ನಾವು ಎದುರಿಸುವಂತ ಬಹು ದೊಡ್ಡ ಸಮಸ್ಯೆಯಾದರೂ ಏನು? ಆ ಬಹುದೊಡ್ಡ ಸಮಸ್ಯೆ ಏನೆಂದರೆ, ಒಬ್ಬ ವ್ಯಕ್ತಿ ದೈವಿಕತೆಯನ್ನು ಹುಡುಕುತ್ತಾ, ಪಾಪಕ್ಕೆ ಬರುವ ಶೋಧನೆಯನ್ನು ಜಯಿಸುವುದರ ಬಗ್ಗೆ ಕಾಳಜಿ ವಹಿಸುವುದಾಗಿದೆ.
ಇಬ್ರಿಯ 4:15 ರಲ್ಲಿ ನಾವು ಓದುವುದೇನೆಂದರೆ, ”ಯೇಸು ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧನೆಗೆ ಗುರಿಯಾದನು” ಎಂಬುದಾಗಿ. ಅದಕ್ಕಾಗಿಯೇ ಆತನು ನಮ್ಮನ್ನು ಕನಿಕರಿಸುತ್ತಾನೆ. ನಾವು ಎದುರಿಸುವಂತ ಪ್ರತಿಯೊಂದು ಶೋಧನೆಯ ಪ್ರಕಾರವೇ, ಆತನು ಸಹ ಸೆಳೆಯುವಂತ ಪ್ರತಿಯೊಂದು ಶೋಧನೆಯನ್ನು ಎದುರಿಸಿದನು. ಒಂದು ಪಕ್ಷ ಹಾಗಿಲ್ಲದಿದ್ದಲ್ಲಿ, ”ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧನೆಗೆ ಗುರಿಯಾದನು” ಎಂಬುದಾಗಿ ಸತ್ಯವೇದದಲ್ಲಿ ಬರೆಯಲ್ಪಡುತ್ತಿದ್ದಿಲ್ಲ. ಸೈತಾನನು ಯೇಸುವನ್ನು ಶೋಧಿಸುವಾಗ, ಯೇಸು ಶೊಧನೆಯ ಸೆಳೆತವನ್ನು ಅನುಭವಿಸಿದನು. ಆದರೆ ಯೇಸು, ಪ್ರತಿಯೊಂದು ಶೋಧನೆಗೆ ”ಇಲ್ಲ” ಎಂಬುದಾಗಿ ಹೇಳಿದರು. ಆತನು ಆ ಶೋಧನೆಯ ಸೆಳೆತವನ್ನು ಅನುಭವಿಸದೇ ಇದ್ದಲ್ಲಿ, ಅದು ಶೋಧನೆಯಾಗುತ್ತಿರಲಿಲ್ಲ. ಶೋಧನೆಯು ಒಂದು ರೀತಿ ಹಗ್ಗ ಜಗ್ಗಾಟದ ಹಾಗೇ. ಎರಡು ತಂಡಗಳು ಹಗ್ಗವನ್ನು ಹಿಡಿದುಕೊಂಡಿರುತ್ತವೆ ಮತ್ತು ಒಬ್ಬರ ವಿರುದ್ದವಾಗಿ ಒಬ್ಬರು ಎಳೆದಾಡುತ್ತಿರುತ್ತಾರೆ. ನೀವು ಪವಿತ್ರ ಜೀವಿತವನ್ನು ಹಿಡಿಯಲು ಪ್ರಯತ್ನಿಸುವಾಗ, ಮತ್ತೊಂದು ದಿಕ್ಕಿನಲ್ಲಿ ಎಳೆದಂತೆ ಭಾವವಾಗುತ್ತದೆ. ಅದು ಶೋಧನೆಯಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಯಾರು ಹಗ್ಗವನ್ನು ಎಳೆಯುತ್ತಿಲ್ಲ ಎಂದರೆ, ಅದು ಹಗ್ಗ ಜಗ್ಗಾಟವಾಗಿರುವುದಿಲ್ಲ. ಯೇಸು ಶೋಧನೆಯ ಯಾವುದೇ ಸೆಳೆತವನ್ನು ಭಾವಿಸಿಲ್ಲವಾಗಿದ್ದರೆ, ಆತನು ನಮ್ಮ ಹಾಗೇ ಶೊಧನೆಗೆ ಗುರಿಯಾಗಿಲ್ಲ ಎಂಬುದಾಗಿ ನಾವು ಹೇಳಬಹುದಾಗಿತ್ತು. ಆಗ, ಸತ್ಯವೇದದಲ್ಲಿನ ಮತ್ತಾಯ 4:1-10 ರಲ್ಲಿ ಹೇಳುವ ಪ್ರಕಾರ, ಸೈತಾನನು ಆತನನ್ನು ಶೋಧಿಸಲ್ಪಟ್ಟನು ಮತ್ತು ಇಬ್ರಿಯ 4:15 ರಲ್ಲಿ ಹೇಳುವ ಪ್ರಕಾರ, ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧಿಸಲ್ಪಟ್ಟನು ಎಂಬುವ ವಾಕ್ಯಗಳು ಸುಳ್ಳು ಹೇಳುತ್ತಿವೆ ಎಂಬುದಾಗಿ ನಾವು ಹೇಳಬಹುದಿತ್ತು.
ಸತ್ಯವೇದದಲ್ಲಿರುವ ”ಶೋಧನೆ” ಎಂಬ ಪದವು ಯಾವಾಗಲೂ, ಪಾಪವನ್ನು ಮಾಡಲಿಕ್ಕೆ ಬರುವಂತ ಶೋಧನೆಯು ಎಂಬುದಾಗಿ ಉಲ್ಲೇಖಿಸಲ್ಪಟ್ಟಿದೆ. ಸಾಮಾನ್ಯ ಬಯಕೆಗಳು, ಅಂದರೆ ನಾವು ಸುಸ್ತಾದಾಗ ಮಲಗಲು ಬಯಸುವಂತದ್ದು ಶೋಧನೆಯಲ್ಲ. ಯೇಸು ನಮ್ಮ ಹಾಗೇ ಶೋಧಿಸಲ್ಪಟ್ಟನು ಎಂದು ಹೇಳಿರುವುದಕ್ಕೆ ಇಲ್ಲಿ ಇದು ಅರ್ಥವಲ್ಲ. ನಮ್ಮ ಹಾಗೇ ಆತನು ಪಾಪ ಮಾಡುವಂತೆ ಶೋಧನೆಗೆ ಗುರಿಯಾದನು, ಆದರೆ ಆತನು ಪಾಪ ಮಾತ್ರ ಮಾಡಲಿಲ್ಲ. ನಮಗೆ ಈ ಕ್ಷೇತ್ರದಲ್ಲಿ ಯೇಸು ಮಾದರಿಯಾಗಿದ್ದಾನಾ? ಆತನು ನಿಶ್ಚಯವಾಗಿ ಮಾದರಿಯಾಗಿದ್ದಾನೆ. ಇಬ್ರಿಯ 2:17 ರಲ್ಲಿ ನಾವು ನೋಡುವುದೇನೆಂದರೆ, ಎಲ್ಲಾ ಸಂಗತಿಗಳಲ್ಲಿ ನಮ್ಮ ಹಾಗೇಯೇ ಸಮಾನನಾಗಿ ಮಾಡಲ್ಪಟ್ಟನು. ಆತನು ದೂತನ ಹಾಗೇ ರೆಕ್ಕೆಯುಳ್ಳವನಾಗಿ ಬಂದು ಈಜುವಂತೆ ನಮಗೆ ಕಲಿಸಲಿಲ್ಲ. ಇಲ್ಲ. ಆತನು ಇಹಲೋಕಕ್ಕೆ ಆತನ ”ರೆಕ್ಕೆ”ಗಳಿಲ್ಲದೆ ನಮಗೆ ಈಜನ್ನು ಕಲಿಸಲು ಬಂದನು. ಯೇಸು ನೀರಿನ ಮೇಲೆ ನಡೆದಾಗ, ಆತನು ಗುರುತ್ವಾಕರ್ಷಣೆಯ ನಿಯಮವನ್ನು ಜಯಿಸಿದನು. ಒಂದು ವೇಳೆ ದೂತನು ನೀರಿನ ಮೇಲೆ ಹಾರಿದ್ದರೆ, ಅದು ಅದ್ಬುತವಾಗುತ್ತಿರಲಿಲ್ಲ. ಆದರೆ ಇದು ಒಂದು ಅದ್ಬುತ, ಏಕೆಂದರೆ ಯೇಸು ಗುರುತ್ವಾಕರ್ಷಣೆಯನ್ನು ಜಯಿಸಿದನು. ಯೇಸು ಪೇತ್ರನಿಗೂ ಸಹ ನೀರಿನ ಮೇಲೆ ನಡೆಯುವಂತೆ ಹೇಳಿದಾಗ, ಯೇಸು ನಿಜವಾಗಿ ಪೇತ್ರನಿಗೆ ಹೇಳಿದ್ದೇನೆಂದರೆ, ಪೇತ್ರನು ಸಹ ಯೇಸು ನಡೆದ ರೀತಿಯಲ್ಲಿಯೇ ನಡೆಯಬಹುದು ಎಂಬುದಾಗಿ. ಅದು ಪೇತ್ರನು ಯೇಸುವಿನಲ್ಲಿ ಭರವಿಸವಿಟ್ಟರೆ ಮಾತ್ರ. ನಮ್ಮ ಪರಲೋಕದಲ್ಲಿನ ತಂದೆಯು ತನ್ನ ಹಿರಿಯ ಮಗನಾದ ಯೇಸುವಿಗೆ ಪಕ್ಷಪಾತ ಮಾಡಲಿಲ್ಲ. ಆತನು ಯೇಸುವಿಗೆ ಏನು ಮಾಡಿದನೋ, ಅದನ್ನೇ ನಮಗೂ ಸಹ ಮಾಡುತ್ತಾನೆ, ಅದು ನಾವು ಆತನಲ್ಲಿ ಭರವಸವಿಟ್ಟರೆ ಮಾತ್ರ.
ಯೇಸು ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧಿಸಲ್ಪಟ್ಟರೂ, ಪಾಪ ಮಾತ್ರ ಮಾಡಲಿಲ್ಲ ಮತ್ತು ಈ ವಿಷಯದಲ್ಲಿ ಯೇಸು ನಮಗೆ ಮಾದರಿಯಾಗಿದ್ದಾರೆ. ನಾವು ಯಾವಾಗಲಾದರೂ ಶೋಧಿಸಲ್ಪಡುವಾಗ, ನಾವು ಕರ್ತನಿಗೆ ಹೀಗೆ ಹೇಳಬಹುದು, ”ಕರ್ತನೇ, ನಜರೆತೆನಲ್ಲಿನ ನಿಮ್ಮ ಇಹಲೋಕದಲ್ಲಿನ ಕೆಲ ಸಮಯದಲ್ಲಿ ನೀವೂ ಸಹ ಶೋಧಿಸಲ್ಪಟ್ಟ ಮೇರೆಗೆ, ನಾನು ಈಗ ಶೋಧಿಸಲ್ಪಡುತ್ತಿದ್ದೇನೆ. ಆ ಸಮಯದಲ್ಲಿ ಶೋಧನೆಗೆ ನೀವು ಪ್ರತಿಕ್ರಯಿಸಿದ ರೀತಿಯಲ್ಲಿ, ನಾನು ಪ್ರತಿಕ್ರಯಿಸುವಂತೆ ನನಗೆ ಸಹಾಯ ಮಾಡು”. ನೀವು ನಿರುತ್ಸಾಹ ಹೊಂದುವಂತೆ ಶೋಧಿಸಲ್ಪಡುತ್ತಿದ್ದೀರಾ ಅಥವಾ ಪಾಪವುಳ್ಳ ಕೋಪದಲ್ಲಿ ಪ್ರತಿಕ್ರಯಿಸುವಂತೆ ಶೋಧಿಸಲ್ಪಡುತ್ತಿದ್ದೀರಾ? ಯೇಸು ಸಹ ಆ ಕ್ಷೇತ್ರಗಳಲ್ಲಿ ಶೋಧಿಸಲ್ಪಟ್ಟಿದ್ದಾರೆ. ಆದರೆ ಆತನು ಪಾಪ ಮಾತ್ರ ಮಾಡಲಿಲ್ಲ. ಹಾಗಾಗಿ ನೀವು ಆತನ ಮಾದರಿಯನ್ನು ನೋಡಿ, ಹೀಗೆ ಹೇಳಬೇಕು, ”ಕರ್ತನೇ, ನಾನು ನಿನ್ನನ್ನು ಹಿಂಭಾಲಿಸಬೇಕು” ಎಂಬುದಾಗಿ. ಪವಿತ್ರಾತ್ಮನ ಶಕ್ತಿಯ ಮುಖಾಂತರ ಯೇಸು ಜೀವಿಸಿದನು. ಹಾಗಾಗಿ ನಾವು ಆತನ ಹಾಗೇ ಜೀವಿಸಲು, ನಾವೂ ಸಹ ಪವಿತ್ರಾತ್ಮನ ಶಕ್ತಿಗಾಗಿ ಹುಡುಕಬೇಕು ಮತ್ತು ಅದಕ್ಕಾಗಿಯೇ ಇಬ್ರಿಯ 4:16 ರಲ್ಲಿ ಹೀಗೆ ಹೇಳಲ್ಪಟ್ಟಿದೆ, ”ಆದುದರಿಂದ ನಾವು ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ”. ”ಆದುದರಿಂದ” ಎಂಬ ಪದವು ಹಿಂದಿನ ವಚನವಾದ, ಯೇಸು ನಮ್ಮ ಹಾಗೇ ಶೋಧಿಸಲ್ಪಟ್ಟನು, ಆದರೆ ಪಾಪ ಮಾತ್ರ ಮಾಡಲಿಲ್ಲ ಎಂಬುದರ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಆದ್ದರಿಂದ, ಯೇಸು ತಮ್ಮ ಇಹಲೋಕದ ಜೀವಿತದ ದಿನಗಳಲ್ಲಿ ಹೋದ ಹಾಗೇ, ನಾವು ಸಹ ಅದೇ ಕೃಪಾ ಸಿಂಹಾಸನದ ಕಡೆಗೆ ಹೋಗೋಣ ಮತ್ತು ಪಾಪವನ್ನು ಜಯಿಸಲು ನಮಗೆ ಸಾಧ್ಯವಾಗುವಂತೆ ಅದೇ ಕೃಪೆಯನ್ನು ಸ್ವೀಕರಿಸಿಕೊಳ್ಳೋಣ.
ಆಗ ನಿಮಗೆ ಆಶ್ಚರ್ಯವಾಗುವುದೇನೆಂದರೆ, ನೀವು ಬೀಳುವುದಿಲ್ಲ ಎಂಬುದನ್ನು ಕಂಡುಕೊಳ್ಳುವುದಾಗಿದೆ
ಇಬ್ರಿಯ 4:16 ರಲ್ಲಿ ”ಕರುಣೆ” ಮತ್ತು ”ಕೃಪೆ” ಯ ಬಗ್ಗೆ ಹೇಳಲ್ಪಟ್ಟಿದೆ. ಕರುಣೆ ಮತ್ತು ಕೃಪೆಯ ಮಧ್ಯ ವ್ಯತ್ಯಾಸವಿದೆ. ಕರುಣೆಯು ನಮ್ಮ ಹಿಂದಿನವುಗಳೊಟ್ಟಿಗೆ ವ್ಯವಹರಿಸುತ್ತದೆ, ಅದರಂತೆ ಕೃಪೆಯು ನಮ್ಮ ಭವಿಷ್ಯಕ್ಕಾಗಿ ಇದೆ. ನಾವು ಮಾಡಿದಂತ ಪಾಪದ ವಿಷಯಗಳಿಗಾಗಿ ನಮಗೆ ಕರುಣೆ ಬೇಕು. ಅದರಂತೆ ಭವಿಷ್ಯದಲ್ಲಿ ಪಾಪವನ್ನು ಜಯಿಸಲು ಸಹಾಯವಾಗುವಂತೆ ನಮಗೆ ಕೃಪೆಯ ಅಗತ್ಯತೆ ಇದೆ. ಹಳೆಯ ಒಡಂಬಡಿಕೆಯಲ್ಲಿನ ಜನರು ಕೇವಲ ಕರುಣೆಯನ್ನು ಮಾತ್ರ ಹೊಂದಿದ್ದರು. ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನ ಮುಖಾಂತರ ಕೃಪೆಯು ಬಂತು (ಯೋಹಾನ 1:17). ಯೇಸುವಿಗೆ ಕರುಣೆಯ ಅಗತ್ಯತೆ ಇರಲಿಲ್ಲ. ಏಕೆಂದರೆ ಆತನು ಎಂದಿಗೂ ಪಾಪ ಮಾಡಿರಲಿಲ್ಲ. ಆದರೆ ನಮಗೆ ಕರುಣೆ ಮತ್ತು ಕೃಪೆ ಇವೆರಡರ ಅವಶ್ಶಕತೆ ಇದೆ.
ಇಬ್ರಿಯ 4:16 ರಲ್ಲಿ ಮಾತನಾಡಿದಂತ ”ಸಮಯೋಚಿತವಾದ ಸಹಾಯ” ಏನು? ಇದರ ಅರ್ಥ, ನೀವು ಶೋಧಿಸಲ್ಪಡುವಾಗ ಎಂದು. ನೀವು ಪರ್ವತವನ್ನು ಹತ್ತುತ್ತಿದ್ದೀರಿ ಎಂದು ಅಂದುಕೊಳ್ಳೋಣ, ಹತ್ತುವಾಗ ನೀವು ಜಾರಿ, ನಿಮ್ಮ ಬೆರಳುಗಳಿಂದ ಬಂಡೆಯನ್ನು ಹಿಡಿದುಕೊಂಡಿರುತ್ತೀರಿ. ನೀವು ಹೆಚ್ಚು ಹೊತ್ತು ಹಿಡಿದುಕೊಳ್ಳಲು ಆಗುವುದಿಲ್ಲ, ಆಗ ನೀವು ಬಿದ್ದು ನಿಮ್ಮ ಮೂಳೆಗಳನ್ನು ಮುರಿದುಕೊಳ್ಳುತ್ತೀರಿ. ನಂತರ ನೀವು ಸಹಾಯಕ್ಕಾಗಿ ಗೋಳಾಡುತ್ತೀರಿ. ಆಗ ಆಂಬ್ಯುಲನ್ಸ್ ಬಂದು, ನಿಮ್ಮನ್ನು ಎತ್ತಿಕ್ಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಆಸ್ಪತ್ರೆಯಲ್ಲಿನ ವೈದ್ಯರು ನಿಮ್ಮ ಮೂಳೆಗಳನ್ನು ಜೋಡಿಸುತ್ತಾರೆ. ಅದು ಕರುಣೆ. ಆದರೆ ನೀವು ಬೀಳುವುದಕ್ಕಿಂತ ಮುಂಚೆನೇ ಸಹಾಯಕ್ಕಾಗಿ ಗೋಳಾಡಿಕೊಂಡರೆ, ಯಾರೋ ಒಬ್ಬರು ನಿಮ್ಮನ್ನು ಮೇಲಕ್ಕೆ ಎಳೆಯುತ್ತಾರೆ ಮತ್ತು ಬಂಡೆಯ ಮೇಲೆ ನಿಂತುಕೊಳ್ಳುವಂತೆ ಸಹಾಯ ಮಾಡುತ್ತಾರೆ. ಅದು ಕೃಪೆ. ನಿಮ್ಮ ನಿಜವಾದ ಅಗತ್ಯತೆಯ ಸಮಯ ಯಾವುದೇಂದರೆ, ನೀವು ಬೀಳುವುದಕ್ಕಿಂತ ಮುಂಚಿನದಾಗಿರುತ್ತದೆ. ಪವಿತ್ರಾತ್ಮನು ಕೃಪೆಯ ಆತ್ಮನಾಗಿದ್ದಾನೆ ಮತ್ತು ಆತನು ಸಹಾಯಕನು ಎಂದು ಕರೆಯಲ್ಪಟ್ಟಿದ್ದಾನೆ. ನೀವು ಬೀಳುವಂತ (ಶೋಧಿಸಲ್ಪಡುವಂತ) ಸಮಯದಲ್ಲಿ, ಬೀಳುವುದಕ್ಕಿಂತ ಮುಂಚೆಯೇ ನಿಮಗೆ ಸಹಾಯಿಸುತ್ತಾನೆ. ಅನೇಕ ಕ್ರೈಸ್ತರು ಪದೇ ಪದೇ ಬೀಳುತ್ತಿರುತ್ತಾರೆ ಮತ್ತು ಪದೇ ಪದೇ ಕರುಣೆಗಾಗಿ ಕೇಳಿಕೊಳ್ಳುತ್ತಿರುತ್ತಾರೆ. ಅವರು ಬೀಳುತ್ತಾರೆ ಮತ್ತು ನಂತರ ಅವರನ್ನು ಕ್ಷಮಿಸುವಂತೆ ದೇವರಲ್ಲಿ ಕೇಳಿಕೊಳ್ಳುತ್ತಾರೆ. ಅಂದರೆ ಅವರು ಮತ್ತೊಮ್ಮೆ ಪರ್ವತವನ್ನು ಹತ್ತಲು ಪ್ರಾರಂಭಿಸುತ್ತಾರೆ ಹಾಗೂ ಬೀಳುತ್ತಾರೆ, ಮತ್ತೊಮ್ಮೆ ಕರುಣೆಯೆಂಬ ಆಂಬ್ಯುಲೆನ್ಸ್ ನ್ನು ಕೇಳಿಕೊಳ್ಳುತ್ತಾರೆ. ಕರುಣೆಯಿಂದಾಗಿ, ಆಂಬ್ಯುಲೆನ್ಸ್ ಪ್ರತಿ ಸಮಯವು ಬರುತ್ತದೆ. ಆದರೆ ದೇವರು ಬಯಸಿದಂತೆ ನೀವು ಜೀವಿಸುವಂತ ಮಾರ್ಗ ಇದಲ್ಲ.
ಮುಂದಿನ ಸಮಯದಲ್ಲಿ ನೀವು ಶೋಧಿಸಲ್ಪಡುವಾಗ, ನೀವು ಕೋಪಗೊಳ್ಳುವಂತೆ ಅಥವಾ ಲೈಂಗಿಕತೆಯ ಹೊಲಸು ಆಲೋಚನೆಗಳನ್ನು ಯೋಚಿಸುವಂತೆ ಶೋಧಿಸಲ್ಪಡುವಾಗ, ನಿಮ್ಮ ಬೀಳುವಿಕೆಯನ್ನು ಕಂಡುಕೊಂಡು, ”ಕರ್ತನೇ, ನನಗೆ ಈಗ ಕೃಪೆ ಕೊಡು” ಎಂದು ಗೋಳಾಡಿರಿ. ಆಗ ನಿಮಗೆ ಆಶ್ಚರ್ಯವಾಗುವುದೇನೆಂದರೆ, ನೀವು ಬೀಳುವುದಿಲ್ಲ ಎಂಬುದನ್ನು ಕಂಡುಕೊಳ್ಳುವುದಾಗಿದೆ. ದೇವರ ಕೃಪೆಯು ನಿಮ್ಮನ್ನು ಮೇಲಕ್ಕೆ ಹಿಡಿದು ಎತ್ತುತ್ತದೆ. ರೋಮ 6:14 ಹೀಗೆ ಹೇಳುತ್ತದೆ. ”ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸುವುದಿಲ್ಲ, ಯಾಕೆಂದರೆ ನೀವು ಕೃಪೆಯ ಕೇಳಗಿದ್ದೀರಿ”.