ಇಬ್ರಿಯ 6:1-3 ರಲ್ಲಿ ನಾವು ಪ್ರಬುದ್ಧತೆಯ/ಪ್ರೌಢಾವಸ್ಥೆಯ ಕಡೆ ನಡೆಯುವುದರ (ದೊಡ್ಡವರಾಗಿ ಬೆಳೆಯುವುದರ) ಬಗ್ಗೆ ಈ ಪತ್ರದ ಲೇಖಕನು ಹೇಳುತ್ತಾನೆ. ಅಧ್ಯಾಯ 5ರಲ್ಲಿ ಅವನು ಮಾಂಸ ತಿನ್ನುವ ಮತ್ತು ಮತ್ತು ಹಾಲು ಕುಡಿಯುವ ಉದಾಹರಣೆಯನ್ನು ಉಪಯೋಗಿಸುತ್ತಾನೆ. ಈಗ ಅವನು ಇನ್ನೆರಡು ಉದಾಹರಣೆಗಳನ್ನು ಉಪಯೋಗಿಸುತ್ತಾನೆ. ಮೊದಲನೆಯದಾಗಿ, ಪ್ರಾಥಮಿಕ ಬೋಧನೆ ಹಾಗೂ ಉನ್ನತವಾದ ಬೋಧನೆ; ನಂತರ, ಎರಡನೆಯದಾಗಿ ಕಟ್ಟಡದ ಬುನಾದಿ(ಅಸ್ತಿವಾರ) ಹಾಗೂ ಬುನಾದಿಯ ಮೇಲಿನ ಕಟ್ಟಡ. ಈ ಎರಡೂ ಚಿತ್ರಣಗಳ ಉದ್ದೇಶವೇನೆಂದರೆ, ಕ್ರಿಸ್ತೀಯ ಜೀವನದಲ್ಲಿ ಪ್ರಬುದ್ಧರಾಗಿರುವವರ (ಬೆಳೆದಿರುವವರ) ಮತ್ತು ಕೂಸುಗಳಾಗಿರುವವರ ಮಧ್ಯವಿರುವ ಅಂತರವನ್ನು ತಿಳಿಸುವುದಾಗಿದೆ. ಇವರಿಬ್ಬರ ನಡುವಿನ ವ್ಯತ್ಯಾಸ ಶೋಧನೆಯ ಸಮಯದಲ್ಲಿ ಕಾಣಲ್ಪಡುತ್ತದೆ. ಕ್ರೈಸ್ತ ಜೀವಿತದಲ್ಲಿ ಬೆಳೆದಿರುವವರು, ಶೋಧನೆಯ ಕಾಲದಲ್ಲಿ ಕ್ರಿಸ್ತನ ಹಾಗೆ ಪ್ರತಿಕ್ರಿಯೆ ನೀಡುತ್ತಾರೆ ಹಾಗೂ ಕೂಸುಗಳಾಗಿರುವವರು, ಮಾನವೀಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
ಬಹುತೇಕ ವಿಶ್ವಾಸಿಗಳು ಮಾನವೀಯ ರೀತಿಯಲ್ಲಿ ವರ್ತಿಸುತ್ತಾರೇ ಹೊರತು, ದೈವಿಕವಾಗಿ ಅಲ್ಲ. ನಮ್ಮನ್ನು ನಾವೇ ಪರೀಕ್ಷಿಸೋಣ. ಉದಾಹರಣೆಗೆ ಇನ್ನೊಬ್ಬರ ಜೊತೆ ನೀವು (ಕುಳಿತುಕೊಂಡು) ಇರುವಾಗ ನೀವು ಹೇಳಿದ ಜೋಕಿನಿಂದ ಒಬ್ಬ ವ್ಯಕ್ತಿಗೆ ಮುಜುಗರವನ್ನುಂಟುಮಾಡುವುದಾದರೆ, ಯೇಸು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದನೋ ಎಂದು ಎಂದು ತಕ್ಷಣವೇ ನಿಮ್ಮನ್ನೇ ನೀವು ಎಂದಾದರೂ ಪ್ರಶ್ನಿಸಿದ್ದೀರಾ?
ಈ ರೀತಿಯಾಗಿ ನೀವು ನಿಮ್ಮನ್ನೇ ಪ್ರಶ್ನಿಸದಿದ್ದರೆ, ನಿನ್ನ ಮಾನವೀಯ ವರ್ತನೆಯ ಬಗ್ಗೆ ನಿನಗೆಂದಿಗೂ ಬೆಳಕು ಸಿಗುವುದಿಲ್ಲ (ಅರಿವಾಗುವುದಿಲ್ಲ) ಮತ್ತು ಕ್ರೈಸ್ತ ಜೀವಿತದಲ್ಲಿ ನೀನು ಮಗುವಾಗಿಯೇ ಇರುತ್ತೀಯ. ಪ್ರತಿದಿನದ ಬೇರೆ ಬೇರೆ ಸಮಯದಲ್ಲಿ ನಾವು ಕ್ರಿಸ್ತನ ಹಾಗೆ ವರ್ತಿಸುತ್ತೇವೋ ಅಥವಾ ಪ್ರತಿಕ್ರಿಯಿಸುತ್ತೇವೋ ಎಂದು ನಾವು ನಮ್ಮನ್ನೇ ಪರೀಕ್ಷಿಸಿಕೊಳ್ಳುವದು ಒಳ್ಳೆಯದಾಗಿದೆ. ಈ ರೀತಿಯಾಗಿ ಪರೀಕ್ಷೆ ಮಾಡಿಕೊಳ್ಳದಿದ್ದರೆ ನೀನು ಕ್ರಿಸ್ತೀಯ ಜೀವಿತದಲ್ಲಿ ಬೆಳೆಯುವುದಿಲ್ಲ. ಎಂದಿಗೂ ಮೇಲಿನ ಕಟ್ಟಡ ಕಟ್ಟಲ್ಪಡದೆ, ನೀನು ಕೇವಲ ಬುನಾದಿಯ ಮೇಲೆಯೇ ಜೀವಿಸುತ್ತೀಯ. ಚಿಕ್ಕಮಕ್ಕಳು ಬಾಲವಾಡಿಯಲ್ಲಿ ಕಲಿಯುವ ಪ್ರಕಾರ ನೀವೂ ಕೂಡ ಕೇವಲ ಹಾಲು ಕುಡಿಯುತ್ತಾ ಇರಬೇಕಾಗುತ್ತದೆ. ಆದರೆ ಪವಿತ್ರಾತ್ಮನನ್ನು ಆಲಿಸಿ, ಆತ್ಮಿಕ ಶಿಕ್ಷಣದಲ್ಲಿ ಮುಂದುವರಿಯುವುದರ/ಬೆಳೆಯುವುದರ ಬಗ್ಗೆ ನೀನು ಗಂಭೀರವಾಗಿದ್ದರೆ, ಬೇಗನೇ ನೀನು ಪ್ರೌಢಾವಸ್ಥೆಯನ್ನು ತಲುಪುತ್ತೀಯ. ಮತ್ತೊಂದು ಉದಾಹರಣೆಯನ್ನು ನೋಡೋಣ: ಪ್ರಬುಧ್ಧತೆಯನ್ನು ತಲುಪುವುದೆಂದರೆ, (10,000ಮೀಟರ್ ಎತ್ತರದ) ಒಂದು ದೊಡ್ಡ ಪರ್ವತವನ್ನು ಹತ್ತುವುದಾಗಿದೆ.
ಯೇಸುವು ಆಗಲೇ ಶಿಖರವನ್ನು(ಪರ್ವತದ ತುದಿಯನ್ನು) ಮುಟ್ಟಿದ್ದಾನೆ. ನಾವು ಹೊಸದಾಗಿ ಹುಟ್ಟಿದಾಗ ಈ ಪರ್ವತದ ಕೆಳಭಾಗದಿಂದ ಪ್ರಾರಂಭಿಸುತ್ತೇವೆ. ನಮ್ಮ ಗುರಿ ಯೇಸುವನ್ನು ಹಿಂಬಾಲಿಸುವುದಾಗಿದೆ ಮತ್ತು ಇದು ಎಷ್ಟೇ ಸಮಯ ತೆಗೆದುಕೊಂಡರೂ ಸರಿ, ಶಿಖರದ ಕಡೆ ಮುಂದುವರಿಯುವುದಾಗಿದೆ. ಈ ರೀತಿಯಾಗಿ ಜೀವಿಸಿದಾಗ, ನಾವು ಕೇವಲ 100 ಮೀಟರ್ ಹತ್ತಿದರೂ ನಮ್ಮ ಕಿರಿಯ ಸಹೋದರ, ಸಹೋದರಿಯರಿಗೆ 1 ಕೊರಿಂಥ 11:1 ರಲ್ಲಿ ಹೇಳುವ ಪ್ರಕಾರ "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ." ಎಂದು ನಾವು ಹೇಳಬಹುದು.
ನಮಗೆ ತಳಹದಿ(ಬುನಾದಿ)ಯಾವುದು? ಹಾಲು ಎಂದರೇನು? ಬಾಲವಾಡಿಯಲ್ಲಿ ನಾವೇನು ಕಲಿಯುತ್ತೇವೆ? ಮೊದಲನೆಯದಾಗಿ ಮಾನಸಾಂತರ ಪಡುವುದು (ಇಬ್ರಿಯ 6:1). ಅಂದರೆ, ಕೇವಲ ಪಾಪಗಳಿಂದ ತಿರುಗುವದಷ್ಟೆ ಅಲ್ಲದೆ, ಮತ್ತು ನಿರ್ಜೀವ ಕೆಲಸಗಳಿಂದ ತಿರುಗುವುದಾಗಿದೆ. ಹಳೆಯ ಒಡಂಬಡಿಕೆಯಲ್ಲಿ ಜನರಿಗೆ ಕೇವಲ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಬಗ್ಗೆ ತಿಳಿದಿತ್ತು. ಆದರೆ ಹೊಸ ಒಡಂಬಡಿಕೆಯಲ್ಲಿ ಒಳ್ಳೆಯ, ಕೆಟ್ಟ ಮತ್ತು ನಿರ್ಜೀವ ಕೆಲಸಗಳ ಬಗ್ಗೆ ಹೇಳಲಾಗಿದೆ. ನಿರ್ಜೀವ ಕಾರ್ಯಗಳು ಯಾವವೆಂದರೆ, ತಪ್ಪಾದ ಆಲೋಚನೆಯಿಂದ ನಾವು ಮಾಡುವ ಕೆಲಸಗಳು. ಉದಾಹರಣೆಗೆ, ದೇವರ ವಾಕ್ಯವನ್ನು ಪ್ರಚಾರ ಮಾಡುವದು ಒಳ್ಳೆಯದೇ ಆಗಿದೆ. ಆದರೆ ಒಬ್ಬನು ಅದನ್ನು ತನ್ನ ಹೊಗಳಿಕೆಗೆ ಅಥವಾ ಹಣಕ್ಕಾಗಿ ಮಾಡಿದರೆ ಅದು ನಿರ್ಜೀವ ಸೇವೆಯಾಗುತ್ತದೆ. ನಾವು ದೇವರ ಕೆಲಸಕ್ಕಾಗಿ ಹಣವನ್ನು ಸಂತೋಷವಿಲ್ಲದೆ ಕೊಡುವಾಗ ಅದು ನಿರ್ಜೀವ ಸೇವೆಯಾಗುತ್ತದೆ. ಈ ರೀತಿಯಾಗಿ ಹಲವು ಉದಾಹರಣೆಗಳಿವೆ. ಯಾವುದೇ ಸೇವೆಯನ್ನು ಸಂತೋಷ ಮತ್ತು ನಂಬಿಕೆಯಿಲ್ಲದೆ ಮಾಡುವುದು ನಿರ್ಜೀವವಾದ ಸೇವೆಯಾಗಿದೆ. ಇದು ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವಂಥದ್ದಾಗಿದ್ದರೂ ಕೂಡ ಅದು ಪ್ರಯೋಜನವಿಲ್ಲದಾಗುತ್ತದೆ. ನಾವು ಅಂಥಹ ಸೇವೆ(ಕಾರ್ಯ)ಗಳಿಂದ ಮಾನಸಾಂತರ ಹೊಂದಬೇಕಾಗಿದೆ ಮತ್ತು ನಮ್ಮ ಸ್ವಾರ್ಥ ಉದ್ದೇಶಗಳಿಂದ ದೇವರ ಕಡೆ ತಿರುಗಬೇಕಾಗಿದೆ.
ಬುನಾದಿಯ ಇತರ ಭಾಗಗಳು ಯಾವುವೆಂದರೆ, ಯೇಸುವಿನಲ್ಲಿ ನಂಬಿಕೆಯಿಡುವುದು, ನೀರಿನಲ್ಲಿ ದೀಕ್ಷಾಸ್ನಾನ ಹೊಂದುವದು, ಪವಿತ್ರಾತ್ಮನ ದೀಕ್ಷಾಸ್ನಾನ ಹೊಂದುವದು, ಪವಿತ್ರಾತ್ಮನ ವರಗಳನ್ನು ಪಡೆಯುವದು, ಯೇಸುವಿನ ಆಗಮನ ಕಾಲದಲ್ಲಿ ಪುನರುಥ್ಥಾನ ಹೊಂದುವದು, ಮತ್ತು ಅಂತಿಮ ನ್ಯಾಯತೀರ್ಪಿಗಾಗಿ ಸಿದ್ಧರಾಗಿರುವದು (2 ಕೊರಿಂಥ 5:10). ಇವೆಲ್ಲವು ಚಿಕ್ಕಮಕ್ಕಳು ಬಾಲವಾಡಿಯಲ್ಲಿ ಕಲಿಯುವ ಪಾಠಗಳಾಗಿವೆ. ಕ್ರೈಸ್ತರು ಈ ಪಾಠಗಳನ್ನು ಮಾತ್ರ ತಿಳಿದುಕೊಂಡಿದ್ದರೆ ಅವರು ಕೇವಲ ಮಕ್ಕಳಾಗಿದ್ದಾರೆ ಮತ್ತು ಅವರ ಮನೆಯು ಇನ್ನೂ ಬುನಾದಿಯ ಮಟ್ಟದಲ್ಲಿಯೇ ಇದೆ. ನಾವು ಅಲ್ಲಿಂದ ಇನ್ನೂ ಮುಂದೆ ನಡೆಯುತ್ತಾ, ಸಾಗುತ್ತಾ ಹೆಚ್ಚಿನ ಪ್ರೌಢತೆಗೆ ಮತ್ತು ಪರಿಪೂರ್ಣತೆಗೆ ನಮ್ಮ ಜೀವನದ ಎಲ್ಲಾ ಭಾಗಗಳಲ್ಲಿ ಕ್ರಿಸ್ತನ ಹಾಗೆ ಆಗಲಿಕ್ಕೆ ನಾವು ಒತ್ತು ಕೊಡಬೇಕು.
ಒಬ್ಬ ಕ್ರೈಸ್ತ ವಿಶ್ವಾಸಿ ಹಾಲು ಕುಡಿಯುವಂಥಹ ಮಕ್ಕಳ ಪಾಠದಿಂದ ಗಟ್ಟಿಯಾದ ಆಹಾರವನ್ನು ತಿನ್ನುವದಕ್ಕೆ ಮುಂದೆ ಸಾಗಬೇಕು. ಮತ್ತು ತಳಹದಿಯಿಂದ ಎತ್ತರದ ಮಹಡಿಯನ್ನು ಹತ್ತಬೇಕು. ಹಾಗೂ ಮಕ್ಕಳ ಬಾಲವಾಡಿ ತರಗತಿಯಿಂದ ದೊಡ್ಡ ತರಗತಿಗೆ ಮುನ್ನಡೆಯಬೇಕು ಎಂಬುದು ಇಬ್ರಿಯ ಪತ್ರಿಕೆಯ ಲೇಖಕನ ಹೃದಯದ ಭಾರವಾಗಿದೆ. ಈ ಭೂಮಿಯ ಮೇಲೆ ಯಾರೂ ಬಾಲ್ಯಾವಸ್ಥೆಯಲ್ಲೇ ಇರಲು ಇಚ್ಚಿಸುವದಿಲ್ಲ ಹಾಗೂ ಯಾರಿಗೂ ಬಾಲವಾಡಿ ತರಗತಿಯಷ್ಟೆ ಓದಲು ಇಷ್ಟಪಡುವದಿಲ್ಲ. ಮತ್ತು ಯಾರೂ ತಮ್ಮ ಮನೆಗೆ ಕೇವಲ ಬುನಾದಿ ಹಾಕಿ ಅದನ್ನು ಅಷ್ಟಕ್ಕೇ ಬಿಡುವದಿಲ್ಲ. ಆದರೆ, ಅನೇಕ ವಿಶ್ವಾಸಿಗಳು ಇಷ್ಟರಲ್ಲಿಯೇ ಸಂತೃಪ್ತರಾಗಿದ್ದಾರೆ. ಅನೇಕ ಸುವಾರ್ತಾ ಸೇವಕರು ಮತ್ತು ಪಾಸ್ಟರ್ ಆಗಿರುವವರು ಚಿಕ್ಕ ಮಕ್ಕಳಂತಿದ್ದಾರೆ. ಪರಿಣಾಮವಾಗಿ, ಅವರ ಸಭೆಯಲ್ಲಿರುವವರೆಲ್ಲರೂ ಚಿಕ್ಕ ಮಕ್ಕಳಂತಿದ್ದಾರೆ.
ಇಬ್ರಿಯ 6:1 ರಲ್ಲಿ "ಪ್ರಥಮ ಭೋದನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ." ಕೇವಲ ಬಾಲ ಬೋಧನೆಯಿಂದ ನಾವು ಪ್ರೇರೇಪಿಸಲ್ಪಟ್ಟರೆ, ನಮ್ಮ ಬೋಧನೆಯಿಂದ ಕೇವಲ ದೇವರ ತಿಳುವಳಿಕೆಯಲ್ಲಿ ಬಾಲ್ಯರಾಗಿರುವಂಥವರೇ ಉಂಟಾಗುತ್ತಾರೆ. ಹೊಸ ಒಡಂಬಡಿಕೆಯ ಮುಖ್ಯವಾದ ಸಂದೇಶ ಕೇವಲ ಜನರ ಪಾಪಗಳು ಕ್ಷಮಿಸಲ್ಪಡುವದಲ್ಲ. ಒಂದು ವೇಳೆ ಈ ಮಾತು ನಿಜವಾಗಿದ್ದರೆ, ದೇವರ ವಾಕ್ಯ ಹೀಗೆ ಹೇಳುತ್ತಿತ್ತು, "ನಾವು ಮಕ್ಕಳನ್ನೇ ಉಂಟು ಮಾಡೋಣ." ಆದರೆ ದೇವರ ವಾಕ್ಯವು ನಾವು ಇನ್ನೂ ಹೆಚ್ಚಿನ ಪ್ರೌಢತೆಗೆ ಬರಲು ನಮ್ಮನ್ನು ಒತ್ತಾಯಪಡಿಸುತ್ತದೆ. ಆದ್ದರಿಂದ ಎಲ್ಲಾ ಬಾಲಕರು ಪ್ರೌಢತೆಗೆ ಬರಲೇಬೇಕು.
ಸಭೆಗಳು ಮಕ್ಕಳಿಂದ ತುಂಬಿರುವದರಿಂದಲೇ ಅನೇಕ ಸಭೆಗಳಲ್ಲಿ ನಾವು ಕಾಣುವುದೇನೆಂದರೆ, ತಮ್ಮ-ತಮ್ಮೊಳಗೆ ಕಚ್ಚಾಟ, ಕೋರ್ಟ್-ಕೇಸುಗಳು, ಸಭಾ-ನಾಯಕರಲ್ಲಿ ವ್ಯಭಿಚಾರ ಮತ್ತು ದುಡ್ಡಿನ ಆಸೆ ಇತ್ಯಾದಿ. ಮಕ್ಕಳು ಯಾವಾಗಲು ಈ ರೀತಿ ಜಗಳವಾಡುತ್ತಾರೆ. ಆದರೆ ನಾವು ಪ್ರೌಢತೆಗೆ ಬೆಳೆಯುವಾಗ ಜಗಳವಾಡುವದಿಲ್ಲ ಮತ್ತು ಸಭೆಯಲ್ಲಿ ಯಾವುದೇ ಸ್ಥಾನ-ಮಾನಗಳಿಗಾಗಿ ಆಸೆಪಡುವದಿಲ್ಲ. ನೀವು ಸಭೆಯಲ್ಲಿ ಸ್ಥಾನ-ಮಾನಗಳಿಗೆ ಜಗಳಾಡುವದಾಗಲಿ, ಅಥವಾ ಆಸೆಪಡುವದಾದರೆ ನೀವಿನ್ನೂ ಮಕ್ಕಳಾಗಿದ್ದೀರಿ.
ಬೇಸರದ ವಿಷಯವೇನೆಂದರೆ ಈಗಿನ ಕ್ರೈಸ್ತ ವಿಶ್ವಾಸಿಗಳಲ್ಲಿ ಅನೇಕ ನಾಯಕರು ಇನ್ನೂ ಮಕ್ಕಳಾಗಿದ್ದಾರೆ. ಮಕ್ಕಳಿಂದ ತುಂಬಿದ ಸಭೆಯನ್ನು ಕಟ್ಟುವದೆಂದರೆ ಛಾವಣಿ ಮತ್ತು ಗೋಡೆಗಳಲ್ಲಿದೆ ಕೇವಲ ಬುನಾದಿಯನ್ನು ಮಾತ್ರ ಹಾಕುವುದಾಗಿದೆ.