ಲೌಕಿಕತೆಯಿಂದ ತಿರುಗಿಕೊಳ್ಳಿರಿ - ಮತ್ತು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಹೊಂದಿರಿ

Article Body: 

(ಈ ಸಂದೇಶವು ಫೆಬ್ರವರಿ 2012 ರಲ್ಲಿ ಒಂದು ಪೆಂಟಕೋಸ್ಟಲ್ ಸಭೆಯಲ್ಲಿ ಕೊಡಲ್ಪಟ್ಟಿತು)

ದೇವರ ವಾಗ್ದಾನಗಳು ಮತ್ತು ದೇವರ ಆಜ್ಞೆಗಳು ಎರಡು ಕಾಲುಗಳಂತೆ, ನಾವು ಅವುಗಳ ಮೇಲೆ ನಿಲ್ಲಬೇಕು ಮತ್ತು ಅವುಗಳನ್ನು ಆಧರಿಸಿ ನಡೆಯಬೇಕು. ಒಂದು ವೇಳೆ ನೀವು ಕೇವಲ ವಾಗ್ದಾನಗಳ ಮೂಲಕ ಜೀವಿಸಲು ಪ್ರಯತ್ನಿಸಿದರೆ, ಅದು ಕೇವಲ ಒಂದು ಕಾಲಿನ ಮೇಲೆ ನಡೆದಂತಿದೆ. ನಿಮಗೆ ಎಲ್ಲಾ ವಾಗ್ದಾನಗಳನ್ನು ಅನುಭವಿಸಲು ಆಗುವದಿಲ್ಲ ಮತ್ತು ನೀವು ಆತ್ಮವಂಚನೆಯಲ್ಲಿ ಜೀವಿಸುವಿರಿ. ಅದೇ ರೀತಿ, ನೀವು ಒಂದು ವೇಳೆ ಕೇವಲ ಆಜ್ಞೆಗಳನ್ನು ಪಾಲಿಸಲು ಪ್ರಯತ್ನಿಸುವದಾದರೆ, ವಾಗ್ದಾನಗಳ ಹೊರತಾಗಿ ಅವುಗಳನ್ನು ಪಾಲಿಸಲು ಸಾಧ್ಯವಾಗುವದಿಲ್ಲ - ಮತ್ತು ನೀವು ಖಿನ್ನರಾಗಿ ನಿರುತ್ಸಾಹಗೊಳ್ಳುವಿರಿ. ಆದುದರಿಂದ ನಮಗೆ ಆಜ್ಞೆಗಳು ಮತ್ತು ವಾಗ್ದಾನಗಳು ಇವೆರಡೂ ಅಗತ್ಯವಾಗಿವೆ.

ಆದರೆ ನೀವು ಸತ್ಯವೇದದ ಅಧ್ಯಯನಕ್ಕೆ ಗಮನ ನೀಡದ ಹೊರತು, ನಿಮಗೆ ದೇವರ ವಾಗ್ದಾನಗಳು ಮತ್ತು ಆಜ್ಞೆಗಳನ್ನು ತಿಳಕೊಳ್ಳಲು ಆಗುವದಿಲ್ಲ. ನೀವು ಪಾಸ್ಟರುಗಳು ಮತ್ತು ದೂರದರ್ಶನದ ಬೋಧಕರನ್ನು ಮಾತ್ರ ಆಲಿಸಿದರೆ, ನಿಮಗೆ ದೇವರ ವಾಕ್ಯದ ಪರಿಚಯ ಆಗುವದಿಲ್ಲ, ಏಕೆಂದರೆ ಅವರು ಅನೇಕ ಸಲ ದೇವರ ವಾಕ್ಯದಲ್ಲಿ ಮತ್ತು ವಾಗ್ದಾನಗಳಲ್ಲಿ ಉಲ್ಲೇಖಿಸಿರುವುದನ್ನು ಸರಿಯಾಗಿ ಬೋಧಿಸುವುದಿಲ್ಲ. ಹಾಗಾಗಿ ದೇವರ ವಾಕ್ಯವನ್ನು ಸ್ವತ: ನೀವೇ ಓದಬೇಕು. ನೀವು ಕ್ರೈಸ್ತರಾಗಿದ್ದರೆ, ನಿಮಗೆ ಲೋಕದ ಬೇರೆ ಎಲ್ಲಾ ಪುಸ್ತಕಗಳಿಗಿಂತ ಸತ್ಯವೇದ ಚೆನ್ನಾಗಿ ತಿಳಿದಿರಬೇಕು. ನೀವು ಸತ್ಯವೇದದ ಅಧ್ಯಯನದಲ್ಲಿ ತೀರಾ ಸೋಮಾರಿಗಳಾಗಿದ್ದರೆ, ನಿಮ್ಮ ಕ್ರಿಸ್ತೀಯ ಜೀವನವು ಆಳವಿಲ್ಲದ್ದಾಗಿ ಮುಂದುವರಿಯುತ್ತದೆ. ನೀವು ಹೊಸದಾಗಿ ಹುಟ್ಟದೇ ಇದ್ದರೂ, ಹೊಸದಾಗಿ ಹುಟ್ಟಿದ್ದೇನೆ ಎಂಬುದಾಗಿ ಆಲೋಚಿಸಬಹುದು. ನೀವು ಹೊಂದಿರುವ ಅನುಭವಗಳೆಲ್ಲವೂ ನಕಲಿಯಾಗಿದ್ದರೂ, ಪವಿತ್ರಾತ್ಮನಿಂದ ತುಂಬಲ್ಪಟ್ಟಿರುವದಾಗಿ ನೀವು ಕಲ್ಪಿಸಿಕೊಳ್ಳಲೂ ಬಹುದು. ಆದರೆ ನೀವು ದೇವರ ವಾಕ್ಯವನ್ನು ಓದುವದಾದರೆ, ಎಂದಿಗೂ ಮೋಸ ಹೋಗುವದಿಲ್ಲ.

ಯಾರ‍್ಯಾರು ದೇವರ ವಾಕ್ಯವನ್ನು ಓದುವದಿಲ್ಲವೋ ಅವರು ಮೋಸ ಹೋಗುವದಕ್ಕೆ ಅರ್ಹರು - ಏಕೆಂದರೆ ಅವರು ದೇವರಿಗೆ ಹೀಗೆ ಹೇಳುತ್ತಿದ್ದಾರೆ, "ನೀನು ಮನುಷ್ಯನಿಗಾಗಿ ಒಂದು ಪುಸ್ತಕವನ್ನು ಬರೆದ ವಿಷಯ ನನಗೆ ತಿಳಿದಿದೆ, ಆದರೆ ನನಗೆ ಅದನ್ನು ಓದಲು ಸಮಯವಿಲ್ಲ. ದೂರದರ್ಶನವನ್ನು ವೀಕ್ಷಿಸುವುದು, ಇಂಟರ್‌ನೆಟ್‌ನ ಪರಿಶೀಲನೆ, ಹೀಗೆ ನಾನು ಮಾಡಬೇಕಾದ ಹಲವಾರು ಪ್ರಮುಖ ಕೆಲಸಗಳಿವೆ. ಹಾಗಾಗಿ ನಾನು ನಿನಗೆ ಭಾನುವಾರ ಬೆಳಗ್ಗೆ ಸ್ವಲ್ಪ ಸಮಯವನ್ನು ಮಾತ್ರ ಕೊಡಬಲ್ಲೆ." ನಿಮಗೆ ದೇವರ ವಾಕ್ಯದ ಬಗ್ಗೆ ಈ ಮನೋಭಾವ ಇದ್ದರೆ, ಬಹುಶಃ ನೀವು ಆತ್ಮಿಕ ಮರುಜನ್ಮವನ್ನೇ ಪಡೆದಿಲ್ಲ. ಎಲ್ಲಾ ಆರೋಗ್ಯವಂತ ಕೂಸುಗಳು ಪ್ರತಿದಿನ ಹಾಲಿಗಾಗಿ ಅಳುತ್ತವೆ. ಹಾಗೆಯೇ ಹೊಸದಾಗಿ ಹುಟ್ಟಿರುವ ಎಲ್ಲಾ ಕ್ರೈಸ್ತರು ವಾಕ್ಯವೆಂಬ ಹಾಲನ್ನು ಪ್ರತಿದಿನ ಬಯಸುತ್ತಾರೆ (1 ಪೇತ್ರ 2:2). ಈ ಸತ್ಯವನ್ನು ನಾನು ನಿಮಗೆ ತಿಳಿಸಲೇ ಬೇಕು, ಏಕೆಂದರೆ ನ್ಯಾಯತೀರ್ಪಿನ ದಿನದಲ್ಲಿ ನಾನು ನಿಮಗೆ ಸತ್ಯವನ್ನು ತಿಳಿಸಲಿಲ್ಲವೆಂದು ನೀವು ನನ್ನನ್ನು ದೂಷಿಸುವುದು ನನಗೆ ಬೇಕಿಲ್ಲ. ಹಲವು ವರ್ಷಗಳ ಕೆಳಗೆ ಕರ್ತನು ನನಗೆ ತಿಳಿಸಿದ್ದು ಏನೆಂದರೆ, ನಾನು ಜನರನ್ನು ಪ್ರೀತಿಸುವದಾದರೆ, ಒಂದು ವೇಳೆ ಅವರಿಗೆ ಸತ್ಯವು ಬೇಕಾಗಿರದಿದ್ದರೂ, ನಾನು ಅದನ್ನು ಅವರಿಗೆ ತಿಳಿಸಲೇ ಬೇಕು, ಎಂದು.

ಹಲವಾರು ಅದ್ಭುತವಾದ ವಾಗ್ದಾನಗಳು ದೇವರ ವಾಕ್ಯದಲ್ಲಿವೆ. ಹೊಸ ಒಡಂಬಡಿಕೆಯಲ್ಲಿ ಹಳೆಯ ಒಡಂಬಡಿಕೆಗಿಂತ ಹೆಚ್ಚಿನ ಅದ್ಭುತವಾದ ವಾಗ್ದಾನಗಳಿವೆ. 2 ಪೇತ್ರ 1:4 ರಲ್ಲಿ ಅವುಗಳನ್ನು "ಅಮೂಲ್ಯವಾಗಿಯೂ ಮತ್ತು ಉತ್ಕೃಷ್ಟವಾಗಿಯೂ ಇರುವ ವಾಗ್ದಾನಗಳು" ಎಂದು ಕರೆಯಲಾಗಿದೆ. ಒಂದು ವೇಳೆ ನಿಮ್ಮ ಜಮೀನಿನ ಒಂದು ಕೊನೆಯಲ್ಲಿ ಭೂಮಿಯ ಕೆಳಗೆ ಅಮೂಲ್ಯ ನಿಧಿ ಇರುವ ವಿಷಯ ನಿಮಗೆ ತಿಳಿದರೆ, ನೀವು ಆ ನಿಧಿಯನ್ನು ಹುಡುಕುವುದರಲ್ಲಿ ಎಷ್ಟು ಸಮಯ ವ್ಯಯಿಸುತ್ತಿದ್ದೀರಿ! ದೇವರ ವಾಗ್ದಾನಗಳು ಭೂಮಿಯ ಯಾವ ನಿಧಿಗಿಂತಲೂ ಹೆಚ್ಚು ಬೆಲೆಬಾಳುತ್ತವೆ ಎಂಬುದಾಗಿ ನೀವು ಗ್ರಹಿಸಿದಾಗ, ನೀವು ಆ ವಾಗ್ದಾನಗಳು ಸಿಗುವ ವರೆಗೂ ದೇವರ ವಾಕ್ಯವನ್ನು ಹುಡುಕುತ್ತಲೇ ಇರುತ್ತೀರಿ.

1959 ರ ಜುಲೈಯಲ್ಲಿ ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ಕ್ರಿಸ್ತನಿಗೆ ಒಪ್ಪಿಸಿಕೊಟ್ಟೆನು. ಅದರ ಮುಂದಿನ ಏಳು ವರ್ಷಗಳನ್ನು ನಾನು ದೇವರ ವಾಕ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡುವದರಲ್ಲಿ ಕಳೆದನು. ನಾನು ಸತ್ಯವೇದದ ಶಾಲೆಗೆ ಹೋಗಲಿಲ್ಲ. ಆ ಏಳು ವರ್ಷಗಳಲ್ಲಿ ನಾನು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಯಾವಾಗಲಾದರೂ ನನಗೆ ಅರ್ಧ ದಿನದ ಕೆಲಸವಿದ್ದಾಗ, ನಾನು ನನ್ನ ಕೋಣೆಯಲ್ಲಿ ಕುಳಿತು ದೇವರ ವಾಕ್ಯವನ್ನು ಓದುತ್ತಿದ್ದೆ. ಅದು ನನ್ನ ಜೀವನದ ಮಾರ್ಗವನ್ನು ಬದಲಾಯಿಸಿತು. ನನಗೆ ಸತ್ಯವೇದದ ಹಲವು ಅದ್ಭುತವಾದ ವಾಗ್ದಾನಗಳ ಪ್ರಕಟಣೆಯಾಯಿತು - ಮತ್ತು ನಾನು ಅವುಗಳನ್ನು ನನ್ನದಾಗಿಸಿಕೊಂಡಂತೆ, ಅವು ನನ್ನ ಜೀವಿತದಲ್ಲಿ ಪರಲೋಕದ ಆತ್ಮವನ್ನು ತಂದವು.

ನಾನು ಯಾವಾಗ ಮದುವೆಯಾದೆನೋ, ನನ್ನ ಮನೆಯಲ್ಲಿಯೂ ಸಹ ದೇವರ ವಾಕ್ಯವು ಪರಲೋಕದ ಆತ್ಮವನ್ನು ತಂದಿತು. ತದನಂತರ, ನನ್ನ ಹೆಂಡತಿ ಮತ್ತು ನಾನು, ದೇವರ ವಾಗ್ದಾನಗಳನ್ನು ನಮ್ಮ ನಾಲ್ಕು ಮಕ್ಕಳಿಗಾಗಿ ಸಹ ಕೇಳಿಕೊಂಡೆವು. ನಾವು ಅವರಿಗೆ ಆತನ ಆಜ್ಞೆಗಳನ್ನು ಸಹ ಮನವರಿಕೆ ಮಾಡಿಕೊಟ್ಟೆವು. ಅದರ ಫಲಿತಾಂಶವೇ, ಇಂದು ಅವರೆಲ್ಲರೂ ದೇವರನ್ನು ಹಿಂಬಾಲಿಸುತ್ತಿದ್ದಾರೆ. ನಾವು ನಮ್ಮ ಬ್ಯಾಂಕ್ ಖಾತೆಯ ಹಣದ ಮೂಲಕ ಜೀವಿಸುವ ಹಾಗೆಯೇ, ಆತನ ವಾಗ್ದಾನಗಳ ಮೂಲಕ ನಾವು ಜೀವಿಸಬೇಕೆಂದು ದೇವರ ಬಯಕೆಯಾಗಿದೆ. ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಕಂಪನಿಯು ನಿಮಗೆ ಬೋನಸ್ಸನ್ನು ಕೊಟ್ಟರೆ, ನೀವು ಅದನ್ನು ಸ್ವೀಕರಿಸದೇ ಇರುತ್ತೀರಾ? ಅವರು ನಿಮ್ಮ ಬ್ಯಾಂಕಿನ ಖಾತೆಗೆ ಹಣವನ್ನು ಜಮೆ ಮಾಡಿದ್ದೇವೆ ಎಂದು ಹೇಳಿದಾಗ, ನಿಮ್ಮ ಖಾತೆಯಲ್ಲಿ ಹಣ ಇದೆಯೇ ಎಂಬುದಾಗಿ ನೀವು ಪರಿಶೀಲಿಸುವುದು ರೂಢಿಯಲ್ಲವೇ? ಎಷ್ಟೋ ಕ್ರೈಸ್ತರು ದೇವರ ವಾಗ್ದಾನಗಳನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಬ್ಯಾಂಕ್ ಖಾತೆಯ ಹಣವನ್ನು ಪರಿಶೀಲಿಸಲು ತವಕಿಸುತ್ತಾರೆ - ಮತ್ತು ಅದೇ ಕಾರಣಕ್ಕಾಗಿ ಅವರ ಜೀವಿತ ತುಂಬಾ ಇಳಿಮುಖವಾಗಿ ಇರುತ್ತದೆ.

ದೇವರ ಆಜ್ಞೆಗಳ ಜೊತೆಗೆ ಆತನ ವಾಗ್ದಾನಗಳು ಸೇರಿದಾಗ ಅವು ನಮ್ಮನ್ನು ಆತ್ಮಿಕವಾಗಿ ಶ್ರೀಮಂತರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ನಾವು ಇದನ್ನು ಆಳವಾಗಿ ನಂಬಿದರೆ, ನಾವು ಅವುಗಳಲ್ಲಿ ಪ್ರತಿಯೊಂದನ್ನು ಯಥಾರ್ಥರಾಗಿ ಹುಡುಕುತ್ತೇವೆ. ನಮಗೆ ಇರುವದು ಒಂದೇ ಒಂದು ಜೀವನ, ಹಾಗಾಗಿ ನಮ್ಮ ಜೀವನದಲ್ಲಿ ಸ್ಪಷ್ಟವಾದ ಗುರಿ ಇರಬೇಕು. ಮರಣದ ನಂತರ ಪರಲೋಕವನ್ನು ಸೇರುವದು ಮಾತ್ರವೇ ನಮ್ಮ ಗುರಿಯಾಗಿದ್ದರೆ, ನಾವು ಒಂದು ದಿನ ಕರ್ತನ ಮುಂದೆ ನಿಲ್ಲುವಾಗ ಬಹಳ ವಿಷಾದ ಪಡುವೆವು.

ನನ್ನ ಜೀವನದ ಗುರಿ ಏನೆಂದು ನಿಮಗೆ ತಿಳಿಸಲು ಬಯಸುತ್ತೇನೆ. ಇದು ನನ್ನ ಪ್ರಾರ್ಥನೆಯಾಗಿದೆ: "ಕರ್ತನೇ, ನಾನು ಭೂಲೋಕವನ್ನು ಬಿಡುವ ಮೊದಲು, ನೀನು ಹೊಸ ಒಡಂಬಡಿಕೆಯ ಕ್ರೈಸ್ತರಿಗೆ ಕೊಟ್ಟಿರುವ ಒಂದೊಂದು ಆಜ್ಞೆಯನ್ನೂ ಪಾಲಿಸ ಬಯಸುತ್ತೇನೆ. ನೀನು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳ ಕುರಿತು ನಾನು ಚಿಂತಿಸುವದಿಲ್ಲ. ಆದರೆ ಈ ಲೋಕವನ್ನು ಬಿಡುವ ಮೊದಲು, ಮರುಜನ್ಮ ಪಡೆದಿರುವ ಕ್ರೈಸ್ತರಿಗಾಗಿ ನೀನು ನೀಡಿರುವ ಪ್ರತಿಯೊಂದು ಆಜ್ಞೆಗೆ ನಾನು ವಿಧೇಯನಾಗಬೇಕು. ಅದಲ್ಲದೆ ನಾನು ಈ ಲೋಕವನ್ನು ಬಿಡುವ ಮೊದಲು, ನೀನು ಹೊಸ ಒಡಂಬಡಿಕೆಯ ಕ್ರೈಸ್ತರಿಗೆ ಕೊಟ್ಟಿರುವ ಪ್ರತಿಯೊಂದು ವಾಗ್ದಾನವನ್ನೂ ಪಡೆದುಕೊಳ್ಳಲು ಬಯಸುತ್ತೇನೆ."

ಇದು ನನ್ನ ಮಕ್ಕಳು ಕಾಲೇಜಿನಲ್ಲಿ ಅವರ ಪ್ರತಿಯೊಂದು ಪಠ್ಯಕ್ರಮವನ್ನೂ ಪೂರೈಸಬೇಕು, ಎನ್ನುವಂತೆ ಇದೆ. ಒಂದು ವೇಳೆ ನನ್ನ ಮಕ್ಕಳಲ್ಲಿ ಯಾರಾದರೂ ಆ ಪಠ್ಯಕ್ರಮಗಳನ್ನು ಅರೆವಾಸಿ ಪೂರೈಸಿದರೆ, ನನಗೆ ತೃಪ್ತಿಯಾಗದು. ಅದೇ ರೀತಿ ನಾನು ಸಹ, ಈ ಲೋಕದ >ನನ್ನ ಆತ್ಮಿಕ ಶಿಕ್ಷಣದ ಎಲ್ಲಾ ಅಭ್ಯಾಸ ಕ್ರಮಗಳನ್ನು ಪೂರೈಸಬೇಕು.

ಇಂದು ಲೋಕದಲ್ಲಿ ಒಂದು ದೊಡ್ಡ ವಿಷಾದಕರ ಸಂಗತಿ ಏನೆಂದರೆ, ಪರಲೋಕದ ಭಾವದವರಾಗಿ ಇರಬೇಕಾದ ವಿಶ್ವಾಸಿಗಳು ಬಹುತೇಕವಾಗಿ ಲೌಕಿಕ ಮನಸ್ಸು ಉಳ್ಳವರು ಆಗಿದ್ದಾರೆ - ಆತ್ಮಭರಿತರು ಎಂದು ಹೇಳಿಕೊಳ್ಳುವವರು ಮತ್ತು ಬೇರೆಯವರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರದೂ ಲೌಕಿಕವಾದ ಮನಸ್ಸು. ಇಬ್ಬರೂ ಹಣವನ್ನು ಪ್ರೀತಿಸುತ್ತಾರೆ ಮತ್ತು ಇಬ್ಬರೂ ಮನುಷ್ಯರಿಂದ ಸಿಗುವ ಗೌರವವನ್ನು ಪ್ರೀತಿಸುತ್ತಾರೆ. ತಾವು "ಆತ್ಮನಿಂದ ತುಂಬಿಸಲ್ಪಟ್ಟ ಕ್ರೈಸ್ತರು" ಎಂದು ಹೇಳಿಕೊಳ್ಳುವವರಿಗೆ ದೇವರು, "ನಿಮ್ಮ ಲೌಕಿಕತೆಗಾಗಿ ಪಶ್ಚಾತಾಪ ಪಡಿರಿ" ಎನ್ನುತ್ತಾನೆ.

ಕರ್ತ ಯೇಸು ಕ್ರಿಸ್ತನ ಪೂರ್ವಸೂಚಕನಾಗಿದ್ದ ಸ್ನಾನಿಕನಾದ ಯೋಹಾನನು, ಜನರಿಗೆ ಕರ್ತನ ದಾರಿಯನ್ನು ಸಿದ್ಧಪಡಿಸಲು ತಿಳಿಸಿದನು. ಅದರಂತೆಯೇ, ನಾವು ನಮ್ಮ ಬಾಳಿನಲ್ಲಿ ಕ್ರಿಸ್ತನನ್ನು ಆಹ್ವಾನಿಸುವಾಗ ಸ್ನಾನಿಕನಾದ ಯೋಹಾನನ ಸಂದೇಶಕ್ಕೆ ವಿಧೇಯರಾಗಬೇಕು. ಅದು ಯಾವುದೆಂದರೆ, "ಪರಲೋಕ ರಾಜ್ಯವು ಸಮೀಪಿಸಿತು, ಪಶ್ಚಾತ್ತಾಪ ಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ" (ಮತ್ತಾಯ 3:2) ಎಂಬುದಾಗಿದೆ. ಈ ಪ್ರಕಾರ ಯೇಸುವು ನಮ್ಮ ಜೀವಿತದ ಕರ್ತನಾಗಲು "ಹಾದಿಯನ್ನು ಸಿದ್ಧಮಾಡಬೇಕು." >

ಯೋಹಾನನ ಮಾತಿನ ನಿಜವಾದ ಅರ್ಥವೇನು? ಆತನು ಇಸ್ರಾಯೇಲ್ಯರಿಗೆ ಹೇಳಿದ್ದು ಇದು: "ಕಳೆದ 1500 ವರ್ಷಗಳಿಂದ, ಮೋಶೆಯ ದಿನಗಳಿಂದಲೂ, ನಿಮ್ಮ ಮನಸ್ಸಿನಲ್ಲಿ ಈ ಲೋಕದ ಸಂಗತಿಗಳು ತುಂಬಿವೆ. ನಿಮ್ಮ ಧರ್ಮಗ್ರಂಥದಲ್ಲಿ ನೀವು ಹೊಂದಿರುವ ಎಲ್ಲಾ ವಾಗ್ದಾನಗಳು ಈ ಲೋಕದ ಸಂಗತಿಗಳ ಬಗ್ಗೆ ಆಗಿವೆ. ಆದಿಕಾಂಡದಿಂದ ಮಲಾಕಿಯವರೆಗೆ ನಿಮಗೆ ಪರಲೋಕದ ಆಶೀರ್ವಾದದ ಒಂದು ವಾಗ್ದಾನವೂ ಇಲ್ಲ. ಎಲ್ಲಾ ವಾಗ್ದಾನಗಳು ಈ ಲೋಕದ ಆಶೀರ್ವಾದಗಳಾಗಿವೆ - ಐಹಿಕ ಐಶ್ವರ್ಯ, ಕೃಷಿ ಮತ್ತು ವ್ಯವಹಾರಗಳಲ್ಲಿ ಆಶೀರ್ವಾದ, ನಿಮ್ಮ ಕಾಯಿಲೆಗಳು ಗುಣವಾಗುವದು, ನಿಮ್ಮ ಈ ಲೋಕದ ಶತ್ರುಗಳ ನಾಶನ ಮತ್ತು ನಿಮ್ಮಂತೆಯೇ ನಿಮ್ಮ ಮಕ್ಕಳು ಆಶೀರ್ವದಿಸಲ್ಪಡುವದು.

"ಈಗ ನೀವು ಪಶ್ಚಾತ್ತಾಪ ಪಡಿರಿ - ತಿರುಗಿಕೊಳ್ಳಿರಿ. ಈ ಲೌಕಿಕ ಆಶಿರ್ವಾದಗಳಿಂದ ತಿರುಗಿಕೊಳ್ಳಿರಿ, ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ. ಪರಲೋಕದಿಂದ ಯಾರೋ ಒಬ್ಬಾತನು ಬಂದು ಪವಿತ್ರಾತ್ಮನಲ್ಲಿ ದೀಕ್ಷಸ್ನಾನ ಮಾಡಿಸಿ, ನಿಮ್ಮ ಹೃದಯದೊಳಗೆ ಪರಲೋಕವನ್ನು ತರುತ್ತಾನೆ. ಆದರೆ ಆತನು ಅದನ್ನು ಮಾಡಬೇಕಾದರೆ, ನೀವು ಈ ಲೋಕದ ಸಂಗತಿಗಳನ್ನು ಬೆನ್ನಟ್ಟುವದನ್ನು ನಿಲ್ಲಿಸಬೇಕು." ಇದು ಯೋಹಾನನ ಬೋಧನೆಯ ಸಾರಾಂಶವಾಗಿತ್ತು. ನಾವೂ ಸಹ, ಪವಿತ್ರಾತ್ಮನ ದೀಕ್ಷಾಸ್ನಾನ ಹೊಂದುವ ಮೊದಲು ಇದನ್ನೇ - ಆ ಸಂದೇಶವನ್ನು ಸ್ವೀಕರಿಸಿ ಕೈಗೊಳ್ಳುವದು - ಮಾಡಬೇಕಾಗಿದೆ.

ಪವಿತ್ರಾತ್ಮನು ಪರಲೋಕದ ವಾತಾವರಣವನ್ನು ನಮ್ಮ ಹೃದಯಗಳಿಗೆ ತರಲಿಕ್ಕಾಗಿ ಪರಲೋಕದಿಂದ ಬಂದನು. ನಿಜವಾಗಿ ಆತ್ಮನಿಂದ ತುಂಬಿಸಲ್ಪಟ್ಟ ಒಬ್ಬ ಕ್ರೈಸ್ತನ ಪ್ರಾಥಮಿಕ ಗುರುತು ಏನೆಂದರೆ, ಆತನಲ್ಲಿ ಪರಲೋಕದ ಮನಸ್ಸು ಇರುತ್ತದೆ ಮತ್ತು ಲೋಕಭಾವ ಇರುವದಿಲ್ಲ. ಆತನಲ್ಲಿ ಪರಲೋಕದ ಸುವಾಸನೆ ಇರುತ್ತದೆ. ಸಹನೆಯಿಲ್ಲದೆ ತನ್ನ ಹೆಂಡತಿಯ ಮೇಲೆ ಕೂಗಾಡುವ ಒಬ್ಬ ವ್ಯಕ್ತಿಯು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿರುವದಾಗಿ ಹೇಳಿಕೊಳ್ಳಬಹುದೇ? ಅಂತಹ ಕೋಪ ಇನ್ಯಾವುದೋ ಆತ್ಮನಿಂದ ಬರುತ್ತದೆಯೇ ಹೊರತು ಪವಿತ್ರಾತ್ಮನಿಂದಲ್ಲ. ಪರಲೋಕದಲ್ಲಿ ಯಾರೂ ಸಹ ಸಿಟ್ಟಾಗಿ ಸಹನೆಯನ್ನು ಕಳಕೊಳ್ಳುವದಿಲ್ಲ.

ನನ್ನ ಜೀವನದಲ್ಲಿ ದೇವರು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದಾಗ ಏನಾಯಿತು ಎಂದು ನನಗೆ ನೆನಪಿದೆ. ನಾನು ಹೊಸದಾಗಿ ಹುಟ್ಟಿದ ಮೇಲೆಯೂ, ಆದಾಮನ ಸ್ವಭಾವವು (ಸತ್ಯವೇದವು ಅದನ್ನು "ಶರೀರಭಾವ" ಎನ್ನುತ್ತದೆ) ನನ್ನ ಮೇಲೆ ಅಧಿಕಾರ ಚಲಾಯಿಸುತ್ತಿತ್ತು. ಆದರೆ ಕ್ರಿಸ್ತನ ಆತ್ಮನು ಯಾವಾಗ ನನ್ನನ್ನು ತುಂಬಿದನೋ, ಆತನು ನನ್ನನ್ನು ಸ್ವಲ್ಪ ಸ್ವಲ್ಪವಾಗಿ ಕ್ರಿಸ್ತನ ಹೋಲಿಕೆಗೆ ಮಾರ್ಪಡಿಸುವ ಪ್ರಕ್ರಿಯೆಯನ್ನು ಶುರು ಮಾಡಿದನು. ಆತ್ಮನಿಂದ ತುಂಬಿಸಲ್ಪಟ್ಟಂಥ ಒಬ್ಬ ಮನುಷ್ಯ ಹೇಗಿರುತ್ತಾನೆ ಎಂಬುದಕ್ಕೆ ಯೇಸು ಕ್ರಿಸ್ತನೇ ಅತಿ ಶ್ರೇಷ್ಠವಾದ ಉದಾಹರಣೆ ಆಗಿದ್ದಾನೆ. ದೇವರು ನಮ್ಮನ್ನು ಸಂಪೂರ್ಣವಾಗಿ ಆತನಂತೆ ಮಾಡಲು ಇಚ್ಛಿಸುತ್ತಾನೆ.

ಸ್ನಾನಿಕನಾದ ಯೋಹಾನನು, "ಅಗೋ, ದೇವರು ನೇಮಿಸಿದ ಕುರಿಮರಿ, ಮೊದಲು ನಿಮ್ಮ ಎಲ್ಲಾ ಪಾಪಗಳನ್ನು ಹೊತ್ತುಕೊಂಡು ಹೋಗುವನು," ಎಂದನು. ಬೇರೆ ಮಾತುಗಳಲ್ಲಿ ಹೇಳುವದಾದರೆ, ಯೇಸುವು ಮೊದಲು ನಿಮ್ಮ ಬಟ್ಟಲನ್ನು ಶುಚಿಮಾಡುತ್ತಾನೆ. ಆದರೆ ಆತನು ನಿಮ್ಮ ಬಟ್ಟಲನ್ನು ಖಾಲಿಯಾಗಿ ಇರಿಸುವದಿಲ್ಲ. ಆತನು ನಿಮ್ಮ ಬಟ್ಟಲನ್ನು ತುಂಬಿಸುತ್ತಾನೆ. ಆತನು ನಿಮ್ಮ ಹೃದಯದಲ್ಲಿ ತನ್ನ ಆತ್ಮವನ್ನು ತುಂಬಿಸಲಿಕ್ಕಾಗಿ ಮೊದಲು ಅದನ್ನು ಶುಚಿಗೊಳಿಸುವನು, ಮತ್ತು ಆಗ ನಿಮ್ಮ ಒಳಗಿನಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುವವು.

ಹಳೆಯ ಒಡಂಬಡಿಕೆಯಲ್ಲೂ ಜನರು "ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದರು." ಆದರೆ ಅದು ಹೊಸ ಒಡಂಬಡಿಕೆಯ ತುಂಬಿಸುವಿಕೆಯಂತೆ ಇರಲಿಲ್ಲ. ಸತ್ಯವೇದವು (ಯೋಹಾನ 7:39ರಲ್ಲಿ) ತಿಳಿಸುವಂತೆ, ಯೇಸುವು ಮಹಿಮೆ ಹೊಂದುವದಕ್ಕೆ ಮೊದಲು ಪವಿತ್ರಾತ್ಮನು "ಹೊಸ ಒಡಂಬಡಿಕೆಯ" ರೀತಿಯಲ್ಲಿ ಕೊಡಲ್ಪಡಲು ಸಾಧ್ಯವಿರಲಿಲ್ಲ.

ನಾನು ಈ ವ್ಯತ್ಯಾಸವನ್ನು ವಿವರಿಸಲು ಬಯಸುತ್ತೇನೆ. ಒಂದು ವೇಳೆ ನೀವು ಒಂದು ಲೋಟವನ್ನು ಕೆಳಮುಖ ಮಾಡಿ ಇರಿಸಿ ಅದರ ಮೇಲೆ ನೀರನ್ನು ಸುರಿಯುತ್ತಿದ್ದರೆ, ಆ ನೀರು ಲೋಟದ ಮೇಲಿಂದ ಹಲವು ದಿಕ್ಕುಗಳಿಗೆ ಹರಿಯುತ್ತಾ ಹೋಗುತ್ತದೆ. ಇದು ಹಳೆಯ ಒಡಂಬಡಿಕೆಯಲ್ಲಿ ದೇವರು ತನ್ನ ಆತ್ಮವನ್ನು ತನ್ನ ಸೇವಕರ ಮೇಲೆ ಸುರಿಸಿ, ಸಾವಿರಾರು ಜನರನ್ನು ಆಶೀರ್ವದಿಸಿದ ವಿಧಾನದ ಒಂದು ಚಿತ್ರಣ ಆಗಿದೆ. ದೇವರ ಆತ್ಮನು ಗಿದ್ಯೋನ, ಸಂಸೋನ, ಸೌಲ ಮತ್ತು ದಾವೀದರ ಮೇಲೆ ಬಂದನು - ಮತ್ತು ಇವರ ಮೂಲಕ ದೇವರು ಇಸ್ರಾಯೇಲ್ಯರನ್ನು ಅವರ ಶತ್ರುಗಳಿಂದ ಬಿಡಿಸಿದನು. ಆದರೆ ನೀವು ಅವರ ಹೃದಯಗಳನ್ನು (ಬಟ್ಟಲಿನ ಒಳಭಾಗ) ನೋಡಿದ್ದರೆ, ಅವು ಪಾಪಪೂರಿತ ಮತ್ತು ಹೊಲಸು ಆಗಿದ್ದವು. ಬಟ್ಟಲು ಕೆಳಮುಖವಾಗಿತ್ತು. ಅವರ ಹೃದಯಗಳಲ್ಲಿ ವ್ಯಭಿಚಾರ ಮತ್ತು ವಿಗ್ರಹಾರಾಧನೆ ಇತ್ತು. ದೇವರ ಆತ್ಮವು ಗಿದ್ಯೋನನ ಮೇಲೆ ಬಂದಾಗ ಅವನು ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡುಗಡೆಗೊಳಿಸಿದನು (ನ್ಯಾಯಸ್ಥಾಪಕರು 6:34). ಆದರೆ ದೇವರು ಆತನನ್ನು ಬಲಿಷ್ಠವಾಗಿ ನಡೆಸಿದ ನಂತರ, ಆತನು ವಿಗ್ರಹಗಳನ್ನು ತಯಾರಿಸಿ, ಅವುಗಳನ್ನು ಆರಾಧಿಸಲು ಆರಂಭಿಸಿದನು (ನ್ಯಾಯಸ್ಥಾಪಕರು 8:24-27). ಆತನ ಬಟ್ಟಲಿನ ಒಳಭಾಗ ಹೊಲಸಾಗಿತ್ತು. ಸೌಲ ಮತ್ತು ದಾವೀದರ ಹೃದಯಗಳು ಸಹ - ಬೇರೊಂದು ರೀತಿಯಲ್ಲಿ - ಹೊಲಸಾಗಿದ್ದವು.

ಆದರೆ ಪಂಚಾಶತ್ತಮ ದಿನದಂದು ದೇವರು ಆ ಬಟ್ಟಲನ್ನು ಸರಿಯಾಗಿ ಮೇಲ್ಭಾಗಕ್ಕೆ ತಿರುಗಿಸಿದನು ಮತ್ತು ಬಟ್ಟಲಿನ ಒಳಗೆ (ಹೃದಯದಲ್ಲಿ) ಆತ್ಮನನ್ನು ಸುರಿಸಿ, ಮೊದಲು ಒಳಭಾಗವನ್ನು ಶುಚಿಗೊಳಿಸಿ, ನಂತರ ಅದನ್ನು ತುಂಬಿಸಿದನು. ನಂತರ "ಹೊಟ್ಟೆಯೊಳಗಿಂದ" ನೀರು ಹರಿಯಲು ಆರಂಭಿಸಿತು (ಯೋಹಾನ 7:38). ಕರ್ತನು ತಿಳಿಸಿದಂತೆ, ಅಂದಿನ ವರೆಗೂ ಪವಿತ್ರಾತ್ಮನು "ಅವರ ಜೊತೆಯಲ್ಲಿ" ಇದ್ದನು ಅಷ್ಟೇ. ಆದರೆ ಆ ದಿನದಿಂದ ಆತನು "ಅವರೊಳಗೆ" ಇದ್ದನು (ಯೋಹಾನ 14:17). ಇದು ಹಳೆ ಒಡಂಬಡಿಕೆಯ ಪವಿತ್ರಾತ್ಮನ ಅನುಭವ ಮತ್ತು ಹೊಸ ಒಡಂಬಡಿಕೆ ಪವಿತ್ರಾತ್ಮನ ಅನುಭವದ ನಡುವಿನ ವ್ಯತ್ಯಾಸ.

ಹಾಗಾಗಿ ಇಂದು ಒಬ್ಬ ಬೋಧಕನು, ದೇವರಿಂದ ಬಲಿಷ್ಠವಾಗಿ ಉಪಯೋಗಿಸಲ್ಪಟ್ಟ ನಂತರ ವ್ಯಭಿಚಾರದಲ್ಲಿ ಬಿದ್ದರೆ, ಆತನು ಹೊಸ-ಒಡಂಬಡಿಕೆಯ ಒಬ್ಬ ದೇವಸೇವಕನು ಆಗಿರಲೇ ಇಲ್ಲವೆಂದು ಅದು ಸಾಬೀತು ಪಡಿಸುತ್ತದೆ. ಆತನು ಹಳೆಯ-ಒಡಂಬಡಿಕೆಯ ಒಬ್ಬ ಬೋಧಕನಾಗಿದ್ದನು ಅಷ್ಟೇ. ಪವಿತ್ರಾತ್ಮನು ಆತನ ಹೃದಯದ ಒಳಗಿನಿಂದ ಅಲ್ಲ, ಆದರೆ ಆತನ ಮೇಲಿನಿಂದ ಹರಿಯುತ್ತಿದ್ದನು - ಏಕೆಂದರೆ ಆತನ ಹೃದಯವು ಇನ್ನೂ ಹೆಣ್ಣಿನ ಮೋಹವನ್ನು ಬಿಟ್ಟಿರಲಿಲ್ಲ. ಹಣವನ್ನು ಪ್ರೀತಿಸುವಂತ ಒಬ್ಬ ಬೋಧಕನು ಸಹ ತನ್ನ ಹೃದಯದಲ್ಲಿ ಹೊಲಸಾಗಿದ್ದಾನೆ - ಏಕೆಂದರೆ ಕ್ರಿಸ್ತನ ಆತ್ಮಕ್ಕೆ ಹಣದಾಸೆ ಇರುವದಿಲ್ಲ. ಹಣದಾಸೆ ಇರುವವನು ಆತ್ಮನಿಂದ ತುಂಬಿಸಲ್ಪಟ್ಟ ಒಬ್ಬ ಮನುಷ್ಯನಾಗಲು ಸಾಧ್ಯವಿಲ್ಲ. ಅಂತಹ ಬೋಧಕರನ್ನು ದೇವರು ಉಪಯೋಗಿಸಲೂ ಬಹುದು. ಆದಾಗ್ಯೂ ಅದು ಬಟ್ಟಲಿನ ಮೇಲೆ ನೀರು ಹರಿಯುವಂತೆ ಆಗಿರುತ್ತದೆ, ಏಕೆಂದರೆ ಅವರಲ್ಲಿ ಬದಲಾಗದ ಅಂತರಂಗವಿರುತ್ತದೆ. ಯೇಸುವು ಹೇಳಿದಂತೆ, ಇಂತಹ ಬೋಧಕರು ಕೊನೆಯ ದಿನದಲ್ಲಿ ಆತನ ಬಳಿಗೆ ಬಂದು, ತಮ್ಮ ಸೇವೆಯ ಸಾಧನೆಯನ್ನು ದೊಡ್ಡದಾಗಿ ವಿವರಿಸುತ್ತಾರೆ. ಆದರೂ ಸಹ ಆತನು ಅವರನ್ನು ನರಕಕ್ಕೆ ಕಳುಹಿಸುತ್ತಾನೆ (ಮತ್ತಾಯ 7:22,23).

ನಿಮ್ಮನ್ನು ಪವಿತ್ರಾತ್ಮನಿಂದ ತುಂಬಿಸುವಂತೆ ನೀವು ದೇವರನ್ನು ಕೇಳುವಾಗ, ನಿಮ್ಮಲ್ಲಿ ಯಾವ ನಿರೀಕ್ಷೆ ಇರುತ್ತದೆ? ದೇವರು ನಿಮ್ಮನ್ನು ಉಪಯೋಗಿಸುವದನ್ನು ಬಯಸುತ್ತೀರೋ ಅಥವಾ ಮೊದಲು ಅವನು ನಿಮ್ಮನ್ನು ಶುಚಿಗೊಳಿಸಲಿ ಎಂದು ಬಯಸುತ್ತೀರೋ? ಪ್ರವಾದನೆ ಅಥವಾ ರೋಗಿಗಳನ್ನು ಗುಣಪಡಿಸುವದು, ಇತ್ಯಾದಿಗಳಿಗಾಗಿ ಮಾತ್ರ ದೇವರು ನಿಮ್ಮನ್ನು ಉಪಯೋಗಿಸ ಬೇಕಾಗಿದ್ದರೆ, ನೀವು ನಿಜವಾಗಿ ಹಳೆಯ ಒಡಂಬಡಿಕೆಗೆ ಹಿಂತಿರುಗುತ್ತಾ ಇದ್ದೀರಿ.

ದಾವೀದನು ಬತ್ಸೇಬಳೊಂದಿಗೆ ಪಾಪ ಮಾಡಿದ ನಂತರ, ತನ್ನ ಪಾಪವನ್ನು ಆತನು ಒಪ್ಪಿಕೊಂಡು ಒಂದು ಕೀರ್ತನೆಯನ್ನು ಬರೆದನು. 51ನೆಯ ಕೀರ್ತನೆಯ ಒಂದು ಚಿಕ್ಕ ವಾಕ್ಯವು ತೋರಿಸುವಂತೆ, ಆತನಲ್ಲಿದ್ದ ಹಂಬಲ ಕ್ಷಮಾಪಣೆಗಾಗಿ ಅಷ್ಟೇ ಅಲ್ಲ, ಜೊತೆಗೆ ಬೇರೊಂದಕ್ಕಾಗಿ - ಆತನ ಯಾವುದೋ ಒಂದು ನೂನ್ಯತೆಯ ಕುರಿತಾಗಿ ಆಗಿತ್ತು. ದೇವರು ಆತನನ್ನು ಹಲವು ರೀತಿಯಲ್ಲಿ ಉಪಯೋಗಿಸಿದ್ದನು. ಆದರೆ ಆತನು "ದೇವರೇ, ನೀನು ಮೊದಲು ಅಂತರಂಗದಲ್ಲಿ ಸತ್ಯವನ್ನು ಅಪೇಕ್ಷಿಸುತ್ತೀ ಎಂದು ನನಗೆ ಗೊತ್ತು," ಎಂದು ಹೇಳುತ್ತಾನೆ (ಕೀರ್ತನೆ 51:6). ಇಲ್ಲಿ ’ಸತ್ಯ’ವೆಂದರೆ ಯಥಾರ್ಥತೆಯಾಗಿದೆ!

ದೇವರು ಬಯಸುವದು ಮುಚ್ಚುಮರೆಯಿಲ್ಲದ ಮತ್ತು ಯಥಾರ್ಥ ಅಂತರಂಗದ ಜೀವನ, ಎಂದು ದಾವೀದನು ತಿಳಿದಿದ್ದನು. ಆದರೆ ಆತನಲ್ಲಿ ಅದು ಇರಲಿಲ್ಲ. ಅಂತಹ ಜೀವನಕ್ಕಾಗಿ ಆತನು ಹಂಬಲಿಸುತ್ತಿದ್ದರೂ, ಅದನ್ನು ಹಳೆಯ ಒಡಂಬಡಿಕೆಯ ಅಡಿಯಲ್ಲಿ ಪಡೆಯುವಂತಿರಲಿಲ್ಲ. ಸ್ವತಃ ನಿಮಗೆ ಇಂತಹ ಜೀವನದ ಹಂಬಲವಿದೆಯೇ? ಒಬ್ಬ ಮನುಷ್ಯನ ಹೊರಜೀವನ ಪರಿಶುದ್ಧವಾಗಿದ್ದು, ಆತನ ಒಳಜೀವನ ಹಾಗೆ ಇರದಿದ್ದಲ್ಲಿ, ಆತನು ಒಬ್ಬ ಕಪಟಿಯಾಗಿದ್ದಾನೆ. ಅವನದು ಹಳೆಯ ಒಡಂಬಡಿಕೆಯ ಜೀವನವಾಗಿದೆ.

ಹೊಸ ಒಡಂಬಡಿಕೆಯಲ್ಲಿ ಪವಿತ್ರಾತ್ಮನನ್ನು ಹೊಂದುವವರ "ಹೃದಯದ ಒಳಗಿನಿಂದ" ಜೀವಕರ ನೀರಿನ ಹೊಳೆಗಳು ಹರಿಯುತ್ತವೆಂದು ಯೇಸುವು ಯೋಹಾನ 7:38ರಲ್ಲಿ ತಿಳಿಸಿದ್ದಾನೆ. ಇಲ್ಲಿ ಮುಖ್ಯವಾದ ಸಂಗತಿ ಹೊಳೆಗಳಲ್ಲ, ಆದರೆ ಅವು ಯಾವ ಸ್ಥಳದಿಂದ ಹರಿಯುತ್ತವೆ ಎನ್ನುವದು - ಹೃದಯದ ಒಳಗಿನಿಂದ. ದಾವೀದನು ಇವೇ ಪದಗಳನ್ನು 51ನೇ ಕೀರ್ತನೆಯಲ್ಲಿ ಉಪಯೋಗಿಸಿದನು. ಹೃದಯದ ಒಳಭಾಗ ಎಂದರೆ ಬಟ್ಟಲಿನ ಒಳಭಾಗವಾಗಿದೆ. ದಾವೀದನು ತನ್ನ ಹೊರಭಾಗದಲ್ಲಿ ಮಾತ್ರ ದೇವರ ಆಶೀರ್ವಾದದ ಹರಿಯುವಿಕೆಯನ್ನು ಅನುಭವಿಸಿದನು.

ನಿಮ್ಮ ಜೀವನದ ಅನುಭವವೂ ಇದೇ ಆಗಿದೆಯೇ? ನಿಮಗೆ ಆಗಿರುವ ಪವಿತ್ರಾತ್ಮನ ಅನುಭವ ಹಳೆಯ-ಒಡಂಬಡಿಕೆಯದೋ ಅಥವಾ ಹೊಸ-ಒಡಂಬಡಿಕೆಯದೋ? ನೀವು ನಿಜವಾಗಿ ಬಯಸುವದನ್ನೇ ಪಡೆಯುವಿರಿ! ನೀವು ಏನನ್ನು ಕೇಳುವಿರೋ, ಅದನ್ನೇ ಪಡೆಯುವಿರಿ. ಒಂದು ವೇಳೆ ನಿಮ್ಮ ಪ್ರಾರ್ಥನೆ "ದೇವರೇ, ನನ್ನನ್ನು ಉಪಯೋಗಿಸು" ಎಂದು ಮಾತ್ರವಾದರೆ, ಆತನು ಬಹುಶ: ನಿಮ್ಮನ್ನು ಉಪಯೋಗಿಸುವನು. ಆದರೆ ನೀವು ಬೋರಲು ಹಾಕಿದ ಒಂದು ಬಟ್ಟಲಿನಂತಿದ್ದು, ನಿಮ್ಮ ಹೃದಯವು ಯಾವಾಗಲೂ ಪಾಪಭರಿತವಾಗಿ ಮತ್ತು ಹೊಲಸಾಗಿ ಉಳಿಯುವದು. ಆತನು ನಿಮ್ಮ ಮೂಲಕ ಒಂದು ದೊಡ್ಡ ಸೇವೆಯನ್ನು ಪೂರ್ಣಗೊಳಿಸಬಹುದು - ಆದರೆ ನೀವು ಸಂಸೋನನಂತೆ ಜೀವಿಸುತ್ತೀರಿ, ಮತ್ತು ನಿಮ್ಮ ಹೃದಯದ ತುಂಬಾ ಪಾಪಪೂರಿತ ಕಾಮನೆಗಳು ಇರುತ್ತವೆ. ನೀವು ಅದನ್ನು ಬಯಸುವಿರಾ? ಹೊಸ ಒಡಂಬಡಿಕೆಯ ಪವಿತ್ರಾತ್ಮನ ಪರಿಪೂರ್ಣತೆ ಇದು ಅಲ್ಲ.

ಒಂದು ವೇಳೆ ನೀವು ಹಳೆಯ ಒಡಂಬಡಿಕೆಗೆ ಒಳಪಟ್ಟು ಜೀವಿಸಿದರೆ, ನಿಮ್ಮ ಹೃದಯದ ಒಳಭಾಗದಲ್ಲಿ ನಿಜಾಂಶ ಇರಲು ಸಾಧ್ಯವಿಲ್ಲ. ನನ್ನ ಸ್ವಂತ ಅನುಭವದಿಂದ ನಾನು ಅದನ್ನು ತಿಳಿದಿದ್ದೇನೆ. ನಾನು ಹೊಸದಾಗಿ ಹುಟ್ಟಿದ ನಂತರ, ನನಗೆ ದೇವರ ವಾಕ್ಯ ಬೋಧನೆಯ ಸಾಮರ್ಥ್ಯವನ್ನು ಕೊಟ್ಟು ನನ್ನನ್ನು ಉಪಯೋಗಿಸಿಕೊಳ್ಳಲು ನಾನು ದೇವರನ್ನು ಪ್ರಾರ್ಥಿಸಿದೆನು. ದೇವರು ನನ್ನನ್ನು ಉಪಯೋಗಿಸಿಕೊಂಡನು. ಆದರೆ ಸಮಯ ಹೋದಂತೆ, ನನ್ನ ಬಟ್ಟಲಿನ ಒಳಭಾಗ ಹೊಲಸಾಗಿದೆ ಎಂದು ನಾನು ಕಂಡುಕೊಂಡೆನು.

ನಾನು ದಾವೀದ ಮತ್ತು ಸಂಸೋನರಂತೆ ನನ್ನ ಇಡೀ ಜೀವನವನ್ನು ಕಳೆಯಬಹುದಾಗಿತ್ತು, ಏಕೆಂದರೆ ನನ್ನ ಮೇಲೆ ನೀರು ಹರಿದು ಇತರರು ಆಶೀರ್ವಾದವನ್ನು ಹೊಂದುತ್ತಿದ್ದರು. ಜಗತ್ತಿನ ಹಲವು ಭಾಗಗಳಲ್ಲಿ ಸಮ್ಮೇಳನಗಳಲ್ಲಿ ನನ್ನ ಬೋಧನೆಯ ಮೂಲಕ ಹಾಗೂ ನನ್ನ ರೇಡಿಯೋ ಕಾರ್ಯಕ್ರಮಗಳು ಮತ್ತು ಪುಸ್ತಕಗಳ ಮೂಲಕ, ಸಾವಿರಾರು ಜನರು ಆಶೀರ್ವದಿಸಲ್ಪಡುತ್ತಿದ್ದರು. ಆದರೆ ನನ್ನ ಸ್ವಂತ ಹೃದಯ ಹೊಲಸಾಗಿತ್ತು ಮತ್ತು ನನಗೆ ಪಾಪದ ಮೇಲೆ ಜಯ ದೊರೆತಿರಲಿಲ್ಲ. ನಾನು ಒಬ್ಬ ಕಪಟಿಯಾಗಿದ್ದೆನು. ಇದು ಹೀಗಿರುವಾಗ ನಾನು ದಾವೀದನ ಹಾಗೆ, "ಓ ಕರ್ತನೆ, ನೀನು ನನ್ನ ಅಂತರಂಗದಲ್ಲಿ ಸತ್ಯವನ್ನು ಅಪೇಕ್ಷಿಸುತ್ತಿ, ಆದರೆ ಅದು ನನ್ನಲಿಲ್ಲ" ಎಂದು ಕೂಗಿಕೊಂಡೆನು. ನನ್ನ ಸ್ಥಿತಿಯ ಬಗ್ಗೆ ನನಗೆ ಸ್ವಲ್ಪವೂ ತೃಪ್ತಿ ಇರಲಿಲ್ಲ. ನಾನು ಹೊಸ ಒಡಂಬಡಿಕೆಯ ಪವಿತ್ರಾತ್ಮನ ಅನುಭವಕ್ಕಾಗಿ ಹಾತೊರೆಯುತ್ತಿದ್ದೆ. ಅಂತಿಮವಾಗಿ ನಾನು ಬೋಧಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ, ಏಕೆಂದರೆ ನಾನು ಕಪಟಿಯಾಗಿದ್ದೆ. ಆ ಕ್ಷಣದಲ್ಲಿ ದೇವರು ನನ್ನಂತಹ ಒಬ್ಬ ಪಾಪಿಗಾಗಿ ತಾನು ಹೊಂದಿದ್ದ ಮಹಾ ಕರುಣೆ ಮತ್ತು ದಯೆಯೊಂದಿಗೆ ನನ್ನನ್ನು ಭೇಟಿಯಾದನು ಮತ್ತು ನನ್ನನ್ನು ಪವಿತ್ರಾತ್ಮನಲ್ಲಿ ಮತ್ತು ಬೆಂಕಿಯಲ್ಲಿ ಸ್ನಾನ ಮಾಡಿಸಿದನು.

ಬೆಂಕಿಯು ಏನು ಮಾಡುತ್ತದೆ? ಅದು ಶುದ್ಧಿಗೊಳಿಸುತ್ತದೆ. ಸ್ನಾನಿಕನಾದ ಯೋಹಾನನು ಇಸ್ರಾಯೇಲ್ಯರಿಗೆ ”ನಾನು ನಿಮ್ಮನ್ನು ನೀರಿನಿಂದ ಮಾತ್ರ ಸ್ನಾನ ಮಾಡಿಸಬಹುದು. ಆದರೆ ಯೇಸುವು ನಿಮ್ಮನ್ನು ಬೆಂಕಿಯಿಂದ ಸ್ನಾನ ಮಾಡಿಸುತ್ತಾನೆ” ಎಂಬುದಾಗಿ ಹೇಳಿದನು. ಬೆಂಕಿಯು ಇನ್ಯಾವುದೂ ಮಾಡಲಾರದ್ದನ್ನು ಮಾಡಿ, ನಿಮ್ಮ ಜೀವನವನ್ನು ಶುದ್ಧಿಗೊಳಿಸುತ್ತದೆ.

ಜನರು ನನ್ನ ಬಳಿಗೆ ಬಂದು, ನಾನು ನನ್ನ ಹಸ್ತವನ್ನು ಅವರ ತಲೆಯ ಮೇಲೆ ಇಟ್ಟು ಅವರಿಗೆ ಪವಿತ್ರಾತ್ಮನ ದೀಕ್ಷಾಸ್ನಾನ ಮಾಡಿಸುವಂತೆ ಕೇಳುವಾಗ, ನಾನು ಹೀಗೆ ಉತ್ತರಿಸುತ್ತೇನೆ, "ನನ್ನ ಖಾಲಿ ಕೈಯನ್ನು ನಾನು ನಿಮ್ಮ ತಲೆಯ ಮೇಲಿಟ್ಟರೆ, ಏನೂ ಆಗದು. ನೀವು ಮೊದಲಿನಂತೆಯೇ ಖಾಲಿಯಾಗಿ ಉಳಿಯುತ್ತೀರಿ. ನನಗಿಂತ ಬಲಿಷ್ಠನಾದ ಇನ್ನೊಬ್ಬನು ಇದ್ದಾನೆ. ಆತನೊಬ್ಬನೇ ನಿಮ್ಮನ್ನು ಪವಿತ್ರಾತ್ಮನಿಂದ ಮತ್ತು ಬೆಂಕಿಯಿಂದ ಸ್ನಾನ ಮಾಡಿಸುತ್ತಾನೆ. ಯೇಸುವಿನ ಬಳಿಗೆ ಹೋಗಿ."

ನನ್ನನ್ನು ಪವಿತ್ರಾತ್ಮನಿಂದಲೂ ಬೆಂಕಿಯಿಂದಲೂ ದೀಕ್ಷಾಸ್ನಾನ ಮಾಡಿಸಿದವನು ಯೇಸುವು. ನಾನು ಪರಿವರ್ತನೆ ಹೊಂದಿ 16 ವರ್ಷಗಳು ಕಳೆದ ಮೇಲೆ, ನನ್ನ ಬಟ್ಟಲನ್ನು ಮೇಲ್ಭಾಗಕ್ಕೆ ತಿರುಗಿಸಿ ಸರಿಗೊಳಿಸಿ, ನನ್ನ ಹೃದಯದ ಒಳಭಾಗವನ್ನು ತುಂಬಿಸಿ, ಅಲ್ಲಿಂದ ಹೊಳೆಗಳು ಹರಿಯುವಂತೆ ಮಾಡಿದವನು ಆತನೇ. ಆತನು ನಿಮ್ಮಲ್ಲಿಯೂ ಇದನ್ನು ಮಾಡಬಲ್ಲನು. ದೇವರಲ್ಲಿ ಪಕ್ಷಪಾತ ಇಲ್ಲ. ಹಾಗಾಗಿ ಇಂದೇ ಆತನ ಬಳಿಗೆ ಹೋಗಿರಿ.

ಆದರೆ ನಾವು ಈಗಾಗಲೇ ನೋಡಿರುವ ಹಾಗೆ, ಸ್ನಾನಿಕನಾದ ಯೋಹಾನನು ಜನರಿಗೆ ಮೊದಲು ಈ ಭೂಲೋಕರಾಜ್ಯದಿಂದ ತಿರುಗಿಕೊಳ್ಳಿರಿ ಎಂದು ಹೇಳಿದನು (ಮತ್ತಾಯ 3:2). ಪವಿತ್ರಾತ್ಮನ ದೀಕ್ಷಾಸ್ನಾನ ಮತ್ತು ಬೆಂಕಿಯ ದೀಕ್ಷಾಸ್ನಾನ ಮಾಡಿಸುವ ಈ ಯೇಸುವು ನಮ್ಮ ಬದುಕಿಗೆ ಪರಲೋಕದ ರಾಜ್ಯವನ್ನು ತರಲು ಬಯಸುತ್ತಾನೆ. ”ಮಾನಸಾಂತರ” ಎಂಬ ಪದವು, ಸೇನಾಪಡೆಯ ”ಹಿಂದಕ್ಕೆ ತಿರುಗು” ಎನ್ನುವ ಆಜ್ಞೆಯಂತಿದೆ. ಇದರ ಅರ್ಥ 180 ಡಿಗ್ರಿ ಹಿಂದಕ್ಕೆ ತಿರುಗಿ, ವಿರುದ್ಧ ದಿಕ್ಕಿನ ಕಡೆಗೆ ಮುಖ ತಿರುಗಿಸುವದು. ನಮಗೆ ಯಥಾರ್ಥವಾದ ಪವಿತ್ರಾತ್ಮನ ತುಂಬುವಿಕೆ ಬೇಕಾದರೆ, ಲೌಕಿಕ ಆಶೀರ್ವಾದಗಳನ್ನು ಹುಡುಕುವುದರ ಬದಲಾಗಿ ಮನಃಪೂರ್ವಕವಾಗಿ ಪರಲೋಕದ ಆಶಿರ್ವಾದಗಳನ್ನು ಆಶಿಸಬೇಕು.

ಇಂದು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಬಯಸುತ್ತಿರುವ ಜನರಲ್ಲಿ ಅನೇಕರ ಸಮಸ್ಯೆ ಏನೆಂದರೆ, ಅವರು ಲೌಕಿಕ ಆಶೀರ್ವಾದಗಳ ಆಸೆಯನ್ನು ಇನ್ನೂ ಬಿಟ್ಟಿಲ್ಲ. ಸೈತಾನನು ಇಂತಹವರಿಗೆ, ಆತ್ಮನ ದೀಕ್ಷಾಸ್ನಾನದ ಹಾಗೆಯೇ ಇರುವ ನಕಲೀ ಅನುಭವವನ್ನು ಕೊಡುವನು. ಹಲವಾರು ಧರ್ಮಗಳ ಜನ ಅನ್ಯಭಾಷೆಯಲ್ಲಿ ಮಾತನಾಡುತ್ತಾರೆ! ಇಂತಹ ಸಂದರ್ಭದಲ್ಲಿ ನಾವು ನಿಜ ಮತ್ತು ನಕಲೀ ಅನುಭವಗಳನ್ನು ಹೇಗೆ ವಿಂಗಡಿಸಬಹುದು? ನಾವು ಲೌಕಿಕ ಸಂಗತಿಗಳಿಂದ ತಿರುಗಿಕೊಂಡು ಪರಲೋಕದವುಗಳನ್ನು ಹುಡುಕಿದರೆ ಮಾತ್ರ ಅದು ಸಾಧ್ಯ.

ಪವಿತ್ರಾತ್ಮನ ಪ್ರತಿಯೊಂದು ವರವನ್ನೂ ನಕಲು ಮಾಡಲಾಗಿದೆ. ಆತ್ಮನ ನಿಜವಾದ ವರಗಳು ಎಷ್ಟು ಅಮೂಲ್ಯವಾಗಿವೆ ಎನ್ನುವದನ್ನು ಇದು ಸಾಬೀತು ಪಡಿಸುತ್ತದೆ. ಉಪಯೋಗಕ್ಕೆ ಬಾರದ ಕಚ್ಚಾ ಸಾಮಾಗ್ರಿಗಳಾದ ಕಂದು ಬಣ್ಣದ ಕಾಗದ ಮತ್ತು ವಾರ್ತಾ ಪತ್ರಿಕೆಗಳನ್ನು ಯಾರಾದರೂ ನಕಲು ಮಾಡುತ್ತಾರೆಯೇ?! ಜನರು ವಜ್ರ, ಚಿನ್ನ ಮತ್ತು ಕರೆನ್ಸಿ ನೋಟುಗಳು ಇಂತಹ ಹೆಚ್ಚು ಬೆಲೆಬಾಳುವವುಗಳನ್ನು ಮಾತ್ರ ನಕಲು ಮಾಡುತ್ತಾರೆ. ಆದುದರಿಂದ ನಿಜವಾದ ಅನ್ಯಭಾಷೆಗಳು ಮತ್ತು ಪ್ರವಾದನೆ ಮತ್ತು ಗುಣಪಡಿಸುವಿಕೆ ಇವು ಬಹು ಅಮೂಲ್ಯವಾಗಿರಬೇಕು! ಹಾಗಾಗಿ ಸೈತಾನನು ಇವನ್ನು ನಕಲು ಮಾಡಿದ್ದಾನೆ.

ಒಂದು ವೇಳೆ ವಜ್ರಗಳ ಬಗ್ಗೆ ತಿಳಿವಳಿಕೆಯೇ ಇಲ್ಲದ ನೀವು ವಜ್ರಗಳನ್ನು ಖರೀದಿ ಮಾಡಲು ಬಯಸಿದರೆ, ನೀವು ಸುಲಭವಾಗಿ ವಂಚಿಸಲ್ಪಡಬಹುದು ಎಂದು ನಿಮಗೆ ತಿಳಿದಿದೆ. ಹಾಗಾಗಿ ನೀವು ವಜ್ರದ ವಿಷಯದಲ್ಲಿ ಪರಿಣತರಾದ ಒಬ್ಬರನ್ನು ನಿಮ್ಮೊಂದಿಗೆ ಕರೆದೊಯ್ಯುತ್ತೀರಿ. ಇಂತಹ ಲೌಕಿಕ ವಿಷಯಗಳಲ್ಲಿ ನೀವು ಹೆಚ್ಚಿನ ಎಚ್ಚರಿಕೆ ವಹಿಸುತ್ತೀರಿ. ನೀವು ಪರಲೋಕದ ವರಗಳ ವಿಷಯದಲ್ಲಿ - ನಿಮ್ಮನ್ನು ಸೈತಾನನು ಕೆಳದರ್ಜೆಯ ನಕಲೀ ವಸ್ತುಗಳ ಮೂಲಕ ವಂಚಿಸದ ಹಾಗೆ - ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕು, ಅಲ್ಲವೇ? ಪವಿತ್ರಾತ್ಮನ ಮತ್ತು ಬೆಂಕಿಯ ನಿಜವಾದ ದೀಕ್ಷಾಸ್ನಾನವನ್ನು ನೀವು ಹೊಂದಿದ್ದೀರಾ? ನಿಮ್ಮಲ್ಲಿ ಇರುವ ಎಲ್ಲಾ ವರಗಳು - ಅವೆಲ್ಲವೂ ಪವಿತ್ರಾತ್ಮನ ನಿಜವಾದ ವರಗಳೇ? ನೀವು ನಿಮ್ಮನ್ನೇ ಕೇಳಬೇಕಾದ ಬಹಳ ಮುಖ್ಯವಾದ ಪ್ರಶ್ನೆಗಳು ಇವು.

ನಾನು ಆರಂಭದಲ್ಲಿ ಆತ್ಮನ ದೀಕ್ಷಾಸ್ನಾನಕ್ಕಾಗಿ ಹುಡುಕಿದ ಅನುಭವ ನನಗೆ ನೆನಪಿದೆ. ಈ ಬೋಧನೆಯನ್ನು ಮಾಡುತ್ತಿದ್ದ ಒಂದು ಸಭೆಗೆ ನಾನು ಹೋದೆ - ಅಲ್ಲಿ ಅನೇಕರು ಗಟ್ಟಿಯಾಗಿ ಶಬ್ದ ಮಾಡುತ್ತಿದ್ದುದನ್ನು ನಾನು ಕೇಳಿದೆ. ಅಲ್ಲಿ ವಿಪರೀತ ಗೊಂದಲವಿತ್ತು. ನಾನು ನೌಕಾಸೇನೆಯ ಅಧಿಕಾರಿ ಎಂದು ಅಲ್ಲಿನ ಪಾಸ್ಟರ್‌ಗಳಿಗೆ ಗೊತ್ತಿತ್ತು, ಹಾಗಾಗಿ ಅವರು ನನ್ನಿಂದ ಹಣ ಪಡೆಯಲು ಬಹಳ ಆಸಕ್ತರಾಗಿದ್ದರು. ನಾನು ನಿರಾಶನಾಗಿ ನನ್ನ ಕೊಠಡಿಗೆ ಬಂದು ಈ ರೀತಿಯಾಗಿ ಪ್ರಾರ್ಥಿಸಿದೆ,”ಕರ್ತನೇ, ಆ ಜನರ ಬಳಿ ಇರುವದು ನನಗೆ ಬೇಕಿಲ್ಲ. ಜೋರಾದ ಧ್ವನಿಯಲ್ಲಿ ಕೂಗಾಡಲು ಕಲಿಸುವ, ಆದರೆ ಹಣದಾಸೆಗೆ ಗುಲಾಮನನ್ನಾಗಿ ಮಾಡುವ ಆತ್ಮ ನನಗೆ ಬೇಕಿಲ್ಲ. ನನಗೆ ಬೇಕಾದದ್ದು ಪೇತ್ರ, ಯಾಕೋಬ ಮತ್ತು ಯೋಹಾನರಿಗೆ ಪಂಚಾಶತ್ತಮ ದಿನದಂದು ಸಿಕ್ಕಿದಂಥದ್ದು - ಅದು ಅವರನ್ನು ಈ ಲೋಕದಿಂದ ಬಿಡುಗಡೆಗೊಳಿಸಿತು ಮತ್ತು ನಿನಗಾಗಿ ಉಜ್ವಲ ಸಾಕ್ಷಿಗಳಾಗುವಂತೆ ಅವರನ್ನು ಬಲಗೊಳಿಸಿತು. ನನಗೆ ಕೆಳದರ್ಜೆಯ ನಕಲು ಅನುಭವ ಬೇಡ. ನಿಜವಾದ ಅನುಭವಕ್ಕಾಗಿ ನಾನು 10 ವರ್ಷ ಕಾಯಬೇಕಾದರೂ ಸರಿ, ನಾನು ಕಾಯುತ್ತೇನೆ.”

ಪಿ.ಹೆಚ್.ಡಿ ಪದವಿಯನ್ನು ಪಡೆಯುವ ಮಹತ್ವಾಕಾಂಕ್ಷೆ ಹೊಂದಿರುವ ಶಿಶುವಿಹಾರದ ಒಂದು ಮಗುವು ಅದಕ್ಕಾಗಿ 20 ವರ್ಷ ಕಾಯಲು ಹೇಗೆ ತಯಾರಾಗಿರುತ್ತದೆ, ಎಂದು ಯೋಚಿಸಿ. ಪಿ.ಹೆಚ್.ಡಿ ಪದವಿಗಿಂತ ಪವಿತ್ರಾತ್ಮನ ಶಕ್ತಿಯನ್ನು ಪಡೆಯುವದು ಹೆಚ್ಚಿನ ಮಹತ್ವದ್ದಲ್ಲವೇ? ಪವಿತ್ರಾತ್ಮನ ಶಕ್ತಿಯು ನಿಮಗೆ ಪಿ.ಹೆಚ್.ಡಿ ಪದವಿಯು ದೊರಕಿಸುವಷ್ಟು ಹಣವನ್ನು ಕೊಡಲಾರದು, ಆದರೆ ನಿಮ್ಮನ್ನು ದೇವರಿಗೆ ಬಹಳ ಉಪಯೋಗಕಾರಿಯನ್ನಾಗಿ ಮಾಡುತ್ತದೆ.

ಮರುಜನ್ಮ ಪಡೆದ ಕ್ರೈಸ್ತರಾದ ನಿಮ್ಮೆಲ್ಲರಲ್ಲಿ ನಾನು ನೇರವಾದ ಒಂದು ಪ್ರಶ್ನೆಯನ್ನು ಕೇಳ ಬಯಸುತ್ತೇನೆ: ”ನಿಮಗೆ ಆಸಕ್ತಿ ಇರುವದು ಪರಲೋಕಕ್ಕೆ ಹೋಗುವದರಲ್ಲಿಯೇ ಅಥವಾ ಪರಲೋಕಕ್ಕೆ ಹೋಗುವ ಮೊದಲು ಯೇಸು ಕ್ರಿಸ್ತನನ್ನು ಹಿಂಬಾಲಿಸುವದರಲ್ಲಿಯೇ?”

ಕರ್ತನು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದಾಗ ನಾನು ಕೈಗೊಂಡ ನಿರ್ಧಾರ ಏನೆಂದರೆ, ನಾನು ಪರಲೋಕಕ್ಕೆ ಹೋಗಲು ಇಚ್ಛಿಸುವ ಜನರನ್ನು ಹುಡುಕುತ್ತಾ ಭಾರತದ ಆದ್ಯಂತ ಸುತ್ತಾಡುವದಿಲ್ಲ, ಆದರೆ ಈ ಲೋಕದಲ್ಲಿ ಯೇಸುವನ್ನು ಹಿಂಬಾಲಿಸಲು ಬಯಸುವ ಜನರನ್ನು ಹುಡುಕುವೆನು. ಭಾರತದಲ್ಲಿ ಪರಲೋಕಕ್ಕೆ ಹೋಗಲು ಇಚ್ಛಿಸುವ ನೂರು ಕೋಟಿಗೂ ಹೆಚ್ಚಿನ ಜನರು ಇದ್ದಾರೆ. ಆದರೆ ನಾನು ನರಕಕ್ಕೆ ಹೋಗಲು ಇಚ್ಛಿಸುವ ಒಬ್ಬನನ್ನೂ ಭೇಟಿಯಾಗಿಲ್ಲ!! ನೀನು ಪರಲೋಕಕ್ಕೆ ಹೋಗಲು ಬಯಸಿದೊಡನೆ ಆತ್ಮಿಕ ಮನುಷ್ಯನಾಗುವದಿಲ್ಲ. ಪ್ರತಿಯೊಬ್ಬ ಮನುಷ್ಯನೂ ಪರಲೋಕಕ್ಕೆ ಹೋಗಲು ಇಷ್ಟಪಡುತ್ತಾನೆ.

ಈ ಲೋಕದಲ್ಲಿ ಯೇಸು ಕ್ರಿಸ್ತನನ್ನು ಹಿಂಬಾಲಿಸಿ, ಪರಲೋಕಕ್ಕೆ ಹೋಗುವ ಮೊದಲು ಆತನಿಗೋಸ್ಕರ ಸಂಪೂರ್ಣವಾಗಿ ಜೀವಿಸಲು ಇಚ್ಛಿಸುವ ಜನರನ್ನು ನಾನು ಹುಡುಕುತ್ತಿದ್ದೇನೆ. ಹೀಗಿನ ಜನ ಬಹಳ ಕಡಿಮೆ ಇರುವದಾಗಿ ನಾನು ತಿಳಿದಿದ್ದೇನೆ - ಆದರೆ ನಾನು ಕಳೆದ 37 ವರ್ಷಗಳಿಂದ ಲೋಕದ ಹಲವು ಭಾಗಗಳಲ್ಲಿ ಇಂತಹ ಜನರಿಗಾಗಿ ಹುಡುಕುತ್ತಿದ್ದೇನೆ. ಈ ಲೋಕದ ರಾಜ್ಯಾಧಿಕಾರವನ್ನು ಬಯಸುವದರ ಜೊತೆಗೆ ಪವಿತ್ರಾತ್ಮನಿಂದಲೂ ಸಹ ತುಂಬಿಸಲ್ಪಡಬೇಕು ಎಂದು ಬಯಸುತ್ತಿರುವ ಕ್ರೈಸ್ತರಿಗಾಗಿ ನಾನು ಎದುರು ನೋಡುತ್ತಿಲ್ಲ. ಇಲ್ಲ. ಈ ಲೋಕದ ಸಂಗತಿಗಳಿಂದ 180 ಡಿಗ್ರಿ (ಅಂದರೆ ಸಂಪೂರ್ಣವಾಗಿ) ತಿರುಗಿಕೊಂಡು, ಸ್ನಾನಿಕನಾದ ಯೋಹಾನನ ಕರೆಗೆ ವಿಧೇಯರಾಗಲು ಇಚ್ಛಿಸಿ, ಪರಲೋಕದ ಸಂಗತಿಗಳನ್ನು ಹುಡುಕುತ್ತಿರುವ ಜನರಿಗಾಗಿ ನಾನು ಎದುರು ನೋಡುತ್ತಿದ್ದೇನೆ. ಹಣಕ್ಕಿಂತ ಹೆಚ್ಚಾಗಿ ಪರಿಶುದ್ಧತೆಯನ್ನು ಅಪೇಕ್ಷಿಸುವ ಕ್ರೈಸ್ತರಿಗಾಗಿ ನಾನು ಎದುರು ನೋಡುತ್ತಿದ್ದೇನೆ.

ಈ ದಿನ ನಿಮ್ಮಲ್ಲಿ ಎಷ್ಟು ಜನ ದೇವರ ಮುಂದೆ ನಿಂತು, ”ಕರ್ತನೇ, ಈ ಲೋಕದಲ್ಲಿ ಜೀವಿಸಲು ಹಣದ ಅಗತ್ಯತೆ ಇದೆ ಎಂಬುದನ್ನು ನಾನು ಗ್ರಹಿಸಿಕೊಂಡಿದ್ದೇನೆ. ಆದರೆ ನಿನ್ನ ಪ್ರಸನ್ನತೆಗೆ ಬರಲು ನನಗೆ ಪರಿಶುದ್ಧತೆ ಅವಶ್ಯವಾಗಿದೆ. ಆದ್ದರಿಂದ ಕರ್ತನೇ, ಇಂದು ನಾನು ಹಣಕ್ಕಿಂತ ಪರಿಶುದ್ಧತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಈ ಲೋಕದ ಎಲ್ಲಾ ಗೌರವ ಮತ್ತು ಐಶ್ವರ್ಯಕ್ಕಿಂತ ನನ್ನ ಜೀವನದಲ್ಲಿ ದೇವರ ಅಗ್ನಿಯಲ್ಲಿ ಹೆಚ್ಚು ಆಸಕ್ತನಾಗಿದ್ದೇನೆ,” ಎಂದು ಹೇಳಬಲ್ಲಿರಿ?

ಒಂದು ವೇಳೆ ನೀವು ಯಥಾರ್ಥವಾಗಿ ಹೀಗೆ ಪ್ರಾರ್ಥಿಸಿದರೆ, ನೀವು ಅತೀ ಶೀಘ್ರದಲ್ಲೇ ಪವಿತ್ರಾತ್ಮನ ದೀಕ್ಷಾಸ್ನಾನ ಪಡೆಯುವಿರಿ, ಎಂಬ ಭರವಸೆಯನ್ನು ನಾನು ಕೊಡುತ್ತೇನೆ.

ಒಂದು ಸಲ ಒಬ್ಬ ವ್ಯಕ್ತಿಯು ನನ್ನೊಂದಿಗೆ ಮಾತನಾಡುತ್ತಾ, ತಾನು ಪವಿತ್ರಾತ್ಮನ ದೀಕ್ಷಾಸ್ನಾನಕ್ಕಾಗಿ 40 ವರ್ಷಗಳಿಂದ ಪ್ರಾರ್ಥಿಸುತ್ತಾ ಇರುವುದಾಗಿಯೂ, ಆದರೆ ಅದನ್ನು ಇನ್ನೂ ಪಡೆದಿಲ್ಲವೆಂದೂ ಹೇಳಿದ್ದು ನನಗೆ ನೆನಪಿದೆ. ಆಗ ನಾನು ಹೀಗೆ ಉತ್ತರಿಸಿದೆನು: ನಿನ್ನ ಮನಸ್ಸು ಈ ಲೋಕದ ಸಂಗತಿಗಳಲ್ಲಿ ಮಗ್ನವಾಗಿದ್ದರೆ, ನೀನು ಆತ್ಮನ ನಿಜವಾದ ದೀಕ್ಷಾಸ್ನಾನವನ್ನು ಪಡೆಯಲು ಇನ್ನೂ 100 ವರ್ಷಗಳೂ ಸಾಲದು. ಒಂದು ವೇಳೆ ನಿನಗೆ ಯಾವುದೋ ಒಂದು ಸಭಾಕೂಟದಲ್ಲಿ ಒಂದು ವಿಧವಾದ ಕೆಳದರ್ಜೆಯ ನಕಲೀ ಅನುಭವ ಸಿಗಬಹುದು, ಮತ್ತು ನೀನು ತೃಪ್ತನಾಗಿ ಅಲ್ಲಿಂದ ಹೋಗಬಹುದು, ಆದರೆ ನಿನಗೆ ನಿಜವಾದ ದೀಕ್ಷಾಸ್ನಾನ ಸಿಗುವದಿಲ್ಲ. ನಿಜವಾದ ದೀಕ್ಷಾಸ್ನಾನಕ್ಕಾಗಿ ನೀನು ಬೆಲೆಯನ್ನು ಪಾವತಿಸಬೇಕು.

ದೇವರು ತನ್ನ ವಾಕ್ಯದಲ್ಲಿ ನಮಗೆ ಹಲವು ಅದ್ಭುತವಾದ ವಾಗ್ದಾನಗಳನ್ನು ಕೊಟ್ಟಿದ್ದಾನೆ. ನಾನು ಆಗಲೇ ಹೇಳಿದಂತೆ, ಅವು ”ಅಮೂಲ್ಯವಾಗಿಯೂ ಮತ್ತು ಉತ್ಕೃಷ್ಟವಾಗಿಯೂ ಇರುವ ವಾಗ್ದಾನಗಳು” ಎಂದು ಕರೆಯಲ್ಪಟ್ಟಿವೆ (1 ಪೇತ್ರ 1:4). ಆದರೆ ಈ ಎಲ್ಲಾ ವಾಗ್ದಾನಗಳಿಗೆ ಸೇರಿಸಲಾದ ಷರತ್ತುಗಳೂ ಸಹ ಇವೆ. ನೀವು ಯಾವುದೋ ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ, ಅದರ ಷರತ್ತುಗಳನ್ನು ಮೊದಲು ಪೂರೈಸಬೇಕು. ಕೆಲವು ವೇಳೆ ನೀವು ಕಾಲೇಜು ಪದವೀಧರನೋ ಅಥವಾ ಕೆಲವು ವರ್ಷಗಳ ಅನುಭವವನ್ನು ಪಡೆದಿರುವವನೋ ಆಗಿರುವದು ಅವಶ್ಯವಿರುತ್ತದೆ. ಒಂದು ವೇಳೆ ನೀವು ಆ ಷರತ್ತುಗಳನ್ನು ಪೂರೈಸದೇ ಆ ಕೆಲಸದ ಸಂದರ್ಶನಕ್ಕೆ ಹೋದರೆ, ಅಲ್ಲಿನ ಸಂದರ್ಶಕರು, ”ಇಲ್ಲಿಗೆ ಬಂದು ನೀನು ನಿನ್ನ ಸಮಯವನ್ನು ಏಕೆ ವ್ಯರ್ಥ ಮಾಡಿದೆ? ಇದಕ್ಕೆ ಅಗತ್ಯವಾದ ಅರ್ಹತೆಯ ಬಗ್ಗೆ ನೀನು ಓದಲಿಲ್ಲವೇ? ನೀನು ಮನೆಗೆ ಹೋಗಬೇಕಾಗುತ್ತದೆ” ಎಂದು ಹೇಳುವರು.

ಈಗ ನೀನು ಯೇಸುವಿನ ಬಳಿಗೆ ಬಂದು, ”ಕರ್ತನೇ, ನನ್ನನ್ನು ಪವಿತ್ರಾತ್ಮನಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಮಾಡಿಸು - ನೀನು ಅದನ್ನು ಮಾಡುವದಾಗಿ ಸ್ನಾನಿಕನಾದ ಯೋಹಾನನು ಹೇಳಿದ್ದಾನೆ,” ಎಂದು ಹೇಳಿದರೆ ಯೇಸುವು, ”ನೀನು ಸ್ನಾನಿಕನಾದ ಯೋಹಾನನು ಹಾಕಿದ ಷರತ್ತುಗಳನ್ನು ಓದಿದ್ದೀಯಾ? ಈ ಲೋಕದ ಸಂಗತಿಗಳಿಗಾಗಿ ತವಕಿಸುವದನ್ನು ಸಂಪೂರ್ಣವಾಗಿ ಬಿಟ್ಟಿರುವೆಯಾ? ಈಗ ನೀನು ಪರಲೋಕದ ಸಂಗತಿಗಳನ್ನು ಹುಡುಕುತ್ತಿದ್ದೀಯಾ?” ಎಂದು ಕೇಳುತ್ತಾನೆ. ಈ ಷರತ್ತುಗಳನ್ನು ಪೂರೈಸದಿದ್ದಲ್ಲಿ, ಕರ್ತನು ನಿನ್ನನ್ನು ಮನೆಗೆ ಹಿಂದಕ್ಕೆ ಕಳುಹಿಸುವನು ಮತ್ತು ಆ ಷರತ್ತುಗಳನ್ನು ಪೂರೈಸಿದ ನಂತರ ತಿರುಗಿ ಬರುವಂತೆ ತಿಳಿಸುವನು. ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇವೆಂದು ಹೇಳಿಕೊಳ್ಳುವ ಬಹುತೇಕ ಕ್ರೈಸ್ತರು ಪಡೆದಿರುವದು ಒಂದು ನಕಲೀ ಅನುಭವವೆಂದು ನನಗೆ ನಾನು ನೋಡಿರುವ ವಿಷಯಗಳಿಂದ ಮನದಟ್ಟಾಗಿದೆ - ಏಕೆಂದರೆ ಅವರ ಜೀವನದಲ್ಲಿ ಪವಿತ್ರತೆಯಾಗಲೀ, ಶಕ್ತಿಯಾಗಲೀ ಇರುವದು ನನಗೆ ಕಾಣಿಸುತ್ತಿಲ್ಲ. ಈಗ ನೀನು ಯೇಸುವಿನ ಬಳಿಗೆ ಬಂದು, ”ಕರ್ತನೇ, ನನ್ನನ್ನು ಪವಿತ್ರಾತ್ಮನಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಮಾಡಿಸು - ನೀನು ಅದನ್ನು ಮಾಡುವದಾಗಿ ಸ್ನಾನಿಕನಾದ ಯೋಹಾನನು ಹೇಳಿದ್ದಾನೆ,” ಎಂದು ಹೇಳಿದರೆ ಯೇಸುವು, ”ನೀನು ಸ್ನಾನಿಕನಾದ ಯೋಹಾನನು ಹಾಕಿದ ಷರತ್ತುಗಳನ್ನು ಓದಿದ್ದೀಯಾ? ಈ ಲೋಕದ ಸಂಗತಿಗಳಿಗಾಗಿ ತವಕಿಸುವದನ್ನು ಸಂಪೂರ್ಣವಾಗಿ ಬಿಟ್ಟಿರುವೆಯಾ? ಈಗ ನೀನು ಪರಲೋಕದ ಸಂಗತಿಗಳನ್ನು ಹುಡುಕುತ್ತಿದ್ದೀಯಾ?” ಎಂದು ಕೇಳುತ್ತಾನೆ. ಈ ಷರತ್ತುಗಳನ್ನು ಪೂರೈಸದಿದ್ದಲ್ಲಿ, ಕರ್ತನು ನಿನ್ನನ್ನು ಮನೆಗೆ ಹಿಂದಕ್ಕೆ ಕಳುಹಿಸುವನು ಮತ್ತು ಆ ಷರತ್ತುಗಳನ್ನು ಪೂರೈಸಿದ ನಂತರ ತಿರುಗಿ ಬರುವಂತೆ ತಿಳಿಸುವನು. ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇವೆಂದು ಹೇಳಿಕೊಳ್ಳುವ ಬಹುತೇಕ ಕ್ರೈಸ್ತರು ಪಡೆದಿರುವದು ಒಂದು ನಕಲೀ ಅನುಭವವೆಂದು ನನಗೆ ನಾನು ನೋಡಿರುವ ವಿಷಯಗಳಿಂದ ಮನದಟ್ಟಾಗಿದೆ - ಏಕೆಂದರೆ ಅವರ ಜೀವನದಲ್ಲಿ ಪವಿತ್ರತೆಯಾಗಲೀ, ಶಕ್ತಿಯಾಗಲೀ ಇರುವದು ನನಗೆ ಕಾಣಿಸುತ್ತಿಲ್ಲ.

ಯೇಸುವಿಗೆ 11 ಮಂದಿ ಶಿಷ್ಯರು ಮಾತ್ರ ಇದ್ದರು. ಅದು ಒಂದು ಅತ್ಯಂತ ಚಿಕ್ಕ ಸಭೆಯಾಗಿತ್ತು. ಆದರೆ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ನಂತರ ಅವರು ಕ್ರಿಸ್ತನ ತೀವ್ರಗಾಮಿ ಶಿಷ್ಯರಾದರು ಮತ್ತು ಸಾವಿರಾರು ಇತರ ಶಿಷ್ಯರನ್ನು ಹುಟ್ಟಿಸಿದರು. ನಾವು ಇಂದಿನ ಬೃಹತ್ ಕ್ರೈಸ್ತಸಭೆಗಳಲ್ಲಿ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿರುವದಾಗಿ ಹೇಳಿಕೊಳ್ಳುವ ಸಾವಿರಾರು ಜನರನ್ನು ಕಾಣಬಹುದು. ಆದರೆ ಅವರು ಪಾಪದ ಗುಲಾಮರೂ, ಹಣವನ್ನು ಪ್ರೀತಿಸುವವರೂ ಮತ್ತು ಬಲಹೀನರೂ ಆಗಿರುತ್ತಾರೆ. ಇದಕ್ಕೆ ಕಾರಣ ಅವರು ಪಡೆದಿರುವ ಹುರುಳಿಲ್ಲದ ಅನುಭವ. ಅದು ಯಥಾರ್ಥವಾದ ಅನುಭವ ಅಲ್ಲ.

ನಾನು ಹಿಂದೊಮ್ಮೆ ಕೇಳಿದ್ದ ಒಂದು ಕಥೆಯಲ್ಲಿ, ಒಂದು ಹೆಣ್ಣು ಮೊಲವು ಒಂದು ಸಿಂಹಿಣಿಯನ್ನು ಹೀಗೆ ಪ್ರಶ್ನಿಸಿತು, ”ಕಳೆದ ವರ್ಷ ನಾನು 24 ಮರಿಗಳನ್ನು ಹಾಕಿದೆ. ನೀನು ಕಳೆದ ವರ್ಷ ಎಷ್ಟು ಮರಿ ಹಾಕಿದ್ದೀ?” ಅದಕ್ಕೆ ಸಿಂಹಿಣಿಯು, ”ನಾನು ಕೇವಲು ಒಂದು ಮರಿ ಹಾಕಿದೆ, ಆದರೆ ಅದು ಸಿಂಹದ ಮರಿ ಆಗಿತ್ತು!” ಎಂದು ಹೇಳಿತು. ಕ್ರೈಸ್ತಸಭೆಯ ಜನ ತಮ್ಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಬಗ್ಗೆ ಮತ್ತು ಅನೇಕರು ”ಪವಿತ್ರಾತ್ಮನ ದೀಕ್ಷಾಸ್ನಾನ ಹೊಂದಿರುವ” ಬಗ್ಗೆ - ಅವರು ಹೇಳಿಕೊಳ್ಳುವ ಪ್ರಕಾರ - ಹೇಳುವದನ್ನು ಕೇಳುವಾಗ, ನನಗೆ ಈ ಕಥೆ ಜ್ಞಾಪಕಕ್ಕೆ ಬರುತ್ತದೆ. ಇಂದಿನ ಹೊರತೋರಿಕೆಯ ”ಅನ್ಯಭಾಷೆ ಮಾತನಾಡುವ” ಸಾವಿರಾರು ಕ್ರೈಸ್ತರಿಗಿಂತ ಆದಿಸಭೆಯ ಅಪೋಸ್ತಲರ ಹಾಗಿನ ಒಬ್ಬ ಶಿಷ್ಯನು ದೇವರಿಗೆ ಎಷ್ಟೋ ಹೆಚ್ಚು ಉಪಯೋಗಿ ಆಗಿರುತ್ತಾನೆ,

ನಾನು ಅನ್ಯಭಾಷೆಯ ವರದ ಮೌಲ್ಯವನ್ನು ತಗ್ಗಿಸುತ್ತಿಲ್ಲ. ಆದರೆ ನೀವು ನಿಜವಾದ ಅನ್ಯಭಾಷೆಯ ವರವನ್ನು ಪಡೆದಿರುವದನ್ನು ಹೇಗೆ ತಿಳಕೊಳ್ಳಬಹುದು?

ನಾನು ಈಗ 37 ವರ್ಷಗಳಿಂದ ಅನ್ಯಭಾಷೆಯಲ್ಲಿ ಮಾತನಾಡುತ್ತಿದ್ದೇನೆ ಮತ್ತು ಇದು ನನಗೆ ಏನು ಮಾಡಿತು ಎಂಬುದನ್ನು ನಾನು ನಿಮಗೆ ಹೇಳಬಲ್ಲೆ. ನಾನು ಕ್ರೈಸ್ತನಾಗಿ ಮರುಜನ್ಮ ಪಡೆದ 16 ವರ್ಷಗಳ ನಂತರ ನಾನು ಅನ್ಯಭಾಷೆಯಲ್ಲಿ ಮಾತನಾಡಿದೆ. ಅಷ್ಟು ವರ್ಷಗಳ ವರೆಗೆ ನಾನು ಪದೇ ಪದೇ ನಿರುತ್ಸಾಹಗೊಳ್ಳುತ್ತಿದ್ದೆ, ಖಿನ್ನನಾಗುತ್ತಿದ್ದೆ, ಕೋಪಗೊಳ್ಳುತ್ತಿದ್ದೆ ಮತ್ತು ಆಗಾಗ ಮನೋದ್ವೇಗಕ್ಕೆ ಒಳಗಾಗುತ್ತಿದ್ದೆ. ನಾನು ಕೆಲವೊಂಮ್ಮೆ ಸಂತೋಷದ ಶಿಖರವನ್ನು ತಲಪುತ್ತಿದ್ದೆ, ಆದರೆ ಬೇಸರದ ಕಣಿವೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆ. ನನ್ನ ಸ್ಥಿತಿ ”ಹೊಸದಾಗಿ ಹುಟ್ಟಿದ” ಬಹಳಷ್ಟು ಕ್ರೈಸ್ತರಂತೆಯೇ ಇತ್ತು!! ನಾನು ಈ ಸಂದರ್ಭದಲ್ಲಿ 1 ಕೊರಿಂಥ. 14:4 ರಲ್ಲಿ, ”ಅನ್ಯಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನು ಉಂಟುಮಾಡುತ್ತಾನೆ” ಎಂದು ಓದಿದೆ. ಹೌದು, ನನಗೆ ಭಕ್ತಿವೃದ್ಧಿ ಅವಶ್ಯವಾಗಿತ್ತು. ಭಕ್ತಿವೃದ್ಧಿಯ ಅರ್ಥ ”ಕಟ್ಟುವದು” ಎಂದು. ಒಂದು ಕಟ್ಟಡಕ್ಕೆ ಯಾರಾದರೂ ಬಾಂಬ್ ಹಾಕಿದರೆ ಅದು ಚೂರುಚೂರಾಗಿ ಒಡೆಯುವದು. ನಂತರ ಯಾರಾದರೂ ಅದನ್ನು ಮತ್ತೊಮ್ಮೆ ಕಟ್ಟಿದರೆ, ಒಂದು ಸುಂದರವಾದ ”ಭವನ” ನಿರ್ಮಾಣಗೊಳ್ಳುತ್ತದೆ - ಅದರ ಅರ್ಥ ಅಂದವಾದ, ಭವ್ಯವಾದ ಒಂದು ಕಟ್ಟಡ. ಹಾಗಾದರೆ ”ಭಕ್ತಿವೃದ್ಧಿ” ಎಂದರೆ ಒಂದು ಸೌಧವನ್ನು ಕಟ್ಟುವದು. ”ಯಾರು ಅನ್ಯಭಾಷೆಯನ್ನು ಆಡುತ್ತಾರೋ ಅವರು ತಮ್ಮನ್ನು ತಾವೇ ಸುಂದರವಾಗಿ ಮಾರ್ಪಡಿಸಿಕೊಳ್ಳುತ್ತಾರೆ”. ನಾನು ಈ ಅನುವಾದವನ್ನು ಇಷ್ಟಪಡುತ್ತೇನೆ.

ನಾನು ಅನ್ಯಭಾಷೆಯ ವರದ ಮೌಲ್ಯವನ್ನು ತಗ್ಗಿಸುತ್ತಿಲ್ಲ. ಆದರೆ ನೀವು ನಿಜವಾದ ಅನ್ಯಭಾಷೆಯ ವರವನ್ನು ಪಡೆದಿರುವದನ್ನು ಹೇಗೆ ತಿಳಕೊಳ್ಳಬಹುದು?

ಆದುದರಿಂದ ನಾನು ಕರ್ತನನ್ನು ಕೇಳಿದೆ, ”ಕರ್ತನೇ ಬಿದ್ದು ಹೋಗಿರುವ, ಒಡೆದು ಹೋಗಿರುವ ನನ್ನ ಜೀವನವನ್ನು ನೀನು ನಿಜವಾಗಿಯೂ ಮತ್ತೊಮ್ಮೆ ಕಟ್ಟುವೆಯಾ? ನಾನು ಹೊಸದಾಗಿ ಹುಟ್ಟಿದ್ದೇನೆ, ಆದರೆ ಹಲವೊಮ್ಮೆ ಕೆಟ್ಟ ಮನೋದ್ವೇಗದಲ್ಲಿ ಇರುತ್ತೇನೆ. ನನ್ನ ಮಾತುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ ಮತ್ತು ನಾನು ಕೋಪಗೊಂಡಾಗ ಸೈತಾನನ ಹಾಗೆ ಮಾತಾಡುತ್ತೇನೆ. ನೀನು ನನಗೆ ನಿಜವಾಗಿ ಪರಲೋಕದ ನಾಲಿಗೆಯನ್ನು ಕೊಡಬಲ್ಲೆಯಾ? ನೀನು ನಿಜವಾಗಿ ನನ್ನನ್ನು ಮತ್ತೊಮ್ಮೆ ಸುಂದರವಾಗಿ ಕಟ್ಟಬಲ್ಲೆಯಾ? ಹಾಗಾದರೆ - ಎಷ್ಟೇ ವೆಚ್ಚವಾಗಲಿ - ನೀನು ನನ್ನಲ್ಲಿ ಇದನ್ನು ಮಾಡಬೇಕೆಂದು ನಾನು ಬಯಸುತ್ತೇನೆ.” ನಾನು ಹತಾಶನಾಗಿದ್ದೆನು.

ಆಗ ದೇವರು ತನ್ನ ಆತ್ಮನನ್ನು ನನ್ನಲ್ಲಿ ತುಂಬಿಸಿ, ನನ್ನ ಜೀವನವನ್ನು ಸಂಪೂರ್ಣವಾಗಿ ಮಾರ್ಪಡಿಸಿದನು. ಆತನು ನನಗೆ ಅನ್ಯಭಾಷೆಯಲ್ಲಿ ಮಾತನಾಡುವ ವರವನ್ನು ಕೊಟ್ಟದ್ದು ಮಾತ್ರವಲ್ಲದೆ, ನನ್ನ ಮಾತೃಭಾಷೆಯ ಮೇಲೆಯೂ ಹಿಡಿತವನ್ನು ಸಾಧಿಸುವಂತೆ ನನ್ನನ್ನು ಬಲಗೊಳಿಸಿದನು! ನಾನು ಪಡೆದಿದ್ದ ವರವು ನಿಜವಾದುದೆಂದು ನನಗೆ ಆ ರೀತಿಯಾಗಿ ತಿಳಿಯಿತು. ನೀನು ನಿನಗೆ ಗೊತ್ತಿಲ್ಲದ ಒಂದು ಅನ್ಯಭಾಷೆಯಲ್ಲಿ ಮಾತನಾಡುವ ವರವನ್ನು ಪಡೆದಿರುವದಾಗಿ ಸಾಧಿಸಿದರೆ, ಆದರೆ ಗೊತ್ತಿರುವ ಭಾಷೆಯ ಮೇಲೆ ನಿನಗೆ ನಿಯಂತ್ರಣ ಇಲ್ಲವಾದರೆ, ನಿನ್ನ ವರವು ಬಂದಿರುವದು ಪವಿತ್ರಾತ್ಮನಿಂದ ಅಲ್ಲದೇ ಇರಬಹುದು.

ಅಷ್ಟೇ ಅಲ್ಲ, ನಿರುತ್ಸಾಹ ಮತ್ತು ಕೆಟ್ಟ ಮನೋಭಾವಗಳಿಂದಲೂ ನಾನು ಬಿಡುಗಡೆ ಪಡೆಯಬಹುದು ಎಂದು ತಿಳಿದೆನು - ಜೊತೆಗೆ ”ಕರ್ತನಲ್ಲಿ ಯಾವಾಗಲೂ ಸಂತೋಷಿಸುವುದನ್ನು” ಕಂಡುಕೊಂಡೆನು. ನಾನು ಈಗಲೂ ನಿರುತ್ಸಾಹಗೊಂಡು ಶೋಧನೆಗೆ ಒಳಗಾಗುತ್ತೇನೆ. ಆದರೆ ಅದನ್ನು ಎದುರಿಸಿ, ಆ ಶೋಧನೆಯು ಬಿಟ್ಟು ಹೋಗುವ ತನಕ ನಾನು ಅನ್ಯಭಾಷೆಗಳಲ್ಲಿ ಮಾತಾಡುತ್ತೇನೆ. ಹೀಗೆ ಅನ್ಯಭಾಷೆಗಳ ವರವು ನನ್ನಲ್ಲಿ ಯಾವಾಗಲೂ ಹೊಸತನವನ್ನು ತರುತ್ತದೆ ಮತ್ತು ನಾನು ಕಳೆಗುಂದಿ ಹೋಗುವದನ್ನು ತಡೆದು, ಇತರರ ಸೇವೆಯಲ್ಲಿ ನನ್ನನ್ನು ಯಾವಾಗಲೂ ಆತ್ಮನಿಂದ ಅಭಿಷಿಕ್ತನಾಗಿ ಇರಿಸುತ್ತದೆ. ಹೀಗೆ ಆತ್ಮನ ಬೇರೆಲ್ಲಾ ವರಗಳಂತೆಯೇ, ಈ ವರವು ಮುಖ್ಯವಾಗಿ ನಮ್ಮಿಂದ ಇತರರು ಆಶೀರ್ವದಿಸಲ್ಪಡುವ ಸಲುವಾಗಿ ಕೊಡಲ್ಪಟ್ಟಿದೆ.

ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ನಾನು ಆತ್ಮನಿಂದ ತುಂಬಿಸಲ್ಪಟ್ಟ ಮೇಲೆ ನನ್ನ ಜೀವನದಲ್ಲಿ ಯೇಸುವಿನ ನಿಜವಾದ ಪ್ರಸನ್ನತೆ ಉಂಟಾಯಿತು. ನನ್ನಲ್ಲಿ ಇರುವಾತನು ಸೈತಾನನಿಗಿಂತ ಹೆಚ್ಚು ಬಲಿಷ್ಠನು ಎನ್ನುವದನ್ನು ನಾನು ಈಗ ತಿಳಿದಿದ್ದೇನೆ. ಈ ಹಿಂದೆ, ನಾನು ದೆವ್ವ ಹಿಡಿದಿದ್ದ ಜನರನ್ನು ಎದುರಿಸಲು ಭಯಪಡುತ್ತಿದ್ದೆ. ಆದರೆ ಈಗ ಅವರಿಂದ ದೆವ್ವಗಳನ್ನು ಬಿಡಿಸುವ ಮೂಲಕ, ನಾನು ಅಂತಹ ಜನರಿಗೆ ಸಹಾಯ ಮಾಡಬಲ್ಲೆ. ಹಿಂದೆ ನಾನು ಸೈತಾನನಿಗೆ ಹೆದರುತ್ತಿದ್ದೆ, ಈಗ ಸೈತಾನನು ನನಗೆ ಭಯಪಡುತ್ತಾನೆ.

ನಾನೇನೂ ಒಬ್ಬ ವಿಶೇಷ ವ್ಯಕ್ತಿಯಲ್ಲ. ಆದರೆ ದೇವರು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದಾಗ ನಾನು ನಿಜವಾದ, ಅಸಲೀ ಕ್ರೈಸ್ತತ್ವವನ್ನು ಪಡಕೊಂಡೆನು. ನಾನು ನನ್ನದೆಲ್ಲವನ್ನೂ ಯೇಸುವಿಗೆ ಕೊಟ್ಟಿದ್ದೇನೆ ಮತ್ತು ಒಂದು ದಿನ ನಾನು ನನ್ನ ಕರ್ತನನ್ನು ಮುಖಮುಖಿಯಾಗಿ ನೋಡುವ ವರೆಗೂ ನನಗೆ ಈ ಲೋಕದಲ್ಲಿ ಪ್ರತಿದಿನ ದೇವರ ಚಿತ್ತವನ್ನು ಮಾಡುವದರ ಹೊರತಾಗಿ ಬೇರೆ ಯಾವ ಹೆಬ್ಬಯಕೆಯೂ ಇಲ್ಲ.

ನಾನು ನನ್ನ ಸುತ್ತಲೂ ಹೊಸದಾಗಿ ಹುಟ್ಟಿರುವದಾಗಿ ಹೇಳಿಕೊಳ್ಳುವ ಹೆಚ್ಚಿನ ಕ್ರೈಸ್ತರನ್ನು ನೋಡುವಾಗ, ಅವರ ಪರಿಸ್ಥಿತಿ ಹೊಸದಾಗಿ ಹುಟ್ಟಿದ ಮೊದಲ 16 ವರ್ಷಗಳಲ್ಲಿ ನಾನು ಇದ್ದಂತೆಯೇ ಇದೆಯೆಂದು ನನಗೆ ಕಾಣಿಸುತ್ತದೆ. ನಾನು ಅಂತಹ ಕ್ರೈಸ್ತರನ್ನು ತಿರಸ್ಕಾರದಿಂದ ಕಾಣುವುದಾಗಲೀ ಅಥವಾ ಟೀಕಿಸುವದಾಗಲೀ ಇಲ್ಲ. ನಾನು ಹಾಗೆ ಮಾಡಬಹುದೇ? ಹಿಂದೆ ನಾನು ಸಹ ಅವರಂತೆಯೇ ಇದ್ದೆ. ನಾನು ಅವರಿಗೆ ಇಷ್ಟನ್ನು ಮಾತ್ರ ಹೇಳಬಹುದು, ”ದೇವರು ನಿಮಗಾಗಿ ಇದಕ್ಕಿಂತ ಉತ್ತಮವಾದ ಏನನ್ನೋ ಇರಿಸಿದ್ದಾರೆ. ಈ ಲೋಕದ ಸಂಗತಿಗಳನ್ನು ಹುಡುಕುವುದನ್ನು ಬಿಟ್ಟು, ಪರಲೋಕದವನ್ನು ಹುಡುಕಿರಿ, ನಂತರ ಯೇಸು ನಿಮ್ಮನ್ನು ತನ್ನ ಆತ್ಮನಿಂದ ತುಂಬಿಸುವನು. ಹೊಸ ಒಡಂಬಡಿಕೆಯ ಜೀವನ ಹಳೆ ಒಡಂಬಡಿಕೆಯ ಜೀವನಕ್ಕಿಂತ ಎಷ್ಟೋ ಉತ್ತಮವಾಗಿದೆ.”

ಯೇಸುವು ನಮ್ಮ ಈ ಲೋಕದ ಸಂಪತ್ತನ್ನು ಹೆಚ್ಚಿಸಲಿಕ್ಕಾಗಲೀ, ಅಥವಾ - ಈ ಲೋಕದಲ್ಲಿ ಅಥವಾ ಕ್ರೈಸ್ತಸಭೆಯಲ್ಲಿ - ನಮಗೆ ಮಾನ್ಯತೆ ಕೊಡಿಸಲಿಕ್ಕಾಗಲೀ ಬರಲಿಲ್ಲ. ಆತನು ನಮ್ಮನ್ನು ಆತನಂತೆ ಮಾಡಲಿಕ್ಕಾಗಿ - ಪ್ರೀತಿ, ದೀನತೆ ಮತ್ತು ಪವಿತ್ರತೆ ಹೊಂದಿರುವಂತೆ - ಬಂದನು. ಹಾಗಿದ್ದರೂ, ಸ್ವತಃ ತಾನು ಅನುಭವಿಸಿದಂತೆ, ನಾವು ಮನುಷ್ಯರಿಂದ ತಿರಸ್ಕರಿಸಲ್ಪಟ್ಟು, ತಳ್ಳಿ ಹಾಕಲ್ಪಡುವದನ್ನು ಆತನು ಸಮ್ಮತಿಸುವನು. ಆತನು ನಾವು ಭೌತಿಕವಾದ ಸಂಗತಿಗಳಲ್ಲಿ ಬಡವರಾಗಿ ಇರುವದನ್ನು ಸಮ್ಮತಿಸಬಹುದು, ಆದರೆ ಆತ್ಮಿಕವಾಗಿ ಧನಿಕರನ್ನಾಗಿ ಮಾಡುತ್ತಾನೆ.

ದೇವರು ಅಬ್ರಹಾಮನನ್ನು ಧನಿಕನನ್ನಾಗಿಸಿ, ಯೋಬ, ದಾವೀದ ಮತ್ತು ಸೊಲೊಮೋನರನ್ನು ಲೌಕಿಕವಾಗಿ ಐಶ್ವರ್ಯವಂತರನ್ನಾಗಿ ಮಾಡಿರುವಾಗ, ಬೇಕಾಗಿದ್ದರೆ ಯೇಸು, ಪೇತ್ರ ಮತ್ತು ಪೌಲರನ್ನು ಸಹ ಲೌಕಿಕವಾಗಿ ಐಶ್ವರ್ಯವಂತರನ್ನಾಗಿ ಮಾಡಬಹುದಿತ್ತು. ಆದರೆ ಆತನು ಹಾಗೆ ಮಾಡಲಿಲ್ಲ - ಏಕೆಂದರೆ ಯೇಸುವು ಮಾನವನಿಗೆ ಪರಲೋಕ ರಾಜ್ಯವನ್ನು ತೆರೆದು, ಆತನಿಗೆ ಪರಲೋಕದ ಸಂಪತ್ತನ್ನು ನೀಡಲು ಬಂದನು. ಅದಲ್ಲದೆ ಪೌಲನು ತನ್ನ ನಿಜಸ್ಥಿತಿಯನ್ನು ಈ ರೀತಿಯಾಗಿ ವಿವರಿಸಿದ್ದಾನೆ: ”ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯವನ್ನುಂಟು ಮಾಡುವವರೂ, ಏನೂ ಇಲ್ಲದವರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ” (2 ಕೋರಿಂಥ. 6:10). ನಿಜವಾದ ಹೊಸ ಒಡಂಬಡಿಕೆ, ಆತ್ಮ-ಭರಿತ ಕ್ರೈಸ್ತತ್ವವೆಂದರೆ ಇದು.

ಇಂದು ನಿಮಗೆ ಪರಲೋಕದಿಂದ ಒಂದು ಧ್ವನಿ ಕೇಳಿಬರುತ್ತಿದೆಯೇ? ಅದು ಬಹಳ ಅಕ್ಕರೆಯ ಧ್ವನಿ. ಕರ್ತನು ಹೀಗೆ ಹೇಳುತ್ತಿದ್ದಾನೆ, ”ನನ್ನ ಮಗನೇ, ನನ್ನ ಮಗಳೇ, ಮೇಲಕ್ಕೆ ಬಾ. ನೀನು ಈಗ ಜೀವಿಸುತ್ತಿರುವ ಕೆಳಮಟ್ಟದ ಜೀವನವನ್ನು ನೀನು ಮುಂದುವರೆಸುವದು ನನಗೆ ಇಷ್ಟವಿಲ್ಲ. ನಿನ್ನ ಸುತ್ತಮುತ್ತಲಿನ ಇತರ ಕ್ರೈಸ್ತರಿಗಿಂತ ಉತ್ತಮನಾಗಿ ಇರುವೆನೆಂದು ನೀನು ಸಂತೋಷಿಸದಿರು. ನಿನ್ನ ಜ್ಞಾನಕ್ಕಾಗಿ, ಅಥವಾ ನಿನ್ನ ಅನುಭವಗಳಿಗಾಗಿ, ಅಥವಾ ನಿನ್ನ ಬಗ್ಗೆ ಇತರರ ಒಳ್ಳೆಯ ಅಭಿಪ್ರಾಯದ ಕುರಿತಾಗಿ, ಅಥವಾ ನೀನು ಎಂತಹ ಆತ್ಮಿಕ ವ್ಯಕ್ತಿಯಾಗಿರುವೆ ಎನ್ನುವದರ ಬಗ್ಗೆ ಹೆಚ್ಚಳ ಪಡದಿರು. ಕಳೆದ ದಿನಗಳಲ್ಲಿ ನನ್ನಿಂದ ನೀನು ಎಷ್ಟು ಉಪಯೋಗಿಸಲ್ಪಟ್ಟೆ ಎಂಬ ವಿಷಯವಾಗಿಯೂ ಸಂತೋಷಿಸದಿರು. ಮೇಲಕ್ಕೆ ಏರಿ ಬಾ”.

ದೇವರು ತನ್ನ ಪವಿತ್ರಾತ್ಮನಿಂದ ನಿನ್ನನ್ನು ತುಂಬಿಸಲು ಇಚ್ಛಿಸುತ್ತಾನೆ. ನೀನು ಆತನಿಗೆ, ”ಕರ್ತನೇ, ನನಗೆ ಪವಿತ್ರಾತ್ಮನ ಯಥಾರ್ಥವಾದ ಬಲ ಬೇಕು. ಇಂದಿನ ವರೆಗೂ ನಾನು ಜೀವಿಸಿರುವ ನಕಲೀ ಜೀವನ ಸಾಕಾಗಿದೆ,” ಎಂದು ಹೇಳುವೆಯಾ?

ನಾನು ನಿನಗೆ ಇನ್ನೊಂದು ಸಂಗತಿಯನ್ನು ಹೇಳುತ್ತೇನೆ: ನೀನು ಕಾಯುವ ಅವಶ್ಯಕತೆ ಇಲ್ಲ. ಒಂದು ವೇಳೆ ಕಾಯಬೇಕಾಗಿ ಬಂದರೆ ಅದಕ್ಕೆ ಕಾರಣ, ನೀನು ದೇವರಿಗೆ ಎಲ್ಲವನ್ನೂ ಒಪ್ಪಿಸಿ ಕೊಡುವದಕ್ಕಾಗಿ ಆತನು ಕಾಯುತ್ತಿದ್ದಾನೆ - ನಿನ್ನ ಸಂಪೂರ್ಣ ಜೀವನ ಮತ್ತು ನಿನ್ನ ಆಕಾಂಕ್ಷೆಗಳು, ಇತ್ಯಾದಿ ಎಲ್ಲವೂ. ಬಹುಶಃ ನಿನ್ನ ಜೀವನದಲ್ಲಿ ನೀನು ಆತನಿಗೆ ಇನ್ನೂ ಒಪ್ಪಿಸದೇ ಇರುವ ಯಾವುದೋ ವಿಷಯ ಇರಬಹುದು, ನಿನ್ನ ಹೃದಯದ ಯಾವುದೋ ಬಾಗಿಲನ್ನು ನೀನು ಕರ್ತನಿಗಾಗಿ ಇನ್ನೂ ತೆರೆಯದೇ ಇರಬಹುದು, ನಿನ್ನ ಯಾವುದೋ ಹವ್ಯಾಸವನ್ನು ತ್ಯಜಿಸಲು ನಿನಗೆ ಮನಸ್ಸಿಲ್ಲದೇ ಇರಬಹುದು. ಈಗ ಅದನ್ನು ಬಿಟ್ಟುಬಿಡಲು ನಿನಗೆ ಒಪ್ಪಿಗೆ ಇದೆಯೇ?

ಯೇಸುವು ನಿನ್ನ ಪಕ್ಕದಲ್ಲಿ ಕುಳಿತು ವೀಕ್ಷಿಸಲು ಸಾಧ್ಯವಿರದ ಸಿನಿಮಾ-’ಡಿ.ವಿ.ಡಿ’ಗಳನ್ನು ಎಸೆದು ಬಿಡಲು ನಿನಗೆ ಒಪ್ಪಿಗೆ ಇದೆಯೇ? ಯೇಸುವು ಎಂದಿಗೂ ಕೇಳಲು ಇಷ್ಟಪಡದ ರಾಕ್-ಸಂಗೀತದ ’ಸಿ.ಡಿ’ಗಳನ್ನು ಎಸೆದು ಬಿಡಲು ನೀನು ಒಪ್ಪುವೆಯಾ? ಯೇಸುವಿಗೆ ತೋರಿಸಲು ನೀನು ನಾಚಿಕೆ ಪಡಬೇಕಾಗುವ ಚಿತ್ರಗಳು ಮತ್ತು ಮಾಸಪತ್ರಿಕೆಗಳನ್ನು ಎಸೆದು ಬಿಡಲು ನಿನಗೆ ಮನಸ್ಸಿದೆಯೇ? ನಿನ್ನ ಹಣಕಾಸಿನ ಸಂಬಂಧದಲ್ಲಿ, ನಿನ್ನ ಹಣದ ಉಪಯೋಗವನ್ನು ಯೇಸುವು ಪರೀಕ್ಷಿಸಿ ನಿನಗೆ ಸಲಹೆ ನೀಡುವದು ನಿನಗೆ ಒಪ್ಪಿಗೆಯೇ? ನಿನ್ನ ಹೆಂಡತಿಯೊಂದಿಗೆ ಮಾತನಾಡುವ ಎಲ್ಲಾ ಸಮಯದಲ್ಲಿ, ನಿಮ್ಮಿಬ್ಬರ ನಡುವೆ ಯೇಸುವು ಇದ್ದು, ನೀನು ಯೇಸುವಿನ ಸಮ್ಮುಖದಲ್ಲಿ ಮಾತಾಡಬೇಕಾದರೆ, ಅದು ನಿನಗೆ ಒಪ್ಪಿಗೆಯೇ? ಮತ್ತು ನೀನು ಪತ್ನಿಯಾಗಿದ್ದರೂ ಸಹ, ಇದು ಅದೇ ರೀತಿಯಾಗಿ ನಿನಗೆ ಅನ್ವಯಿಸಬಹುದೇ?

ಒಂದು ವೇಳೆ ನೀವು ಇಂತಹ ಜೀವನವನ್ನು ಬಯಸುವಿರಾದರೆ, ನೀವು ಇಂದೇ ಪವಿತ್ರಾತ್ಮನಿಂದ ತುಂಬಿಸಲ್ಪಡುವಿರಿ ಎಂದು ನಾನು ನಿಖರವಾಗಿ ಹೇಳಬಲ್ಲೆ.

ಆದರೆ ನೀವು ಇನ್ನೂ ಈ ಲೋಕದ ಸಂಗತಿಗಳನ್ನು ಹುಡುಕುತ್ತಿದ್ದರೆ ಮತ್ತು ಯೇಸುವನ್ನು ಒಳ್ಳೆಯ ಮನೆ, ಉತ್ತಮ ವಾಹನ ಮತ್ತು ಇಂತಹ ಬೇರೆ ಸಂಗತಿಗಳಿಗಾಗಿ ಕೇಳುತ್ತಿದ್ದರೆ, ಆಗ ನೀವು ಪಶ್ಚಾತ್ತಾಪ ಪಟ್ಟು ಇದನ್ನು ಬಿಡುವ ತನಕ, ಕರ್ತನು ನಿಮಗೆ ಏನನ್ನೂ ಕೊಡುವುದಿಲ್ಲವೆಂದು ನಾನು ಹೇಳಲೇ ಬೇಕಾಗಿದೆ.

ನೀವು ಇದನ್ನು ತಿಳಕೊಂಡು ವಿವೇಕ ಉಳ್ಳವರಾಗುವಂತೆ ಕರ್ತನು ಸಹಾಯ ಮಾಡಲಿ!

ಆಮೇನ್.