WFTW Body: 

ದಾನಿಯೇಲನ ಪುಸ್ತಕದಲ್ಲಿ, ಬಾಬೇಲೋನಿನ್ ನಿಂದ ಯೆರುಸಲೇಮ್ ಗೆ ಚಲನೆಯ ಪ್ರಾರಂಭವನ್ನು ನಾವು ನೋಡುತ್ತೇವೆ - ಸಾಂಕೇತಿಕವಾಗಿ, ಭ್ರಷ್ಟಾಚಾರದಿಂದ, ದೇವರ ಹೊಸ ಒಡಂಬಡಿಕೆ ಸಭೆಗೆ ರಾಜಿಯಾಗುವಂತ ಕ್ರೈಸ್ತತ್ವವನ್ನು ನಾವು ನೋಡುತ್ತೇವೆ. ದೇವರ ಉದ್ದೇಶಗಳ ಬಗ್ಗೆ ಕಾಳಜಿವಹಿಸಿದ ಮತ್ತು ಉಪವಾಸ ಮಾಡಿದ ಹಾಗೂ ದೇವರ ಉದ್ದೇಶಗಳು ನೇರವೇರುವಂತೆ ಪ್ರಾರ್ಥಿಸಿದ ಒಬ್ಬ ಪ್ರಾಮಾಣಿಕ, ರಾಜಿಯಾಗದೇ ಇರುವಂತ ಮನುಷ್ಯನಿಂದ ಇದು ಪ್ರಾರಂಭವಾಗುತ್ತದೆ.

ಯೌವನಸ್ಥನಾಗಿದ್ದುಕೊಂಡು ನಂಬಿಗಸ್ಥನಾಗಿ ತನ್ನ ಜೀವನವನ್ನು ಪ್ರಾರಂಭಿಸಿದಾಗ, ಎಂಥಹ ಅದ್ಭುತ ಸೇವೆಯನ್ನು ತಾನು ಹೊಂದುತ್ತೇನೆಂದು ದಾನಿಯೇಲನು ಅರಿತಿರಲಿಲ್ಲ. ದಾನಿಯೇಲನು ಸಣ್ಣ ಮತ್ತು ದೊಡ್ಡ ದೊಡ್ಡ ವಿಷಯಗಳಲ್ಲಿ ನಂಬಿಗಸ್ಥನಾಗಿಯೇ ಉಳಿದುಕೊಂಡನು ಮತ್ತು ದೇವರು ಆತನ ಮುಖಾಂತರ ದೊಡ್ಡ ಸೇವೆಯನ್ನು ಪೂರೈಸಿಕೊಂಡರು. ದಾನಿಯೇಲನ ಪುಸ್ತಕ ಪ್ರಾರಂಭವಾದಗ, ದಾನಿಯೇಲನು 17 ನೇ ವಯಸ್ಸಿನಲ್ಲಿರಬಹುದು ಮತ್ತು ಆತನು 90 ನೇ ವಯಸ್ಸಿಗೆ ಬಂದಾಗ ಪುಸ್ತಕವು ಕೊನೆಗೊಂಡಿತು. ಆತನು 70 ವರುಷಗಳ ಕಾಲ ಸೆರೆಯ ಮುಖಾಂತರವೇ ಜೀವಿಸಿದನು ಮತ್ತು ಆ ಸಂದರ್ಭದಲ್ಲಿ ಆತನು ನಂಬಿಗಸ್ಥನಾಗಿದ್ದನು. ಅದಕ್ಕಾಗಿ ದೇವರು ಆತನನ್ನು ಬಾಬೆಲೋನಿನಿಂದ ಯೆರುಸಲೇಮಿಗೆ ನಡಿಗೆಯನ್ನು ಪ್ರಾರಂಭಿಸಲು ಉಪಯೋಗಿಸಿದರು.

ದೇವರಿಗಾಗಿ ಶುದ್ಧ ಸಭೆಯು ಯಾವುದೇ ಸ್ಥಳದಲ್ಲಿಯಾದರೂ, ಯಾವಾಗಲೂ, ಪ್ರಾರ್ಥನೆಯ ಭಾರವನ್ನು ಹೊಂದಿದಂತ ಒಬ್ಬ ಮನುಷ್ಯನಿಂದ ಮತ್ತು ಆ ಒಂದು ಭಾರವನ್ನು ದೇವರ ಮುಂದೆ ಯಾವಾಗಲೂ ಹೊತ್ತುಕೊಂಡು ಸಾಗಿ - ”ಕರ್ತನೇ, ನಿನಗಾಗಿ ಈ ಸ್ಥಳದಲ್ಲಿ ಒಂದು ಪರಿಶುದ್ಧ ಸಭೆಯು ಬೇಕು, ಇದಕ್ಕಾಗಿ ನಾನು ಏನು ಬೇಕಾದರೂ ಬೆಲೆ ತೆತ್ತಲೂ ಸಿದ್ಧನಾಗಿದ್ದೇನೆ” ಎಂದು ಹೇಳುವಂತ ಒಬ್ಬ ಮನುಷ್ಯನಿಂದ ಪ್ರಾರಂಭವಾಗುತ್ತದೆ. ನೀವು ಈ ಒಂದು ಭಾರವನ್ನು ದೇವರ ಎದುರಿಗೆ ಪದೇ ಪದೇ ಪ್ರಾರ್ಥನೆಯಲ್ಲಿ ಹೊತ್ತುಕ್ಕೊಂಡು ಸಾಗಲು ಮನಸ್ಸುಳ್ಳವರಾಗಿರಬೇಕು. ನೀವು ತುಂಬಾ ಅವಧಿಯವರೆಗೂ ಈ ಭಾರವನ್ನು ಹೊತ್ತುಕೊಂಡು ಸಾಗಬೇಕಾಗಬಹುದು. ನಾನು ಹೊಸ ಒಡಂಬಡಿಕೆಯ ಸಭೆಯ ಪ್ರಾರಂಭವನ್ನು ನೋಡುವ ಮೊದಲು ಹತ್ತು ವರುಷಗಳ ಕಾಲ ಈ ಒಂದು ಭಾರವನ್ನು ಹೊತ್ತುಕೊಂಡು ಸಾಗಿದ್ದೇನೆ. ದೇವರು ನಂಬಿಗಸ್ಥಿಕೆಯನ್ನು ಪರೀಕ್ಷೆ ಮಾಡುತ್ತಾರೆ. ಒಬ್ಬ ತಾಯಿ ತನ್ನ ಮಗುವನ್ನು ಗರ್ಭದಲ್ಲಿ ಹೊತ್ತು ಸಾಗುವ ಹಾಗೇ, ನಾವು ಈ ಒಂದು ಭಾರವನ್ನು ನಮ್ಮ ಹೃದಯದಲ್ಲಿ ಹೊತ್ತು ಸಾಗಬೇಕು. ಅದೇ ರೀತಿಯಾಗಿ ದಾನಿಯೇಲನು ಈ ಒಂದು ಭಾರವನ್ನು ತನ್ನ ಹೃದಯದಲ್ಲಿ ಹೊತ್ತು ಸಾಗಿದನು. ನಂತರದ ವರುಷಗಳಲ್ಲಿ ಇದರ ಫಲಿತಾಂಶ ಮತ್ತೊಬ್ಬರಲ್ಲಿಯೂ ಸಹ ಈ ಭಾರವನ್ನು ಹಂಚಿಕೊಳ್ಳುವುದಕ್ಕೆ ಪ್ರಾರಂಭವಾಯಿತು - ಹಗ್ಗಾಯ, ಜೆರುಬ್ಬಾಬೇಲನು, ಯೆಹೂಶುವ, ಜೆಕ್ಕಾರ್ಯ, ಎಜ್ರ, ನೆಹೆಮಿಯಾ ಮತ್ತು ಇತರರೊಂದಿಗೆ. ನಿಮ್ಮ ಒಂದು ಭಾರವನ್ನು ಹಂಚಿಕೊಳ್ಳಲಿಕ್ಕೆ ದೇವರು ಮತ್ತೊಬ್ಬರನ್ನು ತಾನೇ ನಿಮ್ಮೊಟ್ಟಿಗೆ ಸೇರಿಸುತ್ತಾರೆ ಮತ್ತು ಅವರುಗಳೊಟ್ಟಿಗೆ ಸೇರಿ ನೀವು ದೇವರ ಹೊಸ ಒಡಂಬಡಿಕೆ ಸಭೆಯನ್ನು ಕಟ್ಟಲು ಶಕ್ತರಾಗುತ್ತೀರಿ. ದಾನಿಯೇಲನು ತನ್ನ 90ನೇ ವಯಸ್ಸಿನಲ್ಲಿ ಯೆರುಸಲೇಮಿಗೆ ಹಿಂತಿರಿಗಿ ಹೋಗಿ ದೇವಾಲಯವನ್ನು ಕಟ್ಟಲಿಕ್ಕೆ ಅಶಕ್ತನಾಗಿದ್ದನು, ಕಾರಣ ವಯೋವೃದ್ಧನಾಗಿದ್ದರಿಂದ. ಆದರೆ ತೆರೆಮರೆಯ ಹಿಂದೆ ಮತ್ತು ಪ್ರಾರ್ಥನೆ ಮಾಡಿದ್ದರ ಹಿಂದೆ ನಿಂತುಕೊಂಡು, ದೇವಾಲಯವನ್ನು ಕಟ್ಟಲಿಕ್ಕೆ ಸಹಾಯಿಸುತ್ತಿದ್ದನು.

ದಾನಿಯೇಲನು ಅನ್ಯ ಜನಗಳು ಜೀವಿಸುತ್ತಿದ್ದ ಸ್ಥಳದಲ್ಲಿ ಜೀವಿಸುತ್ತಿದ್ದನು. ಹಾಗಾಗಿ, ದೇವರಿಗಾಗಿ ನಾವು ಹೇಗೆ ನಮ್ಮ ಕ್ರೈಸ್ತ ತತ್ವಗಳಿಗೆ ರಾಜಿಯಾಗದೇ ನಿಲ್ಲಬೇಕು ಅಕ್ರೈಸ್ತತ್ವ ಸ್ಥಳದಲ್ಲಿ ಎಂಬುದಕ್ಕೆ ಆತನು ವಿಶೇಷವಾಗಿ ನಮಗೆ ಮಾದರಿಯಾಗಿದ್ದಾನೆ. ಆತನು ಕೇವಲ ಮೂರು ಜನ ಮನಪೂರ್ವಕವಾದಂತವರನ್ನು ಮಾತ್ರ ಸೇರಿಸಿದನು, ಹನನ್ಯನು, ಮಿಶಾಯೇಲನು, ಅಜರ್ಯನು (ಇವರುಗಳು ಬಾಬೇಲೋನಿಯನ್ ಹೆಸರುಗಳಿಂದ ಹೆಚ್ಚು ಗೊತ್ತಿರುವಂತವರು - ಶದ್ರಕ್, ಮೇಶಕ್, ಅಬೇದ್ ನೆಗೋ). ಆದರೆ ಈ ಯೌವನಸ್ಥರುಗಳು ಬಾಬೇಲೋನಿನಲ್ಲಿ ದೇವರಿಗಾಗಿ ಬಲಶಾಲಿಯಾದಂತ ಸಾಕ್ಷಿಯನ್ನು ಹೊಂದಿದ್ದರು. ಲೋಕದ ಮಹಾಶಕ್ತಿಯಾದ ರಾಜಧಾನಿಯ ಈ ಒಂದು ಪಟ್ಟಣದಲ್ಲಿ -ಈ ನಾಲ್ಕು ಜನರಿಂದ ಮಾತ್ರ ಕೂಡಿದ ಒಂದು ಸಣ್ಣ ಸಭೆಯಾಗಿತ್ತು. ಬಾಬೆಲೋನಿನ ಬೇರೆ ನೂರು ಮತ್ತು ಸಾವಿರಾರು ಯೆಹೂಧ್ಯರಿಗಿಂತ, ಈ ನಾಲ್ಕು ಜನರು ಆ ಒಂದು ದೇಶದ ಮೇಲೆ ಪ್ರಭಾವ ಬೀರಿದರು, ಏಕೆಂದರೆ ಒಂದು ಕಾರಣಕ್ಕಾಗಿ : ”ಬೇರೆಯಾರು ರಾಜಿಯಾದರು, ಆದರೆ ಈ ನಾಲ್ಕು ಜನ ಯೌವನಸ್ಥರು ರಾಜಿಯಾಗಲಿಲ್ಲ”.

ಅನೇಕ ಸಂಖ್ಯೆಯುಳ್ಳ ಕ್ರೈಸ್ತರಿಂದ ದೇಶವನ್ನು ಅಥವಾ ಗ್ರಾಮವನ್ನು ಪ್ರಭಾವಗೊಳಿಸಬಹುದು ಎಂಬುದಾಗಿ ಯೋಚಿಸಬೇಡಿರಿ. ದೇವರಿಗಾಗಿ ನಿಂತ ನಾಲ್ಕು ಜನರು ಲೋಕದಲ್ಲಿಯೇ ಮಹಾಶಕ್ತಿಯಿಂದ ಕೂಡಿದ್ದ ದೇಶವನ್ನು ಮತ್ತು ಆಡಳಿತ ನಡೆಸುವವರನ್ನು ಪ್ರಭಾವಿತಗೊಳಿಸಿದರು. ಈ ಸಂದೇಶವು ಇದರ ಮೂಖಂತರ ಬರುತ್ತದೆ - ”ಇದು ಸಂಖ್ಯೆಗಳಿಂದ ಅಲ್ಲ, ಇದು ಮನುಷ್ಯನ ಶಕ್ತಿಯಿಂದಲೂ ಅಲ್ಲ, ತನ್ನ ಆತ್ಮನಿಂದ ದೇವರು ತನ್ನ ಕೆಲಸವನ್ನು ಪೂರೈಸಿಕೊಳ್ಳುತ್ತಾನೆ”. ಯಾರು ಪ್ರಾಮಾಣಿಕರಾಗಿದ್ದಾರೋ ಮತ್ತು ಯಾರು ರಾಜಿಯಾಗುವುದಿಲ್ಲವೋ ಅಂಥವರನ್ನು ದೇವರು ನೋಡುತ್ತಿರುತ್ತಾರೆ.

ತಮ್ಮನ್ನು ತಾವು ಅಶುದ್ಧ ಮಾಡಿಕೊಳ್ಳಬಾರದು ಎಂದು ತಮ್ಮ ಹೃದಯದಲ್ಲಿ ನಿಶ್ಚಯಿಸಿಕೊಂಡಂತ ದಾನಿಯೇಲನಂತವರನ್ನು ದೇವರು ನೋಡುತ್ತಿದ್ದಾರೆ

ದಾನಿಯೇಲ 1:8 ರಲ್ಲಿ ಒಂದು ಬಹುಮುಖ್ಯವಾದ ವಚನವನ್ನು ನಾವು ಓದುತ್ತೇವೆ - ”ದಾನಿಯೇಲನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿಕೊಂಡನು”. ದಾನಿಯೇಲನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿಕೊಂಡಾಗ, ಆತನಿಗೆ ಮೊದಲ ಪರೀಕ್ಷೆ ಬಂದಿದ್ದು ಆಹಾರದ ವಿಷಯವಾಗಿ. ಆದಾಮ ಮತ್ತು ಹವ್ವಳಿಗೂ ಸಹ ಮೊದಲ ಪರೀಕ್ಷೆ ಎದುರಾದದ್ದು ಆಹಾರದ ವಿಷಯವಾಗಿ ಮತ್ತು ಅರಣ್ಯದಲ್ಲಿ ಯೇಸುವಿಗೆ ಮೊದಲ ಪರೀಕ್ಷೆ ಎದುರಾದದ್ದು ಸಹ ಆಹಾರದ ವಿಷಯವಾಗಿ. ಹಾಗಾದರೆ ರುಚಿಯುಳ್ಳಂತ ಆಹಾರದ ವಿಷಯವಾಗಿ ನಿಮ್ಮ ನಡವಳಿಕೆ ಏನಾಗಿದೆ, ಇದು ದೇವರ ತತ್ವಗಳನ್ನು ರಾಜಿಮಾಡಿಕೊಳ್ಳುವುದರಲ್ಲಿ ಒಳಗೊಂಡಿದೆಯಾ? ಏಸಾವನು ತನ್ನ ಚೊಚ್ಚಲು ತನದ ಹಕ್ಕನ್ನು ಕಳೆದುಕೊಂಡದ್ದು ಏಕೆಂದರೆ ಆಹಾರದ ವಿಷಯವಾಗಿ. ಇಸಾಕನು ತನ್ನ ಆತ್ಮೀಕ ದೃಷ್ಟಿಯನ್ನು ಕಳೆದುಕೊಂಡದ್ದು ಏಕೆಂದರೆ, ತನ್ನ ಪ್ರೀತಿಯನ್ನು ರುಚಿಯಾದ ಆಹಾರದ ಕಡೆ ಇಟ್ಟಿದ್ದಕ್ಕಾಗಿ, ಅದು ಏಸವನನ್ನು ಕರೆತರುವಂತೆ ಮಾಡಿತು. ಆದರೆ ದಾನಿಯೇಲನ ನಡವಳಿಕೆ ಹೀಗಿತ್ತು, ”ದೇವರು ತನ್ನ ಮಾತಿನಲ್ಲಿ ಈ ರೀತಿಯ ಆಹಾರವನ್ನು ತಿನ್ನಬಾರದು ಎಂದು ಹೇಳಿದ್ದಾರೆ, ಹಾಗಾಗಿ ನಾನು ತಿನ್ನುವುದಿಲ್ಲ” ಎಂಬುದಾಗಿ. ದಾನಿಯೇಲನು ದೇವರ ವಾಕ್ಯಗಳನ್ನ ಯೌವನಸ್ಥನಾಗಿದ್ದಾಗ ಚೆನ್ನಾಗಿ ಅಧ್ಯಯನ ಮಾಡಿದ್ದನು ಮತ್ತು ಅರಿತಿದ್ದನು ಮೊಶೇಯ ನಿಯಮಗಳಲ್ಲಿ ಕೆಲವು ಪ್ರತ್ಯೇಕ ಆಹಾರಗಳನ್ನು ತಿನ್ನಬಾರದು ಅಂತ ಇತ್ತು, ಅದು ನಿಷೇಧಿಸಲ್ಪಟ್ಟಿದೆ ಎಂಬುದಾಗಿ ಗೊತ್ತಿತ್ತು ಮತ್ತು ಜ್ಞಾನೋಕ್ತಿಗಳ ಪುಸ್ತಕವು ಮಧ್ಯಪಾನ ವನ್ನು ತೆಗೆದುಕೊಳ್ಳಬಾರದು ಎಂಬುದಾಗಿ ಹೇಳಿತ್ತು. ಹಾಗಾಗಿ ಆತನಿಗೆ ಎಷೇ ಕಷ್ಟವಾದರೂ, ಆತನು ದೇವರಿಗೆ ವಿಧೇಯನಾಗಲು ನಿರ್ಧರಿಸಿದನು .

ಎಲ್ಲಾ ಯೆಹೂದ್ಯರು ರಾಜಿಯಾದಾಗ, ಪ್ರಾರಂಭದಲ್ಲಿ ಆತನು ಒಬ್ಬನೇ ನಿಲ್ಲಬೇಕಾಗಿ ಬಂತು. ಆದರೆ ಹನನ್ಯ, ಮಿಶಾಯೇಲ ಮತ್ತು ಅಜರ್ಯ, ಇವರುಗಳು ದೇವರಿಗಾಗಿ ನಿಲ್ಲುವಂತ ಒಬ್ಬ ಯೌವನಸ್ಥನನ್ನು ನೋಡುವಾಗ, ಅವರೂ ಆತನೊಟ್ಟಿಗೆ ಸೇರಿಕೊಳ್ಳಲು ಧ್ಯರ್ಯಗೊಂಡರು (ದಾನಿಯೇಲ 1:11). ದಾನಿಯೇಲನು ದೇವರಿಗೆ ನಿಲ್ಲದೆ ಇದ್ದಿದ್ದರೆ, ನಾವು ಹನನ್ಯ, ಮಿಶಾಯೇಲನು ಮತ್ತು ಅಜರ್ಯನ ಬಗ್ಗೆ ಕೇಳುತ್ತಲೇ ಇರಲಿಲ್ಲ.

ನಾನು ನಂಬುತ್ತೇನೆ, ಹನನ್ಯ, ಮಿಶಾಯೇಲ ಮತ್ತು ಅಜರ್ಯನ ರೀತಿ ದೇವರಿಗಾಗಿ ನಿಲ್ಲಲು ಅನೇಕ ಜನರಿದ್ದಾರೆ, ತಮ್ಮ ಸ್ಥಳೀಯ ಸ್ಥಳದಲ್ಲಿ ಕರ್ತನಿಗಾಗಿ ಶುದ್ಧವಾದ ಸಾಕ್ಷಿಯನ್ನು ಹೊಂದಲು ಇಚ್ಛಿಸುವವರಿದ್ದಾರೆ, ಆದರೆ ತಮ್ಮಷ್ಟಕ್ಕೆ ತಾವೇ ನಿಲ್ಲಲ್ಲು ಅವರು ಧ್ಯರ್ಯವನ್ನು ಹೊಂದಿಲ್ಲ. ಅವರು ತಮ್ಮ ನಾಯಕನಾದ ದಾನಿಯೇಲನಂತವರನ್ನು ನೋಡುತ್ತಿದ್ದಾರೆ ಮತ್ತು ದಾನಿಯೇಲನಂತವರು ಆ ಗ್ರಾಮಕ್ಕೆ ಮತ್ತು ಪಟ್ಟಣಕ್ಕೆ ಬಂದಾಗ, ಆ ಕ್ರೈಸ್ತರು ಬಂದು ಆತನೊಟ್ಟಿಗೆ ಸೇರಿಕೊಳ್ಳುತ್ತಾರೆ. ಆದರೆ ದಾನಿಯೇಲನು ಅವರ ಸ್ಥಳಕ್ಕೆ ಬರದೇ ಹೋದರೆ, ಈ ಜನರು ಜೀವಿಸಿ, ದೇವರಿಗಾಗಿ ಯಾವುದೇ ಸಾಕ್ಷಿಯನ್ನು ಹೊಂದದೇ ಸತ್ತುಹೋಗುತ್ತಾರೆ.

ಇಂದು ದಾನಿಯೇಲನಂತವರು ಇರುವುದು ದೊಡ್ಡ ಅಗತ್ಯತೆ ಇದೆ. ತಮ್ಮನ್ನು ತಾವು ಅಶುದ್ಧ ಮಾಡಿಕೊಳ್ಳಬಾರದು ಎಂದು ತಮ್ಮ ಹೃದಯದಲ್ಲಿ ನಿಶ್ಚಯಿಸಿಕೊಂಡಂತ ದಾನಿಯೇಲನಂತವರನ್ನು ದೇವರು ನೋಡುತ್ತಿದ್ದಾರೆ ಮತ್ತು ಈ ದಾನಿಯೇಲರು ದೇವರಿಗಾಗಿ ನಿಂತಾಗ, ಇಂತವರು ತನ್ನಿಂದ ತಾನಾಗೇ ಹನನ್ಯರಂತವರನ್ನು, ಮಿಶಾಯೇಲರಂತವರನ್ನ ಮತ್ತು ಅಜರ್ಯರರಂತವರನ್ನು ಸೆಳೆದುಕೊಳ್ಳುತ್ತಾರೆ. ಅನೇಕ ಸ್ಥಳಗಳಲ್ಲಿ ಈ ರೀತಿ ಆಗಿದ್ದನ್ನು ನಾನು ನೋಡಿದ್ದೀನಿ. ದೇವರು ಮೊದಲು ದಾನಿಯಲನಂತವರನ್ನು ನೋಡುತ್ತಾರೆ. ದೇವರು ದಾನಿಯೇಲನಂತವರನ್ನು ಕಂಡುಕೊಳ್ಳಲಿಲ್ಲವಾದರೆ, ನಂತರ ಏನು ಆಗುವುದಿಲ್ಲ. ಯಾರು ತಮ್ಮದನ್ನ ಹುಡುಕುವುದಿಲ್ಲವೋ, ತಮ್ಮದರಲ್ಲಿ ಯಾವ ಆಸಕ್ತಿಯನ್ನು ಹೊಂದದೇ ಇರುವಂತವರನ್ನು ಮತ್ತು ಅಗತ್ಯ ಬಿದ್ದರೆ ದೇವರಿಗಾಗಿ ತಮ್ಮ ಜೀವವನ್ನು ಕಳೆದುಕೊಳ್ಳಲು ಯಾರು ಮನಸ್ಸು ಮಾಡುತ್ತಾರೋ, ಅಂತವರನ್ನು ದೇವರು ನೋಡುತ್ತಿದ್ದಾರೆ. ದಾನಿಯೇಲನು ಕೇವಲ 17 ವರುಷದವನಾಗಿದ್ದನು. ಇಂದು ಸಹ, ದೇವರು 17 ವರುಷದ ಯೌವನಸ್ಥನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಆತನನ್ನು ಪ್ರವಾದಿಯನ್ನಾಗಿ ಮಾಡುತ್ತಾರೆ ಹಾಗೂ ದೇವರಿಗಾಗಿ ನಿಲ್ಲುವಂತೆ ಆತನನ್ನು ಬಲಗೊಳಿಸುತ್ತಾರೆ. ಮಿಕ್ಕ ಮೂವರು ಮನುಷ್ಯರು ದಾನಿಯೇಲನಿಗಿಂತ ಹಿರಿಯರಾಗಿರಬಹುದು, ಆದರೆ ಅವರು ಆತನಿಗೆ ಅಧೀನರಾಗುತ್ತಾರೆ, ಏಕೆಂದರೆ ಅವರು ಆತನನ್ನು ದೇವರು ನೇಮಿಸಿದಂತ ನಾಯಕನೆಂದು ಗ್ರಹಿಸಿಕೊಳ್ಳುತ್ತಾರೆ.

ಇಂತಹ ದೃಢತೆ ಮತ್ತು ಧೈರ್ಯವನ್ನು ಹೊಂದಿದ ಶಿಷ್ಯರ ಅಗತ್ಯ ಇಂದು ನಮಗೆ ಇದೆ. ದಾನಿಯೇಲನು ಆ ರೀತಿಯಾಗಿದ್ದನು ಮತ್ತು ಶದ್ರಕ್, ಮೇಶಕ್, ಅಬೇದ್ ನೆಗೋ ರವರು ಈ ರೀತಿಯಾಗಿರಬೇಕೆಂದು ದಾನಿಯೇಲನು ಯೋಚಿಸುತ್ತಾನೆ. ರಾಜನು ಕೊಡುವಂತದ್ದನ್ನು ತಿಂದು ರಾಜಿಯಾಗುವ, ವಿಗ್ರಹಕ್ಕೆ ಅಡ್ಡ ಬೀಳುವ ಮತ್ತು ಯೆಹೋವನಲ್ಲಿ ನಂಬಿಕೆ ಇಟ್ಟಿದ್ದೀವಿ ಎಂದು ಅಂದುಕೊಳ್ಳುವಂತ 400 ಜನರಿಗಿಂತ ಬಾಬೆಲೋನಿನಲ್ಲಿ 4 ಜನ ರಾಜಿಯಾಗದೇ ಇರುವಂತವರು ಇರುವುದು ಉತ್ತಮ. ಇಂದಿನ ಬೇಸರದ ಪರಿಸ್ಥಿತಿ ಏನೆಂದರೆ, ಅನೇಕ ಗುಂಪುಳ್ಳ ಕ್ರೈಸ್ತರು ಇಂದು ಇಂಥಹ ರಾಜಿಯಾಗುವವರಿದ್ದಾರೆ. ರಾಜಿಯಾಗುವಂತ ದಿನಗಳಲ್ಲಿ ರಾಜಿಯೇ ಆಗದಂತ ಮತ್ತು ದೇವರಿಗಾಗಿ ನಿಲ್ಲುವಂತ ದಾನಿಯೇಲನಂತವರನ್ನು, ಶದ್ರಕ್ ನಂತವರನ್ನು, ಮೇಶಕ್ ನಂತವರನ್ನು, ಅಬೇದ್ ನೆಗೋ ನಂತವರನ್ನು ದೇವರು ನೋಡುತ್ತಿದ್ದಾರೆ.