1) ಯೇಸು ನಮ್ಮನ್ನು ಪಾಪದಿಂದ ರಕ್ಷಿಸಲು ಬಂದರು (ಮತ್ತಾಯ 1:21). ಕ್ಷಮೆಯೇ ದ್ವಾರ. ನಂತರ ಮಾರ್ಗ ಬರುತ್ತದೆ ಅದೇ "ರಕ್ಷಣೆ" - ಅದು ಜೀವಕ್ಕೆ ನಡೆಸುತ್ತದೆ. ಬಹಳ ಕಡಿಮೆ ಜನರು ಮಾತ್ರ ಮಾರ್ಗವನ್ನು ಕಂಡುಕೊಳ್ಳುತ್ತಾರೆ (ಮತ್ತಾಯ 7:14). ಹೆಚ್ಚಿನ ವಿಶ್ವಾಸಿಗಳು ಯೇಸುವನ್ನು ಕ್ಷಮಿಸುವವನನ್ನಾಗಿ ಮಾತ್ರ ತಿಳಿದಿದ್ದಾರೆ, ರಕ್ಷಕನಾಗಿ ಅಲ್ಲ, ಏಕೆಂದರೆ ಅವರು ಅಶುದ್ಧ ಆಲೋಚನೆಗಳು, ಕೋಪ ಮತ್ತು ಹಣದ ಪ್ರೀತಿಯಿಂದ ರಕ್ಷಿಸಲ್ಪಟ್ಟಿಲ್ಲ. ನಿಮ್ಮ ಪಾಪಗಳನ್ನು ಕ್ಷಮಿಸುವ, ಆದರೆ ಕೋಪ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ಬಿಡುಗಡೆ ಮಾಡಲು ಸಾಧ್ಯವಾಗದ ಯೇಸು ಒಬ್ಬ "ಸುಳ್ಳು ಯೇಸು" - 2 ಕೊರಿಂಥ 11:4. ನಿಜವಾದ ಯೇಸು ನಮ್ಮನ್ನು ಪಾಪದಿಂದ ರಕ್ಷಿಸುತ್ತಾನೆ.
2) ನಾವು ಇತರರನ್ನು ಹೇಗೆ ನಡೆಸಿಕೊಳ್ಳುತ್ತೇವೋ, ಹಾಗೆಯೇ ದೇವರು ನಮ್ಮನ್ನು ನಡೆಸಿಕೊಳ್ಳುತ್ತಾನೆ. ನಾವು ಇತರರನ್ನು ಪ್ರೋತ್ಸಾಹಿಸಿದರೆ, ಆತನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ನಾವು ಇತರರ ಮೇಲೆ ಕಠಿಣವಾಗಿ ವರ್ತಿಸಿದರೆ, ಆತನು ನಮ್ಮ ಮೇಲೆ ಕಠಿಣವಾಗಿ ವರ್ತಿಸುತ್ತಾನೆ.
3)ನಿಮ್ಮ ಸ್ವಂತ ಮನೆಯಲ್ಲಿ ನಿಮ್ಮನ್ನು ಪಾಪದಿಂದ ರಕ್ಷಿಸದ ಸುವಾರ್ತೆಯನ್ನು ಲೋಕಕ್ಕೆ ಸಾರಬೇಡಿ. ಮೊದಲು ಯೆರುಸಲೇಮ್ (ನಿಮ್ಮ ಮನೆ), ನಂತರ ಬೇರೆಡೆ (ಅಪೊಸ್ತಲರ ಕೃತ್ಯಗಳು 1:8).
4) ದೇವರು ಆರಾಧಕರನ್ನು ಹುಡುಕುತ್ತಾನೆ (ಯೋಹಾನ 4:23). ಆರಾಧನೆಯು ಕೃತಜ್ಞತೆ ಮತ್ತು ಸ್ತುತಿಗಿಂತ ಹೆಚ್ಚಿನದಾಗಿದೆ. ಅದು ಇಹಲೋಕದಲ್ಲಿ ಯೇಸುವನ್ನು ಹೊರತುಪಡಿಸಿ ಬೇರೇನನ್ನೂ ಮತ್ತು ಯಾರನ್ನೂ ಬಯಸದೇ ಇರುವುದಾಗಿದೆ (ಕೀರ್ತನೆ 73:25)
5) ರೋಮ. 8:28: ಎಲ್ಲವೂನಮ್ಮ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ. ಆದ್ದರಿಂದ ನಾವು ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸದಿದ್ದರೆ - ಎಫೆಸ. 5:20 - ಒಂದೋ ನಾವು ರೋಮ. 8:28 ಅನ್ನು ನಂಬುವುದಿಲ್ಲ ಅಥವಾ ನಾವು ದೇವರನ್ನು ಪ್ರೀತಿಸುವುದಿಲ್ಲ.
6) ನಾವು ಕೃಪೆಯಲ್ಲಿ ಬೆಳೆಯುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಒಂದು ಖಚಿತವಾದ ಮಾರ್ಗವೆಂದರೆ, ನಮ್ಮ ಮನಸ್ಸಾಕ್ಷಿಯು ಹಿಂದೆಂದೂ ನಮ್ಮನ್ನು ತೊಂದರೆಗೊಳಿಸದ ವಿಷಯಗಳ ಬಗ್ಗೆ ನಮ್ಮನ್ನು ತೊಂದರೆಗೆ ಒಳಪಡಿಸಲು ಪ್ರಾರಂಭಿಸಿದಾಗ.
7) ಅತ್ಯಂತ ಪರಿಶುದ್ಧವಾದ ಆನಂದವು ನಿಮ್ಮ ತಂದೆಯಂತಿರುವ ದೇವರೊಂದಿಗಿನ ಅನ್ಯೋನ್ಯತೆಯಿಂದ ಕಂಡುಬರುತ್ತದೆ (ಕೀರ್ತನೆಗಳು 16:11) - ಸಂಪತ್ತು ಅಥವಾ ಆರೋಗ್ಯ, ಅಥವಾ ಪಾಪ, ಸೈತಾನ ಮತ್ತು ಲೋಕವನ್ನು ಜಯಿಸುವುದರಲ್ಲಿ ಬರುವುದಿಲ್ಲ.
8) ಆತ್ಮದಲ್ಲಿ ಬಡವರು ಎಂದರೆ ಪ್ರಾಥಮಿಕವಾಗಿತಮ್ಮ ಸ್ವಂತಅಗತ್ಯಗಳ ಅರಿವು ಇರುವವರು. ಆದ್ದರಿಂದ ಅವರು ದೇವರ ಕೃಪೆಯನ್ನು ಹುಡುಕುತ್ತಾರೆ ಮತ್ತು ಹೀಗೆ ಯಾವಾಗಲೂ ಆತನ ಅತ್ಯುತ್ತಮವಾದದ್ದನ್ನು ಪಡೆಯುತ್ತಾರೆ (ಮತ್ತಾಯ 5:3).
9) ನಮ್ಮ ಮಾತು ನಮ್ಮ ಹೃದಯದ ನಿಜವಾದ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ (ಮತ್ತಾಯ 12:34). ಯಾರಾದರೂ ತಮ್ಮ ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅವರ ಕ್ರೈಸ್ತತ್ವವು ಶೂನ್ಯಕ್ಕೆಯೋಗ್ಯವಾಗಿದೆ (ಯಾಕೋಬ 1:26).
10) ಒಬ್ಬ ಆತ್ಮಿಕ ಪುರುಷನು ಮಹಿಳೆಯರು, ಹಣ, ಭೌತಿಕ ವಸ್ತುಗಳು ಮತ್ತು ಸಂದರ್ಭಗಳನ್ನುಯೇಸು ನೋಡಿದ ರೀತಿಯಲ್ಲಿ ನೋಡುತ್ತಾನೆ. ಆದ್ದರಿಂದ ಈ ಕ್ಷೇತ್ರಗಳಲ್ಲಿ ನಿಮ್ಮನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಿ.
11) ಒಂದು ಕ್ಷೇತ್ರದಲ್ಲಿ ನಮಗೆ ಕ್ರಿಸ್ತನ ಮನಸ್ಸು ಇಲ್ಲ ಎಂದು ನಾವು ನೋಡಿದಾಗ, ನಾವು ಮನಾಸಾಂತರಪಡಬೇಕು ಮತ್ತು ಅದನ್ನು ಹೊಂದುವವರೆಗೆನಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು (2 ಕೊರಿಂಥ 7:1 & ರೋಮ 8:29; 12:2 ನೋಡಿ)
12) ಎಲ್ಲರನ್ನೂ ಕ್ಷಮಿಸುವುದು ನಿಜವಾದ ನಂಬಿಕೆಯ ಮೊದಲ ಹೆಜ್ಜೆ. ಆಗ ನೀವು ಬೆಟ್ಟಕ್ಕೆ ನಿಮ್ಮ ದಾರಿಯಿಂದ ಕಿತ್ತುಕೊಂಡು ಹೋಗುವಂತೆ ಆಜ್ಞಾಪಿಸಲು ಸಾಧ್ಯವಾಗಬಹುದು (ಮಾರ್ಕ 11:22-25).
13) ನಾವು ದೇವರ ಮಹಿಮೆಗಾಗಿ ಅಲ್ಲ, ನಮಗಾಗಿಯೇ ಸ್ವಾರ್ಥದಿಂದ ಜೀವಿಸಿದರೆ, ನಮ್ಮ ಜೀವಿತದ ನೆನಪು ಪರಲೋಕದಲ್ಲಿಯೂ ವಿಷಾದವನ್ನು ತರುತ್ತದೆ (2 ಕೊರಿಂಥ 5:10; 1 ಕೊರಿಂಥ 3:15).
14) ನಾವು ದೇವರ ಪ್ರೀತಿಯಲ್ಲಿ ಮತ್ತು ನಮ್ಮ ಜೀವಿತಕ್ಕಾಗಿ ಆತನು ಹೊಂದಿರುವ ಯೋಜನೆಯಲ್ಲಿ ಸುರಕ್ಷಿತವಾಗಿರುವಾಗ, ನಾವು ಎಂದಿಗೂ ಯಾರನ್ನೂ ತೀರ್ಪು ಮಾಡುವುದಿಲ್ಲ ಅಥವಾ ಯಾರ ಮೇಲೂ ಅಸೂಯೆ ಪಡುವುದಿಲ್ಲ ಅಥವಾ ಯಾರೊಂದಿಗೂ ಸ್ಪರ್ಧಿಸುವುದಿಲ್ಲ.
15) ಇತರರ ಬಗ್ಗೆ ಕರುಣೆ ಇರುವವರು ಮಾತ್ರ ದೇವಜನರ ನಾಯಕರಾಗಲು ಅರ್ಹರಾಗಿರುತ್ತಾರೆ. ಅವರು ಮಾತ್ರ ಇತರರನ್ನು ಜೀವಜಲದ ಬುಗ್ಗೆಗಳಿಗೆ ಕರೆದೊಯ್ಯಬಲ್ಲರು (ಯೆಶಾಯ 49:10)
.
16) ಯೇಸು ಮನೆಯಲ್ಲಿ ಮತ್ತು ತನ್ನ ಕೆಲಸದ ಸ್ಥಳದಲ್ಲಿ (ಬಡಗಿಯ ಅಂಗಡಿ) ನಂಬಿಗಸ್ಥನಾಗಿದ್ದುದರಿಂದ ಜ್ಞಾನದಲ್ಲಿ ಬೆಳೆದರು (ಲೂಕ 2:40,52). ನಾವು ಸಹ ಜ್ಞಾನದಲ್ಲಿ ಬೆಳೆಯುವ ರೀತಿ ಇದೇ ಆಗಿದೆ.
17) ನಿಜವಾಗಿಯೂ ದೀನನಾದ ವ್ಯಕ್ತಿಯು ಪ್ರತಿಯೊಂದು ಪಾಪವನ್ನು ಜಯಿಸಿ ಯಾವಾಗಲೂ ವಿಜಯೋತ್ಸವದಲ್ಲಿ ನಡೆಯಬಹುದಾದಂತಹ ಕೃಪೆಯನ್ನು ದೇವರಿಂದ ಪಡೆಯುತ್ತಾನೆ, ಸೈತಾನನು ಸಹ ಅಂತಹ ವ್ಯಕ್ತಿಗೆ ಹೆದರುತ್ತಾನೆ. (1 ಪೇತ್ರ 5:5; ಮತ್ತು ರೋಮ 6:14).
18) ಗರ್ವವುಳ್ಳಂತ ಜನರ ಒಂದು ಲಕ್ಷಣವೆಂದರೆ, ಇತರರಲ್ಲಿ ನಿಜವಾಗಿಯೂ ಒಳ್ಳೆಯದನ್ನು ಕಂಡಾಗಲೂ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲು ಕಷ್ಟವಾಗುತ್ತದೆ.
19) ಪಾಪವನ್ನು ಅತಿಯಾಗಿ ದ್ವೇಷಿಸುವ ಜನರನ್ನು ದೇವರು ಹುಡುಕುತ್ತಿದ್ದಾರೆ, ಅಂಥವರು ತಮ್ಮ ನಾಲಿಗೆಯಿಂದ ಅಥವಾ ಆಲೋಚನೆಗಳಿಂದ ಅಥವಾ ವರ್ತನೆಗಳಿಂದ ಪಾಪ ಮಾಡುವ ಬದಲು ಸಾಯುವುದೇ ಲೇಸು ಎಂದು ಭಾವಿಸುತ್ತಾರೆ.
20) ನಾವು ಒಂದು ಸತ್ಯವನ್ನು ಅರ್ಥಮಾಡಿಕೊಂಡಾಗಮತ್ತು ಅದರ ಬಗ್ಗೆ ಉತ್ಸುಕರಾದಾಗ,ನಾವು ಇನ್ನೂ ಮರಳಿನ ಅಡಿಪಾಯದ ಮೇಲೆ ಇರುತ್ತೇವೆ. ನಾವು ಆ ಸತ್ಯಕ್ಕೆ ವಿಧೇಯರಾದಾಗಮಾತ್ರ ನಾವು ಬಂಡೆಯ ಮೇಲೆ ನಿರ್ಮಿಸುತ್ತೇವೆ.
21) ಒಬ್ಬ ವಿಶ್ವಾಸಿಗೆ ಅನೇಕ ವಿಷಯಗಳು ನ್ಯಾಯಸಮ್ಮತವಾಗಿದೆ- ಉತ್ತಮ ಆಹಾರ, ಸಂಗೀತ ಮತ್ತು ಕ್ರೀಡೆಗಳಂತೆ. ಆದರೆ ಅವುಗಳಲ್ಲಿ ಯಾವುದೂ ನಮ್ಮ ಯಜಮಾನನಾಗಲು ನಾವು ಬಿಡಬಾರದು (1 ಕೊರಿಂಥ 6:12).
22) ವಾಕ್ಯದ ಜ್ಞಾನಕ್ಕೂ ಮತ್ತು ಪವಿತ್ರಾತ್ಮನ ಪ್ರಕಟನೆಗೂ ಅಗಾಧ ವ್ಯತ್ಯಾಸವಿದೆ. ಪ್ರಕಟನೆಯು ನಮ್ಮ ಮೌಲ್ಯಗಳನ್ನು ಮತ್ತು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತದೆ.
23) ಇಸ್ರೇಲ್ ಯೆಹೋವನನ್ನು ಸೇವಿಸಬೇಕೆ ಅಥವಾ ಬಾಳನನ್ನು ಸೇವಿಸಬೇಕೆ ಎಂದು ಆಯ್ಕೆ ಮಾಡಬೇಕಾಗಿತ್ತು. ನಾವು ಕ್ರಿಸ್ತನನ್ನು ಪ್ರೀತಿಸಬೇಕೆ ಅಥವಾ ಹಣವನ್ನು ಪ್ರೀತಿಸಬೇಕೆ ಎಂದು ಆಯ್ಕೆ ಮಾಡಬೇಕು. ನಾವು ಎರಡನ್ನೂ ಪ್ರೀತಿಸಲು ಸಾಧ್ಯವಿಲ್ಲ.
24) ದೇವರು ನಮ್ಮ ಮೂಲಕ ತನ್ನ ಉದ್ದೇಶವನ್ನು ಪೂರೈಸುವ ಮೊದಲು ನಮ್ಮನ್ನು ಶೂನ್ಯ ಸ್ಥಾನಕ್ಕೆ ತರಬೇಕು. ನೀವು ಏನೂ ಅಲ್ಲದಿರುವಾಗ ನೀವು ಏನೋ ಆಗಿದ್ದೇನೆಂದು ಎಂದು ಊಹಿಸಬೇಡಿ - ಗಲಾತ್ಯ. 6:3.
25) ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರ ಮತ್ತು ನಿಮ್ಮ ಎಲ್ಲಾ ಮಹತ್ವಾಕಾಂಕ್ಷೆಗಳನ್ನು ದೇವರಿಗೆ ಒಪ್ಪಿಸಿದರೆ ಸೈತಾನನು ಯಾವಾಗಲೂ ನಿಮ್ಮಿಂದ ಓಡಿಹೋಗುತ್ತಾನೆ. ಆದ್ದರಿಂದ, ಯೇಸುವಿನ ಹೆಸರಿನಲ್ಲಿ ಸೈತಾನನನ್ನು ವಿರೋಧಿಸಿ (ಯಾಕೋಬ 4:7).
26) ನಾವು ಒಮ್ಮೆ ಪಾಪಗಳನ್ನು ಅರಿಕೆಮಾಡಿದರೆ ದೇವರು ಅವುಗಳನ್ನು ಮತ್ತೊಮ್ಮೆ ಎಂದಿಗೂ ನೆನಪಿಗೆ ತರುವುದಿಲ್ಲ- ಇಬ್ರಿಯ 8:12. ಆದರೆ ನಾವು ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು, ಇಲ್ಲದಿದ್ದರೆ ನಾವು ಆತ್ಮಿಕವಾಗಿ ಕುರುಡರಾಗುತ್ತೇವೆ - 2 ಪೇತ್ರ 1:9.
27) ಬೆಳಕಿನಲ್ಲಿ ನಡೆಯುವುದೆಂದರೆ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುವುದು ಮತ್ತು ನಮ್ಮ ಪಾಪಗಳಿಗಾಗಿ ಸಂಪೂರ್ಣವಾಗಿ ದೂಷಣೆಯನ್ನು ತೆಗೆದುಕೊಳ್ಳುವುದಾಗಿದೆ. ಹೀಗೆ ಮಾಡುವುದರಿಂದ ಮಾತ್ರ ನಾವು ದೇವರೊಂದಿಗೆ ಅನ್ಯೋನ್ಯತೆಯನ್ನು ಹೊಂದಬಹುದು - 1 ಯೋಹಾನ 1:7.
28) ನಾವು ಸತ್ಯವೇದದ ವಚನಗಳ ಅಕ್ಷರಗಳಿಗೆ ಅಂಟಿಕೊಳ್ಳುವವರಾಗಿದ್ದರೂ, ದೇವರನ್ನು ಮತ್ತು ಎಲ್ಲಾ ಜನರನ್ನು ಪ್ರೀತಿಸುವ ಮನೋಭಾವವನ್ನು ನಿರಾಕರಿಸಿದರೆ, ನಮಗೆ ಕೇವಲ ಬಲಹೀನವಾದ ದೈವಿಕತೆ ಇರುತ್ತದೆ.
29) ಸುವಾರ್ತೆಯನ್ನು ಸಾರುವುದರಿಂದ ಪೇತ್ರ ಅಥವಾ ಪೌಲರು ಭೌತಿಕವಾಗಿ ಶ್ರೀಮಂತರಾಗಲಿಲ್ಲ. ಸುವಾರ್ತೆಯನ್ನು ಸಾರುವುದರಿಂದ ಯಾರಾದರೂ ಶ್ರೀಮಂತರಾಗಿದ್ದರೆ, ಅವರು ಇನ್ನೊಂದು ಸುವಾರ್ತೆಯನ್ನು ಮತ್ತು ಇನ್ನೊಂದು ಯೇಸುವನ್ನು ಸಾರುತ್ತಿರಬಹುದು.
30) ಇತರರು ಬಳಲಿದಾಗ ಅವರೊಂದಿಗೆ ದುಃಖಿಸುವುದು ಸುಲಭ. ಆದರೆ ನಮ್ಮ ಆತ್ಮಿಕತೆಯ ಪರೀಕ್ಷೆಯೆಂದರೆ ಅವರು ಗೌರವಿಸಲ್ಪಟ್ಟಾಗ ನಾವು ಅವರೊಂದಿಗೆ ಸಂತೋಷಪಡಬಹುದೇ ಎಂಬುದಾಗಿದೆ.
31) ಯೇಸು ತನ್ನ ಬಳಿಗೆ ನಂಬಿಕೆಯಿಂದಸಮಸ್ಯೆಯೊಂದಿಗೆ ಬಂದ ಯಾರಿಗೂ ಅದನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಲಿಲ್ಲ. ಆತನ ಬಲವು ಇಂದಿಗೂ ಹಾಗೆಯೇ ಇದೆ. ಆತನು ನಿಮಗೂ ಸಹಾಯ ಮಾಡಬಲ್ಲನು.
32) ಒಂದೇ ಒಂದು ಜೀವಿತ. ಅದು ಶೀಘ್ರದಲ್ಲೇ ಕಳೆದುಹೋಗುತ್ತದೆ. ಕ್ರಿಸ್ತನು ನಿಮ್ಮ ಮೂಲಕ ಏನು ಮಾಡಲು ಅನುಮತಿಸುತ್ತೀರೋ ಅದು ಮಾತ್ರ ಉಳಿಯುತ್ತದೆ. ನೀವು "ಕ್ರಿಸ್ತನಿಗಾಗಿ" ಏನು ಮಾಡುತ್ತೀರೋ ಅದು ಬೇರು ಸಹಿತ ಕಿತ್ತುಹೋಗಬಹುದು - ಮತ್ತಾ. 15:13
33) ನಾವು ಇತರ ವಿಶ್ವಾಸಿಗಳ ಮೇಲೆ ಆರೋಪ ಹೊರಿಸುವಾಗ, ನಾವು ಸೈತಾನನ ಸಹೋದ್ಯೋಗಿಗಳಾಗುತ್ತೇವೆ. ನಾವು ಅವರಿಗಾಗಿ ಪ್ರಾರ್ಥಿಸುವಾಗ, ನಾವು ಯೇಸುವಿನ ಸಹೋದ್ಯೋಗಿಗಳಾಗುತ್ತೇವೆ (ಪ್ರಕಟನೆ 12:10; ಇಬ್ರಿಯ 7:25).
34) ಕ್ರಿಸ್ತನ ದೇಹವಾಗಿ ಸ್ಥಳೀಯ ಸಭೆಯನ್ನು ನಿರ್ಮಿಸುವುದು ಕನ್ಯೆಯೊಬ್ಬರು ಮಗುವಿಗೆ ಜನ್ಮ ನೀಡುವಷ್ಟು ಅಸಾಧ್ಯ. ಇದನ್ನು ಪವಿತ್ರಾತ್ಮನ ಶಕ್ತಿಯ ಮೂಲಕ ಮಾತ್ರ ಮಾಡಲು ಸಾಧ್ಯ.
35) ನಿಜವಾದ ಕ್ರೈಸ್ತರಿಗೆ ಸ್ವಾರ್ಥದ ಮೇಲೆ ವಿಶ್ವಾಸವಿರುವುದಿಲ್ಲ ಮತ್ತು ಕ್ರಿಸ್ತನಿಲ್ಲದೆ ತಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುತ್ತಾರೆ - ಫಿಲಿಪ್ಪಿ 3:3; ಯೋಹಾನ 15:5. ಆದ್ದರಿಂದ ಅವರು ಯಾವಾಗಲೂ ಆತ್ಮದ ತುಂಬಲ್ಪಡುವಿಕೆಯನ್ನು ಹುಡುಕುತ್ತಾರೆ.
36) ನಾವು ನಿಂತರೆ ಅಥವಾ ಕುಳಿತರೆ ಬೀಳಬಹುದು. ಆದರೆ ನಾವು ನಮ್ಮ ಮುಖವನ್ನು ಧೂಳಿನಲ್ಲಿ ಇರಿಸಿಕೊಂಡಾಗ ನಾವು ಬೀಳುವುದಿಲ್ಲ. ಆದ್ದರಿಂದ ನಿಮ್ಮ ಮುಖವನ್ನು ಯಾವಾಗಲೂ ದೇವರ ಮುಂದೆ ಧೂಳಿನಲ್ಲಿ ಇರಿಸಿ, ಆಗ ನೀವು ಎಂದಿಗೂ ಬೀಳುವುದಿಲ್ಲ. ನೀವು ಆರಾಧಕರಾಗಿರುತ್ತೀರಿ.
37) ಹಿಂದೆ ಸತ್ಯವೇದವು ದೇವರ ವಾಕ್ಯ ಎಂದು ಸ್ಥಾಪಿಸಲು ನಾನು ಅನೇಕ ಪುರಾವೆಗಳನ್ನು ಬಳಸಿದ್ದೆ. ಇಂದು ನನ್ನ ಬಳಿ ಒಂದು ಪುರಾವೆ ಇದೆ: ಕಳೆದ 66 ವರ್ಷಗಳಲ್ಲಿ ಅದು ನನ್ನ ಜೀವಿತವನ್ನು ಬದಲಾಯಿಸಿದೆ!
38) ಆತ್ಮೀಕತೆಯ ಒಂದು ಪರೀಕ್ಷೆ: ನಿಮಗಿಂತ ಚಿಕ್ಕವರಾದ ಯಾರಾದರೂನಿಮಗಿಂತ ಹೆಚ್ಚುಆಶೀರ್ವದಿಸಲ್ಪಟ್ಟು ದೇವರಿಂದ ಉಪಯೋಗಿಸಲ್ಪಡುವುದನ್ನು ನೀವು ನೋಡುವಾಗ ನೀವು ಪೂರ್ಣ ಹೃದಯದಿಂದ ಸಂತೋಷಪಡುತ್ತೀರಾ
39) "ನೀನು ಮತ್ತೊಮ್ಮೆ ಪಾಪ ಮಾಡಿದರೆ, ನಿನ್ನನ್ನು ಒಂದೇ ಬಾರಿಗೆ ನರಕಕ್ಕೆ ಕಳುಹಿಸಲಾಗುವುದು" ಎಂದು ಒಂದು ವೇಳೆ ದೇವರು ಹೇಳಿದ್ದಲ್ಲಿ, ನೀನು ಕಾರ್ಯ, ಮಾತು, ಆಲೋಚನೆ, ವರ್ತನೆ ಮತ್ತು ಉದ್ದೇಶದಿಂದ ಪಾಪ ಮಾಡದಂತೆ ಹೆಚ್ಚು ಜಾಗರೂಕನಾಗಿರುತ್ತೀಯಾ?
40) ದೇವರು ಒಬ್ಬ ತಂದೆ (1) ಮಾನಸಾಂತರಪಡುವ ಪಾಪಿಗಳನ್ನು ಸ್ವಾಗತಿಸುತ್ತಾನೆ; (ಲೂಕ. 5:32); (2) ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ(ಫಿಲಿ. 4:19) & (3) ನಮ್ಮನ್ನು ಪವಿತ್ರರನ್ನಾಗಿ ಮಾಡಲು ಶಿಸ್ತುಗೊಳಿಸುತ್ತಾನೆ (ಇಬ್ರಿ. 12:10). ಆದರೆ ಅನೇಕರು (1) & (2) ಮಾತ್ರ ಬೋಧಿಸುತ್ತಾರೆ.
41) ನೀವು ಅನ್ಯ ಭಾಷೆಗಳಲ್ಲಿ ಮಾತನಾಡುವುದಾಗಿ ಹೇಳಿಕೊಂಡರೂ ನಿಮ್ಮ ಮಾತೃಭಾಷೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ನಿಮ್ಮ ವರವು ನಕಲಿಯಾಗಿರಬಹುದು.
42) ನಾವು ದೇವರ ಸತ್ಯಕ್ಕಾಗಿ ಹೆಚ್ಚು ರಾಜಿ ಮಾಡಿಕೊಳ್ಳದೆ ನಿಲ್ಲುವಾಗ, ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರನ್ನು ನಾವು ಹೆಚ್ಚು ಪ್ರೀತಿಸುವವರಾಗುತ್ತೇವೆ. ಇದು ಆಗದಿದ್ದಲ್ಲಿ, ನಮ್ಮ ಪವಿತ್ರತೆಯು ಸುಳ್ಳು. (1 ಥೆಸ. 3:12,13).
43) ಯೇಸುವಿನ ಜೀವಿತದ ರಹಸ್ಯ ಹೀಗಿತ್ತು: "ತಂದೆಯೇ, ನನ್ನದೆಲ್ಲವೂ ನಿನ್ನದು. ಆದ್ದರಿಂದ ನಿನ್ನದೆಲ್ಲವೂ ನನ್ನದು"ಯೋಹಾನ 17:10. ಅವನು 100% ಕೊಟ್ಟನು ಮತ್ತು 100% ಪಡೆದನು. 10% ಕೊಡುವವರಿಗೆ ಕೇವಲ 10% ಸಿಗುತ್ತದೆ.
44) ಯೇಸು ತಾನು ಮೊದಲು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡದೆ ತನ್ನ ತಂದೆಯ ಸೇವೆ ಮಾಡಬಹುದೆಂದು ಭಾವಿಸಿರಲಿಲ್ಲ. ನಾವು ಆ ರೀತಿ ಯೋಚಿಸುವಾಗ ಎಷ್ಟು ಅಹಂಕಾರಿಗಳಾಗಿರಬೇಕು ಅಲ್ಲವೇ. ಆತ್ಮನ ಅಭಿಷೇಕವಿಲ್ಲದೆ ನಾನು ಬೋಧಿಸಲು ಎದ್ದು ನಿಂತರೆ, ನಾನು ಜನರ ಸಮಯವನ್ನು ವ್ಯರ್ಥ ಮಾಡುತ್ತೇನೆ, ಅವರನ್ನು ಬೇಸರಗೊಳಿಸುತ್ತೇನೆ ಮತ್ತು ಅವರನ್ನು ಕ್ರಿಸ್ತನ ಕಡೆಗೆ ಅಲ್ಲ ನನ್ನ ಕಡೆಗೆ ಸೆಳೆಯುತ್ತೇನೆ.
45) ನಮ್ಮೊಂದಿಗೆ ನೇರವಾಗಿ ಕಣ್ಣಿಗೆ ಕಣ್ಣು ಕೊಟ್ಟು ನೋಡದವರ ಬಗ್ಗೆ ನಮ್ಮ ಮನೋಭಾವ ಹೇಗಿದೆ ಎಂಬುದರ ಮೇಲೆ ನಮ್ಮ ಆತ್ಮಿಕ ಪ್ರಬುದ್ಧತೆಯು ಪರೀಕ್ಷಿಸಲ್ಪಡುತ್ತದೆ. ಪ್ರೀತಿಯೇ ಶ್ರೇಷ್ಠ, ನಂಬಿಕೆಯಲ್ಲ (1 ಕೊರಿಂಥ 13:2).
46) ದೇವರು ನಮಗೆ ತೋರಿಸುವ ಕರುಣೆಗಳು ಪ್ರತಿದಿನ ಬೆಳಿಗ್ಗೆ ಹೊಸದಾಗಿರುತ್ತವೆ –ಪ್ರಲಾಪ. 3:23. ಆತನು ಹಿಂದಿನ ಕ್ಷಮೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಪ್ರತಿದಿನ ಇತರರನ್ನು ಅದೇ ರೀತಿಯಲ್ಲಿ ನೋಡುತ್ತಾರೆ.
47) ದೇವರು ಮಾಡಲು ಅತ್ಯಂತ ಸುಲಭವಾದ ಕೆಲಸವೆಂದರೆ ವಿಶ್ವವನ್ನು ಸೃಷ್ಟಿಸುವುದು. ಆದರೆ ದೇವರು ಮಾಡಲು ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಒಬ್ಬ ಮನುಷ್ಯನನ್ನು ಆಶೀರ್ವದಿಸಿ ಅವನನ್ನು ಮಹತ್ತರವಾಗಿ ಉಪಯೋಗಿಸಿದ ನಂತರ ಅವನನ್ನು ದೀನನನ್ನಾಗಿಸುವುದಾಗಿದೆ.
48) ದೇವರು ತನ್ನ ಮಕ್ಕಳ ಪ್ರತಿಯೊಂದುಪ್ರಾರ್ಥನೆಗೂ – ಹೌದು, ಇಲ್ಲ ಅಥವಾ ಕಾಯಿರಿ (3 ಸಂಚಾರ ದೀಪಗಳಂತೆ – ಹಸಿರು, ಕೆಂಪು ಮತ್ತು ಹಳದಿ) ಎಂದು ಉತ್ತರಿಸುತ್ತಾನೆ. ಆದ್ದರಿಂದ ದೇವರು ನಿಮ್ಮ ಪ್ರಾರ್ಥನೆಗೆ ಉತ್ತರಿಸಲಿಲ್ಲ ಎಂದು ಎಂದಿಗೂ ಹೇಳಬೇಡಿ. ಆತನು ಉತ್ತರಿಸಿದ್ದಾನೆ.
49) ಯೇಸುವನ್ನು ಶಿಲುಬೆಗೇರಿಸಲಾಯಿತು, ಅವರು ಪವಿತ್ರತೆಯನ್ನು ಬೋಧಿಸಿದ ಕಾರಣದಿಂದಲ್ಲ, ಬದಲಿಗೆ ನಾಯಕರ ಕಪಟತನ ಮತ್ತು ಖಾಲಿ ಸಂಪ್ರದಾಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ. ಯೇಸುವಿನ ಮಾದರಿಯನ್ನು ಅನುಸರಿಸಿರಿ.
50) ಜನರು ನಿಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ನಿಮಗೆ ಹಾನಿ ಮಾಡಿದರೆ, ಅವರೆಲ್ಲರನ್ನೂ ಆಶೀರ್ವದಿಸಿ – ಏಕೆಂದರೆ ಅವರು ಮಾತ್ರ ನಿಮ್ಮನ್ನು ಉತ್ತಮ ಕ್ರೈಸ್ತರನ್ನಾಗಿ ಮಾಡಲು ಸಾಧ್ಯ – ಆ ಸಮಯದಲ್ಲಿ ನೀವು ಯೇಸುವಿನಂತೆ ಪ್ರತಿಕ್ರಿಯಿಸಿದರೆ ಮಾತ್ರ ಇದು ಸಾಧ್ಯ –ರೋಮ. 8:28; ಮತ್ತಾಯ. 5:44
51) ಯೇಸು ಎಂದಿಗೂ ಪಾಪ ಮಾಡಲಿಲ್ಲ – ಏಕೆಂದರೆ ಅವರು ಜೋರಾಗಿ ಅಳುತ್ತಾ ಮತ್ತು ಕಣ್ಣೀರಿಡುತ್ತಾ ಪ್ರಾರ್ಥಿಸಿದರು(ಇಬ್ರಿಯ 5:7). ನೀವು ಎಂದಿಗೂ ಪಾಪ ಮಾಡಬಾರದೆಂಬ ಅಭಿಲಾಷೆ ಹೊಂದಿದ್ದರೆ, ನೀವು ಸಹ ಹಾಗೆಯೇ ಪ್ರಾರ್ಥಿಸುತ್ತೀರಿ.
52) ದೇವರು ಮತ್ತು ಮನುಷ್ಯರ ಮುಂದೆ ತನ್ನ ಮನಸ್ಸಾಕ್ಷಿಯನ್ನು ಯಾವಾಗಲೂ ಶುದ್ಧವಾಗಿಟ್ಟುಕೊಂಡರೆ ಮಾತ್ರ ನೀತಿವಂತರ ಪುನರುತ್ಥಾನದಲ್ಲಿ ತಾನು ಇರಬಹುದೆಂದು ಪೌಲನಿಗೆ ತಿಳಿದಿತ್ತು (ಅಪೊಸ್ತಲರ ಕೃತ್ಯಗಳು 24:15,16).
53) ಹಣದ ವಿಷಯದಲ್ಲಿ ನಂಬಿಗಸ್ತರಾಗಿರುವವರಿಗೆ ದೇವರು ನಿಜವಾದ ಆತ್ಮಿಕ ಐಶ್ವರ್ಯವನ್ನು ನೀಡುತ್ತಾನೆ, ಅದು ಹಣದ ವಿಷಯಗಳಲ್ಲಿ ನೀತಿವಂತರಾಗಿರುವುದಕ್ಕಿಂತ ಹೆಚ್ಚಿನದಾಗಿದೆ –ಲೂಕ 16:11.
54) ಭೂಮಿಯಲ್ಲಿ ನೀವು ಪಡೆಯಬಹುದಾದ ಅತ್ಯಂತ ದೊಡ್ಡ ಪ್ರಶಂಸೆ ಎಂದರೆ ಶುದ್ಧ ಮನಸ್ಸಾಕ್ಷಿಯ ಸಾಕ್ಷಿಯಾಗಿದೆ: "ನಾನು ತಪ್ಪು ಮಾಡಿದ್ದೇನೆಂದು ನನ್ನ ಮನಸ್ಸಾಕ್ಷಿಗೆ ತೋರುತ್ತಿಲ್ಲ" - 1 ಕೊರಿಂಥ. 4:4.
55) ಪ್ರತಿದಿನ ನೀವು ದೇವರ ಚಿತ್ತವನ್ನು ಮಾಡಬಹುದು ಅಥವಾ ದಿನವನ್ನು ವ್ಯರ್ಥ ಮಾಡಬಹುದು. ಆಯ್ಕೆ ನಿಮ್ಮದು. ದೇವರ ಚಿತ್ತವನ್ನು ಹೇಗೆ ತಿಳಿಯುವುದು? ದೇವರನ್ನು ಅತ್ಯುನ್ನತ್ತವಾಗಿ ಗೌರವಿಸುವ ದೀನರು ದೇವರ ಚಿತ್ತವನ್ನು ಸುಲಭವಾಗಿ ಕಂಡುಕೊಳ್ಳುತ್ತಾರೆ.
56) ದೇವರು ತನ್ನ ಕೆಲಸವನ್ನು ಸ್ವರ್ಗೀಯ ಐಶ್ವರ್ಯ ಮತ್ತು ದೈವಿಕ ಜೀವಿತವನ್ನು ಬಯಸುವವರೊಂದಿಗೆ ಮಾಡುತ್ತಾನೆ, ಭೌತಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವವರೊಂದಿಗೆ ಅಲ್ಲ:
57) ದೇವರು "ಬೆಳಕು ಬರಲಿ" ಎಂದು ಹೇಳಿದರು ಮತ್ತು ಬೆಳಕು ಮೂಡಿತು. ಈಗ ದೇವರು "ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸುವುದಿಲ್ಲ" ಎಂದು ಹೇಳುತ್ತಾನೆ - ರೋಮ. 6:14. ಇದನ್ನು ನಂಬಿರಿ, ಆಗ ಇದು ಕೂಡ ನೆರವೇರುತ್ತದೆ.
58) ಕಣ್ಣಿನಲ್ಲಿನ ಧೂಳಿನ ಕಣ ಹೊಂದಿರುವ ವ್ಯಕ್ತಿಯ ಕಡೆಗೆ ನಮ್ಮ ಕಣ್ಣಿನಲ್ಲಿರುವ ತೊಲೆಯು ಪ್ರೀತಿಯಿಲ್ಲದ, ತೀರ್ಪಿನ ಮನೋಭಾವವನ್ನು ಹೊಂದಿರುತ್ತದೆ. ನೀವು ಆತನ ಉದ್ದೇಶಗಳನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ತೀರ್ಪು ಮಾಡಬೇಡಿರಿ. (ಮತ್ತಾ. 7:1-5).
59) ದೇವರು ನನ್ನನ್ನು ಎಲ್ಲಾ ಜನರಿಗೆ ಕ್ರಿಸ್ತನಲ್ಲಿ ಸಂಪೂರ್ಣ ರಕ್ಷಣೆಯ ಸುವಾರ್ತೆಯನ್ನು ತಿಳಿಸುವಂತ ಸಾಲಗಾರನನ್ನಾಗಿ ಮಾಡಿದ್ದಾನೆ (ರೋಮ. 13:8). ಆದ್ದರಿಂದ ಅವರನ್ನು ತಲುಪಲು ನಾನು ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಬಯಸುತ್ತೇನೆ.
60) ಯೇಸು ದೇವರು ತನಗಾಗಿ ಯೋಜಿಸಿದ್ದನ್ನೆಲ್ಲಾ ಪೂರ್ಣಗೊಳಿಸಿದರು, ಏಕೆಂದರೆ ಅವರು ಯಾವಾಗಲೂ ತಮ್ಮ ಸ್ವಂತ ಚಿತ್ತವನ್ನು ನಿರಾಕರಿಸಿದರು ಮತ್ತು ತಂದೆಯ ಚಿತ್ತವನ್ನು ಮಾಡಿದರು (ಯೋಹಾನ 6:38 ಮತ್ತು 17:4). ಆದ್ದರಿಂದ, ನೀವು ನಿಮ್ಮ ಜೀವಿತದಲ್ಲಿ ದೇವರ ಚಿತ್ತವನ್ನು ಮಾತ್ರ ಮಾಡಲು ಬಯಸಿದರೆ, ನಿಮ್ಮ ಜೀವಿತಕ್ಕಾಗಿ ದೇವರ ಯೋಜನೆಯ ಪ್ರತಿಯೊಂದು ಭಾಗವನ್ನು ಮಾಡಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ - ಮತ್ತು ದೇವರ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನೀವು ದೇವರ ಪೂರ್ತಿ ಯೋಜನೆಯನ್ನು ಪೂರೈಸುವ ಮೊದಲೇ ಸಾಯುವುದಿಲ್ಲ.