WFTW Body: 

1ಕೊರಿಂಥ. 6:12-13ರಲ್ಲಿ, ನಾವು ನಮ್ಮ ದೇಹವನ್ನು ಉಪಯೋಗಿಸುವುದರ ಬಗ್ಗೆ ಪೌಲನು ಮಾತನಾಡುತ್ತಾನೆ. "ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವಾತಂತ್ರ್ಯವೇನೋ ಉಂಟು, ಆದರೆ ಎಲ್ಲವೂ ವಿಹಿತವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವಾತಂತ್ರ್ಯವುಂಟು, ಆದರೆ ನಾನು ಯಾವದಕ್ಕೂ ಒಳಗಾಗುವದಿಲ್ಲ".

ಆಹಾರವು ನಮ್ಮ ದೇಹಕ್ಕೆ ಅವಶ್ಯವಾಗಿದೆ. ಆದರೆ ನೀವು ದೇವರ ಸೇವಕನಾಗಬೇಕಾದರೆ, ನೀವು ನಿಮ್ಮ ದೇಹವನ್ನು ಆಹಾರಕ್ಕೆ ಒಳಗಾಗಲು ಬಿಡಬಾರದು. ನೀವು ಆಹಾರವನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ಅದಕ್ಕೆ ಒಳಗಾಗಿರುತ್ತೀರಿ ಎಂದು ಇದರರ್ಥ. ಆಗ ನೀವು ದೇವರಿಗೆ ಉಪಯುಕ್ತನಾದ ಸೇವಕನಾಗಿರುವುದಿಲ್ಲ. ಇಂತಹ ಒಂದು ಗುಲಾಮಗಿರಿಯಿಂದ ನೀವು ಹೊರಬರಬೇಕು. ಇಂಥಹ ಸಂದರ್ಭದಲ್ಲಿ ಉಪವಾಸ ಮಾಡುವುದು ನಮಗೆ ಸಹಾಯವಾಗುತ್ತದೆ. ನಮ್ಮ ಆತ್ಮ ಮಾತ್ರವಲ್ಲದೇ, ನಮ್ಮ ಭೌತಿಕ ದೇಹವು ಸಹ: ಕ್ರಿಸ್ತನ ಅಂಗಾಂಗವಾಗಿದೆ" (1 ಕೊರಿಂಥ 6:15). ಹಾಗಾಗಿ ನಾವು ನಮ್ಮ ದೇಹವನ್ನು ಯಾವುದೇ ಅನೈತಿಕ ಉದ್ದೇಶಕ್ಕಾಗಿ ಉಪಯೋಗಿಸಬಾರದು. ನಮ್ಮ ಕಣ್ಣುಗಳನ್ನು, ನಮ್ಮ ನಾಲಿಗೆಯನ್ನು ಮತ್ತು ನಮ್ಮ ದೇಹದ ಪ್ರತಿಯೊಂದು ಭಾಗವನ್ನು ಕರ್ತನನ್ನು ಮೆಚ್ಚಿಸುವುದಕ್ಕಾಗಿಯೇ ಉಪಯೋಗಿಸಬೇಕು.

ಇಲ್ಲಿ ಒಂದು ಅದ್ಭುತವಾದ ದೇವರ ವಾಗ್ದಾನವು ನಮ್ಮ ದೇಹಕ್ಕಾಗಿ ಇದೆ. ಈ ವಾಗ್ದಾನವನ್ನು ನಾನು ಅನೇಕ ವರ್ಷಗಳಿಂದ ನನಗಾಗಿ ಪಡೆದುಕೊಂಡಿದ್ದೇನೆ: "ದೇಹವು ಕರ್ತನಿಗೋಸ್ಕರವಿದೆ ಮತ್ತು ಕರ್ತನು ದೇಹಕ್ಕೋಸ್ಕರವಾಗಿ ಇದ್ದಾನೆ" (1 ಕೊರಿಂಥ.6:13). ನೀವು ಹೀಗೆ ಹೇಳಬೇಕು - "ಕರ್ತನೇ, ನನ್ನ ಕಣ್ಣು, ನನ್ನ ನಾಲಿಗೆ, ನನ್ನ ತಲೆಯಿಂದ ಪಾದದವರೆಗಿನ ಎಲ್ಲವೂ, ಅಂದರೆ ನನ್ನ ಇಡೀ ದೇಹವು ಸಂಪೂರ್ಣವಾಗಿ ನಿನ್ನದಾಗಿದೆ",. ಇದರರ್ಥವೇನೆಂದರೆ, ಕರ್ತನು ಸಂಪೂರ್ಣವಾಗಿ ನಿಮ್ಮ ದೇಹಕ್ಕಾಗಿ ಇರುವನು ಎಂಬುದಾಗಿ. ನೀವು ಎಷ್ಟು ಕಾಲ ಅತನ ಸೇವೆ ಮಾಡಬೇಕೆಂದು ಆತನು ಬಯಸುವನೋ, ಅಷ್ಟು ಕಾಲ ಸೇವೆ ಮಾಡಲು ಕರ್ತನು ನಿಮ್ಮ ದೇಹವನ್ನು ಅರೋಗ್ಯವಾಗಿರಿಸುತ್ತಾನೆ. ಆತನು ನಿಮ್ಮ ದೇಹವನ್ನು ಕಾಯಿಲೆಗೆ ಒಳಗಾಗದಂತೆಯೂ ಸಹ ಸುರಕ್ಷಿತವಾಗಿಡುತ್ತಾನೆ. ಯುವಜನರು ಬಳಲಿದರೂ (ಮೂರ್ಛೆತಪ್ಪಿದರೂ), ಯಾರು ತಮ್ಮ ದೇಹಗಳನ್ನು ಕರ್ತನಿಗೆ ಒಪ್ಪಿಸಿಕೊಟ್ಟಿದ್ದಾರೋ, ಅವರು ಆಕಾಶದಲ್ಲಿ ಹಾರಾಡುವ ಹದ್ದಿನಂತಿರುತ್ತಾರೆ.

ನಮ್ಮ ದೇಹವು ಪವಿತ್ರಾತ್ಮನ ಗರ್ಭಗುಡಿಯಾಗಿದೆ (1ಕೊರಿಂಥ 6:19). ಹಾಗಾಗಿ ನಾವು ನಮ್ಮ ದೇಹವನ್ನು ಯಾವುದೇ ವಿಧದಲ್ಲಿಯೂ ಮಲಿನ ಮಾಡಬಾರದು. ನೀವು ಸಭೆಯ ಕಟ್ಟಡದೊಳಗೆ ಧೂಮಪಾನ ಅಥವಾ ಮಧ್ಯಪಾನ ಅಥವಾ ವ್ಯಭಿಚಾರ ಮಾಡದೇ ಇರುವಂತೆಯೇ, ನಿಮ್ಮ ದೇಹದಲ್ಲಿಯೂ ಸಹ ಈ ಸಂಗತಿಗಳನ್ನು ಮಾಡಬಾರದು. ಏಕೆಂದರೆ ದೇವರ ನಿಜವಾದ ಗರ್ಭಗುಡಿಯು ಯಾವುದೇ ಸಭೆಯ ಕಟ್ಟಡವಲ್ಲ, ಆದರೆ ನಿಮ್ಮ ದೇಹವಾಗಿದೆ. "ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು; ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ" (1 ಕೊರಿಂಥ.6:20).

1 ಕೊರಿಂಥ.12-20ರಲ್ಲಿನ ಒಂಬತ್ತು ವಚನಗಳು ಒಟ್ಟಾರೆ, ಇಡೀ ಸತ್ಯವೇದಲ್ಲಿಯೇ ಅದ್ಭುತವಾದ ಭಾಗವಾಗಿದ್ದು, ನಮ್ಮ ದೇಹವನ್ನು ಹೇಗೆ ಉಪಯೋಗಿಸಬೇಕು ಮತ್ತು ಇದಕ್ಕಾಗಿ ದೇವರು ನಮಗೇನನ್ನು ಒದಗಿಸಿದ್ದಾರೆ ಎಂಬುದರ ಬಗ್ಗೆ ತಿಳಿಸುತ್ತವೆ. ನೀವು ಈ ವಚನಗಳನ್ನು ಧ್ಯಾನಿಸಲು ನಾನು ನಿಮಗೆ ಪ್ರೋತ್ಸಾಹಿಸುತ್ತೇನೆ. ಏಕೆಂದರೆ ನಾವು ದೇವರ ಸೇವೆ ಮಾಡಲು ನಮಗೆ ಆರೋಗ್ಯಕರವಾದ ದೇಹದ ಅವಶ್ಯಕತೆಯಿದೆ.

ಅನೇಕ ಕ್ರೈಸ್ತರು ಗುಣಹೊಂದುವುದರ ಬಗ್ಗೆ ಮಾತನಾಡುತ್ತಾರೆ. ಆದರೆ ಆರೋಗ್ಯವು ಗುಣಹೊಂದುವುದಕ್ಕಿಂತ ಉತ್ತಮ. ಗುಣ ಹೊಂದುವುದಕ್ಕಿಂತ ರೋಗ ಬರದಂತೆ ತಡೆಗಟ್ಟುವುದು ಉತ್ತಮವಾಗಿದೆ. ತಿಂಡಿಪೋತರಾಗಿ ಆರೋಗ್ಯವನ್ನು ಹದಗೆಡಿಸಿಕೊಂಡು, ನಂತರ ಸ್ವಸ್ಥತೆಗಾಗಿ ದೇವರನ್ನು ಕೇಳಿಕೊಳ್ಳುವುದಕ್ಕಿಂತ, ಕಡಿಮೆ ತಿಂದು ಆರೋಗ್ಯವಾಗಿರುವುದು ಬಹಳ ಯೋಗ್ಯವಾಗಿದೆ. ನನ್ನ ಸ್ವಸ್ಥತೆಯಾಗಿರು (ನನ್ನನ್ನು ಗುಣಪಡಿಸು) ಎಂದು ಕರ್ತನನ್ನು ಕೇಳಿಕೊಳ್ಳಬೇಡಿರಿ, ಬದಲಾಗಿ ನನ್ನ ಆರೋಗ್ಯವಾಗಿರು ಎಂದು ಕರ್ತನನ್ನು ಕೇಳಿಕೊಳ್ಳಿರಿ. ನಿಮ್ಮ ದೇಹವನ್ನು ಸಂಪೂರ್ಣವಾಗಿ ಆತನಿಗೆ ಒಪ್ಪಿಸಿಕೊಟ್ಟು, ಹೀಗೆ ಹೇಳಿರಿ, "ಕರ್ತನೇ, ನೀನು ನನ್ನ ದೇಹದ ಸ್ವಸ್ಥತೆಯಾಗಿದ್ದೀಯ. ನಾನು ಈ ಭೂಲೋಕದಲ್ಲಿ ಎಷ್ಟು ಕಾಲ ಇದ್ದು, ನಿನ್ನನ್ನು ಸೇವೆ ಮಾಡಬೇಕೆಂದು ನೀನು ನನ್ನನ್ನು ನೇಮಿಸಿದ್ದೀಯೋ, ಅಷ್ಟು ಕಾಲ ನಾನು ಲಭ್ಯನಿದ್ದೇನೆ. ನನ್ನ ದೇಹದಲ್ಲಿ ನಿನ್ನ ಪ್ರಭಾವವನ್ನು ಪ್ರಕಾಶಪಡಿಸುತ್ತೇನೆ, ಏಕೆಂದರೆ ನೀನು ಇದನ್ನು ನಿನಗಾಗಿ ಶಿಲುಬೆಯ ಮೇಲೆ ಕೊಂಡುಕೊಂಡಿದ್ದೀಯ, ನನ್ನ ದೇಹವು ನಿನಗೆ ಮಾತ್ರ ಸೇರಿದ್ದಾಗಿದೆ".

ನಮ್ಮ ದೇಹವು ಬೇರೊಬ್ಬರು (ಕರ್ತನು) ಕೊಂಡುಕೊಂಡ ಮನೆಯಂತೆ. ನಾವು ಈ ಮನೆಯನ್ನು ಖಾಲಿ ಮಾಡಬೇಕು ಮತ್ತು ಅದನ್ನು ಅದರ ನಿಜವಾದ ಮಾಲೀಕನಿಗೆ ಬಿಟ್ಟುಕೊಡಬೇಕು. ಬೇರೆಯವರು ಕೊಂಡುಕೊಂಡ ಮನೆಯಲ್ಲಿ ವಾಸಿಸುವುದು ಪಾಪವಾಗಿದೆ. ಹಾಗಾಗಿ ನಿಮ್ಮ ದೇಹವನ್ನು ಕರ್ತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಡಿರಿ.