ಇಂದು ವೀಡಿಯೋ ಕ್ಯಾಮರಾ ಇರುವುದರಿಂದ ನಾವು ನಮ್ಮ ಸುತ್ತಲೂ ಕಾಣುವ ಹಾಗೂ ಕೇಳುವ ದೃಶ್ಯಗಳನ್ನು ಇದ್ದಂತೆಯೇ ರೆಕಾರ್ಡ್ ಮಾಡಲು ಸಾದ್ಯಮಾಗೆದೆ. ಈ ವೀಡಿಯೋ ಟೇಪನ್ನು ನಂತರ ಪುನ: ತೆರೆಯಲ್ಲಿ ಪ್ರದರ್ಶಿಸುವಾಗ ನಡೆದದ್ದನ್ನು ಹಾಗೆಯೇ ತೋರಿಸುತ್ತದೆ.
ನಾವೆಲ್ಲರೂ ನಮ್ಮ ವಿಷಯವಾಗಿ ದೇವರಿಗೆ ಲೆಕ್ಕ ಕೊಡುವ ದಿನವು ಬರಲಿದೆಯೆಂದು ಸತ್ಯವೇದವು ಹೇಳುತ್ತದೆ. ಅನೇಕ ಶತಮಾನಗಳಿಂದ ಈ ಭೂಮಿಯ ಚರಿತ್ರೆಯಲ್ಲಿ ಜೀವಿಸಿದ ಕೋಟ್ಯಾತರ ಜನರ ಬಗ್ಗೆ ಯೋಚಿಸುವಾಗ ಪ್ರತಿಯೊಬ್ಬ ಮನುಷ್ಯನು ತನ್ನ ಕಾಲದಲ್ಲಿ ಮಾಡಿದ, ನುಡಿದ ಹಾಗೂ ಯೋಚಿಸಿದ ಪ್ರತಿಯೊಂದನ್ನು ದೇವರು ಹೇಗೆ ದಾಖಲೆ ಮಾಡಲು ಸಾದ್ಯವೆಂದು ನಮಗೆ ಆಶ್ಚರ್ಯವಾಗಬಹುದು. ಆದರೆ ದೇವರು ಈ ದಾಖಲೆಯನ್ನು ಪ್ರತಿಯೋಬ್ಬ ಮನುಷ್ಯನ ಜ್ಞಾಪಕದಲ್ಲಿಟ್ಟಿದ್ದಾನೆ. ಜ್ಞಾಪಕವೆಂಬುದು ನಾವು ಮಾಡಿ ನುಡಿಯುವ ಹಾಗೂ ಯೋಚಿಸುವ ಪ್ರತಿಯೊಂದನ್ನು ಪ್ರಾಮಾಣಿಕವಾಗಿ ರೆಕಾರ್ಡ್ ಮಾಡುವ ವೀಡಿಯೋ ಟೇಪಿನಂತಿದೆ. ಇದು ನಮ್ಮ ಅಂತರಂಗದ ಭಾವನೆಗಳನ್ನು ಉದ್ದೇಶಗಳನ್ನೂ ರೆಕಾರ್ಡ್ ಮಾಡುತ್ತದೆ.
ಒಬ್ಬ ವ್ಯಕ್ತಿ ಸಾಯುವಾಗ ತನ್ನ ದೇಹವನ್ನು ಭೂಮಿಯಲ್ಲಿಯೇ ಬಿಟ್ಟರೂ, ಜ್ಞಾಪಕವು ಅವನ ಭಾಗವಾಗಿರುವುದರಿಂದ ಅದು ಅವನ ಆತ್ಮದೊಂದಿಗೆ ಸತ್ತವರ ಆತ್ಮಗಳಿರುವ ಸ್ಥಳಕ್ಕೆ ಹೋಗುತ್ತದೆ. ಕೊನೆಯ ನ್ಯಾಯತೀರ್ಪಿನ ದಿನವು ಬಂದಾಗ ಅವನ ಆತ್ಮವು ಮಣ್ಣಾಗಿರುವ ಅವನ ದೇಹದೊಂದಿಗೆ ಪುನ: ಸೇರುವುದು, ಮತ್ತು ಅವನು ಭೂಮಿಯಲ್ಲಿ ಜೀವಿಸಿದ ತನ್ನ ಪೂರ್ಣ ಜೀವಿತವನ್ನು ದೇವರಿಗೆ ಲೆಕ್ಕ ಒಪ್ಪಿಸುವಂತೆ ದೇಹವಾಗಿ ಎಬ್ಬಿಸಲ್ಪಡುವನು. ಆ ದಿನದಲ್ಲಿ ಪ್ರತಿಯೊಬ್ಬರೂ ನ್ಯಾಯತೀರ್ಪಿಗಾಗಿ ನಿಲ್ಲಿಸಲ್ಪಡುವಾಗ ಇಡೀ ಲೋಕಕ್ಕೆ ತೆರೆಯ ಮೇಲೆ ಕಾಣುವಂತೆ ದೇವರು ಒಬ್ಬೊಬ್ಬರ ಜ್ಞಾಪಕದ ವೀಡಿಯೋ ಟೇಪನ್ನು ತೋರಿಸುತ್ತಾರೆ. ಅದು ಮನುಷ್ಯನ ಸ್ವಂತ ಜ್ಞಾಪಕ ಜೀವಿತದ ರೆಕಾರ್ಡಾಗಿ ಪುನ: ತೋರಿಸಲ್ಪಡುವುದರಿಂದ ಅದರ ಪ್ರಾಮಾಣಿಕತೆಯನ್ನು ಕುರಿತು ಯಾರೂ ಪ್ರೆಶ್ನಿಸಲಾರದು.
ಇಂದು ಜನರು ಧರಿಸಿಕೊಂಡಿರುವ ಧಾರ್ಮಿಕತ್ವ ಹಾಗೂ ಗೌರವವೆಂಬ ತೆಳ್ಳನೆಯ ಹೊದಿಕೆಯು ತೆಗೆದು ಹಾಕಲ್ಪಟ್ಟು ಅಂತರಂಗದ ನಿಜ ವ್ಯಕ್ತಿಯು ಆಗ ತೋರಿಸಲ್ಪಡುವನು. ಯಾವ ಧರ್ಮದಲ್ಲಿ ಜನಿಸಿ ಅದನ್ನು ಕೈಕೊಂಡು ನಡೆದಿದ್ದರೂ ಎಲ್ಲರೂ ಪಾಪ ಮಾಡಿದ್ದೇವೆಂದು ಸ್ಪಷ್ಟೀಕರಿಸಲ್ಪಡುವದರಿಂದ ಆ ದಿನದಲ್ಲಿ ಯಾವ ಧರ್ಮವೂ ಯಾವ ವ್ಯಕ್ತಿಯನ್ನೂ ರಕ್ಷಿಸಲಾರದು. ಹೌದು! ಜನರು ಮಾಡಿದ ಪುಣ್ಯಕ್ರಿಯೆಗಳು, ಬಡವರಿಗೆ ಅಥವಾ ಚರ್ಚ್, ದೇವಸ್ಥಾನ ಇಲ್ಲವೇ ಮಸೀದಿಗೆ ಕೊಟ್ಟ ಹಣವು ಸಹ ಯಾರನ್ನೂ ರಕ್ಷಿಸಲಾರದು. ಏಕೆಂದರೆ ಇವು ಯಾವುದೂ ನಮ್ಮ ಪಾಪಗಳ ರೆಕಾರ್ಡನ್ನು ಅಳಿಸಲಾರದು.
ನಾವು ಮಾಡಿದ, ಹೇಳಿದ ಹಾಗೂ ಯೋಚಿಸಿದ ಎಲ್ಲಾ ಕೆಟ್ಟತನದ ದಾಖಲೆಯು ದೇವರ ದೃಷ್ಟಿಯಲ್ಲಿ ನಿರಂತರವಾಗಿ ಅಳಿಸಲ್ಪಟ್ಟು ನ್ಯಾಯತೀರ್ಪಿನ ದಿನದಲ್ಲಿ ಪುನ: ನಮ್ಮ ಜ್ಞಾಪಕದ ವೀಡಿಯೋ ತೋರಿಸಲ್ಪಡದೇ ಇರಬೇಕಾದರೆ ಒಂದೇ ಒಂದು ಮಾರ್ಗವಿದೆ. ನಮ್ಮ ಪುಣ್ಯ ಕ್ರೀಯೆಗಳು ನಮ್ಮ ಕೆಟ್ಟಕ್ರಿಯೆಗಳನ್ನು ಅಳಿಸಲಾರವು. ಅದು ಸಾದ್ಯವೇ ಇಲ್ಲ! ನಾವು ಮಾಡಿದ ಪಾಪಗಳಿಗಾಗಿ ನಮಗೆ ನ್ಯಾಯ ನೀತಿಯುಳ್ಳ ಶಿಕ್ಷೆಯು ಸಿಗಬೇಕು. ಸತ್ಯವೇದದಲ್ಲಿ ಪಾಪದ ಶಿಕ್ಷೆಗಾಗಿ ದೇವರು ಒದಗಿಸಲ್ಪಟ್ಟಿರುವ ನಿಯಮವು ಮರಣವಾಗಿರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಮರಣವನ್ನು ನಮ್ಮ ಪಾಪಗಳಿಗಾಗಿ ಹೊಂದಲು ಯೋಗ್ಯರಾಗಿದ್ದೇವೆ. ನಮ್ಮನ್ನು ನಿತ್ಯ ಮರಣವೆಂಬ ಶಿಕ್ಷೆಯಿಂದ ರಕ್ಷಿಸುವುದಕ್ಕಾಗಿ ದೇವರು ಕಳುಹಿಸಿದ ಯೇಸು ಕ್ರಿಸ್ತನು ಸುಮಾರು 2000 ವರ್ಷಗಳ ಹಿಂದೆ, ಸ್ವರ್ಗದಿಂದ ಭೂಮಿಗೆ ಮನುಷ್ಯನಾಗಿ ಬಂದು ಯೆರೂಸಲೇಮಿನ ಹೊರಗೆ ಶಿಲುಬೆಯಲ್ಲಿ ಸತ್ತನು.
ಅಲ್ಲಿ ಆತನು ಮಾನವ ಕುಲದ ಪಾಪಗಳಿಗಾಗಿ ಅಂದರೆ ಎಲ್ಲಾ ಧರ್ಮಗಳ ಜನರ ಪಾಪಗಳಿಗಾಗಿ ದಿವ್ಯ ಶಿಕ್ಷೆಯನ್ನು ಹೊತ್ತುಕೊಂಡನು. ಆತನು ಸಮಾಧಿಯಲ್ಲಿ ಹೂಣಲ್ಪಟ್ಟ ಮೂರು ದಿನಗಳ ತರುವಾಯ ಮರಣದಿಂದ ಜೀವಂತನಾಗಿ ಎದ್ದು ತಾನೇ ದೇವಪುತ್ರನೆಂತಲೂ ಮನುಷ್ಯನ ಮಹಾ ವೈರಿಯಾದ ಮರಣವನ್ನು ಜಯಿಸಶಕ್ತನೆಂತಲೂ ನಿರೂಪಿಸಿದನು. ಆತನು ನ್ಯಾಯ ತೀರಿಸಲು ಪುನ: ಭೂಮಿಗೆ ಹಿಂತಿರುಗಿ ಬರುವುದಾಗಿ ವಾಗ್ದಾನ ಮಾಡಿ ನಲವತ್ತು ದಿನಗಳಾದ ಮೇಲೆ ಅನೇಕ ಜನರು ಆತನನ್ನು ನೋಡುತ್ತಿರುವಾಗಲೇ ಸ್ವರ್ಗಕ್ಕೆ ಒಯ್ಯಲ್ಪಟ್ಟನು ಆತನು ಆ ವಾಗ್ದಾನ ಮಾಡಿ ಇಂದಿಗೆ ಸುಮಾರು 20 ಶತಮಾನಗಳಾದವು. ಈಗ ಆತನು ಭೂಮಿಗೆ ಹಿಂತಿರುಗಿ ಬರುವ ಕಾಲವು ಹತ್ತಿರವಾಗಿದೆ. ಈ ದಿವಸಗಳಲ್ಲಿ ಯಾವುದಾದರೂ ಒಂದು ದಿನ ನಾವು ಆತನು ಸ್ವರ್ಗದಿಂದ ಹಿಂತಿರುಗಿ ಬರುವುದನ್ನು ಆಕಾಶದಲ್ಲಿ ನೋಡಲಿದ್ದೇವೆ. <
ಚರಿತ್ರೆಯಲ್ಲಿ ಮಾನವ ಕುಲದ ಪಾಪಗಳಿಗಾಗಿ ಪ್ರಾಣ ಕೊಟ್ಟಾತನು ಯೇಸು ಕ್ರಿಸ್ತನು ಮಾತ್ರವೇ ಆಗಿದ್ದಾನೆ. ಮರಣದಿಂದ ಜೀವಂತನಾಗಿ ಎದ್ದಾತನು ಸಹ ಆತನೊಬ್ಬನೇ ಆಗಿರುತ್ತಾನೆ. ಈ ಎರಡು ವಿಶಯಗಳಲ್ಲಿ ಆತನು ಅನುಪಮನಾಗಿದ್ದಾನೆ. ನಾವು ಒಂದು ವೇಳೆ ನಮ್ಮ ಪಾಪಗಳಿಗಾಗಿ ಯಥಾರ್ಥವಾಗಿ ಪಶ್ಚಾತ್ತಾಪಪಟ್ಟು ಅವುಗಳಿಂದ ತಿರುಗಿಕೊಂಡು, ಯೇಸು ಕ್ರಿಸ್ತನ ನಿಮಿತ್ತ ದೇವರು ನಮ್ಮನ್ನು ಕ್ಷಮಿಸುವಂತೆ ಬೇಡಿಕೊಂಡು, ಆತನು ನಮ್ಮ ಪಾಪಗಳಿಗಾಗಿ ಸತ್ತು ಮರಣದಿಂದ ಎದ್ದನೆಂದು ನಂಬಿದರೆ ಇಂದೇ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ಜ್ಞಾಪಕದ ವೀಡಿಯೋ ಟೇಪಿನಿಂದ ಅಳಿಸಲ್ಪಡುವವು.
ನಿಮ್ಮ ಪಾಪಗಳು ಏಷ್ಟೊಂದಿದ್ದರೂ ಎಷ್ಟೇ ದೊಡ್ಡದಾಗಿದ್ದರೂ ನೀವು ಕರ್ತನಾದ ಯೇಸು ಕ್ರಿಸ್ತನು ನಿಮ್ಮ ಜೀವಿತದಲ್ಲಿ ಬಂದು ನಿಮ್ಮ ಹಿಂದಿನ ದಿನಗಳ ಪಾಪವನ್ನು ಅಳಿಸಿಬಿಡುವಂತೆ, ಈಗ ಬೇಡಿಕೊಳ್ಳಲು ಸಾದ್ಯ. ಆಗ ನೀವು ದೇವರ ಮಗುವಾಗಿ ನಿಮ್ಮ ಜೀವಿತವನ್ನು ಪುನ: ಹೊಸದಾಗಿ ಪ್ರಾರಂಬಿಸಲು ಸಾದ್ಯ.
ಪ್ರೀಯರೇ, ದೇವರು ಮಾನವರಿಗಾಗಿ ನೇಮಿಸಿರುವ ರಕ್ಷಣಾ ಮಾರ್ಗವು ಇದು ಮಾತ್ರವೇ ಆಗಿರುತ್ತದೆ. ಇದನ್ನು ಈಗಲೇ ಪಡೆದುಕೊಳ್ಳಿರಿ. ಇಲ್ಲದಿದ್ದರೆ ನೀವು ನಿಮ್ಮ ಜ್ಞಾಪಕದ ವೀಡಿಯೋ ಟೇಪಿನ ಎಲ್ಲಾ ಪಾಪಗಳನ್ನು ನ್ಯಾಯತೀರ್ಪಿನ ದಿನದಂದು ಪುನ: ತೊರಿಸಲ್ಪಡುವುದನ್ನು ನೋಡಬೇಕಾಗುತ್ತದೆ. ನಾವು ಈ ಸತ್ಯವನ್ನು ತಿಳಿದಿರುವುದರಿಂದಲೂ, ಪಾಪಿಗಳೆಲ್ಲರು ಬೆಂಕಿಯ ಕೆರೆಯೆಂಬ ನಿತ್ಯ ನ್ಯಾಯತೀರ್ಪಿಗೆ ಒಳಗಾಗುವ ಗಂಬೀರತೆಯನ್ನು ಗ್ರಹಿಸಿರುವುದರಿಂದಲೂ ನಿಮ್ಮನ್ನು ಪ್ರೀತಿಯಿಂದ ಎಚ್ಚರಿಸುವುದು ನಮ್ಮ ಕರ್ತವ್ಯವಾಗಿದೆ.
ನಾವು ಯಥಾರ್ಥ ಪ್ರೀತಿಯಿಂದ ಈ ಸಂದೇಶವನ್ನು ದೇವರಿಂದ ನಿಮಗೆ ನೀಡುತ್ತಿದ್ದೇವೆ. ದೇವರು ಎಂದೂ ಒತ್ತಾಯಿಸುವವರಲ್ಲ, ಏನನ್ನೇ ಮಾಡಲು ಲಂಚ ಕೊಡುವವರಲ್ಲ, ಆದ್ದರಿಂದ ನಾವು ಕೂಡ ಹಾಗೆ ಮಾಡುವುದಿಲ್ಲ. ದೇವರು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಸ್ವಂತ ನಿರ್ದಾರವನ್ನು ತೆಗೆದುಕೊಳ್ಳಲು ಸ್ವತಂತ್ರವನ್ನು ಕೊಟ್ಟಿದ್ದಾರೆ, ಯಾರೂ ಇದನ್ನು ಮೀರಬಾರದು. ನಾವು ಕೊಡುತ್ತಿರುವ ದಾಹ ತೀರಿಸುವ ನೀರು ನಮ್ಮ ದಾಹವನ್ನು ತೀರಿಸಿರುವದರಿಂದ ಇತರರ ದಾಹ ತೀರಿಸುವದಕ್ಕಾಗಿ ಉಚಿತವಾಗಿ ಹಂಚುತ್ತಿದ್ದೇವೆ. ನೀವು ಕುಡಿಯಲೇಬೇಕೆಂಬ ಯಾವ ಒತ್ತಾಯವಿಲ್ಲ. ನಿರ್ದಾರವವು ಸಂಪೂರ್ಣವಾಗಿ ನಿಮ್ಮದೇ ಆಗಿರುತ್ತದೆ.
ನೀವು ಮುಂದೆ ತಡಮಾಡದೆ ಸೂಕ್ತ ತೀರ್ಮಾನವನ್ನು ಮಾಡುವದರಿಂದ ದೇವರು ನಿಮಗೆ ನಿತ್ಯಜೀವವನ್ನು ಅನುಗ್ರಹಿ ಆಶೀರ್ವದಿಸಲಿ.
ನೀವು ಎಲ್ಲಿಯೇ ಇದ್ದರೂ ದೇವರು ನಿಮ್ಮ ಮಾತನ್ನು ಕೇಳುವವನಾಗಿದ್ದಾನೆ. ನಿಮ್ಮ ಮಾತನ್ನು ಕೇಳುವುದರಲ್ಲಿ ದೇವರು ಆಸಕ್ತನಾಗಿದ್ದಾನೆ. ಈ ಮಾತನ್ನು ಅರ್ಥಪೂರ್ವಕವಾಗಿ ಮತ್ತು ನಿಧಾನವಾಗಿ ಹೀಗೆ ಪ್ರಾರ್ಥಿಸಬಹುದು.
"ಕರ್ತನಾದ ಯೇಸುವೆ, ನಾನು ಪಾಪಿಯು ಮತ್ತು ನಿಜವಾಗಿಯೂ ನಾನು ನನ್ನ ಪಾಪದಿಂದ ತಿರುಗಿಕೊಳ್ಳಲು ಬಯಸುತ್ತೇನೆ. ನೀನು ನನ್ನ ಎಲ್ಲಾ ಪಾಪಕ್ಕಾಗಿ ಪ್ರಾಣಕೊಟ್ಟೆ ಮತ್ತು ನೀನು ಸತ್ತವರೂಳಗಿಂದ ಎದ್ದು ಬಂದು ಈ ದಿನದಲ್ಲಿ ಜೀವಿಸುವವನಾಗಿದ್ದಿ. ನನ್ನ ಎಲ್ಲಾ ಪಾಪಗಳನ್ನು ದಯವಿಟ್ಟು ಕ್ಷಮಿಸು. ನನ್ನ ಹೃದಯ ಮತ್ತು ಜೀವಿತದೊಳಗೆ ಬಂದು ನನ್ನ ಜೀವಿತಕ್ಕೆ ಇಂದಿನಿಂದ ಒಡೆಯನಾಗಿರು. ನಾನು ಇತರ ಎಲ್ಲಾ ದೇವರನ್ನು ಬಿಟ್ಟು ಬಿಟ್ಟು ಇಂದಿನಿದ ನಿನ್ನನ್ನು ಮಾತ್ರ ಆರಾದಿಸುತ್ತೇನೆ"