WFTW Body: 

ನನ್ನ ಒಂದು ಗಾದೆ ಮಾತು ಈ ರೀತಿ ಇದೆ: "ಒಬ್ಬ ಜ್ಞಾನಿಯು ಇತರರ ತಪ್ಪುಗಳಿಂದ ಕಲಿಯುತ್ತಾನೆ. ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಸ್ವಂತ ತಪ್ಪುಗಳಿಂದ ಕಲಿಯುತ್ತಾನೆ. ಆದರೆ ಒಬ್ಬ ಮೂಢನು ತನ್ನ ಸ್ವಂತ ತಪ್ಪುಗಳಿಂದಲೂ ಬುದ್ಧಿ ಕಲಿಯುವುದಿಲ್ಲ."

ನಾನೊಬ್ಬ ತಂದೆಯಾಗಿದ್ದೇನೆ, ಹಾಗಾಗಿ ನಾನು ಇತರ ತಂದೆಯರಲ್ಲಿ ಗಮನಿಸಿದ ತಪ್ಪುಗಳಿಂದ ಕಲಿಯಲು ಬಯಸಿದೆ. ಅದಲ್ಲದೆ ನನ್ನ ಮಕ್ಕಳು ಹಿಂಬಾಲಿಸಲು ಎಂತಹ ಮಾದರಿಯನ್ನು ನಾನು ಅವರಿಗೆ ಇಟ್ಟಿದ್ದೇನೆಂದು ನನ್ನನ್ನು ನಾನೇ ಕೇಳಿಕೊಂಡೆ. ನನ್ನ ಮಾದರಿ ಹೀಗಿದೆಯೆಂದು ನಾನು ನಿರೀಕ್ಷಿಸುತ್ತೇನೆ: ನಮ್ಮ ಜೀವಿತದ ಕೊನೆಯ ವರೆಗೆ ಮೊದಲು ದೇವರ ರಾಜ್ಯವನ್ನು ಹುಡುಕುವುದು ಹಾಗೂ ತಾಳ್ಮೆಯಿಂದ ಎಲ್ಲಾ ಜನರಿಗಾಗಿ ಜ್ಞಾನವುಳ್ಳ ಪ್ರೀತಿಯನ್ನು ಉಳಿಸಿಕೊಳ್ಳುವುದು.

ಜ್ಞಾನವೆಂದರೆ, ತೊಂದರೆ ಕೊಡುವ ಜನರಿಂದ ಒಳ್ಳೆಯ ಅಂತರವನ್ನು ಕಾಯ್ದುಕೊಳ್ಳುವುದು - ಮತ್ತು ಜ್ಞಾನವು ನಿನ್ನ ಪ್ರೀತಿಯನ್ನು ಆಳಬೇಕು. ನಿನ್ನ ಪೆಟ್ರೋಲ್ ಟ್ಯಾಂಕ್ ನಲ್ಲಿ (ನಿನ್ನ ಹೃದಯದಲ್ಲಿ) ಪ್ರೀತಿಯು ತುಂಬಿರಬೇಕು, ಆದರೆ ಚಾಲಕನ ಜಾಗದಲ್ಲಿ ಜ್ಞಾನವು ಕೂತಿರಬೇಕು. ಇಲ್ಲವಾದರೆ ಮಾನವ ಪ್ರೀತಿಯು ಅನೇಕ ಮೂರ್ಖತನದ ಕಾರ್ಯಗಳನ್ನು ಮಾಡಿಸಬಹುದು. ನಿನ್ನ ಪ್ರೀತಿಯಲ್ಲಿ "ವಿವೇಚನೆಯು (ಜ್ಞಾನ) ತುಂಬಿರಲಿ" (ಫಿಲಿ. 1:9). ನೀನು ಎಂದಿಗೂ ಯಾರನ್ನೂ ದ್ವೇಷಿಸಬಾರದು ಅಥವಾ ಯಾರೊಂದಿಗೂ ಒರಟಾಗಿ ವರ್ತಿಸಬಾರದು. ನಿನ್ನನ್ನು ಅಭಿನಂದಿಸದಿರುವ ಜನರನ್ನು ನೀನು ಅಭಿನಂದಿಸು. ಯಾವಾಗಲೂ ಎಲ್ಲಾ ಸಮಯದಲ್ಲಿಯೂ ಎಲ್ಲರೊಂದಿಗೆ ಗೌರವದಿಂದ ಮಾತನಾಡು (1 ಪೇತ್ರ. 2:17ರಲ್ಲಿ ಹೇಳಿರುವಂತೆ). ಯಾರು ನಿನಗೆ ಕೆಟ್ಟದ್ದನ್ನು ಮಾಡುತ್ತಾರೋ ಅವರಿಗೆ ಒಳ್ಳೆಯದನ್ನೇ ಮಾಡು.

"
"ಯೇಸುವು ತನ್ನ ಎಲ್ಲಾ ಕಾರ್ಯವನ್ನು ತನ್ನ ತಂದೆಗೆ ಒಪ್ಪಿಸಿದರು""

ಫರಿಸಾಯರು ಯೇಸುವನ್ನು "ಬೆಲ್ಜೆಬೂಲನು" (ದೆವ್ವಗಳ ಒಡೆಯ) ಎಂದು ಕರೆದಾಗಲೂ ಆತನು ಅವರನ್ನು ಕ್ಷಮಿಸಿದನು (ಮತ್ತಾ. 12:24,32). ಅವರು ಆತನನ್ನು ನ್ಯಾಯಾಲಯಕ್ಕೆ ಎಳೆದು ತಂದು, ಅಲ್ಲಿ ಆತನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದಾಗಲೂ ಆತನು ಅವರಿಗೆ ಬೆದರಿಕೆ ಹಾಕಲಿಲ್ಲ, ಆದರೆ ತನ್ನ ಕಾರ್ಯವನ್ನು ತನ್ನ ತಂದೆಯ ಕೈಗೊಪ್ಪಿಸಿದನು (1 ಪೇತ್ರ. 2:23). ನಾವು ಯೇಸುವು ನಡೆದ ಹಾದಿಯಲ್ಲಿ ನಡೆಯಬೇಕು.

ಹಾಗಾಗಿ, ಒಂದು ವೇಳೆ ಒಬ್ಬ ಫರಿಸಾಯನು ನಿನ್ನ ಮೇಲೆ ಆರೋಪ ಹೊರಿಸಿದರೆ (ಅಥವಾ ಒಂದು ದಿನ ನಿನ್ನನ್ನು ನ್ಯಾಯಾಲಯಕ್ಕೆ ಎಳೆದರೂ), ಆಗ ಯೇಸುವಿನ ಮಾತುಗಳನ್ನು ನೆನಪಿಸಿಕೋ: "ನಿನ್ನನ್ನು ಎಲ್ಲಾ ಜನರು ದ್ವೇಷಿಸುವರು ... ಅವರು ನಿನ್ನನ್ನು ನ್ಯಾಯಾಲಯಕ್ಕೆ ಎಳಕೊಂಡು ಹೋಗುವರು ... ಆದರೆ ನೀನು ಸರ್ಪದಂತೆ ಜಾಣನೂ ಪಾರಿವಾಳದಂತೆ ನಿಷ್ಕಪಟಿಯೂ ಆಗಿರು... ಆಗ ನೀನು ಹೇಗೆ ಉತ್ತರಿಸಬೇಕೆಂದು ನಿನಗೆ ಸೂಚಿಸಲ್ಪಡುವುದು (ಅಂದರೆ, ಅಲ್ಲಿ ನೀನು ಮೌನವಾಗಿ ಇರಬಾರದು!)...ಜನರಿಗೆ ಹೆದರಬೇಡ, ಏಕೆಂದರೆ ಮುಚ್ಚಿಟ್ಟ ಸಂಗತಿಯು ತೆರೆದು ತೋರಿಸಲ್ಪಡುತ್ತದೆ ... ಆದರೆ (ಎಲ್ಲರನ್ನು ಪ್ರೀತಿಸುತ್ತಾ) ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು .... ಅದಲ್ಲದೆ ನಿನ್ನನ್ನು ಕೊಲ್ಲುವವರು ತಾವು ದೇವರ ಸೇವೆ ಮಾಡಿದೆವೆಂದು ನೆನಸುವ ದಿನವೂ ಬರುತ್ತದೆ (ಮತ್ತಾ. 10:16-30; ಮತ್ತಾ. 24:9-13; ಯೋಹಾ. 16:2).

ಈ ಕಾರಣಕ್ಕಾಗಿ,
1) ಯಾವಾಗಲೂ ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಮೊದಲು ಹುಡುಕು, ಮತ್ತು
2) ನಿನ್ನಲ್ಲಿ ಯಾವಾಗಲೂ ಇತರರಿಗಾಗಿ ಜ್ಞಾನವುಳ್ಳ ಪ್ರೀತಿಯು ಬೇರೂರಿ ನೆಲೆಗೊಂಡಿರಲಿ.

ಕ್ರೈಸ್ತ ವಿಶ್ವಾಸಿಗಳ ಎಲ್ಲಾ ಗುಂಪಿನವರು ತಮ್ಮ ತಮ್ಮ ಸತ್ಯವೇದಗಳನ್ನು ಮೇಲೆತ್ತಿ ಹಿಡಿದು, "ನಾವೇ ಸರಿ. ದೇವರು ನಮ್ಮೊಂದಿಗೆ ಇದ್ದಾರೆ," ಎನ್ನುತ್ತಾರೆ. ಇವರಲ್ಲಿ ಯಾರು ಯಥಾರ್ಥರು? ನನಗೆ ಕರ್ತನಿಂದ ಒಂದು ಸ್ಪಷ್ಟವಾದ ಉತ್ತರ ಸಿಕ್ಕಿತು: "ಯಾರು ಯಾವಾಗಲೂ ನಿಜವನ್ನು ನುಡಿಯುತ್ತಾರೋ (ಅದರಿಂದ ಅವರಿಗೆ ತೊಂದರೆಯಾದರೂ ಸಹ) ಮತ್ತು ಯಾರು ಯಾವಾಗಲೂ ಇತರರಿಗಾಗಿ ಜ್ಞಾನವುಳ್ಳ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೋ (ಅಂದರೆ, ಇತರರಿಗೆ ಯಾವ ಹಾನಿಯನ್ನು ಮಾಡುವುದಾಗಲೀ ಅಥವಾ ಹಾನಿ ಬಯಸುವುದಾಗಲೀ ಇಲ್ಲ), ದೇವರು ಅವರ ಸಂಗಡ ಇದ್ದಾರೆ."

ನೀನು ಯಾವಾಗಲೂ ನಿನ್ನ ಜೀವಿತವನ್ನು ಮೊದಲು ದೇವರ ರಾಜ್ಯವನ್ನು ಹುಡುಕುವುದರಲ್ಲಿ ಕಳೆಯಬೇಕು. ಇದು ಹೇಗೆಂದರೆ, ಪ್ರಾಮಾಣಿಕ ಜೀವನ ಮತ್ತು ನಿಸ್ವಾರ್ಥ ಪ್ರೀತಿಯಿಂದ ನೀನು ಇತರರನ್ನು ಪ್ರೀತಿಸುತ್ತಾ, ನಿನ್ನ ವಿದ್ಯಾಭ್ಯಾಸದಲ್ಲಿ ಅಥವಾ ನಿನ್ನ ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರುವುದು ಮತ್ತು ಆ ಮೂಲಕ ಕ್ರೈಸ್ತ ವಿಶ್ವಾಸಿಗಳು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ನಿರ್ವಹಣೆ ತೋರುತ್ತಾರೆಂದು ತೋರಿಸುವುದಾಗಿದೆ.

ಯಾರಾದರೂ ಯಾವುದೇ ವಿಷಯದ ಕುರಿತಾಗಿ ನಿಮ್ಮನ್ನು ಟೀಕಿಸಿದಾಗ ನೀವು ಏನು ಮಾಡಬೇಕೆಂದು ನಾನು ನಿಮಗೆ ಸಲಹೆ ಕೊಡಲು ಇಚ್ಛಿಸುತ್ತೇನೆ. ನಿನ್ನನ್ನು ಸಮರ್ಥಿಸಿಕೊಳ್ಳಲು ಏನನ್ನೂ ಹೇಳಬೇಡ. ಯೆಶಾಯನು 54:17' ರಲ್ಲಿ ತಿಳಿಸಿರುವಂತೆ, ಸ್ವತಃ ಕರ್ತನೇ ನಿನ್ನನ್ನು ಸಮರ್ಥಿಸಲಿ: "ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರೋಧವಾಗಿ ಏಳುವ ಪ್ರತಿಯೊಂದು ನಾಲಿಗೆಯು ದೋಷಿಯೆಂದು ಖಂಡಿಸಲ್ಪಡುವುದು. ಕರ್ತನ ಸೇವಕರ ಸಮರ್ಥನೆಯನ್ನು ನಾನು ದಯಪಾಲಿಸುತ್ತೇನೆ, ಎಂದು ಕರ್ತನು ಅನ್ನುತ್ತಾನೆ". ಹೆಚ್ಚಿನ ಜನರೊಂದಿಗೆ ವಿಷಯಗಳನ್ನು ಸ್ಪಷ್ಟ ಪಡಿಸಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ. ದೇವರು ಸರ್ವಶಕ್ತರು ಮತ್ತು ಅವರ ಸತ್ಯವು ಉರಿಯುವ ಬೆಂಕಿಯಂತಿದೆ - ಅವುಗಳ ಸಮರ್ಥನೆಗೆ ನಮ್ಮಂತ ಬಲಹೀನ ಜನರು ಅಗತ್ಯವಿಲ್ಲ.