WFTW Body: 

2 ಕೊರಿಂಥ. 9:6 ರಲ್ಲಿ ಅಪೋಸ್ತಲನಾದ ಪೌಲನು (ದೇವರಿಗೆ) ಕೊಡುವ ವಿಷಯದ ಬಗ್ಗೆ ಮಾತನಾಡುತ್ತಾನೆ. ನಾವು ಕೊಡುವುದರಲ್ಲಿ ಜಿಪುಣರಾಗಿದ್ದರೆ, ಅಷ್ಟೇ ಪ್ರಮಾಣದಲ್ಲಿ ಕೊಯ್ಯುವವರಾಗಿರುತ್ತೇವೆ ಎಂಬುದಾಗಿ ಪೌಲನು ಹೇಳುತ್ತಾನೆ. ನೀವು ಸ್ವಲ್ಪವಾಗಿ ಬಿತ್ತಿದರೆ ಸ್ವಲ್ಪವಾಗಿಯೇ ಪೈರನ್ನು ಕೊಯ್ಯುವವರಾಗಿರುತ್ತೀರಿ, ಹೆಚ್ಚಾಗಿ ಬಿತ್ತಿದರೆ ಹೆಚ್ಚಾಗಿ ಪೈರನ್ನು (ಬೆಳೆ) ಕೊಯ್ಯುವವರಾಗಿರುತ್ತೀರಿ. ಹಣವನ್ನು ಪ್ರೀತಿಸುವ ಅನೇಕ ಬೋಧಕರು (ವಿಶೇಷವಾಗಿ ದೂರದರ್ಶನ-ಸುವಾರ್ತಿಕರು) ಈ ಒಂದು ವಚನವನ್ನು ಉಲ್ಲೇಖಿಸಿ ಹೆಚ್ಚು ಹಣವನ್ನು ತಮಗೆ ಕೊಡುವಂತೆ ವಿಶ್ವಾಸಿಗಳನ್ನು ಒತ್ತಾಯಿಸುತ್ತಾರೆ. ಇಂತಹ ಬೋಧಕರು ಸಾಮಾನ್ಯ ವಿಶ್ವಾಸಿಗಳನ್ನು ಮೋಸ ಮಾಡುವಂತ ವ್ಯಾಪಾರಿಗಳಾಗಿದ್ದಾರೆ.

ತನ್ನ ಬಳಿಗೆ ಬಂದ ಐಶ್ವರ್ಯವಂತನಿಗೆ ಯೇಸು ಏನು ಹೇಳಿದ್ದೇನು? ನಿನ್ನ ಬಳಿಯಿರುವ ಎಲ್ಲಾ ಹಣವನ್ನು ಬಡವರಿಗೆ ಕೊಟ್ಟು, ಹಣವಿಲ್ಲದೇ ಬಂದು ನನ್ನನ್ನು ಹಿಂಬಾಲಿಸು ಎಂಬುದಾಗಿ ಯೇಸು ಹೇಳಿದರು!! "(ಇಂದಿನ ಅನೇಕ ಬೋಧಕರು ಹೇಳುವ ಪ್ರಕಾರ) ನಿನ್ನ ಬಳಿ ಇರುವಂತದ್ದನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನನಗೆ ಕೊಡು. ಏಕೆಂದರೆ ನಮ್ಮ ಸೇವೆಗೆ ಬಹಳಷ್ಟು ಅಗತ್ಯತೆಗಳಿವೆ. ನಾನು 12 ಜನ ಶಿಷ್ಯಂದಿರನ್ನು ಮತ್ತು ಅವರ ಕುಟುಂಬಗಳನ್ನು ನೋಡಿಕೊಳ್ಳಬೇಕು" ಎಂದು ಯೇಸು ಹೇಳಲಿಲ್ಲ . ಯೇಸುವಿಗೆ ಮನುಷ್ಯನ ಅಗತ್ಯವಿತ್ತೇ ಹೊರತು, "ಹಣದ ಅಗತ್ಯತೆ ಇರಲಿಲ್ಲ". ಆದರೆ "ನಿನ್ನ ಹಣದಲ್ಲಿ ನಮಗೆ ಸ್ವಲ್ಪವೂ ಆಸಕ್ತಿ ಇಲ್ಲ. ನೀನು ಆತ್ಮಿಕವಾಗಿ ಬೆಳೆಯಬೇಕು ಎಂಬುದೊಂದೇ ನಮ್ಮ ಬಯಕೆಯಾಗಿದೆ. ಹಾಗಾಗಿ ನಿನಗೆ ಬೇಕಾದವರಿಗೆ ಹಣವನ್ನು ಕೊಡು. ನಮ್ಮ ಸಭೆಗೆ ಬಂದು ದೇವರ ವಾಕ್ಯಗಳನ್ನು ಕೇಳಿಸಿಕೊಳ್ಳು" ಎಂದು ಶ್ರೀಮಂತ ವ್ಯಕ್ತಿಗೆ ಹೇಳುವಂತ ಕರ್ತನ ಸೇವಕರನ್ನು ನಾವಿಂದು ಎಲ್ಲಿ ಕಂಡುಕೊಳ್ಳುತ್ತೇವೆ? "ನಾವು ನಮ್ಮ ಸಭೆಗೆ ಬರುವ ಸಂದರ್ಶಕರಿಗೆ ನಿರಂತರವಾಗಿ ಇದೇ ಮಾತನ್ನು ಹೇಳುತ್ತೇವೆ”

2 ಕೊರಿಂಥ. 9:7 ರಲ್ಲಿ "ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂಬುದಾಗಿ ನಾವು ಓದಿಕೊಳ್ಳುತ್ತೇವೆ. ಹಳೆ ಒಡಂಬಡಿಕೆಯ ಕೆಳಗೆ, ಒಬ್ಬನು ಎಷ್ಟು ಕೊಡುತ್ತಾನೆ, ಅಂದರೆ 10% ರ ಜೊತೆಗೆ ಬೇರೆ ಕಾಣಿಕೆಗಳನ್ನು ಕೊಡುವ ಬಗ್ಗೆ ಹೆಚ್ಚು ಒತ್ತು ಕೊಡಲಾಗಿತ್ತು. ಹೊಸ ಒಡಂಬಡಿಕೆಯ ಕೆಳಗೆ, ಒಬ್ಬನು ಸಂತೋಷವಾಗಿ ಕೊಡುತ್ತಾನೋ ಅಥವಾ ಒತ್ತಾಯಪೂರ್ವಕವಾಗಿ ಕೊಡುತ್ತಾನೋ ಎಂಬುದರ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ. ಪ್ರಸ್ತುತ ಪ್ರಶ್ನೆ ಏನಾಗಿದೆ ಎಂದರೆ, ಒಬ್ಬನು ಎಷ್ಟು ಕೊಡುತ್ತಾನೆ ಎಂಬುದಾಗಿ ಅಲ್ಲ, ಕೊಡುವುದರಲ್ಲಿನ ಗುಣಮಟ್ಟ ಏನಾಗಿದೆ ಎಂಬುದು ಮುಖ್ಯವಾಗಿದೆ. ಹೊಸ ಒಡಂಬಡಿಕೆಯ ಕೆಳಗೆ, ಒಬ್ಬನು ಕಟ್ಟುವಂತ ಸಭೆಯ ಮಾದರಿಯಲ್ಲೂ ಕೂಡ ಗುಣಮಟ್ಟಕ್ಕೆ ಮಾತ್ರ ಹೆಚ್ಚು ಪ್ರಾಮುಖ್ಯತೆ ಕೊಡಲಾಗುವುದು.

ಅನೇಕ ವಿಶ್ವಾಸಿಗಳು ಆತ್ಮಿಕವಾಗಿ ಬಡವರಾಗಿದ್ದಾರೆ ಏಕೆಂದರೆ ಅವರು ಜೀಪುಣರಾಗಿದ್ದಾರೆ ಮತ್ತು ಬಿಗಿಮುಷ್ಟಿಯವರಾಗಿದ್ದಾರೆ. ವಿಶಾಲ ಹೃದಯವನ್ನು ಹೊಂದಿದವರಾಗಿರ್ರಿ ಮತ್ತು ನೀವು ದೇವರಿಗೆ ಕೊಡುವಂತದ್ದರಲ್ಲಿ ಸಮೃದ್ಧರಾಗಿರ್ರಿ - ಮೊದಲನೆಯದಾಗಿ ನಿಮ್ಮ ಜೀವಿತದಲ್ಲಿ ಮತ್ತು ನಂತರ ನಿಮ್ಮ ಸಮಯದಲ್ಲಿ ಮತ್ತು ನೀವು ಹೊಂದಿರುವಂತದ್ದರಲ್ಲಿಯೂ ಸಹ. ಆಗ ದೇವರು ನಿಮಗೆ ನೂರು ಪಾಲು ಹೆಚ್ಚಿಸಿ ಹಿಂತಿರಿಗಿಸುತ್ತಾರೆ ಎಂಬುದಾಗಿ ನೀವು ಕಂಡುಕೊಳ್ಳುತ್ತೀರಿ.

ನನ್ನ ಮದುವೆಯ ಮೊದಲು, ನಾನು ಒಂಟಿಯಾಗಿದ್ದಾಗ, ನನಗೆ ಹೆಚ್ಚು ಖರ್ಚು ಇರಲಿಲ್ಲ, ಹಾಗಾಗಿ ನಾನು ದೇವರ ಕೆಲಸಕ್ಕೆ ನೌಕದಳದಿಂದ ಗಳಿಸಿದಂತ ಆದಾಯದಲ್ಲಿ ಹೆಚ್ಚಿನ ಭಾಗವನ್ನು ದೇವರಿಗೆ ಕೊಟ್ಟುಬಿಟ್ಟೆ. ಸ್ವಲ್ಪ ಸಮಯದ ನಂತರ ನಾನು ಮದುವೆಯಾದಾಗ, ನನಗೆ ಹಣಕಾಸಿನ ಅನೇಕ ಅಗತ್ಯತೆಗಳಿವೆ ಎಂಬುದನ್ನು ನಾನು ಕಂಡುಕೊಂಡೆ. ಆದರೆ ನಾನು ಒಂದು ಸಲವೂ ಸಹ ಸಾಲದಲ್ಲಿ ಬೀಳಲಿಲ್ಲ. ನಾನು ಯಾವುದೇ ಸಮಯದಲ್ಲಿ ಮತ್ತೊಬ್ಬರಿಂದ ಹಣವನ್ನು ಕೇಳಲಿಲ್ಲ. ಏಕೆಂದರೆ ದೇವರು ನಮ್ಮ ನಮ್ಮನ್ನು ಸಲಹಿದರು ಮತ್ತು ನಾನು ಹಿಂದೆ ದೇವರಿಗೆ ಕೊಟ್ಟಿದ್ದನ್ನೇ ದೇವರು ನನಗೆ ಮರುಪಾವತಿಸಿದರು. ಹಾಗಾಗಿ ನನ್ನ ಸ್ವಂತ ಅನುಭವದಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.

ದೇವರಿಗೆ ಸಮೃದ್ಧವಾಗಿ ಕೊಡುವುದನ್ನು ಕಲಿಯಿರಿ. ಆಗ ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದನ್ನು ನೀವು ಕಂಡುಕೊಳ್ಳುವಿರಿ. ಆದರೆ ಕೊಡುವ ವಿಷಯದಲ್ಲಿ ನೀನು ಜ್ಞಾನಿಗಳಾಗಿರಿ ಎಂಬುದಾಗಿ ನಾನು ನಿಮಗೆ ಎಚ್ಚರಿಕೆಯನ್ನು ಕೊಡಬಯಸುತ್ತೇನೆ. ನಿಮ್ಮ ಬಳಿ ಹಣವನ್ನು ಕೇಳುವಂತ ಬೋಧಕರಿಗೆ ಹಣವನ್ನು ಕೊಡಬೇಡಿರಿ ಮತ್ತು ಬೇಕಾಬಿಟ್ಟಿ ಹಣವನ್ನು ವ್ಯಯಿಸುವಂತ ಬೋಧಕರಿಗೆ ಹಣವನ್ನು ಎಂದಿಗೂ ಕೊಡಬೇಡಿರಿ. ಅವರು ನಿಮ್ಮ ಹಣವನ್ನು ವ್ಯರ್ಥ ಮಾಡುತ್ತಾರೆ. ಪ್ರಾರ್ಥನೆ ಮಾಡಿ, ದೇವರ ಚಿತ್ತವನ್ನು ಹುಡುಕಿ ಮತ್ತು ಎಲ್ಲಿ ಅಗತ್ಯತೆ ದೊಡ್ಡದಿದೆ ಎಂಬುದಾಗಿ ದೇವರು ತೋರಿಸುತ್ತಾರೋ ಅಲ್ಲಿಗೆ ನಿಮ್ಮ ಹಣವನ್ನು ಕೊಡಿರಿ. ಹಣವನ್ನು ಬಡವರಿಗೆ ಕೊಡಿರಿ, ಶ್ರೀಮಂತರಿಗೆ ಕೊಡಬೇಡಿರಿ. ಯಾರು ನಿಜವಾದ ಅಗತ್ಯತೆಯಲ್ಲಿದ್ದಾರೋ ಅಂಥವರಿಗೆ ಹಣವನ್ನು ಕೊಡಿರಿ. ಆಗ ನಿಮ್ಮ ಅಗತ್ಯತೆಯ ಸಮಯದಲ್ಲಿ ದೇವರು ನಿಮಗೆ ಸಮೃದ್ಧವಾದ ಬೆಳೆಯನ್ನು ಕೊಡುವುದನ್ನು ನೀವು ಕಂಡುಕೊಳ್ಳುತ್ತೀರಿ. ಪರಲೋಕದಲ್ಲಿ ಐಶ್ವರ್ಯವಂತನಾದ ತಂದೆಯನ್ನು ಹೊಂದಿಕೊಂಡಂತ ದೇವರ ಮಕ್ಕಳು ಸಾಲದಲ್ಲಿರುವುದು ಹಾಗೂ ನಿರಂತರ ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿರುವುದು ದೇವರ ಚಿತ್ತವಲ್ಲ. ಅನೇಕ ವಿಶ್ವಾಸಿಗಳು ಇಂತಹ ಸಮಸ್ಯೆಗಳನ್ನು ಏಕೆ ಎದುರಿಸುತ್ತಿದ್ದಾರೆ ಎಂದರೆ, ಅವರು ದೇವರ ಕಡೆಗೆ ಸಮೃದ್ಧರಾಗದೇ ಇದ್ದುದ್ದರಿಂದ. ನಾವು ಬಿತ್ತಿದ್ದನ್ನೇ ಕೊಯ್ಯುವವರಾಗಿರುತ್ತೇವೆ.