"ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಬೇಸರಗೊಂಡದ್ದು ನಿನಗೆ ತಿಳಿಯಿತೋ?" ಎಂದು ಕೇಳಲು, "ಅವರನ್ನು ಬಿಡಿರಿ" ಎಂದು ಯೇಸು ಹೇಳಿದರು (ಮತ್ತಾಯ 15:12-14).
ತಮ್ಮ ಪೋಷಕರನ್ನು ಅಗೌರವಿಸುವಂತೆ ಜನರಿಗೆ ಬೋಧಿಸುವ ಫರಿಸಾಯರನ್ನು ಯೇಸು ತಿದ್ದಿದ್ದಕ್ಕಾಗಿ ಫರಿಸಾಯರು ಬೇಸರಗೊಂಡರು. ಕರ್ತರು ಒಬ್ಬ ಹಿರಿಯ ಸಹೋದರನ ಮೂಲಕ ಗದರುವಿಕೆಯ ಮತ್ತು ತಿದ್ದುವಿಕೆಯ ಮಾತನ್ನು ಫರಿಸಾಯರಿಗೆ ಕೊಡುವಾಗ, ಅವರು ಬಹಳ ಸುಲಭವಾಗಿ ಬೇಸರಗೊಳ್ಳುತ್ತಿದ್ದರು. ಕ್ರೈಸ್ತ ಜೀವಿತದಲ್ಲಿ ಶಿಶುವಿಹಾರದ ಪಾಠ ಎಂದರೆ, ಅದು "ಬೇಸರ ಪಟ್ಟುಕೊಳ್ಳುವಂತದ್ದರ" ಮೇಲೆ ಜಯವನ್ನು ಸಾಧಿಸುವುದಾಗಿದೆ. ನೀವು ತಿದ್ದುಪಾಟಿಗೆ ಒಳಗಾದಾಗ ಬೇಸರಗೊಳ್ಳುವಂತದ್ದರಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದನ್ನು ನೀವು ಬಯಸಲಿಲ್ಲ ಎಂದರೆ, ಫರಿಸಾಯತ್ವದಿಂದ ನೀವು ಬಿಡುಗಡೆ ಹೊಂದುತ್ತೀರಿ ಎಂಬ ಯಾವುದೇ ನಿರೀಕ್ಷೆ ಇರುವುದಿಲ್ಲ.
ನನಗೆ ಗೊತ್ತಿದೆ, ಒಂದು ಬಾರಿ ನಮ್ಮ ಸಭೆಯಲ್ಲಿದ್ದ ಜನರು ಕೆಲವು ತಿದ್ದುವಿಕೆಯನ್ನು ಸ್ವೀಕರಿಸಿಕೊಂಡಾಗ ಅವರು ತುಂಬಾ ಬೇಸರಪಟ್ಟುಗೊಂಡರು, ಒಟ್ಟಾರೆಯಾಗಿ ಅದರಿಂದ ಅವರು ಸಭೆಯನ್ನು ಕೂಡ ಬಿಟ್ಟರು. ಇಂದು ಅವರು ಅರಣ್ಯದಲ್ಲಿ ಅಲೆದಾಡುವಂತೆ ಇದ್ದಾರೆ ಮತ್ತು ಅವರು ನಿತ್ಯತ್ವವನ್ನು ಕಳೆದುಕೊಳ್ಳುವಂತ ಎಲ್ಲಾ ಸಾಧ್ಯತೆ ಕೂಡ ಇದೆ. ನೀವು ಒಂದು ವೇಳೆ ಕೆಲ ತಿದ್ದುವಿಕೆಯನ್ನು ಸ್ವೀಕರಿಸಿಕೊಂಡಾಗ ಬೇಸರಪಟ್ಟುಕೊಂಡರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಫರಿಸಾಯರ ರೀತಿಯಲ್ಲಿ ನೀವು ಕೂಡ ನರಕದ ಹಾದಿಯಲ್ಲಿಯೇ ಇದ್ದೀರಿ ಅಷ್ಟೇ.
"ಅವರನ್ನು ಬಿಟ್ಟು ಬಿಡಿರಿ" ಎಂದು ಯೇಸು ತಮ್ಮ ಶಿಷ್ಯಂದಿರಿಗೆ ಹೇಳಿದರು. ಬೇಸರಪಟ್ಟುಕೊಂಡ ಫರಿಸಾಯರ ಹಿಂದೆ ಹೋಗಿ, ಅವರನ್ನು ಸಭೆಗೆ ಹಿಂದಿರುಗಿ ಕರೆದುಕೊಂಡು ಬರುವ ಪ್ರಯತ್ನ ಮಾಡಬಾರದು. ನಾವು ಕರ್ತರಿಗೆ ವಿಧೇಯರಾಗಿ, ಅವರನ್ನು ಬಿಟ್ಟು ಬಿಡಬೇಕು. ಒಂದು ವೇಳೆ ಅವರು ಮಾನಸಾಂತರ ಪಟ್ಟರೆ, ನಂತರ ಅವರು ಕರ್ತನ ಕಡೆಗೆ ಮತ್ತು ಸಭೆಗೆ ಹಿಂತಿರುಗಿ ಬರಬಹುದಾಗಿದೆ. ಇಲ್ಲವಾದಲ್ಲಿ ಆಗಲ್ಲ.
ಒಬ್ಬ ನಿಜವಾದ ಕ್ರೈಸ್ತನು ದೇವರನ್ನು ಪ್ರೀತಿಸುವಂತವನಾಗಿರಬೇಕು, ಒಂದು ವೇಳೆ ಆತನು ದೇವರನ್ನು ಪ್ರೀತಿಸುವವನಾಗಿಲ್ಲವೆಂದರೆ, ಆತನು ತನ್ನನ್ನು, ತನ್ನ ಹಕ್ಕುಗಳನ್ನು, ತನ್ನ ಪ್ರಖ್ಯಾತಿಯನ್ನು, ತನ್ನ ಗೌರವವನ್ನು, ಇತರೆ ಸಂಗತಿಗಳನ್ನು ಪ್ರೀತಿಸುವವನಾಗಿರುತ್ತಾನೆ.
2 ತಿಮೊಥೆಯನಿಗೆ 3:1-4 ರಲ್ಲಿ ನಾಲ್ಕು ರೀತಿಯ ಪ್ರೀತಿ ಮಾಡುವಂತವರುಗಳನ್ನು ನಮೂದಿಸಲಾಗಿದೆ: ಸ್ವಾರ್ಥವನ್ನು ಪ್ರೀತಿಸುವವರು, ಹಣವನ್ನು ಪ್ರೀತಿಸುವವರು, ಭೋಗಗಳನ್ನು ಪ್ರೀತಿಸುವವರು ಮತ್ತು ದೇವರನ್ನು ಪ್ರೀತಿಸುವವರು. ಈ ನಾಲ್ಕು ರೀತಿಯ ಪ್ರೀತಿ ಮಾಡುವವರಲ್ಲಿ, ಕೇವಲ ಒಬ್ಬನು ಮಾತ್ರ ಸರಿಯಾದಂತವನಾಗಿದ್ದಾನೆ. ಒಬ್ಬ ನಿಜವಾದ ಕ್ರೈಸ್ತನು ದೇವರನ್ನು ಪ್ರೀತಿಸುವಂತವನಾಗಿರಬೇಕು, ಒಂದು ವೇಳೆ ಆತನು ದೇವರನ್ನು ಪ್ರೀತಿಸುವವನಾಗಿಲ್ಲವೆಂದರೆ, ಆತನು ತನ್ನನ್ನು, ತನ್ನ ಹಕ್ಕುಗಳನ್ನು, ತನ್ನ ಪ್ರಖ್ಯಾತಿಯನ್ನು, ತನ್ನ ಗೌರವವನ್ನು, ಇತರೆ ಸಂಗತಿಗಳನ್ನು ಪ್ರೀತಿಸುವವನಾಗಿರುತ್ತಾನೆ.
ಅದಕ್ಕೆ ಒಂದು ರುಜುವಾತು ಏನೆಂದರೆ, ನಾವು ಬಹಳ ಸುಲಭವಾಗಿ ಬೇಸರಪಟ್ಟುಕೊಳ್ಳುತ್ತೇವೆ. ತನ್ನನ್ನು ಮಾತ್ರ ಪ್ರೀತಿ ಮಾಡಿಕೊಳ್ಳುವವನು ಬೇಸರಪಟ್ಟುಕೊಳ್ಳುತ್ತಾನೆ. ತನ್ನನ್ನು ಪ್ರೀತಿ ಮಾಡಿಕೊಳ್ಳದೇ, ದೇವರನ್ನು ಪ್ರೀತಿ ಮಾಡುವುದಾದಲ್ಲಿ, ಇತರೆ ವ್ಯಕ್ತಿ ಏನೋ ಹೇಳಿದ್ದಕ್ಕಾಗಲಿ ಅಥವಾ ಹೇಳದೇ ಇರುವಂತದ್ದಕ್ಕಾಗಲಿ, ಅಥವಾ ಮತ್ತೊಬ್ಬ ವ್ಯಕ್ತಿ ಏನೋ ಒಂದು ಮಾಡುವಂತದ್ದಕ್ಕಾಗಲಿ, ಮಾಡದೇ ಇರುವಂತದ್ದಕ್ಕಾಗಲಿ ಬೇಸರಪಟ್ಟುಕೊಳ್ಳುವುದಿಲ್ಲ.
ನಾವು ಬೇಸರಪಟ್ಟುಕೊಳ್ಳುತ್ತೇವೆ ಏಕೆಂದರೆ ನಾವು ಮನಸ್ಸಿಗೆ ನೋವು ಉಂಟು ಮಾಡಿಕೊಳ್ಳುವುದರಿಂದ. ಯಾರೋ ಒಬ್ಬರು ನಮ್ಮನ್ನು ನಡೆಸಿಕೊಂಡಿದ್ದರ ವಿಷಯವಾಗಿ ಅಥವಾ ಯಾರೋ ಒಬ್ಬರು ನಮ್ಮ ಹಿಂದೆ ನಮ್ಮ ಬಗ್ಗೆ ಮಾತನಾಡಿರುವಂತದ್ದನ್ನು ಏನು ಕೇಳಿಸಿಕೊಳ್ಳುತ್ತೇವೋ, ಅದರಿಂದ ನಮ್ಮ ಸ್ವಾರ್ಥ ಜೀವಿತವು ನೋವಿಗೆ ಒಳಗಾಗುತ್ತದೆ. ನಮ್ಮನ್ನು ನಾವು ಹೆಚ್ಚಾಗಿ ಪ್ರೀತಿ ಮಾಡಿಕೊಳ್ಳುತ್ತೇವೆ.
ಮತ್ತು ನಾವು ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದೇವೆ? ಅವಿಶ್ವಾಸಿಗಳ ಬಗ್ಗೆನಾ? ಇಲ್ಲ! ಶಿಲುಬೆಯನ್ನು ಹೊರುವುದು ಮತ್ತು ಸ್ವಾರ್ಥಕ್ಕೆ ಸಾಯುವುದು ಅಂದರೆ ಏನು ಅಂತ ಅರ್ಥ ಮಾಡಿಕೊಳ್ಳದ "ವಿಶ್ವಾಸಿಗಳು" ಎಂದು ಕರೆಯಲ್ಪಡುವಂತವರ ಬಗ್ಗೆ ಮಾತನಾಡುತ್ತಿದ್ದೇವೆ. ಯಾಕೆಂದರೆ ಕಡೆ ದಿನಗಳಲ್ಲಿ ಸ್ವಾರ್ಥ ಜೀವಿತಕ್ಕೆ ಸಾಯುವುದರ ಬಗ್ಗೆ ಮತ್ತು ಶಿಲುಬೆಯ ಬಗ್ಗೆ ಬೋಧನೆಯು ಬಹಳ ವಿರಳವಾಗಿರುತ್ತದೆ. ಇಂದು ಅನೇಕ ಸಭೆಗಳಲ್ಲಿ ಇದರ ಬಗ್ಗೆ ಕೇಳಲ್ಪಟ್ಟಿರುವುದೇ ಇಲ್ಲ ಮತ್ತು ಕ್ರೈಸ್ತ ದೂರದರ್ಶನಗಳಿಂದಲೂ ಈ ರೀತಿಯ ಬೋಧನೆಯನ್ನು ಕೇಳಿರುವುದಿಲ್ಲ. ಸ್ವಾರ್ಥಕ್ಕೆ ಸಾಯುವುದರ ಬಗ್ಗೆ ಬೋಧನೆಯು ಯಾವಾಗ ಇರುವುದಿಲ್ಲವೋ, ಸ್ವಾರ್ಥವು ಅನೇಕ ಕ್ರೈಸ್ತರ ಜೀವಿತದಲ್ಲಿ ಹೆಚ್ಚುತ್ತಿರುತ್ತದೆ. ನಿಮ್ಮನ್ನು ನೀವು ಪ್ರೀತಿಸಿಕೊಂಡರೆ, ಯೇಸುವನ್ನು ಹಿಂಬಾಲಿಸಲು ಆಗುವುದಿಲ್ಲ ಎಂಬುವುದು ಸಹ ಅವರಿಗೆ ತಿಳಿದಿರುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಬಹುದೂ ಮತ್ತು ಯೇಸುವನ್ನೂ ಹಿಂಬಾಲಿಸಬಹುದು ಎಂದು ಅವರು ಯೋಚಿಸುತ್ತಾರೆ. ಬಹುಮಂದಿ ಕ್ರೈಸ್ತರನ್ನು ನೋಡಿರಿ, ಅವರು ಬೇಸರಪಟ್ಟುಕೊಳ್ಳುತ್ತಾರೆ ಮತ್ತು ಮನಸ್ಸಿಗೆ ನೋವು ಮಾಡಿಕೊಳ್ಳುತ್ತಾರೆ ಮತ್ತು ಅದು ಭಯಾನಕ ಪಾಪ ಎಂದು ಅವರಿಗೆ ಅನ್ನಿಸುವುದಿಲ್ಲ.
ನೀವು ಹೇಳಬಹುದು, "ಹೌದು, ಆದರೆ ಯಾರೋ ಒಬ್ಬರು ನನಗೆ ಭಯಾನಕ ಸಂಗತಿಯನ್ನು ಮಾಡಿದ್ದಾರೆ, ನಾನು ಮನಸ್ಸಿಗೆ ನೋವು ಮಾಡಿಕೊಳ್ಳಲು ಅರ್ಹನು"! ಎಂದು. ಖಂಡಿತವಾಗಿ! ಏಕೆಂದರೆ ನೀವು ಅವಿಶ್ವಾಸಿಗಳು! ನೀವು ಯೇಸುವಿನ ಶಿಷ್ಯರಲ್ಲ, ಅದಕ್ಕಾಗಿ ನೀವು ನಿಮ್ಮ ಮನಸ್ಸಿಗೆ ನೋವು ಮಾಡಿಕೊಳ್ಳಲು ಅರ್ಹರು. ನೀವು ಯೇಸುವಿನ ಶಿಷ್ಯರಾದಲ್ಲಿ, ನೀವು ನಿಮ್ಮ ಮನಸ್ಸನ್ನು ನೋವು ಮಾಡಿಕೊಳ್ಳುವುದಕ್ಕೆ ಯಾವುದೇ ಹಕ್ಕು ನಿಮಗಿಲ್ಲ. ಜನರು ಯೇಸುವಿಗೆ ದೆವ್ವಗಳ ಅರಸನು ಎಂದು ಕರೆಯಲ್ಪಟ್ಟಾಗ, ಜನರು ಆತನ ಮುಖಕ್ಕೆ ಉಗುಳಿದಾಗ, ಅಥವಾ ಎಲ್ಲಾ ವಿಧವಾದ ಕೇಡನ್ನು ಆತನಿಗೆ ಮಾಡಿದರೂ ಸಹ ಯೇಸು ಎಂದಿಗೂ ತನ್ನ ಮನಸ್ಸಿಗೆ ನೋವು ಮಾಡಿಕೊಳ್ಳಲಿಲ್ಲ.
ಯೇಸುವಿನ ಶಿಷ್ಯನಾಗುವುದು ಎನ್ನುವುದರ ಅರ್ಥವೇನು? ಕೇವಲ ಬಹಳ ಕಡಿಮೆ ಮಂದಿ ಈ ಕಡೆ ದಿನಗಳಲ್ಲಿ ಶಿಲುಬೆಯನ್ನು ಹೊರುತ್ತಾರೆ ಮತ್ತು ಆತನನ್ನು ಹಿಂಬಾಲಿಸುತ್ತಾರೆ. ನಿಜವಾದ ಕ್ರೈಸ್ತನಾಗುವುದು ಬಹಳ ಕಷ್ಟವಿದೆ, ಏಕೆಂದರೆ ತಾವು ಕ್ರೈಸ್ತರು ಎಂದು ಹಕ್ಕನ್ನು ಸಾಧಿಸುವಂತವರ, ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇವೆ ಎಂದು ಹೇಳಿಕೊಳ್ಳುವವರ, ಅನ್ಯಭಾಷೆಯನ್ನು ಮಾತನಾಡುತ್ತೇವೆ ಎಂದು ಹೇಳಿಕೊಳ್ಳುವವರ ಸುತ್ತ ನಾವು ತುಂಬಿದ್ದೇವೆ, ಆದರೆ ಅವರು ಮನಸ್ಸಿಗೆ ನೋವು ಮಾಡಿ ಕೊಳ್ಳುತ್ತಾರೆ ಮತ್ತು ಬೇಸರ ಪಟ್ಟುಕೊಳ್ಳುತ್ತಾರೆ. ಅಥವಾ, ಅವರು ಗಲಿಬಿಲಿಗೊಳ್ಳುತ್ತಾರೆ ಏಕೆಂದರೆ, ಅವರ ಹೆಸರು ಧೂಳಿನಲ್ಲಿ ಎಳೆಯಲ್ಪಟ್ಟಿರುತ್ತದೆ.
ಯೇಸು ಹೇಳಿಕೊಟ್ಟ ಪ್ರಾರ್ಥನೆ ಏನೆಂದರೆ "ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ". ಅದರ ಅರ್ಥವೇನೆಂದರೆ, ನಿಮ್ಮ ಸ್ವಂತ ಹೆಸರನ್ನು ಮರೆತುಬಿಡಬೇಕು! ಆದರೆ ಈ ಕಡೆ ದಿನಗಳಲ್ಲಿ ಕ್ರೈಸ್ತರೆಂದು ಕರೆಯಲ್ಪಡುವ ಅನೇಕರು ತಮ್ಮ ಸ್ವಂತ ನಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಉದಾಹರಣೆಗೆ, ಯೇಸುವಿನ ನಾಮ ಇಂದಿನ ದಿನ ಲೋಕದಲ್ಲಿ ಎಷ್ಟು ಅಗೌರವಿಸಲ್ಪಟ್ಟಿದೆ ಎಂದು ನಿಮಗೆ ತಿಳಿದಿದೆಯೇ? ಹಾಗಿದ್ದರೂ, ಕ್ರೈಸ್ತರೆಂದು ಕರೆಯಲ್ಪಡುವ ಜನರಿಗೆ ಇದು ಅಷ್ಟು ತೊಂದರೆಗೊಳಪಡಿಸುವುದಿಲ್ಲ. ಆದರೆ, ಕೇವಲ ಒಂದು ಬಾರಿ ಯಾರಾದರೂ ಅವರ ಹೆಸರನ್ನು ಧೂಳಿನಲ್ಲಿ ಎಳೆದು ತಂದರೆ, ಅದು ಅವರನ್ನು ನಿಜವಾಗಿ ತೊಂದರೆಗೆ ಒಳಪಡಿಸುತ್ತದೆ. ಅಥವಾ ಅವರ ಸುಂದರವಾದ ಮಗಳಿನ ನಾಮವು ಧೂಳಿನಲ್ಲಿ ಎಳೆಯಲ್ಪಟ್ಟರೆ, ಅದು ಅವರನ್ನು ಬಹಳವಾಗಿ ತೊಂದರೆಗೊಳಪಡಿಸುತ್ತದೆ. ಆದರೆ ಯೇಸುವಿನ ನಾಮವು ಇಡೀ ದೇಶದಲ್ಲಿ ಅಗೌರವಿಸಲ್ಪಟ್ಟರೂ ಸಹ ಅದು ಅವರನ್ನು ಸ್ವಲ್ಪವೂ ಮಾತ್ರ ತೊಂದರೆ ಪಡಿಸುವುದಿಲ್ಲ. ಇಂತವರು ಯೇಸುವಿನ ಶಿಷ್ಯರೆಂದು ನೀವು ಭಾವಿಸುತ್ತೀರಾ? ಇಲ್ಲ! ಅದರಿಂದ ಅವರು ತುಂಬಾ ದೂರ ಉಳಿದಿರುತ್ತಾರೆ! ಆದರೆ ಅವರು ಸಭೆಯಲ್ಲಿ ಕುಳಿತುಕೊಳ್ಳುತ್ತಾರೆ. ತಾವು ಹೊಸದಾಗಿ ಹುಟ್ಟಿರುವುದಾಗಿ ಹೇಳಿ ಕೊಳ್ಳುತ್ತಾರೆ. ಕರ್ತನನ್ನು ಪ್ರೀತಿಸುವುದಾಗಿ ಹೇಳಿಕೊಳ್ಳುತ್ತಾರೆ.
ಇದು ಸೈತಾನನು ಮಾಡಿದಂತ ಒಂದು ವಿಸ್ಮಯಕಾರಿ ಸಂಗತಿಯಾಗಿದೆ - ಅದು ಯಾವುದೆಂದರೆ, ಜನರು ಮೇಲಿನಿಂದ ಕೆಳಗೆ, ತಲೆಯಿಂದ ಪಾದದವರೆಗೆ ತಮ್ಮನ್ನೇ ಪ್ರೀತಿ ಮಾಡಿಕೊಳ್ಳುವಂತೆ ಮಾಡುವುದು. ಹಾಗಿದ್ದಾಗಿಯೂ ಅವರು ತಾವು ಯೇಸುವಿನ ಶಿಷ್ಯರೆಂದು ಯೋಚಿಸುತ್ತಾರೆ.
ಆದರೆ, ನಾನು ಕೇವಲ ನಿಮ್ಮನ್ನು ಎಚ್ಚರಿಸುತ್ತೇನೆ. ನಿಮಗೆ ನೀವೇ ಅದರಿಂದ ಬಿಡುಗಡೆ ಹೊಂದಲು ಬಯಸದಿದ್ದರೆ, ಸ್ವಾರ್ಥವನ್ನು ಪ್ರೀತಿಸುವಂತದ್ದರಿಂದ ಯಾರೂ ಸಹ ನಿಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ.