ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ಪುರುಷರಿಗೆ
WFTW Body: 

ಯೇಶಾಯ ಪುಸ್ತಕದ 6ನೇ ಅಧ್ಯಾಯದಲ್ಲಿ, ಯೆಶಾಯನಿಗೆ ಸಿಂಹಾಸನ ಮತ್ತು ಯಜ್ಞವೇದಿಯ ದರ್ಶನವಾಯಿತು. ನಂತರ ಪ್ರಭುವೇ ಹೀಗೆ ಕೇಳಿದರು ‘’ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುತ್ತಾರೆ?” ಎಂದು (ಯೆಶಾಯ 6:8) ಯೆಶಾಯ ಹೀಗೆ ಉತ್ತರಿಸುತ್ತಾನೆ. “ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸಿ’’.

ನಾವು ಸಿಂಹಾಸನ ಮತ್ತು ಯಜ್ಞವೇದಿಯನ್ನು ಯಾವಾಗಲೂ ನೋಡುತ್ತಿರಬೇಕು. ನಾವು ಮೊದಲು ದೇವರ ಪರಿಶುದ್ಧತೆಯ ದರ್ಶನ ಹೊಂದಿ ದೂಳಿನಲ್ಲಿ ಬೀಳಬೇಕು ಮತ್ತು ನಂತರ ನಾವು ಮೇಲೆತ್ತಲ್ಪಡಬೇಕು. ಏಕೆಂದರೆ ಯಜ್ಞವೇದಿಯಿಂದ ಹರಿದ ರಕ್ತವು ನಮ್ಮನ್ನು ಶುದ್ಧ ಮಾಡುತ್ತದೆ. ಆನಂತರವೇ ನಾವು ಮುಂದೆ ಹೋಗಿ ದೇವರ ಸೇವೆ ಮಾಡಬಹುದು. ದೇವರು ನಮ್ಮನ್ನು ಕಳಿಸದಿದ್ದರೆ ನಾವು ಮುಂದೆ ಹೋಗಲು ಸಾಧ್ಯವಿಲ್ಲ. ದೇವರು ನಮ್ಮನ್ನು ಕಳುಹಿಸದೆ ನಾವೇ ಮುಂದೆ ಹೋದರೆ, ನಾವು ಮಾಡುವ ಕೆಲಸವು ವ್ಯರ್ಥವಾಗಿರುತ್ತದೆ.

ತುಂಬಾ ‘’ಕ್ರೈಸ್ತ ದೇವ ಸೇವಕರು’’ ದೇವರಿಂದ ಕಳಿಸಿದವರಲ್ಲ. ಕೆಲವು ಸಂಸ್ಥೆಗಳು ಅಥವಾ ಮನುಷ್ಯರು ಅವರನ್ನು ಮತ ಪ್ರಚಾರಕ್ಕೆ ಕಳುಹಿಸುತ್ತಾರೆ ಅಥವಾ ಅವರೇ ಹೋಗುತ್ತಾರೆ. ದೇವರ ಕೆಲಸ ತುಂಬಾ ಅವಶ್ಯಕವಾಗಿರುವುದರಿಂದ ಕ್ರೈಸ್ತ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಸುಲಭ. ಆದರೆ ನಿತ್ಯತ್ವದ ತನಕ ಇರುವ ಫಲ ಬೇಕೆಂದರೆ, ದೇವರೇ ನಮ್ಮನ್ನು ಕಳುಹಿಸಬೇಕು. ಬೇರೆ ದೈವಿಕ ಮನುಷ್ಯರು ನಮ್ಮ ಕರೆಯನ್ನು ಖಚಿತಪಡಿಸಬಹುದು. ಆದರೆ ಅವರು ನಮ್ಮನ್ನು ದೇವರ ಕೆಲಸಕ್ಕೆ ಕರೆಯಲು ಸಾಧ್ಯವಿಲ್ಲ.

ದೇವರು ಸೌಲ ಮತ್ತು ಬಾರ್ನಬನನ್ನು ಸ್ವತ: ತನ್ನ ಸೇವೆಗೆ ಕೇಳಿದನು. ಆ ಕರೆಯನ್ನು ನಂತರ ಬೇರೆ ಕೆಲವು ಪ್ರವಾದಿಗಳು ಖಚಿತಪಡಿಸಿದರು. ಅಪೋಸ್ತಲರ ಕೃತ್ಯಗಳು (13:1-4) ಮತ್ತು ದೇವರು ನಮ್ಮನ್ನು ಕರೆದಾಗ, ನಾವು ಏನು ಉಪದೇಶ ಮಾಡಬೇಕು ಎಂದು ಸಹ ಹೇಳುತ್ತಾರೆ. ಆತನು ಯೆಶಾಯನಿಗೆ ಹೀಗೆ ಹೇಳಿದನು. ‘’ಹೋಗು ಈ ಜನರಿಗೆ ಹೇಳು. . . (ಯೆಶ6:9).

ದೇವರು ಯೆಶಾಯನ ದಿನಗಳಲ್ಲಿ ಹೇಗಿದ್ದರೊ ಈಗಲೂ ಹಾಗೇ ಇದ್ದಾರೆ. ಹೊಸ ಒಡಂಬಡಿಕೆಯಲ್ಲಿ ಪವಿತ್ರಾತ್ಮರು ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ, ಆದರೆ ಈಗ ನಾವು ಕೇಳಿಸಿಕೊಳ್ಳುವುದಿಲ್ಲ. ಯೆಶಾಯನು ಕೇಳಿಸಿಕೊಂಡಂತೆ ನಮ್ಮ ಶಾರೀರಿಕ ಕಿವಿಗೆ ದೇವರ ಮಾತು ಕೇಳುವುದಿಲ್ಲ. ಈ ದಿನ ನಮ್ಮ ಹೃದಯದಲ್ಲಿ ದೇವರ ಮಾತನ್ನು ಕೇಳಿಸಿಕೊಳ್ಳುತ್ತೇವೆ. ಆದರೂ ಆತನ ಮಾತು ಅಷ್ಟೇ ನಿಶ್ಚಿತವಾದದ್ದು. ನಾನು ದೇವರ ಮಾತನ್ನು ಯಾವಾಗಲೂ ಶಾರೀರಿಕ ಕಿವಿಯಿಂದ ಕೇಳಿಸಿಕೊಂಡೇ ಇಲ್ಲ ಮತ್ತು ಆತನನ್ನು ನೋಡಿಯೇ ಇಲ್ಲ ಅಥವಾ ದೇವದೂತನನ್ನು ಸಹ ನೋಡಿಲ್ಲ. ಆದರೆ ಕಳೆದ ಐದು ದಶಕಗಳಲ್ಲಿ ನನ್ನ ಹೃದಯದಲ್ಲಿ ಆತನನ್ನು ನೋಡಿದ್ದೇನೆ ಮತ್ತು ಆತನ ಮಾತನ್ನು ಕೇಳಿಸಿಕೊಂಡಿದ್ದೇನೆ.

ಯೇಸು ಹೇಳಿದ್ದಾರೆ, ನನ್ನನ್ನು ನೋಡಿ ನಂಬುವವರಿಗಿಂತ ಹಾಗೂ ನನ್ನನ್ನು ಶಾರೀರಿಕ ಕಣ್ಣಿನಿಂದ ನೋಡದೆ ನಂಬುವವರು ಹೆಚ್ಚು ಧನ್ಯರು (ಯೋಹಾನ 20:29)

ಯೆಶಾಯನಿಗೆ ಪ್ರಭುವು ಕೊಟ್ಟ ಕೆಲಸವು ತುಂಬಾ ಕಷ್ಟಕರವಾಗಿತ್ತು. ಆತನು ಅವನಿಗೆ ‘’ಹೋಗಿ ನನ್ನ ಜನರಿಗೆ ಇದನ್ನು ಹೇಳು, ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ, ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ಗ್ರಹಿಸಿ, ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನು ಹೊಂದದ ಹಾಗೆ ಈ ಜನರ ಹೃದಯಕ್ಕೆ ಕೊಬ್ಬೇರಿಸಿ, ಕಿವಿಯನ್ನು ಮಂದ ಮಾಡಿ ಕಣ್ಣಿಗೆ ಅಂಟು ಬಳಿ’’ (ಯೆಶಾಯ 6:9,10) ಎಂದು ಹೇಳಿದನು. ಯೇಸುವು ತಾನು ಜನರೊಂದಿಗೆ ಏಕೆ ಸಾಮ್ಯರೂಪದಲ್ಲಿ ಮಾತನಾಡುತ್ತೇನೆ ಎಂದು ವಿವರಿಸಿ ಇದೇ ವಾಕ್ಯವನ್ನು ಉದಾಹರಣೆ ಕೊಟ್ಟರು (ಮತ್ತಾಯ 13:5)

ಆದುದರಿಂದ ನಾವು ಇಲ್ಲಿ ಏನನ್ನು ನೋಡುತ್ತೇವೆ? ದೇವರ ದರ್ಶನ sಸ್ವಯಂ ದರ್ಶನ, ಕ್ಷಮೆ ನೀಡುವ ಕೃಪೆಯ ದರ್ಶನ, ಅಭಿಷೇಕದಿಂದ ಕೂಡಿದ ಸೇವೆಯ ದರ್ಶನ ಮತ್ತು ಕೊನೆದಾಗಿ, ಫಲದ ದರ್ಶನ. (ಯೆಶಾಯ 6:13). ಕೆಟ್ಟು ಹೋದ ಯೆಹೂದ ದೇಶದಿಂದ ಬಂದು ಪವಿತ್ರ ಬೀಜ ಹೊರಬರುತ್ತದೆ. ನಮ್ಮ ಸೇವೆಯಿಂದ ಪ್ರಭುವಿಗೆ ಜನರ ಒಂದು ಉಳಿಕೆಯು ಎಬ್ಬಿಸಲ್ಪಡುತ್ತದೆ.