ಹೊಸ ವರ್ಷಕ್ಕಾಗಿ ರಸ್ತೆಯ ನಿಯಮಗಳು

ಬರೆದಿರುವವರು :   Santosh Poonen ಭಾಗಗಳು :   ಯೌವನಸ್ಥರಿಗೆ ಶಿಷ್ಯಂದಿರಿಗೆ
Article Body: 

”ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ ನೀನು ಭೂಮಿಯನ್ನೂ ಲೋಕವನ್ನೂ ನಿರ್ಮಿಸುವುದಕ್ಕಿಂತ ಮುಂಚೆಯೂ ನಿತ್ಯತ್ವದಿಂದ ನಿತ್ಯತ್ವಕ್ಕೂ ನೀನು ದೇವರಾಗಿದ್ದೀ. ಯಾಕೆಂದರೆ ಸಾವಿರ ವರುಷಗಳು ನಿನ್ನ ದೃಷ್ಠಿಗೆ ಕಳೆದು ಹೋದ ನಿನ್ನೆಯ ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಅವೆ. ನಮ್ಮ ವರುಷಗಳ ದಿವಸಗಳು ಎಪ್ಪತ್ತು ವರುಷ; ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವುಗಳ ಬಲವು ಕಷ್ಟವೂ ಪ್ರಯಾಸವೂ ಆಗಿವೆ; ಯಾಕೆಂದರೆ ಅದು ಬೇಗ ಕೊಯ್ದು ಹಾಕಲ್ಪಡುತ್ತದೆ; ಮತ್ತು ನಾವು ಹಾರಿ ಹೋಗುತ್ತೇವೆ. ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸು” (ಕೀರ್ತನೆಗಳು 90:2,4,10,12).

ನಾವು ಈ ಅಂತ್ಯಕಾಲದಲ್ಲಿ ಮತ್ತೊಂದು ವರುಷದ ಪ್ರಾರಂಭವನ್ನು ಸಮೀಪಿಸುತ್ತಿದ್ದೇವೆ. ಇಹಲೋಕದಲ್ಲಿರುವ ನಮ್ಮ ಸಮಯ ಎಷ್ಟು ಕಡಿಮೆಯುಳ್ಳದ್ದು ಮತ್ತು ಜೀವಿತದಲ್ಲಿ ಪ್ರತಿಯೊಂದು ಕ್ಷಣವು ಎಷ್ಟು ಮುಖ್ಯ ಎಂಬುದನ್ನು ಕೀರ್ತನೆಗಳಲ್ಲಿನ ವಾಕ್ಯಗಳ ಮುಖಾಂತರ ನಮಗೆ ನಾವು ನೆನಪು ಮಾಡಿಕೊಳ್ಳುವುದಕ್ಕೆ ಒಂದು ಉತ್ತಮ ಅವಕಾಶ ಒದಗಿ ಬಂದಿದೆ.

ಈ ಹೊಸ ವರುಷದಲ್ಲಿ ಮುಂದೆ ರಸ್ತೆ ಇರುವುದರ ಬಗ್ಗೆ ನೀವು ಯೋಚಿಸುವಾಗ, ನಾಲ್ಕು ತುಂಬಾ ಸರಳ ರಸ್ತೆ ನಿಯಮಗಳನ್ನು ಅಳವಡಿಸಿಕೊಂಡು ಜೀವಿಸುವುದು ಅತ್ಯವಶ್ಯಕವಾಗಿದೆ.

1. ಕೆಂಪು ದೀಪಗಳಲ್ಲಿ ನಿಂತುಕೊಳ್ಳಿ

ನಾವು ಕೇವಲ ಹಸಿರು ದೀಪಗಳನ್ನೇ ಹೊಂದಿದ್ದೀವಿ ಎಂದು ಭಾವಿಸುವ ಮೂಲಕ, ಜೀವಿತದ ಕೊನೆಯವರೆಗೆ ನಮ್ಮ ಪ್ರವೃತ್ತಿ ಏನೆಂದರೆ, ರಸ್ತೆಯ ನಿಯಮಗಳನ್ನು ಪಾಲಿಸದೇ ನುಗ್ಗುವುದಾಗಿದೆ. ಇದರ ಹೊರತಾಗಿ, ನಾವು ಯಾವುದಾದರೂ ವಿಷಯವಾಗಿ ನಿರ್ಧಿಷ್ಠ ನಿರ್ಧಾರ ತೆಗೆದುಕೊಳ್ಳುವಂತ ಸಮಯಕ್ಕೆ ಬಂದಾಗ, ಅಲ್ಲೇ ನಿಲ್ಲಿರಿ ಮತ್ತು ಅದನ್ನು ಅಲ್ಲಿಯೇ ದೇವರಿಗೆ ಅರಿಕೆ ಮಾಡಿರಿ. ನಾವು ಯಾವ ಮಾರ್ಗದಲ್ಲಿ ಸಾಗಬೇಕು ಎಂದು ತೋರಿಸುವಂತೆ ದೇವರಲ್ಲಿ ಕೇಳುವಾಗ, ಯಾವ ದಾರಿಯಲ್ಲಿ ಹೋಗಬೇಕೆಂದು ದೇವರು ಮಾರ್ಗದರ್ಶನ ಕೊಡುವ ಮೂಲಕ ನಮಗೆ ಪ್ರತಿಕ್ರಿಯಿಸುತ್ತಾನೆ (ಯೆಶಾಯ 30:31 ಓದಿ). ಮತ್ತು ಆತನೇ ನಮ್ಮ ಮುಂದಿನ ಮಾರ್ಗಗಳನ್ನು ಸರಾಗ ಮಾಡುತ್ತಾನೆ (ಜ್ಞಾನೋಕ್ತಿಗಳು 3:6). ಮತ್ತೊಂದು ಕಡೆ, ದೀಪವು ಹಸಿರು ಬಣ್ಣಕ್ಕೆ ತಿರುಗುವ ತನಕ ದೇವರಿಗಾಗಿ ಕಾಯದಿದ್ದರೆ, ನಾವು ಅಪಘಾತದಲ್ಲಿ ಕೊನೆಗಾಣುತ್ತೇವೆ.

2. ಹಸಿರು ದೀಪಗಳಲ್ಲಿಯೇ ನಿಲ್ಲಬೇಡಿ

ನಮ್ಮನ್ನು ನಾವು ನಿರಾಕರಿಸುವಂತ (ಸ್ವಾರ್ಥಕ್ಕೆ ಸಾಯುವಂತ) ಪ್ರತಿಯೊಂದು ಅವಕಾಶಗಳನ್ನು ನಾವು ಪಡೆದುಕೊಳ್ಳುವಂತದ್ದು ಮತ್ತು ಶಿಲುಬೆಯನ್ನು ಹೋರುವಂತದ್ದು ಮತ್ತು ಯೇಸುವನ್ನು ಹಿಂಬಾಲಿಸುವಂತದ್ದು ಹಸಿರು ದೀಪವಾಗಿದೆ, ನಾವು ಕಾಯದೇ ಯಾವಾಗಲೂ ಈ ಹಸಿರು ದೀಪದ ಮುಖಾಂತರ ಸಾಗಬೇಕು. ಪ್ರತಿ ಸನ್ನಿವೇಶಗಳಲ್ಲಿ ಮತ್ತೊಬ್ಬರೊಟ್ಟಿಗೆ ಸಂಬಂಧಗಳನ್ನು ಸರಿ ಮಾಡಲು ಕಟ್ಟುವ ಸೇತುವೆಯು ಹಸಿರು ದೀಪವಾಗಿದೆ ಮತ್ತು ಯಾವುದೇ ಕಾರಣಕ್ಕೂ ಕಾಯದೇ ಈ ಹಸಿರು ದೀಪದ ಮುಖಾಂತರ ಯಾವಾಗಲೂ ಸಾಗಬೇಕು (ರೋಮ 12:18). ನಾವು ಕ್ರಿಸ್ತನಲ್ಲಿ ನಿಜವಾಗಿಯೂ ನೂತನಗೊಂಡಿದ್ದೀವಿ ಎಂಬುದರ ಒಂದು ಗುರುತು ಯಾವುದೆಂದರೆ, ನಾವು ”ಸಮಾಧಾನಕರರಾಗಿದ್ದೇವೆ” (2 ಕೊರಿಂಥ 5:17-20). ನಾವು ಕ್ಷಮೆ ಕೇಳುವಂತ ಅವಕಾಶವನ್ನು ಲಭಿಸಿಕೊಂಡಾಗ ಮತ್ತು ಮತ್ತೊಬ್ಬರೊಟ್ಟಿಗೆ ವಿಷಯವನ್ನು ಸರಿ ಮಾಡುವಂತ ಅವಕಾಶ ಪಡೆದುಕೊಂಡಾಗ, ನಮ್ಮ ಗರ್ವದಿಂದ, ಅಥವಾ ನಮ್ಮನ್ನು ನಾವು ಸಮರ್ಥನೆ ಮಾಡಿಕೊಳ್ಳುವುದರಿಂದ ಅಥವಾ ಬೇರೆ ವ್ಯಕ್ತಿಯನ್ನು ದೂಷಣೆ ಮಾಡುವುದರಿಂದ ನಾವು ಕ್ಷಮೆ ಕೇಳಲು ಮತ್ತು ವಿಷಯವನ್ನು ಸರಿ ಮಾಡಲು ತಡ ಮಾಡಿದರೆ, ಅದು ಹಸಿರು ದೀಪದಲ್ಲಿ ಮುಂದಕ್ಕೆ ಸಾಗುವ ರೀತಿಯಲ್ಲಾ. ಇದರಿಂದ ನಾವು ಸಂಚಾರ ದಟ್ಟಣೆಯನ್ನು ನಿರ್ಮಾಣ ಮಾಡುವವರಾಗುತ್ತೇವೆ ಮತ್ತು ಅಂತಿಮವಾಗಿ, ನಾವು ಅಪಘಾತಕ್ಕೊಳಗಾಗುತ್ತೇವೆ. ಇದರ ಹೊರತಾಗಿ, ಯಾವಾಗಲೂ ತಕ್ಷಣವೇ ನಾವು ಹಸಿರು ದೀಪದ ಮೂಲಕ ಹೋಗಿ, ಸಮಾಧಾನಪಡಿಸುವವರಾಗಬೇಕು. (ಮತ್ತಾಯ 5:9)

3. ರಸ್ತೆ ಬಿಟ್ಟು ಆಚೆ ಈಚೆ ಚಲಿಸಬೇಡಿ

ನಾವು ನಮ್ಮ ಪ್ರಯಾಣವನ್ನು ದೇವರೊಟ್ಟಿಗೆ ರಸ್ತೆಯಲ್ಲಿ ಸಾಗಿಸುವಾಗ, ಸೈತಾನನು ನಿರಂತರವಾಗಿ ನಮ್ಮನ್ನು ರಸ್ತೆಯ ಆಚೆ ಈಚೆ ಸಾಗುವಂತೆ ಪ್ರಯತ್ನಿಸುತ್ತಿರುತ್ತಾನೆ. ರಸ್ತೆಯ ಅಕ್ಕಪಕ್ಕದಲ್ಲಿ ಅನೇಕ ಮರಗಳು ಮತ್ತು ಹೂವುಗಳಿರುತ್ತವೆ (ಅಂದರೆ ಬೇರೆ ಜನರ ಅಭಿಪ್ರಾಯಗಳು), ಅದು ನಮ್ಮನ್ನು ಬೇರೆ ಕಡೆಗೆ ನಡೆಸುತ್ತದೆ. ನಾವು ಮತ್ತೊಬ್ಬರನ್ನು ಮೆಚ್ಚಿಸುವಂತ ಬಯಕೆಯನ್ನು ನಮ್ಮಲ್ಲಿ ಅನುಮತಿಸುವಾಗ ಅಥವಾ ಜನರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಭಯ ಪಡುವಾಗ, ಅದು ನಮ್ಮನ್ನು ಬೇರೆ ಕಡೆಗೆ ನಡೆಸುತ್ತದೆ (ಗಲಾತ್ಯ 1:10), ಹೀಗಾದಾಗ ಆದಷ್ಟು ಬೇಗ ನಾವು ಪ್ರಮುಖ ರಸ್ತೆಯಿಂದ ಹೊರಗಡೆ ಬರುತ್ತೇವೆ ಮತ್ತು ಡಿಕ್ಕಿ ಹೊಡೆಯುವ ಮುಖೇನ ಕೊನೆಗಾಣುತ್ತೇವೆ. ನನ್ನ ತಂದೆಯು ನನಗೆ ನಿರಂತರವಾಗಿ ಹೇಳುತ್ತಿದ್ದದ್ದು, ನಿನಗೆ ಒಂದು ಆಯ್ಕೆ ಇರುತ್ತದೆ, ಜನರನ್ನು ”ಮೆಚ್ಚಿಸುವುದು” ಅಥವಾ ಅವರನ್ನು ”ಆಶೀರ್ವದಿ”ಸುವುದು. ಯಾವಾಗಲೂ ಅವರನ್ನು ”ಆಶೀರ್ವದಿ”ಸುವುದನ್ನು ಆಯ್ಕೆ ಮಾಡಿಕೋ ಎಂಬುದಾಗಿ. ಜನರನ್ನು ಮೆಚ್ಚಿಸಲು ನೀವು ಪ್ರತಿಭಾವಂತರಾಗಬೇಕಾದ ಅವಶ್ಯಕತೆ ಇರುತ್ತದೆ - ಅಂದರೆ ”ನೀವು” ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ನೀವು ನಿಜವಾಗಿಯೂ ಅವರಿಗೆ ಸಹಾಯಿಸಬೇಕು ಎಂದರೆ, ಹೇಗಿದ್ದರೂ, ನಿಮಗೆ ಪವಿತ್ರಾತ್ಮನ ಬಲದ ಅಗತ್ಯತೆ ಇದೆ - ಅಂದರೆ ”ನೀವು’’ ಎನ್ನುವುದು ಕಡಿಮೆಯಾಗಬೇಕಾದುದು ಉತ್ತಮ (ಯೋಹಾನ 3:30)!

4. ನಿಮ್ಮ ಪಥದಲ್ಲಿಯೇ ಇರಿ

ದುರದೃಷ್ಟ ಎಂದರೆ, ಅನೇಕ ಜನರು ರಸ್ತೆಯಲ್ಲಿ ಗುರುತಿಸಿರುವ ಪಥದಲ್ಲಿ ನಿಲ್ಲದೇ ಇರುವಂತ ಹವ್ಯಾಸವನ್ನು ಹೊಂದಿದ್ದಾರೆ ಮತ್ತು ಇದು ಕೆಲವೊಮ್ಮೆ ಅಪಘಾತಕ್ಕೆ ಮುನ್ನೆಡುಸುತ್ತದೆ. ನಮ್ಮ ಕ್ರೈಸ್ತ ಜೀವಿತದಲ್ಲಿಯೂ ಸಹ ದೇವರು ನಮ್ಮ ರಕ್ಷಣೆಗಾಗಿ ಪಥವನ್ನು ಎಳೆದಿದ್ದಾನೆ. ನಮ್ಮ ಪಥದಲ್ಲಿರಬೇಕು ಎನ್ನುವುದರ ಅರ್ಥ ಏನೆಂದರೆ, ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೇ, ನಮ್ಮ ಸ್ವಂತ ಕಾರ್ಯವನ್ನೇ ನಡೆಸಿಕೊಂಡು ಹೋಗುವುದಾಗಿದೆ ( 1 ಥೆಸಲೋನಿಕ 4:11-12) ಮತ್ತು ಬೇರೆ ಜನರ ಕಾರ್ಯಗಳಲ್ಲಿ ಎಂದಿಗೂ ತಲೆ ಹಾಕಬೇಡಿ (2 ಥೆಸಲೋನಿಕ 3:11, 1 ಪೇತ್ರ 4:15). ನಮಗೆ ಸಂಬಂಧಪಡದ ವಿಷಯಗಳಲ್ಲಿ ನಾವು ತೊಡಗಿಕೊಂಡಾಗ, ಅದು ನಮ್ಮ ಪಥವನ್ನು ಬಿಟ್ಟು ಮತ್ತೊಬ್ಬರ ಪಥದೊಳಕ್ಕೆ ಹೋಗಿ ನಿಲ್ಲುವುದಾಗಿದೆ. ಇದು ಅಂತಿಮವಾಗಿ ನಮ್ಮ ಸ್ವಂತ ಜೀವಿತವೇ ನಷ್ಟಕ್ಕೊಳಗಾಗುತ್ತದೆ. ಅದು ಅಲ್ಲದೇ ನಮ್ಮ ಸುತ್ತಮುತ್ತಲಿನ ಮತ್ತೊಬ್ಬರಿಗೂ ಇದರಿಂದ ಹಾನಿಯಾಗುತ್ತದೆ.

ಮತ್ತು ಕೊನೆಯದಾಗಿ : ನಾವು ನಿಧಾನವಾಗಿ ಚಲಿಸಬಾರದು ಮತ್ತು ನಮ್ಮ ಪ್ರಯಾಣದ ಮಾರ್ಗವನ್ನು ಎಳೆದುಕೊಂಡು ಹೋಗಬಾರದು. ಆದರೆ ಇದರ ಹೊರತಾಗಿ, ಪರಲೋಕದ ಬಹುಮಾನವನ್ನು ಗೆಲ್ಲಲ್ಲು ಪೂರ್ತಿ ವೇಗವಾಗಿ ಚಲಿಸೋಣ (1 ಕೊರಿಂಥ 9:24)!