WFTW Body: 

ಯೇಸುವು ಶಿಲುಬೆಯ ಮರಣಕ್ಕೆ ಹೋಗಬಾರದೆಂಬ ಪೇತ್ರನ ಮಾತಿನ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ಈ ಸಲಹೆಯ ಹಿಂದೆ ಸೈತಾನನ ಸ್ವರವಿದ್ದುದನ್ನು ಯೇಸುವು ತಕ್ಷಣವೇ ಗುರುತಿಸಿದರು ಮತ್ತು"ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ. ನೀನು ದೇವರ ವಿಷಯಗಳಲ್ಲಿ ಮನಸ್ಸಿಡದೆ ಮನುಷ್ಯರ ವಿಷಯಗಳಲ್ಲಿ ಮನಸ್ಸಿಟ್ಟಿರುವೆ!" ಎಂದು ಪೇತ್ರನಿಗೆ ಹೇಳಿದನು(ಮತ್ತಾ. 16:23).

ಇದರಿಂದ ನಮಗೆ ತಿಳಿಯುವುದು ಏನೆಂದರೆ, ದೇವರ ಸಂಕಲ್ಪವನ್ನು ತಿಳಿಯುವ ಆಸಕ್ತಿ ನಮ್ಮ ಮನಸ್ಸಿನಲ್ಲಿ ಇದ್ದಾಗ ಮಾತ್ರ, ನಾವು ನಮ್ಮ ಹೃದಯಗಳಲ್ಲಿ ದೇವರ ಸ್ವರ ಮತ್ತು ಸೈತಾನನ ಸ್ವರದ ವ್ಯತ್ಯಾಸ ತಿಳಿಯಲು ಸಾಧ್ಯವಾಗುತ್ತದೆ. ನಾವು ಮುಖ್ಯವಾಗಿ ನಮ್ಮ ಸ್ವಕಾರ್ಯಗಳ ಮೇಲೆ ಮಾತ್ರ ಮನಸ್ಸಿಟ್ಟಿದ್ದರೆ, ಆಗ ನಾವು ಸೈತಾನನ ಸ್ವರವನ್ನು ದೇವರ ಸ್ವರವೆಂದು ತಪ್ಪಾಗಿ ತಿಳಿಯಬಹುದು. ಹಾಗಾಗಿ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ - ನಿಮ್ಮ ಓದಿನಲ್ಲಿ, ನಿಮ್ಮ ಆಟದಲ್ಲಿ ಮತ್ತು ನೀವು ಮಾಡುವ ಕೆಲಸದಲ್ಲಿಯೂ - ಪರಲೋಕದ ದೃಷ್ಟಿಕೋನ ಇರುವುದು ಒಳ್ಳೆಯದು. ನಿಮ್ಮ ಪ್ರತಿಯೊಂದು ಕಾರ್ಯವನ್ನು ದೇವರ ಮಹಿಮೆಗೋಸ್ಕರ ಮಾಡಿರಿ.

ಕಾಲೇಜಿನಲ್ಲಿ ಚೆನ್ನಾಗಿ ಓದಿರಿ ಮತ್ತು ಆಟದ ಮೈದಾನದಲ್ಲಿ ಚೆನ್ನಾಗಿ ಆಟವಾಡಿರಿ, ಮತ್ತು ಯಾವಾಗಲೂ ದೇವರನ್ನು ಮಹಿಮೆ ಪಡಿಸಿರಿ - "ಎರಿಕ್ ಲಿಡ್ಡೆಲ್" ಎಂಬ ಓಟಗಾರನು, ಸದಾಕಾಲ ದೇವರ ಮೇಲಿನ ನಂಬಿಕೆಗೆ ಯಥಾರ್ಥನಾಗಿರುವ ಸಲುವಾಗಿ ಒಲಿಂಪಿಕ್ ಪಂದ್ಯಾಟದ ಚಿನ್ನದ ಪದಕವನ್ನು ಕಳೆದುಕೊಳ್ಳಲೂ ಸಹ ಹಿಂಜರಿಯಲಿಲ್ಲ!! ಒಬ್ಬ ಕ್ರೈಸ್ತನಾಗಿ ನೀವು ಕೆಲವು ಆದರ್ಶಗಳನ್ನು ಪಾಲಿಸುತ್ತೀರೆಂದು ಇತರರಿಗೆ ತಿಳಿಸಲು ಎಂದಿಗೂ ನಾಚಿಕೆ ಪಡಬೇಡಿರಿ. ಇದರಲ್ಲಿ ನಿಮಗೆ ಕರ್ತನು ಸಹಾಯ ಮಾಡಲಿ

ನೀವು ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ, ಕೆಲಸದ ಸ್ಥಳದಲ್ಲಿ, ಅಥವಾ ನಿಮ್ಮ ಮನೆಯಲ್ಲಿ ಎದುರಿಸುವಂತ ಕಷ್ಟಕರ ಹೋರಾಟಗಳ ನಡುವೆ, ದೇವರನ್ನು ಶ್ರದ್ಧೆಯಿಂದ ಗೌರವಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಿರಿ. ಶತ್ರುವು (ಅಂದರೆ ಸೈತಾನನು) ನೀವು ತನ್ನೊಂದಿಗೆ ರಾಜಿ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಮಾಡುವ ಪ್ರತಿಯೊಂದು ದಾಳಿಯನ್ನು ಎದುರಿಸಿ ಜಯಿಸಲಿಕ್ಕೆ ಬೇಕಾದ ಕೃಪೆಯನ್ನು ಮತ್ತು ಶಕ್ತಿಯನ್ನು ಕರ್ತರು ನಿಮಗೆ ಕೊಡುತ್ತಾರೆ. ಕರ್ತರು ಯಾವಾಗಲೂ ನಿಮ್ಮ ಪರವಾಗಿ ಸೈತಾನನ ವಿರುದ್ಧವಾಗಿ ಕಾರ್ಯ ಮಾಡುತ್ತಾರೆ ಮತ್ತು ಆ ಪಿಶಾಚನನ್ನು ಜಯಿಸಲು ಬೇಕಾದ ಬಲವನ್ನು ದೇವರು ನಿಮಗೆ ನೀಡುತ್ತಾರೆ.

"ದೇವರನ್ನು ಶ್ರದ್ಧೆಯಿಂದ ಗೌರವಿಸುವ ಸ್ವಭಾವವನ್ನು ಬೆಳೆಸಿಕೊಳ್ಳಿರಿ"

ನಾವು ಈ ಲೋಕದಲ್ಲಿ ಅನೇಕ ಸಂಗತಿಗಳಿಂದ ಆಕರ್ಷಿಸಲ್ಪಡುವುದನ್ನು ದೇವರು ಅನುಮತಿಸುವುದು, ಲೌಕಿಕ ಆಕರ್ಷಣೆ ಇದ್ದಾಗಲೂ ಅವೆಲ್ಲಕ್ಕಿಂತ ಹೆಚ್ಚಾಗಿ ನಾವು ದೇವರನ್ನು ಪ್ರೀತಿಸುತ್ತೇವೆಂದು ಸಾಬೀತು ಪಡಿಸಬೇಕು ಎಂಬ ಕಾರಣಕ್ಕಾಗಿ. ಹೀಗೆ ಮಾಡಿದಾಗ ನಾವು ಸೈತಾನನನ್ನು ಅವಮಾನ ಪಡಿಸುತ್ತೇವೆ. ಸೃಷ್ಟಿಕರ್ತರಾದ ದೇವರು ಅವರ ಸಕಲ ಸೃಷ್ಟಿಗಿಂತ ಬಹಳ ದೊಡ್ಡವರು, ಅವರು ಅವುಗಳಿಗಿಂತ ಬಹಳ ಹೆಚ್ಚಿನ ಸಂತೃಪ್ತಿಯನ್ನು ಕೊಡುತ್ತಾರೆ ಮತ್ತು ಅತ್ಯಧಿಕ ಅದ್ಭುತಕರವಾಗಿದ್ದಾರೆ. ಇದು ಸತ್ಯವಾದ ಮಾತು ಮತ್ತು ಹಾಗಾಗಿ ನಾವು ಇದನ್ನು ನಂಬುತ್ತೇವೆ. ನಮ್ಮಲ್ಲಿ ಇಂತಹ ನಂಬಿಕೆ ಇರುವುದರಿಂದ ನಾವು ಪ್ರಾಪಂಚಿಕ ಆಕರ್ಷಣೆಗಳನ್ನು ಜಯಿಸಲು ಸಾಧ್ಯವಾಗುತ್ತದೆ. ನಾವು ಇಂತಹ "ಕುರುಡು ನಂಬಿಕೆಯಿಂದ" (’ಕದಲಿಸಲಾರದ ನಂಬಿಕೆ’ಯಿಂದ) ಜೀವಿಸಿದರೆ, ಸರಿಯಾದ ಸಮಯದಲ್ಲಿ ನಾವು ಇದೇ ಅನುಭವವನ್ನು ನಮ್ಮ "ಮನಸ್ಸಿನ ಭಾವನೆಗಳಲ್ಲೂ" ಹೊಂದುತ್ತೇವೆ. ನಾವು ಆರಂಭದಲ್ಲಿ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಾರದು.

ಸೈತಾನನ ವಿರುದ್ಧ ಹೋರಾಡುವುದು ನಮ್ಮ ಆತ್ಮಕ್ಕೆ ಒಳ್ಳೆಯದು. ನಾವು ಹೀಗೆ ಮಾಡಿದರೆ ಮಾತ್ರ ಬಲಶಾಲಿಗಳಾಗಲು ಸಾಧ್ಯವಾಗುತ್ತದೆ. ಕ್ರಿಸ್ತನ ಒಬ್ಬ ಒಳ್ಳೆಯ ಸೈನಿಕನಾಗಿರಿ. ಕರ್ತರು ನಿಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ನಾವೂ ಸಹ ನೀವು ಕರ್ತರ ಜಯಧ್ವಜವನ್ನು ಮೇಲಕ್ಕೆತ್ತಿ ಹಿಡಿಯುತ್ತೀರೆಂದು ಎದುರು ನೋಡುತ್ತಿದ್ದೇವೆ - ಹೀಗೆ ಮಾಡಿದಾಗ ಕರ್ತರ ನಾಮವು ಎಂದಿಗೂ ದೂಷಿಸಲ್ಪಡುವುದಿಲ್ಲ!

ಒಂದು ದೇಶದ ಸೈನಿಕರು ತಮ್ಮ ನಾಡಿನ ಸ್ವಾತಂತ್ರ್ಯವನ್ನು ಭದ್ರವಾಗಿ ರಕ್ಷಿಸಲು ಬಹಳಷ್ಟು ತ್ಯಾಗ ಮಾಡಲು ಸಿದ್ಧರಾಗಿರುವಾಗ, ಕ್ರೈಸ್ತರಾದ ನಾವು ಇನ್ನೂ ಹೆಚ್ಚಾಗಿ ನಮ್ಮ ಸರ್ವಸ್ವವನ್ನು ತ್ಯಜಿಸುವದಕ್ಕೆ (ನಮ್ಮ ಪ್ರಾಣವನ್ನೂ ಸಹ), ಮತ್ತು ಆ ಮೂಲಕ ನಮ್ಮ ಜೀವಿತದಲ್ಲಿ ಕರ್ತರನ್ನು ಎಲ್ಲಾ ರೀತಿಯಲ್ಲಿ ಗೌರವಿಸುವದಕ್ಕೆ ಮತ್ತು ಸೈತಾನನನ್ನು ಅವಮಾನ ಪಡಿಸುವದಕ್ಕೆ ಸಿದ್ಧರಾಗಿರಬೇಕು.