ಸಂತೋಷಭರಿತ ಮದುವೆಯ ಜೀವಿತಕ್ಕಾಗಿ ಸಲಹೆ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
Article Body: 

Here is some advice for a happy marriage:
ಸಂತೋಷಭರಿತ ಮದುವೆಯ ಜೀವಿತಕ್ಕಾಗಿ ಇಲ್ಲಿವೆ ಕೆಲವೊಂದು ಸಲಹೆಗಳು:

First of all: Remember that your *wedding day* is *less than 1%* as important as your *marriage itself*.  So concentrate on your marriage, even if things did not go exactly as planned, on your wedding day.

ಮೊದಲನೆಯದಾಗಿ :  ನಿಮ್ಮ  ”ಮದುವೆಯ ದಿನವನ್ನು”  ನಿಮ್ಮ ಮದುವೆಯ ಜೀವಿತಕ್ಕೆ ಹೋಲಿಸಿದರೆ, ನಿಮ್ಮ ಮದುವೆಯ ದಿನವು ನಿಮ್ಮ ಮದುವೆಯ ಜೀವಿತಕ್ಕಿಂತ 1 %ಕ್ಕಿಂತಲೂ  ಕಡಿಮೆಯಾಗಿ ಪ್ರಮುಖವಾದುದ್ದಾಗಿದೆ ಎಂಬುದನ್ನು ನೆನಪಿಡಿರಿ.  ಹಾಗಾಗಿ  ನಿಮ್ಮ ಮದುವೆಯ  ದಿನದ ಕಾರ್ಯಗಳು ನೀವು ಯೋಜಿಸಿದ  ಪ್ರಕಾರ ನದೆಯದಿದ್ದಾಗಲೂ, ನಿಮ್ಮ ಮುಂದಿನ ಮದುವೆಯ ಜೀವಿತದ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿರಿ.

All your married life:
ನಿಮ್ಮ ಮದುವೆಯ ಜೀವನ ಪರ್ಯಂತ :

 • -          Put Christ FIRST always. Put each other second; your children third; and parents fourth
 • .

 • - ಯಾವಾಗಲೂ ಕ್ರಿಸ್ತನನ್ನು ”ಮೊದಲನ್ನಾಗಿರಿಸಿಕೊಳ್ಳಿರಿ”   ನಂತರ ಪರಸ್ಪರ ನಿಮ್ಮನ್ನು, ಅದ ನಂತರ ನಿಮ್ಮ ಮಕ್ಕಳನ್ನು ಹಾಗೂ ನಾಲ್ಕನೆಯದಾಗಿ ನಿಮ್ಮ ಪೋಷಕರನ್ನು  ಇಡಿರಿ
 • .

 • -          Husbands, *Never* give up the leadership of your home as its head
 • .

 • - ಗಂಡಂದಿರೇ : ನೀವು ನಿಮ್ಮ ಮನೆಯ (ಕುಟುಂಬದ) ತಲೆಯಾಗಿರುವುದರಿಂದ, ನಿಮ್ಮ ನಾಯಕತ್ವವನ್ನು ”ಎಂದಿಗೂ ” ಬಿಟ್ಟುಕೊಡಬೇಡಿರಿ
 • .

 • -          Wives: *Esteem* your husband always and allow him to be the leader
 • - ಹೆಂಡತಿಯರೇ,  ನಿಮ್ಮ ಗಂಡಂದಿರನ್ನು ಯಾವಾಗಲೂ  ”ಅತ್ಯಂತ ಗೌರವದಿಂದ ಕಾಣಿರಿ” ಮತ್ತು ಆತನು ನಾಯಕನಾಗಿರುವುದನ್ನು ಅನುಮತಿಸಿರಿ
 • .

 • -          Never get discouraged – especially when you discover that you are not perfect and that your partner is not perfect either
 • .

 • - ಎಂದಿಗೂ ನಿರುತ್ಸಾಹಗೊಳ್ಳಬೇಡಿ - ವಿಶೇಷವಾಗಿ ನೀವಾಗಲಿ ಮತ್ತು ನಿಮ್ಮ ಬಾಳ ಸಂಗಾತಿಯಾಗಲಿ ಪರಿಪೂರ್ಣರಾಗಿಲ್ಲ ಎಂಬುದನ್ನು ನೀವು ಗ್ರಹಿಸಿಕೊಂಡಾಗ
 • .

 • -          When you slip up (as you both will, many times), *be quick* to ask forgiveness from God and from each other, immediately. And don’t condemn yourself.
 • - ನೀವು ಜಾರಿ ಬಿದ್ದಾಗ (ಅನೇಕ ಬಾರಿ ನೀವು ಇಬ್ಬರೂ ಜಾರಿ ಬೀಳುತ್ತಿರುತ್ತೀರಿ),  ”ತಕ್ಷಣವೇ” ದೇವರಲ್ಲಿ ಕ್ಷಮೆ ಕೇಳಿಕೊಳ್ಳಿರಿ, ನಂತರ ಒಬ್ಬರಿಗೊಬ್ಬರೂ ಸಹ ಕ್ಷಮೆ ಕೇಳಿಕೊಳ್ಳಿರಿ ಮತ್ತು ನಿಮ್ಮನ್ನು ನೀವು ಖಂಡಿಸಿಕೊಳ್ಳಬೇಡಿರಿ.
 • -          Be quick to forgive each other; and then put the event behind you.
 • -   ಒಬ್ಬರಿಗೊಬ್ಬರು ತಕ್ಷಣ ಕ್ಷಮಿಸುವವರಾಗಿರಿ; ಮತ್ತು ಗತಿಸಿದ ಘಟನೆಯನ್ನು ಬಿಟ್ಟು ಹಾಕಿರಿ.
 • -         Never remind each other of past mistakes.
 • -  ನಿಮ್ಮಿಬ್ಬರ ಹಿಂದಿನ ತಪ್ಪುಗಳನ್ನು ಪರಸ್ಪರ ನೆನಪಿಸಬೇಡಿರಿ.
 • -          Remember past kindnesses, and don’t ever forget them.

 • -    ಹಿಂದಿನ ದಯೆ, ಕರುಣೆಗಳನ್ನು ನೆನಪಿಸಿಕೊಳ್ಳಿರಿ ಮತ್ತು ಅವುಗಳನ್ನು ಎಂದಿಗೂ ಮರೆಯಬೇಡಿರಿ.
 • -          Be thankful to God for the good things you see in each other and for all that your partner does for you. And express your gratitude to your partner as well.
 • - ನಿಮ್ಮಿಬ್ಬರಲ್ಲಿ ನೀವು ನೋಡಿದಂತ ಒಳ್ಳೆಯ ಸಂಗತಿಗಳಿಗಾಗಿ ಮತ್ತು ನಿಮ್ಮ ಬಾಳ ಸಂಗಾತಿಯು ನಿಮಗೆ ಮಾಡುವ ಸಂಗತಿಗಳಿಗಾಗಿ ದೇವರಿಗೆ ಕೃತಜ್ಞತರಾಗಿರಿ ಮತ್ತು ನಿಮ್ಮ ಬಾಳ ಸಂಗಾತಿಗೂ ಸಹ ಕೃತಜ್ಞತೆಗಳನ್ನು ಸಲ್ಲಿಸುವವರಾಗಿರಿ.
 • -          Ask the Holy Spirit to fill you with Christ-like love for each other (Romans 5:5)
 • .

 • - ಒಬ್ಬರಿಗೊಬ್ಬರು ಕ್ರಿಸ್ತನ ಪ್ರೀತಿಯಿಂದ ತುಂಬುವಂತೆ ಪವಿತ್ರಾತ್ಮನಲ್ಲಿ ಕೇಳಿಕೊಳ್ಳಿರಿ (ರೋಮ 5:5)
 • .

 • -          In provocative situations at home, die to Self – and react as Christ would
 • .

 • - ಕುಟುಂಬದಲ್ಲಿ ಕೆರಳುವಂತ ಪರಿಸ್ಥಿತಿಗಳು ಎದುರಾದಾಗ ಒಬ್ಬರಿಗೊಬ್ಬರು ಸ್ವಾರ್ಥಕ್ಕೆ ಸಾಯಿರಿ ಮತ್ತು ಕ್ರಿಸ್ತನು ಪ್ರತಿಕ್ರಯಿಸುವ ರೀತಿಯಲ್ಲಿಯೇ ನೀವೂ ಪ್ರತಿಕ್ರಯಿಸಿರಿ
 • .

 • -          Seek to eliminate murmuring and grumbling from your home *completely* – as otherwise, it will slowly destroy your marriage
 • .

 • - ನಿಮ್ಮ ಕುಟುಂಬದಲ್ಲಿನ ಎಲ್ಲಾ ಗೊಣಗುಟ್ಟುವಿಕೆಯನ್ನು ಮತ್ತು ಪರ್ಸ್ಪರ ದೂರುವಿಕೆಯನ್ನು ”ಸಂಪೂರ್ಣವಾಗಿ” ತೆಗೆದು ಹಾಕಿರಿ, ಇಲ್ಲವಾದಲ್ಲಿ ಇವು ನಿಮ್ಮ ಮದುವೆಯ ಜೀವಿತವನ್ನು ನಿಧಾನವಾಗಿ ನಾಶ ಮಾಡುತ್ತವೆ
 • .

 • -          *Use* money and material things – but *don’t love* them, because that will ruin you
 • .

 • - ಹಣ ಮತ್ತು ಭೌತಿಕ ಸಂಗತಿಗಳನ್ನು ”ಉಪಯೋಗಿಸಿ” ಆದರೆ ಅವುಗಳನ್ನು ”ಪ್ರೀತಿಸಬೇಡಿರಿ”, ಏಕೆಂದರೆ ಅವು ನಿಮ್ಮನ್ನು ಹಾಳು ಮಾಡುತ್ತವೆ
 • .
 • -          When God blesses your home in some way, give Him alone *all* the credit for it
 • .

 • - ನಿಮ್ಮ ಕುಟುಂಬವನ್ನು ದೇವರು ಯಾವುದೋ ಒಂದು ವಿಧದಲ್ಲಿ ಆಶೀರ್ವದಿಸಿದಾಗ, ದೇವರಿಗೇ ಎಲ್ಲಾ ಮಹಿಮೆಯನ್ನು ಸಲ್ಲಿಸಿರಿ
 • .

 • -          Develop the habit of gentleness in your conversation with each other
 • .

 • -   ನಿಮ್ಮ ಪರಸ್ಪರ ಸಂಭಾಷಣೆಯಲ್ಲಿ ಮೃದುತನದ (ದೀನತೆಯ) ಹವ್ಯಾಸವನ್ನು ಬೆಳೆಸಿಕೊಳ್ಳಿರಿ
 • .

 • -          Don’t gossip about people’s failures in your home, but learn from their failures as warnings for yourself
 • .

 • - ಇತರ ಜನರ  ಸೋಲುಗಳ ಬಗ್ಗೆ ನಿಮ್ಮ ಕುಟುಂಬದಲ್ಲಿ  ಮಾತನಾಡಬೇಡಿರಿ, ಆದರೆ  ಅವರ ಸೋಲುಗಳಿಂದ ಎಚ್ಚರವಾಗಿರುವುದನ್ನು ನೀವು  ಕಲಿತುಕೊಳ್ಳಿರಿ
 • .

 • -          Be absolutely faithful to your partner. Never compare your partner with anyone else, even for a moment. Be *faithful* to each other, even in your thoughts.
 • -  ನಿಮ್ಮ ಬಾಳ ಸಂಗಾತಿಗೆ ಸಂಪೂರ್ಣವಾಗಿ ನಂಬಿಗಸ್ಥರಾಗಿರಿ. ನಿಮ್ಮ ಬಾಳ ಸಂಗಾತಿಯನ್ನು ಮತ್ತೊಬ್ಬರೊಟ್ಟಿಗೆ ಒಂದು ಕ್ಷಣ ಸಹ ಹೋಲಿಸಬೇಡಿರಿ.  ನಿಮ್ಮ ಆಲೋಚನೆಗಳಲ್ಲೂ ಸಹ ಒಬ್ಬರಿಗೊಬ್ಬರು ''ನಂಬಿಗಸ್ಥರಾಗಿರಿ''.
 • -          Remember that God has ordained the physical union of your bodies to be an expression of your *pure and faithful love* for each other. Keep it that way always.
 • - ನೀವು ಪರಸ್ಪರ ”ಶುದ್ಧ ಮತ್ತು ನಂಬಿಗಸ್ಥಿಕೆಯ ಪ್ರೀತಿ” ಯನ್ನು ಹೊಂದಿರುವುದರ ಗುರುತಾಗಿ.  ದೇವರು ನಿಮ್ಮ ಶರೀರಗಳನ್ನು ಒಗ್ಗೂಡಿಸಿದ್ದಾನೆ ಎಂಬುದನ್ನು ನೆನಪಿಡಿರಿ. ಈ ಸಂಬಂಧವನ್ನು ಯಾವಾಗಲೂ ಹೀಗೆಯೇ ಇಟ್ಟುಕೊಳ್ಳಿರಿ.
 • -          Trust God to see you through every difficult situation.
 • -  ನಿಮ್ಮ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳಲ್ಲಿ ದೇವರು ನಿಮ್ಮನ್ನು ಮುನ್ನಡೆಸುತ್ತಾನೆ ಎಂದು ದೇವರಲ್ಲಿಭರವಸೆಯಿಡಿರಿ.
 • -          Value fellowship with God’s people in your local church.
 • - ನಿಮ್ಮ ಸ್ಥಳೀಯ ಸಭೆಯಲ್ಲಿನ ದೇವ ಜನರೊಂದಿಗಿನ ಅನ್ಯೋನ್ಯತೆಯನ್ನು ಮೌಲ್ಯವೆಂದೆಣಿಸಿರಿ.
 • -          Remember that the path to a good marriage is a long one. But “the journey of a thousand miles is made one step at a time”. So keep going forward always.
 • - ಒಳ್ಳೆಯ ಮದುವೆಯ ಜೀವಿತದ ಹಾದಿಯು ತುಂಬಾ ದೂರವಾದುದು ಎಂಬುದನ್ನು ನೆನಪಿಡಿರಿ. ಆದರೆ ''ಸಾವಿರ ಮೈಲುಗಳ  ಪ್ರಯಾಣವು ಒಂದು ಬಾರಿ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ'' ಆದುದರಿಂದ  ಯಾವಾಗಲೂ ಮುಂದಕ್ಕೆ ಸಾಗುವವರಾಗಿರಿ.
 • -          Remember that the Lord is always on your side – and He is ever ready to help you.
 • - ದೇವರ ನಿಮ್ಮ ಪರವಾಗಿ ಇದ್ದಾನೆ ಮತ್ತು ನಿಮಗೆ ಎಂದಿಗೂ ನೆರವಾಗಲು ಸಿದ್ಧನಿದ್ದಾನೆ ಎಂಬುದನ್ನು ಯಾವಾಗಲೂ ನೆನಪಿಡಿರಿ.
 • This is not a complete list. But it can help you to make a good beginning towards a glorious Christ-centred marriage. May the Lord encourage you to press on towards perfection.
 • ಇದು ಸಂಪೂರ್ಣವಾದ ಪಟ್ಟಿಯಲ್ಲ. ಆದರೆ ದೈವ- ಕೇಂದ್ರೀಕೃತವಾದ ಮಹಿಮಾಭರಿತ ಮದುವೆಯ ಜೀವಿತವನ್ನು ಒಳ್ಳೆಯದಾಗಿ ಪ್ರಾರಂಭಿಸಲು ಇದು ನಿಮಗೆ ಸಹಾಯ ಮಾಡಬಹುದು. ನೀವು ಪರಿಪೂರ್ಣತೆಯ ಕಡೆಗೆ ಸಾಗುವಂತೆ ಕರ್ತನು ನಿಮಗೆ ಸಹಾಯ ಮಾಡಲಿ.