WFTW Body: 

1. ದೇವರು ಯೇಸುವನ್ನು ಪ್ರೀತಿಸಿದ ಮೇರೆಗೆ ನಮ್ಮನ್ನು ಪ್ರೀತಿಸುತ್ತಾರೆ
"ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ" (ಯೋಹಾನನು 17:23).

2. ದೇವರು ಯಥಾರ್ಥ ಜನರನ್ನು ಮೆಚ್ಚುತ್ತಾರೆ
"ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ" (1ಯೋಹಾನನು 1:7).

3. ದೇವರು ಸಂತೋಷವಾಗಿ ಕೊಡುವವರನ್ನು ಮೆಚ್ಚುತ್ತಾರೆ
"ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" (2 ಕೊರಿಂಥದವರಿಗೆ 9:7).

4. ಯೇಸುವಿನ ಮೇಲೆ ದೃಷ್ಟಿಯಿಡುವುದರ ಮೂಲಕ ನಾವು ಪವಿತ್ರತೆಯನ್ನು ಹೊಂದುವೆವು
"ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು .... ಓಡೋಣ" (ಇಬ್ರಿಯರಿಗೆ 12:2).

5. ನಾವು ಸದಾಕಾಲ ಪವಿತ್ರಾತ್ಮನಿಂದ ತುಂಬಿಸಲ್ಪಡುತ್ತಿರಬೇಕು
"(ಎಲ್ಲಾ ವೇಳೆಯಲ್ಲಿ) ಪವಿತ್ರಾತ್ಮಭರಿತರಾಗಿರಿ" (ಎಫೆಸದವರಿಗೆ 5:19 - ಅಕ್ಷರಶಃ ಅನುವಾದ).

6. ಶಿಲುಬೆಯ ಮಾರ್ಗವು ಜೀವಿಸುವ ಮಾರ್ಗವಾಗಿದೆ
"ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುವೆವು" (2ತಿಮೊಥೆಯನಿಗೆ 2:11).

7. ಮನುಷ್ಯರ ಅಭಿಪ್ರಾಯಗಳಿಂದ ನಾವು ಧೈರ್ಯಗೆಡಬಾರದು
"ಉಸಿರು ಮೂಗಿನಲ್ಲಿರುವ ತನಕ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಯಾವ ಗಣನೆಗೆ ಬಂದಾನು?" (ಯೆಶಾಯನು 2:22).

8. ಈ ಲೋಕದ ಅಮೂಲ್ಯ ಸಂಗತಿಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ
"ಮನುಷ್ಯರಲ್ಲಿ ಅತಿ ಶ್ರೇಷ್ಠವೆನಿಸಿಕೊಳ್ಳುವಂತದ್ದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ" (ಲೂಕನು 16:15).
"ಹಣದಾಸೆಯುಳ್ಳವರು ಮತ್ತು ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು (1) ದುಷ್ಪ್ರೇರಣೆಗೆ ಒಳಗಾಗುವರು; (2) ಉರ್ಲಿನಲ್ಲಿ ಸಿಕ್ಕಿಕೊಳ್ಳುವರು; (3) ಬುದ್ಧಿವಿರುದ್ಧವಾದ ಆಶೆಗಳಲ್ಲಿ ಬೀಳುತ್ತಾರೆ; (4) ಹಾನಿಕರ ಆಶೆಗಳಲ್ಲಿ ಬೀಳುತ್ತಾರೆ; (5) ಸಂಹಾರದಲ್ಲಿ ಮುಳುಗುತ್ತಾರೆ; (6) ನಾಶನದಲ್ಲಿ ಮುಳುಗುತ್ತಾರೆ; (7) ಕ್ರಿಸ್ತ ನಂಬಿಕೆಯನ್ನು ಬಿಟ್ಟು ಅಲೆದಾಡುತ್ತಾರೆ; (8) ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ" (1ತಿಮೊಥೆಯನಿಗೆ 6:9,10).

9. ನಾವು ನಮ್ಮಿಂದಲೇ ಹೊರತಾಗಿ ಬೇರೆ ಯಾರಿಂದಲೂ ಹಾನಿಗೆ ಒಳಗಾಗುವುದಿಲ್ಲ
"ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ, ನಿಮಗೆ ಕೇಡು ಮಾಡುವವರು ಯಾರಿದ್ದಾರೆ?" (1 ಪೇತ್ರನು 3:13).

10. ದೇವರು ನಮ್ಮಲ್ಲಿ ಪ್ರತಿಯೊಬ್ಬರ ಜೀವಿತಕ್ಕಾಗಿ ಒಂದು ಪರಿಪೂರ್ಣ ಯೋಜನೆಯನ್ನು ಇರಿಸಿಕೊಂಡಿದ್ದಾರೆ
"ನಾವು ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡೆಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇಮಿಸಿದರು" (ಎಫೆಸದವರಿಗೆ 2:10).

11. ದೇವರನ್ನು ನಿಕಟವಾಗಿ ಅರಿಯುವುದು ಬಲಶಾಲಿಯಾಗುವ ರಹಸ್ಯವಾಗಿದೆ
"ತಮ್ಮ ದೇವರನ್ನು ಅರಿತವರು ದೃಢಚಿತ್ತರಾಗಿ ಕೃತಾರ್ಥರಾಗುವರು" (ದಾನಿಯೇಲನು 11:32).

12. ಹೊಸ ಒಡಂಬಡಿಕೆಯು ಹಳೆಯ ಒಡಂಬಡಿಕೆಗಿಂತ ಬಹಳ ಉತ್ತಮವಾದದ್ದಾಗಿದೆ
"ಯೇಸುವು ಒಂದು ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ" (ಇಬ್ರಿಯರಿಗೆ 8:6).

13. ನಾವು ದೇವಭಕ್ತರಾಗಿ ಜೀವಿಸುವುದಾದರೆ ಹಿಂಸೆಗೆ ಒಳಗಾಗುತ್ತೇವೆ
"ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು" (2 ತಿಮೊಥೆಯನಿಗೆ 3:12).

14. ದೇವರು ಒಪ್ಪಿಕೊಂಡಿರುವ ಪ್ರತಿಯೊಬ್ಬನನ್ನೂ ನಾವು ಸ್ವೀಕರಿಸಬೇಕು
"ದೇವರು ಕ್ರಿಸ್ತನ ದೇಹದ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ಇಟ್ಟಿದ್ದಾರೆ ... ಹಾಗಾಗಿ ದೇಹದ ಅಂಗಗಳಲ್ಲಿ ಬೇಧವೇನೂ ಇರುವುದಿಲ್ಲ" (1ಕೊರಿಂಥದವರಿಗೆ 12:18,25).

15. ನಾವು ಪ್ರತಿಯೊಬ್ಬ ಮನುಷ್ಯನೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು
"ನಾವು ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ. ನನ್ನ ಸಹೋದರರೇ, ಹೀಗಿರುವುದು ಯೋಗ್ಯವಲ್ಲ" (ಯಾಕೋಬನು 3:9,10).

16. ನಾವು ನಮ್ಮ ಎಲ್ಲಾ ಅವಶ್ಯತೆಗಳಿಗಾಗಿ ದೇವರಲ್ಲಿ ಭರವಸೆ ಇಡಬೇಕು
"ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವರು" (ಫಿಲಿಪ್ಪಿಯವರಿಗೆ 4:19) .

ಅಂತಿಮ ಟಿಪ್ಪಣಿಗಳು: ಹಣದ ಸಂಬಂಧದಲ್ಲಿ ಪೂರ್ಣಾವಧಿ ಕ್ರೈಸ್ತ ಸೇವಕರಿಗೆ "ನಿಷೇಧಿಸಲಾದ" 10 ಅಂಶಗಳು
1. ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ದೇವರಿಗೆ ಹೊರತಾಗಿ ಎಂದಿಗೂ ಬೇರೆ ಯಾರಿಗೂ ತಿಳಿಸಬೇಡಿರಿ (ಫಿಲಿಪ್ಪಿಯವರಿಗೆ 4:19).

2. ಅವಿಶ್ವಾಸಿಗಳಿಂದ ಎಂದಿಗೂ ಹಣವನ್ನು ತೆಗೆದುಕೊಳ್ಳಬೇಡಿರಿ (3ಯೋಹಾನನು 7).

3. ಎಂದಿಗೂ ಯಾವುದೇ ಕಾಣಿಕೆ ಅಥವಾ ಕೊಡುಗೆಗಳನ್ನು ಯಾರಿಂದಲೂ ನಿರೀಕ್ಷಿಸಬೇಡಿ (ಕೀರ್ತನೆಗಳು 62:5).

4. ಯಾರಾದರೂ ಹಣ ಕೊಟ್ಟು ನಿಮ್ಮನ್ನು ಅಥವಾ ನಿಮ್ಮ ಸೇವೆಯನ್ನು ನಿಯಂತ್ರಿಸುವದಕ್ಕೆ ಎಂದಿಗೂ ಅವಕಾಶ ನೀಡಬೇಡಿರಿ.

5. ನಿಮ್ಮ ಕ್ರೈಸ್ತ ಸೇವೆಯನ್ನು ಸ್ವೀಕರಿಸದಂತ ಯಾರಿಂದಲೂ ಹಣವನ್ನು ಎಂದಿಗೂ ಸ್ವೀಕರಿಸಬೇಡಿರಿ.

6. ನಿಮಗಿಂತ ಬಡವರಾದ ಜನರಿಂದ ನಿಮ್ಮ ವೈಯಕ್ತಿಕ ಅಥವಾ ಕುಟುಂಬದ ಅವಶ್ಯಕತೆಗಳಿಗಾಗಿ ಎಂದಿಗೂ ಹಣವನ್ನು ಪಡೆಯದಿರಿ.

7. ಯಾವುದೇ ಮನುಷ್ಯನನ್ನು ನಿಮ್ಮ ಹಣದ ಅವಶ್ಯಕತೆಗಳಿಗಾಗಿ ಎಂದಿಗೂ ಅವಲಂಬಿಸದಿರಿ.

8. ದೇವರ ಹಣವನ್ನು ನಿರ್ವಹಿಸುವಂತ ವಿಷಯದಲ್ಲಿ ಇತರರಿಗೆ ಸಂದೇಹ ಉಂಟಾಗುವ ರೀತಿಯಲ್ಲಿ ಎಂದಿಗೂ ನಡೆದುಕೊಳ್ಳಬೇಡಿರಿ (2 ಕೊರಿಂಥದವರಿಗೆ 8:20,21).

9. ಹಣವನ್ನು ಪಡೆದಕ್ಕಾಗಿ ಎಂದಿಗೂ ಉಲ್ಲಾಸಿಸದಿರಿ.

10. ಹಣವನ್ನು ಕಳೆದುಕೊಂಡದ್ದಕ್ಕಾಗಿ ಎಂದಿಗೂ ಮನಗುಂದದಿರಿ.