ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   Struggling ಶಿಷ್ಯಂದಿರಿಗೆ
WFTW Body: 

ದೀನತೆ : ಎಫೆಸ 4:1-2 ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ - ”ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯವಾಗಿ ನಡೆದುಕೊಳ್ಳಬೇಕೆಂದು ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ." ಕ್ರೈಸ್ತ ಜೀವಿತದಲ್ಲಿನ ಮೂರು ರಹಸ್ಯಗಳನ್ನು ನಾನು ಅನೇಕ ಬಾರಿ ಹೇಳಿದ್ದೆನೆ, ಅವು ಯಾವುದೆಂದರೆ ದೀನತೆ, ದೀನತೆ ಮತ್ತು ದೀನತೆ. ಇಲ್ಲಿಂದಲೇ ಎಲ್ಲವೂ ಪ್ರಾರಂಭವಾಗುವುದು. ಯೇಸು ತನ್ನನ್ನು ತಾನು ತಗ್ಗಿಸಿಕೊಂಡು ಮತ್ತಾಯ 11:29 ರಲ್ಲಿ ಹೇಳಿದ್ದೇನೆಂದರೆ - ”ನಾನು ಸಾತ್ವಿಕನೂ, ದೀನ ಮನಸ್ಸುಳ್ಳವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ." ಕ್ರಿಸ್ತನು ಎಂದೇ ಆಗಲಿ ನನ್ನಿಂದ ಕಲಿತು ಕೊಳ್ಳಿರೆಂದು ಹೇಳಿದ ಎರಡು ವಿಷಯಗಳು - ದೀನತೆ ಮತ್ತು ಸಾತ್ವಿಕತೆ ಆಗಿದೆ. ಇದು ಏಕೆ? ಏಕೆಂದರೆ, ಆದಾಮನ ಮಕ್ಕಳಾದ ನಾವು ಗರ್ವಿಗಳು ಮತ್ತು ಕಠಿಣರಾಗಿದ್ದೇವೆ. ಇಹಲೋಕದಲ್ಲಿ ನೀವು ಪರಲೋಕದ ಜೀವಿತವನ್ನು ತೋರಿಸಬೇಕೆಂದರೆ, ಮೊದಲನೆಯದಾಗಿ ಸುವಾರ್ತಿಕ ಸೇವೆಮಾಡುವುದರಿಂದಾಗಲಿ, ಪ್ರಸಂಗಿಸುವುದರಿಂದಾಗಲಿ, ಸತ್ಯವೇದ ಬೋಧಿಸುವುದರಿಂದಾಗಲಿ ಅಥವಾ ಸಮಾಜ ಸೇವಾಕಾರ್ಯಗಳಿಂದಾಗಲಿ ತೋರಿಸಲ್ಪಡುವುದಿಲ್ಲ. ಆದರೆ ಎಲ್ಲದಕ್ಕೂ ಮೊದಲನೆಯಾದಾಗಿ ದೀನತೆ ಮತ್ತು ಸಾತ್ವಿಕತೆಯ ನಡುವಳಿಕೆಯಿಂದ ಇದು ತೋರಿಸಲ್ಪಡುತ್ತದೆ.

ದೇವರು ಮೋಶೆಗೆ ಗುಡಾರದ ಮಾದರಿಯನ್ನು ಕೊಟ್ಟಾಗ, ದೇವರು ಮಂಜೂಷದಿಂದ ಪ್ರಾರಂಭಿಸಿದನು. ಯಾವುದೇ ನಿರ್ಮಾಣದ ಯೋಜನೆ ಮಾಡುವಾಗ, ಮನುಷ್ಯನು ಕಟ್ಟಡದ ಹೊರಗಿನ ಅಳತೆಯಿಂದ ಪ್ರಾರಂಭಿಸುತ್ತಾನೆ. ಆದರೆ ದೇವರು ಮೊದಲು ಒಳಭಾಗವಾದ ಗರ್ಭಸ್ಥಾನದಿಂದ ಪ್ರಾರಂಭಿಸಿದನು. ಮನುಷ್ಯನು ಬಟ್ಟಲ ಹೊರ ಭಾಗವನ್ನು ಶುಚಿ ಮಾಡುವುದನ್ನು ಇಷ್ಟಪಡುತ್ತಾನೆ. ಆದರೆ ದೇವರು ಮೊದಲು ಒಳಭಾಗವನ್ನು ಶುಚಿ ಮಾಡುವುದಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ದೇವರು ಮೊದಲು ಒಳಭಾಗದಿಂದ ಪ್ರಾರಂಭಿಸುತ್ತಾರೆ, ನಂತರ ಹೊರಗಡೆಗೆ ಗಮನ ಹರಿಸುತ್ತಾರೆ. ನೀವು ಮಾನವರಾಗಿರುವುದರಿಂದ ನಿಮ್ಮ ಯೋಚನೆಯಲ್ಲಿ ಮತ್ತು ವಿಧಾನದಲ್ಲಿ ಹೊರಗಡೆಯಲ್ಲಿರುವದನ್ನು ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳುತ್ತೀರಿ. ನೀವು ಹೆಚ್ಚು ದೈವಿಕರಾಗಿದ್ದರೆ, ದೇವರು ಮಾತ್ರ ನೋಡುವಂತ ಒಳಭಾಗವನ್ನು ಮಾತ್ರ ಪರಿಗಣಿಸುತ್ತೀರಿ. ನಿಮ್ಮ ಸಭೆಯಲ್ಲಿನ ಜನರ ಗುಣಮಟ್ಟವನ್ನು ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳುತ್ತೀರಿ. ಸಭೆಯಲ್ಲಿನ ಜನರ ಸಂಖ್ಯೆಗಿಂತ, ಅವರ ಜೀವನ ಗುಣಮಟ್ಟದ ಬಗ್ಗೆ ಹೆಚ್ಚು ಆಸಕ್ತಿಹೊಂದಿರುತ್ತೀರಿ. ಸಂಖ್ಯೆ ಮತ್ತು ಗಾತ್ರವು ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ ಆದರೆ ದೇವರು ಜನರಲ್ಲಿನ ಗುಣಮಟ್ಟವನ್ನು ನೋಡುತ್ತಾರೆ.

ದೇವರು ದೀನತೆಯನ್ನು, ಸಾತ್ವಿಕತೆಯನ್ನು ಮತ್ತು ಸಹಿಸಿಕೊಳ್ಳುವುದನ್ನು(ತಾಳ್ಮೆಯನ್ನು) ನೋಡುತ್ತಾರೆ. ಎಫೆಸ 4:2 ರಲ್ಲಿ - ”ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ” ಎಂದು ಬರೆಯಲ್ಪಟ್ಟಿದೆ. ಯಾವುದೇ ಸಭೆಯಲ್ಲಿ ಯಾರೂ ಸಹ ಪರಿಪೂರ್ಣರಲ್ಲ. ಎಲ್ಲರೂ ತಪ್ಪನ್ನು ಮಾಡುವವರಾಗಿದ್ದಾರೆ. ಹಾಗಾಗಿ ಸಭೆಯಲ್ಲಿ ನಾವು ಮತ್ತೊಬ್ಬರ ತಪ್ಪುಗಳನ್ನ ಸಹಿಸಿಕೊಳ್ಳಬೇಕು. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕಾಗಿರುವ ದೆಸೆಯಿಂದ ಒಬ್ಬರಿಗೊಬ್ಬರ ತಪ್ಪುಗಳನ್ನು ಮನ್ನಿಸಬೇಕು. ”ನೀನು ತಪ್ಪನ್ನು ಮಾಡಿದರೆ ನಾನು ಅದನ್ನು ಮುಚ್ಚಿಹಾಕುತ್ತೇನೆ. ನೀನು ಯಾವುದೇ ಕೆಲಸವನ್ನು ಅಪೂರ್ಣ ಮಾಡಿದ್ದರೆ, ನಾನು ಅದನ್ನು ಮಾಡಿ ಮುಗಿಸುತ್ತೇನೆ” - ಈ ರೀತಿಯಾಗಿ ಕ್ರಿಸ್ತನ ದೇಹವು ಕಾರ್ಯೋನ್ಮುಖವಾಗಿರಬೇಕು(ಕೆಲಸಮಾಡಬೇಕು).

ಐಕ್ಯತೆ : ಎಫೆಸ 4:3 ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ - ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು, ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. ಪೌಲನ ಅನೇಕ ಪತ್ರಿಕೆಗಳಲ್ಲಿ ಐಕ್ಯತೆಯು ಬಹು ದೊಡ್ಡ ವಿಷಯವಾಗಿ ಕಾಣ ಸಿಗುತ್ತದೆ ಮತ್ತು ದೇವರು ತನ್ನ ಸಭೆಯ ವಿಷಯವಾಗಿ ಹೊಂದಿರುವಂತ ಭಾರವು ಕೂಡ ಇದೆಯಾಗಿದೆ. ಮಾನವನ ದೇಹ ಸತ್ತಾಗ, ಕೊಳೆಯಲು ಪ್ರಾರಂಭಿಸುತ್ತದೆ. ನಮ್ಮ ದೇಹವು ಧೂಳಿನಿಂದ ಮಾಡಲ್ಪಟ್ಟಿದೆ ಮತ್ತು ದೇಹದಲ್ಲಿ ಜೀವವಿರುವ ಕಾರಣದಿಂದಾಗಿ ಈ ಧೂಳಿನ ಕಣಗಳು ಒಟ್ಟಾಗಿ ಸೇರಿಕೊಂಡಿವೆ. ಜೀವ ಹೋದ ಮರುಕ್ಷಣವೇ, ಕೊಳೆಯುವಿಕೆ ಪ್ರಾರಂಭವಾಗುತ್ತದೆ ಹಾಗೂ ಸ್ವಲ್ಪ ಸಮಯದ ನಂತರ ಇಡೀ ದೇಹವು ಧೂಳಿನ ಕಣಗಳೊಂದಿಗೆ ಸೇರಿಕೊಳ್ಳುವುದನ್ನು ನಾವು ಕಂಡುಕೊಳ್ಳುತ್ತೇವೆ. ವಿಶ್ವಾಸಿಗಳ ಅನ್ಯೋನ್ಯತೆಯಲ್ಲಿಯೂ ಸಹ ಇದೇ ರೀತಿಯಾಗಿದೆ. ಸಭೆಯಲ್ಲಿರುವಂತ ವಿಶ್ವಾಸಿಗಳು ಐಕ್ಯತೆಯಿಂದ ಇಲ್ಲದಿರುವಾಗ, ನಾವು ನಿಶ್ಚಯಪಡಿಸಿಕೊಳ್ಳಬೇಕು ಸಾವು ಆಗಲೇ ಒಳಗೆ ಬಂದಿದೆ. ಗಂಡ ಮತ್ತು ಹೆಂಡತಿ ಐಕ್ಯತೆಯಿಂದ ಇಲ್ಲದಿರುವಾಗ ಅವರು ವಿಚ್ಚೇದನ ಕೊಡದಿದ್ದರೂ ಸಹ, ಸಾವು ಆಗಲೇ ಪ್ರವೇಶಿಸಿದೆಯೆಂದು ನಿಮಗೆ ತಿಳಿದಿರಲಿ. ವಿಭಜನೆಯು(ಬೇರ್ಪಡುವಿಕೆಯು) ಮದುವೆಯಾದ ನಂತರದ ಮೊದಲ ದಿನದಿಂದಲೇ ಪ್ರಾರಂಭವಾಗುತ್ತದೆ. ಹೇಗೆಂದರೆ - ತಪ್ಪಾಗಿ ಅರ್ಥೈಸಿಕೊಳ್ಳುವಿಕೆಯಿಂದ, ಒತ್ತಡ ಮತ್ತು ಗಲಾಟೆಗಳಿಂದಾಗಿ. ಇದು ಸಭೆಯಲ್ಲಿಯೂ ಸಂಭವಿಸುತ್ತದೆ. ಒಂದು ಸಭೆ ಸಾಮಾನ್ಯವಾಗಿ ಕೆಲವು ಹುರುಪಿನಿಂದ ಮತ್ತು ಅತ್ಯಾಸಕ್ತಿಯಿಂದಿರುವ ಸಹೋದರರು ಒಟ್ಟಾಗಿ ಅತ್ಯಾಸಕ್ತಿಯಿಂದ ಬಂದು, ಕರ್ತನಿಗಾಗಿ ಶುದ್ಧ ಸೇವೆಯನ್ನು ಮಾಡುವುದರಿಂದ ಸಭೆಯನ್ನು ಕಟ್ಟುತ್ತಾರೆ. ಆದರೆ ಆದಷ್ಟು ಬೇಗ ಐಕ್ಯತೆಯ ಕೊರತೆಯಿಂದ ಮರಣ(ಸಾವು) ಒಳಗೆ ಪ್ರವೇಶಿಸುತ್ತದೆ. ಸಭೆ ಮತ್ತು ಮದುವೆ, ಈ ಎರಡರಲ್ಲಿಯೂ ಸಹ - ”ಆತ್ಮದಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳಲು” ಹೋರಾಟ ಮಾಡುವವರಾಗಬೇಕು.

ಮಾನವನ ದೇಹದ ಅಧ್ಬುತವಾದ ಸಂಗತಿ ಏನೆಂದರೆ - ಮಣ್ಣಿನ ಕಣಗಳಿಂದ ಮಾಡಲ್ಪಟ್ಟ ಈ ದೇಹದಲ್ಲಿ ಎಲ್ಲಾ ಕಣಗಳು ಜೋಡಿಸಲ್ಪಟ್ಟಂತ: ರೀತಿಯನ್ನು ಗಮನಿಸುವುದಾದರೆ ಜೋಡಣೆ ಎಲ್ಲಿ ಇದೆಯೆಂದು ಹುಡುಕಿದರೆ ಕಾಣಸಿಗುವುದಿಲ್ಲ. ದೇಹವು ಗಾಯಗೊಂಡಿದ್ದರೆ, ಚರ್ಮವನ್ನು ಮುಚ್ಚಲು ದೇಹವು ತಕ್ಷಣಕ್ಕೆ ಕೆಲವೊಂದು ಕಾರ್ಯಗಳನ್ನು ಪ್ರಾರಂಭಿಸುತ್ತದೆ. ಚರ್ಮದಲ್ಲಿ ಸೀಳು ಮತ್ತು ತೆರೆದಿರುವುದನ್ನು ದೇಹವು ಇಷ್ಟಪಡುವುದಿಲ್ಲ. ಚರ್ಮದ ಬೆರ್ಪಟ್ಟ ಭಾಗಗಳು ಒಟ್ಟಾಗುವಂತೆ ಇದು ತನ್ನ ಕೆಲಸವನ್ನು ತಕ್ಷಣವೇ ಪ್ರಾರಂಭಿಸುತ್ತದೆ. ಅದೇ ರೀತಿ ಎಲುಬು ಮುರಿದಾಗಲೂ ಸಹ. ದೇಹವು ತಕ್ಷಣವೇ ಅದನ್ನು ಒಟ್ಟುಗೂಡಿಸಲು ಕಾರ್ಯನಿರತವಾಗುತ್ತದೆ . ಈ ಲೋಕದಲ್ಲಿ ಯಾವುದೇ ಮನುಷ್ಯನು ಎರಡು ಎಲುಬುಗಳನ್ನು ಒಟ್ಟಾಗಿ ಜೋಡಿಸಲು ಆಗುವುದಿಲ್ಲ. ವೈದ್ಯರು ಮುರಿದ ಎಲುಬುಗಳ ಭಾಗಗಳನ್ನು ಕೇವಲ ಒಟ್ಟಾಗಿ ಅವುಗಳ ಸ್ಥಳಗಳಲ್ಲಿ ಇಡಬಲ್ಲರು, ಆದರೆ ದೇಹವು ತಾನೇ ಎರಡು ಭಾಗಗಳನ್ನು ಒಟ್ಟಾಗಿ ಜೋಡಿಸುತ್ತದೆ. ಮಾನವನ ದೇಹವು ಯಾವಾಗಲೂ ಒಗ್ಗಟ್ಟಿನ ಕಡೆಗೆ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಕ್ರಿಸ್ತನ ದೇಹವು ಸಹ ಕಾರ್ಯೋನ್ಮುಖವಾಗಿರಬೇಕು(ಕಾರ್ಯ ನಿರ್ವಹಿಸಬೇಕು). ಒಂದು ಸಭೆಯು ಆ ರೀತಿಯಾಗಿ ಕಾರ್ಯ ಮಾಡುತ್ತಿಲ್ಲವೆಂದಾದರೆ, ಸಭೆಯು ಕ್ರಿಸ್ತನ ದೇಹವನ್ನು ಪ್ರತಿನಿಧಿಸುತ್ತಿಲ್ಲ ಎಂದರ್ಥ.

ದೇವರು ಪರಿಶುದ್ಧರಾದ ಕೆಲವು ವ್ಯಕ್ತಿಗಳನ್ನು ಕಟ್ಟುತ್ತಿಲ್ಲ. ಆತನು ದೇಹವನ್ನು ಕಟ್ಟುತ್ತಿದ್ದಾನೆ. ಎಫೆಸ 4:1-3 ರಲ್ಲಿ ಪೌಲನು ಇದರ ಬಗ್ಗೆ ಹೇಳುತ್ತಾನೆ. ಪೌಲನು ನಮಗೆ ”ಒಂದೇ ದೇಹವಾಗಿರುವುದರಿಂದ ಆತ್ಮನ ಐಕ್ಯತೆ ಸಂರಕ್ಷಿಸುವಂತೆ ” ಒತ್ತಾಯಿಸುತ್ತಿದ್ದಾನೆ. ಸ್ಥಳೀಯ ದೇಹದಲ್ಲಿ (ಸಭೆ) ಐಕ್ಯತೆ ಇದೆ ಎಂದು ಹೇಳುವುದು ಯಾವಾಗ? ”ಸಮಾಧಾನದ ಬಂಧನದಲ್ಲಿರುವಾಗ” (ಎಫೆಸ4:3) . ”ಆತ್ಮನ ಮನಸ್ಸು ಸಮಾಧಾನವಾಗಿದೆ” (ರೋಮ 8:6) . ನೀವು ಸಭೆಯಲ್ಲಿನ ಒಬ್ಬ ಸಹೋದರ ಮತ್ತು ಸಹೋದರಿ ಬಗ್ಗೆ ಯೋಚಿಸುವಾಗ, ಆ ಸಹೋದರ ಮತ್ತು ಸಹೋದರಿಯ ಕಡೆಗೆ ನಿಮ್ಮ ಯೋಚನೆಗಳು ಸಮಾಧಾನದ ಹಾಗೂ ವಿಶ್ರಾಂತಿ ಆಲೋಚನೆಯಿಂದ ಕೂಡಿದ್ದರೆ, ಆಗ ನೀವು ಗೊತ್ತು ಮಾಡಿಕೊಳ್ಳಬೇಕು, ನಿಮ್ಮ ಮತ್ತು ಆ ವ್ಯಕ್ತಿಯ ಮಧ್ಯೆ ಐಕ್ಯತೆ ಇದೆ ಎಂಬುದಾಗಿ. ಆದರೆ ನೀವು ಆ ವ್ಯಕ್ತಿಯ ಬಗ್ಗೆ ಯೋಚಿಸುವಾಗ, ನೀವು ಸ್ವಲ್ಪವಾದರೂ ಕಲಕಿದಂತೆ ಮತ್ತು ಕಷ್ಟವೇನಿಸಿದರೆ, ಆಗ ನೀವು ನಿಶ್ಚಯಪಡಿಸಿಕೊಳ್ಳಬೇಕು ಆ ವ್ಯಕ್ತಿಯೊಟ್ಟಿಗೆ ಐಕ್ಯತೆಯಿಲ್ಲ. ನೀವು ಆ ವ್ಯಕ್ತಿಯನ್ನು ”ದೇವರಿಗೆ ಸ್ತೋತ್ರ” ಎಂದು ಹೇಳಿ ಸ್ವಾಗತಿಸಬಹುದು, ಕುಶಲೊಪರಿ ವಿಚಾರಿಸಬಹುದು. ಆದರೆ ಅದು ಕಪಟಿತನವಾಗಿದೆ. ಐಕ್ಯತೆಗೆ ಸಮಾಧಾನವು ಪರೀಕ್ಷೆಯಾಗಿದೆ. ಹಾಗಾಗಿ ಆತ್ಮನ ಐಕ್ಯತೆಯು ಸಮಾಧಾನದ ಬಂಧನದಲ್ಲಿ ಸಂರಕ್ಷಣೆಯಿಂದ ಇರಬೇಕು.