" ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನವರೆಗೂ ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ದೂಪವನ್ನೂ ಶುದ್ಧ ನೈವೇದ್ಯವನ್ನೂ ಅರ್ಪಿಸುತ್ತಾರೆ " (ಮಲಾ 1: 11)
ಸೃಷ್ಟಿಯ ಪ್ರಾರಂಭದಿಂದ ತನ್ನ ನಾಮಕ್ಕೆ ಶುದ್ಧ ಸಾಕ್ಷಿಯು ಇರಬೇಕೆಂದು ದೇವರ ಬಯಕೆ. ಯೋಗ್ಯತೆ ಹಾಗೂ ಶುದ್ಧತೆಯು ದೇವರನ್ನು ಮೆಚ್ಚಿಸಿದಂತೆ ಪ್ರಮಾಣ ಹಾಗೂ ಸಂಖ್ಯೆಯು ಆತನನ್ನು ಮೆಚ್ಚಿಸಲಿಲ್ಲ. ದೊಡ್ಡತನವು ಮನುಷ್ಯನನ್ನು ಮೆಚ್ಚಿಸಬಹುದು ಆದರೆ ದೇವರನ್ನು ಮೆಚ್ಚಿಸಲಾರದು, ಎಲ್ಲಾ ನಕ್ಷತ್ರ, ಗ್ರಹಗಳಿಗಿಂತಲೂ ಭೂಮಿಯು ಪ್ರಮಾಣದಲ್ಲಿ ಚಿಕ್ಕದಾಗಿರುವದರಿಂದ, ಸ್ರಷ್ಟಿಯಲ್ಲಿಯೂ ಇದೇ ಸತ್ಯವು ಕಂಡು ಬರುತ್ತದೆ. ಆದರೂ ಇದೇ ಭೂಮಿಯ ಮೇಲೆ ದೇವರು ಬಂದು ಮನುಷ್ಯರೊಂದಿಗೆ ವಾಸಿಸಿದನು.
ಅಂಕಿ ಸಂಖ್ಯೆಗಳಿಗೆ ಪ್ರಾಮುಖ್ಯತೆ ಕೊಡುವ ಲೋಕದಲ್ಲಿರುವ ನಮಗೆ ಇದು ಬಹು ಪ್ರಧಾನ ಸಂದೇಶ, ತಿರುಗಿ ತಿರುಗಿ ನಾವು ಇದನ್ನು ನೆನಪಿಸಿಕೊಳ್ಳುವುದು ಅವಶ್ಯವಾಗಿದೆ. ಲೋಕದಲ್ಲಿ ಕ್ರ್ಯೆಸ್ತರು ದಾವೀದನಂತೆ (2 ನೇ ಸಮು - 24) ಜನ ಸಂಖ್ಯೆಯನ್ನು ಎಣಿಸಿ, ಅದರ ಪ್ರಮಾಣ ಹಾಗೂ ದೊಡ್ಡತನದ ಬಗ್ಗೆ ಮೆಚ್ಚಿಕೆವುಳ್ಳವರಾಗಿದ್ದಾರೆ. ಒಬ್ಬ ಸುವಾರ್ತಿಕನ ಪರಿಣಾಮಕಾರಿಯು ಆತನು ಎಷ್ಟು ಜನರನ್ನು ಕರ್ತನ ಕಡೆಗೆ ನಡೆಸಿದನೆಂಬ ಸಂಖ್ಯೆಯಲ್ಲಿಯೂ ಒಂದು ಸಭೆಯ ಪ್ರಭಾವ ಸಭೀಕರ ಪ್ರಮಾಣದಲ್ಲಿಯೂ ಹಾಗೂ ಅದರ ವಾರ್ಷಿಕ ಆದಾಯದಲ್ಲಿಯೂ ಅಳೆಯಲ್ಪಡುತ್ತಿದೆ. ಪ್ರಾಪಂಚಿಕ ಕಂಪನಿಗಳಂತೆ ಕ್ರ್ಯೆಸ್ತ ಪತ್ರಿಕೆಗಳಲ್ಲಿ ಗುಂಪಿನ ಫೋಟೋ ಚಿತ್ರಗಳು ಹಾಗೂ ಅಂಕಿ ಸಂಖ್ಯೆಗಳಿಂದ ತುಂಬಿದೆ.
ತನ್ನ ಮಾರ್ಗಗಳು ಮನುಷ್ಯರ ಮಾರ್ಗಗಳು ಅಲ್ಲವೆಂದು ದೇವರು ಹೇಳಿರುವದನ್ನು (ಯೆಶಾ - 55: 8, 9) ಕೆಲವರೇ ಬಲ್ಲರು. ದೇವರ ಹಸ್ತವನ್ನು ಚಲಿಸುವದಕ್ಕೂ ಸೈತಾನನ ಶಕ್ತಿಗಳನ್ನು ಬಂಧಿಸುವದಕ್ಕೂ ಅದ್ಭುತಗಳನ್ನು ಮಾಡುವದಕ್ಕೂ ಒಂದಾಗಿರುವ ಕೇವಲ ಇಬ್ಬರು ಮಾತ್ರ ಸಾಕು ಎಂಬ ಸತ್ಯವನ್ನು ಕೆಲವರು ಮಾತ್ರ ಅರ್ಥಮಾಡಿಕೊಂಡಿದ್ದಾರೆ (ಮತ್ತಾ 18: 18-20).
ಪ್ರಾರಂಭದಲ್ಲಿ ಓದಿಕೊಂಡ ವಾಕ್ಯದಲ್ಲಿ, ದೇವರು ತನ್ನ ಹ್ರದಯದ ಬಯಕೆಯನ್ನು ಮಲಾಕಿಯನ ಮುಖಾಂತರ ಪ್ರಕಟಿಸುತ್ತಿದ್ದಾನೆ. ಯೇಸುವಿನ ಮೊದಲನೆಯ ಬರುವಿಕೆಗೆ ಕೆಲವು ನೂರು ವರ್ಷಗಳ ಮುಂಚೆ ಪ್ರವಾದಿಸಿದ ಹಳೆ - ಒಡಂಬಡಿಕೆಯ ಕಡೇ ಪ್ರವಾದಿಯು ಮಲಾಕಿ. ಯೇಸುವಿನ ಎರಡನೆಯ ಬರುವಿಕೆಯ ದಿನಗಳಲ್ಲಿ ಜೀವಿಸುತ್ತಿರುವ ನಮಗೆ ಆತನ ಸಂದೇಶವು ಯುಕ್ತವಾಗಿದೆ.
ಮಲಾಕಿಯ ಕಾಲದಲ್ಲಿ ಇಸ್ರಾಯೇಲ್ಯರು ಸಂಖ್ಯೆಯಲ್ಲಿ ಹೆಚ್ಚಾಗಿರಲಿಲ್ಲ ಅಥವಾ ನೈವೇದ್ಯಗಳನ್ನು ಹೆಚ್ಚಾಗಿ ಅರ್ಪಿಸಲಿಲ್ಲ ಎಂಬುದಾಗಿ ದೇವರು ಖಂಡಿಸದೆ ಅವರ ನೈವೇದ್ಯಗಳನ್ನು ಶುದ್ಧವಾಗಿರಲಿಲ್ಲವೆಂಬುದಾಗಿ ಖಂಡಿಸುತ್ತಾನೆ (ಮಲಾ 1 : 6-11) ಸುವಾರ್ತಿಕ ಕ್ರೈಸ್ತರಲ್ಲಿ ಅನೇಕರು ಕ್ರೈಸ್ತರ ಜನಸಂಖ್ಯೆಯು ರಾಷ್ಟ್ರದಲ್ಲಿ ಅಲ್ಪ ಶೇಕಡವಾಗಿದೆ ಎಂದು ತೊಂದರೆ ಪಡುತ್ತಾರೆ ಅಥವಾ ತೊಂದರೆ ಪಡುವ ಹಾಗೆ ನಟಿಸುತ್ತಾರೆ! ಆದರೆ ಅದಕ್ಕಿಂತಲೂ ಬಹು ಹೆಚ್ಚಾಗಿ, ವಿಶ್ವಾಸಿಗಳು ಎಷ್ಟೋ ಅಶುದ್ಧರಾಗಿದ್ದಾರೆಂಬ ಸತ್ಯಾಂಶವು ದೇವರನ್ನು ದುಃಖಿಸುವಂತಾಗಿದೆ. ಒಂದೊಂದು ಸ್ಥಳದಲ್ಲಿಯು ಶುದ್ಧ ನೈವೇದ್ಯಗಳಿರಬೇಕೆಂಬುದನ್ನೇ ದೇವರು ಬಯಸುತ್ತಾನೆ (ಮಲಾಕಿ 1: 11).
ಪಾಪದಿಂದ ಶುದ್ಧತ್ವಕ್ಕೆ ತಿರುಗಬೇಕೆಂದು, ದೇವರು ಇಸ್ರಾಯೇಲರ ಬಳಿಗೆ ಪ್ರವಾದಿಗಳ ನಂತರ ಪ್ರವಾದಿಗಳನ್ನು 1450 ವರ್ಷಗಳ ಕಾಲ ಕಳುಹಿಸುತ್ತಿದ್ದನು. ಯೆರೆಮೀಯನು ಹೇಳುವದನ್ನು ಗಮನಿಸಿರಿ, "ಕರ್ತನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಸಾವಕಾಶಮಾಡದೆ ಕಳುಹಿಸುತ್ತಿದ್ದರೂ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ (ಇದನ್ನು ಸಹ ಗಮನಿಸಿರಿ) ಪ್ರತಿಬಾರಿ ಇದೇ ಸಂದೇಶವಾಗಿತ್ತು". "ನೀವೆಲ್ಲರೂ ನಿಮ್ಮ ದುರ್ಮಾಗದಿಂದಲೂ ದುಷ್ಕ್ರುತ್ಯಗಳಿಂದಲೂ ಹಿಂದಿರುಗಿರಿ, ನಮಗೆ ಶಾಶ್ವತ ಸ್ವಾಸ್ತ್ಯವಾಗಿರಲಿ ಎಂದ, ಕರ್ತನು ಪುರಾತನ ಕಾಲದಲ್ಲಿ ನಿಮಗೂ ನಿಮ್ಮ ಪಿತ್ರಗಳಿಗೂ ಅನುಗ್ರಹಿಸಿದ ದೇಶದೊಳಗೆ ನೆಲೆಗೊಳ್ಳಿರಿ" (ಯೆರೆ 25: 4,5) ಪ್ರವಾದಿಗಳ ಮುಖ್ಯ ಭಾರ ಶುದ್ಧತೆಯಾಗಿತ್ತು-ಸಂಖ್ಯೆಯಾಗಿರಲಿಲ್ಲ!
ಆದರೆ ಇಸ್ರಾಯೇಲರು ಕಿವಿಗೊಡಲೇ ಇಲ್ಲ.
ಇಂದು ಕೈಸ್ತತ್ವದಲ್ಲಿಯೂ ಅದೇ ಸಮಸ್ಯೆ. ಅದೇ ಭಾರದಿಂದ ದೇವರು ತನ್ನ ಸಂದೇಶಕರನ್ನು ಅನೇಕ ಶತಮಾನಗಳಿಂದ ತನ್ನ ಸಭೆಗೆ ಕಳುಹಿಸುತಿದ್ದಾನೆ. ಆದರೆ ಇಸ್ರಾಯೇಲ್ಯರಂತೆ ಕ್ರೆಸ್ತತ್ವವು ದೇವರ ಸಂದೇಶವನ್ನು ತಿರಸ್ಕರಿಸಿದೆ.
ಇಸ್ರಾಯೇಲರಿಗೆ ದೇವ ಭಯ ಇರಲಿಲ್ಲವೆಂಬುದು, ಅವರು ದೇವರಿಗೆ ಕುರುಡಾದ, ಕುಂಟಾದ ಹಾಗೂ ರೋಗವುಳ್ಳ ಪ್ರಾಣಿಯನ್ನು ಅರ್ಪಿಸಿದ್ದರ ಮೂಲಕ ಕಂಡುಬರುತ್ತದೆ.(ಮಲಾ 1: 8)ವಿಶ್ವಾಸಿಗಳಲ್ಲಿ ಸಹ ಅದೇ ರೀತಿಯಾಗಿದೆ. ಅವರು ಕೊಡುವದರಲ್ಲಿ ನಿಸ್ವಾರ್ಥತೆಯು ಅಥವಾ ಶ್ರಮೆಯು ಒಳಪಟ್ಟಿಲ್ಲ. "ನನ್ನ ದೇವರಾದ ಕರ್ತನಿಗೆ ಸುಮ್ಮನೆ ಸಿಕ್ಕಿದ್ದನ್ನು ಯಜ್ಞವಾಗಿ ಅರ್ಪಿಸಲೊಲ್ಲೆನು"(2ನೆ ಸಮು 24:24) ಎಂದು ಹೇಳಿದ ದಾವೀದನ ಆತ್ಮವನ್ನು ತಿಳಿದ ಜನರು ಕೆಲವರೇ ಆಗಿದ್ದಾರೆ.
ಇಸ್ರಾಯೇಲರಲ್ಲಿದ್ದ ಯಾಜಕರು ದೇವರು ಶುದ್ದ ವಾಕ್ಯವನ್ನು ನೀರು ಪಾಲು ಮಾಡಿದ ಕಾರಣ ಕರ್ತನ ಒಡಂಬಡಿಕೆಯನ್ನು ಮಲಿನ ಮಾಡಿದ್ದರು. ತಮ್ಮ ತಮ್ಮ ಸಹೋದರರೊಂದಿಗೆ ಅನ್ಯಾಯವಾಗಿಯು ತಮ್ಮ ಹೆಂಡತಿಯರಿಗೆ ದ್ರೋಹ ಮಾಡಿದ್ದರಿಂಲೂ ಯೆಹೂದ್ಯರು ದೇವರ ಮಾರ್ಗವನ್ನು ಭಂಗಪಡಿಸಿದ್ದರು (ಮಲಾ 2: 10-17 ).
ಹರಟೆ ಮಾತುಗಳು ಹಾಗೂ ಹಿಂದೆ ಮಾತಾಡುವದಂತೂ ಪ್ರತಿ ವಿಶ್ವಸಿಗಳ ಗುಂಪಿನಲ್ಲಿಯೂ ಸರ್ವಸಾಧಾರಣವಾಗಿದೆ. ಯೋಚನೆಯ ಜೀವಿತದಲ್ಲಿಯೂ ತಮ್ಮ ಹೆಂಡತಿಯರಿಗೆ ನಂಬಿಗಸ್ತರಾಗಿದ್ದೇವೆಂದು ಸಾಕ್ಷಿ ನುಡಿಯುವವರು ಎಷ್ಟೋ ಸ್ವಲ್ಪ ಜನರು! ಇಂಥಾ ಅಸಹ್ಯತನವು ಇನ್ನೂ ಹೃದಯದಲ್ಲಿರುವಾಗ ಸುವಾರ್ತಾ ಸೇವೆ ಹಾಗೂ "ಪರಿಪೂರ್ಣ ಸೇವೆ"ಯ ಪ್ರಯೋಜನವೇನು?
"ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ... ಇದೆಲ್ಲಾ ನನಗೆ ಸಾಕಾಯಿತು; ನಿಮ್ಮ ಉತ್ಸವ ದಿನಗಳನ್ನು ಹಗೆ ಮಾಡುತ್ತೇನೆ.. ನಿಮ್ಮನ್ನು ತೊಳೆದುಕೊಳ್ಳಿರಿ. ಶುದ್ಧಿಮಾಡಿಕೊಳ್ಳಿರಿ, ದುರಾಚಾರವನ್ನು ಬಿಡಿರಿ"(ಯೆಶಾ 1:11 ರಿಂದ 16).
ಸೇನಾಧೀಶ್ವರ ಕರ್ತನ ದೂತನಾಗಿ ಯೇಸುವು ಸಭೆಯನ್ನು ಅಕ್ಕಸಾಲಿಗನ ಬೆಂಕಿಯಂತೆ ಶುದ್ದಿಕರಿಸಲು ಬಂದಿದ್ದಾನೆ(ಮಲಾ 3:1-3)ನಾವು ಸದ್ಧಿಮಿರ್ಗಗಳಾಗಿ ದೇವರಿಗೆ ನೈವೇದ್ಯಗಳನ್ನು ಸಮರ್ಪಿಸುವಂತೆ ಕರ್ತನು ತನ್ನ ವಾಕ್ಯದ ಹಾಗೂ ಪವಿತ್ರಾತ್ಮನ ಮೂಲಕ ಬೆಳ್ಳಿ ಬಂಗಾರಗಳನ್ನೋ ಎಂಬಂತೆ ಶುದ್ಧಿ ಕರಿಸುತ್ತಿದ್ದಾನೆ. ಕರ್ತನು ನಮ್ಮಿಂದ ಬಯಸುವ ಯಜ್ಞವು ನಮ್ಮ ದೇಹವೇ ಆಗಿರುತ್ತದೆ (ರೋಮಾ 12:1). ಇದೇ ನಮ್ಮ ವಿವೀಕ ಪೂರ್ವಕವಾದ ಆರಾಧನೆಯು.
ದೇವರು ಆದಾಮ- ಹವ್ವರ ಮುಖಾಂತರ, ತಿರುಗಿ ಪ್ರಾರಂಭಿಸಿದನು. ಅವರು ಭೂಮಿಯಲ್ಲಿ ಬಹುಸಂತಾನವುಳ್ಳವರಾಗಿ ಹೆಚ್ಚಬೇಕೆಂದು ದೇವರ ಮುಖ್ಯ ಉದ್ದೇಶವಾಗಿರದೆ, ಅವರು ಆತನ ಸ್ವರೂಪವನ್ನು ಪ್ರತಿಬಿಂಭಿಸವವರಾಗಿರಬೇಕೆಂಬುದೇ ದೇವರ ಉದ್ದೇಶವಾಗಿತ್ತು(ಆದಿ 1:26-28) ಅವರು ತಮ್ಮ ಶುದ್ಧತ್ವನ್ನು ಕಳೆದುಕೊಂಡಮೇಲೆ, ಅವರ ಸಂತಾನವು ಸಂಖ್ಯೆಯನ್ನಲ್ಲ ಶುದ್ಧತ್ವವನ್ನೇ ಬಯಸುತ್ತಾನೆಂಬ ಸಂದೇಶವು ತಿರುಗಿ ಸ್ಪಷ್ಟವಾಗಿದೆ. "ಉಪಯೋಗವಿಲ್ಲದ ಹೆಚ್ಚು ಮಕ್ಕಳನ್ನು ಬಯಸಬೇಡ, ಭಕ್ತಿಹೀನರಾಗಿರುವ ಮಕ್ಕಳಲ್ಲಿ ಆನಂದವಿಲ್ಲ. ಮಕ್ಕಳಲ್ಲಿ ದೇವರು ಭಯ ಇಲ್ಲದಿದ್ದರೆ ಅವರು ಹೆಚ್ಚಾಗಿದ್ದರೂ ಹರ್ಷವಿಲ್ಲ.( ಅಶುದ್ಧರಾಗಿರುವ) ಸಾವಿರ ಮಕ್ಕಳಿಗಿಂತಲೂ ನೀತಿವಂತನಾದ ಒಬ್ಬ ಮಗನು ಎಷ್ಟೋ ಉತ್ತಮ" ಎಂದು ಪುರಾತನಕಾಲದ ಒಬ್ಬ ಭಕ್ತನು ಹೇಳುತ್ತಾನೆ.
ಅನಂತರ ದೇವರು ಹೇಬೆಲನ ಜೀವಿತದಲ್ಲಿ ಕಾರ್ಯ ಸಾಧಿಸಿದನು ಮತ್ತು ಅವನು ಶುದ್ಘ ಕಾಣಿಕೆಯನ್ನು ಕರ್ತನಿಗಾಗಿ ಅರ್ಪಿಸಿದನು. ಆದರೆ, ಅವನನ್ನು ಕೊಲ್ಲುವಂತೆ ಅವನ ಅಣ್ಣನಾದ ಕಾಯಿನನ್ನು ಪ್ರೇರೇಪಿಸಿ ಸೈತಾನನು ಆ ಶುದ್ಧ ಕಾಣಿಕೆಯನ್ನು ಕೊನೆಗೊಳಿಸಿದನು. ಅನಂತರ ದೇವರು - ಆದಾಮ ಹವ್ವರಿಗೆ ಸೇತನೆಂಬ ಇನ್ನೊಬ್ಬ ಮಗನನ್ನು ದಯಪಾಲಿಸಿದನು. ಸೇತನ ಕಾಲದಲ್ಲಿ ಜನರು "ಕರ್ತನು ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುದದಕ್ಕೆ" ಪ್ರಾರಂಭಿಸಿದರು(ಆದಿ 4:26).
ಆದರೆ ಭಕ್ತಿಯುಳ್ಳ ಸೇತನ ಸಂತಾನವು ಸಹ ತಿರುಗಿ ಅಶುದ್ಧವಾಗಿ. ಜನರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದಾಗಿರುವಕ್ಕೆ ಪ್ರಾರಂಭಿಸಿತು. (ಆದಿ 6: 5, 6)ಆ ದಿವಸಗಳಲ್ಲಿ, ಜನರು ಸಂಖ್ಯೆಗೆ ಯಾವ ಕೊರತೆಯಿರಲಿಲ್ಲ; ಆದರೆ ಶುದ್ಧ ಜೀವಿತದ ನೀತಿವಂತರಿಗೆ ಮಹಾ ಕೊರತೆಯಿತ್ತು. ಹೊರಗಿನ ತೋರಿಕೆಯನ್ನು ನೋಡದೆ ಎಲ್ಲರ ಹೃದಯಗಳನ್ನು ನೋಡುವ ದೇವರಿಗೆ, ನೋಹನೆಂಬ ಒಬ್ಬ ಮನುಷ್ಯನು ಮತ್ತು ಅವನ ಕುಟುಂಬವು ಮಾತ್ರವೇ ಇಡೀ ಲೋಕದಲ್ಲಿಯೇ ನೀತಿವಂತರಾಗಿ ಕಂಡುಬಂತು. ನೋಹನು ಮತ್ತು ಅವನ ಕುಟುಂಬದವರೂ ಸೇರಿ ಒಟ್ಟು ಎಂಟೇ ಜನರಿದ್ದರು. ಆದರೆ, ಸಂಖ್ಯೆಗೆ ಪ್ರಾಮುಖ್ಯತೆಗೆ ಕೊಡದೆ ಶುದ್ಧತೆಗೆ ಪ್ರಾಮುಖ್ಯ ನೀಡುವ ದೇವರಿಗೆ ಅವರು ಮೆಚ್ಚಿಕೆಯಾಗಿದ್ದರು. ಅಂದು ಜೀವಿಸುತ್ತಿದ್ದ ಲೋಕದವರೆಲ್ಲರೂ ಸರಿಸಮಾನವಾಗಿ ಒಂದು ವೇಳೆ ದುಷ್ಟರು ಅಥವಾ ಶರೀರಾಧೀನ ಸ್ವಭಾವದವರಾಗಿರಲಿಲ್ಲ, ಆದರೆ ಅವರಲ್ಲಿ ಒಬ್ಬರೂ ದೇವರ ಕನಿಷ್ಠ ಪರಿಮಾಣದ ನೀತಿಯ ಅಳತೆಯ ಮಟ್ಟಕ್ಕೆ ಬರಲಿಲ್ಲ. ಆದಕಾರಣ ತನಗಾಗಿ ಶುದ್ಧ ಸಾಕ್ಷಿಯನ್ನು ಉಳಿಸಲು ಇಡೀ ಲೋಕವನ್ನೇ ದೇವರು ನಾಶಮಾಡಿದನು! ನೋಹನ ದಿವಸಗಳಲ್ಲಿ ನಡೆದ ಹಾಗೆಯೇ ಕಡೆಯ ದಿನಗಳಲ್ಲಿಯೂ ನಡೆಯುವದು ಎಂದು ಯೇಸು ಹೇಳಿದನು. ಆದುದರಿಂದ ಈ ಕಡೆಯ ಕಾಲದಲ್ಲಿ ದೇವರು ಸಂಖ್ಯೆಗಿಂತಲೂ ಶುದ್ಧತ್ವವನ್ನೇ ಹೆಚ್ಚಾಗಿ ಬಯಸುತ್ತಾನೆಂಬುದನ್ನು ನಾವು ಮರೆಯಬಾರದು.
ಅನಂತರ ದೇವರು ತಿರುಗಿ ಅಬ್ರಹಾಮನೆಂಬ ಒಬ್ಬ ಮನುಷ್ಯನ ಮೂಲಕ ಪ್ರಾರಂಭಿಸುತ್ತಾನೆ. ತನಗೋಸ್ಕರ ಒಂದು ಶುದ್ಧಸಾಕ್ಷಿಯನ್ನು ಉಂಟುಮಾಡಿ ಕೊಳ್ಳಲು ಅಬ್ರಹಾಮನು ತನ್ನ ಸಂಬಂಧಿಕರ ಮೂಲಕ ಕೆಟ್ಟು ಹೋಗಬಾರದೆಂದು ದೇವರು ಅವನನ್ನು ತನ್ನ ಊರಿನಿಂದ 10000 ಮೈಲುಗಳ ದೂರಕ್ಕೆ ಕರೆದುಕೊಂಡು ಹೋಗುತ್ತಾನೆ.[ಆದಿ 12] ನಾವು ನಮ್ಮ ಮಾರ್ಪಡದ ಅಥವಾ ಇಜ್ಜೋಡಾಗುವ ಸಂಬಂಧಿಕರ ಮಾನವೀಯತೆಗೆ ಅಂಟಿಕೊಂಡಿರುವವರಿಂದ ಸ್ವಷ್ಟವಾದ ಬಿಡುಗಡೆಯನ್ನು ಹೊಂದದಿದ್ದರೆ ದೇವರು ತನ್ನ ಉದ್ದೇಶವನ್ನು ನಮ್ಮಲ್ಲಿ ನೆರೆವೇರಿಸಲು ಸಾಧ್ಯವಿಲ್ಲ(ಲೂಕ 14: 26).
ವಾಗ್ದಾನದ ಮಗನನ್ನು ಐಗುಪ್ತದ ಹಾಗರಳ ಮುಖಾಂತರ ಪಡೆಯುವಂತೆ ಸೈತಾನನು ಅಬ್ರಹಾಮನನ್ನು ಪ್ರೇರೆಪಿಸುವದರ ಮುಲಕ ತಿರುಗಿ ಶುದ್ಧ ಸಾಕ್ಷಿಯನ್ನು ಕೆಡಿಸಲು ಪ್ರಯತ್ನಿಸುತ್ತಾನೆ.(ಆದಿ 16) ಆದರೆ ಅಬ್ರಹಾಮನು ತನ್ನ ಶಾರೀರಿಕ ಬಲದ ಅಂತ್ಯಕ್ಕೆ ಬರುವ ತನಕ ದೇವರು ತಾಳ್ಮೆಯಿಂದ ಕಾದಿದ್ದು ಅನಂತರ ನಿಜವಾದ ವಾಗ್ದಾನ ಪುತ್ರನಾದ ಇಸಾಕನನ್ನು ದಯಪಾಲಿಸುತ್ತಾನೆ. ಇಷ್ಮಾಯೇಲನು ಕೆಟ್ಟತನದ ಗುರುತಲ್ಲ ಆದರೆ ಸಭೆಯಲ್ಲಿ ಶುದ್ಧಸಾಕ್ಷಿಯನ್ನು ಕೆಡಿಸುವ ಶಾರೀರಿಕ ಪ್ರವೀಣತೆ ಹಾಗೂ ವಿವಿಧ ರೀತಿಯ ಕಲಾಕೌಶಲ್ಯವಾಗಿರುತ್ತದೆ. ಇಸಾಕನಂತೂ ನಿಜವಾದ ದೈವಿಕತ್ವಕ್ಕೆ ಗುರುತು. ಮಲಿನ ಮಾಡುವ ಶರೀರಾಧೀನ ಸ್ವಭಾವನ್ನು ಕ೦ಡುಹಿಡಿಯುವದು ಆಗಿದೆ. ದೇವರ ಕೆಲಸಕ್ಕೆ ಅಡ್ಡಿ ಮಾಡುವ ಶಾರೀರಿಕ ಸ್ವಭಾವನ್ನು ಗುರುತಿಸುವದು ಸುಲಭವಲ್ಲ.
ಇಸ್ರಾಯೇಲ್ಯರನ್ನು ಕಾನಾನ್ ದೇಶದಲ್ಲಿ ಸೈತಾನನು ತಿರುಗಿ ಶುದ್ಧಆಕಾನನ್ನು ಮೊಸ ಮಾಡುವದಕ್ಕೆ ಪ್ರೇಪಿಸುವದರ ಮುಖಾಂತರ ಪ್ರಯತ್ನಿಸಿದನು. ಆದರೆ ದೇವರು ಸರಿಯಾದ ರೀತಿಯಲ್ಲಿ ಕಂಡು ಹಿಡಿಯುವಂತೆ ಮಾಡಿ, ತನಗೊಸ್ಕರ ಶುದ್ಧ ಸಾಕ್ಷಿಯನ್ನು ಉಳಿಸಿಕೋಳ್ಳಲು ಆಕಾನನ್ನು ಕುಟುಂಬ ಸಹಿತವಾಗಿ ನಾಶಮಾಡಿದನು.
ಸೌಲನು ಇಸ್ರಾಯೇಲ್ಯರಿಗೆ ರಾಜನಾಗಿ ನೆಮಿಸಲ್ಪಟಾಗ, ಅವನು ನಮ್ರತೆ ಯುಳ್ಳವನಾಗಿದ್ದನು. ಆದರೆ ಸೈತಾನನು ತಿರುಗಿ ದೇವರ ಶುದ್ಧ ಸಾಕ್ಷಿಯನ್ನು ಭಂಗಪಡಿಸುವದಕ್ಕೆ ಪ್ರಯತ್ನಿಸಿದಾಗ ದೇವರು ತನ್ನ ಮನಸ್ಸಿಗೆ ಒಪ್ಪುವ ಮನುಷ್ಯನಾದ ದಾವೀದನನ್ನು ಕಂಡುಕೊಂಡನು (1 ಸಮು 15:16).
ಸೈತಾನನು ದಾವೀದನನ್ನು ಸಂಪೂರ್ಣವಾಗಿ ಭಂಗಪಡಿಸುವದರಲ್ಲಿ ಜಯಸದಿದ್ದರೂ, ಅವನ ಮಗನಾದ ಸೊಲೊಮೋನನ ಮುಖಾಂತರ ಸ್ತ್ರಿಯನ್ನು, ಹಣವನ್ನು, ಉಪಯೊಗಿಸಿ ಶುದ್ಧ ಸಾಕ್ಷಿಯನ್ನು ಭ೦ಗಪಡಿಸಿದನು. ಹೀಗೆ ಇಸ್ರಾಯೇಲ ದೇಶವು ಎರಡು ರಾಜ್ಯಗಳಾಗಿ ವಿಭಾಗಿಸಲ್ಪಟಿತು.
ಆನಂತರ ನಾಲ್ಕು ಶತಮಾನಗಳವರೆಗೆ ದೇವರು ತನ್ನ ಪ್ರವಾದಿಯನ್ನು ತಿರುಗಿ ತಿರುಗಿ ಇಸ್ರಾಯೇಲ್ಯರಿಗೆ ಕಳುಹಿಸುತ್ತಿದ್ದನು. ಆದರೆ ಅವರು ಆತನ ಪ್ರವಾದಿಗಳನ್ನು ಹೀನೈಸಿದರು ಮತ್ತು ಅವರ ಎಚ್ಚರಿಕೆಗಳನ್ನು ತಿರಸ್ಕರಿಸಿದರು. ಅದರ ಫಲವಾಗಿ ದೇವರ ನ್ಯಾಯತೀರ್ಪು ಅವರ ಮೇಲೆ ಬಂದು, ಅವರು ಸೆರೆಯಾಗಿ ಬಾಬೆಲಿಗೆ ಒಯ್ಯಲ್ಪಟ್ಟರು (2 ಪೂರ್ವಕಾಲ. 36:15,16).
ಸೆರೆಯಾಗಿ ಒಯ್ಯಲ್ಪಟ್ಟು ಬಾಬಿಲೋನಿನಲ್ಲಿ ಇದ್ದ ತನ್ನ ಜನರಿಗೆ, ದೇವರು ತನಗಿದ್ದ ಶುದ್ದ ಸಾಕ್ಷಿಯ ಬಯಕೆಯನ್ನು ಯೆಹೆಜ್ಕೇಲನ ಮುಖಾಂತರ ಪ್ರಕಟಿಸುತ್ತಾನೆ(ಯೆಹೆ. 43:12) ಅನ್ಯ ಜನಾಂಗದ ಆ ರಾಜ್ಯದಲ್ಲಿ ದೇವರಿಗಾಗಿ ಶುದ್ದ ಸಾಕ್ಷಿಯನ್ನು ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ದೇವರೊಟ್ಟಿಗಿದ್ದರು (ದಾನಿ. ೧:೮). ಬಹು ಸಂಖ್ಯೆಯಲ್ಲಿ ದೇವಜನರು ಸೆರೆಯಾಗಿ ಒಯ್ಯಲ್ಪಟ್ಟರೂ ಶುದ್ಧ ಸಾಕ್ಷಿಯುಳ್ಳವರಾಗಿ ಸತ್ಯಕ್ಕೆ ನಿಂತವರು ನಾಲ್ಕು ಯುವಕರು ಮಾತ್ರವೇ ಎಂದು ದಾನಿಯೇಲನ ಪುಸ್ತಕವು ಸ್ಪಷ್ಟವಾಗಿ ತಿಳಿಸುತ್ತದೆ.
ಕರ್ತನು ಮಲಾಕಿಯನ ಮುಖಾಂತರ ಇಸ್ರಾಯೇಲ್ಯರಿಗೆ ನೀಡಿದ ಕಡೆಯ ಸಂದೇಶವನ್ನು ನಾವು ಈಗಲೇ ನೋಡಿಕೊಂಡೆವು. ನಾನೂರು ವರ್ಷಗಳ ನಂತರ, ಶುದ್ಧತ್ವ ಎಂಬ ಅದೇ ಭಾರ, ಅದೇ ಸಂದೇಶದೊಂದಿಗೆ ದೇವರು ಸ್ನಾನಿಕನಾದ ಯೋಹಾನನ ಮುಖಾಂತರ ತಿರುಗಿ ಕಳುಹಿಸಿದನು. "ದೇವರ ಕಡೆಗೆ ತಿರುಗಿಕೊಳ್ಳಿರಿ" ಎಂಬುದೇ ಯೋಹಾನನ ಸಂದೇಶವಾಗಿತ್ತು. ಯೋಹಾನನು ಸೆರೆಗೆ ಹಾಕಲ್ಪಟ್ಟಾಗ ಯೇಸು ಅದೇ ಸಂದೇಶವನ್ನು ಸಾರಲಾರಂಭಿಸಿದನು (ಮತ್ತಾ 4: 12, 17). ಪರ್ವತ ಪ್ರಸಂಗದ ಇಡೀ ಸಾರಂಶವು ಶುದ್ಧತ್ವವೇ ಆಗಿದೆ. ಆ ಪ್ರಸಂಗದಲ್ಲಿ ಯೇಸು ಸ್ವಾಮಿಯು ಸುವಾರ್ತಾ ಸೇವೆಯನ್ನಾಗಲಿ ಸಮಾಜ ಸೇವೆಯುನ್ನಾಗಲಿ ಅಥವಾ ಯಾವುದೇ ಚಟುವಟಿಕೆಯನ್ನು ಒತ್ತಿ ಹೇಳದೆ, ಶುದ್ಧ ಹೃದಯವನ್ನೇ ಒತ್ತಿ ಹೇಳುತ್ತಾನೆಂಬುದನ್ನು ಗಮನಿಸಿರಿ.
ರೋಮಾಪುರದವರಿಗೆ ಬರೆದ ಪತ್ರಿಕೆಯಿಂದ ಯೂದನ ಪತ್ರಿಕೆಯವರಿಗೆ ವೈಯುಕ್ತಿಕ ಶುದ್ಧತ್ವ ಎಂಬ ಅದೇ ಸಾರಾಂಶವನ್ನೇ ತಿರುಗಿ ತಿರುಗಿ ಓದುತ್ತೇವೆ. "ಪರಿಪೂರ್ಣ ಸೇವೆ" ಮಾಡಬೇಕೆಂಬುದಾಗಿ ಅಥವಾ ಅನ್ಯಜನರನ್ನು ಮಾರ್ಪಡಿಸಬೇಕೆಂಬುದಾಗಿ ಒಂದೂ ಉಲ್ಲೇಖವು ಸಹ ಪ್ರತಿಕೆಯಲ್ಲಿ ಕಾಣುವದು ಕಷ್ಟಕರವಾಗಿದೆ. ಸಭೆಗಳಿಗೆ ಕರ್ತನು ಕಡೆಯ ಸಂದೇಶವನ್ನು ಕೊಡುವಾಗಲೂ ಪ್ರಕಟಣೆ 2 ಮತ್ತು 3ರಲ್ಲಿ ಅದೇ ಸಾರಾಂಶವನ್ನು ತಿರುಗಿ ನೋಡುತ್ತೇವೆ. ಸುವಾರ್ತಾ ಸೇವೆಯನ್ನು ಮಾಡದೆ ಇದ್ದ ಕಾರಣಕ್ಕಾಗಿ ಅಥವಾ ಸಮಾಜ ಸೇವೆಯನ್ನು ಮಾಡದೆ ಇದ್ದ ಕಾರಣಕ್ಕಾಗಿ ಯಾವ ಸಭೆಯೂ ಕರ್ತನಿಂದ ಗದರಿಸಲ್ಪಡದೆ, ತಮ್ಮ ಶುದ್ಧತ್ವ ಹಾಗೂ ಯೋಗ್ಯತೆಯಲ್ಲಿ ಕೊರತೆಯುಳ್ಳವರಾದ ಕಾರಣ ಗದರಿಸಲ್ಪಟ್ಟರು.
ಸತ್ಯವೇದದ ಅಂತ್ಯದಲ್ಲಿ, ದೇವರ ಹೃದಯದ ಬಯಕೆಯು 144.000 ಜನರಲ್ಲಿ ನೆರವೇರುವದನ್ನು ನಾವು ನೋಡುತ್ತೇವೆ. ಇವರು ಲೋಕದ ಎಲ್ಲಾ ಜನರಿಂದಲೂ[ ಎಲ್ಲಾ ಕಾಲದಿಂದಲೂ] ಆರಿಸಲ್ಪಟ್ಟವರು. ಇವರು ದೇವರ ಶುದ್ಧ ಸಾಕ್ಷಿಯ ಕರೆಗೆ ಮನಸ್ಸು ಕೊಟ್ಟು ತಮ್ಮ ಜೀವಿತವನ್ನು ಎಲ್ಲಾ ಕಪಟ ಹಾಗೂ ಲೌಕೀಕತನದಿಂದಲೂ ಶುದ್ಧಿ ಕರಿಸಿಕೊಂಡು ಶಿಲುಬೆಯ ಮಾರ್ಗದಲ್ಲಿ ಯಜ್ಞದ ಕುರಿಯಾದಾತನನ್ನು ಹಿಂಬಾಲಿಸಿದ ಇವರು ಕ್ರಿಸ್ತನ ಮದಲಗಿತ್ತಿಯಾಗುವಂತವರು( ಪ್ರಕಟಣೆ 14:1-5; 21:1,2,7 ಹಾಗು 9 ರಿಂದ 11) ಮದಲಗಿತ್ತಿಯ ಸಭೆಯು ಪರಿಶುದ್ಧವಾದದ್ದು (ಪ್ರಕ. 21:2) ಆದರೆ ಧಾರ್ಮಿಕ ಕ್ರೈಸ್ತತ್ವವು (ಜಾರಸ್ತೀಯ ಸಭೆಯು) ಸಂಖ್ಯೆಯಲ್ಲಿ ಮಹಾ ಜನಸಮೂಹವುಳ್ಳದ್ದಾಗಿತ್ತು (ಪ್ರಕ. 17:15).
ಇಂದು ನಮ್ಮ ಮುಂದೆ ಎರಡು ಮಾರ್ಗಗಳು ಇಡಲ್ಪಟ್ಟದೆ. ನಾವು ಯೋಗ್ಯತೆ [ಶುದ್ಧತ್ವ]ವನ್ನು ಅಥವಾ ಪ್ರಮಾಣ [ಸಂಖ್ಯೆ]ಯನ್ನು ಆರಿಸಿಕೊಳ್ಳುವ ಹಂಗಿನಲ್ಲಿದ್ದೇವೆ. ಆದಿಕಾಂಡದಿಂದ ಪ್ರಕಟಣೆಯವರೆಗೆ, ಶುದ್ಧಸಾಕ್ಷಿಯನ್ನು ಹೊಂದಿರಬೇಕೆಂಬ ದೇವರ ಬಯಕೆಯನ್ನು ನಾವು ಸ್ಪಷ್ಟವಾಗಿ ತಿಳಿದ ನಂತರವೂ, ಈ ಸಂದೇಶಕ್ಕೆ ನಾವು ಮನಸ್ಸು ಕೊಡದಿದ್ದರೆ, ಒಂದೇ ಒಂದು ಕಡೆ ಎಚ್ಚರಿಕೆಯನ್ನು ದೇವರು ನಮಗೆ ಪ್ರಕಟನೆ 22: 11 ರಲ್ಲಿ ಹೀಗೆ ಕೊಡುವವನಾಗಿದ್ದಾನೆ.
"ಅನ್ಯಾಯ ಮಾಡುವವನು ಇನ್ನು ಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನು ಮೈಲಿಗೆ ಮಾಡಿಕೊಳ್ಳಲಿ...." ದೇವರಾತ್ಮನು ಹೇಳುವದನ್ನು ಕೇಳುವದಕ್ಕೆ ಕಿವಿಯಿಲ್ಲದವರಿಗೆ ಯಾವ ನಿರೀಕ್ಷೆಯು ಇಲ್ಲ.
ದೇವರಾತ್ಮನು ಸುವಾರ್ತೆ ಸೇವೆಗೆ ಅಥವಾ ಸಮಾಜ ಸೇವೆಗೆ ವಿರುದ್ಧವಾಗಿಲ್ಲ ಎಂಬುದನ್ನು ಗಮನಿಸತಕ್ಕದು. ಆದರೆ ಅದೆ ಸಮಯದಲ್ಲಿ ಸ೦ಖ್ಯೆಗೆ ಪ್ರಾಮುಖ್ಯ ಕೊಟ್ಟು ಯೊಗ್ಯತೆಯನ್ನು ತಿರಸ್ಕರಿಸುವ ಅಶುದ್ಧ ಸಾಕ್ಷಿಯಲ್ಲಿ ದೇವರತ್ಮನಿಗೆ ಮೆಚಿಗೆಯಿಲ್ಲ. ಕಿವಿಯುಳ್ಳವರು ಕೇಳಲಿ.
" ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು. ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವದು." (1 ಕೋರಿ 3:13; 4:5).