ದೇವರು ಯಾವ ಮಹಿಮೆಯನ್ನು ಸ್ತ್ರೀಯ ಮೂಲಕ ತೋರಿಸಬೇಕೆಂದು ತನ್ನ ಮೂಲ ಸಂಕಲ್ಪವನ್ನಾಗಿಟ್ಟುಕೊಂಡು ಹವ್ವಳನ್ನು ಸೃಷ್ಟಿಸಿದನೋ, ಅದೇ ಮಹಿಮೆಯನ್ನು, ಯಾರು ತಮ್ಮ ಜೀವಿತಗಳ ಮೂಲಕ ನಂಬಿಕೆಯಿಂದ ಪ್ರದರ್ಶಿಸುವರೋ ಅಂತಹ ಸ್ತ್ರೀಯರನ್ನು ದೇವರು ಇಂದು ಬಯಸುತ್ತಿದ್ದಾನೆ.
ಪುರುಷನ ಸಹಾಯಕಿಯಾಗಿ ಅವಳಿಗಿರುವಂತಹ ಮಹಿಮೆ
ಹವ್ವಳು ಪುರುಷನಿಗೆ ಸರಿಯಾದ `ಸಹಾಯಕಿ'ಯಾಗಿ ಇರಬೇಕೆಂಬ ಉದ್ದೇಶದಿಂದ ದೇವರು ಅವಳನ್ನು ಸೃಷ್ಟಿಸಿದನು (ಆದಿಕಾಂಡ. 2:18) . "ಸಹಾಯಕ" ಎಂಬ ಈ ಬಿರುದನ್ನು ಸ್ವಾಮಿ ಪವಿತ್ರಾತ್ಮನನ್ನು ಉದ್ದೇಶಿಸಿ ಕೂಡಾ ಉಪಯೋಗಿಸಿದ್ದನ್ನು ನಾವು ಗಮನಿಸುವಾಗ (ಯೋಹಾನ. 14:16) , ಈ ಸೇವೆಯಲ್ಲಿರುವ ಮಹಿಮೆಯನ್ನು ನಾವು ಕಾಣಬಹುದು.
ಪವಿತ್ರಾತ್ಮನು ಅದೃಶ್ಯವಾಗಿ ಮತ್ತು ನಿಶಬ್ಧವಾಗಿ ಇದ್ದುಕೊಂಡು, ಹೇಗೆ ಒಬ್ಬ ವಿಶ್ವಾಸಿಗೆ ಬಲವಾಗಿ ಸಹಾಯ ಮಾಡುತ್ತಾನೋ, ಅದೇ ರೀತಿಯಾಗಿ ಸ್ತ್ರೀ ಕೂಡಾ ತನ್ನ ಗಂಡನಿಗೆ ಸಹಾಯ ಮಾಡಲು ಸೃಷ್ಟಿಸಲ್ಪಟ್ಟಿದ್ದಾಳೆ. ಹೇಗೆ ಪವಿತ್ರಾತ್ಮನ ಸೇವೆ ಪರದೆಯ ಹಿಂದೆಯೋ, ಸ್ತ್ರೀಯ ಸೇವೆ ಕೂಡಾ ಹಾಗೆಯೇ ಇರಬೇಕು.
ಯೇಸುವಿನ ಜೀವಿತವು ಸ್ತ್ರೀಗೆ ಒಂದು ಮಾದರಿಯಾಗಿ ಇದೆ; ದೇವರ ವಾಕ್ಯ ಹೀಗೆ ಹೇಳುತ್ತದೆ- ತಂದೆಯಾದ ದೇವರು ಕ್ರಿಸ್ತನಿಗೆ ಶಿರಸ್ಸಾಗಿದ್ದ ಹಾಗೆ ಪುರುಷನು ಸ್ತ್ರೀಗೆ ಶಿರಸ್ಸಾಗಿದ್ದಾನೆ (1ಕೊರಿಂಥ. 11:3) ಯೇಸು ಯಾವಾಗಲೂ ತಂದೆಗೆ ಅಧೀನನಾಗಿ ನಡೆದುಕೊಂಡನು. ದೇವರಲ್ಲಿ ಭಯಭಕ್ತಿಯುಳ್ಳ ಒಬ್ಬ ಸಹೋದರಿಯೂ ಸಹ ತನ್ನ ಗಂಡನೊಂದಿಗೆ ಇದೇ ರೀತಿಯಾದ ಸಂಬಂಧದಲ್ಲಿ ನಡೆದುಕೊಳ್ಳುವಳು. ಏದೇನಿನ ವನದಲ್ಲಿ ಹವ್ವಳು ಮಾಡಿದಂತ ತಪ್ಪು ಯಾವುದೆಂದರೆ, ತಾನು ನಿರ್ಣಯವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ತನ್ನ ಗಂಡನನ್ನು ವಿಚಾರಿಸದೆ ತಪ್ಪಿಹೋದಳು, ಆದುದರಿಂದ ಸೈತಾನನು ಅವಳನ್ನು ಮೋಸ ಮಾಡಿದನು (1ತಿಮೋತಿ. 2:14) . ಹವ್ವಳು ಎಲ್ಲಿ ತಪ್ಪಿದಳೋ, ಅಲ್ಲಿ ಇಂದು ದೇವರು ಕ್ರಿಸ್ತೀಯ ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರುವುದರಲ್ಲಿ ಇರುವ ಮಹಿಮೆಯನ್ನು ಪ್ರದರ್ಶಿಸಲು ಅವರನ್ನು ಕರೆಯುತ್ತಿದ್ದಾನೆ, ಯಾವ ರೀತಿಯಾಗಿ ಕ್ರಿಸ್ತನು ತಂದೆಗೆ; ಮತ್ತು ಸಭೆಯು ಕ್ರಿಸ್ತನಿಗೋ ಅದೇ ರೀತಿಯಲ್ಲಿ (ಎಫೆಸೆ. 5:24) .
ಪಾಪವು ಈ ಲೋಕದೊಳಗೆ ಪ್ರವೇಶಿಸಿದ್ದು ಲೂಸಿಫರನ ತಿರುಗಿ-ಬೀಳುವಿಕೆಯಿಂದ, ಆದರೆ ರಕ್ಷಣೆ ಬಂದಿದ್ದು ಕ್ರಿಸ್ತನ ಅಧೀನತ್ವದಿಂದ. ದೇವರ ಅಧಿಕಾರಕ್ಕೆ ದೀನವಾದ `ಅಧೀನತ್ವದ ಆತ್ಮವನ್ನು' ಹೊಂದಿರುವುದು ಈ ಲೋಕದಲ್ಲಿರುವ ಮಹಾ ಶಕ್ತಿಯಾಗಿದೆ. ಏಕಂದರೆ, ಅದು ಕ್ರಿಸ್ತನ ಆತ್ಮವಾಗಿದೆ. ಆ ಆತ್ಮವೇ ತಿರುಗಿ-ಬೀಳುವ ಎಲ್ಲಾ ಆತ್ಮಗಳನ್ನು ಶಿಲುಬೆಯ ಮೇಲೆ ಜಯಿಸಿತು. ಒಬ್ಬ ಹೆಂಡತಿಯು ತನ್ನ ಗಂಡನಿಗೆ ಅಧೀನಳಾದಾಗ, ಪ್ರತ್ಯಕ್ಷವಾಗಿ ಆಕೆ ಆ ರೀತಿಯಾಗಿ ಮಾಡಲು ಆಕೆಗೆ ಆಜ್ಞಾಪಿಸಿದ ದೇವರ ವಾಕ್ಯದ ಅಧಿಕಾರಕ್ಕೆ ಅಧೀನಳಾಗಿದ್ದಾಳೆ; ನಂತರ ಅವಳು ವಿಶ್ವದ ಅತಿ ಉನ್ನತವಾದ ಶಕ್ತಿಯಿಂದ ಪ್ರಭಾವಿತಳಾಗುವಳು. ಆ ಶಕ್ತಿಯಿಂದ ಅವಿಶ್ವಾಸಿಯಾದ ಗಂಡನನ್ನು ಜಯಿಸುವಳು (1ಪೇತ್ರ. 3:1-2) . ಈ ಲೋಕದಲ್ಲಿ ಜೀವಿಸುವಾಗ ಅವಳು ಇಂತಹ ಅಧೀನತ್ವದ ಆತ್ಮದಿಂದ ಜೀವಿಸುವುದಾದರೆ, ಅವಳು ಜಯ ಹೊಂದಿದವಳಾಗಿ, ನಿತ್ಯತ್ವದಲ್ಲಿ ಕ್ರಿಸ್ತನೊಟ್ಟಿಗೆ ಪರಿಪಾಲಿಸಲು ಯೋಗ್ಯಳಾಗುವಳು (ಪ್ರಕಟನೆ. 3:21) .
ಸ್ತ್ರೀಯನ್ನು ಸೈತಾನನು ಮತ್ತೆ ಇದೇ ರೀತಿಯಾಗಿ ಮೋಸ ಮಾಡುತ್ತಾನೆ. ದೂತರನ್ನು ದಾರಿ ತಪ್ಪಿಸಿದ ಹಾಗೆಯೇ, ಸ್ತ್ರೀಯನ್ನು ಕೂಡಾ ತಿರುಗಿಬೀಳುವ ಆತ್ಮದ ಮೂಲಕ ನಡೆಸುತ್ತಾನೆ. ತಿರುಗಿಬೀಳುವ ಹೆಂಡತಿಯು ತನ್ನ ಮನೆಯನ್ನು ಫಲ ಕೊಡದ ವ್ಯರ್ಥವಾದ ಭೂಮಿಯನ್ನಾಗಿ ಪರಿವರ್ತಿಸುವಳು, (ಒಂದು ಮರುಭೂಮಿಗಿಂತ ಕೀಳಾಗಿ, ಅದೇ ಜ್ಞಾನೋಕ್ತಿ. 21:19 ರಲ್ಲಿ ಅಡಗಿರುವ ಅರ್ಥವಾಗಿದೆ) . ಇನ್ನೊಂದು ಕಡೆ ಒಬ್ಬ ಗುಣವತಿಯಾದ, ಅಧೀನಳಾಗಿರುವ ಹೆಂಡತಿಯು, ತನ್ನ ಗಂಡನಿಗೆ ಕಿರೀಟವನ್ನು ಧರಿಸಿ ಆತನನ್ನು ರಾಜನನ್ನಾಗಿ ಮಾಡಿ, ತನ್ನ ಮನೆಯನ್ನು ಅರಮನೆಯನ್ನಾಗಿ ಪರಿವರ್ತಿಸಿಕೊಳ್ಳುವಳು (ಜ್ಞಾನೋಕ್ತಿ. 12:4) . ಹೀಗೆ ನಿಮ್ಮ ಮನೆ ಒಂದು ಅರಮನೆ ಇಲ್ಲದೆ ಒಂದು ಮರುಭೂಮಿ ಆಗಿರಬಹುದು. ಆತ್ಮೀಕವಾಗಿ ಮಾತನಾಡಬೇಕಾದರೆ, ಎಲ್ಲವೂ ನೀನು, ಯಾವ ವಿಧವಾದ ಹೆಂಡತಿಯಾಗಿರುವೆ ಎನ್ನುವುದರ ಮೇಲೆ ಅವಲಂಬಿಸಿದೆ. ಆದ್ದರಿಂದ , ಏಕೆ ದೇವರು ಸಾತ್ವೀಕವಾದ ಮತ್ತು ಶಾಂತ ಮನಸುಳ್ಳ ಆತ್ಮಗಳನ್ನು ಅಷ್ಟು ಅತ್ಯುನ್ನತ, ಹಾಗು ಬೆಲೆಯುಳ್ಳವುಗಳೆಂದು ಪರಿಗಣಿಸುತ್ತಾನೆ (1ಪೇತ್ರ. 3:4) ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಜ್ಞಾನೋಕ್ತಿ. 31:10-31 ರಲ್ಲಿ ಒಬ್ಬ ಗುಣವತಿಯಾದ ಹೆಂಡತಿಯ ಕೆಲವು ಗುಣಗಳನ್ನು ವರ್ಣಿಸಲಾಗಿದೆ. ಆಕೆಯ ಹೃದಯ, ಕೈಗಳು ಮತ್ತು ನಾಲಿಗೆ ಅತ್ಯುನ್ನತವಾದವು ಎಂದು ವರ್ಣಿಸಲಾಗಿದೆ. ಅವಳ ಬಾಹ್ಯ ಸೌಂದರ್ಯ ಅಥವಾ ಅವಳ ಸ್ತ್ರೀ-ಮನೋಹರತ್ವದ ಕುರಿತು ಏನೂ ಹೇಳಲ್ಪಟ್ಟಿಲ್ಲ, ಏಕಂದರೆ ಇವೆಲ್ಲಾ ಬೆಲೆಯಿಲ್ಲದವುಗಳೆಂದೂ ಮತ್ತು ಮೋಸಕರವೆಂದೂ ನಿರ್ಣಯಿಸಲಾಗಿದೆ (ಜ್ಞಾನೋಕ್ತಿ. 31:30) . ಸ್ತ್ರೀಯರು, ಯುವತಿಯರು, ಮತ್ತು ವಿಶೇಷವಾಗಿ ತಮ್ಮ ಮದುವೆ ಬಗ್ಗೆ ವಿಚಾರಿಸುತ್ತಿರುವ ಯುವಕರು ಈ ಸಂಗತಿಯನ್ನು ಅರಿತುಕೊಂಡರೆ ಅತ್ಯುತ್ತಮವಾಗಿರುತ್ತದೆ.
ಇಲ್ಲಿ ವರ್ಣಿಸಲ್ಪಟ್ಟ ಗುಣವತಿಯಾದ ಹೆಂಡತಿಯು, ದೇವರಿಗೆ ಭಯಪಡುವ ಹೃದಯವುಳ್ಳವಳಾಗಿದ್ದಳು (ಜ್ಞಾನೋಕ್ತಿ. 31:30)
ಹೆಂಡತಿಯಾಗಿ, ಈ ಗುಣವತಿಯಾದ ಸ್ತ್ರೀಯು ತನ್ನ ಗಂಡನಿಗೆ ನಿಜವಾದ ಸಹಾಯಕಿ. ಕೇವಲ ಪ್ರಾರಂಭದಲ್ಲಿ ಮತ್ತು ಅನುಕೂಲವಾದಾಗ ಮಾತ್ರ ವಲ್ಲದೆ (ಜ್ಞಾನೋಕ್ತಿ. 31:12) ತನ್ನ ಜೀವನದ ಅಂತ್ಯದ ವರೆಗೆ ಆತನಿಗೆ ಬಿಡುವಿಲ್ಲದೆ ಒಳ್ಳೆಯದನ್ನೆ ಮಾಡುತ್ತಾಳೆ. ಇನ್ನೊಂದು ವಿಧವಾಗಿ ಹೇಳಬೇಕೆಂದರೆ, ಅವಳಿಗೆ, ಆತನ ಮೇಲೆ ಇದ್ದ ಆ ಪ್ರಾರಂಭದ ಪ್ರೀತಿಯನ್ನು ಅವಳು ಕಳೆದುಕೊಳ್ಳುವುದಿಲ್ಲ. ಆತನ ಉದ್ಯೋಗ ಮತ್ತು ಜೀವನದಲ್ಲಿಯ ಕರೆಯುವಿಕೆಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಾಳೆ, ಮನೆಯಲ್ಲಿ ತನ್ನ ಸ್ವಂತವಾದ ಶಾಂತಿಯುತ ದುಡಿಮೆಗಳಿಂದ ಗಂಡನ ಆದಾಯಕ್ಕೆ ಪುರವಣೆ ನೀಡುತ್ತಾಳೆ, ಹಣ ವ್ಯರ್ಥವಾಗದಂತೆ, ಮಿತವಾಗಿ ಹಾಗು ಎಚ್ಚರಿಕೆಯಿಂದ ಖರ್ಚು ಮಾಡುತ್ತಾಳೆ. ಗಂಡನಿಗೆ ಕುಟುಂಬದ ಜವಾಬ್ದಾರಿಗಳಿಂದ ವಿಶ್ರಾಂತಿಯನ್ನು ಕೊಡುತ್ತಾಳೆ, ಇದರಿಂದ ಆತನು ದೇವರ ಸೇವೆಯನ್ನು ಈ ಭೂಮಿಯಲ್ಲಿ ಮಾಡಲಿ ಎಂದು (ಜ್ಞಾನೋಕ್ತಿ. 31:23-27) . ಅದ್ದರಿಂದ ಅವಳ ಗಂಡನು ಅವಳನ್ನು ಈ ರೀತಿಯಾಗಿ ಹೇಳುತ್ತಾ ಅವಳನ್ನು ಹೊಗಳುವುದರಲ್ಲಿ ಯಾವ ಆಶ್ಚರ್ಯವಿಲ್ಲ- "ಪ್ರಪಂಚದಲ್ಲಿರುವ ಎಲ್ಲಾ ಸ್ತ್ರೀಯರಿಗಿಂತ (ಮಹಿಳಾ ಪ್ರಧಾನ ಮಂತ್ರಿಗಳು ಮತ್ತು ಮಹಿಳಾ ಬೋಧಕರನ್ನು ಒಳಗೊಂಡು) ಇವಳು ಶ್ರೇಷ್ಠಳು'' ಎಂದು (ಜ್ಞಾನೋಕ್ತಿ. 31:29) . ಇಂತಹ ಸ್ತ್ರೀಯು ಖಂಡಿತವಾಗಿ ಬಹಿರಂಗದಲ್ಲಿ ಹೊಗಳಿಕೆಗಳಿಗೆ ಯೋಗ್ಯಳು (ಜ್ಞಾನೋಕ್ತಿ. 31:30) ಏಕಂದರೆ, ಸ್ತ್ರೀ ಎಂಬ ಕರೆಯುವಿಕೆಯಲ್ಲಿರುವ ಮಹಿಮೆಯನ್ನು ಅವಳು ಅರ್ಥ ಮಾಡಿಕೊಂಡಿರುವಳು.
ನಮ್ಮ ಮನೆಗಳಲ್ಲಿ "ಭಕ್ತರಿಗೆ ಸೇವೆ" ಮಾಡುವುದರ ಬಗ್ಗೆ ಹೊಸ ಒಡಂಬಡಿಕೆಯು ಬಹಳ ಒತ್ತನ್ನು ಕೊಡುತ್ತದೆ. ಒಂದು ಹೊತ್ತಿನ ಊಟ ಮತ್ತು ಒಂದು ರಾತ್ರಿಗೆ ಇರಲು ಸ್ಥಳದ ಅವಶ್ಯಕತೆ ಇರುವವರನ್ನು ಸಂತೋಷವಾಗಿ ನಿಮ್ಮ ಮನೆಗೆ ಬರಮಾಡಿಕೊಳ್ಳಿರಿ... ಮತ್ತೆ ಮನೆಗೆ ಅತಿಥಿಗಳನ್ನು ಆಹ್ವಾನಿಸುವ ರೂಢಿಯನ್ನು ಬೆಳೆಸಿಕೊಳ್ಳಿರಿ (1ಪೇತ್ರ. 4:9, ರೋಮ. 12:23) . ಮನೆಯಲ್ಲಿ ಅತಿಥಿಸತ್ಕಾರವು ಪ್ರಾಥಮಿಕವಾಗಿ ಇದು ಹೆಂಡತಿಯ ಜವಾಬ್ದಾರಿಯಾಗಿದೆ. ಅವಳು ತಾನು ಒಬ್ಬ ಪ್ರವಾದಿನಿ ಅಲ್ಲದಿದ್ದರೂ ಕೇವಲ ಒಬ್ಬ ಪ್ರವಾದಿಯನ್ನು ತನ್ನ ಮನೆಗೆ ಸ್ವಾಗತಿಸುವುದರ ಮೂಲಕ ಒಬ್ಬ ಪ್ರವಾದಿಯು ಹೊಂದತಕ್ಕ ಪ್ರತಿಫಲವನ್ನು ಹೊಂದಬಹುದು (ಮತ್ತಾಯ. 10:41) . ಯೇಸುವಿನ ಶಿಷ್ಯರಲ್ಲಿ ಕನಿಷ್ಟನಾದವನಿಗೂ ಅತಿಥಿಸತ್ಕಾರವನ್ನು ತೋರಿಸಿದರೆ, ಅವಳು ಪ್ರತಿಫಲವನ್ನು ಹೊಂದುವಳು. ಒಬ್ಬ ಅಪೋಸ್ತಲರನ್ನು ನಮ್ಮ ಮನೆಯೊಳಗೆ ಸ್ವೀಕರಿಸುವುದು, ಯೇಸು ಕ್ರಿಸ್ತನನ್ನೇ ಸ್ವೀಕರಿಸುವುದಕ್ಕೆ ಸಮಾನವಾಗಿದೆ (ಮತ್ತಾಯ. 10:40) . ಅದೇ ರೀತಿ ಒಂದು ಮಗುವನ್ನು ಯೇಸುವಿನ ನಾಮದಲ್ಲಿ ಸ್ವೀಕರಿಸಿದರೆ, ಅದು ಕೂಡಾ ಯೇಸುವನ್ನೇ ಸ್ವೀಕರಿಸಿದಕ್ಕೆ ಸಮಾನವಾಗಿದೆ (ಮತ್ತಾಯ. 18:5) . `ಅತಿಥಿಸತ್ಕಾರ' ಎಂಬ ಕ್ಷೇತ್ರದಲ್ಲಿ ಎಂತಹ ಅದ್ಭುತವಾದ ಸಾಧ್ಯತೆಗಳು ಸಹೋದರಿಯರಿಗಾಗಿ ತೆರೆಯಲ್ಪಟ್ಟಿವೆ! ಅನಾದಿಕಾಲದ ಕ್ರೈಸ್ತರು (ಪೇತ್ರ ಮತ್ತು ಪೌಲರು ಅತಿಥಿಸತ್ಕಾರದ ಬಗ್ಗೆ ಯಾರಿಗೆ ಬರೆದರೋ) , ತುಂಬಾ ಬಡವರಾಗಿದ್ದರು. ಸಾಧಾರಣವಾದ ಊಟ, ಮತ್ತು ನೆಲದ ಮೇಲೆ ಮಲಗಲು ಸ್ವಲ್ಪ ಸ್ಥಳ ಸಾಕು, ಇವಷ್ಟೆ ಭಕ್ತರಿಗೆ ಕೊಡಿ ಎಂದು ಕೇಳಲ್ಪಡುತ್ತಿದ್ದರು. ಯಾವಾಗ ಒಬ್ಬ ವಿಶ್ವಾಸಿ ಮಾನವ ಗೌರವವನ್ನು ಬಯಸುತ್ತಾನೋ ಆವಾಗ, ತಾನು ಅತಿಥಿ ಸತ್ಕಾರ ಮಾಡಲು ಸಮರ್ಥನಲ್ಲಾ ಎಂದು ಅವನಿಗೆ ಅನಿಸುತ್ತದೆ. ಯಾವಗಿನವರೆಗೆ ಅಂದರೆ, ಅವರಿಗೆ ವೈಭವವಾದ ಊಟ, ಮತ್ತು ಮಹಾಶ್ರೇಷ್ಠವಾದ ವಸತಿಯನ್ನು ಪೂರೈಸಲು ತಾವು ಸಮರ್ಥರು ಎನ್ನುವವರೆಗೆ. 1ತಿಮೋತಿ. 5:10 ಹೀಗೆ ಹೇಳುತ್ತದೆ- ಮೊದಲನೆ ಶತಮಾನದ ಬಡ ವಿಧವೆಯರು ಕೂಡಾ ತಮ್ಮ ಮನೆಗಳಲ್ಲಿ ಭಕ್ತರ ಸೇವೆ ಮಾಡುತ್ತಿದ್ದರು ಎಂದು.
`ಮನೆ (ಕುಟುಂಬವನ್ನು) ಕಟ್ಟಿಕೊಳುವುದೆ ತನ್ನ ಕರೆ' ಎಂದು ಯಾವ ಸ್ತ್ರೀ ಕಂಡುಕೊಳ್ಳುವಳೋ ಆಕೆಯಲ್ಲಿಯೇ ದೇವರ ಮಹಿಮೆಯನ್ನು ನಾವು ಕಾಣುತ್ತೇವೆ.
ತಾಯಿಯಾಗಿ ಅವಳ ಕರೆಯುವಿಕೆ:
ಆದಾಮನು ತನ್ನ ಹೆಂಡತಿಯನ್ನು `ಹವ್ವ' ಎಂದು ಕರೆಯುತ್ತಿದ್ದನು. ಏಕಂದರೆ ಅವಳು ಒಬ್ಬ ತಾಯಿಯಾಗಿದ್ದಳು. ದೇವರ ಸನ್ನಿಧಿಯಲ್ಲಿಯ ಶುದ್ಧ ಬೆಳಕಿನಲ್ಲಿ, ಏದೇನಿನ ವನದಲ್ಲಿ, ತನ್ನ ಹೆಂಡತಿಯ ಸೇವೆ ಏನೆಂದು ಅವನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹವ್ವಳಿಗೂ ಕೂಡಾ ಚೆನ್ನಾಗಿ ಗೊತ್ತಿತ್ತು. ಈಗ ಸ್ತ್ರೀಯರ ತಿಳುವಳಿಕೆಯನ್ನು ಪಾಪ ಮತ್ತು ಮಾನವೀಯ ಸಂಪ್ರದಾಯಗಳು(ಸೈತಾನನಿಂದ ಪ್ರಭಾವಿತವಾದವು) ಆವರಿಸಿಕೊಂಡಿವೆ. ಆದಕಾರಣದಿಂದ ತಾಯಿಯಾಗಿರುವುದರಲ್ಲಿ ಅವಳಿಗಿರುವ ಮಹಿಮೆಯನ್ನು ಅವಳು ಇನ್ನೂ ಕಾಣುತ್ತಾ ಇಲ್ಲ. ಮಕ್ಕಳು ಈಗ ಸೈತಾನಿಕ (ಕೆಟ್ಟ) ಹೆಸರಾದ "ಅಪಘಾತಗಳು" (ತಪ್ಪಾಗಿ ಹುಟ್ಟಿದವರು) ಎಂದು ಕರೆಯಲ್ಪಡುತ್ತಿದ್ದರೆ, ದೇವರು ಅದೇ ಮಕ್ಕಳನ್ನು "ಬಹುಮಾನಗಳು" ಎಂದು ಕರೆಯುತ್ತಾರೆ. (ಕೀರ್ತನೆ. 127:3) ದೇವರು ಅವರನ್ನು `ಆಶೀರ್ವಾದಗಳು' ಎಂದು ಎಣಿಸುವಾಗ ಅವರು `ಪೀಡೆಗಳು' ಎಂದು ಕೂಡಾ (ಜನರಿಂದ) ಎಣಿಸಲ್ಪಡುತ್ತಾರೆ. (ಕೀರ್ತನೆ. 127:5, 128:4) . ಆದರೂ ಇದು ಇನ್ನೊಂದನ್ನು ಸೂಚಿಸುತ್ತದೆ. ಅದೇನೆಂದರೆ `ಕ್ರೈಸ್ತರು' ಎಂದು ಕರೆಯಲ್ಪಡುವವರು ಹೇಗೆ ದೇವರಿಂದ ದೂರವಾಗಿ ತಮ್ಮ ಆಲೋಚನೆಗಳಲ್ಲಿ ದುಷ್ಟರಾಗಿದ್ದಾರೆ! ಎಂದು.
ಆದರೆ ತಿಮೋತಿಯ ತಾಯಿ ಯೂನಿಕೆಯು ವಿಭಿನ್ನವಾಗಿಯೇ ಇದ್ದಳು. ಆಕೆಯ ಗಂಡನು ಅವಿಶ್ವಾಸಿ ಆಗಿದ್ದರೂ ಅವಳು ತನ್ನ ಕರೆಯುವಿಕೆಯನ್ನು ಸ್ಪಷ್ಟವಾಗಿ ಕಂಡುಕೊಂಡಳು. (ಅಪೋಸ್ತ. 16:1) , ಅದು ಅವಳ ನಂಬಿಕೆಯನ್ನು ಕುಂದಿಹೋಗುವಂತೆ ಮಾಡಲಿಲ್ಲ. ಅವಳು 'ಯಥಾರ್ಥವಾದ ನಂಬಿಕೆ' ಯುಳ್ಳ ಸ್ತ್ರೀಯಾಗಿದ್ದು (2ತಿಮೋತಿ. 1:5) ದೇವರ ವಾಕ್ಯ ತಿಳಿದವಳಾಗಿದ್ದಳು. ತಿಮೋತಿಗೆ ದೇವರ ವಾಕ್ಯವನ್ನು ಕಲಿಸಿದಳು (2ತಿಮೋತಿ. 3:14-15) . ಅದಕ್ಕಿಂತ ಹೆಚ್ಚು ತನ್ನಲ್ಲಿದ್ದ ಯಥಾರ್ಥವಾದ ನಂಬಿಕೆಯನ್ನು ಕಲಿಸಿದಳು. ತಿಮೋತಿಯನ ಮನೆ ಎಂತಹ ಮನೆಯಾಗಿತ್ತೆಂದರೆ- ವಿಷಕರವಾದ ಜ್ವಾಲೆಯಂತಹ 'ಅಪನಂಬಿಕೆ' ಯಿಂದ ತುಂಬಿರುವ ಈ ಲೋಕದ ಮಧ್ಯದಲ್ಲಿತ್ತು. ಅವನು 'ನಂಬಿಕೆ' ಎಂಬ ಶುದ್ಧ ಗಾಳಿಯನ್ನು ಉಸಿರಾಡಲು ಅವನ ತಾಯಿ ಅನುಕೂಲ ಮಾಡಿಕೊಟ್ಟಂತಹ ಮನೆಯಾಗಿತ್ತು. ಅವನು ತನ್ನ ತಾಯಿಯನ್ನು ಹೆಚ್ಚಾಗಿ ಯಾವಾಗಲೂ ಪ್ರಾರ್ಥಿಸುತ್ತಿರುವುದನ್ನೂ, ದೇವರನ್ನು ಸ್ತುತಿಸುತ್ತಿರುವುದನ್ನೂ, ಸಂಕಟದ ಸಂದರ್ಭಗಳಲ್ಲಿ ಮತ್ತೆ ಮತ್ತೆ ತಪ್ಪು ಮಾಡದೆ ಅಥವಾ ನಿಂದಿಸದೆ ದೇವರ ಮೇಲೆ ವಿಶ್ವಾಸದಿಂದಿರುವುದನ್ನೂ ನೋಡುತ್ತಿದ್ದನು. ಏಕಂದರೆ, ಇವೇ 'ಯಥಾರ್ಥವಾದ ನಂಬಿಕೆಯ' ಕೆಲವು ಗುಣಗಳಾಗಿವೆ. ಆದ್ದರಿಂದ ತಿಮೋತಿ ಒಬ್ಬ ಅಪೋಸ್ತಲನು ಹಾಗು ಪೌಲನಿಗೆ ಸನ್ನಿಹಿತನಾದ ಸಹ-ಕೆಲಸಗಾರನಾಗಿ ಬೆಳೆದಿರುವುದರಲ್ಲಿ ಯಾವ ಆಶ್ಚರ್ಯವಿಲ್ಲ. ಅವನ ತಾಯಿಯ ಪ್ರಯಾಸಗಳು ಕೊನೆಗೆ ಫಲವನ್ನು ಕೊಟ್ಟವು.
21 ನೇ ಶತಮಾನದ ಎಲ್ಲಾ ತಾಯಂದಿರಿಗೆ ಇದು ಒಂದು ಸವಾಲಾಗಿರಬೇಕು. ಯೂನಿಕೆ (ತಿಮೋತಿಯ ತಾಯಿ) ದೇವರಿಗಾಗಿ ಮತ್ತು ಸಭೆಗಾಗಿ ಬಹಳಷ್ಟು ಮಾಡಿದ್ದಾಳೆ, 16 ರಿಂದ 20 ವರ್ಷಗಳ ವರೆಗೆ ಮನೆಯಲ್ಲಿ ಒಬ್ಬ ಅತ್ಯುತ್ತಮವಾದ ತಾಯಿಯಾಗಿದ್ದಳು, ಏನಾದರೂ ಅವಳು ಬೋಧಿಸುತ್ತಾ 100 ವರ್ಷಕಾಲ ಪ್ರಪಂಚದೆಲೆಲ್ಲ ಪ್ರಯಾಣ ಮಾಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನಾವು ಸುಸನ್ನಾ ವೆಸ್ಲೀ ಬಗ್ಗೆ ಕೇಳಿದ್ದೇವೆ. ಅವಳು 15 ಮಕ್ಕಳ ತಾಯಿಯಾಗಿದ್ದಳು. ಗೊತ್ತಿಲ್ಲದಂತೆ ಬಡತನ ಅವಳ ಮನೆಯನ್ನು ಸೇರಿತು, ಮಕ್ಕಳಲ್ಲಿ ಕೆಲವರು ಬಾಲ್ಯದಲ್ಲಿಯೇ ಸತ್ತುಹೋದರು. ಆದರೆ ಅವಳು ಇನ್ನುಳಿದ ತನ್ನ ಮಕ್ಕಳನ್ನು ಒಬೊಬ್ಬರಿಗೆ ವಯಕ್ತಿಕವಾಗಿ ಉಪದೇಶಿಸುತ್ತಾ ದೇವರ ಭಯದಲ್ಲಿ ಬೆಳೆಸಿದಳು. ಅವಳ ಮಕ್ಕಳಲ್ಲಿ ಒಬ್ಬನಾದ ಜಾನ್ ವೆಸ್ಲೀ, ದೇವರ ಕೈಯಲ್ಲಿ ಒಂದು ಬಲವಾದ ಸಾಧನವಾಗುವದಕ್ಕೆ ಬೆಳೆದುಬಿಟ್ಟಿದ್ದನು. ಆತನು ಪಟ್ಟ ಪ್ರಯಾಸ ಮತ್ತು ಬರೆದಂತಹ ಲೇಖನಗಳಿಂದ, ಈ ಎರಡು ಶತಮಾನಗಳ ಅವಧಿಯಲ್ಲಿ ಪ್ರಪಂಚದಲ್ಲೆಲ್ಲಾ ಸಹಸ್ರಾರು ಜನರು ಆಶೀರ್ವಾದಿಸಲ್ಪಟ್ಟಿದ್ದಾರೆ. ಒಂದು ವೇಳೆ ಸುಸನ್ನ ವೆಸ್ಲೀ ಏನಾದರೂ ಮನೆಯನ್ನು ನಿರ್ಲಕ್ಷ್ಯಮಾಡಿ, ಹೆಚ್ಚು ಹಣ ಗಳಿಸಲು ಉದ್ಯೋಗಕ್ಕೆ ಹೋಗಿದ್ದರೆ, ಅಥವಾ ವಾಕ್ಯವನ್ನು ಬೋಧಿಸುವವಳಾಗಿ ಅಥವಾ ಸುವಾರ್ತಿಕಳಾಗಿ ಪ್ರಪಂಚದಲೆಲ್ಲಾ ಪ್ರಯಾಣಿಸಿದರೆ, ತನ್ನ ಮಗನು ಮಾಡಿರುವುದರಲ್ಲಿ ಒಂದು ಚಿಕ್ಕ ಭಾಗವನ್ನಾದರೂ ಮಾಡಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ.
ಸ್ತ್ರೀ ಮತ್ತು ಪುರುಷರ ಸೇವೆಗಳ ಬಗ್ಗೆ ಮಾತನಾಡಬೇಕಾದರೆ, ಪೌಲನು ತಿಮೋತಿಗೆ ಈ ರೀತಿಯಾಗಿ ಹೇಳಿದನು- ಉಪದೇಶಿಸುವ ಅಥವಾ ನಾಯಕತ್ವ ಈ ಎರಡು ಸೇವೆಗಳಲ್ಲಿ ಒಂದಾದರೂ ಸ್ತ್ರೀಯರು ಪಡೆಯಲಾರರು; ಆದರೆ ಅವರು `ಮಾತೃತ್ವ' ಎಂಬ ಸೇವೆಯನ್ನು ಪಡೆದಿದ್ದಾರೆ. (1ತಿಮೋತಿ. 2:12-15) . ಈ ಪತ್ರದ ಮೂಲಕ `ಮಾತೃತ್ವವು ಸಭೆಯಲ್ಲಿ ಒಂದು ಸೇವೆ' ಎಂದು ಪೌಲನು ಆಲೋಚಿಸುತ್ತಿದ್ದನೆಂದು ಸ್ಪಷ್ಟವಾಗುತ್ತದೆ. ತನ್ನ ಮಕ್ಕಳಿಗೆ ಒಬ್ಬ ದೇವರ-ಭಯವುಳ್ಳ ತಾಯಿಯಾಗಿರುವುದೇ ಎರಡನೆಯ ಸೇವೆಯಾಗಿದೆ. ಇಂತಹ ಸೇವೆಗಾಗಿಯೇ ಸ್ತ್ರೀಯರನ್ನು ದೇವರು ಕರೆದಿದ್ದು. ಇದರಲ್ಲಿರುವ ಮಹಿಮೆಯನ್ನು ತಿಮೋತಿ ತನ್ನ ಬಾಲ್ಯದ ಮನೆಯಲ್ಲಿ ಕಂಡುಕೊಂಡಿದ್ದನು. ಈಗ ಅದನ್ನೆ ಎಫೆಸ್ಸೆದಲ್ಲಿರುವ ಇತರರಿಗೆ ಆತನು ಕಲಿಸಬೇಕಾಗಿದೆ.
ಜೀವನದ ಎಲ್ಲಾ ವೃತ್ತಿಗಳಲ್ಲಿ ಪುರುಷರು ಸ್ತ್ರೀಯರನ್ನು ಮೀರಿಸಿದ್ದಾರೆ. ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರವೆ ಸ್ತ್ರೀಯರು ವಿಶಿಷ್ಟವಾಗಿ ನಿಂತುಕೊಂಡಿದ್ದಾರೆ. ಅದು 'ತಾಯಂದಿರಾಗಿ'. ಇದು- ಸ್ತ್ರೀಯರು ಏನಾಗಬೇಕೆಂದು ಬಯಸಿ ದೇವರು ಅವರನ್ನು ಸೃಷ್ಟಿಸಿದನು ಎಂಬುದನ್ನು ಸೂಚಿಸುತ್ತದೆ. ಯಾರು ಹೆಚ್ಚು ಹಣ ಗಳಿಸಲು (ಸುಖಭೋಗಗಳಿಂದ ಜೀವಿಸಲು) ಉದ್ಯೋಗಕ್ಕೆ ಹೋಗಿರುತ್ತಾರೋ, ಅಥವಾ ಬೋಧಕರಾಗಬೇಕೆಂಬ ಬಯಕೆಯಿಂದ ಯಾವ ತಾಯಂದಿರು ತಮ್ಮ ಮಕ್ಕಳನ್ನು ನಿರ್ಲಕ್ಷ್ಯ ಮಾಡಿರುತ್ತಾರೋ, ಅಂಥವರು ಮುಂಬರುವ ದಿನಗಳಲ್ಲಿ ತಮ್ಮ ಮಕ್ಕಳು ಯಾವುದಾದರು ಒಂದು ರೀತಿಯಲ್ಲಿ ಕಷ್ಟ ಪಡುತ್ತಿರುವುದನ್ನು ನೋಡಿ ಬದಲಾಯಿಸಲಾರದಂತಹ ದುಃಖವನ್ನು ಅನುಭವಿಸುತ್ತಾರೆ. ಮಕ್ಕಳನ್ನು ಪ್ರಾರಂಭಿಕ ವರ್ಷಗಳಲ್ಲಿ ನಿರ್ಲಕ್ಷಮಾಡಿರುವುದೆ ಇದಕ್ಕೆ ಕಾರಣವಾಗಿದೆ. ಈಗ ವಿಷೇಧ ಪಡುವುದು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ಇದು ಈ ತಲೆಮಾರಿನ ಯುವ ತಾಯಂದರಿಗೆ ಒಂದು ಎಚ್ಚರಿಕೆಯಾಗಿರಬೇಕು. ಒಬ್ಬ ತಾಯಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಪೋಷಿಸಲು ಉದ್ಯೋಗಕ್ಕೆ ಹೊರಟರೆ, ದೇವರು ಖಂಡಿತವಾಗಿ ಅಂತಹ ಕುಟುಂಬಕ್ಕೆ ಅಧಿಕ ಕೃಪೆಯನ್ನು ಕೊಡುತ್ತಾನೆ. ಆದರೆ ಅವಳ ಉದ್ದೇಶವು ಸುಖಭೋಗಗಳು ಮತ್ತು ಉನ್ನತ ವರ್ಗದ ಜೀವನ ನಡೆಸುವುದಾದರೆ, ಅವಳು ಎದುರು ನೋಡಬೇಕಾದುದ್ದು ಕೇವಲ ಭ್ರಷ್ಟತ್ವವನ್ನು ಕೊಯ್ಯುವುದೆ. ಏಕಂದರೆ ದೇವರನ್ನು ಮೋಸ ಮಾಡಲು ಸಾಧ್ಯವಿಲ್ಲ (ಗಲಾತ್ಯ. 6:7-8) .
ತಮ್ಮ ಕರೆಯುವಿಕೆಯಲ್ಲಿರುವ ಮಹಿಮೆಯನ್ನು ಕಾಣಲು ಎಲ್ಲಾ ತಾಯಂದಿರ ಕಣ್ಣುಗಳು ತೆರೆಯಲ್ಪಡಲಿ.
ಕ್ರಿಸ್ತನ ಸಾಕ್ಷಿಯಾಗಿ ಅವಳಿಗಿರುವ ಮಹಿಮೆ
ನಾವು ನೋಡಿದ ಹಾಗೆ ಕ್ರಿಸ್ತನಿಗಾಗಿ ಒಬ್ಬ ಸ್ತ್ರೀಯ ಪ್ರಾರ್ಥಮಿಕ ಸಾಕ್ಷಿ ಏನೆಂದರೆ ಪುರುಷನಿಗೆ ಸಹಾಯಕಿಯಾಗಿರುವುದು ಮತ್ತು ತನ್ನ ಮಕ್ಕಳಿಗೆ ತಾಯಿಯಾಗಿರುವುದು. ಆದರೆ ಅವಳು ತನ್ನ ಬಾಯಿಯ ಮೂಲಕವೂ ಸಾಕ್ಷಿಯಾಗಿರಬೇಕೆಂದು ದೇವರು ಅವಳನ್ನು ಕರೆದಿದ್ದಾನೆ. ಹೊಸ ಒಡಂಬಡಿಕೆಯ ಯುಗದಲ್ಲಿ ದೇವರು ಸ್ತ್ರೀಯನ್ನು ಒಬ್ಬ ಅಪೋಸ್ತಲ, ಪ್ರವಾದಿನಿ, ಸುವಾರ್ತಿಕಳು, ಕುರುಬಳು ಅಥವಾ ಉಪದೇಶಕಿ ಎಂದು ಎಂದೂ ಕರೆಯಲಿಲ್ಲ. ಪ್ರವಾದಿನಿಯರು ಹಳೇ ಒಡಂಬಡಿಕೆಯಲ್ಲಿ ಇದ್ದರು `ಅನ್ನಾ' ಅನ್ನುವವಳು ಅವರಲ್ಲಿ ಕೊನೆಯವಳು. ಆದರೆ ಹೊಸ ಒಡಂಬಡಿಕೆಯಲ್ಲಿದ್ದ ಒಂದೇ ಒಂದು ಪ್ರವಾದಿನಿ (ಪಂಚಶತಮಾನ ದಿನದ ನಂತರ) ಯೆಜೆಬೇಲಳು ಆಗಿದ್ದಾಳೆ. ಇವಳು ಒಬ್ಬ ಸುಳ್ಳು ಪ್ರವಾದಿನಿ (ಪ್ರಕಟನೆ. 2:20) . ಇಂದು ಪ್ರತಿಯೊಬ್ಬ ಸ್ತ್ರೀ, ಯಾರು ತನ್ನನ್ನು ತಾನು `ಪ್ರವಾದಿನಿ' ಅಥವಾ `ಉಪದೇಶಕಿ' ಎಂದು ಹೇಳಿಕೊಳ್ಳುತ್ತಾಳೋ, ಅವಳು ಯೆಜೆಬೇಲಳನ್ನು ಹಿಂಬಾಲಿಸುವವಳಾಗಿದ್ದಾಳೆ. ಈ ಸತ್ಯದ ವಿಷಯವಾಗಿ ಯಾರೂ ತಪ್ಪಾಗಿ ತಿಳುದುಕೊಳ್ಳದೆ ಇರಲಿ. ದೇವರ ಎಲ್ಲಾ `ಎಲೀಯರು' ಇಂತಹ ಯೆಜೆಬೇಲರನ್ನು ಎದುರಿಸಿ, ಹೊರ ತೋರಿಸಬೇಕು (ಹೊರಗೆಳೆಯಬೇಕು) (1ಅರಸುಗಳು. 21:20-23) . ಹೊಸ ಒಡಂಬಡಿಕೆಯಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಸ್ತ್ರೀಯರು ಪ್ರವಾದಿಸಬಹುದಾಗಿತ್ತು. ( ಫಿಲ್ಲಿಪ್ಪನ ಹೆಣ್ಣು ಮಕ್ಕಳು ಮಾಡಿದ ಹಾಗೆ) . ಆದರೆ ಈ ಸಹೋದರಿಯರು ಪ್ರವಾದಿನಿಗಳಾಗಿರಲಿಲ್ಲವೆಂದು ಸ್ಪಷ್ಟವಾಗಿ ಇದೆ. ಏಕೆಂದರೆ ಅಪೋಸ್ತಲನಾದ ಪೌಲನು ಫಿಲ್ಲಿಪ್ಪನ ಮನೆಯಲ್ಲಿರುವಾಗ ದೇವರು ಆತನಿಗೆ ವಾರ್ತೆಯನ್ನು ತಲುಪಿಸಲು ಅಲ್ಲೇ ಇದ್ದ ಫಿಲ್ಲಿಪ್ಪನ ಹೆಣ್ಣು ಮಕ್ಕಳಲ್ಲಿ ಒಬ್ಬರನ್ನಾದರೂ ಉಪಯೋಗಿಸಿಕೊಳ್ಳದೆ, 50 ಕಿ.ಮೀ. ದೂರದಿಂದ 'ಅಗಬ'ನೆಂಬ ಒಬ್ಬ ಪ್ರವಾದಿಯನ್ನು ಕರೆತಂದನು (ಅಪೋಸ್ತಲರ. 21:8-11) . ಒಬ್ಬ ಸ್ತ್ರೀಯನ್ನು ಕೂಡಾ ತನ್ನ ಅಪೋಸ್ತಲರಲ್ಲಿ ಒಬ್ಬರಾಗಿರಲು ಯೇಸು ಕರೆಯಲೇ ಇಲ್ಲ. ಏಕಂದರೆ ಸ್ತ್ರೀ ಪುರುಷನ ಮೇಲೆ ಅಧಿಕಾರ ನಡೆಸುವುದು ಎಂದಿಗೂ ಸ್ವಾಮಿಯ ಉದ್ದೇಶವಾಗಿರಲಿಲ್ಲ (1ತಿಮೋತಿ. 2:12) . ಈ ಎಲ್ಲಾ ಸೇವೆಗಳಲ್ಲಿ ಒಂದು ಸೇವೆಕೂಡಾ ಸ್ತ್ರೀಯರಿಗೆ ತೆರೆಯಲ್ಪಡಲಿಲ್ಲವಾದರೂ ಎಷ್ಟೊಂದು ಬೇರೆ ರೀತಿಗಳಲ್ಲಿ ದೇವರಿಗೆ ಸಾಕ್ಷಿಗಳಾಗಿ ಅವರು ಜೀವಿಸಬಹುದು.
ಪುನರುತ್ಥಾನನಾದ ಕ್ರಿಸ್ತನ ಮೊದಲ ಸಾಕ್ಷಿ- ಮಗ್ದಲದ ಮರಿಯಳು. ಅವಳೇನು ಸುವಾರ್ತಿಕಳಲ್ಲ. ಆದರೆ ತಾನು ಏನನ್ನು ನೋಡಿ ಮತ್ತು ಏನನ್ನು ಅನುಭವಿಸಿದಳೋ ಅದನ್ನು ನಂಬಿಕೆಯಿಂದ ಸಾಕ್ಷೀಕರಿಸಿದಳು. ಈ ವಿಧವಾದ ಸಾಕ್ಷಿಯಾಗಿರಲು, ಪ್ರತಿಯೊಬ್ಬ ಸ್ತ್ರೀಯು ಪವಿತ್ರಾತ್ಮದಿಂದ ಮತ್ತು ಬೆಂಕಿಯಿಂದ ಅಭಿಷೇಕ ಹೊಂದಿರಬೇಕು. ಯಾವ ರೀತಿಯಲ್ಲಿ ಮರಿಯಳು ಮತ್ತು ಇನ್ನಿತರ ಸ್ತ್ರೀಯರು ಪಂಚಶತಮಾನ ದಿನದಂದು ಅಭಿಷೇಕ ಪಡೆದಿದ್ದರೋ ಹಾಗೆ (ಅಪೋಸ್ತಲರ. 1:8-14) . ಭಾರತೀಯ ಸಂಸ್ಕೃತಿಯ ನಿರ್ಬಂಧಗಳು ಭಾರತದ ಅನೇಕ ಸ್ತ್ರೀಯರನ್ನು ಪುರುಷರ ಬಾಯಿಯಿಂದ ಸುವಾರ್ತೆಯನ್ನು ಕೇಳಲು ತಡೆಗಟ್ಟುತ್ತವೆ. ಇಂಥಹ ಸ್ತ್ರೀಯರನ್ನು ಆತ್ಮ ಭರಿತರಾದ ಸಹೋದರಿಯರು ಮಾತ್ರ ಸಂಧಿಸಲು ಸಾಧ್ಯ. ದೇವರ-ಭಯವುಳ್ಳವರಾಗಿ ಕ್ರಿಸ್ತನಲ್ಲಿರುವ ಪ್ರತಿಯೊಬ್ಬ ಸ್ತ್ರೀಯು ತನಗೆ ಸಂಪರ್ಕದಲ್ಲಿರುವ ತನ್ನ ಸಂಬಂಧಿಕರು, ಸ್ನೇಹಿತರು, ನೆರೆಯವರು, ಹೆಣ್ಣಾಳುಗಳು, ಮುಂತಾದವರಿಗೆ ಸುವಾರ್ತೆಯನ್ನು ಹೇಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
ಹೊಸ ಒಡಂಬಡಿಕೆಯು ಹೀಗೆ ಹೇಳುತ್ತದೆ- ಒಬ್ಬ ಸ್ತ್ರೀ ಸಭೆಯಲ್ಲಿ ಪ್ರಾರ್ಥನೆಯನ್ನಾಗಲಿ, ಪ್ರವಾದಿಸುವುದಾಗಲಿ ಮಾಡಬಹುದು. ಆದರೆ ಅವಳು ತನ್ನ ತಲೆಯ ಮೇಲೆ ಮುಸುಕನ್ನು ಹಾಕಿಕೊಂಡೇ ಮಾಡತಕ್ಕದ್ದು (1ಕೊರಿಂಥ. 11:5) . ಸಭೆಯನ್ನು ಕಟ್ಟುವುದರಲ್ಲಿ ಎಲ್ಲಾ ಸಹೋದರಿಯರು ಪ್ರಾರ್ಥನೆ ಎಂಬ ಪ್ರಾಥಮಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಯಾವ ಸ್ತ್ರೀಯರು ದೇವರ ಸಂಕಲ್ಪವನ್ನು ಈಡೇರಿಸಲು ತಮ್ಮನ್ನು ತಾವು ರಹಸ್ಯವಾದ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಾರೋ,-ಇಂದು ಖಂಡಿತವಾಗಿ ಅಂತಹ ಸ್ತ್ರೀಯರನ್ನು ದೇವರು ಹುಡುಕುತ್ತಿದ್ದಾನೆ. ಅಪೋಸ್ತಲರ 2:17-18 ರಲ್ಲಿ ಸ್ತ್ರೀಯರು ಪ್ರವಾದಿಸಲೂಬಹುದು ಎಂದು ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಯಾವಾಗ ದೇವರು ತನ್ನ ಆತ್ಮವನ್ನು ಎಲ್ಲರ ಮೇಲೆ ಸುರಿಸುವನೋ-ಗಂಡಸರೂ ಮತ್ತು ಹೆಂಗಸರೂ ಪ್ರವಾದಿಸುವರು. ಹೊಸ ಒಡಂಬಡಿಕೆಯಲ್ಲಿ ಇದು ಸ್ತ್ರೀಯರಿಗೆ ಇರುವ ಸೌಭಾಗ್ಯದಲ್ಲಿ ಒಂದು ಭಾಗವಾಗಿದೆ. ಸಭೆಯ ಕೂಟಗಳಲ್ಲಿ ಆಕೆಯು ದೇವರ ವಾಕ್ಯವನ್ನು ಅಧೀನತ್ವದ ಆತ್ಮದಿಂದ ಹಂಚಿಕೊಳ್ಳಬಹುದು. ಆದರೆ ಅವಳು ಉಪದೇಶಿಸಲು ಪ್ರಯತ್ನಿಸಬಾರದು (1ತಿಮೋತಿ. 2:12) . ಸಭೆಯಲ್ಲಿರುವ ಕಿರಿಯ ಸಹೋದರಿಯರು ಸುನಡತೆಗೆ ಸಂಬಂಧ ಪಟ್ಟಂತೆ ತಮ್ಮ ಮನೆಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಲು ಹಿರಿಯ ಸಹೋದರಿಯರು ಪ್ರೇರಣೆ ನೀಡುವವರಾಗಿರಬೇಕು (ತೀತ. 2:4-5) . ಸಭೆಯಲ್ಲಿ ದೇವರು ನಿಯಮಿಸಿದಂತ ಒಂದು ವರವೇನೆಂದರೆ `ಇತರರಿಗೆ ಸಹಾಯ' ಮಾಡುವುದು (1ಕೊರಿಂಥ. 12:28) . ಎಲ್ಲಾ ಹಿರಿಯ ಹಾಗು ಕಿರಿಯ ಸಹೋದರಿಯರು ಈ ವರಕ್ಕಾಗಿ ಅಪೇಕ್ಷಿಸಬೇಕು. ಇದರಿಂದ ಅವರು ಸಭೆಯಲ್ಲಿ ಅನೇಕ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಬಹುದು. ಆದಿ ಸಭೆಯಲ್ಲಿ ಇಂತಹ ಅನೇಕ ಸ್ತ್ರೀಯರಿದ್ದರು. ಫೋಯಿಬೆ ಅನೇಕರಿಗೆ ಸಹಾಯ ಮಾಡಿದಳು (ರೋಮಾ. 16:1-12) . ಇಂದು ಕೂಡಾ ಸಭೆಯಲ್ಲಿ ಇಂಥವರು ಅನೇಕರು ಇರಬೇಕೆಂದು ದೇವರು ಆಶಿಸುತ್ತಿದ್ದಾನೆ.
1ಕೊರಿಂಥ. 11:1-16 ರಲ್ಲಿ ಕಲಿಸಿದ ಪ್ರಕಾರ- ಸ್ತ್ರೀಯು ತನ್ನ ತಲೆಯನ್ನು ಮುಸುಕಿನಿಂದ ಹೊದಿಸಿಕೊಳ್ಳಬೇಕು. ಇದರ ಸಂಕೇತವೇನೆಂದರೆ;
(1)ಸಭೆಯಲ್ಲಿ ಪುರುಷನ ಮಹಿಮೆಯು ಹೊದಿಸಲ್ಪಟ್ಟಿರಬೇಕೆಂದು (7ನೇ ವಚನ) .
(2)ಸಭೆಯಲ್ಲಿ ಸ್ತ್ರೀಯ ಮಹಿಮೆಯೂ ಹೊದಿಸಲ್ಪಟ್ಟಿರಬೇಕೆಂದು (15 ನೇ ವಚನ) ಬರೆದದೆ. ಏಕಂದರೆ, ಸ್ತ್ರೀಯ ಉದ್ದವಾದ ಕೂದಲು ಅವಳ ಮಹಿಮೆಯಾಗಿವೆ.(ಈಗಿನ ಸ್ತ್ರೀಯರಿಗೆ ಇದರ ಅರಿವು ಇರುವುದರಿಂದಲೇ ಅನೇಕರು ತಮ್ಮ ತಲೆಯನ್ನು ಮುಸುಕುನಿಂದ ಹೊದಿಸಿಕೊಂಡರೂ- ಅಸಂಪೂರ್ಣವಾಗಿ ಹೊದಿಸಿಕೊಳ್ಳುತ್ತಾರೆ.)
(3)ಪುರುಷನ ಅಧಿಕಾರಕ್ಕೆ ಅಧೀನಳಾಗಿ ಇರಬೇಕೆಂದು (10ನೇ ವಚನ) ಆ ಪುರುಷನು ಅವಳ ಗಂಡ ಅಥವಾ ತಂದೆ ಅಥವಾ ಸಭೆಯ ಹಿರಿಯರು ಅಗಿರಬಹುದು.
16ನೇ ವಚನದ ಪ್ರಕಾರ ಪ್ರತಿ ಸಭೆ ಅದೂ ದೇವರ ಸಭೆಯು ಸ್ತ್ರೀಯರು ಮುಸುಕಿನಿಂದ ತಮ್ಮ ತಲೆಯನ್ನು ಹೊದಿಸಿಕೊಳ್ಳುವ ವಿಷಯದಲ್ಲಿ ಬಹಳ ಒತ್ತನ್ನು ಕೊಡುತ್ತದೆ.
ಒಬ್ಬ ಸ್ತ್ರೀಯು ತನ್ನ ಉಡುಪಿನ ವಿಷಯದಲ್ಲಿಯೂ ಕ್ರಿಸ್ತನಿಗಾಗಿ ನಂಬಿಕೆಯ ಸಾಕ್ಷಿಯಾಗಿ ಇರಬೇಕಾಗಿದೆ. ಕ್ರಿಸ್ತನಲ್ಲಿರುವ ಎಲ್ಲಾ ಸ್ತ್ರೀಯರಿಗೆ ಪವಿತ್ರಾತ್ಮನು ಮೂರು ವಿಷಯಗಳನ್ನು ಸಂಪೂರ್ಣವಾಗಿ ನಿಷೇಧಿಸುತ್ತಾನೆ ಅವು: ಅಲಂಕಾರಿಕವಾದ ಜಡೆ ಹೆಣೆದುಕೊಳ್ಳುವಿಕೆ, ಬಹಳ ಬೆಲೆಯುಳ್ಳ ವಸ್ತ್ರಗಳು ಮತ್ತು ಒಡವೆಗಳನ್ನು ಧರಿಸಿಕೊಳ್ಳುವುದು (ಎರಡು ಕಡೆ ಈ ವಿಷಯ ಹೇಳಲ್ಪಟ್ಟಿದೆ- 1ತಿಮೋತಿ. 2:9, ಮತ್ತು 1ಪೇತ್ರ. 3:3) ದೇವರ ಭಯವಿದ್ದು ಆತನ ವಾಕ್ಯಕ್ಕೆ ನಡುಗುವ ಪ್ರತಿಯೊಬ್ಬ ಸಹೋದರಿಯು ಈ ಮೂರು ಆಜ್ಞೆಗಳಲ್ಲಿ ಕನಿಷ್ಟವಾದ ಆಜ್ಞೆಗೂ ಸರಿಯಾಗಿ ವಿಧೇಯಳಾಗಿ ಇರುತ್ತಾಳೆ (ಮತ್ತಾಯ. 5:19) . ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನು ಉಟ್ಟುಕೊಳ್ಳಬೇಕು (1ತಿಮೋತಿ. 2:9) . ವಸ್ತ್ರಗಳು ಸ್ತ್ರೀಯ ದೇಹವನ್ನು ಮುಚ್ಚುವುದಕ್ಕೆ ಇವೆಯೇ ಹೊರತು ದೇಹವನ್ನು ಪ್ರದರ್ಶಿಸುವುದಕ್ಕಲ್ಲ. ದೇವರ ಭಯವುಳ್ಳ ಪ್ರತಿ ಒಬ್ಬ ಸಹೋದರಿಯು, ಪ್ರಾಪಂಚಿಕ ಸ್ತ್ರೀಯರ ಹಾಗೆ ಅಲಂಕಾರಿಕ ಶೈಲಿಗಳಲ್ಲಿ ತಮ್ಮ ವಸ್ತ್ರಗಳನ್ನು ಕತ್ತರಿಸಲು ಅಥವಾ ರೂಪಿಸಲು ದರ್ಜಿಗೆ ಎಂದಿಗೂ ಅನುಮತಿಸುವುದಿಲ್ಲಾ. ಸೀರೆಯನ್ನು ತಗ್ಗಾಗಿ(ಕೆಳಗೆ) ಉಡುವುದು, ಕೊರಳು ತಗ್ಗಾಗಿ ಕತ್ತರಿಸಲ್ಪಟ್ಟ ಬ್ಲೌಸ್ ಮತ್ತು ಬಣ್ಣ ಹಚ್ಚಿದ ತುಟಿಗಳು ಹಾಗು ಉಗುರುಗಳು ಇವೆಲ್ಲಾ ಯೆಜೆಬೇಲಳನ್ನು ಹಿಂಬಾಲಿಸುವವರ ಲಕ್ಷಣಗಳು (2ಅರಸರು. 9:30) . ಆದರೆ ಯೇಸು ಕ್ರಿಸ್ತನ ಶಿಷ್ಯರ ಗುಣಲಕ್ಷಣಗಳಲ್ಲಾ. ಯೆಶಾಯ. 3:16-24 ರಲ್ಲಿ ವಿವಿಧ ಅಲಂಕಾರವುಳ್ಳ ವಸ್ತ್ರಗಳು ಮತ್ತು ಚಿಯೋನಿನ ಪ್ರಾಪಂಚಿಕ ಹೆಣ್ಣು ಮಕ್ಕಳು ಧರಿಸಿದ ಆಭರಣಗಳನ್ನು ದೇವರು ಹೇಗೆ ವಿರೋಧಿಸಿದನೆಂದು ನಾವು ನೋಡಬಹುದು.
ದೇವರು ಸ್ತ್ರೀ-ಪುರುಷರ ನಡುವೆ ನಿಯಮಿಸಿದ ವ್ಯತ್ಯಾಸವನ್ನು ನಾಶ ಮಾಡಲು ಸೈತಾನು ಅತ್ಯಾಸಕ್ತಿಯುಳ್ಳವನಾಗಿ ಕಾಯುತ್ತಿದ್ದಾನೆ. ಈ 21 ನೇ ಶತಮಾನದ ಸ್ತ್ರೀಯರು ತಮ್ಮ ಕೂದಲನ್ನು ಪುರುಷರ ಹಾಗೆ ಗಿಡ್ಡದಾಗಿ ಕತ್ತರಿಸಿಕೊಂಡು, ಪುರುಷರ ವಸ್ತ್ರಗಳನ್ನು ಧರಿಸಿದವರಾಗಿ ಸೈತಾನನಿಗೆ ದೊರಕುತ್ತಿದ್ದಾರೆ (ಇದು ನನಗೆ ಅಸಹ್ಯವಾದದ್ದು ಎಂದು ದೇವರು ಹೇಳುತ್ತಾನೆ ಧರ್ಮೋಪದೇಶಕಾಂಡ 22:5) . ಗಂಡನ ಮೇಲೆ ಆಧಿಪತ್ಯ ನಡೆಸುವ ಹೆಂಡಂದಿರು, ಉಪದೇಶಿಸುವ ಮಹಿಳೆಯರು, ಇವರೆಲ್ಲರೂ ಕ್ರೈಸ್ತತ್ವದಿಂದ ದೂರವಾಗುತ್ತಿರುವ ಸ್ತ್ರೀಯರಲ್ಲಿ ಒಂದು ಭಾಗವಾಗಿದ್ದಾರೆ. ಮುಂದೆ ಇವರು ದೇವರಿಂದ ಮತ್ತು ದೇವರ ವಾಕ್ಯದಿಂದ ದೂರವಾಗುತ್ತಾ ಹೋಗುತ್ತಾರೆ.
ಈ ಎಲ್ಲದರ ಮಧ್ಯದಲ್ಲಿ ದೇವರಿಗೆ ಸ್ತ್ರೀಯರ ಅವಶ್ಯಕತೆ ಇದೆ. ಎಂತಹ ಸ್ತ್ರೀಯರು ಅಂದರೆ: ಯಾರು ದೇವರು ತನ್ನ ವಾಕ್ಯದಲ್ಲಿ ಹಾಕಿಟ್ಟ ಮೇರೆಯ ಒಳಗೇ ಇರುತ್ತಾರೋ ಮತ್ತು ಯಾರು ತಮ್ಮ ಜೀವನದ ಅಂತ್ಯದ ವರೆಗೆ ಸ್ತ್ರೀತ್ವದ ನಿಜವಾದ ಮಹಿಮೆಯನ್ನು ಪ್ರದರ್ಶಿಸುತ್ತಾರೋ ಅಂಥವರು. ಆದ್ದರಿಂದ ಈ ಕೊನೆಯ ದಿನಗಳಲ್ಲಿ ಪಾಪಭರಿತವಾದ, ವ್ಯಭಿಚಾರದಿಂದ ತುಂಬಿದ ಯುಗವಾದ, ಮತ್ತು ಲೋಕದ ಜೊತೆಗೆ ಇಜ್ಜೋಡಾಗುತ್ತಿರುವ ಕ್ರೈಸ್ತತ್ವದ ಮಧ್ಯದಲ್ಲಿ, ನೀನು ದೇವರ ಹೃದಯಾನುಸಾರವಾಗಿ ಜೀವಿಸುವೆ ಎಂದು ಪೂರ್ಣ ಹೃದಯದಿಂದ ದೃಢ ನಿಶ್ಚಯ ಮಾಡಿಕೋ.
ಇದಕ್ಕೆ ದೇವರು ನಿನಗೆ ಕೃಪೆಯನ್ನು ಕೊಡುತ್ತಾನೆ, ಅದು ನೀನು ಶ್ರದ್ಧೆಯಿಂದ ನೀನಾಗಿಯೇ ಬಯಸಿದರೆ ಮಾತ್ರ ಕೊಡುತ್ತಾನೆ.
ದೇವರು ಯಾವ ಮಹಿಮೆಯನ್ನು ಸ್ತ್ರೀಯ ಮೂಲಕ ತೋರಿಸಬೇಕೆಂದು ತನ್ನ ಮೂಲ ಸಂಕಲ್ಪವನ್ನಾಗಿಟ್ಟುಕೊಂಡು ಹವ್ವಳನ್ನು ಸೃಷ್ಟಿಸಿದನೋ, ಅದೇ ಮಹಿಮೆಯನ್ನು, ಯಾರು ತಮ್ಮ ಜೀವಿತಗಳ ಮೂಲಕ ನಂಬಿಕೆಯಿಂದ ಪ್ರದರ್ಶಿಸುವರೋ ಅಂತಹ ಸ್ತ್ರೀಯರನ್ನು ದೇವರು ಇಂದು ಬಯಸುತ್ತಿದ್ದಾನೆ.
ಪುರುಷನ ಸಹಾಯಕಿಯಾಗಿ ಅವಳಿಗಿರುವಂತಹ ಮಹಿಮೆ
ಹವ್ವಳು ಪುರುಷನಿಗೆ ಸರಿಯಾದ `ಸಹಾಯಕಿ'ಯಾಗಿ ಇರಬೇಕೆಂಬ ಉದ್ದೇಶದಿಂದ ದೇವರು ಅವಳನ್ನು ಸೃಷ್ಟಿಸಿದನು (ಆದಿಕಾಂಡ. 2:18) . "ಸಹಾಯಕ" ಎಂಬ ಈ ಬಿರುದನ್ನು ಸ್ವಾಮಿ ಪವಿತ್ರಾತ್ಮನನ್ನು ಉದ್ದೇಶಿಸಿ ಕೂಡಾ ಉಪಯೋಗಿಸಿದ್ದನ್ನು ನಾವು ಗಮನಿಸುವಾಗ (ಯೋಹಾನ. 14:16) , ಈ ಸೇವೆಯಲ್ಲಿರುವ ಮಹಿಮೆಯನ್ನು ನಾವು ಕಾಣಬಹುದು.
ಪವಿತ್ರಾತ್ಮನು ಅದೃಶ್ಯವಾಗಿ ಮತ್ತು ನಿಶಬ್ಧವಾಗಿ ಇದ್ದುಕೊಂಡು, ಹೇಗೆ ಒಬ್ಬ ವಿಶ್ವಾಸಿಗೆ ಬಲವಾಗಿ ಸಹಾಯ ಮಾಡುತ್ತಾನೋ, ಅದೇ ರೀತಿಯಾಗಿ ಸ್ತ್ರೀ ಕೂಡಾ ತನ್ನ ಗಂಡನಿಗೆ ಸಹಾಯ ಮಾಡಲು ಸೃಷ್ಟಿಸಲ್ಪಟ್ಟಿದ್ದಾಳೆ. ಹೇಗೆ ಪವಿತ್ರಾತ್ಮನ ಸೇವೆ ಪರದೆಯ ಹಿಂದೆಯೋ, ಸ್ತ್ರೀಯ ಸೇವೆ ಕೂಡಾ ಹಾಗೆಯೇ ಇರಬೇಕು.
ಯೇಸುವಿನ ಜೀವಿತವು ಸ್ತ್ರೀಗೆ ಒಂದು ಮಾದರಿಯಾಗಿ ಇದೆ; ದೇವರ ವಾಕ್ಯ ಹೀಗೆ ಹೇಳುತ್ತದೆ- ತಂದೆಯಾದ ದೇವರು ಕ್ರಿಸ್ತನಿಗೆ ಶಿರಸ್ಸಾಗಿದ್ದ ಹಾಗೆ ಪುರುಷನು ಸ್ತ್ರೀಗೆ ಶಿರಸ್ಸಾಗಿದ್ದಾನೆ (1ಕೊರಿಂಥ. 11:3) ಯೇಸು ಯಾವಾಗಲೂ ತಂದೆಗೆ ಅಧೀನನಾಗಿ ನಡೆದುಕೊಂಡನು. ದೇವರಲ್ಲಿ ಭಯಭಕ್ತಿಯುಳ್ಳ ಒಬ್ಬ ಸಹೋದರಿಯೂ ಸಹ ತನ್ನ ಗಂಡನೊಂದಿಗೆ ಇದೇ ರೀತಿಯಾದ ಸಂಬಂಧದಲ್ಲಿ ನಡೆದುಕೊಳ್ಳುವಳು. ಏದೇನಿನ ವನದಲ್ಲಿ ಹವ್ವಳು ಮಾಡಿದಂತ ತಪ್ಪು ಯಾವುದೆಂದರೆ, ತಾನು ನಿರ್ಣಯವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ತನ್ನ ಗಂಡನನ್ನು ವಿಚಾರಿಸದೆ ತಪ್ಪಿಹೋದಳು, ಆದುದರಿಂದ ಸೈತಾನನು ಅವಳನ್ನು ಮೋಸ ಮಾಡಿದನು (1ತಿಮೋತಿ. 2:14) . ಹವ್ವಳು ಎಲ್ಲಿ ತಪ್ಪಿದಳೋ, ಅಲ್ಲಿ ಇಂದು ದೇವರು ಕ್ರಿಸ್ತೀಯ ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರುವುದರಲ್ಲಿ ಇರುವ ಮಹಿಮೆಯನ್ನು ಪ್ರದರ್ಶಿಸಲು ಅವರನ್ನು ಕರೆಯುತ್ತಿದ್ದಾನೆ, ಯಾವ ರೀತಿಯಾಗಿ ಕ್ರಿಸ್ತನು ತಂದೆಗೆ; ಮತ್ತು ಸಭೆಯು ಕ್ರಿಸ್ತನಿಗೋ ಅದೇ ರೀತಿಯಲ್ಲಿ (ಎಫೆಸೆ. 5:24) .
ಪಾಪವು ಈ ಲೋಕದೊಳಗೆ ಪ್ರವೇಶಿಸಿದ್ದು ಲೂಸಿಫರನ ತಿರುಗಿ-ಬೀಳುವಿಕೆಯಿಂದ, ಆದರೆ ರಕ್ಷಣೆ ಬಂದಿದ್ದು ಕ್ರಿಸ್ತನ ಅಧೀನತ್ವದಿಂದ. ದೇವರ ಅಧಿಕಾರಕ್ಕೆ ದೀನವಾದ `ಅಧೀನತ್ವದ ಆತ್ಮವನ್ನು' ಹೊಂದಿರುವುದು ಈ ಲೋಕದಲ್ಲಿರುವ ಮಹಾ ಶಕ್ತಿಯಾಗಿದೆ. ಏಕಂದರೆ, ಅದು ಕ್ರಿಸ್ತನ ಆತ್ಮವಾಗಿದೆ. ಆ ಆತ್ಮವೇ ತಿರುಗಿ-ಬೀಳುವ ಎಲ್ಲಾ ಆತ್ಮಗಳನ್ನು ಶಿಲುಬೆಯ ಮೇಲೆ ಜಯಿಸಿತು. ಒಬ್ಬ ಹೆಂಡತಿಯು ತನ್ನ ಗಂಡನಿಗೆ ಅಧೀನಳಾದಾಗ, ಪ್ರತ್ಯಕ್ಷವಾಗಿ ಆಕೆ ಆ ರೀತಿಯಾಗಿ ಮಾಡಲು ಆಕೆಗೆ ಆಜ್ಞಾಪಿಸಿದ ದೇವರ ವಾಕ್ಯದ ಅಧಿಕಾರಕ್ಕೆ ಅಧೀನಳಾಗಿದ್ದಾಳೆ; ನಂತರ ಅವಳು ವಿಶ್ವದ ಅತಿ ಉನ್ನತವಾದ ಶಕ್ತಿಯಿಂದ ಪ್ರಭಾವಿತಳಾಗುವಳು. ಆ ಶಕ್ತಿಯಿಂದ ಅವಿಶ್ವಾಸಿಯಾದ ಗಂಡನನ್ನು ಜಯಿಸುವಳು (1ಪೇತ್ರ. 3:1-2) . ಈ ಲೋಕದಲ್ಲಿ ಜೀವಿಸುವಾಗ ಅವಳು ಇಂತಹ ಅಧೀನತ್ವದ ಆತ್ಮದಿಂದ ಜೀವಿಸುವುದಾದರೆ, ಅವಳು ಜಯ ಹೊಂದಿದವಳಾಗಿ, ನಿತ್ಯತ್ವದಲ್ಲಿ ಕ್ರಿಸ್ತನೊಟ್ಟಿಗೆ ಪರಿಪಾಲಿಸಲು ಯೋಗ್ಯಳಾಗುವಳು (ಪ್ರಕಟನೆ. 3:21) .
ಸ್ತ್ರೀಯನ್ನು ಸೈತಾನನು ಮತ್ತೆ ಇದೇ ರೀತಿಯಾಗಿ ಮೋಸ ಮಾಡುತ್ತಾನೆ. ದೂತರನ್ನು ದಾರಿ ತಪ್ಪಿಸಿದ ಹಾಗೆಯೇ, ಸ್ತ್ರೀಯನ್ನು ಕೂಡಾ ತಿರುಗಿಬೀಳುವ ಆತ್ಮದ ಮೂಲಕ ನಡೆಸುತ್ತಾನೆ. ತಿರುಗಿಬೀಳುವ ಹೆಂಡತಿಯು ತನ್ನ ಮನೆಯನ್ನು ಫಲ ಕೊಡದ ವ್ಯರ್ಥವಾದ ಭೂಮಿಯನ್ನಾಗಿ ಪರಿವರ್ತಿಸುವಳು, (ಒಂದು ಮರುಭೂಮಿಗಿಂತ ಕೀಳಾಗಿ, ಅದೇ ಜ್ಞಾನೋಕ್ತಿ. 21:19 ರಲ್ಲಿ ಅಡಗಿರುವ ಅರ್ಥವಾಗಿದೆ) . ಇನ್ನೊಂದು ಕಡೆ ಒಬ್ಬ ಗುಣವತಿಯಾದ, ಅಧೀನಳಾಗಿರುವ ಹೆಂಡತಿಯು, ತನ್ನ ಗಂಡನಿಗೆ ಕಿರೀಟವನ್ನು ಧರಿಸಿ ಆತನನ್ನು ರಾಜನನ್ನಾಗಿ ಮಾಡಿ, ತನ್ನ ಮನೆಯನ್ನು ಅರಮನೆಯನ್ನಾಗಿ ಪರಿವರ್ತಿಸಿಕೊಳ್ಳುವಳು (ಜ್ಞಾನೋಕ್ತಿ. 12:4) . ಹೀಗೆ ನಿಮ್ಮ ಮನೆ ಒಂದು ಅರಮನೆ ಇಲ್ಲದೆ ಒಂದು ಮರುಭೂಮಿ ಆಗಿರಬಹುದು. ಆತ್ಮೀಕವಾಗಿ ಮಾತನಾಡಬೇಕಾದರೆ, ಎಲ್ಲವೂ ನೀನು, ಯಾವ ವಿಧವಾದ ಹೆಂಡತಿಯಾಗಿರುವೆ ಎನ್ನುವುದರ ಮೇಲೆ ಅವಲಂಬಿಸಿದೆ. ಆದ್ದರಿಂದ , ಏಕೆ ದೇವರು ಸಾತ್ವೀಕವಾದ ಮತ್ತು ಶಾಂತ ಮನಸುಳ್ಳ ಆತ್ಮಗಳನ್ನು ಅಷ್ಟು ಅತ್ಯುನ್ನತ, ಹಾಗು ಬೆಲೆಯುಳ್ಳವುಗಳೆಂದು ಪರಿಗಣಿಸುತ್ತಾನೆ (1ಪೇತ್ರ. 3:4) ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಜ್ಞಾನೋಕ್ತಿ. 31:10-31 ರಲ್ಲಿ ಒಬ್ಬ ಗುಣವತಿಯಾದ ಹೆಂಡತಿಯ ಕೆಲವು ಗುಣಗಳನ್ನು ವರ್ಣಿಸಲಾಗಿದೆ. ಆಕೆಯ ಹೃದಯ, ಕೈಗಳು ಮತ್ತು ನಾಲಿಗೆ ಅತ್ಯುನ್ನತವಾದವು ಎಂದು ವರ್ಣಿಸಲಾಗಿದೆ. ಅವಳ ಬಾಹ್ಯ ಸೌಂದರ್ಯ ಅಥವಾ ಅವಳ ಸ್ತ್ರೀ-ಮನೋಹರತ್ವದ ಕುರಿತು ಏನೂ ಹೇಳಲ್ಪಟ್ಟಿಲ್ಲ, ಏಕಂದರೆ ಇವೆಲ್ಲಾ ಬೆಲೆಯಿಲ್ಲದವುಗಳೆಂದೂ ಮತ್ತು ಮೋಸಕರವೆಂದೂ ನಿರ್ಣಯಿಸಲಾಗಿದೆ (ಜ್ಞಾನೋಕ್ತಿ. 31:30) . ಸ್ತ್ರೀಯರು, ಯುವತಿಯರು, ಮತ್ತು ವಿಶೇಷವಾಗಿ ತಮ್ಮ ಮದುವೆ ಬಗ್ಗೆ ವಿಚಾರಿಸುತ್ತಿರುವ ಯುವಕರು ಈ ಸಂಗತಿಯನ್ನು ಅರಿತುಕೊಂಡರೆ ಅತ್ಯುತ್ತಮವಾಗಿರುತ್ತದೆ.
ಇಲ್ಲಿ ವರ್ಣಿಸಲ್ಪಟ್ಟ ಗುಣವತಿಯಾದ ಹೆಂಡತಿಯು, ದೇವರಿಗೆ ಭಯಪಡುವ ಹೃದಯವುಳ್ಳವಳಾಗಿದ್ದಳು (ಜ್ಞಾನೋಕ್ತಿ. 31:30)
ಹೆಂಡತಿಯಾಗಿ, ಈ ಗುಣವತಿಯಾದ ಸ್ತ್ರೀಯು ತನ್ನ ಗಂಡನಿಗೆ ನಿಜವಾದ ಸಹಾಯಕಿ. ಕೇವಲ ಪ್ರಾರಂಭದಲ್ಲಿ ಮತ್ತು ಅನುಕೂಲವಾದಾಗ ಮಾತ್ರ ವಲ್ಲದೆ (ಜ್ಞಾನೋಕ್ತಿ. 31:12) ತನ್ನ ಜೀವನದ ಅಂತ್ಯದ ವರೆಗೆ ಆತನಿಗೆ ಬಿಡುವಿಲ್ಲದೆ ಒಳ್ಳೆಯದನ್ನೆ ಮಾಡುತ್ತಾಳೆ. ಇನ್ನೊಂದು ವಿಧವಾಗಿ ಹೇಳಬೇಕೆಂದರೆ, ಅವಳಿಗೆ, ಆತನ ಮೇಲೆ ಇದ್ದ ಆ ಪ್ರಾರಂಭದ ಪ್ರೀತಿಯನ್ನು ಅವಳು ಕಳೆದುಕೊಳ್ಳುವುದಿಲ್ಲ. ಆತನ ಉದ್ಯೋಗ ಮತ್ತು ಜೀವನದಲ್ಲಿಯ ಕರೆಯುವಿಕೆಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಾಳೆ, ಮನೆಯಲ್ಲಿ ತನ್ನ ಸ್ವಂತವಾದ ಶಾಂತಿಯುತ ದುಡಿಮೆಗಳಿಂದ ಗಂಡನ ಆದಾಯಕ್ಕೆ ಪುರವಣೆ ನೀಡುತ್ತಾಳೆ, ಹಣ ವ್ಯರ್ಥವಾಗದಂತೆ, ಮಿತವಾಗಿ ಹಾಗು ಎಚ್ಚರಿಕೆಯಿಂದ ಖರ್ಚು ಮಾಡುತ್ತಾಳೆ. ಗಂಡನಿಗೆ ಕುಟುಂಬದ ಜವಾಬ್ದಾರಿಗಳಿಂದ ವಿಶ್ರಾಂತಿಯನ್ನು ಕೊಡುತ್ತಾಳೆ, ಇದರಿಂದ ಆತನು ದೇವರ ಸೇವೆಯನ್ನು ಈ ಭೂಮಿಯಲ್ಲಿ ಮಾಡಲಿ ಎಂದು (ಜ್ಞಾನೋಕ್ತಿ. 31:23-27) . ಅದ್ದರಿಂದ ಅವಳ ಗಂಡನು ಅವಳನ್ನು ಈ ರೀತಿಯಾಗಿ ಹೇಳುತ್ತಾ ಅವಳನ್ನು ಹೊಗಳುವುದರಲ್ಲಿ ಯಾವ ಆಶ್ಚರ್ಯವಿಲ್ಲ- "ಪ್ರಪಂಚದಲ್ಲಿರುವ ಎಲ್ಲಾ ಸ್ತ್ರೀಯರಿಗಿಂತ (ಮಹಿಳಾ ಪ್ರಧಾನ ಮಂತ್ರಿಗಳು ಮತ್ತು ಮಹಿಳಾ ಬೋಧಕರನ್ನು ಒಳಗೊಂಡು) ಇವಳು ಶ್ರೇಷ್ಠಳು'' ಎಂದು (ಜ್ಞಾನೋಕ್ತಿ. 31:29) . ಇಂತಹ ಸ್ತ್ರೀಯು ಖಂಡಿತವಾಗಿ ಬಹಿರಂಗದಲ್ಲಿ ಹೊಗಳಿಕೆಗಳಿಗೆ ಯೋಗ್ಯಳು (ಜ್ಞಾನೋಕ್ತಿ. 31:30) ಏಕಂದರೆ, ಸ್ತ್ರೀ ಎಂಬ ಕರೆಯುವಿಕೆಯಲ್ಲಿರುವ ಮಹಿಮೆಯನ್ನು ಅವಳು ಅರ್ಥ ಮಾಡಿಕೊಂಡಿರುವಳು.
ನಮ್ಮ ಮನೆಗಳಲ್ಲಿ "ಭಕ್ತರಿಗೆ ಸೇವೆ" ಮಾಡುವುದರ ಬಗ್ಗೆ ಹೊಸ ಒಡಂಬಡಿಕೆಯು ಬಹಳ ಒತ್ತನ್ನು ಕೊಡುತ್ತದೆ. ಒಂದು ಹೊತ್ತಿನ ಊಟ ಮತ್ತು ಒಂದು ರಾತ್ರಿಗೆ ಇರಲು ಸ್ಥಳದ ಅವಶ್ಯಕತೆ ಇರುವವರನ್ನು ಸಂತೋಷವಾಗಿ ನಿಮ್ಮ ಮನೆಗೆ ಬರಮಾಡಿಕೊಳ್ಳಿರಿ... ಮತ್ತೆ ಮನೆಗೆ ಅತಿಥಿಗಳನ್ನು ಆಹ್ವಾನಿಸುವ ರೂಢಿಯನ್ನು ಬೆಳೆಸಿಕೊಳ್ಳಿರಿ (1ಪೇತ್ರ. 4:9, ರೋಮ. 12:23) . ಮನೆಯಲ್ಲಿ ಅತಿಥಿಸತ್ಕಾರವು ಪ್ರಾಥಮಿಕವಾಗಿ ಇದು ಹೆಂಡತಿಯ ಜವಾಬ್ದಾರಿಯಾಗಿದೆ. ಅವಳು ತಾನು ಒಬ್ಬ ಪ್ರವಾದಿನಿ ಅಲ್ಲದಿದ್ದರೂ ಕೇವಲ ಒಬ್ಬ ಪ್ರವಾದಿಯನ್ನು ತನ್ನ ಮನೆಗೆ ಸ್ವಾಗತಿಸುವುದರ ಮೂಲಕ ಒಬ್ಬ ಪ್ರವಾದಿಯು ಹೊಂದತಕ್ಕ ಪ್ರತಿಫಲವನ್ನು ಹೊಂದಬಹುದು (ಮತ್ತಾಯ. 10:41) . ಯೇಸುವಿನ ಶಿಷ್ಯರಲ್ಲಿ ಕನಿಷ್ಟನಾದವನಿಗೂ ಅತಿಥಿಸತ್ಕಾರವನ್ನು ತೋರಿಸಿದರೆ, ಅವಳು ಪ್ರತಿಫಲವನ್ನು ಹೊಂದುವಳು. ಒಬ್ಬ ಅಪೋಸ್ತಲರನ್ನು ನಮ್ಮ ಮನೆಯೊಳಗೆ ಸ್ವೀಕರಿಸುವುದು, ಯೇಸು ಕ್ರಿಸ್ತನನ್ನೇ ಸ್ವೀಕರಿಸುವುದಕ್ಕೆ ಸಮಾನವಾಗಿದೆ (ಮತ್ತಾಯ. 10:40) . ಅದೇ ರೀತಿ ಒಂದು ಮಗುವನ್ನು ಯೇಸುವಿನ ನಾಮದಲ್ಲಿ ಸ್ವೀಕರಿಸಿದರೆ, ಅದು ಕೂಡಾ ಯೇಸುವನ್ನೇ ಸ್ವೀಕರಿಸಿದಕ್ಕೆ ಸಮಾನವಾಗಿದೆ (ಮತ್ತಾಯ. 18:5) . `ಅತಿಥಿಸತ್ಕಾರ' ಎಂಬ ಕ್ಷೇತ್ರದಲ್ಲಿ ಎಂತಹ ಅದ್ಭುತವಾದ ಸಾಧ್ಯತೆಗಳು ಸಹೋದರಿಯರಿಗಾಗಿ ತೆರೆಯಲ್ಪಟ್ಟಿವೆ! ಅನಾದಿಕಾಲದ ಕ್ರೈಸ್ತರು (ಪೇತ್ರ ಮತ್ತು ಪೌಲರು ಅತಿಥಿಸತ್ಕಾರದ ಬಗ್ಗೆ ಯಾರಿಗೆ ಬರೆದರೋ) , ತುಂಬಾ ಬಡವರಾಗಿದ್ದರು. ಸಾಧಾರಣವಾದ ಊಟ, ಮತ್ತು ನೆಲದ ಮೇಲೆ ಮಲಗಲು ಸ್ವಲ್ಪ ಸ್ಥಳ ಸಾಕು, ಇವಷ್ಟೆ ಭಕ್ತರಿಗೆ ಕೊಡಿ ಎಂದು ಕೇಳಲ್ಪಡುತ್ತಿದ್ದರು. ಯಾವಾಗ ಒಬ್ಬ ವಿಶ್ವಾಸಿ ಮಾನವ ಗೌರವವನ್ನು ಬಯಸುತ್ತಾನೋ ಆವಾಗ, ತಾನು ಅತಿಥಿ ಸತ್ಕಾರ ಮಾಡಲು ಸಮರ್ಥನಲ್ಲಾ ಎಂದು ಅವನಿಗೆ ಅನಿಸುತ್ತದೆ. ಯಾವಗಿನವರೆಗೆ ಅಂದರೆ, ಅವರಿಗೆ ವೈಭವವಾದ ಊಟ, ಮತ್ತು ಮಹಾಶ್ರೇಷ್ಠವಾದ ವಸತಿಯನ್ನು ಪೂರೈಸಲು ತಾವು ಸಮರ್ಥರು ಎನ್ನುವವರೆಗೆ. 1ತಿಮೋತಿ. 5:10 ಹೀಗೆ ಹೇಳುತ್ತದೆ- ಮೊದಲನೆ ಶತಮಾನದ ಬಡ ವಿಧವೆಯರು ಕೂಡಾ ತಮ್ಮ ಮನೆಗಳಲ್ಲಿ ಭಕ್ತರ ಸೇವೆ ಮಾಡುತ್ತಿದ್ದರು ಎಂದು.
`ಮನೆ (ಕುಟುಂಬವನ್ನು) ಕಟ್ಟಿಕೊಳುವುದೆ ತನ್ನ ಕರೆ' ಎಂದು ಯಾವ ಸ್ತ್ರೀ ಕಂಡುಕೊಳ್ಳುವಳೋ ಆಕೆಯಲ್ಲಿಯೇ ದೇವರ ಮಹಿಮೆಯನ್ನು ನಾವು ಕಾಣುತ್ತೇವೆ.
ತಾಯಿಯಾಗಿ ಅವಳ ಕರೆಯುವಿಕೆ:
ಆದಾಮನು ತನ್ನ ಹೆಂಡತಿಯನ್ನು `ಹವ್ವ' ಎಂದು ಕರೆಯುತ್ತಿದ್ದನು. ಏಕಂದರೆ ಅವಳು ಒಬ್ಬ ತಾಯಿಯಾಗಿದ್ದಳು. ದೇವರ ಸನ್ನಿಧಿಯಲ್ಲಿಯ ಶುದ್ಧ ಬೆಳಕಿನಲ್ಲಿ, ಏದೇನಿನ ವನದಲ್ಲಿ, ತನ್ನ ಹೆಂಡತಿಯ ಸೇವೆ ಏನೆಂದು ಅವನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹವ್ವಳಿಗೂ ಕೂಡಾ ಚೆನ್ನಾಗಿ ಗೊತ್ತಿತ್ತು. ಈಗ ಸ್ತ್ರೀಯರ ತಿಳುವಳಿಕೆಯನ್ನು ಪಾಪ ಮತ್ತು ಮಾನವೀಯ ಸಂಪ್ರದಾಯಗಳು(ಸೈತಾನನಿಂದ ಪ್ರಭಾವಿತವಾದವು) ಆವರಿಸಿಕೊಂಡಿವೆ. ಆದಕಾರಣದಿಂದ ತಾಯಿಯಾಗಿರುವುದರಲ್ಲಿ ಅವಳಿಗಿರುವ ಮಹಿಮೆಯನ್ನು ಅವಳು ಇನ್ನೂ ಕಾಣುತ್ತಾ ಇಲ್ಲ. ಮಕ್ಕಳು ಈಗ ಸೈತಾನಿಕ (ಕೆಟ್ಟ) ಹೆಸರಾದ "ಅಪಘಾತಗಳು" (ತಪ್ಪಾಗಿ ಹುಟ್ಟಿದವರು) ಎಂದು ಕರೆಯಲ್ಪಡುತ್ತಿದ್ದರೆ, ದೇವರು ಅದೇ ಮಕ್ಕಳನ್ನು "ಬಹುಮಾನಗಳು" ಎಂದು ಕರೆಯುತ್ತಾರೆ. (ಕೀರ್ತನೆ. 127:3) ದೇವರು ಅವರನ್ನು `ಆಶೀರ್ವಾದಗಳು' ಎಂದು ಎಣಿಸುವಾಗ ಅವರು `ಪೀಡೆಗಳು' ಎಂದು ಕೂಡಾ (ಜನರಿಂದ) ಎಣಿಸಲ್ಪಡುತ್ತಾರೆ. (ಕೀರ್ತನೆ. 127:5, 128:4) . ಆದರೂ ಇದು ಇನ್ನೊಂದನ್ನು ಸೂಚಿಸುತ್ತದೆ. ಅದೇನೆಂದರೆ `ಕ್ರೈಸ್ತರು' ಎಂದು ಕರೆಯಲ್ಪಡುವವರು ಹೇಗೆ ದೇವರಿಂದ ದೂರವಾಗಿ ತಮ್ಮ ಆಲೋಚನೆಗಳಲ್ಲಿ ದುಷ್ಟರಾಗಿದ್ದಾರೆ! ಎಂದು.
ಆದರೆ ತಿಮೋತಿಯ ತಾಯಿ ಯೂನಿಕೆಯು ವಿಭಿನ್ನವಾಗಿಯೇ ಇದ್ದಳು. ಆಕೆಯ ಗಂಡನು ಅವಿಶ್ವಾಸಿ ಆಗಿದ್ದರೂ ಅವಳು ತನ್ನ ಕರೆಯುವಿಕೆಯನ್ನು ಸ್ಪಷ್ಟವಾಗಿ ಕಂಡುಕೊಂಡಳು. (ಅಪೋಸ್ತ. 16:1) , ಅದು ಅವಳ ನಂಬಿಕೆಯನ್ನು ಕುಂದಿಹೋಗುವಂತೆ ಮಾಡಲಿಲ್ಲ. ಅವಳು 'ಯಥಾರ್ಥವಾದ ನಂಬಿಕೆ' ಯುಳ್ಳ ಸ್ತ್ರೀಯಾಗಿದ್ದು (2ತಿಮೋತಿ. 1:5) ದೇವರ ವಾಕ್ಯ ತಿಳಿದವಳಾಗಿದ್ದಳು. ತಿಮೋತಿಗೆ ದೇವರ ವಾಕ್ಯವನ್ನು ಕಲಿಸಿದಳು (2ತಿಮೋತಿ. 3:14-15) . ಅದಕ್ಕಿಂತ ಹೆಚ್ಚು ತನ್ನಲ್ಲಿದ್ದ ಯಥಾರ್ಥವಾದ ನಂಬಿಕೆಯನ್ನು ಕಲಿಸಿದಳು. ತಿಮೋತಿಯನ ಮನೆ ಎಂತಹ ಮನೆಯಾಗಿತ್ತೆಂದರೆ- ವಿಷಕರವಾದ ಜ್ವಾಲೆಯಂತಹ 'ಅಪನಂಬಿಕೆ' ಯಿಂದ ತುಂಬಿರುವ ಈ ಲೋಕದ ಮಧ್ಯದಲ್ಲಿತ್ತು. ಅವನು 'ನಂಬಿಕೆ' ಎಂಬ ಶುದ್ಧ ಗಾಳಿಯನ್ನು ಉಸಿರಾಡಲು ಅವನ ತಾಯಿ ಅನುಕೂಲ ಮಾಡಿಕೊಟ್ಟಂತಹ ಮನೆಯಾಗಿತ್ತು. ಅವನು ತನ್ನ ತಾಯಿಯನ್ನು ಹೆಚ್ಚಾಗಿ ಯಾವಾಗಲೂ ಪ್ರಾರ್ಥಿಸುತ್ತಿರುವುದನ್ನೂ, ದೇವರನ್ನು ಸ್ತುತಿಸುತ್ತಿರುವುದನ್ನೂ, ಸಂಕಟದ ಸಂದರ್ಭಗಳಲ್ಲಿ ಮತ್ತೆ ಮತ್ತೆ ತಪ್ಪು ಮಾಡದೆ ಅಥವಾ ನಿಂದಿಸದೆ ದೇವರ ಮೇಲೆ ವಿಶ್ವಾಸದಿಂದಿರುವುದನ್ನೂ ನೋಡುತ್ತಿದ್ದನು. ಏಕಂದರೆ, ಇವೇ 'ಯಥಾರ್ಥವಾದ ನಂಬಿಕೆಯ' ಕೆಲವು ಗುಣಗಳಾಗಿವೆ. ಆದ್ದರಿಂದ ತಿಮೋತಿ ಒಬ್ಬ ಅಪೋಸ್ತಲನು ಹಾಗು ಪೌಲನಿಗೆ ಸನ್ನಿಹಿತನಾದ ಸಹ-ಕೆಲಸಗಾರನಾಗಿ ಬೆಳೆದಿರುವುದರಲ್ಲಿ ಯಾವ ಆಶ್ಚರ್ಯವಿಲ್ಲ. ಅವನ ತಾಯಿಯ ಪ್ರಯಾಸಗಳು ಕೊನೆಗೆ ಫಲವನ್ನು ಕೊಟ್ಟವು.
21 ನೇ ಶತಮಾನದ ಎಲ್ಲಾ ತಾಯಂದಿರಿಗೆ ಇದು ಒಂದು ಸವಾಲಾಗಿರಬೇಕು. ಯೂನಿಕೆ (ತಿಮೋತಿಯ ತಾಯಿ) ದೇವರಿಗಾಗಿ ಮತ್ತು ಸಭೆಗಾಗಿ ಬಹಳಷ್ಟು ಮಾಡಿದ್ದಾಳೆ, 16 ರಿಂದ 20 ವರ್ಷಗಳ ವರೆಗೆ ಮನೆಯಲ್ಲಿ ಒಬ್ಬ ಅತ್ಯುತ್ತಮವಾದ ತಾಯಿಯಾಗಿದ್ದಳು, ಏನಾದರೂ ಅವಳು ಬೋಧಿಸುತ್ತಾ 100 ವರ್ಷಕಾಲ ಪ್ರಪಂಚದೆಲೆಲ್ಲ ಪ್ರಯಾಣ ಮಾಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನಾವು ಸುಸನ್ನಾ ವೆಸ್ಲೀ ಬಗ್ಗೆ ಕೇಳಿದ್ದೇವೆ. ಅವಳು 15 ಮಕ್ಕಳ ತಾಯಿಯಾಗಿದ್ದಳು. ಗೊತ್ತಿಲ್ಲದಂತೆ ಬಡತನ ಅವಳ ಮನೆಯನ್ನು ಸೇರಿತು, ಮಕ್ಕಳಲ್ಲಿ ಕೆಲವರು ಬಾಲ್ಯದಲ್ಲಿಯೇ ಸತ್ತುಹೋದರು. ಆದರೆ ಅವಳು ಇನ್ನುಳಿದ ತನ್ನ ಮಕ್ಕಳನ್ನು ಒಬೊಬ್ಬರಿಗೆ ವಯಕ್ತಿಕವಾಗಿ ಉಪದೇಶಿಸುತ್ತಾ ದೇವರ ಭಯದಲ್ಲಿ ಬೆಳೆಸಿದಳು. ಅವಳ ಮಕ್ಕಳಲ್ಲಿ ಒಬ್ಬನಾದ ಜಾನ್ ವೆಸ್ಲೀ, ದೇವರ ಕೈಯಲ್ಲಿ ಒಂದು ಬಲವಾದ ಸಾಧನವಾಗುವದಕ್ಕೆ ಬೆಳೆದುಬಿಟ್ಟಿದ್ದನು. ಆತನು ಪಟ್ಟ ಪ್ರಯಾಸ ಮತ್ತು ಬರೆದಂತಹ ಲೇಖನಗಳಿಂದ, ಈ ಎರಡು ಶತಮಾನಗಳ ಅವಧಿಯಲ್ಲಿ ಪ್ರಪಂಚದಲ್ಲೆಲ್ಲಾ ಸಹಸ್ರಾರು ಜನರು ಆಶೀರ್ವಾದಿಸಲ್ಪಟ್ಟಿದ್ದಾರೆ. ಒಂದು ವೇಳೆ ಸುಸನ್ನ ವೆಸ್ಲೀ ಏನಾದರೂ ಮನೆಯನ್ನು ನಿರ್ಲಕ್ಷ್ಯಮಾಡಿ, ಹೆಚ್ಚು ಹಣ ಗಳಿಸಲು ಉದ್ಯೋಗಕ್ಕೆ ಹೋಗಿದ್ದರೆ, ಅಥವಾ ವಾಕ್ಯವನ್ನು ಬೋಧಿಸುವವಳಾಗಿ ಅಥವಾ ಸುವಾರ್ತಿಕಳಾಗಿ ಪ್ರಪಂಚದಲೆಲ್ಲಾ ಪ್ರಯಾಣಿಸಿದರೆ, ತನ್ನ ಮಗನು ಮಾಡಿರುವುದರಲ್ಲಿ ಒಂದು ಚಿಕ್ಕ ಭಾಗವನ್ನಾದರೂ ಮಾಡಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ.
ಸ್ತ್ರೀ ಮತ್ತು ಪುರುಷರ ಸೇವೆಗಳ ಬಗ್ಗೆ ಮಾತನಾಡಬೇಕಾದರೆ, ಪೌಲನು ತಿಮೋತಿಗೆ ಈ ರೀತಿಯಾಗಿ ಹೇಳಿದನು- ಉಪದೇಶಿಸುವ ಅಥವಾ ನಾಯಕತ್ವ ಈ ಎರಡು ಸೇವೆಗಳಲ್ಲಿ ಒಂದಾದರೂ ಸ್ತ್ರೀಯರು ಪಡೆಯಲಾರರು; ಆದರೆ ಅವರು `ಮಾತೃತ್ವ' ಎಂಬ ಸೇವೆಯನ್ನು ಪಡೆದಿದ್ದಾರೆ. (1ತಿಮೋತಿ. 2:12-15) . ಈ ಪತ್ರದ ಮೂಲಕ `ಮಾತೃತ್ವವು ಸಭೆಯಲ್ಲಿ ಒಂದು ಸೇವೆ' ಎಂದು ಪೌಲನು ಆಲೋಚಿಸುತ್ತಿದ್ದನೆಂದು ಸ್ಪಷ್ಟವಾಗುತ್ತದೆ. ತನ್ನ ಮಕ್ಕಳಿಗೆ ಒಬ್ಬ ದೇವರ-ಭಯವುಳ್ಳ ತಾಯಿಯಾಗಿರುವುದೇ ಎರಡನೆಯ ಸೇವೆಯಾಗಿದೆ. ಇಂತಹ ಸೇವೆಗಾಗಿಯೇ ಸ್ತ್ರೀಯರನ್ನು ದೇವರು ಕರೆದಿದ್ದು. ಇದರಲ್ಲಿರುವ ಮಹಿಮೆಯನ್ನು ತಿಮೋತಿ ತನ್ನ ಬಾಲ್ಯದ ಮನೆಯಲ್ಲಿ ಕಂಡುಕೊಂಡಿದ್ದನು. ಈಗ ಅದನ್ನೆ ಎಫೆಸ್ಸೆದಲ್ಲಿರುವ ಇತರರಿಗೆ ಆತನು ಕಲಿಸಬೇಕಾಗಿದೆ.
ಜೀವನದ ಎಲ್ಲಾ ವೃತ್ತಿಗಳಲ್ಲಿ ಪುರುಷರು ಸ್ತ್ರೀಯರನ್ನು ಮೀರಿಸಿದ್ದಾರೆ. ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರವೆ ಸ್ತ್ರೀಯರು ವಿಶಿಷ್ಟವಾಗಿ ನಿಂತುಕೊಂಡಿದ್ದಾರೆ. ಅದು 'ತಾಯಂದಿರಾಗಿ'. ಇದು- ಸ್ತ್ರೀಯರು ಏನಾಗಬೇಕೆಂದು ಬಯಸಿ ದೇವರು ಅವರನ್ನು ಸೃಷ್ಟಿಸಿದನು ಎಂಬುದನ್ನು ಸೂಚಿಸುತ್ತದೆ. ಯಾರು ಹೆಚ್ಚು ಹಣ ಗಳಿಸಲು (ಸುಖಭೋಗಗಳಿಂದ ಜೀವಿಸಲು) ಉದ್ಯೋಗಕ್ಕೆ ಹೋಗಿರುತ್ತಾರೋ, ಅಥವಾ ಬೋಧಕರಾಗಬೇಕೆಂಬ ಬಯಕೆಯಿಂದ ಯಾವ ತಾಯಂದಿರು ತಮ್ಮ ಮಕ್ಕಳನ್ನು ನಿರ್ಲಕ್ಷ್ಯ ಮಾಡಿರುತ್ತಾರೋ, ಅಂಥವರು ಮುಂಬರುವ ದಿನಗಳಲ್ಲಿ ತಮ್ಮ ಮಕ್ಕಳು ಯಾವುದಾದರು ಒಂದು ರೀತಿಯಲ್ಲಿ ಕಷ್ಟ ಪಡುತ್ತಿರುವುದನ್ನು ನೋಡಿ ಬದಲಾಯಿಸಲಾರದಂತಹ ದುಃಖವನ್ನು ಅನುಭವಿಸುತ್ತಾರೆ. ಮಕ್ಕಳನ್ನು ಪ್ರಾರಂಭಿಕ ವರ್ಷಗಳಲ್ಲಿ ನಿರ್ಲಕ್ಷಮಾಡಿರುವುದೆ ಇದಕ್ಕೆ ಕಾರಣವಾಗಿದೆ. ಈಗ ವಿಷೇಧ ಪಡುವುದು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ಇದು ಈ ತಲೆಮಾರಿನ ಯುವ ತಾಯಂದರಿಗೆ ಒಂದು ಎಚ್ಚರಿಕೆಯಾಗಿರಬೇಕು. ಒಬ್ಬ ತಾಯಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಪೋಷಿಸಲು ಉದ್ಯೋಗಕ್ಕೆ ಹೊರಟರೆ, ದೇವರು ಖಂಡಿತವಾಗಿ ಅಂತಹ ಕುಟುಂಬಕ್ಕೆ ಅಧಿಕ ಕೃಪೆಯನ್ನು ಕೊಡುತ್ತಾನೆ. ಆದರೆ ಅವಳ ಉದ್ದೇಶವು ಸುಖಭೋಗಗಳು ಮತ್ತು ಉನ್ನತ ವರ್ಗದ ಜೀವನ ನಡೆಸುವುದಾದರೆ, ಅವಳು ಎದುರು ನೋಡಬೇಕಾದುದ್ದು ಕೇವಲ ಭ್ರಷ್ಟತ್ವವನ್ನು ಕೊಯ್ಯುವುದೆ. ಏಕಂದರೆ ದೇವರನ್ನು ಮೋಸ ಮಾಡಲು ಸಾಧ್ಯವಿಲ್ಲ (ಗಲಾತ್ಯ. 6:7-8) .
ತಮ್ಮ ಕರೆಯುವಿಕೆಯಲ್ಲಿರುವ ಮಹಿಮೆಯನ್ನು ಕಾಣಲು ಎಲ್ಲಾ ತಾಯಂದಿರ ಕಣ್ಣುಗಳು ತೆರೆಯಲ್ಪಡಲಿ.
ಕ್ರಿಸ್ತನ ಸಾಕ್ಷಿಯಾಗಿ ಅವಳಿಗಿರುವ ಮಹಿಮೆ
ನಾವು ನೋಡಿದ ಹಾಗೆ ಕ್ರಿಸ್ತನಿಗಾಗಿ ಒಬ್ಬ ಸ್ತ್ರೀಯ ಪ್ರಾರ್ಥಮಿಕ ಸಾಕ್ಷಿ ಏನೆಂದರೆ ಪುರುಷನಿಗೆ ಸಹಾಯಕಿಯಾಗಿರುವುದು ಮತ್ತು ತನ್ನ ಮಕ್ಕಳಿಗೆ ತಾಯಿಯಾಗಿರುವುದು. ಆದರೆ ಅವಳು ತನ್ನ ಬಾಯಿಯ ಮೂಲಕವೂ ಸಾಕ್ಷಿಯಾಗಿರಬೇಕೆಂದು ದೇವರು ಅವಳನ್ನು ಕರೆದಿದ್ದಾನೆ. ಹೊಸ ಒಡಂಬಡಿಕೆಯ ಯುಗದಲ್ಲಿ ದೇವರು ಸ್ತ್ರೀಯನ್ನು ಒಬ್ಬ ಅಪೋಸ್ತಲ, ಪ್ರವಾದಿನಿ, ಸುವಾರ್ತಿಕಳು, ಕುರುಬಳು ಅಥವಾ ಉಪದೇಶಕಿ ಎಂದು ಎಂದೂ ಕರೆಯಲಿಲ್ಲ. ಪ್ರವಾದಿನಿಯರು ಹಳೇ ಒಡಂಬಡಿಕೆಯಲ್ಲಿ ಇದ್ದರು `ಅನ್ನಾ' ಅನ್ನುವವಳು ಅವರಲ್ಲಿ ಕೊನೆಯವಳು. ಆದರೆ ಹೊಸ ಒಡಂಬಡಿಕೆಯಲ್ಲಿದ್ದ ಒಂದೇ ಒಂದು ಪ್ರವಾದಿನಿ (ಪಂಚಶತಮಾನ ದಿನದ ನಂತರ) ಯೆಜೆಬೇಲಳು ಆಗಿದ್ದಾಳೆ. ಇವಳು ಒಬ್ಬ ಸುಳ್ಳು ಪ್ರವಾದಿನಿ (ಪ್ರಕಟನೆ. 2:20) . ಇಂದು ಪ್ರತಿಯೊಬ್ಬ ಸ್ತ್ರೀ, ಯಾರು ತನ್ನನ್ನು ತಾನು `ಪ್ರವಾದಿನಿ' ಅಥವಾ `ಉಪದೇಶಕಿ' ಎಂದು ಹೇಳಿಕೊಳ್ಳುತ್ತಾಳೋ, ಅವಳು ಯೆಜೆಬೇಲಳನ್ನು ಹಿಂಬಾಲಿಸುವವಳಾಗಿದ್ದಾಳೆ. ಈ ಸತ್ಯದ ವಿಷಯವಾಗಿ ಯಾರೂ ತಪ್ಪಾಗಿ ತಿಳುದುಕೊಳ್ಳದೆ ಇರಲಿ. ದೇವರ ಎಲ್ಲಾ `ಎಲೀಯರು' ಇಂತಹ ಯೆಜೆಬೇಲರನ್ನು ಎದುರಿಸಿ, ಹೊರ ತೋರಿಸಬೇಕು (ಹೊರಗೆಳೆಯಬೇಕು) (1ಅರಸುಗಳು. 21:20-23) . ಹೊಸ ಒಡಂಬಡಿಕೆಯಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಸ್ತ್ರೀಯರು ಪ್ರವಾದಿಸಬಹುದಾಗಿತ್ತು. ( ಫಿಲ್ಲಿಪ್ಪನ ಹೆಣ್ಣು ಮಕ್ಕಳು ಮಾಡಿದ ಹಾಗೆ) . ಆದರೆ ಈ ಸಹೋದರಿಯರು ಪ್ರವಾದಿನಿಗಳಾಗಿರಲಿಲ್ಲವೆಂದು ಸ್ಪಷ್ಟವಾಗಿ ಇದೆ. ಏಕೆಂದರೆ ಅಪೋಸ್ತಲನಾದ ಪೌಲನು ಫಿಲ್ಲಿಪ್ಪನ ಮನೆಯಲ್ಲಿರುವಾಗ ದೇವರು ಆತನಿಗೆ ವಾರ್ತೆಯನ್ನು ತಲುಪಿಸಲು ಅಲ್ಲೇ ಇದ್ದ ಫಿಲ್ಲಿಪ್ಪನ ಹೆಣ್ಣು ಮಕ್ಕಳಲ್ಲಿ ಒಬ್ಬರನ್ನಾದರೂ ಉಪಯೋಗಿಸಿಕೊಳ್ಳದೆ, 50 ಕಿ.ಮೀ. ದೂರದಿಂದ 'ಅಗಬ'ನೆಂಬ ಒಬ್ಬ ಪ್ರವಾದಿಯನ್ನು ಕರೆತಂದನು (ಅಪೋಸ್ತಲರ. 21:8-11) . ಒಬ್ಬ ಸ್ತ್ರೀಯನ್ನು ಕೂಡಾ ತನ್ನ ಅಪೋಸ್ತಲರಲ್ಲಿ ಒಬ್ಬರಾಗಿರಲು ಯೇಸು ಕರೆಯಲೇ ಇಲ್ಲ. ಏಕಂದರೆ ಸ್ತ್ರೀ ಪುರುಷನ ಮೇಲೆ ಅಧಿಕಾರ ನಡೆಸುವುದು ಎಂದಿಗೂ ಸ್ವಾಮಿಯ ಉದ್ದೇಶವಾಗಿರಲಿಲ್ಲ (1ತಿಮೋತಿ. 2:12) . ಈ ಎಲ್ಲಾ ಸೇವೆಗಳಲ್ಲಿ ಒಂದು ಸೇವೆಕೂಡಾ ಸ್ತ್ರೀಯರಿಗೆ ತೆರೆಯಲ್ಪಡಲಿಲ್ಲವಾದರೂ ಎಷ್ಟೊಂದು ಬೇರೆ ರೀತಿಗಳಲ್ಲಿ ದೇವರಿಗೆ ಸಾಕ್ಷಿಗಳಾಗಿ ಅವರು ಜೀವಿಸಬಹುದು.
ಪುನರುತ್ಥಾನನಾದ ಕ್ರಿಸ್ತನ ಮೊದಲ ಸಾಕ್ಷಿ- ಮಗ್ದಲದ ಮರಿಯಳು. ಅವಳೇನು ಸುವಾರ್ತಿಕಳಲ್ಲ. ಆದರೆ ತಾನು ಏನನ್ನು ನೋಡಿ ಮತ್ತು ಏನನ್ನು ಅನುಭವಿಸಿದಳೋ ಅದನ್ನು ನಂಬಿಕೆಯಿಂದ ಸಾಕ್ಷೀಕರಿಸಿದಳು. ಈ ವಿಧವಾದ ಸಾಕ್ಷಿಯಾಗಿರಲು, ಪ್ರತಿಯೊಬ್ಬ ಸ್ತ್ರೀಯು ಪವಿತ್ರಾತ್ಮದಿಂದ ಮತ್ತು ಬೆಂಕಿಯಿಂದ ಅಭಿಷೇಕ ಹೊಂದಿರಬೇಕು. ಯಾವ ರೀತಿಯಲ್ಲಿ ಮರಿಯಳು ಮತ್ತು ಇನ್ನಿತರ ಸ್ತ್ರೀಯರು ಪಂಚಶತಮಾನ ದಿನದಂದು ಅಭಿಷೇಕ ಪಡೆದಿದ್ದರೋ ಹಾಗೆ (ಅಪೋಸ್ತಲರ. 1:8-14) . ಭಾರತೀಯ ಸಂಸ್ಕೃತಿಯ ನಿರ್ಬಂಧಗಳು ಭಾರತದ ಅನೇಕ ಸ್ತ್ರೀಯರನ್ನು ಪುರುಷರ ಬಾಯಿಯಿಂದ ಸುವಾರ್ತೆಯನ್ನು ಕೇಳಲು ತಡೆಗಟ್ಟುತ್ತವೆ. ಇಂಥಹ ಸ್ತ್ರೀಯರನ್ನು ಆತ್ಮ ಭರಿತರಾದ ಸಹೋದರಿಯರು ಮಾತ್ರ ಸಂಧಿಸಲು ಸಾಧ್ಯ. ದೇವರ-ಭಯವುಳ್ಳವರಾಗಿ ಕ್ರಿಸ್ತನಲ್ಲಿರುವ ಪ್ರತಿಯೊಬ್ಬ ಸ್ತ್ರೀಯು ತನಗೆ ಸಂಪರ್ಕದಲ್ಲಿರುವ ತನ್ನ ಸಂಬಂಧಿಕರು, ಸ್ನೇಹಿತರು, ನೆರೆಯವರು, ಹೆಣ್ಣಾಳುಗಳು, ಮುಂತಾದವರಿಗೆ ಸುವಾರ್ತೆಯನ್ನು ಹೇಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
ಹೊಸ ಒಡಂಬಡಿಕೆಯು ಹೀಗೆ ಹೇಳುತ್ತದೆ- ಒಬ್ಬ ಸ್ತ್ರೀ ಸಭೆಯಲ್ಲಿ ಪ್ರಾರ್ಥನೆಯನ್ನಾಗಲಿ, ಪ್ರವಾದಿಸುವುದಾಗಲಿ ಮಾಡಬಹುದು. ಆದರೆ ಅವಳು ತನ್ನ ತಲೆಯ ಮೇಲೆ ಮುಸುಕನ್ನು ಹಾಕಿಕೊಂಡೇ ಮಾಡತಕ್ಕದ್ದು (1ಕೊರಿಂಥ. 11: