ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಸೈತಾನನ ಪ್ರಮುಖ ಆಯುಧಗಳಲ್ಲಿ "ಭಯ"ವು ಒಂದಾಗಿದೆ. ಅವನು ಇದನ್ನು ನಿರಂತರವಾಗಿ ಬಳಸುತ್ತಾನೆ. ವಿಶ್ವಾಸಿಗಳು ಇತರರನ್ನು ಭಯಪಡಿಸಲು ಅಥವಾ ಬೆದರಿಸಲು ಪ್ರಯತ್ನಿಸುವಾಗ, ಅವರು (ತಮಗೆ ಅರಿವಿಲ್ಲದೆಯೇ) ಸೈತಾನನೊಟ್ಟಿಗೆ ಅನ್ಯೋನ್ಯತೆಯಲ್ಲಿರುತ್ತಾರೆ, ಏಕೆಂದರೆ ಅವರು ಸೈತಾನನ ಶಸ್ತ್ರಾಗಾರದಲ್ಲಿರುವ ಒಂದು ಆಯುಧವನ್ನು ಬಳಸುತ್ತಿದ್ದಾರೆ. "ದೇವರು ನಮಗೆ ಭಯದ ಆತ್ಮವನ್ನು ಕೊಡುವುದಿಲ್ಲ"(2 ತಿಮೊ. 1:7). ಯಾವಾಗಲೂ ಭಯವು ಸೈತಾನನ ಒಂದು ಆಯುಧವಾಗಿದೆ. ಆದುದರಿಂದ ಜನರು ನಮ್ಮ ವಿರುದ್ಧವಾಗಿ ಹಾಕುವ ಬೆದರಿಕೆಗಳಿಗೆ ಮತ್ತು ಅವರ ಭಯಪಡಿಸುವಂತಹ ತಂತ್ರಗಳಿಗೆ ನಾವು ಹೆದರಬಾರದು. ಅಂತಹ ಎಲ್ಲಾ ಜನರು ತಮ್ಮನ್ನು "ಕ್ರೈಸ್ತ ವಿಶ್ವಾಸಿಗಳು" ಎಂದು ಕರೆದುಕೊಂಡರೂ, ಅವರೆಲ್ಲರೂ ಸೈತಾನನ ಮಧ್ಯವರ್ತಿಗಳಾಗಿದ್ದಾರೆ. ನಮ್ಮ ಜೀವಿತವಿಡೀ ಕಲಿಯುವುದಕ್ಕೆ ನಮಗಿರುವಂತ ಪಾಠ ಇದಾಗಿದೆ.

ನಾವು ಜನರನ್ನು “ದಿಗಿಲುಪಡಿಸುವ" ಬೋಧನೆಯನ್ನೂ ಸಹ ಮಾಡಬಾರದು. ಜನರಿಗೆ ನರಕದ ಬಗ್ಗೆ ಎಚ್ಚರಿಸುವುದು ಮತ್ತು ಅವರನ್ನು ದಿಗಿಲುಪಡಿಸಲು ಪ್ರಯತ್ನಿಸುವುದು ಇವೆರಡರ ನಡುವೆ ವ್ಯತ್ಯಾಸವಿದೆ. ಯೇಸು ಎಂದಿಗೂ ಯಾರನ್ನೂ ದಿಗಿಲುಪಡಿಸಲು ಪ್ರಯತ್ನಿಸಲಿಲ್ಲ. ಸತ್ಯವೇದದ ಹಲವಾರು ವಚನಗಳನ್ನು ಉಲ್ಲೇಖಿಸಿ ನಮ್ಮಲ್ಲಿ ತಪ್ಪಿತಸ್ಥ ಮನೋಭಾವವನ್ನೂ, ಆತ್ಮನಿಂದನೆಯನ್ನು ಉಂಟುಮಾಡಲು ಪ್ರಯತ್ನಿಸುವ ಬೋಧಕರುಗಳಿಗೆ ನಾವು ಎಂದಿಗೂ ಹೆದರಬಾರದು. ಬೋಧಕರುಗಳು ತಮ್ಮ ಸಭೆಯನ್ನು ವಿಶ್ವಾಸಿಗಳು ಬಿಟ್ಟು ಹೋಗುವಾಗ ಅಥವಾ ಅವರು ತಮಗೆ ದಶಮಾಂಶವನ್ನು ಕೊಡದಿದ್ದಾಗ, ದೇವರ ನ್ಯಾಯತೀರ್ಪಿನ ಬೆದರಿಕೆಯನ್ನು ಹಾಕುತ್ತಾರೆ. ಇವೆಲ್ಲವೂ ಸೈತಾನನ ತಂತ್ರಗಳಾಗಿವೆ.

"ಹಲವಾರು ಸ್ವರಗಳು ಕೇಳಿಸುವ ಜಾಗದಲ್ಲಿ ನಾವು ಇರುವಾಗ, ಕರ್ತರನ್ನು ಹೇಗೆ ಮೆಚ್ಚಿಸಬೇಕೆಂಬ ಹೆಚ್ಚಿನ ಸೂಕ್ಷ್ಮತೆಯನ್ನು ನಮ್ಮಲ್ಲಿ ಉಂಟುಮಾಡಲು ಪವಿತ್ರಾತ್ಮನು ಬಯಸುತ್ತಾನೆ; ಆಗ ದೇವರನ್ನು ಮಹಿಮೆ ಪಡಿಸುವ ಮಾರ್ಗ ಯಾವುದೆಂದು ನಮಗೆ ತಿಳಿಯುತ್ತದೆ."

"ಕರ್ತನ ಭಯದ ಪರಿಮಳವನ್ನು ಸೂಕ್ಷ್ಮವಾಗಿ ಗುರುತಿಸುವುದು"ಮುಖ್ಯವಾಗಿದೆ (ಯೆಶಾಯನು 11:3-ಅಕ್ಷರಶಃ ಅನುವಾದ). ಪೋಲೀಸರಿಂದ ತರಬೇತಿಗೊಂಡ ಒಂದು ನಾಯಿಯು ಅನೇಕ ರಸ್ತೆಗಳು ಕೂಡುವಂತ ಸ್ಥಳದಲ್ಲೂ ಸಹ ಹೇಗೆ ಒಬ್ಬ ಅಪರಾಧಿಯ ವಾಸನೆಯನ್ನು ಕಂಡುಹಿಡಿಯುತ್ತದೋ ಹಾಗೆಯೇ, ನಾವು ಹಲವಾರು ಸ್ವರಗಳು ಕೇಳಿಸುವ ಜಾಗದಲ್ಲಿ ಇರುವಾಗ, ಕರ್ತರನ್ನು ಹೇಗೆ ಮೆಚ್ಚಿಸಬೇಕೆಂಬ ಹೆಚ್ಚಿನ ಸೂಕ್ಷ್ಮತೆಯನ್ನು ನಮ್ಮಲ್ಲಿ ಉಂಟುಮಾಡಲು ಪವಿತ್ರಾತ್ಮನು ಬಯಸುತ್ತಾನೆ; ಆಗ ದೇವರನ್ನು ಮಹಿಮೆ ಪಡಿಸುವ ಮಾರ್ಗ ಯಾವುದೆಂದು ನಮಗೆ ತಿಳಿಯುತ್ತದೆ. ಈ ವಿಷಯದಲ್ಲಿ ಇಂತಹ ಸೂಕ್ಷ್ಮತೆಯನ್ನು (ಚುರುಕುತನವನ್ನು) ನೀವೆಲ್ಲರೂ ಹೊಂದುವಂತಾಗಲಿ. ನೀವು ಜೀವಿಸುತ್ತಿರುವ ಪ್ರದೇಶದ ಸುತ್ತಲೂ ಪಾಪ ಮತ್ತು ಭ್ರಷ್ಟಾಚಾರವು ಹರಡಿದೆ. ನಿಮ್ಮನ್ನು ನೀವು ಶುದ್ಧವಾಗಿ ಕಾಪಾಡಿಕೊಳ್ಳಿರಿ.

"ನಿರುತ್ಸಾಹವು" ಸೈತಾನನ ಮತ್ತೊಂದು ಪ್ರಾಥಮಿಕ ಆಯುಧವಾಗಿದೆ. ನಿರುತ್ಸಾಹವು ಯಾವಾಗಲೂ ಸೈತಾನನಿಂದಲೇ ಬರುವಂಥದ್ದಾಗಿದೆ - ಹೌದು, ಯಾವಾಗಲೂ - ಮತ್ತು ಅದು ಎಂದಿಗೂ ದೇವರಿಂದ ಬರುವುದಿಲ್ಲ. ಹಾಗಾಗಿ ಯಾವುದೇ ಸಂಗತಿಯು - ಶಾರೀರಿಕ, ಭೌತಿಕ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದು ಅಥವಾ ಆತ್ಮಿಕವಾದದ್ದು ಅಥವಾ ಬೇರೆ ಯಾವ ಸಂಗತಿಯೂ - ನಿಮ್ಮನ್ನು ನಿರುತ್ಸಾಹಗೊಳಿಸದಂತೆ ನೋಡಿಕೊಳ್ಳಿರಿ.

ಸೈತಾನನ ಉದ್ದೇಶವೇನೆಂದರೆ, ಮೊದಲು ನಿಮ್ಮನ್ನು ನಿರುತ್ಸಾಹಗೊಳಿಸುವುದರ ಮೂಲಕ ನಿಮ್ಮನ್ನು ಪಾಪಕ್ಕೆ ಕೊಂಡೊಯ್ಯುವುದಾಗಿದೆ. ನೀವು ಎಚ್ಚರಿಕೆಯಿಂದ ಇರದಿದ್ದರೆ, ಒಂಟಿತನ ಮತ್ತು ಮನೆಗೀಳು (ಕುಟುಂಬಕ್ಕಾಗಿ ಹಂಬಲಿಸುವಂತದ್ದು), ಇವುಗಳು ಸಹ ನಿರುತ್ಸಾಹಕ್ಕೆ ಕಾರಣವಾಗಬಹುದು. ನೀವು ಇವೆಲ್ಲವನ್ನು ಹೋರಾಡಿ ಜಯಿಸಬೇಕು. ದೇವರು ನಿಮಗೆ ಕೃಪೆಯನ್ನು ದಯಪಾಲಿಸುವರು.

ಭವಿಷ್ಯದಲ್ಲಿ ನಿಮ್ಮ ಮುಂದಿರುವ ಆಪಾಯಗಳು ಮತ್ತು ನೀವು ಗಮನಿಸದಿರುವ ಅಂಶಗಳು ನಿಮಗೆ ಸದ್ಯ ಕಾಣಿಸದಿದ್ದರೂ, ಕರ್ತರಿಗೆ ಕಾಣಿಸುವುದರಿಂದ, ಅವರು ನಿಮ್ಮನ್ನು ಮುಂಚಿತವಾಗಿ ಎಚ್ಚರಿಸುವಂತಾಗಲಿ. ಕರ್ತರು ನಿಮಗೆ ಜ್ಞಾನವನ್ನು ನೀಡಲಿ ಮತ್ತು ನಿಮ್ಮನ್ನು ಕಾಪಾಡಲಿ.

ಯಾರು ದೇವರನ್ನು ನಂಬಿಕೆಯಿಂದ ಕೇಳಿಕೊಳ್ಳುತ್ತಾರೋ ಅವರಿಗೆ ಜ್ಞಾನ ದೊರಕುವುದು ಎಂಬುದಾಗಿ ದೇವರು ವಾಗ್ದಾನವನ್ನು ಮಾಡಿದ್ದಾರೆ (ಯಾಕೋಬ. 1:5-6). ನೀವು ’ಕೇಳದಿದ್ದರೆ’ ಅಥವಾ ನೀವು ಕೇಳಿರುತ್ತೀರಿ, ಆದರೆ ದೇವರು ನಿಮಗೆ ಅಗತ್ಯವಿರುವ ಜ್ಞಾನವನ್ನು ನಿಶ್ಚಯವಾಗಿ ನೀಡುತ್ತಾರೆಂದು ನೀವು ನಂಬಲಿಲ್ಲವಾದರೆ ಅದು ನಿಮಗೆ ಸಿಗುವುದಿಲ್ಲ.

ಆದಾಗ್ಯೂ ನೀವು ಹೆಚ್ಚು ಹಣ ಸಂಪಾದಿಸುವುದಕ್ಕೆ ಸಹಾಯ ಒದಗಿಸುವುದು ದೇವರ ಉದ್ದೇಶವಲ್ಲ, ಆದರೆ ನಿಮ್ಮನ್ನು ಇನ್ನೂ ಹೆಚ್ಚಾಗಿ ಕ್ರಿಸ್ತನಂತೆ ಬದಲಾಯಿಸುವುದು ಅವರ ಗುರಿಯಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿರಿ. ದೇವರು ತನ್ನ ದೃಷ್ಟಿಯಲ್ಲಿ ನಿಮಗೆ ಯೋಗ್ಯವಾದ ಲೌಕಿಕ ಸಂಪತ್ತನ್ನು ಕೊಡುತ್ತಾರೆ. ಆದರೆ ಅದು ಪ್ರಾಥಮಿಕವಾದದ್ದಲ್ಲ - ಏಕೆಂದರೆ ಹಣವನ್ನು ಶೇಖರಿಸುವಂತ ಪ್ರಯಾಸವನ್ನು ದೇವರು ಲೌಕಿಕ ಜನರಿಗೆ ಕೊಟ್ಟಿದ್ದಾರೆ - ನಮಗಲ್ಲ (ಪ್ರಸಂಗಿ.2:26 b).