WFTW Body: 

ಇಬ್ರಿಯ 5:7ರಲ್ಲಿ, ಯೇಸುವು "ಭೂಲೋಕದಲ್ಲಿ ಇದ್ದಾಗ" ಯಾವ ರೀತಿ ಪ್ರಾರ್ಥಿಸಿದರೆಂದು ನಮಗೆ ತೋರಿಸಲಾಗಿದೆ. ಆತನು "ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಮರಣವನ್ನು ತಪ್ಪಿಸಿ ಕಾಪಾಡಲ್ಪಟ್ಟನು". ಇಲ್ಲಿ ಪ್ರಸ್ತಾವಿಸಲ್ಪಟ್ಟಿರುವುದು ಕೇವಲ ಆತನ ಜೀವಿತದ ಕೊನೆಯ ದಿನದಂದು ಆತನು ಗೆತ್ಸೇಮನೆ ತೋಟದಲ್ಲಿ ಮಾಡಿದ ಪ್ರಾರ್ಥನೆಯಲ್ಲ. ಸತ್ಯವೇದದಲ್ಲಿ ದೇವರ ಮಾತುಗಳು ಬಹಳ ನಿಖರವಾದವು ಆಗಿವೆ - ಇಲ್ಲಿ ಆತನು ತನ್ನ"ಭೂಲೋಕದ ದಿನಗಳಲ್ಲಿ" (KJV - English ಭಾಷಾಂತರ) ಹೀಗೆ ಪ್ರಾರ್ಥಿಸಿದನು, ಎಂದು ಹೇಳಲ್ಪಟ್ಟಿದೆ. "ದಿನಗಳು" ಎಂದರೆ, ಆತನ ಭೂಮಿಯ ಸಂಪೂರ್ಣ ಜೀವಿತದ 33 1/2 ವರ್ಷಗಳು. ಯೇಸುವು ಮರಣದಿಂದ ಕಾಪಾಡಲ್ಪಡವುದಕ್ಕಾಗಿ ಪ್ರಾರ್ಥಿಸಿದ್ದು (ಮತ್ತು ಆತನ ಪ್ರಾರ್ಥನೆ ಕೇಳಲ್ಪಟ್ಟಿತು, ಎಂದೂ ಸಹ ಆ ವಚನ ತಿಳಿಸುತ್ತದೆ) ನಿಶ್ಚಯವಾಗಿ ದೈಹಿಕ ಮರಣದಿಂದಲ್ಲ, ಆದರೆ ಆತ್ಮಿಕ ಮರಣದಿಂದ ಆಗಿತ್ತು (ಆ ಮರಣ ಕೇವಲ ಒಂದು ಪಾಪ ಮಾಡಿದರೂ ಸಹ ಪ್ರಾಪ್ತವಾಗುತ್ತದೆ). ಯೇಸುವಿನ ಪ್ರಾರ್ಥನೆ, ತಾನು ಒಂದು ಪಾಪವನ್ನೂ ಸಹ ಮಾಡಬಾರದು, ಎಂದಾಗಿತ್ತು. ಇದಕ್ಕಾಗಿ ಆತನ ಯಥಾರ್ಥತೆ ಎಷ್ಟು ತೀಕ್ಷ್ಣವಾಗಿತ್ತು ಎಂದರೆ, ಆತನು ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಇದಕ್ಕಾಗಿ ಸಹಾಯವನ್ನು ಯಾಚಿಸಿದನು. ಆತನು ಒಂದು ಪಾಪವನ್ನೂ ಮಾಡದೇ ಇದ್ದುದರ ರಹಸ್ಯ ಇದಾಗಿತ್ತು. ಯೇಸುವು ದೇವಕುಮಾರನಾಗಿದ್ದನು, ಹಾಗಾಗಿ ಆತನು ಪಾಪವನ್ನು ಜಯಿಸಿದನು ಎಂದು ಅನೇಕರು ಅಂದುಕೊಳ್ಳುತ್ತಾರೆ. ಹಾಗಲ್ಲ. ಆತನು ಪಾಪವನ್ನು ಜಯಿಸಲು ಕಾರಣ ಆತನು ಪಾಪದಿಂದ ರಕ್ಷಣೆಗಾಗಿ ಜೋರಾಗಿ ಅಳುತ್ತಾ, ಕಣ್ಣೀರು ಸುರಿಸುತ್ತಾ ಮಾಡುತ್ತಿದ್ದ ಪ್ರಾರ್ಥನೆಯಾಗಿತ್ತು. ಆತನು ಧರ್ಮವನ್ನು ಬಹಳ ಹೆಚ್ಚಾಗಿ ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ, ಪೂರ್ಣ ಹೃದಯದಿಂದ ಪ್ರಾರ್ಥನೆ ಮಾಡುತ್ತಿದ್ದುದರಿಂದ, ಹೀಗೆ ಪ್ರಾಥಿಸದೇ ಇದ್ದ ಇತರ ವಿಶ್ವಾಗಳಿಗಿಂತ ಹೆಚ್ಚಾಗಿ, ಆತನನ್ನು ಆತನ ತಂದೆಯು ಪರಮಾನಂದ ತೈಲದಿಂದ ಅಭಿಷೇಕಿಸುವ ಮೂಲಕ ಆತನಿಗೆ ಬಲವನ್ನು ಒದಗಿಸಿದರು (ಇಬ್ರಿಯ 1:9).

ಹೆಚ್ಚಿನ ವಿಶ್ವಾಸಿಗಳು ಪಾಪವನ್ನು ಬಹಳ ಸಾಧಾರಣವಾಗಿ ಪರಿಗಣಿಸುತ್ತಾರೆ; ಅಷ್ಟೇ ಅಲ್ಲ, ತಾವು ಮಾನವರಾಗಿದ್ದೇವೆ, ಹಾಗಾಗಿ ಪಾಪವನ್ನು ಗೆಲ್ಲುವುದು ಅಸಾಧ್ಯವಾದ ಮಾತು ಅಂದುಕೊಳ್ಳುತ್ತಾರೆ. ಆದರೆ ಪಾಪ ಮಾಡುವದಕ್ಕೆ ಕಾರಣ ಅದಲ್ಲ. ಅದಕ್ಕೆ ಕಾರಣ, ’ಅವರು ಪಾಪದ ಹಿಡಿತದಿಂದ ಬಿಡುಗಡೆಗಾಗಿ ಬಲವಾಗಿ ಕೂಗುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ದೇವರಿಗೆ ಸಮರ್ಪಿಸುವುದಿಲ್ಲ’. ಯೇಸುವು ಆಗಾಗ ಅರಣ್ಯಪ್ರದೇಶಗಳಿಗೆ ಹೋಗಿ, ಈ ರೀತಿ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸಿ ಪ್ರಾರ್ಥಿಸುತ್ತಿದ್ದರು (ಲೂಕ 5:16). ಪಟ್ಟಣಗಳಲ್ಲಿ ವಾಸಿಸುವ ನಮಗೆ, ನಿರ್ಜನ ಪ್ರದೇಶಗಳು ಸುಲಭವಾಗಿ ಸಿಗುವುದಿಲ್ಲ. ಆದರೆ ನಾನು ಕಂಡುಕೊಂಡಿರುವುದು ಏನೆಂದರೆ, ನಾನು ಯಾವುದೇ ಸ್ಥಳದಲ್ಲಿ ಇದ್ದರೂ ಸಹ, ನನ್ನ ಬಾಯಿಯಿಂದ ಯಾವ ಧ್ವನಿಯನ್ನೂ ಹೊರಡಿಸದೆ, ನನ್ನ ಹೃದಯದೊಳಗೆ ಜೋರಾಗಿ ಕೂಗುತ್ತಾ ದೇವರಿಗೆ ಪ್ರಾರ್ಥನೆ ಮಾಡಲು ಸಾಧ್ಯವಿದೆ. ನನ್ನ ಅಲೋಚನೆ, ಮಾತು ಮತ್ತು ಕೃತ್ಯಗಳಲ್ಲಿ ಪರಿಶುದ್ಧತೆಗಾಗಿ ನಾನು ಕೂಗುತ್ತಾ ಹಂಬಲಿಸಲು ಸಾಧ್ಯವಿದೆ. ಅದಲ್ಲದೆ, ನಾನು ಯವುದೋ ಪಾಪದಲ್ಲಿ ಸಿಕ್ಕಿಬಿದ್ದಾಗ, ಪಶ್ಚಾತ್ತಾಪದ ಕಣ್ಣೀರನ್ನು ತಪ್ಪದೆ ಸುರಿಸುವುದಾಗಿ ನಿರ್ಧರಿಸಿದ್ದೇನೆ. ಯೇಸುವು ಯಾವುದೇ ಪಾಪಕ್ಕೆ ಸಿಕ್ಕಿ ಬೀಳದಿದ್ದರೂ ಕಣ್ಣೀರನ್ನು ಸುರಿಸಿದರು. ನಾನು ಈ ವಿಷಯವನ್ನು ಅರಿತು ನನ್ನನ್ನು ಬಹಳವಾಗಿ ತಗ್ಗಿಸಿಕೊಂಡಿದ್ದೇನೆ. ಪರಿಶುದ್ಧತೆಗಾಗಿ ಯೇಸುವಿನಲ್ಲಿ ಬಹಳ ತವಕವಿತ್ತು ಮತ್ತು ಇದು ಆತನ ಹೃದಯವನ್ನು ಸುಡುತ್ತಿತ್ತು. ಹಾಗಾಗಿ ಆತನು ಭೂಮಿಯ ಮೇಲೆ ದೇವರ ಸಂಪೂರ್ಣ ಚಿತ್ತವನ್ನು ನೆರವೇರಿಸಲು ಸಾಧ್ಯವಾಯಿತು.

ಪವಿತ್ರಾತ್ಮನ ಸಂಪೂರ್ಣ ತುಂಬುವಿಕೆಯು ನಮ್ಮಲ್ಲಿ ಪರಿಶುದ್ಧತೆಗಾಗಿ ಹೆಚ್ಚಿನ ಉತ್ಸುಕತೆಯನ್ನು ತರುತ್ತದೆ. ಆಗ ನಾವು ಯೇಸುವಿನ ಮಾದರಿಯನ್ನು ಹಿಂಬಾಲಿಸಿ ನಡೆಯಲು ಸಾಧ್ಯವಾಗುತ್ತದೆ. ಶಾರೀರಿಕ ಮರಣದ ಭಯ ಯೇಸುವಿಗೆ ಯಾವತ್ತೂ ಇರಲಿಲ್ಲ. ಆದರೆ ಆತನಲ್ಲಿ ಆತ್ಮಿಕ ಮರಣದ ಭಯವಿತ್ತು, ಹಾಗಾಗಿ ಆತನು ಪಾಪದ ವಾಸನೆಯೂ ಸಹ ತನ್ನ ಬಳಿಗೆ ಬಾರದಂತೆ ನೋಡಿಕೊಂಡನು. ಗೆತ್ಸೇಮನೆ ತೋಟದಲ್ಲಿ ಆತನು ತಂದೆಯಾದ ದೇವರನ್ನು, ’ಈ ಪಾತ್ರೆಯನ್ನು ನನ್ನಿಂದ ತೊಲಗಿಸು,’ ಎಂದು ಪ್ರಾರ್ಥಿಸಿದ್ದೇಕೆ? ಆತನು ಮನೋವ್ಯಥೆಗೊಂಡು ಬೇಡವೆಂದು ಹೇಳಿದ ’ಪಾತ್ರೆ’ ಯಾವುದೆಂದರೆ, ಶಿಲುಬೆಯ ಮೇಲೆ - ಆತನು ನಮ್ಮ ಪಾಪದ ಹೊರೆಯನ್ನು ಹೊತ್ತುಕೊಂಡಾಗ - 3 ಗಂಟೆಗಳ ಕಾಲ ತನ್ನ ತಂದೆಯ ಅನ್ಯೋನ್ಯತೆ ತಪ್ಪಿಹೋಗುವ ಪರಿಸ್ಥಿತಿ. ಅದನ್ನೇ ಆತ್ಮಿಕ ಮರಣವೆಂದು ಕರೆಯುತ್ತೇವೆ. ಯೇಸುವು ಪಾಪವನ್ನು ದ್ವೇಷಿಸಿದ್ದು ಏಕೆಂದರೆ, ಅದು ತಂದೆಯೊಂದಿಗೆ ತನ್ನ ಅನ್ಯೋನ್ಯತೆಯನ್ನು ಕಡಿದು ಹಾಕಲಿತ್ತು.

ಆದರೆ ಗೆತ್ಸೇಮನೆಯಲ್ಲಿ ತಂದೆಯು ಆತನಿಗೆ ಹೇಳಿದ ಮಾತು ಏನೆಂದರೆ, ಇತರರು ನರಕ ದಂಡನೆಯ ಮೂಲಕ ದೇವರಿಂದ ನಿತ್ಯತ್ವಕ್ಕೂ ಅಗಲುವುದನ್ನು ತಪ್ಪಿಸಲಿಕ್ಕೆ ಇರುವ ಒಂದೇ ದಾರಿ, ಸ್ವತಃ ಆತನು ತಂದೆಯ ಅನ್ಯೋನ್ಯತೆಯನ್ನು ಕಳೆದುಕೊಳ್ಳಲು ಒಪ್ಪುವದು, ಎಂಬುದಾಗಿ. ಯೇಸುವು ನಮ್ಮ ಮೇಲಿನ ಅಗಾಧ ಪ್ರೀತಿಯ ದೆಸೆಯಿಂದ, ಅಷ್ಟು ದೊಡ್ಡ ಬೆಲೆಯನ್ನು ತೆರಲು ಸಿದ್ಧನಾಗಿದ್ದನು. ಆದರೆ ಆತನು ತನ್ನ ಭೂಲೋಕದ ಜೀವಿತವಿಡೀ ತಂದೆಯ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದನು - ಪಾಪವು ಅದನ್ನು ಕೊನೆಗೊಳಿಸುತ್ತಿತ್ತು. ನಮ್ಮಲ್ಲಿ ಪಾಪದ ಸ್ವಲ್ಪ ವಾಸನೆಯೂ ಸಹ ಇದ್ದರೆ, ಅದು ತಂದೆಯೊಂದಿಗಿನ ಐಕ್ಯತೆಯನ್ನು ಒಡನೆಯೇ ಕೊನೆಗೊಳಿಸುತ್ತದೆ. ನಮಗೂ ಸಹ ಆ ಐಕ್ಯತೆ (ಅನ್ಯೋನ್ಯತೆ) ಅಮೂಲ್ಯವಾಗಿದ್ದರೆ, ನಾವು ಕಹಿ ಭಾವನೆ, ಅಥವಾ ಆತ್ಮಿಕ ಗರ್ವ, ಅಥವಾ ಅಶುದ್ಧತೆ, ಅಥವಾ ಹೊಟ್ಟೆಕಿಚ್ಚು, ಅಥವಾ ಹಣದ ಆಸೆ, ಅಥವಾ ದ್ವೇಷ, ಅಥವಾ ದೇವರ ಪರಿಪೂರ್ಣ ಚಿತ್ತಕ್ಕೆ ಹೊರತಾದ ಯಾವುದೇ ಸಂಗತಿಯ ವಾಸನೆಯೂ ಸಹ ನಮ್ಮ ಬಳಿ ಇರಕೂಡದು, ಎಂಬ ಪ್ರಾರ್ಥನೆಯನ್ನು ಜೋರಾಗಿ ಅಳುತ್ತಾ, ಕಣ್ಣೀರು ಸುರಿಸುತ್ತಾ ಸಲ್ಲಿಸುತ್ತೇವೆ.

ನಾವು ದೇವರ ಪರಿಪೂರ್ಣ ಚಿತ್ತದಲ್ಲಿ ಜೀವಿಸಬೇಕು, ಎನ್ನುವ ತೀಕ್ಷ್ಣವಾದ ಅಭಿಲಾಷೆ ನಮ್ಮಲ್ಲಿ ಇಲ್ಲದೇ ಇರುವುದರಿಂದ, ನಾವು ಪಾಪವನ್ನು ಬಹಳ ಲಘುವಾಗಿ ಕಾಣುತ್ತೇವೆ. ಹೆಚ್ಚಿನ ಕ್ರೈಸ್ತರು ’ಪರಿಶುದ್ಧತೆ’ಯನ್ನು ತಮ್ಮ ಮುಖ್ಯ ಹಂಬಲವಾಗಿ ಇರಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಅವರ ಮುಖ್ಯ ಹಂಬಲ ಒಂದಲ್ಲ ಒಂದು ರೀತಿಯ ಕರ್ತನ ಸೇವೆ, ಇಲ್ಲವೇ ಜನರ ಅವಶ್ಯಕತೆಗಳ ಪೂರೈಕೆ ಆಗಿರುತ್ತದೆ. ಆದರೆ ಈ ದೃಷ್ಟಿಕೋನವು ಲೌಕಿಕವಾದದ್ದು, ಎನ್ನಬಹುದು. ಮರಿಯಳು ಯೇಸುವಿನ ಸಾನ್ನಿಧ್ಯವನ್ನು ಬಯಸಿದರೆ, ಮಾರ್ಥಳು ಆತನ ಸೇವೆಯ ಕಡೆಗೆ ಗಮನ ಹರಿಸಿದಳು. ಈ ಸಂದರ್ಭದಲ್ಲಿ ಯೇಸುವು ಮಾರ್ಥಳನ್ನು ತಿದ್ದಿ ಸರಿಪಡಿಸಿ, ಮರಿಯಳು ಅವಶ್ಯವಾಗಿರುವ ಒಂದೇ ಒಂದು ಸಂಗತಿಯನ್ನು ಆರಿಸಿಕೊಂಡಿದ್ದಾಳೆ, ಎಂದು ಹೇಳಿದರು (ಲೂಕ 10:42). ನಮ್ಮಲ್ಲಿ ಪವಿತ್ರತೆ ನೆಲೆಗೊಂಡಾಗ ನಾವು ಮಾಡುವ ಸೇವೆಯು ಉತ್ತಮ ಫಲವನ್ನು ನೀಡುತ್ತದೆ.