ಬರೆದಿರುವವರು :   Bobby McDonald ಭಾಗಗಳು :   ತಿಳಿಯುವುದು ಶಿಷ್ಯಂದಿರಿಗೆ
WFTW Body: 

ಪೌಲನು ಹೇಳಿದ ಒಂದು ಸವಾಲಿನ ವಿಷಯವು ಅಪೋಸ್ತಲರ ಕೃತ್ಯಗಳು 20:24ರಲ್ಲಿ ಈ ರೀತಿ ಹೇಳಲ್ಪಟ್ಟಿದೆ, "ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ವಿಶೇಷವೆಂದು ನಾನು ಎಣಿಸುವುದಿಲ್ಲ". ಪೌಲನು ತನ್ನ ಉದಾಹರಣೆಯಲ್ಲಿ ನಮಗೆ ಎಂತಹ ಸವಾಲನ್ನು ಕೊಟ್ಟಿದ್ದಾನೆ.

ಅದೊಂದು ದಿನ ನಾನು ನಿಧನರಾದ ಒಬ್ಬ ಮಹಿಳೆಯ ಸ್ಮರಣಾರ್ಥವನ್ನು ನೋಡಿದೆ. ಆಕೆಯ ಜೀವನದ ಬಗ್ಗೆ ಕುಟುಂಬದ ಸದಸ್ಯರು ಮಾತನಾಡುವುದನ್ನು ಅಲ್ಲಿ ಕೇಳಿಸಿಕೊಂಡೆ, ಆಕೆಯು ಹಾದುಹೋದ ಸವಾಲುಗಳು, ಆಕೆಯ ಮಕ್ಕಳು ಇನ್ನೂ ಸಣ್ಣವರಿದ್ದಾಗ, ಆಕೆಯ ಗಂಡನು ಮರಣಹೊಂದಿದ್ದು, ತನ್ನ ಹೆಣ್ಣು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಿ, ಉಳಿದೆಲ್ಲವುಗಳ ನಡುವೆ ಕೂಡ ತನ್ನ ಮೊಮ್ಮಕ್ಕಳಿಗೆ ಬೆಂಬಲವಾಗಿ ನಿಂತದ್ದು, ಹೀಗೆ. ಆದರೆ ಆಕೆಯ ಮೊಮ್ಮಗಳು ಹೇಳಿದ ಒಂದು ಮಾತು ನನ್ನ ಹೃದಯವನ್ನು ಮುಟ್ಟಿತು, ಆಕೆಯು ಅಳುತ್ತಾ ಈ ರೀತಿ ಹೇಳಿದಳು, "ನೀವು ನನಗೆ ಎಷ್ಟು ಮುಖ್ಯವಾಗಿದ್ದೀರಿ ಎಂದು ನಾನು ನಿಮಗೆ ಹೆಚ್ಚಾಗಿ ಹೇಳಬಹುದಾಗಿತ್ತು". ನಮ್ಮ ಜೀವನದಿಂದ ಅಗಲಿಹೋದವರ ಬಗ್ಗೆ ನಾನು ನೆನೆಸಿಕೊಂಡು ಹೀಗೆ ಯೋಚಿಸುತ್ತೇನೆ, "ನನಗೆ ಇನ್ನೂ ಒಂದೇ ಒಂದು ದಿನ ಸಿಕ್ಕಿದ್ದರೆ ಚೆನ್ನಾಗಿತ್ತು" ಎಂದು.....

ಆದರೆ ನಂತರ ನಾನು ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಮುಖ್ಯವಾದದ್ದನ್ನು ಯೋಚಿಸಿದೆ, ನನ್ನ ಪ್ರೀತಿ ಪಾತ್ರರ ಕಡೆಗೆ ಅಲ್ಲ, ಆದರೆ ದೇವರ ಕಡೆಗೆ: ದೇವರು ನಮಗೆ ಎಷ್ಟು ಮುಖ್ಯವಾದವರು ಎಂದು ಆತನಿಗೆ ತೋರಿಸಲು ನಮಗೆ ಇರುವುದು ಇದು ಒಂದೇ ಒಂದು ಜೀವಿತ.

ಹಾಗೂ ಇಲ್ಲಿ ಒಂದು ಪ್ರಶ್ನೆ: ನಾವು ಸಾಯುವ ಘಳಿಗೆ ಬಂದಾಗ (ಅಥವಾ ಅದಕ್ಕೆ ಮೊದಲೇ ಕರ್ತರು ಹಿಂತಿರುಗಿ ಬರುವಾಗ), "ಕರ್ತರು ನನಗೆ ಎಷ್ಟು ಮುಖ್ಯವಾಗಿದ್ದಾರೆಂದು ಅವರಿಗೆ ನಾನು ಹೆಚ್ಚಾಗಿ ತೋರಿಸಬೇಕೆಂದು ನಾನು ಬಯಸುತ್ತೇನೆ".

ನಾವು ಈ ರೀತಿ ಯೋಚಿಸುವಾಗ ಪ್ರತಿಯೊಂದರ ಮೇಲಿನ ನಮ್ಮ ದೃಷ್ಟಿಕೋನವು ಬದಲಾಗುತ್ತದೆ. ನಾವು ಪಾಪದ ವಿರುದ್ಧ ಹೆಚ್ಚಾಗಿ ಹೋರಾಡಿ ಮತ್ತು, ಕರ್ತನೊಟ್ಟಿಗೆ ಪ್ರವೀಣತೆಯುಳ್ಳ ವೃತ್ತಿಪರ ಪ್ರಾರ್ಥನೆಗಳೊಂದಿಗೆ ಸಮಯ ಕಳೆಯದೇ, ಕೇವಲ ಯೇಸು ಮತ್ತು ನಾನು, ಇಬ್ಬರು ಸ್ನೇಹಿತರು ಒಬ್ಬರಿಗೊಬ್ಬರು ಏಕಾಂಗಿಯಾಗಿ ಸಮಯ ಕಳೆಯುವ ರೀತಿ; ಸರಳ ಹಾಗೂ ನಿಷ್ಕಪಟವಾಗಿ ಸಮಯ ಕಳೆಯಲು ಹುಡುಕುವುದನ್ನು ನಾವು ಹೇಗೆ ಇಚ್ಚಿಸುತ್ತೇವೆ. ಅದು ಇತರರನ್ನು ಪ್ರೀತಿಸಿ, ಅವರಿಗೆ ದಯೆ ಮತ್ತು ಪ್ರೋತ್ಸಾಹ ತೋರಿಸುವ ಮೂಲಕ ಯೇಸುವನ್ನು ಪ್ರೀತಿಸುವಂತದ್ದರಿಂದ; ಆತನ ಹೆಸರಿನ ನಿಮಿತ್ತ ಎದುರಾಗುವ ಸಂಕಟಗಳಲ್ಲಿ ಮತ್ತು ಬಾಧೆಗಳಲ್ಲಿ ತೃಪ್ತರಾಗಿರುವುದರಿಂದ, ಈ ಎಲ್ಲವುಗಳ ಮಧ್ಯೆ ಆತನಿಗೆ ಸ್ತೋತ್ರ ಸಲ್ಲಿಸುವುದರಿಂದ; ನಾವು ಇತರರ ರಕ್ಷಣೆ ನಿಮಿತ್ತ ಅವರಿಗಾಗಿ ಪ್ರಾರ್ಥಿಸಿ, ಎಂದಿಗೂ ಬಿಟ್ಟು ಕೊಡದೇ, ಕರ್ತನೊಟ್ಟಿಗೆ ಶ್ರಮಿಸುವುದರಿಂದ; ಯಾವಾಗಲೂ ಆತನ ಸಮ್ಮುಖಕ್ಕಾಗಿ ಹುಡುಕಿ, ಎಲ್ಲವುಗಳಿಗಿಂತ ಮೇಲಾಗಿ ಆತನನ್ನು ಭದ್ರವಾಗಿಟ್ಟುಕೊಳ್ಳುವುದರಿಂದ; ಇಹಲೋಕದ ಸಂಗತಿಗಳನ್ನು ನಿರಾಕರಿಸಿ; ಆತನ ನಿಮಿತ್ತ ಇಹಲೋಕದ ಪ್ರತಿಯೊಂದನ್ನು ಕಸವೆಂದು ಪರಿಗಣಿಸುವಂತದ್ದರಿಂದ; ಆತನನ್ನು ಮೆಚ್ಚಿಸುವುದರಿಂದ ಮತ್ತು ಆತನನ್ನು ಅರಿತುಕೊಳ್ಳುವಂತದ್ದರಿಂದ, ಇತರೆ.

ಎಂತಹ ಅವಕಾಶವನ್ನು ನಾವು ಈಗ ಹೊಂದಿದ್ದೇವೆ. ಆದರೆ ಈಗ ಮಾತ್ರ ನಾವು ಅದನ್ನು ಹೊಂದಿಕೊಳ್ಳಬಹುದು. 2 ಕೊರಿಂಥ 6:2"ಈಗಲೇ ಆ ಅಂಗೀಕಾರದ ಸಮಯ; ಇಗೋ, ಈಗಲೇ ಆ ರಕ್ಷಣೆಯ ದಿನ".

"ಮನುಷ್ಯನು ಇಡೀ ದಿನ ಏನು ಯೋಚಿಸುತ್ತಾನೆ" ಎಂದು ಹೇಳಿರುವಂತದ್ದನ್ನು ನಾನು ಕೇಳಿದ್ದೇನೆ. ನನ್ನ ಜೀವಿತದ ಗುರಿ ಏನೆಂದರೆ, ದಿನವಿಡಿ ನನ್ನ ಗಮನವನ್ನು ಬೇರೆಡೆಗೆ ಸೆಳೆಯುವಂತದ್ದರಿಂದ ನಯವಾಗಿ ತಿರುಗಿಕೊಳ್ಳುವಂತೆ ನಿರಂತರ ಅಭ್ಯಾಸವನ್ನು ಬೆಳೆಸಿಕೊಂಡು, ಕರ್ತನ ಕಡೆಗೆ ಮತ್ತು ಆತನ ಸಮ್ಮುಖಕ್ಕೆ ಹಿಂತಿರುಗುವುದಾಗಿದೆ. ’ಬೇರೆ ಚಿಂತೆಗಳ’ ಮೇಲೆ ನನ್ನ ದೃಷ್ಟಿಯನ್ನು ಇಡಬಾರದು. ಅದು ಅಷ್ಟು ಸುಲಭವಲ್ಲ. ಅನೇಕ ಕ್ರೈಸ್ತರು ಕರ್ತನೊಟ್ಟಿಗೆ ಈ ರೀತಿ ಹತ್ತಿರವಾಗುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ ಕರ್ತರು ಅಂತಹ ಜೀವಿತಕ್ಕಾಗಿ ನನ್ನ ಹೃದಯದಲ್ಲಿ ಬಯಕೆಯನ್ನು ಇಟ್ಟಿದ್ದಾರೆ, ಮತ್ತು ನಾನು ನಂಬುತ್ತೇನೆ ಎಲ್ಲವನ್ನು ದೇವರ ಪ್ರೀತಿಗಾಗಿ ಮತ್ತು ಆತನ ಘನತೆಗಾಗಿ ಮಾಡುತ್ತಿರಬೇಕು (1 ಕೊರಿಂಥ 10:31) - ನನ್ನ ದೃಷ್ಟಿಯಲ್ಲಿ ಮತ್ತು ನನ್ನ ಹೃದಯದಲ್ಲಿ ಯೇಸುವಿನೊಟ್ಟಿಗೆ ಪ್ರತಿದಿನ ಶಿಲುಬೆಯನ್ನು ಹೊರಬೇಕು (ಇಬ್ರಿಯ 12:2). ಇಲ್ಲವಾದಲ್ಲಿ ಅದು ಯಾವ ಥರ ಇರುತ್ತದೆ ಎಂದರೆ, ಹೆಂಡತಿಯು ನಿರಂತರವಾಗಿ ಅಡುಗೆ ಮಾಡುತ್ತಾಳೆ ಮತ್ತು ಮನೆಯನ್ನು ಸ್ವಚ್ಚಪಡಿಸುತ್ತಾಳೆ, ಆದರೆ ಆಕೆಯ ಗಂಡನಿಗಾಗಿ ಆಕೆಯು ಯಾವುದೇ ಅಭಿಲಾಷೆಯನ್ನು ಹೊಂದಿರುವುದಿಲ್ಲ, ಆತನನ್ನು ಪ್ರೀತಿಸುವಂತ ಮತ್ತು ಆತನೊಟ್ಟಗೆ ಇರುವಂತ ಬಯಕೆ ಆಕೆಗಿರುವುದಿಲ್ಲ. ಅದು ಯಾವ ರೀತಿ ಇರುತ್ತದೆ ಎಂದರೆ, ಜೀವವೇ ಇಲ್ಲದ ಕ್ರೈಸ್ತತ್ವದಂತೆ ಇರುತ್ತದೆ. ಇವೆಲ್ಲವುಗಳ ಮಧ್ಯೆದಲ್ಲಿ ನಾನು ನನ್ನ ತಂದೆಯನ್ನು ಮತ್ತು ಯೇಸುವನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿರಬೇಕು. ಸರಿಯಾದ ಉದ್ದೇಶದೊಟ್ಟಿಗೆ ಸರಿಯಾದ ಜೀವಿತವು ನನಗೆ ಅಗತ್ಯವಾಗಿದೆ.

ದೊಡ್ಡ ಸಂಕಟ ಮತ್ತು ಅನೇಕ ವರ್ಷಗಳ ಬಾಧೆಯ ನಡುವೆ, ಬಳಸಿ ಬಿಸಾಡಬಹುದಾದ ಪಾತ್ರೆಯು ನಂಬಿಕೆ ಮತ್ತು ಭರವಸೆಯಿಂದ ತುಂಬಿ, ದೇವರ ಜ್ಞಾನ ಮತ್ತು ಪ್ರೀತಿಗೆ ಅಧೀನವಾಗಿರುತ್ತದೆ, ಎಲ್ಲದರ ಮೂಲಕ ಆತನ ಚಿತ್ತದಂತೆ ಮಾಡಲು ಕರ್ತನ ಕೈಗೆ ನಮ್ಮನ್ನು ಒಪ್ಪಿಸುವುದರಲ್ಲಿ ಬಳಸಿ ಬಿಸಾಡಬಹುದಾದ ಪಾತ್ರೆಯು ತೃಪ್ತಿಯಾಗಿರುತ್ತದೆ

ದೇವರು ಒಮ್ಮೆ ನನಗೆ ಒಂದು ಚಿತ್ರಣವನ್ನು ತೋರಿಸಿಕೊಟ್ಟರು; ನಾನು ಬಳಸಿ ಬಿಸಾಡುವ ಒಂದು ಲೋಟದಲ್ಲಿ ಕಾಫಿ ಕುಡಿಯುತ್ತೇನೆ. ನಾನು ಆ ಕಾಫಿಯನ್ನು ಆನಂದಿಸುತ್ತೇನೆ. ಆದರೆ ಆ ಲೋಟವು ಸ್ವಲ್ಪ ಅವಧಿಗೆ ಮಾತ್ರ ಬಳಕೆಗೆ ಬರುತ್ತದೆ ಹೊರತು , ಸಾಮಾನ್ಯವಾಗಿ ನಿಷ್ಪ್ರಯೋಜಕವಾಗಿದೆ. ನಾನು ಅದನ್ನು ನಂತರ ಕೊನೆಯಲ್ಲಿ ಬಿಸಾಡುತ್ತೇನೆ. ಆಗ ನಾನು ನೋಡಿದೆ, ನಮ್ಮ ಜೀವಿತವು ಸಹ ಅದೇ ರೀತಿ ಖಚಿತವಾಗಿ ಬಳಸಿ ಬಿಸಾಡುವಂತದ್ದು ಎಂದು. "ನನ್ನ ಪ್ರಾಣವನ್ನು ಉಳಿಸಿಕೊಳ್ಳುವುದೇ ವಿಶೇಷವೆಂದು ನಾನು ಎಣಿಸುವುದಿಲ್ಲ. ನನ್ನ ಓಟವನ್ನು ಕಡೆಗಾಣಿಸುವುದೊಂದೇ ನನ್ನ ಆಪೇಕ್ಷೆ" (ಅ.ಕೃತ್ಯಗಳು 20:24) ಎಂದು ಪೌಲನು ಹೇಳಿದ ಮಾತಿನ ಅರ್ಥ ಅದೇ ಆಗಿತ್ತು. ಈ ಜೀವಿತದ ಮೌಲ್ಯವನ್ನು ಹಿಡಿದಿಡುವಂತದ್ದು ಏನೆಂದರೆ, ನಾವು ಇಲ್ಲಿ ಕಳೆಯುವ ಕೆಲ ಕ್ಷಣಗಳಲ್ಲಿ ಯೇಸುವನ್ನು ಹೊಂದಿರುವಂತದ್ದಾಗಿದೆ. ಇದು ಬಳಸಿ ಬಿಸಾಡುವಂತದ್ದಾಗಿದೆ. ಇದು ಬಳಸಿ ಬಿಸಾಡುವ ಜೀವಿತವಾಗಿದೆ. ಇಲ್ಲಿರುವ ಸ್ವಲ್ಪ ಸಮಯಕ್ಕೆ ಈ ಜೀವಿತವು ಐಶ್ವರ್ಯದಿಂದ ಕೂಡಿರಬಹುದು; ಆದರೆ ನಂತರ ಇದನ್ನು ಹೊರ ಹಾಕಲಾಗುತ್ತದೆ.

ಅಥವಾ ನಮ್ಮ ಬಳಸಿ ಬಿಸಾಡಿ ಬಹುದಾದ ಜೀವಿತವು ಕ್ರಿಸ್ತನ ಭಕ್ತಿಯಿಂದ ತುಂಬಿರುವ ಪಾತ್ರೆಯಾಗಿರಬಹುದು ಮತ್ತು ಇಂಥಹ ಭಕ್ತಿಯ ಅರ್ಥ ಕ್ರಿಸ್ತನೇ ನನಗೆ ಸರ್ವಸ್ವ ಎಂಬುದಾಗಿದೆ. ನಮ್ಮ ಬಳಸಿ ಬಿಸಾಡುವ ಜೀವಿತವು ಹೊಂದಿರುವ ಏಕೈಕ ಮೌಲ್ಯಯುತವಾದ ವಸ್ತುವೆಂದರೆ ಅದು ಭಕ್ತಿಯಾಗಿದೆ.

ಬಳಸಿ ಬಿಸಾಡಬಹುದಾದ ಪಾತ್ರೆಯು ಕ್ರಿಸ್ತನ ರೀತಿಯಿಂದ ತುಂಬಿ ಇಲ್ಲಿ ಜೀವಿಸಿ ಮತ್ತು ಕರ್ತನನ್ನು ಮೆಚ್ಚಿಸುವಂತದ್ದು ಆಗಿದೆ, ಕೇವಲ ಹೊರಗಡೆ ಮಾತ್ರವಲ್ಲ, ಆದರೆ ಹೃದಯದ ಒಳಭಾಗದಲ್ಲಿ ನಮ್ಮ ಮೂಲಕ ಹರಿಯುವಂತ ಶುದ್ಧ ಪ್ರೀತಿ ಮತ್ತು ಉದ್ದೇಶಗಳೊಂದಿಗೆ ಕರ್ತನನ್ನು ಮೆಚ್ಚಿಸಬೇಕು. ಬಳಸಿ ಬಿಸಾಡಬಹುದಾದ ಪಾತ್ರೆಯು ದೀನತೆಯಿಂದ ತುಂಬಿದ್ದು, ಅದು ತಂದೆಯನ್ನು ಮತ್ತು ಯೇಸುವನ್ನು ಮೇಲಕ್ಕೆ ಎತ್ತುತ್ತದೆ, ಮತ್ತು ತಾನು ಕೆಳಗೆ ಹೋಗಲು ಮತ್ತು ಕಡಿಮೆ ಆಗಲು ಸಂತೋಷಿಸುತ್ತದೆ, ಏಕೆಂದರೆ ಕ್ರಿಸ್ತನು ಹೆಚ್ಚಳಪಡುವುದರಿಂದ - ದೊಡ್ಡ ಸಂಕಟ ಮತ್ತು ಅನೇಕ ವರ್ಷಗಳ ಬಾಧೆಯ ನಡುವೆ, ಬಳಸಿ ಬಿಸಾಡಬಹುದಾದ ಪಾತ್ರೆಯು ನಂಬಿಕೆ ಮತ್ತು ಭರವಸೆಯಿಂದ ತುಂಬಿ, ದೇವರ ಜ್ಞಾನ ಮತ್ತು ಪ್ರೀತಿಗೆ ಅಧೀನವಾಗಿರುತ್ತದೆ, ಎಲ್ಲದರ ಮೂಲಕ ಆತನ ಚಿತ್ತದಂತೆ ಮಾಡಲು ಕರ್ತನ ಕೈಗೆ ನಮ್ಮನ್ನು ಒಪ್ಪಿಸುವುದರಲ್ಲಿ ಬಳಸಿ ಬಿಸಾಡಬಹುದಾದ ಪಾತ್ರೆಯು ತೃಪ್ತಿಯಾಗಿರುತ್ತದೆ.

ನಾವು ನಿತ್ಯತ್ವದೊಳಗೆ ಚಲಿಸುವವರೆಗೆ ನಮ್ಮ ಬಳಸಿ ಬಿಸಾಡಬಹುದಾದ ಪಾತ್ರೆಯು ಸ್ವಲ್ಪ ಸಮಯದವರೆಗೆ ಹಿಡಿದಿಟ್ಟುಕೊಳ್ಳಬಹುದಾದ ಶಾಶ್ವತ ಮೌಲ್ಯವಾಗಿದೆ.

ಯಾಕೋಬ 4:14 ಈ ರೀತಿ ಹೇಳುತ್ತದೆ, "ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ".

ಹಾಗಾಗಿ, ಭವಿಷ್ಯದ ಬಗ್ಗೆ ಯೋಚಿಸುವುದು ಮತ್ತು ಇಲ್ಲಿಂದ 1000 ವರ್ಷಗಳ ನಂತರ ಅಥವಾ 100 ವರ್ಷಗಳ ನಂತರ ಏನು ಮುಖ್ಯವಾಗುತ್ತದೆ ಎಂದು ಯೋಚಿಸುವುದು ಆತ್ಮೀಕವಾಗಿ ತುಂಬಾ ಲಾಭದಾಯಕವಾಗಿರುತ್ತದೆ. ಇಂತಹ ಯೋಚನೆಗಳು ನನ್ನ ಕ್ರೈಸ್ತ ಜೀವಿತದಲ್ಲಿ ಬಹಳ ಬೇಗ ಸಹಾಯ ಮಾಡಿತು. ಮತ್ತು ಇದರ ಬಗ್ಗೆ ನನ್ನ ಮಕ್ಕಳಿಗೆ ಕಲಿಸಲು ಪ್ರಯತ್ನಿಸುವುದರಲ್ಲಿ ಕಾರ್ಯನಿರತನಾಗಿದ್ದೇನೆ.

ದೇವರಿಗಾಗಿ ಗಂಭೀರವಾಗಿ ಹೆಚ್ಚು ಜೀವಿಸಲು ಮತ್ತು ಮೇಲಿನ ಸಂಗತಿಗಳ ಮೇಲೆ ನನ್ನ ಮನಸ್ಸನ್ನು ನೆಡಲು ಈ ಒಂದು ಪದ್ಯ ನಾನು ಯೌವನಸ್ಥನಿದ್ದಾಗ ನನಗೆ ಸವಾಲುಗೊಳಿಸಿತು (ಕೊಲೊಸ್ಸೆಯವರಿಗೆ 3:2):

 
ಈಗಿನಿಂದ 100 ವರ್ಷಗಳು
ಇದು ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ, ಸ್ನೇಹಿತ,
ಇನ್ನು ನೂರು ವರ್ಷಗಳ ನಂತರ,
ನೀವು ಭವ್ಯವಾದ ಭವನದಲ್ಲಿ ವಾಸಿಸುತ್ತಿದ್ದರೂ
ಅಥವಾ ತೇಲುವ ನದಿಯಲ್ಲಿ ದೋಣಿಯ ಮೇಲೆ ವಾಸಿಸುತ್ತಿದ್ದರೂ;
ನೀವು ಧರಿಸುವ ಬಟ್ಟೆಗಳು ಹೇಳಿ ಮಾಡಿಸಿದಂತಿದ್ದರೂ
ಅಥವಾ ಹೇಗಾದರೂ ಒಟ್ಟಿಗೆ ಹರಿದು ತುಂಡಾಗಿದ್ದರೂ
ನೀವು ದೊಡ್ಡದಾಗಿ ಸುಟ್ಟು ಬೇಯಿಸುವುದನ್ನು ಅಥವಾ ಪಲ್ಯವನ್ನು ಮತ್ತು ಕೇಕ್ ತಿನ್ನುತ್ತಿದ್ದರೂ
ಇನ್ನು ನೂರು ವರ್ಷಗಳ ನಂತರ.

ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆಯಾಗಲಿ
ಅಥವಾ ನೀವು ಸಂಪಾದಿಸಿ ತೆಗೆದುಕೊಂಡ ಕಾರನ್ನು ಓಡಿಸಿದ್ದರ ಬಗ್ಗೆ ಆಗಲಿ
ಅಷ್ಟು ಮುಖ್ಯ ವಿಷಯವಾಗಿರುವುದಿಲ್ಲ.
ಏಕೆಂದರೆ ಸಮಾಧಿಯು ನಿಮ್ಮ ಸಂಪತ್ತು ಮತ್ತು ಖ್ಯಾತಿಯನ್ನು
ಹಾಗೂ ಮತ್ತು ನೀವು ಶ್ರಮಿಸಿರುವ ವಿಷಯಗಳನ್ನು ಪಡೆದುಕೊಳ್ಳುತ್ತದೆ
ನಾವೆಲ್ಲರೂ ಈ ನಿಗದಿ ಮಾಡಿದ ಕಾಲಮಿತಿಯನ್ನು ಮುಟ್ಟಲೇ ಬೇಕಿದೆ
ಮತ್ತು ಯಾರೂ ತಡವಾಗಿ ಮುಟ್ಟುವುದಿಲ್ಲ,
ನೀವು ಇದ್ದಂತ ಎಲ್ಲಾ ಸ್ಥಳಗಳು,
ಪ್ರತಿಯೊಬ್ಬರೂ ಆ ದಿನಾಂಕವನ್ನು ಹಿಡಿದಿಟ್ಟುಕೊಳ್ಳುವಂತದ್ದು ಯಾವುದು
ಮುಖ್ಯ ವಿಷಯವಾಗುವುದಿಲ್ಲ.

ನಾವು ಭೂಮಿಯ ಮೇಲೆ ಏನನ್ನು ಬಿಟ್ಟು ಕೊಟ್ಟಿರುತ್ತೇವೋ
ಅವುಗಳನ್ನು ನಾವು ನಿತ್ಯತ್ವದಲ್ಲಿ ಮಾತ್ರ ಹೊಂದಿರುತ್ತೇವೆ
ನಿತ್ಯತ್ವದ ಯೋಗ್ಯ ವಸ್ತುಗಳನ್ನು
ನಾವು ಸಮಾಧಿಗೆ ಹೋದಾಗ ಮಾತ್ರ ಅವುಗಳನ್ನು ಉಳಿಸಬಹುದಾಗಿದೆ,
ಏನು ಮುಖ್ಯ, ಸ್ನೇಹಿತ, ಭೂಲೋಕದ ಲಾಭಕ್ಕಾಗಿ
ಕೆಲವು ಪುರುಷರು ಯಾವಾಗಲೂ ತಲೆ ಬಾಗುತ್ತಾರೆ?
ನಿಮ್ಮ ತಲುಪಬೇಕಾದ ಸ್ಥಳವು ಮುದ್ರೆಹಾಕಲ್ಪಟ್ಟಿರುತ್ತದೆ,
ಇನ್ನು ನೂರು ವರ್ಷ ನಂತರ ನೀವು ನೋಡಿ