ಯಥಾರ್ತರಾಗಿರ್ರಿ
'ಮತ್ತಾಯನು 5:28'ರಲ್ಲಿ ಯೇಸು, "ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ ಆಗಲೇ ಅವನು ತನ್ನ ಮನಸ್ಸಿನಲ್ಲಿ ಅಥವಾ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದ್ದಾನೆ" ಎಂದು ಹೇಳುತ್ತಾರೆ. ನಾವು ಇದರಿಂದ ಬಿಡುಗಡೆ ಹೊಂದಲು ದೇವರ ಬಳಿ ಹೋಗಬೇಕಾಗಿದೆ ಮತ್ತು ಇದಕ್ಕೆ ಮೊದಲ ಹೆಜ್ಜೆ ಎಂದರೆ, ನಾವು ಪ್ರಾಮಾಣಿಕರಾಗಿರುವುದು ಅಥವಾ ಯಥಾರ್ಥರಾಗಿರುವುದು. ನೀವು ಕೋಪ ಮಾಡಿಕೊಂಡಿದ್ದೇಯಾದಲ್ಲಿ ನೀವು ಯಾರ ವಿರುದ್ಧ ತಪ್ಪು ಮಾಡಿದ್ದೀರೋ ಆ ವ್ಯಕ್ತಿಯ ಬಳಿ ಹೋಗಿ, "ನಾನು ನಿಮ್ಮೊಡನೆ ಮಾತಾಡಿದ ರೀತಿ ಸರಿಯಾಗಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ," ಎಂದು ಹೇಳಿರಿ. ಮತ್ತು ನೀವು ದಿನಕ್ಕೆ 10 ಬಾರಿ ಕೋಪ ಮಾಡುವ ವಿಷಯವಾಗಿ ಪಾಪ ಮಾಡಿದ್ದೇಯಾದಲ್ಲಿ, ಆ 10 ಬಾರಿಯೂ ನೀವು ಆ ವ್ಯಕ್ತಿಯ ಬಳಿ ಹೋಗಿ, "ನನ್ನದು ತಪ್ಪಾಯಿತು ಕ್ಷಮಿಸಿ," ಎಂದು ಹೇಳಿರಿ. ಹೀಗೆ ದೇವರು ನೀವು ಯಥಾರ್ಥರಾಗಿರುವುದನ್ನೂ, ದೀನರಾಗಿರುವುದನ್ನೂ ನೋಡಿದಾಗ, ಅವರು ನಿಮಗೆ ಆ ಪಾಪದಿಂದ ಬಿಡುಗಡೆ ಹೊಂದಲು ಬಲವನ್ನು ಅನುಗ್ರಹಿಸುವರು.
ಆದರೆ ನೀವು ಆ ಪಾಪವನ್ನು ಯಾವುದೋ ನೆಪ ಹೇಳಿ ಮುಚ್ಚಿಡಲು ಪ್ರಯತ್ನಿಸುವುದಾದರೆ ಮತ್ತು ನಿಮ್ಮ ಕೋಪವು ಸರಿಯಾದದ್ದೇ ಎಂದು ಹೇಳಿ ಅದನ್ನು ಸಮರ್ಥಿಸಲು ಪ್ರಯತ್ನಿಸುವುದಾದರೆ, ನೀವು ಅದರಿಂದ ಎಂದೂ ಬಿಡುಗಡೆ ಹೊಂದಲಾರಿರಿ. ನೀವು ಕೋಪ ಮಾಡಿದ್ದು ನೀತಿಯುಳ್ಳ ಕೋಪವೆಂದು ಯಾವಾಗ ಪರಿಗಣಿಸಲ್ಪಡುವುದು ಎಂದರೆ, ನೀವು ದೇವರ ಮಹಿಮೆಗಾಗಿ ಕೋಪ ಮಾಡಿಕೊಂಡಾಗ ಮಾತ್ರವೇ ಹೊರತು ನಿಮ್ಮ ಸ್ವಾರ್ಥಕ್ಕಾಗಿ ಕೋಪಿಸಿಕೊಂಡಾಗ ಅಲ್ಲವೇ ಅಲ್ಲ.
ನೀವು ಒಬ್ಬ ಸ್ತ್ರೀಯನ್ನು ನೋಡಿ ಮೋಹಿಸುವ ವಿಷಯಕ್ಕೆ ಬಂದಾಗ ಅಲ್ಲಿ ನೀವು ಸಮರ್ಥಿಸಲ್ಪಡಲು ಎಂದಿಗೂ ಸಾಧ್ಯವಿಲ್ಲ. ನೀವು ನಿಮ್ಮ ಹೆಂಡತಿಯನ್ನು ನೋಡಿ ಅವಳನ್ನು ಮೆಚ್ಚಿಕೊಳ್ಳಬಹುದು ಅಥವಾ ಪ್ರಶಂಶಿಸಬಹುದು. ಆದರೆ ಬೇರೆ ಯಾವ ಸ್ತ್ರೀಯನ್ನೂ ಅಲ್ಲ. ಅದು ದೇವರ ಚಿತ್ತವಲ್ಲ. ದೇವರು ಹೇಳುವುದೇನೆಂದರೆ, ನೀವು ಇಲ್ಲಿ ತೀವ್ರ ಕ್ರಮ ಕೈಗೊಳ್ಳಬೇಕು ಎಂಬುದಾಗಿ. ಎಲ್ಲಾದಕ್ಕಿಂತ ಮೊದಲು ನೀವು ಯಥಾರ್ಥರಾಗಿರ್ರಿ ಅಥವಾ ಪ್ರಾಮಾಣಿಕರಾಗಿರ್ರಿ. ಮತ್ತು "ಕರ್ತನೇ ನಾನು ವ್ಯಭಿಚಾರ ಮಾಡಿದ್ದೇನೆ," ಎಂದು ಹೇಳಿರಿ. "ನಾನು ಒಂದು ಸುಂದರವಾದ ಮುಖವನ್ನು ಪ್ರಶಂಸಿಸಿದೆ ಅಥವಾ ಮೆಚ್ಚಿಕೊಂಡೆ," ಎಂದು ಎಂದಿಗೂ ಹೇಳಬೇಡಿ. ಅದರ ಬದಲು, "ನಾನು ವ್ಯಭಿಚಾರ ಮಾಡಿದೆ," ಎಂದು ಹೇಳಿರಿ.
ನೀವು ಯಥಾರ್ಥರಾಗಿರುವುದಾದರೆ, ದೇವರು ನಿಮ್ಮನ್ನು ಬಿಡುಗಡೆ ಮಾಡುವರು.
ತೀವ್ರಗಾಮಿಗಳಾಗಿರಿ
ಇನ್ನೊಂದು ವಿಷಯವೆಂದರೆ, ನೀವು ತೀವ್ರಗಾಮಿಗಳಾಗಿರ್ರಿ. ಸತ್ಯವೇದವು ಹೇಳುತ್ತದೆ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”(1 ಕೊರಿ. 6:18). ನೀವು ಕಂಪ್ಯೂಟರ್‌ನ ಮುಂದೆ ಕುಳಿತಿರುವಾಗ ನೀವು ಪ್ರಚೋದನೆಗೆ ಒಳಗಾಗುತ್ತಿದ್ದರೆ, ಅಲ್ಲಿಂದ ಓಡಿಹೋಗಿರಿ ಅಥವಾ ಅದನ್ನು ಆಫ್ ಮಾಡಿ, “ಕರ್ತನೇ, ನಾನು ಏನು ಕಳೆದುಕೊಂಡರೂ ನನಗೆ ಚಿಂತೆಯಿಲ್ಲ, ಆದರೆ ನಾನು ಇದರಲ್ಲಿ ಬೀಳಲು ಬಯಸುವುದಿಲ್ಲ” ಎಂದು ಹೇಳಿರಿ. “ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು” ಎಂದು ಯೇಸು ಹೇಳುವಾಗ, ಅವರು ನಮ್ಮ ಬಲಗಣ್ಣನ್ನು ದೈಹಿಕವಾಗಿ ಕಿತ್ತುಹಾಕಲು ಹೇಳುತ್ತಿಲ್ಲ. ಇದು ಸ್ಪಷ್ಟವಾಗಿದೆ, ಏಕೆಂದರೆ ನೀವು ಇನ್ನೂ ನಿಮ್ಮ ಎಡಗಣ್ಣಿನಿಂದ ಮೋಹಿಸಬಹುದು. ಇದರ ಅರ್ಥವೇನೆಂದರೆ, ನೀವು ಪಾಪದ ಕಡೆಗೆ ತೀವ್ರ ಮನೋಭಾವವನ್ನು ಹೊಂದಬೇಕು, ನಿಮ್ಮ ನಾಲಿಗೆ ಮತ್ತು ನಿಮ್ಮ ಕಣ್ಣುಗಳ ಕಡೆಗೆ ತೀವ್ರ ಮನೋಭಾವವನ್ನು ಹೊಂದಬೇಕು.
"ನೀವು ಪ್ರಾಮಾಣಿಕರಾಗಿದ್ದರೆ, ದೇವರು ನಿಮ್ಮನ್ನು ಬಿಡುಗಡೆಗೊಳಿಸುವರು”
ನೀವು ಪ್ರಚೋದನೆಗೆ ಒಳಗಾಗುವಾಗ, ಒಬ್ಬ ಕುರುಡ ಮತ್ತು ಮೂಕ ಮನುಷ್ಯನಂತೆ ಇರ್ರಿ. ಒಬ್ಬ ಮೂಕನು ತನ್ನ ಧ್ವನಿಯನ್ನು ಎತ್ತಿ ಯಾರ ಮೇಲಾದರೂ ಕೂಗಾಡಲು ಸಾಧ್ಯವೇ? ಕುರುಡ ಮನುಷ್ಯನು ಮೋಹಿಸಲು ಸಾಧ್ಯವೇ? ಇಲ್ಲ. ಕುರುಡನ ಹಾಗೆ ಇರಿ ಮತ್ತು ಹೀಗೆ ಹೇಳಿರಿ, "ಸ್ವಾಮೀ, ನೀವು ನನಗೆ ಸ್ತ್ರೀಯರನ್ನು ಮೋಹಿಸಲು ಕಣ್ಣುಗಳನ್ನು ಕೊಡಲಿಲ್ಲ. ನೀವು ನಿಮ್ಮ ಮಹಿಮೆಯನ್ನು ನೋಡಲು ನನಗೆ ಕಣ್ಣುಗಳನ್ನು ಕೊಟ್ಟಿದ್ದೀರಿ." ಯೇಸು ಹೇಳಿದ್ದು, ನೀವು ಇದನ್ನು ಮಾಡದಿದ್ದರೆ, ನಿಮ್ಮ ಅವಯವಗಳನ್ನು(ಭೌತಿಕ ಭಾಗಗಳು) ನೀವು ಉಳಿಸಿಕೊಳ್ಳಬಹುದು, ಆದರೆ ಹಾಗಿದ್ದರೂ ನರಕಕ್ಕೆ ಹಾಕಲ್ಪಡುತ್ತೀರಿ. ನೀವು ನಿಮ್ಮ ಅವಯವಗಳಲ್ಲಿ (ಭೌತಿಕ ಭಾಗಗಳು) ಒಂದನ್ನು ಕಳೆದುಕೊಂಡು (ಅಂದರೆ, ಸ್ವಯಂಪ್ರೇರಿತರಾಗಿ ನಿಮ್ಮ ಶರೀರಾಧೀನ ಸ್ವಭಾವವು ಹಂಬಲಿಸುವ ಪಾಪ ಭೋಗಗಳನ್ನು ಬಿಟ್ಟುಬಿಡುವುದು), ದೇವರ ರಾಜ್ಯಕ್ಕೆ ಪ್ರವೇಶ ಪಡೆಯುವುದು ಉತ್ತಮ.
ಅದೇ ರೀತಿ ಯೇಸು ಹೇಳುತ್ತಾರೆ, "ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಬಿಸಾಡಿ ಬಿಡು"(ಮತ್ತಾ. 5:30). ನಿನ್ನ ಕೈಯನ್ನು ಕತ್ತರಿಸಲಾಗಿದೆ, ಆದ್ದರಿಂದ ನಿನ್ನ ಎಡ ಅಥವಾ ಬಲದ ಕೈಯಿಂದ ಯಾವುದೇ ಪಾಪವನ್ನು ಮಾಡಲು ಸಾಧ್ಯವಿಲ್ಲವೆಂದು ಊಹಿಸಿಕೊಳ್ಳೋಣ. ಯೇಸುವು ಪ್ರಾಯೋಗಿಕವಾಗಿದ್ದರು. ನೀನು ಕುರುಡನಂತೆ, ಕೈ ಕತ್ತರಿಸಿದವನಂತೆ ನಟಿಸಬೇಕೆಂದು ಯೇಸು ಹೇಳುತ್ತಾರೆ. ಏಕೆಂದರೆ ಪಾಪವು ತುಂಬಾ ಗಂಭೀರವಾಗಿದೆ. ನಾವು ಇಂತಹ ತೀವ್ರಗಾಮಿಯ ಮನೋಭಾವವನ್ನು ಹೊಂದಿದ್ದರೆ, ದೇವರು ನಮಗೆ ಪಾಪದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಸಹಾಯ ಮಾಡುತ್ತಾರೆಂದು ನಾನು ನಂಬುತ್ತೇನೆ, ಮತ್ತು ಆಗ ನಮ್ಮ ದಾಂಪತ್ಯ ಜೀವನವು ಒಳ್ಳೆಯದಾಗುವುದು. ಮದುವೆಯು ಕಾಮದ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಯೋಚಿಸಬೇಡಿರಿ. ಮದುವೆಯಾದ ಅನೇಕ ಜನರು ತಮ್ಮ ಯೋಚನೆಯಲ್ಲಿ ಯಾವಾಗಲೂ ವ್ಯಭಿಚಾರ ಮಾಡುತ್ತಾರೆ. ಮದುವೆಯಾದ ಅನೇಕ ಜನರು ಪ್ರತಿದಿನ ಅಂತರ್ಜಾಲದಲ್ಲಿ ಅಶ್ಲೀಲತೆಯನ್ನು ನೋಡುತ್ತಾರೆ. ಮದುವೆಯು ಆ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಏಕೆಂದರೆ ಅದೊಂದು ಆಂತರಿಕ ಆಸೆಯಾಗಿದೆ. ನೀನು ಪವಿತ್ರಾತ್ಮನ ಬಲದಿಂದ ಇದರ ವಿರುದ್ಧವಾಗಿ ಹೋರಾಡದಿದ್ದರೆ ಸೋಲಲ್ಪಡುತ್ತೀಯ ಮತ್ತು ನಿನ್ನ ಜೀವನ ಪರ್ಯಂತ ನೀನು ಒಬ್ಬ ಆತ್ಮಿಕನಾದ ಕ್ರೈಸ್ತನೆಂದು ತಪ್ಪಾಗಿ ನಂಬುವವನಾಗಿರುತ್ತೀಯ.
ಯೇಸು ಕ್ರೈಸ್ತ ಜೀವಿತದ ಸ್ನಾತಕೋತ್ತರ ಹಂತದ ಬಗ್ಗೆ ಮಾತನಾಡುತ್ತಿದ್ದಾರೆಯೇ? ಇಲ್ಲ, ಯೇಸು ನರಕದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನರಕದಿಂದ ತಪ್ಪಿಸಿಕೊಳ್ಳುವುದು ಕ್ರೈಸ್ತ ಜೀವಿತದ ಸ್ನಾತಕೋತ್ತರ ಹಂತದ ವಿಷಯವಲ್ಲ. ಇದು ಕ್ರೈಸ್ತ ಜೀವಿತದ ಪ್ರಾಥಮಿಕ ವಿಷಯ. ನಿಮ್ಮ ಇಡೀ ದೇಹವು ನರಕಕ್ಕೆ ಎಸೆಯಲ್ಪಡುವುದಕ್ಕಿಂತ ನಿಮ್ಮ ದೇಹದ ಒಂದು ಭಾಗವು ನಾಶವಾಗುವುದು ಉತ್ತಮ ಎಂದು ಯೇಸು ಹೇಳುತ್ತಾರೆ. ನರಕದಿಂದ ರಕ್ಷಣೆ ಹೊಂದುವುದು ಕನಿಷ್ಠ ಮಟ್ಟ, ಮತ್ತು ಈ ಸಂದೇಶವನ್ನು ಪ್ರತಿಯೊಂದು ರಾಷ್ಟ್ರದ ಪ್ರತಿಯೊಬ್ಬ ಶಿಷ್ಯನಿಗೂ ನಾವು ಕಲಿಸಬೇಕೆಂದು ಯೇಸು ಬಯಸುತ್ತಾರೆ. ಇದನ್ನು ಎಷ್ಟು ಕಲಿಸಲಾಗುತ್ತಿದೆ? ಅಷ್ಟೇನೂ ಕಲಿಸಲಾಗುವುದಿಲ್ಲ, ಮತ್ತು ಅದಕ್ಕಾಗಿಯೇ ನನ್ನ ಸ್ವಂತ ಸೇವೆಯಲ್ಲಿ ಅದನ್ನು ಒತ್ತಿಹೇಳಲು ವೈಯಕ್ತಿಕವಾಗಿ ದೇವರಿಂದ ನನಗೆ ಆಜ್ಞಾಪಿಸಲ್ಪಟ್ಟಿದೆ.