ದಾನಿಯೇಲ 11:31-35 ರಲ್ಲಿ- "ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ ನಿತ್ಯ ಹೋಮವನ್ನು ನೀಗಿಸಿ ಹಾಳುಮಾಡುವ ಅಸಹ್ಯ ವಸ್ತವನ್ನು ಪ್ರತಿಷ್ಠಿಸುವದು. ನಿಬಂಧನದ್ರೋಹಿಗಳು ಅವನ ನಯ ನುಡಿಗಳಿಂದ ಕೆಟ್ಟುಹೋಗುವರು; ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು. ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ ಅವರು ಬಹು ದಿವಸ ಕತ್ತಿಬೆಂಕಿಸೆರೆಸೂರೆಗಳಿಗೆ ಸಿಕ್ಕಿಬೀಳುತ್ತಿರುವರು. ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು; ಆ ಮೇಲೆ ಬಹುಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು. ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು; ಅದರಿಂದ ಜನರು ಶೋಧಿಸಲ್ಪಟ್ಟು ಶುದ್ಧಿ ಹೊಂದಿ ಶುಭ್ರರಾಗುವರು; ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು".
ಈ ಮೇಲಿನ ವಾಕ್ಯಗಳು ಅಂತ್ಯಕಾಲದ ದಿನಗಳನ್ನು ಸೂಚಿಸುತ್ತದೆ; ಇನ್ನೂ ಮತ್ತಷ್ಟು ಎಚ್ಚರಿಕೆಯ ಮಾತುಗಳನ್ನು ಸಭೆಗಳಿಗಾಗಿಯೂ ನಾವು ಕಾಣಬಹುದು. ಏಕೆಂದರೆ ಕ್ರಿಸ್ತವಿರೋಧಿ ಆತ್ಮವು ಸಭೆಗಳಲ್ಲಿಯೂ ಕೂಡ ಕಾಣಬರುತ್ತದೆ. ಇದನ್ನು 1 ಯೋಹಾನ 2:18,19 ರಲ್ಲಿ ಓದಬಹುದು.
ಕ್ರಿಸ್ತ ವಿರೋಧಿ ಆತ್ಮವು, ದಾನಿಯೇಲ 11:31 ರ ಪ್ರಕಾರ ಪವಿತ್ರಾಲಯವನ್ನು ಹೊಲೆಗೆಡಿಸಲು ಪ್ರಯತ್ನಿಸುತ್ತದೆ. ನೀತಿ ಮತ್ತು ಪವಿತ್ರತೆಯ ಮಾತುಗಳಿಗೆ ಸೈತಾನನ ಅತ್ಯಧಿಕವಾದ ವಿರೋಧವಿದೆ. ದಾನಿಯೇಲ 11:32 ರಲ್ಲಿ ಹೇಳುವ ಪ್ರಕಾರ ಕ್ರಿಸ್ತ ವಿರೋಧಿ ಆತ್ಮವು ದೇವರ ಆಜ್ಞೆಗಳನ್ನು ಮೀರಲು ಪ್ರೋತ್ಸಾಹಿಸುವದು. ಹೊಸ ಒಡಂಬಡಿಕೆಯ ಜೀವನವು, ಪಾಪದ ಮೇಲೆ ಜಯಹೊಂದಿ ಬದುಕಲು ಭರವಸೆ ಕೊಡುತ್ತದೆ. ಆದರೆ ಕ್ರಿಸ್ತ ವಿರೋಧಿಯು, ಕ್ರಿಸ್ತನಲ್ಲಿ ನಂಬಿಕೆಯುಳ್ಳವರಿಗೆ ಈ ಜಯದ ಜೀವಿತ ಜೀವಿಸಲಿಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾನೆ.
ನಾವು ಸಭೆಯಾಗಿ ಮಾಡುವ ಸೇವೆಯಲ್ಲಿ, ಕಳೆದ 20 ವರುಷದಿಂದ ಅತ್ಯಂತ, ಬಲವಾದ ವಿರೋಧಗಳನ್ನು ಎದುರಿಸುತ್ತಿದ್ದೇವೆ; ಇದಕ್ಕೆ ಮುಖ್ಯ ಕಾರಣ - ನಾವು ಸಾರುವ ನೀತಿ ಮತ್ತು ಪವಿತ್ರತೆಯ ಸತ್ಯವಾಕ್ಯವೇ ಆಗಿದೆ. ನಾವು ತಿಳಿಸಿದ ಸತ್ಯಗಳಲ್ಲಿ- ರೋಮ 6:14 "ಪಾಪವು ನಿಮ್ಮ ಮೇಲೆ ಅಧಿಕಾರನಡಿಸದು", ಮತ್ತು ಲೂಕ 16:13 "ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು", ಮತ್ತು ಮತ್ತಾಯ 5:22 "ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು", ಮತ್ತು ಮತ್ತಾಯ 5:28-29 "ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು", ಇನ್ನೂ ಮುಂತಾದವುಗಳು. ಆದ್ದರಿಂದ ಇಂತಹ ಯೇಸುವಿನ ಸತ್ಯ ವಚನಗಳು ಅನೇಕ ವಿಶ್ವಾಸಿಗಳಿಗೆ ಹಿಡಿಸದ ಕಾರಣ ಅವರು ನಮ್ಮನ್ನು ವಿರೋಧಿಸಿದ್ದಾರೆ.
ನಾವು, ಕ್ರೈಸ್ತ ಸೇವಕರು ಸಂಬಳ ತೆಗೆದುಕೊಳ್ಳುವುದನ್ನು ವಿರೋಧಿಸಿದ್ದೇವೆ. ಯಾಕೆಂದರೆ ಇದು ಬೈಬಲ್ ಅಥವಾ ದೇವರ ವಾಕ್ಯಕ್ಕೆ (ಧರ್ಮಶಾಸ್ತ್ರ ಅಥವಾ ಸತ್ಯವೇದಕ್ಕೆ) ವಿರುದ್ಧವಾಗಿದೆ; ಹಾಗು ಮೊದಲನೆಯ ಶತಮಾನದಲ್ಲಿ (ಯೇಸುವಿನ ಶಿಷ್ಯರು ಇರುವ ಕಾಲದಲ್ಲಿ)ಯೂ ಕೂಡ ಕೇಳದೆ ಇರುವ ಸಂಗತಿ ಇದಾಗಿದೆ. ಮತ್ತು ಧರ್ಮಶಾಸ್ತ್ರ ವಿರುದ್ಧವಾಗಿ ಜನರ ಬಳಿ ಹಣವನ್ನು ಭಿಕ್ಷೇ ಬೇಡುವಂಥದು ಇಂದಿನ ಕ್ರಿಸ್ತೀಯ ಸೇವೆಯ ಗುರುತಾಗಿರುವದನ್ನು ನಾವು ವಿರೋಧಿಸಿದ್ದೇವೆ.
ಇದರಿಂದ ತಮ್ಮ ಹೊಟ್ಟೆಪಾಡಿಗಾಗಿ ದೇವರ ವಾಕ್ಯವನ್ನು ಪ್ರಚಾರ ಮಾಡುವವರ ಮತ್ತು ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವವರ ಕೋಪಕ್ಕೆ ನಾವು ಗುರಿಯಾಗಿದ್ದೇವೆ.
ನಾವು ವ್ಯಕ್ತಿ ಪೂಜೆಯನ್ನಾಗಲಿ(ಮನುಷ್ಯರನ್ನು ದೇವರ ಸಮ ನೋಡುವದು), ರೋಮನ್ ಪೋಪ್ ಹೇಳುವ ಯಾವುದೇ ಉಪದೇಶವನ್ನಾಗಲಿ, ಸಭೆಯಲ್ಲಿ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಳ್ಳುವುದನ್ನಾಗಲಿ, ಹೊರಗಿನ ದೇಶದಿಂದ ಸಭೆಗಳನ್ನು ಆಡಳಿತ ಮಾಡುವಂತದ್ದನ್ನಾಗಲಿ, ಮತ್ತು ಹೊರಗಿನ ದೇಶದವರ ನಾಯಕತ್ವಕ್ಕೆ ಯಾವಾಗಲೂ ಆತುಕೊಂಡು ತಮ್ಮ ಸಭೆಗಳನ್ನು ಬೆಳೆಯಲಿಕ್ಕೆ ಅಡ್ಡಗಾಲು ಹಾಕುವದೆಲ್ಲವನ್ನೂ ವಿರೋಧಿಸಿದ್ದೇವೆ. ಇದು, ಇಂಥ ಎಲ್ಲವುಗಳಿಗೂ ಅಂಟಿಕೊಂಡಿರುವ ಗುಂಪುಗಳನ್ನು ಸಿಟ್ಟುಗೊಳಿಸಿದೆ. ದೇವರ ಪವಿತ್ರ ಸ್ಥಾನವನ್ನು ಯಾವುದಾದರೂ ರೀತಿಯಲ್ಲಿ ಹಾಳುಮಾಡುವಂಥದು ಸೈತಾನನ ಉದ್ದೇಶವಾಗಿದೆ. ದಾನಿಯೇಲ 11:31 ರಲ್ಲಿ ಹೇಳುವ ಪ್ರಕಾರ, ಆತನು ಹಾಳುಮಾಡುವ ಅಸಹ್ಯ ವಸ್ತುವನ್ನು ಸಭೆಯಲ್ಲಿ ಪ್ರತಿಷ್ಠಿಸುತ್ತಾನೆ. ಇದರಿಂದ ದೇವರ ಕಾರ್ಯವನ್ನು ಸಭೆಯ ಒಳಗಿನಿಂದಲೇ ಹಾಳು ಮಾಡುತ್ತಾನೆ. ಕ್ರೈಸ್ತ ಸಭೆಯ ಇತಿಹಾಸ ನೋಡುವದಾದರೆ ಇಂತಹ ಹಾಳುಮಾಡುವ ಶಕ್ತಿಗಳು ಅನೇಕ ಗುಂಪು ಗುಂಪಾಗಿ, ಚಳುವಳಿ ಮೇಲೆ ಚಳುವಳಿ ಮಾಡುತ್ತ ಕಳೆದ 20 ಶತಮಾನ (2000 ವರುಷ)ದಿಂದ ಅಶುದ್ಧವಾದವುಗಳನ್ನು ಮಾಡುವದರಲ್ಲಿ ಸಅಲವಾಗಿವೆ.
ದೇವರು ನೇಮಿಸಿದ ಕಾವಲುಗಾರರು ಅಲಕ್ಷ್ಯರಾಗಿ ಮತ್ತು ಎಚ್ಚರವಹಿಸದೇ ಹೋಗಿರುವುದು ಸಭೆಯು ಹಾಳಾಗುವದಕ್ಕೆ ಕಾರಣವಾಗಿದೆ. ಸೈತಾನನು ಕಾವಲುಗಾರರನ್ನು ಮಲಗಿಸಲು ಹೇಗೆ ಸಾಧ್ಯ? ಹೇಗೆಂದರೆ, ಕೆಲವೊಂದು ಸಂದರ್ಭದಲ್ಲಿ ಸತ್ಯವನ್ನು ಹೇಳಲು ಅವರು ಅಂಜುವಂತೆ ಮಾಡುತ್ತಾನೆ; ಏಕೆಂದರೆ ಶ್ರೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿಗಳಿಗೆ ಇದು (ಸತ್ಯವು) ಸಿಟ್ಟುತರಬಹುದೆಂದು. ಕೆಲವು ಸಂದರ್ಭದಲ್ಲಿ, ಹೆಂಡತಿಯರನ್ನು ಮೆಚ್ಚಿಸುವವರನ್ನಾಗಿ, ಮತ್ತು ಹಣವನ್ನು ಹಾಗು ಊಟವನ್ನು ಪ್ರೀತಿಸುವವರನ್ನಾಗಿ ಮಾಡುತ್ತಾನೆ; ಹಾಗೂ ಇನ್ನೂ ಕೆಲವು ಸಂದರ್ಭದಲ್ಲಿ ದೇವರ ಗುಣಮಟ್ಟವನ್ನು ಕಾಪಾಡಲು ಪ್ರಯತ್ನಿಸುತ್ತಿರುವಾಗ ಸತತವಾದ ಪ್ರತಿಭಟನೆ (ವಿರೋಧ)ಯಿಂದ ಬೇಸತ್ತು ಕೊನೆಗೆ ಮನುಷ್ಯರನ್ನು ಮೆಚ್ಚಿಸುವರಾಗುವಂತೆ ಮಾಡುತ್ತಾನೆ.
ಇಬ್ರಿಯ 12:3 ರಲ್ಲಿ ಹೀಗೆ ಓದುತ್ತೇವೆ "ನೀವು ಮನುಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು". ಯೇಸುವನ್ನು ವಿರೋಧಿಸಿದ ಈ ಪಾಪಿಗಳ್ಯಾರು? ಇವರು ಇಸ್ರಾಯೇಲಿನ ವೇಶ್ಯೆಯ (ವ್ಯಭಿಚಾರರು)ರಾಗಲಿ, ಕೊಲೆಮಾಡಿದವರಾಗಲಿ ಅಥವಾ ಕಳ್ಳರಾಗಲಿ ಅಲ್ಲ; ಇಲ್ಲವೇ ಇವರು ರೋಮ್ ಅಥವಾ ಗ್ರೀಕ್ ದೇಶದವರಾಗಿರಲಿಲ್ಲ. ಯೇಸುವನ್ನು ಸತತವಾಗಿ ವಿರೋಧಿಸುವ ಈ ಪಾಪಿಗಳು ಯಾರಾಗಿದ್ದರೆಂದರೆ ಬೈಬಲನ್ನು ಅಥವಾ ಸತ್ಯವೇದ (ಧರ್ಮಶಾಸ್ತ್ರ)ವನ್ನು ಬಲವಾಗಿ ಭೋದಿಸುವವರೂ ಮತ್ತು ಧಾರ್ಮಿಕ ಗುರುಗಳೂ ಆಗಿದ್ದರು. ಇವರು ಯೇಸುವಿನ ಮೇಲೆ ಹೊಟ್ಟೆಕಿಚ್ಚು ಪಟ್ಟು, ಕೊನೆಗೆ ಕೊಂದು ಬಿಟ್ಟರು. ನಾವೂ ಕೂಡ ಯೇಸುವನ್ನು ಹಿಂಬಾಲಿಸುವುದಾದರೆ, ಇಂತಹ ಗುಂಪುಗಳಿಂದ ವಿರೋಧವನ್ನು ಇವತ್ತಿಗೂ ಎದುರಿಸುತ್ತೇವೆ.
ನಮಗೆ ಹೆಚ್ಚಾದ ವಿರೋಧ, ದೇವರ ಗುಣಲಕ್ಷಣಗಳನ್ನು ಕೀಳಾದ ರೀತಿಯಲ್ಲಿ ಭೋದಿಸುವಂಥವರಿಂದ ಇರುತ್ತದೆ. ಮತ್ತು ಇಂಥವರು ಸಭೆಯ ಗುಣಮಟ್ಟವನ್ನು ಕೆಡಿಸಿದ್ದಾರೆ. ನಮ್ಮನ್ನು ವಿರೋಧಿಸಲಿಕ್ಕೆ ಇಂಥವರು ಸೈತಾನನ ಮುಖ್ಯ ಪ್ರತಿನಿಧಿಗಳಾಗಿರುತ್ತಾರೆ. ಹಾಗೂ ನಾವು ಅತೀ ಸುಲಭವಾಗಿ ಈ ರೀತಿಯಾದ ಸತತವಾದ ವಿರೋಧದಿಂದ ಬೇಸತ್ತು, ಧೈರ್ಯ ಕಳಕೊಳ್ಳುತ್ತೇವೆ.
ಸೈತಾನನು ದೇವರ ಸೇವಕರನ್ನು ಸವೆಸುತ್ತಾನೆ (ಬಲಹೀನರಾಗುವಂತೆ ಮಾಡುತ್ತಾನೆ). ಇದನ್ನು ದಾನಿಯೇಲ 7:25 ರಲ್ಲಿ ಹೀಗೆ ಓದುತ್ತೇವೆ "ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು, ಪರಾತ್ಪರನ ಭಕ್ತರನ್ನು ಸವೆಯಿಸಿ, ಕಟ್ಟಳೆಯ ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು". ನಾವು ಇವೆಲ್ಲವುಗಳನ್ನು ಜಯಿಸಬೇಕಾದರೆ ನಮಗಿರುವ ಒಂದೇ ಮಾರ್ಗ- ಯೇಸುವಿನ ಉದಾಹರಣೆಯಲ್ಲಿದೆ. ಯಾವ ರೀತಿಯಲ್ಲಿ ಯೇಸು ಸಾಯುವ ತನಕ ಸತತವಾಗಿ ವೈರಿಗಳಿಂದ ವಿರೋಧವನ್ನು ಅನುಭವಿಸಿದನೋ, ಅದೇ ರೀತಿ ನಾವೂ ಕೂಡ ಸಾಯುವಂತ ಮಟ್ಟದವರೆಗೂ ನಂಬಿಗಸ್ತರಾಗಿರಬೇಕು.
ಯಾವುದೇ ಬೋಧಕನು ತನ್ನ ಸಾವಿನ ತನಕ ವಿರೋಧವನ್ನು ಎದುರಿಸಲು ಮನಸ್ಸು ಮಾಡದೇ ಇದ್ದರೆ, ಆತನು ಜನರನ್ನು ಮೆಚ್ಚಿಸುವ ಬೋಧಕನಾಗಿ ಮುಂದುವರೆಯುವನು; ಮತ್ತು ,ದಾನಿಯೇಲ 11:32 ರಲ್ಲಿ ಹೇಳಿದ ಪ್ರಕಾರ "ನಿಬಂಧನದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು" ಎಂಬಂತೆ ಕೊನೆಗೆ ಅವನು ರಾಜಿ(ಒಪ್ಪಂದ) ಮಾಡಿಕೊಳ್ಳುವ ಬಾಲಾಮನಂತೆ ಕೊನೆಗೊಳ್ಳುತ್ತಾನೆ.
ನಮ್ಮ ಕರೆ- ದೇವರ ಗುಣಮಟ್ಟಗಳನ್ನು (ವಾಕ್ಯಗಳನ್ನು) ಎಷ್ಟೇ ಬೆಲೆ ಕಟ್ಟ ಬೇಕಾಗಿ ಬಂದರೂ ಕೈಕೊಂಡು ನಡೆಯಬೇಕಾಗಿರುವುದಾಗಿದೆ. ನಾವು ಯಾವಾಗಲೂ ಕ್ರಿಸ್ತವಿರೋಧಿ ಶಕ್ತಿಯಿಂದ ನಮ್ಮನ್ನು ಕಾವಲಲ್ಲಿಟ್ಟಿರಬೇಕು. ಪೌಲನು ಎಎಸವೆಂಬ ಸಭೆಯನ್ನು 3 ವರ್ಷಗಳಕಾಲ (ತಾನು ಅಲ್ಲಿ ಇರುವ ತನಕ) ದೇವರ ಕೃಪೆಯಿಂದ ಪವಿತ್ರವಾಗಿಟ್ಟಿದ್ದನು. ಆದರೆ ಅ.ಕೃ. 20:29-31 ರಲ್ಲಿ ಪೌಲನು ಎಎಸದ ಹಿರಿಯರಿಗೆ ವಿದಾಯ ಹೇಳುವ ಸಮಯದಲ್ಲಿ- ಭ್ರಷ್ಟಾಚಾರ ಸಭೆಯಲ್ಲಿ ಬರಲಿದೆ ಎಂದು ಎಚ್ಚರಿಸಿದನು. ಮತ್ತು ಹಾಗೆಯೇ ಆಯಿತು; ಇದನ್ನು ಪ್ರಕಟನೆ 2:11-5 ರಲ್ಲಿ ಪೌಲನು ಎಎಸದವರಿಗೆ ಬರೆದ ೨ನೇಯ ಪತ್ರದಲ್ಲಿ ನಾವು ಓದುತ್ತೇವೆ.