WFTW Body: 

1. ಕಪಟಿತನ :

ನಾವು ನಿಜವಾಗಿಯೂ ಇರೋದಕ್ಕಿಂತ ಹೆಚ್ಚು ಆತ್ಮೀಕರು ಎಂದು ಬೇರೆಯವರಿಗೆ ತೋರಿಸುವುದೇ ಕಪಟಿತನವಾಗಿದೆ. ಅದು ಯಾವ ರೀತಿ ಎಂದರೆ, ತಪ್ಪಾಗಿ ಜೀವಿಸುವುದು ಮತ್ತು ಸುಳ್ಳು ಹೇಳುವ ರೀತಿಯಲ್ಲಿಯೇ ಇರುವುದಾಗಿದೆ. ಮತ್ತಾಯ 23:13-29 ರಲ್ಲಿ ಯೇಸು ಏಳು ಬಾರಿ ಕಪಟಿತನದ ಮೇಲೆ ಶಪಿಸಿ ಉಚ್ಛರಿಸಿದ್ದಾರೆ. ಫರಿಸಾಯರ ಒಳ ಜೀವಿತವು ”ದುರಾಶೆಯಿಂದ ತುಂಬಿದೆ” ಎಂಬುದಾಗಿ ಯೇಸು ಹೇಳಿದ್ದಾರೆ (ಮತ್ತಾಯ 23:25) - ಅದರ ಅರ್ಥ, ಅವರು ತಮ್ಮನ್ನು ತಾವು ಮೆಚ್ಚಿಸಿಕೊಳ್ಳುವುದರಲ್ಲಿ ಮಾತ್ರ ಜೀವಿಸುವವರಾಗಿದ್ದರು. ಆದರೂ ಫರಿಸಾಯರು ಬೇರೆಯವರಿಗೆ ಯಾವ ರೀತಿ ತೋರಿಸಿಕೊಂಡರೂ ಎಂದರೆ - ವೇದ ಅಧ್ಯಯನಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಗಿ ಮತ್ತು ಉಪವಾಸ ಮಾಡುವುದಾಗಿ ಮತ್ತು ಪ್ರಾರ್ಥನೆ ಮಾಡುವುದಾಗಿ ಮತ್ತು ಅವರ ಆದಾಯದಲ್ಲಿನ ದಶಾಂಶವನ್ನು ನೀಡುವುದಾಗಿ ತೋರಿಸಿಕೊಂಡರು, ತಾವು ಪವಿತ್ರರು ಎಂಬುದಾಗಿ ತೋರಿಸಿಕೊಂಡರು. ಅಂದರೆ ಅವರು ಹೊರಗಡೆ ಪವಿತ್ರರು ಎಂಬುದಾಗಿ ತೋರಿಸಿಕೊಂಡರು. ಅವರು ಸಾರ್ವಜನಿಕ ಸ್ಥಳಗಳಲ್ಲಿ ತುಂಬಾ ಉದ್ದನೆಯ ಪ್ರಾರ್ಥನೆಗಳನ್ನು ಮಾಡುತ್ತಿದ್ದರು, ಆದರೆ ಇಂದು ಅನೇಕರ ರೀತಿಯಲ್ಲಿ ಫರಿಸಾಯರು ಖಾಸಗಿಯಾಗಿ ದೇವರಿಗೆ ಉದ್ದವಾದ ಪ್ರಾರ್ಥನೆ ಮಾಡುತ್ತಿರಲಿಲ್ಲ. ನಾವು ಭಾನುವಾರ ಬೆಳಗ್ಗೆ ಮಾತ್ರ ದೇವರಿಗೆ ಸ್ತೋತ್ರ ಮಾಡಿ, ಮಿಕ್ಕ ಎಲ್ಲಾ ಸಮಯಗಳಲ್ಲಿ ನಮ್ಮ ಹೃದಯಗಳಲ್ಲಿ ಸ್ತೋತ್ರದ ಆತ್ಮವನ್ನು ಹೊಂದಿಲ್ಲವೆಂದರೆ ಅದು ಕಪಟಿತನವಾಗಿದೆ.

2. ಆತ್ಮೀಕ ಗರ್ವ :

ಪವಿತ್ರತೆಯನ್ನು ಹಿಂಬಾಲಿಸುವವರಲ್ಲಿ ಕಂಡು ಬರುವ ಸಾಮಾನ್ಯ ಪಾಪವೆಂದರೆ ಅದು ಆತ್ಮೀಕ ಗರ್ವವಾಗಿದೆ. ನಾವು ಎಲ್ಲರೂ ಈ ಸಾಮ್ಯವನ್ನು ಅರಿತವರಾಗಿದ್ದೀವಿ - ಸ್ವ-ನೀತಿಯ ಫರಿಸಾಯನು ತನ್ನ ಪ್ರಾರ್ಥನೆಯಲ್ಲಿ ಮತ್ತೊಬ್ಬರನ್ನು ಕಡೆಗಣಿಸುತ್ತಾನೆ (ಲೂಕ 18:9-14)! ಅದು ಯಾವ ರೀತಿ ಎಂದರೆ, ಸಾರ್ವಜನಿಕ ಸ್ಥಳದಲ್ಲಿ ಶೇ.90 ರಷ್ಟು ವಿಶ್ವಾಸಿಗಳು ಮಾಡುವಂತ ಪ್ರಾರ್ಥನೆಗಳು ಪ್ರಾರ್ಥಮಿಕವಾಗಿ ಕೇಳಿಸಿಕೊಳ್ಳುವಂತವರನ್ನು ಮೆಚ್ಚಿಸುವ ಸಲುವಾಗಿ ಇರುತ್ತವೆಯೇ ಹೊರತು, ದೇವರಿಗೆ ಪ್ರಾರ್ಥನೆ ಸಲ್ಲುತ್ತಿರುವುದಿಲ್ಲ . ಆ ಸಾಮ್ಯದಲ್ಲಿರುವಂತ ಫರಿಸಾಯನು ತನ್ನ ಹೊರಗಡೆ ಜೀವಿತದಲ್ಲಿ ಬೇರೆ ಪಾಪಿಗಳ ಹಾಗೆ ಕೆಟ್ಟವನಾಗಿರುವುದಿಲ್ಲ. ಆದರೆ ಫರಿಸಾಯನು ತನ್ನ ಆತ್ಮೀಕ ಚಟುವಟಿಕೆಗಳನ್ನು ಆಲೋಚಿಸಿಕೊಂಡು, ಅದರ ವಿಷಯವಾಗಿ ತಾವು ಹೊಂದಿದಂತ ಗರ್ವವನ್ನು ಮತ್ತು ಅವರು ಇನ್ನೊಬ್ಬರನ್ನು ಕಡೆಗಣಿಸಿದ್ದನ್ನ ಯೇಸು ದ್ವೇಷಿಸಿದರು. ಆತ್ಮೀಕ ಗರ್ವವು ಸತತವಾಗಿ ಮತ್ತೊಬ್ಬ ವಿಶ್ವಾಸಿಗಳನ್ನು ತೀರ್ಪು ಮಾಡುವಂತೆ ಮಾಡುತ್ತದೆ. ಯೇಸು ಈ ರೀತಿಯಾಗಿ ಹೇಳಿದರು - ”ಚಿಕ್ಕಮಗುವಿನಂತೆ ತಗ್ಗಿಸಿಕೊಳ್ಳುವವನು ಪರಲೋಕ ರಾಜ್ಯದಲ್ಲಿ ದೊಡ್ಡವನೆನೆಸಿಕೊಳ್ಳುವವನು” ಎಂಬುದಾಗಿ (ಮತ್ತಾಯ 18:4). ಪರಲೋಕದಲ್ಲಿ ಕಂಡು ಬರುವಂತ ದೊಡ್ಡ ಸದ್ಗುಣ ಯಾವುದೆಂದರೆ ಅದು ದೀನತೆಯಾಗಿದೆ.

3. ಅಶುದ್ಧತೆ :

ಅಶುದ್ಧತೆಯು ಮುಖ್ಯವಾಗಿ ನಮ್ಮ ಕಣ್ಣುಗಳ ಮತ್ತು ಕಿವಿಗಳ ಮುಖಾಂತರ ಪ್ರವೇಶಿಸುತ್ತದೆ. ಈ ಅಶುದ್ಧತೆಯು ನಂತರ ನಮ್ಮ ಹೃದಯಗಳಿಂದ ಹೊರ ಬರುತ್ತದೆ ಮತ್ತು ನಮ್ಮ ದೇಹದ ವಿವಿಧ ಅಂಗಾಂಗಗಳ ಮುಖಾಂತರ ವ್ಯಕ್ತಪಡಿಸುತ್ತದೆ - ಪ್ರಾಥಮಿಕವಾಗಿ ನಮ್ಮ ನಾಲಿಗೆ ಮತ್ತು ನಮ್ಮ ಕಣುಗಳ ಮುಖಾಂತರ. ಯಾರಾದರೂ ಶುದ್ಧತೆಯನ್ನು ಹುಡುಕುತ್ತಿದ್ದಲ್ಲಿ, ಅವರು ಮೊದಲು ತಾನು ನೋಡುವಂತ ಮತ್ತು ಕೇಳುವಂತ ವಿಷಯದಲ್ಲಿ ಬಹು ಎಚ್ಚರಿಕೆಯಿಂದ ಇರಬೇಕು. ಯೇಸು ಅಶುದ್ಧತೆಯನ್ನು ಎಷ್ಟರ ಮಟ್ಟಿಗೆ ದ್ವೇಷ ಮಾಡಿದರು ಎಂದರೆ, ಯೇಸು ತನ್ನ ಶಿಷ್ಯಂದಿರಿಗೆ ಈ ರೀತಿ ಹೇಳಿದರು - ನಿಮ್ಮ ಶರೀರದ ಅಂಗಾಗಗಳಲ್ಲಿ ಪಾಪ ಮಾಡುವುದಕ್ಕಿಂತ ನಿಮ್ಮ ಬಲಗಣ್ಣನ್ನು ಕಿತ್ತೊಗೆಯವ ಮನಸ್ಸು ಮಾಡುವಂತೆ ಮತ್ತು ಬಲಗೈಯನ್ನು ಕತ್ತರಿಸಿಕೊಳ್ಳುವಂತೆ ಹೇಳಿದರು (ಮತ್ತಾಯ 5:27-29). ವೈದ್ಯರು ಬಲಗೈಯನ್ನು ಕೊಯ್ದು ತೆಗೆಯುವಂತೆ ಮತ್ತು ಸರ್ಜರಿ ಮಾಡಿ ಕಣ್ಣನ್ನು ತೆಗೆಯುವಂತೆ ಶಿಫಾರಸ್ಸು ಮಾಡುತ್ತಾರೆ? ಈ ಅಂಗಾಂಗಗಳನ್ನು ತೆಗೆಯದೇ ಇದ್ದಲ್ಲಿ ಕೆಟ್ಟದ್ದು ಸಂಭವಿಸುತ್ತದೆ ಮತ್ತು ಇಡೀ ದೇಹವು ಸಾಯುತ್ತದೆ ಎಂದು ಗೊತ್ತಾದಾಗ ವೈದ್ಯರು ಆ ಅಂಗಾಂಗಗಳನ್ನು ತೆಗೆಯಲು ಶಿಫಾರಸ್ಸು ಮಾಡುತ್ತಾರೆ. ಪಾಪದ ವಿಷಯಕ್ಕೆ ಸಂಬಂಧಪಟ್ಟಂತೆ ಇದೇ ರೀತಿಯಾಗಿ ನಾವು ಅರ್ಥ ಮಾಡಿಕೊಳ್ಳಬೇಕು. ಪಾಪವು ತುಂಬಾ ಗಂಭೀರವಾಗಿದೆ, ಇದು ನಮ್ಮ ಇಡೀ ಜೀವಿತವನ್ನು ಅಪಾಯಕ್ಕೆ ಒಳಪಡಿಸುತ್ತದೆ.

4. ಮನುಷ್ಯನ ಅಗತ್ಯತೆಗಳಿಗೆ ಉದಾಸೀನತೆ ತೋರುವುದು :

ಸಭೆಯಲ್ಲಿನ ನಾಯಕರುಗಳ ವಿಷಯವಾಗಿ ಯೇಸು ಕೋಪಗೊಂಡರು, ಏಕೆಂದರೆ ಯೇಸು ಒಬ್ಬ ಮನುಷ್ಯನನ್ನು ಸ್ವಸ್ಥ ಮಾಡಲು ಬಯಸಿದ್ದರು, ಆದರೆ ಆ ಸಭೆಯಲ್ಲಿನ ನಾಯಕರು ಸಬತ್ ದಿನವೆಂಬ ನೆಪವೊಡ್ಡಿ ಸ್ವಸ್ಥ ಮಾಡಲು ಅಡ್ಡಿ ಮಾಡಿದ್ದಕ್ಕಾಗಿ ಯೇಸು ಕೋಪಗೊಂಡರು. ”ಜನರ ಅಗತ್ಯತೆಯ ಕಡೆಗೆ ಇರುವ ಅವರ ಉದಾಸೀನತೆಯನ್ನು ಕಂಡು ಯೇಸು ದು:ಖಗೊಂಡರು” (ಮಾರ್ಕ 3:5).

ನಾವು ಎಲ್ಲರಿಗೂ ಒಳ್ಳೇಯದನ್ನೇ ಮಾಡಬೇಕೆಂದು ನಮಗೆ ಸತ್ಯವೇದವು ಆದೇಶಿಸುತ್ತದೆ, ವಿಶೇಷವಾಗಿ ದೇವರ ಮಕ್ಕಳಿಗೆ (ಗಲಾತ್ಯ 6:10) . ಜನರ ಜೀವಿತದ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡದೇ ಇರುವಂತವರಿಗೆ ಯೇಸು ಈ ರೀತಿ ಹೇಳಿದರು - ಕೊನೆಯ ದಿನದಲ್ಲಿ ತನ್ನ ಸಮ್ಮುಖದಿಂದ ಅವರು ಹೊರದೊಬ್ಬಲ್ಪಡುವರು ಎಂಬುದಾಗಿ (ಮತ್ತಾಯ 25:41-46) . ಅಸ್ವಸ್ಥಗೊಂಡಂತ ವಿಶ್ವಾಸಿಗಳನ್ನು ಸ್ವಸ್ಥ ಪಡಿಸುವಂತ ವರವನ್ನು ನಾವು ಹೊಂದದೇ ಇರಬಹುದು. ಆದರೆ ಯಾರು ಅಸ್ವಸ್ಥಗೊಂಡಿರುತ್ತಾರೋ ಅಂಥವರನ್ನು ಭೇಟಿಯಾಗಿ ಅವರನ್ನು ನಾವು ಪ್ರೋತ್ಸಾಯಿಸಬಹುದು. ಅಷ್ಟನ್ನೇ ದೇವರು ನಮ್ಮಿಂದ ಅಪೇಕ್ಷಿಸುವುದು. ಒಬ್ಬ ಐಶ್ವರ್ಯವಂತನು ನರಕ್ಕೆ ಹೋದನು, ಏಕೆಂದರೆ ಆತನು ತನ್ನ ಸಹೋದರನಾದ ಲಾಜರನ ವಿಷಯವಾಗಿ ಕಾಳಜಿ ವಹಿಸದೇ ಇದ್ದ ಕಾರಣ, ಲಾಜರನು ಐಶ್ವರ್ಯವಂತನ ಸಹ ಯೆಹೂದ್ಯನು ಮತ್ತು ಅಬ್ರಹಾಮನ ಮಗನು ಆಗಿದ್ದನು. ಅದೇ ರೀತಿ, ಒಳ್ಳೇಯ ಸಮಾರ್ಯದವನ ಸಾಮ್ಯದಲ್ಲಿನ ಲೇವಿಯು ಮತ್ತು ಮಹಾ ಯಾಜಕನು, ಯೇಸುವಿನಿಂದ ಕಪಟಿಗಳು ಎಂಬುದಾಗಿ ಕರೆಸಲ್ಪಟ್ಟರು, ಏಕೆಂದರೆ ಲೇವಿಯು ಮತ್ತು ಯಾಜಕನು, ತನ್ನ ಸಹ ಸಹೋದರನಾದ ಯೆಹೂದ್ಯನು ರಸ್ತೆಯ ಬದಿಯಲ್ಲಿ ಬಿದ್ದಿರುವಾಗ ಅವನ ವಿಷಯವಾಗಿ ದಯೆ ತೋರಿಸದೇ ಇದ್ದ ಕಾರಣದಿಂದಾಗಿ.

೫. ಅಪನಂಬಿಕೆ :

ಅಪನಂಬಿಕೆಯ ಹೃದಯವು ಕೆಟ್ಟ ಹೃದಯ ಎಂಬುದಾಗಿ ಸತ್ಯವೇದ ಮಾತನಾಡುತ್ತದೆ (ಇಬ್ರಿಯ 3:12). ಯೇಸು ತನ್ನ ಶಿಷ್ಯಂದಿರನ್ನು ಅವರ ಅಪನಂಬಿಕೆಗಾಗಿ ಏಳು ಬಾರಿ ಗದರಿಸಿದರು (ಮತ್ತಾಯ 6:30, 8:26, 14:31, 16:8, 17:17-20, ಮಾರ್ಕ 16:14, ಲೂಕ 24:25). ಯೇಸು ತನ್ನ ಶಿಷ್ಯಂದಿರನ್ನು ಬೇರ ಯಾವ ವಿಷಯಕ್ಕೂ ಇಷ್ಟು ಗದರಿಸಿಲ್ಲ ಎಂಬುದಾಗಿ ಇದು ತೋರಿಸುತ್ತದೆ!! ಅಪನಂಬಿಕೆಯು ದೇವರಿಗೆ ಅವಮಾನ ಮಾಡಿದಂತೆ, ಏಕೆಂದರೆ ಲೋಕದಲ್ಲಿರುವಂತ ಕೆಟ್ಟ ತಂದೆಯು ತನ್ನ ಮಕ್ಕಳಿಗಾಗಿ ಬೇಕಾದಂತದ್ದನ್ನು ಒದಗಿಸಿ, ಅವರ ಬಗ್ಗೆ ಕಾಳಜಿ ವಹಿಸುತ್ತಾನೆ, ಆದರೆ ದೇವರು ತನ್ನ ಮಕ್ಕಳಿಗೆ ಕಾಳಜಿ ವಹಿಸದೇ, ಅವರಿಗೆ ಬೇಕಾದಂತದ್ದನ್ನು ಒದಗಿಸುವುದಿಲ್ಲ ಎಂದು ಅಂದುಕೊಳ್ಳುವುದಕ್ಕೆ ಇದು ಸೂಚಿಸುತ್ತದೆ. ಖಿನ್ನತೆ, ಕೆಟ್ಟ ಮನಸ್ಥಿತಿಗಳು ಮತ್ತು ನಿರುತ್ಸಾಹಗಳ ಮೇಲೆ ಜಯವು ನಮ್ಮ ಪರಲೋಕದಲ್ಲಿನ ಪ್ರೀತಿಸುವಂತ ತಂದೆಯ ಮೇಲೆ ಮತ್ತು ದೇವರು ತನ್ನ ವಾಕ್ಯದಲ್ಲಿ ನಮಗೆ ಕೊಟ್ಟಿರುವಂತ ಅದ್ಬುತವಾದ ವಾಗ್ದಾನಗಳ ಮೇಲೆ ನಂಬಿಕೆಯನ್ನು ಇಡುವ ಮೂಲಕ ಬರುತ್ತದೆ. ಯೇಸು ಆಶ್ಚರ್ಯಗೊಂಡರು ಎಂಬುದಾಗಿ ಎರಡು ಬಾರಿ ಸತ್ಯವೇದದಲ್ಲಿ ನಾವು ಓದುತ್ತೇವೆ - ಒಂದು ಯೇಸು ”ನಂಬಿಕೆ”ಯನ್ನು ನೋಡಿದಾಗ ಮತ್ತು ”ಅಪನಂಬಿಕೆ”ಯನ್ನು ನೋಡಿದಾಗ (ಮತ್ತಾಯ 8:10, ಮಾರ್ಕ 6:6). ಯಾವಾಗಲಾದರೂ ಜನರಲ್ಲಿ ನಂಬಿಕೆಯನ್ನು ಕಾಣುವಾಗ ಯೇಸು ಹರ್ಷಗೊಳ್ಳುತ್ತಿದ್ದರು ಮತ್ತು ಪರಲೋಕದಲ್ಲಿನ ಪ್ರೀತಿಯುಳ್ಳ ತಂದೆಯ ಮೇಲೆ ಜನರು ಭರವಸೆ ಇಡಲು ಮನಸ್ಸು ಮಾಡದೇ ಇರುವುದನ್ನು ನೋಡುವಾಗ ಯೇಸು ನಿರಾಶರಾಗುತ್ತಿದ್ದರು.