2 ಕೊರಿಂಥ 4:2 ,ರಲ್ಲಿ ಪೌಲನು ಹೀಗೆ ಹೇಳುತ್ತಾನೆ "ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ."
ನಮ್ಮಲ್ಲಿ ಯಾವುದೇ ತರಹದ ಕಪಟತನವಾಗಲಿ ಅಪ್ರಾಮಾಣಿಕತೆಯಾಗಲಿ(ಮೋಸ) ಇರುವದಾದರೆ ದೇವರ ಸಮಾಧಾನದಲ್ಲಿ ಪಾಲುಗಾರರಾಗಲಿಕ್ಕೆ ಸಾಧ್ಯವಿಲ್ಲ. ಹಿಂದಿನ ದಿನಗಳಲ್ಲಿ ಒಂದೆರಡು ಸಹೋದರರು ನಮ್ಮ ಜೊತೆ ಸೇರಿದ್ದರು (ಆದರೆ ಈಗ ಅವರು ನಮ್ಮ ಸಭೆಯಲ್ಲಿಲ್ಲ); ಮತ್ತು ಅವರು ಅನೇಕ ವರಗಳನ್ನು ಹೊಂದಿದ್ದರು ಹಾಗೂ ಜಾಣರಾಗಿದ್ದರು.
ಆದರೆ ಅವರು ಕುತಂತ್ರದವರೂ (ಕಪಟತನದಿಂದ ತುಂಬಿದವರೂ) ಆಗಿದ್ದರು! ದೇವರು ಜಾಣರನ್ನು ಮತ್ತು ವರಗಳನ್ನೊಳಗೊಂಡ ಜನರನ್ನು ಉಪಯೋಗಿಸುತ್ತಾನೆ ಆದರೆ ಅವರು ನಿಷ್ಕಪಟಿಗಳೂ, ನಂಬಿಗಸ್ತರೂ ಮತ್ತು ದೀನರೂ (ಸೊಕ್ಕು ಇಲ್ಲದೆ ಇರುವವರು) ಆಗಿದ್ದಾಗ ಮಾತ್ರ.
1 ಕೊರಿಂಥ 3:19 ರಲ್ಲಿ ಹೇಳಿದ ಪ್ರಕಾರ ಅವರ ಕುತಂತ್ರದಲ್ಲಿಯೇ ದೇವರು ಅಂಥ ಕಪಟಿಗಳನ್ನು ಸಿಕ್ಕಿಸುವನು; ಮತ್ತು ಅದೇ ರೀತಿಯಲ್ಲಿ ಆ ಸಹೋದರರಿಗೂ ಕೂಡ ಮಾಡಿದನು. ಹಾಮಾನನಂತೆ ಅವರೂ ಕೂಡ ತಾವು ಮಾಡಿದ ನೇಣುಕಂಬವನ್ನು ತಾವೇ ಏರ ಬೇಕಾಯಿತು. ಕಪಟತನದ ಸಹೋದರ ಮತ್ತು ಸಹೋದರಿಯರು ಹೆಚ್ಚುಕಾಲ ಸಭೆಗಳಲ್ಲಿ ಬದುಕಬಹುದು; ಏಕೆಂದರೆ ದೇವರು ಧೀರ್ಘ(ಹೆಚ್ಚು) ತಾಳ್ಮೆ ಮತ್ತು ಕರುಣೆ ಉಳ್ಳವನಾಗಿದ್ದರಿಂದ ಅವರಿಗೆ ತಿರುಗಿಕೊಳ್ಳುವದಕ್ಕೆ ಸಮಯ ನೀಡುತ್ತಾನೆ. ಆದರೆ ಅವರು ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳದಿದ್ದರೆ, ಆತ್ಮದಲ್ಲಿ ಬೆಳೆಯುವಂಥ ಸಭೆಯಲ್ಲಿ ಅವರು ಬದುಕಲು ಸಾಧ್ಯವಾಗುವದಿಲ್ಲ. ಕೀರ್ತನೆ 1:5 ರಲ್ಲಿ ಹೇಳುವ ಪ್ರಕಾರ "ಆದದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲೂ ಪಾಪಾತ್ಮರು ನೀತಿವಂತರ ಸಭೆಯಲ್ಲೂ ನಿಲ್ಲುವದಿಲ್ಲ."
ನೀವು ದೇವರ ಸಭೆಯಲ್ಲಿ ಒಬ್ಬ ಪ್ರಯೋಜನ (ಸಹಾಯ)ವಾಗಬಲ್ಲ ಸಹೋದರ, ಸಹೋದರಿ ಆಗ ಬೇಕಿದ್ದರೆ ಹೀಗೆ ಪ್ರಾರಂಭಿಸಿರಿ : ಎಲ್ಲಾ ಕಪಟತನವನ್ನು ಮತ್ತು ಅಪ್ರಮಾಣಿಕತೆಯನ್ನು ತ್ಯಜಿಸಿರಿ (ಬಿಟ್ಟು ಬಿಡಿರಿ), ಎಲ್ಲಾ ನಾಚಿಕೆ ಉಂಟುಮಾಡುವ ಗುಪ್ತವಾದ (ಮುಚ್ಚಿಟ್ಟ)ದ್ದನ್ನು ತ್ಯಜಿಸಿರಿ, ಮತ್ತು ದೇವರ ವಾಕ್ಯವನ್ನು ಕಲಬೆರಿಕೆ ಮಾಡಿ ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಉಪಯೋಗಿಸುವದನ್ನು ನಿಲ್ಲಿಸಿರಿ.
ಜನರು 2 ರೀತಿಯಲ್ಲಿ ದೇವರ ವಾಕ್ಯವನ್ನು ಕಲಬೆರಿಕೆ ಮಾಡುತ್ತಾರೆ.
ಮೊದಲನೆಯದಾಗಿ: ದೇವರ ವಾಕ್ಯದ ಗುಣಮಟ್ಟವನ್ನು ತಮ್ಮ ಸ್ವಂತ ಜೀವನದಲ್ಲಿಯಾಗಲಿ, ಅಥವಾ ಆತ್ಮೀಯ ಗೆಳೆಯನ ಜೊತೆಯಾಗಲಿ ಹಂಚುವಾಗ ರಾಜಿ (ಒಪ್ಪಂದ) ಮಾಡಿಕೊಳ್ಳುವದು. ಯೇಸುಸ್ವಾಮಿಯು ಅತೀ ಹತ್ತಿರವಾಗಿದ್ದ ಪೇತ್ರನಿಗೂ ಕೂಡ "ಸೈತಾನನೆ, ನನ್ನ ಮುಂದೆ ನಿಲ್ಲ ಬೇಡ, ನಡೆ" ಎಂಬುದಾಗಿ ಗದರಿಸಿದನು. ಏಕೆಂದರೆ ಪೇತ್ರನು ಹೇಳಿದ ಮಾತು ದೇವರ ಚಿತ್ತದ ವಿರುದ್ಧವಾಗಿತ್ತು. ಹೆಂಡತಿಯ ತಪ್ಪುಗಳನ್ನು ಮುಚ್ಚಲಿಕ್ಕಾಗಲಿ, ಹತ್ತಿರವಾದ ಗೆಳೆಯ ಅಥವಾ ಶ್ರೀಮಂತ ಜನರನ್ನು ಮೆಚ್ಚಿಸುವದಕ್ಕಾಗಲಿ ದೇವರ ವಾಕ್ಯದ ಗುಣಮಟ್ಟವನ್ನು ಕಡಿಮೆ ಮಾಡಲೇ ಬಾರದು.
ದೇವರ ವಾಕ್ಯವನ್ನು ಬಿಟ್ಟು ಅತೀ ಹತ್ತಿರದ ಗೆಳೆಯರು ಯಾರೂ ಆಗಿರಬಾರದು. ಹಾಗೆ ಇಲ್ಲದಿದ್ದರೆ ಅಂಥಹ ಗೆಳೆತನ ಆತ್ಮೀಕವಾದ ಸಂಬಂಧವಾಗಿರಲಾರದು.
ಎರಡನೇಯದಾಗಿ ದೇವರ ವಾಕ್ಯದ ಕಲಬೆರಿಕೆ ಹೀಗೆ ಆಗುತ್ತದೆ:
ತಮ್ಮ ಆಲೋಚನೆಗೆ ತಕ್ಕಂತೆ ಮೊದಲೇ ಭಾವಿಸಿ ದೇವರ ವಾಕ್ಯದ ಅರ್ಥವನ್ನು ತಿರುಚು (ಡೊಂಕು) ಮಾಡುವದರಿಂದ. ಉದಾಹರಣೆಗೆ ಪವಿತ್ರಾತ್ಮನ ಅಭಿಷೇಕದ ಬೋಧನೆ ಬಗ್ಗೆ ನೋಡುವದಾದರೆ, ಈ ಸತ್ಯದ ಬಗ್ಗೆ ಬಹಳ ಸರಳವಾಗಿ ಮತ್ತು ಸ್ಪಷ್ಟವಾಗಿ ಹೊಸ ಒಡಂಬಡಿಕೆಯಲ್ಲಿ ಮೊದಲನೇಯ 5 ಪುಸ್ತಕಗಳಲ್ಲಿ ಹೇಳಲಾಗಿದೆ. ಇದನ್ನು ನೀವು (ಮತ್ತಾಯ 3:11; ಮಾರ್ಕ 1:8; ಲೂಕ 3:16; ಯೋಹಾನ 1:33 ಮತ್ತು ಅ.ಕೃತ್ಯಗಳು 1:5) ರಲ್ಲಿ ಓದಬಹುದು. ಇವೆಲ್ಲವೂ ಇದ್ದಾಗಲೂ ಕೂಡ "ಬ್ರದರನ್", ಮತ್ತು "ಬ್ಯಾಪ್ಟಿಸ್ಟ" ಸಭೆಯಲ್ಲಿರುವ ಬಹು ಜನರಿಗೆ, ಯೇಸು ಇವತ್ತಿಗೂ ಕೂಡ ಪವಿತ್ರಾತ್ಮನಿಂದ ಅಭಿಷೇಕಿಸಬಲ್ಲನು ಎಂಬುದಾಗಿ ನಂಬಲು ಕಷ್ಟವಾಗುತ್ತದೆ; ಏಕೆಂದರೆ ಬದಲಾವಣೆ ಹೊಂದಿದ ತಕ್ಷಣವೇ, ಅವರಿಗೆ ಎಲ್ಲವೂ ದೊರಿಕಿದೆಯೆಂದು ಅವರನ್ನು ಚಿಕ್ಕವರಿಂದ ಅವರ ತಲೆಯಲ್ಲಿ ಇದನ್ನು ತುಂಬುತ್ತಾ ಬಂದಿದ್ದಾರೆ. ಆದರೆ ಅವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ಅವರಿಂದ ಜೀವ ಜಲದ ಬುಗ್ಗೆ ಹರಿಯುತ್ತಿಲ್ಲವೆಂಬುದನ್ನು ಅರಿಕೆಮಾಡಬೇಕು. ಏಕೆಂದರೆ ಯೇಸು ಹೇಳಿದ ಪ್ರಕಾರ, ಯಾರು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟಿದ್ದಾರೋ ಅವರಿಂದ ಜೀವ ಜಲದ ಬುಗ್ಗೆ ಹರಿಯುತ್ತದೆ. ಆದರೆ ಇವರು ಸತ್ಯವನ್ನು ಎದುರಿಸಲಾರರು.
ಇವರು ಪವಿತ್ರಾತ್ಮನ ಅಭಿಷೇಕದ ಬಗ್ಗೆ ದೇವರ ವಾಕ್ಯವನ್ನು ಓದುವಾಗ ತಮ್ಮ ಸಭೆಯ ಸಿದ್ಧಾಂತದ (ಬೋಧನೆ) ಪ್ರಕಾರ, ಆ ವಾಕ್ಯವನ್ನು ಹೊಂದಿಸಿಕೊಳ್ಳುತ್ತಾರೆ. ಇದು ದೇವರ ವಾಕ್ಯವನ್ನು ಬುದ್ಧಿವಂತಿಕೆಯಿಂದ ಮಾಡುವ ಮೋಸತನ ಮತ್ತು ಕಲಬೆರಿಕೆಯಾಗಿದೆ. ಒಬ್ಬ ಪ್ರಾಮಾಣಿಕ ವಿಶ್ವಾಸಿಯು, ಒಂದು ಕಠಿಣವಾದ ದೇವರ ವಾಕ್ಯವನ್ನು ಓದುವಾಗ, ತನ್ನ ಜೀವಮಾನದಲ್ಲೆಲ್ಲಾ ವಾಕ್ಯದ ಬಗ್ಗೆ ಕೇಳಿರುವ ಅರ್ಥಕ್ಕೆ ಇದು ಹೊಂದಾಣಿಕೆ ಆಗುತ್ತಿಲ್ಲಾ ಎಂದು ತಿಳಿದು, ದೇವರಿಂದ ನನಗೆ ಇನ್ನೂ ಹೆಚ್ಚಾದ ಬೆಳಕಿನ ಅವಶ್ಯಕತೆಯಿದೆ ಎಂಬುದಾಗಿ ಹೇಳುತ್ತಾನೆ. ಅಂಥವರಿಗೆ ನಿಜವಾಗಿಯೂ ಒಳ್ಳೆಯ ನಿರೀಕ್ಷೆಯುಳ್ಳ ಜೀವನವಿದೆ.
ಪ್ರಾಮಾಣಿಕತೆ ಮತ್ತು ತಗ್ಗಿದಭಾವ(ದೀನತೆ) ಇವೆರಡು ಅವಳಿ ಜವಳಿ ಇದ್ದಂತೆ. ಇವೆರಡು ಯಾವಾಗಲೂ ಇಬ್ಬಿಬ್ಬರಾಗಿಯೇ ಒಬ್ಬನ ಜೀವನದಲ್ಲಿ ಹೋಗುತ್ತವೆ. ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮುಖವಿದ್ದು ಇನ್ನೊಂದು ಇಲ್ಲದೇ ಇರಲು ಸಾಧ್ಯವೇ ಇಲ್ಲ. ನೀವು ತಗ್ಗಿದವರಾಗಿದ್ದರೆ ನಿಮ್ಮಲ್ಲಿ ಪ್ರಾಮಾಣಿಕತೆಯೂ ಕೂಡ ಇರುತ್ತದೆ. ನಿಮ್ಮ ಕಪಟತನವನ್ನು ಒಪ್ಪಿಕೊಳ್ಳುವುದೆಂದರೆ ನೀವು ನಿಮ್ಮನ್ನು ತಗ್ಗಿಸಿಕೊಳ್ಳುತ್ತಾ ಇರುವಿರಿ ಎಂದರ್ಥ. ಅಪ್ರಾಮಾಣಿಕತೆಯನ್ನು (ಮೋಸತನವನ್ನು) ಧಿಕ್ಕರಿಸುವಾಗ ನಿಮ್ಮಲ್ಲಿರುವ ಗರ್ವದ ಒಂದು ಭಾಗವನ್ನು ಧಿಕ್ಕರಿಸಿದ ಹಾಗೆ.