WFTW Body: 

ಅನೇಕ ಸಾವಿರಾರು ವರ್ಷಗಳ ಹಿಂದೆ ಯೇಸು ಈ ಲೋಕಕ್ಕೆ ಬಂದರು, ಜ್ಞಾನದಲ್ಲಿ ಮತ್ತು ಸುಂದರತೆಯಲ್ಲಿ ಪರಿಪೂರ್ಣನಾಗಿದ್ದಂತಹ ದೂತನಾದ ಲೂಸಿಫರನನ್ನು ದೇವರು ಸೃಷ್ಠಿ ಮಾಡಿದರು. ಲೂಸಿಫರನು ಎಲ್ಲಾ ದೂತರ ಮೇಲೆ ಮುಖ್ಯಸ್ಥನಾಗಿ ದೇವರಿಂದ ನೇಮಕಗೊಂಡನು. ಆದರೆ, ಲೂಸಿಫರನು ಗರ್ವದಲ್ಲಿ ಮೆರೆದನು ಮತ್ತು ತನಗೆ ನೇಮಕವಾದ ಸ್ಥಾನದಲ್ಲಿ ಹೆಚ್ಚು ಅತೃಪ್ತನಾಗಿದ್ದನು. ಲೂಸಿಫರನು ಅತೀ ಉನ್ನತ ಸ್ಥಾನಕ್ಕೆ ಹೋಗಲು ಬಯಸಿದನು ಮತ್ತು ತನ್ನನ್ನು ತಾನು ಹೆಚ್ಚಿಸಿಕೊಂಡು, ಉಬ್ಬಿದ ಮನಸ್ಸುಳ್ಳವನಾದನು (ಯೆಹಜ್ಕೇಲ 28:11-17; ಯೆಶಾಯ 14:12-15). ಇದರ ಮೂಲಕ ದೇವರ ಸೃಷ್ಠಿಯೊಳಗೆ ಪಾಪವನ್ನು ತಂದನು. ದೇವರು ತಕ್ಷಣವೇ ಆತನನ್ನು ಪಾತಳಕ್ಕೆ ತಳ್ಳಿದರು ಮತ್ತು ಆತನು ಸೈತಾನನಾದನು. ಗರ್ವವು ಪ್ರತಿಯೊಂದು ಪಾಪದ ಮೂಲವಾಗಿದೆ ಮತ್ತು ಈ ವಿಶ್ವದಲ್ಲಿಯೇ ಕೆಡುಕಾಗಿದೆ. ಆದಾಮನು ಪಾಪ ಮಾಡಿದಾಗ, ಆತನು ಸಹ ಈ ಸೈತಾನನ ಗರ್ವವೆಂಬ ರೋಗವನ್ನು ಹತ್ತಿಸಿಕೊಂಡನು. ಪ್ರಸ್ತುತ ಆದಾಮನಿಂದ ಜನನಗೊಂಡ ಪ್ರತಿ ಮಗುವು ಈ ಒಂದು ಗರ್ವವೆಂಬ ಸೊಂಕಿನಿಂದ ತಗಲಿಕೊಂಡು ಹುಟ್ಟುತ್ತದೆ. ಈ ಒಂದು ಗರ್ವವೆಂಬ ವಿಷದಿಂದ ಮನುಷ್ಯನನ್ನು ಬಿಡಿಸಲು, ಯೇಸು ತಮಗೆ ತಾವೇ ದೀನರಾದರು. ಲೂಸಿಫರನ ಗರ್ವದಲ್ಲಿ ಪಾಪವು ಉತ್ಪತ್ತಿ ಆದ ಹಾಗೆ, ನಮ್ಮ ಬಿಡುಗಡೆಯೂ ಯೇಸುವಿನ ಸ್ವಯಂ ದೀನತೆಯಲ್ಲಿ ಜನನವಾಗಿದೆ. ನಾವು ಕ್ರಿಸ್ತನ ಮನಸ್ಸನ್ನು ಹೆಚ್ಚು ಹೊಂದಿದ ಹಾಗೇ, ಆತನ ದೀನತೆಯನ್ನು ನಾವು ಹೆಚ್ಚು ಹೊಂದುತ್ತೇವೆ. ಇದು ಆತ್ಮೀಕ ಬೆಳವಣಿಗೆಗೆ ನಿಶ್ಚಯವಾಗಿ ಮಾನದಂಡವಾಗಿದೆ.

ಪರಲೋಕದ ಮಹಿಮೆಯಿಂದ ಈ ಲೋಕಕ್ಕೆ ಬಂದ ಯೇಸುವಿನಲ್ಲಿಯೇ ಆತನ ದೀನತೆಯ ಆಶ್ಚರ್ಯಕರವಾದ ನಿದರ್ಶನವಿದೆ. ಆದರೆ ಮುಂದೆ ನಮಗೆ ಈ ರೀತಿಯಾಗಿ ಹೇಳಲ್ಪಟ್ಟಿದೆ, ”ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡನು” (ಪಿಲಿಪ್ಪಿ 2:8), ”ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು” (ಇಬ್ರಿಯ 2:17). ಆತನು ದೇವರ ಎದುರಿಗೆ ತನ್ನ ಸ್ಥಾನವನ್ನು ತೆಗೆದುಕೊಂಡು ಎಲ್ಲಾ ಮನುಷ್ಯರಂತೆ ಆದನು. ಆತನು ಏನು ಇಲ್ಲದವನಾದನು, ಇದರ ಮೂಲಕ ದೇವರು ಎಲ್ಲವೂ ಆದರು. ಇದು ನಿಜವಾದ ದೀನತೆ. ಯೇಸು ತಮ್ಮನ್ನ ತಾವು ಮನುಷ್ಯರೊಟ್ಟಿಗೆ ಗುರುತಿಸಿಕೊಂಡರು. ಎಲ್ಲಾ ಮಾನವರ ಸಮಾನತೆಯ ಅಗತ್ಯತೆಯಲ್ಲಿ ಯೇಸು ನಂಬಿಕೆ ಇಟ್ಟಿದ್ದರು, ಅಂದರೆ, ಜೀವನವೆಂಬ ಓಟದ ಹೊರತಾಗಿಯೂ, ಕುಟುಂಬ, ಜೀವಿತದಲ್ಲಿನ ಸ್ಥಾನ ಹಾಗೂ ಇನ್ನಿತರೆಗಳಲ್ಲಿ ಯೇಸು ನಂಬಿಕೆ ಇಟ್ಟಿದ್ದರು ಮತ್ತು ಸಮಾಜದಲ್ಲಿ ಕೊನೆ ಸ್ಥಾನವನ್ನು ತೆಗೆದುಕೊಂಡರು ಹಾಗೂ ಕೆಳಮಟ್ಟದಲ್ಲಿ ಗುರುತಿಸಿಕೊಂಡರು. ಅಂದರೆ ಎಲ್ಲರಿಗಿಂತ ಕೆಳಗೆ ಬಂದರು. ಇದರಿಂದ ಯೇಸು ಎಲ್ಲರ ಸೇವಕರಾಗಬೇಕಾಗಿ ಬಂತು. ಇದು, ಕೇವಲ ಒಬ್ಬನು ಮತ್ತೊಬ್ಬರ ಕೆಳಗೆ ಬಂದಾಗ ಮಾತ್ರ ಇನ್ನೊಬ್ಬರನ್ನು ಮೇಲೆ ಎತ್ತಲು ಸಾಧ್ಯ. ಅದೇ ರೀತಿಯಾಗಿ ಯೇಸು ಬಂದರು.

ಮೂವತ್ತು ವರ್ಷಗಳ ಕಾಲ, ಯೇಸು ತನ್ನ ಪೋಷಣೆ ಮಾಡುವಂತ ಅಪರಿಪೂರ್ಣ ತಂದೆ -ತಾಯಿಗೆ ಅಧೀನನಾದನು - ಏಕೆಂದರೆ ಇದು ತನ್ನ ತಂದೆಯ ಚಿತ್ತವಾಗಿತ್ತು. ಯೋಸೇಫ ಮತ್ತು ಮರಿಯಳಿಗಿಂತ ಯೇಸು ಹೆಚ್ಚು ಅರಿತಿದ್ದನು ಮತ್ತು ಪಾಪರಹಿತನಾಗಿದ್ದನು, ತಂದೆ-ತಾಯಿಯಂತೆ ಇರಲಿಲ್ಲ. ಹಾಗಿದ್ದರೂ ಅವರಿಗೆ ಅಧೀನನಾದನು. ಒಬ್ಬ ಮನುಷ್ಯನು ತನ್ನ ಬುದ್ದಿಶಕ್ತಿಗಿಂತ ಮತ್ತು ಆತ್ಮೀಕತೆಗಿಂತ ಕೆಳಗಿರುವಂತವರಿಗೆ ಅಧೀನನಾಗುವುದು ಸುಲಭವಾದ ಮಾತಲ್ಲ. ಆದರೆ ನಿಜವಾದ ದೀನತೆಗೆ ಇಲ್ಲಿ ಯಾವುದೇ ತೊಂದರೆ ಇಲ್ಲ - ದೇವರ ದೃಷ್ಠಿಯಲ್ಲಿ ನಾನೇನೂ ಅಲ್ಲ ಎಂದು ಯಾರು ಪರಿಗಣಿಸಿರುತ್ತಾರೋ, ಅಂಥವರಿಗೆ ದೇವರು ನೇಮಿಸಿರುವಂತ ಯಾರಿಗೆ ಆಗಲಿ ಅಧೀನರಾಗಲು ಯಾವುದೇ ಕಷ್ಟ ಇರುವುದಿಲ್ಲ.

ಯೇಸು ಮೆಚ್ಚುಗೆಯನ್ನು ವ್ಯಕ್ತ ಪಡಿಸದಂತ ಉದ್ಯೋಗವನ್ನು ಅರಿಸಿಕೊಂಡರು - ಅದು ಬಡಿಗನಾಗಿ. ಮತ್ತು ಯೇಸು ತನ್ನ ಸಾರ್ವಜನಿಕ ಸೇವೆಯೊಳಗೆ ಪ್ರವೇಶಿಸಿದಾಗ, ಅವರ ಹೆಸರಿಗೆ ಯಾವುದೇ ಹಿಂದು-ಮುಂದಾಗಲಿ ಇರಲಿಲ್ಲ. ಅವರು ”ಪಾಸ್ಟರ್ ಯೇಸು” ಆಗಿರಲಿಲ್ಲ. ಅವರು ”ಗೌರವಾನ್ವಿತ ಡಾಕ್ಟರ್ ಯೇಸು'' ಆಗಿರಲಿಲ್ಲ! ಯೇಸು ಎಂದಿಗೂ ಲೋಕದ ಸ್ಥಾನಗಳಿಗಾಗಿ ಹುಡುಕಲಿಲ್ಲ ಅಥವಾ ಆತನು ಯಾರಿಗೆ ಸೇವೆ ಮಾಡಲು ಬಂದನೋ, ಇಂತಹ ಸಾಮಾನ್ಯ ಮನುಷ್ಯರಿಗಿಂತ ಮೇಲೆ ಎತ್ತಲ್ಪಡುವ ಶಿರೋನಾಮೆಯನ್ನು ಬಯಸಲಿಲ್ಲ ಮತ್ತು ಅದಕ್ಕಾಗಿ ಹುಡುಕಲಿಲ್ಲ. ಯಾರಿಗೆ ಕಿವಿ ಇದೆಯೋ, ಅವರು ಕೇಳಿಕೊಳ್ಳಲಿ.

ಒಂದು ಸಲ ಗುಂಪೊಂದು ಹಿಂಡಾಗಿ ಆತನ ಹಿಂದೆ ಬರುವಾಗ ಮತ್ತು ಆತನನ್ನು ರಾಜನನ್ನಾಗಿ ಮಾಡಬೇಕೆಂದು ಬಯಸುವಾಗ, ಯೇಸು ಅವರಿಂದ ಮೆಲ್ಲಗೆ ತಪ್ಪಿಸಿಕೊಂಡನು (ಯೋಹಾನ 6:15). ತಾನು ಕೇವಲ ”ಮನುಷ್ಯನ ಮಗ” ಎಂಬುದಾಗಿ ಅರಿತಿರಬೇಕೆಂದು ಬಯಸಿದನು. ಯೇಸು ಎಂದಿಗೂ ಜನರ ಸನ್ಮಾನದ ಬಗ್ಗೆ ಗಮನ ಹರಿಸಲಿಲ್ಲ ಅಥವಾ ಅದನ್ನು ಹುಡುಕಲಿಲ್ಲ. ಯೇಸು ತನ್ನ ತಂದೆಯ ಎದುರಿಗೆ ಮಾತ್ರ ಬದುಕಿದರು. ಮತ್ತು ಯೇಸು ತಮ್ಮ ಜೀವಿತಾವಧಿ ಪೂರಾ ಜನರಿಂದ ತಿರಸ್ಕ್ರತಗೊಳ್ಳುವುದರಲ್ಲಿ ಮತ್ತು ಅವರಿಂದ ಅಲಕ್ಷ್ಯಗೊಳಪಡುವುದರಲ್ಲಿ ತೃಪ್ತರಾಗಿದ್ದರು. ಯೇಸುವಿಗೆ ತಂದೆಯ ಅಭಿಪ್ರಾಯ ಮತ್ತು ಅವರ ಒಪ್ಪಿಗೆ ಮಾತ್ರ ಮುಖ್ಯ ವಿಷಯವಾಗಿತ್ತು.

ಯೇಸು ತಮ್ಮ ಜೀವಿತಾವಧಿ ಪೂರಾ ಪದೇ ಪದೇ ಕೆಳಗೆ ಹೋಗುತ್ತಿದ್ದರು (ತಗ್ಗಿಸಿಕೊಂಡರು)

ಯೇಸುವಿನ ದೀನತೆಯು ಮತ್ತೊಬ್ಬರನ್ನು ತೀರ್ಪು ಮಾಡುವುದಕ್ಕೆ ಅನುಮತಿಸಲಿಲ್ಲ. ದೇವರೊಬ್ಬನೇ ಎಲ್ಲಾ ಮನುಷ್ಯರನ್ನು ತೀರ್ಪು ಮಾಡುವಾತನು; ಯಾರಾದರೂ ಮತ್ತೊಬ್ಬರನ್ನು ತೀರ್ಪು ಮಾಡಿದರೆ, ದೇವರ ಸ್ಥಾನವನ್ನು ಅಕ್ರಮಿಸಿಕೊಂಡಂತಾಗುತ್ತದೆ. ದೇವರೊಬ್ಬನೇ ತೀರ್ಪು ಮಾಡುವಂತ ಸ್ಥಾನವನ್ನು ಹೊಂದಿರುವಾತನು. ಲೋಕದಲ್ಲಿ ಮನುಷ್ಯನಾಗಿ, ಯೇಸು ಹೇಳಿದ್ದು, ”ನಾನು ಯಾವನಿಗೂ ತೀರ್ಪು ಮಾಡುವುದಿಲ್ಲ” (ಯೋಹಾನ 8:15). ಯೇಸು ಎಲ್ಲಾ ತೀರ್ಪುಗಳನ್ನು ತನ್ನ ತಂದೆಗೆ ಒಪ್ಪಿಸಿದರು. ಇಲ್ಲಿಯೂ ಸಹ ಯೇಸುವಿನ ದೀನತೆಯ ಸುಂದರತೆಯನ್ನು ನಾವು ನೋಡಬಹುದು.

ಯೇಸು ತನ್ನ ಶಿಷ್ಯಂದಿರೊಂದಿಗೆ ಪ್ರಾರ್ಥನೆಯಲ್ಲಿ ಅನ್ಯೋನ್ಯತೆ ಮಾಡುವುದನ್ನು ಹುಡುಕುವುದರಲ್ಲಿ ಆತನ ದೀನತೆಯನ್ನು ನಾವು ನೋಡಬಹುದು. ಗೆತ್ಸೆಮನೆ ತೋಟದಲ್ಲಿ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತನ್ನೊಟ್ಟಿಗೆ ಪ್ರಾರ್ಥನೆ ಮಾಡುವಂತೆ ಕೇಳಿಕೊಂಡನು. ಏಕೆಂದರೆ ಆತನ ಪ್ರಾಣವು ”ಸಾಯುವಷ್ಟು ದು:ಖಕ್ಕೆ ಒಳಗಾಗಿತ್ತು” (ಮತ್ತಾಯ 26:28). ತನ್ನನ್ನು ಹಿಡಿದುಕೊಂಡು ಹೋಗಬೇಕಾಗಿದ್ದ ವಿಷಯದಲ್ಲಿ, ಯೇಸು ತನ್ನ ಶರೀರದ ಪೂರ್ಣ ಬಲಹೀನತೆಯ ಪರಿಜ್ಞಾನವನ್ನು ಹೊಂದಿದ್ದನು. ಅದಕ್ಕಾಗಿಯೇ ಆತನು ಪ್ರಾರ್ಥನೆಯಲ್ಲಿ ಅವರ ಅನ್ಯೋನ್ಯತೆಯನ್ನು ಹುಡುಕಿದನು.

ಏಕೆಂದರೆ, ಯೇಸು ತಮ್ಮನ್ನತಾವು ದೀನರಾಗಿಸಿಕೊಂಡರು. ಅದಕ್ಕಾಗಿಯೇ ದೇವರು ಯೇಸುವನ್ನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ಏರಿಸಿದರು (ಪಿಲಿಪ್ಪಿ 2:9). ಯಾರು ದೀನತೆಯ ಮಾರ್ಗದಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಹೋಗುತ್ತಾರೋ, ಅವರು ಯೇಸುವಿನ ಬಲಗಡೆ ಮತ್ತು ಎಡಗಡೆ ಮಹಿಮೆಯಲ್ಲಿ ಕುಳಿತುಕೊಳ್ಳುತ್ತಾರೆ. ಯೇಸು ತಮ್ಮ ಜೀವಿತಾವಧಿ ಪೂರಾ ಪದೇ ಪದೇ ಕೆಳಗೆ ಹೋಗುತ್ತಿದ್ದರು (ತಗ್ಗಿಸಿಕೊಂಡರು). ಅವರು ಪರಲೋಕದಿಂದ ಬಂದರು ಮತ್ತು ಪದೇ ಪದೇ ಕೆಳಗೆ, ಕೆಳಗೆ, ಕೆಳಗೆ ಹೋಗುತ್ತಿದ್ದರು, ಅದು ಶಿಲುಬೆಯ ಮರಣದವರೆಗೂ. ಎಂದಿಗೂ ಸಹ ಯೇಸು ಈ ದೀನತೆ ಎಂಬ ದಿಕ್ಕನ್ನು ಬದಲಾಯಿಸಿ, ಮೇಲಕ್ಕೆ ಹೋಗುವಂತ ದಿಕ್ಕಿಗೆ ಹಿಂತಿರುಗಲಿಲ್ಲ.

ಇಂದು ಈ ಲೋಕದಲಿ ಎರಡು ಆತ್ಮಗಳು ಕಾರ್ಯನಿರ್ವಹಿಸುತ್ತಿವೆ. ಒಂದು, ಸೈತಾನನ ಆತ್ಮ (ಲೂಸಿಫರ) ಜನರನ್ನು ಮೇಲೆಕ್ಕೆ ಹೋಗುವಂತೆ ಕೇಳಿಕೊಳ್ಳುತ್ತಿದ್ದಾನೆ - ಅದು ಲೋಕದಲ್ಲಿರಬಹುದು ಅಥವಾ ಕ್ರೈಸ್ತತ್ವದಲ್ಲಿಯೂ ಇರಬಹುದು. ಮತ್ತೊಂದು, ಕ್ರಿಸ್ತನ ಆತ್ಮ, ಇದು ಜನರನ್ನು ಅವರ ಗುರುವಿನ ರೀತಿಯಾಗುವಂತೆ (ಯೇಸುವಿನಂತೆ) ನಡೆಸುತ್ತಿದೆ. ಗೋಧಿ ಕಾಳಿನ ರೀತಿ, ಯೇಸು ಕೆಳಗೆ ಹೋದರು, ಮತ್ತು ಆತನ ಎಲ್ಲಾ ನಿಜವಾದ ಶಿಷ್ಯಂದಿರು ಈ ಗುಣಲಕ್ಷಣದಿಂದ ತಪ್ಪಿಹೋಗದಂತೆ ಗುರುತಿಸಿಕೊಳ್ಳುತ್ತಾರೆ.

ಯೇಸುವಿನ ದೀನತೆಯು ಆತನ ಮರಣದಲ್ಲಿನ ಪ್ರಕಾಶಮಾನದಲ್ಲಿ ಕಾಣ ಸಿಗುತ್ತದೆ. ಯೇಸು ಹಾದುಹೋದಂತ ಅನ್ಯಾಯದ ಸಂಕಟಕ್ಕಿಂತ ಬೇರೆ ಸಂಕಟ ಮತ್ತೊಂದಿಲ್ಲ. ಹಾಗಿದ್ದರೂ, ಯೇಸು ಗಾಯಕ್ಕೆ, ಅವಮಾನಕ್ಕೆ, ನ್ಯಾಯ ಸಿಗದೇ ಇದ್ದುದ್ದಕ್ಕೆ, ಗೌರವ ಕಳೆಯುವಿಕೆಗೆ ಮತ್ತು ಅಪಹಾಸ್ಯಕ್ಕೆ ಮೌನವಾಗಿ ಅಧೀನರಾದರು. ಯೇಸು ತನ್ನ ಶತ್ರುಗಳ ಮೆಲೆ ಶಾಪವನ್ನು ಬರಮಾಡಲಿಲ್ಲ. ಯೇಸು ಸೇಡಿನ ಮನೋಭಾವವನ್ನು ತೋರಲಿಲ್ಲ ಅಥವಾ ತನ್ನ ಸಹಾಯಕ ದೂತರನ್ನು ಕರೆಕಳುಹಿಸಲಿಲ್ಲ. ಯೇಸು ದೇವರ ಮಗನಾಗಿರುವಂತ ಎಲ್ಲಾ ಹಕ್ಕನ್ನು ಬಿಟ್ಟುಕೊಟ್ಟರು. ”ಹಲ್ಲು ಕಚ್ಚಿ ಮುಷ್ಟಿ ಹಿಡಿಯುವುದು” ಮಾನವನ ಓಟಕ್ಕೆ ಸರಿಯಾದ ಗುರುತಾಗಿದೆ - ಇದು ಏನನ್ನು ತೋರಿಸುತ್ತದೆ ಎಂದರೆ - ಒಬ್ಬರ ಹಕ್ಕುಗಳನ್ನು, ಬಲಗಳನ್ನು ಮತ್ತು ಸ್ವತ್ತುಗಳನ್ನು ಹಿಡಿದುಕೊಳ್ಳುವ ಬಯಕೆ ಹೊಂದಿರುವುದನ್ನು ಸೂಚಿಸುತ್ತದೆ. ಅದು ಅಲ್ಲದೇ ನಾವು ಮತ್ತೊಬ್ಬರಿಂದ ಆಕ್ರಮಣಕ್ಕೆ ಒಳಗಾದಾಗ ಅವರೊಟ್ಟಿಗೆ ಕಾದಾಟ ಮಾಡುವುದು ನಮ್ಮ ಬಯಕೆಯಾಗಿರುತ್ತದೆ. ಮತ್ತೊಂದು ಕಡೆ ಯೇಸು, ಮನ:ಪೂರ್ವಕವಾಗಿ ತನ್ನ ಎರಡು ಹಸ್ತಗಳನ್ನು ಚಾಚಿ ಶಿಲುಬೆಯ ಮೇಲೆ ಮಳೆಗಳನ್ನು ಹೊಡೆಸಿಕೊಂಡನು. ಆತನ ಹಸ್ತಗಳು ಯಾವಗಲೂ ತೆರೆದೆರುತ್ತಿತ್ತು, ಆತನ ಹಸ್ತಗಳು ಯಾವಾಗಲೂ ನೀಡುತ್ತಿತ್ತು, ನೀಡುತ್ತಿತ್ತು ಮತ್ತು ನೀಡುತ್ತಿತ್ತು. ಕೊನೆಯದಾಗಿ ತನ್ನ ಸ್ವಂತ ಜೀವವನ್ನೇ ಬಿಟ್ಟು ಕೊಟ್ಟನು. ಇದು ನಿಜವಾದ ದೀನತೆ.