ನನ್ನೊಂದಿಗೆ ತಾಳ್ಮೆಯಿಂದಿರಿ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮಹಿಳೆಯರಿಗೆ
Article Body: 

"ನನ್ನೊಂದಿಗೆ ತಾಳ್ಮೆಯಿಂದಿರಿ" ಎಂದು ಸಹ ಸೇವಕನು ತನ್ನ ಸಹ ಸೇವಕನೊಂದಿಗೆ ಕರುಣೆಗಾಗಿ ಬೇಡಿಕೊಂಡನು (ಮತ್ತಾಯ 18:29).

ಮಾತಿಲ್ಲದ ಕೂಗು ಗ್ರಹಣಿಯರು ಮತ್ತು ತಾಯಂದಿರು ಆದ ನಮಗೆ ಅನುದಿನವು ಅನೇಕರಿಂದ ಬರುವಂತ ಕೂಗು. ಆದರೆ ಈ ಕೂಗನ್ನು ನಾವು ಕೇಳಿಸಿಕೊಳ್ಳಬೇಕಾದರೆ ನಮ್ಮ ಆತ್ಮಗಳಲ್ಲಿ ನಾವು ಸೂಕ್ಷ್ಮವಾಗಿರಬೇಕು. ಯಾಕೆಂದರೆ ಅದು ಮಾತಿಲ್ಲದ ಕೂಗು.

ಈ ಮಾತಿಲ್ಲದ ಕೂಗು ಒಂದು ವೇಳೆ ನಾವು ಮಕ್ಕಳಿಗೆ ಕೆಲವು ವಿಷಯಗಳನ್ನು ಮೇಲಿಂದ ಮೇಲೆ ನಾವು ಕಲಿಸಿಕೊಡಲು ಪ್ರಯತ್ನಿಸುವಾಗ ಅವರು ಕಲಿಯುವದರಲ್ಲಿ ನಿಧಾನವಾಗಿರುವಾಗ ಮತ್ತು ನಾವು ತೀವ್ರವಾಗಿ ತಾಳ್ಮೆ ತಪ್ಪಲು ಶೋಧಿಸಲ್ಪಡುವಾಗ ಕೇಳಬಹುದು. ಒಂದು ವೇಳೆ ನಾನು ನನಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ, "ನನ್ನೊಂದಿಗೆ ತಾಳ್ಮೆಯಿಂದಿರಿ" ಎಂಬ ಮಾತಿಲ್ಲದ ಕರೆಯನ್ನು ಕೇಳಿಸಿಕೊಳ್ಳುವದಾದರೆ ಅವರೊಂದಿಗೆ ನಾವು ರೇಗಿಸಲ್ಪಡುವ ಶೋಧನೆಯ ಮೇಲೆ ಜಯಗಳಿಸಲು ನಮಗೆ ಸುಲಭವಾಗುತ್ತದೆ.

ನಮ್ಮ ಮನೆಯ ಕೆಲಸದಲ್ಲಿ ಕೆಲಸ ಮಾಡುವ ಕೆಲಸದವರು ನಾಜೂಕಿಲ್ಲದ ಮಾತು ನಾವು ನೆನಸದಂತೆ ಶುಚಿ ಇಲ್ಲದವಳಾಗಿರುವಾಗ ಅವಳ ಜೊತೆ ಕಠಿಣವಾಗಿರಲು ಶೋಧನೆಯಾಗುತ್ತದೆ. ಆದರೆ ಅವಳ ಮಾತಿಲ್ಲದ ಕೂಗು "ನನ್ನೊಂದಿಗೆ ತಾಳ್ಮೆಯಿಂದಿರಿ". ನನಗೆ ಮತ್ತೊಂದು ಅವಕಾಶ ಕೊಡಿ. ನಾನು ಸುಧಾರಿಸಲ್ಪಡುತ್ತೇನೆ". ಮತ್ತು ನಾವು ಸಾತ್ವಿಕರಾಗಿರಲು ನಮಗೊಂದು ಸಂದರ್ಭ ಒದಗಿಸಲ್ಪಡುತ್ತದೆ ಅಥವಾ ನಮ್ಮ ವಯಸ್ಸಾದ ತಂದೆ ತಾಯಂದಿರಬಹುದು.ಈಗ ವಯಸ್ಸಾಗಿ ದ್ರುಢವಿಲ್ಲದೆ ನಮ್ಮ ಮೇಲೆ ಆತುಕೊಂಡಿದ್ದಾರೆ.ಅವರ ಕುಗ್ಗಿದ ಮಾತಿಲ್ಲದ ಕೂಗು "ನನ್ನೊಂದಿಗೆ ತಾಳ್ಮೆಯಿಂದಿರಿ" ನಿಮಗೆ ತೊಂದರೆ ಕೊಡಲು ಇಷ್ಟವಿಲ್ಲ ಆದರೆ ಈಗ ನನಗೆ ನಿಮ್ಮ ಸಹಾಯ ಬೇಕು". ಒಂದು ವೇಳೆ ಅವರ ಅನಿಸಿಕೆಗಳಿಗೆ ನಾವು ಸೂಕ್ಷ್ಮವಾಗಿದ್ದರೆ ಅವರ ಕೂಗನ್ನು ಕೇಳಿಸಿಕೊಂಡು ಅವರ ಗೌರವವನ್ನು ಅಪಹರಿಸದೆ ಮತ್ತು ಅವರು ನಮ್ಮ ಮೇಲೆ ಆತು ಕೊಂಡಿರುವದರ ಬಗ್ಗೆ ಬೇಸರಮಾಡಿಕೊಳ್ಳದೆ ಅವರಿಗೆ ಸಹಾಯಿಸುತ್ತೇವೆ.

ನಮ್ಮ ಅನ್ಯೊನ್ಯತೆಯಲ್ಲಿರುವ ಸಹ-ಸಹೋದರಿಯ ನಡುವಳಿಕೆಯು ಸಹ ನಮಗೆ ಒಂದು ಪರೀಕ್ಷೆ. ಅವರ ಮಾತಿಲ್ಲದ ಕರೆಯು ಸಹ "ನನ್ನೊಂದಿಗೆ ತಾಳ್ಮೆಯಿಂದಿರಿ ನನಗೆ ಇನ್ನೂ ಹೆಚ್ಚಾದ ಜ್ನಾನದ ಕೊರತೆ ಇದೆ. "ಆಗ ನಮ್ಮ ಹಾಗೆ ಅವರು ಪರಿಪೂರ್ಣತೆಗೆ ಸಾಗಲು ಹೋರಾಡುತ್ತಿದ್ದಾರೆಂಬುದನ್ನು ನಾವು ಗ್ರಹಿಸುತ್ತೇವೆ.

ಇಂತಹ ಸಂದರ್ಭಗಳಲ್ಲಿ ನಾವೆಲ್ಲರೂ ನಮ್ಮ ಮಾನವ ಸ್ವಭಾವಗಳಲ್ಲಿ ಆ ಕರುಣೆಯಿಲ್ಲದ ಆಳಿನಂತೆ ಪ್ರವರ್ತಿಸುತ್ತೇವೆ. ಈ ಸಂದರ್ಭಗಳಲ್ಲಿ ನಾವು ದೇವರಿಂದ ಎಷ್ಟು ಕ್ಷಮಿಸಲ್ಪಿಟ್ಟಿದ್ದೇವೆ ಮತ್ತು ನಮ್ಮ ತಪ್ಪುಗಳಲ್ಲಿ ಇತರರು ಎಷ್ಟು ಸಹಿಸಿಕೊಂಡಿದ್ದಾರೆಂದು ಜ್ಞಾಪಿಸಿಕೊಳ್ಳುವದು ಅವಷ್ಯ.

ಆದ್ದರಿಂದ ತಾಳ್ಮೆಯಿಂದಿರಲು ಕರೆಯುವ ಯೌವನದ ಮತ್ತು ವಯಸ್ಸಾದ ನಮ್ಮ ಸಹ ಆಳುಗಳ ಕರೆಯನ್ನು ಕೇಳಿಸಿಕೊಳ್ಳಲು ನಮ್ಮ ಆತ್ಮಿಕ ಕಿವಿಗಳು ಎಲ್ಲಾ ಸಂದರ್ಭಗಳಲ್ಲಿ ಚುರುಕಾಗಿರಬೇಕು. ಯಾಕೋಬ 1:4 "ಆ ತಾಳ್ಮೆಯು ಸಿದ್ಧಿಗೆ ಬರಲಿ. ಆಗ ನೀವು ಶಿಕ್ಷಿತರೂ ಸರ್ವಸೂಗುಣವುಳ್ಳವರೂ ಎನೂ ಕಡಿಮೆಯಿಲ್ಲದವರೂ ಆಗಿರುವಿರಿ."