ಬರೆದಿರುವವರು : ಜೆರೆಮಿ ಅಟ್ಲೀ
ದಕ್ಷಿಣ ಶಾಂತಸಾಗರದ ಅನೇಕ ದ್ವೀಪಗಳಲ್ಲಿ, ಮಾನವರನ್ನು ಕೊಂದು ತಿನ್ನುವ ನರಭಕ್ಷಕ ಬುಡಕಟ್ಟಿನ ಜನರು ವಾಸವಾಗಿದ್ದ ಪ್ರದೇಶದಲ್ಲಿ, ಯೇಸು ಕ್ರಿಸ್ತನ ಸುವಾರ್ತೆಯನ್ನು ಹರಡುವುದಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ದುಡಿದ ಒಬ್ಬ ಸುವಾರ್ತಾ ಪ್ರಚಾರಕರ ಜೀವನ ಚರಿತ್ರೆಯನ್ನು ನಾನು ಇತ್ತೀಚೆಗೆ ಓದುತ್ತಿದ್ದೆ. ಕರ್ತನು ಈ ಸೇವಕನನ್ನು ಅನೇಕ ಕಠಿಣ ವಿಪತ್ತುಗಳ ಮೂಲಕ ಕರೆದೊಯ್ದು, ಅವನನ್ನು ಹೇಗೆ ಸಂರಕ್ಷಿಸಿದರು, ಬಲಪಡಿಸಿದರು, ಧೈರ್ಯಗೊಳಿಸಿದರು ಮತ್ತು ಸಂತೈಸಿದರು ಎಂಬ ವಿಷಯವು ನನ್ನನ್ನು ಬಹಳಷ್ಟು ಉತ್ತೇಜಿಸಿತು. ಇಂಥಹ ಜೀವಿತಕ್ಕಾಗಿನ ಹಂಬಲ ಮತ್ತು ನಾನು ಜೀವಿಸಬಹುದಾದ ಸಾಕ್ಷಿಗಿಂತ ಇದು ಬಹಳ ಹೆಚ್ಚು ವಿಶೇಷವಾದದ್ದು ಎಂಬ ಶೋಧನೆ ನನ್ನ ಹೃದಯದಲ್ಲಿ ಮೂಡುವುದನ್ನು ನಾನು ಕಂಡುಕೊಂಡೆನು.
ಆದರೆ, ನನಗೆ ಒಂದು ಬಹಳ ಮುಖ್ಯವಾದ ಸತ್ಯಾಂಶವನ್ನು ನೆನಪಿಸಲು ಕರ್ತನು ಈ ಅನುಭವವನ್ನು ಉಪಯೋಗಿಸಿದನು: ಅದೇನೆಂದರೆ, ನಾನು ಕೊಡಬಹುದಾದ ಅತ್ಯಂತ ಪ್ರಮುಖ ಸಾಕ್ಷಿಯು ನಾನು ನನ್ನ ತುಟಿಗಳ ಮೂಲಕ ಇತರ ಜನರಿಗೆ ಕೊಡುವಂತ ಸಾಕ್ಷಿಯಲ್ಲ; ಬದಲಾಗಿ, ಅದು ನಾನು ನನ್ನ ಜೀವನದ ಮೂಲಕ ಪರಲೋಕದ ರಾಜತ್ವಗಳಿಗೂ ಅಧಿಕಾರಗಳಿಗೂ ಕೊಡುವಂತ ಸಾಕ್ಷಿ, ಎಂಬುದಾಗಿ.
"ದೇವರ ನಾನಾ ವಿಧವಾದ ಜ್ಞಾನವು ಈಗ ಕ್ರೈಸ್ತಸಭೆಯ ಮೂಲಕ ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಗೊತ್ತಾಗಬೇಕು"(ಎಫೆಸದವರಿಗೆ 3:10).
ಸತ್ಯವೇದದಲ್ಲಿನ ಅತ್ಯಂತ ಹಿಂದಿನ ದಾಖಲೆಗಳಲ್ಲಿ ನಮಗೆ ಕಂಡುಬರುವುದು ಏನೆಂದರೆ, ಸೈತಾನನು ಭೂಲೋಕದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ, ತಾನು ದೇವರ ಮುಂದೆ ಯಾರನ್ನು ದೂಷಿಸಬಹುದು, ಎಂದು ಹುಡುಕುತ್ತಿದ್ದಾನೆ (ಯೋಬನು 1:6-7), ಮತ್ತು ಇದೇ ವೇಳೆಯಲ್ಲಿ ದೇವರು ಸಹ ಭೂಲೋಕದ ಸ್ತ್ರೀ-ಪುರುಷರಲ್ಲಿ ಯಾರು ತನ್ನ ಕಡೆಗೆ ತಿರುಗಿಕೊಂಡು ತನ್ನ ಮುಖದ ಮುಂದೆ ಜೀವಿಸುತ್ತಾರೆ ಎಂದು ಹುಡುಕುತ್ತಿದ್ದಾರೆ - ಅವರನ್ನು ತನ್ನ ದೇವಭಕ್ತರೆಂದು ತಾನು ಸೈತಾನನಿಗೆ ತೋರಿಸಬೇಕು (ಯೋಬ. 1:8), ಮತ್ತು ಆ ಮೂಲಕ ಸೈತಾನನನ್ನು ಖಂಡಿಸಬೇಕು ಹಾಗೂ ತಾನು ಮಾನವ ಸೃಷ್ಟಿಯ ಮೂಲಕ ಸಿದ್ಧಪಡಿಸಿದ ಭವ್ಯವಾದ ಯೋಜನೆಯಲ್ಲಿರುವ ದೇವಜ್ಞಾನವನ್ನು ಪ್ರದರ್ಶಿಸಬೇಕು – ಎನ್ನುವುದನ್ನು ನಾವು ನೋಡುತ್ತೇವೆ.
ಇವೆಲ್ಲವನ್ನು ತಿಳಿದುಕೊಂಡ ನಂತರವೂ, ನನ್ನ ಜೀವನದ ಮೂಲಕ ಕರ್ತನನ್ನು ಮಹಿಮೆಪಡಿಸುವುದಕ್ಕಿಂತ ನಾನು ಆಡುವ ಮಾತುಗಳ ಮೂಲಕ ಕೊಡುವಂತ ಸಾಕ್ಷಿಯು ಹೆಚ್ಚು ಮೌಲ್ಯವುಳ್ಳದ್ದು ಎಂದು ತಿಳಿಯುವುದು ಸುಲಭ ಎಂದು ನಾನು ಕಂಡುಕೊಂಡಿದ್ದೇನೆ!
ಸಾಕ್ಷಿಯಾಗಿರುವಂತ ಜೀವಿತದ ಲಕ್ಷಣ
ನಾನು ನನ್ನ ಜೀವನದ ಮೂಲಕ ದೇವರನ್ನು ಮಹಿಮೆಪಡಿಸಬೇಕೆಂದು ಪ್ರತೀ ಬಾರಿ ಯೋಚಿಸುವಾಗಲೂ, ತನ್ನ ಜೀವನದ ಮೂಲಕ "ತನ್ನ ತಂದೆಯಾದ ದೇವರನ್ನು ತಿಳಿಯಪಡಿಸಿದ" (ಯೋಹಾ. 1:18) ಕರ್ತನ ಬಗ್ಗೆ ನನಗೆ ನೆನಪಾಗುತ್ತದೆ. ನಾವು ಕ್ರಿಸ್ತನಲ್ಲಿ ಬೆಳೆಯುತ್ತಿರುವಾಗ ತಂದೆಯಾದ ದೇವರನ್ನು ಅರಿತುಕೊಳ್ಳಲಿಕ್ಕಾಗಿ ಯೇಸುವಿನ ಜೀವನವನ್ನು ಹೆಚ್ಚು ಹೆಚ್ಚಾಗಿ ನೋಡಬೇಕು, ಮತ್ತು ಕೇವಲ ಯೇಸುವಿನ ಮಾತುಗಳನ್ನಷ್ಟೇ ಅಲ್ಲ. ಯೇಸುವಿನ ಜೀವನದ ಮೂರು ಸಂದರ್ಭಗಳು ನನಗೆ ತಂದೆಯಾದ ದೇವರ ಬಗ್ಗೆ ಆಳವಾದ ಜ್ಞಾನವನ್ನು ನೀಡಿವೆ - ಇವೆಲ್ಲವೂ ಪಳಪಳನೆ ಹೊಳೆಯುವ ಒಂದು ವಜ್ರದ ಬಹುಮುಖ ಗಳಂತೆ- ಆ ಭವ್ಯ ಜೀವನದ ಬಹುಮುಖಗಳ ನೋಟಗಳನ್ನು ನನಗೆ ತೋರಿಸುತ್ತವೆ.
"ಎಲ್ಲಾ ಅವಿಶ್ರಾಂತಿಯು ಹೆಮ್ಮೆ ಅಥವಾ ಅಹಂಕಾರದ ಮೂಲಕ ಉಂಟಾಗುತ್ತದೆ. ಹಾಗಾಗಿ ಯಾವಾಗಲಾದರೂ ನಮ್ಮಲ್ಲಿ ದೇವರ ವಿಶ್ರಾಂತಿ ಇಲ್ಲವಾದರೆ, ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು."
"ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಯೇಸು ನಿದ್ರಿಸುತ್ತಿದ್ದನು"(ಮತ್ತಾ. 8:24).
"ಕೂಡಲೇ ಯೂದನು ಯೇಸುವಿನ ಬಳಿಗೆ ಬಂದು ಬೋಧಕನೇ, ವಂದನೆ ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಅದಕ್ಕೆ ಯೇಸು ಅವನಿಗೆ - ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ? ಎಂದನು. ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು"(ಮತ್ತಾ.26:49-50).
"ಪಿಲಾತನು ಯೇಸುವಿಗೆ. ನೀನು ಎಲ್ಲಿಂದ ಬಂದವನು? ಎಂದು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ. ಆಗ ಪಿಲಾತನು ಆತನಿಗೆ, ನೀನು ನನ್ನ ಸಂಗಡ ಮಾತನಾಡುವುದಿಲ್ಲವೋ? ನಾನು ನಿನ್ನನ್ನು ಶಿಲುಬೆಗೆ ಹಾಕಿಸುವುದಕ್ಕೂ ನಿನ್ನನ್ನು ಬಿಡಿಸುವುದಕ್ಕೂ ನನಗೆ ಅಧಿಕಾರ ಉಂಟೆಂದು ನಿನಗೆ ತಿಳಿಯುವದಿಲ್ಲವೋ ಎಂದು ಕೇಳಿದನು. ಅದಕ್ಕೆ ಯೇಸು, ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ, ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ ಎಂದು ಉತ್ತರಕೊಟ್ಟನು"(ಯೋಹಾನ 19:9-11).
ಈ ಮೂರೂ ಸನ್ನಿವೇಶಗಳಲ್ಲಿ ನಾನು ನೋಡುವುದೇನೆಂದರೆ, ಯೇಸು ವಿಶ್ರಾಂತಿಯಲ್ಲಿದ್ದರು! ತುಫಾನಿನ ಮಧ್ಯದಲ್ಲಿಯೂ ಅವರು ನಿದ್ರಿಸುತ್ತಿದ್ದರು, ಯಾಕೆಂದರೆ ತನ್ನ ತಂದೆಯಲ್ಲಿ ಅವರು ಭರವಸೆ ಇಟ್ಟಿದ್ದಿಕ್ಕಾಗಿ. ಯೂದನನ್ನು ಅವರು ನನ್ನ ’ಸ್ನೇಹಿತನೇ’ ಎಂದು ಕರೆಯಲು ಸಾಧ್ಯವಾಯಿತು, ಯಾಕೆಂದರೆ ಪಾತ್ರೆಯು ತನ್ನ ತಂದೆಯಿಂದ ಬಂದದ್ದು ಎಂದು ಅವರು ನೋಡಿದ್ದಕ್ಕಾಗಿ. ಭೂಲೋಕದ ಅಧಿಪತಿಗಳ ಎದುರು ನಿಲ್ಲಲು ಅವರಿಗೆ ಸಾಧ್ಯವಾಯಿತು, ಏಕೆಂದರೆ ಅವರು ತಮ್ಮ ತಂದೆಯ ಉನ್ನತವಾದ ಅಧಿಕಾರದಲ್ಲಿ ಭರವಸೆ ಇಟ್ಟಿದ್ದರು. ಅವರ ಜೀವಿತದ ಸಾಕ್ಷಿಯು ಪ್ರೀತಿಯುಳ್ಳ, ಬಲಶಾಲಿಯಾದಂತಹ ಪರಲೋಕದ ತಂದೆಯಲ್ಲಿ ಸಂಪೂರ್ಣವಾದ "ವಿಶ್ರಾಂತಿ"ಯನ್ನು ಹೊಂದಿದ ಸಾಕ್ಷಿಯಾಗಿತ್ತು!
ಮತ್ತು ದೇವರಿಗೆ ಸ್ತೋತ್ರ, ನಾವು ಕೂಡ ಇಂದು ಅದೇ ಸಾಕ್ಷಿಯನ್ನು ಹೊಂದಬಹುದಾಗಿದೆ. ಭೂಲೋಕದಲ್ಲಿ ಯಾರು ನೋಡದೇ ಇದ್ದರೂ ಸಹ ಮತ್ತು ನಾವು ಒಂದು ಮಾತನ್ನು ಆಡದೇ ಇದ್ದರೂ ಸಹ (ಯೇಸು ದೋಣಿಯಲ್ಲಿ ನಿದ್ರಿಸುತ್ತಿದ್ದಾಗ ಅವರು ಮಾತನಾಡದ ರೀತಿಯಲ್ಲಿ), ನಮ್ಮ ಜೀವಿತಗಳೂ, ಪರಲೋಕದಲ್ಲಿರುವ ನಮ್ಮ ತಂದೆಯ ಸರ್ವೋಚ್ಚ ವಿಶ್ವಾಸಾರ್ಹತೆಯ ಆಕಾಶಮಂಡಲದಲ್ಲಿರುವ ಅಧಿಪತಿಗಳಿಗೂ ಮತ್ತು ಅಧಿಕಾರಿಗಳಿಗೂ ನೀಡಲಾಗುವ ಸಾಕ್ಷಿಯಾಗಿರಬಹುದಾಗಿದೆ.
ಆ ಸಾಕ್ಷಿಯನ್ನು ನಾವು ಹೇಗೆ ಕೊಡಬಹುದು? ನಾವು ಎದುರಿಸುವ ತುಫಾನಿನ ಮಧ್ಯದಲ್ಲಿ, ದೋಣಿಯಲ್ಲಿ ಯೇಸುವಿನ ಪಕ್ಕದಲ್ಲಿಯೇ ನಾವು ಮಲಗಬಹುದಾಗಿದೆ. ಪವಿತ್ರಾತ್ಮನನ್ನು ಹೊಂದಿರದ ಶಿಷ್ಯಂದಿರು, ತುಫಾನು ನಿಲ್ಲುವ ತನಕ ವಿಶ್ರಾಂತಿಯಲ್ಲಿರಲು ಸಾಧ್ಯವಾಗಲಿಲ್ಲ; ಆದರೆ ನಾವು ತುಫಾನಿನ ಮಧ್ಯದಲ್ಲಿಯೂ ಮತ್ತು ಅದರ ಮೊದಲು ಯೇಸುವಿನೊಟ್ಟಿಗೆ ವಿಶ್ರಾಂತಿಯಿಂದ ಇರಬಹುದಾಗಿದೆ. ಹಿಡಿದುಕೊಡುವವರ ಆಕ್ರಮಣದ ಮಧ್ಯದಲ್ಲಿ, ಯೇಸುವಿನ ರೀತಿಯಲ್ಲಿ, ನಮ್ಮನ್ನು ನಾವು ರಕ್ಷಿಸಿಕೊಳ್ಳುವುದನ್ನು ನಿರಾಕರಿಸಬಹುದು. ಪವಿತ್ರಾತ್ಮನನ್ನು ಹೊಂದಿರದ ಶಿಷ್ಯಂದಿರು, ಹೊರಾಡಿ ಶೋಧನೆಯನ್ನು ತಡೆಯಲು ಆಗಲಿಲ್ಲ; ನಾವು ಅನ್ಯಾಯಕ್ಕೆ ಒಳಪಟ್ಟಾಗ ಯೇಸುವಿನೊಟ್ಟಿಗೆ ದೇವರಿಗೆ ನಮ್ಮನ್ನು ನಾವು ಒಪ್ಪಿಸಿಬಿಡಬೇಕು. ಮೇಲಾಧಿಕಾರಿಗಳಿಂದ ನಮಗೆ ಸವಾಲುಗಳು ಎದುರಾಗುವಾಗ, ಯೇಸು ಮಾಡಿದ ರೀತಿಯಲ್ಲಿ, ಅಂತಿಮ ಅಧಿಕಾರವನ್ನು ಹೊಂದಿರುವಂತ ದೇವರಲ್ಲಿ ನಾವು ಆದರಣೆಯನ್ನು ತೆಗೆದುಕೊಳ್ಳಬೇಕು.
ನನ್ನ ಸಣ್ಣ ದೋಣಿಗೆ ಬಿರುಗಾಳಿ ಬಡಿಯುವಾಗ, ಕರ್ತನು ‘ಯೇಸುವಿನ ಜೊತೆ ದೋಣಿಯಲ್ಲಿ ಮಲಗು’ಎಂದು ಎಷ್ಟೋ ಸಾರಿ ನನಗೆ ಆಹ್ವಾನ ಕೊಟ್ಟಿದ್ದಾನೆ. ನನಗೆ ಸವಾಲಾಗಿರುವ ಎರಡು ಸಂಗತಿಗಳು ಯಾವುವೆಂದರೆ:
ವಿಶ್ರಾಂತಿಯು ಒಂದು ಆಯ್ಕೆಯಲ್ಲ.
"ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನವು ಇನ್ನೂ ಇರುವಲ್ಲಿ ನಿಮ್ಮೊಳಗೆ ಯಾವನಾದರೂ ಆ ವಾಗ್ದಾನದ ಫಲವನ್ನು ಹೊಂದದೆ ತಪ್ಪುವವನಾದನೋ ಎಂದು ನಾವು ಭಯಪಡೋಣ"(ಇಬ್ರಿ. 4:1).
ಎಲ್ಲಾ ಅವಿಶ್ರಾಂತಿಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಇತ್ತೀಚೆಗಿನ ನಮ್ಮ ಸಭಾ ಕೂಟದಲ್ಲಿ ಎಲ್ಲಾ ಅವಿಶ್ರಾಂತಿಯು ಗರ್ವದ ಕಾರಣದಿಂದ ಬರುತ್ತದೆ ಎಂದು ನಾವು ಕೇಳಿಸಿಕೊಂಡೆವು. ಆದ್ದರಿಂದ ಯಾವತ್ತೂ ಆಗಲಿ ನಮ್ಮಲ್ಲಿ ದೇವರ ವಿಶ್ರಾಂತಿಯು ಕಂಡು ಬರದಿದ್ದರೆ, ಅದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಮತ್ತು ದೇವರ ವಿಶ್ರಾಂತಿಯನ್ನು ಹೊಂದಿಕೊಳ್ಳದಂತೆ ದೂರವಿಡುವ ಗರ್ವದ ಬಗ್ಗೆ ಬೆಳಕು ಕೊಡುವಂತೆ ಕರ್ತನನ್ನು ಕೇಳಬೇಕು. “ನಾವು ತಪ್ಪುವವರಾಗಿದ್ದೇವೋ ಏನೋ ಎಂದು ಭಯಪಡಬೇಕು”ಎಂಬುದಾಗಿ ಸತ್ಯವೇದವು ಹೇಳುತ್ತದೆ. ಆದ್ದರಿಂದ ಅತೀ ಸ್ವಲ್ಪ ವಿಶ್ರಾಂತಿಯ ಕೊರತೆ ಇದ್ದರೂ ಸಹ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ವಿಶ್ರಾಂತಿ ಎಂದರೆ ಸೋಮಾರಿತನ ಎಂದು ಅರ್ಥವಲ್ಲ.
ನಾನು ಏನನ್ನೂ ಮಾಡುವುದಿಲ್ಲ ಎಂಬ ಅರ್ಥದಲ್ಲಿ ದೇವರು ನಮಗೆ ನೀಡಿದ ವಾಗ್ದಾನದ ವಿಶ್ರಾಂತಿಯನ್ನು (ಸೂಕ್ಷ್ಮವಾಗಿ) ತಿರುಚಲು ನನ್ನ ಮಾಂಸವು (ಶರೀರವು) ಪ್ರಯತ್ನಿಸುತ್ತದೆ ಎಂದು ನಾನು ಗಮನಿಸಿದ್ದೇನೆ. ಅದು ತಪ್ಪು. ಕ್ರಿಸ್ತನಲ್ಲಿ ವಿಶ್ರಾಂತಿ ಪಡೆಯುವುದೆಂದರೆ ನಾವು ಒಂದೇ ಜಾಗದಲ್ಲಿ ಕುಳಿತು ಏನನ್ನೂ ಮಾಡದೆ ಇರುವುದು ಎಂದರ್ಥವಲ್ಲ. ಬದಲಾಗಿ ನಾವು ನಮ್ಮ ಎಲ್ಲಾ ಕಾರ್ಯಗಳು (ಸ್ವತ: ಯೇಸುವಿನಂತೆಯೇ) ನಮ್ಮ ಪರಲೋಕ ತಂದೆಯ ಶಾಶ್ವತ ಪ್ರೀತಿ ಮತ್ತು ಆರೈಕೆಯಿಂದ ಬೆಂಬಲಿತವಾಗಿವೆ ಎಂದರ್ಥ.
ಮತ್ತು ದೇವರು ನನ್ನನ್ನು ಈ ಸಮಯದಲ್ಲಿ ತನ್ನ ವಿಶ್ರಾಂತಿಗೆ ಅಹ್ವಾನಿಸುತ್ತಿರುವ ನನ್ನ ಲೌಕಿಕ ಕೆಲಸದಂತಹ “ಕ್ಷುಲ್ಲಕ” ವಿಷಯಗಳಲ್ಲಿಯೂ ಸಹ ಹೆಚ್ಚು ಶ್ರದ್ಧೆ ಮತ್ತು ಹೆಚ್ಚು ಗಮನ ಹರಿಸುವಂತೆ ನನಗೆ ಅಜ್ಞಾಪಿಸುತ್ತಿದ್ದಾನೆ.
"ನೀವು ಯಾವದನ್ನು ಮಾಡಿದರೂ, ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ"(ಕೊಲೊಸ್ಸೆಯವರಿಗೆ. 3:23 ).
ಆದ್ದರಿಂದ ನಾನು ವಿಶ್ರಾಂತಿಯ ಎಲ್ಲಾ ಸುಳ್ಳು ನಿರೂಪಣೆಗಳನ್ನು ತಿರಸ್ಕರಿಸಿ, ಯೇಸು ನಮಗೆ ವಾಗ್ದಾನ ಮಾಡಿರುವ ನಿಜವಾದ ವಿಶ್ರಾಂತಿಗಾಗಿ ಹಾತೊರೆಯುತ್ತೇನೆ. ನಾನು ಅವಿಶ್ರಾಂತಿಯಲ್ಲಿರುವುದನ್ನು ತಿರಸ್ಕರಿಸಲು ಬಯಸುತ್ತೇನೆ ಮತ್ತೆ ಶತ್ರುವು ನನಗೆ ನೀಡಬಹುದಾದ ಯಾವುದೇ ನಕಲಿ ವಿಶ್ರಾಂತಿಯನ್ನು ನಿರಾಕರಿಸಲು ಬಯಸುತ್ತೇನೆ.
“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ, ದೀನ ಮನಸ್ಸುಳ್ಳವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಗುವುದು. ಯಾಕೆಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು” (ಮತ್ತಾ.11:28-30).