WFTW Body: 

ದೇವರು ಪೂರ್ಣ ಪ್ರೀತಿಮಯನು, ಪೂರ್ಣ ಜ್ಞಾನಿಯು, ಪೂರ್ಣ ಬಲಶಾಲಿಯು ಎಂಬ ಸತ್ಯವನ್ನು ನೀವು ಅರಿತುಕೊಂಡಿದ್ದರೆ, ಅದು ನಂಬಿಕೆಯ ಗುರುತಾಗಿದೆ. ನೀವು ಈ ಸತ್ಯಗಳನ್ನು ನಂಬುವಾಗ, ಆತನ ಸ್ತುತಿ (ಸ್ತೋತ್ರ) ಗೀತೆಯನ್ನು ಹಾಡುತ್ತೀರಿ. ”ಇಸ್ರಾಯೇಲ್ಯರ ಸ್ತೋತ್ರ ಸಿಂಹಾಸನದಲ್ಲಿರುವಾತನೇ, ನೀನು ಪವಿತ್ರಸ್ವರೂಪನು” (ಕೀರ್ತನೆ 22:3). ಕೀರ್ತನೆಗಳು 22ನೇ ಅಧ್ಯಾಯವು ಕಲ್ವಾರಿ ಶಿಲುಬೆಯ ಬಗ್ಗೆ ಇರುವ ಕೀರ್ತನೆಯಾಗಿದೆ. ಕೀರ್ತನೆಗಳು 22ನೇ ಅಧ್ಯಾಯವು -”ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂಬ ವಚನದಿಂದ ಪ್ರಾರಂಭಿಸಲ್ಪಟ್ಟಿದೆ. ಯೇಸು ಈ ವಚನವನ್ನೇ ಶಿಲುಬೆಯಲ್ಲಿ ನೇತುಹಾಕಲ್ಪಟ್ಟಂತ ಸಂದರ್ಭದಲ್ಲಿ ಹೇಳಿರುವಂತದ್ದಾಗಿದೆ. ನಂತರ ಕೀರ್ತನೆಗಾರನು 3ನೇ ವಚನದಲ್ಲಿ ”ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸಮಾಡುವಾತನು” ಎಂಬುದಾಗಿ ಬರೆದಿದ್ದಾನೆ. ತದನಂತರ 13ನೇ ವಚನದಲ್ಲಿ ಆತನ ಕೈ ಮತ್ತು ಕಾಲುಗಳು ತಿವಿದಿದ್ದರ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಇದು ಸ್ಪಷ್ಟವಾಗಿ ಶಿಲುಬೆಯ ಸಂದೇಶ ಮತ್ತು ಶಿಲುಬೆಯ ಬಗ್ಗೆ ಬರೆದಿರುವ ಕೀರ್ತನೆಗಳು ಎಂಬುದಾಗಿ ಗೋಚರವಾಗುತ್ತದೆ. ನೀವು ಈ ಕೀರ್ತನೆಯಲ್ಲಿ ಮುಂದುವರೆದ ಹಾಗೇ, ಶಿಲುಬೆಗೇರಿಸಲ್ಪಟ್ಟ ಸ್ಥಿತಿಯಿಂದ, ಯೇಸು ತನ್ನ ಕಿರಿಯ ಸಹೋದರರನ್ನು, ಅಂದರೆ ನಿಮ್ಮನ್ನು ಮತ್ತು ನನ್ನನ್ನು ”ತಂದೆಗಾಗಿ ಸ್ತೋತ್ರ ಸಿಂಹಾಸನವನ್ನು ಸಿದ್ಧ ಮಾಡುವ ಸಲುವಾಗಿ” ಆತನೊಟ್ಟಿಗೆ ಸೇರುವಂತೆ ಆಹ್ವಾನಿಸುತ್ತಾನೆ; ”ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳುಸುವೆನು; ಸಭಾ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು” (ಕೀರ್ತನೆಗಳು 22:22).ಈ ವಚನವು ಇಬ್ರಿಯದವರಿಗೆ ಬರೆದ ಪತ್ರಿಕೆಯಲ್ಲಿನ 2ನೇ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇಲ್ಲಿ ಯೇಸು ತನ್ನ ತಂದೆಗೆ ಸ್ತುತಿಸುವುದನ್ನು ಸೂಚಿಸಲಾಗಿದೆ. ಈ ಸ್ತೋತ್ರ ಹೇಳುವಂತ ವಚನವು ಕೀರ್ತನೆಗಳ ಮಧ್ಯಭಾಗದಲ್ಲಿ ಬರುತ್ತದೆ. ಅಂದರೆ, ಯೇಸು ಶಿಲುಬೆಗೇರಿದ್ದರ ಬಗ್ಗೆ, ಆತನ ಕೈಗಳು ಮತ್ತು ಕಾಲುಗಳು ತಿವಿದಿದ್ದರ ಬಗ್ಗೆ ಮಾತಾನಾಡುವ ಸಂದರ್ಭದಲ್ಲಿ ಸ್ತೋತ್ರ ಹೇಳುವಂತ ವಚನವು ಬರುತ್ತದೆ. ಇದು ನಿಜವಾಗಿಯೂ ಆಸಕ್ತಿಕರವಾದ ವಿಷಯ. ಯೇಸುವನ್ನು ಶಿಲುಬೆಗೆ ಏರಿಸಿದ್ದು ಈ ಭೂಮಿಯಲ್ಲಿ ಎಸಗಿದ ಅತ್ಯಂತ ಕೆಟ್ಟ ದುಷ್ಕೃತ್ಯವಾಗಿದೆ. ಇದಕ್ಕಿಂತ ದೊಡ್ಡದಾದ ಪಾಪವು ಯಾವ ಮನುಷ್ಯನಿಂದಲೂ ಸಂಭವಿಸಿಲ್ಲ.

ಹಾಗಾದರೆ ಇದನ್ನು ಪರಿಗಣಿಸೋಣ;6000 ವರ್ಷಗಳ ಇಡೀ ಮನುಕುಲದ ಇತಿಹಾಸದಲ್ಲಿಯೇ, ಈ ಭೂಲೋಕದ ಮೇಲೆ ಸ್ಥಾನವನ್ನು ಅಲಂಕರಿಸಿದ ಅತ್ಯುತ್ತಮ ಸಂಗತಿ ಏನು? ಉತ್ತರ ಮತ್ತೊಮ್ಮೆ ಅದೇ ಆಗಿದೆ: ಅದು ಯೇಸು ಕ್ರೀಸ್ತನ ಶಿಲುಬೆಗೇರಿಸುವಿಕೆ. ಇದಕ್ಕಿಂತ ಯಾವ ಅತ್ಯುತ್ತಮ ಸಂಗತಿಯು ಈ ಭೂಲೋಕದ ಮೇಲೆ ಸ್ಥಾನವನ್ನು ಅಲಂಕರಿಸಿಲ್ಲ. ಕ್ರಿಸ್ತನ ಶಿಲುಬೆಗೇರಿಸುವಿಕೆಯಿಂದಲೇ, ನಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟಿವೆ ಮತ್ತು ನಾವು ದೇವರೊಟ್ಟಿಗೆ ನಿತ್ಯತ್ವವನ್ನು ಸಹ ಕಳೆಯಬಹುದಾಗಿದೆ. ಹಾಗಾಗಿ, ಯೇಸುವನ್ನು ಶಿಲುಬೆಗೇರಿಸಿದ್ದು ಮನುಷ್ಯನು ಎಸಗಿದ ಅತ್ಯಂತ ಕೆಟ್ಟ ಪಾಪವಾಗಿದೆ ಮತ್ತು ಈ ಭೂಲೋಕದಲ್ಲಿ ನಡೆದಿರುವಂತ ಅತ್ಯುತ್ತಮ ಸಂಗತಿಯು ಸಹ ಆಗಿದೆ. ಇದು ಏನನ್ನು ತೋರಿಸುತ್ತದೆ? ಅದೇನೆಂದರೆ, ”ಎಲ್ಲಾ ಸಂಗತಿಗಳಲ್ಲಿ ಅತ್ಯುತ್ತಮವಾದದ್ದೊರೊಳಗೆ ಮನುಷ್ಯನು ಮಾಡುವಂತ ಕೆಟ್ಟ ಸಂಗತಿಯು ದೇವರಿಂದ ತಿರುಗಿಕೊಳ್ಳುವುದಾಗಿದೆ”.

ಈಗ ಇದನ್ನು ನೀವು ಒಂದು ಸಲ ಅರ್ಥ ಮಾಡಿಕೊಂಡಾಗ, ನೀವು ಗ್ರಹಿಸಿಕೊಳ್ಳುವುದೇನೆಂದರೆ, ಜನರು ನಿಮಗೆ ಏನೇ ಕೆಟ್ಟದ್ದನ್ನು ಮಾಡಿದರೂ, ಯೇಸುವನ್ನು ಶಿಲುಬೆಗೇರಿಸಿದ್ದಕ್ಕಿಂತ ಕೆಟ್ಟದ್ದಲ್ಲ ಎಂಬುದಾಗಿ. ದೇವರು, ದುಷ್ಟ ಸಂಗತಿಯನ್ನು ಒಳ್ಳೇಯದಕ್ಕೆ ತಿರುಗಿಸುವುದಾದರೆ, ಬೇರೆಯವರು ನಿಮಗೆ ಏನೇ ಮಾಡಿದರೂ, ಅದರಲ್ಲೇನಿದೆ ಹೇಳಿ. ದೇವರು ಒಳ್ಳೇಯದಕ್ಕೆ ತಿರುಗಿಸಲು ಆಸಾಧ್ಯವಾಗಿರುವಂತದ್ದು ಯಾವುದು ಇದೆ. ನಮ್ಮ ಜೀವಿತದಲ್ಲಿ ಎದುರಾಗುವಂತಹ ಎಲ್ಲಾ ಕೆಡುಕುಗಳು ಯೇಸುವನ್ನು ಶಿಲುಬೆಗೇರಿಸದ್ದಕ್ಕಿಂತ ಕಡಿಮೆಯೇ ಆಗಿರುತ್ತವೆ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ್ದಕ್ಕಿಂತ ಕೆಟ್ಟದ್ದು ನಿಮಗೆ ಸಂಭವಿಸುವುದಿಲ್ಲ ಮತ್ತು ಆ ಕೆಟ್ಟ ಸಂಗತಿಯನ್ನು ದೇವರು ಒಳ್ಳೆಯದಕ್ಕೂ ಸಹ ತಿರುಗಿಸುತ್ತಾನೆ. ಇದು ”ಸರ್ವಶಕ್ತನಾದ ದೇವರ ಬಲದ” ಬಗ್ಗೆ ಕಲಿಸುತ್ತದೆ. ಅದಕ್ಕಾಗಿ ಆತನನ್ನು ಸ್ತುತಿಸುತ್ತೇವೆ. ಅದಕ್ಕಾಗಿಯೇ, ಕೀರ್ತನೆಗಳ ಮಧ್ಯಭಾಗವು ಶಿಲುಬೆಯ ಬಗ್ಗೆ ಬರೆಯಲ್ಪಟ್ಟಿರುವ ಕೀರ್ತನೆಯಿಂದ ತುಂಬಿಸಲ್ಪಟ್ಟಿದೆ. ”ನಾನು ನಿನೆಗೆ ಸ್ತೋತ್ರ ಸಲ್ಲಿಸುತ್ತೇನೆ” ಎಂಬ ವಾಕ್ಯವನ್ನು ನಾವು ಕೀರ್ತನೆಗಳ ಮಧ್ಯಭಾಗದಲ್ಲಿಯೇ ಕಂಡುಕೊಳ್ಳುತ್ತೇವೆ.

ನೀವು ಶಿಲುಬೆಗೆ ಏರಿಸಲ್ಪಡುವಾಗ ದೇವರಿಗೆ ಸೋತ್ರ ಸಲ್ಲಿಸಬೇಕು ಎಂದು ನಿಮಗೆ ಅನಿಸುತ್ತದಾ? ಕಳ್ಳರು ಶಿಲುಬೆಯಲ್ಲಿ ನೇತು ಹಾಕಲ್ಪಟ್ಟಾಗ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತೀರಿ? ಅವರು ದೇವರಿಗೆ ಸ್ತೋತ್ರ ಸಲ್ಲಿಸುತ್ತಿದ್ದಿಲ್ಲ. ಅವರು ನಿಂದಿಸುತ್ತಿದ್ದರು, ಅಪರಾಧ ಹೊರಿಸುತ್ತಿದ್ದರು ಮತ್ತು ಶಿಲುಬೆಗೇರಿಸಲು ಬಂದಂತಹ ಸೈನಿಕರ ಕೈಗಳನ್ನು ಕಚ್ಚುತ್ತಿದ್ದಿರಬಹುದು ಮತ್ತು ಅವರ ಮೇಲೆ ಉಗುಳುತ್ತಿದ್ದಿರಲೂ ಬಹುದು. ಆ ಸಂದರ್ಭದಲ್ಲಿ ಅವರು ಸಂತೋಷದಿಂದ ಇದ್ದಿಲ್ಲ. ಯೇಸು ಹೇಗೆ ಶಿಲುಬೆಗೇರಿಸಲ್ಪಟ್ಟನು ಎಂಬುದನ್ನು ಕಲ್ಪಿಸಿಕೊಳ್ಳುತ್ತೀರಾ? ಆತನು ತನ್ನ ಕೈ ಒಳಭಾಗವನ್ನು ಸರಿಯಾಗಿ ತೆರೆದು, ತನ್ನ ಕಾಲುಗಳನ್ನು ಒಂದರ ಮೇಲೊಂದರ ಮೇಲೆ ಇಟ್ಟುಕೊಂಡು ಮೊಳೆಗಳನ್ನು ಹೊಡೆಸಿಕೊಳ್ಳಲು ಸೈನಿಕರೊಟ್ಟಿಗೆ ಸಹಕರಿಸುತ್ತಿದ್ದಿರಬಹುದು, ಆಗ ಆ ಸೈನಿಕರು ಮೊಳೆಗಳನ್ನು ಸುಲಭವಾಗಿ ಹೊಡೆಯಲು ಅನುಕೂಲವಾಗುತ್ತಿತ್ತು, ಹೀಗಿದ್ದರೂ ಯೇಸು ಸಂತೋಷದಿಂದಿದ್ದನು. ಆತನು ಏಕೆ ಸಂತೋಷದಿಂದಿದ್ದನು? ಆತನು ಬಾಧೆ ಪಡುತ್ತಿದ್ದಿಲ್ಲವೇ? ಆತನು ಖಂಡಿತವಾಗಿ ಬಾಧೆ ಪಟ್ಟನು. ನಾನು ಮತ್ತು ನೀವು ಅನುಭವಿಸಿದಷ್ಟೇ, ಯೇಸು ಸಹ ಶಿಲುಬೆಯ ನೋವನ್ನು ಅನುಭವಿಸಿದನು. ಹಾಗಾದರೆ ಏಕೆ ಆತನು ಸಂತೋಷದಿಂದ ಇದ್ದನು? ಆತನು ತನ್ನ ತಂದೆಯ ಚಿತ್ತವನ್ನು ಮಾಡುತ್ತಿದ್ದೇನೆ ಎಂಬು ಕಾರಣಕ್ಕೆ ಸಂತೋಷದಿಂದಿದ್ದನು. ನಿಮಗೆ ಗೊತ್ತಾ, ನಾವು ತಂದೆಯ ಚಿತ್ತವನ್ನು ಮಾಡುವಾಗ, ಬಾಧೆ ಪಡುವುದು ಲೆಕ್ಕಕ್ಕೆ ಬರುವುದಿಲ್ಲ. ನಾವು ದೇವರ ಚಿತ್ತವನ್ನು ಮಾಡಲು ಬಯಕೆಯುಳ್ಳವರಾಗಿದ್ದರೆ, ಅಂತಹ ಸಂದರ್ಭದಲ್ಲೂ ಸಹ ನಾವು ಸಂತೋಷದಿಂದರಲೂ ಸಾಧ್ಯ, ನಾವು ನೋವನ್ನು ಅನುಭವಿಸಬಹುದು. ಯೇಸು ಸಹ ನೋವನ್ನು ಅನುಭವಿಸಿದನು, ಆದರೆ ಆತನು ಸಂತೋಷದಿಂದಿದ್ದನು. ಈ ಕಾರಣದಿಂದಾಗಿ, ಯೇಸು ಶಿಲುಬೆಯಲ್ಲಿ ನೇತುಹಾಕಲ್ಪಟ್ಟಿದ್ದರೂ, ತಂದೆಗೆ ಸ್ತೋತ್ರ ಸಲ್ಲಿಸಲು ಸಾಧ್ಯವಾಯಿತು. ಇದೇ ನಿಜವಾದ ಮಾರ್ಗ ಮತ್ತು ರಹಸ್ಯವಾಗಿದೆ.

ನಾವು ದೊಡ್ಡ ಉಡುಗೊರೆಯನ್ನು ಸ್ವೀಕರಿಸಿದರೂ ಅಥವಾ ನಾವು ಶಿಲುಬೆಗೇರಿಸಲ್ಪಟ್ಟರೂ, ಇದರಲ್ಲಿ ವ್ಯತ್ಯಾಸ ಬರುವುದಿಲ್ಲ, ಏಕೆಂದರೆ ಸಾರ್ವಭೌಮತ್ವ ದೇವರಲ್ಲಿ ನಾವು ನಂಬಿಕೆ ಇಟ್ಟಿದ್ದೀವಿ

ನಾನು ಮತ್ತೊಂದು ಕೀರ್ತನೆಗಳನ್ನು ತೋರಿಸುತ್ತೇನೆ, ಅದು ಸಹ ಶಿಲುಬೆಯ ಬಗ್ಗೆ ಇರುವ ಕೀರ್ತನೆಯಾಗಿದೆ. ದೇವರ ವಾಕ್ಯವು ಬಲಶಾಲಿಯಾಗಿದೆ. ಅದಕ್ಕಾಗಿಯೇ ನಾವು ಆತನ ವಾಕ್ಯವನ್ನು ಪದೇ ಪದೇ ನೋಡುವವರಾಗಿರಬೇಕು. ಮನುಷ್ಯನ ಮಾತುಗಳು ದೇವರ ಮಾತಿಗಿಂತ ಬಲಶಾಲಿಯಲ್ಲ. ಕೀರ್ತನೆಗಳು 118:11-14 ನ್ನು ಓದಿರಿ - ”ಅವರು ಸುತ್ತಲೂ ನನ್ನನ್ನು ಮುತ್ತಿದರು; ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು” ಎಂಬುದಾಗಿ ಬರೆದಿದೆ. ಇದು ಶಿಲುಬೆಯ ಬಗ್ಗೆ ಇರುವ ಕೀರ್ತನೆಯಾಗಿದೆ ಮತ್ತು ವಚನ 22 ರಲ್ಲಿ ಹೀಗೆ ಹೇಳುತ್ತದೆ, ”ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು”. ಇದೇ ವಚನವನ್ನು ಯೇಸು ಸುವಾರ್ತೆಗಳಲ್ಲಿ ಉಲ್ಲೇಖಿಸಿದ್ದಾನೆ. ಮತ್ತಾಯ 21:42 ಮತ್ತು ಮಾರ್ಕ 12:10, 11 ನ್ನು ನೀವು ಓದಿಕೊಳ್ಳಿ. ಈ ವಚನದಲ್ಲಿ ಯೇಸು ತನ್ನನ್ನೇ ನೋಡಿಕೊಂಡು ಉಲ್ಲೇಖಿಸಿರುವಂತ ವಚನ. ಮನೆ ಕಟ್ಟುವವರು ಯಾವಾಗ ಕಲ್ಲನ್ನು ತಿರಸ್ಕರಿಸಿದರು? ಅದು ಶಿಲುಬೆಯಲ್ಲಿ; ಅವರು ಹೀಗೆ ಹೇಳಿದರು, ''ಯೇಸು ನಮ್ಮ ಮೇಲೆ ರಾಜ್ಯಭಾರ ಮಾಡುವುದು ನಮಗೆ ಬೇಕಾಗಿಲ್ಲ. ಈ ಮನುಷ್ಯನು ನಮ್ಮ ಮೇಲೆ ರಾಜ್ಯಭಾರ ಮಾಡಲು ನಾವು ಬಿಡುವುದಿಲ್ಲ. ಆತನನ್ನು ಶಿಲುಬೆಗೇರಿಸೋಣ” ಎಂದು. ಆಗ ಆತನನ್ನು ತಿರಿಸ್ಕರಿಸಿದರು.

ಆದರೆ ಶಿಲುಬೆಗೆ ಏರಿಸಲ್ಪಟ್ಟು, ನೇತುಹಾಕಲ್ಪಟ್ಟಾಗ, ಕೀರ್ತನೆಗಳು 118:28,29 ರಲ್ಲಿ ಕರ್ತನು ಹೀಗೆ ಹೇಳುತ್ತಾನೆ , ”ನೀನು ನನ್ನ ದೇವರು, ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ. ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;ಆತನು ಒಳ್ಳೆಯವನು”. ನಂತರ ವಚನ 24 ರಲ್ಲಿ, ”ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ” ಎಂಬುದಾಗಿ ಕರ್ತನು ನುಡಿಯುತ್ತಾನೆ. ಆ ದಿನ, ಯೇಸು ಶಿಲುಬೆಗೇರಿಸಲ್ಪಟ್ಟ ದಿನ. ಯೆಹೋವನಿಂದ ನೇಮಕವಾದ ದಿನ ಇದೇ ಆಗಿತ್ತು. ಸಂಬಳ ಹೆಚ್ಚಾದಾಗ ಅಥವಾ ನಿಮ್ಮ ಕೆಲಸದಲ್ಲಿ ಬಡ್ತಿ ತೆಗೆದುಕೊಂಡಾಗ ಅಥವಾ ಉತ್ತಮ ಸಂಬಳ ಅಥವಾ ಉತ್ತಮ ಕೆಲಸ ಸಿಕ್ಕಾಗ ಅಥವಾ ನೀವು ಮದುವೆಯಾದಾಗ ಅಥವಾ ಉತ್ತಮ ಮನೆಯನ್ನು ತೆಗೆದುಕೊಂಡಾಗ ಅಥವಾ ಲೋಕದಲ್ಲಿ ಕೆಲವು ರೀತಿಯಲ್ಲಿ ಲಾಭ ಗಳಿಸಿಕೊಂಡಾಗ, ಯೆಹೋವನಿಂದ ನೇಮಕವಾದ ದಿನ ಇದೇ ಆಗಿದೆ ಎಂದು ಹೇಳುವಂತದ್ದು ತುಂಬಾ ಸುಲಭ. ಆದರೆ ಯಾರದರೂ ನಿಮ್ಮನ್ನು ಶಿಲುಬೆಗೇರಿಸಿದಾಗ, ”ಯೆಹೋವನಿಂದ ನೇಮಕವಾದ ದಿನ ಇದೇ ಆಗಿದೆ ” ಎಂಬುದಾಗಿ ನೀವು ಹೇಳುತ್ತೀರಾ. ಈ ಮಾತನ್ನು ಹೇಳಲು ನಂಬಿಕೆಯು ಅತ್ಯವಶ್ಯಕವಾಗಿದೆ. ಯೆಹೋವನು ನೇಮಕ ಮಾಡದೇ ಇರುವಂತ ದಿನ ಯಾವುದು? ವರ್ಷದಲ್ಲಿ ಯಾವುದಾದರೂ ಒಂದು ದಿನವನ್ನು ಯೆಹೋವನು ನೇಮಕ ಮಾಡದೇ ಇದ್ದಾನಾ? ಪ್ರತಿದಿನವನ್ನು ಸಹ ಆತನು ನೇಮಕ ಮಾಡಿದ್ದಾನೆ. ಸೈತಾನನು ಯಾವ ದಿನವನ್ನು ನೇಮಕ ಮಾಡಲಿಕ್ಕಾಗುವುದಿಲ್ಲ ಎಂಬುದನ್ನು ನಿಮಗೆ ಹೇಳುತ್ತೇನೆ. ದೇವರು ಈ ದಿನವನ್ನು ನೇಮಕ ಮಾಡಿದ್ದರೆ, ನಾವು ಸಂತೋಷಿಸಬೇಕು ಮತ್ತು ಅದರಲ್ಲಿ ಹರ್ಷಿಸಬೇಕು. ನಾವು ದೊಡ್ಡ ಉಡುಗೊರೆಯನ್ನು ಸ್ವೀಕರಿಸಿದರೂ ಅಥವಾ ನಾವು ಶಿಲುಬೆಗೇರಿಸಲ್ಪಟ್ಟರೂ, ಇದರಲ್ಲಿ ವ್ಯತ್ಯಾಸ ಬರುವುದಿಲ್ಲ, ಏಕೆಂದರೆ ಸಾರ್ವಭೌಮತ್ವ ದೇವರಲ್ಲಿ ನಾವು ನಂಬಿಕೆ ಇಟ್ಟಿದ್ದೀವಿ. ಹಾಗಾಗಿ ಪ್ರತಿನಿತ್ಯ ಸಂತೋಷಿಸಬೇಕು, ಹರ್ಷಿಸಬೇಕು ಮತ್ತು ಪ್ರತಿಯೊಂದಕ್ಕೂ ಸ್ತೋತ್ರ ಸಲ್ಲಿಸಬೇಕು.

ಹಾಗಾಗಿ, ನಾವು ಈ ಎರಡು ಕೀರ್ತನೆಗಳಲ್ಲಿ (ಕೀರ್ತನೆಗಳು 22 ನೇ ಅಧ್ಯಾಯ ಮತ್ತು 118ನೇ ಅಧ್ಯಾಯಗಳು) ಒಂದು ದೊಡ್ಡ ಸತ್ಯವನ್ನು ಕಂಡುಕೊಳ್ಳುತ್ತೇವೆ. ಅದೇನೆಂದರೆ, ”’ನಾನು ನನ್ನ ಸ್ವಾರ್ಥ ಜೀವಿತಕ್ಕೆ ಸಾಯಲು ಮನಸ್ಸುಳ್ಳವನಾಗಿದ್ದೇನೆ ಎಂಬ ಸತ್ಯವನ್ನು ಮಾತ್ರ, ಅಂದರೆ ಯಾವಾಗಲೂ ಸ್ವಾರ್ಥ ಹುಡುಕುವಂತ ಆತ್ಮದಿಂದ, ಸ್ತೋತ್ರ ಹೇಳುವಂತ ಆತ್ಮಕ್ಕೆ ಪ್ರವೇಶಿಸಬೇಕು. ಹೀಗಾದಾಗ ಮಾತ್ರ, ಭಾನುವಾರ ಬೆಳಗ್ಗೆ ನಾವು ದೇವರಿಗೆ ಸಲ್ಲಿಸುವಂತ ಸ್ತೋತ್ರ ಅರ್ಥಪೂರ್ಣವಾಗಿರುತ್ತದೆ. ಅದು ನನ್ನ ಹೃದಯದಿಂದ ಬರುತ್ತದೆ ಮತ್ತು ನಾನು ಎರಡು ಮನಸ್ಸುಳ್ಳ ಜೀವಿತದಲ್ಲಿ ಜೀವಿಸುವುದಿಲ್ಲ, ಅಂದರೆ, ”ಭಾನುವಾರ ಬೆಳಗ್ಗೆ ನಾನು ಪವಿತ್ರ ವ್ಯಕ್ತಿಯಾಗಿರುವುದು ಮತ್ತು ಭಾನುವಾರ ಸಾಯಾಂಕಾಲ ದೆವ್ವದ ರೀತಿ ವರ್ತಿಸುವುದು”, ಈ ರೀತಿಯಾಗಿ ಎರಡು ಮನಸ್ಸುಳ್ಳ ವ್ಯಕ್ತಿಯಾಗಿರಬಾರದು, ನಾನು ಸತ್ಯವನ್ನು ತಿಳಿದುಕೊಳ್ಳುವುದರ ಮೂಲಕ, ಆ ಸತ್ಯದಲ್ಲಿಯೇ ಇರಬೇಕು. ಅಂದರೆ ಎಲ್ಲಾ ಕಡೆಯು ಒಂದೇ ರೀತಿ ಇರಬೇಕು. ಹಾಗಾಗಿ, ದೇವರಿಗೆ ಸ್ತೋತ್ರ ಹೇಳುವುದರ ಜೊತೆ ನಂಬಿಕೆ ಮಾತ್ರ ಸೇರಿಕೊಳ್ಳುವುದಿಲ್ಲ, ಕ್ರಿಸ್ತನೊಟ್ಟಿಗೆ ಶಿಲುಬೆಗೇರುವುದು ಸಹ ದೇವರ ಸ್ತೋತ್ರ ದೊಟ್ಟಿಗೆ ಸೇರಿಕೊಳ್ಳುತ್ತದೆ. ನಾವು ಒಳ್ಳೆ ಬುನಾದಿಯನ್ನು ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ, ಹೀಗಾಗಿ ನಮ್ಮ ಸ್ತೋತ್ರ ಜೀವಿತವು ಧೃಢ ಅಸ್ತಿವಾರವಾಗುತ್ತದೆ.