ದೇವರ ಚಿತ್ತವನ್ನು ಹುಡುಕುವುದು

  Download Formats:

ಅಧ್ಯಾಯ 1
ನಿಮ್ಮ ಜೀವಿತದ ವಿಷಯವಾಗಿ ದೇವರ ಚಿತ್ತ

ದೇವರ ಚಿತ್ತವನ್ನು ಮಾಡುವುದೇ ಮನುಷ್ಯನ ಅತ್ಯಂದ ದೊಡ್ಡ ಮಾನ ಮತ್ತು ಭಾಗ್ಯವಾಗಿದೆ. ಯೇಸು ತನ್ನ ಶಿಷ್ಯರಿಗೆ ಇದನ್ನೆ ಕಲಿಸಿದನು. ಒಂದು ಸಾರೆ ಆತನು ತನ್ನ ತಂದೆಯ ಚಿತ್ತವನ್ನು ಮಾಡುವವರು ಮಾತ್ರ ಪರಲೋಕ ರಾಜ್ಯವನ್ನು ಪ್ರವೇಶಿಸುವರು ಎಂದು ಹೇಳಿದನು. (ಮತ್ತಾಯ 7:21) ಆತನು ಇನ್ನೂ ಹೇಳಿದ್ದೇನಂದರೆ ದೇವರ ಚಿತ್ತವನ್ನು ಮಾಡುವವರು ತನ್ನ ನಿಜ ಸಹೋದರೂ ಸಹೋದರಿಯರೂ ಆಗಿದ್ದಾರೆ. (ಮತ್ತಾಯ 12:5) ಅಪೊಸ್ತಲರು ತಮ್ಮ ಸಂತತಿಯಲ್ಲಿ ಇದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಿದರು. ದೇವರು ಮನುಷ್ಯರನ್ನು ತನ್ನ ಚಿತ್ತವನ್ನು ಮಾಡುವುದಕ್ಕೋಸ್ಕರ ಪಾಪದಿಂದ ಬಿಡಿಸುವನೆಂದು ಪೇತ್ರನು ಹೇಳುತ್ತಾನೆ (1 ಪೇತ್ರ 4:12) ಪೌಲನು ಸಹ ಖಂಡಿತವಾಗಿ ಹೇಳುವುದೆನಂದರೆ, ದೇವರು ಈಗಾಗಲೇ ಯೇಚಿಸಿರುವ ಮಾರ್ಗದಲ್ಲಿ ಅವರು ನಡೆಯಲಿ ಎಂದು ವಿಶ್ವಾಸಿಗಳನ್ನು ಕ್ರಿಸ್ತಯೇಸುವಿನಲ್ಲಿ ನೂತನ ಸೃಷ್ಟಿಗಳನ್ನಾಗಿ ಮಾಡುತ್ತಾನೆ. ಆದ್ದರಿಂದ ಆತನು ಎಫೆಸದ ಕ್ರೈಸ್ತರಿಗೆ - ನಿಮ್ಮ ವಿಷಯವಾಗಿ ಮೂರ್ಖರಾಗಿರದೇ ದೇವರ ಚಿತ್ತವೆನೆಂದು ಕಂಡು ಕೊಳ್ಳಿರಿ ಎಂದು ಎಚ್ಚರಿಸುತ್ತಾನೆ. (ಎಫೆಸ 2:10, 5:17)ಕೊಲೊಸ್ಸೆಯಲ್ಲಿರುವ ಕ್ರೈಸ್ತರು ದೇವರ ಚಿತ್ತದ ಜ್ಞಾನದಿಂದ ತುಂಬಿರಬೇಕೆಂದು ಅವರಿಗೋಸ್ಕರ ಪ್ರಾರ್ಥಿಸುತ್ತಾನೆ. ಆತನ ಜೊತೆ ಕೆಲಸದವನಾದ ಎಫೆಪ್ರನೂ ಸಹ ಅವರು ದೇವರಚಿತ್ತವನ್ನೆಲ್ಲಾ ಪೂರೈಸಬೇಕೆಂದು ಅವರಿಗೋಸ್ಕರ ಪ್ರಾರ್ಥಿಸುತ್ತಿದ್ದಾನೆಂದು ಅವರಿಗೆ ಹೇಳಿದನು. (ಕೊಲೊಸ್ಸೆ 1:9, 4:12). ದೇವರ ಚಿತ್ತವನ್ನು ಮಾಡುವವರು ಮಾತ್ರ ಎಂದೆಂದಿಗೂ ನೆಲೆಗೊಳ್ಳುವರು ಎಂದು ಅಪೊಸ್ತಲನಾದ ಯೋಹಾನನು ಕಲಿಸಿದನು (1 ಯೋಹಾನ 2:17) ನಮ್ಮ ದಿನಗಳಲ್ಲಿ ಮತ್ತು ಇಂದಿನ ಸಂತತಿಯಲ್ಲಿ ಇದರ ಪ್ರಾಮುಖ್ಯತೆಯನ್ನು ವಿರಳವಾಗಿರುವುದು ವಿಷಾದನೀಯವಾಗಿದೆ. ಆದ್ದರಿಂದ ಇಂದಿನ ಸಾಮಾನ್ಯ ಕ್ರೈಸ್ತರೆಲ್ಲ ಆಳವಿಲ್ಲದಿರುವುದು ಬಲವಿಲ್ಲದಿರುವುದೂ ಸಹಜ. ಯೇಸುವಿನಿಂದ ಕೇವಲ ಪಾಪ ಕ್ಷಮೆ ಪಡೆದುಕೊಳ್ಳಲು ಜನರು ಒತ್ತಾಯಿಸುತ್ತಾರೆ. ಅಪೊಸ್ತಲರ ಸಮಯದಲ್ಲಿ ಪಾಪಕ್ಷಮೆಯು ದೇವರ ಸಂಪೂರ್ಣ ಚಿತ್ತವನ್ನು ಪೂರೈಸುವದಕ್ಕೋಸ್ಕರ ಸಮರ್ಪಣೆಯಾದ ಜೀವಿತಕ್ಕೆ ಮುನ್ನುಡಿಯಾಗಿತ್ತು. ಅಪೊಸ್ತಲರ ಕೃತ್ಯಗಳು 13:22 ರಲ್ಲಿ ದೇವರು ದಾವೀದನು ತನಗೆ ಒಪ್ಪುವ ಮನುಷ್ಯನು ಅವನು ನನ್ನ ಇಷ್ಟವನ್ನೆಲ್ಲಾ ನೇರವೇರಿಸುವನು ಎಂದು ಹೇಳಿದ್ದರ ಒಳ ಅರ್ಥವೇನೆಂದರೆ ಆತನು ದೇವರ ಚಿತ್ತವನ್ನು ಒಂಟಿಯಾಗಿ ಪೂರೈಸುವುದರಲ್ಲಿ ಇಷ್ಟವುಳ್ಳವನಾಗಿದ್ದನು. ದೇವರು ತಾನೇ ದಾವೀದನು ತನ್ನ ಚಿತ್ತವನ್ನು ಮಾಡುವುದರಲ್ಲಿ ಆನಂದಿಸಿದನು ಎಂದು ಕೀರ್ತನೆ 40:8 ರಲ್ಲಿ ಹೇಳುತ್ತಾನೆ. ದಾವೀದನು ಅನೇಕ ಪಾಪಗಳನ್ನು ಮಾಡಿದನು. ಕೆಲವು ಗಂಭೀರವಾದವುಗಳು. ಅವುಗಳಿಗಾಗಿ ದೇವರು ಆತನನ್ನು ಕಠಿಣವಾಗಿ ಶಿಕ್ಷಿಸಿದನು. ಆತನು ಸಿದ್ದಿಗೆ ಬಂದವನಾಗಿರಲಿಲ್ಲ. ಆದರೂ ದೇವರು ಅವನನ್ನು ಕ್ಷಮಿಸಿ ಆತನಲ್ಲಿ ಆನಂದಿಸಿದನು. ಯಾಕಂದರೆ ಮೂಲತ: ದಾವೀದನು ದೇವರ ಸಂಪೂರ್ಣ ಚಿತ್ತವನ್ನು ಮಾಡಲು ಇಷ್ಟವುಳ್ಳವನಾಗಿದ್ದನು. ನಾವು ಎಷ್ಟೇ ಅಪರಿಪೂರ್ಣರಾಗಿದ್ದರೂ ನಮ್ಮ ಹೃದಯಗಳು ದೇವರ ಚಿತ್ತವನ್ನು ಮಾಡಲು ಬಯಸುವುದಾದರೆ ನಾವೂ ಸಹ ದೇವರ ಹೃದಯಕ್ಕೆ ಸಮೀಪದವರಾಗಲು ಸಾಧ್ಯವೆಂದು ಇದು ನಮಗೆ ಪ್ರೊತ್ಸಾಹವನ್ನು ಕೊಡುತ್ತದೆ. ವಿಶ್ವಾಸಿಗಳು ಯೇಸುವಿನ ಮಾದರಿಯನ್ನನುಸರಿಸಿ ಆತನು ನಡೆದಂತೆಯೇ ನಡೆಯಬೇಕೆಂದು ಹೊಸಒಡಂಬಡಿಕೆಯು ಭೋದಿಸುತ್ತದೆ. ಯೇಸುವಿನ ಇಡೀ ಜೀವಿತದ ಮತ್ತು ಆತನ ಸೇವೆಯ ತಿರುಳು ತನ್ನ ತಂದೆಯ ಚಿತ್ತವನ್ನು ಮಾಡುವುದೇ ಆಗಿತ್ತು. ತನ್ನ ತಂದೆಯು ಹೇಳುವವರಿಗೆ ಆತನು ಕಾರ್ಯನಿರತನಾಗಿರಲಿಲ್ಲ. ಆತನು ಕಾರ್ಯ ಪ್ರಾರಂಭಿಸಿದಾಗ ವೈರಿಗಳ ಬೆದರಿಕೆಗಳಾಗಲಿತನ್ನ ಮಿತ್ರರ ಬೇಡಿಕೆಗಳಾಗಲೀ ದೇವರ ಚಿತ್ತವನ್ನು ಪೂರೈಸುವುದನ್ನು ನಿಲ್ಲಿಸಲಾಗಲಿಲ್ಲ. ದೇವರ ಚಿತ್ತವನ್ನು ಮಾದುವುದೇ ಆತನ ಅನುದಿನದ ಆಹಾರವಾಗಿತ್ತು. (ಯೋಹಾನ 4:34). ಹೇಗೆ ಮನುಷ್ಯರು ತಮ್ಮ ದೇಹ ಪೋಷಣೆಗಾಗಿ ಆಹಾರಕ್ಕೋಸ್ಕರ ಹಂಬಲಿಸುತ್ತಾರೋ ಹಾಗೆಯೇ ತನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಲು ಆತನು ಹಂಬಲಿಸಿದನು. ದೇವರ ಚಿತ್ತವನ್ನೆಲ್ಲಾ ಮಾಡಲು ಪ್ರತಿಯೊಬ್ಬ ವಿಶ್ವಾಸಿಯೂ ಸಹ ಹಾಗೆಯೇ ಹಸಿದಿರಬೇಕು. ``ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಹಾಗೆ ಭೂಲೋಕದಲ್ಲಿಯೂ ನಿನ್ನ ಚಿತ್ತವು ನೆರವೇರಲಿ'' ಎಂದು ಪ್ರಾರ್ಥಿಸಿ. ನಮ್ಮ ಅನುದಿನದ ಜೀವಿತದಲ್ಲಿ ದೇವರ ಮಾರ್ಗದರ್ಶನವನ್ನು ಹುಡುಕುವುದೇ ನಮ್ಮ ಚಿತ್ತದಂತೆ ನಡೆಯುವುದು ಬಹು ಸುಲಭವಗಿದೆ.

ದೇವರ ಯೋಜನೆಯು ಅತ್ಯುತ್ತಮ

ದೇವರ ಮಾರ್ಗದರ್ಶನವನ್ನು ಹುಡುಕದಿರುವುದು ಮುರ್ಖತನದ ಶಿಖರವಗಿದೆ. ಒಂದು ಕಗ್ಗತ್ತಲಿನ ರಾತ್ರಿಯಲ್ಲಿ ದಟ್ಟವಾದ ಅರಣ್ಯದ ಮಧ್ಯದಲ್ಲಿ ನೀವು ಒಬ್ಬಂಟಿಯಾಗಿರುವಾಗ ಆ ಅರಣ್ಯದ ಪ್ರತಿ ಒಂದು ಇಂಚು ಜಗವನ್ನು ಚೆನ್ನಾಗಿ ಅರಿತವನು ನಿಮ್ಮೊಂದಿಗಿದ್ದರೆ ನೀವು ಅವನಲ್ಲಿ ಸಂಪೂರ್ಣ ಭರವಸೆ ಇಡುವಿರಿ. ಗಂಡಾಂತರಗಳಿಂದ ತುಂಬಿದ ಆ ಅಂಧಕಾರದ ಅರಣ್ಯದಲ್ಲಿ ಅವನ ಉಪದೇಶವನ್ನು ಕೇಳದಿರುವುದು ಮುರ್ಖತನ. ಆದರೂ ಅನೇಕ ವಿಶ್ವಾಸಿಗಳು ಇದನ್ನೆ ಮಾಡುತ್ತಿದ್ದಾರೆ.

ಈ ಭೂಮಿಯ ಮೇಲಿರುವ ಯಾವುದಕ್ಕಿಂತಲೂ ನಮ್ಮ ಮುಂದಿರುವ ಭವಿಷ್ಯವು ಕತ್ತಲಾಗಿದೆ. ನಮಗೆ ಏನೂ ಕಾಣುವುದಿಲ್ಲ. ಆದರೂ ನಾವು ಮುಂದೆ ಸಾಗಬೇಕು.

ಕೆಲವು ಸಾರಿ ಅತೀ ಪ್ರಾಮುಖ್ಯವಾದ ವಿಷಯಗಳನ್ನು ನಮ್ಮ ಜೀವನದಲ್ಲಿ ಎದುರಿಸುತ್ತೇವೆ. ಆಗ ನೀವು ತೆಗೆದು ಕೊಳ್ಳುವ ನಿರ್ಣಯಗಳು ನಮ್ಮ ಜೀವಿತದ ಪರ್ಯಂತರ ಪರಿಣಾಮವನ್ನುಂಟು ಮಾಡುತ್ತವೆ. ನಮ್ಮ ಜೀವನೋಪಾಯಕ್ಕೆ ಹಿಡಿಯುವ ಮಾರ್ಗ (ಛಿಚಿಡಿಡಿieಡಿ) ಮತ್ತು ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದು ಇವುಗಳು ನಮ್ಮ ಜೀವಿತವಿಡೀ ನಮ್ಮ ನಿರ್ಣಯದ ಮೇಲೆ ಅವಲಂಬಿಸಿರುತ್ತವೆ. ಇಂತಹ ಸಮಯವನ್ನು ನಾವು ಹೇಗೆ ನಿರ್ಣಯಿಸುತ್ತೇವೆ? ಪ್ರತೀ ಮಾರ್ಗದಲ್ಲಿರುವ ಅಪಾಯಗಳನ್ನು ನಮಗೆ ಗೊತ್ತಿಲ್ಲದ ಹಳ್ಳಗಳನ್ನು ನಾವು ತಿಳಿದಿಲ್ಲ. ಆದರೂ ನಾವು ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕೆಂದು ನಾವು ನಿರ್ಣಯಿಸಬೇಕು.

ಅಂಥಹ ಸನ್ನಿವೇಶಗಳಲ್ಲಿ ನಮ್ಮ ಬಳಿಯಲ್ಲಿ ಭವಿಷ್ಯವನ್ನು ಸಂಪೂರ್ಣವಾಗಿ ತಿಳಿದವರೊಬ್ಬರಿದ್ದರೆ ನಾವು ಅವರಲ್ಲಿ ಪೂರ್ಣ ಭರವಸೆಯಿಟ್ಟು ಅವರೊಂದಿಗಿರುವುದು ಅಪೇಕ್ಷಣೀಯ ಮಾತ್ರವಲ್ಲ ಅಗತ್ಯವು ಆಗಿದೆ. ಯೇಸುಕ್ರಿಸ್ತನಲ್ಲಿ ನಮಗೆ ಅಂಥಹ ವ್ಯಕ್ತಿ ಇದ್ದಾನೆ. ಆತನು ನಮ್ಮನ್ನು ಅತೀ ಸುರಕ್ಷಿತವಾದ ಮತ್ತು ಅತ್ಯುತ್ತಮವಾದ ಹಾದಿಯಲ್ಲಿ ನಮ್ಮನ್ನು ನಡೆಸಲು ನಮಗಿಂತಲೂ ಆತುರವುಳ್ಳವನಾಗಿದ್ದಾನೆ. ನಮ್ಮಲ್ಲಿರುವ ಪ್ರತಿ ವ್ಯಕ್ತಿಗೂ ದೇವರು ನಿರ್ಧಿಷ್ಟವಾದ ಯೋಜನೆಯನ್ನಿಟ್ಟಿದ್ದಾನೆಂದು ಸತ್ಯವೇದ ಹೇಳುತ್ತದೆ. (ಎಫೆಸ 2:10) ನಮ್ಮ ವೃತ್ತಿಯನ್ನು, ಜೀವನ ಸಂಗಾತಿಯನ್ನು ಮತ್ತು ನಾವು ಎಲ್ಲಿ ಜೀವಿಸಬೇಕೆಂದು ಪ್ರತಿ ದಿನ ಏನು ಮಾಡಬೇಕೆಂದು ಆತನು ಈಗಾಗಲೇ ಯೋಜನೆ ಮಾಡಿದ್ದಾನೆ. ಪ್ರತಿಯೊಂದರಲ್ಲಿ ಆತನು ಆಯ್ಕೆಯು ಅತ್ಯುತ್ತಮ, ಯಾಕಂದರೆ, ಆತನು ನಮ್ಮನ್ನು ಚೆನ್ನಾಗಿ ಬಲ್ಲವನೂ ಮತ್ತು ಎಲ್ಲವನ್ನೂ ಸರಿಯಾಗಿ ಗಮನಿಸುವವನೂ ಆಗಿದ್ದಾನೆ. ದೊಡ್ಡ ಮತ್ತು ಚಿಕ್ಕ ವಿಷಯಗಳಲ್ಲಿ ಮತ್ತು ಎಲ್ಲದರಲ್ಲಿ ಆತನ ಚಿತ್ತವನ್ನು ಹುಡುಕುವುದು ಅತೀ ಜ್ಞಾನದ ವಿಷಯವಾಗಿದೆ.

ಸೀಮಿತಕ್ಕೊಳಗಾಗಿರುವ ನಮ್ಮ ಬುದ್ದಿ ಜಾಣತನ, ಅವೇಶವನ್ನು ಹಿಂಬಾಲಿಸುವುದು ಮೂರ್ಖತನವಲ್ಲ ಆದರೆ ಅಪಾಯಕಾರಿಯೂ ಆಗಿದೆ. ದೇವರ ಚಿತ್ತವೇ ಅತ್ಯುತ್ತಮವಾದದ್ದು ಎಂದು ನಮಗೆ ಮನವರಿಕೆಯಾಗದಿದ್ದರೆ ನಾವು ಅದನ್ನು ಹುಡುಕುವುದಿಲ್ಲ.

ತಮ್ಮ ಯೌವನಾರಂಭ್ಯದಿಂದ ಅನೇಕರು ದೇವರ ಚಿತ್ತವನ್ನು ಹುಡುಕದೇ ಹೋದದ್ದರಿಂದ ತಮ್ಮ ಜೀವಿತವನ್ನು ಹಾಳುಮಾಡಿಕೊಂಡಿದ್ದಾರೆ. ``ಯೌವನದಲ್ಲಿ ನೊಗಹೊರುವುದು ಮನುಷ್ಯನಿಗೆ ಲೇಸು'' ಇದು ನಿಜವಾಗಿದೆ. (ಪ್ರಲಾಪ 3:27) ಮತ್ತಾಯ 11:28-30 ರಲ್ಲಿ ಯೇಸು ತನ್ನ ನೊಗವನ್ನು ನಮ್ಮ ಮೇಲೆ ತೆಗೆದುಕೊಳ್ಳಲು ಆಮಂತ್ರಿಸುತ್ತಾನೆ. ನೊಗವನ್ನು ಹೊರುವುದು ಎಂದರೇನು? ಹೊಲವನ್ನು ಉಳುವುದಕ್ಕೆ ಎತ್ತುಗಳ ಕತ್ತಿನ ಮೇಲೆ ನೊಗವನ್ನು ಹಾಕುತ್ತಾರೆ. ಹೊಸ ಎತ್ತು ಉಳುವುದನ್ನು ಕಲಿಯಬೇಕಾದರೆ ಅದನ್ನು ಅನುಭವವಿರುವ ಇನ್ನೊಂದು ಎತ್ತಿನೊಂದಿಗೆ ನೊಗವನ್ನು ಹಾಕುತ್ತಾರೆ ಹೀಗೆ ಹೊಸ ಎತ್ತು ಹಳೇ ಎತ್ತಿನ ದಿಕ್ಕಿನಲ್ಲಿಯೇ ಮತ್ತು ಒಂದೇ ವೇಗದಲ್ಲಿ ಹೋಗುವುದಕ್ಕೆ ಒತ್ತಾಯಿಸಲ್ಪಡುತ್ತದೆ.

ಯೇಸುವಿನ ನೊಗವನ್ನು ಹೊರುವುದು ಎಂದರೆ ಇದೇ. ಆತನಿಗೆ ಮೆಚ್ಚಿಕೆಯಾಗುವ ಮಾರ್ಗದಲ್ಲಿ ಆತನೊಂದಿಗೆ ನಾವು ನಡೆಯಬೇಕು. ಆತನ ನಡೆಸುವಿಕೆಯಿಲ್ಲದೇ ಆತನಿಗಿಂತ ಮೊದಲಾಗಿ ದುಡುಕುವುದಾಗಲೀ ಅಥವಾ ವಿಧೇಯತೆಯೆಂಬ ಇನ್ನೊಂದು ಹೊಸ ಹೆಜ್ಜೆಗೆ ಕರೆಯುವಾಗ ಹಿಂದೇಟು ಹಾಕುವುದು ಸಲ್ಲದು. ನೊಗವು ತನ್ನ ಯಜಮಾನನಿಂದ ಬಲಾತ್ಕಾರವಾಗಿ ಹೇರಿಸಲ್ಪಡುತ್ತದೆ. ಆದರೆ ಯೆಸುವು ನಮ್ಮನ್ನು ಆಮಂತ್ರಿಸುತ್ತಾನೆ. ಇಲ್ಲ ಒತ್ತಾಯಿಸಲ್ಲ. ಈ ಆಮಂತ್ರಣವನ್ನು ತಿರಸ್ಕರಿಸುವುದು ಎಂಥಹ ಹುಚ್ಚುತನ. ನಿಜವಾದ ಸ್ವತಂತ್ರ್ಯ. ವಿಶ್ರಾಂತಿಯನ್ನು ಕೊಡುವ ಯೇಸುವಿನ ಹೌರವಾದ ನೊಗವನ್ನು ನಮ್ಮ ಮೇಲೆ ತೆಗೆದುಕೊಳ್ಳುವ ಬದಲು ನಾವು ನಮ್ಮ ಸ್ವಇಚ್ಚೆಯಿಂದ ಭಾರವಾದ ನೊಗವನ್ನು ಹೊತ್ತುಕೊಳ್ಳಲು ಇಷ್ಟಪಡುತ್ತೇವೆ.

ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. ಭಾರವಾದ ನೊಗದ ಕೆಳಗೆ ಕಷ್ಟಪಡುವವರೆ, ನನ್ನ ನೊಗವನ್ನು ಧರಿಸಿರಿ....... ನಾನು ನಿಮಗೆ ಕಲಿಸಲು ಬಿಡಿರಿ. (ಹಳೆಯ ಎತ್ತು ಹೇಗೆ ಹೊಸ ಅನುಭವವಿಲ್ಲದ ಎತ್ತಿಗೆ ಸಲಿಸುತ್ತದೋ ಹಾಗೆ..... ನಿಮ್ಮ ಆತ್ಮಕ್ಕೆ ವಿಶ್ರಾತಿ ಸಿಕ್ಕುವುದು. ನಾನು ನಿಮಗೆ ಕೇವಲ ಹಗುರವಾದ ಹೊರೆಯನ್ನು ಕೊಡುವೆನು. (ಮತ್ತಯ 11:28-30) ``ದೇವರೊಂದಿಗೆ ನಡೆದನು'' ಎಂದು ಹನೋಕನ ಬಗ್ಗೆ ಓದುತ್ತೇವೆ. (ಆದಿ 5:22) ಆಂದರೆ ಅವನು ಮುನ್ನೂರು ವರ್ಷ ದೇವರು ನೇಮಿಸಿದ ಮಾರ್ಗದಲ್ಲಿ ಆತನ ನೊಗದ ಕೆಳಗೋ ಎಂಬಂತೆ ಹಿಂದೆ ಬೀಳದೇ ಮುಂದೆ ಓಡದೇ ದೇವರೊಂದಿಗೆ ನಡೆದನು. ಅದರ ಪರಿಣಾಮವಾಗಿ ದೇವರು ಆತನನ್ನು ಮೆಚ್ಚಿದನು ಎಂದು ಓದುತ್ತೇವೆ. (ಇಬ್ರಿಯ 11:5). ಆತನ ಸಂಪೂರ್ಣ ಚಲಿಸುವುದರ ಮೂಲಕ ಮಾತ್ರ ನಾವು ದೇವರನ್ನು ಮೆಚ್ಚಿಸಬಹುದು. ಆತನ ತಿರುಗಿ ಬರುವಾಗ ಯಾವ ದುಖಃವಿಲ್ಲದವರಾಗಿ ಆತನ ಮುಂದೆ ನಿಲ್ಲಲು ನಮಗೆ ಇದರಿಂದ ಸಾಧ್ಯವಾಗುತ್ತದೆ.

ದೇವರ ಯೋಜನೆಯನ್ನು ತಪ್ಪಿಸಿಕೊಳ್ಳುವುದು

.

ವಿಶ್ವಾಸಿಯು ತನ್ನ ಜೀವಿತದಲ್ಲಿ ದೇವರ ಚಿತ್ತವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಸೌಲನು ಇಸ್ರಾಯೆಲ್ಯರ ಅರಸನಗಿರುವದಕ್ಕೋಸ್ಕರ ಆಯಲ್ಪಟ್ಟನು. ಆದರೆ ಕ್ರಮೇಣ ತನ್ನ ದುಡುಕುತನದಿಂದಲೂ ಮತ್ತು ಅವಿಧೇಯತೆಯಿಂದಲೂ ಅವನು ದೇವರಿಂದ ತಿರಸ್ಕರಿಸಲ್ಪಟ್ಟನು. ಆತನು ಸಿಂಹಾಸನದ ಮೇಲೆ ಇನ್ನೂ ಸ್ವಲ್ಪ ವರುಷ ಮುಂದುವರೆದನು ನಿಜ, ಆದರೆ ತನ್ನ ವಿಷಯವಾಗಿ ದೇವರ ಚಿತ್ತವನ್ನು ತಪ್ಪಿಸಿಕೊಂಡನು. ಸೊಲೋಮೋನನು ಇನ್ನೊಂದು ಉದಾಹರಣೆ.-ಅವನು ತನ್ನ ಮೊದಲಿನ ಜೀವಿತದಲ್ಲಿ ದೇವರನ್ನು ಮೆಚ್ಚಿಸಿದನು. ಆದರೆ ನಂತರ ಅನ್ಯ ಸ್ತ್ರೀಯರನ್ನು ವಿವಾಹವಾಗಿ ಬಿದ್ದುಹೋದನು.

ಅರಣ್ಯದಲ್ಲಿ ನಾಶವಾದ ಇಸ್ರಾಯೇಲ್ಯರ ಉದಾಹರಣೆಯು ನಮಗೆ ಎಚ್ಚರಿಕಿಯಾಗಿ ಹೊಸ ಒಡಂಬಡಿಕೆಯಲ್ಲಿ ಎರಡು ಸಾರೆ ಬರೆಯಲ್ಪಟ್ಟಿದೆ. ಅವರು ಕಾನಾನ ದೇಶವನ್ನು ಪ್ರವೇಶಿಸುವುದು ದೇವರ ಚಿತ್ತವಾಗಿತ್ತು. ಆದರೆ ಅಪನಂಬಿಕೆಯಿಂದಲೂ, ಅವಿಧೇಯತೆಯಿಂದಲೂ ಇಬ್ಬರ ಹೊರತಾಗಿ ಎಲ್ಲರೂ ದೇವರ ಅತ್ಯುತ್ತಮವಾದ ವಾಗ್ದಾನಗಳನ್ನು ಹೊಂದದೇ ಹೋದರು. (1 ಕೊರಿಂಥ 10:1-12, ಇಬ್ರಿ 3:7-14). ಅನೇಕ ವಿಶ್ವಾಸಿಗಲೂ ಸಹ ಹೀಗೆಯೇ ತಮ್ಮ ವಿವಾಹದಲ್ಲಿ ಅಥವಾ ವೃತ್ತಿಯ ಆಯ್ಕೆ ಮಾಡುವುದರಲ್ಲಿ ಅವಿದೇಯತೆಯಿಂದಲೂ ರಾಜಿಮಾಡಿಕೊಳ್ಳುವುದರಿಂದಲೂ ದೇವರ ಯೋಜನೆಯನ್ನು ತಮ್ಮ ಜೀವಿತದಲ್ಲಿ ಕಳೆದುಕೊಂಡಿದ್ದಾರೆ.

ಉ.ಅheಡಿisಣiಚಿಟಿ Weiss ಎಂಬವರು ``ದೇವರ ಸಂಪೂರ್ಣ ಚಿತ್ತವೆಂಬ ತಮ್ಮ ಪುಸ್ತಕದಲ್ಲಿ ಒಬ್ಬ ಸತ್ಯವೇದ ಶಾಲೆಯ ಅಧ್ಯಾಪಕರು ತಮ್ಮ ವಿಧ್ಯಾರ್ಥಿಗಳಿಗೆ ಹೇಳಿದ್ದನ್ನು ಬರೆದಿದ್ದಾರೆ. ``ನಾನು ನನ್ನ ಜೀವಿತದ ಹೆಚ್ಚಿನ ಭಾಗವನ್ನು ದೇವರ ದ್ವೀತಿಯ ದರ್ಜೆಯ ಜೀವಿತವನ್ನು ಜೀವಿಸಿದ್ದೇನೆ''. ತನ್ನ ಯೌವನದ ದಿನಗಳಲ್ಲಿ ದೇವರು ಅವನನ್ನು ಮಿಷನರಿಯಾಗಲು ಕರೆದಾಗ ವಿವಾಹದ ನಿಮೆತ್ತ ಆಕರೆಯನ್ನು ಬದಿಗಿಟ್ಟು ಹಣ ಸಂಪಾದನೆಗೋಸ್ಕರ ಸ್ವಾರ್ಥ ವ್ಯಾಪಾರದ ಜೀವಿತಕ್ಕೋಸ್ಕರ ಬ್ಯಾಂಕಿನಲ್ಲಿ ಕೆಲಸ ಮಾಡತೊಡಗಿದನು. ದೇವರು ಅನೇಕ ವರ್ಷಗಳವರೆಗೆ ಮಾತನಾಡುತ್ತಿದ್ದರೂ ದೇವರಿಗೆ ಒಳಗಾಗಲ್ಲಿಲ್ಲ. ಒಂದು ದಿನ ಆತನ ಮಗು ಕುರ್ಚಿಯಿಂದ ಕೆಳಗೆ ಬಿದ್ದು ಸತ್ತುಹೋಯಿತು. ಈ ಘಟನೆಯು ಆತನ ಮೊಣಕಾಲಿನ ಮೇಲೆ ಬಿದ್ದು ರಾತ್ರಿ ಇಡೀ ಕಣ್ಣೀರಿನಿಂದ ದೇವರ ಸನ್ನಿದಿಯಲ್ಲಿದ್ದು ತನ್ನ ಜೀವಿತವನ್ನು ಸಂಪೂರ್ಣವಾಗಿ ದೇವರ ಹಸ್ತಕ್ಕೆ ಒಪ್ಪಿಸಿಕೊಟ್ಟನು. ಈಗ ಆಫ್ರಿಕಾ ದೇಶಕ್ಕೆ ಹೋಗಲು ಅವನಿಗಾಗಲಿಲ್ಲ. ಆ ಬಾಗಿಲು ಮುಚ್ಚಲ್ಪಟ್ಟಿತ್ತು. ಅದು ದೇವರ ಪ್ರಥಮ ದರ್ಜೆಯ ಜೀವಿತಕ್ಕೆ ಕರೆಯಾಗಿತ್ತೆಂದು ಆತನಿಗೆ ಗೊತ್ತಿತ್ತು. ಆದರೆ ಅದನ್ನು ಕಳಕೊಂಡನು. ಈಗ ಊಳಿದಿರುವ ತನ್ನ ಜೀವಿತವನ್ನು ಉಪಯೋಗಿಸುವಂತೆ ದೇವರಿಗೆ ಕೇಳಿಕೊಂಡನು. ಸತ್ಯವೇದ ಶಾಲೆಯ ಅಧ್ಯಾಪಕನಾದನು. ಆದರೆ ಇದು ಎರಡನೇ ದರ್ಜೆಯ ಕರೆ ಎಂದು ಆತನಿಗೆ ಗೊತ್ತಿತ್ತು. Weiss ರವರು ಮುಂದುವರೆಯುತ್ತಾ ಹೀಗೆ ಬರೆಯುತ್ತಾರೆ. ``ಈ ರೀತಿಯಾಗಿ ಸಾಕ್ಷಿ ಹೊಂದಿರುವ ಅನೇಕ ವ್ಯಕ್ತಿಗಳನ್ನು ನಾನು ಭೇಟಿಯಾಗಿದ್ದೆನೆ. ಸಾಮಾನ್ಯವಾಗಿ ಈ ಸಾಕ್ಷಿಗಳು ಅವರ ಕಣೀರಿನ ಸ್ನಾನವೆಂಬಂತೆ ದುಖಃದಿಂದ ಕೂಡಿದವುಗಳಾಗಿವೆ. ಆತನ ಚಿತ್ತಕ್ಕೆ ಸಾಗುವ ಒಂದೇ ಪ್ರವೇಶ ಮಾರ್ಗವನ್ನು ನಾವು ಪಾಪ ಮಾಡಿ ತಪ್ಪಿಸಿಕೊಂಡರೂ ಸಹ ದೇವರು ಅಂಥವರನ್ನು ಪುನ್ನಃ ಉಪಯೋಗಿಸುವನು. ಅದಕ್ಕೆ ದೇವರಿಗೆ ಸ್ತೋತ್ರ. ಆದರೆ ಆರಂಭದಲ್ಲಿ ದೇವರು ಏನನ್ನು ನಮಗೋಸ್ಕರ ಉದ್ದೇಶಿಸಿದ್ದಾನೋ ಅದನ್ನು ನಾವು ಕಳಕೊಳ್ಳುತ್ತೇವೆ. ನಮ್ಮ ಜೀವಿತದಲ್ಲಿ ದೇವರ ಸಂಪೂರ್ಣ ಚಿತ್ತವನ್ನು ಕಳೆದುಕೊಳ್ಳುವುದು ನಿಜವಾದಾ ದುರಂತವಾಗಿದೆ. ಕೈಸ್ತನೇ ಈ ಸಾಕ್ಷಿಗಳನ್ನು ಮತ್ತು ಮಾತುಗಳನ್ನು ಸರಿಯಾಗಿ ಗಮನಿಸು ಇಲ್ಲವಾದರೆ, ನೀನೂ ಸಹ ಆತನ ಮೊದಲ ಆಯ್ಕೆಗೆ ತಪ್ಪಿಸಿಕೊಂಡಿಯೇ. ಜೀವಿತದ ಹಾಗಿಯಲ್ಲಿ ನಾವು ಯಾವಾಗ ದೇವರಿಗೆ ನಮ್ಮ ಜೀವಿತವನ್ನು ಒಪ್ಪಿಸಿಕೊಡುತ್ತೇವೋ ಅಂದಿನಿಂದ ದೇವರು ನಿಸ್ಸಂಶಯವಾಗಿ ನಮ್ಮನ್ನು ಉಪಯೋಗಿಸುತ್ತಾನೆ. ಆದರೆ ನಾವು ನಮ್ಮ ಜೀವಿತದ ಪ್ರಾರಂಭದಲ್ಲಿಯೇ ನಾವು ಆತನ ಚಿತ್ತವನ್ನು ಹುಡುಕಿ ಅದಕ್ಕೆ ಒಳಗಾಗಿರುವವರಲ್ಲಿ ಒಬ್ಬರಾದರೆ ಅನೇಕ ನೋವಿನ ಮತ್ತು ಅವಮಾನಕರವಾದ ಜೀವಿತದಿಂದ ಪಾರಾಗುತ್ತೇವೆ. ನಾವು ಆಯ್ಕೆ ಮಾಡಿಕೊಂಡಿರುವ ಸ್ಥಳದಲ್ಲಿ ಇದ್ದುಕೊಂಡು ಜಯದಲ್ಲಿಯೂ, ಇತರರಿಗೆ ಆಶೀರ್ವಾದವಾಗಿಯೂ ಕರ್ತನನ್ನು ಸಂಪೂರ್ಣವಾಗಿ ಸೇವಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಜೀವಿನಕ್ರಮ, ಜೀವಿಸಲು ಸ್ಥಳವನ್ನು ತಾವೇ ಆರಿಸಿಕೊಂಡು ತಾವಿರುವ ಸ್ತಳದಲ್ಲಿ ಸಂಪೂರ್ಣವಾಗಿ ಸೇವಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಜೀವನಕ್ರಮ, ಜೀವಿಸಲು ಸ್ಥಳವನ್ನು ತಾವೇ ಆರಿಸಿಕೊಂಡು ತಾವಿರುವ ಸ್ತಳದಲ್ಲಿ ಸಾಕ್ಷಿಗಳಾಗಿರಬಹುದೆಂದು ಭಾವಿಸುತ್ತಾರೆ. ದೇವರು ತನ್ನ ಕರುಣೆಯಲ್ಲಿ ಅವರನ್ನು ಮಿತಿಯಾಗಿ ಬಳಸಬಹುದು. ಆದರೆ ಅವರು ಆಸಕ್ತಿಯಿಂದ ದೇವರ ಚಿತ್ತವನ್ನು ಹುಡಿಕಿ ಆತನ ಪರಿಪೂರ್ಣ ಚಿತ್ತದ ಕೆಂದ್ರದಲ್ಲಿ ಜೀವಿಸುತ್ತಿದ್ದಾರೆ. ದೇವರ ದ್ರಾಕ್ಷಿತೋಟದಲ್ಲಿ ಅವರ ಉಪಯುಕ್ತತೆಯು ಹೆಚ್ಚಾಗಿರುತ್ತಿತ್ತು. ದೇವರ ನಿಯಮಗಳಿಗೆ ಗೌರವ ಕೊಡದಿರುವುದರ ಪರಿಣಾಮ ಆತ್ಮೀಕ ಬೆಳವಣಿಗೆ ಕುಂಟಿತವಾಗಿ ಫಲಫಲಿಸುವಿಕೆಯು ಸೀಮಿತಗೊಳ್ಳುತ್ತದೆ.

ದೇವರಿಗೆ ನೀನು ಕೆಲವು ಸಂಗತಿಗಳನ್ನು ಅವಿಧೆಯನಾಗಿದ್ದರೆ, ಈಗಲೇ ಪಶ್ಚಾತ್ತಾಪದಿಂದ ಆತನ ಕಡೆಗೆ ತಿರುಗಿಕೋ. ಯೋನನ ಹಾಗೆ ನೀನು ಸಹ ದೇವರ ಚಿತ್ತವನ್ನು ಪೂರೈಸಬಹುದು. ನಮ್ಮಲ್ಲಿ ಪ್ರತಿಯೊಬ್ಬನಿಗೂ ಒಂದೇ ಒಂದು ಜೀವವಿದೆ. ಪೌಲನ ಹಾಗೆ ``ಶ್ರೇಷ್ಟ ಹೋರಾಟವನ್ನು ಮಾಡಿದ್ದೇನೆ. ನನ್ನ ಓಟವನ್ನು ಕಡೆಗಾಣಿಸಿದ್ದೇನೆ'' ಎಂದು ಜೀವಿತದ ಕೊನೆಯಲ್ಲಿ ಹೇಳುವವನು ಧನ್ಯನು. (2 ತಿಮೋಥಿ 4:7). ``ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತದೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.'' (1 ಯೋಹಾನ 2:17).

``ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರಿ. ಆ ದಿನಗಳೂ ಕೆಟ್ಟವುಗಳಾಗಿವೆ. ಆದ್ದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೇ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೇ ಕರ್ತನ ಚಿತ್ತವೇನೆಂಬುದನ್ನು ವಿಚಾರಿಸಿ ತಿಳಿದವರಾಗಿರಿ. (ಎಫೆಸ 5:15-17).

ನಾನು ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತಾಗ ಆತನು ನನಗೆ ನನ್ನ ಜೀವಿತದ ಯೋಜನೆಯನ್ನು ತೋರಿಸುವಾಗ ನಾನು ಆತನ ಚಿತ್ತಕ್ಕೆ ಒಳಗಾಗಿದ್ದರೆ, ನನ್ನ ಜೀವಿತದ ಯೋಜನೆಗಳು ಹೇಗಿರುತ್ತಿದ್ದವು.

ನನ್ನ ಚಿತ್ತವನ್ನು ಆತನಿಗೆ ಒಳಪಡಿಸದೇ ಆತನನ್ನು ಇಲ್ಲಿ, ಅಲ್ಲಿ ತಡೆದೆನು. ಆತನು ನನ್ನನ್ನು ಇನ್ನೂ ಪ್ರೀತಿಸುತ್ತಿದ್ದರೂ ನನ್ನ ರಕ್ಷಕನ ಕಣ್ಣುಗಳಲ್ಲಿ ದುಖಃವಿರುವುದೋ?

ಆತನ ಕೃಪೆಯನ್ನೆಲ್ಲಾ ಕಳೆದುಕೊಂಡು ಐಶ್ವರ್ಯವಂತನಗುವ ಬದಲು ಬಡವನಾಗಿ ಹಿಂದಕ್ಕೆ ಹೋಗಲಾರದ ದಾರಿಯಲ್ಲಿ ಜ್ಞಾಪಕವು ಬೇಟಿಯಂತೆ ಓಡಿಸುವಾಗ

ಶೂನ್ಯವಾದ ನನ್ನ ಹೃದಯವು ಸುರಿಸಲಾರದ ಕಣ್ಣೀರಿನಿಂದ ಮುರಿಯಲ್ಪಡುವಾಗ ನನ್ನ ಬರಿದಾದ ಕೈಗಳಿಂದ ನನ್ನ ಮುಖವನ್ನು ಮುಚ್ಚಿಕೊಂಡು ಕೀರಿಟವಿಲ್ಲದ ನನ್ನ ಶಿರವನ್ನು ಭಾಗಿಸುವೆನು. ಕರ್ತನೇ ನನ್ನ ಉಳಿದಿರುವ ವರುಷಗಳನ್ನು ನಿನ್ನ ಹಸ್ತಗಳಿಗೆ ನಾನರ್ಪಿಸುವೆ. ನೀನು ಯೋಜಿಸಿದ ಮಾದರಿಯಲ್ಲಿ ಹೊಂದಿಕೊಳ್ಳುವಂತೆ ನನ್ನನ್ನು ತೆಗೆದುಕೊಂಡು ಮುರಿದು ರೂಪಿಸು. (ಒಚಿಡಿಣhಚಿ Sಟಿeಟಟ ಓiಛಿhoಟsoಟಿ).

ಸಾರಾಂಶ

 • 1 ಮಾನವನ ಅತೀ ದೊಡ್ಡದಾದ ಮಾನ ಭಾಗ್ಯವು ದೇವರ ಚಿತ್ತವನ್ನು ಮಾಡುವುದೇ ಎಂದು ಕರ್ತನಾದ ಯೇಸುವೂ ಮತ್ತು ಆತನ ಅಪೊಸ್ತರರೂ ಕಲಿಸಿದರು
 • .
 • 2. ದೇವರು ನಮಗೆ ಮಾರ್ಗದರ್ಶನ ಮಾಡಲು ಕಾಯುತ್ತಿರುವಾಗ ನಾವು ನಾವಾಗಿಯೇ ಭವಿಷ್ಯದಲ್ಲಿ ನುಗ್ಗುವದು ಮೂರ್ಖತನವಾಗಿದೆ
 • .
 • 3 ಅಜಾಗರೂಕತೆಯಿಂದಲೂ ಅಥವಾ ಅವಿಧೇಯತೆಯಿಂದಲೂ ನಮ್ಮ ವಿಷಯವಾಗಿರುವ ದೇವರ ಸಂಪೂರ್ಣ ಚಿತ್ತವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿದೆ
 • .

  ಅಧ್ಯಾಯ 2
  ದೇವರ ಚಿತ್ತವನ್ನು ಹುಡುಕುವುದಕ್ಕೆ ಇರುವ ಕರಾರುಗಳು

  ದೇವರೊಂದಿಗೆ ನಾವು ವಯಕ್ತಿಕ ಸಂಬಂದವನ್ನಿಟ್ಟು ಕೊಳ್ಳದಿದ್ದರೆ, ದೈವೀಕ ಮಾರ್ಗದರ್ಶನವು ನಮಗೆ ದೊರೆಯಲಾರದು ಅನೇಕರು ವರಗಳನ್ನು ಅನುಗ್ರಹಿಸುವ ದೇವರನ್ನು ಬಿಟ್ಟು ವರಗಳನ್ನೆ ಅಪೇಕ್ಷಿಸುತ್ತಾರೆ. ದೇವರಿಗಾಗಿ ನಾವು ಹಾತೊರೆಯದೇ ಆತನ ಮಾರ್ಗದರ್ಶನವನ್ನು ಬಯಸುವುದಾದರೆ ಅದು ನಮಗೆ ದೊರೆಯದು.

  ತನ್ನ ಜೀವಿತದಲ್ಲಿ ದೇವರ ಮಾರ್ಗದರ್ಶನವನ್ನು ಅನುಭವಿಸ ಬೇಕೆಂದಿರುವವನು ಮೊದಲು ಆತನೊಂದಿಗೆ ಅನ್ಯೊನ್ಯತೆಯುಳ್ಳವನಾಗಿರಬೇಕು. ಇದರ ಅರ್ಥವೆನಂದರೆ, ಮೊಟ್ಟಮೊದಲಾಗಿ ಹೊಸ ಜೀವಿತದ ಮೂಲಕವಾಗಿ ಅವನು ಕ್ರಿಸ್ತನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರಬೇಕು. ಆದರೆ ಇದು ಮಾತ್ರ ಸಾಕಾಗದು. ದೇವರ ನಡಿಸುವಿಕೆಯನ್ನು ತಿಳಿಯಬೇಕಿದ್ದರೆ, ಬೇರೆ ಪ್ರಾಮುಖ್ಯವಾದ ಕರಾರುಗಳನ್ನು ನಾವು ಪಾಲಿಸಬೇಕು. ಇವುಗಳು ಹಳೇ ಮತ್ತು ಹೊಸ ಒಡಂಬಡಿಕೆಯಲ್ಲಿ ಎರಡು ಸ್ಥಳಗಳಲ್ಲಿ ಸೂಚಿಸುತ್ತದೆ. ಜ್ಞಾನೋಕ್ತಿ 2:5,6, ರೋಮಾ 12:1,2 ಇವುಗಳನ್ನು ವಿವರವಾಗಿ ನೋಡುವಾ.

  ನಂಬಿಕೆ

  ``ನಿನ್ನ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಯೆಹೋವನಲ್ಲಿ ಭರವಸೆವಿಡು.....ಮತ್ತು ಆತನು ನಿನಗೆ ಮಾರ್ಗದರ್ಶನ ಮಾಡುವನು." ಜ್ಞಾನೋಕ್ತಿ 3:5,6.

  ಅನೇಕ ಜನರು ದೇವರು ತಮಗೆ ಮಾರ್ಗ ದರ್ಶನವನ್ನು ಮಾಡುವನೆಂದು ನಂಬದ ಕಾರಣ ಆತನ ಚಿತ್ತವನ್ನು ಅರಿತುಕೊಳ್ಳುವುದಿಲ್ಲ. ದೇವರ ಮಾರ್ಗದರ್ಶನವನ್ನು ಹುಡುಕುವುದಕ್ಕೆ ನಂಬಿಕೆಯು ಪೂರ್ವಾಪೇಕ್ಷಿತವಾಗಿದೆ. ನಂಬಿಕೆ ಎಂದರೆ ಸತ್ಯವನ್ನು ಅಂಗೀಕಾರಮಾಡುವುದು ಅಷ್ಟೇ ಅಲ್ಲ ಆದರೆ ಆತನೊಂದಿಗೆ ವಯಕ್ತಿಕ ಸಂಬಂದದ ಮೂಲಕವಾಗಿ ಬರುವ ಭರವಸೆ.

  ನಮಗೆ ಜ್ಞಾನ ಕಡಿಮೆಯಾಗಿದ್ದರೆ (ಹಲವು ಸನ್ನಿವೇಶಗಳಲ್ಲಿ ದೇವರ ಮನಸ್ಸು ನಮಗೆ ಗೋಚರವಾಗದಿರುವಾಗ) ನಾವು ದೇವರ ಬಳಿ ಬಂದು ಕೇಳಿಕೊಳ್ಳಲು ಆಮಂತ್ರಿಸಲ್ಪಟ್ಟಿದ್ದೇವೆ. ಆತನು ನಮಗೆ ಒದಗಿಸುವನೆಂದು ವಾಗ್ದಾನವಿದೆ. ನಾವು ನಂಬಿಕೆಯಿಂದ ಪ್ರಾರ್ಥಿಸುವಾಗ ಮಾತ್ರ ನಂಬಿಕೆ ಇಲ್ಲದೇ ಬೇಡಿಕೊಳ್ಳುವವನಿಗೆ ಖಂಡಿತವಾಗಿ ಏನೂ ದೊರೆಯುವುದಿಲ್ಲ. (ಯಾಕೋಬ 1:5-8)

  ದೇವರ ಜ್ಞಾನದಲ್ಲಿ ಕೆಲವು ವರುಷ ಬೆಳೆದಿರುವ ಹಿರಿಯರಿಗೆ ಮಾತ್ರ ದೈವೀಕ ಮಾರ್ಗದರ್ಶನವು ಲಭ್ಯವಿದೆ ಎಂದು ಹೊಸ ವಿಶ್ವಾಸಿಗಳು ಭಾವಿಸಬಹುದು. ಆತನೊಂದಿಗೆ ಹೆಚ್ಚಾಗಿ ನಡೆದಾಗ ಆತನ ಮನಸ್ಸನ್ನು ಹೆಚ್ಚಾಗಿ ನಾವು ತಿಳಿದುಕೊಳ್ಳುವುದರಲ್ಲಿ ಸಂಶಯವಿಲ್ಲ. ಆದಾಗ್ಯೂ ದೇವರು ತನ್ನ ಎಲ್ಲಾ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಇಚ್ಚಿಸುವುದು ನಿಜ. ಪೌಲನ ಬಗ್ಗೆ ಹೇಳಲ್ಪಟ್ಟಿದ್ದು. ನಮ್ಮೆಲ್ಲರ ವಿಷಯದಲ್ಲಿಯೂ ನಿಜವಾಗಿದೆ. ``ದೇವರು ತನ್ನ ಚಿತ್ತವನ್ನು ನೀನು ತಿಳುಕೊಳ್ಳುವುದಕ್ಕೂ ಆತನ ಬಾಯಿಂದ ಒಂದು ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.'' ಅ.ಕೃ 22:14

  ಹಿರಿಯ ಕಿರಿಯ ಎಂಬ ಬೇಧವಿಲ್ಲದೇ ಒಬ್ಬ ತಂದೆಯು ತನ್ನ ಚಿತ್ತವನ್ನು ಯೋಜನೆಗಳನ್ನೂ ತನ್ನ ಎಲ್ಲಾ ಮಕ್ಕಳಿಗೆ ಸಂತೋಷದಿಂದ ಪ್ರಕಟಿಸಲು ಬಯಸುತ್ತಾನೆ. ನಮ್ಮ ಪರಲೋಕದ ತಂದೆಯೂ ಹಾಗೆಯೇ ಇದ್ದಾನೆ. ದೇವರು ತನ್ನ ವಾಕ್ಯದಲ್ಲಿ (ಹೊಸ ಒಡಂಬಡಿಕೆಯಲ್ಲಿ) ಆ ದಿನದಲ್ಲಿ ಆತನು ಎಲ್ಲಾ ಮಕ್ಕಳೂ ಚಿಕ್ಕವನೂ, ದೊಡ್ಡವನೂ - ಎಲ್ಲರೂ ಆತನನ್ನು ತಿಳಿದಿರುವರು. (ಇಬ್ರಿಯ 10:11) ತನ್ನನ್ನು ಹುಡುಕುವ ಮಕ್ಕಳೆಲ್ಲರಿಗೆ ಆತನು ತನ್ನ ಚಿತ್ತವನ್ನು ಸಂತೋಷದಿಂದ ತೊರಿಸುವವನಾಗಿದ್ದರಿಂದ ನಾವು ನಂಬಿಕೆಯಿಂದ ಪೂರ್ಣಭರವಸೆಯಿಂದ ಆತನ ಸನ್ನಿಧಿಗೆ ಬರೋಣ.

  ನಂಬಿಕೆಯಿಲ್ಲದೇ ದೇವರನ್ನು ಮೆಚ್ಚಿಸುವುದು ಅಸಾಧ್ಯವೆಂದು ಇಬ್ರಿಯ 11:6 ರಲ್ಲಿ ಹೇಳಲ್ಪಟ್ಟಿದೆ. ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಆಸಕ್ತಿಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ. ಪ್ರಾರ್ಥನೆಯಲ್ಲಿ ಛಲ (ಸ್ಥಿರತೆ) ಇರುವುದಾದರೆ, ಅದು ನಂಬಿಕೆಯ ಪುರಾವೆಯಾಗಿದೆ. ಸಂಶಯಪಡುವವನು ಪ್ರಾರ್ಥಿಸುವುದನ್ನು ಬೇಗ ನಿಲ್ಲಿಸುತ್ತನೆ. ಆದರೆ ನಂಬುವವನು ಉತ್ತರ ದೊರೆಯುವವರೆಗೆ ದೇವರನ್ನು ಹಿಡಿದಿರುತ್ತಾನೆ. ಆಸಕ್ತಿಯು ನಂಬಿಕೆಯ ಫಲವಾಗಿರುವದರಿಂದ ದೇವರು ಅದನ್ನು ಮೆಚ್ಚುತ್ತಾನೆ. ಯಾವ ವಿಷಯವಾಗಿಯಾದರೂ ಮೊದಲು ನಮ್ಮಲ್ಲಿ ತೀಕ್ಷ್ಣವಾದ ಬಯಕೆ, ಹಂಬಲವಿಲ್ಲದಿದ್ದರೆ ದೇವರಿಂದ ಯಾವ ಅಮೂಲ್ಯವಾದದ್ದನ್ನು ನಾವು ಹೊಂದಲಾರೆವು. ``ಆತನು ಬಾಯಾರಿದವರ ಆಶೆಯನ್ನು (ಮಾತ್ರ) ಪೂರೈಸುವನು'' (ಕೀರ್ತನೆ 107:9). ದೇವರು ಹೇಳಿದ್ದು - ನೀವು ನನ್ನನ್ನು ಹುಡುಕುವಿರಿ (ಅತ್ಯವಶ್ಯವೆಂದು ವಿಚಾರಿಸಿರಿ) ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ'' ಯೆರೆಮಿಯ 29:13. ದೇವರ ಮಾರ್ಗದರ್ಶನವನ್ನು ನಾವು ಅನೇಕ ಸಾರೆ ಅರ್ದ ಮನಸ್ಸಿನಿಂದ ಹುಡುಕಿದ್ದು

  ನಿಜವಲ್ಲವೇ? ಗೆತ್ಸೆಮನ್ ತೋಟದಲ್ಲಿ ಯೇಸು ತಂದೆಯ ಚಿತ್ತವನ್ನು ಹುಡುಕುವಾಗ ಪುನಃ ಪುನಃ ಪ್ರಾರ್ಥಿಸಿದನು. ``ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥಿಸಿದನು'' (ಇಬ್ರಿಯ 5:7) ಇದಕ್ಕೆ ಹೋಲಿಸಿದರೆ ನಮ್ಮ ಹುಡುಕುವಿಕೆ ಬಹಳ ನೀರಸವಾಗಿದೆ. ಹಲವು ಬಾರಿ ನಾವು ದೇವರ ಚಿತ್ತವನ್ನು ಕಳೆದು ಹೋದ ಐದು ಪೈಸೆ ನಾಣ್ಯವನ್ನು ಹುಡುಕುವಂತೆ ಹುಡುಕುತ್ತೇವೆ. ಆದ್ದರಿಂದ ಅದು ನಮಗೆ ದೊರೆಯುವುದಿಲ್ಲ. ದೇವರ ಚಿತ್ತವನ್ನು ಭೂಲೋಕದಲ್ಲಿರುವ ಎಲ್ಲಕ್ಕಿಂತಲೂ ಶ್ರೇಷ್ಠವೆಂದು ನಾವು ಭಾವಿಸಿದರೆ ಅದನ್ನು ಪೂರ್ಣ ಹೃದಯದಿಂದ ಹುಡುಕುತ್ತೇವೆ. ದೇವರು ಆಸಕ್ತಿಯಿಂದ ಹುಡುಕುವವರಿಗೆ ಪ್ರತಿಫಲ ಕೊಡುತ್ತಾನೆಂದು ನಾವು ನಿಜವಾಗಿ ನಂಬುತ್ತೇವೋ? ಹಾಗಿದ್ದರೆ ನಮ್ಮ ಪ್ರಾರ್ಥನೆಯು ಸ್ಥಿರವಾದ ನಂಬಿಕೆಯಿಂದ ಕೂಡಿರುತ್ತದೆ. ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ದೇವರ ಚಿತ್ತವನ್ನು ಹುಡುಕುವುದರಲ್ಲಿ ನಾವು ಆಸಕ್ತರಾಗಿದ್ದರೆ ದೇವರು ನಿಸ್ಸಂಶಯವಾಗಿ ತನ್ನ ಮನಸ್ಸನ್ನು ನಮಗೆ ಪ್ರಕಟಿಸುತ್ತಾನೆ. ಉತ್ತರ ದೊರೆಯುವವರೆಗೆ ಬಿಡದ ನಂಬಿಕೆಯ ಪ್ರಾರ್ಥನೆಗೆ ಆತನು ಉತ್ತರಿಸದೇ ಇರಲಾರನು.

  ಸತ್ಯವೇದದಲ್ಲಿ ನಂಬಿಕೆಯು ಕೆಲವು ಸಾರೆ ತಾಳ್ಮೆಯೊಂದಿಗೆ ಜೊತೆಯಾಗಿ ಬರೆಯಲ್ಪಟ್ಟಿದೆ. ಈ ಎರಡೂ ದೇವರ ವಾಗ್ದಾನಗಳನ್ನು ಹೊಂದಿಕೊಳ್ಳಲು ಅವಶ್ಯ. (ಇಬ್ರಿಯ 6:12,15) ದಾವೀದನು ತನ್ನ ಅನುಭವದಿಂದ ಹೇಳುವುದೇನಂದರೆ - ನಿನ್ನ ಭೂಯಾತ್ರೆಯ ಚಿಂತೆಯನ್ನೆಲ್ಲಾ ಕರ್ತನಿಗೊಪ್ಪಿಸಿ ನಂಬಿಕೆಯಿಂದ ತಾಳ್ಮೆಯಿಂದ ಆತನ ಸಮಯಕ್ಕೋಸ್ಕರ ಕಾಯ್ದುಕೊಂಡಿದ್ದರೆ ಆತನು ನಮ್ಮನ್ನು ಕೈ ಬಿಡುವುದಿಲ್ಲ - ಎಂದು ಭರವಸೆಕೊಟ್ಟಿದ್ದಾನೆ. (ಕೀರ್ತನೆ 37:5,7) ದೇವರ ಮಾರ್ಗದರ್ಶನವನ್ನು ಹುಡುಕುವಾಗ ತಾಳ್ಮೆಯನ್ನು ಕಳಕೊಳ್ಳುವುದು ಸಾಮಾನ್ಯವಾದ ಶೋಧನೆ. ಆದರೆ ನಂಬುವ ಹೃದಯವು ವಿಶ್ರಾಂತಿಯಲ್ಲಿರುತ್ತದೆ.

  ಕೆಲವು ತೀರ್ಮಾನಗಳನ್ನು ಮಾಡುವಾಗ ನಾವು ದೇವರ ಮನಸ್ಸನ್ನು ಅತೀ ಸ್ಪಷ್ಟವಾಗಿ ತಿಳಿದುಕೊಳ್ಳುವವರೆಗೆ ಕಾಯಬೇಕಿಲ್ಲ. ಉದಾಹರಣೆಗಾಗಿ - ತಿಂಗಳಿನ 15 ಅಥವಾ 16 ತಾರೀಖಿಗೆ ನೀವು ಪ್ರಯಾಣ ಮಾಡಬೇಕಿದ್ದರೆ ಕಾಲಮೀರುವವರೆಗೆ ನೀವು ದೇವರ ಚಿತ್ತಕ್ಕೊಸ್ಕರ ಕಾಯಬೇಕಿಲ್ಲ.

  ಆದರೆ ಕೆಲವು ವಿಷಯಗಳಲ್ಲಿ ನಾವು ದೇವರ ಸಂಪೂರ್ಣ ಚಿತ್ತವನ್ನು ಸ್ಪಷ್ಟವಾಗಿ ತಿಳಿಯುವವರೆಗೆ ಕಾಯಲೇಬೇಕು. ಉದಾಹರಣೆಗೆ - ವಿವಾಹದ ವಿಷಯವಾಗಿ ನಾವು ಅಸ್ಪಷ್ಟವಾಗಿರಲು ಸಾಧ್ಯವಿಲ್ಲ. ನಿರ್ಣಯ ತೆಗೆದು ಕೊಳ್ಳುವ ಪೂರ್ವದಲ್ಲಿ ದೇವರ ಚಿತ್ತವನ್ನು ನಾವು ಖಂಡಿತವಾಗಿ ತಿಳಿದವರಾಗಿರಬೇಕು. ದೊಡ್ಡ ನಿರ್ಣಯವನ್ನು ಮಾಡಬೇಕಿದ್ದರೆ ನಾವು ಸಾಮಾನ್ಯವಾಗಿ ದೇವರ ಚಿತ್ತಕ್ಕಾಗಿ ಅಧಿಕವಾಗಿ ಕಾಯಬೇಕಾಗುತ್ತದೆ.

  ನಾವು ಕರ್ತನಲ್ಲಿ ಭರವಸೆಯಿಡುವಾಗ ಕಾಯುವುದಕ್ಕೆ ಭಯಪಡುವುದೆಲ್ಲ. ದೇವರ ಸಮಯಕ್ಕೆ ಮುಂಚಿತವಾಗಿ ಯಾರಾದರೂ ಪಡಕೊಂಡಾರೆಂಬ ಭಯದಿಂದ ನಾವು ಯಾವುದನ್ನು ಕಾಲಕ್ಕೆ ಮುಂಚಿತವಾಗಿ ದೋಚಿಕೊಳ್ಳುವುದಿಲ್ಲ....ಪ್ರತಿ ಕ್ಷೇತ್ರದಲ್ಲಿ ದೇವರು ನಮಗೋಸ್ಕರ ಇಟ್ಟಿರುವುದೆಲ್ಲವನ್ನು ಕಾಪಾಡಲಿಕ್ಕೆ ಸಮರ್ಥನಾಗಿದ್ದಾನೆ. ನಾವು ಅವಸರವಾಗಿ ದೋಚಿಕೊಳ್ಳುವಾಗ ದೇವರ ಅತ್ಯುತ್ತಮವಾದದ್ದನ್ನು ಕಳಕೊಳ್ಳುತ್ತೇವೆ. ``ನಂಬುವವನು ಕಾತುತಪಡನು (ಅವಸರಮಾಡನು)'' ಎಂದು ಸತ್ಯವೇದ ಹೇಳುತ್ತದೆ.

  (ಯೆಶಾಯ 28:16)

  ದೊಡ್ಡ ``ಮಾರ್ಗದರ್ಶನ'' ವೆಂಬ ಕೀರ್ತನೆ 25 ರಲ್ಲಿ ದಾವೀದನು ಪುನಃ ಪುನಃ ದೇವರಿಗೋಸ್ಕರ ಕಾದಿರುವ ಯಾವನೂ ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಆತನಿಗೋಸ್ಕರ ಆಸಕ್ತಿಯಿಂದ ಕಾಯುವವರೆಲ್ಲರಿಗೆ ಕರ್ತನು ಕಾರ್ಯೋನ್ಮುಖನಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ. (ಯೆಶಾಯ 64:4, 49:23).

  ಅನೇಕ ಸಾರಿ ನಾವು ದೇವರಿಗೋಸ್ಕರ (ಆತನ ಉತ್ತರಕ್ಕೋಸ್ಕರ) ಕಾಯ್ದುಕೊಂಡಿರುವಾಗ ಮಾತ್ರ ದೇವರು ತನ್ನ ಮನಸ್ಸನ್ನು ನಮಗೆ ಸ್ಪಷ್ಟಮಾಡುತ್ತಾನೆ. ಎಚಿmes ಒoಛಿoಟಿಞeಥಿ ಎಂಬವರು ``ಮಾರ್ಗದರ್ಶನ'' ವೆಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ - ``ಕೆಲವು ಸಾರೆ ನೀವು ಕೊಳಾಯಿಯಿಂದ ನೀರನ್ನು ಒಂದು ಗ್ಲಾಸಿನಲ್ಲಿ ತೆಗೆದುಕೊಳ್ಳುವಾಗ ಅದು ಕಲ್ಮಷದಿಂದ ಕೂಡಿದ ಕೆಸರಿನ ನೀರಾಗಿರುತ್ತದೆ ಅದನ್ನು ಹೇಗೆ ಶುದ್ದಿಕರಿಸುತ್ತಿರಿ? ಆ ಕೆಸರಾದ ನೀರನ್ನು ಗ್ಲಾಸನ್ನು ನಿಮ್ಮ ಟೇಬಲ್ ಮೇಲೆ ಇಡಿರಿ. ಕ್ಷಣಕ್ಷಣಕ್ಕೂ ನೀರಿನ ಕಲ್ಮಷಗಳು ಗ್ಲಾಸಿನ ತಳಕ್ಕೆ ಬರುತ್ತವೆ. ಕ್ರಮೇಣವಾಗಿ ನೀರು ತಿಳಿಯಾಗಿರುತ್ತದೆ. ಸ್ವಲ್ಪ ಕ್ಷಣದಲ್ಲಿ ಆ ನೀರು ಎಷ್ಟು ಸ್ಪಷ್ಟವಾಗಿರುತ್ತದೆಂದರೆ ಆ ನೀರಿನ ಮೂಲಕ ನೀವು ಬೇರೆ ವಸ್ತುಗಳನ್ನು ವೀಕ್ಷಿಸಬಹುದು. ಇದೆಲ್ಲವೂ ಕೇವಲ ಕಾಯುವದರಿಂದ ಸಾಧ್ಯವಾಯಿತು. ಮಾರ್ಗದರ್ಶನದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ. ಇಲ್ಲಿಯೂ ಸಹ ಕಾತುರವುಳ್ಳ, ಅವಸರದ ಮನುಷ್ಯನು ಕಾಯ್ದುಕೊಂಡಿದ್ದಾನೆ..... ಹೀಗೆ ನಾವು ಕಾಯುವಾಗ ಕಲ್ಮಷಗಳು ನಿಧಾನವಾಗಿ ಕೆಳಗಿಳಿಯುತ್ತದೆ.... ಕ್ಷುಲ್ಲಕ ಸಂಗತಿಗಳು ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಪ್ರಧಾನವಾದ ವಿಷಯಗಳು ತಮ್ಮ ಪ್ರಾಮುಖ್ಯತೆಗೆ ಬರುತ್ತದೆ. ಇವೆಲ್ಲವುಗಳಿಗೆ ಉತ್ತರ ಕಾಯ್ದುಕೊಂಡಿರುವುದು..... ಇದನ್ನು ಅಲಕ್ಷಿಸುವುದರಿಂದ ನಾವು ಅನೇಕ ತಪ್ಪುಗಳನ್ನು ಮಾಡುತ್ತವೆ. ..... ಅವಸರವು ಮಾರ್ಗದರ್ಶನದ ಅವಶ್ಯಕತೆಗಿಂತಲೂ ಹೆಚ್ಚಾಗಿ ಸೈತಾನನ ಬಲೆಯಾಗಿರುತ್ತದೆ.

  ``ಒಂದೊಂದು ಸಾರೆ ಮಾರ್ಗವು ನಮಗೆ ಎಂದಿಗೂ ಗೋಚರವಾಗುವುದಿಲ್ಲವೇನೋ ಎನ್ನುವಷ್ಟು ನಮ್ಮ ಗಲಿಬಿಲಿಯು ಹೆಚ್ಚಾಗಿರುತ್ತದೆ. ಅಂಥಹ ಸನ್ನಿವೇಶಗಳಲ್ಲಿ ಕೀರ್ತನೆಗಳಲ್ಲಿ ಕಾವಲುಗಾರರಿಗೋಸ್ಕರ ಅಮೂಲ್ಯವಾದ ಸಂದೇಶವಿದೆ. ಕಾವಲುಗಾರರು ಬೆಳಗಾಗುವದನ್ನು ಮುನ್ಮೋಡುವದಕ್ಕಿಂತ ವಿಶೇಷವಾಗಿ ನಾನು ಎದುರು ನೋಡುತ್ತಿದ್ದೆನೆ. (ಕೀರ್ತನೆ 130:6)ರಾತ್ರಿಯಲ್ಲಿ ಕಾವಲುಗಾರರು ಮುಂಜಾವಿಗೋಸ್ಕರ ಹೇಗೆ ಕಾಯುತ್ತಾರೆ? ಉತ್ತರವು ನಾಲ್ಕು ವಿಧವಾಗಿದೆ -

  ಅವರು ಅಂಧಕಾರದಲ್ಲಿ (ರಾತ್ರಿಯಲ್ಲಿ) ಕಾಯುತ್ತಿರುತ್ತಾರೆ. ನಿಧಾನವಾಗಿ ಬರಲಿಕ್ಕಿರುವ ಮುಂಜಾನಿಗೋಸ್ಕರ (ಪ್ರಾತಂಕಾಲ) ಕಾಯುತ್ತಾರೆ. ಖಂಡಿತವಾಗಿ ಬರಲಿಕ್ಕಿರುವ ಪ್ರಾತಃಕಾಲಕ್ಕೋಸ್ಕರ ಕಾಯುತ್ತಾರೆ. ಯಾವುದಕ್ಕೋಸ್ಕರ ಕಾಯುತ್ತಾರೋ ಅದು ಬಂದಾಗ ಅದು ದಿನದ ಬೆಳಕನ್ನು ತರುತ್ತದೆ.

  ಮಾರ್ಗದರ್ಶನಕ್ಕೋಸ್ಕರ ಕಾಯುವವರಿಗೂ ಇದೇ ರೀತಿಯಾಗಿರುವುದು. ಹಲವು ಬಾರಿ ನಮ್ಮ ಗಲಿಬಿಲಿಯು ಅತೀ ತೀಕ್ಷಣವಾಗಿ ನಾವು ಗಾಡಾಂಧಕಾರದಲ್ಲಿದ್ದೇವೋ ಎಂದೆನಿಸುತ್ತದೆ. ಆದರೆ ಪ್ರಾಥಃಕಾಲಕ್ಕೋಸ್ಕರ ಕಾಯುವವರು ಬೆಳಗಿನ ಕಿರಣಗಳನ್ನು ಕಾಣುತ್ತಾರೆ ಆದರೆ ಬಹು ನಿಧಾನವಾಗಿ ಅವುಗಳು ಬರುತ್ತವೆ. ಹೇಗೆ ರಾತ್ರಿಯು ಬೆಳಗಿನಲ್ಲಿ ಕೊನೆಕೊಳ್ಳುತ್ತದೋ ಹಾಗೆಯೇ ನಮ್ಮ ಜೀವಿತದಲ್ಲಿನ ಸಂದೇಹಗಳು ಖಂಡಿತವಾಗಿ ದೇವರ ಪ್ರಾಥಃಕಾಲದ ಬೆಳಕೆಂಬ ಮಾರ್ಗದರ್ಶನದಲ್ಲಿ ಮುಕ್ತಾಯಕೊಳ್ಳುತ್ತದೆ. ಕೊನೆಗೆ ನಿಧಾನವಾಗಿ ಬರುವ ಮುಂಜಾನೆಯ ಬೆಳಕಿನಂತೆ ದೇವರು ಕೊಡುವ ಮಾರ್ಗದರ್ಶನವು ಕಾಯ್ದುಕೊಂಡಿರುವ ನಮ್ಮ ಆತ್ಮಗಳನ್ನು ಹರ್ಷಗೊಳಿಸಿ ಮೋಡಕವಿದ ಹಾದಿಗಳನ್ನು ಪ್ರಕಾಶಗೊಳಿಸಿದಾಗ ಅಂಧಕಾರದಲ್ಲಿ ದೀರ್ಘವಾಗಿ ಕಾಯ್ದುದಿನಗಳನ್ನು ನಾವು ಬೇಗನೇ ಮರೆಯುತ್ತೇವೆ.

  ಅವಸರ ಮಾಡುವುದರ ಬಗ್ಗೆ ಎಚ್ಚರವಾಗಿರಿ. ತಾಳ್ಮೆಯಿಲ್ಲದಿರುವಿಕೆಯು ಯಾವಾಗಲೂ ಅಪನಂಬಿಕೆಯ ಮೂಲಕ ಬರುವಂಥದ್ದು. ಅರಣ್ಯದಲ್ಲಿ ಇಸ್ರಾಯೇಲ್ಯರ ಆತನ ಸಂಕಲ್ಪವನ್ನು ಕಾದಿರದೆ ಆಶಾತುರರಾದರು. (ಕೀರ್ತನೆ 106:13) ಇದರಿಂದ ದೇವರ ಅತ್ಯುತ್ತಮವಾದದ್ದನ್ನು ಕಳೆದುಕೊಂಡರು. ಇಂಥಹ ದುರಂತದಿಂದ ದೇವರು ನಮ್ಮನ್ನು ರಕ್ಷಿಸಲಿ.

  ಸ್ವಬುದ್ದಿಯನ್ನೆ ಆಧಾರಮಾಡಿಕೊಳ್ಳದಿರುವದು

  .

  ಸ್ವಬುದ್ದಿಯನ್ನೆ ಆಧಾರಮಾಡಿಕೊಳ್ಳದೇ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು ... ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.(ಜ್ಞಾನೋಕ್ತಿ 3:5,6).

  ಆತ್ಮೀಕ ವಿಷಯಗಳಲ್ಲಿ ಯಾವನೂ ತನ್ನ ಸ್ವಾಭಾವಿಕವಾದ ಜ್ಞಾನದ ಮೇಲೆ ಅವಲಂಬಿಸಿರುತ್ತಾನೋ ಅವನು ಕೈಸ್ತ ಜೀವಿತದ ಪ್ರಥಮ ಪಾಠಗಳನ್ನು ಇನ್ನೂ ಕಲಿಯಬೇಕಾಗಿದೆ. ಅವನು ದೇವರ ಮೇಲೆ ಆತುಕೊಂಡಿದ್ದರೆ ಅವನ ಸ್ವಜ್ಞಾನವು ದೇವರ ಚಿತ್ತವನ್ನು ತಿಳಿಯುವುದಕ್ಕೆ ಅಡ್ದಿಯಾಗಿರಲಾರದು. ಆದರೆ ತನ್ನ ಜಾಣತನದ ಮೇಲೂ ಮುಂದಾಲೋಚನೆಯ ಮೇಲೂ ಗರ್ವಿಗನಾಗಿ ಮಾಡದು. ಪಿಲಿಪ್ಪಿ 3:3 ರಲ್ಲಿ ಪೌಲನು ವಿಶ್ವಾಸಿಯು ತನ್ನಲ್ಲಿ ಭರವಸಯಿಟ್ಟುಕೊಳ್ಳಬಾರದೆಂದು ಹೇಳುತ್ತಾನೆ.

  ಪೌಲನು ಜ್ಞಾನದಲ್ಲಿ ಬಲಶಾಲಿಯಾಗಿದ್ದನು. ಆದರೂ ಆತನು ತನ್ನಲ್ಲಿ ಭರವಸೆಯಿಡದೇ ದೇವರ ಮೇಲೆ ಆತುಕೊಳ್ಳಬೇಕಾಗಿತ್ತು. ತನ್ನ ಸ್ವಂತ ಅನುಭವದಿಂದ ಆತನು ಕೊರಿಂಥದ ಕ್ರೈಸ್ತರಿಗೆ ಹೀಗೆ ಬರೆಯುತ್ತಾನೆ. ``ನಿಮ್ಮಲ್ಲಿ ಯಾರಾದರೂ ತಾನು ಈ ಲೋಕದ ಜಾಣರಲ್ಲಿ ಒಬ್ಬನೆಂದು ಭಾವಿಸುವುದಾದರೆ ಅವನು ತನ್ನ ಜಾಣತನವನ್ನು ಬದಿಗಿಟ್ಟು ನಿಜ ಜ್ಞಾನಿಯಾಗಲು ಕಲಿಯಲಿ. ಈ ಲೋಕದ ಜಾಣತನವು ದೇವರ ಮುಂದೆ ಹುಚ್ಚುತನವಾಗಿದೆ.'' (ಕೊರಿಂಥ 3:18,19) ದೇವರ ಚಿತ್ತವನ್ನು ತಿಳಿಯುವುದಕ್ಕೆ ಈ ಲೋಕದ ಜ್ಞಾನವು ಅಡ್ಡಿಯಾಗಿರುವುದರಿಂದ ಅದನ್ನು ನಾವು ನಮ್ಮಿಂದ ದೂರವಿರಿಸಬೇಕು.

  ಈ ಕೊನೆಯ ವಾಕ್ಯ ಅಪಾರ್ಥವಾದೀತೆಂದು ಇದನ್ನು ಸ್ವಲ್ಪ ವಿವರಿಸುತ್ತೇನೆ. ಈ ಲೋಕದ ಜ್ಞಾನವನ್ನು ತಿರಸ್ಕರಿಸುವದೆಂದರೆ ನಮ್ಮ ಬುದ್ದಿಯನ್ನು ಉಪಯೋಗಿಸ ಬಾರದೆಂದು ಅರ್ಥವಲ್ಲ. ಪೌಲನು ತನ್ನ ಜ್ಞಾನವು ವಿದ್ಯೆಯಿಂದಾಗಲೀ ಕಲಿಯುವುದರಿಂದಾಗಲೀ ಬರುವಂಥದ್ದಲ್ಲ. ಕಲಿತ ಪೌಲನು ಕಲಿಯದ ಕೊರಿಂಥದವರೂ ಅದನ್ನು ಬದಿಗಿಡಬೇಕಾಗಿತ್ತು. ನಾವು ಹೆಚ್ಚಿಗೆ ಕಲಿತಿದ್ದರೂ ಕಲಿಯದಿದ್ದರೂ ನಮ್ಮ ಜಾಣತನದಲ್ಲಿ ಎಷ್ಟು ಭರವಸೆ ಇಡುತ್ತೇವೋ ಇದು ನಮ್ಮನ್ನು ಬಾದಿಸುತ್ತದೆ.

  ವಿಶ್ವಾಸಿಗಳನ್ನು ಸತ್ಯವೇದ ಕುರಿಗಳಿಗೆ ಹೋಲಿಸುತ್ತದೆ. ಕುರಿಯು ದೂರ ದೃಷ್ಟಿಯಿಲ್ಲದ, ಮಾರ್ಗವನ್ನು ಹುಡುಕಲು ಗೊತ್ತಿರದ ಮೂರ್ಖ ಪಾಣಿಯಾಗಿದೆ. ತನ್ನ ಕುರುಬನು ಹೋದಲ್ಲೆಲ್ಲಾ ಆತನನ್ನು ಹಿಂಬಾಲಿಸುವುದರಲ್ಲಿ ಅದಕ್ಕೆ ಭದ್ರತೆ ಇದೆ. ಆತ್ಮ ವಿಶ್ವಾಸವುಳ್ಳ ಮನುಷ್ಯನಿಗೆ ಇದನ್ನು ಒಪ್ಪಿಕೊಳ್ಳುವುದು ಬಹು ಅವಮಾನಕರವಾಗಿ ಕಂಡು ಬರುತ್ತದೆ. ಆತ್ಮೀಕ ವಿಷಯದಲ್ಲಿರುವ ತನ್ನ ಮೂರ್ಖತನದ ಸೂಚನೆ ಕಂಡು ಬಂದಲ್ಲಿ ಆತನ ಗರ್ವವು ದಂಗೆಳುತ್ತದೆ. ಆದರೂ ದೇವರ ಚಿತ್ತವನ್ನು ಅಥವಾ ಮಾರ್ಗದರ್ಶನವನ್ನು ನಮ್ಮ ಜೀವಿತದಲ್ಲಿ ತಿಳಿಯಬೇಕಾಗಿದ್ದರೆ, ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳದಿರುವುದು ಬಹು ಪ್ರಾಥಃಮಿಕವಾಗಿದೆ. ದೇವರು ಮುಂದೆ ದಾವೀದನು ಕುರಿಯ ಸ್ಥಾನವನ್ನು ತೆಗೆದುಕೊಂಡಿದ್ದರಿಂದ ದೈವೀಕ ಮಾರ್ಗದರ್ಶನವನ್ನು ಅನುಭವಿಸಿದ್ನು. ``ಯೇಹೋವನು ನನಗೆ ಕುರುಬನು..... ಆತನು ನನ್ನನ್ನು ಸಡೆಸುತ್ತಾನೆ'' (ಕೀರ್ತನೆ 23:1-3).

  ಒಬ್ಬನು ಹೀಗೆ ತನ್ನನ್ನು ತಗ್ಗಿಸಿಕೊಂಡು ದೀನಸ್ಥಾನವನ್ನು ತೆಗೆದುಕೊಳ್ಳದಿದ್ದರೆ, ದೇವರ ಮಾರ್ಗವನ್ನು ಆತನು ತಿಳಿಯುವುದಿಲ್ಲ. ``ದೀನತೆಯಿಂದ ತನ್ನ ಬಳಿಗೆ ತಿರುಗುವವರಿಗೆ ಆತನು ಸರಿಯಾಗಿ ಮತ್ತು ಅತ್ಯುತ್ತಮವಾದ ಮಾರ್ಗಗಳನ್ನು ಬೋಧಿಸುವನು.'' ಎಂದು ದಾವೀದನು ಕೀರ್ತನೆ 25:9 ರಲ್ಲಿ ಹೇಳುತ್ತಾನೆ. ಆತ್ಮ ವಿಶ್ವಾಸವು ಮನುಷ್ಯನಿಗೆ ಸರಿ ಆದರೆ ದೇವರ ಮಗುವಿಗಲ್ಲ. ಅನೇಕ ವಿಶ್ವಾಸಿಗಳು ದೇವರ ಚಿತ್ತವನ್ನು ತಮ್ಮ ಜೀವಿತದಲ್ಲಿ ಕಂಡುಕೊಳ್ಳದಿರುವುದಕ್ಕೆ ಇದೇ ಕಾರಣವಾಗಿದೆ. ತಮ್ಮ ಯೋಗ್ಯತೆಯಲ್ಲಿ ಭರವಸೆ ಇರುವ ಕಾರಣ ಅವರು ಆಸಕ್ತಿಯಿಂದ ದೇವರ ಚಿತ್ತವನ್ನು ಹುಡುಕರು. ಅದರ ಬದಲಾಗಿ ಅವರು ತಮ್ಮ ಪ್ರತಿಭೆಯ ಮೇಲೆ ಅವಲಂಬನ ದಾರಿ ತಪ್ಪುತ್ತಾರೆ.

  ದೇವರು ಅನೇಕ ಸಾರಿ ನಮ್ಮ ಜೀವಿತದಲ್ಲಿ ಬೀಳುವಿಕೆಯನ್ನು ಗಲಿಬಿಲಿಯನ್ನು ಅನುಮತಿಸುತ್ತಾನೆ. ಅದರ ಮೂಲಕ ನಾವು ನಮ್ಮ ಹೃದಯದಲ್ಲಿರುವ ದುಷ್ಟತನವನ್ನು ಮತ್ತು ತಪ್ಪು ಮಾಡುವ ನಮ್ಮ ಬುದ್ಧಿಯ ಅಸ್ಥಿರತೆಯನ್ನು ಅರಿತು ಆತನನ್ನು ಸಮೀಪವಾಗಿ ಹಿಂಬಾಲಿಸುವ ಅವಶ್ಯಕತೆಯನ್ನು ಕಲಿಯುತ್ತೇವೆ. ಪ್ರಾಮುಖ್ಯವಾದ ಪಾಠವನ್ನು ಯೇಸು ತನ್ನ ಶಿಷ್ಯರಿಗೆ ಕಲಿಸಿದ್ದೇನಂದರೆ, ಆತನ ಹೊರತಾಗಿ ಅವರು ಏನೂ ಮಾಡಲಾರರು ಎಂಬುದೇ. (ಯೋಹಾನ 15:5) ಇದನ್ನು ಕಲಿಯುವುದರಲ್ಲಿ ಅವರು ಬಹಳ ನಿಧಾನವಾಗಿದ್ದರು. ನಾವೂ ಸಹ ಹಾಗೆಯೇ ಇದ್ದೇವೆ.

  ತನ್ನ ಮಿತಿಯನ್ನು ಅರಿತಿರುವ ದೀನಮನುಷ್ಯನು ದೇವರ ಚಿತ್ತವನ್ನು ಕಷ್ಟವಿಲ್ಲದೇ ತಿಳಿಯುವುದಕ್ಕೆ ದೇವರ ಮೇಲೆ ಸಂಪೂರ್ಣವಾಗಿ ಆತುಕೊಳ್ಳುತ್ತಾನೆ. ತನ್ನ ವೇದಾಂತದ ಮೇಲೆ ಅವಲಂಬಿಸಿರುವ ಸತ್ಯವೇದ ಶಾಳೆಯಲ್ಲಿ ಕಲಿತ ಸ್ವಾಭಿಮಾನಿಯಾದ ವ್ಯಕ್ತಿಯು ಕತ್ತಲೆಯಲ್ಲಿ ಹುಡುಕಾಡುತ್ತಾನೆ.

  ಪ್ರತಿ ಕ್ಷೇತ್ರದಲ್ಲಿ ವಿಧೇಯತೆ

  .

  ``ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.'' (ಜ್ಞಾನೋಕ್ತಿ 3:6).ಒಮ್ಮೊಮ್ಮೆ ನಾವು ದೇವರ ಮಾರ್ಗದರ್ಶನವನ್ನು ನಮ್ಮ ಜೀವಿತದಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ತಿಳಿಯಲು ಕುತೂಹಲವುಳ್ಳವರಾಗಿ ಬೇರೆ ಕ್ಷೇತ್ರದಲ್ಲಿ ತಿಳಿಯಲು ಇಷ್ಟವುಳ್ಳವರಾಗಿರುವುದಿಲ್ಲ. ಉದಾಹರಣೆ ವಿವಾಹದ ವಿಷಯದಲ್ಲಿ ದೇವರ ಚಿತ್ತವನ್ನು ಹುಡುಕಲು ಆಸಕ್ತಿಯುಳ್ಳವಾರಾಗಿ ಉದ್ಯೋಗವನ್ನು ಹುಡುಕುವ ವಿಷಯದಲ್ಲಿ ನಾವು ಅಷ್ಟೊಂದು ಆಸಕ್ತರಾಗಿರುವುದಿಲ್ಲ ಅಥವಾ ನಮ್ಮ ಒಂದು ತಿಂಗಳಿನ ರಜಾಕಾಲವನ್ನು ಹೇಗೆ ಕಳೆಯಬೇಕೆಂದು ದೇವರಲ್ಲಿ ಕೇಳಬಹುದು. ಆದರೆ ನಮ್ಮ ಹಣವನ್ನು ಹೇಗೆ ಖರ್ಚುಮಾಡಬೇಕೆಂದು ನಾವು ಕೇಳಲಿಕ್ಕಿಲ್ಲ.

  ಯಾಕಂದರೆ ನಮ್ಮ ಅನುಕೂಲಕ್ಕೆ ಮಾತ್ರ ನಾವು ದೇವರ ಮಾರ್ಗದರ್ಶನವನ್ನು ಬಯಸುತ್ತೇವೆ. ನಮಗೆ ಅರಿವಿಲ್ಲದೇ ನಮ್ಮ ಹೃದಯದಲ್ಲಿ ಸ್ವಾರ್ಥತೆಯು ತಲೆಯೆತ್ತುತದೆ. ನಮಗೆ ಕಷ್ಟ ಅಥವಾ ಹಾನಿಯಾಗಲಾರದೆಂದು ಕೆಲವು ಸಾರಿ ನಾವು ದೇವರ ಚಿತ್ತವನ್ನು ಹಲವು ವಿಷಯಗಳಲ್ಲಿ ಹುಡುಕುತ್ತೇವೆ. ಇದು ದೇವರನ್ನು ಮೆಚ್ಚಿಸುವ ಉದ್ದೇಶದಿಂದಲ್ಲ ಆದರೆ ನಮ್ಮ ಸುಖ ಸಮೃದ್ದಿಯನ್ನು ನೋಡಿಕೊಳ್ಳುವುದಕ್ಕಾಗಿಯೇ ಆದ್ದರಿಂದ ನಾವು ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದಿಲ್ಲ. ಯಾಕಂದರೆ ತಮ್ಮ ಎಲ್ಲಾ ಮಾರ್ಗಗಳಲ್ಲಿ ಆತನಿಗೆ ಸಂತೋಷದಿಂದ ವಿಧೇಯರಾಗಿರುವವರಿಗೆ ಮಾತ್ರ, ತಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಆತನ ಮಾರ್ಗದರ್ಶನವನ್ನು ಸ್ವೀಕರಿಸುವವರಿಗೆ ಆತನು ವಾಗ್ದಾನ ಮಾಡಿದ್ದಾನೆ.

  ಅನೇಕ ವಿಷಯಗಳ ಬಗ್ಗೆ ದೇವರ ವಾಕ್ಯದಲ್ಲಿ ಆತನ ಚಿತ್ತವು ಈಗಾಗಲೇ ಪ್ರಕಟಿಸಲ್ಪಟ್ಟಿದೆ. ಉದಾಹರಣೆಗೆ ನಾವು ಪವಿತ್ರರಾಗಿಯೂ ಕೃತಜ್ಞತೆಯುಳ್ಳವರಾಗಿಯೂ ಇರಬೇಕೆಂದು ಸತ್ಯವೇದ ಹೇಳುತ್ತದೆ

  .

  ``ದೇವರ ಚಿತ್ತವೇನಂದರೆ, ನೀವು ಶುದ್ಧರಾಗಿರಬೇಕೆಂಬುದೇ..... ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ. ಇದೇ ನಿಮ್ಮ ವಿಷಯವಾಗಿ ಕ್ರಿಸ್ತಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ. (1 ಥೆಸಲೋನಿಕ 4:3,5:18).

  ಹಾಗೆಯೇ ನಮ್ಮಂತೆಯೇ ನಮ್ಮ ನೆರೆಯವರನ್ನು ಪ್ರೀತಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ. (ರೋಮಾ 13:9). ನಾವು ದೇವರಿಂದ ಕ್ಷಮಾಪಣೆಯನ್ನು ರಕ್ಷಣೆಯನ್ನು ಹೊಂದಿಕೊಂಡಿದ್ದರೆ, ಅದನ್ನೆ ನಾವು ನಮ್ಮ ನೆರೆಯವರಿಗೂ ಅಪೇಕ್ಷಿಸಬೇಕು. ಹೊಸ ಒಡಂಬಡಿಕೆಯಲ್ಲಿ ದೇವರ ಚಿತ್ತವು ಸ್ಪಷ್ಟವಾಗಿ ಪ್ರಕಟಿಸಲ್ಪಟ್ಟಿದೆ. ನಾವು ಆತನಿಗೆ ಸಾಕ್ಷಿಗಳಾಗಿರಬೇಕು. (ಅ.ಕೃ.1:8).

  ನಮ್ಮ ನೆರೆಯವರನ್ನು ಪ್ರೀತಿಸುವುದರಲ್ಲಿ ಪ್ರಾಥಮಿಕವಾಗಿ ಅವರ ಆತ್ಮೀಕ ಕೊರತೆಯ ಬಗ್ಗೆ ಚಿಂತೆ ಇರಬೇಕು. ನಂತರ ಅವರ ಇತರ ಕೊರತೆಗಳು ದೇವರು ಹೇಳಿದ್ದು ``ಹಸಿದವರಿಗೆ ಅನ್ನವನ್ನು ಹಂಚುವುದು. ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು. ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು. ನಿನ್ನಂತೆ ನರನಾಗಿರುವ ಯಾವನಾಗಲೀ ಮುಖತಪ್ಪಿಸಿಕೊಳ್ಳದಿರುವುದು ಇವುಗಳೇ ನನಗೆ ಇಷ್ಟವಾದ ಉಪವಾಸ ವೃತವಲ್ಲವೇ. ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು.... ಆಗ ನೀವು ಕೂಗಿದರೆ ಯೆಹೋವನು ಉತ್ತರ ಕೊಡುವನು ಮೊರೆಯಿಟ್ಟು ಕರೆದರೆ, ಇಗೋ ಇದ್ದೇನೆ. ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು ಬೆರಳೆ ಸೊನ್ನೆಯನ್ನೂ ಕೆಡುಕಿನ ನುಡಿಯನ್ನು ಹೋಗಲಾಡಿಸಿ ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೇರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು. ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು. ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುವನು..... ``(ಯೆಶಾಯ 58:7-11). ನಿಸ್ವಾರ್ಥವಾಗಿ ಇತರರ ಕೊರತೆಗಳ ಬಗ್ಗೆ ಚಿಂತಿಸುವವರಿಗೆ ದೇವರು ಸಂತೋಷವಾಗಿ ತನ್ನ ಮನಸ್ಸನ್ನು ಪ್ರಕಟಿಸುವನು.

  ಕರ್ತನು ನಮಗೆ ಈಗಾಗಲೇ ತನ್ನ ವಾಕ್ಯದಲ್ಲಿ ಪ್ರಕಟಮಾಡಿದ ಚಿತ್ತಕ್ಕೆ ನಾವು ವಿಧೇಯರಾಗದಿದ್ದರೆ, ಬೇರೆ ಕಾರ್ಯಕ್ಷೇತ್ರಗಳಲ್ಲಿ ಆತನು ನಮ್ಮನ್ನು ನಡೆಸಲು ಅಪೇಕ್ಷಿಸಬೇಕಿಲ್ಲ. ಈಗಾಗಲೇ ಕೊಡಲ್ಪಟ್ಟ ಬೆಳಕನ್ನು ಅಲಕ್ಷ್ಯ ಮಾಡುವವನಿಗೆ ಹೆಚ್ಚಿನ ಬೆಳಕನ್ನು ಆತನು ಕೊಡುವದಿಲ್ಲವೆನ್ನುವದು. ದೈವೀಕ ನಿಯಮವಾಗಿದೆ. ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಪೂರ್ವದಲ್ಲಿ ದೇವರು ಎರಡನೇ ಹೆಜ್ಜೆಯನ್ನು ನಮಗೆ ತೋರಿಸುವುದಿಲ್ಲ. ``ನೀವು ನಡೆಯುವಾಗ ನಿಮ್ಮೆದುರಿಗೆ ಹೆಜ್ಜೆ ಹೆಜ್ಜೆಯಾಗಿ ನಾನು ಮಾರ್ಗವನ್ನು ತೆರೆಯುವೆನು.'' ಎಂದು ದೇವರು ವಾಗ್ದಾನ ಮಾಡಿದ್ದಾನೆ. (ಜ್ಞಾನೋಕ್ತಿ 4:12) ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿ ಆತನು ಆಸಕ್ತಿಯುಳ್ಳವನಾಗಿದ್ದಾನೆ. ಸತ್ಪುರುಷರು ದೇವರಲ್ಲಿ ಆನಂದಿಸಿ ಆತನ ಮಾರ್ಗಗಳನ್ನು ಅನುಸರಿಸುವುದರಲ್ಲಿ ನಿರತನಾಗಿರುವಾಗ ಪ್ರತಿಯೊಂದು ಹೆಜ್ಜೆಯೂ ಆತನಿಂದ ಸ್ಥಾಪಿಸಲ್ಪಟ್ಟು ನಡೆಸಲ್ಪಡುತ್ತದೆ. (ಕೀರ್ತನೆ 37:23).

  ವಿಧೇಯರಾಗುವವರಿಗೆ ಇಲ್ಲಿ ಇನ್ನೊಂದು ವಾಗ್ದಾನ ಇದೆ. ``ನಿನ್ನನ್ನು ಉಪದೇಶಿಸಿ ಅತ್ಯುತ್ತಮವಾದ ಮಾರ್ಗದಲ್ಲಿ ನಿನ್ನ ಜೀವನವನ್ನು ನಡಿಸಿ ನಿನಗೆ ಉಪದೇಶಿಸಿ (ಆಲೋಚನೆ ಹೇಳಿ) ನಿನ್ನ ಪ್ರಗತಿಯನ್ನು ವೀಕ್ಷಿಸುವೆನು. ಆದ್ದರಿಂದ ನೀವು ವಿವೇಕಹೀನರಾಗಿ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲೀ ಇರಬೇಡಿರಿ.'' (ಕ್ರೀರ್ತನೆ 32:8,9)(ಕುದುರೆಯು ಯಾವಾಗಲೂ ಅವಸರವಾಗಿ ದುಡುಕಿಮುಂದೋಡುವ ಸ್ವಭಾವದ್ದು. ಆದರೆ ಹೇಸರಕತ್ತೆಯು ಮುಂದೆ ಸಾಗದೇ ಮೊಂಡವಾಗಿ ನಿಂತುಕೊಳ್ಳುವ ಸ್ವಾಭಾವದ್ದು. ನಾವು ಇವೆರಡನ್ನೂ ನಮ್ಮಿಂದ ದೂರಮಾಡಬೇಕು)

  ನಾವು ಅವಿಧೇಯರಾದಾಗ ದೇವರು ನಮಗೆ ನಮ್ಮ ಮನಸ್ಸಾಕ್ಷಿಯ ಮೂಲಕ ಮಾತಾಡುವನು ಆದ್ದರಿಂದ ನಾವು ಯಾವಾಗಲೂ ನಮಸ್ಸಾಕ್ಷಿಯ ಸ್ವರವನ್ನು ಕೇಳುವುದನ್ನು ಕಲಿತುಕೊಳ್ಳಬೇಕು. ಯೇಸು ಹೇಳಿದ್ದು ``ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು. ``(ಲೂಕ 11:34). ಕಣ್ಣು ಎಂಬುದಾಗಿ ಹೇಳುವಾಗ ಯೇಸುವಿನ ಅರ್ಥವೇನು? ಮತ್ತಾಯ 5:8 ರಲ್ಲಿ ಆತ್ಮೀಕ ಕಣ್ಣು ಮನಸ್ಸಾಕ್ಷಿಯನ್ನು ಸೂಚಿಸುತ್ತದೆ. ಅದಕ್ಕೆ ನಾವು ನಿರಂತರವಾಗಿ ವಿಧೇಯರಾಗುತ್ತಿದ್ದರೆ, ಅದು ನಮ್ಮನ್ನು ಹೃದಯದ ಶುದ್ಧತೆಗೆ ನಡಿಸುತ್ತದೆ.

  ಮನಸ್ಸಾಕ್ಷಿಯು ತಾನೇ ದೇವರ ಸ್ವರವಲ್ಲ. ಆದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಯಾವ ನಿಯಮಗಳ ಮೇಲೆ ಆಧಾರವಾಗಿ ಕಟ್ತುತ್ತಾನೋ ಅದರಿಂದ ಅದು ಧೃಢೀಕರಿಸಲ್ಪಡುತ್ತದೆ. ಸತ್ಯವೇದ ಬೋಧನೆಗಳಿಗೆ ಸತತವಾಗಿ ವಿಧೇಯರಾಗುವಾಗ ನಮ್ಮ ಮನಸ್ಸಾಕ್ಷಿಯು ದೇವರ ಮಟ್ಟವನ್ನು ಅಧಿಕವಾಗಿ ಪ್ರತಿಬಿಂಬಿಸುತ್ತದೆ. ಲೂಕ 11:34 ರಲ್ಲಿ ವಾಗ್ದಾನವು - ನಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟು ಕೊಳ್ಳುವಾಗ ದೇವರ ಬೆಳಕು ನಮ್ಮ ಜೀವಿತದಲ್ಲಿ ಪ್ರವಾಹವಾಗಿ ಹರಿಯುತ್ತದೆ. ಹೀಗೆ ನಾವು ಆತನ ಚಿತ್ತವನ್ನು ತಿಳುಕೊಳ್ಳುತ್ತೇವೆ. ನಮ್ಮ ಆನುದಿನದ ಜೀವಿತದಲ್ಲಿ ನಾವು ನಮ್ಮ ಮನಸ್ಸಾಕ್ಷಿಗೆ ಕಿವಿಗೊಡದಿದ್ದರೆ, ದೇವರ ಮಾರ್ಗದರ್ಶನವನ್ನು ಹುಡುಕುವ ಸಮಯದಲ್ಲಿ ದೇವರ ಆತ್ಮನ ಸ್ವರವನ್ನು ಕೇಳಲಿಕ್ಕೆ ಆಗುವುದಿಲ್ಲ. ಮಾರ್ಗದರ್ಶನದ ರಹಸ್ಯವೇನಂದರೆ - ದೇವರು ಮಾತಾಡುವಾಗ ತಕ್ಷಣ ವಿಧೇಯರಾಗುವುದೇ.

  ಇತ್ತೀಚೆಗೆ ಹುಟ್ಟು ಕುರುಡನಾಗಿದ್ದು 15 ವಯಸ್ಸಿನ ಬಾಲಕನೊಬ್ಬನು ಒಂದು ವಿಮಾನವನ್ನು ಸುರಕ್ಷಿತವಾಗಿ ಹಾರಿಸಿ ಇಳಿಸಿದನೆಂದು ನಾನು ಓದಿದೆನು. ಈ ಸಾಧನೆಯ ರಹಸ್ಯವೇನಂದರೆ, ಆ ಬಾಲಕನು ತನ್ನ ವಿಮಾನ ಚಾಲಕ ಗುರುವಿನ ಪ್ರತಿಯೊಂದು ಆಜ್ಞೆ ಪಾಲಿಸಿದ್ದರಿಂದಲೇ.

  ಜೀವನದ ಅನೇಕ ಸಮಸ್ಯೆಗಳನ್ನು ಎದುರಿಸುವಾಗ ಗೊತ್ತಿಲ್ಲದ ಸ್ಥಳದಲ್ಲಿ ದಾರಿಕಾಣದ ಮಾರ್ಗದಲ್ಲಿ ವಿಮಾನವನ್ನು ಇಳಿಸುವ ಕುರುಡನಂತೆ ನಮಗೆ ಅನಿಸಬಹುದು. ಆದರೆ ದೇವರ ಆಜ್ಞೆಗಳಿಗೆ ತಕ್ಷಣ ವಿಧೇಯರಾಗುವ ಅಭ್ಯಾಸವನ್ನು ಇಟ್ಟುಕೊಂಡರೆ, ನಾವು ಸರಿಯಾಗಿ ಮಟ್ಟಬೇಕಾದ ಸ್ಥಳವನ್ನು ಮುಟ್ಟುತ್ತೇವೆ.

  ``ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧಾನೆಯು.... ಹೀಗಾದರೆ, ದೇವರ ಚಿತ್ತಕ್ಕನುರವಾದದ್ದೂ ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ. (ರೋಮಾ 12:1,2).

  ಹೊಸ ಒಡಂಬಡಿಕೆಯು ಕರ್ತನೆಗೆ ನಾವು ದಾಸರಾಗಬೇಕೆಂದು ಎಚ್ಚರಿಸುತ್ತದೆ. ಪೌಲನು ತನ್ನನ್ನು ಯೇಸುಕ್ರಿಸ್ತನ ದಾಸನು (ಗುಲಾಮನು) ಎಂದು ಕರೆದುಕೊಂಡನು. ಹಳೆ ಒಡಂಬಡಿಕೆಯಲ್ಲಿ ಎರಡು ವಿಧವಾದ ಸೇವಕರಿದ್ದರು. ಗುಲಾಮರು ಮತ್ತು ಸಂಬಳಕ್ಕೆ ಕೆಲಸ ಮಾಡುವ ಸೇವಕರು. ಸಂಬಳಕ್ಕೆ ಕೆಲಸಮಾಡುವ ಸೇವಕರ ಹಾಗೆ ಗುಲಾಮರಿಗೆ ಯಾವ ಹಣವೂ ದೊರೆಯುತ್ತಿರಲಿಲ್ಲ. ಆತನ ಧಣಿಯಿಂದ ಆತನು ಕ್ರಯಕ್ಕೆ ಕೊಳ್ಳಲ್ಪಟ್ಟಿದ್ದನು. ಆದ್ದರಿಂದ ಅವನೂ ಅವನಿಗೆ ಇರುವುದೆಲ್ಲವೂ ಆತನ ಯಜಮಾನನಿಗೆ ಸೇರಿತ್ತು. ಪ್ರತಿಯೊಬ್ಬ ವಿಶ್ವಾಸಿಯೂ ಇದನ್ನು ಅರಿಯುವುದು ಅವಶ್ಯ. ನಮ್ಮ ಸಮಯ, ಹಣ, ತಲಾಂತುಗಳು, ಕುಟುಂಬ, ಸ್ವತ್ತು, ಮನಸ್ಸು ಮತ್ತು ದೇಹ - ಎಲ್ಲವೂ ನಮ್ಮ ಕರ್ತನೂ ಯಜಮಾನನೂ ಆಗಿರುವಾತನಿಗೆ ಸೇರಿವೆ. ಯಾಕಂದರೆ ಅವುಗಳನ್ನು ಆತನು ಶಿಲುಬೆಯ ಮೇಲೆ ಕೊಂಡುಕೊಂಡಿದ್ದಾನೆ. (1 ಕೊರಿಂಥ 6:19,20).

  ಆದ್ದರಿಂದ ನಮ್ಮ ದೇಹಗಳನ್ನು ದೇವರಿಗೆ ಸಜೀವ ಯಜ್ಞವಾಗಿ ಅರ್ಪಿಸಬೇಕೆಂದು ಆಜ್ಞಾಪಿಸಲ್ಪಟ್ಟಿದೆ. ಹಳೇ ಒಡಂಬಡಿಕೆಯಲ್ಲಿ ಸರ್ವಂಗ ಹೋಮ ಯಜ್ಞವು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಲ್ಪಡ ಬೇಕಿತ್ತು. ಒಬ್ಬನು ಸರ್ವಾಂಗ ಹೋಮ ಯಜ್ಞವನ್ನು ಅರ್ಪಿಸಿದಾಗ ಏನೂ ವಾಪಾಸ್ಸು ಪಡಕೊಳ್ಳಲು ಸಾಧ್ಯವಿಲ್ಲ. ಆ ಯಜ್ಞವನ್ನು ದೇವರು ತನಗೆ ಬೇಕಾದಂತೆ ಉಪಯೋಗಿಸಬಹುದಾಗಿತ್ತು. ಇದು ಕಲ್ವಾರಿ ಶಿಲುಬೆಯ ಮೇಲೆ ಯೇಸುವು ತನ್ನನ್ನು ಸಂಪೂರ್ಣವಾಗಿ ತಂದೆಗೆ ಅರ್ಪಿಸಿದ ಚಿಹ್ನೆ ಯಾಗಿದೆ. ``ತಂದೆಯೇ ನನ್ನ ಚಿತ್ತವಲ್ಲ ನಿನ್ನ ಚಿತ್ತವೇ ನೇರವೇರಲಿ.'' ನಮ್ಮ ದೇಹವನ್ನು ದೇವರಿಗೆ ಸಜೀವ ಯಜ್ಞವಾಗಿ ಅರ್ಪಿಸುವುದರ ಅರ್ಥ ಅದೇ ನಾವು ನಮ್ಮ ಸ್ವ ಇಚ್ಚೆಗಳಿಗೆ ಸತ್ತು ಆತನಿಗೋಸ್ಕರ ನಮ್ಮ ದೇಹವನ್ನು ಎಲ್ಲಿ ಮತ್ತು ಹೇಗೆ ಉಪಯೋಗಿಸಲ್ಪಡಬೇಕೆಂದು ನಿರ್ಣಯಿಸುವುದರ ಮೂಲಕ ಆತನ ಚಿತ್ತವನ್ನು ತಿಳಿಯಲು ಸಾಧ್ಯ.

  ಇಂತಹ ಸಮರ್ಪಣೆಯ ಕೊರತೆಯೇ ದೇವರ ಚಿತ್ತವನ್ನು ಕಂಡುಹಿಡಿಯಲಾಗದಿರುವುದಕ್ಕೆ ಮೂಲ ಕಾರಣವಾಗಿದೆ. ಅನೇಕ ಸಾರೆ ನಾವು ದೇವರಿಗೆ ಕರಾರುಗಳನ್ನು ಹಾಕುತ್ತೇವೆ. ದೇವರು ನಮಗೆ ಕೊಡುವ ಯಾವುದನ್ನಾದರೂ ಸ್ವೀಕರಿಸಲು ನಾವು ಸಿದ್ಧರಿಲ್ಲ

  .

  ಒಂದು ಸಾರೆ ನಾನು ಒಬ್ಬ ಸಹೋದರರನ್ನು ಭೇಟಿಯಾದೆನು. ಅವರು ಪೂರ್ಣ ಕಾಲ ಕ್ರೈಸ್ತ ಸೇವೆ ಒಂದನ್ನು ಬಿಟ್ಟು ಬೇರೆ ಯಾವ ಉದ್ಯೋಗವನ್ನಾದರೂ ಮಾಡಲು ಬಯಸಿದರು. ಹೀಗೆ ಕರಾರು ಹಾಕುವದರಿಂದಲೇ ದೇವರ ಚಿತ್ತವನ್ನು ಸ್ಪಷ್ಟವಾಗಿ ಅವರ ಜೀವಿತದಲ್ಲಿ ತಿಳಿಯಲು ಅವರಿಗೆ ಆಗದು ಎಂದು ನಾನು ಅವರಿಗೆ ಹೇಳಿದೆನು. ಕೊನೆಗೆ ಅವರು ದೇವರಿಗೆ ಸಂಪೂರ್ಣವಾಗಿ ಅಧೀನರಾದಾಗ ದೇವರ ಚಿತ್ತದ ಭರವಸೆಯನ್ನು ಆಳವಾಗಿ ಹೊಂದಿಕೊಂಡರು. ದೇವರು ಅವರನ್ನು ಪೂರ್ಣಕಾಲ ಕ್ರೈಸ್ತ ಸೇವೆಗೆ ಕರೆಯಲಿಲ್ಲ. ಆದರೆ ಅವರು ಇಷ್ಟವುಳ್ಳವರಾಗಿದ್ದಾರೋ ಎಂದು ಅರಿಯಬೇಕಿತ್ತು.

  ಅನೇಕರು ದೇವರ ಚಿತ್ತವನ್ನು ತಿಳಿಯಬೇಕೆಂಬ ನೆವದಿಂದ ಆತನ ಬಳಿಗೆ ಬರುತ್ತಾರೆ. ಆದರೆ ಅವರು ಈಗಾಗಲೇ ಆರಿಸಿದ ಮಾರ್ಗಕ್ಕೆ ದೇವರ ಮನ್ನಣೆಗೋಸ್ಕರ ಆತನ ಬಳಿಗೆ ಬರುತ್ತಾರೆ. ಆದ್ದರಿಂದ ಅವರು ದೇವರಿಂದ ಯಾವ ಉತ್ತರವನ್ನು ಪಡೆಯುವದಿಲ್ಲ. ನಾವು ನಮ್ಮನ್ನು ದೇವರಿಗೆ ಯಾವ ಕರಾರಿಲ್ಲದೇ ``ಕರ್ತನೇ ನಾನು ಯಾವುದನ್ನಾದರೂ ನಿನ್ನ ಚಿತ್ತವಿದ್ದರೆ ಸ್ವೀಕರಿಸಲಿಕ್ಕೆ ಸಿದ್ಧವಾಗಿದ್ದೇನೆ. ನೀನು ನನಗೋಸ್ಕರ ಆರಿಸು ಈ ವಿಷಯದಲ್ಲಿ ನನ್ನ ಆಯ್ಕೆ ಏನಿಲ್ಲ'' ಎಂದು ಹೇಳಿ ನಮ್ಮ ಚಿತ್ತವನ್ನು ಆತನಿಗೆ ಅರ್ಪಿಸಿದರೆ ನಮ್ಮ ಮಾರ್ಗದರ್ಶನದ ಸಮಸ್ಯೆಗಳು ಎಷ್ಟು ಬೇಗ ನಿವಾರಿಸಲ್ಪಡುತ್ತದೆ. ಅಬ್ರಹಾಮನು ದೇವರಿಗೋಸ್ಕರ ಎಲ್ಲಿಯಾದರೂ ಏನಾದರೂ ಯಾವ ಸಮಯದಲ್ಲಾದರೂ ಮಾಡಲಿಕ್ಕೆ ಮನಸ್ಸುಳ್ಳವನಾಗಿದ್ದರಿಂದಲೇ ಆತನು ``ದೇವರ ಸ್ನೇಹಿತ'' ನಾದನು.

  ಬ್ರಿಸ್ಟೊಲ್ (ಇಂಗ್ಲೆಂಡ)ನ ಜಾರ್ಜ ಮುಲ್ಲರ್ ರವರು ನಂಬಿಕೆಯ ದೊಡ್ಡ ವ್ಯಕ್ತಿಯಾಗಿ ದೇವರ ಚಿತ್ತವನ್ನು ಬಹು ಸ್ಪಷ್ಟವಾಗಿ ಕಂಡು ಹಿಡಿಯಲು ಶಕ್ತರಾಗಿದ್ದರು. ಇದರ ವಿಷಯದಲ್ಲಿ ಅವರು ಹೀಗೆ ಹೇಳಿದ್ದಾರೆ-``ಮೊಟ್ಟಮೊದಲಿಗೆ ನಾನು ಯಾವ ವಿಷಯದಲ್ಲಿಯಾದರೂ ನನ್ನ ಚಿತ್ತವಿಲ್ಲದಂತೆ ನನ್ನ ಹೃದಯವನ್ನು ಸರಿಪಡಿಸಿಕೊಳ್ಳುತ್ತೇವೆ. ಜನರ ಸಮಸ್ಯೆಗಳು ಹತ್ತರಲ್ಲಿ ಒಂಬತ್ತರಷ್ಟು ಇಲ್ಲಿಯೇ ಇವೆ. ಏನೇ ಆದರೂ ದೇವರ ಚಿತ್ತವನ್ನು ಮಾಡಲು ನಾವು ಇಷ್ಟವುಳ್ಳವರಾಗಿರುವಾಗ ಹತ್ತರಲ್ಲಿ ಒಂಬತ್ತು ಅಂಶ ನಮ್ಮ ತೊಂದರೆಗಳು ನೀಗುತ್ತವೆ. ಒಬ್ಬ ವ್ಯಕ್ತಿಯು ಈ ಮಟ್ಟಕ್ಕೆ ಬರುವಾಗ ಆತನ ಚಿತ್ತವನ್ನು ಕಂಡುಕೊಳ್ಳುವುದಕ್ಕೆ ಹೆಚ್ಚು ಕಷ್ಟವಿರುವುದಿಲ್ಲ.

  ಕೆಲವರು ವಿಧೇಯರಾಗಬೇಕೋ ಬೇಡವೋ ಎಂದು ನಿರ್ಣಯಿಸುವುದಕ್ಕೆ ಮುಂಚಿತವಾಗಿಯೇ ದೇವರ ಚಿತ್ತವನ್ನು ತಿಳಿಯಲಪೇಕ್ಷಿಸುತ್ತಾರೆ. ಅಂಥವರಿಗೆ ದೇವರು ತನ್ನ ಚಿತ್ತವನ್ನು ತಿಳಿಸುವುದಿಲ್ಲ. ಯೇಸು ಹೇಳಿದ್ದು ``ಆತನ ಚಿತ್ತವನ್ನು ನೆರವೇರಿಸುವವನು ತಿಳಿದುಕೊಳ್ಳುವನು'' ಎಂದು ಹೇಳಿದ್ದಾನೆ. (ಯೋಹಾನ 7:17)/ ದೇವರಿ ಆಜ್ಞಾಪಿಸಿದ್ದು ಏನೇ ಆಗಿರಲಿ ಅದನ್ನು ಮಾಡಲು ಮನಸ್ಸಿದ್ದರೆ ಮಾತ್ರ ದೇವರ ಪರಿಪೂರ್ಣ ಚಿತ್ತವನ್ನು ತಿಳಿಯಲು ನಾವು ಅರ್ಹರಾಗುತ್ತೇವೆ. hಇದು ಚಿಕ್ಕ ಮತ್ತು ದೊಡ್ಡ ವಿಷಯಗಳೀಗೂ ಅನ್ವಯಿಸುತ್ತದೆ.

  ``ದೇವರೇ, ನಮಗೋಸ್ಕರ ನೀನು ಆಯ್ಕೆಮಾಡು

  .

  ನಮಗೋಸ್ಕರ ನೀನು ಯೋಜಿಸಿಟ್ಟಿದ್ದನ್ನು ನಮ್ಮ ಬಲಹೀನವಾದ ಇಚ್ಚೆಗಳು ನಮಗೆ ಮೋಸಮಾಡದಿರಲಿ. ನಿನ್ನ ಜ್ಞಾನವು ತಪ್ಪಿಲ್ಲದ್ದು. ನಾವು ಮುರ್ಖರೂ ಕುರುಡರೂ ಆಗಿದ್ದರಿಂದ ದೇವರೇ ನಮಗೋಸ್ಕರ ನೀನು ಆಯ್ಕೆ ಮಾಡು.

  ನೂತನ ಮನಸ್ಸು

  ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದು ಮೆಚ್ಚಿಕೆಯಾದದ್ದು ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ. (ರೋಮಾ 12:2).

  ಪ್ರಾಪಂಚಕತೆಯು ದೇವರ ಧ್ವನಿಯನ್ನು ಕೇಳದ ಹಾಗೆ ನಮ್ಮ ಆತ್ಮದ ಕಿವಿಗಳನ್ನು ಮುಚ್ಚಿಬಿಡುತ್ತದೆ - ಈ ಲೋಕದಲ್ಲಿರುವ ಪ್ರತಿಯೊಬ್ಬನೂ ಪ್ರಾಪಂಚಿಕ ಆತ್ಮದಿಂದ ಭಾದಿಸಲ್ಪಡುತ್ತಾನೆ. ಯಾವನೂ ಈ ಪ್ರಭಾವದಿಂದ ತಪ್ಪಿಸಿಕೊಂಡಿಲ್ಲ. ನಾವು ಕೇಳುವ ನೋಡುವ ಅಥವಾ ಓದುವುದರ ಮೂಲಕವಾಗಿ ನಮ್ಮ ಬಾಲ್ಯದಿಂದ ಪ್ರತಿಯೊಬ್ಬನು ಈ ಲೋಕದ ಆತ್ಮವನ್ನು ಪ್ರತಿದಿನ ಹೀರಿಕೊಳ್ಳುತ್ತಾನೆ. ಇದು ವಿಶೇಷವಾಗಿ ನಮ್ಮ ಮನಸ್ಸು ಮತ್ತು ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗೆ ನಾವು ತೆಗೆದುಕೊಳ್ಳುವ ನಿರ್ಣಯಗಳು ಲೌಕೀಕ ದೃಷ್ಟಿಯಿಂದ ಮೂಲತಃ ಬರುತ್ತವೆ.

  ನಾವು ಹೊಸದಾಗಿ ಹುಟ್ಟಿದಾಗ ನಮ್ಮೊಳಗೆ ವಾಸವಾಗಿರುವ ದೇವರ ಆತ್ಮನು ಈ ಲೋಕದ ಆತ್ಮಕ್ಕೆ ವಿರೋಧವಾಗಿದ್ದಾನೆ. ಆದ್ದರಿಂದ ನಮ್ಮ ಅಲೋಚನೆಗಳನ್ನು ಸಂಪೂರ್ಣವಗಿ ನವೀಕರಿಸಲು ಇಚ್ಚಿಸುತ್ತಾನೆ. ದೇವರ ಖಂಡಿತವಾಗಿ (ಚಿಟಣimಚಿಣe) ಉದ್ದೇಶವು ನಾವು ಆತನ ಮಗನ ಸಾರೂಪ್ಯವನ್ನು ಹೊಂದಿಕೊಳ್ಳಬೇಕೆಂಬುವುದು./p>

  ಆತನ ಚಿತ್ತದ ಪ್ರಾಥಮಿಕ ಉದ್ದೇಶವು ಇದೇ ಆಗಿದೆ. ಮಿಕ್ಕಿದ್ದೆಲ್ಲವೂ - ಅಂದರೆ ಯಾರನ್ನು ವಿವಾಹವಾಗಬೇಕು ನಾವು ಎಲ್ಲಿ ವಾಸಿಸಬೇಕು. ಕೆಲಸವಾಡಬೇಕು ಇವೆಲ್ಲವುಗಳೂ ಎರಡನೇಯವು, ನಾವು ಯೇಸುವಿನಂತೆ ಆಗಬೇಕೆಂಬ ಉದ್ದೇಶದಿಂದ ದೇವರು ತನ್ನ ಎಲ್ಲಾ ವ್ಯವಹಾರವನ್ನು ನಮ್ಮ ವಿಷಯದಲ್ಲಿ ಈ ದಿಸೆಯಲ್ಲಿ ನಡೆಸುತ್ತಾನೆ. (ರೋಮಾ 8:28,29 ನೋಡಿರಿ). ಪವಿತ್ರಾತ್ಮನು ನಮ್ಮ ಮನಸ್ಸನ್ನು ನೂತನ ಪಡಿಸಲು ಅನುಮತಿಸಿದಾಗ ಮಾತ್ರ ಇದು ನೆರವೇರುತ್ತದೆ. ಹೀಗೆ ನಮ್ಮ ಮನಸ್ಸು ಎಷ್ಟಾಗಿ ನವೀಕರಿಸಲ್ಪಡುತ್ತದೋ ಅಷ್ಟು ಹೆಚ್ಚಾಗಿ ನಾವು ಜೀವನದ ಅಡ್ಡದಾರಿಗಳಲ್ಲಿ ದೇವರ ಚಿತ್ತವನ್ನು ವಿವೇಚಿಸಲು ಸಾಧ್ಯವಾಗುತ್ತದೆ.

  ಪ್ರಾಪಂಚಿಕತೆಯು ಬಾಹಿರವಾಗಿರುವಂಥದ್ದು ಮಾತ್ರವಲ್ಲ ಸಿನಿಮಾಗೆ ಹೋಗುವುದು ಕುಡಿಯುವುದು, ದೂಮಪಾನ ಮಾಡುವುದು, ಬಹು ಬೆಲೆ ಬಾಳುವ ಅಧುನಿಕ ಉಡುಪುಗಳನ್ನು ಧರಿಸುವುದು ಆಭರಣಗಳನ್ನು ಧರಿಸಿಕೊಳ್ಳುವುದು. ಸ್ವೇಚ್ಚೆಯಾಗಿ ಜೀವಿಸುವುದು ಇವು ಮಾತ್ರ ಪ್ರಾಪಂಚಿಕತೆಯಲ್ಲ. ಇವೆಲ್ಲವುಗಳು ಪ್ರಾಂಪಂಚಿಕ ವ್ಯಕ್ತಿಯ ಯೋಚನಾ ಜೀವಿತದ ಬಾಹಿರ ಪ್ರತಿಬಿಂಬವಾಗಿರಬಹುದು. ಲೌಕೀಕತೆಯು ಮೂಲತಃವಾಗಿ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿದ್ದು ಬೇರೆ ವಿಧಗಳಲ್ಲಿ ಅದು ಕಾಣಬರುತ್ತದೆ. ವಿಶೇಷವಾಗಿ ಆತನ ನಿರ್ಣಯಗಳಲ್ಲಿ ಉದಾಹರಣೆಗೆ ಲೌಕೀಕ ವ್ಯಕ್ತಿಯು ಕೆಲಸವನ್ನು ಹುಡುಕುವಾಗ ಸಂಬಳ ಬಡ್ತಿಯ ಬಗ್ಗೆ ಸೌಕರ್ಯ ಅನುಕೂಲತೆ ಮುಂತಾದವುಗಳನ್ನು ಮತ್ತು ವಿವಾಹದ ಸಮಯದಲ್ಲಿ - ಕುಟುಂಬದ ಮಟ್ಟ ಜಾತಿ, ಕುಲ ವರದಕ್ಷಿಣೆ, ದೈಹಿಕ ಸೌಂಧರ್ಯ ಐಶ್ವರ್ಯ ಮುಂತಾದವುಗಳನ್ನು ಪರಿಗಣಿಸುತ್ತಾನೆ.

  ಆದರೆ ವಿಶ್ವಾಸಿಯು ಮೂಲತಃವಾಗಿ ಆತ್ಮೀಕ ವಿಷಯಗಳ ಬಗ್ಗೆ ಗಮನವಿಡಬೇಕು. ದೇವರ ಮಹಿಮೆ ಆತನ ರಾಜ್ಯದ ವಿಸ್ತಾರ ನಮ್ಮ ಮೊದಲು ತವಕವಾಗಿರಬೇಕು. ಆದ್ದರಿಂದಲೇ ಕರ್ತನು ನಮಗೆ ಹೀಗೆ ಪ್ರಾರ್ಥಿಸಲು ಕಲಿಸಿದನು. ``ನಿನ್ನ ನಾಮವು ಪರಿಶುದ್ಧವಾಗಲಿ ನಿನ್ನ ರಾಜ್ಯವುಬರಲಿ.'' ಇದಾದಮೇಲೆ ``ನಿನ್ನ ಚಿತ್ತವು.....ನೆರವೇರಲಿ''

  ನಾವು ದೇವರ ಚಿತ್ತವನ್ನು ತಿಳಿದುಕೊಳ್ಳ ಬೇಕಾದರೆ, ಪ್ರಾಪಂಚಿಕ ಉದ್ದೇಶಗಳನ್ನು ತ್ಯಜಿಸುವ ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳುವ ವಿಧಾನವು ಅತ್ಯವಶ್ಯ. ನಾವು ಸ್ವಾರ್ಥಿಗಳಾಗಿದ್ದು ``ದೇವರು ನನ್ನನ್ನು ನಡಿಸಿದನು'' ಎಂದು ಹೇಳುವುದು. ದೇವ ದೂಷಣೆಯಾಗಿದೆ. ಅಂತಹ ಸಂಧರ್ಭಗಳಲ್ಲಿ ನಮ್ಮ ಪ್ರಾಪಂಚಿಕತೆಯನ್ನು ಮುಚ್ಚಿಕೊಳ್ಳಲು ದೇವರ ಹೆಸರನ್ನು ಉಪಯೋಗಿಸುವುದಕ್ಕಿಂತ ಅದು ನನ್ನ ನಿರ್ಣಯವಾಗಿತ್ತು ಎಂದು ಹೇಳುವುದು ಎಷ್ಟೋ ಉತ್ತಮ. ನಾವು ದೇವರ ಚಿತ್ತವನ್ನು ನೆರವೇರಿಸುತ್ತಿದ್ದೇವೆಂದು ಹೇಳಿ ಇತರರನ್ನು (ಅಥವಾ ನಮ್ಮನ್ನು) ಮನವರಿಕೆಮಾಡುವುದರಿಂದ ನಮಗೇನೂ ಲಾಭವಿಲ್ಲ. ದೇವರು ಹೇಗೂ ಮೋಸಹೋಗುವವನಲ್ಲ. ಸತ್ಯವೇದ ಹೇಳುವುದೇನಂದರೆ, ``ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ :ಯೆಹೋವನು ಅಂತರಂಗವನ್ನೇ ಪರಿಕ್ಷೀಸುವನು....ನರನ ನಡತೆಯು ಸ್ವಂತ ದೃಷ್ಟಿಗೆ ನೆಟ್ಟಗೆ, ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು. (ಜ್ಞಾನೋಕ್ತಿ 16:2, 21:2)

  ನಮ್ಮ ಮನಸ್ಸುಗಳು ನವೀಕರಿಸಲ್ಪಡುವಾಗ ಅದರ ಪರಿಣಾಮ ನಾವು ದೇವರಂತೆ ಯೋಚಿಸುತ್ತೇವೆ. ಮತ್ತು ಇತರರನ್ನು ಮತ್ತು ಸನ್ನಿವೇಶಗಳನ್ನು ದೇವರ ದೃಷ್ಟಿಯಿಂದ ನೋಡುತ್ತೇವೆ. ಪೌಲನ ಮನಸ್ಸು ಎಷ್ಟೋಂದು ನೂತನವಾಗಿತ್ತೆಂದರೆ, ತನಗೆ ಕ್ರಿಸ್ತನ ಮನಸ್ಸಿದೆ ಮತ್ತು ಇತರರನ್ನು ಮನುಷ್ಯರ ದೃಷ್ಟಿಯಿಂದ ನೋಡುವುದಿಲ್ಲವೆಂದು ಹೇಳುತ್ತಾನೆ. (1 ಕೊರಿಂಥ 2:16; 2 ಕೊರಿಂಥ 5:16). ಕೊಲೊಸ್ಸೆಯಲ್ಲಿರುವ ವಿಶ್ವಾಸಿಗಳೂ ಸಹ ಹೀಗೆ ರೂಪಾಂತರ ಹೊಂದಬೇಕೆಂದು ಪ್ರಾರ್ಥಿಸಿದನು. ``ಆತ್ಮೀಕ ಒಳನೋಟ ಮತ್ತು ತಿಳಿವಳಿಕೆಯನ್ನು ಹೊಂದಿ ನೀವು ಎಲ್ಲವನ್ನೂ ದೇವರ ದೃಷ್ಟಿಯಿಂದ ಎಂಬಂತೆ ನೋಡಬೇಕೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.'' (ಕೊಲೊಸ್ಸೆ 1:9 ಎಃP)

  ಹೀಗೆ ನವೀಕರಿಸಲ್ಪಟ್ಟ ಮನಸ್ಸಿನ ಮೂಲಕವಾಗಿ ನಾವು ದೇವರಿಗೆ ಇಷ್ಟವಾದದ್ದು ಯಾವುದು ಇಷ್ಟವಿಲ್ಲದ್ದು ಯಾವುದೆಂದು ತಿಳಿದು ನಾವು ಎದುರಿಸುವ ಸನ್ನಿವೇಶಗಳಲ್ಲಿ ಆತನ ಚಿತ್ತವನ್ನು ಸುಲಭವಾಗಿ ವಿವೇಚಿಸಲು ಸಾಧ್ಯ. ಈ ಹೊಸ ಒಡಂಬಡಿಕೆಯಲ್ಲಿ ದೇವರು ನಮಗೆ ಮಾಡಿದ ವಾಗ್ದಾನವು ಇದಾಗಿದೆ. ನಾನು ಮಾಡಿಕೊಳ್ಳುವ ಹೊಸ ಒಪ್ಪಂದವು.....ನಾನು ನನ್ನ ವಾಕ್ಯವನ್ನು ಅವರ ಮನಸ್ಸಿನಲ್ಲಿ ಬರೆಯುವೆನು. ಇದರಿಂದ ನಾನು ಅವರಿಗೆ ಹೇಳದಿದ್ದರೂ ನನ್ನ ಚಿತ್ತವನ್ನು ಅವರು ನೇರವೇರಿಸುವರು.... ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಬರೆಯುವೆನು. ಹೀಗಾಗಿ ಅವರು ಯಾವಾಗಲೂ ನನ್ನ ಚಿತ್ತವನ್ನು ತಿಳಿದವರಾಗಿರುವರು. (ಇಬ್ರಿಯ 8:10, 10:16 ಸಜೀವ).

  ಇಂಥಹ ನವೀಕರಣವು ದೇವರ ಚಿತ್ತವನ್ನು ತಿಳಿಯಲು ಮಾತ್ರವಲ್ಲ, ಆತನ ವಿಧಾನ ಉದ್ದೇಶಗಳನ್ನು - ನಾವೇನು ಮಾಡಬೇಕು. ಹೇಗೆ ಮಾಡಬೇಕು. ಮತ್ತು ಯಾಕೆ ಮಾಡಬೇಕೆಂದು ನಾವು ಅರಿಯುತ್ತೇವೆ. ದೇವರ ಉದ್ದೇಶಗಳನ್ನು ಅರಿಯದಿದ್ದರೆ ಆತನ ಚಿತ್ತವನ್ನೂ ನೆರವೇರಿಸುವುದು ನಮಗೆ ಪ್ರಯಾಸಕರವಾಗುತ್ತದೆ. ನಾವು ಅದನ್ನು ಅರಿತಾಗ ಯೇಸುವಿಗೆ ಹೇಗೆ ದೇವರ ಚಿತ್ತವನ್ನು ಮಾಡುವುದು ಆನಂದಕರವಾಗಿತ್ತೋ ಆ ಹಾಗೆಯೇ ಅದು ನಮಗೂ ಆನಂದಕರವಾಗುತ್ತದೆ. ನಾವು ದೇವರ ಸ್ವಭಾವವನ್ನು ತಿಳಿಯದ ಕಾರಣ ಆತನ ಚಿತ್ತಕ್ಕೆ ಭಯಪಡುತ್ತೇವೆ. ಆತನನ್ನು ನಾವು ಚೆನ್ನಾಗಿ ತಿಳುಕೊಂಡಿದ್ದರೆ ಆತನು ಹೇಳುವುದೆಲ್ಲವನ್ನು ಸಂತೋಷದಿಂದ ಮಾಡುತ್ತೇವೆ.

  ನಮ್ಮ ಮನಸ್ಸನ್ನು ನವೀಕರಿಸುವುದು ಹೇಗೆ? ಒಬ್ಬ ಹೆಂಡತಿ ತನ್ನ ಗಂಡನ ಹೃದಯ ಸಂಗಾತಿಯಾಗಿರುವಾಗ ದಿನೇ ದಿನೇ ವರುಷಗಳು ಗತಿಸಿದಂತೆ ಆತನ ಮನಸ್ಸನ್ನು ಮಾರ್ಗಗಳನ್ನು ಹೆಚ್ಚೆಚ್ಚಾಗಿ ಅರಿತುಕೊಳ್ಳುವಳು. ವಿಶ್ವಾಸಿಗೂ ಆತನ ದೇವರಿಗೂ ಇದೇ ಅನ್ವಯಿಸುತ್ತದೆ. ಹೊಸ ಜೀವನವು ಕರ್ತನಾದ ಯೇಸುವಿನೊಂದಿಗೆ ವಿವಾಹವಿದ್ದಂತೆ. ಅಂದಿನಿಂದ ನಾವು ಪ್ರತಿದಿನ ಆತನೊಂದಿಗೆ ನಡೆಯಬೇಕು.

  ಆತನು ಪ್ರತಿ ದಿನ ನಮ್ಮ ಹೃದಯದೊಂದಿಗೆ ಮಾತಾಡುವಂತೆ ಆತನಿಗೆ ಅನುಮತಿಸಬೇಕು. ತನ್ನ ವಾಕ್ಯದ ಮೂಲಕ ಮತ್ತು ಆತನು ಅನುಮತಿಸುವ ಶೋಧನೆ ಪರೀಕ್ಷೆಗಳ ಮೂಲಕ ಹೀಗೆ ನಾವು ನಮ್ಮ ಕರ್ತನ ಸಾರೂಪ್ಯದಲ್ಲಿ ಬೆಳೆಯಬೇಕು. (2 ಕೊರಿಂಥ 3:18) ನೀವು ಪ್ರತಿ ದಿನ ವಾಕ್ಯ ಓದಿ ಧ್ಯಾನಿಸಿ ಪ್ರಾರ್ಥನೆಯ ಅನ್ಯೋನ್ಯತೆಯಲ್ಲಿರುವುದನ್ನು ಅತೀ ಕಷ್ಟಕರವಾಗುತ್ತದೆ. ದೇವರ ವಾಕ್ಯದ ಧ್ಯಾನವು ನಮ್ಮ ವಕ್ರವಾದ ಮನಸ್ಸನ್ನು ಸರಿಪಡಿಸಿ ಆತ್ಮೀಕ ಮನಸ್ಸುಳ್ಳವರಾಗಿರುವಂತೆ ಮಾಡಿ ಸೂಕ್ಷ್ಮವಾಗಿ ದೇವರ ಸ್ವರವನ್ನು ಕೇಳುವಂತೆ ಮಾಡುತ್ತದೆ.

  ನಾವು ಕರ್ತನ ಸ್ವರವನ್ನು ಬಲ್ಲವರಾಗಿದ್ದರೆ ಅದನ್ನು ಗುರುತಿಸುವುದು ಸುಲಭವಾಗುತ್ತದೆ. ಯೇಸು ``ನನ್ನ ಕುರಿಗಳು ನನ್ನ ಸ್ವರವನ್ನು ಬಲ್ಲವು'' ಎಂದು ಹೇಳಿದರೂ ನನಗೆ ಯಾಗೆ ಆ ಸ್ವರ ಕೇಳಿಸುತ್ತಿಲ್ಲ? ಎಂದು ಒಬ್ಬ ಹೊಸ ವಿಶ್ವಾಸಿಯು ದೇವರ ಸೇವಕರೊಬ್ಬರನ್ನು ಕೇಳಿದರು. ಆ ಸೇವಕರು ``ಆತನ ಕುರಿಗಳು ಆತನ ಸ್ವರವನ್ನು ಬಲ್ಲವು ನಿಜ, ಆದರೆ ಕುರಿ ಮರಿಗಳು ಅದನ್ನು ಕಲಿಬೇಕು.'' ಎಂದು ಉತ್ತರಿಸಿದರು.

  ತಂದೆಯ ಸ್ವರವನ್ನು ಅನೇಕ ಸಾರೆ ಕೇಳಿರುವುದರಿಂದ ಆತನ ಮಗನಿಗೆ ಅದನ್ನು ಗುರುತಿಸಲು ಸುಭವಾಗಿರುತ್ತದೆ. ಅದೇ ರೀತಿಯಾಗಿ ನಾವು ಕರ್ತನ ಸ್ವರವನ್ನು ನಿರಂತರವಾಗಿ ಕೇಳುತ್ತಿದ್ದರೆ ಆತನ ಚಿತ್ತವನ್ನು ಹುಡುಕುವಾಗ ನಮ್ಮ ಮನಸ್ಸಿನಲ್ಲಿ ಎದ್ದೇಳುವ ಎಲ್ಲಾ ಸ್ವರಗಳು ಗದ್ದಲಗಳ ಮಧ್ಯದಲ್ಲಿ ಆತನ ಸ್ವರವನ್ನು ಗುರಿತಿಸಲು ಸಾಧ್ಯವಾಗುತ್ತದೆ. ಕರ್ತನ ಸ್ವರವನ್ನು ಕೇಳುವ ಅಭ್ಯಾಸ ನಮಗಿದ್ದರೆ ತುರ್ತು ಪರಿಸ್ಥಿತಿಗಳಲ್ಲಿ ಆತನ ವಾಗ್ದಾನವು ``ನೀವು ಸ್ವರವನ್ನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ ಇದರಲ್ಲೆ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು. (ಯೆಶಾಯ 30:21). ಅದರ ಬದಲಾಗಿ ನಾವು ಕೇವಲ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಆತನ ಕಡೆಗೆ ತಿರುಗಿದ್ದರೆ, ಆತನ ಸ್ವರವನ್ನು ಕೇಳುವುದಕ್ಕಾಗುವುದಿಲ್ಲ. ಕೆಲವು ದೇವರ ಮಕ್ಕಳು ತಮ್ಮ ಅನುದಿನದ ಜೀವಿತದಲ್ಲಿ ದೇವರ ಸ್ವರವನ್ನು ಕೇಳಲಾರದಷ್ಟು ಕಾರ್ಯನಿರತರಾಗಿದ್ದಾರೆ. ಆದರೂ ಸಂಧಿಗ್ಧ ಪರಿಸ್ಥಿತಿಗಳಲ್ಲಿ ಬೇಗನೇ ದೇವರ ಚಿತ್ತವನ್ನು ಇಳಿಯಲು ಇಚ್ಚಿಸುತ್ತಾರೆ. ಇಂತಹ ಜನರು ಪ್ರಾರ್ಥಿಸುವುದರ ಬಗ್ಗೆ ಉ.ಅheಡಿisಣiಚಿಟಿ Weiss ಅವರು ಹೀಗೆ ಹೇಳುತ್ತಾರೆ. ``ಕರ್ತನಾದ ಯೇಸುವೇ, ನಾನು ನಿನ್ನೊಂದಿಗೆ ಮಾತಾಡಲಾರದಸ್ಟು ಕಾರ್ಯನಿರತನಾಗಿದ್ದೇನೆ. ನನ್ನನ್ನು ಕ್ಷಮಿಸು. ಆದರೆ ಕರ್ತನೀ ಈಗ ನಾನು ಕಷ್ಟದಲ್ಲಿದ್ದೇನೆ ಮತ್ತು ಈ ಪ್ರಾಮುಖ್ಯವಾದ ವಿಷಯದ ಬಗ್ಗೆ ನಿನ್ನ ಚಿತ್ತವನ್ನು ನಾಳೆ ಬೆಳೆಗ್ಗೆ 10 ಘಂಟೆಗೆ ಒಳಗಾಗಿ ತಿಳಿಯಬೇಕು. ಆದ್ದರಿಂದ ಕರ್ತನೇ ಅವಸರವಾಗಿ ನನಗೆ ನಿನ್ನ ಚಿತ್ತವನ್ನು ತೋರಿಸು. ಆಮೇನ್'' ಈ ರೀತಿಯಾಗಿ ದೇವರ ಚಿತ್ತವು ಇಂಥಹ ಜನರಿಗೆ ಗೋಚರವಾಗುವುದಿಲ್ಲ.

  ನಮ್ಮ ಜೀವಿತದಲ್ಲಿ ದೇವರ ಮಾರ್ಗದರ್ಶನವು ನಮಗೆ ಬೇಕಿದ್ದಲ್ಲಿ ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ದೇವರೊಂದಿಗೆ ಅನ್ಯೋನ್ಯತೆಯು ಪ್ರಾಮುಖ್ಯವಾಗಿದೆ.

  ಸಾರಾಂಶ

  ನಾವು ದೇವರ ಚಿತ್ತವನ್ನು ಕಂಡುಕೊಳ್ಳಬೇಕಿದ್ದರೆ ಮೊದಲಾಗಿ ನಾವು ಈ ಕೆಳಗಿನ ಸಂಗತಿಗಳನ್ನು ಮಾಡಬೇಕು.

 • 1 ದೇವರು ತನ್ನ ಚಿತ್ತವನ್ನು ನಮಗೆ ತಿಳಿಸುವನೆಂದು ನಂಬಬೇಕು. ಇಂಥಹ ನಂಬಿಕೆಯು ಆಸಕ್ತಿಯ ಇಚ್ಚೆ ಮತ್ತು ತಾಳ್ಮೆಯಿಂದ ಕೂಡಿದ್ದಾಗಿರುತ್ತದೆ. ದೇವರ ಸಮಧಾನಕ್ಕಾಗಿ ನಾವು ಕಾಯಬೇಕು
 • .
 • 2 ನಮ್ಮ ಜಾಣತನದ ಮೇಲೆ ಅವಲಂಬಿಸದೇ ದೀನರಾಗಿ ದೇವರ ಮೇಲೆ ಆತುಕೊಳ್ಳಬೇಕು. ನಮ್ಮ ಬುದ್ಧಿಯನ್ನೂ ಯೋಗ್ಯತೆಯನ್ನೂ ಬೀಸಾಡದೇ ನಮ್ಮ ಭರವಸೆಯು ನಮ್ಮ ಮೇಲಿರದೇ ದೇವರ ಮೇಲಿರಿಸಬೇಕು.
 • 3 ಕೇವಲ ಕೆಲವು ಕ್ಷೇತ್ರದಲ್ಲಿ ಮಾತ್ರವಲ್ಲ, ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿಯೂ ದೇವರ ಚಿತ್ತವನ್ನು ಮಾಡಲಪೇಕ್ಷಿಸಬೇಕು. ಈಗಾಗಲೇ ದೇವರು ನಮಗೆ ಕೊಟ್ಟಿರುವ ಬೆಳಕಿಗೆ ನಾವು ವಿಧೇಯರಾಗಿ ನಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು
 • .
 • 4 ಯಾವ ಕರಾರಿಲ್ಲದೇ ನಾವು ನಮ್ಮನ್ನು ದೇವರಿಗೆ ಅರ್ಪಿಸಿಕೊಂಡು ಆತನು ನಮಗೋಸ್ಕರ ಏನನ್ನೂ ಆಯ್ಕೆ ಮಾಡುತ್ತಾನೋ ಅವೆಲ್ಲವನ್ನು ಸ್ವೀಕರಿಸಲು ಮನಸ್ಸುಳ್ಳವರಾಗಿರಬೇಕು
 • .
 • 5 ಆತನು ಹೇಳುವುದನ್ನು ಕೇಳುತ್ತಾ ಪ್ರತಿದಿನ ನಾವು ದೇವರೊಂದಿಗೆ ನಡೆಯಬೇಕು. ಹೀಗೆ ಈ ಲೋಕದ ಮನಸ್ಸಿನಿಂದ ನಮ್ಮನ್ನು ಬಿಡಿಸಿ ನಮ್ಮ ಮನಸ್ಸನ್ನು ನೂತನ ಮಾಡಲು ಆತನಿಗೆ ಅವಕಾಶ ಕೊಡಬೇಕು
 • .

  ಅಧ್ಯಾಯ 3
  ಆಂತರ್ಯದ ಸಾಕ್ಷಿಯ ಮೂಲಕ ಮಾರ್ಗದರ್ಶನ

  ದೇವರು ನಮಗೆ ಮಾರ್ಗದರ್ಶನ ಮಾಡುವ ವಿಧಾನವೆಂಬ ವಿಷಯಕ್ಕೆ ನಾವು ಬರುವಾಗ, ನಾವು ದೇವ ಭಕ್ತರ ಅನುಭವಗಳಿಗಿಂತ ಸತ್ಯವೇದದ ನಿಯಮಗಳು ಹೆಚ್ಚು ಪ್ರಾಮುಖ್ಯ ಎನ್ನುವುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ನಾವು ತೋರಿಸುವ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸಬೇಕೆಂದು ನಾವು ದೇವರಿಗೆ ಹೇಳಲಾಗದು. ಆತನ ಸರ್ವಶಕ್ತನಾಗಿರುವುದರಿಂದ ಸ್ವಾಭಾವಿಕವಾಗಿ ವಿಧಾನವಿಲ್ಲದೇ ಕೆಲ ಸಮಯಗಳಲ್ಲಿ ಆತನು ಅದ್ಭುತಕರವಾಗಿ ಮಾರ್ಗದರ್ಶನ ಮಾಡಬಹುದು. ಇಸ್ರಾಯೇಲ್ಯರು ಕಾನಾನ್ ದೇಶವನ್ನು ಪ್ರವೇಶಿಸುವುದಕ್ಕೆ ಮುಂಚೆ ಅವರನ್ನು ಅರಣ್ಯದಲ್ಲಿ ಮೇಘಸ್ತಂಭದಿಂದಲೂ ಅಗ್ನಿಸ್ತಂಭದಿಂದಲೂ ನಡೆಸಿದನು.

  ಅಪೊಸ್ತಲರ ಕೃತ್ಯದಲ್ಲಿ ಅಸಾಮಾನ್ಯವಾಗಿ ದೇವರು ತನ್ನ ಮಾರ್ಗದರ್ಶನವನ್ನು ತೋರಿಸಿದ ಘಟನೆಗಳಿವೆ. ದೇವದೂತನು ಸಮಾರ್ಯವನ್ನು ಬಿಟ್ಟು ಮರುಭೂಮಿಗೆ ಹೋಗಲು ಫಿಲಿಪ್ಪನಿಗೆ ಹೇಳಿದನು (8:26) ಅನನೀಯನು ಸೌಲನನ್ನು ಭೆಟ್ಟಿಯಾಗಬೇಕೆಂದು ದೇವರು ದರ್ಶನದಲ್ಲಿ ಹೇಳಿದನು (9:10-16). ಅನ್ಯರಿಗೆ ಸುವಾರ್ತೆಯನ್ನು ತೆಗೆದುಕೊಂಡು ಹೋಗಬೇಕೆಂದು ದೇವರು ಪೇತ್ರನಿಗೆ ದರ್ಶನವನ್ನು ತೋರಿಸಿದರು. (10:9-16). ಮೆಕೆದೋನ್ಯಕ್ಕೆ ಹೋಗಬೇಕೆಂದು ಪೌಲನಿಗೆ ದರ್ಶನವಾಯಿತು. (16:9). ಯೇರುಸಲೇಮಿನಲ್ಲಿ ಆತನಿಗೆ ದೇವರು ಮಾಡಿದ ಮಾರ್ಗದರ್ಶನದ ಬಗ್ಗೆ ಆತನು ಉಲ್ಲೇಖಿಸುತ್ತಾನೆ. (22:17-21). ಆದರೆ ಇವುಗಳು ನಿಯಮಗಳಿಗೆ ಹೊರತಾಗಿವೆ.

  ಇದೇ ರೀತಿಯಲ್ಲಿ ದೇವರು ತನ್ನ ಮಕ್ಕಳನ್ನು ಇಂದೂ ಸಹ ನಡೆಸುವನು ಎನ್ನುವುದನ್ನು ಪೂರ್ತಿಯಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಈಗ ಅವಿಗಳು ವಿರಳ. ಈ ಪುಸ್ತಕದಲ್ಲಿ ಕೇವಲ ಸ್ವಾಬಾವಿಕವಾಗಿ ಮಾರ್ಗದರ್ಶನದ ವಿಧಾನವನ್ನು ನಾವು ನೋಡಲಿಕ್ಕಿದ್ದೇವೆ. ಹೆಳೇ ಒಡಂಬಡಿಕೆಯಲ್ಲಿ ದೇವರ ಚಿತ್ತವನ್ನು ಕಂಡುಕೊಳ್ಳುವುದು ಸುಲಭವಾಗಿತ್ತೆಂದು ತೋರುತ್ತದೆ. ಅನೇಕ ವಿಷಯಗಳಲ್ಲಿ ಮೇಶೆಯ ಧರ್ಮಶಾಸ್ತ್ರವು ಸ್ಪಷ್ಟವಾಗಿತ್ತು. ಅರಣ್ಯದಲ್ಲಿ ಇಸ್ರಾಯೇಲ್ಯರು ಹಗಲಿನಲ್ಲಿ ಮೇಘಸ್ಥಂಭವನ್ನು ರಾತ್ರಿಯಲ್ಲಿ ಅಗ್ನಿಸ್ಥಂಭವನ್ನೂ ಅನುಸರಿಸಬೇಕಾಗಿತ್ತು. ಯಾವಾಗ ಮತ್ತು ಎಲ್ಲಿ ಹೋಗಬೇಕೆಂದು ತಿಳಿಯಲು ಅವರು ಆತ್ಮೀಕ ವ್ಯಕ್ತಿಗಳಾಗಿರಬೇಕಿರಲಿಲ್ಲ. ಅವರ ದೃಷ್ಟಿ ಮಾತ್ರ ಚೆನ್ನಾಗಿರಬೇಕಿತ್ತು. ಮಹಾಯಾಜಕನು ದೇವರ ಚಿತ್ತವನ್ನು ತಿಳಿಯಬೇಕಿದ್ದರೆ ಊರಿಮ್ ಮತ್ತು ತುಮ್ಮಿಮ್ ನ್ನು ದ್ವರ ಸನ್ನಿದಿಯಲ್ಲಿಡುವಾಗ ಅವುಗಳು ಹೌದು ಅಥವಾ ಇಲ್ಲವೆಂದು ಸೂಚಿಸುತ್ತಿದ್ದವು. ನಮ್ಮ ಗ್ರಹಿಕೆಗೆ ಒಳಗಾಗಿದ್ದವು.

  ಪವಿತ್ರತ್ಮನ ಮೇಲೆ ಅವಲಂಬಿಸುವುದು

  ಇದಕ್ಕೆ ವ್ಯತಿರಿಕ್ತವಾಗಿ ಈ ಆಧುನಿಕ ದಿನಗಳಲ್ಲಿ ದೇವರ ಚಿತ್ತವನ್ನು ತಿಳುಕೊಳ್ಳುವುದು ಬಹಳ ಕಷ್ಟಕರವಾಗಿ ತೋರುತ್ತದೆ. ಆದ್ದರಿಂದಲೇ ದೇವರು ನಾವು ಆತನ ಚಿತ್ತಕ್ಕನುಸಾರವಾದದ್ದು ಮೆಚ್ಚಿಕೆಯಾದದ್ದೂ, ಉತ್ತಮವಾದದ್ದೂ ದೋಷವಿಲ್ಲದೂ.....ವಿವೇಚಿಸಬೇಕಂದು ಬಯಸುತ್ತಾನೆ. (ರೋಮಾ 12:2).

  ಹಳೇ ಒಡಂಬಡಿಕೆಯಲ್ಲಿದ್ದ ಬಾಹಿರ ಮಾರ್ಗದರ್ಶನದ ಬದಲಿಗೆ ಈಗ ಪವಿತ್ರಾತ್ಮನು ತಾನೇ ವಿಶ್ವಾಸಿಯ ಮಾರ್ಗದರ್ಶಕನಾಗಿ ಅವನಲ್ಲಿ ವಾಸಿಸುತ್ತಾನೆ. ಬಾಹಿರ ಮಾರ್ಗದರ್ಶನವು ಆಂತರ್ಯದ ಮಾರ್ಗದರ್ಶನವು ದೇವರು ಇಂದು ತನ್ನ ಎಲ್ಲಾ ಮಕ್ಕಳನ್ನು ಈ ರೀತಿಯಾಗಿ ನಡೆಸಲು ಇಚ್ಚಿಸುತ್ತಾನೆ.

  ದೇವರ ಚಿತ್ತವನ್ನು ಹುಡುಕುವಾಗ ನಮ್ಮ ಆತ್ಮದಲ್ಲಿ ಪವಿತ್ರಾತ್ಮನು ಏನು ಹೇಳುತ್ತಿದ್ದಾನೆಂದು ತಿಳಿದುಕೊಳ್ಳುವುದು ಅವಶ್ಯ. ಆದ್ದರಿಂದ ನಾವು ಪವಿತ್ರಾತ್ಮ ಭರಿತರಾಗಿರುವುದು ನಮ್ಮ ಮೊದಲ ಅವಶ್ಯಕತೆಯಾಗಿದೆ. ಅವಶ್ಯ. ಸತ್ಯವೇದ ಹೀಗೆ ಹೇಳುತ್ತದೆ. ``ಅಸ್ಪಷ್ಟವಾದ ಯೋಚನೆ ಮಾಡದೆ ಮೂರ್ಖರಾಗಿರದೇ ದೇವರ ಚಿತ್ತವೆನೆಂದು ತಿಳಿದುಕೊಂಡು ಅದನ್ನು ಭದ್ರವಾಗಿ ಹಿಡಿದು.... (ಆದ್ದರಿಂದ ಯಾವಾಗಲೂ) ಪವಿತ್ರಾತ್ಮ ಭರಿತರಾಗಿರಿ.'' (ಎಫೆಸ 5:17,18) ಲೂಕ 4:1 ರಲ್ಲಿಯ ವಾಕ್ಯವು ಭರಿತನಾಗಿ..... ಆತ್ಮನಿಂದ ನಡೆಸಲ್ಪಟ್ಟನು.'' ಕರ್ತನಾದ ಯೇಸುವು ಭೂಲೋಕದಲ್ಲಿದ್ದಾಗ ಪವಿತ್ರಾತ್ಮನ ಆಂತರ್ಯದ ಸಾಕ್ಷಿಯಿಂದ ನಡೆಸಲ್ಪಡುತ್ತಿದ್ದನೇ ಹೊರತು ಮನುಷ್ಯ ಭಲಾತ್ಕಾರದಿಂದಾಗಲೀ ನಡೆಸಲ್ಪಡಲಿಲ್ಲ. ಆತ್ಮನ ಧ್ವನಿಗೆ ಕಿವಿಕೊಡುವ ಸೂಕ್ಷ್ಮತೆಯು ಆದಿ ಕ್ರೈಸ್ತರಲ್ಲಿಯೂ ಇತ್ತು. ಅಪೋಸ್ತಲರ ಕೃತ್ಯದಲ್ಲಿ ಫಿಲಿಪ್ಪನು ಆತ್ಮನ ಆಂತರ್ಯದ ಸ್ವರಕ್ಕೆ ವಿಧೇಯನಾಗಿ ಇತಿಯೋಪಿಯದ ಕಂಚುಕಿಯ ರಥವನ್ನು ಸೇರಿಕೊಂಡನು. (ಅ.ಕೃ.8:29). ಪೇತ್ರನೂ ಸಹ ಆತ್ಮನ ಸ್ವರಕ್ಕೆ ವಿಧೇಯನಾಗಿ ಕೊರ್ನೆಲ್ಯನ ಮನೆಗೆ ಹೋದನು ಅ.ಕೃ. 10:19,20). ಅಂತಿಯೋಕ್ಯದಲ್ಲಿದ್ದ ಸಭೆಯ ಹಿರಿಯರು ತಮ್ಮ ಆತ್ಮದಲ್ಲಿ ಪವಿತ್ರಾತ್ಮನ ಸಾಕ್ಷಿಯನ್ನರಿತು ಸೌಲ ಬಾರ್ನಬರನ್ನು ಪರದೇಶದ ಮಿಷನರಿ ಸೇವೆಗೆ ದೃಡಿಕರಿಸಿದರು (ಅ.ಕೃ.13:2). ಅದೇ ಆತ್ಮನು ಇಂದೂ ಸಹ ನಮ್ಮನ್ನು ಪ್ರತಿಯೊಂದು ನಿರ್ಣಯದಲ್ಲಿ ಮಾರ್ಗದರ್ಶನಮಾಡುತ್ತಾನೆ.

  ಆತ್ಮನ ಸ್ವರವನ್ನು ಅರಿತುಕೊಳ್ಳುವುದು

  ಪವಿತ್ರಾತ್ಮನು ದೊಡ್ಡ ಸ್ವರದಿಂದ ಮಾತಾಡುವ ಬದಲು ಆಂತರ್ಯದಲ್ಲಿ ನಮ್ಮ ಆತ್ಮದ ಮೇಲೆ ಭಾರ ಹಾಕುವವುದರ ಮೂಲಕ ಮಾತಾಡುತ್ತಾನೆ. ನಾವು ಒಂದು ಕಾರ್ಯವನ್ನು ಕೈಕೊಳ್ಳಬೇಕೆಂದಿರುವಾಗ ಅದನ್ನು ಕೈಕೊಳ್ಳವೇಕೋ ಬೇಡವೋ ಎಂದು ಆತನು ನಮ್ಮ ಆಂತರ್ಯದಲ್ಲಿ ನುಡಿಯುತ್ತಾನೆ. ಸಾಮಾನ್ಯವಾಗಿ ಇದು ಬಹಳ ಸಮಯ ಪ್ರಾರ್ಥನೆಯಲ್ಲಿ ಕಳೆದು ಆ ಕಾರ್ಯದ ಅನುಕೂಲತೆಗಳನ್ನು ಪರಿಶೀಲಿಸಿದ ಮೇಲೆ ಆಗುವ ಪರಿಣಾಮ. ಹೇಗೂ ಕೆಲವು ಸಾರೆ ನಾವು ಎಲ್ಲಿಗೆ ಹೋಗಬೇಕು ಏನು ಮಾಡಬೇಕೆಂದು ಪವಿತ್ರಾತ್ಮನು ಪಕ್ಕನೆ ನಮಗೆ ಒತ್ತಾಯಿಸಬಹುದು. ಆದರೆ ಕೆಲವು ಹಾಸ್ಯಾಸ್ಪದ ವಿಷಯಗಳನ್ನು ಮಾಡಲು ಸೈತಾನನು ನಮ್ಮನ್ನು ಪ್ರೇರೇಪಿಸಬಹುದು. ಅಥವಾ ಅವುಗಳು ನಮ್ಮಿಂದಲೇ ಬರಬಹುದು. ಆದ್ದರಿಂದ ನಾವು ಎಚ್ಚರವಾಗಿರಬೇಕು. ಎನೇ ಆದರೂ ಸತ್ಯವೇದದ ಬೋಧನೆಗೆ ವಿರುದ್ಧವಾಗಿ ಏನನ್ನಾದರೂ ಮಾಡಲಿಕ್ಕೆ ಪವಿತ್ರಾತ್ಮನು ಎಂದೂ ನಡೆಸುವುದಿಲ್ಲ

  .

  ಯಾವುದೇ ಒಂದು ವಿಷಯದ ಬಗ್ಗೆ ಪ್ರಾರ್ಥಿಸುವಾಗ ಪವಿತ್ರಾತ್ಮನು ಅದರ ಬಗ್ಗೆ ಹೆಚ್ಚಾದ ಮನಶ್ಯಾಂತಿಯನ್ನು ಮತ್ತು ನಮ್ಮ ಆತ್ಮದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುವುದರ ಮೂಲಕ ನಾವು ಪವಿತ್ರಾತ್ಮನ ಧ್ವನಿಯನ್ನು ಸ್ಪಷ್ಟವಾಗಿ ಅರಿಯುತ್ತೇವೆ. ಪವಿತ್ರಾತ್ಮನ ಮೇಲೆ ಮನಸ್ಸಿಡುವುದು ಜೀವವೂ ಮನಶಾಂತಿಯೂ ಆಗಿದೆ. ರೋಮಾ 8:6 ಆದರೆ ಸೈತಾನನ ಧ್ವನಿಯು ಸಾಮಾನ್ಯವಾಗಿ ಪೀಡಿಸುವುದೂ ಮತ್ತು ನ್ಯಾಯತೀರ್ಪಿನ ಭಯ ಹುಟ್ಟಿಸುವುದೂ ಆಗಿದೆ. ದೇವರು ಯಾವಾಗಲೂ ಸಾಕಷ್ಟು ಸಮಯವನ್ನು ಕೊಟ್ಟು ನಾವು ಅವಲೋಕಿಸುವಂತೆ ಮಾಡುತ್ತಾನೆ.

  ಕೆಲವು ಸಾರೆ ಆತ್ಮನ ನಡೆಸುವಿಕೆಯನ್ನು ನಮ್ಮ ಮನಸ್ಸು ಪೂರ್ತಿಯಾಗಿ ಗ್ರಹಿಸುವುದಿಲ್ಲ. ಒಬ್ಬ ಅಮೇರಿಕಾದ ಬೋಧಕರು ಸ್ಟೀವನ ಗ್ರೆಲೆಟ್ ಎಂಬವರಿಗೆ ನಿರ್ಜನವಾದ ಒಂದು ಕ್ಯಾಂಪಿಗೆ ಹೋಗಿ ಸುವಾರ್ತೆಯನ್ನು ಸಾರಲು ಆತ್ಮನು ಪ್ರೇರೇಪಿಸಿದನು. ಅವರು ಖಾಲಿಯಾದ ಆ ಊಟದ ಕೊಠಡಿಯಲ್ಲಿ ನಿಂತು ಸುವಾರ್ತೆ ಸಾರಿದರು. ಅಲ್ಲಿ ಯಾವನೂ ಇರಲಿಲ್ಲ. ಅನೇಕ ವರ್ಷಗಳ ನಂತರ ಲಂಡನ್ನಿನಲ್ಲಿ ಒಬ್ಬ ಮನುಷ್ಯನು ಗ್ರೆಲೆಟ್ ರವರನ್ನು ಸಂಧಿಸಿ ಆ ದಿನದ ಕ್ಯಾಂಪಿನಲ್ಲಿ ತಾನು ಅಡಿಗೆ ಮಾಡುವವನಾಗಿದ್ದು ಕಿಟಿಕಿಯ ಹೊರಗೆ ಅಡಗಿಕೊಂಡು ಸುವಾರ್ತೆಯನ್ನು ಕೇಳಿ ಮಾನಸಾಂತರಪಟ್ಟು ಕರ್ತನ ಸೇವೆಯಲ್ಲಿ ಮುಂದುವರಿಯುತ್ತಿದ್ದೇನೆಂದು ಅವರಿಗೆ ಹೇಳಿದನಂತೆ. ಈ ರೀತಿಯ ಮಾರ್ಗದರ್ಶನವು ಅತೀ ಅಪರೂಪ ಅನೇಕ ಸಾರಿ ನಮ್ಮ ಹೃದಯದ ಮತ್ತು ಆತ್ಮನ ಧ್ವನಿಯನ್ನು ಗುರುತಿಸುವುದು ಸುಲಭವಾಗಿರುವುದಿಲ್ಲ. ಯಾಕಂದರೆ ನಮ್ಮ ಹೃದಯವು ಬಹು ವಂಚಕ. ಉದಾಹರಣೆಗೆ: ವಿವಾಹದ ಬಗ್ಗೆ ಒಬ್ಬ ವ್ಯಕ್ತಿಯನ್ನು ಕುರಿತು ಆಲೋಚಿಸುವಾಗ ಪ್ರತಿ ಸಾರಿ ನಾವು ಅವನ ಅವಳ ಬಗ್ಗೆ ಯೋಚಿಸುವಾಗ ನಮ್ಮಲ್ಲಿ ಉಂಟಾಗುವ ಶಾಂತಿ ಸಂತೋಷವನ್ನು ಪವಿತ್ರಾತ್ಮನ ಸಾಕ್ಷಿ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ. ಆದರೆ ನಮ್ಮ ಉದ್ದೇಶಗಳನ್ನು ಪರೀಕ್ಷಿಸಿ ಕೇವಲ ದೇವರಿಗೆ ಮಹಿಮೆಯಾಗುವುದಕ್ಕೂ ಮತ್ತು ಆತನು ಆರಿಸುವ ಯಾವುದಕ್ಕೂ ನಾವು ಸಿದ್ಧರಿದ್ದರೆ ನಾವು ಮೋಸಹೋಗುವ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇಂಥಹ ಸಮರ್ಪಣೆ ಇಲ್ಲದಿರುವಲ್ಲಿ ಅಥವಾ ನಮ್ಮಲ್ಲಿ ಸ್ವಾರ್ಥ ಉದ್ದೇಶವು ಇರುವಲ್ಲಿ ನಾವು ಮಾರ್ಗ ತಪ್ಪುವುದುಂಟು. ಕೆಲವು ಸಾರೆ ನಾವು ಬಯಸಿದ್ದೇ ದೇವರ ಚಿತ್ತವೂ ಆಗಿರಬಹುದು ಅಥವಾ ಒಂದೊಂದು ಸಾರೆ ಇಲ್ಲದಿರಬಹುದು. ದೇವರ ಚಿತ್ತವು ಯಾವಾಗಲೂ ಬಹು ಕಷ್ಟಕರವಾದದ್ದೆಂದು ನಾವು ಭಾವಿಸಬಾರದು. ಅದು ಅತೀ ಸುಲಭವಾದದ್ದೂ ಅಲ್ಲ. ಕಷ್ಟಕರವಾದ ಪರಿಸ್ಥಿತಿಯಲ್ಲಿರುವಾಗ ಅಥವಾ ಕಷ್ಟಕರವಾದ ಕೆಲಸ ನಮಗಿರುವಾಗ ಅಲ್ಲಿಂದ ಓಡಿಹೋಗಬೇಕೆಂದು ನಮಗೆ ಅನಿಸಿರಬಹುದು. ಇದು ಪವಿತ್ರಾತ್ಮನ ನಡೆಸುವಿಕೆ ಎಂದು ನಾವು ಭಾವಿಸಬಾರದು. ಇಂತಹ ಸಂಶಯಾತ್ಮಕ ಸಂದರ್ಭಗಳಲ್ಲಿ ನಾವು ದೇವರ ಮೇಲೆ ಭರವಸೆವಿಟ್ಟು ಪ್ರತಿಯೊಂದರಲ್ಲಿಯೂ ಆತನ ಜಯವು ಪ್ರಕಟವಾಗುವಂತೆ ಆತನು ಕೃಪೆ ಕೊಡುವಂತೆ ಕಠಿಣವಾದ ಮಾರ್ಗವನ್ನೆ ಆರಿಸಿಕೊಳ್ಳೋಣ.

  ಒಂದು ಕಾರ್ಯವನ್ನು ಕೈಕೊಳ್ಳುವಾಗ ಇನ್ನೊಂದು ಪ್ರಾಯೋಗಿಕ ಹೆಜ್ಜೆಯು ಏನೆಂದರೆ ನಾವು ಒಂದು ಹಾಳೆಯ ಮೇಲೆ ಆ ವಿಷಯದ ಬಗ್ಗೆ ಅದರ ಪರವಾಗಿ ಅದರ ವಿರುದ್ಧವಾಗಿ ಇರುವ ಕಾರಣಗಳನ್ನು ಬರೆಯುವುದು. ಈ ಕಾರಣಗಳಿಗಾಗಿ ಪ್ರತಿದಿನ ಪ್ರಾರ್ಥಿಸಿರಿ. ಮತ್ತು ಅವಶ್ಯವಿದ್ದರೆ ಅದನ್ನು ವಿಮರ್ಶೆಮಾಡಿರಿ. ಇವೆರಡರಲ್ಲಿ ಯಾವುದನ್ನಾದರೂ ಸ್ವೀಕರಿಸಿಕೊಳ್ಳಲು ಯಥಾರ್ಥವಾಗಿ ಸಿದ್ಧರಿರಬೇಕು. ನೀವು ಪ್ರಾರ್ಥನೆಯಲ್ಲಿ ನಿರತರಾಗಿರುವಾಗ ಆತ್ಮನು ನಿವೇನು ಮಾಡಬೇಕೆಂದು ನಿಮ್ಮ ಆತ್ಮದಲ್ಲಿ ತಿಳಿಸುತ್ತಾನೆ. ಹೀಗೆ ಒಂದು ದಿಸೆಯಲ್ಲಿ ನಿಮ್ಮಲ್ಲಿನ ಸಮಾಧಾನವು ಹೆಚ್ಚುತ್ತಾ ಬರುತ್ತಿದ್ದ್ರೆ ಸಾಮಾನ್ಯವಾಗಿ ದೇವರು ಇದನ್ನು ನೀವು ಮಾಡಬೇಕೆಂದು ಸೂಚಿಸುತ್ತಾನೆ. ಪವಿತ್ರಾತ್ಮನ ಮೂಲಕ ಕ್ರಿಸ್ತನಿಂದ ಬರುವ ಸಮಾಧಾನವು ನಿರಂತರವಾಗಿ ನಿಮ್ಮ ಹೃದಯದಲ್ಲಿದ್ದು ನಿಮ್ಮ ಮನಸ್ಸಿನಲ್ಲಿ ಬರುವ ಎಲ್ಲಾ ಪ್ರಶ್ನೆಗಳನ್ನು ಸಂಪೂರ್ಣವಾಗಿ ನಿರ್ಧರಿಸಲಿ. (ಕೊಲೊಸ್ಸೆ 3:15 ಂmಠಿಟiಜಿieಜ). ಫುಟ್‍ಬಾಲ್ ಆಟದಲ್ಲಿ ರೆಪ್ರೀ ಸಿಳ್ಳು ಹಾಕಿದಾಗ ಹೇಗೆ ಎಲ್ಲ ಆಟವು ನಿಲ್ಲುತ್ತದೋ ಹಾಗೆಯೇ ನಮ್ಮ ಸಮಾಧಾನವು ಕಳೆದುಹೋದರೆ ನಾವೂ ಸಹ ನಿಲ್ಲಬೇಕು. ಆತ್ಮದಲ್ಲಿ ಪರಿಪೂರ್ಣ ಸಮಾಧಾನ ಇರುವಾಗ ಮಾತ್ರ ನಾವು ಮುಂದೆ ಸಾಗಬೇಕು.

  ಆತ್ಮನ ಪ್ರಾಮುಖ್ಯತೆಯನ್ನು ತಿಳಿಯುವುದು

  ಪವಿತ್ರಾತ್ಮನ ಆಂತರ್ಯದ ಸಾಕ್ಷಿಯ ಪ್ರಾಮುಖ್ಯತೆಯನ್ನು ತಿಳಿಯುವುದರ ಬಗ್ಗೆ ಈ ಅಧ್ಯಾಯವನ್ನು ನಾವು ಓದುತ್ತಲಿದ್ದೇವೆ. ಯಾಕಂದರೆ ದೇವರು ಇದರ ಮೂಲಕವಾಗಿಯೇ ತನ್ನ ಮಕ್ಕಳನ್ನು ಇಂದು ನಡೆಸುವನು ಆಂತರ್ಯದಲ್ಲಿ ಪವಿತ್ರಾತ್ಮನಿಂದುಟಾದ ಪ್ರೇರೇಪಣೆಯನ್ನೂ ಮತ್ತು ತಡೆಯುವಿಕೆಯನ್ನು ನಾವು ತಿಳಿದು ವಿಧೇಯರಾಗುವುದು ಅವಶ್ಯ. ಸರಿ ಮತ್ತು ತಪ್ಪು ಎಂಬ ತಿಳಿವಳಿಕೆಯಿಂದ ಮುಂದುವರಿಯುವುದು ಮಾತ್ರ ಸಾಲದು ಅದು ಹಳೇ ಒಡಂಬಡಿಕೆಯಲ್ಲಿ ಉನ್ನತ ಮಟ್ಟ. ನಾವು ಹೊಸ ಒಡಂಬಡಿಕೆಯಲ್ಲಿ ಉನ್ನತ ಮಟ್ಟಕ್ಕೆ ಕರೆಯಲ್ಪಟ್ಟಿದ್ದೇವೆ. ದೇವರ ಜೀವದಲ್ಲಿ ಪಾಲುಗಾರರಾಗಿ ಅದರಿಂದ ನಡೆಸಲ್ಪಡಬೇಕು. ಈ ಎರಡು ಮಟ್ಟದ ಜೀವಿತವು ಏದೆನ್ ತೋಟದಲ್ಲಿದ್ದ ಎರಡು ಮರಗಳಿಗೆ ಹೋಲಿಕೆಯಾಗಿವೆ. ಒಳ್ಳೇದರ ಕೆಟ್ಟದ್ದರ ಅರಿವನ್ನುಂಟುಮಾಡುವ ಮತ್ತು ಜೀವವೃಕ್ಷದ ಮರ. ಒಳ್ಳೇದು ಕೆಟ್ಟದ್ದು ಏನು ಎಂದು ತೋರಿಸುವ ನೈತಿಕ ಮಟ್ಟವು ಒಳ್ಳೇದೆ. ಆದರೆ ಅದು ಧರ್ಮಶಾಸ್ತ್ರಕ್ಕೆ ಅಧೀನರಾಗಿರುವದಾಗಿದೆ. ಕ್ರಿಸ್ತಿಯ ಮಟ್ಟವು ಇನ್ನೂ ಉನ್ನತವಾಗಿದೆ. (ಮತ್ತಾಯ 5:17-48) Watch Man Nee ಅವರು ತಮ್ಮ Two Principles Of Condect ಪುಸ್ತಕದಲ್ಲಿ ಹೀಗೆ ಬರೆದಿದ್ದರೆ.

  ``ಹೊಸ ಜೀವಿತದಲ್ಲಿ ದೇವರು ನಮಗೆ ನೂತನ ಕಾಯಿದೆ ಕಾನೂನುಗಳನ್ನು ಅನುಸರಿಸಬೇಕೆಂದು ಅವುಗಳನ್ನು ಕೊಡದಿದ್ದರೂ ಅನೇಕ ಕ್ರೈಸ್ತರು ಬಾಹಿರ ಮಟ್ಟವನ್ನು ಅನುಸರಿಸುವುದು ಬಹು ಆಶ್ಚರ್ಯದ ಸಂಗತಿ. ನೀವು ಹೀಗೆ ಮಾಡಬೇಕು. ಹೀಗೆ ಮಾಡಬಾರದು ಎಂದು ಆತನು ನಮ್ಮನ್ನು ಹೊಸ ಸೀನಾಯಿ ಬೆಟ್ಟಕ್ಕೆ ತರಲಿಲ್ಲ......ಕ್ರೈಸ್ತನಾಗಿ ಈಗ ನೀನು ಕ್ರಿಸ್ತನ ಜೀವಿತವನ್ನು ಪಡಕೊಂಡಿದ್ದೀ ಮತ್ತು ಈಗ ಆತನ ಪ್ರತಿಕ್ರಿಯೆಯನ್ನು ಗಮನಿಸಬೇಕು. ನೀನು ಏನೇ ಕಾರ್ಯ ನಿರ್ವಹಿಸಬೇಕಾದಾಗ ನಿನ್ನಲ್ಲಿ ಆ ಜೀವಿತವು ಸಾಧಿಸುವಂತೆ ಮೇಲೇರುತ್ತದೆ. ನಿಮ್ಮೊಳಗೆ ಸಕಾರಾತ್ಮಕವಾದ ಆಂತರ್ಯದ ಪ್ರತಿಕ್ರಿಯೆ ಇದ್ದರೆ, ಅಭಿಷೇಕವಿದ್ದರೆ (1 ಯೋಹಾನ 2:20,27). ಆಗ ನೀನು ಧೈರ್ಯವಾಗಿ ಅದರಲ್ಲಿ ಸಾಗಬಹುದು. ಆಂತರ್ಯದ ಜೀವಿತವು ಅದಕ್ಕೆ ಸೂಚನೆಯಾಗಿದೆ. ಆದರೆ ಆಂತರ್ಯದ ಜೀವಿತವು ಕ್ಷೀಣಿಸುತ್ತಿದ್ದರೆ ನೀವು ಕೈಕೊಂಡ ಕಾರ್ಯವು ಎಷ್ಟೇ ಉನ್ನತವಾಗಿದ್ದರೂ ಅದನ್ನು ಕೈ ಬಿಡಬೇಕು. ಅನೇಕ ಅ ಕ್ರೈಸ್ತರು ನಡವಳಿಕೆಯು ಸರಿ ಅಥವಾ ತಪ್ಪು ಎಂಬ ನಿಯಾಮದ ಮೇಲೆ ಅವಲಂಬಿಸಿದೆ. ಇದೇ ನಿಯಮವು ಕ್ರೈಸ್ತನಿಗೂ ಅಕ್ರೈಸ್ತನಿಗೂ ಅನ್ವಯಿಸುವುದಾದರೆ ಕ್ರೈಸ್ತನು ಹೇಗೆ ವ್ಯತ್ಯಾಸವಾಗಿದ್ದಾನೆ? ಕ್ರೈಸ್ತನು ಕ್ರಿಸ್ತನ ಜೀವಿತದಿಂದ ನಿಯಂತ್ರಿಸಲ್ಪಟ್ಟಿದ್ದಾನೆಂದು ದೇವರ ವಾಕ್ಯವು ಸ್ಪಷ್ಟಪಡಿಸುತ್ತದೆ ಹೊರತು ಬಾಹಿರ ನೀತಿಯಿಂದಲ್ಲ. ದೇವರ ಬಗ್ಗೆ ಪ್ರತಿಕ್ರಿಯೆ ತೋರಿಸುವುದಕ್ಕೂ ಮತ್ತು ದೇವರ ಸಂಗತಿಗಳಲ್ಲದ್ದಕ್ಕೆ ವಿರೋಧವನ್ನು ತೋರಿಸುವುದಕ್ಕೂ ಒಬ್ಬ ಕ್ರೈಸ್ತನಲ್ಲಿ ಏನೊ ವಿಶಿಷ್ಟತೆಯಿದೆ. ಆದ್ದರಿಂದ ನಮ್ಮ ಆಂತರಿಕ ಪ್ರತಿಕ್ರಿಯೆಗೆ ನಾವು ಕಿವಿಗೊಡಬೇಕು. ನಾವು ನಮ್ಮದೆ ಆದ ಅಥವಾ ಇತರರ ಬಾಹಿರತೆ ಮತ್ತು ತರ್ಕಗಳಿಂದ ಆಳಲ್ಪಡಬಾರದು. ಒಂದು ಸಂಗತಿಯನ್ನು ಇತರರು ಒಪ್ಪಬಹುದು. ಅದರ ಅನುಕೂಲ ಪ್ರತಿಕೂಲಗಳನ್ನು ನೋಡುವಾಗ ನಮಗೂ ಸರಿಕಾಣಬಹುದು. ಆದರೆ ಆಂತರ್ಯವು ಅದರ ವಿಷಯದಲ್ಲಿ ಏನು ಹೇಳುತ್ತದೆ? ``ಒಬ್ಬಕ್ರೈಸ್ತನ ನಡವಳಿಕೆಯು ಆತನ ಆಂತರ್ಯದ ಜೀವಿತದ ಮೇಲೆ ಅವಲಂಬಿಸಿದೆ. ಎಂದು ತಿಳಿದಾಗ ನೀವು ಕೆಟ್ಟದ್ದನ್ನು ತ್ಯಜಿಸುವುದು ಮಾತ್ರವಲ್ಲ ಬಾಹಿರವಾಗಿ ಒಳ್ಳೇದೆಂದು ನೀತಿಯೆಂದು ಕಾಣುವುದನ್ನು ಬಿಡಬೇಕಾಗುತ್ತದೆ. ಕ್ರೈಸ್ತನ ಜೀವಿತದಿಂದ ಹೊರಡುವುದೇ ಕ್ರೈಸ್ತನ ನಡವಳಿಕೆಯಾಗಿದೆ. ಆದ್ದರಿಂದ ಆತನ ಜೀವಿತದಿಂದ ಧಾರೆಯಾಗಿ ಬರದಿರುವ ಯಾವ ಕೃತ್ಯವಾದರೂ ಅಸಮ್ಮತಿಸಬಾರದು. ಮಾನವಿಯ್ಯ ಮಟ್ಟದ ಪ್ರಕಾರ ಅನೇಕ ಸಂಗತಿಗಳು ಸರಿಯಾಗಿ ಕಾಣುವವು. ಆದರೆ ಅವುಗಳಿಗೆ ದೈವೀಕ ಜೀವವಿಲ್ಲದ್ದರಿಂದ ದೇವರ ಮಟ್ಟವು ಅವುಗಳು ತಪ್ಪೆಂದು ಘೋಷಿಸುತ್ತದೆ. ಬಾಹಿರ ಸೂಚನೆಗಳಿಂದಲ್ಲ ಆದರೆ ಆಂತರ್ಯದ ಪ್ರೇರೆಪಣೆಯಿಂದ ದೇವರ ಮಾರ್ಗಗಳು ನಮಗೆ ಗೋಚರವಾಗುತ್ತವೆ. ಆತ್ಮದ ಸಮಾಧಾನ ಮತ್ತು ಜೀವಿಸುತ್ತಾನೆ. ನಿಜ ಮತ್ತು ನಮ್ಮಲ್ಲಿ ಆತನ ಜೀವವು ಏನು ಹೇಳುತ್ತದೆ. ಎಂದು ವಿವೇಚಿಸಿ ನಡೆಯುವುದು ಪ್ರಾಮುಖ್ಯವಾಗಿದೆ.''

  ದೇವರು ಈ ಪಾಠವನ್ನು ಕಲಿಯಲು ನಮಗೆ ಸಹಾಯಿಸಲಿ.

  ಸಾರಾಂಶ

 • 1 ಬಹಿರಂಗ ಅದ್ಭುತರೀತಿಯಿಂದ ದೇವರು ನಮ್ಮನ್ನು ನಡೆಸುವುದು ವಿರಳ. ಹೊಸ ಒಡಂಬಡಿಕೆಯ ಕಾಲದಲ್ಲಿ ದೇವರು ಪವಿತ್ರಾತ್ಮನ ಮೂಲಕ ನಡೆಸುತ್ತಾನೆ. ಆದ್ದರಿಂದ ನಾವು ಪವಿತ್ರಾತ್ಮ ಭರಿತರಾಗಿರ ಬೇಕು
 • .
 • 2 ಪವಿತ್ರಾತ್ಮನು ನಮ್ಮ ಆತ್ಮದ ಮೇಲೆ ಭಾರ ಹಾಕುವುದರ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. ನಾವು ದೇವರನ್ನು ಪ್ರಾರ್ಥನೆಯಲ್ಲಿ ಹುಡುಕುವಾಗ ಈ ಭಾರವು ಹೆಚ್ಚಿನ ಸಮಾಧಾನದೊಂದಿಗೆ ವೃದ್ಧಿಸುತ್ತದೆ.
 • 3 ಆತ್ಮನ ಸ್ವರವನ್ನು ಬೇರೆ ಸ್ವರಗಳಿಂದ ಗುರುತಿಸಬೇಕಾದರೆ ನಾವು ನಮ್ಮ ಉದ್ದೇಶಗಳು ಶುದ್ಧವಾಗಿದೆಯೋ ಎಂದು ಪರೀಕ್ಷಿಸಬೇಕು
 • .
 • 4 ನಾವು ಕೈ ಹಾಕುವ ಕೆಲಸದ ಬಗ್ಗೆ ಅನುಕೂಲ ಪ್ರತಿಕೂಲಗಳನ್ನು ಗಮನಿಸುವುದು ದೇವರ ಚಿತ್ತವನ್ನು ಅರಿಯಲು ಸಹಾಯಕವಾಗುತ್ತದೆ
 • .
 • 5 ಪವಿತ್ರಾತ್ಮನ ಆಂತರ್ಯದ ಧ್ವನಿಯ ಮೇಲೆ ಪ್ರತಿದಿನ ಹೆಚ್ಚಾಗಿ ಅವಲಂಬಿಸುವುದು ಪ್ರಾಮುಖ್ಯವಾಗಿದೆ. ಯಾಕಂದರೆ ಈ ದಿನಗಳಲ್ಲಿ ದೇವರು ಹೀಗೆ ನಡೆಸುತ್ತಾನೆ, ಕೇವಲ ನೈತಿಕ ನಿಯಮಗಳಿಂದಲ್ಲ
 • .

  ಅಧ್ಯಾಯ 4
  ಬಾಹಿರ ಸಂಗತಿಗಳಿಂದ ಮಾರ್ಗದರ್ಶನ

  ನಾವು ದೇವರ ಮಾರ್ಗದರ್ಶನವನ್ನು ಹುಡುಕುವಾಗ ಪವಿತ್ರಾತ್ಮನು ಈ ಕೆಳಗಿನವುಗಳ ಮೂಲಕ ನಮ್ಮ ಆತ್ಮದೊಂದಿಗೆ ಮಾತನಾಡುತ್ತಾನೆ

  .
 • 1 ಸತ್ಯವೇದ ಬೋಧನೆಗಳಿಂದ
 • 2 ಸ್ಥಿತಿಗತಿಗಳ ಮೂಲಕವಾಗಿ
 • 3 ಇತರ ವಿಶ್ವಾಸಿಗಳ ಉಪದೇಶಗಳಿಂದ
 • ನಾವು ದೇವರ ಚಿತ್ತವನ್ನು ಸ್ಪಷ್ಟವಾಗಿ ಕಂಡುಹಿಡಿದಾಗ ಈ ಮೇಲೆ ಹೇಳಿದ ಬಾಹಿರ ಸಂಗತಿಗಳು ನಮ್ಮ ಆಂತರ್ಯದ ಸಾಕ್ಷಿಯೊಂದಿಗೆ ಹೊಂದಿಕೊಳ್ಳುತ್ತವೆ.

  ಸತ್ಯವೇದ ಬೋಧನೆಗಳು

  ನಾವು ಸರಿಯಾದ ಬೋಧನೆಯಲ್ಲಿ ಉಪದೇಶ ಹೊಂದಿ ನೀತಿಯ ಮಾರ್ಗದಲ್ಲಿ ನಡೆಸಲ್ಪಡುವದಕ್ಕೋಸ್ಕರ ನಮಗೆ ಸತ್ಯವೇದ ಕೊಡಲ್ಪಟ್ಟಿದೆ. (2 ತಿಮೊ 3:16,17) ಅನೇಕ ವಿಷಯಗಳ ಬಗ್ಗೆ ದೇವರ ಚಿತ್ತವು ಈಗಾಗಲೇ ಅದರಲ್ಲಿ ತಿಳಿಸಲ್ಪಟ್ಟಿದೆ. ಉದಾಹರಣೆಗೆ ನೀವು ಒಬ್ಬ ಅವಿಶ್ವಾಸಿಯನ್ನು ಅಥವಾ ಕ್ರಮವಾಗಿ ಸಭೆಯ ಕೂಟಗಳಿಗೆ ಹೋಗುವ ನಾಮಧೇಯ ಕ್ರೈಸ್ತನನ್ನು ಮದುವೆಯಾಗಲು ಬಯಸುವುದಾದರೆ ದೇವರ ವಾಕ್ಯವು ಸ್ಪಷ್ಟವಾಗಿದೆ. ಅವಿಶ್ವಾಸಿಗಳೊಂದಿಗೆ ಸೇರಿ ಇಜ್ಜೋಡಾಗಿ ಮದುವೆ ಮಾಡಿಕೊಳ್ಳಬೇಡಿರಿ (2 ಕೊರಿಂಥ 6:14).

  ಅದೇ ರೀತಿಯಾಗಿ ಒಬ್ಬ ಸಹೋದರನು ಕೊರತೆಯಲ್ಲಿದ್ದರೆ, ಅವನಿಗೆ ಸಹಾಯಮಾಡಬೇಕೆಂದು ಯಾಕೋಬ 2:15,16: 1 ಯೋಹಾನ 3:17 ರಲ್ಲಿ ಬರೆದಿದೆ. ಅಥವಾ ಇನ್ನೊಬ್ಬ ಸಹೋದರನೊಂದಿಗೆ ವ್ಯಾಜ್ಯವಿರುವದಾದರೆ ಆಗ ನೀವು ಕೋರ್ಟಿಗೆ ಹೋಗಬೇಕೋ ಬೇಡವೋ ಎಂದು ತಿಳಿಯಬಯಸುವುದಾದರೆ ಸತ್ಯವೇದ ಸ್ಪಷ್ಟವಾಗಿ ``ಬೇಡ'' ಎಂದು ಹೇಳುತ್ತದೆ (1 ಕೊರಿಂಥ 6:1-8) ಸುಳ್ಳು ಹೇಳುವುದು, ಕದಿಯುವುದು ಸಹ ತಪ್ಪೆಂದು ಹೇಳುತ್ತದೆ (ಎಫೆಸ 4:25,28) ನಿನ್ನ ಹಾಗೂ ಇನ್ನೊಬ್ಬ ಸಹೋದರನ ಮಧ್ಯದಲ್ಲಿ ಮನಸ್ತಾಪ ಉಂಟಾದಾಗ ಏನು ಮಾಡಬೇಕೆಂದು ತಿಳಿಯದೇ ಸಂದೇಹದಲ್ಲಿರುವಾಗ ಸತ್ಯವೇದ ಬಿಡುವುದಿಲ್ಲ ನೀನು ಮುಂದಾಗಿ (ತಪ್ಪು ಅವನದಿದ್ದರೂ) ಹೋಗಿ ಅವನೊಂದಿಗೆ ರಾಜಿಮಾಡಿಕೊಳ್ಳಬೇಕೆಂದು ಹೇಳುತ್ತದೆ. (ಮತ್ತಯ 5:23,24).

  ನಾವು ಯಾವುದೇ ಬಾಂಡ್ ಅಥವಾ ಕಾಂಟ್ರಾಕ್ಟರ್ ರುಜು ಹಾಕಿ ಒಪ್ಪಿಕೊಂಡಿದ್ದಲ್ಲಿ ಅದಕ್ಕಿಂತ ಆಕರ್ಷಿಕವಾದ ಕೆಲಸವು ಬೇರೆಡೆ ದೊರಕಿದಾಗ ನಾವು ಅಲ್ಲಿಂದ ``ಜಿಗಿಯ'' ಬಾರದು ಕೀರ್ತನೆ 15:4 ರಲ್ಲಿ ಶಿಷ್ಯನಿಗೆ ಹಾನಿಯಾದರೂ ಅವನು ತನ್ನ ವಾಗ್ದಾನವನ್ನು ನೆರೆವೇರಿಸುವನು ಎಂದು ಹೇಳುತ್ತಾನೆ. (ಸಜೀವ ವಾಕ್ಯ) ಅಂಥವರಲ್ಲಿ ಕರ್ತನು ಸಂತೋಷಿಸುತ್ತಾನೆ. ತಮ್ಮ ವಾಗ್ದಾನಗಳನ್ನು ನೇರವೇರಿಸದಿರುವವನನ್ನು ಆತನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 12:22) ತನ್ನ ಮಾತನ್ನು ನೆರವೇರಿಸದೇ ಇರುವ ವಿಶ್ವಾಸಿಯು ನಾಚಿಗೆಗೆಟ್ಟವನು.

  ಅದೇ ರೀತಿಯಾಗಿ ನಮಗೆ ಯಾವ ಸಾಲವೂ ಇರಬಾರದೆಂದು ಸತ್ಯವೇದ ಹೇಳುತ್ತದೆ. (ಇಬ್ರಿಯ 13:8)

  ಇದಲ್ಲದೇ ದೇವರ ವಾಕ್ಯವು ನಮಗೆ ಮಾರ್ಗದರ್ಶನ ಮಾಡಲು ಕೆಲವು ನಿಯಮಗಳನ್ನು ಕೊಟ್ಟಿದೆ. ಉದಾಹರಣೆಗೆ ವಿವಾಹದ ಕುರಿತು ಆಲೋಚಿಸುವಾಗ ಒಬ್ಬ ಯೌವನಸ್ಥನು ಇತರರು ಸಮಾಜದಲ್ಲಿ ಕೇಳುವಂತೆ ತಾನೂ ವರದಕ್ಷಿಣೆಯನ್ನು ಕೇಳಬೇಕೋ ಎಂದು ಶೋಧಿಸಲ್ಪಡಬಹುದು. ದೇವರ ವಾಕ್ಯವು ಹಣವನ್ನು ಪ್ರೀತಿಸುವುದರ ಮತ್ತು ಲೋಭದ ವಿರುದ್ಧವಾಗಿ ಎಚ್ಚರಿಸುತ್ತದೆ. ಧರ್ಮಶಾಸ್ತ್ರದ ತಿರುಳು ಎನೆಂದರೆ ನಾವು ಪಡಕೊಳ್ಳುವುದಕ್ಕಿಂತ ಕೊಡುವವರಾಗಿರಬೇಕು. ಕೇಳುವುದಂತೂ ಇನ್ನೂ ಕನಿಷ್ಠ (ಅ.ಕೃ 20:33-35). ಯಾವನಾದರೂ ವರದಕ್ಷಿಣೆಯನ್ನು ಕೇಳುವ ಅಥವಾ ನಿರೀಕ್ಷಿಸುವವನನ್ನು ದೇವರು ಮೆಚ್ಚಲಾರನೆಂಬುದು ಸ್ಪಷ್ಟವಾಗಿದೆ. ದೇವರು ಒಬ್ಬ ವಿಶ್ವಾಸಿಯು ಲಾಟರಿ ಬಾಚಿಕಟ್ಟುವುದು ಅಥವಾ ಜೂಜಾಡುವುದನ್ನು ಸಮ್ಮತಿಸುವುದಿಲ್ಲ. ಜ್ಞಾನೋಕ್ತಿ 28:22 ರಲ್ಲಿ ``ಬೇಗನೇ ಐಶ್ವರ್ಯವಂತವಾಗ ಬಯಸುವುದು ಕೆಟ್ಟದ್ದು ಮತ್ತು ಬಡತನಕ್ಕೆ ನಡೆಸುವುದಾಗಿದೆ. ಜ್ಞಾನೋಕ್ತಿ 13:11,28:20; 1 ತಿಮೊಥಿ 6:9-11 ನ್ನು ಓದಿಕೊಳ್ಳಿರಿ)

  ದೇವರ ವಾಕ್ಯವು ನಿಜವಾಗಿಯೂ ನಮ್ಮ ಮುಂದಿರುವ ಮಾರ್ಗಕ್ಕೆ ಬೆಳಕಾಗಿದೆ. ನಾವು ಎಡವಿ ಬೀಳದಂತೆ ನಮ್ಮನ್ನು ಕಾಪಾಡುತ್ತದೆ (ಕೀರ್ತನೆ 119:105).

  ಅಪರೂಪ ಸಂದರ್ಭಗಳಲ್ಲಿ ದೇವರು ನಮ್ಮ ಅನುದಿನದ ಸತ್ಯವೇದವನ್ನು ಓದುವಾಗ ಆ ದಿನದ ವಾಕ್ಯಭಾಗದ ಮೂಲಕ ತನ್ನ ಮಾರ್ಗದರ್ಶನವನ್ನು ದೃಡಿಕರಿಸಬಹುದು. ಆದರೆ ಅದರಲ್ಲಿ ನಾವು ಎಚ್ಚರವಹಿಸಬೇಕು ಯಾಕಂದರೆ ಕೆಲವು ಸಾರೆ ಅವುಗಳನ್ನು ಹುಡುಕದೇ ಇರುವಾಗಲೂ ನಮ್ಮ ಗಮನವನ್ನು ಅವು ಸೆಳೆಯಬಹುದು. ನಮ್ಮ ಅನುದಿನದ ಸತ್ಯವೇದ ಧ್ಯಾನದಲ್ಲಿ ನಾವು ಹುಡುಕ...........ಸಮಸ್ಯೆಯ ಬಗ್ಗೆ ಸಲಹೆ ಕೊಡುವ ವಾಕ್ಯಗಳನ್ನು ಹಿಂಬಾಲಿಸುವುದಾದರೆ ನಾವು ದಾರಿ ತಪ್ಪಬಹುದು.

  ಒಬ್ಬ ಯೌವನಸ್ಥ ವಿಶ್ವಾಸಿಯು ಭಾರತದಲ್ಲಿರಬೇಕೆಂದು ದೇವರ ಚಿತ್ತವಿದ್ದರೆ ಅವನು ಅಮೇರಿಕಾಗೆ ಹೋಗಬೇಕೆನ್ನುವ ಆಶೆ ಅವನಿಗಿರವಹುದು. ಪಾಶ್ಚತ್ಯ ದೇಶಗಳ ಆಕರ್ಶಣೆಯು ಅವನ ಮನಸ್ಸನ್ನು ತುಂಬಿರುವಾಗ ಯೆಶಾಯ 11:14 ರಲ್ಲಿನ ವಾಕ್ಯ ಅವರು ..... ಪಡುವಣಕ್ಕೆ ಹಾರಿಹೊಗುವರು'' ಎಂಬ ವಾಕ್ಯವನ್ನು ಓದುವಾಗ ಅವನು ದೇವರು ತನಗೆ ಪಡುವಣಕ್ಕೆ ಹೋಗಲು ಪ್ರೋತ್ಸಾಹಿಸುತ್ತಿದ್ದಾನೆಂದು ತಕ್ಷಣ ನಂಬುವನು ನಮ್ಮ ಹೃದಯವು ವಂಚಕ ಮತ್ತು ಸೈತಾನನು ಕುಯುಕ್ತಿಯುಳ್ಳ ವೈರಿಯಾಗಿದ್ದಾನೆ. ನಾವು ಇವೆರಡರಲ್ಲಿಯೂ ಎಚ್ಚರವಾಗಿರಬೇಕು. ಕೆಲವು ಸಾರೆ ದೇವರು ಅಸಾಧಾರಣ ಜ್ಞಾನದಿಂದ ನಮ್ಮನ್ನು ಸಂಧರ್ಭಕ್ಕೆ ಕಾಣಿಸದ ವಾಕ್ಯದಿಂದಲೂ ನಡೆಸಬಹುದು. ಆದರೆ ಇದು ವಿರಳ. ಹೀಗೆ ದೇವರು ನಡಿಸಿದರೆ ಇದು ಈಗಾಗಲೇ ನಮಗೆ ದೊರಕಿದ ಮಾರ್ಗದರ್ಶನವನ್ನು ಖಚಿತಪಡಿಸುವುದು.

  ಸನ್ನಿವೇಶಗಳ ಸಾಕ್ಷಿ

  ದೇವರು ಭವಿಷ್ಯತ್ತಿನ ದೇವರಾಗಿದ್ದಾನೆ. ನಮ್ಮ ಪರಿಸ್ಥಿತಿಯನ್ನು ನಿಯಂತ್ರಿಸುವುದರ ಮೂಲಕ ತನ್ನ ಚಿತ್ತವನ್ನು ಸೂಚಿಸುತ್ತಾನೆ. ನಮ್ಮನ್ನು ತಡೆದು ನಿಲ್ಲಿಸಲಿಕ್ಕೆ ಅಥವಾ ಆತ್ಮನಿಂದ ದೊರಕಿದ ಮಾರ್ಗದರ್ಶನವನ್ನು ದೃಡಿಕರಿಸಲು ಆತನು ಕೆಲವು ಸಂಧರ್ಭಗಳನ್ನು ನಮ್ಮ ಜೀವಿತದಲ್ಲಿ ಅನುಮತಿಸುತ್ತಾನೆ. ಜಾರ್ಜ ಮುಲ್ಲರ್ ಹೇಳಿದಂತೆ ``ಶಿಷ್ಠನ ನಿಲ್ಲಿಸಲ್ಪಡುವಿಕೆಯು ಹಾಗೂ ಆತನ ಹೆಜ್ಜೆಗಳು ಕರ್ತನಿಂದಲೇ ನೇಮಿಸಲ್ಪಟ್ಟಿವೆ. (ಕೀರ್ತನೆ 37:23)

  ಕೆಲವು ಸಾರೆ ನಮ್ಮನ್ನು ಮಾರ್ಗ ತಪ್ಪಿಸಲು ಸೈತಾನನು ಸಹ ನಮ್ಮ ಸನ್ನಿವೇಶಗಳನ್ನು ಬದಲಿಸುತ್ತಾನೆಂಬುದು ನಾವು ಮರೆಯಬಾರದು. ಸೈತಾನನು ಅನುಮತಿಸಿದ ಬೇರೆ ಸನ್ನಿವೇಶಗಳಿಗೆ ಒಳಗಾಗಿ ಅನೇಕರು ತಪ್ಪಾದ ಜೀವನ ಸಂಗಾತಿಯನ್ನು ಆರಿಸಿಕೊಂಡು ದುಖಿಂಸುತ್ತಿದ್ದಾರೆ. ಇಂಥಹ ವಂಚನೆಗೆ ಒಳಗಾಗ ಬೇಕಿದ್ದರೆ ಅಧ್ಯಾಯ 2 ರಲ್ಲಿ ಹೇಳಿದ ಕರಾರುಗಳನ್ನು ನವು ಪೂರೈಸಬೇಕು.

  ದೇವರಿಂದ ಕಳುಹಿಸಲ್ಪಟ್ಟ ಸನ್ನಿವೇಶಗಳಿಗೆ ನಾವು ಒಳಗಾಗಿ ಅವುಗಳನ್ನು ಅಂಗೀಕರಿಸಬೇಕು. ಆದರೆ ಸೈತಾನನಿಂದ ಬಂದವುಗಳನ್ನು ನಾವು ಎದುರಿಸಬೇಕು. ನಮಗೆ ಖಚಿತವಾಗಿ ಗೊತ್ತಿಲ್ಲದಿದ್ದರೆ ನಾವು ಹೀಗೆ ಪ್ರಾರ್ಥಿಸಬೇಕು. ``ಕರ್ತನೇ ಇದು ನಿನ್ನಿಂದಲೋ ಅಥವಾ ಸೈತಾನನಿಂದಲೋ ಎಂದು ನನಗೆ ತಿಳಿಯದು ಆದರೆ ಏನೇ ಆದರೂ ನಿನ್ನ ಪರಿಪೂರ್ಣ ಚಿತ್ತವೇ ನನಗೆ ಬೇಕು. ನಾನು ವಂಚಿಸಲ್ಪಟ್ಟು ನಿನ್ನಿಂದ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳದೇ ಹೋಗುವುದರಿಂದ ತಪ್ಪಿಸು. ಇದು ನಿನ್ನಂದ ಬಂದಿದ್ದರೆ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಇಲ್ಲವಾದರೆ ನಿನ್ನ ಹೆಸರಿನಲ್ಲಿ ನಾನು ಸೈತಾನನನ್ನು ಎದುರಿಸಿ ಬಂಧಿಸುತೇನೆ.'' ನಾವು ಯಥಾರ್ತರಾಗಿ ಆತನ ಆಜ್ಞೆಗಳಿಗೆ ಅನುಸಾರವಾಗಿ ಜೀವಿಸುತ್ತಿದ್ದರೆ ಕರ್ತನು ನಮ್ಮ ಮಾರ್ಗವನ್ನು ಸರಾಗಮಾಡಿ ಎಲ್ಲವೂ ನಮ್ಮ ಒಳ್ಳೆಯದಕ್ಕಾಗಿ ನೆರವೇರುವಂತೆ ಮಾಡುವನು (ಜ್ಞಾನೋಕ್ತಿ 2:8; ರೋಮಾ 8:28). ಪೌಲನು ಥೆಸಲೋನಿಕಕ್ಕೆ ಹೋಗದಂತೆ ತಡೆದನು. ಅದರ ಬದಲಾಗಿ ತಿಮೊಥಿಯನು ಹೋದನು ಹೇಗೂ ದೇವರ ಚಿತ್ತವು ನೆರವೇರಿತು (1 ಥೆಸಲೋನಿಕ 2:18, 3:1-2).

  ಅಪೋಸ್ತಲರ ಕೃತ್ಯದಲ್ಲಿ ಪರಿಸ್ಥಿತಿಯ ಮಾರ್ಗದರ್ಶನವನ್ನು ಅನೇಕ ಸಾರೆ ನೋಡುತ್ತೇವೆ. ಸುವಾರ್ತೆಯು ಬೇರೆ ಭಾಗಗಳಿಗೆ ಹರಡಲೆಂದು ದೇವರು ಯೆರೂಸಲೇಮಿನ ಸಭೆಗೆ ಹಿಂಸೆಯನ್ನು ಅನುಮತಿಸಿದನು (ಅ.ಕೃ 8:1). ಒಂದೇ ಸ್ಥಳದಲ್ಲಿರದಷ್ಟು ಹಿಂಸೆ ಬಂದದ್ದರಿಂದ ಪೌಲ ಬಾರ್ನಬರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಬೇಕಾಯಿತು ಅ.ಕೃ 13:50,51, 14:5,6,19,20). ಇದು ಕರ್ತನ ಬೋಧನೆ ಹಾಗೂ ಮಾದರಿಗನುಗುಣವಾಗಿದೆ (ಮತ್ತಾಯ 10:23; ಯೋಹಾನ 7:1). ಬರಗಾಲದ ಮೂಲಕವಾಗಿ ಸೌಲ ಬಾರ್ನಬರನ್ನು ದೇವರು ಯೆರೂಸಲೇಮಿಗೆ ತೆಗೆದುಕೊಂಡು ಹೋದನು (ಅ.ಕೃ 11:28-30). ಅಲ್ಲಿ ಅವರು ಬೇಸರಗೊಳ್ಳದೇ ಪ್ರಾರ್ಥಿಸುವುದನ್ನು ಕಲಿತರು (ಅ.ಕೃ12:5). ಅಂತಿಯೋಕ್ಯಕ್ಕೆ ಮರಳಿ ಬಂದು ಈ ಪ್ರಾರ್ಥನಾ ಆತ್ಮವನ್ನು ಅವರು ತಮ್ಮ ಸಹ ಸೇವಕರಿಗೆ ಅನುಗ್ರಹಿಸಿದರು. ಇದರ ಮೂಲಕವಾಗಿ ಕರ್ತನ ಕಾರ್ಯವು ದೂರದ ಪ್ರದೇಶಗಳಿಗೆ ಮುಟ್ಟಿತು (ಅ.ಕೃ 12:25, 13:3). ಫಿಲಿಪ್ಪಿ ಪಟ್ಟಣದಲ್ಲಿನ ಅಹಿತಕರವಾದ ಸನ್ನಿವೇಶಗಳ ಮೂಲಕ ದೇವರು ಪೈಲ ಸೀಲರು ಅಲ್ಲಿನ ಜನರಿಗೆ ಸುವಾರ್ತೆ ಸಾರುವಂತೆ ಅನುಗ್ರಹಿಸಿದನು. ಇದು ಸಾಮಾನ್ಯ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿರಲಿಲ್ಲ (ಪಿಲಿಪ್ಪಿ 1:12).

  ಸನ್ನಿವೇಶಗಳ ಮೂಲಕವಾಗಿ ಲೋಕದ ಅತೀ ದೊಡ್ಡ ಮಿಷನರಿಗಳು ಬೇರೆ ಬೇರೆ ಸ್ಥಳಗಳಿಗೆ ನಡೆಸಲ್ಪಟ್ಟರು. ದೇವಿಡ್ ಲಿವಿಂಗಸ್ಟೋನ್ ರವರು ಚೀನಾಕ್ಕೆ ಹೋಗಲು ಪ್ರೇರೆಪಿಸಲ್ಪಟ್ಟು ವೈದ್ಯಕೀಯ ವೃತ್ತಿಯನ್ನು ಕಲಿತರು. ಚೀನಾದೇಶಕ್ಕೆ ಹೋಗುವಾಗ ಅಲ್ಲಿನ ಒಪಿಯಮ್ ಯುದ್ಧದ ಕಾರಣ ಬಾಗಿಲು ಮುಚ್ಚಲ್ಪಟ್ಟಿತ್ತು. ಲಂಡನ್ ಮಿಷನರಿ ಸೊಸೈಟಿಯವರು ವೆಸ್ಟಿಂಡೀಸ್‍ಗೆ ಹೋಗಲು ಸೂಚಿಸಿದರು. ಆದರೆ ಅಲ್ಲಿ ಅನೇಕ ವೈದ್ಯರು ಈಗಾಗಲೇ ಇದ್ದಿದ್ದರಿಂದ ಆತನು ಅಲ್ಲಿಗೆ ಹೋಗದೆ ಕೊನೆಗೆ ರಾಬರ್ಟ ಮೊಫಾಟ ಅವರ ಮೂಲಕವಾಗಿ ಲಿವಿಂಗಸ್ಟೋನರವರು ಆಫ್ರಿಕಾ ದೇಶಕ್ಕೆ ಹೋದರು.

  ಭಾರತಕ್ಕೆ ಮಿಷನರಿಯಾಗಿ ಹೋಗಬೇಕೆಂದು ಅದೋನಿರಾಂ ಓಡಸನರವರು ಪ್ರೇರೇಪಿಸಲ್ಪಟ್ಟು ಅಮೇರಿಕಾ ಬಿಟ್ಟರು. ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿರಲು ಅನುಮತಿ ದೊರೆಯಲಿಲ್ಲ. ಮದ್ರಾಸಿನಲ್ಲಿರುವ ಅವರು ಒಂದು ನಿಗದಿತ ಸಮಯಕ್ಕೆ ದೇಶವನ್ನು ಬಿಡಾಬೇಕಾಯಿತು. ಆದ್ದರಿಂದ ಆ ದಿನ ಅವರು ಖಡ್ಡಾಯವಾಗಿ ಮದ್ರಾಸಿನಿಂದ ಹೊರಡುವ ಒಂದು ಹಡಗನ್ನು ಹತ್ತಬೇಕಾಯಿತು. ಆ ಹಡಗು ಬರ್ಮಾಗೆ ಹೋಗುವುದಾಗಿತ್ತು. ಹೀಗೆ ಓಡಸನ್ ತಮ್ಮ ಉಳಿದ ಜೀವಿತವನ್ನು ಬರ್ಮಾದೇಶದಲ್ಲಿಯೇ ಕಳೆದರು.

  ಈ ಇಬ್ಬರು ಮಿಷನರಿಗಳು ಈ ಬೇರೆ ದೇಶಗಳಲ್ಲಿ ಮಾಡಿದ ಸೇವೆಯು ದೇವರೇ ಇವರನ್ನು ಈ ಸನ್ನಿವೇಶಗಳ ಮೂಲಕ ನಡೆಸಿದನೆಂದು ಸ್ಪಷ್ಟಿಕರಿಸುತ್ತದೆ. ನಾವು ದೇವರ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗುವಾಗ ಆತನು ನಮ್ಮನ್ನು ಅಸ್ವಸ್ಥನಾಗಿ ಹಾಸಿಗೆ ಮೇಲೆ ಮಲಗಿಸಬಹುದು ಅಥವಾ ನಾವು ಟ್ರೈನ್ ತಪ್ಪುಂವಂತೆ ಅಥವಾ ಸಂಧರ್ಶನವನ್ನು ತಪ್ಪಿಸಿಕೊಳ್ಳುವಂತೆ ಮಾಡಿ ನಮ್ಮನು ತಡೆಯುತ್ತಾನೆ. ನಾವು ಆತನ ದೊರೆತನದಲ್ಲಿರುವಾಗ ಯಾವ ನಿರಾಶೆಯೂ ಸಹ ನಮ್ಮ ಒಳತಿಗಾಗಿಯೇ ಇರುವುದು. ನಾವು ಯಾವುದನ್ನಾದರೂ ಅತೀ ಹೆಚ್ಚಾಗಿ ಆಶಿಸಿದ್ದರೆ, ಅದಕ್ಕಾಗಿ ಪ್ರಾರ್ಥಿಸಿದ್ದರೂ ನಮಗೆ ಅದು ದೊರೆಯದಿದ್ದರೆ, ಅದಕ್ಕಿಂತಲೂ ಒಳ್ಳೇದನ್ನು ದೇವರು ನಮಗೆ ಅನುಗ್ರಹಿಸುವನೆಂದು ನಮಗೆ ಖಾತರಿಯಾಗಬೇಕು.

  ಒಂದು ಸಾರೆ ಟ್ರೈನ್ ತಪ್ಪಿ, ಹಡಗು ತಡವಾಗಿ ಬಂದದ್ದರಿಂದ ನಾನು ಒಂದು ವ್ಯಕ್ತಿಗೆ ಮಾತನಾಡುವ ಹಾಗಾಯಿತು. ಅದೇ ರಾತ್ರಿ ಅವನು ತನ್ನ ಜೀವಿತವನ್ನು ಕರ್ತನಿಗೆ ಒಪ್ಪಿಸಿಕೊಟ್ಟನು. ನಾನು ಮೆಚ್ಚದೇ ಇದ್ದ ಒಂದು ಹಡಗಿಗೆ ಯೌವನಸ್ಥನನ್ನು ಕರ್ತನ ಭಳಿಗೆ ನಡೆಸಲಿಕ್ಕೆ ಕಾರಣವಾಯಿತು. ದೇವರು ಎಂದೂ ತಪ್ಪು ಮಾಡುವದಿಲ್ಲ. ಆತನ ಮಹಿಮೆಗಾಗಿ ಮತ್ತು ನಮ್ಮ ಒಳಿತೆಗಾಗಿ ನಮ್ಮ ಸನ್ನಿವೇಶಗಳನ್ನು ನಿಯಂತ್ರಿಸುವಂತೆ ನಾವು ಆತನಲ್ಲಿ ಭರವಸೆಯಿಡಬಹುದು.

  ನಮ್ಮ ಮಾರ್ಗದಲ್ಲಿ ಅಡ್ಡಿಗಳು ಬರುವಾಗ ನಮ್ಮ ಸನ್ನಿವೇಶಗಳನ್ನು ಬದಲಿಸಿ ತನ್ನ ಚಿತ್ತವನ್ನು ತಿಳಿದುಕೊಳ್ಳುವಂತೆ ನಾವು ದೇವರಲ್ಲಿ ಕೇಳಿಕೊಳ್ಳಬಹುದು. ದೇವರು ನನ್ನನ್ನು ಕರೆದಾಗ ನಾನು ಭಾರತದ ನೌಕಾದಳದಲ್ಲಿ ಅಧಿಕಾರಿಯಾಗಿ ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟೆನು. ಆದರೆ ನನ್ನ ಅರ್ಜಿಯು ನೌಕಾದಳದ ಪ್ರಾದಾನ ಕಚೇರಿಯಿಂದ ತಿರಸ್ಕರಿಸಲ್ಪಟ್ಟಿತು. ನನ್ನ ಆಂತರ್ಯದಲ್ಲಿನ ಪವಿತ್ರಾತ್ಮನ ಸಾಕ್ಷಿಗೆ ಈ ಬಾಹಿರ ಸನ್ನಿವೇಶಗಳು ವಿರೋಧವಾಗಿ ಕಂಡು ಬಂದಿತು. ದೇವರು ನನ್ನನ್ನು ನೌಕಾದಳದಿಂದ ಬಿಡುಗಡೆಮಾಡಿ ತನ್ನ ಕರೆಯುವಿಕೆಯನ್ನು ಸನ್ನಿವೇಶಗಳನ್ನು ಬದಲಾಯಿಸುವುದರ ಮೂಲಕ ದೃಢಪಡಿಸುವಂತೆ ಪ್ರಾರ್ಥಿಸಿದೆನು. ನಾನು ಮೂರು ಸಾರೆ ರಾಜೀನಾಮೆಗೆ ಅರ್ಜೀ ಸಲ್ಲಿಸಿದೆನು. ಕೊನೆಗೆ ಎರಡು ವರ್ಷಗಳ ನಂತರ ನನಗೆ ಬಿಡುಗಡೆಯಾಯಿತು. ಈ ಪ್ರಾರಂಭದ ಅಬ್ಯಂತರ ಸೈತಾನನಿಂದ ಎಂಬುದು ನನಗೆ ಸ್ಪಷ್ಟವಾಯಿತು. ನನ್ನ ನಂಬಿಕೆಯನ್ನು ಬಲಪಡಿಸಲು ದೇವರು ಇವೆಲ್ಲವುಗಳನ್ನು ಬದಲಿಸಿ ತಾನು ಸರ್ಕಾರ ಮೇಲೆಯೂ ಭೂಮಂಡಲದ ದೊರೆತನಗಳ ಮೇಲೂ ಅಧಿಕಾರವುಳ್ಳವನು ಎಂದು ನನಗೆ ಕಲಿಸಿದನು.

  ಪ್ರತಿಯೊಂದು ಬಾಗಿಲಿಗೆ ಬೀಗದ ಕೈ ಆತನಲ್ಲಿದೆ. ಆತನು ಬಾಗಿಲನ್ನು ತೆರೆದರೆ ಯಾರೂ ಅದನ್ನು ಮುಚ್ಚಲಾರರು. ಆತನು ಮುಚ್ಚಿದರೆ ಯಾರೂ ತೆಗೆಯಲಾರರು (ಪ್ರಕಟನೆ 3:7). ಅರಸನ ಹೃದಯವನ್ನು ಸಹ ನಮ್ಮ ದೇವರು ತನಗೆ ಬೇಕಾದ ದಿಕ್ಕಿನಲ್ಲಿ ತಿರುಗಿಸಬಹುದು. (ಜ್ಞಾನೋಕ್ತಿ 21:1, ಎಜ್ರ 6:22)

  ಸನ್ನಿವೇಶಗಳಿಗೆ ಪ್ರತಿಕೂಲವಾಗಿ ದೇವರು ನಮ್ಮನ್ನು ಕೆಲವು ಸಾರೆ ನಡಿಸಬಹುದು. ಯೆರೂಸಲೇಮಿನಲ್ಲಿ ಮೊದಲಿನ ಹಿಂಸೆ ಪ್ರಾರಂಭವಾದಾಗ ಅಪೋಸ್ತಲರು ಧೈರ್ಯಕ್ಕೋಸ್ಕರ ಪ್ರಾರ್ಥಿಸಿದ್ದರೇ ಹೊರತು ಅಲ್ಲಿಂದ ಓಡಿಹೋಗಲಿಲ್ಲ. ದೇವರು ಅವರನ್ನು ತನ್ನ ಆತ್ಮನಿಂದ ತುಂಬಿಸಿ ತನ್ನ ಬಲದಿಂದ ಯೆರೂಸಲೇಮು ನಡಗುವಂತೆ ಮಾಡಿದನು. ಆತನು ಶಿಷ್ಯರು ಚದರಿಸಲ್ಪಡುವ ಸಮಯವು ಇನ್ನೂ ಬಂದಿರಲ್ಲಿಲ್ಲ (ಅ.ಕೃ 4:29-33, 5:11-14). ಫಿಲಿಪ್ಪನು ಸಮಾರ್ಯವನ್ನು ಬಿಟ್ಟು ಅಡವಿಯ ಕಡೆಗೆ ಹೊರಟಿದ್ದು ಸಂಧರ್ಬಕ್ಕೆ ಪ್ರತಿಕೂಲವಾಗಿತ್ತು. ಯಾಕಂದರೆ ಅವನು ಸಮಾರ್ಯದಲ್ಲಿ ಒಳ್ಳೇ ಸೇವೆಯನ್ನು ಮಾಡುತ್ತಿದ್ದನು. (ಅ.ಕೃ 8:26) ಸನ್ನಿವೇಶಗಳು ಯಾವಾಗಲೂ ದೇವರ ಚಿತ್ತದ ಸೂಚನೆಗಳಲ್ಲ. ಅವುಗಳನ್ನು ಯಾವಾಗಲೂ ಆಂತರ್ಯದ ಪವಿತ್ರಾತ್ಮನ ಸಾಕ್ಷಿಗೂ ಆತನ ವಾಕ್ಯದಲ್ಲಿ ಪ್ರಕಟಿಸಲ್ಪಟ್ಟ ಆತನ ಚಿತ್ತಕ್ಕನುಸಾರವಾಗಿ ಪರಿಗಣಿಸಲ್ಪಡಬೇಕು. ದೇವರು ತನ್ನ ಮಕ್ಕಳು ಸನ್ನಿವೇಶಗಳಿಂದ ಚಲಿಸಲ್ಪಡಬೇಕೆಂದು ಇಚ್ಚಿಸುವುದಿಲ್ಲ. ಆತನು ಸನ್ನಿವೇಶಗಳ ಮೇಲೆ ಕರ್ತನಾಗಿರುವುದರಿಂದ ಆತನ ಮಕ್ಕಳು ಆತನಂತೆ ಅವುಗಳ ಮೇಲೆ ದೊರೆತನ ಮಾಡಲು ಅಪೇಕ್ಷಿಸುತ್ತಾನೆ.

  ದೇವರು ತನ್ನ ಚಿತ್ತವನ್ನು ಒಂದು ಸೂಚನೆಯ ಮೂಲಕ ತೋರಿಸುವಂತೆ ಕೇಳುವುದು ಸರಿಯೇ? ತನ್ನ ಚಿತ್ತವನ್ನು ತೋರಿಸುವಂತೆ ಹಳೇ ಒಡಂಬಡಿಕೆಯಲ್ಲಿ ಜನರು ದೇವರಿಂದ ಸೂಚನೆಯನ್ನು ಕೇಳಿಕೊಂಡಿದ್ದುಂಟು ಇಸಾಕನು ವಧುವನ್ನು ತರಲು ಹೊರಟ ಅಬ್ರಹಾಮನ ಸೇವಕನು ದೇವರಿಂದ ಗುರುತನ್ನು ಕೇಳಿಕೊಂಡನು (ಆದಿ 24:10-27). ಗಿದ್ಯೊನನು ಸಹ ದೇವರು ತನ್ನ ಚಿತ್ತವನ್ನು ಖಚಿತಗೊಳಿಸಲು ಒಂದು ಗುರುತನ್ನು ಕೇಳಿಕೊಂಡನು. ಮರು ರಾತ್ರಿ ಆ ಗುರುತನ್ನು ತಿರುಗಿಸಲು ಕೇಳಿಕೊಂಡನು. ದೇವರು ಎರಡೂ ಸಂದರ್ಭಗಳಲ್ಲಿ ತನ್ನ ಚಿತ್ತವನ್ನು ಖಚಿತಪಡಿಸಿದನು (ನ್ಯಾಯಸ್ಥಾಪಕರು 6:36-40). ಯೋನನಿದ್ದ ನಾವೆಯ ನಾವಿಕನು ಆ ತುಫಾನಿಗೆ ಕಾರಣ ಯಾರು ಎಂದು ತಿಳಿಯಲು ಚೀಟುಹಾಕಿದರು. ದೇವರು ಉತ್ತರಕೊಟ್ಟರು (ಯೋನ 1:7). ಚೀಟು ಹಾಕುವುದು ಇನ್ನೂ ಕೆಲವು ಸಂದರ್ಭಗಳಲ್ಲಿ ಇತ್ತು (ಯೆಹೋಶುವ 7:14; 1 ಸಮು 10:20, 14:41-44; ಜ್ಞಾನೋಕ್ತಿ 16:33). ಹೊಸ ಒಡಂಬಡಿಕೆಯಲ್ಲಿ ಪಂಚಾಶತ್ತಮ ದಿನದ ಮುಂಚೆ ಒಂದೇ ಸಾರೆ ದೇವರ ಚಿತ್ತವನ್ನು ಕಂಡು ಕೊಳ್ಳಲು ಚೀಟುಹಾಕಿದರು (ಅ.ಕೃ 1:23-26). ಪವಿತ್ರಾತ್ಮನ ಆಗಮನದ ನಂತರ ಒಂದು ಸಾರೆಯಾದರೂ ವಿಶ್ವಾಸಿಗಳು ದೇವರ ಚಿತ್ತವನ್ನು ಕಂಡು ಹಿಡಿಯಲು ಗುರುತನ್ನು ಹುಡುಕಲಿಲ್ಲ. ಇದರ ಅರ್ಥವೆನಂದರೆ ದೇವರು ಈ ರೀತಿಯಾಗಿ ತನ್ನ ಚಿತ್ತವನ್ನು ಇನ್ನು ಮೇಲೆ ಪ್ರಕಟಿಸುವುದಿಲ್ಲ ಪವಿತ್ರಾತ್ಮನು ಮನುಷ್ಯರೊಳಗೆ ಇರದ ಕಾಲದಲ್ಲಿ ಅಂದರೆ ಹಳೆ ಒಡಂಬಡಿಕೆಯಲ್ಲಿ ಇದು ಇತ್ತು ಆದರೆ ಈಗಿಲ್ಲ.

  ಒಂದೊಂದು ಸಾರಿ ನಮ್ಮ ಬಳಲಿದ ಆತ್ಮವನ್ನು ಪ್ರೋತ್ಸಾಹ ಪಡಿಸಲು ದೇವರು ಗುರುತನ್ನು ಕೊಡಬಹುದು. ಬೇರೆ ಮಾರ್ಗದರ್ಶನ ಮಾರ್ಗಗಳು ಅನಿಶ್ಚಿತವಾದಾಗ ಮಾತ್ರ ನಾವು ದೇವರಲ್ಲಿ ಒಂದು ಗುರುತಿಗಾಗಿ ಕೇಳಬಹುದು. ಆಗಲೂ ಸಹ ನಾವು ಯಾವ ವಿಧವಾದ ಗುರುತೆಂಬುದಾಗಿ ಕೇಳಿಕೊಳ್ಳಬೇಕು. ನಮ್ಮ ದಾರಿಯಲ್ಲಿ ನಾವು ಹೋಗುವುದಕ್ಕೆ ಗುರುತುಗಳನ್ನು ಉಪಯೋಗಿಸಬಾರದು. ನಾವು ಒಂಟಿಯಾಗಿ ಹೋಗಲು ಮನಸ್ಸಿಲ್ಲದಿರುವಾಗ ದೇವರು ಒಂದು ಅದ್ಭುತಮಾಡಿ ತನ್ನ ಚಿತ್ತವನ್ನು ತೋರಿಸುವಂತೆ ಕೇಳಿಕೊಳ್ಳಬಾರದು. ಅಥವಾ ಉದಾಹರಣೆಗೆ ನಾವು ಹೋಗಬೇಕೆಂದಿರುವ ಮಾರ್ಗದಲ್ಲಿ ನಾವು ಹೋಗುವ ಪೂರ್ವದಲ್ಲಿ ಅತೀ ಸಾಮಾನ್ಯವಾಗಿರುವ ಒಂದು ಚಿಕ್ಕ ಗುರುತನ್ನು ನಮ್ಮ ನೆವಕ್ಕೋಸ್ಕರ ಕೇಳಿಕೊಳ್ಳಬಾರದು.

  ನಾವು ಇನ್ನೂ ಕೆಲವು ಕ್ರೈಸ್ತರ ರೂಡಿಏನಂದರೆ ತಮ್ಮ ಕಣ್ಣು ಮುಚ್ಚಿ ತಮ್ಮ ಬೆರಳು ಯಾವ ವಚನದ ಮೇಲೆಬೀಳುತ್ತ ಅದೇ ದೇವರ ಚಿತ್ತವೆಂದು ತಿಳಿಯುವವರ ಹಾಗಿರಬಾರದು. ಆ ವಿಧಾನವು ಮುರ್ಖಕರವಾದದ್ದು ಮತ್ತು ನಮ್ಮನ್ನು ತಪ್ಪು ದಾರಿಗೆ ನಡೆಸುತ್ತದೆ. ಸತ್ಯವೇದ ಮಂತ್ರದ ಪುಸ್ತಕವಲ್ಲ. ಅದನ್ನು ಹಾಗೆಂದು ತಿಳಿಯಬೇಡಿರಿ

  .

  ಗುರುತೇ ಮಾರ್ಗದರ್ಶನಕ್ಕೆ ಅವಶ್ಯವೆಂದು ಭಾವಿಸುವುದು ದೇವರ ವಾಕ್ಯಕ್ಕೆ ವಿರುದ್ಧವಾಗಿದೆ. ಗುರುತುಗಳನ್ನು ಅಪೇಕ್ಷಿಸುವುದು ಆತ್ಮೀಕವಾಗಿ ನಾವು ಶಿಶುಗಳಾಗಿದ್ದೇವೆಂದು ತೋರಿಸುತ್ತದೆ. ಇದನ್ನು ಮರೆಯಬಾರದು. ನಾವು ಇದರಿಂದ ಬೆಳೆಯಬೇಕು.

  ಇತರ ವಿಶ್ವಾಸಿಗಳ ಸಲಹೆ

  ವಿಶ್ವಾಸಿಗಳು ಒಂದೇ ದೇಹದ ಇತರ ಭಾಗಗಳು ಎಂದು ಹೊಸ ಒಡಂಬಡಿಕೆಯು ಬಹಳವಾಗಿ ಒತ್ತಿ ಹೇಳುತ್ತದೆ. ಯಾವ ವ್ಯಕ್ತಿಯೂ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಲು ಆಗದು. ಪ್ರತಿಯೊಬ್ಬನೂ ಜೀವಿಸಿ ಬದುಕಲು ಇತರರ ಮೇಲೆ ಅವಲಂಬಿಸುವುದು ಅವಶ್ಯ. ಆದ್ದರಿಂದ ಮಾರ್ಗದರ್ಶನದ ವಿಷಯದಲ್ಲಿ ಇತರರೊಂದಿಗೆ ಅನ್ಯೋನ್ಯವಾಗಿರುವುದರ ಮೂಲಕ (ಇತರರ ಸಲಹೆಗಳ ಮೂಲಕ) ದೇವರ ಚಿತ್ತವನ್ನು ತಿಳಿಯುವುದು ಬುದ್ದಿವಂತಿಕೆಯಾಗಿದೆ. ನಾವು ಆತನ ಸಂಪೂರ್ಣ ಚಿತ್ತವನ್ನು ತಪ್ಪಿಸಿಕೊಳ್ಳಬಾರದೆಂದು ನಮ್ಮ ಭದ್ರತೆಗೋಸ್ಕರ ದೇವರು ಈ ಭಾಗ್ಯವನ್ನು ನಮಗೆ ಒದಗಿಸಿದ್ದಾನೆ.

  ಒಂದು ದೆಸೆಯಲ್ಲಿ ಹೋಗಲು ಎಲ್ಲಾ ಅನುಕೂಲ ಅನಾನುಕೂಲಗಳನ್ನು ನಾವು ಒಂಟಿಯಾಗಿ ತಿಳಿಯಲು ಆಗದು. ನಾವು ತೆಗೆದು ಕೊಳ್ಳುವ ನಿರ್ಣಯಗಳನ್ನು ಸರಿಯಾಗಿ ಪರಿಗಣಿಸಲು ಇತರ ಭಕ್ತಿವಂತರ ಉಪದೇಶವು ನಮಗೆ ಅತ್ಯವಶ್ಯ. ಅತೀ ಪ್ರಾಮುಖ್ಯವಾದ ನಿರ್ಣಯಗಳಿರುವಾಗ ಇದು ಬಹಳ ಪ್ರಯೋಜನಕಾರಿಯಾಗಿದೆ. ದೇವರು ನಮಗೆ ಕೊಟ್ಟಿರುವ ಈ ಮಾರ್ಗದರ್ಶನದ ಮಾಧ್ಯಮವನ್ನು ನಾವು ಅಹಂಕಾರದಿಂದ ನಿರ್ಲಕ್ಷಿಸಿದರೆ ನಾವೇ ನಷ್ಟವನ್ನು ಅನುಭವಿಸುತ್ತೇವೆ. ``ಮಂತ್ರಾಲೋಚನೆಯಿಂದ ಯುದ್ಧವನ್ನು ನಡಿಸು. ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆ ಇರುವದು ಕ್ಷಾನಿಯು ಬೋದೆ ಜೀವದ ಬುಗ್ಗೆ ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು ಮುರ್ಖನ ನಡತೆ ಅವನ ಗಣನೆಗೆ ಸರಿ. ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು ಸನ್ಮಾರ್ಗಿಯು ಮಾರ್ಗತಪ್ಪಿಸುವನು'' (ಜ್ಞಾನೋಕ್ತಿ 24:6, 20:18, 13:14, 12:15,16).

  ಇಲ್ಲಿ ಎರಡು ವಿಪರೀತಗಳಿವೆ. ಒಂದುನೇಯದು ಭಕ್ತರ ಉಪದೇಶವನ್ನು ಸಂಪೂರ್ಣವಾಗಿ ತಿರಿಸ್ಕರಿಸಿ ಸ್ವತಂತ್ರ್ಯರಾಗಿರುವರು. ಇನ್ನೊಂದು ಇತರರ ಬೋಧನೆಯನ್ನು ದೇವರ ಪರಿಪೂರ್ಣ ಚಿತ್ತವೆಂದು ಅದನ್ನೆ ಅವಲಂಬಿಸುವುದು. ಇವೆರಡರಲ್ಲಿ ಒಂದನ್ನು ಹಿಂಬಾಲಿಸಿದರೆ ನಾವು ದಾರಿ ತಪ್ಪುತ್ತೇವೆ. ಇಲ್ಲವೇ ಆತ್ಮೀಕವಾಗಿ ಜೀವನವಿಡೀ ಬೆಳೆಯದೇ ಇರುತ್ತೇವೆ. ಇತರ ಭಕ್ತಿವಂತರ ಬೋಧನೆಯನ್ನು ನಾವು ತೆಗೆದುಕೊಳ್ಳಬೇಕೆಂದು ದೇವರು ಉದ್ದೇಶಿಸಿದ್ದರೂ ನಾವು ಅವುಗಳಿಗೆ ಗುಲಾಮರಂತೆ ಅಧೀನರಾಗಿರುವದು. ದೇವರ ಚಿತ್ತವಲ್ಲ.

  ಸತ್ಯವನ್ನು ಸರಿಯಾದ ಸಮತೋಲನವಾಗಿ ಸತ್ಯವೇದ ನಮಗೆ ಅರ್ಪಿಸುತ್ತದೆ. ಆದರೆ ಅಭಾಗ್ಯಕರವಾದ ವಿಪರೀತಗಳಿಗೆ ಹೋಗುವ ಪ್ರವೃತ್ತಿ ಮನುಷ್ಯನಲ್ಲಿದೆ. ಇಂಥಹ ಸಮತೋಲವಾದ ಬೋಧನೆಯು 1 ಅರಸು 12 ಮತ್ತು 13 ನೇ ಅಧ್ಯಾಯಗಳಲ್ಲಿ ಬಹು ಸ್ಪಷವಾಗಿ ಕೊಡಲ್ಪಟ್ಟಿದೆ. 12 ನೇ ಅಧ್ಯಾಯದಲ್ಲಿ ತನ್ನಂತೆಯೇ ಇರುವ ಯೌವನಸ್ಥರ ಸಲಹೆಗಿಂತ ದೊಡ್ಡವರ ಉಪದೇಶವನ್ನು ರೆಹೆಬ್ಬಾಮನು ತೆಗೆದುಕೊಳ್ಳಬೇಕಿತ್ತು. ಇದರ ಪರಿಣಾಮವಾಗಿ ರಾಜ್ಯವು ಇಬ್ಬಾಗವಾಯಿತು. 13ನೇ ಅಧ್ಯಾಯದಲ್ಲಿ ಯೌವನಸ್ಥ ಪ್ರವಾದಿಯು ಹಿರಿಯ ಪ್ರವಾದಿಯ ಮಾತನ್ನು ಕೇಳಬಾರದಾಗಿತ್ತು. ``ವೃದ್ದರೆ ಜ್ಞಾನಿಗಳಲ್ಲ. ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ (ಯೋಬ 32:9). ಅವನು ಹಾಗೆ ಮಾಡಿದ್ದರಿಂದ ತನ್ನ ಪ್ರಾಣವನ್ನು ಕಳೆದುಕೊಂಡನು. ಅಪೋಸ್ತ ಪೌಲನ ಜೀವಿತದಲ್ಲಿ ಈ ಸಮತೋಲವನ್ನು ನಾವು ಕಾಣುತ್ತೇವೆ. ಅ.ಕೃ 13:1-3 ರಲ್ಲಿ ದೇವರು ಪೌಲನನ್ನು ಸುವಾರ್ತೆ ಸೇವೆಗೆ ಕರೆಯುವುದನ್ನು ನಾವು ನೋಡುತ್ತೇವೆ. ಆದರೆ ದೇವರು ಪೌಲನ ಜೊತೆಸೇವಕರಿಗೂ ತನ್ನ ಚಿತ್ತವನ್ನು ಅದೇ ಸಮಯದಲ್ಲಿ ಪ್ರಕಟಿಸಿದನು. ಪೌಲನಿಗೆ ಪ್ರತ್ಯೇಕವಾಗಿ ದೇವರು ತಿಳಿಸಿದ್ದನ್ನು ಇತರರ ಮೂಲಕವಾಗಿ ದೃಡಪಡಿಸಿದನು. ಆದರೆ ಅ.ಕೃ 21:1-15 ರಲ್ಲಿ ಜೊತೆ ಸೇವಕರ ಉಪದೇಶವನ್ನು (ಅವರ ಪ್ರವಾದನೆಯನ್ನೂ) ಬದಿಗಿಟ್ಟು ತನಗೆ ದೇವರ ಚಿತ್ತವೇನು ಎಂದು ತಿಳಿದನೋ ಆ ದಿಕ್ಕಿನಲ್ಲಿ ನಡೆದನು. ನಂತರ ಯೆರೂಸಲೇಮಿಗೆ ಹೋಗುವುದ ತನ್ನ ಚಿತ್ತವೆಂದು ದೇವರು ದೃಡಿಪಡಿಸಿದನು (ಅ.ಕೃ 23:11).

  ಇನ್ನೊಂದು ಸಾರೆ ತನ್ನ ಸೇವೆಯ ಪ್ರಾರಂಭದಲ್ಲಿ ದೇವರ ಚಿತ್ತವನ್ನು ತಾನೇ ತಿಳಿದುಕೊಂಡನು. ಯಾವ ಮನುಷ್ಯನ ಆಲೋಚನೆಯನ್ನು ವಿಚಾರಿಸದೆ ತಾನು ಅರಬಸ್ಥಾನಕ್ಕೆ ಹೊರಟು ಹೋದನು (ಗಲಾತ್ಯ 1:15-17).

  ದೇವರ ವಾಕ್ಯದಲ್ಲಿನ ಈ ಉದಾಹರಣೆಗಳ ಮೂಲಕ ನಾವು ತಿಳಿಯುವುದೆನಂದರೆ ಕೆಲವು ಸಂದರ್ಭಗಳಲ್ಲಿ ನಾವು ದೇವ ಮನುಷ್ಯರ ಉಪದೇಶವನ್ನು ಪಾಲಿಸಬೇಕು. ಇನ್ನು ಕೆಲವು ಸಾರೆ ಅದೇ ಜನರ ಉಪದೇಶಕ್ಕೆ ವಿರುದ್ಧವಾಗಿ ಹೋಗಬೇಕಾಗುವದು. ಇನ್ನು ಕೆಲವು ಸಾರೆ ನಾವು ಯಾರನ್ನು ವಿಚಾರಿಸಬೇಕಿಲ್ಲ. ಹೇಗೂ ಇತರರ ಉಪದೇಶವನ್ನು ನಾವು ಪಾಲಿಸಿದರೂ ಕೊನೆಗೆ ನಾವು ಮಾತ್ರ ನಿರ್ಣಯವನ್ನು ತೆಗೆದುಕೊಳ್ಳಬೇಕು. ಯಾಕಂದರೆ ಅಂತ್ಯದಲ್ಲಿ ನಾವು ನಮ್ಮ ನಿರ್ಣಯಗಳಿಗಾಗಿ ದೇವರಿಗೆ ಲೆಕ್ಕಕೊಡಬೇಕು. ಒಬ್ಬ ದೇವ ಮನುಷ್ಯನ ಉಪದೇಶವು ಬಹು ಅಮೂಲ್ಯವಾಗಿರಬಹುದು ಆದರೆ ತಪ್ಪಾಗಿರಲಾರದೇ ಇರಲಾರದು.

  ಪ್ರಾವಾದನೆ - ಕ್ರಿಸ್ತನ ದೇಹಕ್ಕೆ ಕೊಟ್ಟಿರುವ ವರವೆಂಬ ಪುಸ್ತಕದಲ್ಲಿ ಮೈಕಲ ಹಾರ್ಪರರವರು ಹೀಗೆ ಬರೆಯುತ್ತಾರೆ - ``ಇತರರು ಏನು ಮಾಡಬೇಕೆಂದು ಹೇಳುವ ಪ್ರವಾದನೆಗಳನ್ನು ನಾವು ಸಂಶಯದಿಂದ ನೋಡಬೇಕು. ಪ್ರವಾದನೆಯ ಮೂಲಕ ``ಮಾರ್ಗದರ್ಶನ'' ಎಂದಿಗೂ ಸೂಚಿಸಲ್ಪಟ್ಟಿಲ್ಲ. ಯೆರೂಸಲೇಮಿಗೆ ಹೋದರೆ ಏನಾಗುವುದೆಂದು ಪೌಲನಿಗೆ ಹೇಳಲ್ಪಟ್ಟಿತು. ಆದರೆ ಅವನು ಹೋಗಬೇಕೋ ಬೇಡವೋ ಎಂದು ಹೇಳಲಿಲ್ಲ. ಆತನ ಸ್ನೇಹಿತರು ಇದರ ವಿಷಯದಲ್ಲಿ ಹೇಳಿರಬಹುದು. ಆದರೆ ಮಾರ್ಗದರ್ಶನವು ಪ್ರವಾದನೆ ಮೂಲಕ ಬರಲಿಲ್ಲ. ಅಗಬನು ಕ್ಷಾಮದ ವಿಷಯವಾಗಿ ಪ್ರವಾದಿಸಿದನು ಆದರೆ ಅದರ ವಿಷಯವಾಗಿ ಏನುಮಾಡಬೇಕೆಂದು ಹೇಳಲಿಲ್ಲ. ಹೊಸ ಒಡಂಬಡಿಕೆಯಲ್ಲಿ ಮಾರ್ಗದರ್ಶನವು ಆ ವ್ಯಕ್ತಿಗೆ ಮಾತ್ರ ನೇರವಾಗಿ ಕೊಡಲ್ಪಡುತ್ತದೆ ಹೊರತು ಹಳೆ ಒಡಂಬಡಿಕೆಯಂತೆ ಇತರರ ಮೂಲಕ ಕೊಡಲ್ಪಡುವುದಿಲ್ಲ. ಉದಾಹರಣೆಗೆ - ಪೇತ್ರನನ್ನು ಕರೆಸುವಂತೆ ಕೊರ್ನೆಲ್ಯನಿಗೆ ದೇವದೂತನು ಹೇಳಿದರೂ ಪೇತ್ರನಿಗೆ ಪ್ರತ್ಯೇಕವಾಗಿ ಅವರೊಂದಿಗೆ ಹೋಗಬೇಕೆಂದು ಹೇಳಲ್ಪಟ್ಟಿತು. ಅ.ಕೃ 10:5, 10:20.

  ಜೆಮ್ಸ ಮೆಕಾಂಕಿ ಎಂಬುವರು ಮಾರ್ಗದರ್ಶನ ವೆಂಬ ತಮ್ಮ ಕಿರುಹೊತ್ತಿಗೆಯಲ್ಲಿ ಹೀಗೆ ಬರೆಯುತ್ತಾರೆ. ``ರಕ್ತ ಮಾಂಸವು (ನರಮನುಷ್ಯನು) ಕ್ರಿಸ್ತನನ್ನು ಸೀಮೋನ ಪೇತ್ರನಿಗೆ ಪ್ರಕಟಿಸಲಿಲ್ಲ (ಮತ್ತಾಯ 16:17) ಕ್ರಿಸ್ತನನ್ನು ಅವು ನಮಗೂ ಪ್ರಕಟಮಾಡುವುದಿಲ್ಲ. ಅದು ನಮ್ಮದೇ ಅಥವಾ ಇತರರ ರಕ್ತಮಾಂಸವಾಗಿರಬಹುದು. ಇತರರ ರಕ್ತಮಾಂಸವು ಸಹ ನಮ್ಮಂತೆಯೇ ಬಲಹೀನವಾದಕಾರಣ ನಮ್ಮಂತೆ ತಪ್ಪಬಹುದು. ಇಷ್ಟೆ ಅಲ್ಲದೆ ತಮ್ಮ ಸ್ನೇಹಿತರ ಉಪದೇಶಗಳ ಮೇಲೆ ಅವಲಂಬಿಸಿರುವವರು ಅವರ ಬಹು ಉಪದೇಶಗಳ ನಿಮಿತ್ತವಾಗಿ ಅಸ್ಥಿರವಾಗಿ ಗಲಿಬಿಲಿಗೆ ಒಳಗಾಗುವರು. ಆಗಲೂ ದೇವರು ತನ್ನ ದೈವೀಕ ನಿಯಮದ ಪ್ರಕಾರ ನಿನ್ನ ಜೀವಿತದ ಯೋಜನೆಯನ್ನು ಇತರರಿಗೆ ಪ್ರಕಟಿಸುವುದಿಲ್ಲ. ಯೋಹಾನನ ವಿಷಯವಾಗಿದ್ದ ದೇವರ ಯೋಜನೆಯನ್ನು ತಿಳಿಯಲು ಕಾತುರವಿದ್ದ ಪೇತ್ರನಿಗೆ ಕ್ರಿಸ್ತನು ಗದರಿಸಿದ್ದು ಸ್ಪಷ್ಟವಾದ ನಿದರ್ಶನವಾಗಿದೆ (ಯೋಹಾನ 21:22). ಚಿಕ್ಕ ಮಗುವಿಗೆ ನಡೆಯಲು ಕಲಿಸಲು ಪ್ರಾರಂಭದಲ್ಲಿ ನೀವು ಸಹಾಯಿಸಬಹುದು. ಆದರೆ ಆ ಮಗು ತಾನಾಗಿ ನಡೆಯ ಬೇಕಾದರೆ ಸ್ವಲ್ಪ ಸಮಯದ ನತರ ನಿಮ್ಮ ಕೈಯಲ್ಲಿ ಸಂಪೂರ್ಣವಾಗಿ ತೆಗೆದು ಅದು ನಿಮ್ಮ ಮೇಲೆ ಅವಲಂಬಿಸಿದಂತೆ ದೂರವಿರುವುದು ಒಳ್ಳೇದು. ದೇವರೊಂದಿಗೆ ನಡೆಯಬೇಕೆಂಬ ಹಂಬಲವಿರುವ ವಿಶ್ವಾಸಿಯು ಇದೇ ಪಾಠವನ್ನು ಕಲಿಯಬೇಕು. ಯಾವ ರೀತಿಯಾಗಿ ಮಗುವು ಕೆಲವು ಸಾರೆ ಬೀಳುವ ಮೂಲಕ ನಡೆಯಲು ಕಲಿಯುತ್ತದೋ ಹಾಗೆಯೇ ಕ್ರೈಸ್ತನೂ ಸಹ ಕೆಲವು ತಪ್ಪುಗಳ ಮೂಲಕವಾಗಿಯೇ ಕಲಿಯುತ್ತಾನೆ. ಕಲಿಯದೇ ಇರುವುದಕ್ಕಿಂತ ಈ ರೀತಿಯಾಗಿ ಕಲಿಯುವುದೇ ಎಷ್ಟೋ ಮೇಲು. ದೇವರೊಂದಿಗೆ ಏಕಾಂಕಿಯಾಗಿ ಆತನ ಮಾರ್ಗದರ್ಶನವನ್ನು ತಿಳಿದು ಆತನೊಂದಿಗೆ ನಡೆಯುವಾಗ ಕೆಲವು ದೊಡ್ಡ ಪ್ರಮಾಣದ ತಪ್ಪುಗಳನ್ನು ಮಾಡಿ ಇದನ್ನು ಕಲಿಯುವುದು ಲೇಸು. ಇಂಥಹ ಮಾರ್ಗದರ್ಶನದಲ್ಲಿ ಕ್ರೈಸ್ತ ಸ್ನೇಹಿತರ ಭಾಗವಿಲ್ಲವೇ ಖಂಡಿತವಾಗಿದೆ. ದೇವರ ವಾಕ್ಯದ ಮೇಲೆ ಬೇಕಾದ ಎಲ್ಲಾ ಬೆಳಕನ್ನು ಸಹಾಯವನ್ನು ಅನುಭವವನ್ನು ಹೊಂದಿಕೊಳ್ಳಿರಿ. ನೀವು ಇತರರಿಂದ ಸತ್ಯಾಂಶವನ್ನು ಪಡೆದುಕೊಳ್ಳಬಹುದು ಆದರೆ ನಿಮ್ಮ ನಿರ್ಣಯದ ಸ್ಥಳಕ್ಕೆ ನಾವು ಬಂದಾಗ ವ್ಯಯಕ್ತಿಕವಾಗಿ ನಾವು ದೇವರ ಮೇಲೆ ತಾಳ್ಮೆಯಿಂದ ಕಾಯ್ದುಕೊಂಡಿರುವುದು ಅತ್ಯಂತ ಶ್ರೇಷ್ಠವಾದ ಪಾಠವನ್ನು ಕಲಿಯುತ್ತೇವೆ. ಅನುಭವವುಳ್ಳ ವಿಶ್ವಾಸಿಗಳ ಉಪದೇಶಕ್ಕೆ ವಿರೋಧವಾಗಿ ನಾವು ಯಾವಾಗಲೂ ಹೋಗಲೇ ಬೇಕಾದಲ್ಲಿ ದೇವರೇ ನಮ್ಮನ್ನು ನಡೆಸುತ್ತಿದ್ದಾನೆಂದು ಪದೇ ಪದೇ ಪರೀಕ್ಷಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ದೊಡ್ಡ ನಿರ್ಣಯಗಳನ್ನು ಮಾಡುವಾಗ ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಅತ್ಯವಶ್ಯ.

  ಕರ್ತನ ಸ್ವರ

  ರೂಪಾಂತರ ಬೆಟ್ಟದ ಮೇಲೆ ಪೇತ್ರನು ಕರ್ತನಾದ ಯೇಸುವನ್ನು ಮೇಶೆ ಮತ್ತು ಎಲೀಯರೊಂದಿಗೆ ಸಮ ಮಾಡಿದ್ದಕ್ಕೆ ದೇವರಿಂದ ಗದರಿಸಲ್ಪಟ್ಟನು. ಹಳೆ ಒಡಂಬಡಿಕೆಯಲ್ಲಿ ಈ ಇಬ್ಬರೂ ದೇವರ ಬಾಯಿಯಂತಿದ್ದರು. ಆದರೆ ಈಗ ಹೊಸ ಯುಗವು ಪ್ರಾರಂಭಿಸಲ್ಪಡುತ್ತಿತ್ತು. ಅದನ್ನು ಪೇತ್ರನು ತಿಳಿಯಬೇಕಾಗಿತ್ತು. ಈ ಹೊಸ ಯುಗದಲ್ಲಿ ಒಬ್ಬನೇ ನಾಯಕನಾಗಿದ್ದಾನೆ. ``ಈತನು ನನ್ನ ಪ್ರಿಯ ಮಗನು ಈತನ ಮಾತನ್ನು ಯಾವಾಗಲೂ ಕೇಳುತ್ತಾ ಇರಿ (ಮಾರ್ಕ 9:7) ಶಿಷ್ಯರು ತಮ್ಮ ಕಣ್ಣೆತ್ತಿ ನೋಡುವಾಗ ``ಯೇಸುವನ್ನು ಹೊರತು ಬೇರೆ ಯಾರನ್ನು ಕಾಣಲಿಲ್ಲ'' ಬಾಹಿರವಾಗಿ ಯಾವುದೇ ವಿಧವಾದ ದೇವರು ನಮ್ಮೊಂದಿಗೆ ಮಾತನಾಡಿದರೂ ನಾವು ಕರ್ತನ ಸ್ವರವನ್ನು ಕೇಳುವುದಕ್ಕೆ ಕಾತುರರಾಗಿರಬೇಕು.

  ವಾಚಮನ್ ನೀ ಎಂಬುವವರು What Shall This Man Do?ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. ``ಕ್ರೈಸ್ತತ್ವವು ಯಾವಾಗಲೂ ಪವಿತ್ರಾತ್ಮನ ಮೂಲಕವಾಗಿ ದೇವರನ್ನು ವೈಯಕ್ತಿಕವಾಗಿ ಅರಿತುಕೊಳ್ಳುವುದೇ ಹೊರತು ಬೇರೆಯವರ ಮೂಲಕವಾಗಿ ಆಗಲೀ ಅಥವಾ ಪುಸ್ತಕದ ಮೂಲಕವಾಗಿ ಅಲ....ಪ್ರಾಯೋಗಿಕವಾಗಿ ನಮಗೆ ಇಂದು ಮೋಶೆಯ ಮೂಲಕವಾಗಿ ಧರ್ಮಶಾಸ್ತ್ರವು ಕೊಡಲ್ಪಟ್ಟಿದೆ ಮತ್ತು ಮರಣವನ್ನನುಭವಿಸದವನಾದ ಎಲೀಯನು ನಮಗೆ ದೂತನಾಗಿದ್ದಾನೆ. ಇವರಿಬ್ಬರೂ ದೇವರಿಂದ ನಮಗೆ ಕೊಡಲ್ಪಟ್ಟ ಶ್ರೇಷ್ಠ ವರಗಳಾಗಿವೆ. ದೇವರ ಧರ್ಮಶಾಸ್ತ್ರ ನಮ್ಮ ಕೈಯಲ್ಲಿ ಮತ್ತು ದೇವರು ತನಗೆ ಹೇಳಿದ್ದನ್ನು ನಮಗೆ ತಿಳಿಸುವ ನಮ್ಮ ಮಿತ್ರನು ಧರ್ಮಶಾಸ್ತ್ರವೂ ಸ್ನೇಹಿತನ ಉಪದೇಶವೂ ಅಗತ್ಯವೇ ನಮಗೆ ಎರಡೂ ಬೇಕು. ಅವನ್ನು ತಿರಸ್ಕರಿಸಲಾಗದು. ಆದರೆ ರೂಪಾಂತರ ಬೆಟ್ಟದ ಮೇಲಿನ ಘಟನೆಯು ದೇವರ ಸ್ವರವನ್ನು ನಮ್ಮ ಆತ್ಮದಲ್ಲಿ ಕೇಳುವುದೇ ಇವೆರಡಕ್ಕಿಂತಲೂ ಹೆಚ್ಚಿನದು ಎಂದು ತೋರಿಸುತ್ತದೆ. ``ನಾವು ದೇವರ ಸಂದೇಶಕರನ್ನು ಹೀನೈಸಬಾರದು. ನಮಗೆ ಮೇಲಿಂದ ಮೇಲೆ ಪ್ರವಾದನೆ ವಾಕ್ಯಗಳು ಬೇಕು. ಇಲ್ಲವೇ ಆತ್ಮೀಕವಾಗಿ ಪರಿಪಕ್ವವಾಗಿರುವವರ ಉಪದೇಶಗಳು ಬೇಕು. ಆದರೆ ನಾವು ಅವರಿಗೆ ಕೊಡಲ್ಪಟ್ಟಿರುವ ಪ್ರಕಟಣೆ ಸಂಪೂರ್ಣವಾಗಿ ಅಧೀನರಾಗುವುದಿಲ್ಲ. ನಾವು ಆತನ ಸ್ವರವನ್ನು ಕೇಳುವುದಕ್ಕೆ ಬದ್ದರಾಗಿದ್ದೇವೆ

  .

  ಬರೆದು ಕೊಡಲ್ಪಟ್ಟಿರುವ ದೇವರ ವಾಕ್ಯವನ್ನು ನಾವು ಕಡೆಗೆಣಿಸುವುದಿಲ್ಲ. ಆತ್ಮ ಪ್ರೇರಿತವಾದ ವಾಕ್ಯಗಳು ನಮ್ಮ ಜೀವಿತಕ್ಕೂ ಬೆಳವಣಿಗೆಗೂ ಅತ್ಯವಶ್ಯವಾಗಿರುವುದರಿಂದ ಅದಿಲ್ಲದೇ ಇರಸಿಕ್ಕಾಗುವುದಿಲ್ಲ. ಆದಾಗ್ಯೂ ನಮ್ಮಲ್ಲಿ ಕೆಲವರು ಯೇಸುವನ್ನು ಕೊನೆಯ ಅಧಿಕಾರವೆಂಬುದಾಗಿ ಅಂಗೀಕರಿಸುವ ಬದಲು ವಾಕ್ಯದ ಅಕ್ಷರದ ಮೇಲೆ ಹೆಚ್ಚಾಗಿ ಅವಲಂಬಿಸುವ ಅಪಾಯದಲ್ಲಿದ್ದೇವೆ. ಸತ್ಯವೇದ ಹೇಳುವುದನ್ನು ನಾವು ಅಕ್ಷರ ಸಹ ಪರಿಪಾಲಿಸಬಹುದು. ಅದಕ್ಕೋಸ್ಕರ ದೇವರು ನಮ್ಮನ್ನು ಗೌರವಿಸುವನು. ಆದರೆ ಹಾಗೆ ಮಾಡುವುದರಲ್ಲಿ ನಾವು ಸತ್ಯವೇದವನ್ನು ಕರ್ತನಾದ ಯೇಸು ಕ್ರಿಸ್ತನಿಗಿಂತಲೂ ಹೆಚ್ಚಾಗಿ ಗೌರವಿಸುವುದಾದರೆ ನಾವು ಆತನೊಂದಿಗೆ ಇರುವ ಸಂಪರ್ಕವನ್ನು ಕಡಿದುಕೊಳ್ಳುವ ಅಪಾಯದಲ್ಲಿದ್ದೇವೆ.

  ಕ್ರೈಸ್ತತ್ವವು ದೇವರ ಚಿತ್ತವನ್ನು ವೈಯಕ್ತಿಕವಾಗಿ ಹೊಸದಾಗಿ ತಿಳುಕೊಳ್ಳುವುದಲ್ಲದೇ ದೇವರು ಒದಗಿಸಿರುವ ಇತರ ಸಹಾಯವನ್ನು ನಾವು ಉಪಯೋಗಿಸಬಹುದೇ ಹೊರತು ಇದರಲ್ಲಿಯೇ ಕೊನೆಗೊಳ್ಳಬಾರದು. ಮಾರ್ಗದರ್ಶನದ ರಹಸ್ಯವು ಕರ್ತನ ಸ್ವರವನ್ನು ಕೇಳುವುದರಲ್ಲಿ ಅಡಕವಾಗಿದೆ.

  ಸಾರಾಂಶ

 • 1 ದೇವರ ಚಿತ್ತವನ್ನು ಹುಡುಕುವುದರಲ್ಲಿ ಪವಿತ್ರಾತ್ಮನು ಸತ್ಯವೇದ ಉಪದೇಶದ ಮೂಲಕವಾಗಿ ನಮಗೆ ಮಾರ್ಗದರ್ಶನ ಮಾಡುವನು
 • .
 • ಅ. ಅನೇಕ ಕ್ಷೇತ್ರಗಳಲ್ಲಿ ದೇವರ ಚಿತ್ತವೇನೆಂದು ಸತ್ಯವೇದದಲ್ಲಿ ಈಗಾಗಲೇ ಪ್ರಕಟಿಸಲ್ಪಟ್ಟಿದೆ
 • .
 • ಆ. ತನ್ನ ಮಾರ್ಗವನ್ನು ದೇವರು ನಮ್ಮ ಅನುದಿನದ ಅಧ್ಯಾಯನದಲ್ಲಿ ತೋರಿಸಬಹುದು. ಆದರೆ ಇದರ ಮೇಲೆ ನಾವು ಸಂಪೂರ್ಣವಾಗಿ ಅವಲಂಬಿಸಬಾರದು
 • .
 • 2 ಸನ್ನಿವೇಶಗಳ ಮೂಲಕವಾಗಿ ಪವಿತ್ರಾತ್ಮನು ನಮ್ಮೊಂದಿಗೆ ಮಾತಾಡುತ್ತಾನೆ
 • .
 • ಅ. ಸನ್ನಿವೇಶಗಳ ಮೂಲಕ ದೇವರು ತನ್ನ ಮಾರ್ಗದರ್ಶನವನ್ನು ಧೃಡೀಕರಿಸಬಹುದು. ಅಥವಾ ನಾವು ತಪ್ಪು ಮಾರ್ಗದಲ್ಲಿ ಹೊಗದಂತೆ ತಡೆಯಬಹುದು
 • .
 • ಆ. ಆದರೆ ಸೈತಾನನು ನಮ್ಮ ಸನ್ನಿವೇಶಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಆಗ ಅದು ಯಾವಾಗಲೂ ದೇವರ ಚಿತ್ತದ ಸೂಚನೆಯಲ್ಲ.
 • ಇ. ಕೆಲವು ಸಾರೆ ದೇವರು ಸನ್ನಿವೇಶಗಳಿಗೆ ಪ್ರತಿಕೂಲವಾಗಿ ನಮ್ಮನ್ನು ನಡಿಸಬಹುದು. ದೇವರು ಸನ್ನಿವೇಶಗಳನ್ನು ಬದಲಾಯಿಸುವಂತೆ ನಾವು ಕೇಳಬಹುದು.
 • ಈ. ಅಪರೂಪವಾಗಿ ದೇವರು ಒಂದೊಂದು ಸಲ ಒಂದು ಗುರುತಿನ ಮೂಲಕವಾಗಿ ತನ್ನ ಮಾರ್ಗದರ್ಶನವನ್ನು ಧೃಡೀಕರಿಸಬಹುದು. ಆದರೆ ಗುರುತನ್ನು ಕೇಳುವುದು ಆತ್ಮೀಕವಾದ ಅಪರಿಪಕ್ವತೆಯನ್ನು ತೋರಿಸುತ್ತದೆ. ನಾವು ಅದರಿಂದ ಬೆಳೆಯಬೇಕು
 • .
 • 3 ಪವಿತ್ರಾತ್ಮನು ಇತರ ವಿಶ್ವಾಸಿಗಳ ಉಪದೇಶದ ಮೂಲಕ ನಮ್ಮೊಂದಿಗೆ ಮಾತನಾಡಬಹುದು
 • .
 • ಅ. ತನ್ನ ಚಿತ್ತವನ್ನು ತಪ್ಪಿಸಿಕೊಳ್ಳದಂತೆ ದೇವರು ಈ ಸುರಕ್ಷೆಯನ್ನು ನಮಗೆ ಒದಗಿಸಿದ್ದಾನೆ
 • .
 • ಆ. ಭಕ್ತಿವಂತರ ಉಪದೇಶವು ನಾವು ಒಂದು ವಿಷಯವನ್ನು ಸಂಪೂರ್ಣವಾಗಿ ಪರಿಗಣಿಸಲು ಉಪಯುಕ್ತವಾಗಿದೆ
 • .
 • ಇ. ಕೆಲವು ಸಾರೆ ನಾವು ಭಕ್ತಿವಂತರ ಉಪದೇಶಕ್ಕೆ ಕಿವಿಗೊಡು ಬೇಕಾಗುವುದು. ಕೆಲವು ಸಮಯ ನಾವು ಅವರ ಉಪದೇಶವನ್ನು ಅನುಸರಿಸಬೇಕಾಗಿಲ್ಲ ಇನ್ನೂ ಕೆಲವು ಸಮಯ ನಾವು ಯಾರನ್ನೂ ವಿಚಾರಿಸ ಬೇಕಾಗಿಲ್ಲ
 • .
 • ಈ. ಇತರರ ಸಲಹೆಯನ್ನೇ ನಾವು ಸಂಪೂರ್ಣವಾಗಿ ಅವಲಂಬಿಸಬೇಕಿಲ್ಲ. ಕೊನೆಯ ನಿರ್ಣಯವು ಯಾವಾಗಲೂ ನಮ್ಮದೇ ಆಗಿರಬೇಕು. ಭಕ್ತಿವಂತರ ಉಪದೇಶಕ್ಕೆ ವಿರುದ್ಧವಾಗಿ ಹೋಗಬೇಕಿದ್ದರೆ ನಾವು ಆ ಮಾರ್ಗದರ್ಶನವನ್ನು ಪದೇ ಪದೇ ಪರೀಕ್ಷಿಸಿಕೊಳ್ಳುವುದು ಉತ್ತಮ.
 • 4 ದೇವರು ಯಾವುದೇ ವಿಧಾನವನ್ನು ಉಪಯೋಗಿಸಿದರೂ ಆತನ ಸ್ವರವನ್ನು ಕೇಳುವುದೇ ಅತೀ ಪ್ರಾಮುಖ್ಯವಾಗಿದೆ.
 • ಅಧ್ಯಾಯ 5
  ವೃತ್ತಿಯ ಕರೆ

  ಯೌವನಸ್ಥರಲ್ಲಿ ಪ್ರಥಮವಾಗಿರುವ ದೊಡ್ಡ ಮಾರ್ಗದರ್ಶನದ ಸಮಸ್ಯೆಯು ದೇವರು ತಾವು ಯಾವ ಕೆಲಸ ಅಥವಾ ವೃತ್ತಿಯನ್ನು ಆರಿಸಿಕೊಂಡು ಯಾವ ಸ್ಥಳದಲ್ಲಿರಬೇಕೆಂಬುದೇ ಆಗಿದೆ. ಪರಿಪೂರ್ಣ ಸಮಯದ ಕ್ರೈಸ್ತ ಸೇವೆ ಮಾಡುವವರಷ್ಟೆ ಅಲ್ಲ. ಪ್ರತಿ ವಿಶ್ವಾಸಿಯೂ ತನ್ನ ವೃತ್ತಿಯ ವಿಷಯದಲ್ಲಿ ದೇವರ ಪರಿಪೂರ್ಣ ಚಿತ್ತವನ್ನು ಹುಡುಕಬೇಕು. ಒಂದನೇ ಅಧ್ಯಾಯದಲ್ಲಿ ಹೇಳಿರುವಂತೆ ದೇವರು ತನ್ನ ಪ್ರತಿಯೊಂದು ಮಗುವಿಗೆ ಒಂದು ವೃತ್ತಿಯನ್ನು ಯೋಜಿಸಿದ್ದಾನೆ. ಅದು ಏನೆಂಬುದನ್ನು ಕಂಡುಹಿಡಿಯುವುದು. ಬಹು ಪ್ರಾಮುಖ್ಯವಾಗಿದೆ. ದೇವರ ಚಿತ್ತದಲ್ಲಿ ನೀವು ಒಬ್ಬ ಶೀಕ್ಷಕರಾಗಿರಬೇಕಿದ್ದರೆ ನೀವು ಪಾಸ್ಟರ್ ಆದರೆ ಅದು ಅವಿಧೇಯತೆ. ನೀವು ಡಾಕ್ಟರ್ ಆಗಿರಬೇಕೆಂದು ದೇವರು ಇಚ್ಚಿಸಿದರೆ ಸುವಾರ್ತಿಕನಾಗಬೇಡಿರಿ. ಅದೇ ರೀತಿಯಾಗಿ ದೇವರು ಕ್ರೈಸ್ತ ಸೇವೆಗೆ ನಿಮ್ಮನ್ನು ಕರೆದರೆ ನೀವು ಇಹಲೋಕದ ಬೇರೆಯಾವ ಕೆಲಸಕ್ಕೂ ಹೋಗದಿರಿ.

  ದೇವರು ಆರಿಸಿದ ವೃತ್ತಿ

  ಆದರೂ ಸಹ ಪ್ರತಿಯೊಬ್ಬ ವಿಶ್ವಾಸಿಯು ಕರ್ತನಾದ ಯೇಸುವಿಗೋಸ್ಕರ ಸಂಪೂರ್ಣ ಕಾಲದ ಸಾಕ್ಷಿಯಾಗಿರಬೇಕು. ಆತನು ಸಂಪೂರ್ಣ ಕ್ರೈಸ್ತ ಸೇವೆಯಲ್ಲಿ ಇಲ್ಲದಿದ್ದರೂ ಸಹ. ಒಬ್ಬ ಕ್ರೈಸ್ತ ವೈದ್ಯರು ತಮ್ಮ ವೃತ್ತಿಯ ಬಗ್ಗೆ ಕೇಳಿದಾಗ ಹೀಗೆ ಉತ್ತರಕೊಟ್ಟರು. ``ನನ್ನ ವೃತ್ತಿಯು ಯೇಸುಕ್ರಿಸ್ತನಿಗೋಸ್ಕರ ಸಾಕ್ಷಿಯಾಗಿ ಆತ್ಮಗಳನ್ನು ಗೆಲ್ಲುವುದಾಗಿದೆ. ನಾನು ನನ್ನ ವೆಚ್ಚವನ್ನು ನಿಭಾಯಿಸುವುದಕ್ಕಾಗಿ ವೈದ್ಯನಾಗಿ ಕೆಲಸಮಾಡುತ್ತೇನೆ'' ಆತನ ಆದ್ಯತೆಗಳು ಸರಿಯಾಗಿರುವುದು ನಿಜವೇ..

  ಈ ದೃಷ್ಟಿಕೋನದಿಂದ ನಾವು ನಮ್ಮ ವೃತ್ತಿಯನ್ನು ಪರಿಗಣಿಸುವುದಾದರೆ ನಾವು ದೇವರ ಚಿತ್ತವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿರುವುದಿಲ್ಲ. ವೈಯಕ್ತಿಕ ಅಭಿವೃದ್ದಿ ಸ್ಥಾನಮಾನವು ನಮ್ಮ ಆಯ್ಕೆಯನ್ನು ಪ್ರಬಾವಿಸಿದರೆ ಆಗ ನಾವು ದಾರಿ ತಪ್ಪುವೆವು.

  ಈ ಕ್ಷೇತ್ರದಲ್ಲಿ ಒಬ್ಬ ಯೌವನಸ್ಥ ವಿಶ್ವಾಸಿಯು ದೇವರ ಚಿತ್ತವನ್ನು ಹೇಗೆ ಹುಡುಕಬೇಕು ? ತನ್ನ ಹೆಚ್ಚಿನ ವಿಧ್ಯಾಭಾಸವನ್ನು ಮುಂದುವರಿಸುವಾಗ ತನ್ನ ಬುದ್ದಿ ಸಾಮಥ್ರ್ಯವನ್ನು ನೋಡಿಕೊಂಡು ಬಹಳ ಪ್ರಾರ್ಥಿನೆಯ ನಂತರವೇ ಆಯ್ದುಕೊಳ್ಳಬೇಕು. ನಂತರ ಆತನ ಆತ್ಮದಲ್ಲಿ ಯಾವ ಅಭ್ಯಾಂತರಗಳಿಲ್ಲದಿದ್ದರೆ ಆತನ ಸಾಮಥ್ರ್ಯಕ್ಕೆ ಸರಿಯಾದದ್ದನ್ನೆ ಆರಿಸಿಕೊಳ್ಳಬೇಕು ತನಗೆ ಸರಿಕಾಣುವ ಯಾವುದೇ ಕ್ಷೇತ್ರದಲ್ಲಿ ಆತನನ್ನು ಇತರರು ತಳ್ಳದಂತೆ ಒತ್ತಾಯಿಸದಂತೆ ನೋಡಿಕೊಳ್ಳಬೇಕು.

  ಈಗಾಗಲೇ ವಿಸ್ವ ವಿಧ್ಯಾಲಯದಲ್ಲಿ ಕಲಿಯುತ್ತಿರುವವರ ವೃತ್ತಿಯು ಆಯ್ಕೆಯ ವಿಷಯ ಸೀಮಿತವಾಗಿರಬಹುದು. ಅಂಥವರು ದೇವರ ಚಿತ್ತದಲ್ಲಿ ತಪ್ಪಿಸಿಕೊಂಡಿರಬಹುದೆಂದು ಭಯಪಡಬೇಕಾಗಿಲ್ಲ. ತನ್ನ ಮಾರ್ಗದ ವಿಷಯದಲ್ಲಿ ನಾವು ಅಲಕ್ಷಿಸಿದರೂ ದೇವರು ಸಾರ್ವಭೌಮನಾಗಿರುವದರಿಂದ ನಮ್ಮ ಜೀವಿತದಲ್ಲಿ ಸರಿಯಾದದನ್ನೆ ಆತನು ನೆರವೇರಿಸುವನು. ಆತನಿಗೆ ನಾವು ಶರಣಾಗುವುದಕ್ಕೆ ಮುಂಚೆಯೇ ಆತನು ತನ್ನ ಹಸ್ತವನ್ನು ನಮ್ಮ ಮೇಲಿಟ್ಟು ನಿಮ್ಮ ಮಾರ್ಗವನ್ನು ಸರಾಗಮಾಡುವನು. ಆತನು ನಮ್ಮೊಂದಿಗೆ ಮಾತಾಡಿದ ನಂತರವೇ ನಾವು ಆತನಿಗೆ ಜವಾಬ್ದಾರಿಯಾಗುತ್ತವೆ.

  ದೇವರ ಆಯ್ಕೆಯ ಸ್ಥಳ

  ವಿಧ್ಯಾರ್ಥಿಯಾಗಿರುವ ವಿಶ್ವಾಸಿಯು ತನ್ನ ವಿಧ್ಯಾಭ್ಯಾಸ ಸಮಯವೆಲ್ಲಾ ಪ್ರಾರ್ಥಿನೆಯಲ್ಲಿ ದೇವರು ತನ್ನನ್ನು ಸರಿಯಾದ ಕೆಲಸಕ್ಕೆ ಅಥವಾ ಸರಿಯಾದ ಜನರನ್ನು ಸಂಪರ್ಕಿಸುವಂತೆ ಕೇಳಿಕೊಳ್ಳಬೇಕು. ತನ್ನ ವಿಧ್ಯಾಭ್ಯಾಸದ ನಂತರ ದೇವರ ಆಯ್ಕೆಯ ಸ್ಥಳಕ್ಕೆ ಹೋಗಲು ಅನುಕೂಲವಾಗುವದು. ಮತ್ತಾಯ 9:37 ರಲ್ಲಿ ಬರೆದಿರುವ ಬೆಳೆಯು ಬಹಳ ಆದರೆ ಕೆಲಸಗಾರರು ವಿರಳ. ಎಂಬ ಮಾತನ್ನು ಆತನು ಯಾವಾಗಲೂ ನೆನಪಿಸಿಕೊಳ್ಳಬೇಕು. ಯೋಹಾನ 4:35 ರಲ್ಲಿನ ದೇವರ ಆಜ್ಞೆಗೆ ವಿಧೇಯರಾಗಿ ಈ ದೇಶದಲ್ಲಿ ಅಥವಾ ಈ ಲೋಕದಲ್ಲಿ ದೇವರ ಕಾರ್ಯದ ಬಗ್ಗೆ ವಿವರ ತಿಳಿದುಕೊಂಡು ದೇವರು ನಡೆಸಿದ ಯಾವುದೇ ಸ್ಥಳಕ್ಕಾದರೂ ಹೋಗಲು ಸಿದ್ದರಿರಬೇಕು. ಶಿಕ್ಷಕರಾಗಿ,ದಾದಿಯಾಗಿ, ಇಂಜಿನೀಯರಾಗಿ ಅಥವಾ ಯಾವುದೇ ಉದ್ಯೋಗವಿರಬಹುದು ಅನೇಕರು ತಮ್ಮ ಅನುಕೂಲವನ್ನು ನೋಡಿಕೊಳ್ಳುತ್ತಾರೆ ಹೊರತು ಸುವಾರ್ತಾ ಸೇವೆಯ ಅಭಿವೃದ್ದಿಯ ಬಗ್ಗೆ ಆತ್ಮಗಳ ರಕ್ಷಣೆಯ ಬಗ್ಗೆ ಚಿಂತೆಯಿಲ್ಲದಿರುವುದು ವಿಷಾದಕರವಾಗಿದೆ. ಆತ್ಮೀಕವಾಗಿ ಅರಿತವರ ಸಲಹೆಯನ್ನು ಕೇಳಿ ಪ್ರಾರ್ಥನಾ ಅನ್ಯೋನ್ಯತೆಯಲ್ಲಿ (ಸ್ಥಳಿಕವಾಗಲಿ ಅಥವಾ ಬೇರೆಡೆ) ಆತನು ಹೋಗುವ ಸ್ಥಳದ ಬಗ್ಗೆ ವಿವರಗಳನ್ನು ಪಡೆದುಕೊಳ್ಳುವುದು ಉತ್ತಮ. ತನ್ನ ಸನ್ನಿವೇಶಗಳ ಮೂಲಕ ದೇವರು ತನಗೆ ಏನು ಹೇಳುತ್ತಿದ್ದಾರೆಂದು ತಿಳುಕೊಳ್ಳುವುದು ಅವಶ್ಯ. ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ನಿರ್ಣಯ ಮಾಡುವ ಸಮಯ ಬಂದಾಗ ತನ್ನ ಆತ್ಮದಲ್ಲಿ ಪವಿತ್ರಾತ್ಮನು ಏನು ಹೇಳುತ್ತಿದ್ದಾನೆ ಎಂದು ತಪ್ಪು ಮಾಡದಂತೆ ನಡೆಸಲು ಆತನಲ್ಲಿ ಭರವಸೆ ಇಡುವುದು ಒಳ್ಳೇದು.

  ಸಂಪೂರ್ಣ ಸಮಯದ ಕ್ರೈಸ್ತ ಸೇವೆ

  ದೇವರ ವಾಕ್ಯ ಸಾರುವ ಸಂಪೂರ್ಣ ಸೇವಕರಾಗಿರುವ ಮಿಷನರಿಗಳಾಗಲೀ, ಸುವಾರ್ತಿಕರಾಗಲಿ. ಸತ್ಯವೇದ ಉಪದೇಶಕರಾಗಲಿ ಅಥವಾ ಪಾಸ್ಟರರವರಿಗೆ ಕೆಲವು ಮಾತು ಹೇಳಬೇಕಾಗಿದೆ.

  ತನ್ನ ಆಲಯದ ಸೇವೆ ಮಾಡಲು ಹನ್ನೆರಡು ಕುಲಗಳಲ್ಲಿ ಲೇವಿಯ ಒಂದೇ ಕುಲವನ್ನು ಆರಿಸಿಕೊಂಡಂತೆ ದೇವರು ಸಂಪೂರ್ಣ ಸೇವೆಗೆ ವಿಶ್ವಾಸಿಗಳಲ್ಲಿ ಕೇವಲ ಕೆಲವರನ್ನು ಮಾತ್ರ ಕರೆಯುತ್ತಾನೆ. ಆದರೆ ಕರೆಯುವಾಗ ಎಲ್ಲಾರೂ ಅದಕ್ಕೆ ಮನಸ್ಸುಳ್ಳವರಾಗಿರಬೇಕು ಆದ್ದರಿಂದ ಪ್ರತಿಯೊಬ್ಬರು ಈ ಕರೆಯನ್ನು ಗಮನಿಸಿ ದೇವರು ಅದರಲ್ಲಿ ತಮ್ಮನ್ನು ಇರಬಯಸುತ್ತಾನೋ ಎಂದು ಪೂರ್ಣ ಮನಸ್ಸಿನಿಂದ ಹುಡುಕಬೇಕು ಸಂಪೂರ್ಣ ಸೇವೆಗೆ ಪ್ರವೇಶಮಾಡುವ ಪ್ರತಿಯೊಬ್ಬರು ದೇವರು ತಮ್ಮನ್ನು ಕರೆದಿರುವುದನ್ನು ಸಂಪೂರ್ಣ ಕಾತರಿ ಮಾಡಿಕೊಳ್ಳಬೇಕು. ಬೇರೆ ಲೌಕೀಕ ಕೆಲಸದಲ್ಲಿರುವವರು ಸಹ ಹಾಗೆ ಎಲ್ಲ ಖಾತ್ರಿ ಮಾಡಿಕೊಳ್ಳಬೇಕು. ಇಂಜನಿಯರ್ ಅಥವಾ ಲೆಕ್ಕ ಇಡುವವ ಆಗಿರುವವರಿಗಿಂತ ಸುವಾರ್ತಿಕರ ಅಥವಾ ಮಿಷನರಿಗಳ ಸೇವೆಯು ಹೆಚ್ಚಾಗಿ ಆತ್ಮೀಕವಾದ ಸೇವೆಯೆಂದು ತಿಳಿಯಬಾರದು. ದೇವರು ನೀವೇನಾಗಿರಬೇಕೆಂದು ಅಪೇಕ್ಷಿಸುತ್ತಾನೋ ಅದೇ ಪ್ರಾಮುಖ್ಯ.

  ಸಂಪೂರ್ಣ ಸೇವೆಗೆ ಪ್ರವೇಶಿಸಬೇಕೆಂದಿರುವವರು ತಮ್ಮ ನಿರ್ಣಯವನ್ನು ಶಾಂತವಾಗಿ ತೆಗೆದುಕೊಳ್ಳಬೇಕೆ ಹೊರತು ಬೇರೊಬ್ಬರ ಒತ್ತಾಯದಿಂದಾಗಲಿ ಅಥವಾ ಉದ್ವೇಗದ ವಾತಾವರಣದಲ್ಲಾಗಲೀ, ತೆಗೆದುಕೊಳ್ಳಬಾರದು ಅವಸರದ ನಿರ್ಣಯಗಳು ನಂತರ ವಿಷಾದಕ್ಕೆ ನಡೆಸುತ್ತವೆ. ನಾವು ನಿರ್ಣಯವನ್ನು ಮಾಡುವುದಕ್ಕೆ ದೇವರು ಸಾಕಷ್ಟು ಸಮಯವನ್ನು ಕೊಡುತ್ತಾನೆ. ಸಂಪೂರ್ಣ ಕ್ರೈಸ್ತಸೇವೆಯ ಕರೆಯು ಬೇರೆ ಬೇರೆ ರೀತಿಯಲ್ಲಿ ಬರುತ್ತದೆ. ಅಲ್ಲೆ ವಿರಳವಾಗಿ ಕೆಲವರಿಗೆ ದರ್ಶನದಲ್ಲಿ ಅಥವಾ ಸ್ಪಷ್ಟವಾಗಿ ಸ್ವರದಲ್ಲಿ ಬರಬಹುದು. 20ನೇ ಶತಮಾನದ ಪ್ರಾರಂಭದಲ್ಲಿ ಚೀನದ ಮಿಷನರಿಯಾದ ಎಸ್ತೆರ ಬಟ್ಲರ್ ರವರು ದೇವರು ತಮ್ಮನ್ನು ಕರೆದಾಗ ಒಂದು ದರ್ಶನದಲ್ಲಿ ಚೀನದ ಜನಸಂದಣಿಯಿಂದ ತುಂಬಿದ ಒಂದು ಬೀದಿಯನ್ನು ಕಂಡರು. ನಂತರ ನ್ಯಾನ ಕಿಂಗಗೆ ಬಂದಾಗ ಅಲ್ಲಿ ಅದೇ ಬೀದಿಯನ್ನು ಜನರನ್ನು ಸ್ಪಷ್ಟವಾಗಿ ಗುರುತಿಸಿದ್ದರಂತೆ.

  ಇನೂ ಕೆಲವರಿಗೆ ತಮ್ಮ ಶುದ್ದವಾದ ಆಂತರ್ಯದಲ್ಲಿ ಪ್ರೇರೇಪಣೆಯಾಗುತ್ತದೆ. ಸ್ಕಾಟಲಂಡಿಗಿಂತಲೂ ದಕ್ಷಿಣ ಪಸಿಫಿಕ್ ದ್ವೀಪಗಳಲ್ಲಿ ಜನರು ಸುವಾರ್ತೆ ಕೇಳಿಲ್ಲ ಎಂದು ತಿಳಿದು ಜಾನ ಜೀ. ಪೇಟನ್ ರವರು ಅಲ್ಲಿಗೆ ಹೋದರು ಜೇಮ್ಸಗಿಲ್ ಮೋರರವರಿಗೆ ತಮ್ಮ ದೇಶದಲ್ಲಿರಲು ತವಕಪಡದೇ ಮಂಗೋಲಿಯಾ ದೇಶಕ್ಕೆ ಸುವಾರ್ತೆ ಸೇವೆಗೆ ಹೋದರು ಈ ಸ್ಥಲಗಳಲ್ಲಿ ಈ ಜನರು ದೇವರಿಗೋಸ್ಕರ ಸಾಧಿಸಿದ್ದನ್ನು ನೋಡುವಾಗ ಇವೆರೆಲ್ಲರೂ ದೇವರ ಪರಿಪೂರ್ಣ ಚಿತ್ತದಲ್ಲಿದ್ದರೆಂದು ಸ್ಪಷ್ಟವಾಗುತ್ತದೆ.

  ಕರೆಯು ಯಾವ ರೀತಿಯಾಗಿ ಬರುತ್ತದೆ. ಅದು ಪ್ರಾಮುಖ್ಯವಲ್ಲ.. ಆದರೆ ಸಂಪೂರ್ಣ ಸೇವೆಗೆ ಹೋಗುವವನು ತನ್ನ ಕರೆಯ ವಿಷಯದಲ್ಲಿ ಖಾತರಿಯಾಗಿರದಿರಲಾರನು. ಸೇವೆಯಲ್ಲಿ ತನ್ನನ್ನು ತಾನೇ ನೇಮಿಸಿಕೊಳ್ಳಲಾರನು. ಯಾರೂ ಅವನನ್ನು ನೇಮಿಸಲಾರರು ನೇಮಕವು ದೇವರಿಂದ ಮಾತ್ರ ಬರುತ್ತದೆ.

  ಅನೇಕ ಸಾರೆ ಸಂಪೂರ್ಣ ಸೇವೆಗೆ ಕರೆಯಲ್ಪಡುವವರು ಸನ್ನಿವೇಸಗಳ ಮೂಲಕವಾಗಿ ಅಥವಾ ಆತ್ಮಭರಿತರಾದ ವಿಶ್ವಾಸಿಗಳ ಮೂಲಕವಾಗಿ ದೇವರು ತಮ್ಮನ್ನು ಕರೆದಿದ್ದನ್ನು ದೃಢೀಕರಿಸುವುದನ್ನು ಕಾಣುತ್ತಾರೆ. ಹೇಗೂ ಕೆಲವು ಸಾರೆ ದೇವರು ಇವುಗಳಿಗೆ ಹೊರತಾಗಿ ಯಾವ ನಿಯಮಕ್ಕೊಳಗಾಗದೇ ಕಾರ್ಯ ಮಾಡಬಹುದು. ಹೇಗೂ ಕೆಲವು ಮಾರ್ಗದರ್ಶನಕ್ಕಾಗಿ ಈ ಕೆಳಗಿನವುಗಳನ್ನು ನೋಡುವಾ.

  ತಮ್ಮ ಲೌಕೀಕ ಕೆಲಸದಲ್ಲಿಯೇ ದೇವರ ಕಾರ್ಯದಲ್ಲಿ ನಿರತರಾಗಿರುವವರನ್ನು ದೇವರು ಕರೆಯುತ್ತಾನೆ ತಮ್ಮ ಪ್ರಸ್ತುತ ಕಾರ್ಯಗಳಲ್ಲಿ ತನಗೆ ಸಾಕ್ಷಿಗಳಾಗಿ ಬೇಕೆಂದಿರುವವರೊಂದಿಗೆ ದೇವರು ಮಾತಾಡುತ್ತಾನೆ. ತನ್ನನ್ನು ಆಸಕ್ತಿಯಿಂದ ಹುಡುಕುವವರಿಗೆ ಆತನು ಪ್ರತಿಫಲಕೊಡುತ್ತಾನೆ. ದೇವರ ಕರೆಯು ತಟಸ್ಥ ಅಥವಾ ಸ್ಥಬ್ದವಾದದ್ದಲ್ಲವೆಂಬುದನ್ನು ನಾವು ಜ್ಞಾಪಕಕ್ಕೆತಂದುಕೊಳ್ಳಬೇಕು. ದೇವರು ನಿಮ್ಮನ್ನು ಸ್ವಲ್ಪ ಸಮಯ ತನ್ನ ಸೇವೆಗೆ ಸಂಪೂರ್ಣ ಸಮಯ ಕರೆದು ಅನಂತರ ನೀವು ಬೇರೊಂದು ಉದ್ಯೋಗವನ್ನು ಮಾಡಲು ಅನುಮತಿಸಬಹುದು. ನಾವು ಜನರ ಅಭಿಪ್ರಾಯಕ್ಕೆ ಸಂಪ್ರದಾಯಕ್ಕೆ ಗುಲಾಮರಾಗಿರದೇ ಬೇರೆ ಬೇರೆ ಸನ್ನಿವೇಶ ಪರಿಸ್ಥಿತಿಗಳಲ್ಲಿ ದೇವರು ನಮ್ಮನ್ನು ನಡೆಸುವಾಗ ನಾವು ಆತನೊಂದಿಗೆ ಸಾಗಬೇಕು.

  ಲೌಕೀಕ ಕೆಲಸವಾಗಲೀ ಕ್ರೈಸ್ತ ಕೆಲಸವಾಗಲೀ ನಾವು ಈ ಎರಡರಲ್ಲಿಯೂ ಸಮಾನವಾಗಿ ದೇವರ ಸೇವೆಗೆ ಕರೆಯಲ್ಪಟ್ಟಿದ್ದೇವೆ. ನಮ್ಮ ಕೆಲಸದ ವಾತಾವರಣ ಅಥವಾ ಕ್ಷೇತ್ರ ಬೇರೆ ಬೇರೆಯಾಗಿರಬಹುದು. ಆದರೆ ನಾವೆಲ್ಲರೂ ಇತರರ ಮುಂದೆ ಯೋಗ್ಯ ಸಾಕ್ಷಿಗಳಾಗಿ ಅವರನ್ನು ಕರ್ತನಿಗೋಸ್ಕರ ಗೆಲ್ಲುವವರಾಗಬೇಕು. ತನ್ನ ದೊಡ್ಡ ದ್ರಾಕ್ಷೆ ತೋಟದಲ್ಲಿ ನಿನಗೋಸ್ಕರ ದೇವರು ಒಂದು ಪ್ರತ್ಯೇಕ ಕೆಲಸವನ್ನು ಇಟ್ಟಿದ್ದಾನೆ. ಒಂದು ಹಾಡು ಹೇಳುವ ಹಾಗೆ ``ಯೇಸುವಿಗೋಸ್ಕರ ನೀನು ಮಾಡಲಿಕ್ಕಿರುವ ಕಾರ್ಯವನ್ನು ನಿನ್ನ ಹೊರತು ಬೇರೆ ಯಾರೂ ಮಾಡಲಾದಗು'' ನಾವು ಅದನ್ನು ಕಂಡುಕೊಂಡು ಆ ಕಾರ್ಯವನ್ನು ಪೂರೈಸಬೇಕು.

  ``ದೇವರು ನಿಮ್ಮನ್ನು ತನ್ನ ಸೇವೆಗೆ ಕರೆದನು - ಅದನ್ನು ತಪ್ಪದೇ ಮಾಡಿರಿ.''(ಕೊಲೊಸ್ಸೆ 4:17).

  ಸಾರಾಂಶ

 • 1 ದೇವರು ನಿನಗೋಸ್ಕರ ಒಂದು ವೃತ್ತಿಯನ್ನು ಇಟ್ಟಿದ್ದಾನೆ. ಅದನ್ನು ಪೂರೈಸುವುದು ನಿನ್ನ ಕರ್ತವ್ಯ
 • .
 • 2 ತನ್ನ ವೃತ್ತಿಯ ಏನೇ ಆದರೂ ಪ್ರತಿಯೊಬ್ಬ ವಿಶ್ವಾಸಿಯು ಕರ್ತನಾದ ಯೇಸುವಿಗೋಸ್ಕರ ಸಂಪೂರ್ಣ ಸಮಯದ ಸಾಕ್ಷಿಯಾಗಿರಲು ಕರೆಯಲ್ಪಟ್ಟಿದ್ದಾನೆ.
 • 3 ದೇವರ ಸೂಚನೆಯು ವಿರೋಧವಾಗದಿದ್ದಲ್ಲಿ ದೇವರ ಮಾರ್ಗದರ್ಶನವನ್ನು ಹುಡುಕುವ ಯೌವನಸ್ಥ ವಿಶ್ವಾಸಿಯು ತಾನು ಯಾವುದಕ್ಕೆ ಸಮರ್ಥನಾಗಿದ್ದಾನೋ ಆ ಮಾರ್ಗ ವೃತ್ತಿ. ದಿಕ್ಕಿನಲ್ಲಿ ಸಾಗಬೇಕು.
 • 4 ಕೆಲಸ ಹುಡುಕುವಾಗ ಬೇರೆ ಸ್ಥಳದಲ್ಲಿರುವ ಕರ್ತನ ಸೇವೆಯಲ್ಲಿರುವ ಅವಶ್ಯಕತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಹಳ ಪ್ರಾರ್ಥನೆ ಮತ್ತು ಇತರ ಹಿರಿಯ ವಿಶ್ವಾಸಿಗಳೊಂದಿಗೆ ಚರ್ಚಿಸಿ ತನ್ನ ಆಂತರ್ಯದಲ್ಲಿ ಪವಿತ್ರಾತ್ಮನ ಸ್ವರದ ನಡೆಸುವಿಕೆಯ ಪ್ರಕಾರ ತನ್ನ ನಿರ್ಣಯವನ್ನು ತೆಗೆದುಕೊಳ್ಳಬೇಕು.
 • 5 ದೇವರಿಂದ ಸ್ಪಷ್ಟವಾದ ಕರೆ ಇಲ್ಲದೇ ಯಾರೂ ಪರಿಪೂರ್ಣ ಕ್ರೈಸ್ತ ಸೇವೆಗೆ ಹೋಗಬಾರದು.
 • 6 ದೇವರ ಕರೆಯು ಬಹು ಕ್ರಿಯಾತ್ಮಕವಾಗಿದೆ. ಆತನು ಕರೆದಾಗ ಆತನೊಂದಿಗೆ ಹೋಗಲು ನಾವು ಯಾವಾಗಲೂ ಸಿದ್ಧರಿರಬೇಕು.
 • ಅಧ್ಯಾಯ 6
  ಅಂತಿಮ ವಿಚಾರಗಳು ಅಭಿಪ್ರಾಯಗಳು

  ತಪ್ಪಿಹೋದ ಮಾರ್ಗದರ್ಶನಕ್ಕೆ ಸ್ಪಷ್ಟವಾದ ಸೂತ್ರವಿಲ್ಲವೆಂಬುದು ಈಗಾಗಲೇ ಓದುಗರಿಗೆ ಖಾತ್ರಿ ಯಾಗಿರಬಹುದು. ದೇವರ ಚಿತ್ತವನ್ನು ಹುಡುಕುವಾಗ ಅನೇಕ ಸಾರೆ ನಾವು ಪೆಚಿನಲ್ಲಿ ಸಿಕ್ಕಿಕೊಳ್ಲುತ್ತೇವೆ. ದೇವರು ನಾವು ಹೆಚ್ಚಾಗಿ ಆತನ ಮನಸ್ಸನ್ನು ತಿಳುಕೊಳ್ಳುವಂತೆಯೂ ಆತನ ಜೀವವು ನಮ್ಮಲ್ಲಿ ವೃದ್ಧಿಯಾಗಬೇಕೆಂದು ಇವುಗಳನ್ನು ಅನುಮತಿಸುತ್ತಾನೆ.

  ನಮ್ಮ ಉದ್ದೇಶಗಳನ್ನು ಶುದ್ದೀಕರಿಸುವುದಕ್ಕೋಸ್ಕರ ಅನಿಶ್ಚಿತ ಸಮಯಗಳನ್ನು ದೇವರು ಉಪಯೋಗಿಸುತ್ತಾನೆ. ದೇವರ ಚಿತ್ತವು ನಮಗೆ ಸ್ಪಷ್ಟವಾಗದಿದ್ದಲ್ಲಿ ಆತನ ಮಾರ್ಗದರ್ಶನಗಳ ಕುರಿತಾಗಿರುವ ಕರಾರುಗಳನ್ನು ನಾವು ಪರಿಪಾಲಿಸಿದ್ದೆವೋ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು (ಇವು 2ನೇ ಅಧ್ಯಾಯದಲ್ಲಿವೆ)./

  ದೇವರು ಪೇಚಿನ ಸಮಯಗಳಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಲು ಉಪಯೋಗಿಸುತ್ತಾನೆ. ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಯ ಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು? ಕತ್ತಲಲ್ಲಿ ನಡೆಯುತ್ತಾ ಬೆಳಕಿಲ್ಲದವನು ಯೆಹೋವನ ನಾಮದಲ್ಲಿ ಭರವಸೆಯಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ. ಯೆಶಾಯ 50:10 ಆದ್ದರಿಂದ ನಾವು ಕಳವಳವನ್ನು ಅನುಭವಿಸುವಾಗ ಆಶ್ಚರ್ಯ ಪಡಬೇಕಾಗಿಲ್ಲ, ಎದೆಗುಂದಬೇಕಿಲ್ಲ. ಅಪೊಸ್ತಲ ಪೌಲನು ಸಹ ಇದನ್ನು ಅನುಭವಿಸಿದನು ಆದರೆ ಅವನು ಧೈರ್ಯಗೆಡಲಿಲ್ಲ (2 ಕೊರಿಂಥ 4:8). ಕೆಲವು ಸಾರೆ ನಾವು ನಿರ್ಣಯ ತೆಗೆದುಕೊಳ್ಳುವ ಸಮಯದಲ್ಲಿ ಮಾತ್ರ ದೇವರು ತನ್ನ ಚಿತ್ತವನ್ನು ತೋರಿಸುತ್ತಾನೆ. ಅದಕ್ಕಿಂತ ಪೂರ್ವದಲ್ಲಿ ನಾವು ಬಹಳ ಕಾಲ ಕಾಯಬೇಕಾಗುತ್ತದೆ.

  ಹೇಗೂ ಆತನು ಪ್ರತಿ ಹಂತದಲ್ಲಿ ಮುಂದಿನ ಹೆಜ್ಜೆಯನ್ನು ಮಾತ್ರ ತೋರಿಸುತ್ತಾನೆ. ನಾವು ನಂಬಿಕೆಯಲ್ಲಿ ನಡೆಯಬೇಕೇ ಹೊರತು ನೋಡಿ ನಡೆಯುವವರಾಗಿರಬಾರದೆಂದು ಆತನು ನಾವು ತನ್ನ ಮೇಲೆ ಅವಲಂಬಿಸಬೇಕೆಂದು ಹೆಜ್ಜೆ ಹೆಜ್ಜೆಯಾಗಿ ನಮ್ಮನ್ನು ನಡೆಸುತ್ತಾನೆ. ಪ್ರತಿ ಸನ್ನಿವೇಶದಲ್ಲಿ ಒಂದೊಂದು ಹೆಜ್ಜೆಯನ್ನೂ ಆತನು ನಮಗೆ ತೋರಿಸುವಾಗ ನಾವು ಆತನನ್ನೇ ಅವಲಂಬಿಸಬೇಕಾಗುತ್ತದೆ. ದೇವರು ಭವಿಷ್ಯವನ್ನೆಲ್ಲಾ ನಮಗೆ ತೋರಿಸಿದರೆ ನಾವು ಆತನಿಗೆ ಸಂಪೂರ್ಣವಾಗಿ ವಿಧೇಯರಾಗದೇ ಇರಬಹುದು. ಆದ್ದರಿಂದ ಒಂದೊಂದೇ ಹೆಜ್ಜೆಯನ್ನು ಆತನು ನಮಗೆ ತೋರಿಸಿ ನಾವು ಆತನ ಚಿತ್ತವನ್ನೆಲ್ಲಾ ನೆರವೇರಿಸಲು ಮನಸ್ಸುಳ್ಳವರಾಗಿರುವಂತೆ ಮಾಡುತ್ತಾನೆ. ದೇವರ ಚಿತ್ತವನ್ನು ನಮ್ಮ ಜೀವಿತದಲ್ಲಿ ಮಾಡಬೇಕಿದ್ದರೆ ದೇವರು ನಮಗೆ ತೋರಿಸುವ ಮುಂದಿನ ಹೆಜ್ಜೆಯಲ್ಲಿ ನಡೆಯಬೇಕು. ಹೀಗೆ ಮಾಡುವಾಗ ದೇವರ ಚಿತ್ತವು ಕ್ರಮೇಣವಾಗಿ ನಮಗೆ ತೋರಿಬರುತ್ತದೆ.

  ಚೈನಾ ದೇಶದ ಒಂದು ಹಳೇಯ ನುಡಿ ಹೀಗಿದೆ - ಸಾವಿರ ಮೇಲಿನ ಪ್ರಯಾಣವು ಮೊದಲನೆಯಹೆಜ್ಜೆಯಿಂದ ಪ್ರಾರಂಭಿಸುತ್ತದೆ. ಅಬ್ರಹಾಮನು ತನ್ನ ಸ್ವದೇಶವನ್ನು ಬಿಟ್ಟು ಎಲ್ಲಿಗೆ ಹೋಗಬೇಕೆಂದು ತಿಳಿಯದೆಯೇ ಹೊರಟನು ದೇವರು ಆತನನ್ನು ನಡೆಸುತ್ತಿದ್ದಾನೆಂದು ಮಾತ್ರ ಆತನಿಗೆ ಗೊತ್ತಿತ್ತು (ಇಬ್ರಿ 11:8). ಪ್ರತಿ ಹೆಜ್ಜೆಯಲ್ಲಿ ಆತನು ವಿಧೇಯನಾದನು ಮತ್ತು ದೇವರು ಆತನಿಗೆ ನಿರಾಶೆಪಡಿಸಲಿಲ್ಲ. ಅಬ್ರಹಾಮನ ಹಾಗೆ ದೇವರನ್ನು ಹಿಂಬಾಲಿಸುವ ಯಾರೂ ನಿರಾಶೆಯಾಗುತ್ತೇನೆಂದು ಭಯಪಡಬೇಕಿಲ್ಲ.

  ಅನಿರ್ಣಯದಿಂದ ಬಿಡುಗಡೆ

  ಅನೇಕ ಸಾರೆ ನಮಗೆ ದೇವರ ಚಿತ್ತ ಸ್ಪಷ್ಟವಾಗಿ ತಿಳಿಯದಿದ್ದರೂ ಮುಂದೆ ಹೆಜ್ಜೆ ಹಾಕಬೇಕಾಗುತ್ತದೆ. ಇದು ನಂಬಿಕೆಯಿಂದ ನಡೆಯುವುದಾಗಿದೆ. ನಿಶ್ಚಿತಾರ್ಥವು ನೋಡಿ ನಡೆಯುವಿಕೆಗೆ ಸರಿಸಮಾನವಾಗಿದೆ. ನಾವು ಬಳಲದಂತೆ ದೇವರು ನಮ್ಮನ್ನು ಪ್ರೋತ್ಸಾಹಿಸುವುದಕ್ಕೋಸ್ಕರ ಸ್ಪಷ್ಟವಾದ ಭರವಸೆಯನ್ನು ಕೊಡುತ್ತಾನೆ. ಆದರೆ ಅನೇಕ ಸಾರೆ ಆತನ ಮನ್ನಣೆಯು ಸ್ಪಷ್ಟವಾಗಿ ತಿಳಿಯದಿದ್ದರೂ ನಾವು ಮುಂದೆ ಸಾಗಬೇಕೆಂದು ಆತನು ಅಪೇಕ್ಷಿಸುತ್ತಾನೆ. ದೇವರ ಪವಿತ್ರಾತ್ಮನ ಮನಸ್ಸನ್ನು ನಾವು ತಿಳಿದುಕೊಂಡಿದ್ದರೆ ಅನಿಶ್ಚಿತವಾಗಿ ಕಾಯದೇ ಮುಂದೆ ಸಾಗಬೇಕು. ದೇವರು ನಮ್ಮನ್ನು ನಡೆಸುತ್ತಾನೆಂದು ಅರಿತು ನಾವು ಯೋಜನೆಗಳನ್ನು ಮಾಡಬೇಕು (ಜ್ಞಾನೋಕ್ತಿ 16:9). ಕಾಲಾಂತರದಲ್ಲಿ ನಾವು ಹಿಂದೆ ನೋಡುವಾಗ ನಮ್ಮ ದೃಷ್ಠಿಯು ಆಗ ಅಸ್ಪಷ್ಟವಾಗಿಯೂ ದೇವರು ನಾವು ಮಾರ್ಗ ತಪ್ಪದಂತೆ ನಡೆಸಿದನೆಂದು ಕಾಯುತ್ತೇವೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ - ಮುನ್ನೋಟದಲ್ಲಿ ಅಸ್ಪಷ್ಟತೆ ಇದ್ದರೂ ಹಿನ್ನೋಟದಲ್ಲಿ ಹೆಚ್ಚಿನ ಸ್ಪಷ್ಟತೆ ಮತ್ತು ಸಂತೋಷವನ್ನು ಕಾಣುತ್ತೇವೆ.

  ``ನನ್ನ ಮಂದವಾದ ದೃಷ್ಟಿ ಮಂಜಿನಲ್ಲಿ ತಡಕಾಡುವಂತೆ ಮಾಡುವಾಗ ಆತನ ಕೈ ನನ್ನನ್ನು ತಲುಪಿ ``ನನ್ನ ಸಹಾಯ ಖಚಿತ'' ಎಂಬುದನ್ನು ನಾನು ಕೇಳುವಾಗ ನನ್ನ ಹೃದಯವು ಭದ್ರವಾಗಿರುವುದು''

  J.Oswald Sanders ರವರು ``ಆತ್ಮೀಕ ನಾಯಕತ್ವ'' ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ ``ನಾಯಕತ್ವದಲ್ಲಿ ಇಲ್ಲದ ಜನರು ಯೋಚಿಸುವುದೇನಂದರೆ - ದೇವರೊಂದಿಗೆ ಹೆಚ್ಚಿನ ಅನುಭವವುಳ್ಳವರು ದೇವರೊಂದಿಗೆ ಬಹುಕಾಲ ನಡೆದವರಿಗೆ ದೇವರ ಚಿತ್ತವನ್ನು ಕ್ಲಿಷ್ಟ ಕಾಲದಲ್ಲಿ ಸರಳವಾಗಿ ಸುಲಭವಾಗಿ ಕ್‍ಂಡುಹಿಡಿಯುವುದು ಸಾಧ್ಯವೆಂದು ಆದರೆ ಇದು ತದ್ವಿರುದ್ದವಾಗಿದೆ ನಾಯಕನನ್ನು ದೇವರು ಪರಿಪಕ್ವವಾದ ವಯಸ್ಕರಂತೆ ಪರಿಗಣಿಸಿ ಹೆಚ್ಚಾದ ಆತನು ತನ್ನ ವಿವೇಚನೆಯನ್ನು ಉಪಯೋಗಿಸಲೆಂದು ಬಾಹಿರ ಗುರುತುಗಳನ್ನು ಕೊಡುವುದಿಲ್ಲ. China Inland Mission ಸ್ಥಾಪಕರಾದ ಹಡ್ಸನ್ ಟೇಲರ್ ರವರು ಮಾರ್ಗದರ್ಶನದ ಬಗ್ಗೆ ಒಮ್ಮೆ ಹೀಗೆ ಹೇಳಿದರು - ಏನಂದರೆ, ತಮ್ಮ ಚಿಕ್ಕ ಪ್ರಾಯದಲ್ಲಿ ಅದು ಸ್ಪಷ್ಟವಾಗಿ ತ್ವರಿತವಾಗಿ ಬರುತ್ತಿತ್ತು. ಆದರೆ ಈಗ ದೇವರು ನನ್ನನ್ನು ಹೆಚ್ಚಾಗಿ ಉಪಯೋಗಿಸಿದಾಗ ನಾನು ಮಂಜಿನಲ್ಲಿ ಅಲೆದಾಡುವವನಂತೆ ಅನಿಸುತ್ತದೆ. ನನಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೂ ಯಾವ ನಿರ್ಣಯವನ್ನು ತೆಗೆದುಕೊಂಡರೂ ದೇವರು ಯಾವಾಗಲೂ ಹಡ್ಸನ್ ಟೇಲರ್ ರವರ ನಂಬಿಕೆಯನ್ನು ಗೌರವಿಸಿದ್ದಾನೆ.

  ಅಸ್ಪಷ್ಟತೆಯಲ್ಲಿ ನಾವು ಯಾವುದೇ ಒಂದು ಹೆಜ್ಜೆಯನ್ನು ತೆಗೆದುಕೊಳ್ಳುವಾಗ ದೇವರ ಪರಿಪೂರ್ಣ ಚಿತ್ತವನ್ನು ತಪ್ಪಿಸಿಕೊಂಡರೂ ಆತನು ನಮ್ಮ ಮಾರ್ಗವನ್ನು ಸರಾಗ ಮಾಡುವಂತೆ ಆತನಲ್ಲಿ ಭರವಸೆವಿಡಬೇಕು ಯೆಶಾಯ 30:21 ರಲ್ಲಿ ನೀವು ದೇವರ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗುವಾಗ ನಿಮ್ಮ ಹಿಂದೆ ಇಲ್ಲ ಈ ಮಾರ್ಗದಲ್ಲಿ ಹೋಗು ಎಂಬ ಸ್ವರವನ್ನು ನಾವು ಕೇಳುತ್ತೇವೆ. ನಾವು ಹಾದಿತಪ್ಪಿದರೂ ದೇವರು ನಮ್ಮ ಸನ್ನಿವೇಶವನ್ನು ಬದಲಿಸಬಲ್ಲನು.

  ಆದರೆ ನಾವು ಯಾವಾಗಲೂ ಅದ್ಭುತವನ್ನು ಕಾಣುವವರೆಗೆ ತಟಸ್ಥವಾಗಿರಬಾರದು. ಚಲಿಸುವ ಹಡಗನ್ನು ನಾವು ಸರಳವಾಗಿ ತಿರುಗಿಸಬಹುದು, ಆದರೆ ನಿಂತ ಹಡಗನ್ನು ಸುಲಭವಾಗಿ ತಿರುಗಿಸಲಾಗದು. ಅದು ನಮಗೆ ಅನ್ವಯಿಸುತ್ತದೆ.

  ಅ.ಕೃ 16:6-10 ರಲ್ಲಿ ಪೌಲ ಸೀಲರು ದೇವರ ಸ್ಪಷ್ಟ ನಡೆಸುವುಕೆ ಇಲ್ಲದಿದ್ದರೂ ಆತನ ಚಿತ್ತವನ್ನು ನೆರವೇರಿಸಲಿಕ್ಕೆ ಆಸ್ಯ ಸೀಮೆಗೆ ಹೋಗಬಯಸಿದರು ಆದರೆ ದೇವರು ನೇಮಿಸಿದ ಸನ್ನಿವೇಶಗಳ ಮುಖಾಂತರ ಅವರು ತಡೆಯಲ್ಪಟ್ಟರು. ನಂತರ ಅವರು ಬೆಥಾನ್ಯಕ್ಕೆ ಹೋಗಬಯಸಿದರು. ಅಲ್ಲಿಯೂ ಅವರಿಗೆ ಅಡ್ಡಿ ಬಂತು ಅವರು ಆಸಕ್ತಿಯಿಂದ ದೇವರ ಚಿತ್ತವನ್ನು ಹುಡುಕುತ್ತಿದ್ದರಿಂದ ದೇವರು ಅವರನ್ನು ತನ್ನ ಚಿತ್ತವಾದ ಮೆಕೆದೋನ್ಯಕ್ಕೆ ನಡಿಸಿದನು. ನಮ್ಮ ಅನುದಿನದ ಚಿಕ್ಕ ಪುಟ್ಟ ವ್ಯವಹಾರಗಳಲ್ಲಿ ನಾವು ಮಾರ್ಗದರ್ಶನಕ್ಕಾಗಿ ಸತತವಾಗಿ ವಿಚಾರಣೆ ಮಾಡುವುದು ಅಗತ್ಯವಿಲ್ಲ. ನಾವು ಆತ್ಮದಲ್ಲಿ ನಡೆಯಬೇಕು. ಕರ್ತನೊಂದಿಗೆ ಸರಿಯಾದ ಸಂಬಂಧವಿದ್ದರೆ ಆತನು ಸರಿಯಾದ ಮಾರ್ಗದಲ್ಲಿ ನಮ್ಮನ್ನು ನಡೆಸುತ್ತಾನೆ.

  ದುಖಃದಿಂದ / ವಿಷಾದದಿಂದ ಬಿಡುಗಡೆ

  ಗತಕಾಲದ ಬೀಳುವಿಕೆಗಳು ನಮ್ಮ ಮನಸ್ಸನ್ನು ಕಾಡುತ್ತಿರಬಹುದು. ನಾವು ದೇವರ ಚಿತ್ತವನ್ನು ಕೆಲವು ವಿಷಯಗಳಲ್ಲಿ ತಪ್ಪಿಸಿಕೊಂಡು ಈಗ ಸರಿಪಡಿಸಲಾಗದೆ ಇರಬಹುದು. ಆದರೆ ಅದರ ವಿಷಯವಾಗಿ ದುಃಖಿಸುವುದು ವ್ಯರ್ಥ. ಯಾಕಂದರೆ ಅದು ನಮ್ಮ ಆತ್ಮೀಕ ಬಲವನ್ನು ಹೀರಿ ದೇವರ ಸೇವೆಗೆ ನಮ್ಮನ್ನು ಅಸಮರ್ಥರನ್ನಾಗಿ ಮಾಡುತ್ತದೆ. ನಮ್ಮ ತಪ್ಪುಗಳನ್ನು ಬೀಳುವಿಕೆಗಳನ್ನು ನಾವು ದೇವರಿಗೆ ಅರಿಕೆ ಮಾಡಿದರೆ ಆತನು ನಂಬಿಗಸ್ತನಾಗಿರುವುದರಿಂದ ನಮ್ಮನ್ನು ತಕ್ಷಣ ಕ್ಷಮಿಸಿ ನಮ್ಮನ್ನು ಶುದ್ದಮಾಡುವನು. (1 ಯೇಹಾನ 1:7,9). ನಮ್ಮ ಗತಕಾಲದ ಪಾಪಗಳನ್ನು ಆತನು ಜ್ಞಾಪಕಕ್ಕೆ ತರುವುದಿಲ್ಲ (ಇಬ್ರಿಯ 8:12). ದೇವರು ನಮ್ಮ ಗತಕಾಲದ ಪಾಪಗಳನ್ನು ಜ್ಞಾಪಿಸಿಕೊಳ್ಳದಿದ್ದರೆ ನಾವು ಅದರ ವಿಷಯವಾಗಿ ಚಿಂತಿಸುವುದು ಅನವಶ್ಯ ಆದ್ದರಿಂದ ನಾವು ಅವುಗಳನ್ನು ನಮ್ಮ ಬೆನ್ನ ಹಿಂದೆ ಹಾಕಬೇಕು. ನಾವು ಮಾಡಿದ ತಪ್ಪುಗಳನ್ನು ಸರಿಪಡಿಸಲು ಆಗದು ಆದರೆ ದೇವರು ನಮ್ಮ ಮುಂದಿನ ದಿನಗಳನ್ನು ತನ್ನ ಮಹಿಮೆಗೋಸ್ಕರ ಉಪಯೋಗಿಸಲು ಪ್ರಾರ್ಥಿಸುವಾ.

  ದಾವೀದನು ಬೆತ್ಸೇಬಳೊಂದಿಗೆ ಪಾಪಮಾಡಿ ಅವಳ ಪತಿಯನ್ನು ಕೊಲೆಮಾಡಿದ ನಂತರ ಬಹು ಆಳವಾದ ಕುಣಿಯಲ್ಲಿ ಬಿದ್ದನು. ಆದರೂ ತನ್ನ ಉಳಿದ ಜೀವಿತವನ್ನು ದುಖಃದಲ್ಲಿ ಕಳೆಯುವ ಬದಲು ಮುರಿದವನಾಗಿ ಪಶ್ಚಾತ್ತಾಪದಿಂದ ದೇವರ ಬಳಿ ಬಂದನು. ದೇವರ ಪಾಪಕ್ಷಮೆಯನ್ನು ಅಂಗೀಕರಿಸಿ ಆತನ ಮಹಿಮೆಗಾಗಿ ಉಳಿದ ಜೀವಿತವನ್ನು ಜೀವಿಸಿದನು. ಉರಿಯನ ವಿಷಯ ಹೊರತಾಗಿ ದಾವೀದನು ತನ್ನ ಜೀವಿತದಲ್ಲಿ ಎಲ್ಲ ವಿಷಯಗಳಲ್ಲಿ ದೇವರನ್ನು ಮೆಚ್ಚಿಸಿದನೆಂದು ಪವಿತ್ರಾತ್ಮನು ಹೇಳುತ್ತಾನೆ (1 ಅರಸು 15:5). ದಾವೀದನು ದುಖಃದಿಂದ ತನ್ನ ಮನಸ್ಸನ್ನು ಬಾಧಿಸಿಕೊಂಡಿದ್ದರೆ ಆತನು ದೇವರನ್ನು ಇನ್ನೂ ಹೆಚ್ಚಾಗಿ ನೋಯಿಸುತ್ತಿದ್ದನು. ಹೀಗೆ ತಮ್ಮ ಸೋಲು/ಬೀಳುವಿಕೆಯ ವಿಷಯವಾಗಿ ನಿರಂತರ ದುಖಿಃಸುವವರು ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಾರೆ. ನಾವು ಹಿಂದಿನ ಬೀಳುವಿಕೆಗಳನ್ನು ಮರೆತು ದೇವರ ಚಿತ್ತವನ್ನು ಮಾಡಲು ಮುಂದೆ ಸಾಗಬೇಕು (ಫಿಲಿಪ್ಪಿ 3:13,14). ಗತಿಸಿಹೋದ ವರ್ಷಗಳನ್ನು ದೇವರು ನಮಗೆ ಪುನಃ ಕೊಡುವನು(ಯೋವೇಲ 2:25).

  ಇನ್ನೊಂದು ಶೋಧನೆಯು ಗತಕಾಲದಲ್ಲಿ ದೇವರ ಚಿತ್ತವೆಂದು ನಿರ್ಣಯ ತೆಗೆದು ಕೊಂಡದ್ದನ್ನು ಈಗ ಸಂದೇಹ ಪಡುವದು. ಒಂದು ವೇಳೆ ಆ ನಿರ್ಣಯವು ಈಗ ನಮ್ಮನ್ನು ಕಷ್ಟಕ್ಕೀಡು ಮಾಡಿರಬಹುದು ಅಥವಾ ಈಗ ನಮಗೆ ತಿಳಿದಿರುವ ಸತ್ಯವು ಮೊದಲೇ ತಿಳಿದಿದ್ದರೆ ನಾವು ನಮ್ಮ ನಿರ್ಣಯವನ್ನು ಬದಲಾಯಿಸುತ್ತಿದ್ದೆವು. ಇಂತಹ ಪರಿಸ್ಥಿತಿಯಲ್ಲಿ ನಾವು ಗಮನಿಸಬೇಕಾದ ನಿಯಮವು ಇದು - ದೇವರು ನಿಮಗೆ ಹಗಲಲ್ಲಿ (ಬೆಳಕಿನಲ್ಲಿ ವಾಗಿ ದೇವರ ಚಿತ್ತವನ್ನು ಹುಡುಕಿ ಆಗ ನಮಗಿರುವ ಬೆಳಕಿನಲ್ಲಿ ನಿರ್ಣಯತೆಗೆದು ಕೊಂಡಿದ್ದರೆ, ಈಗ ವಿಷಾದದಿಂದ ಹಿಂದೆ ನೋಡಬೇಕಿಲ್ಲ. ದೇವರು ನಾವು ಮೂರ್ಖರಾಗಿರಬೇಕೆಂದು ಬಯಸುವ ಕ್ರೂರಿಯಲ್ಲ. ಆತನು ಪ್ರೀತಿಯ ತಂದೆ. ರೊಟ್ಟಿ ಕೇಳುವವರಿಗೆ ಎಂದಗೂ ಕಲ್ಲನ್ನು ಕೊಡನು. ನಾವು ಯಥಾರ್ಥವಾಗಿ ಹುಡುಕಿದ್ದರೆ, ದೇವರು ಕಂಡಿತವಾಗಿಯೂ ನಾವು ಸರಿಯಾಗಿ ನಿರ್ಣಯಿಸುವಂತೆ ಮಾಡಿದ್ದಾನೆಂದು ಹುಡುಕಿದ್ದರೆ, ದೇವರು ಕಂಡಿತವಾಗಿಯೂ ನಾವು ಸರಿಯಾಗಿ ನಿರ್ಣಯಿಸುವಂತೆ ಮಾಡಿದ್ದಾನೆಂದು ನಂಬಬೇಕು ಆಗ ನಮಗೆ ತಿಳಿದಿರದೇ ಇರುವ ವಿಷಯಗಳನ್ನು ಆತನು ತನ್ನ ಉದ್ದೇಶಪೂರ್ವಕವಾಗಿ ತಡೆಹಿಡಿದಿರಬಹುದು.

  ಮೆಕೆದೋನ್ಯಕ್ಕೆ ಹೋಗಬೇಕೆಂದು ದೇವರು ತೋವದಲ್ಲಿ ಪೌಲ ಸೀಲರಿಗೆ ಸ್ಪಷ್ಟವಾಗಿ ತೋರಿಸಿದನು. ಆದರೂ ಅವರು ಅಲ್ಲಿ ಆಗಮಿಸಿದ ತಕ್ಷಣ ಕಾಲುಗಲಿಗೆ ಕೋಳಹಾಕಿಸಿಕೊಂಡು ಸೆರೆಮನೆಯಲ್ಲಿ ಬೀಳಬೇಕಾಯಿತು ಅವರು ತಮಗೆ ಆದ ಮಾರ್ಗದರ್ಶನದ ವಿಷಯವಾಗಿ ಅನುಮಾನ ಪಡಬಹುದಾಗಿತ್ತು. ಅವರಿಗೆ ಈ ಸಂಗತಿ ಮೊದಲೇ ತಿಳಿದ್ದರೆ, ಅವರು ತ್ರೋವವನ್ನು ಬಿಟ್ಟು ಬರುತ್ತಿರಲಿಲ್ಲ. ಆದರೆ ದೇವರು ಯಾವ ಮುನ್ನೆಚ್ಚರಿಕೆಯನ್ನು ಕೊಡಲಿಲ್ಲ. ಸೆರೆಮನೆಯಲ್ಲಿ ಇದ್ದಾಗಲೂ ಅವರು ದೇವರನ್ನು ನಂಬಿದರು. ಬೆಳಕಿನಲ್ಲಿ ತೋರಿಸಿದ್ದನ್ನು ಇರುಳಲ್ಲಿ ಅವರು ಸಂದೇಹಿಸದೇ ದೇವರನ್ನು ಸ್ತುತಿಸುತ್ತಾ ಇದ್ದರು (ಅ.ಕೃ.16:8-26). ಮುಂದಣ ಸಂಗತಿಗಳು ಅವರು ದೇವರ ಚಿತ್ತದಲ್ಲಿದ್ದರೂ ಎಂದು ಸ್ಪಷ್ಟವಾಗಿ ತೋರಿಸುತ್ತವೆ. ತೊಂದರೆ ಒಳಗಾಗುವ ದೇವರ ಚಿತ್ತವಲ್ಲ ಎನ್ನುವುದು ತಪ್ಪು. ದೇವರಲ್ಲಿ ಭರವಸೆ ಇಟ್ಟರೆ ಯಾವ ಸಂದೇಹ ಹಾಗೂ ವಿಷಾದವಿಲ್ಲದೇ ನಾವು ಕಗ್ಗತ್ತಲ್ಲಲ್ಲೂ ಆತನನ್ನು ಕೊಂಡಾಡುವೆವು.

  ಭಯದಿಂದ ಬಿಡುಗಡೆ

  ಮನುಷ್ಯರ ಮತ್ತು ಸನ್ನಿವೇಶಗಳು ಭಯವು ನಾವು ದೇವರ ಚಿತ್ತವನ್ನು ತಪ್ಪಿಸಿಕೊಳ್ಳುವಂತೆ ಮಾಡುತ್ತವೆ. ದೇವರ ಚಿತ್ತವನ್ನು ಹುಡುಕುವಾಗ ಅನೇಕ ವಿಶ್ವಾಸಿಗಳು ಸ್ಥಿರತೆ ಭದ್ರತೆಗಳನ್ನು ಮುನ್ನೋಡುತ್ತಾರೆ. ಕೆಲವು ಸ್ಥಳಗಳು, ಕೆಲಸಗಳು ಭದ್ರತೆ ಕೊಡುವುದಿಲ್ಲ. ಆದ್ದರಿಂದ ಅವು ಅಪಾಯಕಾರಿ ಎಂದು ತಮ್ಮ ಮನಸ್ಸಿನಿಂದ ಅವಿಗಳನ್ನು ಹೊರಗೆ ಹಾಕುತ್ತಾರೆ. ಆದರೆ ಅಪಾಯವಿಲ್ಲದ ಸ್ಥಳವಾಗಲೀ, ಕೆಲಸವಾಗಲೀ ಈ ಲೋಕದಲ್ಲಿಲ್ಲ. ದೇವರ ಚಿತ್ತದ ಕೇಂದ್ರವೇ ಅತೀ ಸುರಕ್ಷಿತವಾದ ಸ್ಥಳ. ದೇವರ ಯೋಜನೆಯ ಹೊರಗೆ ನಾವು ಹೆಜ್ಜೆ ಹಾಕಿದಾಗ ಮಾತ್ರ ನಾವು ಅಪಾಯದಲ್ಲಿ ಬೀಳುತ್ತೇವೆ. ದೇವರ ಸಹಾಯವಿಲ್ಲದೇ ಮುಂದುವರೆಯುವವನು ಸೈತಾನನ ಆಕ್ರಮಣಕೆ ಒಳಗಾಗುತ್ತಾನೆ. ಆದರೆ ಸರ್ವಶಕ್ತನ ಮೊರೆ ಹೊಕ್ಕಿರುವವನು ಆತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು (ಕೀರ್ತನೆ 91:1).

  ತಪ್ಪು ಮಾಡುತ್ತೇವೆಂಬ ಭಯದಿಂದಲೂ ನಾವು ಬಿಡುಗಡೆಯಾಗಬೇಕು. ತಪ್ಪುಮಾಡದಿರುವ ಮನುಷ್ಯನು ಎಂದಿಗೂ ಏನೂ ಮಾಡನು. ನಾವು ದೇವರ ಶಾಲೆಯಲ್ಲಿ ವಿಧ್ಯಾರ್ಥಿಗಳಾಗಿದ್ದೇವೆ. ಆಗಿಂದಾಗೆ ನಾವು ತಪ್ಪು ಮಾಡುತ್ತೇವೆ. ಆದರೆ ಕರ್ತನು ಅವುಗಳನು ಸರಿಪಡಿಸಲು ಯಾವಾಗಲೂ ಹತ್ತಿರವಾಗಿಯೇ ಇದ್ದಾನೆ. ಕರ್ತನಾದ ಯೇಸುವಿನ ಹೊರತು ತಪ್ಪು ಮಾಡದೇ ದೇವರ ಸಂಪೂರ್ಣ ಚಿತ್ತದಲ್ಲಿ ನಡೆಯಲು ಕಲಿತವರು ಯಾರೂ ಇಲ್ಲ. ಹೀಗೆ ಚಿಕ್ಕಮಗುವು ನಡೆಯಲು ಕಲಿಯುವಾಗ ಅನೇಕ ಸಾರೆ ಬೀಳುತ್ತದೋ ಹಾಗೆಯೇ ಅತೀ ದೊಡ್ಡ ಭಕ್ತರೂ ಸಹ ದೇವರ ಚಿತ್ತದಲ್ಲಿ ನಡೆಯುವ ಮೊದಲು ಅನೇಕ ಸಾರೆ ಬಿದ್ದಿದ್ದಾರೆ. ಬೀಳುತ್ತೇನೆಂಬ ಭಯದಿಂದ ನಡೆಯದೇ ಇರುವ ಮಗುವು ಎಂದಿಗೂ ನಡೆಯಲು ಕಲಿಯದೇ ಇರಬಹುದು. ಇಂತಹ ಭಯವು ನಾವು ಮುಂದೆ ಸಾಗದಂತೆ ಮಾಡಲು ಅನುಮತಿಸಬಾರದು. ದೇವರ ಚಿತ್ತದಲ್ಲಿ ನಡೆಯುವದು ಸುಲಭ ಇರಲಿಕ್ಕಿಲ್ಲ. ಆದರೆ ನಾವು ಬೀಳದಂತೆ ಕಾಯುತ್ತೇನೆಂದು ಆತನು ಹೇಳಿದ್ದರಿಂದ ಇದು ಒಂದು ಸಾಹಸವೇ ಸರಿ. ``ನೀತಿವಂತರ ಮಾರ್ಗಗಳನ್ನು ದೇವರು ತಾನೇ ಕಾಯುತ್ತಾನೆ. ಅವರು ಬಿದ್ದರೂ, ಅವರ ಬೀಳುವಿಕೆಯು ಮರಣಕರವಾದದ್ದಲ್ಲ, ದೇವರು ತಾನೇ ಅವರನ್ನು ತನ್ನ ಹಸ್ತದಿಂದ ಎತ್ತುತ್ತಾನೆ.'' (ಕೀರ್ತನೆ 37:23,24). ಅಂತ್ಯದಲ್ಲಿ ನೆನಪಿಡಬೇಕಾದದ್ದೇನೆಂದರೆ, ಮಾರ್ಗದರ್ಶನವು ಪ್ರಾಮುಖ್ಯವಾಗಿ ದೇವರ ಮತ್ತು ನಮ್ಮ ಮಧ್ಯದಲ್ಲಿನ ವಯಕ್ತಿಕವಾದ ಸಂಗತಿ.

  ಒಬ್ಬ ವ್ಯಕ್ತಿಯನ್ನು ದೇವರು ನಡೆಸಿದಂತೆ ನಮ್ಮನ್ನು ಅದೇ ರೀತಿಯಾಗಿ ಅದೇ ಮಾರ್ಗದಲ್ಲಿ ನಡೆಸಲಿಕ್ಕಿಲ್ಲ. ಸಾಧಾರಣವಾಗಿ ಎಲ್ಲರಿಗೂ ನಿಯಮ ಒಂದೇ ಆಗಿದ್ದರೂ ವಿಧಾನಗಳು ಬೇರೆ ಬೇರೆಯಾಗಿರುತ್ತವೆ. ಒಬ್ಬರು ಕೊಟ್ಟ ಸಾಕ್ಷಿಯಂತೆಯೇ ನಿಮಗೂ ಅನುಭವವಾಗಬೇಕೆಂದು ನೀವು ಅಪೇಕ್ಷಿಸಿದ್ದರೆ, ನೀವು ಗೊಂದಲಕ್ಕೆ ಒಳಗಾಗುವಿರಿ. ಹೀಗೆ ನಿಮ್ಮನ್ನು ನಡೆಸಬೇಕೆನ್ನುವುದನ್ನು ದೇವರಿಗೆ ಬಿಡಿರಿ. ಆತನು ಅಪೇಕ್ಷಿಸುವುದೆಲ್ಲವನ್ನು ನೀವು ಮಾಡಲಿಕ್ಕೆ ಸಿದ್ದಮನಸ್ಸುಳ್ಳವರಾಗಿರುವಂತೆ ನೀವು ನಿಮ್ಮನ್ನು ಆತನಿಗೆ ಲಭ್ಯವಾಗಿರುವಂತೆ ಮಾಡಿರಿ. ಆಗ ಆತನು ತನ್ನ ಚಿತ್ತವನ್ನು ನಿಮಗೆ ಪ್ರಕಟಮಾಡಿ ನೀವು ಅದನ್ನು ಮಾಡುವಂತೆ ನಿಮಗೆ ಬಲಕೊಡುವನು.

  ಬಿರುಗಾಳಿಯಿಂದ ಹೊಯ್ದಾಡುವ ಸಮುದ್ರದಲ್ಲಿ ಯಾಕೆ ನಾನು ತೇಲುತ್ತೇನೆ. ದಿಕ್ಸೂಚಿ, ನಕ್ಷೇ, ನಕ್ಷತ್ರವಿಲ್ಲದೆ ನಾನು ತೇಲುವಾಗ ನನ್ನ ನೀಧಾನವಾಗಿ ನಂಬುವ ಹೃದಯದ ಬಾಗಿಲಲ್ಲಿ ನನ್ನ ವಿಷಯವಾಗಿರುವ ದೇವರ ಚಿತ್ತವು ಕಾಯುತ್ತಿದೆ. ಪರಲೋಕದಿಂದ ಸುರುಳಿಯ ಹಾಗೆ ಅದು ಬೀಳುತ್ತದೆ. ಧಣಿಯು ಪ್ರತಿದಿನ ಸ್ವಲ್ಪವಾಗಿ ಸುರುಳಿಯನ್ನು ಬಿಚ್ಚುತ್ತಾನೆ. ಪ್ರತಿದಿನ ಮುಸುಕನ್ನು ಸ್ವಲ್ಪವಾಗಿ ಎತ್ತುತ್ತಾನೆ. ನಾನ್ಯಾಕೆ ಮುಗ್ಗರಿಸಿ, ಅಲೆದು ತೇಲಬೇಕು.

  ದೇವರು ಹಡಗಿನ ಚುಕ್ಕಾಣಿಯನ್ನು ಹಿಡಿದು ಸರಿಯಾದ ಮಾರ್ಗದಲ್ಲಿ ತಿರುಗಿಸುವಾಗ ನಾನ್ಯಾಕೆ ಗೊತ್ತುಗುರಿಯಿಲ್ಲದೇ ಅಲೆಯಬೇಕು. ಆತನು ಮಾರ್ಗವನ್ನು ಸರಾಗಮಾಡುವಾಗ ನಾನ್ಯಾಕೆ ತಡಕಾಡಬೇಕು. ಬಂದರದ ಕಡೆಗೆ ನೇರವಾಗಿ ಹೋಗುವಾಗ ಯಾಕೆ ಹೊಯ್ದಾಡಬೇಕು. ಪರಲೋಕವು ಆಲಿಕಲ್ಲಿನಷ್ಟು ಸಮೀಪವಿರುವಾಗ ನನ್ನ ಹಡಗು ಯಾಕೆ ಒಡೆಯಬೇಕು. ದೇವರೆ ನಿನ್ನ ಯೋಜನೆಯಲ್ಲಿ ನಂಬಲು ಸಹಾಯಿಸು: ಪ್ರತಿ ದಿನ ನನ್ನ ತುಣುಕನ್ನು (ಭಾಗವನ್ನು) ಸ್ವೀಕರಿಸು. ಸಾಹಾಯಿಸು ನನ್ನ ಚಿತ್ತವು ನಿನ್ನ ಚಿತ್ತದೊಂದಿಗೆ ವಾಗ್ವಾದಮಾಡದಿರಲಿ.! ದೇವರಿಗೆ ಒಳಗಾದ ಚಿತ್ತವು ದೇವರು ಯೋಜಿಸಿದ ಜೀವಿತವನ್ನು ಕಂಡುಕೊಳ್ಳುವುದು.

  ಸಾರಾಂಶ

 • 1. ನಾವು ಆತನನ್ನು ಚೆನ್ನಾಗಿ ಅರಿತುಕೊಳ್ಳುವಂತೆ ದೇವರು ನಮ್ಮ ಜೀವಿತದಲ್ಲಿ ಕಳವಳವನ್ನು ಅನುಮತಿಸುತ್ತಾನೆ. ನಮ್ಮ ಉದ್ದೇಶಗಳನ್ನು ಶುದ್ಧೀಕರಿಸಿ ನಮ್ಮ ನಂಬಿಕೆಯನ್ನು ಅದರ ಮೂಲಕ ಬಲಪಡಿಸುತ್ತಾನೆ.
 • 2. ಹೆಚ್ಚಿನಾಂಶ ವಿಷಯಗಳಲ್ಲಿ ದೇವರ ಚಿತ್ತ ಅಷ್ಟಿಷ್ಟ ವಾಗಿದ್ದರೂ ನಾವು ಆತ್ಮನ ಮನಸ್ಸನ್ನು ಅರಿತಿದ್ದರೆ ಮುಂದೆ ಸಾಗುವುದು ಒಳ್ಳೇದು. ಅನಿರ್ದಿಷ್ಟವಾಗಿ ಕಾಯುವುದು ಬೇಕಿಲ್ಲ
 • .
 • 3. ಗತಕಾಲದ ಬೀಳುವಿಕೆಗಳ ಅಥವಾ ನಿರ್ಣಯಗಳ ವಿಷಯದಲ್ಲಿ ನಾವು ಚಿಂತಿಸಬಾರದು
 • .
 • 4. ಅಪಾಯದ ಭಯ ಅಥವಾ ತಪ್ಪು ಮಾಡೆನು ಎನ್ನುವ ಭಯವು ನಮ್ಮನ್ನು ನಿರಂತರವಾಗಿ ನಿಶ್ಕ್ರಿಯವಾಗಿಡದಂತೆ ಎಚ್ಚರ ವಹಿಸಬೇಕು
 • .
 • 5. ಹೀಗೆ ನಡೆಸಬೇಕನ್ನುವುದನ್ನು ನಾವು ದೇವರಿಗೆ ಬಿಟ್ಟು ಬಿಡಬೇಕು
 • .