ಯೇಸುವು ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕುವ ವಿಷಯವಾಗಿ ಹೇಳಿದರು (ಲೂಕ 5:37,38). ಹೊಸ ದ್ರಾಕ್ಷಾರಸವು ಯೇಸುವಿನ ಜೀವಿತ ಹಾಗೂ ಹೊಸ ಬುದ್ದಲಿಯು ಯೇಸುವು ಕಟ್ಟುವಂಥ ಸಭೆಯನ್ನು ಸೂಚಿಸುತ್ತದೆ.
ಹೊಸ ದ್ರಾಕ್ಷಾರಸ:
ಕಾನಾ ಊರಿನಲ್ಲಿ ಯೇಸುವು ಮದುವೆಗೆ ಹೋದಾಗ ಅಲ್ಲಿ ಇದ್ದಂತಹ ಹಳೇ ದ್ರಾಕ್ಷಾರಸವು ಮನುಷ್ಯನ ಅನೇಕ ವರ್ಷಗಳ ಪ್ರಯತ್ನದಿಂದಾಗಿ ಮಾಡಿದ್ದರ ಸೂಚನೆಯಾಗಿತ್ತು. ಆದರೆ ಅದು ಅಲ್ಲಿನ ಕೊರತೆಯನ್ನು ಅದು ನೀಗಿಸಲಾಗಲಿಲ್ಲ. ಇದು ಧರ್ಮಶಾಸ್ತ್ರಕ್ಕೆ ಅಧೀನವಾದ ಜೀವಿತದ ಒಂದು ಸಾಮ್ಯ, ಅದು ಹಳೆ ಒಡಂಬಡಿಕೆಯ ಜೀವಿತ. ಹಳೇ ದ್ರಾಕ್ಷಾರಸವು ತೀರುವುದು ಮತ್ತು ಕರ್ತನು ನಮಗೆ ಹೊಸ ದ್ರಾಕ್ಷಾರಸವನ್ನು ಕೊಡುವ ಮೊದಲು ಹಳೇ ದ್ರಾಕ್ಷಾರಸವು ತೀರಬೇಕಾಗುತ್ತದೆ. "ಕರ್ತನಾದ ಯೆಹೋವನು-ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು; ಆದರೆ ನೀವು, - ನಾವು ಐಗುಪ್ತದಿಂದ ಸಹಾಯವನ್ನು (ಮಾನವ ಬಲ) ಪಡೆಯುವೆವು ಎನ್ನುವಿರಿ. ಆದುದರಿಂದ ನಿಮ್ಮ ವೈರಿಗಳು ನಿಮ್ಮನ್ನು ಅಟ್ಟಿಕೊಂಡು ಬರುವರು... ಯೆಹೋವನು ನಿಮಗೋಸ್ಕರ (ನಿಮ್ಮ ಬಲದ ಅಂತ್ಯಕ್ಕೆ) ಬರಲು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು... ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು"(ಯೆಶಾಯ 30:15-18).
ನಾವು ಜಯದ ಜೀವಿತ ಜೀವಿಸಲು ಪ್ರಯತ್ನಿಸಿ, ಪ್ರಯತ್ನಿಸಿ, ಪ್ರಯತ್ನಿಸಿ, ಮೇಲಿಂದ ಮೇಲೆ ಬಿದ್ಧು ಹೋಗುವಾಗ, ನಮಗೆ ದೇವರು ಕಲಿಸುವ ಪಾಠವಿದು. "ನೀನು ನಿನ್ನ ಸ್ವಂತ ಬಲದಲ್ಲಿ ಜಯವನ್ನು ಹೊಂದಲಾರೆ; ನೀನು ಧರ್ಮಶಾಸ್ತ್ರಕ್ಕೆ ಅಧೀನನಾಗಿರುವವರೆಗೆ ಪಾಪಕ್ಕೆ ಅಧೀನನಾಗಿರುವಿ." ನಮ್ಮ ಸ್ವಂತ ಬಲವನ್ನು ಪೂರ್ಣವಾಗಿ ಮುರಿಯುವುದೇ, ದೇವರು ತನ್ನ ಮಕ್ಕಳಲ್ಲಿ ಮಾಡುವ ಪ್ರಮುಖವಾದ ಕಾರ್ಯವಾಗಿದೆ. ತನ್ನ ಅದ್ಭುತವನ್ನು ಮಾಡುವ ಮೊದಲು, ಹಳೇ ದ್ರಾಕ್ಷಾರಸವು ತೀರುವವರೆಗೆ, ಯೇಸುವು ಕಾದಿದ್ದರು. ನಮ್ಮ ಬಲವು ತೀರುವವರೆಗೆ ಆತನು ಕಾಯುತ್ತಿದ್ದಾನೆ. ನಮ್ಮ ವಿಫಲತೆ, ಅಪಜಯವು ನಮ್ಮನ್ನು ನಮ್ಮ ಅಂತ್ಯಕ್ಕೆ(ಸ್ವಂತ ಬಲದ ಅಂತ್ಯಕ್ಕೆ) ನಡಿಸುವವು; ಇದು ದೇವರಿಂದ ಆಗಿದೆ. ನಮ್ಮ ಬಲಹೀನತೆಯಲ್ಲಿಯೇ ಆತನ ಬಲವು ಪೂರ್ಣವಾಗಿ ಸಾರ್ಥಕವಾಗುವುದು (2 ಕೊರಿಂಥ 12:9).
ನಾವು ನಮ್ಮ ಶೋಧನೆಯ ಸಮಯದಲ್ಲಿ ಕೆರಳಿಸಲ್ಪಟ್ಟಾಗ. ಕಹಿಮಾತಿನಿಂದ ಪ್ರತಿಕ್ರಿಯೆ ತೋರಿಸುವಾಗ, ಕೋಪದ ಮುಖ, ಸ್ವಪ್ರತಿಪಾದನೆ, ಇತರರನ್ನು ಟೀಕೆ ಮಾಡುವುದು, ತೀರ್ಪು ಮಾಡುವುದು, ಕ್ಷಮಿಸದೇ ಇರುವಂಥ ಮನೋಭಾವ, ಐಹಿಕ ವಸ್ತುಗಳನ್ನು ದೋಚಿ ಕೊಳ್ಳುವುದು, ನಮ್ಮ ಹಕ್ಕು ಹಾಗೂ ಗೌರವಕ್ಕಾಗಿ ಹೋರಾಡುವುದು, ಸೇಡು ತೀರಿಸಿಕೊಳ್ಳುವುದು, ಇವೆಲ್ಲವೂ ಸ್ವಾರ್ಥತೆಯ ಬಲಗಳಾಗಿವೆ ಇವುಗಳು ಹಾಗೂ ಇಂತಹ ಇತರೆ ಮನೋಭಾವನೆಗಳೂ ನಮ್ಮ ಸ್ವಾರ್ಥವು ಎಷ್ಟು ಬಲವಾಗಿದೆ ಎಂದು ತೋರಿಸುತ್ತವೆ. ಹಳೇ ದ್ರಾಕ್ಷಾರಸವು ಇನ್ನೂ ತೀರಿಲ್ಲ. ಆಗ ಯೇಸುವು ನಮ್ಮ ಪಕ್ಕದಲ್ಲಿ ಅಸಹಾಯಕರಾಗಿ ನಿಂತಿರುತ್ತಾರೆ. ದೇವರು ನಮ್ಮನ್ನು ಮುರಿಯಲು ಅನುಮತಿಸುವಾಗ, ನಮ್ಮನ್ನು ನಾವು ತಗ್ಗಿಸಿಕೊಳ್ಳುವಾಗ; ನಮ್ಮ ಹಕ್ಕುಗಳಿಗೆ, ಗೌರವಗಳಿಗಾಗಿ ನಾವು ಹೊಂದಿರುವ ಸ್ವಾರ್ಥಕ್ಕೆ ಸಂತೋಷದಿಂದ ಸಾಯುವುದನ್ನು ನಾವು ಒಪ್ಪಿಕೊಳ್ಳುವಾಗ, ಆತನು ಬೇಗನೇ ಹೊಸ ಒಡಂಬಡಿಕೆಯ ಜೀವಿತಕ್ಕೆ ನಮ್ಮನ್ನು ಮುನ್ನಡಿಸುವನು. ನಮ್ಮ ಶೋಧನೆಗಳು, ಆಶಾಭಂಗಗಳು, ಯಾತನೆಗಳು ಸೇರಿ ನಮ್ಮ ಸ್ವಾರ್ಥ ಜೀವಿತವನ್ನು ಶೂನ್ಯಕ್ಕೆ ತರುವುದೇ ದೇವರ ಚಿತ್ತವಾಗಿದೆ.
ಯೋಬನೊಂದಿಗೆ ದೇವರು ಹೀಗೆಯೇ ನಡೆದುಕೊಂಡರು, ಕೊನೆಗೆ ಯೋಬನು ಶೂನ್ಯತೆಗೆ ಬಂದು ಧೂಳಿನಲ್ಲಿ ತನ್ನ ಮುಖವನ್ನು ಇಟ್ಟು "ಅಯ್ಯೋ, ನಾನು ಅಲ್ಪನೆ ಸರಿ, (ಶೂನ್ಯನು) ಬಾಯಮೇಲೆ ಕೈಯಿಟ್ಟು ಕೊಳ್ಳುವೆನು... ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು ಈಗಲಾದರೂ ನಿನ್ನನ್ನೇ ಕಣ್ಣಾರೆ ಕಂಡೆನು; ಆದ ಕಾರಣ (ನಾನು ಆಡಿದ್ದನ್ನು) ತಿರಸ್ಕರಿಸಿ ಧೂಳಿನಲ್ಲಿಯೂ, ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪ ಪಡುತ್ತೇನೆ"ಎಂದು ಹೇಳಿದನು(ಯೋಬ 40:4; 42:5,6)
ದೇವರು ಕೊನೆಯಲ್ಲಿ ನಮ್ಮನ್ನು ಮುರಿದು ತನ್ನ ವಿಷಯವಾದ ಪ್ರಕಟಣೆಯನ್ನು ಕೊಡುವಾಗ ನಮಗೆ ಹೀಗೆಯೇ ಆಗುವುದು. 40ನೇಯ ವಯಸ್ಸಿನಲ್ಲಿ ತಾನು ಶಕ್ತನೆಂದು ತಿಳಿದ ಮೋಶೆ 40 ವರ್ಷಗಳ ನಂತರದಲ್ಲಿ ದೇವರಿಂದ ಮುರಿಯಲ್ಪಟ್ಟಾಗ "ಕರ್ತನೇ, ನಾನು ಮಾತು ಬಲ್ಲವನಲ್ಲ... ಬೇರೊಬ್ಬರನ್ನು ಕಳುಹಿಸು", ಎಂದು ಹೇಳಿದನು 0(ವಿಮೋ 4:10,13).
ದೇವರ ಪ್ರಭಾವವನ್ನು ಕಂಡ ದೊಡ್ಡ ಪ್ರವಾದಿಯಾದ ಯೇಶಾಯನಿಗೆ ಸಹ ಹೀಗೆಯೇ ಆಯಿತು, "ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು"ಎಂದು ಅವನು ಹೇಳಿದನು. (ಯೇಶಾಯ 6:5). ದಾನಿಯೇಲನಿಗೆ ದೇವರ ದರ್ಶನವಾದಾಗ "ತ್ರಾಣವನ್ನೆಲ್ಲಾ ಕಳೆದಕೊಂಡೆನು"ಎಂದು ಹೇಳಿದನು, (ದಾನಿ 10:8) ದಾನಿಯೇಲನು ತನ್ನ ಶೂನ್ಯಸ್ಥಿತಿಗೆ ಬಂದನು.
ದೇವರೊಂದಿಗೆ 65 ವರ್ಷಗಳ ಕಾಲ ನಡೆದ ಆತ್ಮ ಭರಿತನಾದ, ಅಪೊಸ್ತಲನಾದ ಯೋಹಾನನು ಪತ್ಮೊಸ್ ದ್ವೀಪದಲ್ಲಿ ಯೇಸುವನ್ನು ಕಂಡಾಗ, ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ಧನು(ಪ್ರಕ. 1:17).
ಕರ್ತನ ಮಹಿಮೆಯನ್ನು ಕಂಡಂತವರೆಲ್ಲರ ಅನುಭವ ಇದಾಗಿದೆ! ಅವರ ಬಾಯಿ ಮುಚ್ಚಲ್ಪಟ್ಟಿದೆ. ಅವರ ಮುಖವು ಧೂಳಿನಲ್ಲಿದೆ. ದೇವರು ನಮ್ಮನ್ನು ಇಂತಹ ಸ್ಥಳಕ್ಕೆ ತಂದಾಗ, ಆತನು ನಮಗೆ ಕ್ರಿಸ್ತನ ಜೀವವಾದ ಹೊಸ ದ್ರಾಕ್ಷಾರಸವನ್ನು ಕೊಡುವ ಕಾರ್ಯವನ್ನು ಬೇಗನೇ ಪ್ರಾರಂಭಿಸುತ್ತಾನೆ. ಇದು ಕ್ರಿಸ್ತನ ರಕ್ತದಿಂದ ಸ್ಥಾಪಿತವಾದ ಹೊಸ ಒಡಂಬಡಿಕೆಯ ಸರ್ವ ಶ್ರೇಷ್ಠ ಆಶೀರ್ವಾದ ಮತ್ತು ದೈವೀಕ ಸ್ವಭಾವವಾಗಿದೆ.
ನಾವು ಇಂತಹ ಸ್ಥಿತಿಗೆ ಬೇಗನೇ ಬಂದಿದ್ದರೆ ಎಷ್ಟೋ ಒಳ್ಳೇದು! ಇದರಲ್ಲಿ ಬೆಳಕಿನಿಂದ ಬೆಳಕಿಗೆ ಮುಂದುವರೆಯುವ ಬೆಳವಣಿಗೆ ಇದೆ (ಜ್ಞಾನೋಕ್ತಿ 4:18). ಮಹಿಮೆಯಿಂದ ಮಹಿಮೆಗೆ ಸಾಗುತ್ತೇವೆ.
ಬೆಳಕಿನಲ್ಲಿ ನಡೆಯುವುದರ ಕುರಿತಾಗಿ ಯೋಹಾನನು (ಯೋಹಾನ 1:7) ರಲ್ಲಿ ಹೇಳುತ್ತಾನೆ. ಬೆಳಕಿನಲ್ಲಿ ನಿಲ್ಲುವುದರಿಂದಲ್ಲ ನಡೆಯುವದರಿಂದ ನಾವು ಆತನ ಸಮೀಪಕ್ಕೆ ಬಂದವರಾಗಿ ಅಭಿವೃದ್ದಿ ಹೊಂದುತ್ತೇವೆ. ಆತನಲ್ಲಿ ಕತ್ತಲಿಲ್ಲ. ಹೀಗೆ ನಮ್ಮ ಮೇಲೆ ಬೆಳಕು ಹೆಚ್ಚಾಗಿ ಪ್ರಜ್ವಲಿಸುವುದರಿಂದ, ನಮ್ಮಲ್ಲಿ ಅಡಗಿರುವ ಮತ್ತು ನಾವು ಈ ಮುಂಚೆ ತಿಳಿಯದೇ ಇರುವ ಪಾಪಗಳು ನಮಗೆ ಗೋಚರವಾಗುತ್ತವೆ. ಕ್ರಿಸ್ತನ ರಕ್ತವು ಈ ಎಲ್ಲಾ ಪಾಪಗಳಿಂದ ನಮ್ಮನ್ನು ಶುದ್ದಿಗೊಳಿಸುತ್ತದೆ.
ಹೀಗೆ ನಾವು ಕರ್ತನ ಸಾಮಿಪ್ಯಕ್ಕೆ ಎಷ್ಟು ಹೆಚ್ಚಾಗಿ ಬರುತ್ತೇವೋ, ಅಷ್ಟೇ ಹೆಚ್ಚಾಗಿ ನಮ್ಮಲ್ಲಿನ ಪಾಪದ ಅರಿವು ನಮಗೆ ಆಗುತ್ತದೆ; ಮತ್ತು ಇತರರ ಪಾಪದ ಅರಿವು ಕಡಿಮೆಯಾಗುತ್ತದೆ. ಯೇಸುವಿನ ಸಮ್ಮುಖದಲ್ಲಿ ನಮ್ಮ ಪಾಪಗಳ ಅರಿವು ನಮಗೆ ಆಗುವುದರಿಂದ ವ್ಯಭಿಚಾರದಲ್ಲಿ ಸಿಕ್ಕಿದ ಹೆಂಗಸಿನ ಕಡೆಗೆ ಕಲ್ಲೆಸೆಯಲು ಬಯಸುವವರಂತೆ ನಾವು ಇನ್ನು ಮುಂದೆ ಬಯಸುವುದಿಲ್ಲ. "ಅಯ್ಯೋ! ಅವಳು ಎಂಥ ದುರಾವಸ್ಥೆಯಲ್ಲಿ ಬಿದ್ದವಳು" ಎನ್ನುವುದಕ್ಕಿಂತ "ಅಯ್ಯೋ ನಾನು ಎಂಥ ದುರಾವಸ್ಥೆಯಲ್ಲಿ ಬಿದ್ದ ಮನುಷ್ಯನು!" ಎಂದು ನಾವು ಕೂಗುವೆವು ಮತ್ತು ದುಃಖಿಸುವೆವು (ರೋಮ 7:24). ದೇವರ ಸಮ್ಮುಖದಲ್ಲಿ ನಿಂತಿರುವಾಗಲೂ ಸಹ ಆದಾಮನು ತನ್ನ ಪತ್ನಿಯ ಕಡೆಗೆ ಬೆರಳು ಮಾಡಿ ತೋರಿಸಿದನು (ಆದಿ 3:12). ಆದರೆ ದೇವರು ಆದಾಮನಿಗೆ ತನ್ನ ಪಾಪದ ಅರಿವನ್ನು ಕೊಟ್ಟನು(ಆದಿ 3:17). ಇದನ್ನೇ ಕರ್ತನು ನಮಗೂ ಸಹ ಮಾಡುತ್ತಾನೆ. ನಾವು ಕೇವಲ ಧರ್ಮವನ್ನು ಹಾಗೂ ಕೆಲವು ತತ್ವಗಳನ್ನು ಹಿಡಿದು ಕೊಂಡಿದ್ಧೆವೋ ಅಥವಾ ದೇವರ ಸಮ್ಮುಖದಲ್ಲಿ ಜೀವಿಸುತ್ತಿದ್ದೇವೊ? ಎಂಬುದಕ್ಕೆ ಇದು ಒಳ್ಳೆಯ ಪರೀಕ್ಷೆಯಾಗಿದೆ.
ನಮ್ಮ ವೈಯಕ್ತಿಕ ಜೀವಿತದಲ್ಲಿ; ವಿವಾಹದ ಜೀವಿತದಲ್ಲಿ; ಅಥವಾ ನಮ್ಮ ಸಭೆಯಲ್ಲಿ ದ್ರಾಕ್ಷಾರಸವು ತೀರಿ ಹೋಗಿದೆಯೋ? ಹಾಗಾದರೆ ನಾವು ಯಥಾರ್ಥವಾಗಿ ದೇವರನ್ನು ಹುಡುಕಿ ನಮ್ಮ ಕೊರತೆಯನ್ನು ಒಪ್ಪಿ ಕೊಳ್ಳುವುದು ಅಗತ್ಯವಾಗಿದೆ. ಆತನು ಮಾತ್ರ ನಮಗೆ ಹೊಸ ದ್ರಾಕ್ಷಾರಸವನ್ನು ಕೊಡಬಲ್ಲನು. ಕಾನಾ ಊರಿನಲ್ಲಿ ಹೊಸ ದ್ರಾಕ್ಷಾರಸವು ಮಾನವ ಪ್ರಯತ್ನದಿಂದ ತಯಾರಿಸಲ್ಪಡಲಿಲ್ಲ. ಅದು ದೇವರ ಅದ್ಭುತ ಕಾರ್ಯವಾಗಿತ್ತು; ಅದು ನಮ್ಮ ಜೀವಿತದಲ್ಲಿಯೂ ಆಗಲು ಸಾಧ್ಯ. ಆತನು ತನ್ನ ಆಜ್ಞೆಗಳನ್ನು ನಮ್ಮ ಮನುಸ್ಸಿನಲ್ಲಿಯೂ, ಹೃದಯದಲ್ಲಿಯೂ ಬರೆಯುವನು ಹಾಗೂ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಮ್ಮಲ್ಲಿ ಉದ್ದೇಶವನ್ನು ಪ್ರಯತ್ನವನ್ನು ಉಂಟು ಮಾಡುವವನಾಗಿದ್ದಾನೆ (ಇಬ್ರಿಯ 8:10; ಫ಼ಿಲಿ 2:13). ನಾವು ಆತನನ್ನು ಸಂಪೂರ್ಣ ಹೃದಯದಿಂದಲೂ, ಮನಸ್ಸಿನಿಂದಲೂ ಪ್ರೀತಿಸುವ ಹಾಗೆ ನಮ್ಮ ಹೃದಯಕ್ಕೆ ಸುನ್ನತಿ ಮಾಡುವನು. ನಾವು ಆತನ ನಿಯಮಗಳನ್ನು ಆನುಸರಿಸುವ ಹಾಗೆ ಮಾಡುವನು (ಧರ್ಮೋ 30:6; ಯೆಹೆಜ್ಕೇಲ 36:27). ಕಾನಾ ಊರಿನಲ್ಲಿ ಹೊಸ ದ್ರಾಕ್ಷಾರಸವು ಹೇಗೆ ಆತನ ಕಾರ್ಯವಾಗಿತ್ತೋ ಅದೇ ರೀತಿಯಾಗಿ ಈ ಕೆಲಸವು ಸಹ ಆತನದೇ, ಇದೇ ಕೃಪೆಯ ಅರ್ಥ. ನಾವು ನಮ್ಮ ದೇಹದಲ್ಲಿ "ಯೇಸುವಿನ ಮರಣಾವಸ್ಥೆಯನ್ನು" ಅನುಭವಿಸುವವರಾದರೆ ದೇವರು ಯೇಸುವಿನ ಜೀವವಾದ ಹೊಸ ದ್ರಾಕ್ಷಾರಸವನ್ನು ನಮ್ಮಲ್ಲಿ ಉತ್ಪತ್ತಿ ಮಾಡುವ ವಾಗ್ದಾನ ಮಾಡಿದ್ದಾನೆ (2 ಕೊರಿ 4:10). ಯೇಸುವಿನ ಮರಣಾವಸ್ಥೆ ಅಂದರೆ, ನಾವು ಪ್ರತಿ ದಿನವೂ ನಮ್ಮ ಶಿಲುಬೆಯನ್ನು ಹೊತ್ತುಕೊಂಡು ನಮ್ಮ ಸ್ವಾಭಿಮಾನಕ್ಕೆ, ನಮ್ಮ ಸ್ವ-ಇಚ್ಚೆಗೆ, ಹಕ್ಕುಗಳಿಗೆ, ಗೌರವಕ್ಕೆ ಸಾಯುವುದು ಎಂದು ಅರ್ಥ.
ನಾವು ಈ ಓಟವನ್ನು ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮನ್ನು ಏಲ್ಲಾ ಸಮಯದಲ್ಲಿ ಆತನೊಂದಿಗೆ ಮಾತ್ರವೇ ಹೋಲಿಸಿಕೊಂಡು ಓಟವನ್ನು ಓಡ ತಕ್ಕದ್ದಾಗಿದೆ. ಆಗ ಮಾತ್ರವೆ ನಾವು ನಮ್ಮ ಪ್ರಜ್ಞೆಯುಳ್ಳ ಜೀವಿತದಲ್ಲಿನ ಪಾಪಗಳ ಮೇಲೆ ಜಯ ಸಾಧಿಸಿದ್ದರೂ ಯೇಸುವಿನ ಹಾಗೆ ನಾವು ಇನ್ನು ಆಗಿರದ ಕಾರಣ "ಅಯ್ಯೋ ಎಂಥ ದುರಾವಸ್ಥೆಯಲ್ಲಿ ಬಿದ್ದ ಮನುಷ್ಯನು ನಾನು" ಎಂಬ ಕೂಗು ನಮ್ಮಿಂದ ಯಾವಾಗಲೂ ಬರುತ್ತದೆ. ಇತರ ವಿಶ್ವಾಸಿಗಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವವರು ವಿವೇಕವಿಲ್ಲದವರಾಗಿದ್ದಾರೆ (2 ಕೊರಿ 10:12). ಇದು ಆತ್ಮೀಕ ಗರ್ವಕ್ಕೆ ಹಾಗೂ ಇತರೆ ಅನೇಕ ಕೆಡುಕಿಗೆ ಖಂಡಿತವಾದ ಮಾರ್ಗವಾಗಿದೆ. ನಾವು ನಮ್ಮ ದೃಷ್ಠಿಯನ್ನು ಎಲ್ಲಿಯವರೆಗೆ ಯೇಸುವಿನ ಮೇಲಿಟ್ಟು ನಮ್ಮನ್ನು ಆತನೊಂದಿಗೆ ಮಾತ್ರ ಹೋಲಿಸಿಕೊಳ್ಳುವುದಾದರೆ ನಾವು ಎಂದಿಗೂ ಆತ್ಮೀಕ ಗರ್ವದ ಅಪಾಯಕ್ಕೊಳಗಾಗುವುದಿಲ್ಲ. ಪವಿತ್ರಾತ್ಮನು ದೇವರ ವಾಕ್ಯದ ದರ್ಪಣದಲ್ಲಿ ಯೇಸುವಿನ ಪ್ರಭಾವವನ್ನು ತೋರಿಸುತ್ತಾ ನಮ್ಮನ್ನು ಆತನ ಸಾರೂಪ್ಯಕ್ಕೆ ಆಗ ಮಾತ್ರವೇ ಮುನ್ನಡೆಸುವನು (2 ಕೊರಿ 3:18). ದೇವರ ಮೇಲಣ ಕರೆಗೆ (ಕ್ರಿಸ್ತನ ಹಾಗೆ ಆಗುವ ಕರೆಗೆ) ಪೌಲನು ಗುರಿ ಮಾಡಿಕೊಂಡು ಓಡುವ ಕಾರ್ಯವನ್ನು ಮಾಡಿದನು. ಬರೇ ಕಳೆದು ಹೋದ ಆತ್ಮಗಳ ರಕ್ಷಣೆಗೊಸ್ಕರವಲ್ಲ (ಫಿಲಿಪ್ಪಿ. 3:13,14). ಆಗ ಪೌಲನು -"ನಮ್ಮಲ್ಲಿ ಪ್ರವೀಣರಾದವರು (ಅಂದರೆ ನಮ್ಮ ಮನಸ್ಸಾಕ್ಷಿಗೆ ಅನುಸಾರವಾಗಿ ಪ್ರಜ್ಞೆಯುಳ್ಳ (ಅರಿವನ್ನು) ಜೀವಿತದ ಪಾಪಗಳ ಮೇಲೆ ಜಯ ಹೊಂದಿದವರು) ಇದೇ ಅಭಿಪ್ರಾಯ ಉಳ್ಳವರಾಗಿರೋಣ" ಎಂದು ಹೇಳುತ್ತಾನೆ....(ಫಿಲಿ 3:15). ಆತ್ಮೀಕ ಮನುಷ್ಯನ ಗುರುತು ಇದೇ. ದೇವರ ಮನುಷ್ಯನ ಜೀವಿತದಲ್ಲಿ ಸೇವೆ, ಸುವಾರ್ತೆ ಸಾರುವದು ಇತ್ಯಾದಿಗಳು ಎರಡನೇ ಸ್ಥಾನವನ್ನು ತೆಗೆದು ಕೊಳ್ಳುತ್ತವೆ.
ಲವೋದೆಕೀಯ ಸಭೆಯ ದೂತನ (ನಾಯಕನ) ಪಾಪವು-ಆತನು ತನ್ನನ್ನು ತಾನು ತೀರ್ಪು ಮಾಡಿಕೊಳ್ಳುತ್ತಿರಲಿಲ್ಲ. ನಾವೂ ಸಹ ನಾಯಕನಾದಾಗ ಅಂಥಹ ಪಾಪದಲ್ಲಿ ಬೀಳುವುದು ಸುಲಭ. ಆತನು ದುರಾವಸ್ಥೆಯಲ್ಲಿ ಬಿದ್ದವನೆಂದು ಆತನಿಗೆ ತಿಳಿದಿರಲಿಲ್ಲ (ಪ್ರಕ. 3:17). ನಾವು ನಮ್ಮ ಜೀವಿತದ ಎಲ್ಲಾ ದಿನಗಳನ್ನು ದೇವರ ಮುಖದ ಎದುರಿನಲ್ಲಿ ಜೀವಿಸಿದರೆ ನಾವು ಯಾವಾಗಲೂ ಮುರಿಯಲ್ಪಟ್ಟವರಾಗಿ ನಮ್ಮನ್ನು ತೀರ್ಪು ಮಾಡಿಕೊಂಡು, "ಅಯ್ಯೋ ಎಂತಹ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು ನಾನು" ಎಂದು ಹೇಳುವವರಾಗುತ್ತೇವೆ. ಹೀಗೆ ಒಬ್ಬ ರಕ್ಷಿಸಲ್ಪಟ್ಟ ಪಾಪಿಯು ಈ ಲೋಕದಲ್ಲಿ ಪವಿತ್ರತೆಯ ಶಿಖರವನ್ನು ಮುಟ್ಟಿದಾಗಲೂ ಆತನು, "ನಾನು ದೇವ ಜನರೊಳಗೆ ಅತ್ಯಲ್ಪನು.... ಪಾಪಿಗಳಲ್ಲಿ ನಾನೇ ಮುಖ್ಯನು" ಎಂದು ಇನ್ನೂ ಹೇಳುತ್ತಾನೆ (ಎಫೆ 3:8; 1 ತಿಮೋ 1:15). ಹೀಗೆ ಈ ಮಾರ್ಗದಲ್ಲಿ ನಡೆಯುವ ಇತರ ವಿಶ್ವಾಸಿಗಳೊಂದಿಗೆ ನಾವು ಅನ್ಯೋನ್ಯತೆಯಲ್ಲಿದ್ದು, ತಂದೆ ಮತ್ತು ಮಗನ ಅನ್ಯೋನ್ಯತೆಗೆ ಸಮೀಪವಾಗಿರುತ್ತೇವೆ (ಯೋಹಾನ 17:21). ಯೇಸುವು ನಮಗೆ ಕೊಡ ಬಯಸುವ ಹೊಸ ದ್ರಾಕ್ಷಾರಸವು ಇದೇ.
ಹೊಸ ಬುದ್ದಲಿ
ಇಲ್ಲಿಯವರೆಗೆ ಸಂದೇಶದಲ್ಲಿ ಸಂತೋಷಿಸಿದವರಲ್ಲಿ ಅನೇಕರು ಹೊಸ ಬುದ್ದಲಿಗೆ ಕ್ರಯ ಕೊಡಲಿಕ್ಕೆ ಒಪ್ಪದಿರಬಹುದು. ಆದರೆ ಯೇಸುವು ಹೇಳಿದ್ಧು - "ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು"(ಲೂಕ 5:38). ನಮ್ಮ ವಿಧೇಯತೆಯ ಪರೀಕ್ಷೆಯು ಇದುವೇ ಆಗಿದೆ. ಹೊಸ ದ್ರಾಕ್ಷಾರಸವನ್ನು ಹೊಂದುವುದಲ್ಲ. ನಾವು ಪಾಪದೊಂದಿಗೆ ಹೊರಾಡುತೇವೆ. ಆದರೆ ಹೊಸ ಬುದ್ದಲಿಗಳನ್ನು ಹೊಂದಬೇಕಾದರೆ, ದೇವರ ವಾಕ್ಯವನ್ನು ನಿರರ್ಥಕ ಮಾಡುವ ಧಾರ್ಮಿಕ ಸಂಪ್ರದಾಯಗಳೊಂದಿಗೆ ನಾವು ಹೋರಾಡಬೇಕಾಗುತ್ತದೆ. ಅನೇಕ ಜನರಿಗೆ ಪಾಪದಿಂದ ಬಿಡುಗಡೆಯಾಗುವದಕ್ಕಿಂತ; ಸಂಪ್ರದಾಯಗಳಿಂದ ಬಿಡುಗಡೆಯಾಗುವುದು ಕಷ್ಟಕರವಾಗಿದೆ. "ಆದರೆ ಬಲತ್ಕಾರಿಗಳು ನುಗ್ಗಿ ದೇವರ ರಾಜ್ಯವನ್ನು ಸ್ವಾಧೀನ ಮಾಡಿಕೊಳ್ಳುತ್ತಾರೆ"(ಮತ್ತಾ 11:12). ಬಲಾತ್ಕಾರದಿಂದಲ್ಲದೇ ಬೇರೆ ಯಾವ ಮಾರ್ಗದಿಂದಲೂ ಧಾರ್ಮಿಕ ಸಂಪ್ರದಾಯಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಯೇಸುವು ಪಾಪದ ವಿರುದ್ದ ಬೋಧಿಸಿದ್ದರಿಂದ ಶಿಲುಬೆಗೆ ಹಾಕಲ್ಪಡಲಿಲ್ಲ. ಆದರೆ ಯೆಹೂದ್ಯರಲ್ಲಿ ಧಾರ್ಮಿಕ ಸಂಪ್ರದಾಯಗಳು ದೇವರ ವಾಕ್ಯದ ಸ್ಥಾನವನ್ನು ತೆಗೆದು ಕೊಂಡಿದ್ದರಿಂದ, ಯೇಸುವು ಅವುಗಳಿಗೆ ವಿರೋಧವಾಗಿ ಭೋಧಿಸಿದ್ದರು (ಮಾರ್ಕ 7:1-13), ಆತನು ಲೌಕಿಕ ಮನೋಭಾವದ ಧಾರ್ಮಿಕ ನಾಯಕರ ಕಪಟತನವನ್ನು, ಅವರ ಸಂಪ್ರದಾಯಗಳು ಶೂನ್ಯತೆಯಿಂದ ಕೂಡಿದೆ ಎಂದು ಬಯಲು ಮಾಡಿ, ದೇವಾಲಯದಿಂದ ಧರ್ಮದ ಹೆಸರಿನಲ್ಲಿ ಹಣ ಮಾಡುವವರನ್ನು ಓಡಿಸಿದನು. ದೇವಾಲಯದ ಪವಿತ್ರತೆಯ ಬಗ್ಗೆ ಆತನಿಗಿದ್ಧ ಆಸಕ್ತಿಯೇ, ಧಾರ್ಮಿಕರನ್ನು ಕೆಣಕಿಸಿ ಅವರು ಆತನನ್ನು ಶಿಲುಬೆಗೇರಿಸಲು ಕೇಳಿಕೊಳ್ಳುವಂತೆ ಮಾಡಿತು.
ಮುರಿಯಲ್ಪಡುವಿಕೆ ಹಾಗೂ ಹೊಸ ದ್ರಾಕ್ಷಾರಸ ಮುಂತಾದುವುಗಳ ವಿಷಯದಲ್ಲಿ ಸಂದೇಶಕೊಟ್ಟರೆ ಜನ ನಮ್ಮನ್ನು ಶಿಲುಬೆಗೇರಿಸಲು ಕೇಳಿ ಕೊಳ್ಳುವುದಿಲ್ಲ. ಆದರೆ ನೀನು ದೇವರ ಪೂರ್ಣ ಸಂಕಲ್ಪವನ್ನು ಸಾರುತ್ತಾ ಹೊಸ ದ್ರಾಕ್ಷಾರಸವು ಹೊಸ ಬುದ್ದಲಿಗಳಲ್ಲಿರತಕ್ಕದ್ದು ಎಂದು ಖಂಡಿತವಾಗಿ ಘೋಷಿಸಲು ಪ್ರಾರಂಭಿಸುವಾಗ, ಧಾರ್ಮಿಕ ಕ್ರೈಸ್ತ ಅಧಿಕಾರಿಗಳಿಂದ, ಕ್ಯಾಥೋಲಿಕರ ಬಿಷಪ್ ಗಳಿಂದ ಮತ್ತು ಸಿ.ಎಸ್.ಐ ಹಾಗೂ ಪೆಂತಕೋಸ್ಟ್ ಸಭಾಪಾಲಕರು ಹಾಗೂ ಜನರಲ್ ಸೂಪರಿಂಟೆಂಡೆಂಟ್ ಗಳಿಂದ ರೌದ್ರವನ್ನು ಎದುರಿಸಬಹುದು.
ಹೊಸ ದ್ರಾಕ್ಷಾರಸವು ಹಳೇ ಬುದ್ದಲಿಗಳಲ್ಲಿ ಯಾಕೆ ಹಾಕಿಡಬಾರದು ಎಂದು ಯೇಸು ಹೇಳಿದರು. ಯಾಕೆಂದರೆ ಹಳೇ ಬುದ್ದಲಿಯು ಹೆಚ್ಚಿಗೆ ಹಿಗ್ಗದೆ ಒಡೆಯುತ್ತದೆ. ಹಿಂದೆ ಹಳೇ ಬುದ್ದಲಿಯು ಹಳೇ ದ್ರಾಕ್ಷಾರಸವನ್ನು ಹಾಕಿಡಲು ಪ್ರಯೋಜನ ಕಾರಿಯಾಗಿತ್ತು. ಆದರೆ ಈಗ ಹೊಸ ದ್ರಾಕ್ಷಾರಸವನ್ನು ಅದರಲ್ಲಿ ಹಾಕಲು ಆಗುವುದಿಲ್ಲ.
ಹಳೇ ಬುದ್ದಲಿಯಾದ ಯೆಹೂದಿ ಧರ್ಮವು ಹಳೇ ದ್ರಾಕ್ಷಾರಸವನ್ನು ಹಾಕಿಡಲು ದೇವರಿಂದ ಮೋಶೆಯ ಮುಖಾಂತರ ವಿಧಿಸಲ್ಪಟ್ಟಿತ್ತು. ಆದರೆ ಯೇಸುವು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದಾಗ, ಹೊಸ ಬುದ್ದಲಿಯು ಬೇಕಾಯಿತು, ಹಳೆಯದು ಹೋಗಬೇಕಾಯಿತು.
ಹಳೇ ವಸ್ತ್ರವನ್ನು ಹೊಸ ತೇಪೆಯೊಂದಿಗೆ ಸಹ ಮಾರ್ಪಡಿಸಲಿಕ್ಕಾಗದೆಂದು ಯೇಸುವು ಹೇಳಿದರು. ಅದು ವಸ್ತ್ರವನ್ನು ಹರಿಯುವದು (ಲೂಕ 5:36).
ನಾವು ಕ್ರೈಸ್ತರಾಗಿ ಕ್ರೈಸ್ತ ಸಭೆಯಲ್ಲಿರುವುದರಿಂದ ನಾವು ಹಳೇ ಬುದ್ದಲಿಯಾದ ಯೆಹೂದಿ ಧರ್ಮದಿಂದ ಬಿಡುಗಡೆಯಾಗಿದ್ದೇವೆ ಎಂದು ಹೇಳಬಹುದು. ಆದರೆ ಸೂಕ್ಷ್ಮವಾಗಿ ನಿಮ್ಮ ಕ್ರೈಸ್ತ ಸಭೆಯನ್ನು ನೋಡುವಾಗ ಅನೇಕ ಹಳೇ ಒಡಂಬಡಿಕೆಯ ಗುಣ ಲಕ್ಷಣಗಳನ್ನು ಅದರಲ್ಲಿ ಕಾಣುವಿರಿ.
ಅವುಗಳಲ್ಲಿ ಅನೇಕ ಉದಾಹರಣೆಗಳು ಇರುವಾಗಲೂ ಕೇವಲ ಮೂರನ್ನು ಮಾತ್ರ ನೋಡಿರಿ:
ಮೊದಲನೆಯದಾಗಿ, ಯೆಹೂದಿಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲು ಲೇವಿಯರ ಕುಲವೆಂದು ವಿಶಿಷ್ಟ ಕುಲವೊಂದು ಇತ್ತು. ಎಲ್ಲ ಯೆಹೂದ್ಯರು ಯಾಜಕರಾಗಲು ಸಾದ್ಯವಿರಲಿಲ್ಲ. ಹೊಸ ಓಡಂಬಡಿಕೆಯಲ್ಲಾದರೂ ಎಲ್ಲಾ ವಿಶ್ವಾಸಿಗಳು ಯಾಜಕರು (1 ಪೇತ್ರ 2:5; ಪ್ರಕಟ. 1:6). ಕಾಲ್ಪನಿಕವಾಗಿ ಅನೇಕ ವಿಶ್ವಾಸಿಗಳಿಗೆ ಈ ವಿಷಯ ಗೊತ್ತಿದ್ದರೂ ಕೆಲವರು ಮಾತ್ರವೇ ಇದನ್ನು ಅನುಸರಿಸುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕ್ರೈಸ್ತ ಪಂಗಡಗಳಲ್ಲಿ ತಮ್ಮ ಪಾದ್ರಿ, ಪಾಸ್ಟರ್, ದೇವರ ಸೇವಕ ಅಥವಾ ಪೂರ್ಣಕಾಲ ದೇವರ ಸೇವಕರೆಂಬ ಬಿರುದುಳ್ಳವರು ಇರುತ್ತಾರೆ. ಇವರು ಲೇವಿಯರ ಹಾಗೆ ದೇವರ ಆರಾಧನೆಯನ್ನು ಜನರ ಮಧ್ಯದಲ್ಲಿ ನಡೆಸುವರು. ಹೊಸದಾಗಿ ಪರಿವರ್ತನೆ ಹೊಂದಿದ ಜನರಿಗೆ ದೀಕ್ಷಾ ಸ್ನಾನವನ್ನು ಮಾಡಿಸುವುದರಲ್ಲಿಯೂ; ರೊಟ್ಟಿ ಮುರಿಯುವುದರಲ್ಲಿಯೂ ಈ ಲೇವಿಯರೇ ಮುಂದಾಗಿರುತ್ತಾರೆ.
ಈ ಲೇವಿಯರು ದೇವ ಜನರ ದಶಮಾಂಶದ ಮೇಲೆ ಜೀವಿಸುವರು; ಕೂಟಗಳಲ್ಲಿ ಮುಂದಾಗಿರುವವರು ಹಾಗೂ ಕ್ರಿಸ್ತನ ದೇಹವಾದ ಸಭೆಗೆ ಸೇವೆಯ ಅವಕಾಶ ಕೊಡಲಾರದವರೂ ಆಗಿದ್ದಾರೆ. ‘ಒಬ್ಬನೇ ಬೋಧಕನ’ ಸೇವೆಯು ಹಳೇ ಬುದ್ದಲಿಗೆ (ಹಳೇ ಒಡಂಬಡಿಕೆಗೆ) ಸೇರಿದ್ದಾಗಿದೆ. ಹೊಸ ಒಡಂಬಡಿಕೆಯಲ್ಲಿ ಪ್ರತಿಯೊಬ್ಬ ವಿಶ್ವಾಸಿಯು ಹೊಸ ದ್ರಾಕ್ಷಾರಸವನ್ನು ಕುಡಿಯಬಹುದು; ಆತ್ಮನಿಂದ ಅಭಿಷೇಕೆಸಲ್ಪಡಬಹುದು; ಮತ್ತು ಆತ್ಮನ ವರಗಳನ್ನು ಹೊಂದಿ ಕೊಳ್ಳಬಹುದು. ಇಬ್ಬರು, ಇಲ್ಲವೆ ಮೂರು ಪ್ರವಾದಿಗಳು ಕೂಟಗಳನ್ನು ಪ್ರಾರಂಭಿಸಬಹುದು. ಒಬ್ಬರು ಅಥವಾ ಇಬ್ಬರು ಅನ್ಯ ಭಾಷೆಯಲ್ಲಿ ಮಾತಾಡಿ ಅರ್ಥ ಹೇಳಬಹುದು ಮತ್ತು ಪ್ರತಿಯೊಬ್ಬ ವಿಶ್ವಾಸಿಯು ಪ್ರವಾದಿಸುವ ಮುಖೇನ ದೇವರ ಸಭೆಯನ್ನು ಅಭಿವೃದ್ಧಿಗೊಳಿಸಬಹುದು. ಇದುವೇ ಹೊಸ ಬುದ್ದಲಿ (1 ಕೊರಿ 14:26-31). ಹೊಸ ದ್ರಾಕ್ಷಾರಸವು 1 ಕೊರಿ 13 ರಲ್ಲಿ ವಿವರಿಸಲ್ಪಟ್ಟಿದೆ. ಇದು ಪ್ರೀತಿಯ ಜೀವಿತವಾಗಿದೆ. ಹೊಸಬುದ್ದಲಿಯು 1 ಕೊರಿ 12 ಹಾಗೂ 14 ನೇ ಅಧ್ಯಾಯಗಳಲ್ಲಿ ವಿವರಿಸಲ್ಪಟ್ಟಿದೆ. ಆದರೆ ಎಷ್ಟು ಜನರು ದೇವರ ವಾಕ್ಯದ ಪ್ರಕಾರ ಈ ಮಾರ್ಗದಲ್ಲಿ ಹೋಗಲು ಅಪೇಕ್ಷಿಸುವರು? ಅಯ್ಯೋ! ಕೇವಲ ಸ್ವಲ್ಪ ಜನರು ಮಾತ್ರ. ಅನೇಕರು ತಮ್ಮ ಹಳೇ ಬುದ್ದಲಿ ಹಾಗೂ ಸಂಭಳ ಪಡೆದುಕೊಳ್ಳುವ ಲೇವಿಯರೊಂದಿಗೆ ಸಂತೃಪ್ತರಾಗಿದ್ದಾರೆ.
ಎರಡನೇಯದಾಗಿಯೆಹೂದ್ಯರಲ್ಲಿ ಪ್ರವಾದಿಗಳಿಗೆ ಮಾತ್ರ ದೇವರ ಆತ್ಮನು ಇದ್ದುದರಿಂದ, ಜನರು ದೇವರ ಚಿತ್ತವನ್ನು ತಿಳಿದುಕೊಳ್ಳಲು ಪ್ರವಾದಿಗಳ ಬಳಿಗೆ ಮಾತ್ರವೇ ಹೋಗುತ್ತಿದ್ದರು. ಆದರೆ ಹೊಸ ಒಡಂಬಡಿಕೆಯಲ್ಲಿ ಪ್ರವಾದಿಗಳ ಕಾರ್ಯವೇ ಬೇರೆಯಾಗಿದೆ. ಅದು ಕ್ರಿಸ್ತನ ದೇಹವೆಂಬ ಸಭೆಯನ್ನು ಕಟ್ಟುವುದು (ಎಫೆ. 4:12,12). ಈಗ ಎಲ್ಲಾ ವಿಶ್ವಾಸಿಗಳೂ ದೇವರಾತ್ಮನನ್ನು ಹೊಂದಿಕೊಳ್ಳಲು ಸಾಧ್ಯವಿರುವುದರಿಂದ ದೇವರ ಚಿತ್ತವನ್ನು ತಿಳಿಯಲು, ಅವರು ಬೇರೆ ಪ್ರವಾದಿಯ ಬಳಿಗೆ ಹೋಗ ಬೇಕಾಗಿಲ್ಲ (ಇಬ್ರಿಯ. 8:11; 1 ಯೋಹಾ 2:37). ಹೀಗಿದ್ದಾಗ್ಯೂ ಸಹ ಅನೇಕ ವಿಶ್ವಾಸಿಗಳು ಇನ್ನೂ ಹಳೇ ಬುದ್ದಲಿಗಳಲ್ಲಿಯೇ ಜೀವಿಸುತ್ತಾ ತಾವು ಏನು ಮಾಡಬೇಕು? ಯಾರನ್ನು ವಿವಾಹವಾಗಬೇಕು? ಮುಂತಾದ ವಿಷಯಗಳನ್ನು ತಿಳಿಯಲು ಬೇರೆ ದೇವರ ಸೇವಕರ ಬಳಿಗೆ ಹೋಗುತ್ತಾರೆ.
ಮನುಷ್ಯರ ಸಂಪ್ರದಾಯಗಳನ್ನು ಮುರಿಯಲು ಬೇಕಾಗುವ ಬಲಾತ್ಕಾರಿಗಳನ್ನು ದೇವರು ನಮ್ಮ ದೇಶದಲ್ಲಿ ಹೇರಳವಾಗಿ ಎಬ್ಬಿಸಲಿ(ಮತ್ತಾ 11:12).
ಮೂರನೆಯದಾಗಿ, ಯೆಹೂದ್ಯರು ವಿಶಾಲವಾದ ಪ್ರದೇಶದಲ್ಲಿ ಚದುರಿದ ಜನರ ದೊಡ್ಡ ಸಮುದಾಯವಾಗಿದ್ದರು, ಆದರೆ ಯೆರುಸಲೇಮಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿದ್ದರು ಮತ್ತು ಅವರ ನಾಯಕನಾಗಿ ಇಹಲೋಕದ ಮಹಾಯಾಜಕನನ್ನು ಹೊಂದಿದ್ದರು. ಹೊಸ ಒಡಂಬಡಿಕೆಯ ಕೆಳಗೆ, ಯೇಸು ಮಾತ್ರವೇ ನಮ್ಮ ಮಹಾಯಾಜಕರಾಗಿದ್ದಾರೆ ಮತ್ತು ನಾವು ಹೊಂದಿರುವಂತ ಕೇಂದ್ರ ಸ್ಥಾನವು ದೇವರ ಸಿಂಹಾಸನವಾಗಿದೆ. ಯೆಹೂದ್ಯರು ಮಧ್ಯದ ದಂಟಿನಿಂದ ಏಳು ಕೊಂಬೆಗಳು ಕವಲೊಡೆಯುವ ದೀಪಸ್ತಂಭವನ್ನು ಹೊಂದಿದ್ದರು (ವಿಮೋಚನಕಾಂಡ 25:31, 32). ಇದು ಹಳೆಯ ಬುದ್ದಲಿ.
ಹೊಸ ಒಡಂಬಡಿಕೆಯ ಅಡಿಯಲ್ಲಿ, ಪ್ರತಿಯೊಂದು ಸ್ಥಳೀಯ ಸಭೆಯು ಯಾವುದೇ ಕೊಂಬೆಯಿಲ್ಲದೇ, ಪ್ರತ್ಯೇಕವಾದ ದೀಪಸ್ತಂಭವಾಗಿದೆ. ನೀವು ಇದನ್ನು ಪ್ರಕಟಣೆ 1:12, 20ರಲ್ಲಿ ಸ್ಪಷ್ಟವಾಗಿ ನೋಡುತ್ತೀರಿ. ಯೆಹೂದ್ಯರ ದೀಪಸ್ತಂಭಕ್ಕಿಂತ ಭಿನ್ನವಾಗಿ - ಏಷ್ಯಾ ಖಂಡದಲ್ಲಿರುವ ಏಳು ಸ್ಥಳೀಯ ಸಭೆಗಳನ್ನು ಏಳು ಪ್ರತ್ಯೇಕ ದೀಪಸ್ತಂಭಗಳಿಂದ ಪ್ರತಿನಿಧಿಸಲಾಗುತ್ತದೆ. ಆ ದಿನಮಾನಗಳಲ್ಲಿ ಅಲ್ಲಿ ಯಾವುದೇ ಗುಂಪಿನ ಇಹಲೋಕದ ಪೋಪ್, ಅಥವಾ ಜನರಲ್ ಸೂಪರಿಟೆಂಡೆಂಟ್ ಅಥವಾ ಅಧ್ಯಕ್ಷನಾಗಲಿ ಇರಲಿಲ್ಲ. ಅಲ್ಲಿ ಯಾವುದೇ ವಿಷಯದಲ್ಲಿ ಅಂತಿಮ ಧ್ವನಿಯಾಗಿದ್ದ ಮುಖ್ಯ ಹಿರಿಯ ಸಹೋದರ ಅನ್ನುವಂತವರು ಭೂಲೋಕದಲ್ಲಿ ಎಲ್ಲಿಯೂ ಸಹ ಇರಲಿಲ್ಲ, ಪ್ರತಿ ಸ್ಥಳೀಯ ಸಭೆಯು ಸ್ಥಳೀಯ ಹಿರಿಯರಿಂದ ನಡೆಸಲ್ಪಡುತ್ತಿತ್ತು. ಈ ಹಿರಿಯರು ತಮ್ಮ ತಲೆಯಂತಿದ್ದ (ಮುಖ್ಯಸ್ಥನಂತಿದ್ದ) ಕರ್ತನಿಗೆ ನೇರವಾಗಿ ಜವಾಬ್ದಾರರಾಗಿದ್ದರು. ಆದರೆ ಇಂದು ನಮ್ಮ ಸುತ್ತಲೂ ಹಲವಾರು ಕ್ರೈಸ್ತರನ್ನು ನಾವು ಹೇಗೆ ನೋಡುತ್ತೇವೆ ಎಂದರೆ, ಅವರಿಗೆ ಒಂದು ಹೆಸರಿದ್ದರೂ ಅಥವಾ ಇಲ್ಲದಿದ್ದರೂ ಅವರು ಒಂದು ರೀತಿಯ ಪಂಗಡದ (ಡಿನೋಮಿನೇಷನ್) ವ್ಯವಸ್ಥೆಯಲ್ಲಿದ್ದಾರೆ (ಹಳೆಯ ಬುದ್ದಲಿ). ಏಕೆಂದರೆ ಕೆಲವು ಗುಂಪುಗಳು ತಾವು ಒಂದು ಪಂಗಡವಲ್ಲ ಎಂದು ಹೇಳಿಕೊಳ್ಳುತ್ತವೆಯಾದರೂ ಅವರು ಒಂದು ಪಂಗಡದ (ಡಿನೋಮಿನೇಷನ್)ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಇವೆಲ್ಲವೂ ಹಳೆಯ ಬುದ್ದಲಿಯಾಗಿದೆ.
ಭ್ರಷ್ಟಾಚಾರ ಹರಡುವುದನ್ನು ತಡೆಯಲು ದೇವರು ಸ್ಥಳೀಯ ಸಭೆಯ ಹೊಸ ಬುದ್ದಲಿಯನ್ನು ನೇಮಿಸಿದ್ದಾರೆ. ಏಷ್ಯಾ ಮೈನರ್ನ (ಖಂಡ) ಏಳು ಸಭೆಗಳು ಒಂದಕ್ಕೊಂದು ಕೊಂಬೆಗಳಾಗಿರುತ್ತಿದ್ದಲ್ಲಿ ಬಿಳಾಮನ ಮತ್ತು ನಿಕೊಲಾಯಿತರ ಭ್ರಷ್ಟ ಸಿದ್ಧಾಂತಗಳು ಮತ್ತು ಯೆಜೆಬೇಲಳ ಸುಳ್ಳು ಪ್ರವಾದನೆಗಳು (ಪ್ರಕಟಣೆ 2:14, 15 & 20) ಈ ಎಲ್ಲಾ ಏಳು ಸಭೆಗಳಿಗೂ ಹರಡುತ್ತಿದ್ದವು. ಆದರೆ ಇವೆಲ್ಲವೂ ಪ್ರತ್ಯೇಕ ದೀಪಸ್ತಂಭಗಳಾಗಿದ್ದುದರಿಂದ ಸ್ಮುರ್ನ ಮತ್ತು ಫಿಲದೆಲ್ಫಿಯ, ಈ ಎರಡು ಸಭೆಗಳು, ತಮ್ಮನ್ನು ಪರಿಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಾಯಿತು. ನೀವು ನಿಮ್ಮ ಸಭೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕಾದರೆ, ಪಂಗಡದ ಹಳೆ ಬುದ್ದಲಿಯನ್ನು ತೆಗೆದುಹಾಕಿರಿ.
ನಮ್ಮ ದೇಶದಲ್ಲಿ ಅನೇಕರನ್ನು ಬಂಧಿಸಿರುವ ಮನುಷ್ಯರ ಸಂಪ್ರದಾಯಗಳನ್ನು ಭಂಗ ಮಾಡಲು ಇಚ್ಛಿಸುವವರನ್ನು ಮತ್ತು ಪ್ರತಿಯೊಂದು ಸ್ಥಳೀಯ ಪ್ರದೇಶದಲ್ಲಿ ಕ್ರಿಸ್ತನ ದೇಹವನ್ನು ಕಟ್ಟುವವರನ್ನು ಕರ್ತನು ಎಬ್ಬಿಸಲಿ(ಮತ್ತಾಯ 11:12).