WFTW Body: 

ಪ್ರೀತಿಯ ಒಂದು ಗುರುತು ಏನೆಂದರೆ, ಅದು ಸಾತ್ವಿಕತ್ವವಾಗಿದೆ. ಯೇಸು ಎಲ್ಲಾ ಜನರೊಟ್ಟಿಗೂ ಸಾತ್ವಿಕತ್ವದಿಂದ ಇದ್ದನು. ವಿಶೇಷವಾಗಿ ಯಾರು ತಮ್ಮ ಜೀವಿತದಿಂದ ಜರ್ಜರಿತರಾಗಿ ಹೋಗಿದ್ದರೋ, ಅಂಥವರೊಟ್ಟಿಗೆ ಸಾತ್ವಿಕತ್ವದಿಂದ ಇದ್ದನು. ಯಾರು ಪಾಪದೊಳಗೆ ತುಂಬಾ ಆಳವಾಗಿ ಬಿದ್ದಿದ್ದರೋ, ಅಂಥವರನ್ನು ಯೇಸು ವಿಶೇಷವಾಗಿ ಪ್ರೀತಿಸಿದನು. ಯೇಸು ಇಂತಹ ಜನರಿಗೆ ಸಹಾಯಿಸಲಿಕ್ಕಾಗಿ ಬಂದನು, ಏಕೆಂದರೆ ಇಂಥವರುಗಳು ಎಲ್ಲರಿಂದ ತಿರಸ್ಕ್ರತಗೊಂಡವರಾಗಿದ್ದರು. ವ್ಯಭಿಚಾರ ಮಾಡಿ ಸಿಕ್ಕಿ ಬಿದ್ದ ಒಬ್ಬ ಹೆಂಗಸು, ಶಿಲುಬೆಯಲ್ಲಿದ್ದ ಕಳ್ಳನು, ಇವರು ತಿರಸ್ಕರಿಸಲ್ಪಟ್ಟ ಅಪರಾಧಿಗಳಾಗಿದ್ದರು; ಯೇಸು ಇವರುಗಳನ್ನು ಎತ್ತಲು ಮತ್ತು ಪ್ರೋತ್ಸಾಯಿಸಲು ತೆರೆಳಿದ್ದನು. ಈ ರೀತಿ ಬಲಹೀನರಾದಂತವರುಗಳಲ್ಲಿ, ಪಾಪವುಳ್ಳಂತ ಜನರುಗಳಲ್ಲಿ ಒಳ್ಳೆಯ ಅಂಶಗಳನ್ನು ಯೇಸು ನೋಡಿದನು ಮತ್ತು ಆತನು ಪ್ರತಿಯೊಬ್ಬರಲ್ಲಿ ಉತ್ತಮವಾದದ್ದನ್ನು ನಿರೀಕ್ಷಿಸಿದನು. ನಿಮಗೆ ಗೊತ್ತಾ, ಯೇಸು ಎಂಥವನಾಗಿದ್ದನು ಎಂದರೆ, ಅವನೊಟ್ಟಿಗೆ ಬೇರೆ ಜನರು ಸಹ ಇರಲು ತವಕಪಡುತ್ತಿದ್ದರು. ಯೇಸುವನ್ನು ಯಾರು ದೂರವಿರುಸುತ್ತಿದ್ದರು?ಅಹಂಕಾರಿಗಳು, ಕಪಟಿಗಳು, ರಹಸ್ಯ ಪಾಪಗಳಲ್ಲಿ ಜೀವಿಸುತ್ತಿದ್ದವರು ಆತನಿಗೆ ಹೆದರುತ್ತಿದ್ದರು, ಏಕೆಂದರೆ ಆತನು ಎಲ್ಲಿ ಈ ಪಾಪಗಳನ್ನು ತೋರಿಸುತ್ತಾನೋ ಎಂದು. ಈ ರೀತಿಯ ಜನರು ಆತನನ್ನು ದೂರವಿರುಸುತ್ತಿದ್ದರು.

ಮತ್ತಾಯ 12:20 ರಲ್ಲಿ ನಾವು ಹೀಗೆ ಓದುತ್ತೇವೆ : ”ಆತನು ನ್ಯಾಯವನ್ನು ವಿಜಯಕ್ಕಾಗಿ ಕಳುಹಿಸುವವರೆಗೆ ಜಜ್ಜಿದ ದಂಟನ್ನು ಮುರಿಯುವುದಿಲ್ಲ ಮತ್ತು ಹೊಗೆಯಾಡುವ ಬತ್ತಿಯನ್ನು ನಂದಿಸುವುದಿಲ್ಲ”(ಕೆ.ಜೆ.ವಿ ಭಾಷಾಂತರ) ಎಂಬುದಾಗಿ. ದಂಟು ತುಂಬಾ ಸಣ್ಣ ವಸ್ತು. ಇದು ಜಜ್ಜಿದ್ದರೆ ಅಥವಾ ಮುರಿದುಹಾಕಲ್ಪಟ್ಟಿದ್ದರೆ, ಅನೇಕರು ಇದನ್ನು ಹೊರಗೆ ಹಾಕುತ್ತಾರೆ ಮತ್ತು ಬೇರೆ ದಂಟನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ದಂಟು ತುಂಬಾ ಕಡಿಮೆ ಬೆಲೆಯುಳ್ಳದ್ದು. ಆದರೆ ಯೇಸು ಈ ರೀತಿ ಮಾಡುವುದಿಲ್ಲ. ಒಂದು ಬತ್ತಿ ತುಂಬಾ ಹೊಗೆಯಾಡುತ್ತಿದ್ದರೆ ಅಥವಾ ಆರಿಹೋಗುತ್ತಿದ್ದರೆ, ಯೇಸು ಇದನ್ನು ಬೀಸಣಿಗೆ ಬೀಸಿ ಅದನ್ನು ಉರಿಸುತ್ತಿದ್ದನು. ಇದನ್ನೇ ಈ ವಚನದಲ್ಲಿ ಹೇಳಿರುವುದು. ಆತನು ಆ ಆರಿಹೋಗುತ್ತಿದ್ದ ಬತ್ತಿಯನ್ನು ಆರಿಸುತ್ತಿದ್ದಿಲ್ಲ. ನೀವು ಜಜ್ಜಿದ ದಂಟಾಗಿದ್ದರೆ, ಬಲಹೀನರಾಗಿದ್ದರೆ, ನಿಮ್ಮಲ್ಲಿ ಅನೇಕರ ಜೀವಿತ ಮುರಿಯಲ್ಪಟ್ಟಿದ್ದರೆ, ಯೇಸು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ. ನಿಮ್ಮ ಜೀವಿತಕ್ಕಿರುವ ಪರಿಪೂರ್ಣ ಯೋಜನೆಗೆ ಆತನು ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಬರುತ್ತಾನೆ. ನೀವು ಜಜ್ಜಿದ ದಂಟಾಗಿದ್ದರೂ ಅಥವಾ ಆರಿಹೋಗುತ್ತಿರುವ ಬತ್ತಿಯಾಗಿದ್ದರೂ ಅಥವಾ ಬತ್ತಿ ಇನ್ನೇನೂ ಆರಿಯೇ ಹೋಯಿತು ಎನ್ನುವಾಗಲೂ ಸಹ, ಯೇಸು ನಿಮ್ಮ ಜೀವಿತಕ್ಕಿರುವ ಪರಿಪೂರ್ಣ ಯೋಜನೆಗೆ ಹಿಂತಿರುಗಿ ಕರೆದುಕೊಂಡು ಬರುತ್ತಾನೆ.

ಯೇಸು ಜನರಲ್ಲಿ ಒಳ್ಳೆ ಅಂಶಗಳನ್ನು ನೋಡಿದನು. ಆತನು ಅವರಲ್ಲಿ ಯಾವಾಗಲೂ ಉತ್ತಮವಾದ್ದಕ್ಕಾಗಿ ನಿರೀಕ್ಷಿಸುವವನಾಗಿದ್ದಾನೆ. ಆತನ ಪ್ರೀತಿಯು ಭಾವುಕವಾಗಿರುವುದಿಲ್ಲ. ಆತನು ಯಾವಾಗಲೂ ಉನ್ನತವಾದ ಒಳ್ಳೆತನವನ್ನು ಹುಡುಕುತ್ತಾನೆ. ಅದಕ್ಕಾಗಿಯೇ ಯೇಸು ಪೇತ್ರನನ್ನು ಕಠಿಣವಾದ ಮಾತುಗಳಿಂದ ಬುದ್ದಿ ಹೇಳಿದನು. ನೀವು ಜನರನ್ನು ಪ್ರೀತಿಸದೇ, ಅವರನ್ನು ಕಠಿಣವಾಗಿ ಗದರಿಸಲು ಸಾಧ್ಯವಾಗುವುದಿಲ್ಲ. ಯಾಕೋಬ ಮತ್ತು ಯೋಹಾನನು ಸನ್ಮಾನ ಹೊಂದುವಂತ ಸ್ಥಾನವನ್ನು ಹುಡುಕುತ್ತಿದ್ದಾಗ, ಯೇಸು ಅವರನ್ನು ಗದರಿಸಿದನು. ಸಮಾರ್ಯದವರ ಮೇಲೆ ಬೆಂಕಿಯನ್ನು ಮೇಲಿಂದ ಕರೆಯಲು ಹೊರಟಂತವರನ್ನು ಸಹ ಯೇಸು ಗದರಿಸಿದನು. ಆತನು ತನ್ನ ಶಿಷ್ಯಂದಿರನ್ನು 7 ಬಾರಿ ಅವರ ಅಪನಂಬಿಕೆಗಾಗಿ ಗದರಿಸಿದನು. ಏಕೆ? ಏಕೆಂದರೆ ಆತನು ಅವರನ್ನು ಪ್ರೀತಿಸುವ ಸಲುವಾಗಿ. ಯೇಸು ಅವರ ಬಗ್ಗೆ ಕಾಳಜಿ ವಹಿಸದಿದ್ದರೆ, ಆಗ ಆತನು ಅವರನ್ನು ಸರಿಪಡಿಸುವ ಸಂದರ್ಭವೇ ಇರುತ್ತಿರಲಿಲ್ಲ. ಜನರು ನರಕಕ್ಕಾದರೂ ಅಥವಾ ಎಲ್ಲಿಗಾದರೂ ಹೋಗಲಿ ಪರವಾಗಿಲ್ಲ ಎಂದು ಯೇಸು ತಲೆಕೆಡಿಸಿಕೊಳ್ಳದೇ ಇರಬಹುದಿತ್ತು. ಆದರೆ ಆತನು ಅವರ ಬಗ್ಗೆ ಕಾಳಜಿ ವಹಿಸಿದ್ದರಿಂದ, ಅವರನ್ನು ಹಾಗೆ ಬಿಡಲಿಲ್ಲ.

ಹಾಗಾಗಿ ನಾವು ನೋಡುವುದೇನೆಂದರೆ, ಯೇಸು ಸತ್ಯವನ್ನು ಮಾತನಾಡಲು ಭಯ ಪಡುತ್ತಿರಲಿಲ್ಲ ಎಂಬುದಾಗಿ. ಅದು ಇನ್ನೊಬ್ಬರಿಗೆ ನೋವು ತರಿಸಿದರೂ ಸಹ, ಆತನು ಸತ್ಯವನ್ನೇ ಮಾತನಾಡುತ್ತಿದ್ದನು. ಏಕೆಂದರೆ ಆತನು ಅವರನ್ನು ಪ್ರೀತಿಸುವ ಸಲುವಾಗಿ. ಆತನು ಅವರ ನಿತ್ಯತ್ವದ ಒಳ್ಳೇಯದಕ್ಕಾಗಿ ಕಾಳಜಿವಹಿಸಿದ್ದನು. ಕರುಣೆಯುಳ್ಳ ವ್ಯಕ್ತಿ ಎಂದು ಕರೆಸಿಕೊಂಡು ಪ್ರಸಿಧ್ದಿ ಹೊಂದಬೇಕು ಎಂದು ಆತನು ಪ್ರಯತ್ನಿಸಲಿಲ್ಲ. ಆತನು ಕಠಿಣ ಮಾತುಗಳನ್ನು ಆಡುವುದರಿಂದ ಕರುಣೆಯುಳ್ಳ ವ್ಯಕ್ತಿ ಎಂಬ ಪ್ರಸಿದ್ದಿ ಹೋಗುತ್ತದೆ ಎಂದು ಆತನು ತಲೆ ಕೆಡಿಸಿಕೊಳ್ಳದೆ, ಕಠಿಣ ಮಾತುಗಳನ್ನು ಮಾತನಾಡಿ ಜನರನ್ನು ಸರಿಪಡಿಸುತ್ತಿದ್ದನು. ಆತನು ತನ್ನನ್ನೇ ಪ್ರೀತಿಸಿಕೊಳ್ಳುವುದಕ್ಕಿಂತ ಜನರನ್ನು ಹೆಚ್ಚು ಪ್ರೀತಿಸಿದನು. ಹಾಗಾಗಿ, ಆತನು ಬೇರೆ ಜನರಿಗೆ ಸಹಾಯಿಸಬೇಕೆಂಬ ಉದ್ದೇಶದಿಂದ, ತನ್ನ ಪ್ರಸಿದ್ದಿಯನ್ನು ಕಳೆದುಕೊಳ್ಳಲು ಮನಸ್ಸುಳ್ಳವನಾಗಿದ್ದನು. ಆತನು ಸತ್ಯವನ್ನು ಧೃಢವಾಗಿ ಮಾತನಾಡಿದನು. ಏಕೆಂದರೆ ಜನರು ನಿತ್ಯತ್ವಕ್ಕೂ ನಾಶವಾಗಿ ಹೋಗಬಾರದು ಎಂಬುದು ಆತನ ಆಸೆಯಾಗಿತ್ತು. ಅತ್ಯವಶ್ಯವಾಗಿ, ಒಂದೇ ಸಾಲಿನಲ್ಲಿ, ನಾವು ಹೇಳಬಹುದಾದ್ದೇನೆಂದರೆ, ಯೇಸು ಕ್ರಿಸ್ತನಿಗೆ ತನ್ನ ಬಗ್ಗೆ ಜನರಲ್ಲಿರುವ ಅಭಿಪ್ರಾಯಗಳಿಗಿಂತ, ಅವರ ನಿತ್ಯತ್ವದ ಹಿತವು ಆತನಿಗೆ ಮುಖ್ಯವಾಗಿತ್ತು.

ಒಬ್ಬ ನಿಜವಾದ ಕ್ರೈಸ್ತನು ಜನರೊಟ್ಟಿಗೆ ಸಂಧಿಸುವಾಗ ಈ ರೀತಿ ಇರುತ್ತಾನೆ; ಜನರ ಅಭಿಪ್ರಾಯಗಳಿಗಿಂತ, ಅವರ ನಿತ್ಯತ್ವದ ಹಿತದ ಬಗ್ಗೆ ಯೇಸು ಹೊಂದಿದ್ದ ಹೆಚ್ಚಿನ ಕಾಳಜಿಯ ರೀತಿ. ಒಂದುಸಲ, ಪೇತ್ರನು ಕೊರ್ನೇಲ್ಯನ ಮನೆಯಲ್ಲಿದ್ದಾಗ, ಆತನು ಅವರೊಟ್ಟಿಗೆ ಯೇಸುವಿನ ಸೇವೆಯ ಬಗ್ಗೆ ಮಾತನಾಡುತ್ತಿದ್ದನು. ಆತನು ಯೇಸುವಿನ ಇಡೀ ಸೇವೆಯನ್ನು ಒಂದೇ ಸಾಲಿನಲ್ಲಿ ಸಾರಂಶದ ರೀತಿ ಹೀಗೆ ಹೇಳಿದನು. ”ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದನೆಂಬುದನ್ನೂ, ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬುದನ್ನೂ ನೀವು ತಿಳಿದಿದ್ದೀರಿ; ಯಾಕೆಂದರೆ ದೇವರು ಆತನ ಸಂಗಡ ಇದ್ದನು” (ಅಪೋಸ್ತಲರ ಕೃತ್ಯಗಳು 10:38). ಯೇಸುವಿನ ಸೇವೆ ಏನೆಂದೂ ನೀವು ನೋಡಿದಿರಿ? ಕೇವಲ ಬೋಧನೆ ಮಾಡುವುದಲ್ಲ, ಒಳ್ಳೇದನ್ನು ಮಾಡುವುದಾಗಿದೆ. ಕೇವಲ ಸೊಗಸಾದ ಮಾತುಗಳನ್ನು ಆಡುವುದಲ್ಲ, ಆದರೆ ನಿಜವಾಗಿಯೂ ಜನರಿಗೆ ಒಳ್ಳೇಯದನ್ನು ಮಾಡಿದನು ಮತ್ತು ಸೈತಾನನ ದಬ್ಬಾಳಿಕೆಯಿಂದ ಅವರನ್ನು ಬಿಡುಗಡೆ ಮಾಡಿದನು. ಆತನಿಗೆ ಕೇವಲ ಆತ್ಮಗಳನ್ನು ಗೆಲ್ಲುವುದು ಮಾತ್ರ ಬೇಕಾಗಿರಲಿಲ್ಲ. ಆತನು ಮನುಷ್ಯನನ್ನು ಪೂರ್ಣವಾಗಿ ಪ್ರೀತಿಸಿದನು. ಅಂದರೆ ಆತ್ಮೀಕ ಮತ್ತು ದೈಹಿಕ ಮನುಷ್ಯನನ್ನು ಪ್ರೀತಿಸಿದನು.

ಯೇಸು ಮನುಷ್ಯರ ಭೌತಿಕ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸಿದ್ದನು. ಒಂದು ಸಮಯದಲ್ಲಿ ಆತನೊಟ್ಟಿಗೆ 4000 ಕ್ಕಿಂತಲೂ ಹೆಚ್ಚು ಜನ ೩ ದಿನಗಳ ಕಾಲ ಇದ್ದರು. ಮತ್ತಾಯ 15 ರಲ್ಲಿ ನಾವು ಇದರ ಬಗ್ಗೆ ಓದುತ್ತೇವೆ. 3 ದಿನ ಅವರು ಏನು ತಿಂದಿರಲಿಲ್ಲ. ಯೇಸು ಅವರ ಬಗ್ಗೆ ಕಾಳಜಿ ವಹಿಸಿದನು. ಆತನು ಹೀಗೆ ಹೇಳಿದನು, ”ಅವರಿಗೆ ಊಟವನ್ನು ಒದಗಿಸಲಿಕ್ಕೆ, ಏನಾದರೂ ತಿನ್ನಲಿಕ್ಕೆ ವ್ಯವಸ್ಥೆ ಮಾಡೋಣ” ಎಂದು. ಆತನು ಮನುಷ್ಯರ ದೈಹಿಕ ಅಗತ್ಯತೆ ಬಗ್ಗೆ ಕಾಳಜಿ ವಹಿಸಿದನು, ಅದಕ್ಕಾಗಿ ಆತನು ಈ ರೀತಿಯಾಗಿ ಪ್ರಾರ್ಥನೆ ಮಾಡುವಂತೆ ಹೇಳಿದನು, ”ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ದಯಪಾಲಿಸು” ಎಂಬುದಾಗಿ. ಯಾವಾಗಲಾದರೂ ಆತನು ಹೊರಗೆ ಹೋದಾಗ, ಮನುಷ್ಯರ ಆತ್ಮಗಳಿಗೆ ಮಾತ್ರ ಒಳ್ಳೇಯದನ್ನು ಮಾಡಲಿಲ್ಲ. ಆದರೆ ಅವರ ದೈಹಿಕ ಅಗತ್ಯತೆಗಳನ್ನು ಮುಟ್ಟುವ ಮೂಲಕ ಒಳ್ಳೇಯದನ್ನು ಮಾಡಿದನು. ಅಸ್ವಸ್ಥರಾದಂತ ಮತ್ತು ಬಾಧೆಪಡುತ್ತಿದ್ದಂತ ಜನರ ಬಗ್ಗೆ ಕಾಳಜಿ ವಹಿಸುತ್ತಿದ್ದನು. ಆತನು ಅತೀ ಕೆಟ್ಟ ಪಾಪಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅದಕ್ಕಾಗಿ ಆತನ ಶತ್ರುಗಳು ”ಈತನು ಪಾಪಿಗಳ ಮತ್ತು ಸುಂಕದವರ ಸ್ನೇಹಿತನು” ಎಂದು ಛೇಡಿಸುತ್ತಿದ್ದರು. ಹೌದು, ಈ ರೀತಿಯಾಗಿ ಯೇಸು ಇದ್ದನು. ಯೇಸು ಸಮಾಜದಲ್ಲಿ ನಿರ್ಲಕ್ಷಿಸಲ್ಪಟ್ಟಂತ ಹೆಚ್ಚು ಜನರ ಸ್ನೇಹಿತನಾಗಿದ್ದನು ಮತ್ತು ಒಬ್ಬ ನಿಜವಾದ ದೈವಿಕ ಮನುಷ್ಯನೂ ಸಹ ಈ ರೀತಿ ಇರುತ್ತಾನೆ.

ನಿಮಗೆ ಗೊತ್ತಾ ನೀವು ಆ ರೀತಿಯಾಗಿ ಇರಬಹುದು. ಮತ್ತೊಬ್ಬರಿಂದ ತಿರಸ್ಕರಿಸಲ್ಪಟ್ಟ ಜನರನ್ನು ಮತ್ತು ಸಮಾಜದಲ್ಲಿ ಕೆಳಮಟ್ಟದಲ್ಲಿರುವಂತ ಜನರನ್ನು ಪ್ರೀತಿಸುವಂತೆ ನಿಮಗೆ ಅಡ್ಡಿ ಮಾಡುತ್ತಿರುವುದಾದರೂ ಏನು? ನೀವು ಘನತೆಯುಳ್ಳವರು ಎಂದು ಭಾವಿಸಿರುವುದೇ ಆಗಿದೆ. ನೀವು ಯೇಸುವಿನ ರೀತಿ ಆಗುವುದು ನಿಮಗೆ ಬೇಕಾಗಿಲ್ಲ. ನಿಮಗೆ ಗೌರವ ಹೊಂದಿದಂತ ಕ್ರೈಸ್ತತ್ವದ ಜೊತೆಗೆ ಗೌರವವುಳ್ಳಂತ ಜನರಾಗುವುದು ನಿಮಗೆ ಬೇಕಾಗಿದೆ. ಇಲ್ಲ, ಒಬ್ಬ ಮನುಷ್ಯ ಹೊರಗಡೆ ಹೋಗಿ ಸಮಾಜದಲ್ಲಿ ಹೊರಪಂಕ್ತಿಯಲ್ಲಿರುವ ಜನರೊಟ್ಟಿಗೆ, ಕುಷ್ಟ ರೋಗಿಗಳೊಟ್ಟಿಗೆ ಸ್ನೇಹಿತರಾಗುವುದು ಒಬ್ಬ ಮನುಷ್ಯನ ಪ್ರಾಕೃತಿಕ ಸ್ವಭಾವವಲ್ಲ. ಆದರೆ ಯೇಸು ಆದನ್ನು ಮಾಡಿದನು. ನಿಮಗೆ ಗೊತ್ತಾ, ಮತ್ತೊಬ್ಬರಿಂದ ನಮಗೆ ಲಾಭವಾಗುವಂತವರೊಟ್ಟಿಗೆ ನಾವು ಸ್ನೇಹ ಬೆಳೆಸುತ್ತೇವೆ. ನಮ್ಮ ಪ್ರೀತಿ ಸಾರ್ಥತೆಯಿಂದ ಕೂಡಿದೆ. ಯೇಸುವಿನ ಪ್ರೀತಿಯು ನಿಸ್ವಾರ್ಥತೆಯಿಂದ ಕೂಡಿದೆ; ಇದು ಶುಧ್ದವಾದದ್ದು. ಈ ಎಲ್ಲಾ ಸುಸಂಸ್ಕೃತ ನಡೆನುಡಿಯಿಂದ ಮತ್ತು ಸೊಗಸಾದ ಮಾತುಗಳಿಂದ ಯೇಸುವನ್ನು ನಮ್ಮಲ್ಲಿ ತೋರಿಸುವುದಲ್ಲ, ನಮ್ಮಲ್ಲಿರುವ ಪ್ರೀತಿಸುವ ಸ್ವಭಾವದಿಂದ ಯೇಸುವನ್ನು ತೋರಿಸಬೇಕು. ”ಪ್ರೀತಿಯು ಮತ್ತೊಬ್ಬರ ಒಳಿತನ್ನ ಹುಡುಕುತ್ತದೆ. ಪ್ರೀತಿಯು ನಮ್ಮನ್ನು ಯೇಸುವಿನ ರೀತಿಯಲ್ಲಿ ಜನರ ಸೇವಕರಾಗಿರುವಂತೆ ಸಮರ್ಥರನ್ನಾಗಿಸುತ್ತದೆ. ಯೇಸು ಅವರ ಪಾದಗಳನ್ನು ತೊಳೆದನು, ಅವರನ್ನು ತನ್ನ ದೀನತೆಯಿಂದ ಪ್ರಭಾವಗೊಳಿಸಲು ಇದನ್ನು ಮಾಡಲಿಲ್ಲ, ಆತನು ಇದನ್ನು ಮಾಡಿದ್ದು ಏಕೆಂದರೆ ಅವರನ್ನು ಪ್ರೀತಿಸುವುದರಿಂದ.