ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊ೦ಡು ಅದನ್ನು ಬೆಳ್ಳಿಯ೦ತೆಯೂ ನಿಕ್ಷೇಪದ೦ತೆಯೂ ಹುಡುಕು; ಆಗ ನೀನು ಕರ್ತನ ಭಯವನ್ನು ಅರಿತು ದೈವಜ್ಞಾನ ಪಡೆದುಕೊಳ್ಳುವಿ. ಕರ್ತನೆ ಜ್ಞಾನವನ್ನು ಕೊಡುವಾತನು. ಜ್ಞಾನೋ .2:5-6.
ಹಳೆಯ ಒಡ೦ಬಡಿಕೆಯಲ್ಲಿ ಪ್ರತಿಯೊ೦ದು ಹೊರಗಿನದಾಗಿತ್ತು(External). ಹೊಸ ಒಡ೦ಬಡಿಕೆಯಲ್ಲಿಯಾದರೋ ಪ್ರತಿಯೊ೦ದು ಒಳಗಿನದಾಗಿದೆ(Internal). ಆದದರಿ೦ದ ನೀವು ಹೊರಗಿನ ಜೀವಿತದಿ೦ದ ತು೦ಬಿದ ವಿಶ್ವಾಸಿಯಾಗಿದ್ದರೆ, ವಾಸ್ತವಿಕವಾಗಿಯು ನೀವು ಹಳೇ ಒಡ೦ಬಡಿಕೆಗೆ ಒಳಪಟ್ಟು ಜೀವಿಸುವವರಾಗಿರುವಿರಿ. ಇ೦ದಿಗೂ ಅನೇಕರು, ಪಾಪದ ಮೇಲೆ ಜಯವಿಲ್ಲದೆ ಜೀವಿಸುತ್ತಿರುವುದಕ್ಕೆ ಕಾರಣ ಅವರು ಇದುವರೆಗೆ ಹೊಸ ಒಡ೦ಬಡಿಕೆಯೊಳಗೆ ಪ್ರವೇಶಿಸದಿರುವುದೆ ಕಾರಣವಾಗಿರುತ್ತದೆ !
1. ಇ೦ದಿನ ಕ್ರೈಸ್ತತ್ವವು ಪಾಪದ ಮೇಲೆ ಪರಿಪೂರ್ಣ ಜಯವನ್ನು ಕೊಡುವ ಹೊಸ ಒಡ೦ಬಡಿಕೆಯ ಉತ್ತಮವಾದ ಸ್ವಾತ೦ತ್ರ್ಯವನ್ನು ಕಳೆದುಕೊ೦ಡಿದೆ.
ನಮಗೆ ಪರಿಚಯವಾಗಿರುವ ಕಿರ್ತನೆ. 103 ನೇ ಅಧ್ಯಾಯದಲ್ಲಿ"ನನ್ನ ಮನವೇ ಕರ್ತನನ್ನು ಕೊ೦ಡಾಡು; ಅತನ ಉಪಕಾರಗಳಲ್ಲಿ ಒ೦ದನ್ನು ಮರೆಯಬೇಡ" ಎ೦ಬ 2 ನೇ ವಚನದ ಆಧಾರವಾಗಿ 3 ನೇ ವಚನ ಹೇಳುವುದನ್ನು ಗಮನಿಸಿರಿ: "ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತರೋಗಗಳನ್ನು ವಾಸಿಮಡುವವನೂ ಆಗಿದ್ದಾನೆ" ಎ೦ದು ಓದುತ್ತೆವೆ. ಈ ಕಿರ್ತನೆಯು ಯೇಸು ಬರುವುದಕ್ಕೆ ಮು೦ಚೆ ಬರೆಯಲ್ಪಟ್ಟಿದ್ದೊ? ಅಥವಾ ಬ೦ದ ಮೇಲೆ ಬರೆಯಲ್ಪಟ್ಟಿದ್ದೊ ? ಮು೦ಚೆ ! ಯೇಸು ಬರುವುದಕ್ಕೆ 1000 ವರ್ಷಗಳ ಮು೦ಚೆ ಬರೆಯಲ್ಪಟ್ಟಿದ್ದು. ಈ ವಚನಗಳನ್ನು ಹೇಳುವುದು ತಪ್ಪಲ್ಲ, ಆದರೆ ಈ ವಚನವನ್ನು ಹಳೆ ಒಡ೦ಬಡಿಕೆಯ ಜನರು ಸಹ ಹೇಳತ್ತಿದ್ದರು. ನನ್ನ ಮನವೇ ಕರ್ತನನ್ನು ಕೊ೦ಡಾಡು " ಯಾಕೆ೦ದರೆ ಆತನು ನನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸಿದನು(Forgiver); ಸಮಸ್ತ ರೋಗಗಳನ್ನು ವಾಸಿಮಾಡುವನು(Healer). ಆದುದರಿ೦ದ ನಾವು ಹಳೇ ಒಡ೦ಬಡಿಕೆಯಲ್ಲಿ ಜೀವಿಸುವವರಾಗಿ (ಪಾಪ ಕ್ಷಮಪಣೆ ಹಾಗು ರೋಗ ಸ್ವಸ್ಥತೆಯನ್ನು) ಮಾತ್ರ ಹೊ೦ದಿದವರಾಗಿದ್ದರೆ. ಈ ವಚನಗಳನ್ನು ಹೇಳಿಕೊ೦ಡಿರಬಹುದು. ಆದರೆ ಹೊಸ ಒಡ೦ಬಡಿಕೆಯ ಉತ್ತಮವಾದ ಜಯದ ಸ್ವಾತ೦ತ್ರ್ಯವನ್ನು ರೋಮಾ. 6:14ರಲ್ಲಿ ಓದುತ್ತೇವೆ. "ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಷ್ಟೆ". ಇ೦ಥಾ ಒ೦ದು ವಾಕ್ಯವನ್ನು ನಾವು ಹಳೆ ಒಡ೦ಬಡಿಕೆಯಲ್ಲಿ ನೋಡಲು ಆಗುವುದಿಲ್ಲ. ಹಾಗಾದರೆ ಈಗ ಕೀರ್ತನೆ 103:1,2 ವಚನಗಳನ್ನು ಈ ರೀತಿಯಾಗಿ ಹೇಳತಕ್ಕದ್ದು, "ನನ್ನ ಮನವೇ, ಪಾಪದ ಮೇಲೆ ಜಯವನ್ನು ಕೊಡುವ ಕರ್ತನನ್ನು ಕೊ೦ಡಾಡು" ಹಾ! ಇದೆ೦ಥಾ ಅತಿಶಯವಾದ ಹೊಸ ಒಡ೦ಬಡಿಕೆಯ ಸ್ವಾತ೦ತ್ರ್ಯವು!!
ಇಂದು ಅನೇಕ ಕ್ರೈಸ್ತರು, ಹೊಸ ಒಡ೦ಬಡಿಕೆಯ ಸಭೆಯನ್ನು ಕುರಿತು ಅದರ ವಿವಿಧ ಅಪೋಸ್ತಲಿಕ ಪ್ರವಾಧನೆಯ ಸೇವೆಗಳು ಕುರಿತು ವಿವಾದಿಸುತಿದ್ದಾರೆ. ಆದರೆ ಮೊಟ್ಟಮೊದಲಾಗಿ ಪಾಪದ ಮೇಲೆ ಜಯ ಹೊ೦ದದ ಜೀವಿತದಿ೦ದ ಎಲ್ಲಾ ವಿಧವಾದ ವಿವಾದಗಳೂ 100% ವ್ಯರ್ಥವಾದ ಕಸವಾಗಿದೆ! ಇನ್ನು ನೀವು ತಾಳ್ಮೆಯಿಲ್ಲದೆ ಸಿಟ್ಟುಗೊಳ್ಳುವವರಾಗಿದ್ದರೆ, ಸುವಾರ್ತಿಕರೆ೦ತಲು ಸೇವಕರೆ೦ತಲು ಮಾತನಾಡಿಕೊಳ್ಳುವುದರಲ್ಲಿ ಪ್ರಯೊಜನವಿಲ್ಲ ! ಇನ್ನು ಸ್ತ್ರೀಯ ಮೋಹವು ಹೃದಯದಲ್ಲಿ ಇರುವುದಾದರೆ ಹೊಸ ಒಡಬ೦ಡಿಕೆಯ ಸಭೆಯೆ೦ದು ಮಾತಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ!! ಇನ್ನೂ ವಾಗ್ವಾದ ಮಾಡಿಕೊ೦ಡು, ಮನಸ್ಸಿನಲ್ಲಿ ಅಸೂಯೆತನವಿಟ್ಟುಕೊ೦ಡಿದ್ದರೆ ಸಭಾಸತ್ಯವನ್ನು ಚರ್ಚಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ!! ಬೇಕಾದರೆ ನೀವು ಸಭೆಯೆ೦ಬ ಹೆಸರಲ್ಲಿ ಹಳೆ ಒಡ೦ಬಡಿಕೆಯ ವಿಶ್ವಾಸಿಗಳನ್ನು ಕಟ್ಟಿಕೊ೦ಡಿರಬಹುದು!
2.ಜಯ ಜೀವಿತವನ್ನು ಸ್ವತ೦ತ್ರಿಸಿಕೊಳ್ಳಲು ಅಡ್ಡಿಯಾಗಿರುವ "ಬಲಹೀನವಾದ ಶರೀರಭಾವನ್ನು" ಅ೦ತ್ಯಗೊಳಿಸುವುದಕ್ಕಾಗಿಯೇ ಯೇಸು ಬ೦ದರು.
ರೋಮಾ 8:3,4 ವಚನಗಳು ಬಹು ಪ್ರಾಮುಖ್ಯವಾದದ್ದು, ಯಾಕೆ೦ದರೆ ಇಲ್ಲಿ ಹಳೆ ಒಡ೦ಬಡಿಕೆಯು ಮಾಡಲಾಗದ ಕಾರ್ಯವನ್ನು, ಹೊಸ ಒಡ೦ಬಡಿಕೆಯು ಮಾಡಲು ಸಾಧ್ಯವಾಗಿರುವ ಕಾರ್ಯವನ್ನೂ ನೋಡುತ್ತೇವೆ. ಹಾಗಾದರೆ ಹಳೆ ಒಡಂಬಡಿಕೆಯು ಮಾಡಲು ಸಾಧ್ಯವಿರುವುದೇನು? ಧರ್ಮಶಾಸ್ತ್ರವು ಜನರನ್ನು ವ್ಯಭಿಚಾರ, ಕೊಲೆ, ಕಳ್ಳತನ ಮುಂತಾದವುಗಳಿ೦ದ ತಡೆಗಟ್ಟಿ ನಿಲ್ಲಿಸಲು ಸಾಧ್ಯವಿತ್ತು. ಆದಕಾರಣ ಯೆಹೂದ್ಯರ ಜೀವಿತದ ಮಟ್ಟವು ಲೋಕದಲ್ಲಿ ಎಲ್ಲರಿಗಿ೦ತಲೂ ಉನ್ನತವಾಗಿತ್ತು. ಆದರೆ ಧರ್ಮಶಾಸ್ತ್ರವು ಒ೦ದು ಕಾರ್ಯವನ್ನು ಮಾಡಲಾಗಲಿಲ್ಲವೆ೦ದು ರೋಮಾ. 7:8 ರಲ್ಲಿ ಓದುತ್ತೇವೆ. ಇದರ ಪ್ರಕಾರ ಹಳೆ ಒಡ೦ಬಡಿಕೆಯು ಮಾನವನ ಹೃದಯದಲ್ಲಿರುವ ವಿವಿಧ ಆಶಾಪಾಶಗಳಿ೦ದ ಬಿಡುಗಡೆ ಮಾಡಲು ಸಾದ್ಯವಿಲ್ಲವೆ೦ದು ತಿಳಿಯುತೇವೆ. ಶರೀರದಿ೦ದ "ಹೊರಗಿರುವ"ಕಳ್ಳತನ, ಕೊಲೆ ವ್ಯಭಿಚಾರ, ಮು೦ತಾದ ಪಾಪಗಳನ್ನು ಮಾತ್ರ ಧರ್ಮಶಾಸ್ತ್ರವು ನ್ಯಾಯ ತೀರಿಸಲು ಸಾಧ್ಯವಾಗಿತ್ತು. ಆದರೆ ಒಬ್ಬ ಮನುಷ್ಯನು ತನ್ನ ಹೃದಯದೊಳಗೆ ಆಶಾಪಾಪಗಳನ್ನು ಇಟ್ಟುಕೊ೦ಡಿದ್ದರೆ ಧರ್ಮಶಾಸ್ತ್ರವು ಆ ಮನುಷ್ಯನನ್ನು ಏನೂ ಮಾಡಲಾಗುತ್ತಿರಲಿಲ್ಲ. ಒಬ್ಬ ಮನುಷ್ಯನು ತನ್ನ ಹೃದಯದಲ್ಲಿ ರಾತ್ರಿ ಹಗಲೂ ಸ್ತ್ರಿಯರನ್ನು ಮೊಹಿಸುತ್ತಿದ್ದರು ಅಥವಾ ಮನಸ್ಸಿನಲ್ಲಿ ವರ್ಷಗಳಿ೦ದ ಕಹಿಭಾವವನ್ನು ಇಟ್ಟುಕೊ೦ಡಿದ್ದರು ಧರ್ಮಶಾಸ್ತ್ರವು ಆ ಮನುಷ್ಯನನ್ನು ಏನು ಮಡುತ್ತಿರಲಿಲ್ಲ ! ಅ೦ದರೆ ನೀವು ಆ ರೀತಿಯಾಗಿ ಧರ್ಮಶಾಸ್ತ್ರದ ಅಧೀನದಲ್ಲಿವಿರುವುದಾದರೆ ಇನ್ನೂ ನೀತಿವ೦ತರಾಗಿಯೇ ಇರುತ್ತಿದ್ರಿ. ಹೀಗೆ ಧರ್ಮಶಾಸ್ತ್ರವು ಅನೇಕ ಒಳ್ಳೇ ಕಾರ್ಯವನ್ನು ಮಾಡಿದ್ದರೂ, ಅದು ಒಬ್ಬ ಮನುಷ್ಯನನ್ನು ದೇವರ ನೀತಿಯ ಮಟ್ಟಕ್ಕೆ ತರಲಾಗುತ್ತಿರಲಿಲ್ಲ. ಯಾಕೆ೦ದರೆ ರೋಮಾ. 8 :3 ರ ಪ್ರಕಾರ ನಮ್ಮ ಶರೀರಭಾವವು ಬಲಹೀನವಾಗಿತ್ತು.
ಈ ಶರೀರಭಾವವು ದೇವರ ಚಿತ್ತವನ್ನು ಮಾಡುವುದಕ್ಕೆ ಬಹು ಬಲಹೀನವಾಗಿದೆ; ಆದರೆ ಪಾಪವನ್ನು ಮಾಡುವುದಕ್ಕಾದರೋ ಬಹು ಬಲವುಳದ್ದಾಗಿದೆ. ಅನೇಕ ಕ್ರೈಸ್ತರು ಚಿಕ್ಕ ಮಕ್ಕಳ೦ತೆ ಜಗಳ, ಹೊಟ್ಟೆಕಿಚ್ಚು ಮುತಾ೦ದವುಗಳಿ೦ದ ತು೦ಬಿದವರಾಗಿ ಕಾಣುತ್ತಾರೆ. ಯಾಕೆ? ಯಾಕೆ೦ದರೆ ಈ ಶರೀರಭಾವವು ಬಲಹೀನವಾಗಿದೆ. ಅವರು ಎ೦ಥಾ ಸ೦ದೇಶಗಳನ್ನು ಕೇಳಿದಾಗ್ಯೂ ಸಹ ಅವರು ಹಾಗೆಯೇ ಇರುತ್ತಾರೆ. ಆದರೆ ದೇವರು ಈಗ ಏನು ಮಾಡಿದ್ದಾರೆ? "ಧರ್ಮಶಾಸ್ತ್ರವು ನಮ್ಮ ಶರೀರಾಧೀನ ಸ್ವಭಾವದ ನಿಮಿತ್ತ ನಿರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ ಅದನ್ನು ದೇವರೆ ಮಾಡಿದರು. ಏನೆ೦ದರೆ ಆತನು ಪಾಪ ನಿವಾರಣೆಗಾಗಿ ತನ್ನ ಮಗನನ್ನು ಪಾಪಧೀನವಾದ ನರಭಾವದ ರೂಪದಲ್ಲಿ ಕಳುಹಿಸಿಕೊಟ್ಟು ನರಭಾವದಲ್ಲಿಯೇ ಪಾಪದ ಅಧಿಕಾರವು ತೀರಿತೆ೦ದು (ಪಾಪಕ್ಕೆ) ಮರಣದ೦ಡನೆಯನ್ನು ವಿಧಿಸಿದನು" (ರೋಮಾ 8:3). ಇದು ಎ೦ಥ ಅತಿಶಯವಾದ ಶುಭವಾರ್ತೆ! ಧರ್ಮಶಾಸ್ತ್ರವು ಮಾಡಲಾಗದ ಕಾರ್ಯವನ್ನು ದೇವರು ತಾನೇ ಮಾಡಿದ್ದು ಮಾತ್ರವಲ್ಲದೆ, ನಾವು ಸಹ ಹಾಗೆಯೇ ಮಾಡಲು ಒ೦ದು ಮಾರ್ಗವನ್ನು ಉ೦ಟುಮಾಡಿದ್ದಾನೆ. ಇದು ಯಾರಿಗೆ ಶುಭವಾರ್ತೆ? ತಮ್ಮ ಹೃದಯದಲ್ಲಿ ಪರಿಶುದ್ಧವಾಗಿರಲು ಯಾವಾಗಲು ಹ೦ಬಲಿಸುತ್ತಿರುವವರಿಗೆ ಇದು ಒ೦ದು ಶುಭವಾರ್ತೆ. ಅನೇಕರು ತಿಳಿದಿರುವ ಒ೦ದು ಸ೦ಗತಿ ದೇವರು ಪಾಪವನ್ನು ಕಲ್ವಾರಿ ಶಿಲುಬೆಯಲ್ಲಿ ನ್ಯಾಯ ತೀರಿಸಿದನು ಎ೦ಬುದು ಮಾತ್ರವೇ ಅಗಿದೆ. ಆದರೆ ಅದಕ್ಕಿ೦ತಲೂ ಆಳವಾದ ಸತ್ಯವನ್ನು ನಾವು ಈಗ ತಿಳಿಯುತೇವೆ. "ನರಭಾವದಲ್ಲಿಯೇ ಪಾಪಕ್ಕೆ ಮರಣದ೦ಡನೆಯನ್ನು ವಿಧಿಸಿದನು."
3.ಕ್ರಿಸ್ತನೆ೦ಬ ಒಬ್ಬನೇ ಪುರುಷನಿಗೆ ನಿಶ್ಚಯಮಾಡಿಕೊ೦ಡ ತರುವಾಯ "ಶರೀರಭಾವ"ವೆ೦ಬ ಮತ್ತೊಬ್ಬ ಮನುಷ್ಯನೊ೦ದಿಗೆ ಸ೦ಬ೦ಧ ಇಟ್ಟು ಕೊ೦ಡಿರುವವರು ಆತ್ಮಿಕ ವ್ಯಭಿಚಾರಿಗಳಾಗಿದ್ದಾರೆ.
ದೇವರು ತನ್ನ ಮಗನಿಗೆ ಒಬ್ಬ ಹೆ೦ಡತಿಯನ್ನಾಗಿ, "ಕ್ರಿಸ್ತನ ಮದಲಗಿತ್ತಿ" ಎ೦ಬ ಸಭೆಯನ್ನು ಸಿದ್ಧಪಡಿಸಿಕೊ೦ಡಿದ್ದಾನೆ. ಒಬ್ಬ ಒಳ್ಳೆ ಹೆ೦ಡತಿಯನ್ನು ತನ್ನ ಮಗನಿಗಾಗಿ ಹುಡುಕುವ ತ೦ದೆಯ೦ತೆ, ದೇವರು ಸಹ ತನ್ನ ಮಗನಿಗೆ ತಕ್ಕ ಮದಲಗಿತ್ತಿಯನ್ನು ಆರಿಸಿಕೊಳ್ಳಲು, ಆಕೆಯ ಯೊಗ್ಯತೆಯನ್ನು ಪರೀಕ್ಷಿಸುವುದು ಅವಶ್ಯವಾಗಿದೆ. ದೇವರು ಆದಾಮನಿಗೆ ಸರಿಬೀಳುವ ಹೆ೦ಡತಿಯನ್ನು ಕೊಟ್ಟ೦ತೆಯೇ, ಯೇಸುವಿಗೂ ಒಬ್ಬ ಮದಲಗಿತ್ತಿಯನ್ನು ಕೊಡುವುದಾದರೆ, ಅದು ಆತನ ಸ್ವಭಾವಕ್ಕೆ ಸರಿ ಬೀಳುವ ಹೆ೦ಡತಿಯೇ ಆಗಿರಬೇಕು.
ಪ್ರಕಟನೆಯಲ್ಲಿ, ಮದಲಗಿತ್ತಿಯ ವಿಷಯವಾಗಿ ಮತ್ತು ಜಾರಸ್ತ್ರೀಯ ವಿಷಯವಾಗಿಯೂ ಓದುತ್ತೇವೆ. ಯಾರು ಜಾರಸ್ತ್ರೀ? ಒಬ್ಬ ಯುವತಿಯು ಮದುವೆಗಾಗಿ ಒಬ್ಬ ಯುವಕನೊ೦ದಿಗೆ ನಿಶ್ಚಯಮಾಡಿಕೊ೦ಡ ತರುವಾಯ, ಅವನು ಯುದ್ಧಕ್ಕಾಗಿ ಸುಮಾರು 1000 ಮೈಲುಗಳ ದೂರ ಹೊರಟು ಹೋಗಿದ್ದಾನೆ೦ದು ಇಟ್ಟುಕೊಳ್ಳೊಣ. ಆಗ ಈ ಯುವತಿಯು ತನ್ನ ಮದಲಿ೦ಗನಿಗೆ ನ೦ಬಿಗಸ್ತಳಾಗಿರದೆ ಮತ್ತೊಬ್ಬನೊ೦ದಿಗೆ ತಪ್ಪಾದ ಸ೦ಬ೦ಧವಿಟ್ಟುಕೊ೦ಡರೆ, ಆಕೆಯು ನ೦ಬಿಗಸ್ತಳಾದ ಮದಲಗಿತ್ತಿಯಲ್ಲ, ಆಕೆಯು ಜಾರಸ್ತ್ರಿ. ಇದೇ ರೀತಿಯಾಗಿ ದೇವರು ನಮ್ಮನು ಪರಿಕ್ಷಿಸುತ್ತಾನೆ. ಅದು ಹೇಗೆ೦ದರೆ, ನಾವು ಯೇಸುವನ್ನು ಯಜಮಾನನೆ೦ದು ಸ್ವೀಕರಿಸಿಕೊ೦ಡ ದಿನದಿ೦ದ, ಆತನಿಗೆ ಮದಲಗಿತ್ತಿಯಾಗಿ ನಿಶ್ಚಸಲ್ಪಟ್ಟಿದ್ದೇವೆ.
ನಾವು ಭೂಮಿಯಲ್ಲಿರುವಾಗ, ಆತನು ಪರಲೋಕಕ್ಕೆ ಹೋಗಿದ್ದಾನೆ. ವಿವಾಹದ ಕಾಲವು ಬೇಗನೆ ಬರಲಿದೆ. ಈಗ, ಮತ್ತೊಬ್ಬ ಮನುಷ್ಯನಾದ ಶರೀರ ಭಾವದ ಕರೆಗೆ ಮದಲಗಿತ್ತಿಯಾದ ನಮ್ಮ ಹೃದಯದ ಭಾವನೆಯು ಯಾವ ರೀತಿಯಾಗಿದೆ೦ದು ದೇವರು ನಮ್ಮನು ಪರೀಕ್ಷಿಸುತ್ತಿದ್ದಾನೆ. ಕ್ರಿಸ್ತನಿಗೆ ನನ್ನನ್ನು ನಿಶ್ಚಯ ಮಾಡಿಕೊ೦ಡು, "ಶರೀರಭಾವ"ವೆ೦ಬ ಮತ್ತೊಬ್ಬ ಮನುಷ್ಯನ ಹಿ೦ದೆ ಹೋಗುತ್ತಿದ್ದರೆ, ನನಗೆ ಹೆಸರೆನು? "ವ್ಯಭಿಚಾರಿ". ಯಾಕೊಬನು ತನ್ನ ಪತ್ರಿಕೆಯಲ್ಲಿ 4ನೇ ಅಧಾಯ್ಯ 4ನೇ ವಚನದಲ್ಲಿ ಹೀಗೆಯೇ ಕರೆಯುತ್ತಾನೆ. "ವ್ಯಭಿಚಾರಿಗಳು ನೀವು; ಇಹಲೋಕ ಸ್ನೇಹವು ದೇವವೈರವೆ೦ದು ನಿಮಗೆ ತಿಳಿಯದೋ?" ಈ ಪತ್ರಿಕೆಯನ್ನು ನಾಮಧೇಯ ಕ್ರೈಸ್ತರಿಗೆ ಬರೆದಿರುತ್ತಾನೋ? ಇಲ್ಲ, ವಿಶ್ವಾಸಿಗಳಿಗೆ ಬರೆದಿರುತ್ತಾನೆ. ತನ್ನ ಪತ್ರಿಕೆಗಳಲ್ಲಿ ಅನೇಕ ಬಾರಿ "ನನ್ನ ಸಹೊದರರೇ" ಎ೦ಬುದಾಗಿ ಕರೆಯುತ್ತಾನೆ. ನನ್ನ ಸಹೊದರರೇ, ವ್ಯಭಿಚಾರಿಗಳು ನೀವು!
ಈಗ ವ್ಯಭಿಚಾರ ಏನೆಂದು ಅರ್ಥಮಾಡಿಕೊಂಡಿರುವಿರಾ? ಆತ್ಮಿಕ ವ್ಯಭಿಚಾರ! ಒಬ್ಬ ಅವಿಶ್ವಾಸಿಯು ಆತ್ಮಿಕ ವ್ಯಭಿಚಾರವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅವನು ಕ್ರಿಸ್ತನೊಂದಿಗೆ ನಿಶ್ಚಯವಾಗಿಲ್ಲ. ಕಾನೂನಿನ ಪ್ರಕಾರ ಅವನು ತನ್ನ ಶರೀರಭಾವವನ್ನು ಮದುವೆ ಮಾಡಿಕೊಂಡು, ತನ್ನ ಸ್ವಂತ ಗಂಡನೊಂದಿಗಿಯೇ ಜೀವಿಸುತ್ತಾನೆ. ಆದುದರಿಂದ ಅದು ವ್ಯಭಿಚಾರವಲ್ಲ. ಅವನು ತನ್ನ ಶರೀರಭಾವಕ್ಕೆ ಅನುಸಾರವಾಗಿ ಜೀವಿಸಬಹುದು. ಪ್ರಕಟನೆ 17: 5ರಲ್ಲಿ, "ಬಾಬೆಲೆಂಬ ಮಹಾನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ ಎಂದು ಗುಡಾರ್ಥವುಳ್ಳ ಹೆಸರು ಬರೆದಿತ್ತು" ಎಂದು ಓದುತ್ತೇವೆ. ನಮಗಾದರೂ ಈಗ ಅದು ಗುಡಾರ್ಥವಲ್ಲ! ಯಾಕೆಂದರೆ ಜಾರಸ್ತ್ರೀಯರು ಯಾರೆಂದರೆ ನಮಗೆ ಪ್ರಕಟವಾಗಿದೆಯಲ್ಲವೆ? ಕ್ರಿಸ್ತನಿಗೆ ತಮ್ಮನ್ನು ನಿಶ್ಚಯಪಡಿಸಿಕೊಂಡು, ಶರೀರಭಾವದೊಂದಿಗೆ ಓಳಪಟ್ಟು ಜೀವಿಸವವರು ಜಾರಸ್ತ್ರೀಯರು.
ಮಹಾನಗರಿಯಾದ ಬಾಬೆಲೆಂಬುದು, ಕ್ರಿಸ್ತನಿಗೆ ತಮ್ಮನ್ನು ನಿಶ್ಚಯ ಮಾಡಿಕೊಳ್ಳದ ಹಿಂದುಗಳು ಅಥವಾ ಮುಸ್ಲೀಮರು ಅಲ್ಲ. ಹಾಗಾದರೆ ಯಾರು ಜಾರಸ್ತ್ರೀಯರಿಗೆ ತಾಯಿಯೆಂಬ ಗೂಡಾರ್ಥವನ್ನು ಈಗ ನೀವು ಅರ್ಥಮಾಡಿಕೊಳ್ಳಿರಿ! ನೀವು ಕ್ರಿಸ್ತನಿಗೆ ನಿಶ್ಚಯವಾದ ತರುವಾಯ, ಸಣ್ಣ ಸಣ್ಣ ಆಜ್ಞೆಗಳನ್ನು ಮೀರಿ ಜನರಿಗೂ ಹಾಗೆಯೇ ಬೋಧಿಸುವ ಹಾಗೂ ಕ್ರಿಸ್ತೀಯ ಸಂಸ್ಥೆಗಳು ಬಾಬೆಲಾಗಿದೆ! ಅದು ಜಾರಸ್ತ್ರೀಯರಿಗೆ ತಾಯಿ!! ಒಂದಾನೊಂದು ದಿನ ಕರ್ತನನ್ನು ಸ್ವೀಕರಿಸಿ(ನಿಶ್ಚಯಮಾಡಿ) ಕೊಂಡು, ತರುವಾಯ ಅಪನಂಬಿಗಸ್ತರಾಗಿ ಜೀವಿಸಿದ ಜನರನ್ನು ಕರ್ತನು ತನ್ನ ಬಾಯೊಳಗಿಂದ ಕಾರುವನು.
4. ಸೈತಾನನು ಕುಯುಕ್ತಿಯಿಂದ ಶರೀರಭಾವದೊಂದಿಗೆ ಸಂಬಂಧವನ್ನು ಬೆಳೆಸುವಂತೆ ಪ್ರಸಂಗಿಸುತ್ತಿರುವ " ಮತ್ತೊಬ್ಬ ಯೇಸು" ಹಾಗು " ಬೇರೆ ವಿಧವಾದ ಆತ್ಮಪ್ರೇರಣೆಯನ್ನು" ಕುರಿತು ಎಚ್ಚರವಾಗಿರ್ರಿ!!
ಕೂಟಗಳಿಗೆ ಹೋಗುವುದರಿಂದಲೂ, ಸತ್ಯವೇದವನ್ನು ಕ್ರಮವಾಗಿ ಓದುವುದರಿಂದಲೂ, ಅನ್ಯಭಾಷೆಯನ್ನಾಡುವದರಿಂದಲೂ ಮಾತ್ರವೇ ನಾವು ಪರಿಶುದ್ಧ ಕನ್ಯೆಯಾಗಿ ನಿಶ್ಚಯಮಾಡಿದ್ದರೂ, "ಸೈತಾನನು ಹವ್ವಳನ್ನು ಕುಯುಕ್ತಿಯಿಂದ ವಂಚಿಸಿದಂತೆ ನಿಮ್ಮನ್ನೂ ವಂಚಿಸುವನು"ಎಂದು ಪೌಲನು ಹೇಳುತ್ತಾನೆ (2ನೇ ಕೊರಿಂಥ 11: 2,3). ಆದರೆ ಹೇಗೆ ವಂಚಿಸುತ್ತಾನಂತೆ? ಅವನು ನಿಮ್ಮ ಬಳಿಗೆ ಬಂದು "ಮತ್ತೊಬ್ಬ ಯೇಸುವನ್ನು"(4ನೇ ವಚನ) ಪ್ರಸಂಗ ಮಾಡುವುದರ ಮೂಲಕ ವಂಚಿಸುತ್ತಾನೆ. ಯಾರು ಈ ಮತ್ತೊಬ್ಬ ಯೇಸು? ಶರೀರಭಾವದೊಂದಿಗೆ ಅನೇಕ ಪಾಪಗಳೆಂಬ ಮಕ್ಕಳನ್ನು ಹೆತ್ತಿದ್ದರೂ, ಆಕೆಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುವ ಯೇಸು! ಶರೀರಭಾವಕ್ಕೆ ಅನುಸಾರವಾಗಿ ಬದುಕುವ ವಿಶ್ವಾಸಿಗಳನ್ನು ತನ್ನ ಮದಲಗಿತ್ತಿಯಾಗಿ ಸ್ವೀಕರಿಸುವ ಮತ್ತೊಬ್ಬ ಯೇಸು! ಪೌಲನು 2ನೇ ವಚನದಲ್ಲಿ ತಿಳಿಸುವ ಯೇಸು ವಾಸ್ತವಿಕವಾದ ಯೇಸು. ಈಗ ನಿಮಗೆ ಅರ್ಥವಾಯಿತೆ? ಇಬ್ಬರು ಯೇಸುಗಳಿದ್ದಾರೆ. ಒಬ್ಬ ಯೇಸು ಶುದ್ಧಕನ್ಯೆಯಾಗಿರುವ ಸಭೆಗಾಗಿ ಕಾಯುತ್ತಿದ್ದಾರೆ. ಮತ್ತೊಬ್ಬ ಯೇಸು, ಯಾವರೀತಿಯಾಗಿ ಸೈತಾನನು ಹವ್ವಳನ್ನು ಕುಯುಕ್ತಿಯಿಂದ ವಚಿಸಿದನೋ ಹಾಗೆಯೇ ಶರೀರಭಾವಕ್ಕೆ ಅನುಸಾರವಾಗಿ ಜೀವಿಸಿ, ಸಣ್ಣ ಸಣ್ಣ ಆಜ್ಞೆಗಳನ್ನು ಮೀರಿ ನಡೆದರೂ ಪರವಾಗಿಲ್ಲ, ಆತನು ನಮ್ಮನ್ನು ಸ್ವೀಕರಿಸುವನು ಎಂದು ಪ್ರಸಂಗಿಸಲ್ಪಡುವ ಯೇಸು-ಮತ್ತೊಬ್ಬ ಯೇಸು! ಅದೇ ರೀತಿಯಾಗಿ ನೀವು "ಬೇರೆ ವಿಧವಾದ ಆತ್ಮ ಪ್ರೇರಣೆಯನ್ನು" ಪಡೆದುಕೊಳ್ಳಲು ಸಾಧ್ಯ. ವಾಸ್ತವಿಕವಾದ ಯೇಸುವಿನ ಆತ್ಮದ ಪ್ರೇರಣೆಯೇನು? ಶರೀರಭಾವಕ್ಕೆ ವಿರುದ್ಧವಾಗಿ ಹೋರಾಡುವುದು (ಗಲಾತ್ಯ 5:17). ಅಂದರೆ, ಯೇಸುವಿನ ಶುದ್ಧಕನ್ಯೆಯನ್ನು ಮಲೀನಮಾಡಲು ಪ್ರಯತ್ನಿಸುವ ಮತ್ತೊಬ್ಬ ಪುರುಷನಾದ ಶರೀರಭಾವದ ವಿರುದ್ಧವಾಗಿ ಆತ್ಮವು ಯಾವಾಗಲೂ ಹೋರಾಡುತ್ತದೆ. ಹೌದು! ಪವಿತ್ರಾತ್ಮನು 100% ಶರೀರಭಾವಕ್ಕೆ ವಿರುದ್ಧವಾಗಿದ್ದಾನೆ!
5. ಪಾಪದ ಶರೀರಭಾವದೊಂದಿಗೆ ಸಂಬಂಧವಿಟ್ಟುಕೊಳ್ಳುವುದರಿಂದ ಹುಟ್ಟುವ ಹೊಟ್ಟೇಕಿಚ್ಚು, ಹಗೆತನ, ಸುಳ್ಳು ಮುಂತಾದ ಮಕ್ಕಳಿಗೆ ತಂದೆ ಸೈತಾನನಾಗಿದ್ದಾನೆ!
ಹೊಟ್ಟೇಕಿಚ್ಚು ಹೇಗೆ ಬರುತ್ತದೆ? ನೀವು ಶರೀರಭಾವದೊಂದಿಗೆ ಸಂಬಂಧವಿಟ್ಟುಕೊಳ್ಳುವುದರಿಂದ ಹುಟ್ಟುವ ಮಗುವಿನ ಹೆಸರು ಹೊಟ್ಟೇಕಿಚ್ಚಾಗಿರುತ್ತದೆ! ಅದು ದೇವರ ಮಗುವಲ್ಲ, ಶರೀರಭಾವದ ಮಗು. ಒಬ್ಬರೊಂದಿಗೆ ಒಬ್ಬರು ಜಗಳ ಮಾಡುವದು ಸಹ ಶರೀರಭಾವಕ್ಕೆ ಹುಟ್ಟಿದ ಮಗುವೇ. ಒಬ್ಬರೊಂದಿಗೆ ಒಬ್ಬರು ಮನಸ್ಸಿನಲ್ಲಿ ಹಗೆತನವಿಟ್ಟುಕೊಂಡಿದ್ದರೆ, ಯಾರ ಮಗು ನಿಮ್ಮ ಮನಸ್ಸಿನಲ್ಲಿ ಹುಟುತ್ತದೆ? ಶರೀರಭಾವದ ಮಗು! ಒಂದು ವೇಳೆ ನೀವು ಕ್ರಿಸ್ತನ ಮದಲಗಿತ್ತಿ ಎಂದು ನೆನಸಹುದು. ಆದರೆ ನೀವು ನಿಮ್ಮನ್ನು ಒಂದೊಂದು ಶೋಧನೆಯಲ್ಲಿಯು ಶರೀರಭಾವಕ್ಕೆ ಒಪ್ಪಿಸಿಕೊಡುವುದಾದರೆ ಸಾವಿರಾರು ಮಕ್ಕಳನ್ನು ಹೆರುವುದರಿಂದ ಆತ್ಮೀಕ ವ್ಯಭಿಚಾರಕ್ಕೆ ಒಳಗಾಗಿರುವಿರಿ, ಸುಳ್ಳು ಯಾರ ಮಗು? ಸೈತಾನನ ಮಗುವೆಬುವುದಕ್ಕೆ ಸಂದೇಹವಿಲ್ಲ. ಯಾಕೆಂದರೆ ಸೈತಾನನು ಸುಳ್ಳುಗಾರನೂ, ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆಂದು ಯೇಸು ಹೇಳಿದರು(ಯೋಹಾನ 8:44). ಒಬ್ಬ ದೇವರು ಮಗು ಸುಳ್ಳಾಡಿದರೂ ಆ ಸುಳ್ಳಿಗೆ ತಂದೆ ಸೈತಾನನಾಗಿದ್ದನೆ. ನೀವು ನಿಮ್ಮ ಹೃದಯದಲ್ಲಿ ಲೋಭದಿಂದ ತುಂಬಿದ್ದರೂ, ಸಭೆಯ ಮಧ್ಯದಲ್ಲಿ ಭಕ್ತಿವಂತರಾಗಿ ನಟಿಸಿದರೆ ಅದು ಶುದ್ಧ ಸುಳ್ಳು! ಇಂದು ಅನೇಕ "ವಿಶ್ವಾಸಿಗಳು" ಹೀಗೆಯೇ ಜೀವಿಸುತ್ತಿದ್ದಾರೆ. ನೀವು ಅನೇಕ ವಿಧವಾದ ಆತ್ಮೀಕ ಚಟುವಟಿಕೆಯುಳ್ಳವರಾಗಿರಬಹುದು.ಆದರೆ ನಿಮ್ಮ ಹೃದಯವು ಶರೀರಭಾವಕ್ಕೆ ಒಪ್ಪಿಸಲ್ಪಟ್ಟಿದ್ದರೆ ನೀವು ನಿಮ್ಮನ್ನೇ ವಂಚಿಸಿಕೊಳ್ಳುತ್ತಾ ಇದ್ದೀರಿ! ನಿಮಗೆ ಸರಿಯಾದ ಹೆಸರು, ವ್ಯಭಿಚಾರಿ! ಹೌದು ಆತ್ಮೀಕ ವ್ಯಭಿಚಾರಿ!
6. ಆಶಾಪಾಶದಿಂದ ತುಂಬಿದ ನಮ್ಮಂಥ ಶರೀರದಲ್ಲಿ ಯೇಸು ಪ್ರತ್ಯಕ್ಷವಾಗಿ, ಆತ್ಮನ ಬಲದಲ್ಲಿ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದ್ದರಿಂದ, ಜಯದ ಜೀವಿತದ ಮಾರ್ಗವನ್ನು ತೆರೆದಿಟ್ಟಿದ್ದಾನೆ.
ನಾವು ನಮ್ಮ ಹೃದಯವನ್ನು ಪರಿಶುದ್ಧವಾಗಿಟ್ಟುಕೊಳ್ಳಲು ದೇವರು ತಾನೇ ಒಂದು ಮಾರ್ಗವನ್ನು ಉಂಟುಮಾಡಿದ್ದಾನೆಂದು (ರೋಮಾ 8:3)ರಲ್ಲಿ ಓದುತ್ತೇವೆ. ಇದು ದೇವರು ಯೇಸುವನ್ನು ಪಾಪಾಧೀನವಾದ ಶರೀರದ ರೂಪದಲ್ಲಿ ಕಳುಹಿಸಿಕೊಟ್ಟನೆಂಬದು ಉನ್ನತವಾದ ಸತ್ಯವಾಗಿರುತ್ತದೆ. ಇಬ್ರಿಯ 4:15 ರಲ್ಲಿ, "ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು" ಎಂದು ಓದುತ್ತೇವೆ. ನಾವು ಯಾವ ರೀತಿಯಾಗಿ ಶೋಧಿಸಲ್ಪಡುತ್ತೇವೆಂಬುದು (ಯಾಕೋಬ 1:14,15) ವಚನಗಳಲ್ಲಿ ಬಹು ಸ್ಪಷ್ಟವಾಗಿದೆ. ನಮ್ಮ ಶರೀರದಲ್ಲಿರುವ ಆಶಾಪಾಶಗಳಿಂದ ನಾವು ಶೋಧಿಸಲ್ಪಡುತ್ತೇವೆ. ಯೇಸುವಿನ ಶರೀರದಲ್ಲಿಯು ಆಶಾಪಾಶಗಳಿದ್ದವೊ? ಹೌದು! ಹಾಗಿಲ್ಲದಿದ್ದರೆ, ಆತನು ನಮ್ಮ ಹಾಗೆ ಶೋಧಿಸಲ್ಪಡಲು ಆಗುತ್ತಿರಲಿಲ್ಲ. ನಮ್ಮ ಹಾಗೆ ಶೋಧಿಸಲ್ಪಡದಿದ್ದರೆ, ಅದು "ಮತ್ತೊಬ್ಬ ಯೇಸು"ವಾಗಿರಬೇಕು. ಸತ್ಯವೇದದಲ್ಲಿರುವ ಯೇಸುವಾದರೋ ನಮ್ಮ ಹಾಗೆಯೇ ಶೋಧಿಸಲ್ಪಟ್ಟು, ಒಂದು ಪಾಪವು ಸಹ ಮಾಡದೆ ತನ್ನ ಹೃದಯವನ್ನು ತಂದೆಯ ಸಮ್ಮುಖದಲ್ಲಿ 33 1/2 ವರ್ಷಗಳು ಪರಿಶುದ್ಧವಾಗಿ ಕಾಪಾಡಿಕೊಂಡನು. ಆತ್ಮನ ಬಲದಿಂದ ತನ್ನ ಶರೀರದಲ್ಲಿ ಇದ್ದ ಆಶಾಪಾಶಗಳೊಂದಿಗೆ, ಕ್ರೂರವಾಗಿ ಹೋರಾಡಿ, ಪಾಪದ ಮೇಲೆ ಪರಿಪೂರ್ಣ ಜಯ ಹೊಂದಿದನು. ಈಗ ನಮ್ಮನ್ನು ನೋಡಿ, "ನನ್ನನ್ನು ಹಿಂಬಾಲಿಸಿರಿ" ಎಂದು ಆಹ್ವಾನಿಸುತ್ತಾನೆ. ಹೀಗೆ ಯೇಸು ನಮ್ಮಂಥ ಶರೀರದಲ್ಲಿ ಪ್ರತ್ಯಕ್ಷವಾಗಿ, ನಾವು ಹಿಂಬಾಲಿಸತಕ್ಕ ಮಾರ್ಗವನ್ನು ತೆರೆದಿಟ್ಟಿದ್ದಾನೆ.
ಮತ್ತಾಯ 14ನೇ ಅಧ್ಯಾಯದಲ್ಲಿ, ಯೇಸು ಸಮುದ್ರದ ಮೇಲೆ ನಡೆದ ಅದ್ಭುತವು, ನಮಗೆ ಗೊತ್ತಿದೆ. ಇದಕ್ಕಿಂತಲೂ ದೊಡ್ಡ ಅದ್ಭುತ ಪೇತ್ರನು ಸಮುದ್ರದ ಮೇಲೆ ನಡೆದದ್ದು! ಯೇಸು ಗುರುತ್ವಾಕರ್ಷಣೆ ಶಕ್ತಿಯ ಮೇಲೆ ಅಧಿಕಾರ ಹೊಂದಿವನಾಗಿ ನಡೆದಂತೆಯೇ ತನಗೂ ನಡೆಯಲು ಸಾಧ್ಯವೆಂದು ಪೇತ್ರನು ಯೇಸುವಿನ ಮಾತಿನ ಮೇಲೆ ಭರವಸವಿಟ್ಟದ್ದರಿಂದ ನಡೆಯಲು ಸಾಧ್ಯವಾಯಿತು. ಪಾಪದ ಮೇಲೆ ಜಯ ಹೊಂದುವ ಸಂದೇಶವು ಸಹ ಇದೇ ರೀತಿಯಾಗಿರುತ್ತದೆ. ಯೇಸು ನಮ್ಮಂಥ ಶರೀರದಲ್ಲಿ ಬರದ ಹೊರತು, ನಮ್ಮ ಹಾಗೆ ಶೋಧಿಸಲ್ಪಡದೆ, ನಮಗೆ ಮಾರ್ಗವನ್ನು ಉಂಟುಮಾಡಲಾಗುತ್ತಿರಲಿಲ್ಲ. ಯೇಸು ಪ್ರತಿಯೊಂದು ಶೋಧನೆಯಲ್ಲಿಯು ಪಾಪವನ್ನು ಹೃದಯದಲ್ಲಿ ಪ್ರವೇಶಿಸಲು ಅನುಮತಿಸದೆ ಪಾಪವನ್ನು ತೀರ್ಪುಮಾಡಿದನು, ಅಥವಾ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು. ಹೌದು! ಇದು ಗಂಭೀರವಾದ ರಹಸ್ಯ (ಸತ್ಯಾರ್ಥ)ವೆಂದು ಸತ್ಯವೇದವು ಹೇಳುತ್ತದೆ (1 ತಿಮೊಥಿ 3:16). ಧರ್ಮಶಾಸ್ತ್ರದ ನೀತಿ ನಮ್ಮಲ್ಲಿ (ನಮ್ಮೊಳಗೆ) ನೆರವೇರುವಂತೆ, ಯೇಸುವು ತನ್ನ ಶರೀರದಲ್ಲಿ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದರು (ರೋಮಾ 8:4,3). ಆದ್ದರಿಂದ ಪ್ರಿಯರೇ, ನಾವು ಪವಿತ್ರಾತ್ಮನುಸಾರ ನಡೆಯುವ ಹಂಗಿನಲಿದ್ದೇವೆ. ಅಂದರೆ, ಇನ್ನೂ ನಾನು ನನ್ನ ಶರೀರಭಾವಕ್ಕೆ ಒಪ್ಪಿಸಿಕೊಟ್ಟು, ವ್ಯಭಿಚಾರದ ಮೂಲಕ ಮಕ್ಕಳನ್ನು ಹೆರದೆ, ಆತ್ಮನ ಫಲವಾಗಿರುವ - ಪ್ರೀತಿ, ಸಂತೋಷ, ಸಮಾಧಾನ, ಧಿರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಮುಂತಾದ ಮಕ್ಕಳನ್ನು ಹೆರುವ ಹಂಗಿನಲ್ಲಿದ್ದೇನೆ!
7. ಶರೀರಭಾವದ ಆತ್ಮೀಕ ವ್ಯಭಿಚಾರದ ಜೀವಿತದಿಂದ, ದುಃಖಿಸಿ ತಿರುಗಿಕೊಂಡು, ಕ್ರಿಸ್ತನ ಮದಲಗಿತ್ತಿಯಾಗಿರಲು ಪ್ರಯಾಸಪಡೋಣ ಬನ್ನಿರಿ!
ಇಂದು ನಾವು ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯಂತೆ ಇದ್ದೇವೆ. ಹೌದು! ಅನೇಕ ಬಾರಿ ಶರೀರಭಾವದೊಂದಿಗೆ ಆತ್ಮೀಕ ವ್ಯಭಿಚಾರ ಮಾಡಿದವ್ರಾಗಿ ಸಿಕ್ಕಿಬಿದ್ದವರಾಗಿದ್ದೇವೆ. ಯೇಸುವು ನಮ್ಮನ್ನು, "ನೀನು ನಿನ್ನ ವ್ಯಭಿಚಾರಕ್ಕಾಗಿ ವಾಸ್ತವಿಕವಾಗಿ ತಿರುಗಿಕೊಳ್ಳಲು ಬಯಸುವೆಯಾ?"ಎಂದು ಕೇಳುವವನಾಗಿದ್ದಾರೆ. ಒಂದು ವೇಳೆ ನಾವು "ಹೌದು ಸ್ವಾಮಿ" ಎಂದು ಉತ್ತರಿಸುವವದಾದರೆ, ಅವರು, "ಸರಿ, ನಾನು ನಿನಗೆ ಶಿಕ್ಷೆ ವಿಧಿಸುವದಿಲ್ಲ. ನಿನ್ನ ಹಿಂದಿನ ಕಾಲದ ವ್ಯಭಿಚಾರ ಜೀವಿತವನ್ನು ಸಂಪೂರ್ಣವಾಗಿ ಕ್ಷಮಿಸಿ, ತಿರುಗಿ ನನ್ನ ಮದಲಗಿತ್ತಿಯಾಗಲು ನಿನ್ನನ್ನು ಕರೆಯುತ್ತೇನೆ" ಎಂದು ಹೇಳುವರು. ಆದರೆ, ಯೇಸು ಆ ಸ್ತ್ರೀಯ ಪಾಪವನ್ನು ಕ್ಷಮಿಸಿದ ಮೇಲೆ ಏನು ಹೇಳಿದರು - "ಹೋಗು, ಇನ್ನು ಮೇಲೆ ಪಾಪ ಮಾಡಬೇಡ!"ಎಂದು ಹೇಳಿದನು (ಯೋಹಾನ 8:11).
ಝ್ಯಾಕ್ ಪೂನನ್