ಅನೇಕ ಜನರು ಕೇವಲ ತಮ್ಮ ಪಾಪ ಕ್ಷಮಾಪಣೆಯನ್ನು ಪಡೆದಕ್ಕಾಗಿ ಹರ್ಷಿಸುತ್ತಾರೆ, ಮತ್ತು ಅವರು ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸುವುದಿಲ್ಲ. ಇವರು ಯೇಸುವನ್ನು ತಮ್ಮ ರಕ್ಷಕನನಾಗಿ ಅರಿತಿಲ್ಲ; ಅವರು ಆತನನ್ನು ತಮ್ಮ ಪಾಪಗಳನ್ನು ಕ್ಷಮಿಸುವವನನಾಗಿ ಅರಿತಿದ್ದಾರೆ.
ನಾವು ಕೋಪ ಮತ್ತು ಲೈಂಗಿಕವಾಗಿ ಮೋಹಿಸುವಂತ ಆಲೋಚನೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಸಾಲದು, ಇವುಗಳನ್ನು ಹೇಗೆ ಜಯಿಸಬೇಕೆಂದು ತಿಳಿದುಕೊಳ್ಳುವುದಕ್ಕೆ ನಾವು ಹೆಚ್ಚಿನ ಗಮನ ಹರಿಸಬೇಕು. ಈ ಪಾಪಗಳ ಗಂಭೀರತೆಯನ್ನು ತಿಳಿದುಕೊಳ್ಳುವುದು ಹೇಗೆಂದರೆ, ಯೇಸುವು ಪರ್ವತ ಪ್ರಸಂಗದಲ್ಲಿ ಕೇವಲ ಇವೆರಡು ಪಾಪಗಳು ಒಬ್ಬ ಮನುಷ್ಯನನ್ನು ನರಕಕ್ಕೆ ಬೀಳಿಸುವ ಪಾಪಗಳು ಎಂಬ ಅಂಶವನ್ನು ತೋರಿಸಿಕೊಟ್ಟಿದ್ದಾರೆ. ನಾನು ಕಂಡುಕೊಂಡಿರುವುದು ಏನೆಂದರೆ, ಕ್ರೈಸ್ತರಲ್ಲಿ 99% ಜನರು ಕೋಪವು ಬಹಳ ಗಂಭೀರ ಪಾಪವೆಂದು ಅಂದುಕೊಳ್ಳುವುದಿಲ್ಲ. ಅವರು ಕೋಪದ ಮೂಲಕ ತಾವು ನರಕಕ್ಕೆ ಹೋಗುತ್ತೇವೆಂದು ನಿಶ್ಚಯವಾಗಿ ಯೋಚಿಸುವುದಿಲ್ಲ. ಹಾಗಾಗಿ ಯೇಸುವು ’ಮತ್ತಾಯನು 5:22'ರಲ್ಲಿ ಹೇಳಿದ ಮಾತು ನಿಜವೆಂದು ಅವರು ನಂಬುವುದಿಲ್ಲ. ಯೇಸುವಿನ ಮಾತು ನಿಜವೆಂದು ನಂಬದಿರುವ ಇವರು ಎಂತಹ ಕ್ರೈಸ್ತರು? ಆತನು ಕೋಪದ ವಿಷಯವಾಗಿ ನುಡಿದ ಮಾತನ್ನು ನೀವು ನಂಬುತ್ತೀರಾ? ಅಥವಾ, ನೀವು ಮನೋವೈಜ್ಞಾನಿಕರನ್ನು ನಂಬುತ್ತೀರಾ? ಮನೋವೈಜ್ಞಾನಿಕರು ನಿಮ್ಮನ್ನು ಪರಲೋಕಕ್ಕೆ ನಡೆಸಲಾರರು. ಹಾಗೆಯೇ, ನಿಮ್ಮ ಕಣ್ಣಿನ ಮೂಲಕ ಸ್ತ್ರೀಯನ್ನು ಮೋಹಿಸಿದ್ದು ನಿಮ್ಮನ್ನು ನರಕಕ್ಕೆ ಕರೆದೊಯ್ಯುವಷ್ಟು ಗಂಭೀರವಾದದ್ದೆಂದು 99% ಕ್ರೈಸ್ತರು ನಿಜವಾಗಿ ನಂಬುವುದಿಲ್ಲ. ಇದನ್ನು ಹೆಚ್ಚಿನ ಜನರು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ; ಸೈತಾನನು ಪಾಪವನ್ನು ಬಹಳ ಹಗುರವಾಗಿ ಮತ್ತು ಬಹಳ ಚಿಕ್ಕ ವಿಷಯವಾಗಿ ಬದಲಾಯಿಸಿದ್ದಾನೆ ಎಂಬುದಕ್ಕೆ ಇದು ಪುರಾವೆಯಾಗಿದೆ.
ಮರಣಾಂತಕ ರೋಗಗಳಾದ ಏಡ್ಸ್, ಕ್ಯಾನ್ಸರ್ ಇವುಗಳ ಬಗ್ಗೆ ಯೋಚಿಸಿರಿ: ಎಷ್ಟು ಜನರು ಏಡ್ಸ್ ಅಥವಾ ಕ್ಯಾನ್ಸರ್‌ರೋಗ ತಗುಲಿದ್ದನ್ನು ಹಗುರವಾಗಿ ತೆಗೆದುಕೊಳುತ್ತಾರೆ? ಈ ರೋಗಗಳ ಪರಿಣಾಮಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದೆ, ಅವುಗಳ ಪರಿಣಾಮ ಏನೆಂದು ತಿಳಿಯದ ಜನರು ಮಾತ್ರ ಹಾಗೆ ಮಾಡಬಹುದು. ಬಹಳ ಹಿಂದುಳಿದ ಯಾವುದೋ ಹಳ್ಳಿಯಲ್ಲಿ ವಾಸಿಸುವ ಒಬ್ಬ ಬಡ ಅನಕ್ಷರಸ್ಥೆ ಹೆಂಗಸಿಗೆ ಕ್ಯಾನ್ಸರ್ ರೋಗ ತಗಲಿದೆಯೆಂದು ನೀವು ತಿಳಿಸಿದರೆ, ಆಕೆಯು ಅದರಿಂದ ಗಲಿಬಿಲಿಯಾಗುವುದಿಲ್ಲ, ಏಕೆಂದರೆ ಆಕೆಗೆ ಕ್ಯಾನ್ಸರ್‌ನ ಬಗ್ಗೆ ತಿಳುವಳಿಕೆ ಇಲ್ಲ. ಇದರ ಬದಲಾಗಿ, ಒಬ್ಬ ವಿದ್ಯಾವಂತೆಯ ದೇಹದಲ್ಲಿ ಕ್ಯಾನ್ಸರ್ ರೋಗ ಸಂಪೂರ್ಣವಾಗಿ ಹರಡಿದೆಯೆಂದು ವೈದ್ಯರು ತಿಳಿಸಿದರೆ, ಅವಳು ಬಹಳ ಚಿಂತಿತಳಾಗುತ್ತಾಳೆ. ಅವಳು ಏಕೆ ಚಿಂತಿಸಬೇಕು? ಅವಳಿಗೆ ಕ್ಯಾನ್ಸರ್ ರೋಗವು ಎಷ್ಟು ಭಯಾನಕವೆಂದು ತಿಳಿದಿದೆ.
ಅದೇ ರೀತಿ, ಆತ್ಮಿಕ ವಿಷಯದಲ್ಲಿ ಅಜ್ಞಾನಿಯಾದವನು, ಕೋಪವು ಬಹಳ ಗಂಭೀರ ಪಾಪವೆಂದು ಪರಿಗಣಿಸುವುದಿಲ್ಲ. ನೀವು ಆತ್ಮಿಕ ಅನಕ್ಷರಸ್ಥರಾಗಿದ್ದರೆ, ಪರಸ್ತ್ರೀಯರನ್ನು ಮೋಹಿಸುವುದು ಬಹಳ ಗಂಭೀರ ಪಾಪವೆಂದು ಪರಿಗಣಿಸುವುದಿಲ್ಲ. ಹೇಗೆ ಆ ಅನಕ್ಷರಸ್ಥೆ ಬಡ ಹೆಂಗಸಿಗೆ ಕ್ಯಾನ್ಸರ್ ರೋಗದ ಗಂಭೀರತೆಯ ಬಗ್ಗೆ ತಿಳುವಳಿಕೆ ಇಲ್ಲವೋ, ಹಾಗೆಯೇ ಇದು ನಿಮ್ಮ ಆತ್ಮಿಕ ಅಜ್ಞಾನದ ಲಕ್ಷಣವಾಗಿದೆ. ಹಾಗೆಯೇ, ಆತ್ಮಿಕ ಜ್ಞಾನಿಯಾದ ವ್ಯಕ್ತಿಯು ಈ ಪಾಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾನೆ. ಆತನಿಗೆ ಇದರ ಬಗ್ಗೆ ದೇವರ ವಚನದ ಎಚ್ಚರಿಕೆಯೂ ಬೇಕಾಗಿಲ್ಲ, ಏಕೆಂದರೆ ಆತನ ಸಹಜ ಪ್ರವೃತ್ತಿಯ ಮೂಲಕವೇ ಇವು ಗಂಭೀರವಾದ ಪಾಪಗಳೆಂದು ಅವನಿಗೆ ತಿಳಿದಿದೆ, ಏಕೆಂದರೆ ಇದರಲ್ಲಿ ಮೊದಲನೆಯದು ಇತರರಿಗೆ ನೋವನ್ನು ಉಂಟುಮಾಡುತ್ತದೆ, ಮತ್ತು ಎರಡನೆಯದು ಆತನಿಗೇ ನೋವನ್ನು ಉಂಟುಮಾಡುತ್ತದೆ. ಆದ್ದರಿಂದ ನಾವು ಇವೆರಡು ಪಾಪಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಇವನ್ನು ಹೇಗೆ ಜಯಿಸುವುದೆಂದು ಪ್ರಶ್ನಿಸಿಕೊಳ್ಳಬೇಕು.
"ನೀನು ಕ್ರಿಸ್ತನ ಹೊರತಾಗಿ ಯಾವುದೇ ಪಾಪವನ್ನು ಜಯಿಸಲಾರೆ"
’ಮತ್ತಾಯನು 1'ನೇ ಅಧ್ಯಾಯದಲ್ಲಿ, ದೇವದೂತನು ಯೋಸೇಫನ ಬಳಿಗೆ ಬಂದಾಗ, ಆತನು ಹೊಸ ಒಡಂಬಡಿಕೆಯ ಮೊದಲನೆಯ ವಾಗ್ದಾನವನ್ನು ನೀಡಿದನು. ’ಮತ್ತಾಯನು 1:21'ರಲ್ಲಿ, "ಯೇಸುವು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು," ಎಂದು ಹೇಳಲಾಗಿದೆ. ’ಯೇಸು’ ಎಂಬ ಹೆಸರಿನ ಅರ್ಥ ಇದೇ ಆಗಿದೆ. ಯೇಸುವಿನ ನಾಮವನ್ನು ಉಚ್ಛರಿಸುವ ಅನೇಕ ಜನರು ಆ ಹೆಸರಿನ ಅರ್ಥವೇನೆಂದು ಸಹ ತಿಳಿದಿರುವುದಿಲ್ಲ. ’ಮತ್ತಾಯನು 1:21' ನಮಗೆ ತಿಳಿಸುವುದು ಏನೆಂದರೆ, "ಯೇಸು" ಎಂಬ ಹೆಸರಿನ ಅರ್ಥ, "ತನ್ನ ಜನರನ್ನು ಅವರ ಪಾಪಗಳಿಂದ ಬಿಡುಗಡೆ ಮಾಡುವಾತನು," ಎಂಬುದಾಗಿ.
ಕೋಪ ಮತ್ತು ಲೈಂಗಿಕ ಮೋಹವುಳ್ಳಂತ ಚಿಂತನೆಯ ಹಾದಿಗೆ ಸಂಬಂಧಿಸಿದಂತೆ, ’ಪಾಪದಿಂದ ರಕ್ಷಣೆ’, ಮತ್ತು ’ಪಾಪ ಕ್ಷಮಾಪಣೆ’ ಇವುಗಳ ನಡುವಿನ ವ್ಯತ್ಯಾಸವೇನು?
ನೀವು ಪಾಪಕರವಾಗಿ ಕೋಪಗೊಂಡರೆ, ಮತ್ತು ಅದಕ್ಕಾಗಿ ಪಶ್ಚಾತ್ತಾಪಪಟ್ಟು ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ. ಇದರ ಮರುದಿನ, ನೀವು ಮತ್ತೊಮ್ಮೆ ಪಾಪಕರ ರೀತಿಯಲ್ಲಿ ಕೋಪಗೊಂಡರೆ ಮತ್ತು ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ. ಮುಂದಿನ ವಾರ, ನೀವು ಇದನ್ನೇ ಮಾಡಿ ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ. ಇದೇ ರೀತಿ, ನೀವು ಒಬ್ಬ ಸ್ತ್ರೀಯನ್ನು ನಿಮ್ಮ ಕಣ್ಣುಗಳಿಂದ ನೋಡಿ ಮೋಹಿಸಿದರೆ ಮತ್ತು ಇದು ಪಾಪವೆಂದು ನಿಮಗೆ ಮನವರಿಕೆಯಾಗಿ, ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ. ಮುಂದಿನ ದಿನ ನೀವು ಮತ್ತೊಮ್ಮೆ ಇದನ್ನೇ ಮಾಡಿದರೆ, ಮತ್ತು ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ. ನೀವು ಅಂತರ್ಜಾಲದಲ್ಲಿ {'internet') ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ, ಮತ್ತು ಅನಂತರ ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡಿಕೊಂಡರೆ, ಅವರು ನಿಮ್ಮನ್ನು ಕ್ಷಮಿಸುತ್ತಾರೆ.
ಆದರೆ ನೀವು ಪಾಪದಿಂದ ರಕ್ಷಿಸಲ್ಪಟ್ಟಿದ್ದೀರಾ? ಇಲ್ಲ. ನೀವು ಕ್ಷಮಿಸಲ್ಪಟ್ಟಿದ್ದೀರಾ? ಹೌದು. ನಿಮ್ಮ ಜೀವನದ ಮಾದರಿ ಪಾಪ ಮಾಡುವುದು, ಕರ್ತರಲ್ಲಿ ಕ್ಷಮೆ ಕೇಳುವುದು, ಮತ್ತೊಮ್ಮೆ ಪಾಪಕ್ಕೆ ಹಿಂದಿರುಗುವುದು, ಮತ್ತೊಮ್ಮೆ ನಿಮ್ಮನ್ನು ಕ್ಷಮಿಸುವಂತೆ ಕರ್ತರನ್ನು ಬೇಡುವುದು, ಇದೇ ಆಗಿರುತ್ತದೆ. ಇದೊಂದು ಕೊನೆಯಿಲ್ಲದ ಚಕ್ರವಾಗಿದೆ. ನೀವು ಕ್ಷಮಿಸಲ್ಪಟ್ಟಿದ್ದೀರಾ? ಹೌದು! ನೀವು ಸಾವಿರ ಸಲ ಪಾಪ ಮಾಡಿರಬಹುದು, ಮತ್ತು ನಿಮ್ಮ ಎಲ್ಲಾ ಪಾಪಗಳು ಮನ್ನಿಸಲ್ಪಟ್ಟಿರಬಹುದು, ಆದರೆ ನೀವು ನಿಮ್ಮ ಪಾಪದಿಂದ ರಕ್ಷಣೆ ಹೊಂದಿದ್ದೀರಾ? ಇಲ್ಲ, ಏಕೆಂದರೆ ನೀವು ಅದನ್ನೇ ಮತ್ತೆ ಮತ್ತೆ ಮಾಡುತ್ತಿದ್ದೀರಿ! ಇದು ಒಂದು ಗುಂಡಿಯಿಂದ ಹೊರಬಂದಂತೆ, ಇದರ ನಂತರ ಮತ್ತೊಮ್ಮೆ ಅದೇ ಗುಂಡಿಗೆ ಬಿದ್ದಂತೆ; ನಿಮ್ಮನ್ನು ಅಲ್ಲಿಂದ ಮೇಲಕ್ಕೆ ಎತ್ತುವಂತೆ ನೀವು ಯಾರನ್ನೋ ಕೇಳಿಕೊಳ್ಳುತ್ತೀರಿ, ಅವರು ನಿಮ್ಮನ್ನು ಮೇಲಕ್ಕೆ ಎಳೆಯುತ್ತಾರೆ, ಮತ್ತು ಮರುದಿನ ನೀವು ಮತ್ತೊಮ್ಮೆ ಆ ಗುಂಡಿಗೆ ಬೀಳುತ್ತೀರಿ. ಯಾರಾದರೂ ನಿಮ್ಮನ್ನು ಪ್ರತೀ ಬಾರಿ ಆ ಗುಂಡಿಯಿಂದ ಮೇಲೆತ್ತಿದರೆ, ನೀವು ಮತ್ತೊಮ್ಮೆ ಅದೇ ಗುಂಡಿಗೆ ಬೀಳುತ್ತೀರಿ. ಇದು ಯಾವಾಗ ಕೊನೆಗೊಳ್ಳುತ್ತದೆ?
ಇಲ್ಲಿಯ ವರೆಗೆ ಯೇಸುವು ನಿಮಗಾಗಿ ಏನು ಮಾಡಿದ್ದಾರೆ? ಯೇಸುವು ನಿಮ್ಮನ್ನು ಕ್ಷಮಿಸಿದ್ದಾರೆ. ಹಾಗಾಗಿ ನೀವು ಪ್ರಾಮಾಣಿಕವಾಗಿ ಹೀಗೆ ಹೇಳಬೇಕು, "ನಾನು ಯೇಸುವನ್ನು ನನ್ನನ್ನು ಕ್ಷಮಿಸುವಾತನೆಂದು ಕಂಡುಕೊಂಡಿದ್ದೇನೆ, ಆದರೆ ಅವರನ್ನು ನನ್ನ ರಕ್ಷಕರಾಗಿ ನಾನು ಕಂಡುಕೊಂಡಿಲ್ಲ. ಅವರನ್ನು ನನ್ನ ಪಾಪ ಕ್ಷಮಾಪಕರೆಂದು ನಾನು ತಿಳಿದುಕೊಂಡಿದ್ದೇನೆ, ಆದರೆ ನನ್ನನ್ನು ನನ್ನ ಪಾಪಗಳಿಂದ ಬಿಡುಗಡೆ ಗೊಳಿಸುವವರೆಂದು ನಾನು ಅರಿತುಕೊಂಡಿಲ್ಲ." ನಾವು ಯಥಾರ್ಥರಾಗಿರಬೇಕು. ನಾವು ನಮ್ಮೊಂದಿಗೆ ಅಪ್ರಾಮಾಣಿಕರಾಗಿದ್ದರೆ, ಸತ್ಯವೇದದ ವಾಗ್ದಾನವಾದ ಪರಿಪೂರ್ಣ ಜೀವಿತವನ್ನು ನಾವು ಪ್ರವೇಶಿಸುವುದಿಲ್ಲ, ದೇವರು ಪ್ರಾಮಾಣಿಕ ಜನರನ್ನು ಪ್ರೀತಿಸುತ್ತಾರೆ. ನೀವು ದೇವರ ಮುಂದೆ ಪ್ರಾಮಾಣಿಕರಾಗಿ ನಡೆಯುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ, ಮತ್ತು ನೀವು ದೇವರಿಗೆ ಹೀಗೆ ಹೇಳಬೇಕು, "ಕರ್ತನಾದ ಯೇಸುವೇ, ನಾನು ನಿಮ್ಮನ್ನು ಪಾಪ ಕ್ಷಮಾಪಕನಾಗಿ ಮಾತ್ರ ಕಂಡುಕೊಂಡಿದ್ದೇನೆ. ನಾನು ನಿಮ್ಮನ್ನು ನನ್ನ ರಕ್ಷಕನಾಗಿ ಅರಿತುಕೊಂಡಿಲ್ಲ."
ಒಂದು ಕೊಂಬೆಯು ಮರಕ್ಕೆ ಜೋಡಿಸಲ್ಪಡದಿದ್ದರೆ, ಅದು ಫಲವನ್ನು ಕೊಡಲಾರದು, ಮತ್ತು ಪ್ರತಿಯೊಂದು ಕೊಂಬೆಯು 50 ವರ್ಷಗಳ ಕಾಲ ಮರಕ್ಕೆ ಜೋಡಿಯಾಗಿದ್ದ ನಂತರ ಮರಕ್ಕೆ ಹೀಗೆ ಹೇಳಬಹುದು, "ನೀನಿಲ್ಲದೆ ನಾನು ಫಲವನ್ನು ಕೊಡಲಾರೆನು; ಆದರೆ ನಾನು ನಿನ್ನಲ್ಲಿ ಇದ್ದರೆ, ಫಲ ನೀಡುವುದು ಬಹಳ ಸುಲಭ." ಒಂದು ಕೊಂಬೆಯು ಬಹಳ ಶ್ರಮಿಸುತ್ತದೆಂದು ನೀವು ಅಂದುಕೊಂಡಿದ್ದೀರಾ? ಒಂದು ಮಾವಿನ ಮರವನ್ನು ನೋಡಿರಿ: ಅದರ ಕೊಂಬೆಯು ಹಣ್ಣನ್ನು ನೀಡಲು ಶ್ರಮಿಸುತ್ತಿದೆಯೇ? ಇಲ್ಲ. ಆದರೆ ನೀವು ಆ ಕೊಂಬೆಯನ್ನು ಮರದಿಂದ ಕಡಿದು ಹಾಕಿದರೆ, ಅದು ಅಲ್ಲಿಯ ವರೆಗೆ 50 ವರ್ಷಗಳ ಕಾಲ ಮಾವಿನ ಹಣ್ಣನ್ನು ನೀಡುತ್ತಿದ್ದರೂ, ಆ ಕ್ಷಣದಿಂದ ಅದು ಹಣ್ಣನ್ನು ನೀಡುವುದನ್ನು ನಿಲ್ಲಿಸುತ್ತದೆ, ಏಕೆಂದರೆ ಅದು ಒಣಗಿ ಹೋಗುತ್ತದೆ. ಅದು ಎಷ್ಟು ಸಮಯ ಮರದ ಮೇಲೆ ಇರುತ್ತದೋ, ಮರದ ಜೀವರಸವು ಅದಕ್ಕೆ ಹರಿದು ಬರುತ್ತದೆ, ಮತ್ತು ಈ ರೀತಿಯಾಗಿ ಅದು ಮಾವಿನ ಹಣ್ಣನ್ನು ನೀಡುತ್ತದೆ. ಇದು ಪಾಪವನ್ನು ಜಯಿಸುವ ಮೂಲಸೂತ್ರವಾಗಿದೆ ಮತ್ತು ನಾವು ಇದನ್ನೇ ಪ್ರತಿಯೊಂದು ದೇಶದಲ್ಲಿರುವ ಪ್ರತಿಯೊಬ್ಬ ಶಿಷ್ಯನಿಗೂ ಕಲಿಸಬೇಕಿದೆ.
ಪ್ರಿಯ ಸ್ನೇಹಿತರೇ, ನೀವು ಕ್ರಿಸ್ತನಿಲ್ಲದೆ ಯಾವುದೇ ಪಾಪವನ್ನು ಜಯಿಸಲಾರಿರಿ ಎಂಬುದನ್ನು ಅರಿತುಕೊಳ್ಳಬೇಕು. ನೀವು ಬಾಹ್ಯ ಪಾಪಗಳನ್ನು ಖಂಡಿತವಾಗಿ ಜಯಿಸಬಹುದು. ಆದರೆ ಇದು ಏನನ್ನು ಸಾಬೀತು ಪಡಿಸುತ್ತದೆ? ಲೋಕದಲ್ಲಿ ಯಾರನ್ನೂ ಕೊಲೆಮಾಡದ, ದೈಹಿಕವಾಗಿ ಯಾವುದೇ ವ್ಯಭಿಚಾರವನ್ನು ಸಹ ಮಾಡದ ಬಹಳ ಮಂದಿ ನಾಸ್ತಿಕರು ಇದ್ದಾರೆ. ಪಾತ್ರೆಯ ಹೊರಭಾಗವನ್ನು ಸ್ವಚ್ಛವಾಗಿ ಇರಿಸಲು, ನಿಮಗೆ ಯೇಸು ಕ್ರಿಸ್ತನು ಬೇಕಾಗಿಲ್ಲ; ನೀವು ಒಬ್ಬ ಒಳ್ಳೆಯ ಫರಿಸಾಯರಾಗಿದ್ದರೆ ಸಾಕು. ಅನೇಕ ಮಂದಿ ಕ್ರೈಸ್ತರಲ್ಲದವರು, ಬೇಕಾದರೆ ನಾಸ್ತಿಕರು ಸಹ, ಮೋಸ ಮಾಡದೆ, ಪ್ರಾಮಾಣಿಕರಾಗಿ, ಯಥಾರ್ಥ ಬಾಹ್ಯ ಜೀವನವನ್ನು ಜೀವಿಸುತ್ತಾರೆ; ಆದರೆ ಒಳಜೀವಿತದ ಪ್ರಶ್ನೆ ಬಂದಾಗ, ಅವರು ಒಳಗಿನಿಂದ ಭ್ರಷ್ಟರಾಗಿದ್ದಾರೆ. ಹೃದಯದ ನೀತಿವಂತಿಕೆಯು ಆತ್ಮ-ಸಂಯಮಕ್ಕಿಂತ ಹೆಚ್ಚಿನದ್ದಾಗಿದೆ. ನೀವು ಯೋಗದ ಬಲದಿಂದ ಕೋಪವನ್ನು ತೋರ್ಪಡಿಸದೇ ನಡೆದುಕೊಳ್ಳಬಹುದು, ಆದರೆ ಇದು ಕೋಪದಿಂದ ಬಿಡುಗಡೆಯಲ್ಲ. ಅದು ಒಂದು ಸೀಸೆಯನ್ನು ಅಥವಾ ಪಾತ್ರವನ್ನು ಬಿಗಿಯಾಗಿ ಮುಚ್ಚಿಟ್ಟು, ವಿಷವನ್ನು ಒಳಗೆ ಇರಿಸಿಕೊಂಡ ಹಾಗೆ; ಆದಾಗ್ಯೂ ಅದು ನಿಮ್ಮನ್ನು ನಾಶಪಡಿಸುತ್ತದೆ. ಇದು ಕ್ರಿಸ್ತನು ಕೊಡುವಂತ ವಿಮೋಚನೆಯಲ್ಲ.
ಕ್ರಿಸ್ತನು ಕರುಣಿಸುವುದು ಒಳಗಿರುವ ಕೋಪದಿಂದ ವಿಮೋಚನೆಯಾಗಿದೆ. ನಾನು ಸೀಸೆಯ ಮುಚ್ಚಳವನ್ನು ತೆರೆಯಬಹುದು, ಆಗ ಒಳಗೆ ವಿಷವು ಇರುವುದಿಲ್ಲ. ನೀವು ನನ್ನ ಹೃದಯದ ಒಳಗೆ ದೃಷ್ಟಿ ಹರಿಸಿದರೆ, ಅಲ್ಲಿ ಯಾವುದೇ ಕೋಪವಿಲ್ಲ; ನಾನು ನನ್ನ ಬಾಯಯನ್ನು ಮುಚ್ಚಿ ಹಿಡಿಯಲು ಮತ್ತು ಕೋಪಗೊಳ್ಳದೇ ಇರಲು ಬಹಳ ಶ್ರಮಿಸಬೇಕಿಲ್ಲ - ಹಾಗೆ ಮಾಡುವುದು ಯೋಗವಾಗಿದೆ, ಆದರೆ ಅದು ಕೋಪದಿಂದ ಬಿಡುಗಡೆಯಲ್ಲ. ಕೋಪದಿಂದ ಬಿಡುಗಡೆ ಯಾವುದೆಂದರೆ, ಕ್ರಿಸ್ತನು ನಮ್ಮ ಹೃದಯಗಳ ಒಳಗಿನಿಂದ ಕೋಪವನ್ನು ತೆಗೆದುಹಾಕುವುದಾಗಿದೆ. ಅದು ಯಾವುದೇ ಸುಳಿವು ಇಲ್ಲದೆ ಸಂಪೂರ್ಣವಾಗಿ ಹೊರಟುಹೋಗಿದೆ, ಮತ್ತು ನೀವು ಇಂತಹ ಹೃದಯದ ಒಳಗೆ ನೋಡಿದರೆ, ಅಲ್ಲಿ ಯಾವುದೇ ಕೋಪವು ಇರುವುದಿಲ್ಲ. ನೀವು ಇಂತಹ ಹೃದಯವನ್ನು ದೃಷ್ಟಿಸಿದರೆ, ಅಲ್ಲಿ ಸ್ತ್ರೀ ವ್ಯಾಮೋಹ ಇರುವುದಿಲ್ಲ. ಇದನ್ನು ಯೇಸುವು ಮಾತ್ರ ಮಾಡಬಲ್ಲರು.