WFTW Body: 

ಕ್ರಿಸ್ತನು ಶಿಲುಬೆಗೆ ಏರುವುದಕ್ಕಿಂತ ಮುಂಚೆ ಪೇತ್ರನು ಕರ್ತನನ್ನು ಮೂರು ಬಾರಿ ನಿರಾಕರಿಸಿದನು. ಪೇತ್ರನು ಅತ್ಯುನ್ನತ ಅವಧಿಯಾದ ಮೂರುವರೆ ವರುಷಗಳ ಕಾಲ ಕರ್ತನೊಟ್ಟಿಗೆ ಇದ್ದನು, ಈ ಅವಧಿಯಲ್ಲಿ ಪೇತ್ರನು ಗರ್ವಿಯಾಗಿ, ಸ್ವ-ಸಮರ್ಥನೀಯನಾಗಿ ಮತ್ತು ಪ್ರಾರ್ಥನಾ ರಹಿತನಾಗಿದ್ದುಕ್ಕೊಂಡು, ನಿರಾಶೆಯುಳ್ಳಂತ ಜೀವಿತವನ್ನು ಕಳೆದನು ಎಂಬುದು ರುಜುವಾತಾಗಿದೆ. ಹಾಗಿದ್ದರೂ ಸಹ ಕರ್ತನು, ಪೇತ್ರನಿಗೆ ತನ್ನ ಕುರಿಗಳನ್ನು ಪೋಷಿಸುವಂತ ಕೆಲಸವನ್ನು ನೇಮಿಸುವಾಗ, ಆತನ ಬಲಹೀನತೆಗಳನ್ನು ಪರಿಗಣಿಸಲಿಲ್ಲ. ಕರ್ತನು ಪೇತ್ರನಿಗೆ, ಭವಿಷ್ಯದಲ್ಲಿ ದೀನನಾಗಿರುವಂತೆ ಮತ್ತು ಪ್ರಾರ್ಥನಾ ಧೀರನಾಗುವಂತೆ ಮತ್ತು ಧೃಢವಾಗಿ ಸಾಕ್ಷಿ ಹೇಳುವಂತೆ, ಕರ್ತನ ನಿಮಿತ್ತ ಅಗತ್ಯ ಬಿದ್ದರೆ ಹಿಂಸೆಯನ್ನು ಎದುರಿಸುವಂತೆ ಸವಾಲುಗೊಳಿಸಲಿಲ್ಲ. ಇಲ್ಲ, ಕರ್ತನು ಈ ರೀತಿಯ ಪ್ರಶ್ನೆಗಳನ್ನು ಕೇಳಲಿಲ್ಲ. ಆದಾಗ್ಯೂ ವಾಸ್ತವವಾಗಿ ಈ ಅರ್ಹತೆಗಳನ್ನು ಒಬ್ಬ ಆತ್ಮಿಕ ಮನುಷ್ಯನಲ್ಲಿ ನಾವು ನೋಡುವವರಾಗುತ್ತೇವೆ ಮತ್ತು ವಿಶೇಷವಾಗಿ ದೇವ ಜನರ ಮಧ್ಯದಲ್ಲಿ ಯಾರು ನಾಯಕನಾಗಬೇಕೋ ಅವರಲ್ಲಿ ಈ ಅರ್ಹತೆಗಳನ್ನು ನೋಡುವವರಾಗುತ್ತೇವೆ.

ಒಂದು ಸರಳ ಪ್ರಶ್ನೆ ಸಾಕು ಎಂಬುದಾಗಿ ಕರ್ತನಾದ ಯೇಸುವಿಗೆ ಗೊತ್ತಿತ್ತು. ಆ ಒಂದು ಪ್ರಶ್ನೆಗೆ ನಿಜವಾಗಿಯೂ ಪ್ರತಿಕ್ರಿಯೆಯನ್ನು ಕಂಡುಕೊಂಡರೆ, ಮಿಕ್ಕ ಎಲ್ಲವೂ ಸಹ ತನಗೇ ತಾನೇ ಹಿಂಬಾಲಿಸುತ್ತವೆ ಎಂಬುದು ಸಹ ಕರ್ತನಿಗೆ ತಿಳಿದಿತ್ತು. ಆ ಪ್ರಶ್ನೆ ಏನೆಂದರೆ, ”ನೀನು ಎಲ್ಲರಿಗಿಂತ ಹಾಗೂ ಎಲ್ಲವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯಾ?” ಎಂದು (ಯೋಹಾನ 21:15-17). ಕ್ರಿಸ್ತನಿಗಾಗಿ ಇರುವಂತ ಪ್ರೀತಿಯು ಯಾವುದೇ ಮನುಷ್ಯನ ಆತ್ಮೀಕತೆಯ ನಿಜವಾದ ಪರೀಕ್ಷೆಯಾಗಿದೆ. ಒಬ್ಬ ಮನುಷ್ಯನು ಸಭೆಯಲ್ಲಿ ಉನ್ನತವಾದ ಸ್ಥಾನವನ್ನು ಪಡೆದುಕೊಂಡಾಗ, ಅಂದರೆ ನಾವು, ಒಬ್ಬ ಕ್ರೈಸ್ತ ಧರ್ಮ ಗುರುವನ್ನು ಪ್ರಾಕೃತಿಕವಾಗಿ ಆತ್ಮೀಕ ಮನುಷ್ಯನು ಎಂಬುದಾಗಿ ಭಾವಿಸುವವರಾಗುತ್ತೇವೆ. ಹಾಗೇ ಭಾವಿಸುವ ಅವಶ್ಶಕತೆ ಇಲ್ಲ. ಇದು, ಹೊಸ ಹುಟ್ಟು ಮತ್ತು ಕ್ರಿಸ್ತನಿಗಾಗಿ ನೀವು ಇಡುವಂತ ಕ್ರಮಬದ್ಧ ಪ್ರೀತಿಯು ಒಬ್ಬ ಮನುಷ್ಯನನ್ನು ಆತ್ಮೀಕನನ್ನಾಗಿ ಮಾಡುತ್ತದೆ. ಇಂದು, ಸಭೆಯಲ್ಲಿನ ಒಬ್ಬ ಕ್ರೈಸ್ತ ಧರ್ಮ ಗುರು ಹೊಸದಾಗಿ ಹುಟ್ಟಿರುವುದಿಲ್ಲ. ವೇದಾಂತದಿಂದ ಪದವಿಯನ್ನು ಪಡೆದುಕೊಂಡಿರುವುದು ಅಥವಾ ಇನ್ನೂ ಅನೇಕ ರೀತಿಯ ಸಾಧನೆಗಳನ್ನು ಮಾಡಿರುವುದು ಹೊಸದಾಗಿ ಹುಟ್ಟಿರುವುದಕ್ಕೆ ಗುರುತಲ್ಲ. ಇಲ್ಲ, ಅದರಂತೆ, ಸುವಾರ್ತಾ ಕೂಟಗಳ ಸದ್ದಿನ ಮೂಲಕ ಕೊಡುವ ಸಂದೇಶಗಳು ಸಹ ಒಬ್ಬ ಮನುಷ್ಯನನ್ನು ಆತ್ಮೀಕನನ್ನಾಗಿ ಮಾಡಲಾರವು! ನೀವು ಪೂರ್ಣವಧಿಯ ಕ್ರೈಸ್ತ ಸೇವಕನಾಗಬಹುದು ಅಥವಾ ದೊಡ್ಡ ಗುಂಪಿನ ಪಾಸ್ಟರ್ ಸಹ ಇರಬಹುದು, ಆದರೆ ಅದು ನಿಮ್ಮನ್ನು ದೈವಿಕ ಮನುಷ್ಯನನ್ನಾಗಿ ಮಾಡುವುದಿಲ್ಲ. ಸತತವಾಗಿ ಕೂಟಕ್ಕೆ ಬರುವುದನ್ನು, ಸತ್ಯವೇದದ ಬಗ್ಗೆ ನಮಗಿರುವ ಅರಿವನ್ನು ಹಾಗೂ ಸುವಾರ್ತೆ ಸಾರಲು ಇರುವ ಉತ್ಸಾಹವನ್ನು, ನಾನು ಮತ್ತು ನೀವು ಬಹಳ ಬೇಗನೆ ಆತ್ಮೀಕತೆಯ ಗುರುತೆಂದು ತಪ್ಪಾಗಿ ತಿಳಿದುಕೊಳ್ಳುತ್ತೇವೆ.

ನಮ್ಮ ವಿಧೇಯತೆಯು, ಪ್ರೀತಿಯ ಗುರುತಾಗಿದೆ

ನಾನು ಪ್ರತ್ಯೇಕನೆಂದು ತೋರಿಸುವಂತ ಉಡುಪನ್ನು ಧರಿಸುವುದು ಮತ್ತು ಸಾಧು ತರಹದ ನೋಟವನ್ನು ಹೊಂದಿರುವುದು ಸಹ ನಮ್ಮನ್ನು ಮೋಸಗಳಸಲು ಸಾಧ್ಯವಿದೆ. ಆದರೆ ಅವ್ಯಾವು ಸಹ ಯಾವ ಲೆಕ್ಕಕ್ಕೂ ಬರುವುದಿಲ್ಲ. ದೇವರ ದೃಷ್ಠಿಯಲ್ಲಿ ನಿಜವಾದ ಆತ್ಮೀಕತೆಯ ಪರೀಕ್ಷೆಯು ಒಂದೇ ಒಂದು ಮಾತ್ರ : ಅದು, ”ಆತನಿಗಾಗಿ ನಿಮ್ಮ ವಿಶಾಲತೆಯ ಪ್ರೀತಿಯಾಗಿದೆ”. ಮೂಲಭೂತವಾಗಿ, ಅದು ನಿಮ್ಮ ಮತ್ತು ಕರ್ತನಾದ ಯೇಸುವಿನ ನಡುವೆ ಸಂಬಂಧಪಟ್ಟ ವಿಷಯವಾಗಿದೆ. ಆತನು ನಿಮಗೆ ಒಂದು ಪ್ರಶ್ನೆಯನ್ನು ಹಾಕುತ್ತಾನೆ : ”ನೀನು ನನ್ನನ್ನು ಪ್ರೀತಿಸುತ್ತೀಯಾ”? ಎಂಬುದಾಗಿ ಮತ್ತು ಉತ್ತರವನ್ನು ಹುಡುಕುವುದು ನಿಮಗೆ ಬಿಟ್ಟದ್ದು.

ಇಸಾಕನು ರೆಬೆಕ್ಕಳನ್ನು ಪ್ರೀತಿಸಿದಾಗ, ಆತನು ಆಕೆಯಿಂದ ಹಿಂದಕ್ಕೆ ಏನನ್ನು ನಿರೀಕ್ಷಿಸಿದನು, ಸೇವೆಯನ್ನಲ್ಲಾ, ಆಕೆಯ ಪ್ರೀತಿಯನ್ನು ನಿರೀಕ್ಷಿಸಿದನು. ಅದೇ ರೀತಿಯಲ್ಲಿ, ಕರ್ತನು ನಮ್ಮಿಂದ ನಿರೀಕ್ಷಿಸುವುದಾದರೂ ಏನು, ಪ್ರಾಥಮಿಕವಾಗಿ ಸೇವೆಯನ್ನಲ್ಲ, ಆದರೆ ನಮ್ಮ ಪ್ರೀತಿಯನ್ನು ನಿರೀಕ್ಷಿಸುತ್ತಾನೆ. ಎಲ್ಲಿ ನಿಜವಾದ ಪ್ರೀತಿಯಿರುತ್ತದೋ, ಅಲ್ಲಿ ಸೇವೆಯು ಸ್ವಾಭಾವಿಕವಾಗಿ ಸಾಗುತ್ತದೆ. ಅಬ್ರಹಾಮನ ಸೇವಕನ ಜೊತೆಗೂಡಿ, ರೆಬಕ್ಕಳು 600 ಕಿ.ಮೀ ಪ್ರಯಾಣವನ್ನು ಮೆಸೊಪೊಟೋಮಿಯದಿಂದ ಕಾನಾನ್ ಗೆ ಬೆಳೆಸಿದಳು. ಅವರು ಆ ಪ್ರಯಾಣದ ಅವಧಿಯ ಮಧ್ಯದಲ್ಲಿ ಏನನ್ನು ಮಾತನಾಡಿರಬಹುದು? ಆಕೆಯು ನಿಜವಾಗಿ ಇಸಾಕನನ್ನು ಪ್ರೀತಿಸಿದ್ದೇ ಆದಲ್ಲಿ, ನಿಶ್ಚಯವಾಗಿ ರೆಬೆಕ್ಕಳು ದಾರಿಯಲ್ಲೆಲ್ಲಾ ಆತನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾಳೆ. ಆಕೆಯು ತನ್ನ ಪ್ರಯಾಣದ ಜೊತೆಗಾರ ಮತ್ತು ಮಾರ್ಗದರ್ಶಿಗೆ, ಕೊನೆಯಿಲ್ಲದೇ ಇಸಾಕನಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಿದ್ದಳು. ವಿಶ್ವಾಸಿಯು ಇಂತಹ ಹಸಿವೆಯನ್ನು ಹೊಂದಿ, ಕರ್ತನಾದ ಯೇಸುವನ್ನು ನಿಜವಾಗಿಯೂ ಪ್ರೀತಿಸುವುದಾದಲ್ಲಿ, ಸತ್ಯವೇದವನ್ನು ನಿಶ್ಚಯವಾಗಿ ಓದುತ್ತಾನೆ. ದಿನದಿಂದ ದಿನಕ್ಕೆ ಪವಿತ್ರಾತ್ಮನನ್ನು, ತನ್ನ ಕರ್ತನ ಸೌಂದರ್ಯವನ್ನು ಪ್ರಕಟ ಪಡಿಸುವಂತೆ ಆಹ್ವಾನಿಸುತ್ತಾನೆ.

ಕರ್ತನಿಗಾಗಿ ನಾವು ಇಟ್ಟಿರುವಂತ ಪ್ರೀತಿಯ ಅಳತೆಯು ನಮ್ಮ ಆತ್ಮೀಕತೆಯ ನಿಜವಾದ ಆಳತೆಯಾಗಿದೆ ಎಂಬುದನ್ನು ಕರ್ತನು ನಮಗೆ ಹೊಸದಾಗಿ ತೋರಿಸಲಿ ಮತ್ತು ನಾವು ಮೋಸ ಹೋಗದ ಹಾಗೆ, ಆತನು ತಾನಾಗೇ ಒದಗಿಸಿರುವಂತ ಮಾಪಕವನ್ನು ನಾವು ನೆನಪಿಟ್ಟುಕೊಳ್ಳೋಣ. ನಮ್ಮ ವಿಧೇಯತೆಯು, ಪ್ರೀತಿಯ ಗುರುತಾಗಿದೆ (ಯೋಹಾನ 14:15, 21, 23 ,24).

ಸತ್ಯವೇದದಲ್ಲಿನ ಕೊನೆಯ ಪುಸ್ತಕದಲ್ಲಿ ಈ ಗಂಭೀರ ಸತ್ಯವು ಧೃಢಿಕರಿಸಲ್ಪಟ್ಟಿದೆ. ಎಫೆಸದಲ್ಲಿನ ಸಭೆಯನ್ನು ದೇವರು ಗದರಿಸುತ್ತಾರೆ, ಏಕೆಂದರೆ ಅದು ಮೊದಲ ಸಂಗತಿಗಳನ್ನು ಕಳೆದುಕೊಂಡಿದ್ದಕ್ಕಾಗಿ (ಪ್ರಕಟಣೆ 2:1-5). ಇನ್ನೂ ಮಿಕ್ಕ ಎಲ್ಲಾ ವಿಷಯಗಳಲ್ಲೂ ಈ ಸಭೆಯು ಅಸಾಮಾನ್ಯ ಸಭೆಯಾಗಿತ್ತು. ಅಲ್ಲಿರುವಂತ ಕ್ರೈಸ್ತರು ತಾಳ್ಮೆಯಿಂದ ಸೈರಿಸಿಕೊಂಡಿದ್ದರು, ದುಷ್ಟತನವನ್ನು ಅವರು ಸಹಿಸಿಕೊಳ್ಳುತ್ತಿದ್ದಿಲ್ಲ, ಅಪೊಸ್ತಲರಲ್ಲದಿದ್ದರೂ ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ಅವರು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿದ್ದರು, ಅವರು ಕ್ರಿಸ್ತನ ಹೆಸರಿನ ನಿಮಿತ್ತ ಬಾಧೆಯನ್ನು ಸೈರಿಸಿಕೊಂಡಿದ್ದರೂ ಬೇಸರಗೊಂಡಿರಲಿಲ್ಲ. ಹೃದಯ ಮತ್ತು ಆತ್ಮ, ಎರಡೂ ಸಹ ಕರ್ತನ ಕಾರ್ಯದಲ್ಲಿದ್ದವು ಮತ್ತು ಅವರನ್ನು ಯಾವುದು ಸಹ ಕರ್ತನನ್ನು ಬಿಟ್ಟುಕೊಡುವಂತೆ ಮಾಡಲಿಲ್ಲ. ಆದಾಗ್ಯೂ, ಇವೆಲ್ಲವುಗಳನ್ನು ಹೊರತುಪಡಿಸಿ, ಕರ್ತನು ಅವರ ವಿರುದ್ಧವಾಗಿದ್ದನು. ಇದು ತುಂಬಾ ಗಂಭೀರವಾದ ಕೊರತೆಯಾಗಿ ಕಂಡಿತು, ಅವರು ಕರ್ತನ ನಿಮಿತ್ತ ಸಾಕ್ಷಿಯಾಗಿ ಅಸ್ತಿತ್ವ ಕಾಯ್ದುಕೊಳ್ಳುವುದಕ್ಕೆ ಆ ಗಂಭೀರ ಕೊರತೆಯು ಆಪಾಯದ ಸೂಚನೆಯಾಗಿತ್ತು. ಅವರು ಬಿದ್ದು ಹೋಗಿದ್ದರು, ಕರ್ತನು ಅವರಿಗೆ - ನೀವು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲವೆಂದರೆ, ನಿಮ್ಮಿಂದ ನನ್ನ ಅಭಿಷೇಕವನ್ನು ವಾಪಸ್ಸು ತೆಗೆದುಕೊಳ್ಳುವುದಾಗಿ, ನಿಮ್ಮ ಸಾಕ್ಷಿಗೆ ನನ್ನ ಧೃಢಿಕರಣದ ಸಹಿಯನ್ನು ವಾಪಸ್ಸು ಪಡೆದುಕ್ಕೊಳ್ಳುವುದಾಗಿ ಹೇಳಿದನು. ಹಾಗಿದ್ದಲ್ಲಿ, ಗಂಭೀರವಾದಂತ ಕೊರತೆಯಾದರೂ ಏನು? ಇದು ಮಾತ್ರವೇ ಆಗಿತ್ತು - ಅಂದರೆ, ಅವರು ಕರ್ತನಿಗಾಗಿ ಇಟ್ಟಿರುವ ಪ್ರೀತಿಯಲ್ಲಿ ತಣ್ಣಗಾಗಿದ್ದರು. ಅವರು ಕರ್ತನಿಗಾಗಿ ಮೊದಲ ಪ್ರೀತಿಯನ್ನು ಕಳೆದುಕೊಂಡಿರಲಿಲ್ಲ, ಅವರು ಕೇವಲ ಅದನ್ನು ಬಿಟ್ಟಿದ್ದರು ಮತ್ತು ಬೇರೆ ಕಡೆ ತೆರಳಿದ್ದರು. ಅವರು ತಮ್ಮ ಕೂಟಗಳ ವಿಷಯವಾಗಿ ತುಂಬಾ ಕಾರ್ಯನಿರತರಾಗಿದ್ದರು ಮತ್ತು ಹಿಂಜಾರಿ ಬೀಳುವಿಕೆ ಅವರಲ್ಲಿ ಪ್ರಾರಂಭವಾಗಿತ್ತು ಹಾಗೂ ಸಭೆ ಕರೆಯುತ್ತಿದ್ದರು (ನಾವು ಕೂಡ ಮಾತನಾಡಬಹುದಾ ಎಂಬ ವಿಷಯವಾಗಿ) ಮತ್ತು ಅವರ ಇನ್ನಿತರೆ ಕ್ರೈಸ್ತ ಚಟುವಟಿಕೆಗಳು ಧಾರ್ಮಿಕ ರೀತಿಯಿಂದ ಕೂಡಿದ್ದವು, ಒಂದು ರೀತಿಯಲ್ಲಿ ಅವರು, ಕರ್ತನೊಬ್ಬನಿಗೆ ಇಡಬೇಕಾದಂತ ದೃಷ್ಟಿಯನ್ನು ಕಳೆದುಕೊಂಡಿದ್ದರು, ಮಿಕ್ಕ ಎಲ್ಲಾ ಸಂಗತಿಗಳು ಜೀವದಿಂದ್ದವು. ಇದು ಸ್ಪಷ್ಟವಾಗಿ ತೋರಿಸುವುದೇನೆಂದರೆ, ನಮ್ಮ ಎಲ್ಲಾ ಚಟುವಟಿಕೆಗಳಿಗಿಂತ, ನಮ್ಮ ಹೃದಯದಲ್ಲಿ ಆತನ ಕಡೆಗಿನ ಪ್ರೀತಿಯ ವಿಷಯವಾಗಿ ಕರ್ತನು ಹೆಚ್ಚು ಕಾಳಜಿ ವಹಿಸುತ್ತಾನೆ. ಸೈತಾನನು ಇದನ್ನು ಅರಿತುಕೊಂಡಿದ್ದಾನೆ, ಆದ್ದರಿಂದ ಸೈತಾನನು, ನಾವು ಒಂದು ಕಡೆ ಕ್ರೈಸ್ತ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರುವಂತೆ ಮಾಡುತ್ತಾನೆ, ಇದರಿಂದ, ನಮ್ಮ ಅಶಿರ್ವಾದ ನಿಧಿಯಾದ ಕರ್ತನೊಟ್ಟಿಗೆ ಸಮಯವನ್ನು ಕಳೆಯಲು ಸಮಯವೇ ಇಲ್ಲದಿರುವುದನ್ನು ನಾವು ಕಂಡುಕೊಳ್ಳುತ್ತೀವಿ ಮತ್ತು ಆತನಿಗಿರುವಂತ ವೈಯುಕ್ತಿಕ ಪ್ರೀತಿಯಿಂದ ಮೆಲ್ಲಗೆ ಜಾರಿಕೊಳ್ಳುತ್ತೇವೆ.

ಯೇಸು ನಮಗೆ ಎಚ್ಚರಿಸಿದ್ದೇನೆಂದರೆ, ಕೊನೆಯ ದಿನಗಳಲ್ಲಿ ಪಾಪವು ಲೋಕದಲ್ಲಿ ಹೆಚ್ಚು ತುಂಬಿರುತ್ತದೆ, ಇದರಿಂದಾಗಿ ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವುದು (ಮತ್ತಾಯ 24:12). ನಾವು ಈ ರೀತಿಯ ದಿನಮಾನಗಳಲ್ಲಿ ಜೀವಿಸುತ್ತಿದ್ದೀವಿ. ಬಹಿರಂಗವಾಗಿ ನೋಡುವುದಾದರೆ. ದೊಡ್ಡ ಗುಂಪಾದ ಕರ್ತನ ಹಿಂಭಾಲಕರುಗಳ ಮಧ್ಯದಲ್ಲಿ ಆತ್ಮೀಕ ತಾಪವು ತೀರಾ ತಣ್ಣಗಾಗಿರುವ ಅಂಶಕ್ಕಿಂತ ಇನ್ನೂ ಕಡಿಮೆ ಇಳಿದಿದೆ. ನಮಗೆ ನಾವು ಸತತವಾಗಿ ಎಚ್ಚರವಾಗಿರುವ ತನಕ, ಕೊರೆಯುವ ಚಳಿಯ ವಾತಾವರಣವು ನಮ್ಮೊಳಗೆ ಒಳ ಹೊಕ್ಕುವುದನ್ನು ನಾವು ಕಂಡುಕೊಳ್ಳುತ್ತೇವೆ. ಕ್ರಿಸ್ತನಲ್ಲಿನ ನನ್ನ ಪ್ರೀಯ ಸಹೋದರ, ಸಹೋದರಿಯರೆ, ನೀವು ಏನನ್ನು ಕಳೆದುಕೊಂಡರೂ, ಕರ್ತನಿಗಾಗಿ ನೀವು ಇಟ್ಟಿರುವಂತ ಪ್ರೀತಿಯು ಕಡಿಮೆಯಾಗದಿರಲಿ (ತಣ್ಣಗಾಗದಿರಲಿ). ಇದನ್ನು ಜೋಪಾನವಾಗಿಟ್ಟುಕ್ಕೊಂಡು, ಇದನ್ನು ನಿಮ್ಮ ಪೂರ್ಣ ಹೃದಯದಿಂದ ಬಯಸಿ ಮತ್ತು ನಿಮ್ಮ ಜೀವಿತದ ಎಲ್ಲಾ ದಿನಗಳನ್ನು ಹುಡುಕಿರಿ.

”ದೊಡ್ಡದು ಪ್ರೀತಿಯೇ, ಪ್ರೀತಿಯನ್ನು ಅಭ್ಯಾಸ ಮಾಡಿಕೊಳ್ಳಿರಿ” (1 ಕೊರಿಂಥ 13:13, 14:1).