ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಉನ್ನತ ಗುಣಮಟ್ಟದ ಸಭೆಗಳನ್ನು ಕಟ್ಟಲು, ಉನ್ನತ ಗುಣಮಟ್ಟದ ನಾಯಕರುಗಳ ಅಗತ್ಯತೆ ಇದೆ. ಯೇಸು ಹೇಳಿದ್ದಾರೆ, ”ನನ್ನನ್ನು ಹಿಂಬಾಲಿಸು” ಎಂಬುದಾಗಿ (ಲೂಕ 9:23). ಮತ್ತು ಪೌಲನು ಈ ರೀತಿಯಾಗಿ ಹೇಳಿದ್ದಾನೆ, ”ನಾನು ಕ್ರಿಸ್ತನನ್ನು ಹಿಂಬಾಲಿಸುವಂತೆ ನೀವು ನನ್ನನ್ನು ಹಿಂಬಾಲಿಸಿರಿ” ಎಂಬುದಾಗಿ (1 ಕೊರಿಂಥ 11:1, ಪಿಲಿಪ್ಪಿ 3:17). ಅಪೊಸ್ತಲನಾದ ಪೌಲನ ಈ ಮಾತುಗಳಲ್ಲಿ ನಾವು ನೋಡುವುದೇನೆಂದರೆ, ಪ್ರತಿಯೊಬ್ಬ ಸಭಾ ಹಿರಿಯರು ತಮ್ಮ ತಮ್ಮ ಸಭೆಗಳಲ್ಲಿ ಪ್ರತಿಯೊಬ್ಬರಿಗೆ ಈ ರೀತಿಯಾಗಿ ಹೇಳಬೇಕು ಎಂಬುದನ್ನು ಪವಿತ್ರಾತ್ಮನು ನಿರೀಕ್ಷಿಸುತ್ತಾನೆ.

ಅನೇಕ ಸಭಾ ಹಿರಿಯರು ಈ ರೀತಿಯಾಗಿ ಹೇಳುತ್ತಾರೆ, ”ನನ್ನನ್ನು ಹಿಂಬಾಲಿಸಬೇಡಿ, ಕ್ರಿಸ್ತನನ್ನು ಹಿಂಬಾಲಿಸಿ” ಎಂಬುದಾಗಿ. ಈ ಮಾತು ತುಂಬಾ ದೀನ ಸ್ವಭಾವದಿಂದ ಕೂಡಿದಂತೆ ಕಾಣುತ್ತದೆ. ಆದರೆ ತಮ್ಮ ಸೋಲಿನ ಜೀವಿತವನ್ನು ಮುಚ್ಚಿಹಾಕಲು ಉಪಯೋಗಿಸುವ ತಂತ್ರ ಇದಾಗಿದೆ; ಮತ್ತು ಇದು ಪವಿತ್ರಾತ್ಮನ ಬೋಧನೆಗೆ ವಿರುದ್ಧವಾಗಿದೆ. ನಾಯಕನಾದ ನೀವು, ನಿಮ್ಮ ಜೀವಿತ ಮತ್ತು ಮಾತುಗಳು ಅನುಕರಣೀಯವಾಗಿರಬೇಕು, ನಿಮ್ಮ ಸಭೆಯಲ್ಲಿ ನೀವು ಈ ರೀತಿ ಹೇಳಲು ಸಾಮಾರ್ಥ್ಯವನ್ನು ಹೊಂದಿರಬೇಕು - ”ನಾನು ಕ್ರಿಸ್ತನನ್ನು ಹಿಂಬಾಲಿಸುವಂತೆ ನೀವು ನನ್ನನ್ನು ಹಿಂಬಾಲಿಸಿ” ಎಂಬುದಾಗಿ. ಪೌಲನು ಪರಿವರ್ತನೆ ಹೊಂದುವುದಕ್ಕಿಂತ ಮೊದಲು, ಆತನು ಸಂಪೂರ್ಣ ಸೋತವನಾಗಿದ್ದನು. ಹಾಗಿದ್ದರೂ ದೇವರು ಆತನನ್ನು ಬದಲಾಯಿಸಿದರು ಮತ್ತು ಆತನನ್ನು ಇತರರು ಹಿಂಬಾಲಿಸುವಂತೆ ದೊಡ್ಡ ಮಾದರಿಯನ್ನಾಗಿ ದೇವರು ಮಾಡಿದರು, ಪೌಲನು ಪರಿಪೂರ್ಣವಾಗಿಲ್ಲವಿದ್ದರೂ ಸಹ ಹೀಗೆ ದೇವರು ಆತನಲ್ಲಿ ಕಾರ್ಯ ಮಾಡಿದರು
(ಪಿಲಿಪ್ಪಿ 3:12-14). ಲೋಕದಲ್ಲಿರುವಂತ ಉತ್ತಮ ಕ್ರೈಸ್ತರು ಸಹ ಪರಿಪೂರ್ಣರಾಗಿಲ್ಲ, ಆದರೆ ಅವರು ಪರಿಪೂರ್ಣತೆಗೆ ಒತ್ತನ್ನು ಕೊಡುತ್ತಿದ್ದಾರೆ. ಹಾಗಾಗಿ, ನಿಮ್ಮ ಹಿಂದಿನ ಕಾಲದ ಜೀವಿತದಲ್ಲಿ ಹೆಚ್ಚು ಸೋಲುಗಳಿದ್ದರೂ ಸಹ, ಇತರರು ಹಿಂಬಾಲಿಸುವಂತೆ ದೇವರು ನಿಮ್ಮನ್ನು ದೈವಿಕ ನಾಯಕನನ್ನಾಗಿ ಮಾಡುತ್ತಾರೆ.

ನೀವು ದೇವ ಜನರ ನಾಯಕರಾಗಲು, ಕೆಳಕಂಡ ಏಳು ಗುಣಲಕ್ಷಣಗಳನ್ನು ನೀವು ಹುಡುಕುವವರಾಗಿರಬೇಕು.

1. ನೀವು ಯಾವಾಗಲೂ ದೀನರು ಮತ್ತು ಕೈಗೆ ಸಿಗುವಂತವರು ಆಗಿರಬೇಕು.

ಯೇಸು ಯಾವಾಗಲೂ ದೀನರೂ ಮತ್ತು ಮತ್ತೊಬ್ಬರ ಕೈಗೆ ಸಿಗುವಂತವರೂ ಆಗಿದ್ದರು (ಮತ್ತಾಯ 11:29). ಜನರು ಯೇಸುವನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಸಹ ಭೇಟಿಯಾಗಬಹುದಾಗಿತ್ತು. ನಿಕೋದೇಮನು ಯೇಸುವನ್ನು ಮಧ್ಯರಾತ್ರಿಯಲ್ಲಿ ಭೇಟಿಯಾಗಿದ್ದನು ಮತ್ತು ಯಾರು ಬೇಕಾದರೂ ಯಾವ ಸಮಯದಲ್ಲಿಯಾದರೂ ಯೇಸುವಿನೊಟ್ಟಿಗೆ ಮಾತನಾಡಬಹುದಾಗಿತ್ತು. ಯೇಸುವಿನ ದೀನತೆಯು ಆತನನ್ನು ಬಡವರಿಗೆ ಸುವಾರ್ತೆಯನ್ನು ಸಾರುವಂತೆ ಮಾಡಿತು (ಲೂಕ 4:18 ರಲ್ಲಿ ನಾವು ಅದನ್ನು ಓದುತ್ತೇವೆ). ಪೌಲನು ದೀನತೆಯುಳ್ಳಂತವನಾಗಿದ್ದನು, ತನ್ನ ತಪ್ಪುಗಳನ್ನು ತಕ್ಷಣಕ್ಕೆ ಅರಿಕೆ ಮಾಡುತ್ತಿದ್ದನು ಮತ್ತು ತಕ್ಷಣಕ್ಕೆ ಇತರರಲ್ಲಿ ಕ್ಷಮೆ ಕೇಳುತ್ತಿದ್ದನು (ಅ.ಕೃತ್ಯಗಳು 23:1-5). ಸಭಾ ಹಿರಿಯನಾಗಿದ್ದುಕೊಂಡು, ನೀವು ನಿಮ್ಮ ಸಭೆಯಲ್ಲಿ ಶ್ರೀಮಂತರ ಮತ್ತು ಬಡವರ ಮಧ್ಯೆ ವಿಭಜನೆಯನ್ನು ತರಬಾರದು.

ನೀವು ನಿಮ್ಮ ಬಗ್ಗೆ ”ಉನ್ನತ ಆಲೋಚನೆ” ಯನ್ನು ಇಟ್ಟುಕೊಳ್ಳಬಾರದು ಮತ್ತು ನಿಮ್ಮ ತಪ್ಪುಗಳಿಗಾಗಿ ತಕ್ಷಣಕ್ಕೆ ಕ್ಷಮೆ ಕೇಳಬೇಕು ಮತ್ತು ನೀವು ಯಾವಾಗಲೂ ಸಾಮಾನ್ಯ ಸಹೋದರನಾಗಿರಬೇಕು.

2. ನೀವು ಯಾವತ್ತೂ ನಿಮಗಾಗಿ ಅಥವಾ ನಿಮ್ಮ ಸೇವೆಗಾಗಿ ಯಾರ ಬಳಿಯೂ ಹಣವನ್ನು ಕೇಳಬಾರದು ಮತ್ತು ನೀವು ಸರಳ ಜೀವನ ಶೈಲಿಯನ್ನು ಹೊಂದಿರಬೇಕು.

ನೀವು ಯಾರಿಂದಲಾದರೂ ಕಾಣಿಕೆಯನ್ನು ಸ್ವೀಕರಿಸಿಕೊಳ್ಳುತ್ತಿದ್ದರೆ, (ಪೌಲನು ಆಗಾಗ್ಗೆ ಮಾಡುತ್ತಿದ್ದ ಹಾಗೆ) ನಿಮಗಿಂತ ಯಾರು ಶ್ರೀಮಂತರಾಗಿದ್ದಾರೋ ಅಂಥವರಿಂದ ಮಾತ್ರ ಸ್ವೀಕರಿಸಿಕೊಳ್ಳಬೇಕು ಮತ್ತು ನಿಮಗಿಂತ ಬಡವರಿರುವವರಿಂದ ಸ್ವೀಕರಿಸಿಕೊಳ್ಳಬಾರದು. ಯೇಸು ಯಾರ ಬಳಿಯೂ ಹಣವನ್ನು ತನಗಾಗಿ ಮತ್ತು ತನ್ನ ಸೇವೆಗಾಗಿ ಕೇಳುತ್ತಿರಲಿಲ್ಲ ಹಾಗೂ ಯೇಸು ಕಾಣಿಕೆಗಳನ್ನು ತನಗಿಂತ ಯಾರು ಶ್ರೀಮಂತರಾಗಿದ್ದಾರೋ ಅಂಥವರಿಂದ ಮಾತ್ರ ಸ್ವೀಕರಿಸಿಕೊಳ್ಳುತ್ತಿದ್ದರು (ಲೂಕ 8:3). ಯೇಸು ಮತ್ತು ಪೌಲನು ಸರಳ ಜೀವನ ಶೈಲಿಯನ್ನು ಹೊಂದಿದ್ದರು. ಯೇಸು ಮತ್ತು ಪೌಲನು ಹಣದ ಕಡೆಗೆ ಮತ್ತು ಭೌತಿಕ ಸಂಗತಿಗಳ ಕಡೆಗೆ ಯಾವ ನಡವಳಿಕೆಯನ್ನು ಹೊಂದಿದ್ದರೋ, ಅದೇ ನಡವಳಿಕೆಯನ್ನು ನಾವು ಸಹ ಹೊಂದಿಕೊಂಡಿರಬೇಕು.

3. ನೀವು ದೈವಿಕ ಮನುಷ್ಯನೆಂಬ ಸಾಕ್ಷಿಯನ್ನು ಹೊಂದಿಕೊಂಡಿರಬೇಕು.

ನೀವು ನಿಮ್ಮ ಸಭೆಯಲ್ಲಿ ನೀತಿವಂತ, ಪ್ರಾಮಾಣಿಕ ಮನುಷ್ಯನಾಗಿದ್ದುಕೊಂಡು, ಪವಿತ್ರತೆಗಾಗಿ ಅಭಿಲಾಷೆಯನ್ನು ಹೊಂದಿರುವವನು, ತನ್ನ ಸ್ವಂತದ್ದನ್ನು ನೋಡಿಕೊಳ್ಳದವನು ಎಂಬ ಗುರುತನ್ನು ಹೊಂದಿರಬೇಕು. ನೀವು ನಿಮ್ಮ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿದ್ದೀರಿ ಎಂಬುದನ್ನು ಜನರು ಅರಿತುಕೊಂಡಿರಬೇಕು (ಯಾಕೋಬ 1:26, ಎಫೆಸ 4:26-31) ಮತ್ತು ಯಾರು ಸೋತಿದ್ದಾರೋ ಅವರ ವಿಷಯವಾಗಿ ಕರುಣೆಯನ್ನು ಹೊಂದಿರಬೇಕು (ಇಬ್ರಿಯ 5:2). ಎಲ್ಲಾ ಸ್ತ್ರೀಯರ (ಯೌವನಸ್ಥ ಮತ್ತು ಹಿರಿಯ) ಕಡೆಗೆ ಸಂಪೂರ್ಣವಾಗಿ ಶುದ್ಧ ಸಾಕ್ಷಿಯನ್ನು ಹೊಂದಿರಬೇಕು (1 ತಿಮೊಥೆ 5:2). ಇದು ನಿಮ್ಮ ಜೀವಿತದ ಸುತ್ತ ದೈವಿಕತೆಯ ಸುವಾಸನೆಯನ್ನು ಹೊಂದಿರುವುದಾಗಿದೆ.

4. ನಿಮ್ಮ ಮಕ್ಕಳು ದೇವರನ್ನು ಹಿಂಬಾಲಿಸುವಂತೆ ಅವರನ್ನು ಬೆಳೆಸಬೇಕು.

ಪವಿತ್ರಾತ್ಮನು ಹೇಳುವುದೇನೆಂದರೆ, ಕೇವಲ ಅಂಥಹ ಜನರು ಮಾತ್ರ ಸಭಾ ಹಿರಿಯರಾಗಿ ನೇಮಕಗೊಂಡಿರಬೇಕು, ಇವರ ಮಕ್ಕಳು ವಿಶ್ವಾಸಿಗಳು ಮತ್ತು ವಿಧೇಯರು ಆಗಿರಬೇಕು (1 ತಿಮೊಥೆ 3:4,5, ತೀತ 1:6). ನಮ್ಮ ಮಕ್ಕಳು ನಮ್ಮನ್ನು ಬೇರೆ ಎಲ್ಲರಿಗಿಂತ ಹೆಚ್ಚಾಗಿ ಅರಿತವರಾಗಿದ್ದಾರೆ, ಏಕೆಂದರೆ ಅವರು ನಮ್ಮನ್ನು ಎಲ್ಲಾ ಸಮಯದಲ್ಲಿ ಮನೆಯಲ್ಲಿಯೇ ನೋಡುತ್ತಿರುತ್ತಾರೆ ಮತ್ತು ನಾವು ಮನೆಯಲ್ಲಿ ದೈವಿಕತೆಯಲ್ಲಿ ಜೀವಿಸುವಂತದ್ದನ್ನು ಅವರು ನೋಡುವಾಗ, ಅವರು ಸಹ ದೇವರನ್ನು ಹಿಂಬಾಲಿಸುತ್ತಾರೆ (ಜ್ಞಾನೋಕ್ತಿ 22:6). ಇದು ಸುಲಭದ ಕಾರ್ಯವಲ್ಲ. ಆದರೆ ದೇವರು ನಿಮಗೆ ಸಹಾಯಿಸುವಂತೆ ಆತನಲ್ಲಿ ನೀವು ಭರವಸೆ ಇಡಬೇಕು. ದೇವರನ್ನು ಪ್ರೀತಿಸುವಂತೆ ಮತ್ತು ಎಲ್ಲಾ ಜನರನ್ನು ಗೌರವಿಸುವಂತೆ ನಿಮ್ಮ ಮಕ್ಕಳಿಗೆ ಬೋಧಿಸಲು ಅನುಕೂಲವಾಗುವಂತೆ ದೇವರ ಸಹಾಯವನ್ನು ಹುಡುಕಬೇಕು.

5. ನೀವು ದೇವರ ಪೂರ್ಣ ಆಲೋಚನೆಗಳನ್ನು ಭಯ ರಹಿತವಾಗಿ ಬೋಧಿಸಬೇಕು.

ಹೊಸ ಒಡಂಬಡಿಕೆಯಲ್ಲಿ ಬರೆದಿರುವಂತ ಪ್ರತಿಯೊಂದು ಆಜ್ಞೆ ವಾಗ್ದಾನಗಳನ್ನು ಯಾವ ಜನರನ್ನು ಮೆಚ್ಚಿಸದೇ ಸಾರುವವರಾಗಿರಬೇಕು (ಅ.ಕೃತ್ಯಗಳು 20:27, ಗಲಾತ್ಯ 1:10). ನೀವು ಸತತವಾಗಿ ಪವಿತ್ರಾತ್ಮನ ಅಭಿಷೇಕಕ್ಕಾಗಿ ಹುಡುಕಬೇಕು, ಆಗ ನಿಮ್ಮ ಸಂದೇಶಗಳು ಸವಾಲುಗೊಳಿಸುವಂತದ್ದು ಮತ್ತು ಪ್ರೋತ್ಸಾಯಿಸುವಂತದ್ದು ಆಗಿರುತ್ತದೆ.

6. ಕ್ರಿಸ್ತನ ದೇಹದ ಸತ್ಯತೆಯನ್ನು ತೋರಿಸುವಂತ ರೀತಿಯಲ್ಲಿ ನಿಮ್ಮ ಸಭೆಯನ್ನು ಕಟ್ಟುವ ಅಭಿಲಾಷೆಯನ್ನು ನೀವು ಹೊಂದಿರಬೇಕು.

ಎಲ್ಲಾ ಜನರನ್ನು ಅವರ ಪಾಪಗಳಿಂದ ಬಿಡಿಸುವ ಸಲುವಾಗಿ ಮತ್ತು ನಂತರ ಜನರು ತನ್ನ ದೇಹವನ್ನು ಕಟ್ಟುವಂತೆ ಮತ್ತು ತನ್ನ ಜೀವಿತವನ್ನು ಜನರು ತೋರಿಸಬೇಕೆಂಬ ಸಲುವಾಗಿ ಯೇಸು ಈ ಲೋಕಕ್ಕೆ ಬಂದರು(ಮತ್ತಾಯ 16:18). ಪೌಲನ ಅಭಿಲಾಷೆಯು ಎಲ್ಲಾ ಕಡೆಯಲ್ಲಿಯೂ ಸ್ಥಳೀಯ ಸಭೆಗಳನ್ನು ನೆಟ್ಟು ಕ್ರಿಸ್ತನ ದೇಹವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಾಗಿತ್ತು (ಎಫೆಸ 4:15, 16). ನಿಮ್ಮ ಅಭಿಲಾಷೆಯು ಸಹ ಅದೇ ಆಗಿರಬೇಕು. ಇಂತಹ ಸಭೆಗಳನ್ನು ಕಟ್ಟಲು ಪೌಲನು ಕಷ್ಟಪಟ್ಟು ಕೆಲಸ ಮಾಡಿದನು ಮತ್ತು ನೀವು ಸಹ ಅಂತಹ ಸಭೆಯನ್ನು ಕಟ್ಟಲು ಕಷ್ಟಪಟ್ಟು ಕೆಲಸ ಮಾಡಬೇಕು (ಕೊಲಸ್ಸೆ:1:28,29).

7. ನಿಮ್ಮ ಆತ್ಮವನ್ನು ಮತ್ತು ನಿಮ್ಮ ದೃಷ್ಠಿಕೋನವನ್ನು ಹಂಚಿಕೊಳ್ಳುವಂತ ಕೆಲವರನ್ನಾದರೂ ಸಹ ನಿಮ್ಮ ಸಭೆಯಲ್ಲಿ ನೀವು ಎಬ್ಬಿಸುವವರಾಗಿರಬೇಕು.

ಸಭಾ ಹಿರಿಯನಾಗಿ, ನಿಮ್ಮ ಸಭೆಯ ಮುಂದಿನ ಸಂತತಿಯಲ್ಲಿ ದೇವರ ಸಾಕ್ಷಿಯು ಶುದ್ಧತೆಯಲ್ಲಿ ಸಂರಕ್ಷಿಸಲ್ಪಟ್ಟಿರಬೇಕು ಎಂಬುದರ ಬಗ್ಗೆ ಕಾಳಜಿ ವಹಿಸಬೇಕು. ಯೇಸು 11 ಶಿಷ್ಯರನ್ನು ಎಬ್ಬಿಸಿದರು, ಅವರು ಯೇಸುವಿನ ಆತ್ಮವನ್ನು ಮತ್ತು ಯೇಸುವಿನ ಕಾರ್ಯಗಳನ್ನು ಹೊತ್ತು ಸಾಗಿಸುವಂತ ಗುಣ್ಣಮಟ್ಟಗಳಿಂದ ಜೀವಿಸುವವರಾಗಿದ್ದರು. ಪೌಲನು ತಿಮೊಥೆಯನನ್ನು ಮತ್ತು ತೀತನನ್ನು ಎಬ್ಬಿಸಿದನು. ಇವರುಗಳು ಪೌಲನ ಆತ್ಮದಿಂದ ಮತ್ತು ಪೌಲನ ನಿಸ್ವಾರ್ಥ ಸೇವೆಯನ್ನು ಮುಂದುವರೆಸಿಕೊಂಡು ಹೋಗುವಂತ ಸ್ವಭಾವದಿಂದ ಜೀವಿಸಿದರು (ಪಿಲ್ಲಿಪ್ಪಿ 2:19-21 ; 2 ಕೊರಿಂಥ 7:13-15). ನಿಮ್ಮ ಸಭೆಯಲ್ಲಿ ನಿಮ್ಮ ಅಭಿಲಾಷೆಯನ್ನು ಮತ್ತು ನಿಮ್ಮ ದೃಷ್ಠಿಕೋನವನ್ನು ಹಂಚಿಕೊಳ್ಳುವಂತ ಕೆಲವು ವಿಶ್ವಾಸಿಗಳನ್ನು ನೀವು ಸಹ ಎಬ್ಬಿಸುವ ಸಲುವಾಗಿ ಕರ್ತನ ಸಹಾಯವನ್ನು ಹುಡುಕಬೇಕು.

ಹಾಗಾಗಿ, ಕರ್ತನು ನಿಮ್ಮನ್ನು ಆತನ ಪವಿತ್ರಾತ್ಮನಿಂದ ಸತತವಾಗಿ ಅಭಿಷೇಕಿಸುವಂತೆ ಮತ್ತು ಮೇಲೆ ತಿಳಿಸಿರುವಂತ ಪಟ್ಟಿಯಲ್ಲಿನ ಎಲ್ಲಾ ಗುಣಲಕ್ಷಣಗಳನ್ನು ನೀವು ಹೊಂದಿಕೊಳ್ಳುವಂತೆ ಪ್ರಾರ್ಥಿಸಿರಿ, ಇದರಿಂದಾಗಿ ನಿಮ್ಮ ಸಭೆಯಲ್ಲಿ ನಿಮ್ಮನ್ನು ಹಿಂಬಾಲಿಸುವಂತೆ ಪ್ರತಿಯೊಬ್ಬರಿಗೂ ಮಾದರಿಯಾಗಿರುತ್ತೀರಿ.