದ, ಯೇಸು ಕ್ರಿಸ್ತನಿಗೆ 33 ವರ್ಷವಾಗಿದ್ದಾಗ ಕೆಟ್ಟ ಜನರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಯ ಮೇಲೆ ತೂಗಿಹಾಕಲ್ಪಡುವಂತೆ ಅನುಮತಿಸಿದನು. ಆತನು ನಮಗಾಗಿ ಅಲ್ಲಿ ಶಾಪಗ್ರಸ್ಥನಾದನು, ಮತ್ತು ಆತನು ಮಾನವಕುಲದ ಪಾಪವನ್ನೆಲ್ಲಾ ತನ್ನ ಮೇಲೆ ಹೊತ್ತುಕೊಂಡನು. ಅಲ್ಲಿ ನಾವು ದೇವರ ಅಪಾರವಾದ ಪ್ರೀತಿಯನ್ನು ನೋಡುತ್ತೇವೆ.

  ಯೇಸು ಕ್ರಿಸ್ತನು ಶಿಲುಬೆಯಲ್ಲಿ ಪ್ರಾಣಕೊಟ್ಟು, ಮತ್ತು ತನ್ನ ರಕ್ತ ಸುರಿಸಿದನು. ಹೀಗೆ ನಮ್ಮ ಪಾಪದ ದಂಡನೆಯನ್ನು ನೀತಿಯುಕ್ತವಾಗಿ ಮತ್ತು ಪೂರ್ಣವಾಗಿ ಕಟ್ಟುವುದರ ಮೂಲಕ ನ್ಯಾಯತೀರ್ಪಿನ ಕೋರಿಕೆಗಳನ್ನು ತೀರಿಸಿದನು.

  ಕರ್ತನಾದ ಯೇಸು ಕ್ರಿಸ್ತನನ್ನು ಸತ್ತು, ಹೂಣಲ್ಪಟ್ಟ ಮೂರನೆ ದಿನದಲ್ಲಿ ದೇವರು ಎಬ್ಬಿಸಿದನು; ಇದರಿಂದಾಗಿ ಕರ್ತನಾದ ಯೇಸು ಕ್ರಿಸ್ತನ ಯಜ್ಞವನ್ನು ದೇವರು ಸ್ವೀಕರಿಸಿರುವುದಾಗಿ ಜಗತ್ತಿಗೆ ತಿಳಿಸಿದನು.

  ದೇವರು ಒಬ್ಬನೇ ಇರುವವನೆಂತಲೂ ಮತ್ತು ದೇವರ ಅವತಾರವು ಈ ಲೋಕಕ್ಕೆ ಒಂದೇ ಬಾರಿ ಆಯಿತೆಂದೂ ಅದು ಕರ್ತನಾದ ಯೇಸು ಕ್ರಿಸ್ತನೆಂದೂ, ಎರಡು ಸತ್ಯಾಂಶಗಳಿಂದ ನಿರೂಪಿಸಲ್ಪಡುತ್ತದೆ: 1) ಕರ್ತನಾದ ಯೇಸು ಕ್ರಿಸ್ತನೇ ಲೋಕದ ಪಾಪಕ್ಕಾಗಿ ತನ್ನ ಪ್ರಾಣವನ್ನು ಕೊಟ್ಟವನು. 2) ಇನ್ನೆಂದಿಗೂ ಸಾಯದಿರುವುದಕ್ಕೆ ಕರ್ತನಾದ ಯೇಸು ಕ್ರಿಸ್ತನೇ ಸತ್ತವರೊಳಗಿಂದ ಮೊದಲು ಎದ್ದು ಬಂದವನು. ಇದರಿಂದ ಯೇಸು ಸ್ವಾಮಿಯು ಮನುಷ್ಯನ ಕಡೆಯ ಶತ್ರುವಾದ ಮೃತ್ಯುವನ್ನು ಜಯಿಸಿದ್ದೇನೆ ಎಂದು ನಿರೂಪಿಸಿದ್ದಾನೆ.

  ನಲ್ವತ್ತು ದಿನಗಳ ನಂತರ, ಯೇಸು ಸ್ವಾಮಿಯು ಪರಲೋಕಕ್ಕೆ ಏರಿಹೋಗಿ, ಇಂದಿನ ವರೆಗೆ ಅಲ್ಲೇ ಇದ್ದಾನೆ.

  ಆತನು ಹೋಗುವುದಕ್ಕಿಂತ ಮುಂಚಿತವಾಗಿ, "ಒಂದು ದಿನ ನಾನು ಹಿಂತಿರುಗಿ ಈ ಲೋಕಕ್ಕೆ ತೀರ್ಪುನೀಡಲು ಮತ್ತು ನೀತಿಯಿಂದ ಮತ್ತು ಸಮಾಧಾನದಿಂದ ಆಳಲು ಬರುತ್ತೇನೆ" ಎಂದು ವಾಗ್ದಾನ ಮಾಡಿದನು. ಆತನು ಬರುವುದಕ್ಕಿಂತ ಮುಂಚೆ ನಡೆಯುವ ಸೂಚನೆಗಳ ಕುರಿತು ತಿಳಿಸಿದನು. ನಾವು ನೋಡುವ ಹಾಗೆ ಈ ಸೂಚನೆಗಳು ಈಗ ನೆರವೇರುತ್ತಾ ಬಂದಿವೆ. ನಮಗೆ ಗೊತ್ತು ಆತನ ಎರಡನೆ ಆಗಮನವು ಬಹು, ಬಹು ಹತ್ತಿರವಾಗಿದೆ.

  ಆತನು ಭೂಮಿಗೆ ಬರುವುದಕ್ಕಿಂತ ಮುಂಚಿತವಾಗಿ, ನೀವು ದೇವರು ಕ್ರಿಸ್ತನ ಮೂಲಕ ಕೊಡುವ ಆ ಪಾಪಕ್ಷಮಾಪಣೆಯನ್ನು ಹೊಂದಿಕೊಳ್ಳುವುದು ಬಹು ಮುಖ್ಯವಾಗಿದೆ.

  ಅಧ್ಯಾಯ 5
  ಮಾನಸಾಂತರದ ಬಗ್ಗೆ ನಿಜ ಸತ್ಯ

  ಪಾಪಕ್ಕೆ ಬರುವ ಶಿಕ್ಷೆಯು ಆತ್ಮಿಕ ಮರಣ ಎಂದು ಈಗಾಗಲೇ ನಾವು ನೋಡಿದ್ದೇವೆ. ಅಂದರೆ ದೇವರ ಸನ್ನಿಧಿಯಿಂದ ಎಂದೆಂದಿಗೂ ಇಲ್ಲದ ಹಾಗೆ ಮಾಡಲ್ಪಡುವುದು. ಇದನ್ನೆ ಯೇಸು ಕ್ರಿಸ್ತನು ಶಿಲುಬೆಯಲ್ಲಿ ಅನುಭವಿಸಿದನು. ಆತನು ತನ್ನ ತಂದೆಯಿಂದ ಕೈಬಿಡಲ್ಪಟ್ಟನು. ಯೇಸುವು ದೇವರಾಗಿದ್ದರಿಂದ ಮತ್ತು ಆತನು ಅಂತರಂಗದಲ್ಲಿ ನಿತ್ಯವಿರುವಾತನು ಆಗಿದ್ದನು. ತನ್ನ ತಂದೆಯಿಂದ ಸ್ವಲ್ಪ ಸಮಯಕ್ಕೆ ಬೇಪರ್ಡಿಸಿದ ಆ ನೋವಿನ ಅನುಭವವನ್ನು ಅನುಭವಿಸಿದನು. ಆತನು ನಾವು ನರಕದಲ್ಲಿ ನಿತ್ಯಕಾಲಕ್ಕೂ ಅನುಭವಿಸಬೇಕಾಗಿದ್ದ, ಆ ನಿತ್ಯವಾದ ನರಕದ ನೋವನ್ನು, ಆ ಮೂರು ಘಂಟೆಗಳ ಕತ್ತಲೆಯಿಂದ ಕೂಡಿದ ಸಮಯದಲ್ಲಿ ಶಿಲುಬೆಯಲ್ಲಿ ಅನುಭವಿಸಿದನು.!

  ನಮ್ಮ ಪಾಪದ ದಂಡನೆಯನ್ನು ಆತನು ತೆಗೆದುಕೊಡಿದ್ದಾನೆ. ಆದರೆ ಎಲ್ಲಿಯವರೆಗೆ ನಾವು ದೇವರಿಂದ ಕ್ಷಮಾಪಣಿಯನ್ನು ಹೊಂದಿರುವುದಿಲ್ಲವೋ, ಅಲ್ಲಿಯವರೆಗೆ ನಾವು ಆ ದಂಡನೆಯಿಂದ ಕ್ಷಮಿಸಲ್ಪಟ್ಟು ಮತ್ತು ಬಿಡುಗಡೆಯನ್ನು ಹೊಂದಿರುವುದಿಲ್ಲ. ಇದೇ ಲೋಕದಲ್ಲಿ ಅನೇಕ ಜನರು, ಯೇಸು ಕ್ರಿಸ್ತನು ಅವರಿಗಾಗಿ ಪ್ರಾಣ ಕೊಟ್ಟಿದ್ದರೂ ಸಹ, ದೇವರಿಂದ ಕ್ಷಮಿಸಲ್ಪಡದೆ ಇರುವುದಕ್ಕೆ ಕಾರಣ, ಕ್ರಿಸ್ತನು ಇಡಿ ಮನುಕುಲಕ್ಕಾಗಿ ತನ್ನ ಪ್ರಾಣ ಕೊಟ್ಟನು, ಎಲ್ಲ ಮತದವರಿಗೋಸ್ಕರ, ಬರೀ ಕ್ರೈಸ್ತರ ಪಾಪಗಳಿಗೆ ಮಾತ್ರವಲ್ಲ.

  ದೇವರು ನಿಮಗಾಗಿ ಕ್ರಿಸ್ತನ ಮರಣದ ಮುಖಾಂತರ ಖರೀದಿಸಿರುವದನ್ನು ನೀವು ಹೊಂದಲು, ಪ್ರಥಮವಾಗಿ ನೀವು ನಿಮ್ಮ ಎಲ್ಲಾ ಪಾಪಗಳಿಗಾಗಿ ಮಾನಸಾಂತರ ಪಡಬೇಕು. ಅಂದರೆ, ನೀವು ನಿಮ್ಮ ಎಲ್ಲಾ ಪಾಪದ ಕೃತ್ಯಗಳಿಗಾಗಿ ನಿಜವಾದ ಪಶ್ಚಾತ್ತಾಪ ಪಟ್ಟಿರಬೇಕು, ಮತ್ತು ಈ ಕ್ಷಣದಿಂದಲೇ ನಿಮಗೆ ತಿಳಿದಿರುವ ಎಲ್ಲಾ ಪಾಪದ ಕೃತ್ಯಗಳಿಂದ ತಿರುಗಿಕೊಳ್ಳಬೇಕು ಎಂಬ ಯಥಾರ್ಥತೆ ಇರಬೇಕು.

  ಪ್ರಾರಂಭದಲ್ಲಿ ದೇವರಿಗೆ ಮೆಚ್ಚಿಕೆಯಾದ ಕಾರ್ಯಗಳು ಯಾವುವು ಮತ್ತು ಮೆಚ್ಚಿಕೆಯಾಗದೆ ಇರುವ ಕಾರ್ಯಗಳು ಯಾವುವು ಎಂಬುದಕ್ಕೆ ನಿಮ್ಮ ಮನಸ್ಸಾಕ್ಷಿಯು ಸೂಕ್ಷ್ಮಿವಾಗಿರುವುದಿಲ್ಲ. ಆದರಿಂದ ನೀವು ದೇವರಿಗೆ ಮೆಚ್ಚಿಕೆಯಾಗಿದಿರುವ ಎಲ್ಲಾ ಕಾರ್ಯಗಳಿಂದ ಸಂಪೂರ್ಣವಾಗಿ ತಿರುಗಿಕೊಳ್ಳಲು ಅಸಾಧ್ಯವು. ಮತ್ತು ದೇವರು ಅದನ್ನು ಒತ್ತಾಯಿಸುವುದಿಲ್ಲ ಏಕೆಂದರೆ ಆತನು ವಾಸ್ತವಿಕನಾದ್ದರಿಂದ ಅರ್ಥಮಾಡಿಕೊಳ್ಳುವವನಾಗಿದ್ದಾನೆ.

  ಆದರೆ ಆತನಿಗೆ ಮೆಚ್ಚಿಕೆಯಾಗದಿರುವ ಕಾರ್ಯವನ್ನು ಬಿಡಲು ಸಿದ್ದವಾಗಿರಲು ಹೇಳುತ್ತಾನೆ. ಇದನ್ನು ನಿಮ್ಮ ಮನಸಾಕ್ಷಿಯು ತಿಳಿಸುವ ಕಾರ್ಯಗಳನ್ನು ಬಿಡುವುದರ ಮುಖಾಂತರ ನೀವು ಪ್ರಾರಂಭಿಸಬಹುದು.

  ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬಿಡಲು ನಿಮಗೆ ಶಕ್ತಿಯಿಲ್ಲದಿರಬಹುದು. ಮತ್ತು ದೇವರು ನಿಮ್ಮ ಬಲಹೀನತೆಯನ್ನು ಬಲ್ಲವನಾಗಿದ್ದಾನೆ. ಆತನು ನಿಮ್ಮಲ್ಲಿ ಬಲವಿದೆಯೊ ಎಂದು ಆತನು ನಿರೀಕ್ಷಿಸುವುದಿಲ್ಲ. ಆತನು ನಿಮ್ಮನ್ನು ಇಷ್ಟು ಮಾತ್ರವೆ ಕೇಳುತ್ತಾನೆ ’ನೀವು ಅವುಗಳನ್ನು ಬಿಡಲು ಸಿದ್ದನಾಗಿದ್ದಿಯೋ? ಆತನು ನಿಮ್ಮ ಯಥಾರ್ಥತೆಯಿಂದ ಹೋರಾಡುವಾಗ ಮತ್ತು ನೀವು ಈ ಕೆಟ್ಟ ಸಂಗತಿಗಳನ್ನು ಬಿಡಲು ನಿಜವಾಗಿಯೂ ಮನಸ್ಸುಳ್ಳವನಾಗಿರುವಾಗ, ಆತನು ನಿಮ್ಮನ್ನು ನೀವು ಯಾವ ರೀತಿಯಲ್ಲಿ ಇದ್ದಿಯೊ, ಒಂದು ವೇಳೆ ನೀವು ಕೆಟ್ಟ ಅಭ್ಯಾಸಗಳಿಂದ ಸೋಲನ್ನು ಅನುಭವಿಸಿದ್ದರೂ ಅದೇ ಸ್ಥಿತಿಯಲ್ಲಿ ಸ್ವೀಕರಿಸುವವನಾಗಿರುತ್ತಾನೆ.

  ಇದು ಎಂತಹ ಅದ್ಭುತವಾದ ಶಭಸಮಾಚಾರವು!

  ನೀವು ನಿಮ್ಮ ಕೆಟ್ಟ ಕೃತ್ಯಗಳನ್ನು ಬಿಡುವುದಕ್ಕೆ ಮನಸ್ಸು ಮಾಡಿರುವುದಕ್ಕೆ ಒಂದು ಸಾಕ್ಷಿಯೇನೆಂದರೆ ನೀವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ತೋರಿಸುವಂತಹ ಮನಸ್ಸು; ಮತ್ತು ಇಲ್ಲಿಯೂ ಸಹ ದೇವರು ನಿಮ್ಮ ಮೇರೆಗಳನ್ನು ಬಲ್ಲಾತನಾಗಿದ್ದಾನೆ. ಒಂದು ವೇಳೆ ನೀವು ಮಾಡಿರಬಹುದಾದಂತಹ ಸಾವಿರಾರು ತಪ್ಪುಗಳನ್ನು ಮತ್ತು ಪಾಪಗಳನ್ನು ಸರಿಪಡಿಸಲು ಎಂದಿಗೂ ಸಾಧ್ಯವಾಗದೆ ಇರಬಹುದು, ಕೆಲವುಗಳನ್ನು ಮಾಡಲಿಕ್ಕೆ ಸಾಧ್ಯತೆಯುಂಟು. ದೇವರು ನಿಮ್ಮಿಂದ ಸರಿಪಡಿಸಲು ಸಾಧ್ಯವಾಗುವಂತಹ ಸಂಗತಿಗಳನ್ನು ಮಾತ್ರವೇ ಅಪೇಕ್ಷಿಸುವವನಾಗಿರುತ್ತಾನೆ.

  ಉದಾಹರಣೆಗೆ, ನೀವು ಯಾರಿಂದಾದರೂ ಹಣವನ್ನು ತೆಗೆದುಕೊಂಡಿರುವದಾದರೆ, ಅವರಿಗೆ ಅಷ್ಟು ಹಣವನ್ನು ನೀನು ಕೂಡಿ ಹಾಕಿದ ತಕ್ಷಣ ಪುನಃ ಹಿಂತಿರುಗಿಸಲು ಮನಸ್ಸುಳ್ಳವನಾಗಿರುತ್ತಿ. ನೀವು ನಿಮ್ಮ ಮಾತಿನಿಂದ ಯಾರ ಮನಸ್ಸನ್ನಾದರೂ ನೋಯಿಸಿದ್ದರೆ, ಮತ್ತು ಅದು ನಿಮ್ಮ ನೆನಪಿನಲ್ಲಿ ಇದ್ದರೆ, ನೀವು ಅವರ ಬಳಿಗೆ ಹೋಗಿ ಅಥವಾ (ಅವರಿಗೆ ಬರೆದು) ಮತ್ತು ಅವರಲ್ಲಿ ನಿಮ್ಮ ಮಾತಿಗಾಗಿ ಕ್ಷಮಾಪಣೆಯನ್ನು ಕೇಳಿಕೊಳ್ಳಬೇಕು. ಇಂತಹ ಕೃತ್ಯಗಳ ಮೂಲಕವೇ ದೇವರು ನಮ್ಮ ನಿಷ್ಟೆಯನ್ನು ಮತ್ತು ದೀನತೆಯನ್ನು ಪರೀಕ್ಷಿಸುವವನಾಗಿರುತ್ತಾನೆ. ಆತನು ತನ್ನ ಸಹಾಯವನ್ನು ದೀನತೆಯುಳ್ಳವರಿಗೆ ಮಾತ್ರವೆ ಕೊಡುತ್ತಾನೆ. ದೇವರ ಸಹಾಯವಿಲ್ಲದೆ ನಾವು ರಕ್ಷಿಸಲ್ಪಡಲಿಕ್ಕೆ ಸಾಧ್ಯವಿಲ್ಲ.

  ಸತ್ಯವೇದವು ನಿಜವಾದ ಮಾನಸಾಂತರವನ್ನು ’ವಿಗ್ರಹದಿಂದ ದೇವರ ಕಡೆಗೆ ತಿರುಗಿಕೊಳ್ಳುವುದು’ ಎಂದು ಕರೆದಿದೆ. (1 ಥೆಸಲೋನಿಕ ಅಧ್ಯಾಯ 1 ವಚನ 2).

  ದೇವರು ಎಲ್ಲ ವಿಧವಾದ ವಿಗ್ರಹ ಆರಾಧನೆಯನ್ನು ದ್ವೇಷಿಸುತ್ತಾನೆ. ವಿಗ್ರಹಾರಾಧನೆ ಎಂದರೇನು? ಅದು ಸೃಷ್ಟಿಕರ್ತನಿಗಿಂತ, ಸೃಷ್ಟಿಸಲ್ಪಟ್ಟ ವಸ್ತುಗಳಿಗೆ ಮುಖ್ಯ ಸ್ಥಾನ ಕೊಡುವುದೇ ಆಗಿದೆ. ಆ ವಸ್ತು ಹಣವೇ ಆಗಿರಲಿ, ಅಥವಾ ಸುಂದರವಾದ ಯುವತಿಯೆ ಆಗಿರಲಿ, ಅಥವಾ ನಮ್ಮ ಅಂತಸ್ತೇ ಆಗಿರಲಿ. ಆ ರೀತಿಯ ವಸ್ತುವನ್ನು ಆರಿಸಿಕೊಳ್ಳುವದು. ಸೃಷ್ಟಿಕರ್ತನಿಗಿಂತ ಸೃಷ್ಟಿಸಲ್ಪಟ್ಟ ವಸ್ತುವನ್ನು ಆರಾಧಿಸುವುದೇ ವಿಗ್ರಹರಾಧನೆ. ಇದೇ ಎಲ್ಲ ಪಾಪದ ಮೂಲವು.

  ವಿಗ್ರಹಗಳು ಮರದಿಂದ ಅಥವಾ ಕಲ್ಲಿನಿಂದ ಅಥವಾ ಲೋಹದಿಂದಲೂ ಆಗಿರಬಹುದು. ಮನುಷ್ಯನಿಂದ ಮಾಡಲ್ಪಟ್ಟವುಗಳು ಮತ್ತು ಅವುಗಳು ಅವರು ಆರಧಿಸುವ ದೇವರನ್ನು ಪ್ರಥಿಬಿಂಬಿಸುತ್ತದೆ. ಆದರೆ ಜೀವವನ್ನು ಹೊಂದುವ ಯಾವುದೇ ವಸ್ತುವನ್ನು ಮಾಡುವುದು ಮನುಷ್ಯನಿಗೆ ಅಸಾಧ್ಯವು. ನಾವು ವಿಗ್ರಹಗಳನ್ನಾಗಲಿ ಅಥವಾ ಚಿತ್ರಗಳನ್ನಾಗಲಿ ’ದೇವರನ್ನು ನೆನಪಿಡಲು ಸಹಾಯಿಸುವುದು’ ಎಂದು ಉಪಯೋಗಿಸಬಾರದು, ಉಪಯೋಗಿಸುವ ಕೆಲವರು ಹಾಗೆಂದು ತಿಳಿಸುತ್ತಾರೆ. ಸರ್ವಶಕ್ತನಾದ ದೇವರ ಸ್ವರೂಪವನ್ನು ಸೃಷ್ಟಿಸಲ್ಪಟ್ಟ ಪುರುಷನು, ಸ್ತ್ರೀಯ ಅಥಾವಾ ಪ್ರಾಣಿಗಳ ಆಕಾರದಲ್ಲಿರುವ ವಸ್ತುಗಳಿಗೆ ಅಥವಾ ಚಿತ್ರಗಳಿಗೆ ಹೋಲಿಸುವುದು ಅದು ಆತನನ್ನು ಅವಮಾನಿಸಿದ ಹಾಗಿರುತ್ತದೆ.

  ದೇವರು ನಮ್ಮ ಕಣ್ಣಿಗೆ ಅದೃಶ್ಯನಾದವನು ಮತ್ತು ಎಷ್ಟೇ ಸುಂದರವಾಗಿ ಮಾಡಲ್ಪಟ್ಟ ಅಥವಾ ಕೆತ್ತಲ್ಪಟ್ಟ ವಿಗ್ರಹಕ್ಕೆ ಹೋಲಿಸಲ್ಪಡುವದಕ್ಕಿಂತಲೂ ಅತಿ ಮಹತ್ತರವಾದವನು. ಮತ್ತು ಯಾವುದೇ ಕಾರಣಕ್ಕೂ, ನಮಗೆ ದೇವರ ಕುರಿತು ನೆನಪಿಸುವುದಕ್ಕೆ ಆ ರೀತಿಯ ಕಾಣಿಸುವ ವಸ್ತುಗಳು ಬೇಕಿಲ್ಲ. ಏಕೆಂದರೆ ಹಗಲು ಮತ್ತು ರಾತ್ರಿ ಸದಾ ನಮ್ಮನ್ನು ನಮ್ಮ ಸೃಷ್ಟಿಕರ್ತನ ಬಗ್ಗೆ ನೆನಪಿಸುವ ಮತ್ತು ನಮ್ಮ ಕೂಡ ಮಾತನಾಡುವ ಮನಸಾಕ್ಷಿ ಎಂಬುದನ್ನು ನಾವೆಲ್ಲರೂ ಹೊಂದಿದ್ದೆವೆ. ವಿಗ್ರಹಾರಾಧನೆ, ಧಾರ್ಮಿಕ ಚಟುವಟಿಕೆಗಳು ಮತ್ತು ತೀರ್ಥಯಾತ್ರೆಗಳು ಅನೇಕ ಬಾರಿ ನಮ್ಮ ಮನಸಾಕ್ಷಿಗೆ ಮಾತನ್ನು ಕೇಳುವುದಕ್ಕೆ ಬದಲಾಗಿ ನಡೆಸುವಂತಹದು ಆಗಿದೆ. ಯಾವಾಗ ಜನರು ದೇವರ ಆಜ್ಞೆಯನ್ನು ಮೀರುವುದಕ್ಕೆ ಆಲೋಚಿಸುತ್ತಾರೋ, ಅಂಥವರು ಅನೇಕ ರೀತಿಯ ಧಾರ್ಮಿಕ ಆಚಾರಗಳನ್ನು ಮತ್ತು ಚಟುಚಟೆಕೆಯ ಮಾಡುವುದರ ಮುಖಾಂತರ ತಮ್ಮ ಮನಸ್ಸಾಕ್ಷಿಯ ಸ್ವರವನ್ನು ನಂದಿಸುವವರಾಗಿರುತ್ತಾರೆ. ಅವರು ಹೀಗೆ ಆಲೋಚಿಸುತ್ತಾರೆ ತಾವು ಮಾಡುವ ಯಜ್ಞದ ಮತ್ತು ತೀರ್ಥಯಾತ್ರೆಗಳನ್ನು ಮಾಡುವುದರಿಂದ ದೇವರು ಅವರ ಪಾಪಗಳನ್ನು ಕ್ಷಮಿಸುತ್ತಾನೆಂದು ಭಾವಿಸುತ್ತಾರೆ. ಆದರೆ ಇದು ಒಂದು ಮೋಸ. ದೇವರು ನಮ್ಮ ಧಾರ್ಮಿಕ ಆಚಾರಗಳನ್ನಾಗಲಿ ಮತ್ತಿ ಚಟುವಟಿಕೆಯನ್ನಾಗಲಿ ನೋಡುವುದಿಲ್ಲ. ಆತನು ನಮ್ಮ ಹೃದೆಯಗಳನ್ನು ನೋಡುತ್ತಾನೆ., ಏಕೆಂದರೆ ನಾವು ನಮ್ಮ ಮನಸ್ಸಾಕ್ಷಿಯ ಸ್ವರವನ್ನು ಕೇಳುತ್ತೇವೆಯೊ ಅಥವಾ ಇಲ್ಲವೊ ಎಂದು.

  ಮಾನಸಾಂತರವು ಎಲ್ಲ ರೀತಿಯ ವಿಗ್ರಹಾರಾಧನೆಯಿಂದ ತಿರುಗಿಕೊಳ್ಳುವುದನ್ನು ಒಳಗೊಂಡಿದೆ. ನಿಜವಾದ ಮಾನಸಾಂತರದಲ್ಲಿ, ನಾವು ಸೃಷ್ಟಿಸಲ್ಪಟ್ಟ ಸಂಗತಿಗಳಿಂದ ಸೃಷ್ಟಿಕರ್ತನ ಕಡೆಗೆ ತಿರುಗಿ, ಹೀಗೆ ಹೇಳುವವರಾಗಿರುತ್ತೇವೆ: ’ಸರ್ವಶಕ್ತನಾದ ದೇವರೇ, ನೀನೊಬ್ಬನೆ ಆರಾಧನೆಯನ್ನು ಮತ್ತು ಸೇವೆಯನ್ನು ಹೊಂದಲು ಯೋಗ್ಯನು. ಇಲ್ಲಿಯವರೆಗೆ ನಾನು ಸೃಷ್ಟಿಸಲ್ಪಟ್ಟವುಗಳನ್ನು ಆರಾಧಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸು. ಇಂದಿನಿಂದ ನೀನೇ ನನ್ನ ಜೀವಿತದಲ್ಲಿ ಮುಖ್ಯಸ್ಥನು.

  ಮಾನಸಾಂತರವೆಂದರೆ ನಾವು ನಮ್ಮ ಕೆಲಸಗಳನ್ನು, ಅಥವಾ ನಮ್ಮ ಕುಟುಂಬವನ್ನು ಬಿಟ್ಟು, ಕಾಡಿಗೆ ಅಥವಾ ಬೆಟ್ಟಗಳಿಗೆ ಸನ್ಯಾಸಿಯ ಹಾಗೆ ಹೋಗುವುದಲ್ಲ. ಖಂಡಿತ ಇಲ್ಲ. ದೇವರು ನಾವೆಲ್ಲರು ಕುಟುಂಬವನ್ನು ಹೊಂದಿರಬೇಕೆಂದು, ಮತ್ತು ನಮ್ಮ ಹೊಟ್ಟೆಗಾಗಿ ದುಡಿಯಬೇಕೆಂದು ಬಯಸುತ್ತಾನೆ. ಹಣವನ್ನು ಸಂಪಾದಿಸುವುದು ಪಾಪವಲ್ಲ. ಆದರೆ ಹಣವನ್ನು ದೇವರಿಗಿಂತ ಹೆಚ್ಚಾಗಿ ಪ್ರೀತಿಸುವುದು ಪಾಪವು. ಇಂದಿನ ನಾಗರೀಕತೆಯು ನೀಡುವ ಪ್ರಯೋಜನವಾಗಿರುವ ಸುಖವನ್ನು ಉಪಯೋಗಿಸುವುದು ಪಾಪವಲ್ಲ. ಆದರೆ ಈ ಸುಖವನ್ನು ದೇವರಿಗಿಂತ ಹೆಚ್ಚಾಗಿ ಪ್ರೀತಿಸುವುದು ಪಾಪವೇ.

  ದೇವರು ನಮ್ಮ ದೇಹವನ್ನು ಆಹಾರದ, ನಿದ್ರೆಯ ಮತ್ತು ಲೈಂಗಿಕತೆಯ ಸುಖವನ್ನು ಅನುಭವಿಸಲಿಕ್ಕಾಗುವಂತೆ ಸೃಷ್ಟಿಸಿದ್ದಾನೆ. ಇವುಗಳಲ್ಲಿ ಯಾವುದೇ ತಪ್ಪಿಲ್ಲ. ನಾವು ಹಸಿದಿದ್ದೇವೆ ಮತ್ತು ದಣಿದಿದ್ದೇವೆ ಎಂಬ ಸಂಗತಿಗಳಲ್ಲಿ ನಾವು ನಾಚಿಕೆ ಪಡದಿರುವಾಗ, ಲೈಂಗಿಕ ಆಸೆಯನ್ನು ಹೊಂದಿದ್ದೇವೆ ಎಂಬುದರಲ್ಲಿ ನಾಚಿಕೆ ಪಡುವುದು ಬೇಕಾಗಿಲ್ಲ. ನಾವು ಆಹಾರವನ್ನು ಹಸಿವೆಯಿಂದಿರುವಾಗ ಕದಿಯಬಾರದು, ಮತ್ತು ನಾವು ಕೆಲಸ ಮಾಡಬೇಕಾದಂತಹ ಸಮಯದಲ್ಲಿ ನಾವು ನಿದ್ರೆ ಮಾಡಬಾರದು. ಅದೇ ರೀತಿಯಲ್ಲಿ ನಾವು ನಮ್ಮ ಲೈಂಗಿಕ ತೃಪ್ತಿಗಾಗಿ ಇನ್ನೊಬ್ಬ ವ್ಯಕ್ತಿಯನ್ನು ಉಲ್ಲಂಘಿಸಬಾರದು. ದೇವರು ಮದುವೆಯನ್ನು ಏರ್ಪಡಿಸಿದ್ದಾನೆ. ಆತನು ಒಬ್ಬ ಪುರುಷನು ಒಂದೇ ಹೆಂಡತಿಯನ್ನು ಹೊಂದಿದವನಾಗಿರಬೇಕೆಂದು ಅಪೇಕ್ಷಿಸುತ್ತಾನೆ. ಇದರ ಮೂಲಕ ನಮ್ಮ ಲೈಂಗಿಕ ಆಸೆಯನ್ನು ಪೂರ್ತಿಗೊಳಿಸಿಕೊಳ್ಳವಂತೆ, ಮದುವೆಯ ಹೊರತಾಗಿ ನಡೆಯುವ ಎಲ್ಲಾ ಲೈಂಗಿಕ ಸಂಬಂಧವು ಪಾಪವಾಗಿದೆ. ನಾವು ನಮ್ಮ ಎಲ್ಲಾ ಲೈಂಗಿಕ ಪಾಪಗಳಿಗಾಗಿ ಮಾನಸಾಂತರಪಟ್ಟು ಮತ್ತು ಅದನ್ನು ತ್ಯಜಿಸಬೇಕು, ಮತ್ತು ದೇವರ ಕಡೆಗೆ ಯಥಾರ್ಥವಾಗಿ ತಿರುಗಿಕೊಳ್ಳಬೇಕು.

  ಇನ್ನೊಂದು ಪಾಪಕ್ಕಾಗಿ ನಾವು ಮಾನಸಾಂತರ ಪಡಬೇಕು ಮತ್ತು ಅದು ಯಾವುದೆಂದರೆ ಇತರರ ನಡವಳಿಕೆಯ ಕುರಿತು ಕ್ಷಮಿಸಲ್ಪಡುವ ಮನಸ್ಸು ಇಲ್ಲದೆ ಇರುವುದು. ನಿಮ್ಮನ್ನು ದೇವರು ಕ್ಷಮಿಸಬೇಕೆಂದರೆ, ನೀವು ನಿಮ್ಮನ್ನು ತೊಂದರೆ ಪಡಿಸಿದ ಎಲ್ಲರನ್ನು ಕ್ಷಮಿಸಲು ಸಿದ್ದರಿರಬೇಕು. ನಿಮಗಾಗಿ ದೇವರು ಏನನ್ನು ಮಾಡಿದ್ದಾನೊ ಅದನ್ನು ನೀವು ಇತರರಿಗೆ ಮಾಡಲು ಸಿದ್ದರಿರಬೇಕು. ನೀವು ಇದನ್ನು ಮಾಡಲು ಸಿದ್ದರಿಲ್ಲವೆಂದರೆ, ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ.

  ಕರ್ತನಾದ ಯೇಸು ಕ್ರಿಸ್ತನು, ’ನೀವು ಇತರರನ್ನು ಕ್ಷಮಿಸುವುದಕ್ಕೆ ಮನಸ್ಸಿಲ್ಲವಾದರೆ, ಪರಲೋಕದ ನಿಮ್ಮ ತಂದೆಯು ನಿಮ್ಮನ್ನು ಕ್ಷಮಿಸುವುದಿಲ್ಲ (ಮತ್ತಾಯ ಅಧ್ಯಾಯ 6, ವಚನ 15) ಎಂದು ಹೇಳಿದ್ದಾನೆ.

  ನಿಮ್ಮನ್ನು ಆಳವಾಗಿ ನೋಯಿಸಿದ ಯಾವ ವ್ಯಕ್ತಿಯನ್ನಾದರೂ ಕ್ಷಮಿಸಲು ನಿಮಗೆ ಬಹು ಕಠಿಣವೆಂದು ತೋರಬಹುದು. ಆಗ ನೀವು ದೇವರಲ್ಲಿ ಪ್ರಾರ್ಥಿಸಿ, ಆ ವ್ಯಕ್ತಿಯನ್ನು ಕ್ಷಮಿಸಲು ನಿಮ್ಮನ್ನು ಸಹಾಯಿಸುವಂತೆ ಕೇಳಿಕೊಳ್ಳಬಹುದು. ಈ ಕಾರ್ಯವನ್ನು ನೀವು ಮಾಡಲು ದೇವರ ಸರ್ವಶಕ್ತಿಯು ನಿಮ್ಮ ಸಹಾಯಕ್ಕಾಗಿ ದೊರೆಯುತ್ತದೆ. ಒಂದು ವೇಳೆ ದೇವರು ನಿಮ್ಮನ್ನು ತನ್ನ ಸರ್ವಶಕ್ತಿಯಿಂದ ಸಹಾಯಿಸುವುದಾದರೆ, ನಿಮ್ಮಿಂದ ಎಲ್ಲವನ್ನು ಮಾಡಲು ಸಾಧ್ಯವು!

  ದೇವರು ನಾವು ನಮ್ಮ ಎಲ್ಲ ಪಾಪಗಳಿಗಾಗಿ ಮಾನಸಾಂತರ ಪಟ್ಟರೆ ಆ ಪಾಪವು ಎಷ್ಟೇ ದೊಡ್ಡದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದನ್ನು ಕ್ಷಮಿಸುತ್ತಾನೆ. ಅಂದರೆ, ನಾವು ನಿಜವಾಗಿಯೂ ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟು, ಮತ್ತು ಯರ್ಥಾಥವಾಗಿ ನಮ್ಮ ಪಾಪದ ಎಲ್ಲ ಮಾರ್ಗಗಳನ್ನು ಬಿಟ್ಟುಬಿಡಬೇಕೆಂದಿದ್ದರೆ ಮಾತ್ರ.

  ಅಧ್ಯಾಯ 6
  ನಂಬಿಕೆಯ ಕುರಿತಾಗಿ ನಿಜ ಸತ್ಯ

  ನಾವು ಒಂದು ಸಾರಿ ಮಾನಸಾಂತರ ಹೊಂದಿದ ಮೇಲೆ, ದೇವರ ಕ್ಷಮಾಪಣೆಯನ್ನು ಹೊಂದಲು ಬೇಕಾದ ಅವಶ್ಯಕತೆಯು ನಂಬಿಕೆ.

  ಸತ್ಯವೇದವು ಹೇಳುತ್ತದೆ.’ನಂಬಿಕೆ ಮೂಲಕ ಕೃಪೆಯಿಂದಲೇ ರಕ್ಷಣೆಹೊಂದಿದವರಾಗಿದ್ದೀರಿ’ (ಎಫೆಸೆ ಅಧ್ಯಾಯ 2, ವಚನ 8).

  ಕೃಪೆಯು ದೇವರು ನಮ್ಮನ್ನು ಸಹಾಯಿಸುವುದಕ್ಕೆ ಮತ್ತು ಆಶೀರ್ವದಿಸುವದಕ್ಕೆ ನಮಗೆ ತನ್ನ ಹಸ್ತವನ್ನು ನೀಡುವಂತಹದು ಆಗಿದೆ. ನಂಬಿಕೆಯು ಆ ಸಹಾಯವನ್ನು ಮತ್ತು ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ನಾವು ದೇವರ ಕಡೆಗೆ ನಮ್ಮ ಹಸ್ತವನ್ನು ಚಾಚುವಂತಹದು ಆಗಿದೆ. ನಾವು ಮೊದಲೇ ನೋಡಿದ ಹಾಗೆ, ದೇವರಿಗೆ ಮನಸ್ಸಿಲ್ಲದೆ ಇರುವಂತಹ ಯಂತ್ರಮಾನವರು ಬೇಕಾಗಿಲ್ಲ, ಕೇವಲ ಆತನು ರೂಪಿಸಿದ ಕಾರ್ಯಕ್ರಮದ ರೀತಿಯಲ್ಲಿಯೆ ನಡೆಯುವಂತವರು ಬೇಕಾಗಿಲ್ಲ. ಇಲ್ಲ. ನಾವು ಆರಿಸಿಕೊಳ್ಳುವವರಾಗಿರಬೇಕೆಂದು ಆತನು ಬಯಸುತ್ತಾನೆ.

  ನೀವು ದೇವರು ನಿಮ್ಮನ್ನು ಬಹಳವಾಗಿ ಪ್ರೀತಿಸುವ ಒಳ್ಳೆಯ ದೇವರೆಂದು ನಂಬುತ್ತೀರೊ? ನೀವು ದೇವರು ತನ್ನ ಒಬ್ಬನೇ ಮಗನಾದ ಕರ್ತನಾದ ಯೇಸುಕ್ರಿಸ್ತನನ್ನು ನಿಮ್ಮ ಪಾಪಕ್ಕಾಗಿ ಶಿಲುಬೆಯಲ್ಲಿ ಪ್ರಾಣ ಕೊಡುವಂತೆ ಕಳುಹಿಸಿದನು, ಮತ್ತು ದೇವರು ಆತನನ್ನು ಸತ್ತ ಮೂರನೆಯ ದಿನದಲ್ಲಿ ಎಬ್ಬಿಸಿದನು ಮತ್ತು ಆತನು ಇಂದು ಸ್ವರ್ಗದಲ್ಲಿ ಜೀವಿಸುವವನಾಗಿದ್ದಾನೆ ಎಂದು ನಂಬುತ್ತಿರೊ? ಹಾಗಿದ್ದರೆ, ದೇವರು ನೀಡುವಂತಹ ಆ ಕ್ಷಮಾಪಣೆಯನ್ನು ಈಗಲೆ ನೀವು ಪಡೆದುಕೊಳ್ಳಬಹುದು. ನೀವು ಕಾಯಬೇಕಾಗಿಲ್ಲ.

  ಕರ್ತನಾದ ಯೇಸುಕ್ರಿಸ್ತನ ನಾಮದ ಹೊರತು, ಭೂಮಿಯಲ್ಲಿ ಬೇರೆ ಯಾವ ನಾಮವು ನಮ್ಮನ್ನು ಪಾಪದಿಂದಲೂ ಮತ್ತು ನರಕದಿಂದಲೂ ಬಿಡಿಸುವದಕ್ಕೆ ಇಲ್ಲ. ನೀವು ಆತನನ್ನು ನಿಮ್ಮ ಕರ್ತನನ್ನಾಗಿ ಸ್ವೀಕರಿಸಬೇಕೆಂದಿದ್ದರೆ, ಮದುವೆಯೆ ಸಮಯದಲ್ಲಿ ವಧು ’ಯಾವ ರೀತಿಯಲ್ಲಿ ತನ್ನನ್ನು ಪ್ರೀತಿಸುವವರನ್ನು ಬಿಟ್ಟು ಬಿಟ್ಟು ತನ್ನ ಪತಿಯನ್ನು ಯಾವ ರೀತಿಯಲ್ಲಿ ಜೀವಮಾನದ ಅಂತ್ಯದವರೆಗೂ ಅಂಟಿಕೊಳ್ಳುತ್ತಾಳೆಯೋ ಅದೇ ರೀತಿಯಾಗಿ’.

  ಸತ್ಯವೇದವು ಕರ್ತನಾದ ಯೇಸುಕ್ರಿಸ್ತನ ನಮ್ಮ ಸಂಬಂಧವನ್ನು ಒಂದು ಆತ್ಮಿಯ ಮದುವೆಗೆ ಹೋಲಿಸಿದೆ. ಅದರಲ್ಲಿ ಆತನೇ ನಮ್ಮ ದೈವೀಕ ಪತಿಯು, ನೀವು ಇದರಿಂದಾಗಿ ಕ್ರಿಸ್ತನನ್ನು ಸ್ವೀಕರಿಸಲು ಮನಸ್ಸುಳ್ಳವರಾಗಿದ್ದೆವೆಂದು ಮತ್ತು ಇನ್ನು ಇತರ ದೇವರನ್ನು ಆರಾಧಿಸಲು ಮತ್ತು ಪ್ರಾರ್ಥಿಸಲು ಸಾಧ್ಯವಿಲ್ಲ. ನೀವು ನಿರ್ದಷ್ಟವಾಗಿ ಆರಿಸಿಕೊಳ್ಳಲೇಬೇಕು.

  ನೀವು ಆರಿಸಿಕೊಳ್ಳಬೇಕೆಂದಿದ್ದರೆ, ಇದೇ ಆ ಸಮಯವು.

  ಈಗಲೇ ನೀವು ಮೊಣಕಾಲೂರಿ ಮತ್ತು ಕಣ್ಣು ಮುಚ್ಚಿಕೊಂಡು ಯೇಸು ಸ್ವಾಮಿಗೆ ಪ್ರಾರ್ಥನೆ ಮಾಡಿ. ನೀವು ಎಲ್ಲಿಯೇ ಇದ್ದರೂ ಆತನು ನಿಮ್ಮ ಮಾತನ್ನು ಕೇಳುವವನಾಗಿದ್ದಾನೆ. ನಿಮ್ಮ ಮಾತನ್ನು ಕೇಳುವುದರಲ್ಲಿ ಆತನು ಆಸಕ್ತನಾಗಿದ್ದಾನೆ. ಈ ಕೆಳಗಿನ ಪ್ರಾರ್ಥನೆಯನ್ನು ಅರ್ಥದಿಂದ ಕೂಡಿ ಮತ್ತು ನಿಧಾನವಾಗಿ ಪ್ರಾರ್ಥಿಸಿರಿ:

  ’ಕರ್ತನಾದ ಯೇಸುವೆ, ನಾನು ಪಾಪಿ. ಮತ್ತು ನಿಜವಾಗಿಯೂ ನಾನು ನನ್ನ ಪಾಪದಿಂದ ತಿರುಗಿಕೊಳ್ಳಲು ಬಯಸುತ್ತೇನೆ. ನೀನು ನನ್ನ ಎಲ್ಲಾ ಪಾಪಗಳಿಗಾಗಿ ಪ್ರಾಣಕೊಟ್ಟು ಸತ್ತವರೊಳಗಿಂದ ಎದ್ದು ಬಂದು ಈ ದಿನ ಜೀವಿಸುವವನಾಗಿದ್ದಿ. ನನ್ನ ಎಲ್ಲಾ ಪಾಪಗಳನ್ನು ದಯವಿಟ್ಟು ಕ್ಷಮಿಸು. ನನ್ನ ಹೃದಯ ಮತ್ತು ಜೀವಿತದಲ್ಲಿ ಬಂದು, ಇಂದಿನಿಂದ ನನ್ನ ಜೀವಿತದ ಒಡೆಯನಾಗಿರು. ನಾನು ಇತರ ಎಲ್ಲಾ ದೇವರನ್ನು ಬಿಟ್ಟು ಬಿಟ್ಟು, ಇಂದಿನಿಂದ ನಿನ್ನನ್ನು ಆರಾಧಿಸುತ್ತೇನೆ.’

  ಈ ಪ್ರಾರ್ಥನೆಯು ಬಹು ಸಣ್ಣದಾಗಿದೆ ಮತ್ತು ಕೇವಲ ಒಂದು ನಿಮಿಷವನ್ನೇ ತೆಗೆದುಕೊಳ್ಳಬಹುದು. ನೀವು ಇದನ್ನು ಯಥಾರ್ಥತೆಯಿಂದ ಪ್ರಾರ್ಥಿಸುವುದಾದರೆ, ನಿಮ್ಮ ಆತ್ಮವು ನಿತ್ಯತ್ವಕ್ಕೆ ರಕ್ಷಿಸಲ್ಪಡುವುದು. ನೀವು ಈ ಸಮಯದಲ್ಲೇ ಆತನ ಮಗುವಾಗುವಿರಿ. ಯಾ ಗಿಳಿಯ ಹಾಗೆ ಹೇಳುವರೊ ಅವರನ್ನು ಆಶೀರ್ವದಿಸುವುದಕ್ಕೆ ಇದು ಯಾವುದೇ ಸೂತ್ರವಲ್ಲ ಇದು ನಿಮ್ಮ ಹೃದಯದ ಯಥಾರ್ಥತೆಯನ್ನು ಅವಲಂಭಿಸಿದೆ. ನೀವು ಹೇಳುವುದನ್ನು ನಿಮ್ಮ ಮನಸ್ಸಿನಿಂದ ಹೇಳುವುದಾದರೆ, ದೇವರು ನಿಮ್ಮ ಪಾಪವನ್ನು ಕ್ಷಮಿಸಿ, ನಿಮ್ಮನ್ನು ಸ್ವೀಕರಿಸಿ, ಆತನ ಮಗುವನ್ನಾಗಿ ಮಾಡುತ್ತಾನೆ. ನೀವು ಯಥಾರ್ಥತೆಯುಳ್ಳವರಾಗಿದ್ದರೆ, ನೀವು ಬದಲಾಯಿಸಲ್ಪಡುವಿರಿ.

  ನಾವು ನಿಜವಾಗಿ ಕ್ಷಮಿಸಲ್ಪಟ್ಟಿದ್ದೇವೆ ಮತ್ತು ದೇವರು ನಮ್ಮನ್ನು ಸ್ವೀಕರಿಸಿ ಆತನ ಮಗುವನ್ನಾಗಿ ಮಾಡಿದ್ದಾನೆ ಎಂಬ ಭರವಸೆಯಿರುವುದು ಬಹು ಮುಖ್ಯವು. ದೇವರು ನಾವು ಭರವಸೆಯಿಂದ ಇರುವುದನ್ನು ಬಯಸುತ್ತಾನೆ. ದೇವರು ನಮ್ಮ ಹೃದಯಕ್ಕೆ ಬರುವ ತನ್ನ ಪವಿತ್ರಾತ್ಮನ ಮಾಖಾಂತರ ನಾವು ಆತನ ಮಕ್ಕಳಾಗಿದ್ದೆವೆಂಬ ಈ ಭರವಸೆಯನ್ನು ಕೊಡುತ್ತಾನೆ. ದೇವರು ತನ್ನ ಬರೆದ ವಾಕ್ಯದ (ಸತ್ಯವೇದದ) ವಾಗ್ದಾನದ ಮುಖಾಂತರವೂ ಈ ಭರವಸೆಯನ್ನು ಕೊಡುವವನಾಗಿರುತ್ತಾನೆ.

  ಕರ್ತನಾದ ಯೇಸು ಕ್ರಿಸ್ತನು’ನನ್ನ ಬಳಿಗೆ ಬರುವವನನ್ನು ನಾನು ತಳ್ಳಿಬಿಡುವುದೆ ಇಲ್ಲ’.(ಯೋಹಾನ ಅಧ್ಯಾಯ 6 ವಚನ 37). ಎಂದು ಹೇಳುತ್ತಾನೆ.

  ನಾವು ಕ್ರಿಸ್ತನ ವಾಗ್ದಾನದ ಮೇಲೆ ನಿತ್ಯತ್ವಕ್ಕೂ ಭರವಸೆ ಇಡಬಹುದು.

  ನೀವು ಯಥಾರ್ಥತೆಯಿಂದ ಆ ಪ್ರಾರ್ಥನೆಯನ್ನು ಕರ್ತನಾದ ಯೇಸು ಕ್ರಿಸ್ತನಿಗೆ ಪ್ರಾರ್ಥಿಸಿದ್ದಿರೋ? ಹಾಗಾದರೆ ನೀವು ನಿಜವಾಗಿಯೂ ಆತನ ಬಳಿಗೆ ಬಂದಿರುವಿರಿ, ಮತ್ತು ಆತನು ನಿಮ್ಮನ್ನು ಖಂಡಿತವಾಗಿಯೂ ತಿರಸ್ಕರಿಸುವುದಿಲ್ಲವೆಂದು ಭರವಸೆಯಿಂದ ಇರಬಹುದು. ನೀವು ಆತನ ಬಳಿಗೆ ಬರುವ ಪಾತ್ರವನ್ನು ಮಾಡಿರುವುದಾದರೆ, ದೇವರು ತನ್ನ ಕಾರ್ಯವಾದ ನಿಮ್ಮನ್ನು ಸ್ವೀಕರಿಸುವುದನ್ನು ಮಾಡಿದ್ದಾನೆಂದು ಭರವಸೆಯಿಂದ ಇರಬಹುದು.

  ನೀವು ನಿಮ್ಮ ಅನಿಸಿಕೆಗಳ ಮೇಲೆ ಭರವಸೆ ಇಡಬೇಕಾಗಿಲ್ಲ. ದೇವರು ನಿಮ್ಮನ್ನು ಸ್ವೀಕರಿಸಿದ್ದಾನೋ ಅಥವಾ ಇಲ್ಲವೋ ಎಂಬ ಅನಿಸಿಕೆ ಬೇಕಾಗಿಲ್ಲ. ಅನಿಸಿಕೆಗಳು ನಮ್ಮ ದೈಹಿಕ ದೇಹದ ಕುರಿತು ಆಗಿವೆ. ಅನಿಸಿಕೆಗಳ ಮೇಲೆ ಭರವಸೆ ಇಡುವುದು ಮರಳಿನ ಮೇಲೆ ಕಟ್ಟಡದ ಅಡಿಪಾಯವನ್ನು ಹಾಕಿದ ಹಾಗೆ. ನಾವು ನಮ್ಮ ಭರವಸೆಯನ್ನು ದೇವರ ವಾಗ್ದಾನದ ಮೇಲೆ ಇಡಬೇಕು ಮತ್ತು ಇದು ಬಂಡೆಯ ಮೇಲೆ ಕಟ್ಟಡದ ಅಡಿಪಾಯವನ್ನು ಹಾಕಿದ ಹಾಗೆ ಇರುವುದು.

  ನೀವು ದೇವರ ಮಗುವಾದ ಸಂಗತಿಯನ್ನು ಕುರಿತು ಭರವಸೆಯಿಂದ ಇರುವಾಗ, ಈ ಸಂಗತಿಯನ್ನು ಇತರರಿಗೆ ತಿಳಿಸಬೇಕು.

  ನೀವು ಹೃದಯದಲ್ಲಿ ನಂಬಿರುವುದನ್ನು, ನಿಮ್ಮ ಬಾಯಿಯಿಂದ ಅರಿಕೆ ಮಾಡಬೇಕು ಎಂದು ಸತ್ಯವೇದವು ಹೇಳುತ್ತದೆ. ಆದ್ದರಿಂದ ನೀವು ಬಾಯಿಯಿಂದ ಯೇಸು ಕ್ರಿಸ್ತನು ನಿಮ್ಮ ಕರ್ತನು ಮತ್ತು ರಕ್ಷಕನೆಂದು ಅರಿಕೆಮಾಡಬೇಕು. ನೀವು ನಿಮ್ಮ ಹಿತೈಶಿಗಳಿಗೂ ಮತ್ತು ಸ್ನೇಹಿತರಿಗೂ ಕ್ರಿಸ್ತನು ನಿಮ್ಮ ಪಾಪವನ್ನು ಕ್ಷಮಿಸಿದ್ದಾನೆಂತಲೂ ಮತ್ತು ಆತನು ಈಗ ನಿಮ್ಮ ಜೀವಿತದ ಒಡೆಯನೆಂತಲೂ ತಿಳಿಸಬೇಕು.

  ನೀವು ಕ್ರಿಸ್ತನೊಂದಿಗಿರುವ ನಿಮ್ಮ ಸಂಬಂಧವನ್ನು ದೀಕ್ಷೆಯನ್ನು ತೆಗೆದುಕೊಳ್ಳವ ಮುಖಾಂತರ ಅರಿಕೆ ಮಾಡಬೇಕು. ನೀವು ಹೃದಯವನ್ನು ಮತ್ತು ಜೀವಿತವನ್ನು ಕ್ರಿಸ್ತನಿಗೆ ಕೊಡಲು ನಿರ್ಧಾರ ಮಾಡಿದ ನಂತರ, ಶೀಫ್ರದಲ್ಲೇ ನೀವು ದೀಕ್ಷೆ ತೆಗೆದುಕೊಳ್ಳಬೇಕು. ದೀಕ್ಷೆಯು ಧಾರ್ಮಿಕವಾದ ಆಚಾರವಲ್ಲ. ಅದು ದೇವರಿಗೆ, ದೇವದೂತರಿಗೆ, ಸೈತಾನನಿಗೆ ಮತ್ತು ಜನರಿಗೆ ನೀವು ಇನ್ನು ಕ್ರಿಸ್ತನಿಗೆ ಸೇರಿದವನೆಂದುಕೊಡುವಂತಹ ಸಾಕ್ಷಿಯು.

  ದೀಕ್ಷೆಯು, ಇನ್ನೊಬ್ಬ ಕ್ರ್ಯೆಸ್ತನು ನಿಮ್ಮನ್ನು ಸಂಪೂರ್ಣವಾಗಿ ನೀರಿನಲ್ಲಿ (ತೊಟ್ಟಿಯಲ್ಲಿರುವ ನೀರು ಅಥವಾ ನದಿಯಲ್ಲಿ) ತಂದೆಯ, ಮಗನ ಮತ್ತು ಪವಿತ್ರಾತ್ಮನಾದ ದೇವರ ಹೆಸರಿನಲ್ಲಿ ಮುಳುಗಿಸಿ, ನಂತರ ನಿಮ್ಮನ್ನು ನೀರಿನಿಂದ ಮೇಲಕ್ಕೆತ್ತುತ್ತಾನೆ. ಈ ಸರಳವಾದ ಕಾರ್ಯದಲ್ಲಿ ಹಳೆಯ ವ್ಯಕ್ತಿಯಾಗಿದ್ದ ನೀವು ಸತ್ತಿರಿ ಎಂದು, ನಿಮ್ಮನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸುವುದು ನಿಮ್ಮ ಹೂಣುವಿಕೆಯನ್ನು ಸೂಚಿಸುತ್ತದೆ. ನೀರಿನಿಂದ ಹೊರಗೆ ಬರುವುದು, ನೀವು ಈಗ ಹೊಸದಾದ ವ್ಯಕ್ತಿಯಾದಿರೆಂದು ಒಪ್ಪಿಕೊಳ್ಳುವುದು (ಆತ್ಮಿಕ ರೀತಿಯಲ್ಲಿ ಹೇಳುವುದಾದರೆ, ಸತ್ತವರೊಳಗಿನಿಂದ ಎಬ್ಬಿಸಲ್ಪಟ್ಟವರು), ಮತ್ತು ದೇವರನ್ನು ಮಾತ್ರ ಮೆಚ್ಚಿಸಲು ಯತ್ನಿಸುವುದು. ನೀವು ಇನ್ನೂ ಪರಿಪೂರ್ಣರಾಗಿಲ್ಲ. ನೀವು ಸಂಪೂರ್ಣವಾಗಿ ಪರಿಪೂರ್ಣರಾಗಲು, ನಿಮ್ಮ ಜೀವಿತವೆಲ್ಲಾ ಸಾಲದು. ಆದರೆ ನಿಮ್ಮ ಜೀವಿತದ ದಿಕ್ಕನ್ನು ಬದಲಾಯಿಸಿದ್ದೀರಿ. ಈಗ, ನೀವು ಪಾಪ ಮಾಡಲು ಇಷ್ಟಪಡುವುದಿಲ್ಲ ಅಥವಾ, ದೇವರನ್ನು ನೋಯಿಸುವುದಿಲ್ಲ.

  ನೀವು ಈಗ ಸ್ವರ್ಗದ ನಾಗರೀಕರಾದಿರಿ, ಮತ್ತು ದೇವರ ಮಗುವಾದಿರಿ.

  ಅಧ್ಯಾಯ 7
  ರಕ್ಷಣೆಯ ಬಗ್ಗೆ ನಿಜ ಸತ್ಯ

  ’ಯೇಸು’ ಎಂಬ ಪದದ ಅರ್ಥ ’ರಕ್ಷಕ’. ಆತನು ಆ ಹೆಸರಿನಿಂದಲೇ ಭೂಮಿಗೆ ಬಂದನು ಏಕೆಂದರೆ ಅದನ್ನೇ ಆತನು ಮಾಡುವುದಕ್ಕೆ ಬಂದನು, ಅಂದರೆ ಜನರನ್ನು ಅವರ ಪಾಪದಿಂದ ಬಿಡಿಸುವುದಕ್ಕೋಸ್ಕರ.

  ರಕ್ಷಣಿಯು ಕ್ಷಮಾಪಣೆಗಿಂತಲೂ ಹೆಚ್ಚಿನದು.

  ನಾನು ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಲು ಒಂದು ದೃಷ್ಟಾಂತವನ್ನು ತಿಳಿಸುತ್ತೇನೆ.

  ನಮ್ಮ ಮನಯ ಹೊರಗಿರುವ ರಸ್ತೆಯು ರೀಪೇರಿಯಲ್ಲಿದೆ, ಮತ್ತು ಆ ರಸ್ತೆಯಲ್ಲಿ ಒಂದು ದೊಡ್ಡ ಹೊಂಡ ಇದೆ ಎಂದು ಭಾವಿಸುವ. ನನ್ನ ಚಿಕ್ಕ ಮಗನಿಗೆ ಈ ರೀತಿಯಾಗಿ ನಾನು ಎಚ್ಚರ ನೀಡುತ್ತೇನೆ, ’ಆ ಹೊಂಡದ ಹತ್ತಿರ ಹೋಗಬೇಡ, ಅದರಲ್ಲಿ ನೀನು ಬಿದ್ದರೂ ಬೀಳಬಹುದು’ ಎಂಬುದಾಗಿ. ಅವನು ನನ್ನ ಅಜ್ಞೆಯನ್ನು ತಿರಸ್ಕರಿಸಿ, ಆ ಹೊಂಡವನ್ನು ನೋಡಲು ಹೋಗಿ ಕಾಲು ಜಾರಿ, ಹೊಂಡದೊಳಕ್ಕೆ ಬಿದ್ದನೆಂದು ಬಾವಿಸುವ. ಆ 10 ಅಡಿಯ ಹೊಂಡದೊಳಗಿನಿಂದ ಅವನು ನನ್ನನ್ನು ಕೂಗುತ್ತಿರಲು, ನಾನು ಅಲ್ಲಿಗೆ ಹೋದಾಗ ಆತನು ತನ್ನ ತಪ್ಪಿಗೆ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದಕ್ಕೆ ಕ್ಷಮಾಪಣಿಯನ್ನು ಕೇಳಿದಾಗ, ನಾನು ಅವನನ್ನು ಕ್ಷಮಿಸಿ, ಹೋಗಿ ಬರುತ್ತೇನೆಂದು ಹೇಳಿದರೆ, ನಾನು ಅವನಿಗೆ ಏನು ಮಾಡಿದೆ. ನಾನು ಅವನನ್ನು ಕ್ಷಮಿಸಿದೆನು ನಿಜ, ಆದರೆ ಅವನನ್ನು ರಕ್ಷಿಸಲಿಲ್ಲ. ರಕ್ಷಿಸುವುದು ಕ್ಷಮಿಸುವುದಕ್ಕಿಂತ ಹೆಚ್ಚಿನದಾಗಿದೆ.

  ಅವನನ್ನು ಬಿದ್ದಿರುವ ಹೊಂಡದಿಂದ ಹೊರಗೆ ತರುವುದನ್ನು ಒಳಗೊಂಡಿದೆ. ಇದನ್ನೇ ಯೇಸು ಮಾಡಲಿಕ್ಕೆ ಬಂದಿದ್ದು. ಆತನು ನಮ್ಮ ಪಾಪವನ್ನು ಕ್ಷಮಿಸುವುದಷ್ಟೆ ಸಾಕಾಗುವುದಿಲ್ಲ. ಆತನು ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸುವುದಕ್ಕೆ ಬಂದನು.

  ನಾವೆಲ್ಲರೂ ನಮ್ಮ ಮನಸ್ಸಾಕ್ಷಿಯನ್ನು ಪದೇ ಪದೇ ದಿಕ್ಕರಿಸುವ ಮೂಲಕ ಬಹು ಆಳವಾದ ಪಾಪದ ಹೊಂಡದಲ್ಲಿ ಬಿದ್ದಿದ್ದೇವೆ. ದೇವರು ನಮ್ಮನ್ನು ಕ್ಷಮಿಸುವುದಾದರೆ, ಆ ವಿಷಯವೇ ಒಂದು ಒಳ್ಳೆಯ ಸಂಗತಿಯಾಗಿದೆ. ಆದರೆ ಕ್ರಿಸ್ತನ ಒಂದು ಒಳ್ಳೆಯ ಶುಭ ಸಂದೇಶವು ನಮ್ಮನ್ನು ಕ್ಷಮಿಸುವುದಷ್ಟೆ ಅಲ್ಲ, ನಮ್ಮನ್ನು ಪಾಪದ ಶಕ್ತಿಯಿಂದ ಬಿಡಿಸುವುದು ಸಹ ಆಗಿದೆ.

  ರಕ್ಷಣೆಯನ್ನು ನಾವು ಮೂರು ಕಾಲಗಳಲ್ಲಿ ಅನುಭವಿಸಬೇಕು ಭೂತ, ವರ್ತಮಾನ ಮತ್ತು ಭವಿಷ್ಯದಲ್ಲೂ. ನಾವು ಮೊದಲು ಪಾಪದ ದಂಡನೆಯಿಂದ ರಕ್ಷಿಸಲ್ಪಡಬೇಕು. ನಂತರ ನಾವು ಪಾಪದ ಶಕ್ತಿಯಿಂದ ರಕ್ಷಿಸಲ್ಪಡಬೇಕು. ಕಡೆಯದಾಗಿ ನಾವು ಪಾಪದ ಸನ್ನಿಧಿಯಿಂದಲೇ, ನಾವು ಸ್ವರ್ಗಕ್ಕೆ ಹೋದಾಗ ರಕ್ಷಿಸಲ್ಪಡುತ್ತೇವೆ.

  ರಕ್ಷಣೆಯ ಮೊದಲ ಭಾಗವು ನಮ್ಮ ಪಾಪಗಳು ಕ್ಷಮಿಸುವುದರ ಕುರಿತಾಗಿ ಆಗಿದೆ ಹಿಂದಿನ ಅಪರಾಧವು ತೆಗೆಯಲ್ಪಡಬೇಕು.

  ಇಷ್ಟು ಮಾತ್ರ ಸಾಕಾಗುವುದಿಲ್ಲ. ನಮ್ಮ ಭವಿಷ್ಯದಲ್ಲಿ ನ್ಯಾಯವಾಗಿ ಜೀವಿಸಲು ದೇವರಿಂದ ಸಹಾಯವು ಅವಶ್ಯವು, ಮತ್ತು ದೇವರು ಇದಕ್ಕಾಗಿ ತನ್ನ ಶಕ್ತಿಯನ್ನು ದಯಪಾಲಿಸುತ್ತಾನೆ.

  ಮಾನಸಿಕರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾದವರ ಬಗ್ಗೆ ನಾನು ಕೇಳಿದ ಕಥೆಯನ್ನು ಹೇಳುತ್ತೇನೆ. ರೋಗಿಗಳು ಪೂರ್ಣವಾಗಿ ಗುಣವಾದರೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಒಂದು ಪರೀಕ್ಷೆಯನ್ನು ಉಪಯೋಗಿಸುತ್ತಿದ್ದರು. ಒಂದು ನಲ್ಲಿಯಿಂದ ನೀರು ಬರುತ್ತಿರುವ ಕೊಠಡಿಯೊಳಗೆ ಒಬ್ಬನನ್ನು ಬಿಟ್ಟು ಅವನಿಗೆ ಒಂದು ಬಕೆಟನ್ನು ಮತ್ತು ನೆಲ ಒರೆಸಲು ಬಟ್ಟೆಯನ್ನು ನೀಡಿ, ನೆಲವನ್ನು ಒರಸಿ ಒಣಗಿಸಲು ಹೇಳುತ್ತಿದ್ದರು. ಒಂದು ವೇಳೆ ಆತನು ಮೊದಲು, ನಲ್ಲಿಯನ್ನು ನಿಲ್ಲಿಸದೆ ನೆಲ ಒರೆಸಲು ಹೋಗುತ್ತಿದ್ದರೆ. ಆತನು ಸಂಪೂರ್ಣವಾಗಿ ಗುಣ ಹೊಂದಿಲ್ಲವೆಂದು ತಿಳಿದು ಕೊಳ್ಳುತ್ತಿದ್ದರು.

  ಇದು ನಮ್ಮ ಸಮಸ್ಯೆಯೂ ಸಹ ಆಗಿದೆ. ನಮ್ಮ ಹೃದಯದಲ್ಲಿ ಪಾಪವು ಸದಾ ಹರಿಯುವ ಒಂದು ನಲ್ಲಿಯುಂಟು. ಯೇಸು ಬರೀ ನಾವು ಮಾಡಿದ ನಮ್ಮ ಪಾಪಗಳನ್ನು ನೀಗಿಸುವುದು ಮಾತ್ರವಲ್ಲ, ಆ ನಲ್ಲಿಯನ್ನು ನಿಲ್ಲಿಸಲೂ ಶಕ್ತಿಯನ್ನು ನೀಡುತ್ತಾನೆ. ಇಲ್ಲದೆ ಹೋದರೆ ಆ ಶುಭ ಸಂದೇಶವು ಶುಭಸಂದೇಶವಲ್ಲ.

  ಆ ಸುವಾರ್ತೆಯು ’ರಕ್ಷಣೆಗೆ ಅದು ದೇವರ ಶಕ್ತಿಯು’ (ರೋಮಾ. ಅಧ್ಯಾಯ 1 ವಚನ 16) ಎಂದು ಸತ್ಯವೇದದಲ್ಲಿ ಹೇಳಲ್ಪಟ್ಟಿದೆ.

  ದೇವರ ವಾಕ್ಯವೇ ಶಕ್ತಿಗೆ ಪ್ರಥಮ ಮೂಲವು. ಸತ್ಯವೇದವೇ ಶೋಧನೆಯನ್ನು ಜಯಿಸಲು ಒಂದು ಬಲಶಾಲಿ ಅಸ್ತ್ರವು. ನಾವು ಯೇಸುವು ದೇವರ ವಾಕ್ಯದ ಮುಖಾಂತರ ಸೈತಾನನ ಶೋಧನೆಯನ್ನು ಯಾವ ರೀತಿಯಲ್ಲಿ ಜಯಿಸಿದನು ಎಂಬುದನ್ನು ದೇವರ ವಾಕ್ಯದಲ್ಲಿ ಓದುತ್ತೇವೆ (ಮತ್ತಾಯ ಅಧ್ಯಾಯ 4 ವಚನ 1 ರಿಂದ 11 ವರೆಗೆ. ) ಇದರಿಂದಾಗಿ ನಾವು ಸಹ ದೇವರ ವಾಕ್ಯವನ್ನು ಅನುದಿನವು ಓದುವಂತಹ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ಇದು ದೇವರು ನಮ್ಮ ಕೂಡ ಮಾತಾನಾಡಲು ಮತ್ತು ಅನುದಿನದ ಹೋರಾಟವನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ.

  ಸತ್ಯವೇದವು ಯೌವನಸ್ಥರಿಗೆ ಹೇಳುತ್ತದೆ, ’ದೇವರ ವಾಕ್ಯವು ನಿಮ್ಮ ಹೃದಯದಲ್ಲಿ ಇರುವುದರಿಂದ, ನೀವು ಶಕ್ತಿವಂತರಾಗಿದ್ದು ಮತ್ತು ಸೈತಾನನ ಮೇಲಿನ ಹೋರಾಟವನ್ನು ನೀವು ಜಯಿಸಿದ್ದೀರಿ’ (1 ಯೋಹಾನ ಅಧ್ಯಾಯ 2 ವಚನ 14).

  ನಮ್ಮಲ್ಲಿ ವಾಸಮಾಡಲಿಕ್ಕೆ ಬರುವ ಪವಿತ್ರಾತ್ಮನೇ ನಮ್ಮ ಶಕ್ತಿಗೆ ಎರಡನೆಯ ಮೂಲವು. ಅನುದಿನವು ನಮ್ಮ ಕೂಡ ಮಾತನಾಡಲೂ, ಮತ್ತು ಜೀವಿತದ ಕಷ್ಟವನ್ನು ಎದುರಿಸಿ ನಿಲ್ಲುವುದಕ್ಕೆ ಬಲವನ್ನು ನೀಡಲು ಮತ್ತು ಯೇಸುವಿನ ಹೆಜ್ಞೆಜಾಡಿನಲ್ಲಿ ನಡೆಯುವಂತಹ ಶಿಷ್ಯರಾಗಿ ನಡೆಯುವುದಕ್ಕೆ ನಮ್ಮನ್ನು ಸಹಾಯಿಸಲು ಆತನು ಶಾಶ್ವತವಾಗಿ ನಮ್ಮೊಳಗೆ ವಾಸಮಾಡಲು ಅಪೇಕ್ಷಿಸುತ್ತಾನೆ. ನಾವು ದೇವರನ್ನು ಯಾವಾಗಲೂ ಪವಿತ್ರಾತ್ಮಭರಿತನಾಗರಿಸು ಎಂದು ಕೇಳಿಕೊಳ್ಳಬೇಕು.

  ಯೇಸುಕ್ರಿಸ್ತನು ಹೇಳಿದ್ದು ; ’ಹಾಗಾದರೆ ಕೆಟ್ಟವರಾದ ನೀವು ನಮ್ಮ ಮಕ್ಕಳಿಗೆ ಒಳ್ಳೆ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳವವರಿಗೆ ಎಷ್ಟೋ ಕೊಡುವನಲ್ಲವೇ? (ಲೂಕ ಅಧ್ಯಾಯ 11 ವಚನ 13) .

  ನಮ್ಮ ಹಾಗೆ ಇರುವ ಇತರ ವಿಶ್ವಾಸಿಗಳ ಅನ್ಯೋನ್ಯತೆಯೆ ನಮ್ಮ ಶಕ್ತಿಗೆ ಮೂರನೆಯ ಮೂಲವು. ಅನೇಕ ಕೆಂಡಗಳು ಬೆಂಕಿಯಲ್ಲಿ ಒಟ್ಟಾಗಿರುವಾಗ, ಎಲ್ಲವೂ ಉಜ್ವಲವಾಗಿ ಉರಿಯುವವು. ಆದರೆ ಒಂದು ಚೆನ್ನಾಗಿ ಉರಿಯುತ್ತಿರುವ ಕೆಂಡವನ್ನು ಹೊರಗೆ ತೆಗೆದಾಗ, ಅದು ಬೇಗನೇ ಆರಿ ಹೋಗುತ್ತದೆ. ನಾವು ದೇವರಿಗಾಗಿ, ಇತರರ ಅನ್ಯೋನ್ಯತೆಯಿಲ್ಲದೆ ಜೀವಿಸುವಾಗ ನಮ್ಮ ಸಂಗತಿಯು ಕೂಡ ಇದೇ.

  ಆದರೆ ನಾವು ಇಲ್ಲಿ ಜಾಗರೂಕರಾಗಿರಬೇಕು. ’ಕ್ರೈಸ್ತ’ ರೆನಿಸಿಕೊಳ್ಳುವವರೆಲ್ಲಾ ನಿಜವಾದ ಕ್ರೈಸ್ತರಲ್ಲ. ಶೇಕಡ 90 ಭಾಗ ಕ್ರೈಸ್ತರೆಂದು ಹೇಳಿಕೊಳ್ಳವವರೆಲ್ಲಾ ದೇವರ ಮಕ್ಕಳಲ್ಲ. (ಅವರು ಯಾವುದೇ ಗುಂಪಿಗೆ ಅಥವಾ ಪಂಗಡಕ್ಕೆ ಸೇರಿರಲಿ.) ಅವರು ವೈಯುಕ್ತಿಕವಾಗಿ ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಜೀವಿತದ ರಕ್ಷಕನನ್ನಾಗಿ ಸ್ವೀಕರಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಡುವುದಕ್ಕೆ ನಿರ್ಣಯವನ್ನು ತೆಗೆದುಕೊಂಡಿರುವುದಿಲ್ಲ. ಅವರು ತಾವು ಆಕಸ್ಮಿಕವಾಗಿ ಕ್ರೈಸ್ತರಾಗಿದ್ದೇವೆಂದು ಅಂದರೆ ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದರಿಂದ ತಾವು ಕ್ರೈಸ್ತರೆಂದು ನೆನೆಸುತ್ತಾರೆ. ನಾವು ಅಂತಹ ನಾಮಧೇಯ ಕ್ರೈಸ್ತರಿಂದ ದೂರವಿರಬೇಕು ಹಾಗು ಕ್ರಿಸ್ತನನ್ನು ಹಿಂಬಾಲಿಸುವವರು, ಅನುಭವಪೂರ್ವಕವಾಗಿ ಕ್ರಿಸ್ತನನ್ನು ಕಂಡುಕೊಂಡವರ ಸಂಗಡ ಅನ್ಯೋನ್ಯತೆಯನ್ನು ಬಯಸಬೇಕು.

  ನಾವು ಕ್ರಿಸ್ತನನ್ನು ನಮ್ಮ ರಕ್ಷಕನನ್ನಾಗಿ ಮತ್ತು ಒಡೆಯನನ್ನಾಗಿ ಸ್ವೀಕರಿಸಿದಾಗ, ಸತ್ಯವೇದವು ನಾವು ದೇವರ ಮಕ್ಕಳಾಗಿರುವುದರಿಂದ, ಮೇಲಿನಿಂದ ಹುಟ್ಟಿದವರಾಗಿದ್ದೇವೆಂದು ತಿಳಿಸುತ್ತದೆ. ದೇವರು ನಮ್ಮ ತಂದೆಯು. ನಮ್ಮ ಇಹ ಲೋಕದ ತಂದೆಗಳ ಹಾಗೆಯೆ, ದೇವರು ನಾವು ಭೂಮಿಯಲ್ಲಿ ಜೀವಿಸಲಿಕ್ಕೆ ಬೇಕಾದ ವಸ್ತುಗಳನ್ನೆಲ್ಲಾ ನೀಡುವವನಾಗಿರುತ್ತಾನೆ ದೇಹಕ್ಕೆ ಮತ್ತು ಆತ್ಮಕ್ಕೆ ಕೂಡ.

  ಕರ್ತನಾದ ಯೇಸು ಕ್ರಿಸ್ತನು, ನಾವು ದೇವರ ವಿಷಯಗಳನ್ನು ನಮ್ಮ ಜೀವಿತದಲ್ಲಿ ಮೊದಲು ಹುಡುಕುವುದಾದರೆ, ನಮ್ಮ ಭೂಲೋಕದ ಜೀವಿತಕ್ಕೆ ಬೇಕಾದ ಎಲ್ಲ ಅವಶ್ಯಕ ವಸ್ತುಗಳನ್ನೆಲ್ಲಾಕೊಡುವವನಾಗಿರುತ್ತಾನೆ, ಎಂದು ಹೇಳಿದನು.

  ಯೇಸು ಹೇಳಿದ್ದು, ’ನಿಮಗೆ ಬೇಕಾಗಿರುವುದೆಲ್ಲಾ ನಿಮ್ಮ ಪರಲೋಕದಲ್ಲಿರುವ ತಂದೆಗೆ ಚೆನ್ನಾಗಿ ತಿಳಿದಿರುವುದರಿಂದ, ನೀವು ನಿಮ್ಮ ಜೀವಿತದಲ್ಲಿ ಆತನಿಗೆ ಪ್ರಥಮ ಸ್ಥಾನವನ್ನು ಕೊಟ್ಟು, ಆತನು ಬಯಸುವ ರೀತಿಯಲ್ಲಿ ಜೀವಿಸುವುದಾದರೆ ಆತನು ಇವುಗಳನ್ನೆಲ್ಲಾ ನಿಮಗೆ ಕೊಡುವನು’ (ಮತ್ತಾಯ ಅಧ್ಯಾಯ 6 ವಚನ 33).

  ದೇವರ ಮಕ್ಕಳಿಗೆ ಇರುವ ಒಂದು ಸೌಭಾಗ್ಯವೇನೆಂದರೆ ಪ್ರಾರ್ಥನೆಯು, ಸರ್ವಶಕ್ತನಾದ ದೇವರ ಕೂಡ ಮಾತನಾಡುವುದು. ಮತ್ತು ದೇವರು ನಮ್ಮ ಆತ್ಮದ ಕೂಡ ಮಾತನಾಡುವುದು. ದೇವರು ನಮ್ಮ ಕಿವಿಗಳು ಕೇಳಿಸಿಕೊಳ್ಳುವ ಧ್ವನಿಯಲ್ಲಿ ಮಾತನಾಡುವುದಿಲ್ಲ. ಆದರೆ ನಮ್ಮ ಆತ್ಮವು ತಿಳಿದುಕೊಳ್ಳುವ ಮತ್ತು ಕೇಳಿಸಿಕೊಳ್ಳುವ ರೀತಿಯಲ್ಲಿ ಮಾತನಾಡುತ್ತಾನೆ. ಯೇಸು ನಮ್ಮ ಹೃದಯದ ಎಲ್ಲಾ ಭಾರವನ್ನು ದೇವರಿಗೆ ತಿಳಿಸಲು ಹೇಳಿದ್ದಾನೆ.

  ಅನೇಕ ಜನರು ಅವರ ನೋವನ್ನು ಹಂಚಿಕೊಳ್ಳಲು ಯಾರೂ ಇರದೆ ಇರುವುದರಿಂದ, ಮೌನವಾಗಿ ನರಳುತ್ತಾರೆ. ಆದರೆ ದೇವರ ಮಕ್ಕಳಿಗೆ ಎಲ್ಲ ವಿಷಯವನ್ನು ಹಂಚಿಕೊಳ್ಳಲು ಸ್ವರ್ಗದ ಒಬ್ಬ ತಂದೆಯುಂಟು. ಆತನು ತನ್ನ ಈ ಲೋಕದ ಜೀವಿತಕ್ಕೆ ಬೇಕಾದ ಎಲ್ಲ ಸಂಗತಿಗಳಿಗಾಗಿ ಪರಲೋಕದ ತಂದೆಯಲ್ಲಿ ನಂಬಿಕೆ ಇಡಬಹುದು.

  ನಾವು ದೇವರನ್ನು ಅನೇಕ ಸಂಗತಿಗಳನ್ನು ಬದಲಾಯಿಸು ಎಂದು ಕೇಳಿಕೊಳ್ಳುವುದರಿಂದ ಬದಲಾಯಿಸಬಹುದು ಎಂದು ಯೇಸು ಕ್ರಿಸ್ತನು ಬೋಧಿಸಿದನು. ಇದೇ ಪ್ರಾರ್ಥನೆಯ ಅದ್ಬುತವು. ನಾವು ನಮಗೆ ನಡೆಯುವ ಎಲ್ಲಾ ಸಂಗತಿಗಳು ನಮ್ಮನ್ನಾಗಲಿ ಅಥವಾ ನಮ್ಮ ಕುಟುಂಬದವರನ್ನಾಗಲಿ ತೊಂದರೆ ಮಾಡುತ್ತಿದ್ದರೆ. ಅಂತಹ ಸಂಗತಿಗಳನ್ನು ದೈವಯೋಗ ಎಂದು ಹೇಳಬಾರದು. ದೈವಯೋಗವೆಂಬುದು, ದೇವರ ಚಿತ್ತಕ್ಕೆ ಒಳಪಡುವುದಕ್ಕಿಂತ ಬೇರೆಯಾದದ್ದು. ನಮಗೆ ಏನು ಅವಶ್ಯವಾಗಿದೆಯೋ ಅದನ್ನು ಬೇಡಿಕೊಳ್ಳಲು ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ.

  ಸತ್ಯವೇದದ ಒಂದು ವಾಗ್ದಾನವು, ’ದೇವರು ನಿಮ್ಮ ಎಲ್ಲಾ ಅವಶ್ಯಕತೆಯನ್ನು ಒದಗಿಸುವನು’ (ಫಿಲಿಪ್ಪಿಯವರಿಗೆ ಅಧ್ಯಾಯ 4 ವಚನ 19)

  ಆದರೆ ಎಲ್ಲಾ ಬುದ್ದಿವಂತ ತಂದೆಗಳ ಹಾಗೆಯೆ, ದೇವರು ನಾವು ಬೇಡಿಕೊಂಡ ಅಥವಾ ನಮಗೆ ಬೇಕಾದ ವಸ್ತುಗಳನ್ನೆಲ್ಲಾ ನೀಡುವುದಿಲ್ಲ. ನಮಗೆ ಯಾವುದು ಅವಶ್ಯವೋ ಅದನ್ನು ಮಾತ್ರವೇ ನೀಡುತ್ತಾನೆ. ಇದರ ಮೂಲಕ ನಮ್ಮ ಒಳ್ಳೆಯದನ್ನು ಆತನು ನೀಡುತ್ತಾನೆ. ದೇವರು ಒಳ್ಳೆಯ ದೇವರು. ಮತ್ತು ಆತನು ತನ್ನ ಮಕ್ಕಳಿಗೆ ಎಂದೂ ಕೇಡು ಉಂಟಾಗುವುದನ್ನು ಬಯಸುವುದಿಲ್ಲ. ಆದ್ದರಿಂದ, ನಾವು ಆತನ ಬಳಿಗೆ ಧೈರ್ಯವಾಗಿ ಹೋಗಿ, "ಎಲ್ಲಾ ಕೆಟ್ಟತನದಿಂದ ಬಿಡಿಸು" ಎಂದು ಬೇಡಿಕೊಳ್ಳೋಣ.

  ಲೋಕದಲ್ಲಿ ಅನೇಕ ಜನರು ಇತರರು ಅವರ ಮೇಲೆ ಮಾಡಿದ ಮಾಟ ಮಂತ್ರದಿಂದ ಬಾಧೆಯನ್ನು ಅನುಭವಿಸುತ್ತಿದ್ದಾರೆ. ನೀವು ಕ್ರಿಸ್ತನಿಗೆ ನಿಮ್ಮ ಹೃದಯವನ್ನು ಮತ್ತು ಜೀವಿತವನ್ನು ಕೊಟ್ಟಿರುವುದಾದರೆ, ಸೈತಾನನ ಕಾರ್ಯಗಳು, ಇನ್ನು ಮುಂದೆ ನಿಮ್ಮನ್ನು ತೊಂದರೆ ಪಡಿಸಲಾರವು. ನೀವು ಕರ್ತನಾದ ಯೇಸುವಿನ ಹೆಸರನ್ನು ಹೇಳಿ ಸೈತಾನನನ್ನು ಓಡಿಸಬಹುದು. ಯಾವುದೇ ಮಾಟ ಮಂತ್ರಗಳು ನಿಮ್ಮನ್ನು ಅಥವಾ ನಿಮ್ಮ ಮಕ್ಕಳನ್ನಾಗಲಿ ಹಿಂಸಿಸಲಿಕ್ಕೆ ಅಥವಾ ಮುಟ್ಟಲಿಕ್ಕೆ ಸಹ ಆಗುವುದಿಲ್ಲ. ನಿಮ್ಮ ಮೇಲೆ ಪ್ರಯೋಗಿಸಿರುವ ಯಾವುದಾದರೂ ಮಾಟ ಮಂತ್ರವಿದ್ದರೆ, ಕರ್ತನಾದ ಯೇಸು ಕ್ರಿಸ್ತನ ಹೆಸರನ್ನು ಕೂಗಿ ರಕ್ಷಿಸು ಎಂದು ಬೇಡಿಕೊಳ್ಳುವ ಮುಖಾಂತರ ಕೂಡಲೇ ಬೆಡುಗಡೆಯನ್ನು ಹೊಂದಬಹುದು.

  ಸತ್ಯವೇದವು ಯೇಸು ಕ್ರಿಸ್ತನು ಶಿಲುಬೆಯಲ್ಲಿ ಸತ್ತಾಗ, ಸೈತಾನನನ್ನು ಸೋಲಿಸಿದನು ಮತ್ತು ಅವನ ಶಕ್ತಿಯನ್ನು ನಾಶಮಾಡಿದನು ಎಂದು ಹೇಳುತ್ತದೆ. ಇದು ನಡೆದು ಹೋದ ಸಂಗತಿ. ಇಲ್ಲಿಯೂ ಸಹ ಪಾಪದ ಕ್ಷಮಾಪಣೆಯ ವಿಷಯದ ಹಾಗೆಯೇ ನಾವು ಒಪ್ಪಿಕೊಳ್ಳುವ ತನಕ ಸೈತಾನನ ಸೋಲು ನಮ್ಮ ಜೀವಿತದಲ್ಲಿ ನಿಜ ರೂಪಕ್ಕೆ ಬರುವುದಿಲ್ಲ.

  'ತನ್ನ (ಯೇಸು) ಮರಣದಿಂದಲೇ, ಸೈತಾನನ ಶಕ್ತಿಯನ್ನು ಮುರಿದನು. ಇದರ ಮೂಲಕವಾಗಿಯೆ ಮರಣ ಭಯದ ದೆಸೆಯಿಂದ ತಮ್ಮ ಜೀವಮಾನವೆಲ್ಲ ದಾಸತ್ವ ಸೈತಾನನ ಭಯದೊಳಗಿದ್ದವರನ್ನು ಬಿಡಿಸಿದನು. (ಇಬ್ರಿಯರಿಗೆ ಅಧ್ಯಾಯ 2 ವಚನ 14 ಮತ್ತು 15).

  'ದೇವರಿಗೆ ಒಳಗಾಗಿರಿ ಮತ್ತು ಸೈತಾನನ್ನು ಎದುರಿಸಿರಿ, ಅವನು ನಿಮ್ಮನು ಬಿಟ್ಟು ಓಡಿಹೋಗುವನು' (ಯಾಕೋಬನು ಅಧ್ಯಾಯ 4 ವಚನ 7).

  ನಾವು ದೇವರ ಮಕ್ಕಳಾದ ನಂತರ ದೇವರು ನಮ್ಮನ್ನು ಶೋಧಿಸಲು ಸೈತಾನನನ್ನು ಅನುಮತಿಸುತ್ತಾನೆ. ಇದರಿಂದಾಗಿಯೇ ನಾವು ಬಲಶಾಲಿಗಳಾಗಲು ಸಾಧ್ಯ. ನಮಗೆ ಈಗ ನಮ್ಮಲ್ಲಿ ವಾಸಿಸುವ ದೇವರಾತ್ಮನ ಶಕ್ತಿ ಇರುವುದರಿಂದ, ಸೈತಾನನ ಕಾರ್ಯವನ್ನು ಎದುರಿಸಲು ಮತ್ತು ಜಯಿಸಲು ನಮಗೆ ಬಲವಿರುತ್ತದೆ.

  ದೇವರು ತನ್ನ ಮಕ್ಕಳಿಗೆ ಈ ಲೋಕದ ಜೀವಿತವು ಶೋಧನೆಯಿಂದ ಮತ್ತು ತೊಂದರೆಯಿಂದ ಕೂಡಿರುವುದಿಲ್ಲವೆಂದು ವಾಗ್ದಾನ ಮಾಡಿಲ್ಲ. ದೇವರು ಶ್ರೀಮಂತರ ಮಕ್ಕಳು ಹುಟ್ಟಿದಂದಿನಿಂದ ಕೊರತೆಯಿಲ್ಲದೆ ಹಾಳಾಗಿ ಹೋದವರ ಹಾಗೆ ನಾವು ಇರದೆ, ಬಲಿಷ್ಠರಾಗಿಯೂ ಮತ್ತು ಶಕ್ತಿಶಾಲಿಗಳಾಗಿರುವಂತೆ ಬಯಸುತ್ತಾನೆ. ನಮ್ಮನ್ನು ಬಲಿಷ್ಠರನ್ನಾಗಿಸುವುದಕ್ಕಾಗಿ ನಾವು ಶೋಧನೆಯನ್ನು ಮತ್ತು ತೊಂದರೆಯನ್ನು ನಮ್ಮ ಜೀವಿತದಲ್ಲಿ ಇತರರ ಹಾಗೆ ಅನುಭವಿಸಲು ಅವಕಾಶ ಮಾಡಿಕೊಡುತ್ತಾನೆ. ಆದರೆ ಈ ಶೋಧನೆಯಲ್ಲೇ ನಾವು ದೇವರನ್ನು ಇನ್ನೂ ಚೆನ್ನಾಗಿ ಅರಿತುಕೊಳ್ಳುತ್ತೇವೆ. ಪ್ರತಿಯೊಂದು ಪರಿಸ್ಧಿಯಲ್ಲಿಯೂ ನಾವು ಅದ್ಬುತವಾಗಿ ಆತನ ಸಹಾಯವನ್ನು ಅನುಭವಿಸುವುದರ ಮುಖಾಂತರ ಆತನನ್ನು ತಿಳಿಯುತ್ತೇವೆ.

  ಅಧ್ಯಾಯ 8
  ನಿತ್ಯತ್ವದ ಕುರಿತು ನಿಜ ಸತ್ಯ

  ಯಾರು ದೇವರ ಮಕ್ಕಳಾಗುತ್ತಾರೋ ಅವರಿಗೆ ಅಲ್ಪಸಮಯಕ್ಕಿರುವಂತ ಸಂಗತಿಗಳಿಗಿಂತ ನಿತ್ಯತ್ವದ ಸಂಗತಿಗಳು ಬಹು ಬೆಲೆಯುಳ್ಳದ್ದು. ಈ ಲೋಕದ ಮೌಲ್ಯಕ್ಕಿಂತ ಪರಲೋಕದ ಮೌಲ್ಯವು ಅವರಿಗೆ ಬಹು ಮುಖ್ಯವಾಗಿರುತ್ತವೆ.

  ಕರ್ತನಾದ ಯೇಸು ಕ್ರಿಸ್ತನು ಎರಡುಸಾವಿರ ವರ್ಷಗಳ ಹಿಂದೆ ಸತ್ತವರೊಳಗಿಂದ ಎದ್ದು ಪರಲೋಕಕ್ಕೆ ಏರಿ ಹೋದಾಗ, ನಾನು ಪುನಃ ಹಿಂತಿರುಗಿ ಭೂಮಿಗೆ ಬರುತ್ತೇನೆಂದು ತಿಳಿಸಿದನು. ಈ ಸಂಗತಿಯನ್ನು ’ಎರಡನೆಯ ಬರೋಣ’ ವೆಂದು ಹೇಳುತ್ತೇವೆ. ಇದು ಪ್ರಪಂಚದ ಚರಿತ್ರೆಯಲ್ಲಿಯೇ ನಡೆಯಲಿರುವ ಮುಂದಿನ ದೊಡ್ಡ ಘಟನೆ. ದೇವರ ಮಕ್ಕಳು ಯೇಸು ಕ್ರಿಸ್ತನು ಭೂಮಿಗೆ ಹಿಂತಿರುಗಿ ಬಂದಾಗ, ತಾವು ಈ ಲೋಕದಲ್ಲಿ ಜೀವಿಸಿದ್ದರ ಕುರಿತು ಆ ದಿನದಲ್ಲಿ ಸಂಪೂರ್ಣ ಲೆಕ್ಕ ಕೊಡಬೇಕೆಂದು ಅರಿತುಕೊಳ್ಳುತ್ತಾರೆ.

  ಈ ಲೋಕವು ನಾವು ನಿತ್ಯತ್ವದ ಕಡೆಗೆ ಹೋಗುತ್ತಿರುವ ಯಾತ್ರೆಯಲ್ಲಿ ಬಂದು ಹೋಗುವ ಒಂದು ಹಂತ. ನಾವು ಇಲ್ಲಿ ಪರೀಕ್ಷೆಯಲ್ಲಿ ಇದ್ದೇವೆ. ದೇವರು ನಮ್ಮ ಜೀವಿತವನ್ನು ಅನೇಕ ಪರಿಸ್ಥಿತಿಗಳ ಮೂಲಕ ನಾವು ಈ ಲೋಕದ ತಾತ್ಕಾಲಿಕ ವಸ್ತುಗಳನ್ನೋ ಅಥವಾ ಶಾಶ್ವತವಾದ ಪರಲೋಕದ ವಸ್ತುಗಳನ್ನು ಬಯಸುತ್ತೇವೋ ಎಂದು ಪರೀಕ್ಷಿಸುತ್ತಿದ್ದಾನೆ. ನಾವು ಬುದ್ದಿವಂತರಾದರೆ, ನಿತ್ಯತ್ವದ ಸಂಗತಿಗಳನ್ನೇ ಆರಿಸಿಕೊಳ್ಳುತ್ತೇವೆ.

  ಒಂದು ಸಣ್ಣ ಮಗುವು, ಐನೂರು ರೂಪಾಯಿಯನ್ನು ಬಿಟ್ಟುಬಿಟ್ಟು ಹೊಳೆಯುತ್ತಿರುವ ಬಣ್ಣದ ಕಾಗದವನ್ನು, ಆರಿಸಿಕೊಳ್ಳತ್ತದೆ. ಏಕೆಂದರೆ ಅದಕ್ಕೆ ವಸ್ತುಗಳ ಬೆಲೆ ಗೊತ್ತಿರುವುದಿಲ್ಲ. ನಾವು ನಿತ್ಯತ್ವದ ವಸ್ತುಗಳನ್ನು ಬಿಟ್ಟು ಈ ಲೋಕದ ವಸ್ತುಗಳನ್ನು ಆರಿಸಿಕೊಳ್ಳುವಂತಹ ಸಮಯದಲ್ಲಿ ನಾವು ಸಹ ಆ ಚಿಕ್ಕ ಮಗುವಿನ ಹಾಗೆಯೆ ಇರುತ್ತೇವೆ. ದೇವರು ತನ್ನ ಸತ್ಯವೇದದಲ್ಲಿ, ಈ ಲೋಕದ ಮತ್ತು ಇದರ ಸಂಗತಿಗಳು ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾನೆ. ಈ ಲೋಕದ ಸಂಗತಿಗಳಿಗಾಗಿ ಜೀವಿಸುವುದು ದಿವಾಳಿಯಾಗುವ ಬ್ಯಾಂಕಿನಲ್ಲಿ ಹಣ ಹಾಕಿದ ಹಾಗೆ ಇರುವುದು. ಆದರೆ ಬುದ್ದಿವಂತನು ಭಧ್ರವಾಗಿರುವ ಬ್ಯಾಂಕಿನಲ್ಲಿ ತನ್ನ ಹಣವನ್ನು ಹಾಕುತ್ತಾನೆ. ಅದೇ ರೀತಿಯಲ್ಲಿ ನಿತ್ಯತ್ವದ ಸಂಗತಿಗಳು, ನಮ್ಮ ನಡತೆ ಮತ್ತು ಗುಣಕ್ಕೆ ಸಂಬಂಧಿಸಿರುವ ಶುದ್ಥತೆ, ಪ್ರೀತಿ, ಒಳ್ಳೆಯತನ, ದಯೆ, ದೀನತೆ... ಮುಂತಾದವುಗಳಾಗಿರುತ್ತವೆ. ಈ ಸಂಗತಿಗಳನ್ನೇ ನಾವು ಲೋಕವನ್ನು ಬಿಟ್ಟು ಹೋಗುವಾಗ ತೆಗೆದುಕೊಂಡು ಹೋಗುವಂತದ್ಥಾಗಿವೆ. ಜ್ಞಾನಿಗಳು ಇವುಗಳಿಗಾಗಿ ಜೀವಿಸುತ್ತಾರೆ.

  ಸತ್ಯವೇದವು ತಮ್ಮ ಪಾಪಗಳಿಗಾಗಿ ಮಾನಸಾಂತರ ಪಡದೆ ಇರುವವರ ಅಂತ್ಯಸ್ಥಿತಿಯು ಬಹು ಭಯಂಕರವಾಗಿರುವುದು ಎಂದು ತಿಳಿಸುತ್ತದೆ.

  'ಒಂದೇ ಸಾರಿ ಸಾಯುವುದು ಆ ಮೇಲೆ ನ್ಯಾಯತೀರ್ಪೆಂದು ಮನುಷ್ಯರಿಗೆ ನೇಮಕವಾಗಿದೆ' (ಇಬ್ರಿಯರಿಗೆ ಅಧ್ಯಾಯ 9 ವಚನ 27) .

  ಒಬ್ಬ ವ್ಯಕ್ತಿ ಸತ್ತನಂತರ, ಅವನಿಗೆ ಬದಲಾಗಲು ಅವಕಾಶವಿಲ್ಲ. ದೇವರು ಕೂಡ ಈ ಬದಲಾವಣಿಯನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ದೇವರು ಒಬ್ಬ ವ್ಯಕ್ತಿಯನ್ನು ಆತನ ಚಿತ್ತಕ್ಕೆ ವಿರುದ್ದವಾಗಿ ಬದಲಾಯಿಸಲು ಸಾಧ್ಯವಿಲ್ಲ. ನಮ್ಮನ್ನು ಬದಲಾಯಿಸಿಕೊಳ್ಳಲು ನಾವು ಈ ಲೋಕದಲ್ಲೇ ಸಿದ್ದರಾಗಿರುವಾಗ, ದೇವರು ನಮ್ಮನ್ನು ಬದಲಾಯಿಸಲು ಸಾಧ್ಯ.

  ಭವಿಷ್ಯದಲ್ಲಿ ಬರುವ ಒಂದು ದಿನ ಈ ಲೋಕದಲ್ಲಿ ಜೀವಿಸಿದ್ದವರು ಎಲ್ಲರೂ ಎದ್ದು ಬಂದು ತಮ್ಮ ಜೀವಿತದ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸುವರು. ಸತ್ಯವೇದವು ಎರಡು ಪುನರುತ್ಥಾನಗಳ ಕುರಿತು ತಿಳಿಸುತ್ತದೆ. ಅದು, ದೇವರು ತನ್ನ ಅದ್ಬುತ ಶಕ್ತಿಯ ಮೂಲಕ ಸತ್ತು ಮಣ್ಣಾಗಿರುವ ಸತ್ತದೇಹಗಳನ್ನು, ಪುನ ದೇಹವುಳ್ಳವರಾಗಿ ಎಬ್ಬಿಸುವನು.

  ಮೊದಲನೇ ಪುನರುತ್ಥಾನವು ನೀತಿವಂತರಿಗಾಗಿ, ಅಂದರೆ, ಯಾರು ಕ್ರಿಸ್ತನ ಕಡೆಗೆ ತಿರುಗಿ ತಮ್ಮ ಪಪಗಳ ಕ್ಷಮಾಪಣೆಯನ್ನು ಹೊಂದಿರುತ್ತಾರೋ ಮತ್ತು ಈ ಲೋಕದಲ್ಲೆ ದೇವರ ಮಕ್ಕಳಾಗಿರುತ್ತಾರೋ ಅವರಿಗಾಗಿ, ಈ ಪುನರುತ್ಥಾನವು ಇರುವುದು.

  ಎರಡನೆಯ ಪುನರುತ್ಥಾನವು ಯಾರ ಪಾಪಗಳು ಕ್ಷಮಿಸಲ್ಪಡದೆ, ಯಾರು ಕ್ರಿಸ್ತನನ್ನು ರಕ್ಷಕನಾಗಿ ಮತ್ತು ಒಡೆಯನನ್ನಾಗಿ ಅಂಗೀಕರಿಸಿರುವುದಿಲ್ಲವೋ ಅವರಿಗಾಗಿ ಇರುವುದು.

  ಯಾರಾದರೂ ತಮ್ಮ ಪಾಪಗಳಿಗಾಗಿ ಮಾನಸಾಂತರ ಪಡದೆ, ಪಾಪ ಕ್ಷಮಾಪಣಿಗಾಗಿ ಕ್ರಿಸ್ತನನ್ನು ನಂಬದೆ, ಸಾಯುವರೋ ಅವರಿಗೆ, ದೇವರ ನ್ಯಾಯಾಸನದ ಮುಂದೆ ತಮ್ಮ ಸಂಪೂರ್ಣ ಜೀವಿತದ ಕುರಿತಾಗಿ ನ್ಯಾಯತೀರ್ಪಾಗುವುದು. ಆಗ ಅವರು ತಮ್ಮ ಇಡೀ ವಿಶ್ವದ ಮುಂದೆ ಪಾಪಗಳಿಗಾಗಿ ನಿತ್ಯತ್ವಕ್ಕೂ ನ್ಯಾಯತೀರ್ಪನ್ನು ಹೊಂದಲು ಯೋಗ್ಯನೆಂದು ನಿರೂಪಿಸಲ್ಪಡುವುದು. ಅನಂತರ ಅವರು ಬೆಂಕಿಯ ಕೆರೆಗೆ ನಿತ್ಯತ್ವಕ್ಕೂ ಹಾಕಲ್ಪಡುವರು. ಅದು ಎಂದಿಗೂ ಮುಗಿಯದ ಶಿಕ್ಷೆಯು. ಇದೇ ಕ್ರಿಸ್ತನನ್ನು ತಿರಸ್ಕರಿಸುವವರು ಭವಿಷ್ಯದಲ್ಲಿ ನಿತ್ಯತ್ವಕ್ಕೂ ಹೊಂದಬೇಕಾಗಿರುವುದು.

  ವಿಶ್ವದಲ್ಲೇ ಈ ಕೆಟ್ಟತನವನ್ನು ಪ್ರಾರಂಭಿಸಿದ, ಮತ್ತು ಜನರನ್ನು ಪಾಪಕ್ಕೆ ನಡೆಸುತ್ತಿರುವ ಕಾರಣನಾದ ಸೈತಾನನು ಮೊದಲು ಈ ಬೆಂಕಿಯ ಕೆರೆಗೆ ದೊಬ್ಬಲ್ಪಡುವನು. ಆದರೆ ಅದೇ ಸಮಯದಲ್ಲಿ, ತಮ್ಮನ್ನು ತಗ್ಗಿಸಿಕೊಂಡು, ಪಾಪಗಳನ್ನು ಒಪ್ಪಿಕೊಂಡು, ಅದನ್ನು ಬಿಟ್ಟು ಬಿಟ್ಟು, ದೇವರು ಕ್ರಿಸ್ತನ ಶಿಲುಬೆಯ ಮರಣದ ಮೂಲಕ ಕೊಡುವ ಕ್ಷಮಾಪಣೆಯನ್ನು ಪಡೆಯುವರೋ ಅವರು ಪರಲೋಕದ ಸಂತೋಷಕ್ಕೆ ಸೇರಿಸಲ್ಪಟ್ಟು ದೇವರು ಮತ್ತು ಕ್ರಿಸ್ತನ ಕೂಡ ನಿತ್ಯವಾಗಿ ವಾಸಿಸುವರು.

  ಪರಲೋಕವು ಶುದ್ಥ, ಶಾಂತಿ ಮತ್ತು ಸಂತೋಷದ ಸ್ಥಳವಾಗಿರುತ್ತದೆ. ಅಲ್ಲಿ ದೇವದೂತರೂ ಮತ್ತು ತಮ್ಮ ಪಾಪಗಳಿಂದ ಬಿಡುಗಡೆಯನ್ನು ಹೊಂದಿದ ಮಾನವರೂ ಇರುತ್ತಾರೆ. ಅವರು ದೇವರನ್ನು ಆರಧಿಸುತ್ತಾ ಸ್ತೋತ್ರ ಸಲ್ಲಿಸುತ್ತಾ, ಆತನನ್ನು ವಿವಿಧ ರೀತಿಯಲ್ಲಿ ನಿತ್ಯತ್ವಕ್ಕೂ ಸೇವೆಸಲ್ಲಿಸುತ್ತಿರುವರು.

  ಈ ಲೋಕದಲ್ಲಿ ನಮ್ಮನ್ನು ಅಗಲಿಹೋದ ದೇವರ ಮಕ್ಕಳನ್ನು ಮತ್ತೊಂದು ಬಾರಿ ಸೇರಿಕೊಳ್ಳುವ ಒಂದು ಸಂತೋಷದ ಸ್ಥಳವಾಗಿರುವುದು.

  ದೇವರ ನಿಜವಾದ ಮಕ್ಕಳು ದೇವರ ಸಂಗಡ ಸೇರಿ ಬರುವ ಆ ಮಹಿಮೆಯ ದಿನವನ್ನು ಎದುರುನೋಡುತ್ತಿರುವರು.

  ನಿಮಗೆ ಈಗ ನಿಜ ಸತ್ಯ ತಿಳಿದಿದೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

  ನೀವು ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟು ದೇವರ ಮಗುವಾಗುವಂತೆ ಕರ್ತನಾದ ಯೇಸು ಕ್ರಿಸ್ತನನ್ನು ಪ್ರಾರ್ಥಿಸಿ ಬೇಡಿಕೊಂಡಿರುವಿರಾ?

  ಆ ಪ್ರಾರ್ಥನೆಯನ್ನು ಪ್ರಾರ್ಥಿಸುವುದಕ್ಕೆ ದೇವರು ನಿಮ್ಮ ಹೃದಯದೊಂದಿಗೆ ಮಾತನಾಡುತ್ತಿರುವಾಗಲೇ, ಪ್ರಾರ್ಥಿಸಿರಿ. ಇದೇ ಒಳ್ಳೇ ಸಮಯವು.

  ನಾವು ಯಾವಾಗ ಸತ್ತು, ಈ ಲೋಕವನ್ನು ಬಿಟ್ಟುಹೋಗುತ್ತೆವೆಂಬುದು ನಮಗೆ ಗೊತ್ತಿಲ್ಲ. ಈ ದಿನಗಳಲ್ಲಿ ಯಾವುದಾದರೂ ಒಂದು ದಿನ ನಮ್ಮ ಕೊನೆಯ ದಿನವಾಗಬಹುದು. ಆ ದಿನವು ಬರುವುದಕ್ಕಿಂತ ಮುಂಚಿತವಾಗಿ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ ಮತ್ತು ದೇವರನ್ನು ಭೇಟಿಯಾಗಲು ಸಿದ್ಥವಾಗಿರುವುದನ್ನು ನಿಶ್ಚಿತಮಾಡಿಕೊಳ್ಳಿರಿ.