ಯೋಹಾನ 1:18 ರಲ್ಲಿ ಯೇಸು ಭೂಮಿಗೆ ಬಂದ ಉದ್ದೇಶಗಳಲ್ಲಿ ಒಂದನ್ನು ವಿವರಿಸುತ್ತದೆ. ಅನೇಕ ಜನರು ಆತನು ನಮ್ಮ ಪಾಪಗಳಿಗಾಗಿ ಮಾತ್ರ ಸಾಯಲು ಬಂದನು ಎಂಬದಾಗಿ ಯೋಚಿಸುತ್ತಾರೆ. ಆದರೆ ನಾವು ಈ ವಾಕ್ಯವನ್ನು ನೋಡೋಣ: ‘ದೇವರನ್ನು ಯಾರೂ ಎಂದೂ ಕಂಡಿಲ್ಲ, ಯಾವನು ಏಕಪುತ್ರನು, ಸ್ವತಃ ದೇವರಾಗಿದ್ದು ತಂದೆಯ ಎದೆಯಲ್ಲಿದ್ದಾನೋ, ಆತನೇ ತಂದೆಯನ್ನು ನಮಗೆ ತಿಳಿಸಿಕೊಟ್ಟನು. ಯೇಸು ಈ ಭೂಮಿಗೆ ಬರುವುದಕ್ಕೆ ಮುಂಚೆ ಜನರು ದೇವರನ್ನು ತಮ್ಮ ತಂದೆ ಎಂದು ತಿಳಿಯಲು ಆಗಲಿಲ್ಲ. ಹಳೆಯ ಒಡಂಬಡಿಕೆಯಲ್ಲಿ ಜನರು ದೇವರನ್ನು ‘ತಂದೆ’ ಎಂಬುದಾಗಿ ಕರೆಯುವುದನ್ನು ನೀವು ಎಂದಿಗೂ ಕಾಣುವುದಿಲ್ಲ. ಆತನು ಮಹಾನ್, ಭಯಂಕರ ಮತ್ತು ಭಯಪಡಬೇಕಾದ ದೇವರಾಗಿದ್ದನು. ಯೇಸುವು ತನ್ನ ಶಿಷ್ಯರಿಗೆ ಕೊಟ್ಟ ಅತಿ ಶ್ರೇಷ್ಟವಾದ ಪ್ರಕಟನೆಯೆಂದರೆ, ದೇವರು ತಂದೆಯಾಗಿದ್ದಾರೆ ಎಂಬುದಾಗಿದೆ. ಕ್ರಿಸ್ತನು ದೇವರು ತಮ್ಮ ತಂದೆ ಎಂಬದಾಗಿ ತಿಳಿಯುವುದರಲ್ಲಿ ಜನರಿಗೆ ಇರುವಂತಹ ಭದ್ರತೆಯನ್ನು ತಿಳಿಸಲು ಬಹಳಷ್ಟು ಶ್ರಮಿಸಿದನು. ಆದರೆ ಈ ಹೊಸ ಪ್ರಕಟಣೆಯನ್ನು ಅವರು ಆತನು ಬಯಸಿದಂತೆ ಯಾವಾಗಲೂ ಪ್ರತಿಕ್ರಿಯೆ ತೋರಿಸಲಿಲ್ಲ. ಈ ದಿನ ದೇವರು ನಮಗೂ ಸಹ ಇದನ್ನೇ ಪ್ರಕಟಿಸಲು ಬಯಸುತ್ತಾರೆ ಎಂಬುದನ್ನು ನಾನು ನಂಬುತ್ತೇನೆ. ಈ ಅಸ್ತಿವಾರದ ಮೇಲೆ ಮಾತ್ರ ನಾವು ನಮ್ಮ ಕ್ರಿಸ್ತಿeeಯ ಜೀವಿತದಲ್ಲಿ ಪಾಪದ ಮೇಲೆ ಜಯಗಳಿಸಿ ಮುನ್ನಡೆದು ಬೆಳೆಯಲು ಮತ್ತು ಕ್ರಿಸ್ತನ ದೇಹವನ್ನು ಕಟ್ಟಲು ಸಾಧ್ಯ. ದೇವರು ನಮ್ಮ ತಂದೆ ಎಂಬ ಪ್ರಕಟಣೆಯನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಅನೇಕಾನೇಕ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತೇವೆ.ದೇವರು ಹೇಗಿದ್ದಾರೆ ಎಂಬುದಾಗಿ ನಮಗೆ ದೇವರ ಬಗ್ಗೆ ತಪ್ಪಾದ ಕಲ್ಪನೆ ಬರುತ್ತದೆ ಕಾರಣ ನಾವು ದೇವರನ್ನು ನಮ್ಮ ಪ್ರೀತಿಯ ತಂದೆ ಎಂಬುದಾಗಿ ತಿಳಿದಿಲ್ಲ.
ನಾನು ಯೌವನಸ್ಥನಾಗಿರುವಾಗ, ದೇವರು ಏಸುಕ್ರಿಸ್ತನನ್ನು ಪ್ರೀತಿಸಿದಂತೆಯೇ ನನ್ನನ್ನು ಸಹ ಪ್ರೀತಿಸುತ್ತಾರೆ ಎಂಬ ಸತ್ಯ ಯಾವಾಗಲೂ ಇತರರನ್ನು ಒಳ್ಳೆಯ ರೀತಿಯಲ್ಲಿ ಮೆಚ್ಚಿಸುವ ಅಭದ್ರತೆಯ ವ್ಯಕ್ತಿಯಿಂದ ಭದ್ರತೆಯ ವ್ಯಕ್ತಿಯಾಗಿ ಬದಲಾಯಿಸಿತು. ಒಂದು ವೇಳೆ ಯಾರಾದರೂ ನನ್ನನ್ನು ನಿಮ್ಮ 40 ವರ್ಷಗಳಲ್ಲಿ ಹೊಸದಾಗಿ ಹುಟ್ಟಿ ಯೇಸುಕ್ರಿಸ್ತನನ್ನು ನಂಬುವವರಾಗಿ ಮತ್ತು ಸತ್ಯವೇದದ ಅಧ್ಯಯನ ಮಾಡಿ ತಿಳಿದಂತಹ ಮಹತ್ವದ ಸತ್ಯವಾದರೂ ಏನು ಎಂದು ಕೇಳಿದರೆ ಅದು, ನನಗೆ ತಿಳಿದಂತೆ ಇಡೀ ಸತ್ಯವೇದದಲ್ಲಿ ಯೋಹಾನ 17:23 ರಲ್ಲಿ ಒಂದೇ ಒಂದು ವಾಕ್ಯದಲ್ಲಿ ಹೇಳಲ್ಪಟ್ಟಿರುವುದು. “ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವೂ ಪೂರ್ಣ ಸಿದ್ಧಿಗೆ ಬರುವುದರಿಂದ ನೀನು ನನ್ನನ್ನು ಕಳುಹಿಸಿ ಕೊಟ್ಟಿದ್ದಿ ಎಂದು ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನು ಪ್ರೀತಿಸಿದ್ದಿ ಎಂದು ಲೋಕಕ್ಕೆ ತಿಳಿದುಬರುವುದು”. ಈ ಇಡೀ ಅಧ್ಯಾಯವು ವಿಶ್ವಾಸಿಗಳಲ್ಲಿ ಐಕ್ಯತೆಗಾಗಿ ಪ್ರಾರ್ಥನೆಯಾಗಿದೆ. ಆದರೆ ಈ ದಿನಗಳಲ್ಲಿ ಕ್ರೈಸ್ತತ್ವದಲ್ಲಿ ನಾವು ನೋಡುವಾಗ ಈ ಪ್ರಾರ್ಥನೆಯು ಉತ್ತರಿಸಲ್ಪಟ್ಟಿಲ್ಲ.
ಕ್ರೈಸ್ತರು ಐಕ್ಯತೆಯಿಂದ ಇರುವುದನ್ನು ನಾವು ಕಾಣುವುದಿಲ್ಲ. ಇದು ಯೇಸುವಿನ ಹೃದಯದ ಭಾರವಾಗಿತ್ತು. ದೇವರು ಕ್ರಿಸ್ತರನ್ನು ಪ್ರೀತಿಸಿದಂತೆಯೇ ನಮ್ಮನ್ನು ಸಹ ಪ್ರೀತಿಸುತ್ತಾರೆ ಎಂಬುದಾಗಿ ತಿಳಿಯುವಾಗ ಮಾತ್ರ ವಿಶ್ವಾಸಿಗಳಲ್ಲಿ ಐಕ್ಯತೆ ಬರುತ್ತದೆ. ಇದನ್ನು ಹೇಗೆ ವಿವರಿಸಲು ಅಥವಾ ಅರ್ಥಮಾಡಿಕೊಳ್ಳಲು ನನಗೆ ಬಹಳ ಕಷ್ಟವೆನಿಸುತ್ತದೆ. ಆದರೆ ನಾವು ಇದನ್ನು ಬಹಳ ಅವಶ್ಯಕವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ನಾನು ಇದನ್ನು ಕಂಡುಕೊಂಡಾಗ ಅದು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ನಾನು ಮನುಷ್ಯರ ಮೇಲೆ ಪ್ರಭಾವ ಬೀರಬೇಕೆಂಬ ಆಸೆಯಿಂದ ಮತ್ತು ಇತರರೊಟ್ಟಿಗೆ ಸ್ಪರ್ಧಿಸುವುದರಿಂದ ನನಗೆ ಬಿಡುಗಡೆಗೊಳಿಸಿತು. ಅದು ನಾನು ಹೊಟ್ಟೆಕಿಚ್ಚು ಮತ್ತು ಇತರರೊಂದಿಗೆ ನನ್ನನ್ನು ಹೋಲಿಸಿಕೊಳ್ಳವ ಸಮಸ್ಯೆಗಳನ್ನು ಜಯಿಸುವಂತೆ ಸಹಾಯಿಸಿತು. ಮತ್ತು ಕ್ರೈಸ್ತರಲ್ಲಿ ಭಿನ್ನತೆಯನ್ನು ತರುವ ಇನ್ನೂ ಅನೇಕ ಸಮಸ್ಯೆಗಳನ್ನು ಜಯಿಸುವಂತೆ ಸಹಾಯಸಿತು. ದೇವರು ಯೇಸುವನ್ನು ಪ್ರೀತಿಸಿದಂತೆಯೇ ನನ್ನನ್ನು ಸಹ ಪ್ರೀತಿಸುತ್ತಾರೆ ಎಂಬುದು ಸರಳ ಸತ್ಯ. ಅದರಂತೆಯೇ ಆತನು ಕ್ರಿಸ್ತನ ಜೀವಿತದ ಬಗ್ಗೆ ಯೋಚಿಸಿದಂತೆ ಮತ್ತು ಆತನ ಬಗ್ಗೆ ಆಸಕ್ತಿ ವಹಿಸಿದಂತಹ ರೀತಿಯಲ್ಲಿಯೇ ನನಗೂ ಸಹ ಆತನು ಮಾಡುತ್ತಾನೆ.
ಸತ್ಯವೇದದ ಮಾತು ನೆರವೇರುವಂತೆ ಕೆಲವು ಸಂಗತಿಗಳು ನಡೆದವು ಎಂದು ಮತ್ತಾಯನ ಸುವಾರ್ತೆಯಲ್ಲಿ ನಾನು ಅನೇಕ ಸಾರಿ ಹೇಳಲ್ಪಟ್ಟಿರುವುದರ ಬಗ್ಗೆ ಯೋಚಿಸಿದ್ದೇನೆ. ಯೇಸು ಬೆತ್ಲೆಹೇಮಿನಲ್ಲಿ ಜನಿಸಿದನು ಮತ್ತು ನಜರೇತಿನಲ್ಲಿ ಬೆಳೆದನು. ಸತ್ಯವೇದದ ಮಾತು ನೆರವೇರುವಂತೆ ಆತನು ಗಲಿಲಾಯಕ್ಕೆ ಹೋದನು. ಆತನ ಜೀವನವಿಡೀ ದೇವರು ಆತನಿಗೆ ತನ್ನ ಯೋಜನೆಯನ್ನು ಇಟ್ಟಿದ್ದನು ಮತ್ತು ಪ್ರವಾದಿಗಳ ಮುಖಾಂತರ ಪ್ರವಾದಿಸಿದನು ಎಂಬುದನ್ನು ನೀವು ನೋಡುತ್ತೀರಿ. ಕ್ರಿಸ್ತನು ಶಿಲುಬೆಯ ಮೇಲೆ ತೂಗಾಡುತ್ತಿರುವಾಗಲೂ ಸಹ “ನೀರಡಿಕೆಯಾಗುತ್ತಿದೆ” ಎಂದು ಹೇಳಿದನು. ಯೋಹಾನ 19 ರಲ್ಲಿ ಹೀಗೆ ಹೇಳುತ್ತದೆಛ ಶಾಸ್ತ್ರದ ಮಾತು ನೆರವೇರುವಂತೆ ಆತನು ಅದನ್ನು ಹೇಳಿದನು. ಯೇಸುವಿನ ಜೀವಿತದಲ್ಲಿ ಪರಿಪೂರ್ಣವಾದ ಯೋಜನೆಯಿತ್ತು. ದೇವರು ಆತನಿಗೆ ನಿಖರವಾದ ಯೋಜನೆಯನ್ನು ಮಾಡಿದ್ದನು - ಎಲ್ಲಿ ಆತನು ಜನಿಸಬೇಕು ಮತ್ತು ಇವೆಲ್ಲ ಸಂಗತಿಗಳು ಆತನಲ್ಲಿ ಹೇಗೆ ನಡೆಯಬೇಕು ಎಂಬುದಾಗಿ. ಆತನು eಲ್ಲಿಯೂ ಜನಿಸುವಂತಿರಲಿಲ್ಲ. ಆತನು ಆ ದನದ ಕೊಟ್ಟಿಗೆಯಲ್ಲಿ ಹುಟ್ಟಬೇಕಾಗಿತ್ತು ಎಂಬುದನ್ನು ನಾನು ನಂಬುತ್ತೇನೆ. ಇದು ಆತನ ಜೀವಿತದ ಬಗ್ಗೆ ದೇವರ ಯೋಜನೆಯಾಗಿತ್ತು. ಆತನು ಎಲ್ಲಿಯಾದರೂ ಜೀವಿಸುವಂತಿರಲಿಲ್ಲ. ಆತನು ನಜರೇತಿನಲ್ಲಿ ಬೆಳೆಯಲು ಒಂದು ಕಾರಣವಿತ್ತು. ಆತನ ಜೀವಿತವು ಬಹಳ ಪರಿಪೂರ್ಣವಾಗಿ ಯೋಜಿಸಲ್ಪಟ್ಟಿತ್ತು. ಯಾಕೆಂದರೆ ತಂದೆಯು ಆತನನ್ನು ಪ್ರೀತಿಸುತ್ತಿದ್ದನು. ತಂದೆಯು ಏಸುವನ್ನು ಪ್ರೀತಿಸಿದ ರೀತಿಯೇ ನನ್ನನ್ನು ಪ್ರೀತಿಸುತ್ತಿದ್ದಾರೆ ಎಂಬುದನ್ನು ನಾನು ಗ್ರಹಿಸಿ ಕೊಳ್ಳುವಾಗ, ನನ್ನ ಜೀವಿತದ ಬಗ್ಗೆಯೂ ಸಹ ತಂದೆಯು ಇದೇ ರೀತಿ ಯೋಜಿಸಿದ್ದಾರೆ ಎಂಬುದನ್ನು ಗ್ರಹಿಸಿದೆ. ಅದು ನನ್ನಲ್ಲಿದ್ದ ಬಹಳವಾದ ಅಭದ್ರತೆಯನ್ನು, ನನ್ನ ಜೀವಿತದಿಂದ ತೆಗೆದುಹಾಕಿತು.
ನಾನು ಒಬ್ಬ ಯುವ ಕ್ರೈಸ್ತನಾಗಿದ್ದಾಗ, ನಾನು ನಿಜವಾಗಲೂ ಸಂಕೋಚ ಸ್ವಭಾವದವನು, ಮತ್ತು ಮನಸ್ಸನ್ನು ಬಿಚ್ಚಿ ಹೆಚ್ಚಾಗಿ ಮಾತನಾಡದ ವ್ಯಕ್ತಿಯಾಗಿದ್ದೆನು. ಕೆಲವರು ತುಂಬ ಸುಲಭವಾಗಿ ಜನರ ಬಳಿ ಹೋಗಿ, “ಹಾಯ್! ಹೇಗಿದ್ದೀಯ?” ಎಂದು ಮಾತನಾಡಿ ಸ್ನೇಹಿತರಾಗುತ್ತಾರೆ. ನಾನು ಹಾಗೆ ಮಾಡಲು ಸಾಧ್ಯವಾಗಲಿಲ್ಲ. ನಾನು ಅವರಂತಾಗಬೇಕು ಎಂದು ಬಯಸುತ್ತಿದ್ದೆ, ಆದರೆ ನಾನು ಅಂಥವನು ಆಗಿರಲಿಲ್ಲ. ದೇವರು ನನ್ನ ಸ್ವಭಾವವನ್ನು ತಾನು ಮಾಡಲು ಬಯಸಿದಂತೆ ಮಾಡುವುದರಲ್ಲಿ ತಪ್ಪನ್ನು ಮಾಡಿಲ್ಲ ಮತ್ತು ಆತನು ನನ್ನ ಶರೀರದ ಬಣ್ಣ, ನಾನು ಯಾವ ದೇಶದಲ್ಲಿ ಹುಟ್ಟಬೇಕು ಮತ್ತು ಪ್ರತಿಯೊಂದನ್ನೂ ವಿವರವಾಗಿ ಆತನು ಯೋಜಿಸಿದ್ದಾನೆ. ಯಾಕೆಂದರೆ ಆತನಿಗೆ ನನ್ನ ಜೀವಿತದ ಬಗ್ಗೆ ಒಂದು ನಿಶ್ಚಿತವಾದ ಯೋಜನೆ ಇದೆ. ನಾನು ಯಾರನ್ನೂ ನೋಡಿ ಹೊಟ್ಟೆಕಿಚ್ಚು ಪಡಬಾರದು ಎಂಬುದನ್ನು ಗ್ರಹಿಸಿದೆ. ಒಂದು ವೇಳೆ ನಾನು ಬೇರೆಯವರಂತೆ ಇರಲು ಪ್ರಯತ್ನಿಸಿದರೆ ಆತನು ನನಗೆ ಕೊಟ್ಟಿರುವ ವರಗಳ ಪ್ರಕಾರ ಆತನ ಯೋಜನೆಯನ್ನುಪೂರೈಸದೆ ಅದನ್ನು ಹಾಳು ಮಾಡುತ್ತೇನೆ. ಅದು ನನ್ನ ಜೀವಿತದಲ್ಲಿಬಹಳ ಸಮಾಧಾನವನ್ನು ಕೊಟ್ಟಿತು. ನಾನು ಬೇರೆಯವರಂತೆ ಆಗಬೇಕೆಂಬುದರಿಂದ ಅಥವಾ ಇತರರೊಟ್ಟಿಗೆ ಸ್ಪರ್ದಿಸಬೇಕೆಂಬುದರಿಂದ ಬಿಡುಗಡೆ ಸಿಕ್ಕಿತು. ಇದು ನನ್ನ ಹೃದಯದಲ್ಲಿ ಪರಿಪೂರ್ಣ ಸಮಾಧಾನ ಕೊಟ್ಟಿತು. ಇವೆಲ್ಲಾ ದೇವರು ಯೇಸುವನ್ನು ಪ್ರೀತಿಸಿದಂತೆಯೇ ನನ್ನನ್ನು ಪ್ರೀತಿಸುತ್ತಾರೆ ಮತ್ತು ಆತನು ಯೇಸುವಿನ ಜೀವಿತವನ್ನು ಯೋಜಿಸಿದಂತೆಯೇ ನನ್ನ ಜೀವಿತವನ್ನು ಸಹ ಯೋಜಿಸುತ್ತಾರೆ ಎಂಬ ಸರಳ ಸತ್ಯದಿಂದ ತಿಳಿದೆ. ನಾನು 19 ವರ್ಷದ ವಯಸ್ಸಿನವನಾಗಿರುವಾಗ ಪರಿವರ್ತನೆ ಹೊಂದಿದೆ. ನಾನು 21 ವಯಸ್ಸಿನವನಾಗಿರುವಾಗ ದೀಕ್ಷಾಸ್ನಾನ ಹೊಂದಿದೆ. ಈ ಸಂದರ್ಭದಲ್ಲಿ ದೇವರು ನನ್ನ ಜೀವಿತದ ಬಗ್ಗೆ ಒಂದು ಯೋಜನೆ ಇಟ್ಟುಕೊಂಡಿದ್ದಾರೆಯೆಬುದಾಗಿ ನನಗೆ ತೋರಿಸಿಕೊಟ್ಟರು. ಮತ್ತು ಒಂದು ವೇಳೆ ನಾನು ಅದಕ್ಕೆ ಒಪ್ಪಿಕೊಂಡು ಅಧೀನನಾಗುವುದಾದರೆ ಆತನು ನನ್ನನ್ನು ನಡೆಸುವುವವನಾಗಿದ್ದಾನೆ.
ಇಸ್ರಾಯೇಲ್ಯರ ಮಕ್ಕಳನ್ನುಐಗುಪ್ತ ಪ್ರಾಂತ್ಯದಿಂದ ಬಿಡುಗಡೆ ಮಾಡಿದಾಗ, ಅವರನ್ನು ಮೇಘದ ಸ್ತಂಭದಿಂದ ನಡೆಸಿದರು. ಅವರಿಗೆ ಕೇವಲ ಅರಣ್ಯದ ಒಂದು ನಕ್ಷೆಯನ್ನು ಕೊಟ್ಟು, ಆಯ್ತು ಹೋಗಿ ನಿಮಗೆ ವಾಗ್ದಾನವಾದ ಪ್ರಾಂತ್ಯವನ್ನು ಹುಡುಕಿಕೊಳ್ಳಿರಿ ಎಂದು ಹೇಳಲಿಲ್ಲ. ಆತನು ಅವರನ್ನು ನಡಿಸಿದನು. ಅವರು ನಂಬಿಕೆಯಿಂದ ನಡೆಯುವುದನ್ನು ಅವರಿಗೆ ಕಲಿಸಬೇಕೆಂಬುದು ಆತನ ಆಸೆಯಾಗಿತ್ತು. ಅದೇ ರೀತಿ ನಮ್ಮೊಡನೆಯೂ ಸಹ ದೇವರು ನಮಗೆ ನಮ್ಮ ಇಡೀ ಭವಿಷ್ಯದ ಬಗ್ಗೆ ನಕ್ಷೆಯನ್ನು ಕೊಡುವುದಿಲ್ಲ. ನಾವು ಆತನನ್ನು ಆತುಕೊಳ್ಳುವುದನ್ನು ಕಲಿಯುತ್ತಾ ಆತನನ್ನು ಹಿಂಬಾಲಿಸಿ ಆತನಲ್ಲಿ ಭರವಸೆ ಇಡಬೇಕೆಂಬುದು ಆತನ ಆಸೆ. ನಮ್ಮ ಮುಂದೆ ನಿಜವಾಗಲೂ ಏನು ಇದೆ ಎಂಬುದಾಗಿ ನಮಗೆ ಗೊತ್ತಿಲ್ಲ. ನಾವು ಆತನನ್ನು ಹಿಂಬಾಲಿಸಲು ಕಲಿತುಕೊಳ್ಳಬೇಕು ಮತ್ತು ನಮ್ಮ ಭರವಸೆಯನ್ನು ಆತನಲ್ಲಿಡಬೇಕು ಎಂಬುದು ಆತನ ಇಚ್ಛೆಯಾಗಿದೆ. ನಾನು ದಿನೇ ದಿನೇ ಆತನಿಗೆ ನನ್ನ ಚಿತ್ತವನ್ನು ಒಪ್ಪಿಸಿ, ಆತನು ತೋರಿಸಿದ ಮಾರ್ಗದಲ್ಲಿ, ಆತನು ನಡೆಸಿದಂತೆ ನಡೆದರೆ ,ಆತನ ಯೋಜನೆಯನ್ನು ನನ್ನ ಜೀವಿತದಲ್ಲಿ ನೆರವೇರಿಸಲು ಸಾಧ್ಯ ,ಎಂಬುದನ್ನು ಆತನು ನನಗೆ ತೋರಿಸಿಕೊಟ್ಟನು. ಅದು ನನಗೆ ತುಂಬಾ ಸಹಾಯವಾಯಿತು. 40 ಅಥವಾ 50 ವರ್ಷದವನು ಆಗುವವರೆಗೂ ಇದನ್ನು ಪ್ರಕಟಿಸಲು ಕರ್ತನು ಕಾಯಲಿಲ್ಲ ಎಂಬುದಕ್ಕೆ ನಾನು ಸಂತೋಷಿಸುತ್ತೇನೆ. ಇದಕ್ಕಾಗಿಯೇ ನನಗೆ ಯೌವನಸ್ಥರ ಬಗ್ಗೆ ಬಹಳ ಭಾರವಿದೆ.
ದೇವರಿಗೆ ಅವರೆಲ್ಲರ ಜೀವಿತದಲ್ಲಿ ಒಂದು ಯೋಜನೆಯನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಅವರ ಮನಸ್ಸಿನಲ್ಲಿ ಬಲವಾಗಿಬೇರೂರಿಸಲು ನಾನು ಬಯಸುತ್ತೇನೆ. ಆತನು ನಿಮ್ಮ ಜೀವಿತದ ಬಗ್ಗೆ ಒಂದು ಯೋಜನೆಯನ್ನು ಇಟ್ಟುಕೊಂಡಿದ್ದಾನೆ. ಮತ್ತು ಅದಕ್ಕಿಂತ ಉತ್ತಮವಾದ ಯೋಜನೆಯನ್ನು ನೀವು ಎಂದೂ ಮಾಡಲಾರಿರಿ. ಅದು ಅಸಾಧ್ಯ. ಒಂದು ವೇಳೆ ನೀನು ನಿನ್ನ ಜೀವಿತವನ್ನು ಸಂಪೂರ್ಣವಾಗಿ ದೇವರಿಗೆ ಕೊಟ್ಟರೆ ಆತನು ಅದನ್ನು ಅಸ್ತವ್ಯಸ್ತ ಮಾಡುತ್ತಾನೆ ಮತ್ತು ನೀವು ಸಂತೋಷದಿಂದ ಇರುವುದಿಲ್ಲ ಎಂಬುದಾಗಿ ಸೈತಾನನು ಮನದಟ್ಟು ಮಾಡಲು ಬಹಳ ಪ್ರಯತ್ನ ಮಾಡುತ್ತಾನೆ. ಮತ್ತು ನೀವು ಯಾವ ಕೆಲಸವನ್ನು ಮಾಡಬೇಕು ಎಂಬುದಾಗಿ ದೇವರ ಬಳಿ ಕೇಳಬೇಡಿರಿ. ಯಾಕೆಂದರೆ ಜಗತ್ತಿನಲ್ಲೇ ಅತಿ ಕಷ್ಟಕರ ಕೆಲಸವನ್ನು ಆರಿಸಿ ಅದನ್ನು ಮಾಡಲು ಹೇಳುತ್ತಾನೆ, ಯಾವ ಹುಡುಗಿಯನ್ನು ಮದುವೆಯಾಗಬೇಕೆಂದು ಕೇಳಬೇಡಿರಿ ಆತನು ಜಗತ್ತಿನಲ್ಲಿ ಬಹಳ ಕುರೂಪಿಯಾದ ಹುಡುಗಿಯನ್ನು ಹುಡುಕಿ ಆಕೆಯನ್ನು ಮದುವೆಯಾಗಲು ಹೇಳುತ್ತಾನೆ, ಈ ತರಹದ ಚಿತ್ರಣವನ್ನು ಅನೇಕ ಯೌವನಸ್ತರ ಮನಸ್ಸಿನಲ್ಲಿ ಸೈತಾನನು ದೇವರ ಬಗ್ಗೆ ಚಿತ್ರಿಸಿದ್ದಾನೆ.
ಒಂದು ವೇಳೆ ಅದು ಹಾಗಿರದಿದ್ದರೆ ಯಾಕೆ ಪ್ರತಿಯೊಂದು ಯೌವನಸ್ತನು ತನ್ನ ಪ್ರತಿಯೊಂದನ್ನು ಯೇಸುವಿಗೆ ಅರ್ಪಿಸುವುದಿಲ್ಲ? ಹಾಗೆ ಮಾಡಲು ಸೈತಾನನು ಅವರಲ್ಲಿ ಭಯವನ್ನು ತಂದಿದ್ದಾನೆ. ಯಾಕೆ ಯೌವನಸ್ತನು ತನ್ನ ಐಶ್ವರ್ಯವನ್ನು ಬಡವರಿಗೆ ಕೊಡಲು ಹಿಂದೇಟು ಹಾಕಿದನು? ಯಾಕೆಂದರೆ ದೇವರು ತನ್ನ ಜೀವಿತವನ್ನು ಅಸ್ತವ್ಯಸ್ತ ಮಾಡುತ್ತಾನೆ, ದೇವರು ತನ್ನನ್ನು ಬಡವನಾಗಿ ಮಾಡಲು ಇದ್ದಾನೆ ಎಂಬುದಾಗಿ ಯೋಚಿಸಿದನು. ಅವನಿಗೆ ಬಡ ಮನೆಯಲ್ಲಿ ವಾಸಿಸುವುದು ಬೇಡವಾಗಿತ್ತು. ಸತ್ಯವೇದದಲ್ಲಿ ಅನೇಕ ಆಜ್ಞೆಗಳಿವೆ. ಅದನ್ನು ಕ್ರೈಸ್ತರು ಕೈಗೊಂಡು ನಡಿಯಲು ಹಿಂದೆಗೆಯುತ್ತಾರೆ. ಯಾಕೆಂದರೆ ದೇವರು ತಮ್ಮ ಜೀವಿತವನ್ನು ಅಸ್ತವ್ಯಸ್ತ ಮಾಡುತ್ತಾರೆ ಎಂಬುದಾಗಿ ಅಂದುಕೊಳ್ಳುತ್ತಾರೆ. ದೇವರು ತಮ್ಮ ಸಂತೋಷವನ್ನು ನಾಶ ಮಾಡಿ ಎಲ್ಲವನ್ನು ತೆಗೆದುಕೊಳ್ಳುತ್ತಾರೆ ಎಂಬದಾಗಿ ಅಂದುಕೊಳ್ಳುತ್ತಾರೆ. ದೇವರು ಅವರಿಗೆ ಇರುವುದಕ್ಕಿಂತ ಬಹಳ ಉತ್ತಮವಾಗಿರುವುದನ್ನು ಬೇರೇನನ್ನೋ ಕೊಡಲು ಬಂದಿದ್ದಾರೆ. ಅವರಲ್ಲಿರುವುದನ್ನು ತೆಗೆದುಕೊಳ್ಳುವುದಕ್ಕಾಗಿ ಬಂದಿಲ್ಲ. ಅವರು ಕೇವಲ ತಮಗಿರುವುದೆಲ್ಲವನ್ನು ಅರ್ಪಿಸುವುದರಿಂದ ಹಿಂದೆಂದೂ ಜೀವಿಸದಂಥ ಜೀವಿತವನ್ನು ಜೀವಿಸಲು ಸಾಧ್ಯ ಎಂಬುದನ್ನು ಕೈಗೂಡಿಸಲು ಆತನು ಬಂದಿದ್ದಾನೆ ಎಂಬುದನ್ನು ಗ್ರಹಿಸಲಾರರು. ಇದನ್ನು ನಾನು 21 ವಯಸ್ಸಿನವನಾಗಿರುವಾಗಲೇ ತಿಳಿದುಕೊಂಡಿದ್ದಕ್ಕೆ ಬಹಳವಾಗಿ ಸಂತೋಷೀಸುತ್ತೇನೆ. ಇಂದು 40 ವರ್ಷಗಳ ನಂತರ ನನ್ನ ಸಾಕ್ಷಿಯೇನೆಂದರೆ, ಆತನು ನನ್ನ ಜೀವಿತದ ಬಗ್ಗೆ ಯೋಜಿಸಿದ್ದಕ್ಕಿಂತ ಉತ್ತಮವಾಗಿ ನನಗೆ ಯೋಜಿಸಲು ಆಗುತ್ತಿರಲಿಲ್ಲ. ಈ 40 ವರ್ಷ ಹೇಗಿರುತ್ತದೆ ಎಂಬುದಾಗಿ ಎಂದಿಗೂ ತೋರಿಸಲಿಲ್ಲ. ಆತನು ಅದನ್ನು ದಿನದಿಂದ ದಿನಕ್ಕೆ ತೋರಿಸಿಕೊಟ್ಟನು. ಆತನು ಅದನ್ನೇ ನಿಮಗೂ ಸಹ ಮಾಡುತ್ತಾನೆ.
ಸೈತಾನನು ಏದೇನ್ ತೋಟದಲ್ಲಿ ಹವ್ವಳ ಬಳಿಗೆ ಬಂದಾಗ ತಿನ್ನಬಾರದ ಹಣ್ಣನ್ನು ತಿನ್ನುವಂತೆ ಶೋಧಿಸಿದನು ಎಂಬುದಾಗಿ ನೋಡುತ್ತೇವೆ. ಸೈತಾನನು ಅವಳ ಬಳಿ ಮಾತನಾಡುವಾಗ ಅದರ ಹಿಂದೆ ಸುಳ್ಳು ಇತ್ತು. ಸೈತಾನನು ಹವ್ವಳಿಗೆ- ಹವ್ವಳೇ, ದೇವರು ನಿನ್ನನ್ನು ನಿಜವಾಗಲು ಪ್ರೀತಿಸುವುದಿಲ್ಲ, ಆತನು ಪ್ರೀತಿಸಿದ್ದರೆ ಅವನು ಈ ಮರದ ಹಣ್ಣನ್ನು ನಿನಗೆ ತಿನ್ನಲು ಬಿಡುತ್ತಿದ್ದ. ಇವತ್ತಿಗೂ ಸಹ ಈ ರೀತಿಯಾಗಿ ಸೈತಾನನು ನಮ್ಮ ಬಳಿಗೆ ಬರುತ್ತಾನೆ. ಯಾಕೆ ದೇವರು ಆ ನಿನ್ನ ಪ್ರಾರ್ಥನೆಯನ್ನು ಉತ್ತರಿಸಿಲ್ಲ? ಯಾಕೆಂದರೆ ಆತನು ನಿಜವಾಗಲೂ ನಿನ್ನನ್ನು ಪ್ರೀತಿಸುವುದಿಲ್ಲ. ಯಾಕೆ ಆತನು ನಿನಗೆ ಬಹಳಷ್ಟು ಬೇಕಾಗಿದ್ದರೂ ಸಹ ಆ ವಸ್ತುಗಳನ್ನು ಕೊಡಲಿಲ್ಲ? ಯಾಕೆಂದರೆ ಆತನು ನಿನ್ನನ್ನು ನಿಜವಾಗಲೂ ಪ್ರೀತಿಸುವುದಿಲ್ಲ. ಯಾಕೆ ಆತನು ನಿನ್ನನ್ನು ಆ ಬೇರೆ ವ್ಯಕ್ತಿಯಂತೆ ಮಾಡಿಲ್ಲ? ಯಾಕೆಂದರೆ ಆತನು ನಿನ್ನನ್ನು ನಿಜವಾಗಲು ಪ್ರೀತಿಸುವುದಿಲ್ಲ. ಹವ್ವಳು ಆ ಸುಳ್ಳನ್ನು ತನ್ನ ಮನಸ್ಸಿನಲ್ಲಿ ಹೌದು ದೇವರು ನಿಜವಾಗಲೂ ನನ್ನನ್ನು ಪ್ರೀತಿಸುವುದಿಲ್ಲ ಎಂಬುದು ಸತ್ಯ ಎಂಬುದಾಗಿ ನಂಬಿದ ನಂತರವೇ ಆಕೆಯು ಪಾಪ ಮಾಡಿ ಆ ಹಣ್ಣನ್ನು ತಿಂದಳು. ಅವಳ ವಿಫಲತೆಯ ಮೂಲ ಕಾರಣ ಅವಿಧೇಯತೆ ಮಾತ್ರವಲ್ಲ; ಅದರೊಳಗೆ ಅಡಗಿದ್ದ ಗಂಭೀರವಾದ ಪಾಪವು ದೇವರ ಮೇಲಿನ ಅವಿಶ್ವಾಸವಾಗಿತ್ತು. ಒಂದು ವೇಳೆ ಆಕೆ ಸೈತಾನನನ್ನು ನಂಬಿರಲಿಲ್ಲವಾಗಿದ್ದರೆ, ಅದರ ಪರಿಣಾಮ ಏನಾಗುತ್ತಿತ್ತು ಎಂಬುದಾಗಿ ಆಲೋಚಿಸಿ ನೋಡಿ. ಆಕೆಯು ಸೈತಾನನಿಗೆ ಈ ರೀತಿ ಹೇಳಬಹುದಾಗಿತ್ತು: “ಹೌದು ಆತನು ನನ್ನನ್ನು ಪ್ರೀತಿಸುತ್ತಿಲ್ಲ ಎಂಬುದಾಗಿ ಕಾಣುತ್ತದೆ, ಆ ರಮ್ಯಾವಾದ ಸುಂದರವಾದ ಹಣ್ಣನ್ನು ಏಕೆ ತಿನ್ನಬಾರದೆಂದು ಆತನು ಹೇಳಿದನು ಎಂಬುದಾಗಿ ನನಗೆ ಅರ್ಥವಾಗದಿದ್ದರೂ ಸಹ ,ಸೈತಾನನೇ, ಆತನ ಜ್ಞಾನವು ನನ್ನ ಜ್ಞಾನಕ್ಕಿಂತ ಉನ್ನತವಾದದ್ದು, ಅದು ಒಂದು ಒಳ್ಳೆಯ ಉದ್ದೇಶವಾಗಿಯೇ ಇರಬೇಕು. ಆದರೆ ಒಂದು ಸಂಗತಿ ನನಗೆ ಖಚಿತ, ಸೈತಾನನೇ, ದೇವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ಆತನು ನಾನು ಆ ಹಣ್ಣನ್ನು ತಿನ್ನಬಾರದೆಂದು ಹೇಳಿದರೆ ಅದು ಅರ್ಥವಾಗದಿದ್ದರೂ ಸಹ ,ಅದು ನನ್ನ ಒಳ್ಳೆಯದಕ್ಕಾಗಿಯೇ ಇರಬಹುದು”. ಈ ರೀತಿಯಾಗಿಯೇ ನಾವು ಶೋಧನೆಯನ್ನು ಜಯಿಸಬಹುದು ದೇವರು ನಮಗೆ ಅನೇಕ ಸಂಗತಿಗಳನ್ನು ಮಾಡಬಾರದೆಂಬುದಾಗಿ ಹೇಳಿರುತ್ತಾರೆ. ಆದರೆ ಸೈತಾನನು ನಮ್ಮ ಬಳಿಗೆ ಬಂದು, “ಏಕೆ ಒಮ್ಮೆ ಒಪ್ಪಿಕೊಂಡು ನಿನ್ನ ಮನಸಿನ ಇಷ್ಟವನ್ನು ಅನುಭವಿಸಬಾರದು?” ಎಂದು ಹೇಳುತ್ತಾನೆ. ಆಗ ನಾವು ಯಾಕೆ ಅದನ್ನು ಮಾಡಬಾರದೆಂದು ನನಗೆ ಗೊತ್ತಿಲ್ಲದಿದ್ದರೂ ಸಹ ಅದು ನನ್ನ ಒಳ್ಳೆಯದಕ್ಕಾಗಿಯೇ ಎಂದು ನಂಬಬೇಕು. ದೇವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ಆತನ ಮೇಲಿನ ಪ್ರೀತಿಯು ನಾನು ಅದರಲ್ಲಿ ಪಾಲುಗಾರನಾಗದಂತೆ ನನ್ನನ್ನು ತಡೆಯುತ್ತದೆ. ಅದೇ ರೀತಿ ದೇವರು ನಮಗೆ ಕೆಲವು ಸಂಗತಿಗಳನ್ನು ಮಾಡಲು ಹೇಳುವಾಗ ಅದು ಕಷ್ಟಕರವಾಗಿ ಕಾಣುತ್ತಿದ್ದರೂ ಆತನ ಮೇಲಿನ ಪ್ರೀತಿಯ ನಿಮಿತ್ತ ನಾವು ಅದನ್ನು ಮಾಡುವಂತೆ ಮಾಡುತ್ತದೆ ಎಂಬದಾಗಿ ನಮಗೆ ಗೊತ್ತಿದೆ.
ಪವಿತ್ರತೆ—ಹೆಸರೇ ಭಯವನ್ನು ಹುಟ್ಟಿಸುತ್ತದೆ ಹಲವಾರು ಕ್ರೈಸ್ತರ ಹೃದಯದಲ್ಲಿ. ನಾನು ಇದನ್ನು ಅರ್ಥಮಾಡಿಕೊಳ್ಳುವ ಮೊದಲು, ನನ್ನ ಮನಸ್ಸು ಹೀಗೆ ಚಿಂತಿಸುತ್ತಿತ್ತು: “ನಾನು ಸದಾ ಪವಿತ್ರನಾಗಿರಬೇಕು! ಎಷ್ಟೊಂದು ಭಯಂಕರವಾದ ಭಾರವಿದು!”
ಸಹೋದರರೇ ಆರೋಗ್ಯ ಎಂಬ ಪದದ ಬಗ್ಗೆ ನಿಮಗೆ ಭಯವಿದೆಯೇ ಎಂದು ನಿಮ್ಮನ್ನು ಕೇಳಲು ಬಯಸುತ್ತೇನೆ. ಸಂಪೂರ್ಣವಾಗಿ 100%, 365 ದಿನಗಳು ವರ್ಷದಲ್ಲಿ ಆರೋಗ್ಯವಾಗಿರಲು ನಾವು ಯಾಕೆ ಭಯಪಡುವುದಿಲ್ಲ? ಯಾಕೆಂದರೆ ಆರೋಗ್ಯ ನಮಗೆ ಒಳ್ಳೆಯದು ಎಂದು ಗೊತ್ತಿದೆ. ಯಾವುದರ ಬಗ್ಗೆ ನಾವು ಭಯ ಪಡುತ್ತೇವೆ? ನಾವು ಅನಾರೋಗ್ಯದ ಬಗ್ಗೆ ಭಯಪಡುತ್ತೇವೆ. ನಿಮ್ಮಲ್ಲಿ ಎಷ್ಟು ಜನಕ್ಕೆ ಸ್ವಲ್ಪಮಟ್ಟಿಗೆ ರೋಗ ಬೇಕು? ಪರಿಶುದ್ಧತೆ ಆತ್ಮಿಕ ಆರೋಗ್ಯವೇ ಆಗಿದೆ. ಯಾಕೆ ನಾವು ಅದರ ಬಗ್ಗೆ ಭಯ ಪಡುತ್ತೇವೆ. ಯಾಕೆಂದರೆ ಸೈತಾನನು ಅನೇಕ ವರ್ಷಗಳಿಂದ ನಿಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾನೆ. ಪರಿಶುದ್ಧತೆಯು ನಮ್ಮ ಮೇಲೆ ದೇವರ ಪ್ರೀತಿಯ ಒಂದು ಅರ್ಥವಾಗಿದೆ. ಒಂದು ವೇಳೆ ನನ್ನ ಸಣ್ಣ ಮಗುವಿಗೆ ಕುಷ್ಟರೋಗವಿದ್ದರೆ ನಾನು ಡಾಕ್ಟರ್ ಬಳಿ ತೆಗೆದುಕೊಂಡು ಹೋಗಿ ಡಾಕ್ಟರ್ ಅವನನ್ನು ಸಂಪೂರ್ಣವಾಗಿ ಸ್ವಸ್ಥ ಪಡಿಸಬೇಡಿ ಸ್ವಲ್ಪ ಕುಷ್ಟರೋಗ ಹಾಗೆ ಇರಲಿ ಅದು ಅವನನ್ನು ತಗ್ಗಿಸಿಕೊಳ್ಳುವಂತೆ ಮಾಡುತ್ತದೆ ಎಂದ ಹಾಗೆ. ಈ ದಿನಗಳಲ್ಲಿ ಜನರು ಈ ರೀತಿ ಇದ್ದಾರೆ. ನಾನು ತಗ್ಗಿದ ಭಾವದವನಾಗಿರಬೇಕಾದರೆ ಆಗಾಗ ಪಾಪ ಮಾಡಬೇಕು ಎಂಬುದಾಗಿ ಯೋಚಿಸುತ್ತಾರೆ. ಅವನನ್ನು ತಗ್ಗಿಸಲು ಅವನಿಗೆ ಸ್ವಲ್ಪ ಕುಷ್ಟವನ್ನುಹಾಗೆಯೇ ಬಿಡಿ ಎಂದು ನಾನು ಡಾಕ್ಟರ್ ಗೆ ಹೇಳಿದ್ದಕ್ಕೆ ಸಮ.
ಅವನು ಪರಿಪೂರ್ಣ ಆರೋಗ್ಯದಿಂದಿದ್ದರೆ ಗರ್ವಪಡುತ್ತಾನೆ ಎಂದು ಯಾವ ಒಳ್ಳೆ ತಂದೆಯೂ ಡಾಕ್ಟರಿಗೆ ಆ ರೀತಿ ಮಾಡಲು ಹೇಳುವುದಿಲ್ಲ. ನಮಗೆ ಅವನು ಸಂಪೂರ್ಣವಾಗಿ ಬಿಡುಗಡೆಯಾಗಬೇಕೆಂದೆ ಬಯಸುತ್ತೇವೆ. ಒಂದು ವೇಳೆ ಅವನಿಗೆ ಕ್ಷಯ ಬಂದಿದ್ದರೆ, ಅದರಲ್ಲೂ ಸಹ ಅವನು ಸಂಪೂರ್ಣವಾಗಿ ಬಿಡುಗಡೆಯಾಗಬೇಕೆಂದು ಬಯಸುತ್ತೇವೆ. ಒಂದು ವೇಳೆ ಅದು ನಿಮ್ಮ ಮಗನಾಗಿದ್ದರೆ, ಅವನು ಎಷ್ಟರಮಟ್ಟಿಗೆ ಕ್ಷಯದಿಂದ ಗುಣಮುಖನಾಗಬೇಕೆಂದು ಬಯಸುತ್ತೀರಿ? ಶೇಕಡ 99%? ಅಥವಾ 100%? ಎಷ್ಟು ನೀವು ಪಾಪದಿಂದ ಬಿಡುಗಡೆಯಾಗಬೇಕೆಂದು ಬಯಸುತ್ತೀರಿ? ಶೇಕಡ 90%?. ನಿಮ್ಮಲ್ಲಿ ಕೆಲವರು ಬಹುಶ 65% ಬಿಡುಗಡೆ ಹೊಂದಿದre ಸಂತೋಷಸುತ್ತೀರಿ. ನಿಮ್ಮ ಮಗ ಶೇಕಡ 65% ಕ್ಷಯದಿಂದ ಬಿಡುಗಡೆ ಹೊಂದಿದರೆ ನೀವು ತೃಪ್ತರಾಗಿರುತ್ತೀರಾ? ನೀವು ಪಾಪದಿಂದ 65% ಬಿಡುಗಡೆ ಹೊಂದಿದರೆ ಯಾಕೆ ತೃಪ್ತರಾಗಿದ್ದೀರಾ? ಮುಂಚೆಗಿಂತ ಈಗ ಪರವಾಗಿಲ್ಲ ಎಂದು ನೀವು ಹೇಳುತ್ತೀರಾ? ಆದರೂ ಸಹ ನೀವು ಅಲ್ಲೇ ಇರಲು ಇಷ್ಟಪಡುತ್ತೀರಾ? ಪರಿಶುದ್ಧತೆ ಆತ್ಮಿಕ ಆರೋಗ್ಯ. ಪಾಪ ಆತ್ಮಿಕ ರೋಗ. ಆದರೆ ಸೈತಾನನು ನಾವು ಪರಿಶುದ್ಧರಾಗಿರುವುದರ ಬಗ್ಗೆ ನಮ್ಮ ಕಣ್ಣುಗಳನ್ನು ಕುರುಡಾಗಿ ಮಾಡಿದ್ದಾನೆ. ಮತ್ತು ನಾವು ಪಾಪ ಮಾಡಲು ಅನೇಕ ಕಾರಣಗಳನ್ನು ಯೋಚಿಸುತ್ತೇವೆ. ಅದು ನಮ್ಮನ್ನು ತಗ್ಗಿಸಿಕೊಂಡಿರುವಂತೆ ಮಾಡುತ್ತದೆ ಎಂದು ಅನೇಕ ಮೂರ್ಖ ತರ್ಕಗಳನ್ನು ನಮಗೆ ಹೇಳುತ್ತಾನೆ.
ದೇವರು ನಮ್ಮನ್ನು ಪರಿಶುದ್ಧರಾಗಿರಲು ಕರೆಯುವಾಗ, ನನ್ನ ಸಣ್ಣ ಮಕ್ಕಳು ಸಹ ಸಂಪೂರ್ಣವಾಗಿ ಆರೋಗ್ಯದಿಂದಿರಬೇಕೆಂಬುದೇ ನನ್ನ ಆಸೆಯಾಗಿದೆ. ಅವರು ಎಲ್ಲಾ ರೋಗಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಬೇಕು. ಒಂದು ವೇಳೆ ಅವರಿಗೆ ಸ್ವಲ್ಪ ಜ್ವರ ಬಂದರೂ ಸಹ ನನಗೆ ಚಿಂತೆ ಇದೆ. ಅವರಿಗೆ ಸ್ವಲ್ಪ ಜ್ವರ ಸಹ ಬರಬಾರದು ಅವರಿಗೆ ಸ್ವಲ್ಪ ಶೀತ ಸಹ ಆಗಬಾರದು ಎಂಬುದು ನನ್ನ ಆಸೆ. ಅದೇ ತರಹ ನಮ್ಮ ದೇವರು ಸಹ ನಮ್ಮ ಬಗ್ಗೆ ಚಿಂತಿಸುತ್ತಾರೆ. ಆತನ ಪ್ರೀತಿ ಎಷ್ಟು ದೊಡ್ಡದಂದರೆ ನಾವು ಪ್ರತಿಯೊಂದು ಪಾಪದಿಂದ ಪರಿಪೂರ್ಣವಾಗಿ ಶುದ್ಧರಾಗಿರಬೇಕೆಂಬುದೇ. ಆತನಿಗೆ ನಾವು ನಮ್ಮ ಕೆಟ್ಟ ಆಲೋಚನೆಯಿಂದ ಕೇವಲ 65% ಮಾತ್ರವಲ್ಲ, 90 %ವೂ ಸಹ ಅಲ್ಲಾ. ಆದರೆ ನೂರು %. ಒಂದು ವೇಳೆ ವೈದ್ಯರು ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ, ಆಗ ನಾನು ಅದು ಸಮಯ ತೆಗೆದುಕೊಳ್ಳಲಿ ಆದರೆ ನನಗೆ ಅವನು ಸಂಪೂರ್ಣ ಬಿಡುಗಡೆ ನೂರು % ಆಗಬೇಕೆಂದು ಹೇಳುತ್ತೇನೆ. ಆತನಿಗೆ ನಾವು ಕೋಪದಿಂದ ನೂರು % ಬಿಡುಗಡೆ ಹೊಂದಬೇಕೆಂಬುದೇ ಆಸೆ. ಇವು ಕೇವಲ ನನ್ನ ಮಾತುಗಳಲ್ಲ ಅದು ಎಫೆಸ ಪತ್ರಿಕೆ 4 ರಲ್ಲಿ ಹೇಳಲ್ಪಟ್ಟಿದೆ . ಕಳ್ಳತನ ಮಾಡುವವನು ಇನ್ನು ಮೇಲೆ ಕಳ್ಳತನ ಮಾಡದಿರಲಿ.? 80%? 90 %? ಅಥವಾ ನೂರು %. ಒಂದು ವೇಳೆ ನೀವು ಕೇವಲ 10% ಮಾತ್ರ ಕಳುವು ಮಾಡುತ್ತಿದ್ದರೆ, ಸಂತೋಷಿಸುತ್ತೀರಾ? ನಿಮಗೆ ಒಳ್ಳೆಯ ಮನಸ್ಸಾಕ್ಷಿ ಇರುತ್ತದೆಯೇ? ಇಲ್ಲ. ಇಲ್ಲಿರುವ ಒಬ್ಬ ವ್ಯಕ್ತಿಯು ಸಹ ಸಮಯದ 1% ಕಳುವು ಮಾಡುತ್ತಿದ್ದಿದ್ದು, ಶುದ್ಧ ಮನಸ್ಸಾಕ್ಷಿ ಯುಳ್ಳವರಾಗಿರುತ್ತಾರೆಂದು ನಾನು ಯೋಚಿಸಲಾಗುವುದಿಲ್ಲ. ನಾವು ಮುಂದಿನ ವಚನಕ್ಕೆ ಹೋಗುವ. ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು.
ಹಿಂದಿನ ವಚನಕ್ಕೂ ಮತ್ತು ಈ ವಚನಕ್ಕೂ ಇರುವ ವ್ಯತ್ಯಾಸವೇನು? ನಿಮ್ಮ ಮಾತು 90% ಒಳ್ಳೆಯದಾಗಿದ್ದರೆ ನೀವು ಸಂತೋಷಿಸುತ್ತಿರೋ? ನಾವು ಕೇವಲ ಸ್ವಲ್ಪಕಳವು ಮಾಡುವಾಗ ಆದಂತೆ ,ನಮ್ಮ ಬಾಯೊಳಗಿಂದ ಕೆಲವು ಕರುಣೆ ಇಲ್ಲದ ಮಾತುಗಳು ಹೊರಡುವಾಗ ನಮಗೆ ಮನವರಿಕೆ ಆಗದಿರುವುದು ಹೇಗೆ? ಸೈತಾನನು ನಾವು ದೇವರ ವಾಕ್ಯಗಳನ್ನು ಓದುವಾಗ ಅವುಗಳನ್ನು ಆರಿಸಿಕೊಳ್ಳುವಂತೆ ಮಾಡಿ, ನಾವು ಓದುವಾಗ ಈಗ ಇದು ಮುಖ್ಯವಾದದ್ದು ಎಂದು ಮುಂದಿನ ವಚನಕ್ಕೆ ಹೋದಾಗ ಈಗ ಇದು ಬಹಳ ಪ್ರಾಮುಖ್ಯವಲ್ಲ ಇನ್ನು ಕೆಳಕ್ಕೆ ಹೋಗುವ ಎಂದು ಮುಂದುವರಿಸುತ್ತಾನೆ. ವಚನ 31 ಎಲ್ಲಾ ದ್ವೇಷ ,ಕೋಪ ,ಕಲಹ, ದೂಷಣೆ ಇವುಗಳನ್ನು ಸಕಲ ವಿಧವಾದ ದುಷ್ಟತನವನ್ನು ನಿಮ್ಮಿಂದ ದೂರ ಮಾಡಿರಿ ಎಂದಿದೆ.
ಒಳ್ಳೆಯದು, ಒಂದು ವೇಳೆ ನಾನು ಎಲ್ಲಾ ಕೋಪವನ್ನು ನನ್ನ ಜೀವಿತದಿಂದ ತೆಗೆದು ಹಾಕಿದರೆ ಇನ್ನು ಎಷ್ಟು ಉಳಿಯುತ್ತದೆ? ನಾನು ಅದರ ಬಗ್ಗೆ ಭಯಪಡುತ್ತೆನೋ? ಒಂದು ವೇಳೆ ಎಲ್ಲಾ ದ್ವೇಷ ,ಕೋಪ ,ಕಲಹ, ದೂಷಣೆ ಇವುಗಳನ್ನು ಸಕಲ ವಿಧವಾದ ದುಷ್ಟತನವನ್ನು ನಿಮ್ಮಿಂದ ದೂರ ಮಾಡಿರಿ ಎಂದಿದೆ. ಒಳ್ಳೆಯದು, ಒಂದು ವೇಳೆ ನಾನು ಎಲ್ಲಾ ಕೋಪವನ್ನು ನನ್ನ ಜೀವಿತದಿಂದ ತೆಗೆದು ಹಾಕಿದರೆ ಇನ್ನು ಎಷ್ಟು ಉಳಿಯುತ್ತದೆ? ನಾನು ಅದರ ಬಗ್ಗೆ ಭಯಪಡುತ್ತೆನೋ? ಒಂದು ವೇಳೆ ಎಲ್ಲಾ ಕ್ಷಯ ,ಎಲ್ಲಾ ಕುಷ್ಠ ,ಎಲ್ಲಾ ಏಡ್ಸ್ ಮತ್ತು ಎಲ್ಲಾ ತರದ ಕಾಯಿಲೆಗಳು ನಮ್ಮಿಂದ ದೂರವಾದಾಗ ,ನಾವು ಅದರಿಂದ ಭಯಪಡುತ್ತೇವೋ? ಇಲ್ಲ. ಅದೇ ನಮಗೆ ಬೇಕಾಗಿರುವುದು. ಇದೇ ನಮ್ಮ ದೇವರಿಗೆ ನಮ್ಮ ಬಗ್ಗೆ ಬೇಕಾಗಿರುವುದು ಎಂದು ಖಂಡಿತವಾಗಿ ನಾನು ನಿಮಗೆ ಹೇಳಬಯಸುತ್ತೇನೆ. ಪರಿಶುದ್ಧತೆಯು ದೇವರ ಪ್ರೀತಿಯ ಅಭಿವ್ಯಕ್ತವಾಗಿದೆ. ಒಬ್ಬ ತಂದೆ ತಾಯಿಯು ಅವರ ಮಗುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಆ ಮಗು ಸಂಪೂರ್ಣವಾಗಿ ಆರೋಗ್ಯವಾಗಬೇಕೆಂದು ಹೇಗೆ ಬಯಸುತ್ತಾರೆ ಎಂಬುದನ್ನುಯೋಚಿಸಿರಿ.
ಅದೇ ರೀತಿಯೇ ನಮ್ಮ ದೇವರು ಆತ್ಮಿಕವಾಗಿ ನಾವು ಸಂಪೂರ್ಣವಾಗಿ ಆರೋಗ್ಯವಾಗಿ ಇರಬೇಕೆಂದು ಆಶಿಸುತ್ತಾರೆ. ನಾವು ನೋಡುವಂತ ನೋಟದಲ್ಲಿ, ನಾವು ಮಾತನಾಡುವಂಥ ಮಾತಿನ ರೀತಿ, ಮತ್ತು ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಪಾಪದಿಂದ ಬಿಡುಗಡೆ ಹೊಂದಬೇಕೆಂಬುದನ್ನು ದೇವರು ಬಯಸುತ್ತಾರೆ. ಸೈತಾನನು ಪರಿಶುದ್ಧತೆಯನ್ನು ಒಂದು ದೊಡ್ಡ ಭಾರವಾಗಿ ಧರ್ಮಾಂಧ ಜನರು ಮಾತನಾಡುವ ವಂತದ್ದನ್ನು ಚಿತ್ರೀಕರಿಸುವುದರಲ್ಲಿ ಜಯಗಳಿಸಿದ್ದಾನೆ. ಜನರು ಪರಿಪೂರ್ಣತೆ ಎಂಬ ಪದದ ಬಗ್ಗೆ ಭಯಪಡುತ್ತಾರೆ. ಇದು ನನ್ನ ದೇಶದಲ್ಲಿ ನಿಜವಾಗಿದೆ ಎಂಬುದು ನನಗೆ ತಿಳಿದಿದೆ. ನಾವು ಪರಿಪೂರ್ಣತೆಯ ಕಡೆಗೆ ಮುಂದುವರಿಯುವ ಎಂಬ ಒಂದು ಸರಳ ವಾಕ್ಯವನ್ನು ಬೋಧಿಸಿದಕ್ಕಾಗಿ ಪ್ರತಿ ಕ್ರೈಸ್ತ ಗುಂಪಿನವರು ಸುಮಾರು 25 ವರ್ಷಗಳವರೆಗೂ ನನ್ನನ್ನು ಟೀಕಿಸುತ್ತಾ ಬಂದರು. ನಾನು ಅವರಿಗೆ ಹೇಳುವುದು ನನ್ನ ಬಗ್ಗೆ ನೀವು ಏನು ಯೋಚಿಸುತ್ತಿರೋ ಅದು ನನ್ನಲ್ಲಿ ಯಾವ ವ್ಯತ್ಯಾಸವನ್ನು ಸಹ ತರುವುದಿಲ್ಲ. ನನಗೆ ಬೋಧಿಸಲು ದೇವರು ಹೇಳಿದ್ದಾರೆ ನಾನು ಯೇಸುವು ಮತ್ತೆ ಬರುವ ತನಕ ಅದನ್ನು ಬೋಧಿಸುತ್ತೇನೆ. ನಾವೆಲ್ಲರೂ ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಪೂರ್ಣತೆಯ ಕಡೆಗೆ ಸಾಗುವ. ನನ್ನ ಹೆಂಡತಿಯ ಜೊತೆ ನನ್ನ ಸಂಬಂಧವು ಹಿಂದೆಂದೂ ಇಲ್ಲದಕ್ಕಿಂತ ಉತ್ತಮವಾಗಿರಬೇಕು ಎಂಬುದು ನನ್ನ ಬಯಕೆ. ಹಣದ ಮೇಲಿನ ಪ್ರೀತಿ ಎಂದೆಂದೂ ಇಲ್ಲದ ರೀತಿಯಲ್ಲಿ ನನ್ನ ಜೀವಿತದಲ್ಲಿ ಹೆಚ್ಚೆಚ್ಚಾಗಿ ದೂರವಾಗಬೇಕು. ಪರಿಪೂರ್ಣತೆಯ ಕಡೆಗೆ ಸಾಗುವುದೆಂದರೆ ,ಹಿಂದೆಂದೂ ನನ್ನ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ಸಾಗದಂತ ರೀತಿಯಲ್ಲಿ ಮುಂದೆ ಹೋಗುವುದು. ಯಾರು ಸಹ ಬೆಟ್ಟದ ತುದಿಯನ್ನು ಒಂದು ದಿನದಲ್ಲಿ ತಲುಪಲು ಸಾಧ್ಯವಿಲ್ಲ ಅದು ಆತ್ಮಿಕ ಆರೋಗ್ಯದ ಕಡೆಗೆ ಸಾಗುವುದು.
ಒಂದು ದೇಶದಲ್ಲಿ ಆರೋಗ್ಯಕ್ಕಾಗಿ ಜನರಿಗೆ ಅತ್ಯುತ್ಸಾಹ ಏಕೆಂದರೆ ಜನರು ಜಾಗಿಂಗ್ ಮಾಡುವುದರಿಂದ ಅವರ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಜನರು ಏನನ್ನು ತಿನ್ನುತ್ತಾರೋ ಅದರ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತಾರೆ. ಸಂಸ್ಕರಿಸಿದ ಆಹಾರದ ಪೊಟ್ಟಣಗಳ ಮೇಲೆಯೂ ಸಹ ಆರೋಗ್ಯದ ಕುರಿತಾಗಿ ಬರೆಯಲ್ಪಟ್ಟಿರುತ್ತದೆ. ಜನರು ಶಾರೀರಿಕ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಾಗಿದ್ದಾರೆ. ಆತ್ಮಿಕ ಆರೋಗ್ಯವನ್ನು ಕೆಡಿಸುವ ಪಾಪದ ಬಗ್ಗೆ ಯಾಕೆ ಇವರು ಬಹಳ ಎಚ್ಚರಿಕೆ ವಹಿಸುವುದಿಲ್ಲ? ವಿಶ್ವಾಸಿಗಳಿಗೆ ಇದರ ಬಗ್ಗೆ ಬೆಳಕಿದೆ, ಆದರೆ ತಮ್ಮ ಜೀವಿತದಲ್ಲಿ ಪಾಪದ ಬಗ್ಗೆ ಚಿಂತಿಸುತ್ತಿಲ್ಲ? ಹೇಗೆ ಒಬ್ಬ ವ್ಯಕ್ತಿ ಇಡೀ ದಿನ ತನ್ನ ಕಣ್ಣುಗಳಿಂದ ಇಚ್ಚಿಸಿ ಅಥವಾ ಮೋಹಿಸಿ ರಾತ್ರಿ ಹೇಗೆ ಸಮಾಧಾನದಿಂದ ಮಲಗಲು ಸಾಧ್ಯ? ಇದು ಹೇಗೆ ತಾನೇ ಸಾಧ್ಯ? ಒಬ್ಬ ವಿಶ್ವಾಸಿಯು ತನ್ನ ಹೆಂಡತಿಗೆ ಕೋಪದಿಂದ ಮಾತಾಡಿ ಆ ರಾತ್ರಿ ತನ್ನ ತಲೆಯ ದಿಂಬಿನ ಮೇಲೆ ಅದಕ್ಕಾಗಿ ಕಣ್ಣೀರು ಸುರಿಸದೆ ಇರಲು ಹೇಗೆ ಸಾಧ್ಯ? ದುಃಖಿಸುವವರು ಧನ್ಯರು ಅವರು ಸಮಾಧಾನ ಹೊಂದುವರು ಎಂದು ಯೇಸು ಹೇಳಿದರು. ನೀವು ಮಾಡಿದ ಪಾಪದ ಕುರಿತಾಗಿ ದುಃಖಿಸುವಾಗ ಬಹಳ ಬೇಗ ಜಯಗಳಿಸುತ್ತೀರಿ.
ಯಾವುದೋ ರೀತಿಯಲ್ಲಿ ಆ ದಿನದಂದು ದೇವರನ್ನು ದುಃಖ ಪಡಿಸಿದಕ್ಕಾಗಿ ದುಃಖಿಸಿ ನಿಮ್ಮ ತಲೆ ದಿಂಬು ಕಣ್ಣೀರಿನಿಂದ ಒದ್ದೆಯಾದದ್ದು ಕಡೆಯ ಬಾರಿ ಯಾವಾಗ? ಬೋಧನೆಯ ಬಗ್ಗೆ ನಾವು ತರ್ಕ ಮಾಡಬಹುದು, ಆದರೆ ತಮ್ಮ ಆತ್ಮಿಕ ಸ್ಥಿತಿಯ ಬಗ್ಗೆ ದುಃಖಿಸುವಾಗ ಅಂತವರು ಬಲಹೊಂದುವರು ಮತ್ತು ಜಯಶಾಲಿಗಳಾಗಿ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟು ತಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿ ಪರಿಪೂರ್ಣ ಆತ್ಮಿಕ ಆರೋಗ್ಯವನ್ನು ಅನುಭವಿಸುವರು. ನಿಮ್ಮ ನಗುವುದು ದುಃಖವಾಗಿ ಮಾರ್ಪಡಲಿ. ದುಃಖಿಸುವುದರ ಅವಶ್ಯಕತೆ ಬಹಳವಿದೆ. ಇದರ ದೆಸೆಯಿಂದ ದೇವರ ವಿಷಯದಲ್ಲಿಯೂ ಮನುಷ್ಯರ ವಿಷಯದಲ್ಲಿಯೂ ನಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸ ಮಾಡಿಕೊಳ್ಳುತ್ತೇನೆ ಎಂದು ಅಪೋಸ್ತಲ 24:16 ರಲ್ಲಿ ಪೌಲನು ಹೇಳುತ್ತಾನೆ. ಇದು ಪೌಲನ ಜೀವಿತದ ಒಂದಾನೊಂದು ದೊಡ್ಡ ರಹಸ್ಯವಾಗಿದೆ. ಅವನು ಎಂದೂ ತಪ್ಪು ಮಾಡಲಿಲ್ಲವೆಂಬುದಾಗಿ ಅಲ್ಲ, ಅವನು ಬಹಳಷ್ಟು ಮಾಡಿದ್ದಾನೆ. ಅವನಿಗೆ ತಾನು ಎಂದೂ ತಪ್ಪನ್ನೆ ಮಾಡಲಿಲ್ಲವೆಂಬುದಾಗಿ ಜನರಿಗೆ ಅಭಿಪ್ರಾಯವನ್ನು ಕೊಡಲು ಇಷ್ಟವಿರಲಿಲ್ಲ. ಅಪೋಸ್ತಲ ಕೃತ್ಯಗಳ ಪುಸ್ತಕವನ್ನು ಯಾರು ಬರೆದರು ಎಂಬುದಾಗಿ ನಿಮಗೆ ಗೊತ್ತಿದೆಯೇ? ಲೂಕನು ಬರೆದಿದ್ದಾನೆ. ಲೂಕನು ಪೌಲನ ಬಹಳ ಸಮೀಪದ ಸಹೋದ್ಯೋಗಿ ಯಾಗಿದ್ದನು.
ಅವನು ಅಪೋಸ್ತಲರ ಕೃತ್ಯಗಳ ಪುಸ್ತಕವನ್ನು ಬರೆಯುವಾಗ, ಪೌಲನು ಮಾಡಿದ ಅನೇಕ ತಪ್ಪುಗಳನ್ನು ಬರೆಯಬಾರದೆಂದು ಅವನಿಗೆ ಅನಿಸಿರಬಹುದೆಂದು ನಾನು ಕಲ್ಪಿಸಿಕೊಳ್ಳುತ್ತೇನೆ. ಆದರೆ ಪೌಲನು ಅವನಿಗೆ, “ನಾನು ಮಾಡಿದ ಆ ಎಲ್ಲ ವಿಷಯಗಳನ್ನೂ ನೀನು ಖಚಿತವಾಗಿ ಬರೆಯಬೇಕು” ಎಂದು ಹೇಳಿರಬೇಕು. ನಾನು ಬಾರ್ನಬಸನ ಜೊತೆ ಹೇಗೆ ಜಗಳವಾಡಿ ನಾವಿಬ್ಬರು ಬೇರೆಯಾದೆವು ಎಂಬುದನ್ನು ಖಂಡಿತವಾಗಿ ಬರೆಯಬೇಕು. ನಾನು ಕ್ರೈಸ್ತನಾದ ನಂತರ ಬೇರೆ ಯಹೂದ್ಯನಂತೆ ನನ್ನ ತಲೆಯ ಕೂದಲನ್ನು ಬೋಳಿಸಿ ಮೂರ್ಖನಂತೆ ವರ್ತಿಸಿದೆ ಎಂಬುದನ್ನು ಬರೆಯಲು ಖಚಿತಪಡಿಸಿಕೋ ಎಂದನು. ತಿಮೊಥೆಯನಿಗೆ ನಾನು ಸುನ್ನತಿ ಮಾಡಿದೆನು ಎಂಬುದನ್ನು ಬರೆಯಲು ಮರೆಯಬೇಡ ಮತ್ತು ಮಹಾಯಾಜಕನನ್ನು ಸುಣ್ಣ ಹಚ್ಚಿದ ಗೋಡೆ ಎಂಬದಾಗಿ ಹೇಳುವಾಗ ಹೇಗೆ ಕಿರುಚಿದೆ ಎಂಬುದನ್ನು ಹೇಳಲು ಮರೆಯಬೇಡ. ಅದು ಪೌಲನ ದೀನತೆ. ಪೌಲನು ಬರೆಯಲು ಉತ್ತೇಜಿಸಿ ಹೇಳದ ಹೊರತು ಲೂಕ ಇವುಗಳನ್ನು ಬರೆದಿರಲಾರನು ಎಂಬುದಾಗಿ ಭಾವಿಸುತ್ತೇನೆ. ಪೌಲನು ತಾನೇ ಎಂದಿಗೂ ತಪ್ಪು ಮಾಡೇ ಇಲ್ಲ ಎಂಬುದಾಗಿ ಜನರಿಗೆ ಅಭಿಪ್ರಾಯವನ್ನು ಕೊಡುವಂತ ವ್ಯಕ್ತಿಯಲ್ಲ.
ಈ ದಿನಗಳಲ್ಲಿ ಬಹಳಷ್ಟು ಬೋಧಕರು ಈ ರೀತಿ ಇದ್ದಾರೆ. ಅನೇಕ ತಂದೆಗಳು ತಮ್ಮ ಮಕ್ಕಳಿಗೆ ಈ ತರವಾದ ಅಭಿಪ್ರಾಯವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ಮಕ್ಕಳು ಎಂದಿಗೂ ನಮಗೆ ಸಂಪೂರ್ಣವಾದ ಅಥವಾ ಯಾವ ದೋಷವಿಲ್ಲದ ತಂದೆ ಇದ್ದಾರೆ ಎಂಬುದಾಗಿ ಅಂದುಕೊಳ್ಳಬಾರದು. ಅದು ಅವರನ್ನು ಕೇವಲ ಮನಗುಂದಿಸುತ್ತದೆ. ನನ್ನ ಸಭೆಯ ಜನರು ಎಂದಿಗೂ ಸಹ ನಮಗೆ ಪರಿಪೂರ್ಣವಾದ ಸಭಾಹಿರಿಯರಿದ್ದಾರೆ ಎಂಬುದಾಗಿ ತಿಳಿದುಕೊಳ್ಳಬಾರದು. ನನ್ನ ಮಕ್ಕಳು ನಮಗೆ ಯಥಾರ್ಧವಾದ ತಂದೆ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕೆಂಬುದೇ ನನಗೆ ಬೇಕಾದುದು. ನನ್ನ ಸಭೆಯ ಜನರು ತಮಗೆ ಯತಾರ್ಥವಾದ ಸಭಾ ಹಿರಿಯರಿದ್ದಾರೆ ಅವರು ತಪ್ಪಿ ಹೋದಾಗ ನಾನು ತಪ್ಪಿ ಹೋದೆ ಎಂಬದಾಗಿ ಅದನ್ನು ಅರಿಕೆ ಮಾಡಲು ಬಯಸುತ್ತಾರೆ ಎಂಬುದನ್ನು ತಿಳಿದವರಾಗಿರಬೇಕು. ನಾನು ನಮ್ಮ ಸಭೆಯ ಚಿಕ್ಕ ಯುವ ಸಹೋದರನ ಬಳಿಗೆ ಹೋಗಿ, ಸಹೋದರನೇ ನನ್ನನ್ನು ಕ್ಷಮಿಸು, ನಿನ್ನನ್ನು ತಿದ್ದುವುದರಲ್ಲಿ ಸ್ವಲ್ಪ ಕಠಿಣವಾಗಿದ್ದೆ. ನೀನು ನನ್ನನ್ನು ಕ್ಷಮಿಸುವಿಯಾ? ಎಂಬುದಾಗಿ ಕೇಳಿದೆ. ನಾವು ಯಾರು ಪರಿಪೂರ್ಣರಲ್ಲ ದೇವರು ಮಾತ್ರ ಪರಿಪೂರ್ಣನು. ಪೌಲನು ಸಹ ತಪ್ಪುಗಳನ್ನು ಮಾಡಿದನು. ಆದರೆ ಅವನು ಯತಾರ್ಥವಾಗಿದ್ದನು. ಅವನು ತನ್ನ ಮನಸಾಕ್ಷಿಯನ್ನು ದೇವರ ಎದುರಿಗೆ ಶುದ್ಧವಾಗಿ ಇಟ್ಟುಕೊಂಡಿದ್ದನು. ಅವನು ಒಂದನೇ ತಿಮೊಥೆ 1: ರಲ್ಲಿ ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬ ತಕ್ಕದಾಗಿಯೂ, ಸರ್ವಾಂಗಿ ಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೇ: ಆ ಪಾಪಿಗಳಲ್ಲಿ ನಾನೇ ಮುಖ್ಯನು. ಆದರೆ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆ ಇಡುವವರಿಗೆ ತನ್ನ ದೀರ್ಘ ಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘ ಶಾಂತಿಯನ್ನು ತೋರ್ಪಡಿಸಿದನು ಎಂಬುದಾಗಿ ಬರೆದಿದ್ದಾನೆ.
ನಾವು ತಪ್ಪಿದ್ದೇವೆಂಬುದಾಗಿ ಯದ್ದಾರ್ಥವಾಗಿ ಒಪ್ಪಿಕೊಳ್ಳುವಾಗ ದೇವರು ನಮ್ಮನ್ನು ನೋಡಿ ನಮ್ಮ ಜೀವಿತದಲ್ಲಿ ಇನ್ನೂ ಉನ್ನತವಾದ ಶುದ್ಧತೆಗೆ ನಡೆಸಲು ಶಕ್ತನಾಗಿದ್ದಾನೆ ಎಂದು ನಾನು ನಂಬುತ್ತೇನೆ. ದೇವರು ನನ್ನ ಜೀವಿತದಲ್ಲಿ ಮಾಡಿರುವ ಕಾರ್ಯವನ್ನು ನೋಡುವಾಗ ನಾನು ಆಶ್ಚರ್ಯಪಟ್ಟೆನು. ನಾವು ಬೀಳದಂತೆ ಆತನು ಕಾಪಾಡಲು ಶಕ್ತನಾಗಿರುವುದು ನಿಜವಾಗಲೂ ಸತ್ಯವಾದದ್ದು ಎಂಬುದನ್ನು ನೋಡುವಾಗ ಆಶ್ಚರ್ಯ ಪಟ್ಟೆನು. ನಾವು ಬೀಳದಂತೆ ಆತನು ಹೇಗೆ ಕಾಪಾಡುತ್ತಾನೆ ಎಂಬುದರ ಬಗ್ಗೆ ಈಗಾಗಲೇ ನಾನು ಬೆರಗಾಗಿದ್ದೇನೆ. ಒಂದು ವೇಳೆ ನಾನು ನಿಂತಿದ್ದರೆ ನಾನು ಬೀಳಬಲ್ಲೆ, ಒಂದು ವೇಳೆ ನಾನು ಕುಳಿತಿದ್ದರೆ ಆಗ ಸಹ ನಾನು ಬೀಳಬಲ್ಲೆ. ನೀವು ಎಂದಿಗೂ ಬೀಳದಂತಹ ಒಂದು ಸ್ಥಳವೆಂದರೆ ಭೂಮಿಯ ಮೇಲೆ ನೇರವಾಗಿ ಇರುವಾಗ ಮಾತ್ರ ಸಾಧ್ಯ. ದೇವರೆದುರು ನೀನು ನಿನ್ನ ಮುಖವನ್ನು ಧೂಳಿನಲ್ಲಿ ಇರಿಸಲು ಮನಸು ಮಾಡಿದರೆ, ನೀನು ಬೀಳಲು ಅಸಾಧ್ಯ. ನಿನ್ನ ಮುಖವನ್ನು ದೇವರ ಎದುರು ಧೂಳಿನಲ್ಲಿ ಇರಿಸು. ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾರೆ. ನಾವು ದೇವರ ಪ್ರೀತಿಯಲ್ಲಿ ಭದ್ರವಾಗಿರುವಾಗ, ನಾವು ಅಲ್ಲಿ ತಪ್ಪಿ ಹೋದೆವು ಎಂಬುದಾಗಿ ಅರಿಕೆ ಮಾಡಲು ಹೆದರುವುದಿಲ್ಲ. ನಾವು ನಮ್ಮ ಹೆಂಡತಿ ಮಕ್ಕಳಿಗೆ ಅಥವಾ ನಮ್ಮ ಸಭೆಯಲ್ಲಿರುವ ಯೌವನದ ಸಹೋದರನ ಬಳಿ ಕ್ಷಮೆ ಕೇಳಲು ಹೆದರುವುದಿಲ್ಲ. ಯೇಸುವು ಆ ರೀತಿ ವರ್ತಿಸುವುದಿಲ್ಲ ಎಂಬುದನ್ನು ನಾವು ಗ್ರಹಿಸಿದ್ದೇವೆ.
ನಾನು ಅನೇಕ ವರ್ಷಗಳಿಂದ ಸತ್ಯವೇದದಿಂದ ಪಾಪದ ಬಗ್ಗೆ ಒಂದು ಒಳ್ಳೆಯ ನಿರೂಪಣೆಯನ್ನು ಕೊಡಲು ಪ್ರಯತ್ನಿಸುತ್ತಿದ್ದೆ. ಅಲ್ಲಿ ಅನೇಕ ವಿವರಣೆಗಳು ಇವೆ, ಆದರೆ ಕೊನೆಗೆ ನಾನು ಸ್ಪಷ್ಟವಾಗಿ ಪಾಪದ ಬಗ್ಗೆ ಕೊಟ್ಟಿರುವ ಒಂದನ್ನು ಕಂಡುಕೊಂಡೆ. ಅದು ರೋಮ 3:23. ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಆ ವಾಕ್ಯವನ್ನು ಓದಿದಾಗ ಯಾವುದೇ ವಿಷಯ ದೇವರ ಮಹಿಮೆಯನ್ನು ಹೊಂದದೆ ಹೋಗುತ್ತದೋ ಅದೇ ಪಾಪ ಎಂಬುದನ್ನು ಗ್ರಹಿಸಿಕೊಂಡೆ. ಒಂದು ವೇಳೆ ನನ್ನ ಜೀವಿತದಲ್ಲಿ ಯಾವುದೇ ಸಂಗತಿ ದೇವರ ಮಹಿಮೆಯನ್ನು ಹೊಂದದೆ ಹೋಗುತ್ತದೆ ಅದೇ ಪಾಪ. ದೇವರ ಮಹಿಮೆಯು ಯೇಸುವಿನಲ್ಲಿ ಕಂಡುಬಂದಿತು. ಯೋಹಾನ 1 ರಲ್ಲಿ ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆದ್ದರಿಂದ ಯಾವುದೇ ಸಂಗತಿಯೂ ಯೇಸುವಿನ ಜೀವಿತದಲ್ಲಿ ಕಂಡು ಬರದಂತದ್ದು ಪಾಪ.
ಈ ಪಾಪದ ವಿವರಣೆಗಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ಯಾಕೆಂದರೆ ಅದು ನನ್ನ ಶರೀರದಲ್ಲಿ ಯಾವುದೇ ಒಳ್ಳೆಯದು ವಾಸವಾಗಿಲ್ಲವೆಂದು ತಿಳಿದುಕೊಳ್ಳುವಂತೆ ಸಹಾಯಸುತ್ತದೆ. ಈ ವಾಕ್ಯವನ್ನು ಕಂಡುಕೊಂಡದ್ದರಿಂದ ನನ್ನ ಜೀವಿತವು ನಿರಂತರ ಮಾನಸಾಂತರದಿಂದ ಕೂಡಿದೆ. ಯಾಕೆಂದರೆ ಕರ್ತನು ನನ್ನ ಜೀವಿತದಲ್ಲಿ ಅಕ್ರೈಸ್ತ ಸ್ವಭಾವಗಳನ್ನು ಎತ್ತಿ ತೋರಿಸುತ್ತಾರೆ. ನಾನು ಆಗಾಗ ದೇವರ ಎದುರಿಗೆ ನನ್ನ ಮುಖವನ್ನು ನೆಲದ ಮೇಲೆ ಇಟ್ಟು ಕರ್ತನೆ, ಆ ಪಾಪಗಳಿಂದ ನನ್ನನ್ನು ಶುದ್ಧೀಕರಿಸಿಕೊಳ್ಳುವಂತೆ ಪಾಪಿಯಾದ ನನ್ನ ಮೇಲೆ ಕರುಣೆ ತೋರಿಸು ಎಂಬದಾಗಿ ಪ್ರಾರ್ಥಿಸುವುದು ಅವಶ್ಯ. ದೇವರು ನಿಮ್ಮ ಜೀವಿತದ ಕ್ಷೇತ್ರಗಳನ್ನು ತೋರಿಸುವಾಗ ನೀವು ಅದರ ಬಗ್ಗೆ ವ್ಯವಹರಿಸದಿದ್ದರೆ ನೀವು ಏನನ್ನು ಕಳೆದುಕೊಳ್ಳುತ್ತೀರಿ ಎಂಬುದು ನಿಮಗೆ ಗೊತ್ತಿದೆಯೇ? ಒಂದು ವೇಳೆ ಅದು ಬರೀ ಪ್ರಾಪಂಚಿಕ ಕೋಪವಾಗಿರುವಾಗ ,ನೀವು ಪಾಪವನ್ನು ತಪ್ಪು ಅಥವಾ ನೀತಿಯ ಕೋಪವೆಂಬುದಾಗಿ ಉತ್ತಮವಾದ ಹೆಸರಿನಿಂದ ಕರೆಯುತ್ತೀರಿ . ಆಗ ದೇವರು ಅದರಿಂದ ನಿಮ್ಮನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ನಾನು ಪಾಪವನ್ನು ಅದರ ನಿಜವಾದ ಹೆಸರಿನಿಂದ ಕರೆದು, ಕರ್ತನೆ ಅದು ನಿಜವಾಗಲೂ ವ್ಯಭಿಚಾರದ ನೋಟವಾಗಿತ್ತು ಎಂಬುದಾಗಿ ಹೇಳುವಾಗ, ದೇವರು ಅದರಿಂದ ಬಿಡುಗಡೆ ಮಾಡಲು ಸಾಧ್ಯ. ನೀವು ದೇವರ ಸೃಷ್ಟಿಯನ್ನು ಹೊಗಳುವುದರಿಂದ ಬಿಡುಗಡೆ ಮಾಡುವುದಿಲ್ಲ. ನಾವು ಹೇಳುವುದರಲ್ಲಿ ಕರ್ತನೆ ಇದು ಹೀಗೆ ಆಗಿದೆ ಎಂಬುದಾಗಿ ಯಥಾರ್ಥವಾಗಿ ಹೇಳುವಾಗ ಆತನು ಅದರಿಂದ ಬಿಡುಗಡೆ ಮಾಡುತ್ತಾನೆ.'ಇದು ಹೀಗೆ ಇದೆ'ಎಂಬುದಾಗಿ ಹೇಳುವುದು ಬೆಳಕಿನಲ್ಲಿ ನಡೆಯುವುದೇ ಆಗಿದೆ. ನಾವು ಯಾಕೆ ಪಾಪವನ್ನು ಅದರ ನಿಜವಾದ ರೀತಿಯಲ್ಲಿ ಹೇಳಲು ಭಯಪಡುತ್ತೇವೆ? ಯಾಕೆಂದರೆ ನಾವು ದೇವರು ನಮ್ಮ ತಂದೆ ಎಂಬದಾಗಿ ಆತನ ಪ್ರೀತಿಯಲ್ಲಿ ಭದ್ರವಾಗಿಲ್ಲ.
ಕ್ರಿಸ್ತನ ಸ್ವಭಾವಕ್ಕೆ ವಿರುದ್ಧವಾಗಿರುವ ಗುಣಗಳು
ಯೇಸುವು ಯೋಹಾನ 14ರಲ್ಲಿ, “ನಾನು ನಿಮ್ಮನ್ನು ಆಧಾರವಿಲ್ಲದೆ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದರು. “ಆಧಾರವಿಲ್ಲದೆ” ಎಂಬ ಪದವು ಗ್ರೀಕ್ನಲ್ಲಿ “ಅನಾಥರು” ಎಂಬ ಅರ್ಥವನ್ನು ಹೊಂದಿದೆ—ಅಂದರೆ, “ನಾನು ನಿಮ್ಮನ್ನು ಅನಾಥರಾಗಿ ಬಿಡುವುದಿಲ್ಲ.” ಆದರೂ ಅನೇಕ ಕ್ರೈಸ್ತರ ಜೀವನವನ್ನು ನೋಡಿದಾಗ, ಅವರು ಅನಾಥರಂತೆ ಬದುಕುತ್ತಿರುವಂತೆ ಕಾಣುತ್ತದೆ. ಭಾರತದಲ್ಲಿ ನಾನು ಆಗಾಗ ಅನೇಕ ಅನಾಥರನ್ನು ಸಂಧಿಸಿದ್ದೇನೆ. ಮಕ್ಕಳು ತಮ್ಮ ಇಡೀ ಜೀವಿತದಲ್ಲಿ ತಂದೆಯ ಮತ್ತು ತಾಯಿಯ ಪ್ರೀತಿಯನ್ನು ತಿಳಿದಿಲ್ಲ ಮತ್ತು ಅವರು ಅನಾಥಾಶ್ರಮದಲ್ಲಿ ಬೆಳೆದು ಬಂದಿದ್ದಾರೆ. ಈ ಜನರಲ್ಲಿ ಅನಾಥಾಶ್ರಮದ ಗುಣಗಳನ್ನು ಅವರು 60 ವರ್ಷದವರಾಗಿದ್ದರು ಸಹ ನಾನು ಕಂಡಿದ್ದೇನೆ. ಭದ್ರತೆ, ಬೇರೆಯವರಿಂದ ಹೆದರಿಸಲ್ಪಟ್ಟಿರುವುದು ಬೇರೆಯವರ ಸ್ನೇಹವೂ ಅವರಿಗೆ ಮಾತ್ರ ಇರಬೇಕೆನ್ನುವಂಥದ್ದು, ಮತ್ತು ಬೇರೆ ಅನೇಕ ವಿಶ್ವಾಸಿಗಳಲ್ಲಿ ಬೇರೆಯವರಿಂದ ಹೆದರಿಸಲ್ಪಟ್ಟಿರುವುದನ್ನು ಕಂಡಿದ್ದೇನೆ. ಬೇರೆಯವರೊಂದಿಗೆ ಸ್ಪರ್ಧಿಸುವುದು, ತಾವು ಉತ್ತಮವಾಗಿ ಪ್ರಾರ್ಥಿಸಲು, ಅಥವಾ ಹಾಡಲು, ಅಥವಾ ಬೋಧಿಸಲು, ಅಥವಾ ಇನ್ನು ಬೇರೆ ಸಂಗತಿಗಳನ್ನು ಬೇರೆಯವರಿಗಿಂತ ತಾವು ಉತ್ತಮವಾಗಿ ಮಾಡಲು ಸಾಧ್ಯ ಎಂಬದಾಗಿ ತೋರಿಸಿಕೊಳ್ಳುವುದನ್ನು ನಾನು ಕಂಡಿದ್ದೇನೆ. ಅವರು ಅನಾಥರ ಹಾಗೆ ಇದ್ದಾರೆ. ಅವರು ಬೇರೆಯವರೊಂದಿಗೆ ಅವರಿಗಿಂತ ಉತ್ತಮವಾಗಿ ಯಶಸ್ವಿಯಾಗಿ ಸಂಗತಿಗಳನ್ನು ಮಾಡಿದ್ದೇವೆ, ದೇವರು ನನ್ನನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಾರೆ ಎಂಬುದಾಗಿ ತೋರಿಸಲು ಸಂಗತಿಗಳನ್ನು ಬರೆಯುವ ರೀತಿಯನ್ನು ಕಂಡರೆ ಅವರು ಅನಾಥರ ಹಾಗೆಯೇ ಇದ್ದಾರೆ. ಅವರು ,ದೇವರು ಅವರನ್ನು ತಿಳಿದಿದ್ದಾರೆ ಎಂಬುದರ ವಿಷಯದಲ್ಲಿ ತೃಪ್ತರಾಗಿಲ್ಲ. ನಿಮ್ಮನ್ನು ರಹಸ್ಯದಲ್ಲಿ ನೋಡುವ ದೇವರು ನಿಮಗೆ ಬಹಿರಂಗವಾಗಿ ಬಹುಮಾನವನ್ನು ಕೊಡುವನು ಎಂಬುದಾಗಿ ಯೇಸುವ ಹೇಳಿದ್ದಾರೆ.
ನಾನು ಯೋಹಾನ 7 ರಲ್ಲಿ ಓದುತ್ತಿದ್ದಾಗ, ಕೆಲವು ಸಂಗತಿ ನಿಜವಾಗಲೂ ನನ್ನ ಹೃದಯಕ್ಕೆ ಬಲವಾಗಿ ನಾಟಿತು. ವಚನ 4 ರಲ್ಲಿ ಯೇಸುವಿನ ಸಹೋದರರು ಆತನನ್ನು ಯುದಾಯಕ್ಕೆ ಹೋಗಲು ಹೇಳಿದರು. ಮತ್ತು ಈ ಪದಗಳನ್ನು ಹೇಳಿದರು: ಪ್ರಸಿದ್ದಿಗೆ ಬರಬೇಕೆಂದಿರುವ ಯಾವನಾದರೂ ತಾನು ಮಾಡುವುದನ್ನು ರಹಸ್ಯವಾಗಿ ಮಾಡುವುದಿಲ್ಲವಲ್ಲಾ , ಎಲ್ಲರಿಂದ ತಿಳಿದು ಬರಬೇಕೆಂದಿರುವ ಯಾವನು ಸಹ ತಾನು ಮಾಡುವ ಯಾವುದನ್ನು ಸಹ ರಹಸ್ಯವಾಗಿ ಅಥವಾ ಮರೆಯಲ್ಲಿ ಮಾಡುವುದಿಲ್ಲ. ಇದು ನಮಗೆ ಹೇಗೆ ಅನ್ವಯಿಸುತ್ತದೆ? ಯಾಕೆ ನಾವು ಸಂಗತಿಗಳನ್ನು ರಹಸ್ಯವಾಗಿ ಮಾಡುವುದಿಲ್ಲ. ಯಾಕೆಂದರೆ ನಮಗೆ ಮನುಷ್ಯರಿಂದ ತಿಳಿಯಲ್ಪಡಬೇಕೆಂಬ ಆಸೆ ಇದೆ. ಯಾಕೆ ನಮ್ಮ ರಹಸ್ಯಜೀವಿಧಕ್ಕಿಂತ ಬಹಿರಂಗ ಜೀವಿತ ಬಹಳ ಹೆಚ್ಚಾಗಿದೆ. ಯಾಕೆ ನಾವು ನಮ್ಮ ಪ್ರಾರ್ಥನಾ ಜೀವಿತದ ಬಗ್ಗೆ ಜನರಿಗೆ ನಿಜವಾಗಲೂ ಇರುವುದಕ್ಕಿಂತ ಹೆಚ್ಚಾದ ಅಭಿಪ್ರಾಯವನ್ನು ಕೊಡಲು ಬಯಸುತ್ತೇವೆ? ಮನುಷ್ಯರಿಂದ ತಿಳಿದು ಬರಬೇಕೆಂದು ಆಸೆ ಪಡುವ ಯಾವ ಮನುಷ್ಯನು ರಹಸ್ಯವಾಗಿ ಯಾವುದನ್ನು ಸಹ ಮಾಡುವುದಿಲ್ಲ. ಆದರೆ ಮನುಷ್ಯರಿಂದ ಒಂದು ವೇಳೆ ತಿಳಿಯಲ್ಪಡಬಾರದೆಂದು ಆಶಿಸುವ ವ್ಯಕ್ತಿಯು ರಹಸ್ಯವಾಗಿ ಅನೇಕ ಸಂಗತಿಗಳನ್ನು ಮಾಡುತ್ತಾನೆ.
ನಾನು ಒಬ್ಬ ಯೌವನದ ಕ್ರೈಸ್ತನಾಗಿದ್ದಾಗ, ದೇವರೊಂದಿಗೆ ಪ್ರಶಾಂತವಾದ ಸಮಯವನ್ನು ಕಳೆಯುವುದರ ಬಗ್ಗೆ ಒತ್ತಿ ಹೇಳುವ ಗುಂಪಿನಲ್ಲಿದ್ದೆ. ನಾವು ದೇವರೊಂದಿಗೆ ಪ್ರಶಾಂತವಾದ ಸಮಯವನ್ನು ಕಳೆಯುವುದು ಒಳ್ಳೆಯದೇ. ನಾನು ಇದನ್ನು ಮಾಡಲು ಎಲ್ಲರಿಗೂ ಪ್ರೋತ್ಸಾಹಿಸುತ್ತೇನೆ ಅಥವಾ ಸೂಚಿಸುತ್ತೇನೆ. ನಾನು ಇದ್ದಂತ ಗುಂಪಿನಲ್ಲಿ ನಾವು ಪ್ರತಿ ಬೆಳಗ್ಗೆ ಮತ್ತು ಸಂಜೆ ಮೊಣಕಾಲಿನ ಮೇಲೆ ಇದ್ದು ನಮ್ಮ ಸತ್ಯವೇದವನ್ನು ಓದಬೇಕೆಂಬುದಾಗಿ ಕಳಿಸಿಕೊಟ್ಟರು. ಅತಿ ಶನಿವಾರ ಉಪವಾಸ ಮತ್ತು ಪ್ರಾರ್ಥನೆ ಇತ್ತು. ಅದು ಒಳ್ಳೆಯದಾಗಿತ್ತು. ಆದರೆ ಇವೆಲ್ಲವುದರ ಮಧ್ಯೆ ಮೊಣಕಾಲಿನ ಮೇಲೆ ಜನರು ಸಮಯ ಕಳೆದರೂ ಸಹ ಅವರು ಮುಂಗೋಪಿಗಳಾಗಿದ್ದರು. ಇತರ ಒಟ್ಟಿಗೆ ಬೆರೆಯಲು ಕಷ್ಟ, ಕಹಿ ಭಾವನೆ ಉಳ್ಳವರು, ದೂರು ಹೇಳುವವರು, ಕೋಪದ ಮೇಲೆ ಜಯವಿರಲಿಲ್ಲ. ಮತ್ತು ಯಾವುದೇ ಪಾಪದ ಮೇಲೆ ದಯವಿರಲಿಲ್ಲ. ಇದು ನಿಜವಾಗಲೂ ನನ್ನನ್ನು ಅಚ್ಚರಿಗೊಳಿಸಿತು.
ನಾನು ದೈವಿಕ ಮನುಷ್ಯನ ಜೊತೆ ಹದಿನೈದು ನಿಮಿಷಗಳನ್ನು ಕಳೆದ ದಿನಗಳು ಸಹ ಇದೆ. ಆ ಕಳೆದ ಸಮಯಗಳ ಪ್ರಭಾವ ಅನೇಕ ದಿನಗಳವರೆಗೂ ನನ್ನ ಬಳಿ ಇತ್ತು. 15 ನಿಮಿಷಗಳು ಒಬ್ಬ ದೈವಿಕ ಮನುಷ್ಯನ ಜೊತೆ ನನ್ನ ಜೀವಿತದ ಮಾರ್ಗವನ್ನೇ ಬದಲಾಯಿಸುತ್ತದೆ. 15 ನಿಮಿಷಗಳು ದೇವರು ಒಟ್ಟಿಗೆ ಕಲಿಯುವಾಗ ಏನು ಮಾಡುತ್ತದೆ ಎಂಬುದಾಗಿ ಊಹಿಸಿ ನೋಡಬಲ್ಲಿರಾ? ಒಬ್ಬ ದೈವಿಕ ಮನುಷ್ಯನೊಂದಿಗೆ ಸ್ವಲ್ಪ ಹೊತ್ತು ಮಾತನಾಡುವಾಗ ಅಷ್ಟೊಂದು ಮಾಡುವಾಗ ದೇವರೊಟ್ಟಿಗೆ ಸ್ವಲ್ಪ ಸಮಯವನ್ನು ಕಳೆಯುವಾಗ ದೇವರು ಏನು ಮಾಡುತ್ತಾರೆ ಎಂಬುದಾಗಿ ಉಳಿಸಿ ನೋಡಬಲ್ಲಿರಾ? ಇದೆಲ್ಲಾ ಸಂಗತಿಗಳನ್ನು ಮಾಡಿದರು ಅವರ ಜೀವಿತ ಬದಲಾಗಿಲ್ಲ, ಕಾರಣ ಅವರು ದೇವರೊಟ್ಟಿಗೆ ಸಮಯವನ್ನು ಕಳೆದಿಲ್ಲ ಅವರ ಸಮಯವನ್ನು ಅದು ಗಣಿತ ಪುಸ್ತಕದೊಂದಿಗೆ ಅಥವಾ ರಾಸಾಯನಿಕ ಶಾಸ್ತ್ರ ಅಥವಾ ಸತ್ಯ ವೇದದ ಪುಸ್ತಕದೊಂದಿಗೆ ಕಳೆದಿರಬಹುದು. ಇದು ಯಾವ ಬದಲಾವಣೆಯನ್ನು ಸಹ ಮಾಡುವುದಿಲ್ಲ. ಅನೇಕ ಜನರು ದೇವರೊಂದಿಗೆ ಪ್ರಶಾಂತವಾದ ಸಮಯವನ್ನು ಕಳೆದರೂ, ಅವರು ಕೇವಲ ಒಬ್ಬ ವಿಜ್ಞಾನಿಯೂ ತನ್ನ ವಿಜ್ಞಾನದ ಪುಸ್ತಕವನ್ನು ಅಭ್ಯಾಸಸುವಂತೆ ಅಭ್ಯಾಸಿಸಿ, ಆ ಒಂದು ಕ್ಷೇತ್ರದಲ್ಲಿ ನಿಪುಣರನ್ನಾಗಿ ಮಾಡುತ್ತದೆ. ದೇವರನ್ನು ತಿಳಿಯಬೇಕಾದದ್ದು ಈ ರೀತಿಯಲ್ಲ. ದೇವರನ್ನು ತಿಳಿಯಬೇಕಾದರೆ ನೀವು ದೀನರಾಗಿರಬೇಕು. ನಿಮ್ಮ ಸ್ವಂತ ಅವಶ್ಯಕತೆಗಳ ಬಗ್ಗೆ ತಿಳುವಳಿಕೆ ಇರಬೇಕು. ಆತ್ಮದಲ್ಲಿ ಬಡವರಾಗಿರುವವರು ಧನ್ಯರು, ದೇವರ ರಾಜ್ಯವು ಇಂಥವರದೇ ಎಂದು ಕ್ರಿಸ್ತನ ಹೇಳಿದನು. ನಿರ್ಮಲ ಚಿತ್ತರು ಧನ್ಯರು ಅವರು ದೇವರನ್ನು ನೋಡುವರು.
ನಾನು ಅದನ್ನುಕಂಡಾಗ, ಈ ಎಲ್ಲಾ ಆಚಾರ ಪದ್ಧತಿಗಳಿಂದ ಹೊರ ಬರಬೇಕೆಂಬುದಾಗಿ ಗ್ರಹಿಸಿಕೊಂಡೆ. ನನಗೆ ಅವಶ್ಯವಾದದ್ದು ಒಂದು ಗುಂಪಾದ ನಿಯಮ ಮತ್ತು ಕಾನೂನು ಅಲ್ಲ, ಯಾಕೆಂದರೆ ಇವೆಲ್ಲಾ ನಿಯಮ ಮತ್ತು ಕಾನೂನುಗಳು ನಾನು ದೇವರನ್ನು ತಿಳಿಯಲು ಸಹಾಯಸಲಿಲ್ಲ. ನಾನು ಪಾಪವನ್ನು ನನ್ನ ಜೀವಿತದಲ್ಲಿ ಜಯಿಸಲು ಸಹಾಯ ಮಾಡಲಿಲ್ಲ. ಈ ಒಂದು ದೃಷ್ಟಾಂತವು ನನ್ನ ನೆನಪಿಗೆ ಬಂದಿತು. ಒಂದು ಹಂದಿಯನ್ನು ಒಂದು ಮೈಲು ಕೊಳಕು ಮತ್ತು ಕಸ ತುಂಬಿದ ದಾರಿಯಲ್ಲಿ ವಿಹಾರಕ್ಕೆ ತೆಗೆದುಕೊಂಡು ಹೋಗಿ ,ಆನಂತರ ಆಚೆ ಕೊನೆಗೆ ಶುದ್ಧವಾಗಿ ಬರಲು ಸಾಧ್ಯವೇ? ಹೌದು ಸಾಧ್ಯ. ಒಂದು ವೇಳೆ ನಾನು ಆ ಹಂದಿಯನ್ನು ಹತ್ತು ಸರಪಣಿಗಳಿಂದ ಕಟ್ಟಿ, ಪ್ರತಿ ಸಾರಿ ಅದು ಕೆಲವು ಕೆಸರಿನಿಂದ ಆಕರ್ಷಿಸಲ್ಪಡುವಾಗ ನಾನು ಬೇಗ ಅದನ್ನು ಹಿಂದಕ್ಕೆ ಎಳೆಯುತ್ತೇನೆ. ಪ್ರತಿ ಸಾರಿ ಆ ಕೊಳಚೆಯ ಗುಂಡಿಯ ಕಡೆಗೆ ಅದು ಎಳೆಯಲ್ಪಡುವಾಗ ನಾನು ಅದನ್ನು ಹಿಂದಕ್ಕೆ ಎಳೆಯುತ್ತೇನೆ. ಬಹಳ ಕಷ್ಟದಿಂದ ನಾನು ಆ ಹಂದಿಯನ್ನು ಇನ್ನೊಂದು ಕೊನೆಗೆ ಶುದ್ಧವಾಗಿ ತರುವುದಕ್ಕೆ ಪ್ರಯತ್ನಪಡುತ್ತೇನೆ.
ಆ 10 ಸರಪಣಿಗಳು 10 ಆಜ್ಞೆಗಳು. ಹೀಗೆ ದೇವರು ಜನರನ್ನು ನಿಯಮದ ಕೆಳಗೆ ಶುದ್ಧವಾಗಿ ಇಟ್ಟರು. ಅವರಿಗೆ ಈ ಮಾರ್ಗವಾಗಿ ಹೋಗುವಾಗ ನಿಯಮವು ಅವರನ್ನು ಹಿಂದಕ್ಕೆ ಜಗ್ಗುತ್ತಿತ್ತು. ಅವರು ಬೇರೆ ಕಡೆಗೆ ಆಕರ್ಷಿಸಲ್ಪಡುವಾಗ, ಅದು ಅವರು ಆ ಕಡೆಗೆ ಹೋಗದಂತೆ ತಡೆದು ನಿಲ್ಲಿಸುತ್ತಿದ್ದು. ಮತ್ತು ಅವರು ಶುದ್ಧವಾಗಿದ್ದರು. ಆದರೆ ಒಂದು ಬೆಕ್ಕನ್ನು ಅದೇ ಮಾರ್ಗವಾಗಿ ಪ್ರಶಾಂತ ನಡಿಗೆಗೆ ಕರೆದುಕೊಂಡು ಹೋಗುವುದು ವ್ಯತ್ಯಾಸವಾಗಿರುತ್ತದೆ. ಅದಕ್ಕೆ ಒಂದು ಸರಪಣಿಯು ಸಹ ಬೇಕಾಗಿಲ್ಲ. ಅದು ಪರಿಪೂರ್ಣ ಶುದ್ಧವಾಗಿ ಇನ್ನೊಂದು ಕೊನೆಗೆ ತಲುಪುತ್ತದೆ. ಅದು ಅಕಸ್ಮಾತಾಗಿ ಕೊಚ್ಚಿಯಗುಂಡಿಯಲ್ಲಿ ಬಿದ್ದರೂ ಸಹ ತಕ್ಷಣವೇ ಮೇಲೆ ಬಂದು ಇನ್ನು ಮುಂದೆ ಹೋಗುವುದಕ್ಕಿಂತ ಮುಂಚೆ ತನ್ನನ್ನು ತಾನು ನೆಕ್ಕುವುದರ ಮೂಲಕ ಶುದ್ಧ ಮಾಡಿಕೊಳ್ಳುತ್ತದೆ. ಅದು ಬೇರೆ ಜನರು ತನ್ನನ್ನು ನೋಡುವಾಗ ಮಾತ್ರ ತನ್ನನ್ನು ನೆಕ್ಕುವುದಿಲ್ಲ. ಒಂದು ವೇಳೆ ಬೇರೆ ಜನರು ನೋಡುವಾಗ ಮಾತ್ರ ಅದು ಹಾಗೆ ಮಾಡುವುದಾದರೆ ಅದು ಹಂದಿಯಾಗಿದ್ದು ಬೇರೆಯವರು ತನ್ನನ್ನು ಬೆಕ್ಕು ಎಂಬುದಾಗಿ ತಿಳಿದುಕೊಳ್ಳಲಿ ಎಂಬುದಾಗಿ ಪ್ರಯತ್ನಿಸುತ್ತಿರುತ್ತದೆ. ಒಂದು ವೇಳೆ ಅದು ನಿಜವಾದ ಬೆಕ್ಕಾಗಿದ್ದರೆ ಅದನ್ನು ಬೇರೆಯವರು ನೋಡುತ್ತಿರಲಿ ಅಥವಾ ನೋಡದಿರಲಿ ಯಾವ ವ್ಯತ್ಯಾಸವ ಇರುವುದಿಲ್ಲ.
ಅದು ಆ ಕೊಚ್ಚೆಯಿಂದ ತನ್ನನ್ನು ಬೇರ್ಪಡಿಸಿ ಮುಂದೆ ಹೋಗುವುದಕ್ಕಿಂತ ಮುಂಚೆ ತನ್ನನ್ನು ನೆಕ್ಕಿಕೊಂಡು ಶುದ್ಧ ಮಾಡಿಕೊಳ್ಳುತ್ತದೆ. ನಾನು ಬೆಕ್ಕುಗಳನ್ನು ನೋಡಿದ್ದೇನೆ. ಅದರ ಮೇಲಿರುವ ಯಾವ ಧೂಳನ್ನು ನೀವು ಕಾಣುವುದಿಲ್ಲ. ಆದರೂ ಸಹ ತಮ್ಮನ್ನು ತಾವೇ ನೆಕ್ಕಿಕೊಂಡು, ತಮ್ಮನ್ನು ಶುದ್ಧವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ಅದನ್ನು ಕಂಡು ಇದು ಎಂತಹ ಉದಾರಣೆ ನನಗೆ ಎಂದು ಯೋಚಿಸುತ್ತಿದ್ದೆ. ನಮ್ಮನ್ನು ಎಲ್ಲಾ ಆತ್ಮ ಮತ್ತು ಶರೀರದ ಕಲ್ಮಶಗಳಿಂದ ಶುದ್ಧ ಮಾಡಿ ಕೊಂಡು, ದೇವರ ಭಯದಿಂದ ಕೂಡಿದ್ದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರಬೇಕು. ಸಹೋದರರೇ ಬೆಕ್ಕುಗಳಿಗೆ ಯಾವ ಸರಪಣಿಯು ಬೇಕಾಗಿಲ್ಲ. ಅದಕ್ಕೆ ಮನುಷ್ಯನು ಮಾಡಿದ ಯಾವ ನಿಯಮ ಮತ್ತು ಕಟ್ಟುಪಾಡು ಬೇಕಾಗಿಲ್ಲ.ಈ ತಪ್ಪುಗಳನ್ನೇ ಅನೇಕ ವರ್ಷಗಳಿಂದ ಸಭೆಗಳು ಮಾಡುತ್ತಾ ಬಂದಿವೆ ಅವರಿಗೆ ಹಂದಿಗಳನ್ನು ಶುಚಿಯಾಗಿಡಬೇಕು. ಆದ್ದರಿಂದ ಅವುಗಳನ್ನು ಹಿಡಿದುಕೊಳ್ಳಲು ಮನುಷ್ಯರು ಮಾಡಿದ ನಿಯಮಗಳನ್ನು ಮತ್ತು ಸರಪಣಿಗಳನ್ನು ಮಾಡಿದ್ದಾರೆ. ಅವರು ಶುಚಿಯಾಗಿದ್ದಾರೆ. ಕೆಲವು ನಿಯಮಗಳು ಬರೆಯಲ್ಪಟ್ಟಿವೇ ಮತ್ತು ಕೆಲವು ಸಾಧಾರಣ ಅಭಿಪ್ರಾಯಕ್ಕಾಗಿ ಸಭೆಗಳಲ್ಲಿ ಕೊಡಲ್ಪಟ್ಟಿವೆ. ಇದನ್ನು ನಾವು ಮಾಡಬಾರದು, ನಾವು ಅದನ್ನು ಇಟ್ಟುಕೊಳ್ಳಬಾರದು ಮತ್ತು ನಾವು ಅಲ್ಲಿ ಹೋಗಬಾರದು ಎಂಬುದಾಗಿದೆ. ಜನರು ಅದನ್ನು ನೋಡಿ ಅಬ್ಬಾ ಎಂಥಾ ಶುದ್ಧ ಸಭೆ ಎಂಬುದಾಗಿ ಯೋಚಿಸುತ್ತಾರೆ. ಹೌದು ಅವರು ಶುದ್ಧರೆ, ಆದರೆ ಅವರ ಹಳೆಯ ಪಾಪಮಯ ಸ್ವಭಾವ ಬದಲಾಗಿಯೇ ಇಲ್ಲ. ಜನರು ಅವಿಧೇಯರಾಗಲು ಭಯಪಡುತ್ತಾರೆ. ಯಾಕೆಂದರೆ ಅವರು ಸಭೆಯಿಂದ ಹೊರಗೆ ಹಾಕಲ್ಪಡುವುದರ ಅಪಾಯದಲ್ಲಿದ್ದಾರೆ. ಅವರಿಗೆ ಎಲ್ಲಿ ಅವರು ಸ್ವೀಕರಿಸಲ್ಪಡುವುದಿಲ್ಲವೋ ಎಂಬ ಭಯವಿದೆ. ಅವರು ಏನಾದರೂ ಮಾಡಿದರೆ ಜನರು ಅವರನ್ನು ದುರುಗುಟ್ಟಿ ನೋಡಬಹುದು. ಆದ್ದರಿಂದ ದುರುಗುಟ್ಟುವಿಕೆ ಒಂದು ಸರಪಣಿ ಅಂತಿದ್ದು ಅವರು ಯಾವಾಗಲೂ ಮಾಡಬೇಕೆಂಬುದಾಗಿ ಇರುವಂತಹ ದರಿಂದ ಹಿಂದಕ್ಕೆ ಎಳೆಯುತ್ತದೆ.
ಒಂದು ವೇಳೆ ನಮಗೆ ಒಂದು ಗುಂಪು ಹಂದಿಗಳು ಮತ್ತು ಬೆಕ್ಕುಗಳು ಒಟ್ಟಾಗಿ ಒಂದು ಕೋಣೆಯಲ್ಲಿ ಇದ್ದವು ಎಂದು ನೆನೆಸಿಕೊಳ್ಳುವ, ಮತ್ತು ನಾವು ಎಲ್ಲಾ ಬಾಗಿಲುಗಳನ್ನು ಬೀಗ ಹಾಕಿ ಅವುಗಳನ್ನು ಒಳಗೆ ಇಟ್ಟರೆ ಅವುಗಳಲ್ಲಿ ಪ್ರತಿಯೊಂದು ಸಹ ಶುಚಿಯಾಗಿರುತ್ತವೆ. ಒಂದು ವೇಳೆ ಒಬ್ಬ ಬೋಧಕನು ಬಂದು ಎಲ್ಲಾ ಬಾಗಿಲುಗಳನ್ನು ತೆರೆದರೆ, ಅಲ್ಲಿ ನಿಶ್ಚಯವಾಗಿ ವ್ಯತ್ಯಾಸವಿರುತ್ತದೆ. ಹಂದಿಗಳು ಕೊಳಕಾಗಿರುತ್ತವೆ, ಬೆಕ್ಕುಗಳು ಶುಚಿಯಾಗಿರುತ್ತವೆ. ಪ್ರತಿಯೊಬ್ಬರೂ ಬಾಗಿಲನ್ನು ತೆರೆದದ್ದಕ್ಕಾಗಿ, ಆ ಬೋಧಕನನ್ನು ದೂಷಿಸುತ್ತಾರೆ. ಇಲ್ಲಿ ಆ ಹಂದಿಗಳು ಬಾಗಿಲನ್ನು ತೆರೆದಾಗ ಹಂದಿಗಳಾಗಲಿಲ್ಲ , ಅವುಗಳು ಯಾವಾಗಲೂ ಹಂದಿಗಳೇ! ಈ ಬೋಧಕನು ಪ್ರತ್ಯೇಕಿಸುವ ಗೆರೆಯನ್ನು ಸ್ಪಷ್ಟಪಡಿಸಿದರು. ಇದು ಬಾಗಿಲನ್ನು ತೆರೆದಾಗ ಮಾತ್ರ ಯಾವುದು ಬೆಕ್ಕುಗಳು ಮತ್ತು ಯಾವುದು ಹಂದಿಗಳು ಎಂಬುದನ್ನು ತಿಳಿಯಲು ಸಾಧ್ಯ.
ಬಾಗಿಲನ್ನು ಮುಚ್ಚುವುದರ ಮೂಲಕ ನಾವು ಎಲ್ಲವುಗಳು ಬೆಕ್ಕುಗಳೆ ಎಂದು ನಮ್ಮನ್ನು ನಾವೇ ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮನ್ನು ನಾವು ವಂಚಿಸಿಕೊಳ್ಳುವುದು ಬಹಳ ಸುಲಭ. ಎಲ್ಲಾ ಬಾಗಿಲುಗಳನ್ನು ಬೀಗ ಹಾಕುವುದರ ಮೂಲಕ ನಾವೆಲ್ಲರೂ ಬೆಕ್ಕುಗಳು, ಯಾಕೆಂದರೆ ನಾವೆಲ್ಲರೂ ಶುಚಿಯಾಗಿದ್ದೇವೆ ಎಂದು ಹೇಳ ಬಹುದು. ಹಾಗಾದರೆ ನಾವು ಅದನ್ನು ಪರೀಕ್ಷಿಸೋಣ. ನಾವು ಬಾಗಿಲುಗಳನ್ನು ತೆರೆದು ನೋಡುವ. ಬೆಕ್ಕುಗಳು ಬೆಕ್ಕುಗಳಾಗಿ ಉಳಿಯುತ್ತವೆ ಮತ್ತು ಹಂದಿಗಳು ಯಾವುದೆಂಬುದಾಗಿ ಬಹಿರಂಗವಾಗುತ್ತದೆ. ಇದಕ್ಕೆ ಅನ್ವಯಿಸುವಿಕೆ ಇದೆ. ದೇವರು ಮನುಷ್ಯನಿಗೆ ಯಾವಾಗಲೂ ನಿಯಮ ಮತ್ತು ಕಟ್ಟುಪಾಡುಗಳ ಕೆಳಗೆ ಇರಬೇಕೆಂದು ಎಂದಿಗೂ ಉದ್ದೇಶಿಸಲಿಲ್ಲ. ಇದು ಮಕ್ಕಳಿಗೆ ಅವಶ್ಯವೆಂದು ನಾನು ತಿಳಿದುಕೊಂಡೆ. ಮಕ್ಕಳು ನಿಯಮದ ಕೆಳಗಿದ್ದಾರೆ. ಮತ್ತು ಅವರಿಗೆ ನಿಯಮ ಮತ್ತು ಕಟ್ಟುಪಾಡುಗಳು ಬೇಕು. ಯಾಕೆಂದರೆ ಅವರಿಗೆ ಯಾವ ಜ್ಞಾನ ಇಲ್ಲ ಅಥವಾ ವಿವೇಚನೆ ಇಲ್ಲ. ತಂದೆ ತಾಯಿಗಳಾದ ನಾವು ಅವರಿಗೆ ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದಾಗಿ ಹೇಳುವ ಜವಾಬ್ದಾರಿ ಇದೆ. ಆದರೆ ಸಹೋದರರೇ ಯಾವಾಗಲೂ ನಾವು ಮಕ್ಕಳಾಗಿಯೇ ಇರುವುದು ದೇವರ ಚಿತ್ತವಲ್ಲ. ನಾವು ಕುಮಾರರಾಗಿ ಅದು ನನಗೆ ಬೇಡ ಎಂಬುದಾಗಿ ತೀರ್ಮಾನಿಸುವವರಾಗಿರಬೇಕು. ನಾವು ಆತನ ಆಜ್ಞೆಗಳಿಗೆ ವಿಧೇಯರಾಗಿ , ಆತನ ಮೇಲಿನ ಪ್ರೀತಿಯ ನಿಮಿತ್ತ, ನಾವು ಆತನನ್ನು ಹಿಂಬಾಲಿಸಬೇಕೆಂಬುದೇ ಆತನ ಆಸೆ.
ನಾನು ನನ್ನ ಮಕ್ಕಳಿಗೆ ವಿವರವಾದ ನಿಯಮಗಳನ್ನು ನೀಡಬೇಕಾದ ವರ್ಷಗಳಲ್ಲಿ, ಯಾವಾಗ ನನ್ನ ಮಕ್ಕಳಿಗೆ ನಾನು ಹೇಳುವುದನ್ನು ತಿಳಿದುಕೊಳ್ಳುವ ಜ್ಞಾನ ಬಂದು ಅದನ್ನು ತಾವೇ ಆರಿಸಿಕೊಳ್ಳುವರೋ ಎಂಬುದಾಗಿ ನನ್ನ ಹೃದಯದಲ್ಲಿ ಹಂಬಲಿಸುತ್ತಾ ಇದ್ದೆ. ಇದನ್ನೇ ತಾನೇ ನಾವು ತಂದೆ ತಾಯಿಗಳಾಗಿ ನಮ್ಮ ಮಕ್ಕಳ ಬಗ್ಗೆ ಬಯಸುವುದು? ಅದನ್ನೇ ಕಂಡಿತವಾಗಿ ದೇವರು ನಮ್ಮ ಪ್ರತಿಯೊಬ್ಬರ ಬಗ್ಗೆ ಬಯಸುತ್ತಾರೆ. ನಾವು ನಮ್ಮ ಇಡೀ ಜೀವಿತದಲ್ಲಿ ಪಾಪದಿಂದ ದೂರವಿರಲು ಸರಪಣಿಗಳಿಂದ ಕಟ್ಟಲ್ಪಟ್ಟಿರುವುದು ಆತನ ಆಸೆಯಲ್ಲ. ಆದರಿಂದಲೇ ನಿಯಮಗಳಿಂದ ಇಡಲ್ಪಟ್ಟಿದ್ದಾರೆ. ಆದರೆ ಆತನು ನಿಯಮಗಳನ್ನು ಬಿಸಾಡಿ ಏನನ್ನು ಕೊಡದೆ ಇಟ್ಟಿಲ್ಲ, ಅದರ ಬದಲಾಗಿ ಉತ್ತಮವಾದದ್ದನ್ನು ಆತನು ಕೊಟ್ಟಿದ್ದಾನೆ. ಮೋಶೆಯು ಬೆಟ್ಟದ ಮೇಲೆ ಹೋಗಿ, ಕೆಳಗೆ ಬರುವಾಗ 10 ಕಟ್ಟಳೆಗಳನ್ನು ತಂದನು. ಯೇಸುವು ಪರಲೋಕಕ್ಕೆ ಏರಿ ಹೋಗಿ ಪವಿತ್ರಾತ್ಮನನ್ನು ನಮಗಾಗಿ ಕಳುಹಿಸಿಕೊಟ್ಟರು. ನಿಮಗೆ ಪವಿತ್ರಾತ್ಮನು ಇರಲಿಲ್ಲವೆಂದರೆ ಖಂಡಿತವಾಗಿ ಆ ಸರಪಣಿಗಳು ನಿಮ್ಮನ್ನು ಹಿಂದಕ್ಕೆ ಹಿಡಿದಿಡಲು ಬೇಕು. ಈ ದಿನಗಳಲ್ಲಿ ಬಹಳಷ್ಟು ಕ್ರೈಸ್ತರಲ್ಲಿ ಇರುವಂತ ತೊಂದರೆಗಳೇನೆಂದರೆ, ಅವರು ಹಳೆ ಒಡಂಬಡಿಕೆ ಇಂದ ಬಿಡುಗಡೆ ಹೊಂದಲು ಪ್ರಯತ್ನಿಸುತ್ತಿದ್ದಾರೆ. ಕೊನೆಗೆ ಯಾವ ಒಡಂಬಡಿಕೆ ಇಲ್ಲದೆ ಕೊನೆಗೊಳ್ಳುತ್ತಾರೆ. ನಿಯಮಗಳನ್ನು ಬಿಟ್ಟವರೆಲ್ಲರೂ ಹೊಸ ಒಡಂಬಡಿಕೆಯ ಕೆಳಗಿದ್ದಾರೆ ಎಂದು ಅರ್ಥವಲ್ಲ. ಇಲ್ಲವೇ ಇಲ್ಲ. ಬಹುಜನರು ಒಡಂಬಡಿಕೆ ಇಲ್ಲದೆ ಇದ್ದಾರೆ. ಹಳೆ ಒಡಂಬಡಿಕೆಯ ಕೆಳಗೆ ಇದ್ದವರಿಗೆ ನೀತಿವಂತಿಕೆ ಇತ್ತು. ಒಂದು ನಿರ್ದಿಷ್ಟತೆ ಮತ್ತು ದೈವ ಭಕ್ತಿ ಇತ್ತು. ಈಗ ಇರುವ ಬೋಧಕರುಗಳನ್ನು ನೋಡಿದರೆ, ಹಳೆಯ ಒಡಂಬಡಿಕೆಯಲ್ಲಿ ಇದ್ದ ಬೋಧಕರುಗಳು ಯಾರು ಸಹ ಇವರಷ್ಟು ಕೆಳಮಟ್ಟಕ್ಕೆ ಇಳಿಯುವುದಿಲ್ಲ ಎಂಬುದನ್ನು ನಾವು ಯೋಚಿಸುವುದಕ್ಕೂ ಆಗುವುದಿಲ್ಲ. ಮತ್ತು ಈಗ ಇರುವಂತ ಈ ಜನರು ಈ ದಿನಗಳಲ್ಲಿ ಕೃಪೆಯ ಬಗ್ಗೆ ಬೋಧಿಸುತ್ತಾರೆ. ಅದು ಕೃಪೆಯಲ್ಲ. ಅದು ಒಡಂಬಡಿಕೆ ಅಲ್ಲವೇ ಅಲ್ಲ. ಈಗ ಹಣದ ಹಿಂದೆ ಓಡುವಂತ ಬೋಧಕರುಗಳನ್ನು ನೋಡುವಾಗ, ಹಳೆ ಒಡಂಬಡಿಕೆ ಯಾವ ಭೋದಕರು ಸಹ ಹಾಗೆ ಹಣದಿಂದ ಹೋದದ್ದನ್ನು ನಾನು ಯೋಚಿಸಲು ಸಹ ಆಗುವುದಿಲ್ಲ. ಅದು ಹೇಗೆ? ಹಳೆಯ ಒಡಂಬಡಿಕೆಯ ಜನರಿಗೆ ಉತ್ತಮವಾದ, ನಿರ್ದಿಷ್ಟವಾದ ಜೀವಿತವಿತ್ತು. ಸಹೋದರರೇ ಇದು ವಂಚನೆ, ಇಡೀ ಪ್ರಪಂಚದಲ್ಲೇ ಸಾರಲ್ಪಡುತ್ತಿರುವ ತಪ್ಪಾದ ಕೃಪೆ. ನಿಜವಾದ ಕೃಪೆ ಮನುಷ್ಯನನ್ನು ಪಾಪದಿಂದ ಬಿಡಿಸುತ್ತದೆ ನಿಯಮವು ಮೋಶೆಯಿಂದ ಕೊಡಲ್ಪಟ್ಟಿತ್ತು ಆದರೆ ಸತ್ಯವೂ ಮತ್ತು ಕೃಪೆಯು ಯೇಸುಕ್ರಿಸ್ತನಿಂದ ಬಂದಿತು (ಯೋಹಾನ 1).
ನಾನು ನಿಮಗೆ ಒಂದು ಸರಳವಾದ ಪ್ರಶ್ನೆಯನ್ನು ಕೇಳುತ್ತೇನೆ. ಯಾರು ಶ್ರೇಷ್ಠರು? ಮೋಶೆಯೋ ಅಥವಾ ಕ್ರಿಸ್ತನೋ? ಒಂದು ಸಣ್ಣ ಮಗುವೂ ಸಹ ಇದನ್ನು ಉತ್ತರಿಸುತ್ತದೆ. ಒಂದು ವೇಳೆ ಮೋಶೆಯು ನಮ್ಮನ್ನು ಆ ಮಟ್ಟಕ್ಕೆ ಮೇಲಕ್ಕೆ ಎತ್ತುವುದಾದರೆ, ಇನ್ನು ಎಷ್ಟು ಎತ್ತರಕ್ಕೆ ಕ್ರಿಸ್ತನು ನಮ್ಮನ್ನು ನಮ್ಮ ಹಳೆಯ ಪಾಪದ ಜೀವಿತದಿಂದ ಎತ್ತಲ್ಪಡಬಹುದೆಂಬುದಾಗಿ ಯೋಚಿಸಿ? ಇನ್ನು ಹೆಚ್ಚಾಗಿ, ಇನ್ನು ಎಷ್ಟೋ ಹೆಚ್ಚಾಗಿ, ಎಷ್ಟರಮಟ್ಟಿಗೆ ಕ್ರಿಸ್ತನು ಮೋಶೆಗಿಂತ ಶ್ರೇಷ್ಠನು ಅಷ್ಟರಮಟ್ಟಿಗೆ. ಇದೇ ಸುವಾರ್ತೆಯ ಸಂದೇಶವಾಗಿದೆ. ಇದಕ್ಕಾಗಿ ಯೇಸುವು ಹಳೆ ಒಡಂಬಡಿಕೆಯಲ್ಲಿ ನೀವು ವ್ಯಭಿಚಾರ ಮಾಡಬೇಡಿರಿ ಎಂದು ಹೇಳುತ್ತದೆ, ಆದರೆ ನಾನು ನಿಮಗೆ ಹೇಳುವುದೇನೆಂದರೆ, ನೀವು ನಿಮ್ಮ ಕಣ್ಣಿನಿಂದ ಮೋಹಿಸಬೇಡಿರಿ. ಹಳೆ ಒಡಂಬಡಿಕೆಯಲ್ಲಿ ಕೊಲೆ ಮಾಡಬೇಡಿರಿ ಎಂದು ಹೇಳಿದೆ, ಆದರೆ ನಾನು ನಿಮಗೆ ಹೇಳುವುದು ನಿಮ್ಮ ಸಹೋದರರೊಟ್ಟಿಗೆ ಸಿಟ್ಟು ಸಹ ಮಾಡಬೇಡಿರಿ. ಆತನು ಗುಣಮಟ್ಟವನ್ನು ತಗ್ಗಿಸಲಿಲ್ಲ. ಅದಂತು ಸತ್ಯ. ಆದರೆ ನಾನು ಒಂದು ಸಾರಿ ಒಂದು ಪದ್ಯದ ವಚನವನ್ನು ಕೇಳಿಸಿಕೊಂಡೆ.
ಅದು ಹೀಗಿದೆ - ಯೋಹಾನನೇ ಓಡು, ಧರ್ಮಶಾಸ್ತ್ರ ನಿಯಮವು ಆದೇಶಿಸುತ್ತದೆ. ಆದರೆ ನಮಗೆ ಕಾಲನ್ನಾಗಲಿ ಅಥವಾ ಕೈಗಳನ್ನಾಗಲಿ ಕೊಡುವುದಿಲ್ಲ. ಸುವಾರ್ತೆಯು ಉತ್ತಮವಾದ ಸಂದೇಶವನ್ನು ತರುತ್ತಿದೆ. ಅದು ನಮ್ಮನ್ನು ಹಾರುವಂತೆ ಹೇಳುತ್ತದೆ, ಹಾರುವುದಕ್ಕೆ ರೆಕ್ಕೆಗಳನ್ನು ಕೊಡುತ್ತದೆ. ಅದೇ ಸುವಾರ್ತೆ! ನಿಯಮವು ನಮ್ಮನ್ನು ಓಡುವಂತೆ ಹೇಳಿದ್ದು ಆದರೆ ಅದು ಓಡಲು ಏನನ್ನು ಕೊಡಲಿಲ್ಲ. ಒಂದು ವೇಳೆ ಸುವಾರ್ತೆಯು ನಮ್ಮನ್ನು ಹಾರಲು ಹೇಳಿ ರೆಕ್ಕೆಯನ್ನು ಕೊಡುವಾಗ ನಮ್ಮನ್ನು ಆಜ್ಞಾಪಿಸುವುದು ಉತ್ತಮವಲ್ಲವೇ? ಇದನ್ನೇ ಪವಿತ್ರಾತ್ಮನು ಮಾಡಲು ಬಂದನು. ಆತನು ನಮ್ಮ ಹಿಂದಿನ ಜೀವಿತದಿಂದ ಮೇಲಕ್ಕೆ ಎತ್ತಿ ಕ್ರಿಸ್ತನೊಟ್ಟಿಗೆ ಸಂಬಂಧವನ್ನು ಕೊಡಲು ಬಂದನು. ಅಲ್ಲಿ ನಾವು ಭದ್ರತೆಯನ್ನು ಕಾಣುತ್ತೇವೆ. ನಮ್ಮನ್ನು ನಾವು ಇತರರೊಟ್ಟಿಗೆ ಹೋಲಿಸಿಕೊಳ್ಳುವುದು ಬೇಡ, ನಾವು ಬೇರೆಯವರೊಟ್ಟಿಗೆ ಸ್ಪರ್ಧಿಸುವುದು ಬೇಡ, ನಾವು ಬೇರೆಯವರನ್ನು ಹೀನೈಸುವುದು ಬೇಡ. ಯಾಕೆಂದರೆ ಅದು ದೇವರ ಕಾರ್ಯ ಮತ್ತು ಆತನ ಕೃಪೆಯು ನಮ್ಮನ್ನು ನಾವು ಏನಾಗಿದ್ದೇವೋ ಹಾಗೆ ಮಾಡಿದೆ. ಒಂದು ವೇಳೆ ನೀವು ನಿಮ್ಮ ಪರಿಶುದ್ಧತೆಯಲ್ಲಿ ಹೆಚ್ಚಳ ಪಡುವುದಾದರೆ ಅದನ್ನು ನೀವೇ ಉಂಟು ಮಾಡಿರುವಂತಹದು ಎಂಬದಕ್ಕೆ ಒಂದು ಒಳ್ಳೆಯ ಸೂಚನೆಯಾಗಿದೆ.
ಒಂದು ವೇಳೆ ನಾನು ಸಹೋದರಿಯರಿಂದ ತಯಾರಿಸಲ್ಪಟ್ಟ ಅದ್ಭುತವಾದ ಕೇಕ್ ಅನ್ನು ತಂದು ಇಲ್ಲಿ ಹಂಚಿದಾಗ, ನೀವು ವಾವ್! ಎಂತಹ ಅದ್ಭುತವಾದ ಕೇಕ್! ಎಂದು ಹೇಳಿದರೆ, ನನ್ನನ್ನು ಹೆಚ್ಚಿಸಿಕೊಳ್ಳಲು ಅಥವಾ ಗರ್ವ ಪಡಲು ಶೋಧನೆಯೇ ಆಗುವುದಿಲ್ಲ. ಯಾಕೆಂದರೆ ಅದನ್ನು ನಾನು ತಯಾರಿಸಿಲ್ಲ. ಒಂದು ವೇಳೆ ನಾನು ಅದನ್ನು ಮಾಡಿದ್ದು, ನೀವೆಲ್ಲರೂ ಅದನ್ನು ಪ್ರಶಂಸಿಸುವದನ್ನು ಕೇಳಿಸಿಕೊಳ್ಳುವಾಗ, ಆಗ ನಾನು ಗರ್ವ ಪಡಲು ಶೋಧನೆ ಯಾಗುತ್ತದೆ. ನಾವಾಗಿ ತಯಾರು ಮಾಡುವ ಸಂಗತಿಗಳಿಗಾಗಿ ನಾವು ಗರ್ವ ಪಡುತ್ತೇವೆ. ನೀವಾಗಿ ನೀವು ತಯಾರಿಸಿದ ಪರಿಶುದ್ಧತೆಯ ವಿಷಯದಲ್ಲಿ ನೀವು ಗರ್ವ ಪಡುತ್ತೀರಿ. ಒಂದು ವೇಳೆ ನಿಮ್ಮ ನಡತೆಯ ಬಗ್ಗೆ ಯಾರಾದರೂ ಒಳ್ಳೆಯದನ್ನು ಹೇಳಿದರೆ ನಿಮಗೆ ಯಾಕೆ ಹಿತವೆನಿಸುತ್ತದೆ. ನೀವು ತಯಾರಿಸಿದ ಉಪದೇಶಕ್ಕೆ, ನೀವು ಗರ್ವ ಮಾಡುತ್ತೀರಿ. ಆದರೆ ದೇವರು ನಿಮಗೆ ನಿಜವಾಗಿ ಕೊಟ್ಟಿದ್ದಾರೆ, ನೀವು-' ದೇವರು ಕೊಟ್ಟಿದ್ದನ್ನು ನಾನು ಬರೀ ಹಂಚುತ್ತಿದ್ದೇನೆ'ಎಂದು ಹೇಳುತ್ತೀರಿ. ಇದೇ ಸುವಾರ್ತೆ!. ನಾನುಹೆಚ್ಚಳ ಪಡಲು ಆಗುವುದಿಲ್ಲ, ಯಾಕೆಂದರೆ ನಾನು ಅದನ್ನು ಗ್ರಹಿಸುತ್ತೇನೆ. ನಾನು ಹೊಂದದೆ ಇರುವಂತದ್ದು ನನ್ನ ಬಳಿ ಏನಿದೆ? ನಿಮ್ಮ ಬಳಿ ಇರುವಂತವುಗಳಲ್ಲಿ ನೀವು ಹೊಂದದೆ ಇರುವಂತದ್ದು ಯಾವುದೆಂದು ನನಗೆ ಹೇಳಿ. ಒಂದು ಸಹ ಇಲ್ಲ.
ಒಬ್ಬ ವ್ಯಕ್ತಿಯು ಸಭೆಗೆ ಬಂದು ತಾನು ಎಲ್ಲರಿಗಿಂತ ಕೀಳಾದವನು ಎಂಬುದಾಗಿ ಭಾವಿಸುವನು, ಯಾಕೆಂದರೆ ತಾನು ಪಾಪಿಯಾಗಿದ್ದನು. ಇಂತಹ ಸಂದರ್ಭಗಳನ್ನು ನಾನು ಕಂಡಿದ್ದೇನೆ. ಅವನ ಮಕ್ಕಳ ನಡೆತಪ್ಪಿದ್ದರಿಂದ ಮತ್ತು ಸಭೆಯು ಉನ್ನತ ಮಟ್ಟದ ಮಾನದಂಡವನ್ನು ಬೋಧಿಸುತ್ತಿರುವುದರಿಂದ, ಅವನಿಗೆ ಅಸಹಜತೆಯಾಗಿ ಅನಿಸಬಹುದು. ನನಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಅವರೆಲ್ಲರೂ ಹೊಸದಾಗಿ ಹುಟ್ಟಿದ್ದಾರೆ ಮತ್ತು ಕರ್ತನನ್ನು ಹಿಂಬಾಲಿಸುತ್ತಾ ಇದ್ದಾರೆ. ಅವರ ಕುರಿತಾಗಿ ನಾನು ಒಂದು ತೃಣವು ಸಹ ಖ್ಯಾತಿಯನ್ನು ಹೊಂದಿಕೊಳ್ಳಲು ಯೋಗ್ಯನಲ್ಲ. ನಾನು ನನ್ನ ಮುಖದ ಮೇಲೆ ಬಿದ್ದು-"ಕರ್ತನೇ ಇದು ಎಲ್ಲಾ ನಿನ್ನ ಕೃಪೆ"ಎಂಬುದಾಗಿ ಹೇಳುತ್ತೇನೆ. ನಾನು ಈ ಕೇಕ್ ಅನ್ನು ಬೇಯಿಸಿದೆನು ಎಂಬುದಾಗಿ ಯೋಚಿಸಲು ಸಹ ಧೈರ್ಯ ಮಾಡುವುದಿಲ್ಲ. ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರಿಸುವ ಮೂಲಕ, ನಾವು ಅನೇಕ ಬಾರಿ ಇತರರಿಗೆ ತಮ್ಮನ್ನು ಕಡಿಮೆಯಾಗಿ ಭಾಸವಾಗುವಂತೆ ಮಾಡುತ್ತೇವೆ. “ನನ್ನ ಮನೆಯಲ್ಲೇ ಹೇಗಿದೆ ನೋಡಿ ಬನ್ನಿ” ಎಂಬ ಧೋರಣೆಯೇ ಇದು. ಆಗ ಆ ಬಡ ಸಹೋದರನು, “ಇದು ನನ್ನಿಂದ ಆಗುವುದೇ ಇಲ್ಲ. ನಾನು ಬೇರೆ ಸಭೆಗೆ ಹೋಗಿಬಿಡುವುದು ಒಳಿತು”ಎಂದು ಯೋಚಿಸಬಹುದು. ಹೀಗೆ ಆಗಿದ್ದರೆ, ನಾವು ವಿಫಲರಾದಂತೇ. ಅದು ಯೇಸುವಿನ ಆತ್ಮವಲ್ಲ. ಯೇಸು ಬಿದ್ದವರನ್ನು ಎತ್ತಲು ಬಂದನು.
ನನಗೆ ಹೆಣ್ಣು ಮಕ್ಕಳಿಲ್ಲ. ನಾನು ಒಮ್ಮೆ ನಮ್ಮ ಸಭೆಯಲ್ಲಿರುವ ಯವ್ವನಸ್ತ ಹುಡುಗಿಯರಿಗೆ ತಿದ್ದುಪಡಿ ವಾಕ್ಯವನ್ನು ಕೊಡಬೇಕಾಗಿತ್ತು. ನಾನು ಮಾತನಾಡಲು ಎದ್ದೇಳುವಾಗ, ಕರ್ತನು ನನಗೆ ಹೀಗೆ ಹೇಳಿದರು, ಜ್ಞಾಪಕದಲ್ಲಿಟ್ಟುಕೋ, ಅವರು ನಿನ್ನ ಹೆಣ್ಣುಮಕ್ಕಳು. ಆ ಮಾತು ನನಗೆ ತುಂಬಾ ಬಲವಾಗಿ ತಟ್ಟಿತು. ಅವರು ನನ್ನ ಮಕ್ಕಳು. ಅವರು ಕೇವಲ ಬೇರೆ ಮಕ್ಕಳಲ್ಲ. ಬೇರೆಯವರ ಮಕ್ಕಳಿಗೆ ಬೋಧಿಸುವುದು ಬಹಳ ಸುಲಭ. ಆಗ ನಾನು ಎದ್ದಾಗ, ಅವರಿಗೆ ನನ್ನ ಸ್ವಂತ ಹೆಣ್ಣು ಮಕ್ಕಳಿಗೆ ಹೇಳುವಂತೆ ಹೇಳಿದೆ. ಹೀಗೆ ಒಂದು ಸಭೆಯಲ್ಲಿ ಇರಬೇಕಾದದ್ದು. ಒಂದು ವೇಳೆಒಬ್ಬಸಹೋದರನ ಮಗನು ದಾರಿ ತಪ್ಪುತ್ತಿರುವುದನ್ನು ನೀನು ನೋಡಿದಾಗ, ಕರ್ತನ ವಾಕ್ಯವನ್ನು ಕೇಳು: “ಅವನು ನಿನ್ನ ಮಗನೇ.” ಆಗ ನೀನು ತೀರ್ಪಿನ ಬೆರಳನ್ನು ಬಹಳ ಸುಲಭವಾಗಿ ತೋರಿಸುವುದಿಲ್ಲ. ಇದು ಕ್ರಿಸ್ತನ ಶರೀರ. ನಾವು “ನಾವು ಒಂದೇ ಕುಟುಂಬ”ಎಂದು ಹೇಳುತ್ತೇವೆ; ಆದರೆ ನಮ್ಮ ಮನೋಭಾವ ಹೀಗಿರುತ್ತದೆ: “ನೋಡು, ನಾನು ನನ್ನ ಕುಟುಂಬದೊಂದಿಗೆ ಏನು ಸಾಧಿಸಿದ್ದೇನೆ ನೋಡಿ. ಕ್ಷಮಿಸಿ, ನೀನು ಅಷ್ಟು ಚೆನ್ನಾಗಿ ಮಾಡಲಿಲ್ಲ.” ಇದು ಯಾಕೆ ಹೀಗೆ? ನಾವು ನಮ್ಮ ಪರಲೋಕದ ತಂದೆಯ ಪ್ರೀತಿಯಲ್ಲಿ ಭದ್ರವಾಗಿಲ್ಲ. ನಾವು ಜನರಿಗೆ ನಮ್ಮನ್ನು ಎತ್ತಿ ತೋರಿಸಿಕೊಳ್ಳಲು ಬಯಸುತ್ತೇವೆ. ನನ್ನ ಬಳಿ ಇರುವ ಪ್ರತಿ ಒಂದೊಂದು ಕರ್ತನಿಂದ ಪಡೆದಿರುವುದೇ ಎಂಬುದಾಗಿ ನಾವು ಗ್ರಹಿಸುವುದಿಲ್ಲ. ನಾವು ಹೆಮ್ಮೆ ಪಡುವಂತಹ ಯಾವುದು ಇಲ್ಲ. ಇದೇ ನಾವು ಯೇಸುಕ್ರಿಸ್ತನ ದೇಹವನ್ನು ಕಟ್ಟಲು ಅಡ್ಡಿಯಾಗಿದೆ. ಇದರಲ್ಲೇ ನಾವು ಕೊರತೆಯಲ್ಲಿದ್ದೇವೆ. ಅಲ್ಲಿ ಫರಿಸಾಯತನವಿದೆ. ಇತರರನ್ನು ಕೀಳಾಗಿ ನೋಡುವುದು ಇದೆ. ಯಾಕೆಂದರೆ ಅವರು ತಪ್ಪಿ ಹೋಗಿದ್ದಾರೆ. ಯಾರು, ಈ ದೇಹದಲ್ಲಿ ಒಳ್ಳೆಯದೇನು ವಾಸವಾಗಿಲ್ಲ ಎಂಬುದಾಗಿ ನಿಜವಾಗಲೂ ಗ್ರಹಿಸುತ್ತಾರೋ ಅವರು ದೂಷಿಸುವ ಬೆರಳನ್ನು ಇತರರಿಗೆ ತೋರಿಸುವುದಿಲ್ಲ. ಅದು ಅಸಾಧ್ಯ. ನಾನು ಆಗಾಗ ಪೌಲನು ಎಫೆಸ ಮೂರನೇ ಅಧ್ಯಾಯದಲ್ಲಿ ದೇವ ಜನರೊಳಗೆ ಅತ್ಯಲ್ಪನಾದ ನನಗೆ ಈ ಕೃಪೆಯು ಕೊಡಲ್ಪಟ್ಟಿತು. ಎಲ್ಲಾ ದೇವ ಜನರಲ್ಲಿ ತಾನು ಅತ್ಯಲ್ಪನೆಂದು ಯಾರು ತಿಳಿಯುತ್ತಾರೋ ಅವರಿಗೆ ದೇವರ ಕೃಪೆಯು ಕೊಡಲ್ಪಡುತ್ತದೆ. ಅಪ್ರಮಯವಾದ ಕ್ರಿಸ್ತನ ಐಶ್ವರ್ಯದ ವಿಷಯವಾದ ಶುಭ ಸಮಾಚಾರವನ್ನು ಅನ್ಯ ಜನರಿಗೆ ಪ್ರಸಿದ್ಧಿ ಪಡಿಸುವ ಹಾಗೆ ಎಲ್ಲಾ ದೇವ ಜನರಲ್ಲಿ ಅತ್ಯಲ್ಪನಾದ ನನಗೆ ಈ ಕೃಪೆಯು ಕೊಡಲ್ಪಟ್ಟಿತು ಎಂದು ಗ್ರಹಿಸಿದನು.
ಒಂದು ವೇಳೆ ನೀವು ಪೌಲನನ್ನು ಅನಿರೀಕ್ಷಿತವಾಗಿ ಹಿಡಿದು ಅವನ ಹೃದಯದಲ್ಲಿ ಅವನು ತನ್ನ ಬಗ್ಗೆ ಏನನ್ನು ಯೋಚಿಸಿದನು ಎಂಬುದಾಗಿ ತಿಳಿಯಬೇಕಾದರೆ, ಅವನ ಹೃದಯವನ್ನು ತೆರೆದರೆ, ಹೃದಯದಲ್ಲಿ ಆಳವಾದ ಅಪರಾಧ ನಿರ್ಣಯದ ಹೃದಯವನ್ನು ಕಾಣಬಹುದು. ತಾನು ಎಲ್ಲಾ ವಿಶ್ವಾಸಿಗಳಿಗಿಂತ ಅತ್ಯಲ್ಪನೆಂದು ಗ್ರಹಿಸಿದ್ದಾನೆ. ಯಾಕೆಂದರೆ ಅವನು ಬೇರೆಯವರಿಗಿಂತ ತನ್ನ ಸ್ವಂತ ಶುದ್ಧತೆಯು ಹೆಚ್ಚಾಗಿರುವುದನ್ನು ಕಂಡುಕೊಂಡನು. ಅವನ ಶರೀರದಲ್ಲಿ ಒಳ್ಳೆಯದೇನು ವಾಸವಾಗಿಲ್ಲವೆಂಬುದನ್ನು ಕಂಡುಕೊಂಡನು. ಪ್ರಕಟಣೆಯು ನಮಗೆ ಅವಶ್ಯವೆಂದು ನಾನು ನಂಬುತ್ತೇನೆ. ನಾನು ಯಥಾರ್ಥವಾಗಿ ಹೇಳಬಲ್ಲೆ, ನಾನು ಅವುಗಳನ್ನು ತಿಳಿದುಕೊಂಡು ಮತ್ತು ನನ್ನ ಪರಲೋಕದ ತಂದೆಯಲ್ಲಿ ಭದ್ರತೆಯನ್ನು ಕಂಡುಕೊಂಡಂದಿನಿಂದ ಎಲ್ಲಿ ನಾನು ತಪ್ಪಿದರೂ ಅಥವಾ ಜಾರಿದರು ಪಾಪಮಾಡಿದರು ಅದನ್ನು ಅರಿಕೆ ಮಾಡುವುದರಲ್ಲಿ ನನಗೆ ಸಮಸ್ಯೆಗಳು ಇರಲಿಲ್ಲ. ದೇವರು ನನಗೆ ಕ್ರಿಸ್ತನ ದೇಹದಲ್ಲಿ ನನ್ನನ್ನು ಸಮತೋಲನದಲ್ಲಿ ಇರಲು ಇತರರನ್ನು ಕೊಟ್ಟಿದ್ದಾರೆ. ಯಾಕೆಂದರೆ ನನ್ನಷ್ಟಕ್ಕೆ ನಾನೇ ಸಮತೋಲನದಲ್ಲಿ ಇರಲು ಸಾಧ್ಯವಿಲ್ಲ. ನನಗೆ ಅವರು ಬೇಕು. ನಾನು ಅವರೊಂದಿಗೆ ಸ್ಪರ್ಧೆಯಲ್ಲಿ ಇಲ್ಲ. ನನ್ನ ಜೀವಿತದಲ್ಲಿ ಅಸಮತೋಲನದ ಮಧ್ಯೆ ಸಮತೋಲನವನ್ನು ಮಾಡಿದ, ದೇವರು ಕೊಟ್ಟ ಸಹೋದರರಿಗಾಗಿ ನಾನು ದೇವರಿಗೆ ಉಪಕಾರ ಸಲ್ಲಿಸುತ್ತೇನೆ. ನನ್ನ ಜೀವಿತ ಕ್ಷೇತ್ರಗಳಲ್ಲಿ ಎಲ್ಲಿ ನಾನು ದೇವರ ಮಹಿಮೆಯನ್ನು ಮತ್ತು ಕ್ರಿಸ್ತನ ಸ್ವಭಾವವನ್ನು ಪ್ರತಿಬಿಂಬಿಸದೆ ಇರುವಾಗ ನನ್ನನ್ನು ಉತ್ತೇಜನಪಡಿಸಲು ಸಹೋದರರು ಇದ್ದಾರೆ. ನಾವು ಒಟ್ಟಾಗಿ ಯೇಸುವಿನ ಮಹಿಮೆಯನ್ನು ಪ್ರಕಟಿಸಬಹುದು. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನನ್ನ ಹೆಂಡತಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನನಗಿಂತ ಸ್ವಭಾವದಲ್ಲಿ ಬೇರೆಯಾಗಿದ್ದರು, ಮನೆಯಲ್ಲಿ ನನ್ನನ್ನು ಸಮತೋಲನ ಮಾಡುತ್ತಾರೆ ಮತ್ತು ಅನೇಕ ಮೂರ್ಖ ಸಂಗತಿಗಳನ್ನು ಮಾಡದಂತೆ ನನ್ನನ್ನು ಕಾಪಾಡುತ್ತಾರೆ. ಅದೇ ರೀತಿ ನನ್ನ ಜೊತೆ ಹಿರಿಯ ಸಹೋದರರು ನಾನು ಸಭೆಯಲ್ಲಿ ಅನೇಕ ಮೂರ್ಖ ಸಂಗತಿಗಳನ್ನು ಮಾಡದಂತೆ ಕಾಪಾಡುತ್ತಾರೆ. ನೀವು ನಿಮ್ಮ ಸಹೋದರ ಮತ್ತು ಸಹೋದರಿಯರ ಅವಶ್ಯಕತೆಯನ್ನು ಗ್ರಹಿಸಿದ್ದೀರಾ? ನೀವು ಆ ಯೌವ್ವನ ವ್ಯಕ್ತಿಯು ದಾರಿ ತಪ್ಪಿ ಹೋಗುತ್ತಿರುವಾಗ ಅವನನ್ನು ನಿನ್ನ ಮಗನು ಅಥವಾ ಮಗಳು ಎಂಬುದಾಗಿ ಕಾಣುತ್ತಿಯೋ? ಸತ್ಯವೇದವು ಈ ರೀತಿ ಹೇಳುತ್ತದೆ. ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದಿದೆ ಎಂಬದಾಗಿ. ಅದೇ ತಂದೆಯ ಪ್ರೀತಿಯು ನಮ್ಮ ಮೇಲೆ ಧಾರಾಳವಾಗಿ ಸುರಿದಿದೆ. ಅದೇ ಪ್ರೀತಿಯಿಂದ ನಾವು ಇತರರನ್ನು ಪ್ರೀತಿಸುತ್ತೇವೆ. ಇದೇ ಪವಿತ್ರ ಆತ್ಮನಿಂದ ತುಂಬಿಸಲ್ಪಡುವುದು ಎಂಬುದರ ಅರ್ಥ. ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದಿದೆ. ಇದು ಪವಿತ್ರಾತ್ಮನಿಂದ ಮಾಡಲ್ಪಟ್ಟಿದೆ.
ನಾವು ದೇವರ ಪರಿಪೂರ್ಣ ಪ್ರೀತಿಯಲ್ಲಿ ಭದ್ರತೆಯನ್ನು ಕಂಡುಕೊಂಡಿದ್ದೆವೋ ಎಂಬುದಾಗಿ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ದೇವರು ಪ್ರೀತಿಸದೆ ಇರುವ ಒಬ್ಬ ವ್ಯಕ್ತಿಯೂ ಇಲ್ಲ ಎಂದು ಪ್ರತಿಯೊಬ್ಬರಿಗೂ ನಾನು ಹೇಳ ಬಯಸುತ್ತೇನೆ. ನಿಮ್ಮ ವೈಫಲ್ಯಗಳ ಹೊರತಾಗಿಯೂ ದೇವರು ನೀವು ಹೇಗೆಇದ್ದೀರೋ ಹಾಗೆಯೇ ಆತನುನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮ ಜೀವಿತದಲ್ಲಿ ಮಾಡಿದ ಎಲ್ಲಾ ತಪ್ಪುಗಳು ಮತ್ತು ವೈಫ಼ಲ್ಯಗಳಜೊತೆ, ನೀವು ಈಗ ಇರುವಂತ ಸ್ಥಿತಿಯಲ್ಲೇ ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನಿನ್ನನ್ನು ಆಹ್ವಾನಿಸುತ್ತಾನೆ."ಎಲೈ ಕಷ್ಟಪಡುವವರೇ, ಹೊರೆ ಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ."ಎಂದು ಆತನು ಕರೆಯುತ್ತಾನೆ. ಮತ್ತು ಆ ರೀತಿ ನಿಮ್ಮನ್ನು ಆಹ್ವಾ್ನಿಸಿರುವಾಗ,ನೀವೂ ಅದೇ ರೀತಿ ನಿಮ್ಮ ಸಹೋದರನನ್ನು ಆಹ್ವಾನಿಸಲು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ದೇವರು ನಿಮಗೆ ನೆರವಾಗಲಿ.
ನಾವು ದೇವರ ಮುಂದೆ ತೆಲೆಬಾಗಿ ಹೀಗೆ ಪ್ರಾರ್ಥಿಸೋಣ. ಪರಲೋಕದ ತಂದೆಯೇ, ನಮ್ಮ ಭೂಲೋಕದ ಜೀವಿತದಲ್ಲಿ ನಿನ್ನನ್ನು ಗೌರವಿಸಲು ನಮಗೆ ನೆರವಾಗು. ಜೀವಿತವು ಬಹಳ ಅಲ್ಪಕಾಲದ್ದಾಗಿದೆ. ನಾವು ನಮ್ಮ ಸಂಬಂಧದಲ್ಲಿ ದೇವರ ಪ್ರೀತಿಯನ್ನು ಪ್ರತಿಬಿಂಬಿಸಲು ನಮಗೆ ಸಹಾಯಿಸು. ನಮ್ಮನ್ನು ನೋಯಿಸುವವರ ಬಗ್ಗೆ ಯೋಚಿಸುತ್ತೇವೆ, ಯಾರಾರು ಕಷ್ಟಗಳನ್ನು ಅನುಭವಿಸುತ್ತಿದ್ದಾರೋ, ಯಾರಾರು ತಮ್ಮ ಜೀವಿತವನ್ನ ಹಾಳು ಮಾಡಿ ಕೊಂಡಿರುತ್ತಾರೋ, ತಂದೆ ತಾಯಿಗಳಾಗಿ ತಪ್ಪಿ ಹೋಗಿಇದ್ದಾರೋ, ಅವರನ್ನು ನೆನೆಸಿ ಅವರಿಗಾಗಿ ನಾವು ಕನಿಕರದಿಂದ ಪ್ರಾರ್ಥಿಸುತ್ತೇವೆ. ಕರ್ತನೇ, ನಾವು ಯಾರಿಗಿಂತಲೂ ಉತ್ತಮರಲ್ಲ. ನಾವು ಅವರ ಹೃದಯಗಳನ್ನು ಸಮಾಧಾನ ಪಡಿಸಿರಿ ಎಂದು ಬೇಡಿಕೊಳ್ಳುತ್ತೇವೆ. ಅವರ ಜೀವಿತವನ್ನು ಬದಲಾಯಿಸಲು ಸಾಧ್ಯ, ಒಂದು ದಿನ ಅವರು ನಿನ್ನ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅವರಿಗೆ ಭರವಸೆಯನ್ನು ಕೊಡಿರಿ. ನಮ್ಮನ್ನು ಸಂದರ್ಶಿಸಿರಿ ಮತ್ತು ಕ್ರಿಸ್ತನ ದೇಹವನ್ನು ಕಟ್ಟುವುದನ್ನು ಮುಂದುವರಿಸಿರಿ. ನಾವು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇವೆ. ಆಮೆನ್.