ಲೋಕದಲ್ಲಿ ಎರಡು ವಿಧವಾದ ಕ್ರೈಸ್ತ ವಿಶ್ವಾಸಿಗಳು ಇದ್ದಾರೆ.
1) ದೇವರ ಆಶೀರ್ವಾದವನ್ನು ಮಾತ್ರ ತಮ್ಮ ಗುರಿಯನ್ನಾಗಿಟ್ಟುಕೊಂಡು ಅದನ್ನೇ ಆಶಿಸುವವರು
2) ದೇವರ ಮೆಚ್ಚುಗೆಯನ್ನು ಆಶಿಸಿ ಅದಕ್ಕಾಗಿ ತವಕಪಡುಕುವವರು.
ಈ ಎರಡು ಗುಂಪಿನವರಲ್ಲಿ ಎಂಥಾ ದೊಡ್ಡ ವ್ಯತ್ಯಾಸ!
ಪ್ರಕಟನೆ 7:9 14 ವಚನಗಳಲ್ಲಿ ದೊಡ್ಡ ಗುಂಪಿನ ವಿಶ್ವಾಸಿಗಳ ಬಗ್ಗೆ ಓದುತ್ತೇವೆ. ಹೌದು! ಎಣಿಸಲಾಗದಂಥ ಮಹಾ ಸಮೂಹವು, ಇವರು ಹೇಳಿದ ಸಾಕ್ಷಿಯನ್ನು ಗಮನಿಸಿದ್ದೀರೋ? ತಮಗುಂಟಾದ ರಕ್ಷಣೆಯು ದೇವರದು (ವ. 10) ಮತ್ತು ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳು ತೊಳೆಯಲ್ಪಟ್ಟು ಶುಭ್ರವಾಗಿವೆ’ (ವ. 14) ಅಥವಾ ಇವರ ಸಾಕ್ಷಿಯನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, "ದೇವರು ಇವರನ್ನು ಆಶೀರ್ವಾದ ಮಾಡಿದ್ದರೆ" ಎಂಬುವುದೇ, ಇದು ಒಳ್ಳೆಯದೇ. ಅದರಲ್ಲಿ ಸಂಶಯವೇನು ಇಲ್ಲ! ಆದರೆ ಪ್ರಕಟನೆ 14:1 5 ವಚನಗಳಲ್ಲಿ ತೋರಿಸಲ್ಪಟ್ಟಿರುವ ವಿಶ್ವಾಸಿಗಳ ಗುಂಪು ಕೊಡುವ ಸಾಕ್ಷಿಯು ಮೊದಲನೆ ಸಾಕ್ಷಿಗೆ ಬಹು ವ್ಯತ್ಯಾಸವಾದ ಸಾಕ್ಷಿಯಾಗಿರುತ್ತದೆ.
ಈ ಎರಡನೆಯ ಸಾಕ್ಷಿಯವರು ಬಹು ಸಣ್ಣ ಗುಂಪಿನವರು. ಅವರು ಬರೇ 1,44,000 ಮಂದಿ ಮಾತ್ರ. ಈ ಭೂಮಿಯ ಕಟ್ಟಕಡೆಯಲ್ಲಿಯೂ ಜೀವಿಸಿ ಮುಗಿಸಿದ ಕೋಟ್ಯಾನು ಕೋಟಿ ಜನರಲ್ಲಿ ಆರಿಸಿ ತೆಗೆದ ಬಹು ಚಿಕ್ಕ ಸಂಖ್ಯೆಯವರು. ಈಗ ಇವರ ಸಾಕ್ಷಿಯನ್ನು ಕೇಳಿರಿ ’ತಮ್ಮ ಭೂಲೋಕ ಜೀವಿತದೊಳು ಕ್ರಿಸ್ತ ಯೇಸುವನ್ನು ನೂರರಷ್ಟು ಹಿಂಬಾಲಿಸಿದವರು, ಅವರ ಬಾಯಲ್ಲಿ ಯಾವುದೇ ವಂಚನೆ ಅಥವಾ ಸುಳ್ಳು ಇರಲಿಲ್ಲ, ಮತ್ತು ಸ್ತ್ರೀ (ಪ್ರಕಟಣೆ 17 ನೇಯ ಅದ್ಯಾಯದಲ್ಲಿ ಹೇಳಲ್ಪಟ್ಟ ಬಾಬೇಲೆಂಬ ಜಾರಸ್ತ್ರೀಯ ಮತ್ತು ಅವಳ ಮಗಳ ಅಥವಾ ಲೋಕದ) ಸಹವಾಸದಿಂದ ತಮ್ಮನ್ನು ತಾವು ಮಲೀನ ಮಾಡಿಕೊಳ್ಳದೆ ತಮ್ಮನ್ನು ಕಾಪಾಡಿಕೊಂಡವರು." ಇವರ ಸಾಕ್ಷಿಯನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ’ಇವರು ದೇವರನ್ನು ಮೆಚ್ಚಿಸಿದರು.’ ಎಂಬುದಷ್ಟೆ.
ವ್ಯತ್ಯಾಸವನ್ನು ಗಮನಿಸಿದಿರಾ! ಮೊದಲನೆಯ ಗುಂಪಿನವರು ದೇವರ ಆಶೀರ್ವಾದವನ್ನು ಪಡೆದರು, ಎರಡನೆಯ ಗುಂಪಿನವರು ದೇವರ ಮೆಚ್ಚುಗೆಯನ್ನು ಪಡೆದರು. ಮತ್ತೇನು......ನಾವು ಹುಡುಕುವದನ್ನೇ ಹೊಂದಿಕೊಳ್ಳುತ್ತೇವೆ. ನಾವು ದೇವರ ಆಶೀರ್ವಾದದಲ್ಲಿ ತೃಪ್ತಿ ಹೊಂದಿಬಿಟ್ಟರೆ ಕೇವಲ ಅದನ್ನು ಮಾತ್ರವೇ ಹೊಂದಿಕೊಳ್ಳುತ್ತೇವೆ. ಆದರಲ್ಲಿಯೂ ಒಂದು ವೇಳೆ ದೇವರು ಕೊಡುವ ’ಲೌಕೀಕ ವಸ್ತುಗಳ’ ಆಶೀರ್ವಾದದಲ್ಲಿ ಮಾತ್ರವೇ ತೃಪ್ತಿ ಹೊಂದಿಬಿಟ್ಟರೆ ನಾವು ದೇವರ ಆತ್ಮೀಕ ಆಶಿರ್ವಾದವನ್ನು ಪಡೆದುಕೊಳ್ಳುವುದಕ್ಕೆ ಒಂದು ಹೆಜ್ಜೆ ಕೂಡಾ ಇಡಲಿಕ್ಕೆ ಆಗುವುದಿಲ್ಲ.
ಇಂದಿನ ಅನೇಕ ವಿಶ್ವಾಸಿಗಳು ದೇವರಿಂದ ಆಶಿರ್ವಾದಿಸಲ್ಪಡುವದರಲ್ಲಿ ಅದರಲ್ಲಿಯೂ ಪ್ರಧಾನವಾಗಿ ಲೌಕೀಕ ವಸ್ತುಗಳ ಮೂಲಕ ಆಶಿರ್ವಾದಿಸಲ್ಪಡುವದರಲ್ಲಿ ಮಾತ್ರವೇ ತೃಪ್ತಿ ಹೊಂದಿಬಿಡುತ್ತಾರೆ. ಆದ್ದರಿಂದಲೇ ಕ್ರೈಸ್ತ ಪುಸ್ತಕ ಅಂಗಡಿಗಳಲ್ಲಿ, ಒಬ್ಬನು ತನ್ನ ಶಾರೀರಿಕ ರೋಗಗಳಿಂದ ಹೇಗೆ ಸ್ವಸ್ಥತೆಯನ್ನು ಪಡೆಯಬಹುದು ಎಂಬುದರ ಬಗ್ಗೆಯೂ, ಹತ್ತರಲ್ಲೊಂದು ಪಾಲು(ದಶಾಂಶ) ಕೊಟ್ಟು ಹೇಗೆ ಐಶ್ವರ್ಯವಂತಾಗಬಹುದು, ಎಂಬುದರ ಬಗ್ಗೆಯೂ ಪುಸ್ತಕಗಳು ತುಂಬಿಹೋಗಿವೆ. ಇವುಗಳು ಒತ್ತಿ ಹೇಳುವುದೆಲ್ಲಾ ಶಾರೀರಿಕ ಮತ್ತು ಲೌಖಿಕ ಸುಖ ಜೀವನ; ಅರೋಗ್ಯ ಮತ್ತು ಐಶ್ವರ್ಯ ವೃಧ್ಧಿಯಷ್ಟೇ, ಇವುಗಳೆಲ್ಲಾ ಸ್ವಾರ್ಥತೆಯನ್ನು ಕೇಂದ್ರಿಕರಿಸಿಕೊಂಡು ಜೀವಿಸುವ ಒಂದು ಬಾಳಿನ ಗುರುತು. ಆದರೆ ದೇವರ ವಾಕ್ಯವು, ’ನಾವು ನಮಗಾಗಿ ಜೀವಿಸದೇ ಆತನಿಗೋಸ್ಕರ ಜೀವಿಸಬೇಕೆಂಬುದಕ್ಕಾಗಿ ಯೇಸು ಸತ್ತನು ಎಂದೇ ಹೇಳುತ್ತದೆ.’ (2 ಕೊರಿಂಥ 5:15). ಅದೇನಂದರೆ ನಮ್ಮನ್ನು ನಾವೇ ಮೆಚ್ಚಿಕೊಂಡು ಜೀವಿಸುವದು ಅಲ್ಲ. ದೇವರನ್ನು ಮಾತ್ರವೇ ಮೆಚ್ಚಿಕೊಂಡು ಜೀವಿಸುವ ಒಂದು ಜೀವಿತ. ಇದನ್ನು ಬೇರೆ ರೀತಿಯಲ್ಲಿ ಹೇಳಬೇಕಾದರೆ ಈ ಹೊಲಸಾದ ಸ್ವಾರ್ಥತೆವನ್ನು ಕೇಂದ್ರೀಕರಿಸಿದ ಬಾಳುವಿಕೆಯಿಂದ ನಮ್ಮನ್ನು ಬಿಡಿಸಿ ದೇವರನ್ನು ಕೇಂದ್ರೀಕರಿಸಿದ ಬಾಳುವಿಕೆಯೊಳಗೆ ನಮ್ಮನ್ನು ಕರೆದುಕೊಂಡು ಬರುವುದಕ್ಕಾಗಿಯೇ ಯೇಸು ಸತ್ತಾನು’.
ಈ ದಿನಗಳಲ್ಲಿ ನಮಗೆ ಒಗಟಾಗಿರುವ ಒಂದು ಪ್ರಶ್ನೆಯೆಂದರೆ ಎಲ್ಲದಕ್ಕೂ ಹೊಂದಿಕೊಳ್ಳುವ ಗುಣವಿರುವ (ಇಜ್ಜೋಡಾದ) ಅನೇಕ ಕ್ರಿಸ್ತೀಯ ಕೆಲಸಗಳನ್ನು ದೇವರು ಆಶೀರ್ವದಿಸುವದೇ ಆಗಿದೆ. ಅಂದರೆ ಇದರ ಅರ್ಥ ಈ ರೀತಿಯ ತನ್ನ ವಾಕ್ಯಕ್ಕೆ ತಪ್ಪಿ ಇಜ್ಜೋಡಾದ ಕಾರ್ಯಗಳನ್ನು ನೋಡಿ ದೇವರಿಗೆ ಬೇಸರವಾಗಿಲ್ಲವೆಂದೇ? ಇಲ್ಲ, ಖಂಡಿತವಾಗಿಯೂ ಇದರ ಅರ್ಥ ಆ ರೀತಿಯಾಗಿಲ್ಲ: ದೇವರು ತಾನು ಸಂಪೂರ್ಣವಾಗಿ ಮೆಚ್ಚಲಾಗದ ಅನೇಕ ಸೇವೆಗಳನ್ನೂ ಆಶೀರ್ವದಿಸುತ್ತಾರೆ. ದೇವರು ಹೇಳಿದಂತೆ ಮಾಡದೇ ಮೋಶೆ ದೇವರ ಮಾತಿಗೆ ಅವಿಧೇಯನಾಗಿ ಬಂಡೆಯನ್ನು ಹೊಡೆದನು (ದೇವರು ಅವನಿಗೆ ಬಂಡೆಗೆ ಮಾತನಾಡಲು ಮಾತ್ರ ಹೇಳಿದ್ದರು). ಆದಾಗ್ಯೂ ಆ ಅವಿಧೇಯತೆಯ ಸೇವೆಯನ್ನು ಕೂಡಾ ದೇವರು ’ಆಶೀರ್ವದಿಸಿದರು’. ಇರುವ ವಿಷಯವೆಂದರೆ, ನಂತರ ತನ್ನ ಅವಿಧೇಯ ಸೇವಕನೊಂದಿಗೆ ದೇವರು ಕಠಿಣವಾದ ಕ್ರಮವನ್ನು ತೆಗೆದುಕೊಂಡರು (ಅರಣ್ಯಕಾಂಡ 20:8 13). ನೋಡಿದಿರಾ? ತನ್ನ ಸೇವೆಯನ್ನು ದೇವರು ಮೆಚ್ಚಿದ್ದಕ್ಕಾಗಿ ಅಲ್ಲ; ಅವಶ್ಯಕತೆಯಿಂದ ನಿಂತಿದ್ದ 2 ಕೋಟಿ ಜನರನ್ನು ಪ್ರಿತಿಸಿದ ಆ ಪ್ರಿತಿಗೋಸ್ಕರವೇ ಅವರು ಆ ಸೇವೆಯನ್ನು ಆಶೀರ್ವದಿಸಿದರು. ಇಂದು ಕೂಡಾ ಹಾಗೆಯೇ ಇದೆ.
ತಮ್ಮ ರಕ್ಷಣೆಗಾಗಿಯೂ, ಶಾರೀರಿಕ ಗುಣವನ್ನು ಪಡೆಯುವದಕ್ಕಾಗಿಯೂ ತವಕಪಟ್ಟು ನಿಲ್ಲುವ ಜನರನ್ನು ದೇವರು "ಪ್ರೀತಿಸುತ್ತಾರೆ" ಎಂಬ ಒಂದೇ ಕಾರಣಕ್ಕಾಗಿಯೇ ಅನೇಕ ಸೇವೆಗಳು ಅವರ ಮೂಲಕ ಆಶೀರ್ವಾದಿಸಲ್ಪಡುತ್ತವೆ. ಆದರೆ ಯೇಸುವಿನ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಕಾರ್ಯಗಳನ್ನು ದೇವರು ಖಂಡಿತವಾಗಿ ಮೆಚ್ಚಲಾರರು ಅವರು ತಕ್ಕ ಕಾಲದಲ್ಲಿ ಇಂತಹ ಇಜ್ಜೋಡು ಭೋದಕರುಗಳನ್ನು ಖಂಡಿತವಾಗಿ ಶಿಕ್ಷಿಸುತ್ತಾರೆ.
ದೇವರ ಮೂಲಕ ಲೋಕದ ವಸ್ತುಗಳನ್ನು ಆಶೀರ್ವಾದವಾಗಿ ಪಡೆದುಕೊಳ್ಳಲಿಕ್ಕೆ ನೆರವಾಗಬೇಕಾದ ಒಂದೇ ನಿಭಂಧನೆ ಏನೆಂದರೆ ’ಒಬ್ಬನು ಒಳ್ಳೆಯವನಾಗಿಯೋ ಅಥವಾ ಕೆಟ್ಟವನಾಗಿಯೋ’ ಆಗಿರಬೇಕಷ್ಟೇ! ಏಕೆಂದರೆ "ದೇವರು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಒಂದೇ ಸಮಾನವಾಗಿ ಮಳೆಯನ್ನು ಸುರಿಸುತ್ತಾರೆ ಮತ್ತು ತನ್ನ ಸೂರ್ಯನು ಮೂಡುವಂತೆ ಮಾಡುತ್ತಾರೆ." (ಮತ್ತಾಯ 5:45) ಎಂದು ಯೇಸು ಹೇಳಿದರು. ಆದುದರಿಂದ ಲೌಕೀಕ ಆಶೀರ್ವಾದಗಳು ದೇವರು ಒಬ್ಬ ಮನುಷ್ಯನ ಜೀವಿತವನ್ನು ಮೆಚ್ಚಿದ್ದಕ್ಕೆ ಗುರುತು ಅಲ್ಲವೇ ಅಲ್ಲ. ಅರಣ್ಯದಲ್ಲಿ ಎರಡು ಕೋಟಿ ಇಸ್ರಾಯೇಲ್ಯರು 40 ವರುಷಗಳ ಕಾಲ ಎಷ್ಟು ಹೆಚ್ಚಾಗಿ ದೇವರಿಗೆ ಅವಿದೇಯರಾದರೆಂದರೆ ಅವರ ಮೇಲೆ ದೇವರು ಬಹಳವಾಗಿ ಕೋಪಿಸಿಕೊಂಡರು (ಇಬ್ರಿಯ 3:17). ಆದರೂ ಈ ಎಲ್ಲಾ ವರುಷಗಳೂ ದೇವರು ಅವರಿಗೆ ಅಧ್ಬುತ ರೀತಿಯಿಂದ ಊಟ ಮತ್ತು ಒಳ್ಳೆಯ ಸ್ವಸ್ಥತೆಯನ್ನು ಕೊಟ್ಟರು (ಧರ್ಮೋ 8:2). ಆದುದರಿಂದ ಶಾರೀರಿಕ ಬೇಡಿಕೆಗಳ ಪ್ರಾರ್ಥನೆಗಳಿಗೆ ಸಿಗುವ "ಅದ್ಭುತವಾದ ಉತ್ತರಗಳು" ದೇವರು ಒಬ್ಬ ಮನುಷ್ಯನ ಜೀವಿತದ ಬಗ್ಗೆ ಸಂತೋಷಪಟ್ಟಿದ್ದಾಗಿ, ಎಂಬುದಕ್ಕೆ ಗುರುತು ಅಲ್ಲವೇ ಅಲ್ಲ!
ಇವುಗಳೆಲ್ಲದಕ್ಕೂ ಬದಲಾಗಿ, ಯೇಸು 30 ವರ್ಷದವನಿರುವಾಗ, ದೇವರ ಮೆಚ್ಚುಗೆ ಆತನ ಮೇಲೆ ನೆಲೆಸಿತ್ತು. ಅದಕ್ಕೆ ಒಂದೇ ಕಾರಣ ಏನೆಂದರೆ, ಆ ಎಲ್ಲಾ ವರುಷಗಳಲ್ಲಿ ಯೇಸು ನಂಬಿಗಸ್ತನಾಗಿದ್ದುಕೊಂಡು ಶೊಧನೆಗಳ ಮೇಲೆ ಜಯವನ್ನು ಹೊಂದಿದ್ದನು. ಅವನು ತನ್ನ ಸ್ವಾರ್ಥವನ್ನು ಕೇಂದ್ರಿಕರಿಸದೆ, ತಂದೆಯನ್ನು ಕೇಂದ್ರಿಕರಿಸಿದ ಜೀವಿತವನ್ನು ಜೀವಿಸಿದ್ದನು, ಹೌದು ಅವನು ತನ್ನ ಸುಖಕ್ಕಾಗಿ ಒಂದನ್ನೂ ಮಾಡಲೇ ಇಲ್ಲ. (ರೋಮ 15:3) ಅವನ ದೀಕ್ಷಾಸ್ನಾನದಲ್ಲಿ "ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ" ಎಂದೇ ತಂದೆಯಾದ ದೇವರು ಒಳ್ಳೆಯ ಸಾಕ್ಷಿಯನ್ನು ಕೊಟ್ಟರು. "ನಾನು ’ಆಶೀರ್ವಾದ’ ಮಾಡಿದ ನನ್ನ ಪ್ರಿಯನಾಗಿರುವ ನನ್ನ ಒಳ್ಳೆಯ ಮಗನು" ಎಂದು ತಂದೆ ಹೇಳಲೇ ಇಲ್ಲ; ಎರಡನೆಯ ಸಾಕ್ಷಿಯಲ್ಲಿ ಯಾವ ಬೆಲೆ ಇಲ್ಲ. ಬದಲಿಗೆ ದೇವರ ಮೆಚ್ಚುಗೆಯನ್ನು ಸೂಚಿಸುವಂಥಹ ಮೊದಲಿನ ಸಾಕ್ಷಿಯನ್ನೇ ಯೇಸು ಮುಖ್ಯವಾಗಿ ಬಯಸಿದ್ದು. ಆದ್ದರಿಂದ ಯೇಸುವನ್ನು ಹಿಂಬಾಲಿಸುವುದೆಂದರೆ ಯೇಸು ಬಯಸಿದ ಅದೇ ಸಾಕ್ಷಿಯನ್ನು ಹುಡುಕುವುದಾಗಿದೆ.
ಆದಾಮನ ಮಕ್ಕಳಾದ ನಾವೆಲ್ಲರೂ ಸ್ವಾರ್ಥವನ್ನೇ ಕೇಂದ್ರಿಕರಿಸಿಕೊಂಡು ಹುಟ್ಟಿದ ಜೀವಿಗಳಾಗಿದ್ದೇವೆ. ನಾವು ಬೆಳೆಯುತ್ತಾ ’ಎಲ್ಲವೂ’ ನಮ್ಮನ್ನೇ ಸುತ್ತುತ್ತಾ ಬಂದು ನಮ್ಮನ್ನು ಸೇವಿಸಬೇಕು ಎಂಬುದಾಗಿ ಬಯಸುತ್ತೇವೆ. ನಾವು ಮಾರ್ಪಟ್ಟ ಮೇಲೆ ಸಹ ’ದೇವರು’ ನಮ್ಮ ಸೇವೆ ಮಾಡಿ ನಮ್ಮನ್ನು ಎಲ್ಲಾ ರೀತಿಯಲ್ಲಿ ಆಶೀರ್ವದಿಸಬೇಕು ಎಂದು ಎದುರು ನೋಡುತ್ತೇವೆ. ಪ್ರಾರಂಭದಲ್ಲಿ ನಾವು ಪಾಪ ಕ್ಷಮಾಪಣೆಯ ಆಶೀರ್ವಾದವನ್ನು ಹೊಂದಿಕೊಳ್ಳಲು ದೇವರ ಹತ್ತಿರ ಬರುತ್ತೇವೆ. ಅದಾದ ನಂತರ ಎಡಬಿಡದೆ ಸರಪಣಿ ಹಾಗೆ ಶರೀರ ಸ್ವಸ್ಥತೆ, ಪ್ರಾರ್ಥನೆಗೆ ಉತ್ತರ, ಸಂಪತ್ತು, ಉದ್ಯೋಗ, ಮನೆ, ಜೀವನದ ಸಹಬಾಗಿ......... ಎಂದು ಅವುಗಳನ್ನು ದೇವರಿಂದ ಪಡೆದುಕೊಳ್ಳಲು ತವಕಪಡುತ್ತೇವೆ. ನಮ್ಮ ಕಣ್ಣುಗಳಿಗೂ ಜನರ ಕಣ್ಣುಗಳಿಗೂ ಆಳವಾದ ಭಕ್ತಿವಂತರ ಹಾಗೆ ನಾವು ಕಾಣಲ್ಪಟ್ಟರೂ ಇನ್ನೂ ನಮ್ಮ ಜೀವಿತ ಸ್ವಾರ್ಥವನ್ನೇ ಕೇಂದ್ರಿಕರಿಸುತ್ತಾ ಇರಲು ಸಾದ್ಯ. ದೇವರ ಮೂಲಕ ಏನೆಲ್ಲಾ ಹೊಂದಿಕೊಳ್ಳಬಹುದೋ ಅವುಗಳನ್ನೆಲ್ಲಾ ಹೊಂದಿಕೊಳ್ಳುವುದಕ್ಕೆ ಬಯಸುತೇವೆ. ದುಂದುಗಾರನಾದ ಕಿರಿಯ ಮಗನು ತನ್ನ ತಂದೆಯ ಮನೆಯಲ್ಲಿ ಊಟ ಸಿಗುತ್ತದೆ, ಎಂದು ಎಣಿಸಿಕೊಂಡೇ ತಿರುಗಿ ಬಂದಿದ್ದರೂ ಸಹ ಅವನ ತಂದೆ ಅವನನ್ನು ಮನ:-ಪೂರ್ವಕವಾಗಿ ಅಂಗೀಕರಿಸಿಕೊಂಡನು. ಈ ರೀತಿಯಾಗಿ ದೇವರೂ ಕೂಡಾ ನಾವು ಎಷ್ಟೊಂದು ಪರಿಪೂರ್ಣ ಸ್ವಾರ್ಥಿಗಳಾಗಿ ಇದ್ದರೂ ನಮ್ಮನ್ನು ಸ್ವೀಕರಿಸಿಕೊಳ್ಳುತ್ತಾರೆ. ಪೂರ್ಣ ಸ್ವಾರ್ಥದ ಉದ್ದೇಶದಿಂದ ದೇವರ ಕಡೆ ನಾವು ಬಂದರೂ ಸಹ ನಮ್ಮನ್ನು ಅವರು ಅಧಿಕವಾಗಿ ಪ್ರೀತಿಸುವ ನಿಮಿತ್ತವಾಗಿ ನಮ್ಮನ್ನು ಅಪ್ಪಿಕೊಂಡು ಸ್ವೀಕರಿಸಿಕೋಳ್ಳುತ್ತಾರೆ. ಹೀಗಿರಲಾಗಿ ಅವರ ದೈವೀಕ ಸ್ವಭಾವವಾದ "ತೆಗೆದುಕೊಳ್ಳುವಕ್ಕಿಂತ ಕೊಡುವದೇ ಹೆಚ್ಚಿನ ಬಾಗ್ಯವೆಂಬ" (ಅ.ಕೃ.20:35) ಅವರ ಸ್ವಭಾವದಲ್ಲಿ ನಾವು ಪಾಲನ್ನು ಹೂದುವದೇ ನಿಜವಾದ ಆತ್ಮೀಕತ್ವ ಎಂದು ನಾವು ಅರಿತು ಬೆಳೆಯಬೇಕೆಂದು ದೇವರು ನಮ್ಮ ಮೇಲೆ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಆದರೆ ತನ್ನ ಉದ್ದೇಶವು ಹೆಚ್ಚಿನಾಂಶ ಮಕ್ಕಳಲ್ಲಿ ನೆರವೇರದೇ ಇರುವ ಪರಿಸ್ಥಿತಿಯನ್ನು ದೇವರು ಯಾವಾಗಲೂ ನೋಡುತ್ತಾ ಇದ್ದಾರೆ. ಅವರು ಎಲ್ಲಾ ಕಾಲದಲ್ಲಿಯೂ ’ನಾನು’ ’ನನಗೆ’ ಮತ್ತು ’ನನ್ನದು’ ಎಂದು ಯೋಚಿಸುತ್ತಾ ತಮ್ಮ ಸ್ವಾರ್ಥಕೇಂದ್ರಿತ ಜೀವಿತದಲ್ಲಿಯೂ, ಲೌಕಿಕ ಮತ್ತು ಭೌತಿಕ ಆಶೀರ್ವಾದಗಳ ಬಗ್ಗೆ ಯೋಚಿಸುತ್ತಲೂ ಜೀವಿಸಿ ಸಾಯುತ್ತಾರೆ.
ಆತ್ಮಿಕರಾಗಿ ಪರಿಪಕ್ವತೆ ಹೊಂದುವುದೆಂದರೆ, ದೇವರಿಂದ ನಾವು ಏನನ್ನು ಪಡೆಯಬಹುದು ಎಂಬುದನ್ನು ಕೇಂದ್ರವಾಗಿಟ್ಟುಕೊಳ್ಳದೇ ಈ ಒಂದೇ ಒಂದು ಭೂಲೋಕ ಜೀವಿತದಲ್ಲಿ ನಮ್ಮಿಂದ ದೇವರು ಎನನ್ನು ಹೊಂದಿಕೊಳ್ಳಬಹುದು ಎಂದು ನಮ್ಮ ಮನಸ್ಸನ್ನು ನೂತನಪಡಿಸಿಕೊಳ್ಳುವದೇ ಆಗಿದೆ. ಈ ರೀತಿ ನೂತನ ಮನಸ್ಸನ್ನು ಹೊಂದುವದೇ ನಮ್ಮನ್ನು ಪರಲೋಕ ಭಾವದವರನ್ನಾಗಿ ಮಾರ್ಪಡಿಸುತ್ತಾದೆ (ರೋಮ 12:2). ಇದೇ (ಪ್ರಕಟಣೆ 14 ರಲ್ಲಿ) 1,44,000 ಜನರನ್ನು ಚೀಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯ ಜೊತೆ ನಿಲ್ಲಲ್ಲು ಅರ್ಹರನ್ನಾಗಿ ಮಾಡಿದ್ದು.
ನಿಜವಾದ ಆತ್ಮೀಕತ್ವವು ಸಿಟ್ಟು, ಕೆಣಕಿಸಲ್ಪಡುವಿಕೆ, ದುರಾಭಿಲಾಷೆ, ಲೈಂಗಿಕ ಯೋಚನೆಗಳು, ಹಣದ ಆಶೆ ಮುಂತದ ಹಲವಾರು ಕಾರ್ಯಗಳಲ್ಲಿ ನಾವು ಜಯ ಹೊಂದುವದು ಮಾತ್ರವೇ ಅಲ್ಲ; ಅದು ನಾನತ್ವ, ನಮ್ಮ ಸ್ವ ಗೌರವ ಮತ್ತು ನಮ್ಮ ಸ್ವಂತ ’ಆತ್ಮೀಕತೆಯನ್ನು’ ಕೂಡಾ ಹುಡುಕುವುದನ್ನು ನಿಲ್ಲಿಸಿರುವದೇ ಆಗಿರುತ್ತದೆ.
ಶಿಷ್ಯರು ಪ್ರಾರ್ಥಿಸಲು ಕಲಿಸಿಕೊಡೆಂದು ಯೇಸುವನ್ನು ಕೇಳಿದಾಗ, ’ನಾನು’’ನನಗೆ’ ಮತ್ತು ’ನನ್ನದು’ ಎಂಬ ಒಂದು ಶಬ್ದ ಸಹ ಇಲ್ಲದ ಒಂದು ಪ್ರಾರ್ಥನೆಯನ್ನು ಯೇಸು ಅವರಿಗೆ ಕಲಿಸಿಕೊಟ್ಟರು (ಲೂಕ 11: 1 4). ಆ ಪ್ರಾರ್ಥನೆಯಲ್ಲಿ ತಂದೆಯ ನಾಮವು ಅವರ ರಾಜ್ಯವು, ಅವರ ಚಿತ್ತ ಮುಂತಾದವುಗಳನ್ನೇ ಪ್ರಧಾನವಾಗಿಟ್ಟುಕೊಳ್ಳಲು ನಮಗೆ ಕಲಿಸಿಕೊಟ್ಟರು. ಆ ತರುವಾಯ ನಾವು ನಮಗಾಗಿ ಎಷ್ಟು ಕಾಳಜಿವಹಿಸಿ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೊ, ಅಷ್ಟೇ ಹೆಚ್ಚು ಕಾಳಜಿವಹಿಸಿ ನಮ್ಮ ಸಹ ವಿಶ್ವಾಸಿಗಳಿಗಾಗಿಯೂ (ಆತ್ಮೀಕ ಹಾಗೂ ಲೌಕಿಕ ಹಿತಕ್ಕೆ) ಪ್ರಾರ್ಥಿಸಲು ಕಲಿಸಿಕೊಟ್ಟರು ( ನಾನು, ನನ್ನ ಎಂದಲ್ಲ ನಾವು, ನಮ್ಮ ಎಂದು). ಈ ಪ್ರಾರ್ಥನೆಯನ್ನು ಬಾಯಿಪಾಠವಾಗಿ ಗಿಳಿಯ ಹಾಗೆ ಹೇಳುವದು ಸುಲಭ. ಆದರೆ ಈ ಪ್ರಾರ್ಥನೆಯ ಪಾಠಗಳನ್ನು ನಮ್ಮ ಹೃದಯದಲ್ಲಿ ಕಲಿತುಕೊಳ್ಳಲು ನಾವು ನಿಜವಾಗಿ ಎಲ್ಲವನ್ನೂ ಬಿಟ್ಟು ದೇವರನ್ನು ಮಾತ್ರವೇ ನಮ್ಮ ಹೃದಯದ ಮದ್ಯದಲ್ಲಿ ಇಡಬೇಕು. ಪ್ರಾಮಾಣಿಕವಾಗಿ ನಮ್ಮನ್ನು ನಾವು ನ್ಯಾಯ ತೀರ್ಮಾನಿಸಿದರೆ ನಮ್ಮ ಸ್ವಾರ್ಥವನ್ನೆ ಹುಡುಕುವ ನಿಯಮವನ್ನು ಆಗಾಗ್ಗೆ ನಮ್ಮಲ್ಲಿ ಕಾಣುತ್ತೇವೆ (ರೋಮ 7:22). ಅದು ನಮ್ಮ ಜೀವಿತದುದ್ದಕ್ಕೂ ನಮ್ಮ ಸೌಕರ್ಯ, ನಮ್ಮ ಸ್ವಂತ ಹಕ್ಕುಗಳನ್ನು ಮಾತ್ರ ಹುಡುಕುವ ನಿಯಮವಾಗಿದೆ. ನಾವು ಮೊದಲು ದೇವರ ರಾಜ್ಯವನ್ನೇ ಹುಡುಕಬೇಕೆಂದು ಯೇಸು ನಮಗೆ ಕಲಿಸಿಕೊಟ್ಟರು. ಅದೇನಂದರೆ ನಮ್ಮ ಜೀವಿತದ ಸಿಂಹಾಸನದಿಂದ ’ಸ್ವಾರ್ಥ’ವನ್ನು ದೊಬ್ಬಿ ಬಿಟ್ಟು ದೇವರನ್ನೂ ಮತ್ತು ದೇವರ ಆಸಕ್ತಿಗಳನ್ನೇ ನಮ್ಮ ಜೀವಿತದ ಸಿಂಹಾಸನದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು.
ಈ ಭೂಮಿಯಲ್ಲಿ ತನ್ನ ತಂದೆಯ ಚಿತ್ತವನ್ನು ಪೂರೈಸುವುದಕ್ಕೊಸ್ಕರ ಯೇಸುವು ಪರಲೋಕದ ಎಲ್ಲಾ ಅನುಕೂಲತೆಗಳನ್ನು ತ್ಯಜಿಸಿದನು. ತನ್ನ ಕರ್ತನಿಗಾಗಿ ಅಪೂಸ್ತಲನಾಗಿರಲೆಂದು ಕಷ್ಟಗಳನ್ನು ಅನುಭವಿಸುತ್ತಾ, ತಾರ್ಸಿಸ್ಸಿನಲ್ಲಿ ಕ್ರೈಸ್ತ ವ್ಯಾಪಾರಸ್ತನಾಗಿ, ವಿಶ್ರಾಮ ಜೀವಿತವನ್ನು ನಡೆಸುವ ಸೌಭಾಗ್ಯವನ್ನು ಪೌಲನು ತ್ಯಜಿಸಿದನು. ಎಲ್ಲಾ ಅಪೂಸ್ತಲರೂ ಕೂಡಾ ಆ ಒಂದು ದೇವರನ್ನು ಕೇಂದ್ರೀಕರಿಸಿದ ತ್ಯಾಗ ಜೀವಿತವನ್ನು ನಡೆಸಿದರು. ಇಂದಿನ ’ಪ್ರವಾಸಿ’ ಬೋಧಕರಿಗೆ ವ್ಯತಿರಿಕ್ತವಾಗಿ ಅವರೆಲ್ಲರೂ ತಮ್ಮದೆಲ್ಲವನ್ನೂ ಈ ಭೂಮಿಯಲ್ಲಿ ದೇವರ ರಾಜ್ಯವನ್ನು ಪ್ರಸಿದ್ದಿಪಡಿಸಲು ತ್ಯಜಿಸಿದರು.
ನಾವು ಸಿಟ್ಟಿನಿಂದಲೂ, ಅಶುದ್ದವಾದ ಯೋಚನೆಗಳಿಂದಲೂ, ಏನೇ ಜಯ ಹೊಂದಿದರೂ ಇನ್ನೂ ನಾವು ನಮ್ಮ ಸ್ವ ಸೌಕರ್ಯವನ್ನೂ, ಸುಖಭೋಗವನ್ನೂ ಹುಡುಕುವವರಾಗಿದ್ದರೆ ನಾವು ಪಡೆದ ಪರಿಶುದ್ದತೆಯು ಟೊಳ್ಳಾದ(ಸುಳ್ಳಾದ) ಪರಿಶುದ್ದತೆಯೇ. ಇದನ್ನು ಇಂದು ಅನೇಕರು ಅರಿಯದೇ ಇದ್ದಾರೆ; ಹೀಗಿರಲಾಗಿ ಇವರನ್ನು ಸೈತಾನನೂ ಸುಲಭವಾಗಿ ವಂಚಿಸಿ ಬಿಟ್ಟಿದ್ದಾನೆ. ಇಂದು ಬಹಳಷ್ಟು ಕ್ರೈಸ್ತರು ಸೌಕರ್ಯವನ್ನೂ ಸುಖಭೋಗವನ್ನೂ ಐಶ್ವರ್ಯವನ್ನೂ ಹುಡುಕುವವರಾಗಿ ಅನ್ಯ ದೇಶಗಳಿಗೆ ಪ್ರಯಾಣಿಸುತ್ತಾರೆ ಅಥವಾ ವಲಸೆ ಹೋಗುತ್ತಾರೆ. ಇವರಿಗೆ ತಮ್ಮ ಜೀವಿತದಲ್ಲಿ ದೇವರ ಆಶಿರ್ವಾದವು ಸಿಗುತ್ತದಷ್ಟೆ; ಆದರೆ.... ದೇವರ ಮೆಚ್ಚುಗೆ.... ನಿಶ್ಚಯವಾಗಿ ಸಿಗದು. ಏಕೆಂದರೆ ದೇವರು ಮತ್ತು ಲೋಕದ ವಸ್ತುಗಳೂ (ಐಶ್ವರ್ಯ, ಸುಖಭೋಗ, ಅನುಕೂಲತೆಗಳು... ಇತ್ಯಾದಿ) ಎರಡಕ್ಕೂ ಸೇವೆಮಾಡಲು ಒಬ್ಬ ಮನುಷ್ಯನಿಗೆ ಆಗುವುದಿಲ್ಲ. ದೇವರ ಆಶೀರ್ವಾದವು ನಮ್ಮ ಮೇಲೆಯೂ ಇರುವುದನ್ನು ನೋಡಿ, ಅದು ದೇವರು ನಮ್ಮ ಮೇಲೆ ಸಂತೋಷವಾಗಿದಾನೆ ಎಂಬುದಕ್ಕೆ ಗುರುತಾಗಿದೆ ಎಂದು ನಾವು ಯೋಚಿಸುತ್ತಾ ಇದ್ದರೆ, ಸೈತಾನನು ನಮ್ಮನ್ನು ಚೆನ್ನಾಗಿ ವಂಚಿಸಿಬಿಟ್ಟಿದಾನೆ ಎಂಬುದಕ್ಕೆ ಸಂಶಯವೇ ಇಲ್ಲ. ದೇವರ ಆಶೀರ್ವಾದ, ಮತ್ತು ದೇವರ ಮೆಚ್ಚುಗೆ ಈ ಎರಡೂ ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ. ನಾವು ಭೂಲೋಕದ ಓಟವನ್ನು ಓಡಿ ಮುಗಿಸಿದಾಗ ಹೊಂದಿಕೊಳ್ಳಬೇಕಾದ ಸಾಕ್ಷಿ ಯಾವುದೆಂದರೆ ಹನೋಕನು ಭೂಮಿಯನ್ನು ಬಿಟ್ಟು ಹೋದಾಗ ಹೂಂದಿದ ಸಾಕ್ಷಿಯಾಗಿರಬೇಕು. "ಅವನು ದೇವರನ್ನು ಮೆಚ್ಚಿಸಿದನು" (ಇಬ್ರಿಯ 11:5) ಎಂಬ ಸಾಕ್ಷಿಯೇ ಇದಾಗಿತ್ತು. ಮೂರೇ ಪದಗಳಷ್ಟೆ; ಆದರೆ ಈ ಸಾಕ್ಷಿಗಿಂತ ಬಲವಾದ ಸಾಕ್ಷಿಯನ್ನು ಒಬ್ಬ ಮನುಷ್ಯನು ತನ್ನ ಭೂಲೋಕ ಜೀವಿತದಲ್ಲಿ ಹೂಂದಿಕೋಳ್ಳಲಾರನು. ಇದೇ ಸಾಕ್ಷಿಯನ್ನು ಯೇಸುವೂ ಮತ್ತು ಪೌಲನೂ ಹೊಂದಿದರು. "ದೇವರಿಂದ ಆಶೀರ್ವದಿಸಲ್ಪಟ್ಟವನು" ಎಂಬ ಸಾಕ್ಷಿಯಲ್ಲಿ ಯಾವ ಬೆಲೆಯೂ ಇಲ್ಲವೇ ಇಲ್ಲ; ಏಕೆಂದರೆ ಲೋಕದಲ್ಲಿ ಇರುವ ಕೋಟಿ ಕೋಟಿ ಅವಿಶ್ವಾಸಿಗಳು ಸಹ ಇದೇ ಸಾಕ್ಷಿಯನ್ನು ಹೊಂದಿದ್ದಾರೆ.
ಇಂದು ದೇವರು ತನ್ನ ಆಶೀರ್ವಾದವನ್ನು ಮಾತ್ರವಲ್ಲದೆ ತನ್ನ ಮೆಚ್ಚುಗೆಯನ್ನೂ ಹೊಂದಿಕೊಳ್ಳಲು ತವಕಿಸುವವರನ್ನು ಎದುರು ನೋಡುತ್ತಿದ್ದಾರೆ.