WFTW Body: 

ಯೆಶಾಯ 42:1 ರಲ್ಲಿರುವ ವಾಕ್ಯವು, ಪವಿತ್ರಾತ್ಮನಿಂದ ಅಭಿಷೇಕ ಹೊಂದಿದ ಯೆಹೋವನ ಸೇವಕನ ಬಗ್ಗೆ, ಅಂದರೆ ಯೇಸುವಿನ ಬಗ್ಗೆ ಮಾತನಾಡುತ್ತದೆ. ”ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ” ಎಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ. ಒಬ್ಬ ನಿಜವಾದ ದೇವರ ಸೇವಕನಿಗೆ ಹಣವಾಗಲಿ ಅಥವಾ ಯಾವುದೇ ಸಂಸ್ಥೆ ಅಥವಾ ಮಾನವನ ಸೇವಾ ಸಂಸ್ಥೆಯಾಗಲಿ ಆಧಾರವಾಗಿರದೇ, ದೇವರೆ ಆತನಿಗೆ ಆಧಾರವಾಗಿರುತ್ತಾನೆ. ದೇವರೊಬ್ಬನೇ ನಮಗೆ ಎಲ್ಲಾ ಸಮಯದಲ್ಲಿ ಆಧಾರನಾಗಿರಬೇಕು. ಒಬ್ಬ ಮನುಷ್ಯ ನಮಗೆ ಉಡುಗೊರೆಗಳನ್ನು ಕೊಡಬಹುದು. ಆದರೆ ನಾವು ಯಾವುದೇ ಮನುಷ್ಯನ ಮೇಲೆ ಅಥವಾ ಹಣದ ಮೇಲೆ ಅವಲಂಬಿತರಾಗಿರಬಾರದು. ”ಆಧಾರ” ಎಂಬುವಂತ ಪದವು ಯಾವುದರ ಮೇಲೆ ನಾವು ಅವಲಂಬಿತರಾಗಿದ್ದೀವಿ ಎಂಬುದನ್ನು ಉಲ್ಲೇಖಿಸುತ್ತದೆ. ನಾವು ದೇವರೊಬ್ಬನ ಮೇಲೆ ಅವಲಂಬಿತರಾಗಿರಬೇಕು. ನಾವು ಅಸಹಾಯಕತೆಯ ಸ್ಥಿತಿಗೆ ಬಂದಾಗ ದೇವರು ತನ್ನ ಆತ್ಮವನ್ನು ನಮ್ಮ ಮೇಲೆ ಇರಿಸುತ್ತಾನೆ.

ಯೆಶಾಯ 42:2 : ”ಇವನು ಕೂಗಾಡುವುದಿಲ್ಲ, ಅರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ”. ಈ ವಾಕ್ಯವು ಮತ್ತಾಯ 12:19, 20 ರಲ್ಲಿ ತಿಳಿಸಿರುವಂತೆ, ಯೇಸುವಿನ ಬಗ್ಗೆ ಉಲ್ಲೇಖಿತವಾಗಿರುವ ಸಂಗತಿಯನ್ನು ಸೂಚಿಸುತ್ತದೆ. ಇದು ಹೀಗೆ ಹೇಳುತ್ತಾ ಹೋಗುತ್ತದೆ, ”ಈತನ ಧ್ವನಿಯು ಬೀದಿಗಳಲ್ಲಿ ಕೇಳಿಸುವುದಿಲ್ಲ, ಜಜ್ಜಿದ ದಂಟನ್ನು ಮುರಿದು ಹಾಕುವುದಿಲ್ಲ” ಎಂಬುದಾಗಿ. ಇದರ ಅರ್ಥವೇನೆಂದರೆ, ಯಾರು ತಮ್ಮ ಜೀವಿತವನ್ನು ಹಾಳು ಮಾಡಿಕೊಂಡಿರುತ್ತಾರೋ, ಅವರನ್ನು ನಿರುತ್ಸಾಹಗೊಳಿಸದೇ, ಅವರನ್ನು ಪ್ರೋತ್ಸಾಯಿಸಿ, ಸ್ವಸ್ಥಪಡಿಸುವುದಾಗಿದೆ. ದೇವರು ಕಳೆಗುಂದಿದ ದೀಪವನ್ನು ನಂದಿಸುವುದಿಲ್ಲ. ಇದರ ಬದಲಾಗಿ, ಇನ್ನೂ ಚೆನ್ನಾಗಿ ಉರಿಯಲು ಸಹಾಯವಾಗುವಂತೆ ಗಾಳಿ ಊದುತ್ತಾರೆ. ತಮ್ಮ ಜೀವಿತದಲ್ಲಿ ಸೋತು, ಬಲಹೀನರಾದಂತ ವಿಶ್ವಾಸಿಗಳಿಗೆ ಸಹಾಯಿಸುವಲ್ಲಿ ದೇವರಿಗೆ ಆಸಕ್ತಿಯಿದೆ. ಯಾರು ನಿರುತ್ಸಾಹಗೊಂಡಿರುತ್ತಾರೋ, ನಿರಾಶೆಹೊಂದಿರುತ್ತಾರೋ ಅಂತವರಿಗೆ ಸಹಾಯ ಮಾಡುವುದರಲ್ಲಿ ದೇವರು ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಅವರ ಆತ್ಮಗಳನ್ನು ಮೇಲೆಕ್ಕೆತ್ತಿ, ಹುಮ್ಮಸ್ಸನ್ನು ತುಂಬುತ್ತಾರೆ. ಒಬ್ಬ ನಿಜವಾದ ದೇವರ ಸೇವಕನು, ನಿರಾಶೆ ಹೊಂದಿದಂತ, ನಿರುತ್ಸಾಹ ಹೊಂದಿದಂತ, ನಿರೀಕ್ಷೆ ಬಿಟ್ಟಂತ, ತಮ್ಮ ಜೀವಿತವನ್ನು ಹಾಳು ಮಾಡಿಕೊಂಡಂತವರ ಆತ್ಮಗಳನ್ನು ಮೇಲೆಕ್ಕೆತ್ತಿ, ಹುಮ್ಮಸ್ಸನ್ನು ತುಂಬಿ, ಯೇಸು ಹೊಂದಿದ್ದ ಪ್ರೋತ್ಸಾಹ ಪಡಿಸುವಂತ ಸೇವೆಯನ್ನು ಹೊಂದಿರುತ್ತಾನೆ. ನಾವೆಲ್ಲರೂ ಇಂತಹ ಸೇವೆಯನ್ನು ಹುಡುಕೋಣ, ಏಕೆಂದರೆ, ಎಲ್ಲಾ ಕಡೆ ಜನರಿಗೆ ಇದು ಅಗತ್ಯತೆ ಇದೆ.

ಯೆಶಾಯ 42:19 : ”ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೇ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧಕರು ಯಾರು?”. ಇದು ತಬ್ಬಿಬ್ಬು ಮಾಡುವಂತ ವಚನದ ರೀತಿಯಲ್ಲಿ ಇದೆ. ವಿಶೇಷವಾಗಿ ಇದು ಸ್ಪಷ್ಟವಾಗಿ ಯೇಸುವಿನ ಬಗ್ಗೆ ಉಲ್ಲೇಖಿತವಾಗಿದೆ (ನಾವು ಈ ಅಧ್ಯಾಯದ ವಚನ 1 ರಿಂದಲೇ ನೋಡಬಹುದು). ಏನು ಇದರ ಅರ್ಥ? ಒಬ್ಬ ನಿಜವಾದ ದೇವರ ಸೇವಕನು ತನ್ನ ಸುತ್ತಮುತ್ತ ನಡೆಯುವಂತ, ಕೇಳುವಂತ ಮತ್ತು ನೋಡುವಂತ ಸಂಗತಿಗಳ ವಿಷಯವಾಗಿ ಕುರುಡು ಮತ್ತು ಕಿವುಡಾಗಿರುತ್ತಾನೆ. ಆತನು ಬಹು ವಿಷಯಗಳನ್ನು ಕಂಡಿದ್ದರೂ, ಆದರ ಬಗ್ಗೆ ಗಮನ ಹೊಂದಿರುವುದಿಲ್ಲ (ವಚನ 20). ಆತನು ತನ್ನ ಸುತ್ತ ಹೋಗಿ ಬೇರೊಬ್ಬರಲ್ಲಿ ಪಾಪವನ್ನು ನೋಡುವುದಿಲ್ಲ. ಆತನು ಸುತ್ತ ಹೋಗಿ ಜನಗಳು ಆಡುವಂತ ಮಾತುಗಳನ್ನು ಕೇಳಿಸಿಕೊಂಡು, ಅದರಲ್ಲಿ ಏನನ್ನಾದರೂ ಹಿಡುಕೊಳ್ಳಲು ಮುನ್ನುಗ್ಗುವುದಿಲ್ಲ. ಫರಿಸಾಯರು ಈ ರೀತಿ ಇದ್ದರು - ಅಂದರೆ ಯೇಸು ಆಡುವ ಪ್ರತಿ ಮಾತಿನಲ್ಲಿ ಏನನ್ನಾದರೂ ಹಿಡುಕೊಂಡು, ಆತನನ್ನು ಆ ವಿಷಯವಾಗಿ ದೂರಲು ಯಾವಾಗಲೂ ಕಾಯುತ್ತಿದ್ದರು. ವಿಷಾದನೀಯ ಸಂಗತಿ ಏನೆಂದರೆ, ಅನೇಕ ಕ್ರ್ಯಸ್ತರು ಈ ರೀತಿಯಾಗಿದ್ದಾರೆ - ಅಂದರೆ ಅವರು ಯಾವಾಗಲೂ ಜನರು ಹೇಳುವಂತ ಪ್ರತಿಯೊಂದರಲ್ಲಿ ಏನಾದರೊಂದನ್ನು ಕಂಡುಹಿಡಿದು, ಅದನ್ನು ದೂರಲು ಕಾಯುತ್ತಿರುತ್ತಾರೆ. ಏಕೆಂದರೆ ಅವರು ಯೇಸುವಿನ ಸೇವೆಯ ಬಗ್ಗೆ ಹೊಟ್ಟೆಕಿಚ್ಚನ್ನು ಹೊಂದಿರುತ್ತಾರೆ. ಅವರ ರೀತಿ ಇರಬೇಡಿ. ನಿಮ್ಮ ಸುತ್ತಮುತ್ತ ನಡೆಯುವ, ನೋಡುವ ಮತ್ತು ಕೇಳುವ ಅನೇಕ ವಿಷಯಗಳಿಗೆ ನೀವು ಕುರುಡು ಮತ್ತು ಕಿವುಡರಾಗಿರಬೇಕು. ನಿಮ್ಮ ಬಗ್ಗೆ ಯಾರಾದರು ತಪ್ಪಾದ ದೂಷಣೆ ಅಥವಾ ದೂರನ್ನು ಮಾಡಿದ್ದಾರೆ ಎಂದು ಯಾರಿಂದಿದಾರೂ ನೀವು ಕೇಳಿದ್ದೀರಾ? ನೀವು ಕಿವುಡರಾಗಿದ್ದರೆ, ಅದನ್ನು ಕೇಳಿರುವುದಿಲ್ಲ. ಹಾಗಾಗಿ ”ಕಿವುಡ”ರಾಗಿರಿ! ಒಬ್ಬ ಆಕರ್ಷಿತ ಹೆಣ್ಣಿಗೆ ”ಕುರುಡ”ರಾಗಿರುವುದು ಒಬ್ಬ ದೇವರ ಸೇವಕನಿಗೆ ಒಳ್ಳೆಯದಲ್ಲವೇ? ನಿಮಗೆ ಕಣ್ಣಿದೆ, ಆದರೆ ನೀವು ನೋಡುವುದಿಲ್ಲ. ನೀವು ”ಕುರುಡರು”! ನಿಮಗೆ ಕಿವಿ ಇದೆ, ಆದರೆ ನೀವು ಕೇಳುವುದಿಲ್ಲ! ಏಕೆಂದರೆ ನಿಮ್ಮ ಕಣ್ಣು ನೋಡುವಂತದ್ದನ್ನು ಅಥವಾ ನಿಮ್ಮ ಕಿವಿ ಕೇಳಿಸಿಕೊಳ್ಳುವಂತದ್ದನ್ನು ನೀವು ತೀರ್ಪು ಮಾಡುವುದಿಲ್ಲ. ಈ ರೀತಿಯಾಗಿ ಯೇಸು ಜೀವಿಸಿದರು ಮತ್ತು ಇದೇ ರೀತಿಯಾಗಿ ನಾವು ಸಹ ಜೀವಿಸಬೇಕು (ಯೆಶಾಯ 11:3).

ನಾವು ಅಸಹಾಯಕತೆಯ ಸ್ಥಿತಿಗೆ ಬಂದಾಗ ದೇವರು ತನ್ನ ಆತ್ಮವನ್ನು ನಮ್ಮ ಮೇಲೆ ಇರಿಸುತ್ತಾನೆ

ಯೆಶಾಯ 50:4 ರಲ್ಲಿರುವ ವಾಕ್ಯವು ಯೇಸುವಿನ ಬಗ್ಗೆ ಇರುವ ಪ್ರವಾದನೆಯಾಗಿದೆ. ಇಲ್ಲಿ ಈ ರೀತಿಯಾಗಿ ಹೇಳಲ್ಪಟ್ಟಿದೆ - ಬಳಲಿ ಹೋದವರನ್ನು, ಚಿಂತಾಗ್ರತವುಳ್ಳವರನ್ನು ತಕ್ಕ ಮಾತುಗಳಿಂದ ಸುಧಾರಿಸುವದಕ್ಕೆ ಬಲ್ಲವನಾಗುವಂತೆ ಯೇಸು ಶಿಕ್ಷಿತ ನಾಲಿಗೆಯನ್ನು ಹೊಂದಿದ್ದರು. ನಾಲಿಗೆಯು ದೇಹದ ಬಹು ಮುಖ್ಯ ಅಂಗವಾಗಿದ್ದು, ದೇವರು ಅದನ್ನು ಉಪಯೋಗಿಸಿದರು ಮತ್ತು ಪ್ರತಿಯೊಬ್ಬ ದೇವರ ಸೇವಕನು ಶಿಕ್ಷಿತ ನಾಲಿಗೆಯನ್ನು ಹೊಂದಿಕೊಂಡು, ಅದನ್ನು ಉಪಯೋಗಿಸಬೇಕು. ಯೇಸುವಿನ ಬಾಯಿ ಹರಿತವಾದ ಖಡ್ಗ ಎಂಬುದಾಗಿ ನಾವು ನೋಡುತ್ತೇವೆ (ಯೆಶಾಯ 49:2). ತಕ್ಕ ಸಮಯದಲ್ಲಿ ನಮ್ಮ ಬಾಯಿಂದ ಬರುವಂತ ಮಾತುಗಳು, ಇತರರ ಹೃದಯವನ್ನು ತೆರೆಸಿ, ತಪ್ಪಾದ ಪ್ರೇರಣೆ, ಉದ್ದೇಶ ಮತ್ತು ಸಂಗತಿಗಳನ್ನು ಹೊರ ತೋರಿಸಬೇಕು ಮತ್ತು ಅದೇ ಸಮಯದಲ್ಲಿ ಪ್ರೋತ್ಸಾಯಿಸುವ ಸಲುವಾಗಿ ಮೃದುವಾದ ಮಾತನ್ನು ಸಹ ಹೊಂದಿರಬೇಕು. ನಾವು ಇಲ್ಲಿ ಓದುವುದೇನೆಂದರೆ, ಯೇಸು ಪ್ರತಿನಿತ್ಯ ಬೆಳಗ್ಗೆ ಎದ್ದು ತಂದೆ ಏನು ಹೇಳಬೇಕೆಂದು ಕೊಂಡಿದ್ದಾರೆ ಎಂದು ಕೇಳಿಸಿಕೊಳ್ಳುತಿದ್ದರು (ವಚನ 4). ಮತ್ತು ಯೇಸು ತನ್ನ ತಂದೆಯಿಂದ ಕೇಳಿಸಿಕೊಂಡ ಮರು ಕ್ಷಣವೇ ಅದಕ್ಕೇ ವಿಧಯರಾಗುತ್ತಿದ್ದರು. ಬೇರೆ ಜನರು ಕಪಾಳಕ್ಕೆ ಹೊಡೆಯಲು, ಏಟು ಬಾರಿಸಲು, ಉಗುಳಲು ತಂದೆ ಅನುಮತಿಸಿದರು ಸಹ, ಯೇಸು ತಂದೆಯ ಚಿತ್ತವನ್ನು ಸ್ವೀಕರಿಸಿಕೊಳ್ಳುತ್ತಿದ್ದರು (ವಚನ 5, 6). ಮತ್ತು ಜನರು ಇದನ್ನೆಲ್ಲಾ ಮಾಡುವಾಗ, ಯೇಸು ತಮ್ಮ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿರುತ್ತಿದ್ದರು (ವಚನ 7), ಅವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಲಿ ಅಥವಾ ಬೆದರಿಕೆ ಹಾಕುವುದಕ್ಕಾಗಲಿ ತಮ್ಮ ಮುಖವನ್ನು ಹಾಗೇ ಮಾಡಿಕೊಳ್ಳುತ್ತಿದ್ದಿಲ್ಲ, ಅದರ ಹೊರತಾಗಿ, ಅವರನ್ನು ಕ್ಷಮಿಸಲು ಮತ್ತು ಆಶೀರ್ವದಿಸಲು ಹಾಗೇ ಮುಖ ಮಾಡುತ್ತಿದ್ದರು. ತಾನು ನಾಚಿಕೆ ಪಡಬಾರದೆಂದು ಯೇಸು ಅರಿತುಕೊಂಡಿದ್ದರು. ಏಕೆಂದರೆ ನ್ಯಾಯ ತೀರಿಸುವಾತನು ಯಾವಾಗಲೂ ಸಮೀಪದಲ್ಲಿರುತ್ತಾನೆ ಎಂಬುದು ಯೇಸುವಿಗೆ ಗೊತ್ತಿತ್ತು (ವಚನ 8).