ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಕ್ರಿಸ್ತನ ದೇಹವನ್ನು ಕಟ್ಟಲು ವರಗಳ ಅವಶ್ಯಕತೆ ಇದೆ

1 ಕೊರಿಂಥ 12 ರಲ್ಲಿ, ಆತ್ಮದ ವರಗಳ ಬಗ್ಗೆ ಓದುತ್ತೇವೆ. ಈ ವರಗಳು, ಸ್ಥಳೀಯ ಕ್ರಿಸ್ತನ ದೇಹವಾದ, ಅಂದರೆ ಸ್ಥಳಿಯ ಸಭೆಯಲ್ಲಿ ಮಾಡುವಂತ ಕಾರ್ಯದ ಜೊತೆಗೆ ನಂಟನ್ನು ಹೊಂದಿಕೊಂಡಂತೆ ಕಾಣುತ್ತವೆ. ಅನೇಕ ಕ್ರೈಸ್ತರು, ಪ್ರತಿಯೊಂದು ಸ್ಥಳದಲ್ಲಿ ಸ್ಥಳೀಯ ಕ್ರಿಸ್ತನ ದೇಹವನ್ನು ಕಟ್ಟಲು ಉಪಯೋಗಿಸಲ್ಪಡಬೇಕು ಎಂಬುದನ್ನು ಗ್ರಹಿಸಿಕೊಳ್ಳದೆ, ಆತ್ಮದ ವರಗಳ ಬಗ್ಗೆ ಯೋಚಿಸುತ್ತಾರೆ. ಇದರಿಂದಾಗಿ ಅವರು ದಾರಿ ತಪ್ಪಿ ಹೋಗುತ್ತಾರೆ. ನಾವು ಆತ್ಮದ ವರಗಳಿಗಾಗಿ ಹುಡುಕಬೇಕು, ಏಕೆಂದರೆ, ನಾವು ಇನ್ನೊಬ್ಬರಿಗೆ ಉತ್ತಮವಾಗಿ ಸೇವೆ ಮಾಡುವ ಸಂಬಂಧ (ಲೂಕ 11:5-13). ಅನೇಕರು 1 ಕೊರಿಂಥ 12ನೇ ಅಧ್ಯಾಯದ ಮೊದಲ ಅರ್ಧ ಭಾಗಕ್ಕೆ ಒತ್ತು ಕೊಡುತ್ತಾರೆ (ವರಗಳ ಬಗ್ಗೆ). ಆದರೆ ಎರಡನೆ ಭಾಗಕ್ಕೆ ಒತ್ತು ಕೊಡುವುದಿಲ್ಲ (ಕ್ರಿಸ್ತನ ದೇಹದ ಬಗ್ಗೆ). ಮತ್ತೆ ಕೆಲವರು ಎರಡನೇ ಭಾಗಕ್ಕೆ ಒತ್ತು ಕೊಟ್ಟು, ಮೊದಲನೇ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅವರು ಯಾವ ರೀತಿ ಎಂದರೆ, 11ನೇ ಅಧ್ಯಾಯದ ಅರ್ಧ ಭಾಗಕ್ಕೆ ಒತ್ತು ಕೊಡುತ್ತಾರೆ, ಆದರೆ 11ನೇ ಅಧ್ಯಾಯದ ಮೊದಲ ಅರ್ಧ ಭಾಗಕ್ಕೆ ಅವಿಧಯರಾಗುತ್ತಾರೆ (ನಮಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ).

ನೀವು ಆತ್ಮದ ಯಾವುದೇ ವರಗಳ ಬಳಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ, ಮೊದಲು, ನೀವು ಯಾವಾಗಲೂ ಒಂದಕ್ಕೊಂದು ಸಂಬಂಧವಿರುವ, ಅಂದರೆ ಮತ್ತೊಬ್ಬರನ್ನು ಸೇವೆ ಮಾಡುವುದು ಮತ್ತು ನಿಮ್ಮ ಸ್ಥಳೀಯ ಸಭೆಯಲ್ಲಿ ಕ್ರಿಸ್ತನ ದೇಹವನ್ನು ಕಟ್ಟುವುದಾಗಿದೆ. 1 ಕೊರಿಂಥ 12:13 ರಲ್ಲಿ ಪೌಲನು, ವಿಶ್ವವ್ಯಾಪಿ, ಲೋಕದ ಉದ್ದಗಲಕ್ಕೂ ಇರುವ ಕ್ರಿಸ್ತನ ದೇಹವಾದ ಸ್ಥಳೀಯ ಸಭೆಗಳನ್ನು ಉದ್ದೇಶಿಸಿ ಮಾತಾನಾಡುತ್ತಾನೆ (”ನಾವೆಲ್ಲರೂ” ಎಂಬ ಪದವನ್ನು ಆತನು ಉಪಯೋಗಿಸುತ್ತಾನೆ). ಆದರೆ 1 ಕೊರಿಂಥ 12:27 ರಲ್ಲಿ, ಪೌಲನು, ಕೊರಿಂಥದಲ್ಲಿನ ಸ್ಥಳೀಯ ಕ್ರಿಸ್ತನ ದೇಹದ ಬಗ್ಗೆ ಮಾತಾನಾಡುತ್ತಾನೆ ”ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ” ಎಂಬುದಾಗಿ ಹೇಳುತ್ತಾನೆ).

ಕ್ರಿಸ್ತನ ದೇಹದಲ್ಲಿ ಆತ್ಮದ ವರಗಳು ಯಾವ ರೀತಿ ಕಾರ್ಯಮಾಡುತ್ತವೆ ಎಂದರೆ, ನಮ್ಮ ದೆಹದಲ್ಲಿರುವ ಭಿನ ಭಿನ್ನ ಅಂಗಗಳ ರೀತಿಯಲ್ಲಿಯೇ ಕಾರ್ಯಮಾಡುತ್ತವೆ. ದೇಹದಲ್ಲಿರುವ ಕಣ್ಣಿನ ರೀತಿ ಅಥವಾ ಕಿವಿಯ ರೀತಿಯಲ್ಲಿ ಯಾರು ಸಹ ಪ್ರಮುಖನು ಎಂದು ಎಣಿಸಲ್ಪಡುವುದಿಲ್ಲ - ”ದೇಹವೆಲ್ಲಾ ಕಣ್ಣಾದರೆ ಕೇಳುವುದೆಲ್ಲಿ? ಅದೆಲ್ಲಾ ಕೇಳುವುದಾದರೆ ಮೂಸಿ ನೋಡುವುದೆಲ್ಲಿ?” (1 ಕೊರಿಂಥ 12:17). ಅಲ್ಲಿ ಮೂಗು ಸಹ ಇರಬೇಕು. ಹಾಗಾಗಿ ನಾವು ಯಾರ ವರವನ್ನೂ ಬಯಸಬಾರದು. ಕ್ರಿಸ್ತನ ದೇಹದಲ್ಲಿ ಒಬ್ಬನನ್ನು ಕಣ್ಣಾಗಿಯೂ ಅಥವಾ ನಾಲಿಗೆಯನ್ನಾಗಿಯೂ ದೇವರೇ ಮಾಡಿದ್ದಾರೆ. ದೇವರು ನಿಮ್ಮನ್ನು, ಕಣ್ಣಿಗೆ ಕಾಣಬಹುದಾದ ನಾಲಿಗೆಯ ರೀತಿಯಲ್ಲಿ ಇರುವಂತೆ ಮಾಡದೇ, ಕಾಣದೇ ಇರುವಂತ ಹೃದಯ, ಕಿಡ್ನಿ, ಲಿವರ್ (ಪಿತ್ತ ಜನಕಾಂಗ) ರೀತಿ ಇರಿಸಬಹುದು. ಆದರೆ ಈ ಎಲ್ಲಾ ಕಾಣದೇ ಇರುವಂತಹ ಅಂಗಗಳು ತುಂಬಾ ಮುಖ್ಯವಾದ ಕಾರ್ಯಗಳನ್ನೇ ಮಾಡುತ್ತಿರುತ್ತವೆ. ನಮ್ಮ ಮಾನವರ ದೇಹದಲ್ಲಿ ಕೆಲವು ಅಂಗಗಳು ನಮ್ಮ ಪಾದದ ಕಾಲು ಚೀಲಗಳ ರೀತಿ ಇರುತ್ತವೆ - ಅಂದರೆ ಕಠಿಣ ಮತ್ತು ತುಂಬಾ ಕಷ್ಟದ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಸಾಮರ್ಥವುಳ್ಳವುಗಳಾಗಿರುತ್ತವೆ. ಆದರೆ ಕೆಲವು ಅಂಗಗಳು ಬಲಹೀನವಾಗಿರುತ್ತವೆ ಮತ್ತು ತುಂಬಾ ಸೂಕ್ಷ್ಮವುಳ್ಳವುಗಳಾಗಿರುತ್ತವೆ ಮತ್ತು ಸುಲಭವಾಗಿ ಗಾಯಗೊಳ್ಳುವ ರೀತಿಯಲ್ಲಿರುತ್ತವೆ, ನಮ್ಮ ಕಣ್ಣಿನ ರೀತಿ. ಒಂದೇ ಒಂದು ಧೂಳಿನ ಕಣ ನಮ್ಮ ಕಣ್ಣಿಗೆ ಬಿದ್ದರೂ, ನಮ್ಮನ್ನು ಸತತವಾಗಿ ತೊಂದರೆಗೆ ಸಿಲಿಕಿಸುತ್ತದೆ. ಆದರೆ ನಮ್ಮ ಪಾದವು ಧೂಳಿನಿಂದ ರಕ್ಷಿಸಲ್ಪಡುತ್ತದೆ. ಅದು ನಮಗೆ ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಮತ್ತು ದೇಹದ ಕೆಲ ಅಂಗಗಳು ಆಕರ್ಷಿತವಾಗಿರುತ್ತವೆ, ಇನ್ನೂ ಕೆಲವು ಅಷ್ಟು ಆಕರ್ಷಿತವಾಗಿರುವುದಿಲ್ಲ - ಅವುಗಳನ್ನು ನಾವು ಮುಚ್ಚಿಡುತ್ತೇವೆ.

ಸಭೆಯಲ್ಲಿಯೂ ಸಹ, ಕೆಲವು ಜನರು ತುಂಬಾ ಕಾಣ ಸಿಗುತ್ತಾರೆ. ಯಾವ ರೀತಿ ಎಂದರೆ ಒಬ್ಬ ಪ್ರಸಂಗಿ ಯಾವಾಗಲೂ ವೇದಿಕೆಯ ಮೇಲೆ ಇರುವಂತೆ. ನಾವು ಈ ರೀತಿಯಾಗಿ ಹೇಳಬಹುದು, ಆತನು ನಾಲಿಗೆ ರೀತಿಯಲ್ಲಿ ಎಂದು. ಆದರೆ ಕ್ರಿಸ್ತನ ದೇಹದಲ್ಲಿ (ಸ್ಥಳೀಯ ಸಭೆಯಲ್ಲಿ) ಅನೇಕರು ವೇದಿಕೆಯಲ್ಲಿ ಎಂದಿಗೂ ನಿಂತುಕೊಂಡಿರುವುದಿಲ್ಲ. ಅವರು ”ಪ್ರಾರ್ಥನೆಗಾರ”ರಾಗಿರುತ್ತಾರೆ - ಅವರು ಗೌಪ್ಯವಾಗಿ ಪ್ರಸಂಗಿಗೋಸ್ಕರ ಹೆಚ್ಚು ಪ್ರಾರ್ಥನೆ ಮಾಡುವವರಾಗಿರುತ್ತಾರೆ. ಅವರು ಹೃದಯದ ರೀತಿಯಲ್ಲಿದ್ದುಕೊಂಡು- ಬಾಯಿ ಮಾತನಾಡಲು ಅನುಕೂಲವಾಗುವಂತೆ ರಕ್ತವನ್ನು ಚಲಿಸುವಂತೆ ಮಾಡುತ್ತಿರುತ್ತಾರೆ. ಎರಡೂ ಅಂಗಗಳು ಸಮವಾಗಿ ಪ್ರಮುಖವಾದವುಗಳು. ಹೃದಯ ರಕ್ತವನ್ನು ಚಲಿಸುವಂತೆ ಮಾಡದೇ, ಬಾಯಿ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಬಾಯಿ ತೆರೆದು ಊಟ ಮಾಡದೇ ಇದ್ದರೆ, ಹೃದಯ ಸತ್ತು ಹೋಗುತ್ತದೆ. ಹೃದಯ ಬಾಯಿಯ ಮೇಲೆ ಅವಲಂಬಿತವಾಗಿದೆ ಮತ್ತು ಬಾಯಿಯು ಹೃದಯದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ನೀವು ಆತ್ಮದ ಯಾವುದೇ ವರವನ್ನು ಹೊಂದಿದ್ದರೂ ಸಹ, ನಿಮಗೆ ಸಭೆಯಲ್ಲಿನ ನಿಮ್ಮ ಸಹೋದರರ ಅಗತ್ಯತೆ ಇದೆ ಮತ್ತು ಸಭೆಯಲ್ಲಿನ ನಿಮ್ಮ ಸಹೋದರರಿಗೆ ನಿಮ್ಮ ಅಗತ್ಯತೆ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಬ್ಬ ಸಹೋದರನು ಸಭೆಯಲ್ಲಿ ಯಾರಿಗೂ ಕಾಣದ ಹಾಗೇ, ಯಾರಿಂದಲೂ ಪ್ರಶಂಸಿಸಲ್ಪಡದೇ, ಹೃದಯದ ರೀತಿ ಕಾಣದೇ ಇರುವಂತ ಸದಸ್ಯನಾಗಿರಬಹುದು. ನೀವು ಕೈ ಮತ್ತು ಕಣ್ಣಿನ ರೀತಿ ಕಾಣುವಂತ ಸಹೋದರನಾಗಿರಬಹುದು.

ಇಲ್ಲಿ ಅನೇಕ ಆತ್ಮದ ವರಗಳು ಇವೆ. ಆದರೆ ಅವುಗಳ ಮಧ್ಯ ಪೈಪೋಟಿ ಇರುವುದಿಲ್ಲ. ಕೇವಲ ಒಂದಕ್ಕೊಂದು ಸಹಕಾರ ಮಾತ್ರ ಇರುತ್ತದೆ. ಒಬ್ಬರು ಅಪೊಸ್ತಲರಾಗಿರಬಹುದು, ಒಬ್ಬರು ಪ್ರವಾದಿಗಳಾಗಿರಬಹುದು (1 ಕೊರಿಂಥ 12:28). ಒಬ್ಬರು ವಿವಿಧ ಭಾಷೆಗಳನ್ನು ಆಡಬಹುದು, ಮತ್ತೊಬ್ಬರು ಸ್ವಸ್ಥ ಪಡಿಸುವ ವರವನ್ನು ಹೊಂದಿಕೊಂಡಿರಬಹುದು. ಸಭೆಗೆ ಎಲ್ಲರೂ ಸಮವಾಗಿ ಅಗತ್ಯತೆಯುಳ್ಳವರಾಗಿದ್ದಾರೆ. ಯಾರಿಗೂ ಸಹ ಬೇರೊಬ್ಬ ವ್ಯಕ್ತಿಯ ವರದ ಅಗತ್ಯತೆ ಇಲ್ಲ ಮತ್ತು ಯಾರು ಕೂಡ ಮತ್ತೊಬ್ಬರಿಗೆ, ”ನೀವು ನನಗೆ ಅವಶ್ಯವಿಲ್ಲ. ನಾನು ಎಲ್ಲವನ್ನು ನನ್ನ ಸ್ವಂತದಿಂದ ಮಾಡುತ್ತೇನೆ” ಎಂದು ಹೇಳುವ ಹಾಗಿಲ್ಲ.(1 ಕೊರಿಂಥ 12:21).

ನಿಮ್ಮ ಎಡಗೈ ಯಾವಾತ್ತಾದರೂ ನಿಮ್ಮ ಬಲಗೈ ಬಗ್ಗೆ ಹೊಟ್ಟೆ ಕಿಚ್ಚು ಪಟ್ಟಿದೆಯೇ? ಬಲಗೈ ಎಲ್ಲಾ ಮುಖ್ಯವಾದ ಪತ್ರಗಳನ್ನು ಬರೆದಿರಬಹುದು ಮತ್ತು ಎಲ್ಲಾ ಚೆಕ್ ಗಳಿಗೆ ಸಹಿ ಮಾಡಿರಬಹುದು. ಆದರೆ ಎಡಗೈ ಯಾವಾತ್ತಾದರೂ ಬಲಗೈ ಬಗ್ಗೆ ಹೊಟ್ಟೆಕಿಚ್ಚು ಪಟ್ಟು, ಈ ರೀತಿಯಾಗಿ ಹೇಳಿದ್ದಿದೆಯಾ - ”ಹೋ, ಈ ಬಲಗೈ ಯಾವಾಗಲೂ ತುಂಬಾ ಮುಖ್ಯವಾದ ಕಾರ್ಯಗಳನ್ನು ಮಾಡುತ್ತದೆ. ನನಗೆ ಈ ರೀತಿಯಾಗಿ ಮುಖ್ಯವಾದ ಕೆಲಸಗಳನ್ನು ಮಾಡಲು ಅವಕಾಶವೇ ದೊರೆತಿಲ್ಲ” ಎಂಬುದಾಗಿ ಮತ್ತು ಒಂದು ದಿನ ನಿಮ್ಮ ಬಲಗೈಗೆ ಗಾಯವಾದರೆ ಮತ್ತು ಬ್ಯಾಂಡೇಜ್ ನಿಂದ ಕಟ್ಟಲ್ಪಟ್ಟಿದ್ದರೆ. ”ಹೋ, ಈಗ ನನಗೆ ಈ ಕಾರ್ಯಗಳನ್ನು ಮಾಡಲು ಅವಕಾಶ ಸಿಕ್ಕಿತು” ಎಂದು ಎಡಗೈ ಹೇಳುತ್ತದಾ?. ಈಗ ಚೆಕ್ ಗೆ ಸಹಿ ಮಾಡಲು ಎಡಗೈಗೆ ಸಾಧ್ಯನಾ? ಎಡಗೈ ಹಾಗೂ ಹೀಗೂ ಸಹಿ ಮಾಡಿದರೂ, ನಿಮ್ಮ ಸಹಿ ತರ ಕಾಣುವುದಿಲ್ಲ ಮತ್ತು ಬ್ಯಾಂಕ್ ಕೂಡ ಅದನ್ನು ಒಪ್ಪುವುದಿಲ್ಲ! ಆದರೆ ನಿಜವಾಗಿಯೂ ಎಡಗೈ ಮಾಡುವಂತದ್ದಾದರೂ ಏನು? ಬಲಗೈ ಆದಷ್ಟು ಬೇಗ ತುರ್ತಾಗಿ ಗುಣ ಹೊಂದಿ, ಚೆಕ್ ಗೆ ಸಹಿ ಮಾಡಲು ಅನುಕೂಲವಾಗುವಂತೆ, ಎಡಗೈ ಸಾಧ್ಯವಾದ ಎಲ್ಲಾ ಸಹಾಯವನ್ನು ಬಲಗೈಗೆ ಮಾಡುತ್ತದೆ. ಇದೇ ರೀತಿಯಾಗಿ ಕ್ರಿಸ್ತನ ದೇಹವೂ ಸಹ ಕಾರ್ಯನ್ಮುಖವಾಗಿರಬೇಕು. ನಿಮಗಿಂತ ಹೆಚ್ಚಾಗಿ ಮತ್ತೊಬ್ಬ ಸಹೋದರ ಹೆಚ್ಚು ವರವನ್ನು ಹೊಂದಿದ್ದರೆ, ನೆನಪಿಟ್ಟುಕೊಳ್ಳಿ, ನೀವು ಕಷ್ಟಪಟ್ಟು ಕೆಲಸ ಮಾಡಿದರೂ, ನೀವು ಆತನ ಸೇವೆಯನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ದೇವರೇ ಆ ಸಹೋದರನಿಗೆ ಆ ವರವನ್ನು ಕೊಟ್ಟಿರುತ್ತಾರೆ. ಎಲ್ಲಾ ಚೆಕ್ ಗಳಿಗೆ ಸಹಿ ಮಾಡಲು ದೇಹದಲ್ಲಿ ಒಂದು ಅಂಗ ಸಾಕು (ಅದು ಬಲಗೈ).

ಕ್ರಿಸ್ತನ ದೇಹದಲ್ಲಿ ಎಲ್ಲಿಯಾದರೂ ಪೈಪೋಟಿ ಮತ್ತು ಹೊಟ್ಟೆಕಿಚ್ಚು ಇತ್ತು ಎಂದರೆ, ಇದಕ್ಕೆ ಕಾರಣ ವಿಶ್ವಾಸಿಗಳು ಕ್ರಿಸ್ತನ ದೇಹವನ್ನು ನೋಡಿರುವುದಿಲ್ಲ.

ಜನರು ಕೆಲವೊಮ್ಮೆ ಈ ಪ್ರಶ್ನೆಯನ್ನು ನನಗೆ ಕೇಳುತ್ತಾರೆ, ”ಸಹೋದರ ಝ್ಯಾಕ್ ರವರೇ, ಎಲ್ಲಾ ಸಮಯದಲ್ಲಿ ಯಾಕೆ ನೀವು ಕೇವಲ ದೇಹದಲ್ಲಿನ ”ಸಮತೋಲನ” ಮತ್ತು ”ಪವಿತ್ರತೆ” ಯ ಬಗ್ಗೆ ಒತ್ತುಕೊಡುತ್ತಿರಿ?” ಎಂದು. ನಾನು ಈ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತೇನೆ - ”ಯಾಕೆ ಕಿಡ್ನಿ ಮಾತ್ರ ರಕ್ತದ ಹರಿಸುವಿಕೆಯನ್ನು ಶುದ್ದಗೊಳಿಸುತ್ತದೆ ಮತ್ತು ರಾಸಾಯನಿಕ ಪದಾರ್ಥಗಳನ್ನು ಸಮತೋಲನದಲ್ಲಿಡಿಸುತ್ತದೆ - ಅದು ಮತ್ತೇನನ್ನು ಮಾಡುವುದಿಲ್ಲವಲ್ಲ? ” ಏಕೆಂದರೆ ದೇವರು ಅದಕ್ಕೆ ಕೊಟ್ಟಿರುವಂತ ಕಾರ್ಯ ಅದುವೇ ಆಗಿದೆ. ಅದು ದೇಹದಲ್ಲಿನ ಎಲ್ಲಾ ಕಾರ್ಯವನ್ನು ಮಾಡುವುದಾಗಿರುವುದಿಲ್ಲ. ಆದರೆ ಅದು ತುಂಬಾ ಮುಖ್ಯವಾದದ್ದನ್ನು ಮಾಡುತ್ತದೆ. ಒಂದು ಸಲ ನಿಮ್ಮ ಕಿಡ್ನಿ ಕಾರ್ಯನಿರ್ವಹಿಸುವುದು ನಿಲ್ಲಿಸಿದರೆ, ನೀವು ಸಾಯುತ್ತೀರಿ. ಆದರೆ ಕಿಡ್ನಿ, ಕೈ ಮತ್ತು ಬಾಯಿ ಇಲ್ಲದೇ ಕಾರ್ಯನಿರ್ವಹಿಸುವುದಿಲ್ಲ. ನಮಗೆ ಸಭೆಯಲ್ಲಿನ ಒಬ್ಬೊಬ್ಬರ ಅಗತ್ಯತೆ ಇದೆ. ಸುವಾರ್ತೆ ಎನ್ನುವಂತದ್ದು ಕೈ ರೀತಿಯಲ್ಲಿ, ಆಲೂಗಡ್ಡೆಯನ್ನು ತೆಗೆದುಕೊಂಡು ಬಾಯಿಯೊಳಗೆ ಹಾಕುವುದಾಗಿದೆ - ಅಂದರೆ ಅವಿಶ್ವಾಸಿಗಳನ್ನು ಕ್ರಿಸ್ತನ ಕಡೆ ತರುವುದಾಗಿದೆ. ಆದರೆ ಅದು ಸಾಕಾಗುವುದಿಲ್ಲ? ಇಲ್ಲ. ಅವಿಶ್ವಾಸಿ ಕ್ರಿಸ್ತನ ಕಡೆ ಬಂದಾಗ, ಮತ್ತೊಬ್ಬರು ಮುಂದಿನ ಕಾರ್ಯವನ್ನು ತೆಗೆದುಕೊಳ್ಳಬೇಕು. ಆ ಆಲೂಗಡ್ಡೆ ಹಲ್ಲಿನಿಂದ ಜಗಿಯಲ್ಪಟ್ಟು, ನಂತರ ಹೊಟ್ಟೆಯೊಳಗೆ ಹೋಗಬೇಕು, ಆಹಾರವನ್ನು ಕರಗಿಸುವ ರಸ ಇದರ ಮೇಲೆ ಬಿದ್ದಾಗ, ಆಹಾರ ತುಂಡು ತುಂಡಾಗಿ ಮುರಿಯಲ್ಪಡುತ್ತದೆ. ಕೊನೆಯದಾಗಿ, ಈ ರೀತಿ ಅನೇಕ ಪ್ರಕ್ರಿಯೆಗಳ ನಂತರ, ಇದು ಮಾನವನ ದೇಹದ ಒಂದು ಭಾಗವಾಗುತ್ತದೆ. ಅದೇ ರೀತಿಯಲ್ಲಿ, ಒಬ್ಬ ಹೊಸ ವಿಶ್ವಾಸಿ ಮುರಿಯಲ್ಪಡಬೇಕು, ಸಣ್ಣದಾಗಲ್ಪಡಬೇಕು ಮತ್ತು ತಗ್ಗಿಸಲ್ಪಡಬೇಕು ಮತ್ತು ಕ್ರಿಸ್ತನ ದೇಹದಲ್ಲಿ ತನ್ನ ಕಾರ್ಯಕ್ಕೆ ಹೊಂದಿಕೆಯಾಗಬೇಕು. ಈ ರೀತಿಯಾಗಿ ಒಬ್ಬನು ಕ್ರಿಸ್ತನ ದೇಹದಲ್ಲಿ ಪರಿಣಾಮಕಾರಿಯಾದಂತಹ ಸದಸ್ಯನಾಗಲು ಸಾಧ್ಯ.

ಆದರೆ ಆ ಆಲೂಗಡ್ಡೆ ಬಾಯಿಯಲ್ಲಿ ಮತ್ತು ಹೊಟ್ಟೆಯಲ್ಲಿಯೇ ಉಳಿದುಕೊಂಡರೆ ಹಾಗೂ ಅರಗಿಸಿಕೊಳ್ಳದಿದ್ದರೆ, ನಂತರ ಸ್ವಲ್ಪ ಸಮಯದ ನಂತರ ನೀವು ವಾಂತಿ ಮಾಡುತ್ತೀರಿ. ಹಾಗಾಗಿ ಸುವಾರ್ತಿಕನು ಪರಿವರ್ತಕನನ್ನು ಉಪದೇಶಕನಿಗೆ ಒಪ್ಪಿಸಿಕೊಡುತ್ತಾನೆ, ನಂತರ ಪ್ರವಾದಿಗೆ ಮತ್ತು ಕುರುಬನಿಗೆ ಒಪ್ಪಿಸಲ್ಪಡಬೇಕಾಗುತ್ತದೆ (ಎಫೆಸ 4:11). ಈ ಎಲ್ಲಾ ಸೇವೆಗಳಲ್ಲಿ ಯಾವುದು ಅತಿ ಹೆಚ್ಚು ಅವಶ್ಯವುಳ್ಳದ್ದು? ವರಗಳಲ್ಲಿ ಶ್ರೇಣಿಗಳಿವೆ, ಮೊದಲನೆಯದಾಗಿ ಅಪೊಸ್ತಲ, ಎರಡನೇಯದಾಗಿ ಪ್ರವಾದಿ ಮತ್ತು ಮೂರನೇಯದಾಗಿ ಉಪದೇಶಕ, ಹೀಗೆ ಕ್ರಮವಾಗಿ ದೇವರು ಶ್ರೇಣಿಗಳನ್ನು ಜೋಡಿಸಿದ್ದಾನೆ (1 ಕೊರಿಂಥ 12:28). ಈ ಎಲ್ಲಾ ವರಗಳು ಸಮವಾಗಿ ಒಂದಕ್ಕೊಂದು ಅಗತ್ಯತೆಯುಳ್ಳವುಗಳಾಗಿವೆ. ಹಾಗಾಗಿ ನಾವು ಎಂದಿಗೂ ಮತ್ತೊಬ್ಬರ ಸೇವೆಯನ್ನು ಮಾಡಲು ಪ್ರಯತ್ನಿಸಬಾರದು. ಇದರ ಹೊರತಾಗಿ ಅವರೊಟ್ಟಿಗೆ ಸಹಕರಿಸಬೇಕು. ಒಂದು ಸಲ ನೀವು ಈ ದೊಡ್ಡ ಸತ್ಯವನ್ನು ಕಣ್ಣು ತೆರೆದು ನೋಡುವಾಗ, ಇದು ನಿಮ್ಮನ್ನು ಹೊಟ್ಟೆಕಿಚ್ಚು, ಪೈಪೋಟಿ ಮತ್ತು ಅವಿಶ್ರಾಂತಿ ಇವುಗಳಿಂದ ಬಿಡುಗಡೆಗೊಳಿಸುತ್ತದೆ.